ಇಲ್ಲ ಎಂದು ಕೊರಗುವ ಬದಲು ಇದ್ದದನ್ನು ಸರಿಯಾಗಿ ಹಂಚಿ ಉಣ್ಣುವುದರಲ್ಲಿಯೇ ತೃಪ್ತಿಯಿರುವುದು. ಅದು ಆರೋಗ್ಯಕರವಾದುದು. ಬಡತನದಲ್ಲೂ ತಮ್ಮ ಸಿರಿತನವನ್ನು ಕಂಡುಕೊಳ್ಳುವವರು ನಿಜವಾಗಿ ‘ಉಳ್ಳವರು’ ಎಂಬುದನ್ನು ಧ್ವನಿಸುತ್ತದೆ ಈ ಮಾತುಕತೆ. ಕೆಲವು ಶಿಶುಪ್ರಾಸಗಳು ಹೀಗಿವೆ:

೧. ‘ಅಡ್ಪೆ ಅಡ್ಡಣ
ಕೊಲ್ಲಿ ಮೆಣ್ಕನ
ಒಂಜಿ ಬಟ್ಟಲ್ ದೆಪ್ಪನ
ಶುಕ್ರವಾರ ಪತ್ತನ!’

೨. ‘ಹೌದೌದಣ್ಣ ಜಾಂಬೋದಣ್ಣ
ಹೌದೌದಣ್ಣ ಮದ್ಯಾನ್ನಗ್ ದಾನ್ನ!’

೩. ‘ಕಿನ್ಯ ಕಿನ್ಯ ಜೋಕುಲೆಗ್
ಕಿನ್ಯ ಕಿನ್ಯ ಮಯಟ್ಟಳೆ
ಕಿನ್ಯ ಕಿನ್ಯ ಜೋಕುಲೆಗ್
ದಾಲ ಗೌಜಿ ಮಲ್ಪಡೆ’ (ಹೀಗೆ ಮುಂದುವರಿಯುವುದು)

೪. ‘ಡಬ್ಬ ಬೂರಿಯೆಗೆ ಜೋಗಿ
ಡಿಬ್ಬಲಕ್ಕಿಯೆಗೆ
ಕೋರಿ ತಿನಯೆಗೆ ಜೋಗಿ
ಕೋರಿದ ಎಲು ಬುಡಯೆಗೆ’ (ಹೀಗೆ ಮುಂದುವರಿಯುವುದು)

೫. ‘ತಾಟಿ ತಾಟಿ ತಮ್ಮನೊಗು
ಬಾಲೆ ಬತ್ತ್೦ಡ್‌ಗೆ
ಬಾಲೆ ಬತ್ತಿನ ತೂಯೆರ್ ಅಕುಲು
ಕೋರಿ ಅಡಿಯೆರ್‌ಗೆ’

೬. ‘ಓಡೆ ಪೋಪ ಕುಂಡದ?
ಬಲ್ಲಾಳೆ ಬೊಟ್ಟುಗು ಬಾರ್ ಪೆಜ್ಜರೆ ಪೋಪೆ!’
(ಹೀಗೆ ಮುಂದುವರಿಯುವುದು)

೭. ‘ಬಾರೆ
ನಿಕ್ಕ್‌ನಾಲ್ ಗಂಟೆಗೆ ದಾರೆ’

೮. ‘ಕಂಕನಾಡಿ ಪಡೀಲ್
ಕಮಲಕ್ಕಗ್ ಸಡೀಲ್’

೯. ‘ನೇತ್ರಾವತಿ ಉಲ್ಲಾಳ?
ಬಾಗಲ್ಪಾಡಿ ಕಿಲ್ಪಾಡಿ ಪಜೆಪಾಡಿ
ಜೆಪ್ಪು ಕುಡುಲ ಮಲ್ಪೆ!’

ತುಳು ಜನಪದ ಶಿಶು ಸಾಹಿತ್ಯದಲ್ಲಿ ಅಜ್ಜಿ ಕತೆಗಳು ಅಥವಾ ಜನಪದ ಕತೆಗಳು ಬಹಳಷ್ಟು ವ್ಯಾಪ್ತಿಯವು. ಅವುಗಳಲ್ಲಿ ಕಿರುಗತೆ, ಮಿಡಿಕತೆ, ಹನಿಗತೆ, ಇಡಿಕತೆ, ದೀರ್ಘಕಾಲದ ಕತೆಗಳಿವೆ. ಇಂತಹ ಕಥೆಗಳು ಎಲ್ಲ ದೇಶಗಳಲ್ಲೂ ಎಲ್ಲ ಭಾಷೆಗಳಲ್ಲೂ ಇದ್ದು ವಿಶ್ವ ವ್ಯಾಪಕತೆಯನ್ನು ಪಡೆದಿವೆ. ಈ ಕತೆಗಳ ಸಂಖ್ಯೆ ತುಳುವಿನಲ್ಲಿ ಚಿಕ್ಕದೇನೂ ಅಲ್ಲ. ಅವನ್ನು ಇಲ್ಲಿ ಉದಾಹರಿಸುವುದು ಸಾಧ್ಯವೂ ಇಲ್ಲ. ಆದರೂ ಲೋಪವಾಗುವುದು ಬೇಡ ಎನ್ನುವುದಕ್ಕೆ ಬಹಳಷ್ಟು ಜನಪ್ರಿಯವಾಗಿರುವ ಒಂದು ಕಿರುಗತೆಯನ್ನು ಉದಾಹರಿಸುತ್ತಿದ್ದೇನೆ.

ತುಳು : ‘ಅಮ್ಮೆರ್ ಓಲ್ಲಾ ಇಜ್ಜೆರ್! ಕೋರಿದ ಕೂಡುಡುಲಾ ಇಜ್ಜೆರ್’

‘ಒರಿ ಕಳುವನ್ ಏರೋ ಗಿಡೆತೊಂದು ಬತ್ತೆರ್, ಕಳುವೆ ಬಲಿತೆ. ಗಿಡಪುನಕುಳುಲಾ ಆಯನ ಬೆರೆ ಪತ್ಯೆರ್. ಕಳುವೆ ತಪ್ಪಾದ್ ಎಂಚಲಾ ಆಯನ ಇಲ್ಲಡೆ ಮುಟ್ಯೆ. ಆತನಗ ಬೆರಿಪತ್ತ್ ದ್‌ನಕುಲುಲಾ ಅಡೆಗ್ ಬತ್ತೆರ್. ಕಳುವಗ್ ದಾನೆ ಮನ್ಪೆರೆಲಾ ಇಂಬುದಾಂತೆ ಆಂಡ್. ಉಳಯಿ ಪೊಗ್ಗದು ದೆಂಗ್ ಕಲ್ಲುನಾತ್‌ಲಾ ಪುರುಸೊತ್ತು ಇಜ್ಜಿ. ಜಾಲ್‌ಗ್ ಬತ್ತ್‌ದ್ ಆಪುನ್ನೆ ಒಂಜಿ ಕುಸೆಲ್ ಗೊಬ್ಯೆ. ಜಾಲ್‌ಡ್‌ಆಯನ ಮಗೆ ಇತ್ತೆ. ‘ಇಂದ ಮಗಾ ಏರ್ಲಾ ಎನನ್ ಕೇಡೊಂದು ಬತ್ತೆರ್‌೦ಡ ‘ಅಮ್ಮೆರ್ ಒಲ್ಲಾ ಇಜ್ಜೆರ್‌೦ದ್ ಪಣ್. ಇಂಚ ಪಂಡ್ದ್ ಜಾಲ ಬರಿಟಿತ್ತಿ ಕೋರಿದ ಕೊಡುಗು ಪೊಗ್ಗುದು ಕುಲ್ಯೆ. ಆತನಗ ಬೆರಿ ಪತ್ತುನಕುಲು ಜಾಲ್‌ಗ್ ಬತ್ತ್‌ದ್‌ಲಾ ಎತ್ಯೆರ್. ಅಲ್ಪ ಇತ್ತಿ ಆಣಡ ‘ನಿನ್ನ ಆಮ್ಮೆರ್ ಓಲ್ಲೆಯಾ ಬೇಗ ಪಣ್‌ದ್ ಪೋಡಿಗಟ್ಟಯೆರ್. ಆಣ್ ಒರೋನೆ ಪೋಡಿದ್ ದಾನೆ ಪಣೊಡುಂದು ತೆರಿಯಂದೆ ‘ಅಮ್ಮೆರ್ ಓಲ್ಲಾ ಇಜ್ಜೆರ್. ಕೋರಿದ ಕೂಡುಡುಲಾ ಇಜ್ಜೆರ್’ದ್ ಪಂಡ್‌ದ್‌ಬುಡ್ಯೆ. ಆತನಗ ನಾಡುನಕ್ಕ್‌ಲೆಗ್ ಸಾದಿ ತೋಜಾದ್ ಕೊರೆಲೆಕೊ ಆಂಡ್. ಕಳುವೆ ಕೈಕ್ ತಿಕ್ಯೆಂದ್ ಬೇಂತೆ ಪಣೊಡ್ಚಿ’ (ನಂದಾವರ: ೧೯೮೮)

