ತುಳುನಾಡಿದ ಪ್ರಮುಖ ಭೂತಗಳು ಮತ್ತು ಸಾಂಸ್ಕೃತಿಕ ವೀರರ ಕುರಿತ ಮಹಾಕಾವ್ಯಗಳ ಸಂಗ್ರಹ ಒಂದು ಪರಂಪರೆಯ ರೂಪದಲ್ಲಿ ನಡೆಯುತ್ತಾ ಬಂದಿದೆ ಎನ್ನಬಹುದು. ಮಹಾಕಾವ್ಯಗಳ ಪ್ರಾತಿನಿಧಿಕ ಸಂಕಲನ, ಒಂದು ಮಹಾಕಾವ್ಯದ ಹಲವು ಪಠ್ಯಗಳ ಸಂಕಲನ, ಒಬ್ಬನೇ ಹಾಡುಗಾರನಿಂದ ಸಂಗ್ರಹಿಸಿದ ಮಹಾಕಾವ್ಯಗಳ ಸಂಪುಟ, ಪ್ರಾದೇಶಿಕ ಪ್ರಾತಿನಿಧ್ಯವುಳ್ಳ ಮಹಾಕಾವ್ಯಗಳ ಸಂಪುಟ- ಹೀಗೆ ತುಳು ಮಹಾಕಾವ್ಯಗಳ ಸಂಪುಟಗಳನ್ನು ಪ್ರಕಟಪಡಿಸುವ ಅವಕಾಶಗಳು ಸಾಕಷ್ಟಿವೆ.

ಮಹಾಕಾವ್ಯಗಳಲ್ಲಿ ಸಿಗುವ ಭೌಗೋಳಿಕ ಸಾಮಾಜಿಕ ಮತ್ತು ರಾಜಕೀಯ ವಿವರಗಳನ್ನು ಇತಿಹಾಸ ರಚನೆಗೆ ಆಕರವಾಗಿ ಬಳಸಿಕೊಂಡಿರುವ ರೀತಿ ಮುಖ್ಯ ಸಂಗತಿಯಾಗಿದೆ. ತುಳುನಾಡಿನ ಇತಿಹಾಸಕ್ಕೆ ಸಂಬಂಧಪಟ್ಟಂತೆ ಲಿಖಿತ ದಾಖಲೆಗಳು ಕಡಿಮೆ ಪ್ರಮಾಣದಲ್ಲಿ ಇರುವ ಸಂದರ್ಭದಲ್ಲಿ ಮಹಾಕಾವ್ಯಗಳನ್ನು ಆಕರಗಳನ್ನಾಗಿ ಬಳಸಿರುವ ಪ್ರಯತ್ನವನ್ನು ಗಮನಿಸಬಹುದು, ಕನರಾಡಿ ವಾದಿರಾಜ ಭಟ್ಟರು ಪಾಡ್ದನಗಳು (ಅಧ್ಯಯನಾತ್ಮಕ ಸಂಗ್ರಹ) ಕೃತಿಯಲ್ಲಿ ಮಹಾಕಾವ್ಯಗಳ ಸ್ವರೂಪ ಮತ್ತು ಆಶಯಗಳ ಕುರಿತಂತೆ ತಾತ್ತ್ವಿಕ ವಿವೇಚನೆಯನ್ನು ನಡೆಸಿದ್ದಾರೆ. ವಿವೇಕ ರೈಯವರ ತುಳುವ ಅಧ್ಯಯನ: ಕೆಲವು ವಿಚಾರಗಳು (೧೯೮೦) ಅನ್ವಯಿಕ ಜಾನಪದ (೧೯೮೫)- ಸಂಶೋಧನ ಲೇಖನಗಳ ಸಂಕಲನಗಳಾದ ಈ ಎರಡು ಕೃತಿಗಳು, ತುಳು ಜಾನಪದ ಅಧ್ಯಯನದ ವೈಜ್ಞಾನಿಕ ನೆಲೆಗಟ್ಟನ್ನು ಪ್ರಸ್ತುತಪಡಿಸುವ ಕೃತಿಗಳಾಗಿವೆ. ಮಹಾಕಾವ್ಯಗಳ ವಿವಿಧ ಪಠ್ಯಗಳ ತೌಲನಿಕ ಹಾಗೂ ಅನ್ವಯಿಕ ಅಧ್ಯಯನದ ಹೊಸ ಸಾಧ್ಯತೆಗಳನ್ನೂ ಅವರ ಲೇಖನಗಳಲ್ಲಿ ಕಾಣಬಹುದು. ಮಹಾಕಾವ್ಯಗಳನ್ನು ವೈಭವೀಕರಿಸಿ ನೋಡದೆ ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಮನೋಧರ್ಮವನ್ನು ಅಲ್ಲಿ ಕಾಣುತ್ತೇವೆ. ಅಮೃತ ಸೋಮೇಶ್ವರರ ತುಳು ಬದುಕು (೧೯೮೪), ಅವಿಲು (೧೯೭೮). ಈ ಕೃತಿಗಳಲ್ಲಿ ತುಳು ಮಹಾಕಾವ್ಯಗಳ ಕೆಲವು ಮುಖಗಳನ್ನು ವಿವರಣಾತ್ಮಕವಾಗಿ ಪ್ರಸ್ತಾವಿಸಿದ್ದಾರೆ. ಮಹಾಕಾವ್ಯಗಳ ಶೈಲಿ, ವರ್ಣನೆ, ಸೊಗಸುಗಳನ್ನು ಸೋದಾಹರಣವಾಗಿ ವಿವರಿಸುವ ಅಮೃತರ ಲೇಖನಗಳು ಒಳಗೊಳ್ಳುವ ಮಾಹಿತಿಗಳಿಗೆ ಎಲ್ಲ ಕಾಲದಲ್ಲಿಯೂ ಬೇಡಿಕೆ ಇರುತ್ತದೆ. ಎ. ವಿ. ನಾವಡರ ವಿವಕ್ಷೆ (೧೯೮೪), ಜಾನಪದ ಸಮಾಲೋಚನ (೧೯೯೩) ಅಧ್ಯಯನಾತ್ಮಕ ಲೇಖನಗಳ ಈ ಸಂಕಲನಗಳು ತುಳು ಮಹಾಕಾವ್ಯಗಳ ಅಧ್ಯಯನ ಸಂದರ್ಭದಲ್ಲಿ ಬಹಳ ಮುಖ್ಯವಾಗಿವೆ. ಜಾನಪದ ಅಧ್ಯಯನದ ಆಧುನಿಕ ಪ್ರವೃತ್ತಿಗಳನ್ನು ಬಲ್ಲ ನಾವಡರು ಮಹಾಕಾವ್ಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ವಿವೇಚಿಸಬಲ್ಲವರಾಗಿದ್ದಾರೆ. ಲಕ್ಷ್ಮಿನಾರಾಯಣ ಆಳ್ವರ (ಸಂ) ಮಂಗಳ ತಿಮರು (೧೯೮೭), ಬನ್ನಂಜೆ ಬಾವು ಅಮೀನ್ ಮತ್ತು ಮೋಹನ್ ಕೋಟ್ಯಾನ್ ಬರೆದಿರುವ ತುಳುನಾಡು ಸಾಂಸ್ಕೃತಿಕ ಅಧ್ಯಯನ (೧೯೯೦). ಮೊದಲಾದ ಗ್ರಂಥಗಳಲ್ಲಿ ತುಳು ಮಹಾಕಾವ್ಯಗಳ ವಿವಿಧ ಬಗೆಯ ಅಧ್ಯಯನಗಳನ್ನು ಕಾಣಬಹುದು.

ತುಳು ಮಹಾಕಾವ್ಯಗಳ ಪರಿಚಯ, ಮಾಹಿತಿ, ವೈವಿಧ್ಯಗಳನ್ನು ಮುಖ್ಯವಾಗಿ ಗುಣಗ್ರಹಣಾತ್ಮಕವಾಗಿ ನೋಡಿದ ಬರಹಗಳಾಗಿ ಮೇಲಿನ ಕೆಲವು ಕೃತಿಗಳನ್ನು ಪರಿಗಣಿಸಬಹುದಾಗಿದೆ. ಮಾಹಿತಿಗಳ ಸಂಗ್ರಹದ ಜೊತೆಗೆ ಅವುಗಳ ವಿಶ್ಲೇಷಣ ಕಾರ್ಯವು ಜೊತೆ ಜೊತೆಯಾಗಿ ನಡೆದಿರುವುದು ಸ್ಪಷ್ಟವಾಗಿದೆ. ಕೆಲವರು ಸಂಗ್ರಹ ಮತ್ತು ವಿವರಣೆ ನೀಡುವುದರಲ್ಲಿ ತೊಡಗಿದರೆ ಅದೇ ವೇಳೆಗೆ ಇತರರು ವಿಶ್ಲೇಷಣೆ ಮಾಹಿತಿಗಳನ್ನು ಬಳಸಿಕೊಂಡಿದ್ದಾರೆ.

ಬಿ. ಎ. ವಿವೇಕ ರೈ ಅವರ ‘ತುಳು ಜನಪದ ಸಾಹಿತ್ಯ’ (೧೯೮೫) ಕೆ. ಚಿನ್ನಪ್ಪ ಗೌಡ ಅವರ ಭೂತಾರಾಧನೆ- ಜಾನಪದೀಯ ಅಧ್ಯಯನ (೧೯೯೦), ಕೆ. ಅಭಯ್ ಕುಮಾರ್ ಅವರ ಮುಗೇರರು- ಜನಾಂಗ ಜಾನಪದ ಅಧ್ಯಯನ (೧೯೯೭), ವಾಮನ ನಂದಾವರ ಅವರ ಕೋಟಿ ಚೆನ್ನಯ- ಒಂದು ಜಾನಪದ ಅಧ್ಯಯನ, ಕೆ. ಅಶೋಕ ಆಳ್ವ ಅವರ ತುಳುನಾಡಿದನ ಪ್ರಾಣಿ ಜಾನಪದ (೧೯೯೪, ಅಪ್ರಕಟಿತ ಪಿಎಚ್ ಡಿ ಗ್ರಂಥ) ಪಿ. ರಾಮಕೃಷ್ಣ ಆಚಾರ್ ಅವರ ನಲಿಕೆ ಜನಾಂಗದ ಕುಣಿತಗಳು- ಒಂದು ಅಧ್ಯಯನ(೧೯೯೫, ಅಪ್ರಕಟಿತ ಪಿಎಚ್ ಡಿ ಗ್ರಂಥ) – ಈ ಸಂಶೋಧನಾತ್ಮಕ ಮಹಾಪ್ರಬಂಧಗಳು ತುಳು ಜನಪದ ಮಹಾಕಾವ್ಯಗಳ ಅಧ್ಯಯನದ ದೃಷ್ಟಿಯಿಂದ ಇವುಗಳ ವೈಶಿಷ್ಟ್ಯಗಳನ್ನು ಮಾತ್ರ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ. ವಿವೇಕ ರೈ ಅವರ ತುಳು ಜನಪದ ಸಾಹಿತ್ಯ ಗ್ರಂಥದ ‘ಪಾಡ್ದನಗಳು’ ಎಂಬ ಅಧ್ಯಾಯದಲ್ಲಿ ಪ್ರಮುಖವಾಗಿ ಮೌಖಿಕ ಮಹಾಕಾವ್ಯಗಳ ಚರ್ಚೆಯಿದೆ. ಪಾಡ್ದನಗಳ ಸ್ವರೂಪ, ಪಾಡ್ದನಗಳ ವರ್ಗೀಕರಣ, ಪಾಡ್ದನಗಳಲ್ಲಿ ವ್ಯಕ್ತವಾಗುವ ತುಳು ನಾಡಿನ ಸಂಸ್ಕೃತಿ, ಪಾಡ್ದನಗಳ ಕಾಲ- ಇವುಗಳಿಗೆ ಸಂಬಂಧಪಟ್ಟ ತಾತ್ತ್ವಿಕವೂ ಅಧಿಕೃತವೂ ಆದ ವಿಶ್ಲೇಷಣೆ ಈ ಆಧ್ಯಾಯದಲ್ಲಿದೆ. ಈ ಅಧ್ಯಾಯವು ಸುಮಾರು ೨೧೦ ಪುಟಗಳಷ್ಟು ದೀರ್ಘವಾಗಿದೆ. ಮೂವತ್ತೊಂಬತ್ತು ಪಾಡ್ದನಗಳ ವಿವೇಚನೆಯನ್ನು ಬಹಳ ವ್ಯವಸ್ಥಿತವಾಗಿ ವಿವೇಕ ರೈಯವರು ಮಾಡಿದ್ದಾರೆ. ತುಳುವಿನ ಮಹತ್ತ್ವದ ಮೌಖಿಕ ಕಾವ್ಯಗಳಾಗಿರುವ ಪಾಡ್ದನಗಳ ಅಧ್ಯಯನಪೂರ್ಣ ಆಕರ ಗ್ರಂಥ ಇದಾಗಿದೆ.

