ಭಾವನೆಯನ್ನು ದಾಖಲಿಸುವಂತೆ ಬರೆದಿಡುವುದು ಮೂಲತಃ ಸಾಹಿತ್ಯವೆನಿಸುತ್ತದೆ. ಆ ಕಾರಣಕ್ಕಾಗಿಯೇ ಅದು ಲೌಕಿಕ ಅಥವಾ ಪ್ರಾಪಂಚಿಕವಾಗುತ್ತದೆ. ಆದರೆ ಜಾನಪದ ಕಾವ್ಯ ಬೇರೆ, ಅದು ಕಾಲಬದ್ಧ ಅಥವಾ ದೇಶಬದ್ಧ ಅಲ್ಲ ಎಂಬ ಅರ್ಥದಲ್ಲಿ. ಜಾನಪದ ಕಾವ್ಯ ಎಷ್ಟರಮಟ್ಟಿಗೆ ಸಮಕಾಲೀನವೋ ಅಷ್ಟರಮಟ್ಟಿಗೆ ಪ್ರಾಚೀನವೂ ಹೌದು. ಜಾನಪದ ಕತೆಯ ನೇಯ್ಗೆಯಲ್ಲೇ ಪ್ರಾಚೀನ ಮತ್ತು ಅರ್ವಾಚೀನ ಅಂಶಗಳ ಯಾವುದೇ ಹಿಂಜರಿಕೆಯಿಲ್ಲದ ಮುಕ್ತ ವಿನಿಮಯವಿದೆ. ಒಂದು ಕಥೆಯಲ್ಲಿ ಸೊಸೆಯೊಬ್ಬಳು ಹೇಮರೆಡ್ಡಿ ಮಲ್ಲಮ್ಮನಂತೆಯೇ ವರ್ತಿಸುತ್ತಾಳೆ. ಮಲ್ಲಮ್ಮನ ಜೀವನವನ್ನು ವರ್ಣಿಸುವ ಇನ್ನೊಂದು ಕಥೆಯಲ್ಲಿ ಮಲ್ಲಮ್ಮಳು ನೆರೆಯ ಗ್ರಾಮದ ಒಬ್ಬ ಸಾಮಾನ್ಯ ಹೆಂಗಸಿನಂತೆಯೇ ವರ್ತಿಸುತ್ತಾಳೆ. ಪ್ರಾಚೀನ ಮತ್ತು ಅರ್ವಾಚೀನಗಳು ಒಂದರೊಡನೊಂದು ಬೆರೆತು, ಮೂರ್ತವೂ ಅಮೂರ್ತವೂ ಎರಡೂ ಆಗಿರುವ ಒಂದು ಸಾರ್ವತ್ರಿಕತೆಯನ್ನು ಉತ್ಪಾದಿಸುತ್ತವೆ. ಪೌರಾಣಿಕ ಪಾತ್ರಗಳು ಹಳ್ಳಿಯ ಜನಗಳಂತೆಯೇ ನಡೆದುಕೊಳ್ಳುತ್ತಾರೆ. ವರ್ತಿಸುತ್ತಾರೆ. ಸೀತೆಯ ಮರದ ಕೊಂಬೆಗೆ ತೊಟ್ಟಿಲು ಕಟ್ಟುತ್ತಾಳೆ. ಹಟ್ಟಿಯ ಕೆರೆಯಲ್ಲಿ ಋತುಸ್ನಾನ ಮಾಡುತ್ತಾಳೆ. ಭೀಮನು ಒಂದು ಕೆರೆಯ ಬಳಿ ಅಡುಗೆ ಮಾಡುತ್ತಾನೆ. ಕುಂತಿಯ ತನ್ನ ಮಕ್ಕಳ ಒಳಉಡುಪುಗಳನ್ನು ಒಂದು ನಿರ್ದಿಷ್ಟ ಬಂಡೆಯ ಮೇಲೆ ಒಗೆಯುತ್ತಾಳೆ. ಸೀತೆಯ ಮದುವೆಗೆ ತಮ್ಮನ್ನು ಆಹ್ವಾನಿಸಲಿಲ್ಲವೆಂದು ಒಂದು ಹಳ್ಳಿಯ ಹೆಂಗಸರು ಜನಕ ಮಹಾರಾಜನಿಗೆ ದೂರು ಸಲ್ಲಿಸುವುದನ್ನು ಒಂದು ಕನ್ನಡ ಜನಪದ ಗೀತೆಯು ದಾಖಲಿಸುತ್ತದೆ.

