ಜನನ : ೨-೩-೧೯೪೭ ರಂದು ಮಲ್ಲಸಂದ್ರದಲ್ಲಿ

ಮನೆತನ : ಸಂಗೀತ ಬಲ್ಲವರ ಮನೆತನ. ತಂದೆ ಸೀಬನಯ್ಯನವರು ತಬಲಾವಾದಕರು. ನಾಟಕ ರಂಗದಲ್ಲೂ ಅನುಭವವುಳ್ಳವರು.

ಶಿಕ್ಷಣ : ಆರ್. ಗುರುರಾಜುಲಯ ನಾಯ್ಡುರವರ ಬಳಿ ಸುಮಾರು ಐದು ವರ್ಷಗಳ ಕಾಲ ಶಿಷ್ಯತ್ವ ಕೀರ್ತನ ಕಲೆಯಲ್ಲಿ ಪ್ರಾವೀಣ್ಯತೆ. ನಾಟಕ ಕ್ಷೇತ್ರದಲ್ಲಿ ಹೊನ್ನಪ್ಪ ಭಾಗವತರು, ಮುಸುರಿ ಕೃಷ್ಣಮೂರ್ತಿ ಮುಂತಾದವರ ಮಾರ್ಗದರ್ಶನ. ಪದವಿಪೂರ್ವ ಶಿಕ್ಷಣದಲ್ಲಿ ತೇರ್ಗಡೆ.

ಕ್ಷೇತ್ರ ಸಾಧನೆ : ೧೯೭೦ ರಲ್ಲಿ ಕೊರಟಗೆರೆ ಸತ್ಯ ಗಣಪತಿ ದೇವಸ್ಥಾನದಲ್ಲಿ ಮೊದಲ ಕಾರ್ಯಕ್ರಮ. ಮುಂದೆ ತುಮಕೂರು ಜಿಲ್ಲಾದ್ಯಂತ ಕಾರ್ಯಕ್ರಮಗಳು. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಡ್ಯ ಮೊದಲಾದೆಡೆಗಳಲ್ಲಿ ಅವ್ಯಾಹತವಾಗಿ ಕರ್ಯಕ್ರಮಗಳನ್ನು ನೀಡಿರುತ್ತಾರೆ. ವಿಶೇಷವಾಗಿ ಭಗವಾನ್ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕಾರ್ಯಕ್ರಮಗಳನ್ನು ಕಥಾ ಕೀರ್ತನಗಳ ಮೂಲಕ ನಡೆಸಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಇವರ ’ಎಡೆಯೂರು ಸಿದ್ಧಲಿಂಗೇಶ್ವರ ವೈಭವ’ ನಾಟಕ ಹಲವಾರು ಬಾರಿ ಪ್ರದರ್ಶನ ಕಂಡಿದೆ. ಇವರ ಅಂಬೇಡ್ಕರ್ ಕಥಾ ಕೀರ್ತನ ದೂರದರ್ಶನ ರಾಷ್ಟ್ರೀಯ ಹಾಗೂ ಸ್ಥಳೀಯ ಜಾಲದಲ್ಲಿ ಬಿತ್ತರಗೊಂಡಿವೆ. ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಕಾರ್ಯಕಾರಿಣಿಯ ಸದಸ್ಯರಾಗಿ ಪ್ರಸ್ತುತ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನ ಹರಿಕಥಾ ಚತುರ. ಕೀರ್ತನ ಚಾಣಕ್ಯ ಮೊದಲಾದ ಬಿರುದುಗಳು ಸಂದಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೯-೨೦೦೦ ನೇ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.