ತುಳುವಿನ ಮೌಖಿಕ ಮಹಾಕಾವ್ಯಗಳ ಕುರಿತಂತೆ ಆಮೇಲೆ ನಡೆದ ಎಲ್ಲ ಅಧ್ಯಯನಗಳಿಗೆ ಸಮರ್ಥವಾದ ಅಡಿಪಾಯವನ್ನು ವಿವೇಕ ರೈ ಅವರು ಹಾಕಿಕೊಟ್ಟರು. ಇವರು ನಡೆಸಿದ ಅಧ್ಯಯನದ ಮುಂದುವರಿಕೆಯಾಗಿ ಇತರ ಸಂಶೋಧನಾತ್ಮಕ ಅಧ್ಯಯನಗಳು ಕಾಣಿಸಿಕೊಂಡಿವೆ ಎಂದರೂ ತಪ್ಪಲ್ಲ. ತುಳು ಮಹಾಕಾವ್ಯಗಳ ಅಧ್ಯಯನಕ್ಕೆ ಸಂಬಂಧಪಟ್ಟ ಖಚಿತವಾದ ಮಾರ್ಗದರ್ಶನವನ್ನು ಅವರ ಗ್ರಂಥ ನೀಡಿದೆ. ಪಾಡ್ದನಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವ ಶಾಸ್ತ್ರಿಯ ವಿಶ್ಲೇಷಣೆಯನ್ನು ಮುಖ್ಯವಾಗಿ ಪಠ್ಯಗಳ ಆಧಾರದ ಮೇಲೆ ವಿವೇಕ ರೈ ನಡೆಸಿದ್ದಾರೆ. ಈ ಪಾಡ್ದನಗಳು ಹೊಂದಿರುವ ಆರಾಧನಾತ್ಮಕ ರಂಗಭೂಮಿ ಸಂಬಂಧ, ಈ ಪಾಡ್ದನಗಳ ಜಾನಾಂಗಿಕ ಸಂಬಂಧ, ಇವುಗಳ ವಿಷಯನಿಷ್ಠ ಅಧ್ಯಯನ – ಈ ರೀತಿಯಲ್ಲಿ ಪಾಡ್ದನ ಸಾಹಿತ್ಯದ ವಿವಿಧ ಆಯಾಮಗಳನ್ನು ಬೇರೆ ಬೇರೆ ಶಿಸ್ತುಗಳ ತಿಳುವಳಿಕೆಯನ್ನು ಇಟ್ಟುಕೊಂಡು ಅಧ್ಯಯನ ಮಾಡಿದ್ದು ಆ ಮೇಲಿನ ಬೆಳವಣಿಗೆಯಾಗಿದೆ.

ಧಾರ್ಮಿಕ ರಂಗಭೂಮಿಯಾಗಿರುವ ಭೂತಾರಾಧನೆ ಮತ್ತು ಪಾಡ್ದನಗಳ ಬಹುಮುಖ ಸಂಬಂಧಗಳನ್ನು ಭೂತಾರಾಧನೆ – ಜಾನಪದೀಯ ಅಧ್ಯಯನ ಗ್ರಂಥದಲ್ಲಿ ಚರ್ಚಿಸಲಾಗಿದೆ. ಮಹಾಕಾವ್ಯಗಳ ದೃಷ್ಟಿಯಿಂದ ಈ ಗ್ರಂಥದ ‘ಭೂತಾರಾಧನೆಯ ಸಾಂಸ್ಕೃತಿಕ ಸ್ವರೂಪ’, ‘ಭೂತಾರಾಧನೆ ಮತ್ತು ಕಲೆಗಳು’, ಭೂತಾರಾಧನೆ ಮತ್ತು ಪಾಡ್ದನಗಳು : ಸಾಂಸ್ಕೃತಿಕ ಸಂಬಂಧ’ ಎಂಬ ಈ ಮೂರು ಅಧ್ಯಾಯಗಳು ಮುಖ್ಯವಾಗಿವೆ. ತುಳು ಮೌಖಿಕ ಪರಂಪರೆಯ ಮಹಾಕಾವ್ಯಗಳು ರಂಗಭೂಮಿ ಕ್ರಿಯೆಯಾಗಿ ಚಲನಶೀಲಗೊಳ್ಳುವ ಬಗೆಯನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ. ತುಳು ಮಹಾಕಾವ್ಯಗಳ ಆಚರಣಾತ್ಮಕ ಸಂಬಂಧವನ್ನು ವಿವೇಚಿಸುವ ಕೆ. ಚಿನ್ನಪ್ಪಗೌಡರ ಈ ಕೃತಿಗೆ ಪಾಡ್ದನಗಳ ಅಧ್ಯಯನದ ಹಿನ್ನೆಲೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ.

ತುಳು ಜನಪದ ಮಹಾಕಾವ್ಯಗಳು ಪಡೆದುಕೊಂಡಿರುವ ಜನಾಂಗ ಸಂಬಂಧದ ಹಿನ್ನೆಲೆಯಲ್ಲಿ ಮುಗೇರರು- ಜನಾಂಗ ಜಾನಪದ ಅಧ್ಯಯನ ಮತ್ತು ನಲಿಕೆ ಜನಾಂಗದ ಕುಣಿತಗಳು- ಒಂದು ಅಧ್ಯಯನ ಈ ಎರಡು ಗ್ರಂಥಗಳಿಗೆ ವಿಶೇಷ ಮಹತ್ತ್ವವಿದೆ. ಮಹಾಕಾವ್ಯಗಳ ರಚನೆ, ಬಳಕೆ ಮತ್ತು ಪ್ರಸಾರ ಕಾರ್ಯಗಳಿಗೆ ನಿರ್ದಿಷ್ಟ ಜನಾಂಗಗಳ ಲೋಕದೃಷ್ಟಿಯು ಕಾರಣವಾಗುವುದನ್ನು ಈ ಗ್ರಂಥಗಳು ವಿಶ್ಲೇಷಿಸಿವೆ. ತುಳುನಾಡಿನ ಮುಗೇರು ಮತ್ತು ನಲಿಕೆ ಜನಾಂಗದ ಬದುಕಿನ ಅನನ್ಯ ಅಂಶಗಳನ್ನು ಮಹಾಕಾವ್ಯಗಳು ಮೈಗೂಡಿಸಿಕೊಂಡಿರುವುದನ್ನು ತಿಳಿಸುವ ಈ ಗ್ರಂಥಗಳು ಮಹಾಕಾವ್ಯಗಳ ಅಧ್ಯಯನದ ಹೊಸ ನೆಲೆಯೊಂದನ್ನು ಅನಾವರಣ ಮಾಡಿವೆ.

ವಿವೇಕ ರೈ ಅವರು ನಡೆಸಿದ ಕೋಟಿ ಚೆನ್ನಯ ಪಾಡ್ದನದ ಚರ್ಚೆ, ಕೆ. ಚಿನ್ನಪ್ಪ ಗೌಡರು ನಡೆಸಿದ ಕೋಟಿ ಚೆನ್ನಯ ಸಾಂಸ್ಕೃತಿಕ ವೀರರ ಆರಾಧನೆಯ ಅಧ್ಯಯನ- ಇವರೆಡರ ಮುಂದುವರಿಕೆ ರೂಪದ ಅಧ್ಯಯನವಾಗಿ ವಾಮನ ನಂದಾವರ ಅವರ ಕೋಟಿ ಚೆನ್ನಯ- ಒಂದು ಜಾನಪದೀಯ ಅಧ್ಯಯನ ಎಂಬ ಸಂಶೋಧನ ಕೃತಿಯನ್ನು ಪರಿಭಾವಿಸಬಹುದು. ತುಳುನಾಡಿನ ಸಾಂಸ್ಕೃತಿಕ ವೀರರಾದ ಕೋಟಿ ಚೆನ್ನಯರನ್ನು ಕೇಂದ್ರವನ್ನಾಗಿಟ್ಟುಕೊಂಡು ಅವರಿಗೆ ಸಂಬಂಧಪಟ್ಟ ಮಹಾಕಾವ್ಯವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿದ ವಿಧಾನಕ್ಕೆ ಈ ಗ್ರಂಥವು ಒಂದು ಉದಾಹರಣೆಯಾಗಿದೆ. ಮಹಾಕಾವ್ಯವೊಂದರ ಪಠ್ಯಗಳು ಮತ್ತು ಪ್ರದರ್ಶನಗಳನ್ನು ಅಧ್ಯಯನ ಮಾಡಬಹುದಾದ ರೀತಿಗೆ ಈ ಕೃತಿಯು ಒಂದು ಮಾದರಿಯಾಗಿದೆ. ಸಂಸ್ಕೃತಿನಿಷ್ಠ ಮತ್ತು ವಿಷಯನಿಷ್ಠ ಜಾನಪದ ಅಧ್ಯಯನದಲ್ಲಿ ಮೌಖಿಕ ಮಹಾಕಾವ್ಯಗಳನ್ನು ಬಳಸಿಕೊಳ್ಳಬಹುದಾದ ಸಾಧ್ಯತೆಯನ್ನು ಸೂಚಿಸುವ ಗ್ರಂಥ ಕೆ. ಅಶೋಕ ಆಳ್ವ ಅವರ ತುಳುನಾಡಿನ ಪ್ರಾಣಿ ಜಾನಪದ. ತುಳುವರು ಬೇರೆ ಬೇರೆ ಪ್ರಾಣಿಗಳನ್ನು ಆರಾಧನೆ, ಆಹಾರ, ವೈದ್ಯ, ವೃತ್ತಿ ಮೊದಲಾದ ನೆಲೆಗಳಲ್ಲಿ ಗ್ರಹಿಸಿದ ಬಗೆಯನ್ನು ವಿಶ್ಲೇಷಿಸುವ ಈ ಗ್ರಂಥದಲ್ಲಿ ತುಳುವಿನ ಪಾಡ್ದನ ಸಾಹಿತ್ಯವನ್ನು ಪ್ರಮುಖ ಆಕರವಾಗಿ ಬಳಸಿಕೊಳ್ಳಲಾಗಿದೆ.

