ಈ ಬಿಲ್ಲವ, ಮೊಗೇರ, ನಾಡವ (ಬಂಟ) ಇವರೊಳಗೆ ರಕ್ತ ಸಂಬಂಧವು ಮೂರು ವರ್ಗಕ್ಕೂ ಸಾಧಾರಣ ಸಮಾನವಾಗಿರುವ ಅವರ ‘ಬಳಿ’ (ಬರಿ)ಗಳಿಂದ ತಿಳಿದು ಬರುತ್ತದೆ.

೧) ಪುಲ್ಯಟನ್ನಾಯ ೨) ಸಾಲಿಯನ್ನಾಯ ೩) ಬಾಗ್ಯೆಟನ್ಯಾಯ ೪) ಆರ್ಯನ್ನಾಯ ೫) ತಿಂಗಳನ್ನಾಯ ೬) ಸಾಲಿನ್ನಾಯ ೭) ಬಂಗರನ್ನಾಯ ೮) ಸಿರಿಯ ೯) ಕೆಲ್ಲಿರನ್ನಾಯ ೧೦) ಬೆರ್ಮೆತ್ತಿ ಬನ್ನಾಯ ೧೧) ಪೆರ್ಗಡೆನ್ನಾಯ ೧೨) ಬುಣ್ಣನ್ನಾಯ ೧೩) ಕಾಂಚನ್ನಾಯ ೧೪) ಕೋಚರನ್ನಾಯ ೧೫) ಪುತ್ರನ್ನಾಯ ೧೬) ನೆಲಬನ್ನಾಯ ೧೭) ಸಲಬನ್ನಾಯ ಅಥವಾ ಅಯ್ಯಬನ್ನಾಯ ೧೮) ಕನ್ನಡಿ ಬನ್ನಾಯ ೧೯) ಉಳಿಬನ್ನಾಯ ೨೦) ಕೋಮಟಿ ಬನ್ನಾಯ ೨೧) ಕರ್ಮರನ್ನಾಯ ೨೨) ಉಪ್ಪೊರನ್ನಾಯ ೨೩) ತಲಾರಬನ್ನಯ ೨೪) ಪಾಂಗಳನ್ನಾಯ

(ಅಹಿಛತ್ರದಿಂದ ಬಂದು ನೆಲೆಸಿದ ಬ್ರಾಹ್ಮಣರು ತುಳು ನಾಡಿನ ಬ್ರಾಹ್ಮಣೇತರ ಸ್ತ್ರೀಯರನ್ನು ಮುಖ್ಯವಾಗಿ ಬಂಟರ ಸ್ತ್ರೀಯರನ್ನು ವಿವಾಹವಾದುದರ ಫಲವಾಗಿ ಅವರಲ್ಲಿಯೂ ಈ ಬಳಿಗಳು ಕುಲವಾಚಕಗಳಾಗಿ ಉಳಿದುವು ಎಂಬ ಅಭಿಪ್ರಾಯವಿದೆ.)

ಬೇರೆ ಬೇರೆ ಜಾತಿಗಳ ಕೌಟುಂಬಿಕ ಹೆಸರುಗಳನ್ನು (Surnames or honorific titles)  ಓದುಗರ ಅವಗಾಹನೆ ಬಗ್ಗೆ ಸಾಧ್ಯವಾದ ಮಟ್ಟಿಗೆ ಕ್ರೋಡೀಕರಣ ಮಾಡಿ ಈ ಕೆಲಗೆ ಕೊಟ್ಟಿದ್ದೇನೆ. ಈ ಕ್ರೋಢೀಕರಣವು ಪರಿಪೂರ್ಣವಾದುದಲ್ಲವೆಂದು ತಿಳಿಸಲು ಹಿಂಜರಿಯಲಾರೆ.

೧. ಬಿಲ್ಲವರು : ಪೂಜಾರಿ, ಬೋಂಟ್ರ, ಸುವರ್ಣ, ಮೆಂಡ, ಸಾಲಿಯಾನ, ಬೈದ್ಯ, ಆಳ್ವ, ಸಾಲಿಯಾನ್, ಕರ್ಕೇರ, ಕುಂದರ್, ಕೋಟಿಯಾನ್, ಪುತ್ರನ್.

