ವರ್ತುಳಾಕಾರವಾಗಿ ಹಲವರು ಕುಳಿತು, ಒಬ್ಬರು ನೀಡಿದ ಕಾಲಿನ ಮೇಲೆ ಇನ್ನೊಮ್ಬ್ಬರು ತಮ್ಮ ಕಾಲುಗಳನ್ನು ಇಡುತ್ತಾರೆ. ಹೀಗೆ ಎಲ್ಲರೂ ಕಾಲುಗಳನ್ನು ಇಟ್ಟಾದ ಮೇಲೆ, ಪ್ರತಿಯೊಬ್ಬರೂ ತಮ್ಮ ಒಂದೊಂದೇ ಮುಷ್ಟಿಯನ್ನು ಹೆಬ್ಬೆರಳು ನೆಟ್ಟಗೆ ಮಾಡಿಟ್ಟುಕೊಂಡು, ಅದನ್ನು ಇನ್ನೊಂದು ಕೈ ಮುಷ್ಟಿಯಿಂದ ಹಿಡಿಯುತ್ತ ಒಂದರ ಮೇಲೊಂದರಂತೆ ಕಾಲುಗಳ ಮೇಲೆ ಇಡುವರು. ಪ್ರತಿ ಕೆಳಗಿನ ಮುಷ್ಟಿಯ ಹೆಬ್ಬೆರಳು ಮೇಲಿನ ಮುಷ್ಟಿಯ ಒಳಗೆ ಜೋಡಿಸಿದಂತೆ ಇರುತ್ತದೆ. ಇವರಲ್ಲಿ ಒಬ್ಬಳು ಮುಷ್ಟಿಯನ್ನು ಮಾತ್ರ ಆ ಮುಷ್ಟಿಗಳ ಸಾಲಿನಲ್ಲಿ ಇಟ್ಟು, ಇನ್ನೊಂದು ಮುಷ್ಟಿಯನ್ನು ಎಲ್ಲರ ಮುಷ್ಟಿಗಳ ಮೇಲೆ ಹಿಡಿದು ಅರೆಯುವ ಕಲ್ಲಿನಲ್ಲಿ ಅರೆದಂತೆ ಮುಷ್ಟಿಗಳ ಸಾಲನ್ನು ತುಸು ಆಚೆ – ಈಚೆ ಅಲುಗಿಸುವಳು. ಅಲುಗಿಸುತ್ತಾ,

“ಗೋದಿ ಬೀಸುತೊಮ್ಮೆ
ರಾಗಿ ಬೀಸುತೊಮ್ಮೆ
ಕಾವೇರಮ್ಮ ಬಂತು
ಒಂದ್ ಕುಯ್ ಬಿ~ಡ” ಎನ್ನುವಳು.

“ಒಂದ್ ಕಯ್ ಬೀಡು” ಎಂದಕೂಡಲೇ ಮೇಲಿನ ಕಯ್ಯುವರು ಅದನ್ನು ಹಿಂದಕ್ಕೆ ಒಯ್ದು ಇಟ್ಟುಕೊಳ್ಳುವರು. ಇದೇ ರೀತಿ ಎಲ್ಲರ ಕೈಗಳೂ ಹಿಂದೆ ಹೋಗುವವರೆಗೂ ಮೇಲಿನಂತೆಯೇ ಹಾಡುತ್ತ ಕೈ ಅರೆಯುವರು. ಎಲ್ಲರೂ ಕೈ ಹಿಂದಕ್ಕೆ ಒಯ್ದಿಟ್ಟುಕೊಂಡ ಮೇಲೆ ಎಲ್ಲರೂ ತಮ್ಮ ತಮ್ಮ ಕಾಲುಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ತುಳಿದುಕೊಳ್ಳುವರು.