ಅಂಗಳದಲ್ಲಿ ನಡುವೆ ಒಂದು ಉದ್ದ ಗೆರೆ ಎಳೆದು ಗೆರೆಯ ಆಚೆ ಈಚೆ ಆಟಗಾರರು ನಿಲ್ಲುತ್ತಾರೆ. ಚೆಂಡೊಂದನ್ನು ಕಾಲಿನಿಂದ ಒಂದು ಪಕ್ಷದವರು ಇನ್ನೊಂದು ಪಕ್ಷದ ಸ್ಥಳಕ್ಕೆ ತೂರುತ್ತಾರೆ. ಆಚೆಯವರು ಅದನ್ನು ಈಚೆಗೆ ತೂರುತ್ತಾರೆ. ಹೀಗೆ ತೂರುವಾಗ ಯಾವ ಪಕ್ಷ ಚೆಂಡನ್ನು ತೂರಲು ಅಸಮರ್ಥವಾಗುವುದೋ ಆ ಪಕ್ಷ ಸೋಲುತ್ತದೆ. ಸೋತ ಪಕ್ಷದ ಮೇಲೆ ಹಂಡಿಯಾಗುತ್ತದೆ. ತೂರಿದ ಚೆಂಡು ಗೆರೆಯ ಒಳಗೇ ಉಳಿದುಕೊಂಡರೂ ತುಳಿದ ಪಕ್ಷ ಸೋತು ಅದರ ಮೇಲೆ ಹಂಡಿಯಾಗುತ್ತದೆ.