೨. ಮೊಗೇರರು : ಮೊಗೇರ, ಮರಕಲ, ಬೋವಿ, ಬಂಗೇರ, ಕೋಟಿಯಾನ ಸಾಲಿಯಾನ, ಪುತ್ರನ್, ಸುವರ್ಣ, ಕರ್ಕೇರ, ಕುಂದರ್, ಕಾಂಚನ್, ತೋಳಾರ, ಅಮೀನ್, ಶ್ರೀಯನ್, ಮೆಂಡನ್ ಈ ಹೆಸರುಗಳು ಅವರ ಬಳಿಗಳ ಹೆಸರುಗಳಿಂದ ಬಂದಂತೆ ಕಂಡು ಬರುತ್ತದೆ.

೧. ಬಂಗಾರಣ್ಣಾಯ – ಬಂಗೇರ (ಬಡಲಾಗಿ ಗಂಗರ)

೨. ಸಾಲಿಯನ್ನಾಯ – ಸಾಲಿಯನ್

೩. ಪುತ್ರನ್ನಾಯ – ಪುತ್ರನ್

೪. ದೋರಣ್ಣಾಯ – ಸುವರ್ಣ

೫. ಕುಂದಲಾಯ – ಕುಂದರ್

೬. ಕಾಂಚನ್ನಾಯ – ಕಾಂಚನ್

೭. ಸಿರಿಯನ್ನಾಯ – ಶ್ರಿಯಾನ್

೮. ಮಂದಣ್ಣಾಯ – ಮೆಂಡನ್

೯. ತಿಂಗಳನ್ನಾಯ – ತಿಂಗಳಾಯ

೧೦. ಕರ್ಬುರನ್ನಾಯ – ಕರ್ಕೇರ

೧೧. ತೆಳರಬನ್ನಾಯ – ತೋಳಾರ್

೩. ನಾಡವರು (ಬಂಟರು) : ಪಾಂಡ್ಯ, ಬಳ್ಳಾಳ, ಹೆಗ್ಗಡೆ, ಸೆಟ್ಟಿ, ರಾಯಿ (ಅರೈ) ಬಂಟ, ಮೇಲಾಂಟ, ನಾಯಕ, ಭಂಡಾರಿ, ಶೇಕ,ಪಕ್ಕಳ, ಅಜಿಲ, ಮಾರ್ಲ, ಆಳ್ವ, ಸೇನವ, ತೋಳಾರ, ಪೂಂಜ, ಚೌಟ, ಅಧಿಕಾರಿ, ಅಡ್ಯಂತಾಯ, ಅರಸ, ಸುಳಾಯ, ಸೇಮಿತ, ಶೇರ್ವೆಗಾರ, ಅಡಪ್ಪ, ನೋಂಡ, ಕಂಬಳಿ, ಕಡಂಬ, ಮಾಡ, ಮೇಂಡ, ಪೂವಣಿ, ಕುದ್ರೆ, ಮುದ್ಯ, ಕಾವ, ಕಾಂತೀವ, ಮಲ್ಣಿ, ಮುಂಡ, ಮಲ್ಲ, ವರ್ಮ ಪೈಯಡ, ಮುರಯ್ಯ, ಆರಿಗ, ನಾಯರ, ಬಿನ್ನಣಿ, ಮುಕ್ಕಾಲ, ಮಾಣಾಯೀ ಪಾಲ,  (ಪಡ್ಯಲ), ಸಾಮಣಿ, ಭೋಜ, ಆಜಿರಿ, ಬುನ್ನಾಳ, ಕಾಂಞವ, ಅತ್ತರ, ಕೊಟ್ಟಾರಿ, ಬುಡಲೆ, ಧೊರೆ, ಸಾಮಂತ, ಪೆರ್ಗಡೆ, ರಾಜ, ಮದ್ದಾಲ.