ತುಳುನಾಡಿನ ಚರಿತ್ರೆ ಮತ್ತು ಸಂಸ್ಕೃತಿಯ ಕುರಿತಂತೆ ಅಧ್ಯಯನ ನಡೆಸಿರುವ ಇತಿಹಾಸ ತಜ್ಞರು ಮೌಖಿಕ ಕಾವ್ಯ ಪರಂಪರೆಯ ಸಾಮಾಗ್ರಿಗಳನ್ನು ಬಳಸಿದ್ದಾರೆ. ಈ ನಿಟ್ಟಿನಲ್ಲಿ ಪಿ. ಗುರುರಾಜ ಭಟ್ (Studies in Tuluva History and Culture, 1969) ಬಿ. ಎ. ಸಲೆತ್ತೂರು (Ancient Karnarkak Vol. I: History of Tulvua 1936) ಈ ಇಬ್ಬರು ವಿದ್ವಾಂಸರು ಮುಖ್ಯರಾಗಿದ್ದಾರೆ. ಯು. ಪಿ. ಉಪಾಧ್ಯಾಯ ಮತ್ತು ಸುಶೀಲಾ ಪಿ. ಉಪಾಧ್ಯಾಯ ಅವರು Bhuta Worhip – Aspects a Ritualistic Theatre (1984), ಪಿ. ಪದ್ಮನಾಭ ಅವರ Special Study of Text Report on Bhuta Culta in Sourth Kanara District (1971) ಸುಭಾಶ್ಚಂದ್ರ ಅವರ Women in Paddanas – A Feministic Study of Text and performance (ಅಪ್ರಕಟಿತ ಎಂ. ಫಿಲ್ ಪ್ರಬಂಧ), ಯು. ಪಿ. ಉಪಾಧ್ಯಯ (ಸಂ) ಅವರ Folk Epics of Tulunadu, 1986 ಇವು ತುಳು ಮೌಖಿಕ ಕಾವ್ಯಗಳನ್ನು ಚರ್ಚಿಸುವ ಪ್ರಮುಖ ಇಂಗ್ಲಿಷ್ ಗ್ರಂಥಗಳು. ಪೀಟರ್ ಜೆ. ಕ್ಲಾಸ್ ಅವರ 1. “The Siri Myth and Ritual: A Mass Possession Cult of South India (1975), 2. Oral Traditions, Royal Cults and Materials for a Reconsideration of the Caste Spirit in South India (1978), 3. Spirit possession and Spirit Midiumship from the perspective of Tulu oral Traditions (1979), 4. Mayanandala – A Legend and possession cult of Tulunadu (1979), 5. Pramale Paddana: A Study (1991). ಬಿ. ದಾವೋದರ ರಾವ್ ಅವರ Towords a Spatial Approach (A Speculative exercise with special Reformance to Paddanas) (1986), ಸಿ. ಎನ್ ರಾಮಚಂದ್ರನ್ ಅವರ Folk Theatre (1986) ಬಿ. ಎ. ವಿವೇಕ ರೈ ಅವರ 1. The concept of Bhuta and Ritualistic Bhuta Theatre- A Historical Study (1986). 2. Tulu Folk Epics (1993), ಲೌರಿ ಹಾಂಕೊ ಅವರ 1. The Making of Oral Epics (1992), 2. Multi-forms in Epic Composition (1995) – ಇವು ಪ್ರಮುಖ ಇಂಗ್ಲಿಷ್ ಲೇಖನಗಳಾಗಿವೆ. ಇಲ್ಲಿಯ ಪ್ರತಿಯೊಂದು ಲೇಖನವು ತುಳು ಮಹಾಕಾವ್ಯಗಳನ್ನು ವಿಭಿನ್ನವಾಗಿ ವಿಶ್ಲೇಷಿಸಿರುವ ಅಂಶವು ಆಯಾ ಲೇಖನಗಳ ಶೀರ್ಷಿಕೆಯಿಂದಲೇ ಸ್ಪಷ್ಟವಾಗುತ್ತದೆ.

ತುಳು ಜನಪದ ಮಹಾಕಾವ್ಯಗಳ ಅಧ್ಯಯನದ ಇತಿಹಾಸದಲ್ಲಿ ಗಿಡಿಕೆರೆ ರಾಮಕ್ಕ ಮುಗೇರ‍್ತಿ ಕಟ್ಟಿದ ಸಿರಿಪಾಡ್ದನ (ಸಂ. ಎ. ವಿ. ನಾವಡ, ೧೯೯೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ವಿದ್ಯಾರಣ್ಯ), ಕೋಟಿ- ಚೆನ್ನಯ ಪಾರ್ದನ ಸಂಪುಟ (ಸಂ. ದಾವೋದರ ಕಲ್ಮಾಡಿ, ೨೦೦೨, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು). ವಿರಚನೆ (ಗಾಯತ್ರೀ ನಾವಡ, ೧೯೯೭, ಎನ್ ಆರ್, ಎ. ಎಂ. ಎಚ್. ಪ್ರಕಾಶನ, ಕೋಟೇಶ್ವರ, ದಕ್ಷಿಣ ಕನ್ನಡ ), ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು (ಗಾಯತ್ರೀ ನಾವಡ, ೧೯೯೯, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಸಿರಿ ಪ್ರಕಾಶನ, ಹೊಸಪೇಟೆ) – ಈ ಗ್ರಂಥಗಳಿಗೆ ವಿಶೇಷ ಮಹತ್ವವಿದೆ. ಗೋಪಾಲ ನ್ಯಾಕ ಹಾಡಿರುವ ಸಿರಿ ಸಂಧಿಯನ್ನು ಬಿಟ್ಟರೆ ಸಿರಿ ಪಾಡ್ದನದ ತುಳು ಬೃಹತ್ ಪಠ್ಯವನ್ನು ಗಿಡಿಕೆre ರಾಮಕ್ಕ ಮುಗ್ಗೇರ್ತಿಯಿಂದ ಸಂಗ್ರಹಿಸಿ, ಎ. ವಿ. ನಾವಡ ಅವರು ನೀಡಿದ್ದಾರೆ. ತೊಂಬತ್ತು ಪುಟಗಳ ಪ್ರಸ್ತಾವನೆಯನ್ನು ನಾವಡರು ಬರೆದಿದ್ದು ಸಿರಿ ಪಾಡ್ದನ ಮತ್ತು ಆಚರಣೆಗೆ ಸಂಬಂಧಪಟ್ಟಂತೆ ಅಧ್ಯಯನಪೂರ್ಣ ಪ್ರವೇಶಿಕೆಯನ್ನು ಒದಗಿಸಿದ್ದಾರೆ. ತುಳು ಪಾಡ್ದನ ಪಠ್ಯವೊಂದರ ದಾಖಲಾತಿ ಪಠ್ಯೀಕರಣ, ಸಂಪಾದನೆ ಮತ್ತು ಪ್ರಕಟನೆಯ ಹಿನ್ನೆಲೆಯಲ್ಲಿ ನೋಡಿದರೆ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿ ಪಾಡ್ದನ ಸಂಪುಟಕ್ಕೆ ಐತಿಹಾಸಿಕ ಮಹತ್ವವಿದೆ. ಅತ್ಯಂತ ಶಿಸ್ತುಬದ್ಧ ಮತ್ತು ವೈಜ್ಞಾನಿಕ ಸಂಪಾದನೆ ಮತ್ತು ಪ್ರಕಟನೆಯಾಗಿ ಈ ಕೃತಿಯನ್ನು ನೋಡಬಹುದು. ಸಿರಿ ಪಾಡ್ದನದ ಪ್ರದರ್ಶಕ ಸಂಪ್ರದಾಯ, ಪಾಡ್ದನ ಪ್ರಭೇದಗಳು, ಪಾಡ್ದನ ಸಂಯೋಜನಾ ಪ್ರಕ್ರಿಯೆ, ಮೌಖಿಕತೆ, ಸೂತ್ರಾತ್ಮಕ ಅಭಿವ್ಯಕ್ತಿ – ಹೀಗೆ ತುಳುವಿನ ಸಾಮಾಗ್ರಿಗಳನ್ನು ಬಳಸಿ ಮಹಾಕಾವ್ಯದ ತಾತ್ವಿಕ ಚರ್ಚೆಯನ್ನು ಮಾಡಿದ್ದಾರೆ. ನಿರ್ದಿಷ್ಟವಾಗಿ ಸಿರಿ ಪಾಡ್ದನಕ್ಕೆ ಸಂಬಂಧಪಟ್ಟಂತೆ ಅದರ ಕಾವ್ಯ ಶರೀರ ಮತ್ತು ಆರಾಧನಾ ಜಗತ್ತು ಇವುಗಳನ್ನು ವಿವರಿಸಿದ್ದಾರೆ. ಸಿರಿ ಪಾಡ್ದನದ ಪಠ್ಯವು ಪೂರ್ತಿಯಾಗಿ ತುಳು ಭಾಷೆಯಲ್ಲಿದ್ದು ಪ್ರಸ್ತಾವನೆಯ ಭಾಗದಲ್ಲಿ ಸೇರಿಸಿರುವ ಕಥಾ ಸಾರವು ಕನ್ನಡ ಓದುಗರಿಗೆ ಸಿರಿಕಥೆಯನ್ನು ಪರಿಚಯಿಸುವ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾಗಿದೆ. ರೇಖಾಚಿತ್ರಗಳು ಈ ಕೃತಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.