ಕನ್ನಡ: ‘ಅಪ್ಪ ಎಲ್ಲೂ ಇಲ್ಲ! ಕೋಳಿ ಗೂಡಿನಲ್ಲೂ ಇಲ್ಲ!)

ಒಬ್ಬ ಕಳ್ಳನನ್ನು ಯಾರೋ ಅಟ್ಟಿಸಿಕೊಂಡು ಬಂದರು. ಕಳ್ಳ ಓಡಿದ. ಅವರೂ ಬೆನ್ನಟ್ಟಿದರು. ಕಳ್ಳ ಹೇಗೋ ತಪ್ಪಿಸಿ ಆತನ ಮನೆ ಸೇರಲು ಪ್ರಯತ್ನಿಸಿದ. ಆದರೆ ಅವರೂ ಅದೇ ಹಾದಿ ಹಿಡಿದರು. ಕಳ್ಳನಿಗೆ ಏನು ಮಾಡುವುದೆಂದು ತೋಚಲಿಲ್ಲ. ಮನೆಯೊಳಗೆ ಹೋಗಿ ಅಡಗಿಕೊಳ್ಳುವಷ್ಟು ಸಮಯವೂ ಇಲ್ಲ. ಅಂಗಳಕ್ಕೆ ಬಂದ ಕೂಡಲೇ ಆತ ಒಂದು ಉಪಾಯ ಕಂಡುಕೊಂಡ. ಅಂಗಳದಲ್ಲಿದ್ದ ತನ್ನ ಮಗನಲ್ಲಿ ‘ನೋಡು! ನನ್ನನ್ನು ಯಾರಾದರೂ ಹುಡುಕಿ ಕೇಳಿಕೊಂಡು ಬಂದಾರು. ಅಪ್ಪ ಎಲ್ಲೂ ಇಲ್ಲ ಎಂದು ಬಿಡು’ ಎಂದು ತಿಳಿಸಿ ಅಂಗಳದ ಬದಿಯಲ್ಲೇ ಇದ್ದ ಕೋಳಿಗೂಡಿನೊಳಗೆ ತೂರಿ ಅವಿತುಕೊಂಡ. ಅಷ್ಟರಲ್ಲಿ ಬೆನ್ನಟ್ಟುವವರು ಬಂದರು. ಅಲ್ಲಿದ್ದ ಹುಡುಗನಲ್ಲಿ ‘ಎಲ್ಲೋ ನಿನ್ನ ಅಪ್ಪ? ಬೇಗ ಹೇಳು?’ ಎಂದು ಗದರಿಸಿ ಹೇಳಿದರು. ಹುಡುಗ ಹೆದರಿ ಏನು ಹೇವುದೆಂದೇ ತೋಚದಾದ. ನಡುಗುತ್ತಾ ‘ಅಪ್ಪ ಎಲ್ಲೂ ಇಲ್ಲ ಕೋಳಿ ಗೂಡಿನಲ್ಲೂ ಇಲ್ಲ’; ಎಂದು ಹೇಳಿಯೇ ಬಿಟ್ಟ. ಹುಡುಕುವ ಮಂದಿಗೆ ದಾರಿ ತೋರಿಸಿದಂತಾಯಿತು. ಕಳ್ಳ ಸಿಕ್ಕಿದನೆಂದು ಬೇರೆ ಹೇಳಬೇಕಾಗಿಲ್ಲ.)

ಮಕ್ಕಳಿಗೆ ಸಂಬಂಧಿಸಿದ ಗಾದೆಗಳು, ಒಗಟುಗಳು ತುಳು ಜನಪದ ಸಾಹಿತ್ಯದಲ್ಲಿ ಹೇರಳವಾಗಿವೆ. ಚಿಕ್ಕ ಮಕ್ಕಳಿಗೆ ಇವೂ ಪ್ರಿಯವಾದ ಪ್ರಕಾರಗಳೇ ಕೆಲವು ಅಂತಹ ಗಾದೆಗಳು:

‘ಒಟ್ಟೆ ತಿಪ್ಪಿಡ್ ನೀರ್ ಕೊಂಡೊಯಿಲೆಕೊ’
(ತೂತು ಇರುವ ಕರಟದಲ್ಲಿ ನೀರು ಒಯ್ದಂತೆ)

ಮಕ್ಕಳ ಪೆದ್ದುತನಕ್ಕೆ ಕೆಟ್ಟ ಬುದ್ಧಿಗೆ ಈ ಗಾದೆಯನ್ನು ಉದಾಹರಿಸುವುದಿದೆ.

 

‘ಬಾಲೆ ಪೋದು ಬಬ್ಬರ್ಯೆ ಆತ್‌ಡ್’
(ಮಗು ಹೋಗಿ ಬಬ್ಬರ್ಯನಾಗಿದ್ದಾನೆ)

ನೋಡಲು ಹುಡುಗನಾಗಿ ಕಂಡರೂ ವರ್ತನೆ ಮಾತ್ರ ಬೆಳೆದವರಂತೆ ಇದ್ದಾಗ ಈ ಗಾದೆ ಬರುತ್ತದೆ.

