( ನಾಟಕವನ್ನು ನೀನಾಸಂ ತಿರುಗಾಟಕ್ಕಾಗಿ ನಿರ್ದೇಶಿಸಿದಾಗ ಕೆಲವು ಬದಲಿ ಹಾಡುಗಳನ್ನು ಉಪಯೋಗಿಸಿದರು. ಅವುಗಳನ್ನು ಕೆಳಗೆ ಕೊಡಲಾಗಿದೆ)

ಕಾಲಕೋಶ ಗೊತ್ತೆನಿಮಗೆಕೊನೆಓಣಿಯಬದಲಿಗೆ

ಅಕ್ಕಕ್ಕು ಹಾಡುಗಳೇ
ಹಾಡಿನ! ಅಚ್ಚಚ್ಚ ಕನಸುಗಳೇ || ||
ಹರಿದಿರಿ ಇನ್ನೆಲ್ಲಿಗೆ
ಬನ್ನಿರಿ | ಹಿಂದಿರುಗಿ ಮತ್ತಿಲ್ಲಿಗೆ || ಅಪ ||

ಬರಗಾಲ ಬಂತೆಂದು ಬರವೇನೂ ಹಾಡಿಗೆ
ಮನಸಿಗೆ ನಿನ್ನ ಕನಸಿಗೆ
ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ
ಬಿಡಬೇಕೋ ತಮ್ಮಾ ಬಯಲಿಗೆ
ಆಕಾಶದಲ್ಲಿ ಕೊನೆ ನಕ್ಷತ್ರ ಇರುವತನಕ
ಕನಸು ಇರತಾವಂತ ಹಾಡಬೇಕೊ ||

ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ
ಹಾಡಬೇಕೋ ತಮ್ಮ ಹಾಡಬೇಕು|
ಕಲ್ಲಿನ ಎದೆಯಲ್ಲಿ ಜೀವಜಲ ಜಲ್ಲೆಂದು
ಚಿಮ್ಮುವಂಥಾ ಹಾಡು ಹಾಡಬೇಕು |
ಆಕಾಶದಂಗಳ ಬೆಳದಿಂಗಳೂ ಕೂಡ
ಕಂಗಾಲಾಗುವ ಹಾಡು ಹಾಡಬೇಕೊ ||

ತಂಗಾಳಿ ಪರಿಮಳಿಸಿ ತವಕಗೊಳ್ಳುವ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕೋ |
ಚಿಗುರುವಾಸೆಯ ಬಿಟ್ಟ ಹಸಿರು ಕೆರಳುವ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕೋ |
ಸಾವಳಗಿ ಶಿವಲಿಂಗ ಭೂಸನೂರ ಮಠದಯ್ಯ
ಹೌಂದು ಅನ್ನೊಹಾಂಗ ಹಾಡಬೇಕೋ ||

 

ಉಪಕಥೆ ಎರಡು:
ಕೇಳೆನ್ನದೇಶವೆ, ಶ್ರೀಮಂತರನುಮಾತ್ರಹಾಡಿನಬದಲಿಗೆ

ಏನ ಹೇಳಲೆವ್ವ ಭಾರತಿ
ಇಡೀ ಜಗದಾಗೆಲ್ಲ ಹಬ್ಬೇತೆವ್ವ ನಿನ್ನ ಕೀರುತಿ||

ಹತ್ತವತಾರಕ್ಕೆ ಹೆತ್ತವಳಾದಿ
ಚಿಲ್ಲರೆ ದೇವರು ಛತ್ತೀಸಕೋಟಿ
ದೇವರಿಗೊಂದೊಂದ ಜಾತಿಯ ಕಟ್ಟಿ
ಒಬ್ಬರಿಗೊಬ್ಬರ ಎತ್ತೆತ್ತಿ ಕಟ್ಟಿ
ಜನಗಣವೆಲ್ಲಾ
ರಣರಂಗ ಮಾಡಿ |
ಧರ್ಮವ ಮಾರಿ ||
ದೇವರ ಕೊಂಡಿ ||