‘ತುಳುನಾಡ ಗರೊಡಿಗಳ ಸಾಂಸ್ಕೃತಿಕ ಅಧ್ಯಯನ’ ಸಂಪುಟದ ಮೂಲಕ ಕೋಟಿ ಚೆನ್ನಯ ಆರಾಧನೆ ಮತ್ತು ಸಂಸ್ಕೃತಿ ಅಧ್ಯಯನಕಾರರ ಗಮನ ಸೆಳೆದ ಕೋಟಿ ಚೆನ್ನಯ ಬೈದರ್ಕಳ ಸಾಂಸ್ಕೃತಿಕ ಪ್ರತಿಷ್ಠಾನದ ಜಾನಪದಾಸಕ್ತರ ತಂಡವು ಕೋಟಿಚೆನ್ನಯ ಪಾರ್ದನ ಸಂಪುಟದ ಮೂಲಕ ಮತ್ತೊಮ್ಮೆ ಮೌಖಿಕ ಮಹಾಕಾವ್ಯಗಳ ಅಧ್ಯಯನಕಾರರ ಗಮನವನ್ನು ಸೆಳೆದಿದೆ. ಕೋಟಿ ಚೆನ್ನಯರ ಪಾಡ್ದನವನ್ನು ನಾಂದಿ, ಬದುಕು ಮತ್ತು ಅಂತ್ಯ ಎಂಬ ಮೂರು ಭಾಗಗಳಲ್ಲಿ ಸಂಯೋಜಿಸಿಕೊಡ್ಡಿದ್ದಾರೆ. ನಾಂದಿಯೆಂಬ ಮೊದಲ ಅಧ್ಯಾಯದಲ್ಲಿ ಪಾಡ್ದನದ ಪೀಠಿಕೆ, ಬೆರ್ಮೆರೆ ಸಂದಿ, ಕೇಂಜವ ಹಕ್ಕಿಗಳ ಸಂದಿ, ಏಕಸಾಲೆರೆ- ದೆಯ್ಯಾರೆ ಸಂದಿ, ನಾಗಬೆರ್ಮೆರೆ ಸಂದಿ- ಎಂಬ ಭಾಗಗಳಿವೆ. ಬದುಕು ಎಂಬ ಅಧ್ಯಾಯದಲ್ಲಿ ದೇಯಿ ವೈದೆತಿ ಸಂದಿ, ಬಲ್ಲಾರೆರೆ ಸಂದಿ, ಬಂಟೆರೆ ಸಂದಿ, ಬುದ್ಯಂತ ಬೀರ, ಕೊಲಲ ಸಾಧನೆ – ಎಂಬ ಭಾಗಗಳಿಗೆ. ಬದುಕು ಎಂಬ ಅಧ್ಯಾಯದಲ್ಲಿ ದೇಯಿ ದೇಯಿ ಬೈದೆತಿ ಸಂದಿ, ಬಲ್ಲಾಲೆರೆ ಸಂದಿ, ಬಂಟೆರೆ ಸಂದಿ, ಬುದ್ಯಂತ ಬೀರ, ಕೊಲಲ ಸಾಧನೆ – ಎಂಬ ಭಾಗಗಳಿವೆ. ಅಂತ್ಯೆಂಬ ಕೊನೆಯ ಅಧ್ಯಾಯದಲ್ಲಿ ವಾಗ್ದಾನ, ಅಮರ ತೀರ್ಪು, ಅಂತ್ಯ ಸಂಸ್ಕಾರ, ಗರೋಡಿ – ಗುಂಡ ನಿರ್ಮಾಣ ಮತ್ತು ಅನೆಮುನೆ – ಎಂಬ ಭಾಗಗಳಿವೆ. ಕೋಟಿಚೆನ್ನಯರಿಗೆ ಸಂಬಂಧಪಟ್ಟಂತೆ ಪ್ರಕಟವಾಗಿರುವ ಅತ್ಯಂತ ವಿಸ್ತಾರವಾಗಿರುವ ಪಠ್ಯವು ಇದಾಗಿದೆ. ಕೋಟಿ ಚೆನ್ನಯ ಪಾಡ್ದನ ಪಠ್ಯವನ್ನು ನಾಲ್ವರು ಗಾಯಕರು ಮತ್ತು ಒಬ್ಬ ಗಾಯಕಿಯಿಂದ ಪ್ರಾತಿನಿಧಿಕ ಎಂಬ ನೆಲೆಯಲ್ಲಿ ಸಂಗ್ರಹಿಸಿ ಈ ಸಂಪುಟದಲ್ಲಿ ಬಳಸಿಕೊಳ್ಳಲಾಗಿದೆ. ಸಂಪುಟಕ್ಕೆ ಅಧಿಕೃತವಾಗಿ ಹೊಂದುವ ಭಾಗಗಳನ್ನು ಆಯ್ಕೆ ಮಾಡಿ ಬಳಸಿಕೊಂಡಿರುವದನ್ನು ಸಂಪಾದಕರು ಸ್ಪಷ್ಟಪಡಿಸಿದ್ದಾರೆ. ‘ನರಂಗ ಪರವರು ಹೇಳಿದ ಪಾಡ್ದನವನ್ನು ನಾಂದಿ, ಬದುಕು ಅಧ್ಯಾಯಗಳಿಗೆ ಸೂಕ್ತವಾಗಿ ಬಳಸಿಕೊಂಡು ಅಂತ್ಯ ಅಧ್ಯಾಯಕ್ಕೆ ಶ್ರೀ ಪೂವಪ್ಪ ಪರವರು ಹಾಡಿದ ಪಾಡ್ದನ ಸೂಕ್ರವೆನಿಸಿದ್ದು ಅದನ್ನು ಬಳಸಿಕೊಳ್ಳಲಾಗಿದೆ. ತೀರಾ ಅಲಭ್ಯವಾಗಿದ್ದ ದೇಯಿ ಬೈದ್ಯೆತಿಯ ಪ್ರಾರಂಭದ ಕಥಾನಕ ಶ್ರೀಮತಿ ಐತಕ್ಕೆ ಪೂಜಾರ್ತಿಯವರಿಂದ ದೊರೆತು ಅದನ್ನು ಬಳಸಿಕೊಳ್ಳಲಾಗಿದೆ”(ಪ್ರಸ್ತಾವನೆ, ಪುಟ ೧೩). ಈ ಮಾತುಗಳು ಈ ಸಂಪುಟದ ಸಂಪಾದನೆಯ ವಿಧಾನವನ್ನು ತಿಳಿಸುತ್ತದೆ. ಕೋಟಿ ಚೆನ್ನಯ ಪಾಡ್ದನವನ್ನು ಹಾಡುವ ಗಾಯಕರನ್ನು ಒಂದು ಪರಂಪರೆಯಿಂದ ಗ್ರಹಿಸಿ ಇಂತಹ ಪರಂಪರೆಯು ಕಟ್ಟುತ್ತಾ ಬಂದ ಪಾಡ್ದನದ ಒಂದು ಪಠ್ಯವನ್ನು ರೂಪಿಸಿ ಈ ಸಂಪುಟದಲ್ಲಿ ಬಳಸಿಕೊಳ್ಳಲಾಗಿದೆ. ಸಂಪಾದಕರ ಉದ್ದೇಶಕ್ಕೆ ಅನುಗುಣವಾಗಿ ಈ ವಿಧಾನವನ್ನು ಅನುಸರಿಸಲಾಗಿದೆ. ಮೌಖಿಕ ಮಹಾಕಾವ್ಯಗಳ ಪಠ್ಯೀಕರಣ, ಸಂಪಾದನೆ ಮತ್ತು ಪ್ರಕಟನೆಯ ಇತಿಹಾಸದಲ್ಲಿ ಈ ವಿಧಾನವು ಅತ್ಯಂತ ವಿಶಿಷ್ಟವಾಗಿದೆ. ಪಾಡ್ದನದ ಪಠ್ಯವನ್ನು ತುಳುವಿನಲ್ಲಿ ನೀಡಿ ಶಬ್ದಾರ್ಥಗಳನ್ನು ಕನ್ನಡದಲ್ಲಿ ವಿವರಿಸಿ ಭಾವಾರ್ಥವನ್ನು ಕನ್ನಡದಲ್ಲಿ ಒದಗಿಸಿರುವ ಸೈದ್ಧಾಂತಿಕ ಬಗೆಯನ್ನು ಈ ಸಂಪುಟದಲ್ಲಿ ಕಾಣಬಹುದು.

ಗಾಯತ್ರೀ ನಾವಡರ ವಿರಚನೆ ಕೃತಿಯಲ್ಲಿ ಒಟ್ಟು ಹನ್ನೆರಡು ಲೇಖನಗಳಿವೆ. ಕರಾವಳಿ ವಲಯದ ಜಾನಪದದ ಬೇರೆ ಬೇರೆ ಪ್ರಕಾರಗಳನ್ನು ಸ್ತ್ರೀವಾದದ ಸೈದ್ಧಾಂತಿಕ ಚರ್ಚೆಗೆ ಲೇಖಕಿ ಇಲ್ಲಿ ಬಳಸಿಕೊಂಡಿದ್ದಾರೆ. ಲಿಂ, ಲಿಂಗ ಪ್ರಭೇದ ಮತ್ತು ಪಠ್ಯ ಸ್ವರೂಪ, ಪಾಡ್ದನಗಳು ಪ್ರಕಟಿಸಿರುವ ಸ್ತ್ರೀತ್ವದ ಪ್ರತಿನಿಧೀಕರಣ, ಸಿರಿ – ಹೆಣ್ಣಿನ ಅನನ್ಯತೆಯ ಹುಡುಕಾಟ, ಜನಪದ ಮಹಾಕಾವ್ಯಗಳಲ್ಲಿ ಪ್ರಾತಿವ್ರತ್ಯದ ನಿರ್ವಚನ – ಈ ಲೇಖನಗಳಲ್ಲಿ ಸಿರಿ ಸಂದಿಯನ್ನು ಸಮರ್ಥವಾಗಿ ದುಡಿಸಿಕೊಂಡು ಸ್ತ್ರೀಪತ ಚಿಂತನೆ ಮತ್ತು ಸ್ತ್ರೀ ವಿವೋಚನೆಯ ಹಾದಿಗಳು ತೆರೆದುಕೊಳ್ಳಬೇಕಾದ ಅಗತ್ಯ ಮತ್ತು ಸಾಧ್ಯತೆಗಳನ್ನು ವಿಶ್ಲೇಷಿಸಿದ್ದಾರೆ. ಡಾ. ಗಾಯತ್ರೀ ನಾವಡ ಅವರ ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು ಎಂಬ ಮಹಾಪ್ರಬಂಧದ ಸ್ತ್ರೀಶಕ್ತಿಯ ಮಾದರಿಯಾಗಿ ಸಿರಿ ಎಂಬ ಐದನೆಯ ಅಧ್ಯಾಯವು ಸಿರಿ ಪಾಡ್ದನದ ಅಧ್ಯಯನದ ದೃಷ್ಟಿಯಿಂದ ಹೊಸ ಬಗೆಯ ಪ್ರಯತ್ನವಾಗಿದೆ. ದೇಶೀಯ ಮತ್ತು ವಿದೇಶಿಯ ವಿದ್ವಾಂಸರು ಸಿರಿ ಪಾಡ್ಸನ ಮತ್ತು ಆಚರಣೆಯ ಕುರಿತಂತೆ ನಡೆಸಿರುವ ಚರ್ಚೆಯನ್ನು ಸಂಶೋಧಕಿ ಈ ಲೇಖನದಲ್ಲಿ ಇನ್ನಷ್ಟು ಸೂಕ್ಷ್ಮವಾಗಿ ವಿಸ್ತರಿಸಿದ್ದಾರೆ. “ಸಿರ ಪಿತೃಪ್ರಧಾನ ಸಂಸ್ಕೃತಿಯ ಚಿಂತನೆಗಳಾದ ಹೆಣ್ಣಿನ ಪಾತಿವ್ರತ್ಯ, ಮಾತೃತ್ವ, ಪುರುಷ ಪ್ರಭುತ್ವಗಳ ಪರಿಕಲ್ಪನೆಗಳನ್ನು ಒಡೆಯುತ್ತಲೇ ಮಾತೃವಂಶೀಯ ಮೌಲ್ಯವನ್ನು ನೆಲೆಗೊಳಿಸುತ್ತಾಳೆ. ಇಂಥ ಒಡೆಯುವಿಕೆಯಲ್ಲಿಯೇ ಸಿರಿಯ ಜೀವನವನ್ನು ಅರ್ಥೈಸಬೇಕಾಗಿದೆ… ಹುಟ್ಟಿದ ಅರಮನೆಯ ಆಸ್ತಿ, ಅಧಿಕಾರ ತನಗೆ ದಕ್ಕದೇ ಹೋದಾಗ ಸಿರಿ ಅರಮನೆಯನ್ನು ತ್ಯಜಿಸುವುದಷ್ಟೇ ಅಲ್ಲ ಅರಮನೆಯನ್ನು ಸುಟ್ಟು ಸುಡುಸೂಕರೆ ಮಾಡುತ್ತಾರೆ. ಅಲ್ಲಿನ ಪುರುಷ ಅಧಿಕಾರವನ್ನು ಧಿಕ್ಕರಿಸಿ ಮುನ್ನಡೆಯುತ್ತಾರೆ. ಪುರುಷ ಜಾತಿ ಆಕ್ರಮಿಸಿದ ಹಕ್ಕು ಮತ್ತು ಅಧಿಕಾರವನ್ನು ತಿರಸ್ಕರಿಸುವ ಮೂಲಕ ಹೊಸ ರಿವಾಜನ್ನು ಹುಟ್ಟುಹಾಕುತ್ತಾಳೆ”(ಪು. ೧೪೨). ”ಮಾತೃವಂಶೀಯತೆಯ ಪ್ರವರ್ತಕಳಾಗಿ, ಪೂರ್ಣ ಬದುಕಿನ ಹುಡುಕಾಟದಲ್ಲಿ, ಹೆಣ್ಣಿನ ಅಂತಸ್ಸತ್ವದ ಶೋಧದಲ್ಲಿ ಸಿರಿ ಎತ್ತುವ ಪ್ರಶ್ನೆಗಳು, ಸ್ಥಾಪಿಸುವ ಧೋರಣೆಗಳು ಹೆಚ್ಚು ಮಾನವೀಯವಾಗಿವೆ” (ಪು. ೧೪೪). “ಸಾಮಾಜಿಕ ಮೌಲ್ಯಗಳ ಚೌಕಟ್ಟಿನ ಸೀಮಿತ ಬದುಕನ್ನು ನಿರಾಕರಿಸಿ ಬಿಡುಗಡೆಯ ಮುಕ್ತ ಅವಕಾಶದ ರೂಪಿಕೆಯಾಗಿ ಇಲ್ಲಿ ಅಲೌಕಿಕ ಜಗತ್ತನ್ನು ಕಾಣಬೇಕಾಗಿದೆ. ಆಗ ನಮ್ಮ ಸ್ಥಾಪಿತ ಚರಿತ್ರೆಗೆ ಭಿನ್ನವಾದ ಸ್ತ್ರೀ ಸಂಕಥನ ಮಾದರಿಗಳನ್ನು ಕೊಡುವುದು ಸಾಧ್ಯವಾಗುತ್ತದೆ”(ಪು. ೧೪೮). ಸಿರಿ ಪಾಡ್ದನವನ್ನು ಸ್ತ್ರೀವಾದಿ ಚಿಂತನೆಯ ಸೈದ್ಧಾಂತಿಕ ಚರ್ಚೆಗೆ ಗಾಯತ್ರಿ ನಾವಡ ಅವರು ಸಮರ್ಪಕವಾಗಿ ಬಳಸಿಕೊಂಡಿರುವುದು ಅವರ ಹೆಚ್ಚುಗಾರಿಕೆಯಾಗಿದೆ.

