ಅನುಬಂಧ

I. ಕನ್ನಲಾಯೆ ಪಾಡ್ದನ (ತುಳುವಿನಿಂದ ಇಂಗ್ಕಿಷ್‌ಗೆ ಮಾಡಿದ ಅನುವಾದದ ಅನುವಾದ)

೧. ಪಾಡ್ದನದ ಆಲಾಪನೆಯ ಭಾಗ

೨. ತಂದೆಯೆಂದರೆ ಇದ್ದಾರೆಯವರು ಗುರು ಸರಪೋಳಿ ನಾಯೇರ್‌ಹೆಸರಿನವರು

೩. ತಾಯಿಯೆಂದರೆ ಇದ್ದಾರೆಯವರು ಸೊನ್ನೆ ಸೊಲ್ಲಿಲ್ಲಮ್ಮ ದೆಯ್ಯಾರು ಹೆಸರಿನವರು

೪. ಅವರಿಗೆ ನಾಲ್ಕು ಸೆಟ್ಟಿ ಮಕ್ಕಳು ಹುಟ್ಟಿದರು

೫. ಬಿತ್ತು ಸೆಟ್ಟಿ, ಉತ್ತಮ ಸೆಟ್ಟಿ, ನಾಡು ಸೆಟ್ಟಿ, ನಾಚಮ್ಮ ಸೆಟ್ಟಿ

೬. ಅವರು ಏಳು ವರ್ಷ ಹೋಗಿ ಏಳೂವರೆ ವರ್ಷಕ್ಕೆ ಬೆಳೆದಾಗ ನಾಲ್ಕು ಸೆಟ್ಟಿಗಳು ಹೇಳುತ್ತಾರೆ :

೭. ‘‘ನನಗೆ ಓದುಬರಹ ಕಲಿಯಬೇಕು’’ ಎಂದು ಹೇಳುತ್ತಾರೆ. ಅವರು ಓದುಬರಹ ಕಲಿತರು.

೮. ಇಲ್ಲಿಂದ ಮುಂದೆ ನಾವು ಮರಳಿನಲ್ಲಿ ಬರೆಯುವುದಕ್ಕೆ ಕಲಿಯಬೇಕು – ನಾಲ್ಕು ಜನ ಸೆಟ್ಟಿಗಳು ನುಡಿದರು.

೯. ಅವರು ಸಮುದ್ರದ ತೀರದುದ್ದಕ್ಕೂ ಹೋಗಿ ಉತ್ತಮವಾದ ಮರಳು ತಂದರು.

೧೦. ಚಾವಡಿಯ ಮಧ್ಯಭಾಗದಲ್ಲಿ ಅವರು ಮರಳಿನಿಂದ ಸಾಲನ್ನು ಬರೆದರು, ನಾಲ್ಕು ಜನ ಸೆಟ್ಟಿಗಳು.

೧೧. ಅವರು ಮರಳಿನಲ್ಲಿ ಬರೆಯಲು ಕಲಿತರು ‘‘ನಾವು ಇನ್ನು ಮುಂದೆ ಇನ್ನೊಂದು ಬರವಣಿಗೆಯನ್ನು ಕಲಿಯಬೇಕು’’ ಅವರು ಹೇಳಿದರು.

೧೨. ‘‘ನಾವಿನ್ನು ಮರದ ಹಲಗೆಯಲ್ಲಿ ಬರೆಯಬೇಕು’’ ಅವರು ಹೇಳಿದರು

೧೩. ಅವರು ಹಲಗೆಯ ಕೆಲಸ ಮಾಡಿದರು. ಅವರು ಹಲಗೆಯನ್ನು ಬರೆಯುವುದನ್ನು ಕಲಿತರು.

೧೪. ‘‘ನಾವು ಇನ್ನೊಂದನ್ನು ಕಲಿಯಬೇಕು. ನಾವು ತಾಳೆಗರಿಯಲ್ಲಿ ಬರೆಯಲು ಕಲಿಯಬೇಕು’’ ನಾಲ್ಕು ಸೆಟ್ಟಿಗಳು ನುಡಿದರು.

೧೫. ಅವರು ಪೂರ್ವ ಭಾಗದ ವಿಸ್ತಾರವಾದ ಒಣ ಮೈದಾನಕ್ಕೆ ಹೋದರು. ಅವರು ಒಂದು ಎಳೆಯ ತಾಳೆಯ        ಮರದ ಗರಿಗಳನ್ನು ತಂದರು.

೧೬. ಅವರು ತಂದ ತಾಳೆಯ ಮರದ ಗರಿಗಳ ಕಟ್ಟನ್ನು ಪೂರ್ವದ ಸೂರ್ಯನ ಬಿಸಿಲಿಗೆ ಹರಡಿದರು. ಪಶ್ಚಿಮದ ಸೂರ್ಯನ ತಂಪಿನಲ್ಲಿ ತೆಗೆದರು.

೧೭. ಅವರು ಅದನ್ನೊಂದು ಸೂಡಿ ಕಟ್ಟಿದರು. ಅದರಿಂದ ಕೆಲವೊಂದನ್ನು ಆರಿಸಿಕೊಂಡರು. ಆ ಗರಿಗಳ ಬುಡವನ್ನು ಕತ್ತರಿಸಿದರು. ಅವುಗಳ ತುದಿಯನ್ನು ಸೊಗಸುಗೊಳಿಸಿದರು.

೧೮. ಅವರದಕ್ಕೆ ಎಣ್ಣೆ ಮತ್ತು ಅರಶಿಣಗಳನ್ನು ಬಳಿದರು. ಅವರು ತಾಳೆಗರಿಯಲ್ಲಿ ಬರೆಯುವುದಕ್ಕೆ ಕಲಿತರು.

೧೯. ನಾವೀಗ ಓದುಬರಹದಲ್ಲಿ ಬುದ್ಧಿವಂತರಾಗಿದ್ದೇವೆ. ನಾವಿನ್ನು ವ್ಯಾಪಾರ ಮಾಡಬೇಕು.

೨೦. ‘ನಾವಿನ್ನು ಸಮುದ್ರ ತೀರಕ್ಕೆ ಹೋಗಬೇಕೆಂದ’ರವರು. ಒಣಗಿದ ತಾಳೆ ಮರದ ಗರಿಗಳಿಂದ ಅವರಿಗೊಂದು ಅಂಗಡಿ ಸಿದ್ಧವಾಯಿತು.

೨೧. ಒಂದು ಅಂಗಡಿಗೆ ಸೆಟ್ಟಿಳು, ನಾಲ್ಕು ಕೋಣೆಗಳನ್ನು ಮಾಡಿದರು. ನಾಲ್ಕು ಕೋಣೆಗಳಿಗೆ ನಾಲ್ಕು     ಬಾಗಿಲುಗಳನ್ನು ಹೊಂದಿಸಿದರು.

೨೨. ಒಂದು ಬಾಗಿಲಿನಲ್ಲಿ ಅವರು ಬಟ್ಟೆ ವ್ಯಾಪಾರ ಆರಂಭಿಸಿದರು.

೨೩. ಮತ್ತೊಂದು ಕೋಣೆಯಲ್ಲಿ ಅವರು ಮುಕಸಿರಿ ವ್ಯಾಪಾರ ಮಾಡಿದರು.