ಪ್ರಾಚೀನ ಮತ್ತು ಸಮಕಾಲೀನಗಳ ನಡುವೆ ನಡೆಯುವ ಈ ವಿನಿಮಯವು ಕಾವ್ಯವನ್ನು ಅಲೌಕಿಕವನ್ನಾಗಿ ಮಾಡುತ್ತದೆ. ಊರಗೌಡನ ಕಿರಿಯ ಸೊಸೆಯ ತನ್ನನ್ನು ಬಲಿಯಾಗಿ ಅರ್ಪಣೆ ಮಾಡಿಕೊಂಡು ಕೆರೆಯಲ್ಲಿ ನೀರು ಉಳಿಯುವಂತೆ ಮಾಡುತ್ತಾಳೆ. ಕನ್ನಡ ಕಾವ್ಯವು ಈ ಬಲಿದಾನವನ್ನು ಕೊಂಡಾಡುತ್ತದೆ. ಯಾವುದೇ ಒಂದು ಹಳ್ಳಿಯಲ್ಲಿ ಪ್ರತಿಯೊಂದು ಮನೆಯೂ ಹಲವು ಕತೆಗಳ ಉಗ್ರಾಣವಾಗಿರುತ್ತದೆ. ಮನೆಗಳು, ಬಾವಿಗಳು, ಗದ್ದೆಗಳು, ದೇವಾಲಯಗಳು ಮತ್ತು ಮರಗಳು ಎಲ್ಲವನ್ನೂ ಕತೆಗಳು ಬೇಟೆಯಾಡಿವೆ. ಸ್ಥಳೀಯ ದೇವರುಗಳು ಹಳ್ಳಿಯ ಸುಂದರಿಯನ್ನು ಮದುವೆಯಾಗುತ್ತಾರೆ. ಅಲೌಕಿಕವಾದದ್ದು ಸಹಜತೆಯೊಳಗೆ ಲೀನವಾಗಿಬಿಡುತ್ತದೆ. ವೈಷ್ಣವರ ಸುಪ್ರಸಿದ್ದ ದೇವರು ರಂಗನಾಥನು ಸೋಲಿಗರ ಬುಡಕಟ್ಟಿನ ಕನ್ಯೆಯೊಬ್ಬಳನ್ನು ಮದುವೆಯಾಗುತ್ತಾನೆ. ಇದು ಸ್ಥಳೀಯವಾದ ಘಟನೆ. ಈ ವಸ್ತವನ್ನುಳ್ಳ ಕಾವ್ಯವಯ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೇರಿದ್ದು ಎನ್ನುವುದು ನಿಜ. ದೇವರ ಈ ಮದುವೆಯು ಒಂದು ಐತಿಹಾಸಿಕ ಘಟನೆಯಲ್ಲ. ಅದು ಒಂದು ನಿರ್ದಿಷ್ಟವಾದ ಸ್ಥಳದ ಜನರಿಗೆ ಸಂಬಂಧಪಟ್ಟಿದ್ದು. ಒಂದು ಹಳ್ಳಿಯ ಖಾಯಂ ಆಗಿ ಗುರುತಿಸಲ್ಪಟ್ಟು ಅದನ್ನು ಅತಿಕ್ರಮಿಸುವುದು ಹಾದರ ಅಥವಾ ವಿಶ್ವಾಸ ದ್ರೋಹದಂತಹ ಮಹಾಪಾಪ ಎಂದು ಪರಿಗಣಿಸಲಾಗುತ್ತದೆ.