‘ಜೋಕುಳೆಗ್ ಕೂಳಿ ತೋಜಾಯೆರೆ ಬಲ್ಲಿ. ಕೆಲೆಂಜಿಗ್ ಪುಡಿ ತೋಜಾಯೆರೆ ಬಲ್ಲಿ’ (ಮಕ್ಕಳಿಗೆ ಹಲ್ಲು ತೋರಿಸಬಾರದು. ನೊಣಕ್ಕೆ ಹುಣ್ಣು ತೋರಿಸಬಾರದು)

‘ಜೋಕುಳೆ ಬೇಲೆ ತೆರಿಯಂದ್, ಬೊಟ್ಟು ಕಂಡೊಡು ಬುಳೆ ತೆರಿಯಂದ್’ (ಮಕ್ಕಳ ಕೆಲಸ ತಿಳಿಯದು, ಬೆಟ್ಟು ಗದ್ದೆಯ ಬೆಳೆ ತಿಳಿಯದು)

ಎದುರು ಕತೆ (ಇದಿರು ಕತೆ), ಮಂಡೆಕತೆ, ಒಗಟುಗಳು- ಎಳೆಯ ಮಕ್ಕಳಿಗೆ ಕುತೂಹಲ ಕೊಡುವ ಪ್ರಕಾರ. ಅವು ಮಕ್ಕಳ ಬುದ್ಧಿಗೆ ಕಸರತ್ತನ್ನೂ ನೀಡುತ್ತವೆ. ಒಗಟುಗಳನ್ನು ಹೇಳುವ ಚಟುವಟಿಕೆಯಿಂದ ಮಕ್ಕಳನ್ನು ಬಹು ಸುಲಭವಾಗಿ ಆಕರ್ಷಿಸಬಹುದು. ಅವರು ಆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದೂ ಸುಲಭ. ಅದೊಂದು ಆಟವಾಗಿಯೂ ಕೆಲಸ ಮಾಡುವುದರ ಜೊತೆಗೆ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಅವರಲ್ಲಿ ಉಂಟುಮಾಡುತ್ತದೆ. ಒಂದೆರಡು ಒಗಟುಗಳನ್ನು ಇಲ್ಲಿ ಉದಾಹರಿಸಬಹುದು.

‘ಬೋರಿ ಜೈದ್‌ಡ್ ಬಲ್ಲ್ ಮೇಪುಂಡು’’ (ಹೋರಿ ಮಲಗಿದೆ ಹಗ್ಗ ಮೇಯುತ್ತಿದೆ)

ಉತ್ತರ: ಕುಂಬಳಕಾಯಿ ಮತ್ತು ಅದರ ಬಳ್ಳಿ

‘ನೀರ್‌ಗ್ ಪೋವಡ, ನೀರ್ ಮುಟ್ಟದ, ನೀರ್ ಕೊನವಂದೆ ಬರಡ’
(ನೀರಿಗೆ ಹೋಗಬೇಡ, ನೀರು ಮುಚ್ಚಬೇಡ, ನೀರು ತಾರದೆ ಬರಬೇಡ)
ಉತ್ತರ: ಅಂಗಡಿಯಿಂದ ತೆಂಗಿನಕಾಯಿ ತರುವುದು

‘ಮುಪ್ಪ ಪಚ್ಚಿಲ್ ಮೂಜಿ ಪೆಲತರಿ’ (ಮೂವತ್ತು ಹಲಸಿನ ಸೊಳೆ ಮೂರು ಬೀಜಗಳು)

ಉತ್ತರ: ತಿಂಗಳಿಗೆ ಮೂವತ್ತು ದಿನಗಳು ಹಾಗೂ ಅಮವಾಸ್ಯೆ, ಸಂಕ್ರಮಣ ಮತ್ತು ಹುಣ್ಣಿಮೆ

‘ಅಟ್ಟೊಡೊಂಜಿ ಮುಡಿ ಅರಿ ದೀತೆ. ಬೊಳೆಂತನಾ ಉರ್ಪೆಲಾ ತೆರಿಯಂದ್’ (ಅಟ್ಟದಲ್ಲೊಂದು ಮುಡಿ ಅಕ್ಕಿ ಇಟ್ಟಿದ್ದೇನೆ. ಬೆಳ್ತಿಗೆಯಾ ಕುಚ್ಚಲಾ ತಿಳಿಯದು)

ಉತ್ತರ: ಗರ್ಭಿಣಿ, ಹುಟ್ಟುವ ಮಗು ಹೆಣ್ಣೋ ಗಂಡೋ ತಿಳಿಯದು.

ಇಂತಹ ಸುಂದರವಾದ ರೂಪಗಳು ಒಗಟುಗಳ ಪ್ರಪಂಚದಲ್ಲಿ ಬೇಕಷ್ಟು ಸಿಗುತ್ತವೆ. ತುಳುವಿನಲ್ಲಿ ಮಕ್ಕಳ ಸಾಹಿತ್ಯವನ್ನು ಮೊತ್ತ ಮೊದಲು ಸೃಜನಾತ್ಮಕವಾಗಿ ನೀಡಿದವರೆಂದರೆ ಬಹುಶಃ ನರ್ಕಳ ಮಾರಪ್ಪ ಶೆಟ್ಟರು (೧೯೩೦). ಪಲ್ಯ ಕಾಲೊ (ಬೆಳಗಿನ ಜಾವ) ಎನ್ನುವ ಮಕ್ಕಳ ಹಾಡು ಅವರ ‘ಪೊರ್ಲಕಂಟ್’ ಕವಿತೆಗಳ ಸಂಗ್ರಹದಲ್ಲಿದೆ. ಪಲ್ಯ ಕಾಲೊ ಪುಣ್ಯ ಕಾಲೊ ಪೊರ್ಲು ತೂಲೆ ಜೋಕುಳೆ (ಪ್ರಾತಃಕಾಲ ಪುಣ್ಯಕಾಲ, ಚೆಲುವ ನೋಡಿ ಮಕ್ಕಳೆ) ಇಂತಹ ೧೫ ದ್ವಿಪದಿಗಳು ಈ ಹಾಡಿನಲ್ಲಿವೆ.

ತುಳುವಿನಲ್ಲಿ ರಚನೆಗೊಂಡ ಸೃಜನಶೀಲ ಸಾಹಿತ್ಯದಲ್ಲಿ ಮುಖ್ಯವಾಗಿ ಶಿಶು ಸಾಹಿತ್ಯದಲ್ಲಿ ನಾರಾಯಣ ಕಿಲ್ಲೆಯವರ ‘ಕಾನಿಗೆ’ (೧೯೩೨) ಗಮನಿಸಬೇಕಾದ ಕೃತಿ. ತುಳುವ ಸಾಹಿತ್ಯ ಮಾಲೆಯ ‘ಐದನೆಯ ಹೂ; ಆಗಿರುವ ಇದರಲ್ಲಿ ಪತ್ತವತ್ತಾರ, ಜೋಕುಲೆಪದ, ಗಾಲಿ, ಬರ್ಸ, ಬಾರೆ, ಬಾಲೆ, ವಾರ, ತಿಂಗೊಳು ಮೊದಲಾದ ಮಕ್ಕಳ ಹಾಡುಗಳಿವೆ. ಪತ್ತವತಾರ (ಹತ್ತು ಅವತಾರ) ಎನ್ನುವ ಅವರ ಪದ್ಯವು ಮಕ್ಕಳಿಗೆ ಅತ್ಯಂತ ಕುಶಿ ಕೊಡುವ ರಚನೆಯಾಗಿದೆ.