೨೪. ಇನ್ನೊಂದು ಕೋಣೆಯಲ್ಲಿ ಅವರು ಕಡಲೆ ಮತ್ತು ಗೋಧಿಯ ವ್ಯಾಪಾರ ಮಾಡಿದರು.

೨೫. ಮಗದೊಂದು ಕೋಣೆಯಲ್ಲಿ ಅವರು ಕಬ್ಬಿಣದ ಕೆಲಸ ಮಾಡಿದರು.

೨೬. ಸೆಟ್ಟಿಯರು ವ್ಯಾಪಾರದಲ್ಲಿ ಚೆನ್ನಾಗಿ ಪಳಗಿದವರಾದರು.

೨೭. ‘‘ನಾವಿನ್ನು ಘಟ್ಟದ ಮೇಲೆ ಹೋಗಬೇಕು’’ – ಅವರು ನುಡಿದರು. ‘‘ನಾವು ಕೋಣಗಳನ್ನು ಕೊಳ್ಳಬೇಕೆಂ’’ದರವರು.

೨೮. ಅವರೊಂದು ದೊಡ್ಡ ಚೀಲವನ್ನು ತೆಗೆದುಕೊಂಡರು. ಅವರು ‘ವರಾಣ’ಗಳನ್ನು ಎಣಿಸಿ ಆ ಚೀಲಕ್ಕೆ ಹಾಕಿಕೊಂಡರು. ಅದರ ಬಾಯಿ ಕಟ್ಟಿದರು.

೨೯. ಸೆಟ್ಟಿಗಳು ಅವರ ಅರಮನೆಗೀಗ ಬಂದರು. ಅದು ಶೇಂಗ ನಾಡು ನಂದಾದೇಸ ಅರಮನೆ.

೩೦. ಅದು ‘ಚೆಂಡಿ ಚೀಮುಳ್ಳ’ ಅರಮನೆ. ಒಂದು ಮಂಗಳ ಮಂಗಳವಾರ ಮುಂಜಾನೆ ಅವರು ಬೇಗನೆ ಎದ್ದರು.

೩೧. ಅವರು ತಲೆಗೆ ಎಣ್ಣೆ ಹಾಕಿಕೊಂಡರು. ಅವರು ಮೈಗೆ ಎಣ್ಣೆ ಪೂಸಿಕೊಂಡರು. ಎಣ್ಣೆ ಮಜ್ಜನ ಮುಗಿದ ಮೇಲೆ, ಬಿಸಿ ನೀರಿನಿಂದ ಸ್ನಾನಮಾಡಿ ಉಲ್ಲಾಸಗೊಂಡರವರು.

೩೨. ಮೈಲಿಗೆ ಬಟ್ಟೆಯನ್ನು ತೆಗೆದು ಮಡಿ ಬಟ್ಟೆಯನ್ನುಟ್ಟುಕೊಂಡರು. ಅವರು ‘ತಞನೋ ಬೆಞ್ಞನೊ’ ತಿಂದರು.

೩೩. ಅವರು ಬುತ್ತಿಗೆ ಹಾಲನ್ನು ಹಾಕಿ ಅನ್ನವನ್ನು ತುಂಬಿಸಿಕೊಂಡರು. ಅವರು ಅರಮನೆಯನ್ನು ಬಿಟ್ಟುಬಿಟ್ಟರು.

೩೪. ಸೆಟ್ಟಿಯವರು ಘಟ್ಟಕ್ಕೆ ಬಂದರು. ಅವರು ಘಟ್ಟದ ಮೇಲೊಂದು ಒಣ ಮೈದಾನವನ್ನು ನೋಡಿ ಅಚ್ಚರಿಪಟ್ಟರು.

೩೫. ಆಗ ಅಲ್ಲಿಗೆ ನಾಲ್ಕು ಸಾವಿರ ಕೋಣಗಳನ್ನು ಹೊಡೆದುಕೊಂಡು ಬರುತ್ತಿರುವುದು ಕಾಣಿಸಿತು.

೩೬. ದನಗಾಹಿ ಕನ್ನಡಿಗನು ನಾಲ್ಕು ಸಾವಿರ ಕೋಣಗಳನ್ನು ಮೇಯಿಸುತ್ತಾ ಹೊಡಕೊಂಡು ಬರುತ್ತಿದ್ದನು.

೩೭. ನಾಲ್ಕು ಜನ ಸೆಟ್ಟಿಗಳು ದನಗಾಹಿ ಕನ್ನಡಿಗನನ್ನು ನೋಡಿ ‘‘ಓ ಮೇಹಿಗ ಕನ್ನಡಿಗನೇ ಕೇಳಿಲ್ಲಿ’’

೩೮. ‘‘ನೀನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿರುವೆ’’ ಸೆಟ್ಟಿಗಳು ಕೇಳಿದರು.

೩೯. ಓ ಮಕ್ಕಳೇ ನೀವು ಕೇಳುವಿರಾ, ನಾನು ದಿಕ್ಕು ತಪ್ಪಿ ಬಂದವನು.

೪೦. ನಾನು ನನ್ನ ಕಣ್ಣುಗಳೇ ನೋಡಿರದ, ಕಿವಿಗಳೇ ಕೇಳಿರದ ರಾಜ್ಯವೊಂದಕ್ಕೆ ಹೋಗುತ್ತಿರುವೆ

೪೧. ಹೀಗೆ ದನಮೇಹಿ ಕನ್ನಡಿಗ ಸೆಟ್ಟಿಗಳಿಗೆ ಹೇಳಲು, ಸೆಟ್ಟಿಗಳು ಕೇಳಿದರು-

೪೨. ‘‘ನೀನು ನಿನ್ನ ನಾಲ್ಕು ಸಾವಿರ ದನಗಳನ್ನು ನಮಗೆ ಕೊಡಬೇಕೆಂ’’ದರವರು.

೪೩. ಸೆಟ್ಟಿಗಳು ಆತನಿಗೆ ಹಣವನ್ನು ಕೊಟ್ಟರು.

೪೪. ‘‘ನೀನು ನಮಗೆ ನಿನ್ನ ಕೋಣಗಳನ್ನು ಕೊಡಬೇಕು, ಹಾಗೆಯೇ ನೀನು ನಮ್ಮೊಂದಿಗೆ ಬರಬೇಕೆಂ’’ದರವರು.

೪೫. ಅವರು ದನಗಳನ್ನು ಹೊಡೆದುಕೊಳ್ಳುತ್ತಾ, ಮೇಯಿಸುತ್ತಾ ಬರುತ್ತಿದ್ದರು.

೪೬. ‘‘ನಾವೀಗ ಈ ಘಟ್ಟದಿಂದ ತುಳುನಾಡಿಗೆ ಯಾವ ದಾರಿಯಲ್ಲಿ ಮರಳ ಬೇಕೆಂ’’ದು ಅವರು ಕೇಳಿದರು.

೪೭. ‘‘ನಾನು ಕೊಲ್ಲೂರು ಮೂಲಕ ಹೋದರೆ ಕೊಲ್ಲೂರು ಕುಕ್ಕೆ ಸುಬ್ರಾಯ ನಮ್ಮನ್ನು ಸುಲಭವಾಗಿ ಹೋಗಗೊಡುವುದಿಲ್ಲ’’ ಎಂದರವರು.