ಎಲ್ಲಾ ಜನಪದ ಕಥೆಗಳಲ್ಲೂ ಒಂದಿಲ್ಲೊಂದು ನೈತಿಕ ಉದ್ದೇಶವಿರುತ್ತದೆ. ಕತೆ ಹೇಳುವುದೇ ನೀತಿಭೋಧೆಗಾಗಿ ಎಂದು ತೋರುವಂತಿದೆ. ಇದಕ್ಕೆ ಕಾರಣ, ಜಾನಪದ ಸಾಹಿತ್ಯವು ಬದುಕಿನ ನೈಜ ಕಲೆಗಳೊಂದಿಗೆ ನಿಕಟವಾಗಿ ಸಂಬಂಧವಿಟ್ಟುಕೊಂಡಿರುವುದು. ಜಾನಪದ ಸಂಪ್ರದಾಯದ ದೃಷ್ಟಿಯಿಂದ ಕಲೆ ಒಂದು ಭೋಗವಸ್ತುವಲ್ಲ. ಅದು ಒಂದು ಅಗತ್ಯ ಉದಾಹರಣೆಗೆ ಎಲ್ಲಾ ವಿವಾಹ ಸಮಾರಂಭಗಳಲ್ಲೂ ಶಹನಾಯಿ ಸಂಗೀತ ಇರಲೇಬೇಕು. ಆ ಸಂಗೀತ ಒಳ್ಳೆಯದಾಗಿದೆಯೋ ಕೆಟ್ಟದಾಗಿದೆಯೋ ಅದು ಮುಖ್ಯವಲ್ಲವೇ ಅಲ್ಲ. ಹಳ್ಳಿಯ ಯಾವುದೇ ಉತ್ಸವದ ಜೊತೆಗೆ ಒಂದು ರಾತ್ರಿಯ ನಾಟಕ ಇರಲೇಬೇಕು. ಅದು ಜನರಿಗೆ ಮನರಂಜನೆ ಕೊಡಬೇಕುಂಬುವುದಕ್ಕಾಗಿ ಅಲ್ಲ. ನಾಟಕಾಭಿನಯವು ಉತ್ಸವದ ಒಂದು ಅಂಗವೆಂಬುದಕ್ಕಾಗಿ ಜಾನಪದ ರಂಗಭೂಮಿಯು ಧಾರ್ಮಿಕ ವಿಧಿಯಿಂದ ವಿಕಾಸಗೊಂಡಿತು ಎಂದು ಇದರ ಅರ್ಥವಲ್ಲ. ಆದರೆ ಧಾರ್ಮಿಕ ವಿಧಿಗೆ ಒಂದು ಸೌಂದರ್ಯದ ಉದ್ದೇಶವಿದೆ. ಸೌಂದರ್ಯದಿಂದ ಧಾರ್ಮಿಕತೆಯನ್ನು ಪ್ರತ್ಯೇಕಗೊಳಿಸುವುದು ಬಹಳ ಕಷ್ಟವಾಗುತ್ತದೆ, ಸೌಂಧರ್ಯದ ಭಾವನೆ ಹಾಗೂ ಪವಿತ್ರತೆಯ ಭಾವನೆ ಎರಡೂ ಪರಸ್ಪರ ಅವಲಂಭಿಸಿವೆ. ಏಕೆಂದರೆ ಅತ್ಯಂತ ಸುಂದರವಾದುದನ್ನು ಭಗವಂತನಿಗೆ ಅರ್ಪಿಸಲೇಬೇಕು.