‘ಕನ್ನ್ ಬುಡುದು ನೀರ್ ಡಿತ್ತಿನಾರ್ ಯೆರ್‌ಗೇ?’
(ಕಣ್ಣು ಬಿಟ್ಟು ನೀರಿನಲ್ಲಿ ಇದ್ದವರು ಯಾರಂತೆ?)
‘ಕಿನ್ನಿ ಪೋದು ಬೇಗ ಬಲತ್ ಕಡಲ ಮೀನ್‌ಗೇ?’
(ಮರಿಯು ಹೋಗಿ ಬೇಗ ಬೆಳೆದ ಕಡಲ ಮೀನಂತೆ?)
‘ಗುಡ್ಡೆ ಮುರ್ಕಿನಪಗ ಮಿತ್ತ್ ದೆರ್ತಿನೇರ್‌ಗೆ?’
(ಗುಡ್ಡ ಮುಳುಗಿದಾಗ ಮೇಲೆ ಎತ್ತಿದವರು ಯಾರಂತೆ?)
‘ಮಡ್ಡಿ ನೀರ್‌ಡಾಪಿ ಕುರೆನ್ ತೆಲಿಪು ಏಮೆಗೆ’
(ಮಡ್ಡಿ ನೀರೊಳಾದ ಕೊಳೆಯ ಕಳೆವ ಆಮೆಯು)

ಹೀಗೆ ಈ ಪದ್ಯ ಹತ್ತು ಅವತಾರಗಳ ಕಥೆಯನ್ನು ನಮ್ಮ ಮುಂದಿಡುತ್ತದೆ. ಅದೇ ಕೃತಿಯಲ್ಲಿನ ‘ಜೋಕುಳೆ ಪದ’ (ಮಕ್ಕಳ ಹಾಡು) ಬಹಳಷ್ಟು ಜನಪ್ರಿಯವಾದುದು.

‘ತೊಂಕುವೆ ತೊಟ್ಟಿಲ್ ಮಾನವೆ ಬಾಲೆ
(ತೂಗುವೆ ತೊಟ್ಟಿಲು ಹಾಡುವೆ ಮಗುವೆ)
ತೇಂಕಡ ನರೆಲಡ ಓ ಎನ್ನ ಸೇಲೆ
(ದಣಿಯದಿರು ನರಳದಿರು ಓ ನನ್ನ ಕೊಂಡಾಟ)
ಜೋ ಜೋ ಜೋ ಜೋ’

ಕಿಲ್ಲೆಯವರ ‘ಕಾನಿಗೆ’ಯ ಕಾಣಿಕೆ ತುಳು ಸಾಹಿತ್ಯ ಚರಿತ್ರೆಯ ಮೊದಲ ಮೆಟ್ಟಿಲು ಎನ್ನಬೇಕು. ಆಮೇಲೆ ಕಾಣಿಸಿಕೊಳ್ಳುವ ಎರಡನೇ ಹಂತದ ಈ ಚರಿತ್ರೆಯಲ್ಲಿ ಪ್ರಮುಖರೆಂದರೆ ಕೆಮ್ತೂರು ದೊಡ್ಡಣ್ಣ ಶೆಟ್ಟರು. ಅವರು ಕಟ್ಟಿದ ಕಸ್ತೂರಿ ಸಾಹಿತ್ಯ ಮಾಲೆಯ ‘ತುಳುನಾಡ್‌ದ ಮಲ್ಲಿಗೆ’ (ತುಳುನಾಡಿನ ಮಲ್ಲಿಗೆ)ಯಲ್ಲಿ ಬಾಲೆ ತೂಂಕುನ ಪದ (ಜೋಗುಳ ಹಾಡುವ ಪದ) ಇದ್ದರೂ ಅದು ಕಿಲ್ಲೆಯವರ ‘ಜೋಕುಲೆ ಪದ’ ದ ಅನುಕರಣೆಯಲ್ಲಿ ಸಾಗಿ ಬಂದದ್ದಾಗಿದೆ.

‘ತುಳು ನಾಡ್ದ ಮಲ್ಲಿಗೆ’ ಕೃತಿಯಲ್ಲಿ ನಾಟಕಗಳಿಗಾಗಿ ಕೆಮ್ತೂರು ದೊಡ್ಡಣ್ಣ ಶೆಟ್ಟರು ರಚಿಸಿರುವ ಹಾಡುಗಳಿವೆ. ಅವುಗಳಲ್ಲಿ ತೊಟ್ಟಿಲು ತೂಗುವ ಜೋಗುಳದ ಹಾಡುಗಳು ಮಕ್ಕಳ ಹಾಡುಗಳೂ ಇವೆ. ಉದಾ:

ತೂಂಕುವೆ ತೊಟ್ಟಿಲ್ ಮಾನವೆ ಬಾಲೆ
ತೇಂಕಡ ಪಿಡೆಂಕಡ ಮಲ್ಪದ ರಗಲೆ ಜೋ

೨. ಅವರ ‘ವ್ಹಾ ವ್ಹಾ ರೆ ಕಮ್ಮೆನ’ ಪದ್ಯ ಸಂಗ್ರಹ ಕೃತಿಯಲ್ಲಿನ ಒಂದು ಹಾಡು ಹೀಗಿದೆ:

ಸಾಕಾಂಡ್ ಸಾಕಾಂಡ್ ಕೈಕಂಜ್ಲೆ ಕಾಟ
ಏತಪ್ಪ ದೇರುನು ಪೋಪನ ಕೊಟ್ಟ
ಪಗೆಲಿಜ್ಜಿ ರಾತ್ರೆಜ್ಜಿ ನಕ್ಲೆನ ಕಾಟ
ಅಗರ್‌ನ್ ಪಾಗರೊನು ಜರ್ತ ಮಾರ್ಕೊಟ್ಟ

‘ಸುಳ್ಯದ ಬಾಲವೃಂದ’ ಎನ್ನುವ ಸಂಸ್ಥೆ ತುಸುಮಟ್ಟಿಗೆ ಶಿಶು ಸಾಹಿತ್ಯ ಸೃಷ್ಟಿಸಿದೆ. ಉಡುಪಿಯ ‘ನವಯುಗ’ ಪತ್ರಿಕೆಯ ತುಳು ಸಂಚಿಕೆಗಳು ಈ ರಚನೆಗಳನ್ನು ಪ್ರಕಟಿಸಿವೆ. ಅವುಗಳಲ್ಲಿ ಸುಳ್ಯ ಶಾಲೆಯ ಕುರುಂಜಿ ಚಿನ್ನಪ್ಪ ಗೌಡರು ‘ಒರಿಯಾಂದ್‌(ಉಳಿಯದು) ಎನ್ನುವ ಹಾಡಿನಲ್ಲಿ (ಸಂ.೧- ಸಂಚಿಕೆ ೧)

‘ಊರುಡೊಂಜಿ ಕುದ್ಕೆ ಜಾತಿ! (ಊರಲ್ಲೊಂದು ನರಿ ಜಾತಿ)
ಉಂಡು ಅತ್ತಯಾ?’ (ಉಂಟು ಅಲ್ಲವೇ?)

ಹೀಗೆ ಕೋಳಿ ನಾಯಿಗಳನ್ನು ಉದಾಹರಿಸಿ ಕವಿತೆಯನ್ನು ಮುಂದುವರಿಸಿದ್ದಾರೆ. ಅವರದೇ ಇನ್ನೊಂದು ರಚನೆ ‘ಕಂಡು ಕೈಕಂಜಿಲು’ (ಕಳ್ಳ ಜಾನುವಾರುಗಳು) ಅದೇ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಸುಳ್ಯದ ನಾರಾಯಣ ರೈ ‘ಕುಕ್ಕಣ್ಣ ಲಕ್ಕ್’ (ಕುಕ್ಕಣ್ಣ ಏಳು) ಮತ್ತು ‘ಸಾಲೆಗ್ ಪೋವೊಡು’ (ಶಾಲೆಗೆ ಹೋಗಬೇಕು) ಎನ್ನುವ ಹಾಡುಗಳನ್ನು ಬರೆದಿದ್ದಾರೆ.