ಕಳೆದ ಎರಡು ದಶಕಗಳಿಂದ ತುಳು ಜಾನಪದವನ್ನು ಜರ್ಮನಿಯ ಹೈಡ್ರೊನ್ ಬ್ರೂಕ್ನರ್ ಅಧ್ಯಯನ ಮಾಡುತ್ತಾ ಬಂದಿದ್ದಾರೆ. ತುಳು ಜನಪದ ಸಾಹಿತ್ಯದ ವರ್ಗದಲ್ಲಿ ಬರುವ ಪಾಡ್ಸನಗಳು ಅವರ ಪ್ರಧಾನ ಆಸಕ್ತಿಯ ಕ್ಷೇತ್ರ. ಪಾಡ್ಸನಗಳಲ್ಲಿಯೂ ವಿಶೇಷವಾಗಿ ಕನಲ್ಲಾಯ, ಜುಮಾದಿ, ಜಾರಂದಾಯ, ಕೊಡುಮಣಿತ್ತಾಯ, ಬಲವಾಂಡಿ ದೈವಗಳು ಪಾಡ್ಸನಗಳು. ಪಾಠ್ಯಗಳ ಸಂಗ್ರಹ ಮತ್ತು ವಿಶ್ಲೇಷಣೆಯ ಕಡೆಗೆ ಗಮನಹರಿಸಿದ್ದಾರೆ. ಈ ಪಾಡ್ದನಗಳನ್ನು ಆರಾಧನೆಯ ಸಂದರ್ಭದಲ್ಲಿ ಹಾಡಯಲಾಗುವುದರಿಂದ ಕೋಲಗಳನ್ನು ನೋಡಿ ದೈವಾರಾಧನೆಯ ಆಚರಣಾತ್ಮಕ ಅಂಶಗಳನ್ನು ದಾಖಲು ಮಾಡುತ್ತಾ ಬಂದಿದ್ದಾರೆ. ಭೂತಾರಾಧನೆಯ ಸಾಹಿತ್ಯಿಕ ದಾಖಲೆಗಳಾದ ಪಾಡ್ಸನಗಳನ್ನು ಈ ರಂಗಭೂಮಿಯ ಪಠ್ಯವೆಂಬಂತೆ ಪರಿಭವಿಸಿ ಇವರು ಈ ಪಾಠ್ಯಗಳ ಸಂಗ್ರಹದ ಕಡೆಗೆ ಗಮನಹರಿಸಿದ್ದು ಕಂಡು ಬರುತ್ತದೆ. ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಬ್ರೂಕ್ನರ್ ಅವರು ಈ ಕೆಳಗಿನ ಇಂಗ್ಲಿಷ್ ಲೇಖನಗಳನ್ನು ಪ್ರಕಟಿಸಿದ್ದಾರೆ.

1. Bhuta – worship in Coastal Karnataka : An oral Tulu myth and festival ritual of Jumadi.

2. Fluid Canons and Shared Charisma : On success and failore of Ritual Performance in a South Indian Oral Religious Tradition.

3. Kannalaya : The place of a Tulu Paaddana among interrelated oral traditions (ಈ ಲೇಖನವು Flags of Fame – Studies in South Asian Folk Culture (1993) ಸಂಪುಟದಲ್ಲಿದೆ. ಸಂ: ಹೈಡ್ರೊನ್ ಬ್ರೂಕ್ನರ್, ಲೋಥರ್ ಲುಟ್ಸ್ ಮತ್ತು ಆದಿತ್ಯ ಮಲ್ಲಿಕ್. ಪ್ರ: ಮನೋಹರ್ ಪಬ್ಲಿಷರ್ಸ ಆಂಡ್ ಡಿಸ್ತ್ರುಬ್ಯೂಟರ್ಸ್, ನವದೆಹಲಿ).

4. Narrated and Dramatized Death in Tulu Culture

5. Divinity, Viloence, Wedding and Gender in some South Indian Cults.

6. Dhuumaavati Bhuta : An oral Tulu Text collected in the 19th century: Edition, Translation and Analysis

7. The Basel Mission and the Bhuta cult (ಈ ಲೇಖನವು Coastal Karnataka (Studies in Folkloristics and Linguistic Tradition of Dakshina Kannada Region of the Westerb Coast of Indian ಎಂಬ ಗ್ರಂಥದಲ್ಲಿದೆ, ೧೯೯೬, ಸಂ: ಯು. ಪಿ. ಉಪಾಧ್ಯಾಯ, ಪ್ರ: ಕು. ಶಿ. ಅಭಿನಂದನ ಸಮಿತಿ, ರಾ. ಗೋ. ಪೈಸಂಶೋಧನ ಕೇಂದ್ರ. ಎಂ. ಜಿ. ಎಂ. ಕಾಲೇಜು, ಉಡುಪಿ).

8. Conflict between missionary approach and popular local religion in South Kanara in the19th Centuary.

Kannalaya : The Place of a Tulu Paddana Among Interrelated Oral Traditions (1993) ಈ ಲೇಖನವು Flags of Fame – Studies in South Asian Folk Culture ಎಂಬ ಸಂಪುಟದಲ್ಲಿ ಇದೆ. ಮೌಖಿಕ ಪರಂಪರೆಯಲ್ಲಿರುವ ಕನಲ್ಲಾಯ ದೈವದ ಪಾಡ್ದನ ಮತ್ತು ಅದರ ಜನಪದ ಧಾರ್ಮಿಕ ಸ್ವರೂಪವನ್ನು ಈ ಲೇಖನದಲ್ಲಿ ಅವರು ಚರ್ಚಿಸಿದ್ದಾರೆ. ಈ ದೈವ ಮತ್ತು ಇದರ ಪಾಡ್ಸನಕ್ಕೆ ಸಂಬಂಧಪಟ್ಟಂತೆ ಇರುವ ಇತರ ದೈವಗಳ ಪಾಡ್ದನಗಳು ಮತ್ತು ಅವುಗಳ ಆಚರಣಾತ್ಮಕ ವಿಧಿ ವಿಧಾನಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿರುವುದು ಈ ಲೇಖನದ ಮುಖ್ಯ ಆಯಾಮವಾಗಿದೆ. ಪಠ್ಯ ಮತ್ತು ಆರಾಧನೆಗಳ ಅಂತರ್ ಸಂಬಂಧವನ್ನು ಅಧ್ಯಯನ ಮಾಡಿರುವ ಹೊಸ ಬಗೆಯ ಲೇಖನವು ಇದಾಗಿದೆ. ವಿಸ್ತಾರವಾದ ತುಳು ಸಂಸ್ಕೃತಿಯ ಸಂಬಂಧದಲ್ಲಿ ಒಂದು ನಿರ್ದಿಷ್ಟ ಪಠ್ಯವನ್ನು ಅರ್ಥೈಸಬಹುದಾದ ಸಾಧ್ಯತೆಯ ಕಡೆಗೆ ನಮ್ಮ ಗಮನವನ್ನು ಅವರು ಈ ಲೇಖನದಲ್ಲಿ ಸೆಳೆಯುತ್ತಾರೆ. ೧. ಪ್ರಸ್ತಾವನೆ, ೨. ಪಠ್ಯ ಸ್ಥಳೀಕರಣ ಮತ್ತು ಧಾರ್ಮಿಕ ಆರಾಧನೆ ೩. ಪಠ್ಯ ಮತ್ತು ಆರಾಧನಾ ಸಂಬಂಧೀ ಸಮಾನಾಂತರ ನೆಲೆಗಳು ೪. ಸಮಾರೋಪ – ಹೀಗೆ ಈ ಲೇಖನದಲ್ಲಿ ನಾಲ್ಕು ಭಾಗಗಳಿವೆ. ತುಳು ಪ್ರದೇಶ ಮತ್ತು ಸಂಸ್ಕೃತಿಯ ವಿವರಗಳನ್ನು ಲೇಖನದ ಆರಂಭದಲ್ಲೇ ಸಂಕ್ಷಪ್ತವಾಗಿ ನೀಡಿದ ಮೇಲೆ ಪಾಡ್ದನದ ಪಠ್ಯ, ಅದರ ಸ್ಥಳೀಕರಣ ನೆಲೆಗಳು ಮತ್ತು ಆಚರಣಾತ್ಮಕ ಪ್ರದರ್ಶನ – ಇವುಗಳ ಸಂಬಂಧವನ್ನು ಸೈದ್ಧಾಂತಿಕವೂ ಶಾಸ್ತ್ರೀಯವೂ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ತುಳುನಾಡಿನ ಪುರಾಣಗಳೆಂದು ಪರಿಗಣಿಸಲಾಗಿರುವ ಪಾಡ್ದನಗಳು ರಚನೆ ಮತ್ತು ಪ್ರಸರಣದ ಕುರಿತಂತೆ, ಈ ಲೇಖನದಲ್ಲಿ ಅಪೂರ್ವ ಮಾಹಿತಿಗಳಿವೆ. ಕನಲ್ಲಾಯ ದೈವದ ಆರಾಧನೆಗೆ ಅದರ ಪಾಡ್ದನವು ಒದಗಿಸುವ ಚಲನಶೀಲತೆಯನ್ನು ಅವರು ಚರ್ಚಿಸಿದ್ದಾರೆ. ದೈವ ಕನಲ್ಲಾಯ ಮತ್ತು ಅದಕ್ಕೆ ಸಂಬಂಧಪಟ್ಟ ಪಾಡ್ದನವು ಒಳಗೊಂಡಿರುವ ಪ್ರಾದೇಶಿಕ ಸಂಬಂಧವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಕ್ಷೇತ್ರ ಕಾರ್ಯವನ್ನು ನಡೆಸಿ ಬ್ರೂಕ್ನರ್ ಸಂಗ್ರಹಿಸಿದ ಭೌಗೋಳಿಕ ವಿವರಗಳು ಈ ಲೇಖನದಲ್ಲಿವೆ. ಕನಲ್ಲಾಯ ದೈವದ ಗುಡಿ ಇರುವ ಆಸುಪಾಸಿನ ಗುಡ್ಡ ಮತ್ತು ಅಲ್ಲಿರುವ ಶಿಲೆ ಕಲ್ಲುಗಳನ್ನು ಪಾಡ್ದನದಲ್ಲಿ ಬರುವ ಭೌತಿಕ ವಿವರಗಳ ಜೊತೆಗೆ ಸಂಬಂಧ ಕಲ್ಪಿಸಿ ನೋಡುವ ಜನಪದ ಪ್ರವೃತ್ತಿಯ ಕಡೆಗೆ ಈ ಲೇಖನದಲ್ಲಿ ಸಂಬಂಧ ಕಲ್ಪಿಸಿ ನೋಡುವ ಜನಪದ ಪ್ರವೃತ್ತಿಯ ಕಡೆಗೆ ಈ ಲೇಖನದಲ್ಲಿ ಬ್ರೂಕ್ನರ್ ಗಮನ ಸೆಳೆದಿದಾರೆ. ಕನಲ್ಲಾಯ ದಯವದ ಆರಾಧನೆಯ ಮಾಹಿತಿಗಳ ದೃಷ್ಟಿಯಿಂದ ಇದೊಂದು ಆಕರ ಲೇಖನವಾಗಿದೆ. ನಿರ್ದಿಷ್ಟ ದೈವವೊಂದರ ಪಠ್ಯ ಮತ್ತು ಆರಾಧನಾ ಕೇಂದ್ರಿತ ಅಧ್ಯಯನಕ್ಕೆ ಈ ಲೇಖನ ಒಂದು ನಿದರ್ಶನವೂ ಮಾದರಿಯ ರೂಪದ್ದು ಆಗಿದೆ. ಅಸ್ತಿತ್ವದಲ್ಲಿರುವ ಮೌಖಿಕ ಸೂತ್ರಾತ್ಮಕ ಕಾವ್ಯ ಪರಂಪರೆಯ ಚೌಕಟ್ಟಿನೊಳಗೆ ಹೊಸ ಸಂಗತಿ ಅಥವಾ ವಸ್ತುವೊಂದು ಹೇಗೆ ಸೇರ್ಪಡೆಗೊಳ್ಳುತ್ತದೆ ಎಂಬುದನ್ನು ಈ ಲೇಖನವು ನಮಗೆ ತೋರಿಸಿಕೊಡುತ್ತದೆ. ಈ ಉದ್ದೇಶಕ್ಕಾಗಿ ಬ್ರೂಕ್ನರ್ ಅವರು ಹಲವು ಪಾಡ್ದನಗಳ ಪಠ್ಯಗಳ ಮತ್ತು ಒಂದೇ ಪಾಡ್ದನದ ಹಲವು ಪಠ್ಯಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದ್ದಾರೆ. ಹಾಡುಗಾರರ ಮನಸ್ಸಿನಲ್ಲಿರುವ ಘಟನೆಗಳ ಕಥನಾತ್ಮಕ ಮತ್ತು ವಿವಿರಣಾತ್ಮಕ ಸಿದ್ಧ ಮಾದರಿಗಳು ಬೃಹತ್ ಪಠ್ಯವನ್ನು ರೂಪಿಸುವ ವಿಧಾನವನ್ನು ಕನಲ್ಲಾಯ ದೈವದ ಪಾಡ್ದನದ ವಿವಿಧ ಪಠ್ಯಗಳ ಸಹಾಯದಿಂದ ಪ್ರಸ್ತಾಪಿಸಿದ್ದಾರೆ.