೪೮. ಏನಾದರೂ ಆಗಲಿ, ನಾವೀಗ ‘ನಡುವಲ ನಲ್ಪ ಮುಡಿ ಗದ್ದೆ’ ಗಾಗಿ ಕೋಣಗಳನ್ನು ಮೇಯಿಸುತ್ತಾ ಹೋಗಬೇಕೆಂದರವರು.

೪೯. ಅಲ್ಲಿಂದ ನಾಲ್ಕು ಜನ ಸೆಟ್ಟಿಗಳು ನಡುವಲ ನಲ್ಪ ಮುಡಿಯತ್ತ ಹೊರಟರು.

೫೦. ನಡುವಲ ನಲ್ಪ ಮುಡಿ ಗದ್ದೆಯಲ್ಲಿ ದನಗಳನ್ನು ಕಟ್ಟಿದರು.

೫೧. ನಾಲ್ಕು ಜನ ಸೆಟ್ಟಿಗಳು ಆಗ-

೫೨. ನಾಲ್ಕು ಜನ ಸೆಟ್ಟಿಗಳ ಊಟಕ್ಕೆ ಸರಿಯಾದ ಸಮಯವಾಯಿತು.

೫೩. ನಾಲ್ಕು ಜನ ಸೆಟ್ಟಿಗಳು ಸ್ವಾಮಿ ನಂದೇದಿ ಹೆಣ್ಣಿನ ಮನೆಗೆ ಬಂದರು.

೫೪. ಯಾರಿದ್ದೀರಿ ಮನೆಯಲ್ಲಿ, ಯಾರಿದ್ದೀರಿ ಮನೆಯಲ್ಲಿ ಎಂದು ನಾಲ್ಕು ಸೆಟ್ಟಿಗಳು ಕೇಳುತ್ತಾರೆ.

೫೫. ಅನ್ನಕ್ಕೆ ಮನಗೊಂದು ಮಡಿಕೆ, ವಾಸಕ್ಕೆ ನಮಗೊಂದು ಮನೆ ಬೇಕೆಂದರವರು.

೫೬. ಆಗ ಸ್ವಾಮಿ ಸಂದೇದಿ ಹೆಣ್ಣು ಹೇಳಿದಳವರಿಗೆ-

೫೭. ‘‘ಓ ಮಕ್ಕಳೇ, ಓ ಮಕ್ಕಳೇ ಹಿಂದಿನ ಕಾಲದಲ್ಲಿ

೫೮. ನಾನು ಅಡಿಗೆಗೆ ಮಡಿಕೆ ಕೊಟ್ಟವಳಲ್ಲ, ವಾಸಕ್ಕೆ ಮನೆ ಕೊಟ್ಟವಳಲ್ಲ.

೫೯. ಮನೆಯ ನಡುವಣ ಕೋಣೆಯಲ್ಲಿ ಮಾಡಿದ ಅಡುಗೆಯಿದೆ, ಓ ಮಕ್ಕಳೇ ಅಲ್ಲಿ ಪಂಚಾಮೃತವಿದೆ. ಮುಂದೆ    ಹೋಗಿ

೬೦. ಕಲ್ಲಿನ ಹಂಡೆಯಲ್ಲಿ ನೀರಿದೆ. ತಂಬಿಗೆ, ಇದೆ. ಕೈಕಾಲು ಮುಖ ತೊಳೆದುಕೊಳ್ಳಿ.

೬೧. ಚಾವಡಿಯ ನಯಗೊಳಿಸಿದ ನೆಲದ ಮೇಲೆ ಅವರಿಗೆ ಬಣ್ಣದ ಚಾಪೆಯನ್ನು ಹಾಸಲಾಯಿತು. ನಾಲ್ಕು ಜನ ಸೆಟ್ಟಿಗಳು ಅದರಲ್ಲಿ ಕುಳಿತರು.

೬೨. ಆ ಸಮಯದಲ್ಲಿ ಚಾವಡಿಯ ಮಧ್ಯದಲ್ಲಿ ಸಾಲಾಗಿ ಎಲೆಯನ್ನು ಹಾಕಲಾಯಿತು.

೬೩. ಸ್ವಾಮಿ ನಂದೇದಿ ಇದೀಗ ಬೇಯಿಸಿದಡುಗೆಯನ್ನು ನಾಲ್ಕು ಜನ ಸಟ್ಟಿಗಳಿಗೆ ಅಲ್ಲಿ ಬಡಿಸುತ್ತಿದ್ದಾಳೆ.

೬೪. ಆಮೇಲೆ ಅವರು ಮೊಸರನ್ನು ಉಂಡರು, ಹಾಲಿನಲ್ಲಿ ಕೈ ತೊಳೆದರು.

೬೫. ಅವರು ಹಾಲು ಮೊಸರಿನಲ್ಲಿ ಉಂಡು ಕೈತೊಳೆದರು

೬೬. ಓ ಸ್ವಾಮಿ ನಂದೇದಿ ಹೆಣ್ಣೇ ಈವರೆಗೆ ನಾವು ಇಂತಹ ಊಟವನ್ನು ಮಾಡಿಲ್ಲ

೬೭. ನಾವೀವರೆಗೆ ಇಂತಹ ಊಟ ಮಾಡಿಲ್ಲೆಂದು ನಾಲ್ಕು ಜನ ಸೆಟ್ಟಿಗಳು ನುಡಿಯುತ್ತಾರೆ.

೬೮. ಆ ಸಮಯದಲ್ಲ ಸ್ವಾಮಿನಂದೇದಿ ಅವರು ಹೇಳುತ್ತಾರೆ –

೬೯. ನಮ್ಮ ನಾಲ್ಕು ಸಾವಿರ ಕೋಣಗಳು ನಡುವಲ ನಲ್ಪ ಗದ್ದೆಯಲ್ಲಿದ್ದಾವೆ –

೭೦. ಆ ನಡುವಲ ನಲ್ಪ ಗದೆಯಲ್ಲಿ ನಾಲ್ಕು ಸಾವಿರ ಕೋಣ ಮಂದೆಯಿದೆ –

೭೧. ನೀನು ಆ ಕೋಣಗಳ ಅಂದ ಚಂದ ನೋಡುವುದಕ್ಕೆ ಬರಬೇಕೆಂದರವರು.

೭೨. ಓ ಮಕ್ಕಳೇ ನೀವು ಮುಂದಾಗಿ ಹೋಗಿ, ನಾನು ಹಿಂದಾಗಿ ಬರುವೆ.

೭೩. ನಾನು ನಿಮ್ಮೊಂದಿಗೆ ಬಂದರೆ ನೋಡುವರು ತಮಾಷೆ ಮಾಡುವರು.

೭೪. ಪೋಲಿ ಮಂದಿ ಪೋಲಿ ಮಾತಾಡುವರೆಂದು ಹೇಳಿದಳು ಹೆಣ್ಣು.

೭೫. ಸ್ವಾಮಿ ನಂದೇದಿ ತನ್ನರಮನೆಯ ಬಡಗಿನ ಬಾಗಿಲಿಗೆ ಬಂದಳು.