‘ಅಮ್ಮ ಎಂಕ್ ಸಾಲೆಗ್ ಪೋವೊಡ್
(ಅಮ್ಮ ನನಗೆ ಶಾಲೆಗೆ ಹೋಗಬೇಕು)
ಪಾಟೊ ಕಲ್ತ್‌ದ್ ಮಾಸ್ಟೆರಾತ್ (ಪಾಠ ಕಲಿತು ಮಾಸ್ಟರಾಗಿ)
ಕೋಟು ಗೀಟು ಎಂಕ್‌ ಪಾಡೊಡು’ (ನಾನು ಕೋಟು ಗೀಟು ಹಾಕಬೇಕು)

ಶಿವಣ್ಣ ಸುಳ್ಯ (ಅದೇ ಸಂಚಿಕೆಯಲ್ಲಿ) ಅವರು ‘ತಪ್ಪು ಏರೆನ? (ತಪ್ಪುಯಾರದು) ಎನ್ನುವ ಕತೆಯ ಕೊನೆಗೆ ಜೋಗುಳ ಹಾಡನ್ನು ಕೊಟ್ಟಿದ್ದಾರೆ.

‘ಜೋ ಜೋ ಬಂಗಾರ್ ಜೋ ಜೋ’ (ಜೋಜೋ ಬಂಗಾರ ಜೋಜೋ)

ಬಾಲವೃಂದ ಕೆ.ಎಸ್. ಪ್ರಭು ಕೆಲವು ಚುಟುಕುಗಳನ್ನು ಅದೇ ವರ್ಷದ ತುಳು ಸಂಚಿಕೆಯಲ್ಲಿ ಬರೆದಿದ್ದಾರೆ.

‘ಚುಟು ಚುಟು ಚೂಟಣ್ಣ (ಚುಟು ಚುಟು ಚೂಟಣ್ಣ)
ಮೊರಂಟೆ ಚೂಟು ಪಾಡಣ್ಣ (ಮೊರೆಂಟೆ ಬೆಂಕಿಯಲ್ಲಿ ಸುಡಣ್ಣ)
ಎಡ್ಡೆ ಬೆಯಿತ್ ಕಜಿಪ ಮಾಳ್ತ್ (ಚೆನ್ನಾಗಿ ಬೇಯಿಸಿ ಪಲ್ಯ ಮಾಡಿ)
ಅಯಿನ್ ತಿನೊಡು ತೂಲಣ್ಣ (ಅದನ್ನು ತಿನ್ನಬೇಕು ನೋಡಣ್ಣ)
ಇದೇ ಸಂಚಿಕೆಯಲ್ಲಿ ಚಿನ್ನಪ್ಪ ಗೌಡರು
‘ಓ ಬಾವ ಇಂಚಿ ಬಲ್ಲೆಯೇ’ (ಓ ಭಾವ ಇಲ್ಲಿ ಬನ್ನಿರಯ್ಯ)
‘ಕಪ್ಪೆದ ಜೀವನ ಸೂಲೆಯೇ’ (ಕಪ್ಪೆಯ ಜೀವನ ನೋಡಿರಯ್ಯಾ)
ಹೀಗೆ ನೆಲ- ಜಲ ಉಭಯವಾಸಿ ಕಪ್ಪೆಯ ಜೀವನ ಮಹತ್ವವನ್ನು ವರ್ಣಿಸಿದ್ದಾರೆ.

‘ಕೋರಿ ಕೆಲಪುನಗ’ (ಕೋಳಿ ಕೆಲೆದಾಗ) ಇದು ಬಾಲವೃಂದ ತುಳುವ ಬಂಧು ಒಬ್ಬರ ಪದ್ಯ )ಸಂ.೧, ಸಂಚಿಕೆ ೧೧)

‘ಪಲ್ಯಕೇಲ್ ಅವೊಡಾಂಡ (ಮುಂಜಾನೆ ಆಗಬೇಕಿದ್ದರೆ)
ರೈತೆರ್ ಮಾತ ಲಕ್ಕೊಡಾಂಡ (ರೈತರು ಎಲ್ಲ ಏಳಬೇಕಿದ್ದರೆ)
ಕೋರಿ ಕೆಲೆಪುಂಡು (ಕೋಳಿ ಕೆಲೆಯುವುದು)
ಕೊಕ್ಕೊಕ್ಕೋ ಕೊಕ್ಕೊಕ್ಕೋ
ಕೋರಿ ಕೆಲೆಪುಂಡು’ (ಕೋಳಿ ಕೆಲೆಯುವುದು)

ಇದೇ ಸಂಚಿಕೆಯಲ್ಲಿ ಸುಳ್ಯದ ಮಮ್ಮದೆ ಎನ್ನುವವರ ‘ಮೆಟ್ರಿಕ್’ ಎನ್ನುವ ಪದ್ಯದಲ್ಲಿ ಶಾಲೆ, ಆಟ ಪಾಠ, ಪರೀಕ್ಷೆ, ಪಾಸ್‌ಫೈಲ್ ಇತ್ಯಾದಿ ಕುರಿತ ವಿವರವನ್ನು ಕಾಣಬಹುದು. ಈ ಸಂಚಿಕೆಯಲ್ಲೇ (ಬರೆದವರ ಹೆಸರು ಸ್ಪಷ್ಟವಿಲ್ಲ) ‘ಚುಟುಕೋಲು’ (ಚುಟುಕುಗಳು) ಶೀರ್ಷಿಕೆಯಡಿ ಆರು ಚುಟುಕುಗಳನ್ನು ನೀಡಿ, ಈ ಚುಟುಕುಗಳ ವ್ಯವಸಾಯವನ್ನು ಮೈಸೂರು ಕಡೆಯ ರಾಜರತ್ನರು ಕನ್ನಡದಲ್ಲಿ ರಚಿಸಿದರು. ಅವರಿಂದ ನಾವು ತುಳುವಿನಲ್ಲಿ ಬರೆಯಲು ಕಲಿತೆವು ಎಂಬುದಾಗಿ ಟಿಪ್ಪಣಿಯನ್ನು ನೀಡಿದ್ದಾರೆ. ಅದರಲ್ಲಿನ ಒಂದು ಚುಟುಕು ಹೀಗಿದೆ.

‘ಇಂದು ಬರ್ಸಕಾಲೊ (ಇದು ವರ್ಷಕಾಲ)
ಕಪ್ಪೆಲೆ ಹರ್ಷಕಾಲೊ (ಕಪ್ಪೆಗಳ ಹರ್ಷಕಾಲ)
ಟೊರಂ ಟೊರಂ ಡೊರಂ ಡೊರಂ
ಕೇಣ್ಣೇ ಕಪ್ಪೆಲೆ ಕೋಲೊ’ (ಕೇಳಿ ಕಪ್ಪೆಗಳ ಕೋಲ)

‘ನವಯುಗ’ ಪತ್ರಿಕೆ ೧೯೩೬ರಿಂದ ಮೂರು ವರ್ಷ ಕಾಲ ತಿಂಗಳಿಗೊಂದರಂತೆ ತುಳು ಸಂಚಿಕೆಯನ್ನು ಪುರವಣಿಯಾಗಿ ಪ್ರಕಟಿಸಿದೆ. (ಸಂ.೧ ಸಂಚಿಕೆ ೧. ೧-೧೦-೧೯೩೯ ಇದು ಪ್ರಾರಂಭದ ಪುರವಣಿ) ಎಂಟು ಪುಟಗಳ ಈ ಸಂಚಿಕೆಯಲ್ಲಿ ಶಿಶು ಸಾಹಿತ್ಯವನ್ನು ಮುಖ್ಯವಾಗಿ ಸುಳ್ಯದ ಬಾಲವೃಂದದವರು ರಚಿಸಿ ಬರೆಯುತ್ತಿದ್ದುದು ಒಂದು ದಾಖಲೆಯಾಗಿ ಕಂಡುಬರುತ್ತದೆ.