ತುಳುಜಾನಪದ, ಅದರಲ್ಲಿಯೂಪಾಡ್ದನಗಳುಮತ್ತುಆರಾಧನೆಗಳವಿಷಯಕ್ಕೆಸಂಬಂಧಪಟ್ಟಂತೆಬ್ರೂಕ್ನರ್ಅವರುಜರ್ಮನಭಾಷೆಯಲ್ಲಿಮಹತ್ತ್ವದಗ್ರಂಥವನ್ನುಪ್ರಕಟಿಸಿದ್ದಾರೆ. ಈಗ್ರಂಥದಹೆಸರುಈರೀತಿಇದೆ. Furstliche Feste: Texte And Rituale der Tulu- Vilksreligion an der westkuste sudindiens (೧೯೯೫). ತುಳುಜಾನಪದಪಾಡ್ದನಗಳಅಧ್ಯಯನಕ್ಕೆಸಂಬಂಧಪಟ್ಟಂತೆಜರ್ಮನ್ಭಾಷೆಯಲ್ಲಿಪ್ರಕಟವಾಗಿರುವಮೊತ್ತಮೊದಲಬೃಹತ್ಗ್ರಂಥವುಇದಾಗಿದೆ. ೫೪೯ಪುಟಗಳಈಅಧ್ಯಯನಗ್ರಂಥದಲ್ಲಿಮಾಹಿತಗಳವಿಶ್ಲೇಷಣೆಗೆಮೀಸಲಾದ೭ಅಧ್ಯಾಯಗಳಿವೆ. ಈಅಧ್ಯಾಯಗಳಲ್ಲಿಪಾಡ್ದನಗಳಮತ್ತುಅವುಗಳಸಂಕೀರ್ಣ, ಬೃಹತ್ಪಠ್ಯದಪರಿಕಲ್ಪನೆ, ಪಾಡ್ದನಗಳಸ್ಥಳೀಕರಣಪ್ರಕ್ರಿಯೆ, ತುಳುಸಾಂಸ್ಕೃತಿಕಚೌಕಟ್ಟಿನಲ್ಲಿಜನಪದಆಚರಣೆಗಳಸ್ವರೂಪಮತ್ತುವ್ಯಾಪ್ತಿಮೊದಲಾದವಿಚಾರಗಳನ್ನುವ್ಯಾಪಕವಾಗಿಚರ್ಚಿಸಲಾಗಿದೆ. ಜುಮಾದಿಪಾಡ್ದನಮತ್ತುಅವುಗಳವಿವಿಧಪಠ್ಯಗಳನ್ನುಪ್ರಧಾನವಾಗಿಇಲ್ಲಿವಿಶ್ಲೇಷಣೆಗೆಒಳಪಡಿಸಲಾಗಿದೆ. ಜಾರಂದಾಯಪಾಡ್ದನದಒಂದುಪಠ್ಯ- ಪ್ರಶ್ನ, ಜುಮಾದಿಪಾಡ್ದನದಒಂದುಪಠ್ಯ, ಕನಲ್ಲಾಯಪಾಡ್ದನದಒಂದುಪಠ್ಯ, ಕಾಂತೇರಿಜುಮಾದಿಜುಮಾದಿಪಾಡ್ದನದಒಂಬತ್ತುಪಠ್ಯಗಳು, ಸಾರಾಳಜುಮಾದಿಯಎಂಟುಪಠ್ಯಗಳು, ಕನಪಡಿತ್ತಾಯಪಾಡ್ದನದಒಂದುಪಠ್ಯ- ಪ್ರಶ್ನ, ಜುಮಾದಿಯಪಾಡ್ದನದಒಂದುಪಠ್ಯ, ಕನಲ್ಲಾಯಪಾಡ್ದನದಒಂದುಪಠ್ಯ, ಕಾಂತೇರಿಜುಮಾದಿಪಾಡ್ದನದಒಂದುಪಠ್ಯ, ಕಾಂತುನೆಕ್ರಿಭೂತಪಾಡ್ದನದಒಂದುಪಠ್ಯ, ಬಲಾಂಡಿಪಾಡ್ದನದಮೂರುಪಠ್ಯಗಳುಹೀಗೆಒಟ್ಟು೨೫ಪಾಡ್ದನಗಳತುಳುಪಠ್ಯಗಳನ್ನುಇಂಗ್ಲಿಷನಲ್ಲಿ (International Phonetic Script) ನೀಡಲಾಗಿದೆ. ಈಮೇಲಿನತುಳುಪಠ್ಯಗಳನ್ನುಜರ್ಮನ್ಭಾಷೆಯನ್ನುಬಲ್ಲಆಸಕ್ತವಿದ್ವಾಂಸರುಓದಲುಅನುಕೂಲಮಾಡಿಕೊಡುವದೃಷ್ಟಿಯಿಂದಜರ್ಮನ್ಭಾಷೆಗೆಅನುವಾದಿಸಿಕೊಟ್ಟಿದ್ದಾರೆ. ತುಳುಪಾಡ್ದನದಒಂದುಗೆರೆಯನ್ನುಜರ್ಮನ್ಭಾಷೆಯಲ್ಲಿಒಂದುಗೆರೆಯವ್ಯಾಪ್ತಿಗೆಒಳಪಡುವಂತೆಅನುವಾದಿಸಿದ್ದಾರೆ. ಅಂದರೆಅನುವಾದದಸಂದರ್ಭದಲ್ಲಿತುಳುಪಠ್ಯಗಳಭಾಷಿಕರಚನೆಯಸೊಗಡುಮತ್ತುವೈಶಿಷ್ಟ್ಯಗಳನ್ನುಜರ್ಮನ್ಓದುಗರಗಮನಕ್ಕೆಬರುವಂತೆಎಚ್ಚರವಹಿಸಿದ್ದಾರೆ. ತುಳುವಿನಪಾರಿಭಾಷಿಕಪದಗಳನ್ನು (ಉದಾ: ಬಂಟೆ, ಸಾನ, ಮಾಯ, ಪಟ್ಟ, ಧರ್ಮದೈವ, ಸೀಮೆ, ವರಣ್ಮಾಗಣೆ, ನೇಮ, ಚಾವಡಿ, ಕೊಡಿ, ಪಡಿಯಿರಿ, ಮುಗಇತ್ಯಾದಿ) ಜರ್ಮನ್ಅನುವಾದದಲ್ಲಿಹಾಗೆಯೇಉಳಿಸಿಕೊಂಡಿದ್ದಾರೆ. ಈಪದಗಳಿಗೆಸಂಬಂಧಪಟ್ಟಂತೆಸಾಂಸ್ಕೃತಿಕವಿವರಣೆಯನ್ನುಪ್ರತ್ಯೇಕವಾಗಿನೀಡಿದ್ದಾರೆ. ತುಳುಸಂಸ್ಕೃತಿಯನಿಕಟವಾದಸಂಬಂಧಹಾಗೂಖಚಿತವಾದತಿಳುವಳಿಕೆಯನ್ನುಬ್ರೂಕ್ನರ್ಹೊಂದಿರುವುದರಿಂದಈಬಗೆಯಕೆಲಸಗಳನ್ನುಯಶಸ್ವಿಯಾಗಿಮಾಡಲುಅವರಿಗೆಸಾಧ್ಯವಾಗಿದೆ. ತೀರಅಪರಿಚಿತವಾದತುಳುಸಂಸ್ಕೃತಿಯಅನನ್ಯವೈಶಿಷ್ಟಗಳನ್ನುಜರ್ಮನ್ಸಾರಸ್ವತಲೋಕಕ್ಕೆತಿಳಿಪಡಿಸುವಪ್ರಯತ್ನವುಖಂಡಿರಕ್ಕೂಸಣ್ಣದಲ್ಲ. ಪಾಡ್ದನಗಳನ್ನುಟೇಪ್ರೆಕಾರ್ಡರ್ಮೂಲಕದಾಖಲಿಸಿಕೊಂಡುಲಿಪ್ಯಂತರಗೊಳಿಸಿ, ವ್ಯವಸ್ಥಿತಿವಾಗಿಮುದ್ರಣಕ್ಕೆಸಿದ್ಧಪಡಿಸುವಕೆಲಸವೂಎಷ್ಟೊಂದುತಾಳ್ಮೆಯನ್ನುಮತ್ತುಶ್ರಮವನ್ನುಅಪೇಕ್ಷಿಸುತ್ತದೆಎಂಬಸಂಗತಿಯುಈಕ್ಷೇತ್ರದಲ್ಲಿಕೆಲಸಮಾಡಿದವರಿಗೆಸರಿಯಾಗಿತಿಳಿದಿದೆ. ತುಳುವನ್ನುಬಲ್ಲನಮ್ಮಂತಹವರುಪಡುವಪಾಡನ್ನುನೆನಪಿಸಿಕೊಂಡರೆಹೈಡ್ರೊನ್ಬ್ರೂಕ್ನರ್ಅವರಸಾಧನೆಯಹಿರಿಮೆಮನವರಿಕೆಯಾಗುತ್ತದೆ. ಜಾನಪದಕ್ಷೇತ್ರದಲ್ಲಿಕೆಲಸಮಾಡುವವರಿಗೆಭಾಷೆಒಂದುತೊಡಕಲ್ಲಎಂಬಕ್ಷೇತ್ರಕಾರ್ಯದಸತ್ಯವನ್ನುಬ್ರೂಕ್ನರ್ಎತ್ತಿಹಿಡಿದಿದ್ದಾರೆ.

ತುಳುನಾಡಿನಮೊದಲಹಂತದಜಾನಪದಸಂಗ್ರಹಮತ್ತುಅಧ್ಯಯನಗಳನ್ನುಗಮನಿಸಿದರೆತುಳುಮಹಾಕಾವ್ಯಗಳಮೇಲೆಸಂಗ್ರಹಕಾರರುಮತ್ತುಅಧ್ಯಯನಕಾರರುತಮ್ಮದೃಷ್ಟಿಯನ್ನುಮುಖ್ಯವಾಗಿಹರಿಸಿದ್ದುಕಂಡುಬರುತ್ತದೆ. ಜಾನಪದಅಧ್ಯಯನವುಒಂದುಶಿಸ್ತಾಗಿರೂಪೊಗೊಂಡಿಲ್ಲದಕಾಲಘಟ್ಟದಲ್ಲಿ, ಕ್ಷೇತ್ರಕಾರ್ಯಮಾಹಿತಿಸಂಗ್ರಹಮತ್ತುದಾಖಲಾತಿಸೌಲಭ್ಯಗಳುತುಂಬಮಿತವಾಗಿದ್ದಸಂದರ್ಭದಲ್ಲಿಈಬಗೆಯಕೆಲಸಗಳುನಡೆದಿರುವುದನ್ನುನಾವುಗಮನಿಸಬೇಕು. ತುಳುಮಹಾಕಾವ್ಯಗಳಗಂಭೀರಅಧ್ಯಯನವುಕಳೆದಇಪ್ಪತ್ತೈದುವರ್ಷಗಳಿಂದನಡೆಯುತ್ತಾಬಂದಿದೆ. ಈಬಗೆಯಅಧ್ಯಯನಗಳಲ್ಲಿಎರಡುವಿಧಗಳಿವೆ.