೭೬. ಸೀರೆಗಳಲ್ಲಿಯೇ ಸುಂದರ ಸೀರೆಯನ್ನುಟ್ಟಳು. ಬೆಲೆಬಾಳುವ ಚಿನ್ನವನ್ನು ಪೆಟ್ಟಿಗೆಯಿಂದ ತೆಗೆದಳು.

೭೭. ಅವಳು ಮುದಮಗಳಂತೆ ಸಿಂಗರಿಸಿಕೊಂಡಳು. ಅವಳ ಮುಂದೆ ಸೈನಿಕರು, ಆಳುಗಳು ಸಿದ್ಧರಾದರು.

೭೮. ಅವಳು ಬಲದ ಕೈಯಲ್ಲಿ ಬೆಳ್ಳಿಯ ಬಾಕು ಹಿಡಿದಳು, ಎಡದ ಕೈಯಲ್ಲಿ ‘ಪನೆತತ್ರ’ ಹಿಡಿದಳು.

೭೯. ತತ್ರ ಹಿಡಿದುಕೊಂಡು ನಡುವಲ ನಲ್ಪಗದ್ದೆಗೆ,

೮೦. ಸ್ವಾಮಿ ನಂದೇದಿ ನಾಲ್ಕು ಸಾವಿರ ಕೋಣಗಳನ್ನು ನೋಡಲು ಬರುವಳಲ್ಲಾ,

೮೧. ಸ್ವಾಮಿ ನಂದೇದಿಗೆ ಕುಳ್ಳಿರಲು ಪೀಠ / ಮಲಗಲು ಮಂಚವ

೮೨. ನಾಲ್ಕು ಜನ ಸೆಟ್ಟಿಗಳು ಒದಗಿಸಿದರು. ಆಗ ಹೊತ್ತಿಗೆ ಸ್ವಾಮಿ ನಂದೇದಿ-

೮೩. ಸ್ವಾಮಿ ನಂದೇದಿ ಹೆಣ್ಣು ಕೋಣಗಳ ಚೆಲುವನ್ನು ನೋಡಿದಳು-

೮೪. ಆ ನಾಲ್ಕು ಸಾವಿರ ಕೋಣಗಳಲ್ಲಿ ಎರಡು ಕೋಣಗಳ ಚೆಲುವೇ ಚೆಲುವು.

೮೫. ಆ ಎರಡು ಕೋಣಗಳನ್ನು ಚೆನ್ನಮಂಗಲ, ಚೆಲುವರಾಯ ಎಂದು ಕರೆದರು.

೮೬. ಆ ಕೋಣಗಳ ಹಣೆಯಲ್ಲಿ ಬಿಳಿ ‘ಬೊಟ್ಟು’ ಬಾಲದಲ್ಲಿ ಬಿಳಿ ‘ಜವೇರಿ’, ನಾಲ್ಕು ಕಾಲುಗಳಲ್ಲಿ ‘ಸೊನಾಬು’   ಇತ್ತು.

೮೭. ಆ ಹೊತ್ತಲ್ಲಿ ಸ್ವಾಮಿ ನಂದೇದಿ ನಾಲ್ಕು ಜನ ಸೆಟ್ಟಿಗಳನ್ನು ಕೇಳಿದಳು –

೮೮. ನಾಲ್ಕು ಸಾವಿರ ಕೋಣಗಳಲ್ಲಿ ಎರಡು ಕೋಣಗಳೇ ಬೇರೆ.

೮೯. ಆ ಕೋಣಗಳ ಬೆಲೆಯನ್ನು ನನಗೆ ಹೇಳಿ ಎಂದಳವಳು.

೯೦. ಮುಂದಣ ಹೆಜ್ಜೆಗೆ ಸಾವಿರ ವರಹಗಳು ಹಿಂದಿನ ಹೆಜ್ಜೆಗೆ ಸಾವಿರದೊಂದು ವರಾಹ

೯೧. ನೀನು ಕೊಡಬೇಕೆಂದು ನಾಲ್ಕು ಜನ ಸೆಟ್ಟಿಗಳು ಹೇಳಿದರು. ಆ ಸಮಯದಲ್ಲಿ –

೯೨. ಕೋಣಗಳಿಗೆ ಹೇಳಿದ ಬೆಲೆ ಒಪ್ಪಿಗೆಯಾಗಲಿಲ್ಲ. ಸ್ವಾಮಿ ನಂದೇದಿ ಸಿಟ್ಟಾದಳು.

೯೩. ಅವಳು ಸಿಟ್ಟಿನಲ್ಲಿ ಅತ್ಯಾಶೆಯಲ್ಲಿ ಕುಳವೂರು ಗುತ್ತಿಗೆ ಬಂದಳು.

೯೪. ಅವಳು ಕುಳವೂರು ಗುತ್ತಿಗೆ ಬಂದಳು. ಅವಳು ಜುಮಾದಿಯ ಚಾವಡಿಯ ಎದುರು ನಿಂತಳು.

೯೫. ಓ ಜುಮಾದಿ ನೀನು ಕೇಳಿದೆಯಾ ನಮ್ಮ ಹಟ್ಟಿಗೆ ಸರಿಹೊಂದುವ ಎರಡು ಕೋಣಗಳಿವೆ.

೯೬. ಅಲ್ಲೆರಡು ಕೋಣಗಳಿವೆ. ಅವುಗಳ ಬೆಲೆ ಒಪ್ಪಿಗೆಯಾಗಲಿಲ್ಲ.

೯೭. ನೀನು ಕೇಳಿದ ಬೆಲೆಗೆ ಒಪ್ಪಿಸಬೇಕು. ಹೀಗೆಂದು ಸ್ವಾಮಿ ನಂದೇದಿ ಕುಳವೂರು ಗುತ್ತಿನಲ್ಲಿ-

೯೮. ಚಾವಡಿಯ ನಡುವೆ ನಿಂತು ಜುಮಾದಿಯನ್ನು ಪ್ರಾರ್ಥಿಸುತ್ತಾಳೆ.

೯೯. ಆಗ ಬರುವನವನು, ದನಗಾಹಿ ಕನ್ನಡಿಗ, ನಾಲ್ಕು ಸಾವಿರ ಕೋಣಗಳನ್ನು ಹೊಡಕೊಂಡು.

೧೦೦. ಸಾರದ ಗುಂಡಿ ಮಾರಿಗೆ ನೀರು ಕುಡಿಸಲು

೧೦೧. ಅವನು ‘ಮಲ್ಲೆತ್ತೆಪದವು’ ಹತ್ತಿದನು ‘ಇಲ್ಲತ್ತ ಪದವು’ ಇಳಿದನು.

೧೦೨. ಅವನೀಗ ಸಾರದ ಗುಂಡಿಯಲ್ಲಿ ನೀರು ಕುಡಿಸುತ್ತಾನೆ.

೧೦೩. ಅದೇ ವೇಳೆಗೆ ಜುಮಾದಿ ನಾಲ್ಕು ಸಾವಿರ ಕೋಣಗಳನ್ನು ಮಾಯ ಮಾಡುತ್ತದೆ.

೧೦೪. ಕಲ್ಲಾಗಿ ಆಗ ಅದೇ ವೇಳೆಯಲ್ಲಿ ಅವನ್ನು

೧೦೫. ದನಗಾಹಿ ಕನ್ನಡಿಗ ಹೇಳಿದನು ‘‘ಓ ಜುಮಾದಿ ಕೇಳಸದೆ ನಿಮಗೆ-

೧೦೬. ನನ್ನ ದನಗಳನ್ನು ನೀನು ಮಾಯ ಮಾಡಿದೆ. ನನಗೇನಾಗಲಿಕಿದೆ.