೧೯೭೦ ರಿಂದ ಆರಂಭಗೊಂಡ ತುಳು ಸಿರಿ (೧೯೭೦), ತುಳುಕೂಟ (೧೯೭೧), ತುಳುವ (೧೯೮೦), ತುಳುನಾಡ್ (೧೯೮೧), ರಾಶಿ (೧೯೮೯), ತುಳವೆರೆ ತುಡರ್ (೧೯೯೧), ತುಳು ಬೊಳ್ಳಿ (೧೯೯೪), ಮದಿಪು (೧೯೯೬), ವಿವಿಧ ಪತ್ರಿಕೆಗಳಲ್ಲಿ ಗಾದೆ, ಒಗಟು ಶಿಶುಪ್ರಾಸ, ಮಕ್ಕಳ ಕತೆಯನ್ನು ಧಾರವಾಹಿಯಾಗಿ ಬರೆಯುತ್ತಿದ್ದರು. ಕಲ್ಲಾಯಿ ಜಗನ್ನಾಥ ರೈ ‘ಮೂಜಿ ದೇಶದ ಮೂಜಿ ಜೋಕುಲು’ ಎನ್ನುವ ಒಂದು ಚಿತ್ರ ಬರಹವನ್ನು ‘ತುಳುನಾಡ್’ ಪತ್ರಿಕೆಯ ಮೊದಲ ಸಂಚಿಕೆಯ ಮೂಲಚಿತ್ರವಾಗಿ ನೀಡಿದ್ದಾರೆ. ‘ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುವುದನ್ನು ಕಣ್ಣಾರೆ ಕಾಣುತ್ತೇವೆ’ ಎಂದು ಅಂತಾರಾಷ್ಟ್ರೀಯ ಮಕ್ಕಳ ವರ್ಷದಲ್ಲಿ ಕಳಕಳಿಯಿಂದ ಬರೆದಿದ್ದಾರೆ.

ಬಿ. ಕಲ್ಯಾಣಿ ಬೆಳ್ತಂಗಡಿ ‘ಕಟ್ಟ್ ಬಲ್ಲ್ ಕಟ್ಟು ದೊಣ್ಣೆ (೧೯೭೩ ಫೆಬ್ರವರಿ, ತುಳುಕೂಟ), ತಿಲಕನಾಥ ಮಂಜೇಶ್ವರ ‘ತಿದ್ದಪ್ಪೆ ಜೋಕುಳು’, ಭಾಸ್ಕರ ರೈ ಕುಕ್ಕುವಳ್ಳಿ ‘ಬಾಲೆ ಸಿಂಗೆ’ ಎನ್ನುವ, ಅಭಿಮನ್ಯು ದೊಡ್ಡವರ ಮೋಸಕ್ಕೆ ಬಲಿಯಾದ ಬಗೆಯನ್ನು ಕವನ ರೂಪವಾಗಿ ಬರೆದಿದ್ದಾರೆ. (ತುಳು ರಾಜ್ಯ ಒಕ್ಟೊಬರ್ ೧೯೮೭) ‘ಬಾಲೆ ಅಭಿಮನ್ಯು’ ತುಳು ಯಕ್ಷಗಾನ ಪ್ರಸಂಗವನ್ನು ಅನಂತರಾಮ ಬಂಗಾಡಿ ಬರೆದಿದ್ದಾರೆ. (ತುಳುರಾಜ್ಯ ೧೯೮೭ ಫೆಬ್ರವರಿ). ಬಂಗಾಡಿಯವರು ಜನಪದ ಕತೆಗಳನ್ನು ಸಂಗ್ರಹಿಸಿ ಈ ಪತ್ರಿಕೆಗಳಲ್ಲಿ ಈಗಲೂ ಬರೆಯುತ್ತಿದ್ದಾರೆ. ಸು.ರಂ. ಎಕ್ಕುಂಡಿ ಅವರ ಭಕ್ತ ಸುಧಾಮನ ಕಥನ ಕವನವನ್ನು ಗಮಿ ವಿಶ್ವನಾಥ ಶೆಟ್ಟಿ ವಿಟ್ಲ ಅವರು ಅನುವಾದಿಸಿ ಕೊಟ್ಟಿದ್ದಾರೆ (ತುಳು ರಾಜ್ಯ ೧೯೮೯ ಡಿಸೆಂಬರ್). ದನಿಯರ ಸತ್ಯನಾರಾಯಣ ಕತೆಯ ಪ್ರೇರಣೆಯಿಂದ ಎಸ್. ಪಿ. ಮಂಚಿ ‘ಕೈಕ್ ಬತ್ತಿನ ಬಾಯಿಕ್ ಬತ್ತಿಜಿ’ ಎನ್ನುವ ಕಿರು ನಾಟಕವನ್ನು ಬರೆದಿದ್ದಾರೆ. (ತುಳು ರಾಜ್ಯ ೧೯೯೯, ಜೂನ್). ಭೌತವಿಜ್ಞಾನಿ ಆಲ್ಬರ್ಟ್‌ಐನ್‌ಸ್ಟೈನ್‌ರಂತಹ ವಿಜ್ಞಾನಿಗಳನ್ನು ಎಫ್.ಎಂ. ಕ್ರಾಸ್ತಾ ಪರಿಚಯ ಮಾಡಿಕೊಡುತ್ತಿದ್ದರು (ತುಳುರಾಜ್ಯ ೧೯೯೯, ಏಪ್ರಿಲ್), ಮೀನ ಕುಮಾರಿ ಪುತ್ತೂರು ‘ಒಂದೇ ರುಸೈಟ್ ಮದ್ಮೆ’ ತುಳುಸಿರಿ (ತುಳುರಾಜ್ಯ ೧೯೭೧ ಏಪ್ರಿಲ್), ಅಮೃತ ಸೋಮೇಶ್ವರ ತುಳು ಕೂಟದ ವಿಶೇಷ ಸಂಚಿಕೆ ಬಿಸುವಿಭವ (೧೯೮೮) ಸಂಚಿಕೆಯಲ್ಲಿ ಈ ‘ಓಲು ಪುಟ್ಟಿನೆಂಬೆ ಚನಿಲಣ್ಣ’ (ಚನಿಲಣ್ಣ, ಮರಿಯಣ್ಣ, ಪಿಲಿಯಣ್ಣೆ’ ಎನ್ನುವ ಮಕ್ಕಳ ಕವಿತೆಯನ್ನು ಸಂಗ್ರಹಿಸಿಕೊಟ್ಟಿದ್ದಾರೆ).