ಜಾನಪದ ರಂಗಭೂಮಿ ನಾಗರಿಕ ರಂಗವಷ್ಟು ಸೂಕ್ಷ್ಮವಾದುದಲ್ಲ. ವೃತ್ತಿಪರತೆಯ ಕೊರತೆಯಿಂದಾಗಿ ಅದು ಹೆಚ್ಚು ಹೆಚ್ಚಾಗಿ ಒರಟಾಗಿದೆ. ಆದರೆ ಅದಿನ್ನೂ ಜೀವಂತವಾಗಿರುವ ರಂಗಭೂಮಿ. ಅಲ್ಲಿ ಪ್ರೇಕ್ಷಕರು ಮುಚ್ಚಿದ ಪ್ರೇಕ್ಷಕಾಂಗಣದಲ್ಲಿರುವುದಿಲ್ಲವಾದ್ದರಿಂದ ಅವರೂ ಭಾಗವಹಿಸಲು ಅಲ್ಲಿ ಅವಕಾಶವಿದೆ. ನಾಟಕದ ಪಾತ್ರಗಳು ಪ್ರೇಕ್ಷಕರ ಸಮೂಹದೊಳಗಿನಿಂದ ಹುಟ್ಟಿ ಬರುತ್ತಾರೆ. ನಿಧಾನವಾಗಿ ಬೇರೆಯೇ ಆದ ವ್ಯಕ್ತಿತ್ವಗಾಳಗಿ ಪರಿವರ್ತಿತರಾಗುತ್ತಾರೆ. ನಟರು ಬರಹದಲ್ಲಿರುವ ಯಾವುದೋ ಒಂದನ್ನು ಅನುಕರಿಸುವುದಿಲ್ಲ, ಬದಲಿಗೆ ಅವರು ರಂಗದ ಮೇಲೆಯೇ ನಾಟಕಕ್ಕೆ ಜನ್ಮ ಕೊಡುತ್ತಾರೆ. ನಟನು ಒಂದು ಪಾತ್ರವಾಗಿ ಪರಿವರ್ತನೆ ಹೊಂದುವ ಮೊದಲು ಒಂದು ಗಳಿಗೆಯ ಅನಿಶ್ಚಿತತೆಯಿರುತ್ತದೆ. ಈ ಕಾತರದ ಗಳಿಗೆಯೇ ನಾಟಕದ ಶಕ್ತಿಗೆ ಕಾರಣವಾದ ಅಂಶ. ನಾಗರೀಕ ರಂಗಭೂಮಿ ಏನೊಂದನ್ನು ಆಕಸ್ಮಿಕಕ್ಕೆ ಬಿಡುವುದಿಲ್ಲ. ನಾಟಕದ ಪ್ರತಿಯೊಂದು ಕ್ಷಣವನ್ನೂ ಲೆಕ್ಕಹಾಕಲಾಗಿರುತ್ತದೆ. ಮತ್ತೆ ಮತ್ತೆ ಪುನರುಕ್ತಿಸಿ ಅಭ್ಯಾಸ ಮಾಡಲಾಗಿರುತ್ತದೆ. ಜಾನಪದ ರಂಗದ ನಟನಾದರೋ ರಂಗದ ಮೇಲೆ ಸಂಭವಿಸಲಿರುವ ಒಂದು ನಾಟಕದ ಸಲುವಾಗಿ ತಂತಾನೇ ಒಂದು ಪಾತ್ರವಾಗಿ ಪರಿವರ್ತಿತವಾಗುತ್ತಾನೆ.

ಕೃಷ್ಣ ಪಾರಿಜಾತದಲ್ಲಿ ದೂತೆ (ಒಂದು ಸಿದ್ದ ಪಾತ್ರ ನಾಟಕದ ಕ್ರಿಯೆಯ ಒಳಗೆ ಪ್ರವೇಶಿಸಿ, ನಿರೂಪಿಸಿ, ತನ್ನ ಟೀಕೆಟಿಪ್ಪಣಿಗಳನ್ನು ಕೊಡುವ ಪಾತ್ರ) ಹೆಣ್ಣು ಮತ್ತು ಗಂಡು ಎರಡೂ ಆಗಿದ್ದು ಒಬ್ಬ ನಟನಿಗಿರುವ ಅಗಾಧ ಸಾಮರ್ಥ್ಯಗಳನ್ನು ವ್ಯಕ್ತಪಡಿಸುತ್ತಾನೆ. ದೂತೆ ಒಂದು ಪಾತ್ರ ರಂಗದ ಮೇಲಿನ ವ್ಯಕ್ತಿ ಮಾತ್ರವಲ್ಲದೆ. ದೃಶ್ಯ ಬದಲಾವಣೆಯನ್ನು ಮನೋಧರ್ಮ ಬದಲಾವಣೆಯನ್ನು ಸೂಚಿಸಲು ತಾಂತ್ರಿಕವಾದ ಒಂದು ಸಾಧನವೂ ಆಗುತ್ತಾನೆ. ನಗರ ರಂಗಭುಮಿಯಲ್ಲಿ ಒಬ್ಬ ನಟನು ಕೇವಲ ನಟ, ಬೇರೆನೂ ಅಲ್ಲ. ಅವನು ಯೋಚಿಸಿ ಅಭಿನಯಿಸುವುದಿಲ್ಲ, ಜಾನಪದ ನಟನಾದರೆ ಮುಂದೇನು ಮಾಡಬೇಕೆಂದು ಯೋಚಿಸುತ್ತಾನೆ.