ಬಾಳುವ ದಾರಿ ತೋರೇನಂದಿ
ಸತ್ಯ ಸತ್ತರೂ ಸೈ ಸೈ ಅಂದಿ
ತಾಯಿಗಂಡರಿಗಿ ಮಕ್ಕಳು ಅಂದಿ
ಕಸದ ಕಾಯಕದಾಗ ಕೈಲಾಸ ಕಂಡಿ
ತುಮುಲದ ಅಮಲೇ
ನೆತ್ತಿಗೆ ಏರಿ !
ಆತ್ಮವ ಮಾರಿ
ಕೀರ್ತಿಯ ಕೊಂಡಿ ||

ಮತಿವಂತರ ಎದಿ ಮತಿಗಳ ಸುಲದಿ
ತಿಳಿದ ಮಂದಿಗಳ ಮಹಿಮೆಯ ಮುರಿದಿ
ಆದರು ಇತಿಹಾಸಕ ಒಳಗಂಜಿ
ಕಾಲಕೋಶದಾಗ ಅದ ಹುದಿಗಿಟ್ಟಿ
ಗಾಳಿಯ ನಿಲ್ಲಿಸಿ
ಉಸಿರ ಬಿಗಿದಿಟ್ಟಿ |
ಹರಿಯುವ ನೀರಾ
ಕೆರಿಯ ಮಾಡಿಟ್ಟಿ ||

 

ಉಪಕಥೆ ಮೂರು:
ಕೆದರಿದಕೂದಲಈಚಲುಮರದವ್ವೆಹಾಡಿನಬದಲು

ಉದ್ಧರಿಸು ಉಘೆ ಎನ್ನಿರೋ
ಉದ್ದಂಡ | ದಿಂಡುರುಳಿ ಶರಣೆನ್ನಿರೋ
ಸುತ್ತೇಳು | ಬಳಗಾಕ ಸುದ್ದಿಕೊಂಡಿರೋ
ಮಾತಾಯಿ ಮಹಾಮಾಯಿ ಜಗದಂಬ ಬರತಾಳ |
ನಿನ ಪಾಲಿಗುಧೊ ಎನ್ನಿರೋ ||

ಕೇರಿ ಹಿರಿಯರು ಬನ್ನಿರೋ
ಊರೀನ | ಕಿರಿಯರೆಲ್ಲಾ ಬನ್ನಿರೋ
ಬಲ್ಲೀದ | ಬಡವರೆಲ್ಲಾ ಬನ್ನಿರೋ
ಬೆನ್ನಿಗಂಟಿದ ಹೊಟ್ಟಿ ಆತ್ಮವಾದವರೆಲ್ಲ |
ಕ್ಯೂ ಇಲ್ಲ ಗಡ ಬನ್ನಿರೋ ||

ತಳಿರು ತೋರಣ ಕಟ್ಟಿರೋ
ಎಳೆಯರ | ಕರುಳಗಳ ತೂಗುಬಿಡಿರೋ
ಮಡದೇರ | ಮೈಹಡದಿ ಹಾಸಿರಯ್ಯೋ
ಕಣ್ಣು ಕನ್ನಡಿ, ಕಳಸ ಕನ್ಯೆಯರ ಮಾನಗಳು |
ನಿನ ಪಾಲಿಗುಧೋ ಎನ್ನಿರೋ ||

ಇದ್ದ ವಾದ್ಯಗಳೂದಿರೋ
ಇಲದಿರಕ | ದನಿಯೆತ್ತಿ ಚೀರಾಡಿರೋ
ಇಲದಿರಕ | ಬೊಬ್ಬೆಯಾದರೂ ಹೊಡೆಯಿರೋ
ಎಷ್ಟೆಷ್ಟು ಕಿರುಚಿದರ ಅಷ್ಟಷ್ಟು ಖುಶಿಗೊಂಬ  |
ತಾಯೀಗೆ ಶರಣೆನ್ನಿರೋ |

