ಕೈ ಮುಷ್ಟಿ ಕಟ್ಟಿ, ಹೆಬ್ಬರಳನ್ನು ಮೇಲತ್ತಿ, ನೇಲದ ಮೇಲೆ ಮುಷ್ಟಿಯಿಡಬೇಕು. ಎಲ್ಲ ಆಟಗಾರರೂ ಹೆಬ್ಬೆರಳನ್ನು ಎತ್ತಿ ಒಂದರಮೇಲೊಂದರಂತೆ ಮುಷ್ಟಿಯಿಡಬೇಕು. ಎಲ್ಲರಿಗಿಂತ ಮೇಲೆ ಮುಷ್ಟಿಯಿಟ್ಟವರು.

“ಊಪುರಂಗಿ ಉರೂರಂಗಿ
ಗಟ್ಟದ ಮೇಲಣ್ಣಯೆಳ್ಸೆ ಒಟಿ
ಒಂದ್ ಕಯ್ ತೆಗಿಯೋ ಗೊಕ್ ಬಟ್ಟಾ”

ಎನ್ನುತ್ತಾ ಒರಳು ಕಲ್ಲಿನಲ್ಲಿ ಅರೆದಂತೆ ತನ್ನ ಮುಷ್ಟಿಯಿಂದ ಅರೆಯುವನು. ಕೊನೆಯ ಸಾಲು ಹೇಳಿದಾಗ ಮೇಲಿನ ಮುಷ್ಟಿಯವರು ತಮ್ಮ ಕೈ ತೆಗೆದು ಹಿಂದೆ ಅಡಗಿಸಿಕೊಳ್ಳಬೇಕು. ಮತ್ತೆ ಮೇಲಿನಂತೆಯೇ ಹಾಡುತ್ತಾ ಅರೆಯುವರು. ಹಾಡು ಕೊನೆಗೊಳ್ಳುತ್ತಲೇ ಪ್ರತಿಬಾರಿಯೂ ಒಂದೊಂದು ಮುಷ್ಟಿ ಹಿಂದೆ ಹೋಗುವುದು. ಎಲ್ಲರೂ ಕೈಗಳನ್ನು ಅಡಗಿಸಿಕೊಂಡ ಮೇಲೆ ಎಲ್ಲರೂ ಕಾಲು ನೀಡಿ ತುಳಿದುಕೊಳ್ಳುವರು.