೧೦೭. ನಿನಗೆ ನಾನು ದೇವರಿಗಿಂತ ಒಂದು ಹೆಜ್ಜೆ ಕಡಿಮೆಯಾಗಿರುವ, ಭೂತಕ್ಕಿಂತ ಒಂದು ಹೆಜ್ಜೆ ಮೇಲಾಗಿರುವ ಸ್ಥಾನವನ್ನು ಕೊಡುತ್ತೇನೆ.

೧೦೮. ಹೀಗೆ ಅದು ಹೇಳಿತು. ಆ ದನಗಾಹಿ ಕನ್ನಡಿಗನನ್ನು ಮಾಯ ಮಾಡಿತು.

೧೦೯. ಮಾಯದಲ್ಲಿ ನಾನು ಅಗರಿ ಮಾಡದಲ್ಲಿ ಕಲ್ಲಿನ ‘ತಾನ’ವನ್ನು ಕೆತ್ತಿಸುತ್ತೇನೆ ನಿನಗೆ.

೧೧೦. ನಾನು ನಿನಗೆ ‘ತೂಗುಜ್ಜಾಲ್’ ಮಾಡಿಸುತ್ತೇನೆ. ಎಡಕ್ಕೆ ಕಲ್ಲು ಬಲಕ್ಕೆ ಕಲ್ಲು ಹಾಕಿಸುತ್ತೇನೆ.

೧೧೧. ನನ್ನ ಆರು ಗುತ್ತುಗಳಲ್ಲಿ ನಿಮಗೆ ಮೂರು ಗುತ್ತುಗಳು ನನಗೆ ಮೂರು ಗುತ್ತುಗಳು.

೧೧೨. ಆ ಹೊತ್ತಿನಲ್ಲಿ ಅವನಿಗೆ ಅಗರಿಯಲ್ಲಿ ಕಲ್ಲಿನ ‘ತಾನ’ವಾಯಿತು ತೂಗುಜ್ಜಾಲ್ ಆಯಿತು.

೧೧೩. ‘ತೂಗುಜ್ಜಾಲ’ನ್ನು ಅಲ್ಲಿ ಜುಮಾದಿ ಹಾಕಿಸಿತು.

II ಪಾಷಾಣ ಜುಮಾದಿ ಪಾಡ್ದನ

[ತುಳುವಿನಿಂದ ಇಂಗ್ಲಿಷ್‌ಗೆ ಮಾಡಿದ ಅನುವಾದದ ಅನುವಾದ]

೧. ರಾಯ ಅರಮನೆಯಲ್ಲಿ ಇದ್ದಾರೆಯವರು, ಮಗ್ರಾದೇರೆ ಬಳ್ಳಾಳ್, ಮಗ್ರಾದೇರೆ, ಬಲ್ಲಾಳರಾದ ಕೊಟ್ಟ ಆಳ್ವರಿದ್ದಾರೆ.

೨. ಮ್ರಾಡೇರೆ ಬಲ್ಲಾಳರಿಗೆ ಏಳು ಹೋಗಿ ಏಳುವರೆ ವರ್ಷವಾಯಿತು. ಅವರಿಗೆ ಹತ್ತು ವರ್ಷ ಹೋಗಿ ಹದಿನಾರು ವರ್ಷವಾಗಲು,

೩. ‘‘ನನ್ನ ಹಾಗಿರುವ ಬೇರೆ ಯುವಕರಿಗೆ ಈಗಾಗಲೇ ಮದುವೆಯ ವಯಸ್ಸು ಆಗಿದೆ’’. ನನಗೆ ಯಾವ ಕಡೆಯಿಂದ ಮದುವೆ ನಿಶ್ಚಯವಾಗಿದೆ?

೪. ಉಣ್ಣಬೇಕಾದ ಅಡುಗೆ ಎಲ್ಲ ಸಿದ್ಧವಾಗಿದೆಯೇ ಎಂದು ಕೇಳುತ್ತಾರೆ.

೫. ಅವರೆಂದರು ಅದು ಅಂಬಾವಾಡೆಯ ಅರಮನೆಯಲ್ಲಿದೆ.

೬. ಆರರಿಂದ ಹದಿನಾರು ಬಾರಿಗರು ರಾಯಿ ಅರಮನೆಯಲ್ಲಿ ಸೇರಿದ್ದರು. ಅವರಲ್ಲಿ ಸಂಭ್ರಮದಿಂದ ಸೇರಿದ್ದರು.

೭. ಅವರು ರಾಯಿ ಅರಮನೆಯಿಂದ, ಪೇರಲ ಮರದ ಸುತ್ತಲ ಕಲ್ಲ ಕಟ್ಟೆಯನ್ನು ದಾಟಿದರು. ಅವರು ಉಳ್ಳಾಲ್ತಿ ಭೂತದ ಗುಡಿಯನ್ನುದಾಟಿದರು.

೮. ಅವರು ಕೆಂಪು ಗುಡ್ದವನ್ನು ದಾಟಿ ಬಡಾಜೆಯ ಬೈಲನ್ನು ಹಿಂದಕ್ಕೆ ಮಾಡಿದರು. ಕಲಸಂದಡ್ಕೆಯರು ತೋಡನ್ನು ದಾಟಿದರು.

೯. ಅವರು ಅಂಬಲಡಾಡಿ ಅರಮನೆಯ ಕಂಬುಳದ ಗದ್ದೆಯ ‘ಕಟ್ಟಪುಣಿ’ಯನ್ನು ದಾಟಿ ಮುಂದೆ ಬಂದಾಗ ಕೊಡ್ಸರಾಳ್ವರ ಸೋದರ ಸೊಸೆ ಹತ್ತಿರದಿಂದ ಕಂಡಳು.

೧೦. ಅವಳು ಹತ್ತಿರದಿಂದ ನೋಡಿದವಳೇ ಹೇಳುತ್ತಾಳೆ ಓ ಮಾಮ, ನೀವು ಕೇಳಿದರೆ ಎಂತಹ ನೆಂಟರು ನಮ್ಮಲ್ಲಿ ಬರುತ್ತಾರೆ.

೧೧. ಎಂತಹ ನೆಂಟರು ಅಲ್ಲಿ ಬರುತ್ತಾರೆ ಎಂದು ಅವಳು ಹೇಳುತ್ತಾಳೆ. ಅಗ ಕೊಟಾಳ್ವರು ಓ ಸೊಸೆಯೇ ನೀನು ಕೇಳಿದೆಯೇನೇ ಎಂದು ಅವರು ಕೇಳಿದರು.

೧೨. ಬರುವ ನೆಂಟರು ಯಾರು ಬರುತ್ತಾರೋ ಬರಲಿ, ಯಾವ ನೆಂಟರು ಬಾರದಿರುತ್ತಾರೋ ಬಾರದಿರಲಿ. ನೀನು ಬಡಗಣ ಬಾಗಿಲಿಗೆ ಹೋಗು.

೧೩. ನೀನು ಮದುಮಗಳಂತೆ ಸಿಂಗಾರವಾಗು; ಚೆಂದದ ಸೀರು ಉಡು, ಆಭರಣದ ಪೆಟ್ಟಿಗೆಯಿಂದ

೧೪. ಆಭರಣದ ಪೆಟ್ಟಿಗೆಯಿಂದ ಒಳ್ಳೆಯ ಬಂಗಾರವನ್ನು ತೊಟ್ಟುಕೋ ಎಂದು ಅವರೆಂದರು. ಬಲಗಾಲು ಮುಂದಿಟ್ಟು ಮದುಮಗಳಂತೆ ತಲೆಕಟ್ಟಿ ಬಾ:

೧೫. ನೀನು ಮದುಮಗಳಾಗಿ ಸಿಂಗರಿಸಿ ಬಾ ಅವರೆಂದರು. ಬಂದ ನೆಂಟರಿಗೆ ಅವರು ಕೈಕಾಲು ತೊಳೆಯುವುದಕ್ಕೆ ನೀರು ಕೊಟ್ಟರು.

೧೬. ಅವರು ಕಾಲಿನ ಧೂಳು ತೊಳೆದರು, ಕೈಗಳ ದೂಳು ತೊಳೆದರು.

೧೭. ಕೊಟ್ಸರಾಳ್ವರು ಹೇಳುತ್ತಾರೆ – ಉರಿ ಬಿಸಿಲಿಗೆ ಬಂದ ಬೀಗರಿಗೆ ತಣ್ಣಗಿನ ಅಡುಗೆಯನ್ನು ನಾವು      ನೀಡುತ್ತೇವೆ.

೧೮. ಊಟಕ್ಕೆ ಮುಂದೆ, ಉತ್ಸವಕ್ಕೆ ಮುಂದೆ ನಾವು ಬಂದ ಕಾರ್ಯ ಮಾತಾಡಬೇಕು.

೧೯. ಹೇಳುವಂತಹ ಕಜ್ಜವನ್ನಾದರೆ ಹೇಳಿ ಓ ಮಕ್ಕಳೇ ಹೇಳದಿರುವಂತಹ ಕಜ್ಜವಾದರೆ ಹೇಳದಿರರೆಂದರು ಕೋಟಾಳ್ವರು.

೨೦. ಮದುಮಗಳಾಗಿ ಕೊಡುವ ಕನ್ಯೆಯಿದ್ದರೆ ಮಾರುವ ಕೋಣವಿದ್ದರೆ ನಮಗೆ ಕೊಡುವಿರಾ ಎಂದರವರು.

೨೧. ಕೊಡುವ ಕನ್ಯೆಯನ್ನು ಆಗಲೇ ಕೊಟ್ಟಾಗಿದೆ, ಮಾರುವ ಕೋಣವನ್ನು ಆಗಲೇ ಮಾರಿಯಾಗಿದೆ ಇನ್ನೇನು       ಕೊಡಲಿ ಎಂದರು ಕೋಟಾಳ್ವರು.

೨೨. ಅವರು ನಾಡಿನ ಭಟ್ಟರನ್ನು ಕರೆಸಿದರು. ಅವರು ಗುತ್ತಿನ ಜೋಯಿಸರನ್ನು ಕರೆಸಿದರು. ಚಾವಡಿಯ ಮಧ್ಯದಲ್ಲಿ –

೨೩. ಚಾವಡಿಯ ಮಧ್ಯದಲ್ಲಿ ಅವರು ಕವಡೆಯನ್ನು ಹರಡಿದರು ಏಳರಿಂದ ಏಳೂವರೆ ವರ್ಷದ ಹುಡುಗಿಯೊಬ್ಬಳು

೨೪. ಅಂತೆಯೇ ಹತ್ತರಿಂದ ಹದಿನಾರು ವರ್ಷದ ಹುಡುಗನೊಬ್ಬನು ಜೋಡಿಯಾಗಬಹುದೆಂದು ಲೆಕ್ಕಾಚಾರ ಹೇಳುತ್ತದೆ ಎಂದವರು.

೨೫. ಕೂಡಲೇ ಮದುವೆಗೆ ಒಪ್ಪಂದ ನಡೆಯಿತು ಬರುವ ವಾರ ಎಂಟನೆಯ ದಿನ.

೨೬. ಮದುವೆ ದಿಬ್ಬಣವು ರಾಯಿ ಅರಮನೆಯಿಂದ ಅಂಬಟಾಡಿ ಅರಮನೆಗೆ ಬರಬೇಕು ಎಂದರವರು.

೨೭. ಮುಂದಿನ ವಾರ ಎಂಟನೆಯ ದಿನ ಅವರು ರಾಯಿ ಗುತ್ತಿನಿಂದ ದಿಬ್ಬಣವನ್ನು ತೆಗೆದುಕೊಂಡು ಅಂಬವಾಡಿ ಗುತ್ತಿಗೆ ಬರುತ್ತಾರೆ.

೨೮. ಮದುವೆಯ ಮುಹೂರ್ತ ಕಳೆಯಿತು. ಮದುಮಗಳು ಒಂದು ಸಲ ಹೋದಳು, ಎರಡನೆಯ ಸಲ ಬಂದಳು. ಎರಡನೆಯ ಸಲ ಹೋಗಿ ಮೂರನೆಯ ಸಲ ಮತ್ತೆ ಬಂದಳು.

೨೯. ದೈವವು ಮದುಮಗಳೊಂದಿಗೆ ರಾಯಿ ಅರಮನೆಯಿಂದ ಅಂಬಡಾಡಿ ಅರಮನೆಗೆ ಬಂತು.

೩೦. ಅದು ರಾಯಿ ಅರಮನೆಗೆ ಬಂತು. ರಾಯಿ ಅರಮನೆಯಲ್ಲಿ ಅದು ನೆಲೆ ನಿಂತಿತು. ರಾಯಿ ಅರಮನೆಯಿಂದ        ದೈವವು ಬಂತು.

೩೧. ಮತ್ತೊಬ್ಬಳು ಕನ್ಯೆಯೊಂದಿಗೆ ‘ಇರಾಂದಿಲ ಜನನ’ಕ್ಕೆ ಇರಾಂದಿಲ ಜನನದಲ್ಲಿ ಆ ಸಮಯಕ್ಕೆ

೩೨. ಪಿನನೂಲ ಚಂದಿರಾಬು ಸೆಟ್ಟಿಬಾಲು. ಅವರು ಕಂಬುಲಕ್ಕೆ ನೀರಿಲ್ಲವೆಂದು ಚಿಂತೆಯಲ್ಲಿ ಮಲಗಿದ್ದಾರೆ.

೩೩. ಆ ಹೊತ್ತಿನಲ್ಲಿ ದೈವ ಕೇಳಿತು – ಓ ಪಿನನೂಲು ಚಂದಿರಾಬು ಸೆಟ್ಟಿಬಾಲು ನೀನೇಕೆ ಚಿಂತೆಯಲ್ಲಿದ್ದೀಯಾ?

೩೪. ನೀನು ಬಂಡಿಮಾರ ಕಂಬುಲಕ್ಕೆ ನೀರಿನ ಚಿಂತೆಯಿಂದ ಮಲಗಿರುವೆಯಾ ಇಲ್ಲವೇ ನಿದ್ರಿಸಲೆಂದು ಮಲಗಿರುವೆಯಾ ಎಂದು ದೈವ ಕೇಳಿತು.