ಇವು ವಿದ್ಯಾವಂತ ವರ್ಗದವರ ಸಾಹಿತ್ಯಕ ಪರಿಶ್ರಮಗಳಿಗೆ ಆಕರ್ಷಣೆಯಾಗಿರುವ ಜನಪದ ಸಾಹಿತ್ಯದ ಕೆಲವು ಲಕ್ಷಣಗಳು, ಈ ಶತಮಾನದ ಪ್ರಾರಂಭದಲ್ಲಿ ನವೋದಯ ಸಾಹಿತ್ಯವು ಜಾನಪದ ಸಾಹಿತ್ಯದಿಂದ ಬೇಕಾದಷ್ಟು ಪಡೆದುಕೊಂಡಿತು, ಬೇಂದ್ರೆ ಮಧುರಚೆನ್ನ ಮೊದಲಾದ ಕವಿಗಳನ್ನು ಜೊತೆಗೆ ನನ್ನಂಥ ನಾಟಕಕಾರರನ್ನು ಜಾನಪದ ಸಾಹಿತ್ಯವು ಪಷಿಸಿತು. ಆದರೆ ಜಾನಪದ ಸಾಹಿತ್ಯ ಸಂಪ್ರದಾಯವು ಸಾಹಿತ್ಯಕ್ಕಿಂತಲೂ ಹೆಚ್ಚು ಮೂಲ್ಯವಾದದ್ದು ಎಂದು ನಾನು ಭಾವಿಸುತ್ತೇನೆ. ಹಲಸಂದಿಯ ಖ್ಯಾಜಾ ಸಾಹೇಬ್ ಅವರಿಗಿಂತಲೂ ಬಹಳ ಉತ್ತಮವಾದ ಕವಿಯನ್ನು ವಿದ್ಯಾವಂತ ವರ್ಗದಲ್ಲಿ ನೋಡುವುದು ಸಾಧ್ಯ. ಆದರೆ ವಿದ್ಯಾವಂತ ವರ್ಗಕ್ಕೆ ಸೇರಿದ ಒಬ್ಬ ಕವಿಗೆ ಸಂಪ್ರದಾಯದ ಆಧಾರವಿರುವುದಿಲ್ಲ. ಕಾವ್ಯಕ್ಕೆ ಅರ್ಥವೂ ಮಹತ್ವವೂ ಒದಗುವುದು ಒಂದು ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಮಾತ್ರ, ಜಾನಪದ ಕಾವ್ಯವು ಬೇಸಾರವಾಗುವಷ್ಟು ಪುನರುಕ್ತಿಯಾದದ್ದು, ಅರ್ಥವೂ ಒಂದೇ ಬಗೆಯದಾಗಿರುತ್ತದೆ. ಕೆಲವೊಮ್ಮೆ ಅದು ರೂಪರಹಿತವಾಗುತ್ತದೆ, ಒರಟಾಗುತ್ತದೆ, ಆದರೆ ಒಂದು ಸಂಪ್ರದಾಯದ ಹಿನ್ನಲೆಯಲ್ಲಿ ಅದು ಅರ್ಥಪೂರ್ಣವಾಗುತ್ತದೆ. ಕೃಷ್ಣನ ಪಾತ್ರವನ್ನು ಅಭಿನಯಿಸುವ ನಟನು ಕೃಷ್ಣನಂತೆ ಕಾಣಿಸದಿರಬಹುದು. ಆದರೆ ಪ್ರೇಕ್ಷಕರು ಅವನನ್ನು ಕೃಷ್ಣನೆಂದು ಸ್ವೀಕರಿಸುತ್ತಾರೆ. ಅವರಿಗೆ ಅರ್ಥ ಸಂವಹನವಾಗುತ್ತದೆ. ಅವನನ್ನು ಒಬ್ಬ ಉತ್ತಮ ನಟನೆಂದು ಕೊಡಾಡದಿರಬಹುದು, ಆದರೆ ಕೃಷ್ಣನೆಂದು ಒಪ್ಪಲಾಗುತ್ತದೆ. ನಮ್ಮ ನಾಗರಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೆಲವು ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ನಾವು ಅಲಕ್ಷಿಸಿದ್ದೇವೆ. ಜಾನಪದ ಪ್ರೇಕ್ಷಕರಿಗೆ ಮುಖ್ಯವಾಗಿರುವುದು ಒಂದು ನಾಟಕ, ಆ ನಾಟಕದಲ್ಲಿ ಕೃಷ್ಣನಿರುವುದು ಅಷ್ಟೆ.

