ಎರಡು ಪಕ್ಷ, ಪ್ರತಿ ಪಕ್ಷದಲ್ಲಿಯೂ ಅಷ್ಟಷ್ಟೇ ಜನ. ಅಂಗಳ ಅಥವಾ ಹಿತ್ತಲಿನ ಅರ್ಧ ಭಾಗದಲ್ಲಿ ಒಂದು ಪಕ್ಷದವರು; ಇನ್ನೊಂದು ಭಾಗದಲ್ಲಿ ಇನ್ನೋಮ್ದು ಪಕ್ಷದವರು ನಿಂತುಕೊಳ್ಳುತ್ತಾರೆ. ಎರಡೂ ಪಕ್ಷದವರು ಒಂದೊಂದು ಗರಟೆಯಲ್ಲಿ ಬೂದಿಯನ್ನಾಗಲೀ, ಹೊಇಗೆಯನ್ನಾಗಲೀ ತುಂಬಿಕೊಳ್ಳುತ್ತಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಹೋಇಗೆಯನ್ನು ತುಸು ತುಸು ಹಾಕಿ ಹುಂಡು ಇಡುತ್ತಾ ಹೋಗುವರು. ಎರಡೂ ಪಕ್ಷದವರು ಒಂದೇ ಬಾರಿಗೆ ಪ್ರಾರಂಭಿಸಿ ಒಂದೇ ಬಾರಿಗೆ ಮುಗಿಸಬೇಕು. ಮುಗಿಸಿ “ಕೂರ್ ಕೂರ್” ಎನ್ನುತ್ತ ವಿರುದ್ಧ ಪಕ್ಷದವರ ಕ್ಷೇತ್ರಕ್ಕೆ ಧಾವಿಸುವರು. ಎರಡೂ ಕಡೆಯವರು ತಮ್ಮ ವಿರುದ್ಧ ಪಕ್ಷದವರು ಹಾಕಿದ ಹೊಇಗೆಯನ್ನು ತುಳಿದು ಮಣ್ಣು ಗುಡಿಸುವರು. “ಕೂರ್ ಕೂರ್” ಎನ್ನುವುದನ್ನು ನಿಲ್ಲಿಸಿ ಎಲ್ಲರೂ ಒಟ್ಟುಗೂಡಿ ಪ್ರತಿ ಕ್ಷೇತ್ರದಲ್ಲಿ ಎಷ್ಟೆಷ್ಟು ಹುಂಡುಗಳು ಉಳಿದ್ದಿವೆಯೆಂಬುದನ್ನು ಲೆಕ್ಕ ಮಾಡುವುಅರು. ಯಾರ ಕ್ಷೇತ್ರದಲ್ಲಿ ಹೆಚ್ಚು ಹುಂಡುಗಳುಳಿದವೋ ಅವರು ಗೆದ್ದಂತೆ.