ಹಿಂದಕ್ಕೆ ಕೊಟ್ಟ ೨೪ ಪ್ರಧಾನ ಬಳಿಗಳು ಹೊರತಾಗಿ ಈ ಕೆಳಗಿನ ಹೊಸಬಳಿಗಳು ನಾಡವ ಸಮಾಜಕ್ಕೆ ಸಂಬಂಧಿಸಿದವುಗಳಾಗಿವೆ.

ಐಬನ್ನಾಯ ಇರ್ವತ್ತೂರನ್ನಾಯ, ಸಾಮಂಣಾಯ, ಮುದ್ದರನ್ನಾಯ, ಗುವೆಲನ್ನಾಯ, ಕರ್ಕಟನ್ನಾಯ, ಕೊಂಗೆನ್ನಾಯ, ಕೋಯನ್ನಾಯ, ಕಾಯರನ್ನಾಯ, ಸೆಟ್ಟಿಬನ್ನಾಯ, ಕೇರಟಬನ್ನಾಯ, ಓಡರನ್ನಾಯ, ಕತ್ತಿಬನ್ನಾಯ, ಅಂಚಬನ್ನಾಯ, ಅಡ್ಯಾರನ್ನಾಯ, ಪಿಲಿಬನ್ನಾಯ, ಮಾಯನ್ನಾಯ, ನೆಟ್ಟನ್ನಾಯ, ರಂಡೇತಿನ್ನಾಯ, ನೀರನ್ನಾಯ, ಕುಕ್ಕೇನ್ನಾಯ, ಚೌಟರನ್ನಾಯ; ಯೇಮರನ್ನಾಯ, ನಾಯರನ್ನಾಯ, ಅದರನ್ನಾಯ, ನಾವರಿಬನ್ನಾಯ, ತೊಂದರನ್ನಾಯ, ನೆಲಪಾಡಿದನ್ನಾಯ, ಕೊಯ್ಯರಬನ್ನಾಯ, ಪಾದೂರನ್ನಾಯ, ಗುಜ್ಜರ ಬನ್ನಾಯ, ಐವರನ್ನಾಯ, ಕುಂದನಿಬನ್ನಾಯ, ಕರಂಬನ್ನಾಯ, ಬಿರ್ಮರನ್ನಾಯ ಸಾಮಣ್ಣಾಯ (೨೪+೩೬=೬೦ ಬಳಿಗಳು)

೪. ಬ್ರಾಹ್ಮಣರು

೧. ಸ್ಥಾನಿಕರು :- ಉಪಾಧ್ಯ, ಶಾಸ್ತ್ರಿ, ಅಯ್ಯ, ಅಪ್ಪ, ಅಣ್ಣ, ಪಂಡಿತ, ಜೋಯಿಸ, ಶರ್ಮ, ಓಜ, ಜೀಯ, ರಾವ್‌(ರಾಯರು) ಹೆಬ್ಬಾರ

೨. ಹವಿಕರು :- ಸಭಾಹಿತ, ಮಧ್ಯಸ್ಥ, ದೀಕ್ಷಿತ (ಯಾಜೀ) ಭಟ್ಟ, ಅವಭೃತ (ಅಪ್ಪರ್ತ), ತಂತ್ರಿ (ತಾಂತ್ರಿಕ) ಪ್ರಭು (ಹೆಗ್ಗಡೆ), ಹೆಬ್ಬಾರ, ಅಡಿ, ಕಡ್ಗಿ, ಗೋಪಿ.