ಜಾನಪದ ಸಂಪ್ರದಾಯವು ಪ್ರಸ್ತುತ ಶತಮಾನದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದರ ನೈರಂತಕಾರ್ಯಕ್ಕೆ ಅಪಾಯದ ಭೀತಿಯುಂಟಾಗಿದೆ. ಈ ಬಿಕ್ಕಟ್ಟಿಗೆ ಕಾರಣ ಕೈಗಾರೀಕರಣವೂ ಅಲ್ಲ. ಸಮೂಹ-ಮಾಧ್ಯಮಗಳ ಬೆಳವಣಿಗೆಯೂ ಅಲ್ಲ. ಜಾನಪದ ಸಂಪ್ರದಯವೂ ಈ ಬಗೆಯ ವಿಷಮ ಪರಿಸ್ಥಿತಿಗಳನ್ನೆಲ್ಲ ಎದುರಿಸಿ ಉಳಿದುಕೊಳ್ಳಲು ಸಾಕಷ್ಟು ಸಾಮರ್ಥ್ಯವನ್ನು ಪಡೆದಿದೆ. ಆದರೆ ಪ್ರಸ್ತುತ ಬಿಕ್ಕಟ್ಟು ಬೇರೊಂದು ರೂಪದಲ್ಲಿ, ಸ್ವ-ಪ್ರಜ್ಞೆಯ ರೂಪದ್ದು ನಮ್ಮ ಸಂಶೋಧನ ವಿದ್ವಾಂಸರು, ಜಾನಪದ ಸಾಹಿತ್ಯದ ಕನ್ನೆ ನೆಲವನ್ನು ಬಹಳವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇಂದು ಜಾನಪದವು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಬಹುಮುಖ್ಯವಾದ ಒಂದು ವಿಷಯವಾಗಿದೆ. ಈ ಕ್ಷೇತ್ರದಲ್ಲಿ ಸಂಶೋಧನೆ ಅವಶ್ಯವಾಗಿದೆ ನಿಜ. ಜಾನಪದ ಕಾವ್ಯದ ಛಂದ. ಜಾನಪದ ಕಥೆಗಳ ನಿರೂಪಣೆ, ಜಾಲಪದ ನಾಟಕಗಳ ಅಭಿನಯ ಸಂಪ್ರದಾಯಗಳು ಇವನ್ನೆಲ್ಲ ಆಳವಾದ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ಆದರೆ ಇಲ್ಲಿ ಆಕ್ಷೇಪಣೀಯವಾಗಿರುವ ಒಂದು ವಿಚಾರವಾಗಿದೆ. ಅದು ತನ್ನ ಅಧ್ಯಯನ ವಿಷಯಕ್ಕಿಂತ ತಾನು ಬಹಳ ಮೇಲ್ಮಟ್ಟದವನು ಎಂದು ಭಾವಿಸುವ ಸಂಶೋಧಕನ ಮನೋಧರ್ಮ, ಅವನು ಪೋಷಕ ಪ್ರವೃತ್ತಿಯನ್ನು ತೋರ್ಪಡಿಸುತ್ತಿದ್ದಾನೆ. ಸಮಸ್ತವನ್ನೂ ಅಧ್ಯಯನದ ನಿರ್ಜೀವ ವಸ್ತುವನ್ನಾಗಿ ಪರಿವರ್ತಿಸುತ್ತದೆ. ಎರಡನೆಯದಾಗಿದೆ ಜಾನಪದ ಕಲಾವಿದನ ಸ್ವ-ಪ್ರಜ್ಞೆ ಅಷ್ಟೇ ಗಂಡಾಂತರಕಾರಿಯಾಗಿದೆ. ಅರಿವಿಲ್ಲದೆಯೇ ಅವನು ಮೌಲ್ಯಮಾಪನದ ವಸ್ತುವಾಗುತ್ತಾನೆ. ಒಬ್ಬ ಜಾನಪದ ಕಲಾವಿದನಾದ್ದರಿಂದ ತಾನು ಉತ್ತಮ ಎಂದು ನಂಬುತ್ತಾನೆ. ಹಿಂದೆ ಜಾನಪದ ಕಲೆಯನ್ನು ಮುಖ್ಯಮಾಪನಕ್ಕೆ ಒಳಪಡಿಸುತ್ತಿರಲಿಲ್ಲ. ಅದನ್ನು ಸವಿಯುವುದಷ್ಟೇ ಆಗಿತ್ತು. “ಮೌಲ್ಯಮಾಪನ ಮತ್ತು ತುಲನೆ ಇವು ವಿಮರ್ಶೆಯ ಮುಖ್ಯ ಸಾಧನಗಳು” ಎಂದು ಟಿ.ಎಸ್. ಎಲಿಯಟ್ ಹೇಳುತ್ತಾನೆ. ಅದು ಪರಿಷ್ಕೃತ ಕಲೆಗೂ ಅಷ್ಟೇಮಟ್ಟಿಗೆ ಅನ್ವಯಿಸುತ್ತದೆ. ಜಾನಪದ ಸಂಸ್ಕೃತಿಗೆ ಕಲೆಯ ಅಗತ್ಯವಿದೆ. ಆದರೆ ಪರಿಷ್ಕೃರಣಕ್ಕೆ ನಾಜೂಕಾದ ಕಲೆಯ ಅಗತ್ಯವಿಲ್ಲ. ಆದರೆ ಅದನ್ನು ಮೆಚ್ಚಬಲ್ಲುದು. ಜಾನಪದ ಕಲಾವಿದರು ವಿಶೇಷವಾಗಿ ನಟರು ಮತ್ತೆ ಅದರ ತೆಕ್ಕಗೆ ಒಳಪಡುತ್ತಾರೆ. ನಟನು ಒಬ್ಬ ರೈತನಾಗಿಯೋ ಒಬ್ಬ ಬಡಗಿಯಾಗಿಯೋ ಮತ್ತೆ ಹಿಂದಿರುಗುತ್ತಾನೆ. ಆದರೆ ಮಧ್ಯಮ ವರ್ಗದ ಸಂಸ್ಕೃತಿಯಲ್ಲಿ ಒಬ್ಬ ನಟನು, ರಂಗದ ಮೇಲೆ ಮತ್ತು ಹೊರಗೆ ಕೂಡ ನಟನಾಗಿಯೇ ಉಳಿಯುತ್ತಾನೆ. ನಟನಾಗಿರುವುದೇ ಅವನ ವಿಧಿ. ಎಲ್ಲಿಯವರೆಗೆ ಜಾನಪದ ಸಂಸ್ಕೃತಿಗೆ ಕಲೆಯ ಅಗತ್ಯವಿದೆಯೋ. ಎಲ್ಲಿಯವರಿಗೆ ಅದು ಜಾನಪದ ಸಂಸ್ಕೃತಿಯಾಗಿರುತ್ತದೆಯೋ ಅಲ್ಲಿಯವರೆಗೆ ಕಲೆಯು ಮುಂದುವರೆಯುತ್ತದೆ.

* * *