ಕೈಯೂರಿ ಕುಣಿದಾಡಿರೋ
ಇಲದಿರಕ| ಕಾಲೆತ್ತಿ ಹಾರ್ಯಾಡಿರೋ
ಬೇಜಾನು | ಬೊಂಬಾಟು ಜಿಗಿದಾಡಿರೋ
ಕುಣಿಯದಿದ್ದರು ನಿಮ್ಮ ಕುಣಿಸುವಂಥಾಕಿಗೆ ||
ಮೈ ಬಗ್ಗಿ ಶರಣೆನ್ನಿರೋ ||

ಬೆನ್ನಲ್ಲಿ ಏನಿರುವುದೋ
ತಾಯೀಗೆ | ಇನ್ನೆಲ್ಲಿ ಮುಖವಿರುವುದೋ
ಕೈಕಾಲು | ಎಲ್ಲೆಲ್ಲಿ ಚಾಚಿರುವವೋ
ಮುಚ್ಚು ಮರೆಗಳ ಒಳಗೆ ಮುಖ ಹುಗಿದ ತಾಯಿಗೆ ||
ಸುಮ್ಮನೆ ಶರಣೆನ್ನಿರೋ ||

ಕುರಿಕೋಣ ಬಲಿ ತನ್ನಿರೋ
ಇಲದಿರಕ  | ನೀವೇನೆ ಬಲಿಯಾಗಿರೋ |
ತಾಯಿಗೆ | ತೃಪ್ತೀಯ ಹಾರೈಸಿರೋ
ಒಂಚೂರು ಬಿಡದೇನೆ ಇಂಚಿಂಚು ನುಂಗುವ |
ತಾಯೀಗೆ ಶರಣೆನ್ನಿರೋ ||

 

ಬಂಧುಅನುಕೂಲಸಿಂಧು” : ದಲ್ಲಿಯಎಲ್ಲಾಇದ್ದರುಇನ್ನೊಂದ್ಬೇಕುಬದಲಿಗೆ

ಗುಡ್ಡದಕ್ಕಿಂತ ದೊಡ್ಡದು ಲೋಕದಲ್ಲಿ ಇನ್ಯಾವುದು
ಮಾನವ ಜನ್ಮ ದೊಡ್ಡದು ಹೌಂದಣ್ಣಾ
ಮಾನವರಲ್ಲಿ ಎಲ್ಲರಿಗಿಂತ ದೊಡ್ಡವರ್ಯಾರು ಹೇಳ ತಮ್ಮಾ
ಮಲೀಶೆ ಹೊತ್ತ ಗಂಡಸಲ್ಲವೆ ಹೌಂದಣ್ಣಾ|

ಮೀಸೆಗಿಂತ ದೊಡ್ಡದು ಇನ್ಯಾವುದು ಹೇಳ ತಮ್ಮಾ
ಮೀಸೆಗಿಂತ ದೊಡ್ಡದು ದೇಶ ಅಲ್ಲವೆ?
ದೇಶಕಿಂತ ದೊಡ್ಡದು ಇನ್ಯಾವುದು ಹೇಳ ತಮ್ಮಾ
ಸಳುವಳಿ ಮಾಡೋದು ಹೌಂದಲ್ಲವೆ?

ಮಳೆ ಬೆಳೆ ಮರೆತರು ಸಳುವಳಿ ಮರಿಬಾರ್ದು
ಸಳುವಳಿ ಅಂದರೆ ಏನಣ್ಣಾ
ಗಿರಗಿರ ತಿರುಗುವ ಚರಕವ ತಿರುಗಿಸೋದು
ಸಳುವಳಿ ಮಂತ್ರದ ಬೀಜಣ್ಣಾ

ಚರಕವ ತಿರುಗಿಸಿದರೆ ಇಂಗರೇಜಿ ಸರಕಾರ
ಸುಸ್ತಾಗಿ ಬೀಳುವುದು ತಲೆತಿರುಗಿ
ಮಳೆ ಬೆಳೆ ಮರೆತರು ಸಳುವಳಿ ಮರಿಬಾರ್ದು
ಸಳುವಳಿ ಮಾಡಬೇಕು ತಿರುತಿರುಗಿ