೩. ಅಹಿಚ್ಛತ್ರದ ಬ್ರಾಹ್ಮಣರು : ತಲಪಾಡಿತ್ತಾಯ, ಪತೂರತಾಯ, ಕರೆವೂರುತಾಯ, ಕುದ್ರೆತ್ತಾಯ, ಇಚ್ಚಿಲತ್ತಾಯ, ಅನಂತೋಡಿತ್ತಾಯ, ಮಯ್ಯರುತಾಯ, ಪೊಯ್ಯೊತಾಯ.
ಮದವೂರುತ್ತಾಯ, ತಾಳಿತ್ತಾಯ, ನಾರಳತ್ತಾಯ, ಅರಯಪ್ಪಿನಾಯ, ನೇತ್ರತ್ತಾಯ, ಮಂಜನಾಡಿತ್ತಾಯ.
ಬಕ್ಕುತ್ತಾಯ, ಇನ್ನೊಂತಾಯ.
ಸುಳ್ಯಣ್ಣಾಯ, ಪದಕಣ್ಣಾಯ
ಇರ್ನೂರಾಯ, ಕಿದೆವೂರುತ್ತಾಯ, ಕುಣಿಲಾಯ, ಕುಡಲತ್ತಾಯ.

ಕಣ್ಣರಣ್ಣಾಯ ಕಂಬೂರನ್ನಾಯ, ಇರ್ವತ್ತೂರಾಯ, ಮಿತ್ತಡಕತ್ತಾಯ. ಬಜೆತ್ತಾಯ, ಪಿಳಿಕರೆತ್ತಾಯ, ಕಂಬ್ಲಂತೋಡಿಯ, ಮೂಡೆಂತ್ತಾಯ ಅಂಬರತ್ತಾಯ, ಶಂಬರತ್ತಾಯ, ಇಂದ್ರವಳ್ಳಿತ್ತಾಯ, ಕಣ್ಣಾರಣಾಯ, ಕಂಬಾರಣಾಯ, ಇರುವಂತೂರಾಯ, ಕಾಯಕೋಡಿತ್ತಾಯ, ಮಿತ್ತನಾಡುತ್ತಾಯ

ಕಡಂಬಳತ್ತಾಯ, ಗಂಗೆತ್ತಾಯ, ದೆಪ್ಪುಂಜಿತ್ತಾಯ, ಬಳ್ಕುಳುತ್ತಾಯ.

ಶ್ರೀಮಂತೂರುತ್ತಾಯ, ಶಿಬರುತ್ತಾಯ, ಮುನ್ನೂರಾಯ, ಮುಚ್ಚತ್ತಾಯ, ಮಡಿಕುಳಾಯ, ಸೆಡಿಕುಳಾಯ, ಅಸುರಣ್ಣಾಯ, ಪೆರಣ್ಣಾಯ.

ಮೊಗೆನಾಯ, ಮಿತ್ತಂತಾಯ, ಮಡುವಣ್ಣಾಯ, ವೈಲಾಯ, ಕಾಂಚತಾಯ, ಔತಣ್ಣಾಯ, ಬರ್ಕಣ್ಣಾರಿತ್ತಾಯ, ಉಳ್ಕುರಾಯ.