೩೫. ಓ ದೈವವೇ ನೀನು ಕೇಳಬೇಕು. ನಾನು ಬಂಡಿಮಾರ ಕಂಬುಲಕ್ಕೆ ನೀರಿಲ್ಲದಿರುವುದರಿಂದಾಗಿ ಚಿಂತೆಯಿಂದಿದ್ದೇನೆ ಎಂದನವನು.

೩೬. ಬಂಡಿಮಾರ ಕಂಬುಲಕ್ಕೆ ನೀರಿನ ಬಗೆಗೆ ಯೋಚನೆ ಬೇಡ. ಬೆಳ್ಳಿ ಮೂಡುವ ಮುನ್ನ, ಮುಂಜಾನೆಯಾಗುವ ಮುನ್ನ

೩೭. ನಾನು ಕಂಬುಲಕ್ಕೆ ನೀರು ತುಂಬಿಸುತ್ತೇನೆ. ನನಗಾಗಿ ಕಂಬುಲ ಸಿದ್ಧವಾಗಬೇಕು. ನನಗಾಗಿ ಪೂಕರೆ ಎದ್ದು ನಿಲ್ಲಬೇಕು ಎಂದಿತದು.

೩೮. ಅದು ಸಾಸಿರ ಭೂತಗಳನ್ನು ಸೇರಿಸಿ ಕೊಡ ತೊಟ್ಟಿಗಳನ್ನು ಕೊಟ್ಟಿತು ಸಾತದ ಗುಂಡಿಮಾರನಿಂದ –

೩೯. ಅದು ನೀರು ತುಂಬಿಸಿತು. ಅದು ಬಂಡಿಮಾರ ಕಂಬುಲಕ್ಕೆ ನೀರು ತುಂಬಿಸಿತು. ಕಂಬುಲದ ಸಿದ್ಧತೆ ಮಾಡಿತು. ಪೂಕರೆಯನ್ನು ನಿಲ್ಲಿಸಿತು.

೪೦. ಆ ಸಮಯದಲ್ಲಿ ದೈವ ಇರಂದಲ ಜನನಕ್ಕೆ ಬಂದಿತು. ಓ ಪಿನನೂಲ ಚಂಡಿರಾಬು ಸೆಟ್ಟಿಬಾಲು ನೀನು          ಕೇಳು-

೪೧. ಕಂಬುಲಕ್ಕೆ ನಾನು ನೀರು ಬಿಟ್ಟಿದ್ದೇನೆ. ಕಂಬುಲವನ್ನು ನಾನು ಸಿದ್ಧಗೊಳಿಸಿದ್ದೇನೆ. ಪೂಕರೆಯನ್ನು ನಿಲ್ಲಿಸಿದ್ದೇನೆ. ಅದಕ್ಕಾಗಿ ನೀನು ಏನು ಕೊಡುತ್ತೀಯಾ, ಅದು ಕೇಳಿತು.

೪೨. ಕೊಟ್ಯಡ್ಕದಲ್ಲಿ ನಾನು ನಿನಗಾಗಿ ‘ತಾನ’ವೊಂದನ್ನು ಸಿದ್ಧಮಾಡುವೆ. ಅಂತೆಯೇ ಉಳ್ಳಾಲ್ತಿಗೊಂದನ್ನು ಸಿದ್ಧಮಾಡುವೆ. ಆತ ಹೇಳುತ್ತಾನೆ.

೪೩. ನಾನು ನಿನಗಾಗಿ ಕೊಡಿಯೇರಿಸುತ್ತೇನೆ. ಐದು ದಿನಗಳ ಚೆಂಡನ್ನು ನಡೆಸುತ್ತೇನೆ ಎಂದನವನು.

೪೪. ಕೊಟ್ಯಡ್ಕದಲ್ಲಿ ಅವನು ‘ಬಲ್ಲೆ’ಗಳನ್ನು ಕಡಿಸಿದನು. ನೆಲವನ್ನು ಸಮ ಮಾಡಿದನು. ಗುಡಿಗೆ ಅಡಿಪಾಯವನ್ನು ಸಿದ್ಧಗೊಳಿಸಿದನು.

೪೫. ಆಗ ದೈವ ಜುಮಾದಿಯು ಹಂಚನ್ನು ಜಾರಿಸಿತು.

೪೬. ಜಾರಿಸಿದ ಹಂಚನ್ನು ಮಸೀದಿಗೆ ಇರಿಸಿತು. ಮಸೀದಿಯಿಂದ ಜಾರಿಸಿದ ಹಂಚನ್ನು ಗುಡಿಗೆ ಇರಿಸಿತು.    ಬೆಳಗ್ಗೆ ಮುಕ್ರಿಯನ್ನು ಪ್ರಾರ್ಥನೆಗೆ ಕರೆಯಲಾಯಿತು.

೪೭. ಬೆಳಗ್ಗೆ ಪ್ರಾರ್ಥನೆಗೆ ಬಂದ ಮುಕ್ರಿ ಸಂಜೆಯಲ್ಲಿ ಸತ್ತ, ಸಂಜೆಗೆ ಪ್ರಾರ್ಥನೆಗೆ ಬಂದ ಮುಕ್ರಿ ಬೆಳಿಗ್ಗೆ ಸತ್ತ.

೪೮. ಮಾಯದಲ್ಲಿ ಅದು ಕಟ್ಟಳೆ ಮಾಡಿತು. ‘ಐನೂರ್‌ಜುಮಾದಿ’ ಎಂದು ತನ್ನನ್ನು ಕರೆಯಬೇಕೆಂದಿತು. ಅದು ‘ಮೀನಂಗಿಲ ಕರಿಯಾ’ದಲ್ಲಿ ನದಿ ದಾಟಿತು. ಕುಳವೂರು ಗುತ್ತಿನ ಕಡೆಗೆ-

೪೯. ಕುಳವೂರು ಗುತ್ತಿನೆಡೆಗೆ ಅದು ಬಂದಿತು. ಅದು ಅಳುವ ಮಗುವಿನಲ್ಲಿ, ಕೂಗುವ ಕರುವಿನಲ್ಲಿ ತನ್ನ ಕಾರ್ಣಿಕವನ್ನು ತೋರಿಸಿತು. ಇದೇನು ವಿಚಿತ್ರಗಳು ಕಾಣಿಸುತ್ತಿರುವುದು –

೫೦. ಏನಿದು ಕಲಿಯುಗ? ಎಂದರವರು. ಅವರು ತಾಳೆಗರಿ ಹಿಡಿದ ಜೋಯಿಸರಲ್ಲಿ ಕೇಳಿದಾಗ-

೫೧. ಒಂದು ದೈವ ಬಂದಿದೆ. ಅದು ಮೂರು ಕುಟುಂಬಗಳ ಸ್ಥಳಕ್ಕೆ ತಕ್ಕುದಾದುದು. ಬಂದಿರುವ ದೈವಕ್ಕೆ ಏನು ಕೊಡಬೇಕೆಂದು ಕೇಳುತ್ತಾರವರು.

