ನಾಲ್ಕು ಕಾಗದದ ಚೂರುಗಳ ಮೇಲೆ ಒಂದರಲ್ಲಿ “ರಾಜ” ಇನ್ನೊಂದರಲ್ಲಿ ಮಂತ್ರಿ, ಮೂರನೆಯ ಮತ್ತು ನಾಲ್ಕನೆಯದರ ಮೇಲೆ ಕಳ್ಳ ಹಾಗೂ ಸೇವಕ ಎಂದು ಬರೆದು ಅದನ್ನು ಮಡಿಚಿಡಬೇಕು. ಆಟಗಾರರು ನಾಲ್ಕು ಜನ ಮುಂದೆ ಬಂದು ಪ್ರತಿಯೊಬ್ಬರೂ ಒಂದೊಂದು ಚೀಟಿಯನ್ನು ಎತ್ತಿಕೊಳ್ಳಬೇಕು. ಅದರಲ್ಲಿ ಬರೆದ ಹೆಸರನ್ನು ಓದಿಕೊಳ್ಳಬೇಕು.

“ರಾಜ” ಎಂದು ಬರೆದ ಚೀಟಿ ಬಂದವನು “ಮಂತ್ರಿ ಕಳ್ಳಂಗ್ ಹೊಡೆ” ಅನ್ನುತ್ತಾನೆ. ಆಗ ಮಂತ್ರಿಗೆ ಕಳ್ಳ ಯಾರು ಎಂದು ಗೊತ್ತಿರುವುದಿಲ್ಲ. ಆದರೂ ಸಂಶಯದ ಮೇಲೆ ಒಬ್ಬನನ್ನು ತುಳಿಯುತ್ತಾನೆ ಇಲ್ಲವೆ ಹೊಡೆಯುತ್ತಾನೆ. ಅವನು ಕಳ್ಳನಾಗಿದ್ದರೆ ಸುಮ್ಮನೆ ನಿಲ್ಲುತ್ತಾನೆ. ಆದರೆ ಆತನು ಸೇವಕನಾಗಿದ್ದರೆ ಸೇವಕನೇ ಹೋಗಿ ಕಳ್ಳನನ್ನು ಹೊಡೆಯುತ್ತಾನೆ. ಆಗ ಯಾರು ಯಾರಿಗೆ ಯಾವ ಯಾವ ಹೆಸರುಗಳು ಬಂದಿವೆ ಎಂಬುದು ತಿಳಿಯುತ್ತದೆ.