ಅಲೆವೂರಾಯ, ಕೊಡಂಚತ್ತಾಯ, ಪುಳಿತ್ತಾಯ, ಮಂಜತ್ತಾಯ, ಸರಳತ್ತಾಯ, ಕುತ್ತು ಒಳಿತ್ತಾಯ,

ಸಗರಿತ್ತಾಯ, ತೆಂಕಿಲ್ಲಾಯ, ನಡ್ವತ್ತಿಲ್ಲಾಯ, ಕುಂಜಿತ್ತಾಯ,
ಕೂಡೆಮೂರುತ್ತಾಯ, ಪುತ್ತೂರಾಯ, ಬಾಯರಿತ್ತಾಯ, ಕೊಡೆತ್ತಾಯ. ಹೇರಳ, ಹೆಬ್ಬಾರ, ಮೈಯ, ಕಾರಂತ, ಹಂದೆ, ಬಾಸರಿ, ನಾವಡ, ಹೊಳ್ಳ, ಹೆಬ್ಬಾರ, ಉಡುಪ.
ಬೈಪಾಡಿತ್ತಾಯ, ಕುಜಿಮಣ್ಣಾಯ, ಯತ್ತಾಡಿತ್ತಾಯ, ವಾಗಣ್ಣಾಯ, ಕಾಡಂತಾಯ,
ಉರಿವುಳ್ಳ ಬೈಪಾಡಿತ್ತಾಯ, ಪಾಂಗಣ್ಣಾಯ
ಪುಳಿಂಪೊಡಿತ್ತಾಯ, ಆಂಬುಳಣ್ಣಾಯ,
ಅಪ್ಪುಂತಾಯ, ಅರಿಮನಿನಾಯ, ಕುಕ್ಕೋಡಿತ್ತಾಯ
ಮುಂಡತಾಡಿತ್ತಾಯ, ಮುಡಿಪಾಡಿತ್ತಾಯ, ಅರಿಪಾಡಿತ್ತಾಯ,
ಶಿಲಣ್ಣಾಯ, ಅರ್ಬಿತ್ತಾಯ.
ಪುರತ್ತಾಯ, ಕುಂಞ್‌ಮಾರ್ಗತ್ತಾಯ, ಪೆರಡಿತ್ತಾಯ,
ಮುಚ್ಚಿಂತ್ತಾಯ, ಅಳ್ಳಿತ್ತಾಯ, ಮಡುವಿನಾಯ, ಕುಗ್ದಣ್ಣಾಯ,
ಕೊರಂಗಿನ್ನಾಯ, ಕಕ್ಕರನ್ನಾಯ, ಇಡೆಪಾಡಿತ್ತಾಯ, ಶಬರಾಯ,
ಉಪರಣ್ಣಾಯ, ಕೊಡಿತ್ತಿಲ್ಲಾಯ.
ನೊರಿತ್ತಾಯ, ಮಟ್ಟೆನ್ನಾಯ, ತೆಂಜಿತ್ತಾಯ, ಪೆರ್ಲತ್ತಾಯ,
ಪುದಿನಾಯ, ಅಮತೋಡಿತ್ತಾಯ, ಪೊರಳತ್ತಾಯ, ಇಲ್ಲಡಿತಾಯ,
ಬಾಯಾರಿತ್ತಾ, ಉಮ್ಮಣ್ಣಿತ್ತಾಯ, ಅಮ್ಮಣಿತ್ತಾಯ.
ಮೊಡಿಂಪಾಡಿತ್ತಾಯ, ಎಡೆಕಿಲ್ಲಾ, ಇಬ್ಬಳಿತ್ತಾಯ, ಮೂಸೆಪಾಸಿತ್ತಾಯ
ಮಣಿಕಳ್ಳಾಯ, ಕೆಳ್ತಾಯ, ಪಡಂಗತ್ತಾಯ, ಅಬಿಲಿತ್ತಾಯ ಮಣಗಳತ್ತಾಯ, ಅರುಂಬಡತ್ತಾಯ.
ಬಿಜತ್ತಾಯ
ಇಡೆಬೆಟ್ಟನಾಯ, ಅನಿಂಜತ್ತಾಯ.
ಶಿರಿಯಾಡಿತ್ತಾಯ, ಕುಂಟಾರಂತಾಯ, ಕುಂಕೋಡಿತ್ತಾಯ, ಬಾಜಿತ್ತಿಲ್ಲಾಯ, ಕೆಮ್ಮುಂಡೆತ್ತಾಯ.,
ಇರೆಕಟ್ಟತ್ತಾಯ, ಪೊನ್ನೆತ್ತಾಯ, ಅರ್ಕ್ಯಂತಾಯ, ಸಿರತ್ತಾಯ, ಕಜೇಕಂತಾಯ

ಅಗ್ನಿಹೋತ್ರಿ

ಅಲೆವೂರಾಯ, ಸಿಮಂತೂರಾಯ, ಮುಚ್ಚಂತಾಯ, ಮುನ್ನೂರಾಯ, ಕೊಡಂಚತ್ತಾಯ, ಮಡಿಪಳಿತ್ತಾಯ, ಮಂಜಿತ್ತಾಯ, ಕುಂಜಿತ್ತಾಯ ನಡ್ವತಿಲ್ಲಾಯ, ಸಗರಿತ್ತಾಯ, ತೆಂಕಿಲ್ಲಾಯ, ಕಡಂಬಳಿತ್ತಾಯ, ಕೆಕೊಡೆನಾಯ, ಕೊರೆನಾಯ, ಬನ್ನಿಂಜೆತ್ತಾಯ, ಮರಡಿತ್ತಾಯ, ಶಿವತ್ತಾಯ, ಇಡೇ ಪಾಡಿತ್ತಾಯ, ಪಾಂಗಣ್ಣಾಯ, ಉಡುಪ, ಇರಿತ್ತಾಯ, ಕುಂಜೂರಾಯ, ಮಿತ್ತಂತಾಯ, ಸರಳಾಯ.