೧. ತುಳುಮಹಾಕಾವ್ಯಗಳನ್ನುಸಂಗ್ರಹಿಸಿಪರಿಚಯಾತ್ಮಕಪ್ರಸ್ತಾವನೆಯೊಂದಿಗೆಅವುಗಳನ್ನುಪ್ರಕಟಿಸಿದುದು. ಈಬಗೆಯಪ್ರಸ್ತಾವನೆಮತ್ತುಕೆಲವುಲೇಖನಗಳಲ್ಲಿಸೂಕ್ಷ್ಮಒಳನೋಟಗಳಿರುವುದನ್ನುಮನಗಾಣಬಹುದು. ೨. ಮಹಾಕಾವ್ಯಗಳದೀರ್ಘಪಠ್ಯಗಳನ್ನುಟೇಪ್ರೆಕಾರ್ಡರ್ಇತ್ಯಾದಿವೈಜ್ಞಾನಿಕಸಲಕರಣೆಗಳಮೂಲಕಸಂಗ್ರಹಿಸಿಅವುಗಳನ್ನುಲಿಪ್ಯಂತರಗೊಳಿಸಿ, ಇಂತಹಮಾಹಿತಿಶರೀರವನ್ನುಖಚಿತಪಡಿಸಿಕೊಂಡುಅಧ್ಯಯನಗಳನ್ನುನಡೆಸಿದುದುಇನ್ನೊಂದುವಿಧ. ಪಠ್ಯ, ಪಾಠಾಂತರಗಳು, ವಿವಿಧಪಠ್ಯಗಳು, ಸಂದರ್ಭತುಳುಜನಪದಮಹಾಕಾವ್ಯಗಳಮೇಲೆಅಧ್ಯಯನವನ್ನುಮಾಡುತ್ತಾಬಂದಿದ್ದಾರೆ.

ಕೃಷಿಕರು ಕಾಮಿಕರು ಮತ್ತು ದಲಿತರು ಪ್ರತಿನಿಧಿಸುವ ಪ್ರತಿ ಸಂಸ್ಕೃತಿಯ ಸ್ವರೂಪ ನಿರ್ಣಯದ ಭಾಗವಾಗಿ ತುಳು ಮಹಾಕಾವ್ಯಗಳು ಅಧ್ಯಯನ ನಡೆದಿದೆ. ಗೋಪಾಲ ನಾಯ್ಕ ಅವರು ಹಾಡಿರುವ ಸಿರಿ ಸಂಧಿಯು ರಾಮಾಯಣ, ಮಹಾಭಾರತ ಮಹಾಕಾವ್ಯಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಅಲ್ಲ. ಗೋಪಾಲ ನಾಯ್ಕ ಅವರ ಕವಿತ್ವ ಹಾಗೂ ಸಿರಿ ಸಂಧಿಯ ಕಾವ್ಯ ಗುಣ ಗಮನಾರ್ಹವಾದುದು. ಕಾಲ, ಜನ್ಮ, – ಪುನರ್ಜನ್ಮ, ಕೆಲಸ, ಕುಟುಂಬ, ನೆಲ, ಹೆಣ್ಣು ಮೊದಲಾದ ಪರಿಕಲ್ಪನೆಗಳನ್ನು ತುಳುವರು ತುಳು ಮಹಾಕಾವ್ಯಗಳ ಮೂಲಕ ನಿರ್ವಚಿಸಿ ನಿರೂಪಿಸಿದ ಬಗೆಯ ನಾವು ಈಗಾಗಲೇ ಈ ಪರಿಕಲ್ಪನೆಗಳ ಕುರಿತು ಹೊಂದಿದ ಸಿದ್ಧ ತಿಳುವಳಕೆಗಿಂತ ಭಿನ್ನವಾಗಿದೆ. ಈ ಬಗೆಯ ಚರ್ಚೆಗಳಿವೆ ತುಳು ಮಹಾಕಾವ್ಯಗಳು ಆಕರ ಸಾಮಾಗ್ರಿಗಳಾಗಿ ಈಗಾಗಲೇ ಬಳಕೆಯಾಗಿದೆ.

ತುಳು ಮಹಾಕಾವ್ಯಗಳ ಕಲಾವಿದ ಕೇಂದ್ರಿತ ಅಧ್ಯಯನವು ಸಹ ನಡೆದಿದೆ. ಮಾಜಾರಿನ ಗೋಪಾಲ ನಾಯ್ಕ, ಅವರಿಗೆ ತಿಳಿದಿರುವ ಕಾವ್ಯಗಳು, ಪುರಾಣಗಳು, ಐತಿಹ್ಯಗಳು, ಕತೆಗಳು, ವೈದ್ಯಕೀಯ ಜ್ಞಾನ, ಕೃಷಿ ಸಂಬಂಧಿತ ತಿಳುವಳಿಕೆ, ಸಸ್ಯವರ್ಗ ಮತ್ತು ಪ್ರಾಣಿ ವರ್ಗದ ಪರಿಜ್ಞಾನ ಹೀಗೆ ಎಲ್ಲಾ ಮಾಹಿತಿಗಳನ್ನು ಸಿರಿ ಮಹಾಕಾವ್ಯದ ದಾಖಲಾತಿಯ ಭಾಗವಾಗಿ ಮಾಡಿಲಾಗಿದೆ. ಸಾವಿರಾರು ಗೆರೆಗಳುಳ್ಳ ಒಂದು ಮೌಖಿಕ ಕಾವ್ಯವು ಹೇಗೆ ರೂಪುಗೊಳ್ಳುತ್ತದೆ, ಕಾವ್ಯ ರಚನೆಯ ತಂತ್ರಗಳು, ಸೂತ್ರಗಳು ಯಾವುವು, ಅವುಗಳು ಹೇಗೆ ಮತ್ತು ಯಾಕೆ ಬದಲಾಗುತ್ತವೆ, ಅಧಿಕೃತ ಪಠ್ಯ ಎಂದರೆ ಯಾವುದು, ಅಂತಹದೊಂದು ಇದೆಯೋ, ಮಾನಸಿಕ ಪಠ್ಯದ ಸ್ವರೂಪವೇನು, ಅವುಗಳು ವ್ಯತ್ಯಾಸಗೊಳ್ಳಲು ಕಾರಣ ಮತ್ತು ಅವುಗಳು ಹೊಂದಿರುವ ಸಾಮಾಜಿಕ ಪ್ರಸ್ತುತತೆ ಏನು ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ತುಳು ಮಹಾಕಾವ್ಯಗಳ ಅಧ್ಯಯನ ಪರಂಪರೆಯು ಪ್ರಯತ್ನಿಸಿದೆ. ಕ್ಷೇತ್ರಕಾರ್ಯ ಮತ್ತು ದಾಖಲಾತಿಯ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತಂತೆ ತುಳು ಮಹಾಕಾವ್ಯಗಳ ಅಧ್ಯಯನವು ಹೊಸ ನೆಲೆಗಳನ್ನು ಕಂಡಿದೆ. ಸಂಶೋಧಕರು ತಂಡದ ರೂಪದಲ್ಲಿ ಕ್ಷೇತ್ರಕಾರ್ಯವನ್ನು ಮಾಡಿದ್ದಾರೆ. ಈ ಬಗೆಯ ತಂಡಗಳಲ್ಲಿ ತುಳುನಾಡಿನ ಮತ್ತು ವಿದೇಶದ ವಿದ್ವಾಂಸರು ಜೊತೆಯಾಗಿ ಕೆಲಸ ಮಾಡಿದ್ದಾರೆ. ತುಳು ಮಹಾಕಾವ್ಯಗಳ ಪರಿಶೀಲನೆಯನ್ನು ದೇಶಿಯ ಕಣ್ಣೂ ಮತ್ತು ವಿದೇಶಿಯ ಕಣ್ಣು ಒಂದುಗೂಡಿ ನಡೆಸಿರುವ ಆರೋಗ್ಯಪೂರ್ಣ ಬೆಳಗಣಿಗೆಯನ್ನು ತುಳುವಿನಲ್ಲಿ ಕಾಣಬಹುದು.

ಜಾನಪದ ದಾಖಲಾತಿ ಮತ್ತು ಅಧ್ಯಯನ ಕೇಂದ್ರವಾಗಿ ಉಡುಪಿಯ ಆರ್. ಆರ್. ಸಿ. (ಪ್ರಾದೇಶಿಕ ಸಂಶೋಧನಾ ಕೇಂದ್ರ) ರೂಪುಗೊಳ್ಳುತ್ತಿದೆ. ಈ ಸಂಸ್ಥೆಯು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ವಿವರಗಳು ಸಿರಿ ಸಂಪದ ಎನ್ನುವ ಇಂಗ್ಲಿಷ್ ಗ್ರಂಥದಲ್ಲಿದೆ. ಈ ಸಂಸ್ಥೆಯ ಆಶ್ರಯದಲ್ಲಿ ನಡೆಸಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಗೋಷ್ಠಿಗಳು, ತರಬೇತು ಕಮ್ಮಟಗಳು, ಪ್ರಕಟಣೆಗಳು ಜಾನಪದ ಆಸಕ್ತರು ಗಮನ ಸೆಳೆಯುವಂತಿದೆ. ಜಾನಪದ ಎಲ್ಲ ಪ್ರಕಾರಗಳ ಮಾಹಿತಿ ಸಂಗ್ರಹ ಮತ್ತು ಅಧ್ಯಯನವನ್ನು ಈ ಸಂಸ್ಥೆಯು ನಿರ್ವಹಿಸುತ್ತಿದೆ. ಯಕ್ಞಗಾನ, ಭೂತಾರಾಧನೆ, ಮೌಖಿಕ ಮಹಾಕಾವ್ಯಗಳು, ಜನಪದ ಕತೆಗಳು, ಜನಪದ ವಾಸ್ತಶಿಲ್ಪ, ಜನಪದ ವೈದ್ಯ, ಜಾತ್ರೆಗಳು, ನಗರ ಜಾನಪದ ಹೀಗೆ ಜಾನಪದದ ವಿವಿಧ ವಿಷಯಗಳ ಕುರಿತಂತೆ ಸಂಶೋಧನ ಯೋಜನೆಗಳನ್ನು ಈ ಸಂಸ್ಥೆಯು ದಾಖಲಾತಿ ಸಾಮಾಗ್ರಿಗಳ ಸಂರಕ್ಷಣೆಯನ್ನು ಜತನದಿಂದ ಮಾಡುತ್ತಿದೆ. ಈ ಸಂಸ್ಥೆಯಲ್ಲಿರುವ ದಾಖಲಾತಿ ಸಾಮಾಗ್ರಿಗಳ ಸ್ಥೂಲ ವಿವರ ಹೀಗಿದೆ. ೨೧೩೯ ಗಂಟೆಗಳ ಅವಧಿಯು ಆಡಿಯೋ ದಾಖಲಾತಿ, ೫೪೧ ಗಂಟೆಗಳ ಅವಧಿಯ ವೀಡಿಯೋ ದಾಖಲಾತಿ, ೫೨೮೮ರಷ್ಟು ವರ್ಣ ಪಾರದರ್ಶಿಕೆಗಳು, ೧೪, ೫೦೦ರಷ್ಟು ಕಪ್ಪು ಬಿಳುಪು ಚಿತ್ರಗಳು, ೩, ೦೦೦ದಷ್ಟು ವರ್ಣ ಚಿತ್ರಗಳು ಆರ್. ಆರ್. ಸಿ. ಯು ಆರ್ಕೈವ್ಸ್ ನಲ್ಲಿದೆ. (೧೯೯೪) ಕು. ಶಿ, ಹರಿದಾಸ ಭಟ್ಟರ ‘ಕನಸಿನ ಮತ್ತು ಮಹತ್ತ್ವಾಕಾಂಕ್ಷೆಯ’ ಈ ಸಂಸ್ಥೆಯು ೨೧ನೆಯ ಶತಮಾನದ ಸರ್ವೋತ್ಕೃಷ್ಟ ಜಾನಪದ ಕೇಂದ್ರವಾಗಿ ರೂಪುಗೊಳ್ಳುವ ಬಗ್ಗೆ ಅನುಮಾನವಿಲ್ಲ.