೫೨. ಅದಕ್ಕೆ ಚಾವಡಿಯ ಮಧ್ಯದಲ್ಲಿ ಮುತ್ತಿನ ತೂಗುಯ್ಯಾಲೆ ಆಗಬೇಕೆಂದರವರು. ಅದು ಗುಡಿ ಸಿದ್ಧತೆಯಾಗಬೇಕೆನ್ನುತ್ತದೆ ಎಂದರವರು.

೫೩. ಕದ್ರಾಡ್‌ ಬಲಾ ಗುಡ್ಡೆಯ ಮೇಲೆ ದೈವಕ್ಕೆ ಗುಡಿಯನ್ನು ಕಟ್ಟಿದರು. ದೈವಕ್ಕೆ ಕಟ್ಟಿದ ಗುಡಿಯಲ್ಲಿ ಅವರು ದೈವವನ್ನು ಸ್ಥಾಪಿಸಿದರು.

೫೪. ದೈವ ಮಾಯದಲ್ಲಿಯೇ ಕಟ್ಟಳೆಯನ್ನು ಮಾಡಿತು ಮೂಡಣ ಸ್ಥಳದಿಂದ .

೫೫. ಪಶ್ಚಿಮದ ಕದ್ರಾಡ್‌ ಉಲಾ ಗುಡ್ಡದವರೆಗೆ ಮಾಯದಲ್ಲಿ ಅದು ಕಟ್ಟಳೆ ಮಾಡಿತು. ಕೆಳಗೆ ಅದೊಂದು ‘ತಟ್ಟ’ನ್ನು ಮೂಡಿತು;

೫೬. ಕದ್ರಾಡ್‌ ಉಲಾ ಗುಡ್ಡದ ಮೇಲೆ ದೈವ ಜುಮಾದಿಯು ಈ ಕಟ್ಟಳೆಯನ್ನು ಮಾಡಿತು.

೫೭. ಸೂರ್ಯೋದಯಕ್ಕೆ ಕುಳವೂರು ಗುತ್ತಾಯಿತು. ಸೂರ್ಯಾಸ್ತಕ್ಕೆ ಕದ್ರಾಡ್ ಉಲಾ ಗುಡ್ಡೆಯಾಯಿತು. ನಾಗಬೆರ್ಮರವರನ್ನು ಎಡಕ್ಕೆ ಸ್ಥಾಪಿಸಿ ಅದಕ್ಕೆ ಕದ್ರಾಡ್‌ಉಲ್ಲಾಗುಡ್ಡೆ ಎಂದು ಹೆಸರಾಯಿತು.

ಪರಾಮರ್ಶನ ಕೃತಿಗಳು

1. Beck, Brenda, 1981, The goddess and the demon, A local South Indian festival and its            wider context in Purusartha 5, 83-136.

2. Bhardwaj, Surinder M., 1983, Hindu places of pilgrimage in India. A study in cultural geography, Berkeley etc.

3. Blackburn, Stuart, 1988, Singing of birth and death, Texts in performance. Philadelphia University of Pennsylvania Press.

4. Burghart Richard 1993, Itinerant vaisnnative Genealogistist of the Gangan basin (In     flags of fame Bruckner and others) Delhi : Manohar.

5. Blckburn and Ramanujan A.K.(eds.), 1987, Another Harmony, New essays on the folklore of India, Berkely : University of California Press.

6. Bruckner, Heidrun, 1987, Jumadi : an oral Tulu myth and ritual of Bhuta-worship in       Coastal Karnataka, in Studien zur Indologic und Iranistik, 13/14 1987. 17-37.            Reinbek (=Festchrift fur Wilheml Rau).

7. Id. 1990, Konigliche Kulte : Mythologie and Rituale von Volskulten and der West- Kuste Sudindiens (587PP.,manuscript).

8. Id. and Poti, Narasimha, 1992, Dhumavati-bhutta: A oral Tulu – text collected in the       19th Cent. Edition, translation, analysis. In Studien zur Indologie and Iransistik 16, 13-64.

9 Burnell A.C., 1894-1897, Devil worship of the Tuluva from the papers of the late A.C.Burnell, ed. by Maj.R.C.Temple. In Indian Antiquary, Vols.23-26.

10.Claus, Peter J., 1975, The Siri myth and ritual : A mass possession cult of Tulunad. In Ethnology 14:47-58.

11. Id., 1978, Oral traditions, royal cults and materials for the recondiseration of the caste             system in South India. In Journal of Indian Folkloristics 1:1-25.

12. Id., 1979, Spirit possession and spirit mediumship from the perspective of Tulu oral traditions. In cultrure, Medicine and Psychiatry 3:29-52.

13. Id. 1989 a. Behind the text : perfromance and ideology in a Tulu oral tradition. In roal epics in India Blackburn et. al (eds), Berkeley : University of California Press.

14. Id, 1989 b. Kingsongs (manuscript).

15. Das, Rahul P. 1983, some remarks on the Bengali deity Dharma : Its cult and study. In Anthropos 78 : 661 – 700.

16. Id, 1987, More remarks on the Bengali deity Dharma, its cult and study, Ind       Anthropos 82, 244-251.

17. Das, Veens 1976, The uses of liminality, In Contributions to Indian Sociology 10, 245-263.

18. Finnegan R.1977, Oral poetry, Its nature, significance and social content, Cambridge.

19. Gowda, Chinnappa, 1983, Bhutaradhane : Kelavu adhyayanagalu, Mangalore.

20. Kapp, Dieter B.,1982, The conecept of Yama in the religion of a South Indian tribe, In journal of the American Oriental Society, 102, 517 – 521.

21. Leach, Edmund, 1976, Culture and communication. The logic by wichisymbols are connected, Cambridge : Cambridge University Press.

22. Manner, August, 1886, Paddanolu, Mangalore : Basel Mission Press.

23. Id., 1886 a. A Tulu – English dictionary, Mangalore (reprint : Delhi, 1983).

24. Rai, Viveka 1982, Tuluva adhyayana : Kelavu vicaragalu, Mangalore.

25. Id., 1985, Tulu janapada sahitya, Bangalore (Ph. D thesis).

26. Sontheimer G.D., 1987, The vana and the Ksetra : The tribal origins of some famous cults. In Eschmann memorial lectures, Vol. I (1978-86), G.C. Tripthi and Hermann Kulke (eds), eschmann Memorial Press, Bhuhaneswar, 117-164.

27. Id, 1989 a. Between ghost and god : A folk deity of the Deccan. In Criminal gods and             demon devotees. Essays on the guardians of popular hindusim. Hiltebeitel, Alf(ed.), Albany, N.Y.State University of New Yark Press.

28. Id, 1989 b.Hinduism : The five components and their interaction. In Hinduism   reconsidered Sontheimer G – D, and Kulke H., (eds) Delhi.

29. Id., 1989 c. The myth of the god and his two wives : Two pastoral versions from Maharastra. In Living texts from India, Thiel – Horstman M. and Barz R (eds.), Wiesbaden.

30. Id., 1989 d. Pastoral deiteis in Western India, (tr.by Anne Feldhaus New York : Oxford Univ. Press.

31. Upadhyaya U.P., 1988, Tulu nighantu (Tulu lexicon), Vol. I, Udupi.

32. Whitehead H.,1976, The village gods of South India, Delhi : Sumit (Reprint of 1921 edition).