ಗಣನಾಥ ಶೆಟ್ಟಿ ಎಕ್ಕಾರು ಸಂಪಾದಿಸುತ್ತಿದ್ದ ‘ರಾಶಿ’ ತುಳು ಜಾನಪದ ಪತ್ರಿಕೆಯಲ್ಲಿ ತುಳು ಜಾನಪದದ ಅನೇಕ ಶಿಶುಪ್ರಾಸ, ಮಕ್ಕಳ ಹಾಡು, ಕತೆಗಳು, ಗಾದೆ, ಒಗಟುಗಳು ಬಹುಸಂಖ್ಯೆಯಲ್ಲಿ ಪ್ರಕಟವಾಗುತ್ತಿದ್ದವು. ಪೆಚ್ಚ ಮೋಂಟೆ, ಯೇಪ ಬರೊಡು, ಗುರ್ಬಕ್ಕಿನ ಕತೆ, ಮಂಗನ ಕತೆ, ಕುದ್ಕೆಲ ಮಂಗಕ್ಕಲ, ನರಿ ಮತ್ತು ಕೊಕ್ಕರೆ, ಬಗ್ಗ ಬೊಕ್ಕ ಪಾಪೆ, ತಾಂಟೆ, ಮೋಂಟೆ ಬೊಕ್ಕ ತೌತೆ, ಪುಂಡದೆ ತಿಕ್ಕಿನ ಕತೆ ಇಂತಹ ಕತೆಗಳು ಪ್ರಕಟವಾಗುತ್ತಿದ್ದವು. ಅದೇ ರೀತಿ ಜಾನಪದ ಕಲಾವಿದೆ ರಾಮಕ್ಕ ಮುಗೇರ್ತಿ ಹಾಡಿರುವ ‘ಸಾರಿ ನಾಯ್ಕೆದಿ’ ಇಂತಹ ಮಕ್ಕಳು ಸಾಮೂಹಿಕವಾಗಿ ಹಾಡಬಹುದಾದ ಹಾಡುಗಳು ಪ್ರಕಟವಾಗುತ್ತಿದ್ದವು.

ಸಾರಿ ಸಾರಿ ನಾಯ್ಕೆದಿ
ಸಾರಿಲವೆ ಲಪ್ಪಾದೆ
ಸಾರಿನಕ್‌ಲ್‌ನ ಪಡ್ಪುಡು
ಪುಚ್ಚೆಲು ಬೂರ್ದು ತೈದ

‘ಪುಚ್ಚೆಲು’ ಬದಲಿಗೆ ‘ಕಕ್ಕೆಲು’ ಇತ್ಯಾದಿ ಹೆಸರುಗಳನ್ನು ಬದಲಾಯಿಸುತ್ತಾ ಈ ಹಾಡು ಸಾಗುತ್ತದೆ. ಮೊದಲಾಗಿ ಹಿರಿಯರೊಬ್ಬರು ಹಾಡಿನ ಪ್ರತಿ ಸಾಲನ್ನು ಹಾಡುತ್ತಾರೆ. ಅದನ್ನು ಮಕ್ಕಳು ಅನುಸರಿಸುತ್ತಾರೆ. ಮನೋರಂಜನೆಯೊಂದಿಗೆ ವಿವಿಧ ಪ್ರಾಣಿಗಳ ಹೆಸರುಗಳನ್ನು ಪರಿಚಯಿಸುವುದೇ ಈ ಹಾಡಿನ ಉದ್ದೇಶ. ಈ ಹಾಡನ್ನು ಬೇಕಾದಂತೆ ವಿಸ್ತರಿಸಬಹುದು. ಕೆಲವು ಶಿಶುಪ್ರಾಸಗಳು:

೧. ‘ಕತೆ ಪನ್ ಕನ್ನಡ
ದಾನೆ ಪನ್ಕ ದೇವೆರೆ?
ಕರಿಯ ನಾಯಿ ಸಂಕಲೆ
ಬೊಲ್ಯ ನಾಯಿ ಗುಂಡಲ
ಪಾರ್ ಪತ್ತಿ ಚಲ್ಲಣ
ಅಣ್ಣನಕ್‌ಲೆ ಓಡೊಡು
ಅಜಿ ಮೂಜಿ ಮಲ್ಲಿಗೆ
ಮಲ್ಲಿಗೆದ ಮಿತ್ತ್ ಮಂಟಪ
ಮಂಟಪದುಳಯಿ ಸೊಳೆ
ಸೂಳೆ ಕೈ ಸುಣ್ಣ
ಎನ್ನ ಕೈ ಬಣ್ಣ
ರಗ ರಗ ರಂಭೆ
ತೊಗರಿನ ಬೇಳೆ
ಮುತ್ತಿನ ಗರಡೆ
ಇಷ್ಟರ ಬರೊಲಿ’

(ಹೇಳಿದವರು: ಶಶಿಧರ ಕೆ. ಶೆಟ್ಟಿ. ಸಂಗ್ರಹ: ಜಗದೀಶ ಶೆಟ್ಟಿ ಬಜಪೆ)

೨. ‘ಮುಂಗುಳಿ ಮುಂಗುಳಿ ಓಡೆ ಪೋಪ
ಯಾನ್ ಗುಡ್ಡೆಗ್ ಪೋಪೆ’

ಹೀಗೆ ಪ್ರಶ್ನೆ ಉತ್ತರ ಮುಂದುವರಿಯುವುದು (ತುಕಾರಾಮ್ ಎಕ್ಕಾರು, ‘ರಾಶಿ’, ಏಪ್ರಿಲ್ ೧೯೯೨)

೩. ‘ತೈಯ ತೈಯ ತೈಯ
ತೈಯ ನಲಿಪುಡು ಬಾಲೆ
ಸೂವರ ಬರೊಡು ಮಂದಿ
ಗಟ್ಟ ಗಣಗಣ’ (ಹೀಗೆ ನಾಲ್ಕು ಬಾರಿ)

(ಸ್ವರ್ಣಲತಾ, ‘ರಾಶಿ’, ಏಪ್ರಿಲ್ ೧೯೯೨)

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ‘ಮದಿಪು’ ಪತ್ರಿಕೆಯ ಸಂಚಿಕೆಗಳಲ್ಲಿ ಮಕ್ಕಳಿಗಾಗಿ ಬರೆದಿರುವ ಕತೆಗಳಿವೆ. ಕವನಗಳಿವೆ. ಎನ್.ಕೆ. ತಿಂಗಳಾಯ (೧೯೯೬ ಪು. ೧೩-೧೭) ‘ಪ್ಪೆ, ಮೊಕುಲು ನಿನ ಬಾಲೆ ಅತ್ತಾ?’ ಎನ್ನುವ ಕತೆಯಲ್ಲಿ ಜಗತ್ತಿನ ಮಕ್ಕಳ ಬಗೆಗೆ ಅವರ ಕುತೂಹಲ, ಹಂಬಲ, ಅವರ ಮೇಲಿನ ದೌರ್ಜನ್ಯಗಳ ಬಗೆಗೆ ಬರೆದಿದ್ದಾರೆ. ಎಸ್. ಪಿ. ಮಂಚಿ (೧೯೯೬ ಪು. ೨೮-೮೨) ಮೊಮ್ಮಕ್ಕಳು ಹೇಳುವ ‘ಅಜ್ಜಿಗೊಂಜಿ ಕತೆ’ ಬರೆದಿದ್ದಾರೆ. ಪ್ರಭಾಕರ ಶಿಶಿಲ (೧೯೯೬, ಪು. ೧೯-೨೧) ‘ರಾವು ಕೊರುಂಗು’ ಕತೆಯಲ್ಲಿ ಪುಟ್ಟಣ್ಣ ಎನ್ನುವ ಹುಡುಗನ ಹಂಬಲವನ್ನು ಅವನಿಗೆ ಕಾಳ ಬೊಳ್ಳ ಎತ್ತುಗಳಲ್ಲಿದ್ದ ಪ್ರೀತಿಯನ್ನು ಪ್ರಕಟಿಸುವ ಅಪೇಕ್ಷೆಯನ್ನು ಚಿತ್ರಿಸಿದ್ದಾರೆ. ಅ. ವಿಠಲ ಕಬಕ (೧೯೯೮, ಪು ೩೭-೪೦( ಅವರ ‘ನಾಗಮಣಿ ಉಂಗಿಲ’ ಜನಪದ ಕಥೆಯೊಂದರ ಆಧಾರದಲ್ಲಿ ಬರೆದಿರುವ ಕತೆ. ಗೋಪಾಲ ಬಿ. ಶೆಟ್ಟಿ (೧೯೯೮ ಪು ೩೦-೩೬) ಯವರದು ‘ಎನ್ನ ಕಿಟ್ಟು ತಿದಮೇರ್’ ಕತೆ ಪ. ರಾಮಕೃಷ್ಣ ಶಾಸ್ತ್ರಿ (೧೯೯೮ ಪು. ೩೭-೪೧) ‘ಅಪ್ಪೆ ಮಗಳೆ ನಡುಟು’, ಯಜ್ಞಾವತಿ ಕೇಶವ ಕಂಗೆನ್ (೧೯೯೮, ಪು, ೨೭-೨೮) ‘ಅಪ್ಪದ ಬರ್ಸ ಬೆಲ್ಲದ ಬರ್ಸ’, ಅಶ್ವಿತಾ ಕುಂಜತ್ತಬೈಲು (೧೯೯೯, ೪೪) ‘ಮಂತ್ರದ ಕೋಲು’, ಭಾಸ್ಕರ ನೆಲ್ಲಿತೀರ್ಥ (೧೯೯೯ ಪು. ೩೫-೪೧) ‘ಅಬ್ಬರ ತಾಳ’ ಮೊದಲಾದ ಕತೆಗಳಿವೆ.

