ನೋಡಿದರೆ ನೋಡಿದಷ್ಟೂ ಇಷ್ಟ
ಮಾತೊ ಮಿತ, ಖಚಿತ, ನಿಷ್ಕೃಷ್ಟ.
ಅಚ್ಚುಕಟ್ಟಿನ ಸ್ವಚ್ಛತೆಯ ಸಂಕೇತ
ಮೂಡಿದೊಂದೊಂದು ಕೃತಿಯೂ ಕೃತಾರ್ಥ.
ಪರಿಪೂರ್ಣತೆಯ ಅತೃಪ್ತ ಅನ್ವೇಷಕ
ಪ್ರತಿಭೆ ಪಾಂಡಿತ್ಯಗಳ ಹದವಾದ ಪಾಕ.
ಸಂಶಯದ ಕಡಲಲ್ಲಿ ಗೋಪುರದ ದೀಪ
ಸದ್ದಿರದ ಸಾಧನೆಗೆ ಜೀವಂತ ರೂಪ.
ಇನ್ನಾರು ಬೆಳೆದಾರು ನಿಮ್ಮ ಎತ್ತರಕೆ ?
ಕನ್ನಡದ ಕೊರಳಲ್ಲಿ ಶ್ರೀಕಂಠಿಕೆ.
Leave A Comment