ಸ್ಮಾರ್ತಜನರು

ತಾಳೆತಾಯ, ನಾರಳತಾಯ, ಅರಯಪಿನಾಯ, ಕಿದೆಕಿದೆನಾಯ, ನೂರಿತ್ತಾಯ, ಚಂಪಗೆತ್ತಾಯ, ಮೂಲೆಪಾಡಿತ್ತಾಯ, ಕಲ್ಲೂರಾಯ, ಉಡುಪ, ಬೈಪಾಡಿತ್ತಾಯ ಅಲೆವೂರಾಯ, ಮೂಡಂಪಾಡಿತ್ತಾಯ, ಕೊರಿಂಗನ್ನಾಯ, ಬ್ರಹ್ಮತ್ತಾಯ, ಕಾರಂತ.

ಭಟ್ಟ ಜನರು

ಮುನ್ನೂರಾಯ, ಅಲೆವೂರಾಯ, ಪೆರಣ್ಣಾಯ ಮಂಜಿತ್ತಾಯ, ಬೈಪಾಡಿತ್ತಾಯ, ಪಿಜತ್ತಾಯ, ಪಾದೂರಾಯ, ಇಂದ್ರವಳ್ಳಿತಾಯ, ಮುಚ್ಚುತ್ತಾಯ, ಸಿರಮಂತೂರಾಯ, ಕೊಡೆನ್ನಾಯ, ಬಡಿಕೊಳತಾಯ, ಕುಂಜತ್ತಾಯ, ಮಡುವಿನಾಯ, ಕೊಡಂಚ, ಕಲ್ಲೂರಾಯ, ಮೊಗೆರಾಯ, ಬ್ರಹ್ಮಕಾರಂತ, ಉಡುಪ, ಒಪ್ಪಂತಾಯ, ನೂರಿತ್ತಾಯ, ಅರಿಮನೆತ್ತಾಯ, ಇಡೆಪಾಡಿತ್ತಾಯ, ಸರಳಾಯ, ಶಬರಾಯ, ಉಪರಣ್ಣಾಯ, ಇರುವತ್ತೂರಾಯ, ಮೂಡುಪಾಡಿತ್ತಾಯ, ಬಜೆತ್ತಾಯ, ಪರಳತ್ತಾಯ, ತೆಂಕಿಲ್ಲಾಯ, ಬಾಯಾರತ್ತಾಯ, ಕೆಕೊಡೆತ್ತಾಯ, ಕೊರಿನ್ನಾಯ, ಬನ್ನಿಂಜತ್ತಾಯ, ಮರಡಿತ್ತಾಯ, ಶಿವತ್ತಾಯ, ನಡುವತ್ತಿಲ್ಲಾಯ, ಸಗರಿತ್ತಾಯ, ಕಂಬಳಿತ್ತಾಯ