ಈ ಪ್ರದೇಶದ ಜಾನಪದ ಅಧ್ಯಯನವನ್ನು ಸ್ಥಳೀಯ ವಿದ್ವಾಂಸರ ಜೊತೆಗೂಡಿ ನಡೆಸುತ್ತಿರುವವರಲ್ಲಿ ಫಿನ್ಲೆಂಡಿನ ಲೌರಿ ಹಾಂಕೋ ಅಗ್ರಮಾನ್ಯವಾಗಿದ್ದಾರೆ. ಫಿನ್ಲೆಂಡಿನ ನಾರ್ಡಿಕ್. ಇನ್ಸ್ಟಿಟ್ಯೂಟ್ ಆಫ್ ಪೋಕ್ ಲೋರ್ ಸಂಸ್ಥೆಯು ಆರ್. ಆರ್. ಸಿ. ಉಡುಪಿ ಮತ್ತು ಧರ್ಮಸ್ಥಳದ ಸಹಯೋಗದಲ್ಲಿ ೧೯೮೯ರ ಫೆಬ್ರವರಿ ೧೨ರಿಂದ ೨೫ರವರೆಗೆ ಉಡುಪಿ ಮತ್ತ ಧರ್ಮಸ್ಥಳದಲ್ಲಿ Finish – Indian Training and Fieldwork Course In Oral Folklore ಎಂಬ ಶಿಬಿರವನ್ನು ನಡೆಸಿತು. ಲೌರಿ ಹಾಂಕೋ ಈ ಶಿಬಿರದ ನಿರ್ದೇಶಕರಾಗಿದ್ದರು. ಶೈಕ್ಷಣಿಕ ಮತ್ತು ಕ್ಷೇತ್ರ ಕಾರ್ಯದ ವೈಜ್ಞಾನಿಕ ವಿಧಾನಗಳನ್ನು ತುಳು ಜಾನಪದ ಸಂಶೋಧಕರಿಗೆ ಅವರು ತಿಳಿಸಿಕೊಟ್ಟರು. ದಾಖಲಾತಿಗೆ ಸಂಬಂಧಿಸಿದಂತೆ ‘ಉತ್ತಮ’‘ಸಮಗ್ರ’ ಮತ್ತು ‘ದಟ್ಟ’ ಎಂಬ ಮೂರು ಮುಖ್ಯ ಅಂಶಗಳನ್ನು ಅಳವಡಿಸಿಕೊಂಡು ಕ್ಷೇತ್ರ ಕಾರ್ಯವನ್ನು ನಡೆಸಿದರು. ತರಬೇಕು ಶಿಬಿರದ ಕುರಿತಂತೆ ವಿವೇಕ ರೈ ಹೇಳಿರುವ ಮಾತುಗಳು ಹೀಗಿವೆ. ‘ದಾಖಲಾತಿಯ ತಾಂತ್ರಿಕ ಗುಣಮಟ್ಟಕ್ಕೆ ಸಂಬಂಧಿಸಿದಂತೆ (ದೃಶ್ಯ ಮತ್ತು ಶ್ರವ್ಯ ದಾಖಲಾತಿ) ‘ಉತ್ತಮ’, ‘ಪೂರ್ಣ’ ಆರಾಧನೆಯ ದಾಖಲಾತಿಯ ದೃಷ್ಟಿಯಿಂದ ‘ಸಮಗ್ರ’, ಬಹುಮುಖಿ ದಾಖಲಾತಿ (ಎರಡು ವೀಡಿಯೋ ಕೆಮರಾಗಳು, ಅನೇಕ ಟೇಪ್ ರೆಕಾರ್ಡರಗಳು, ಸ್ಲೈಡ್ ಮತ್ತು ವರ್ಣದ ಫೋಟೋ, ಸಂದರ್ಶನ, ಟಿಪ್ಪಣಿ – ಎಲ್ಲವೂ ಏಕಕಾಲದಲ್ಲಿ) ಯ ದೃಷ್ಟಿಯಿಂದ ‘ದಟ್ಟ’ – ಈ ರೀತಿಯ ದಾಖಲಾತಿಯ ಮಹತ್ವ ಮತ್ತು ಅಗತ್ಯವನ್ನು ತುಳು ಜಾನಪದ ಸಂಶೋಧಕರಿಗೆ ಈ ತರಬೇತಿ ಶಿಬಿರ ಮನವರಿಕೆ ಮಾಡಿಕೊಟ್ಟಿತು. ಸಂದರ್ಶನ ಮಾಹಿತಿಗಳನ್ನು ವ್ಯವಸ್ಥಿತವಾಗಿ ದಾಖಲಿಸಿ, ಕಂಪ್ಯೂಟರಿಗೆ ಅಳವಡಿಸಲು ಅನಕೂಲಕರವಾದ Callcardನ್ನು ಈ ಶಿಬಿರದಲ್ಲಿ ಬಳಸಿಕೊಳ್ಳಲಾಯಿತು. ಧರ್ಮಸ್ಥಳದ ಪರಿಸರದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ನಡೆಸಿದ ಈ ಕ್ಷೇತ್ರ ಕಾರ್ಯ, ತರಬೇತಿ ಶಿಬಿರದಲ್ಲಿ ತುಳು ಜಾನಪದದ ಬಹುತೇಕ ಎಲ್ಲ ಪ್ರಕಾರಗಳನ್ನು (ಪಾಡ್ಸನ, ಕಬಿತ, ಗಾದೆ, ಒಗಟು, ಭೂತಾರಾಧನೆ, ಸಿರಿ ಆರಾಧನೆ, ಜನಪದ ವೈದ್ಯ, ಕೈಕಸಬು, ಕ್ರೀಡೆಗಳು, ಜನಪದ ಬದುಕು) ದಾಖಲಿಸಿಕೊಳ್ಳಲಾಯಿತು. ಇದರಿಂದ ಸಂಗ್ರಹವಾದ ಸಾಮಾಗ್ರಿಗಳು: ೧೦ ಗಂಟೆಗಳು ಹೈಬ್ಯಾಂಡ್ ವೀಡಿಯೋ ಟೇಪ್, ೩೦ ಗಂಟೆಗಳ ಸೂಪರ್ ವಿ. ಎಚ್. ಎಸ್. ವೀಡಿಯೋ ಟೇಪ್, ಸುಮಾರು ೫೦೦೦ ಪೋಟೋಗಳು, ಸುಮಾರು ೬೦೦ ಕಾಲ್ ಕಾರ್ಡಗಳು, ಅನೇಕ ಟಿಪ್ಪಣಿ ಪುಸ್ತಕಗಳು, ನಕ್ಷೆಗಳು ಇತ್ಯಾದಿ ಈ ಎಲ್ಲಾ ಸಾಮಾಹ್ರಿಗಳ ಒಂದೊಂದು ಪ್ರತಿ ಉಡುಪಿಯ ಆರ್. ಆರ್. ಸಿ. ಯಲ್ಲಿ ಸಂರಕ್ಷಿಸಿ ಇಡಲಾಗಿದೆ. (‘ತುಳುವರಿವರು’ ೧೯೯೭, ಪುಟ೨೬೪-೨೬೫)

ಸಿರಿ ಸಂಧಿ ಮತ್ತು ಸಿರಿ ಆರಾಧನೆಯ ಕುರಿತಂತೆ ಲೌರಿ ಹಾಂಕೋ ಅವರ ನೇತೃತ್ವದ ಸಂಶೋಧನ ತಂಡ ಅಪಾರ ಸಾಮಾಗ್ರಿಯನ್ನು ಕಲೆ ಹಾಕಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಮಾಚಾರಿನ ಗೋಪಾಲ ನಾಯ್ಕರಿಂದ ಸಿರಿ ಸಂಧಿ ಮತ್ತು ಆರಾಧನೆಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಲೌರಿ ಹಾಂಕೋ, ಶ್ರೀಮತಿ ಅನೇಲಿ ಹಾಮಕೋ, ವಿವೇಕ ರೈ ಮತ್ತು ನಾನು(ಕೆ. ಚಿನ್ನಪ್ಪ ಗೌಡ) ಹೀಗೆ ನಾಲ್ಕು ಮಂದಿಯ ತಂಡವು ಮೌಖಿಕ ಪುರಾಣಗಲ ಅಧ್ಯಯನ ಯೋಜನೆಯಲ್ಲಿ ಗೋಪಾಲ ನಾಯ್ಕರಿಂದ ಸಿರಿ ಸಂಧಿಯ ಬೃಹತ್ ಪಠ್ಯವನ್ನು ಸಂಗ್ರಹಿಸಿದೆ. ಗೋಪಾಲ ನಾಯ್ಕರ ಮನೆಯಲ್ಲಿ ನಡೆದ ಸಿರಿದಲ್ಯಗಳು, ನಿಡ್ಗಲ್ಲಿನ ಸಿರಿ ಜಾತ್ರೆ, ಆರಾಧನೆಯ ವಿವಿಧ ಸಂದರ್ಭಗಳು ಸಿರಿ ಸಂಧಿಯನ್ನು ಕಲಿತ ಮತ್ತು ಬಳಸುವ ಪ್ರಕ್ರಿಯೆ ಮೊದಲಾದ ವಿಚಾರಗಳ ಬಗ್ಗೆ ಸಂಶೋಧನ ಸಹಾಯಕರೆಂಬ ನೆಲೆಯಲ್ಲಿ ಗೋಪಾಲ ನಾಯ್ಕರೊಂದಿಗೆ ಸಂವಾದ ನಡೆಸಿ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ. ಹಲವು ವರ್ಷಗಳ ಕ್ಷೇತ್ರ ಕಾರ್ಯ ಮತ್ತು ಪರಿಶ್ರಮದ ಫಲವಾಗಿ Siri Epic as Performed bu Gopal Naik’ ಎಂಬ ಗ್ರಂಥವು ಬಿಡುಗಡೆಯಾಗಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬೆಳಾಲು ಮಾಚಾರು ಪರಿಸರದ ಮಾಪಲ ಮನೆಯ ಶ್ರೀ ಗೋಪಾಲ ನ್ಯಾಕ ಹಾಡಿರುವ ಸಿರಿ ಮಹಾಕಾವ್ಯವು ಗ್ರಂಥರೂಪದಲ್ಲಿ ಪ್ರಕಟವಾಗಿ ಬಿಡುಗಡೆಗೊಂಡಿದೆ. ಸಿರಿ ಮಹಾಕಾವ್ಯದ ಎರಡು ಸಂಪುಟಗಳು ಮತ್ತು ಈ ಮೌಖಿಕ ಮಹಾಕಾವ್ಯದ ಪಠ್ತೀಕರಣ ಪ್ರಕ್ರಿಯೆ ಹಾಗೂ ಸಿರಿ ಪಠ್ಯದ ಮಹತ್ವವನ್ನು ಹಲವು ಆಯಾಮಗಳಿಂದ ವಿವೇಚಿಸುವ ಒಂದು ಸಂಪುಟ – ಹೀಗೆ ಒಟ್ಟು ಮೂರು ಸಂಪುಟಗಳು ಅಂತರರಾಷ್ಟ್ರೀಯ ಸ್ವರೂಪ, ವೈಶಿಷ್ಟ್ಯ ಹಾಗೂ ವಿಷಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

1. FF Communication No. 264
Textualixing the Siri Epic- Lauri Honko

2. FF Communication No. 265
The Siri Epic (Part I)

As performed by Gopal Naika by LauriHonko in Colaboration with Chinappa, Anneli Honko and Viveka Rai

3. FF Communication No 266
The Siri Epic (Part II)

as performed by Gopal Naika by Lauri Honko in collaboration with Chinnappa Gowds, Anneli Honko and Viveka Rai.

ಈ ಮೂರು ಸಂಪುಟಗಳ ಪ್ರಕಾಶಕರು

Helsinki 1998
Soumalainen Tiedeakatemia
Academia Scientiareum Fennica