ಸುನೀತಾ ಶೆಟ್ಟಿ (೧೯೯೬, ಪು.೩೯) ‘ಸವಾಲು’ ಹಾಡಿನಲ್ಲಿ ‘ಪನ್ಲೆ ಉಂದು ಎಂಚಿನವು’ ಎನ್ನುತ್ತಾ ಒಗಟು ರೂಪದ ಕವನ ಬರೆದಿದ್ದಾರೆ. ಸ.ದಯಾ (೧೯೯೬, ಪು. ೪೨-೪೩) ಪೊನ್ನಕ್ಕ ಮಕ್ಕಳನ್ನು ಕರೆದು ಕುಳ್ಳಿರಿಸಿ ಕತೆ ಹೇಳುತ್ತಿದ್ದ ಆಕೆಯ ಬದುಕನ್ನು ಕವನದಲ್ಲಿ ಚಿತ್ರಿಸಿದ್ದಾರೆ. ದಾ.ನ. ಉಮಾಣ್ಣ ಕೊಕ್ಕಪುಣಿ (೧೯೯೨, ಪು. ೩೭) ‘ಏರೆಗ್ ಏರ್?’ ಕವಿತೆಯಲ್ಲಿ ಕಾಗೆ, ಕೋಳಿಗಳ ಬದುಕಿನ ಚಿತ್ರಣ ನೀಡಿದ್ದಾರೆ. ಪ್ರಮೋದ (೧೯೯೮, ಪು. ೫೩-೫೪) ‘ಬಂಜಿಡ ಬಾಲೆ ಗೊಬ್ಬುಂಡು’, ಸುನೀತಾ ಶೆಟ್ಟಿ (೧೯೯೮, ಪು ೬೫) ‘ಪೊರ್ಲು ಪೊಲಿಕೆ’, ಸಾತ್ವಿಕಾ ಶೆಟ್ಟಿ (೧೯೯೯, ಪು. ೮೭) ‘ಬಿನ್ನೆರ್ ಬತ್ತೆರ್’ ಕವಿತೆಗಳನ್ನು ಬರೆದಿದ್ದಾರೆ.

ಬಿ. ದೂಮಪ್ಪ ‘ಕೋಟಿ ಚೆನ್ನಯ’, ‘ಅಗೋಳಿ ಮಂಜಣ್ಣ’ ತುಳು ಕೃತಿಗಳನ್ನು ಪದ್ಯದಲ್ಲಿ ಬರೆದಿದ್ದಾರೆ. ಅವರು ತುಳು ಗಾದೆಗಳನ್ನು ಪೋಣಿಸಿ ‘ಮಾದಿರನ ಗಾದೆಗಳು’ ಎನ್ನುವ ವಿಶಿಷ್ಟ ರೀತಿಯಲ್ಲಿ ಕಾವ್ಯ ಹೆಣೆದಿದ್ದಾರೆ. ವೆಂಕಟರಾಜ ಪುಣಿಂಚತ್ತಾಯ ಅವರ ‘ಆಲಡೆ’ (೧೯೮೦) ಎನ್ನುವ ಕವನ ಸಂಕಲನದಲ್ಲಿ ‘ಜೋಕುಲೆಂಕುಲು ಜೋಕುಲು, ತುಳುವ ಮಣ್ಣ್‌ದ ಜೋಕುಲು’ ತುಳುವ ಮಣ್ಣ್ ದ ಜೋಕುಲು’ (ಮಕ್ಕಳು ನಾವು ಮಕ್ಕಳು ತುಳು ಮಣ್ಣಿನ ಮಕ್ಕಳು) ಎನ್ನುವ ಮಕ್ಕಳ ಹಾಡು ಗಮನಕ್ಕೆ ಬರುತ್ತದೆ. ಕನರಾಡಿ ವಾದಿರಾಜ ಭಟ್ಟರ ‘ಜೋಕ್ಲೆ ಪದೊಕುಲು’ (ಮಕ್ಕಳ ಹಾಡುಗಳು) ತುಳು ಮಕ್ಕಳ ಸಾಹಿತ್ಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಇದರಲ್ಲಿ ‘ಅಜ್ಜೆ-ಅಜ್ಜಿ!’ (ಅಜ್ಜ-ಅಜ್ಜಿ), ‘ಬಾಲೆ- ತೆಮ್ಮ’ (ಮಗು-ಕೆಮ್ಮು), ‘ಪುಚ್ಚೆ’ (ಬೆಕ್ಕು), ‘ಚೆಂಡಾಟ’ (ಚೆಂಡಾಟ) ಮೊದಲಾದ ಉತ್ತಮ ಮಟ್ಟದ ಮಕ್ಕಳ ಪದ್ಯಗಳನ್ನು ಕೊಟ್ಟಿದ್ದಾರೆ.

‘ಕೈಂಕ್ ಕೈಂಕ್ ತೆಮ್ಮಾ (ಕೈಂಕ್ ಕೈಂಕ್ ಕೆಮ್ಮು)
ದಾನೆ ಮಲ್ಪುನಮ್ಮ’ (ಏನು ಮಾಡಲಮ್ಮ?)
‘ಮಿಯಾಂ ಮಿಯಾಂ ಪುಚ್ಚೆ? (ಮಿಯಾಂ ಮಿಯಾಂ ಬೆಕ್ಕೆ?)
ನಿಕ್ಕ್ ದಾಯೆ ಮಂಡೆ ಬೆಚ್ಚ? (ನಿನಗೇಕೆ ತಲೆ ಬಿಸಿ?)
ಹೀಗೆ ‘ಜೋಕುಲೆ ಪದಕುಲು’ ಸಾಗುತ್ತವೆ.