ತಂತ್ರಿ ಜನ

ಇಚ್ಚಿಲ್ತಾಯ, ನೇತ್ರತಾಯ ಪಾಂಗಮ್ಣಾಯ, ಪುತ್ತೂರಾಯ

ಪಂಡಿತ ಜನ

ದಪ್ಪಂತಾಯ, ಪಿಜತ್ತಾಯ

ಪಕ್ಷನಾಥರು

ಮೂಡಿಲ್ಲಾಯ, ನಿಡುಂಬೂರಯ

ಬಲ್ಲಾಳ ಜನ

ತಲೆಪಾಡಿತಾಯ, ಮಂಜನಾಡಿತಾಯ, ಕುಂಞಮಣ್ಣಾಯ, ಕುಡಂಬಾಡಿತಾಯ

ಗ್ರಾಮಣಿಗಳು

ಕಿದೆಕಿದೆನ್ನಾಯ, ಸುಳ್ಳಣ್ಣಾಯ, ಕೋಲಟಪುಂಜತ್ತಾಯ, ಕಾಮೋಚಿ, ಶೀಮಂತೂರಾಯ, ಅಂಬರಂತಾಯ, ಮಡುಮಣ್ಣಾಯ, ನಡ್ವತ್ತಿಲ್ಲಾಯ, ನಾರಿತಾಯ, ಉಡುಪ, ಅತ್ರಾಡಿತ್ತಾಯ, ಚಂಪಗೆತ್ತಾಯ, ಕುಡವಣ್ಣಾಯ, ಇಡೆತಾಡಿತ್ತಾಯ, ಅರಮನೆತಾಯ, ಪುದಿನ್ನಾಯ, ಮಣಿಕಳತ್ತಾಯ, ನೂರಿತ್ತಾಯ, ಇಡೆವಟ್ಟಿನಾಯ, ಮಿತ್ತಂತಾಯ, ಮೂಡಂಪಾಡಿತ್ತಾಯ, ಪಾತೂರಾಯ, ಇಣ್ಣರಾಯ, ಕಣ್ಣಾರಂಣ, ಮೂಡಿಂಕಿಲ್ಲಾಯ, ಹೇರಳ, ಕಾರಂತ, ಹೆಬ್ಬಾರ, ನೀಲಾವರ, ಕೊಳತಾಯ, ಓಬಳ್ಳಿ.

ಸಭಾಪತಿ ಜನ

ಶಿಬರೂರಾಯ, ಶಬರೂರಾಯ

ಜನ್ನಿಜನಗಳು

ಶಿಡಿಕುಳ್ಳಾಯ, ಮಡಿಕುಳ್ಳಾಯ, ಮಿತ್ತಂತಾಯ, ವಯಿಲಾಯ,  ಕುಂಜತ್ತಾಯ, ಮಂಜತ್ತಾಯ, ಕೆಮ್ಮುಂಡೆತ್ತಾಯ, ಮುಡೆಂಪಾಡಿತ್ತಾಯ, ಮತಿಪಾಡಿತ್ತಾಯ, ಹೆಬ್ಬಾರ, ಉಗ್ರವಳ್ಳಿತ್ತಾಯ, ಇಡೆವೆಡನಾಯ (ಎಡೆಬದಿನಾಯ), ಕಡೆಕಲ್ಲಾಯ, (ಎಡೆಕಲ್ಲಾಯ) ಕೊಯಿಕೊಡಿತಾಯ, ಉಳ್ಳೂರಾಯ, ಮೂಡಿಲ್ಲಾಯ, ಮಟ್ಟಿನ್ನಾಯ, ಸಣ್ಣಡ್ಕತಾಯ, ಕುಣಿಕುಡರಾಯ, ಅನಂತೋಡಿತ್ತಯ, ಕಣ್ಣಾರಾಯ, ಕಂಬರಣ್ಣಾಯ, ಪುದನಾಯ, ಪುಳಿಂತಾಯ, ಪಡಂಗ, ಇರೆಕಟ್ಟುತ್ತಾಯ, ಪಾಡಿತ್ತಾಯ, ಹೊಳಮಯ್ಯ, ಪಡತ್ತಾಯ, ಜಕ್ಕುಣ್ಣಾಯ, ಅಮ್ಮಣ್ಣಿತ್ತಾಯ, ಕಂಬಳಿಕೊಡಿತಾಯ, ಅರೆಮನೆತ್ತಾಯ, ಪೆಳ್ಳಿಕರತ್ತಾಯ, ಪೊಗೆತ್ತಾಯ, ಮೂಡಂತಿಲ್ಲಾಯ, ಮುಸಿಪಾಸಿತ್ತಾಯ, ಕೊಕ್ಕಡನಾಯ, ಕುತ್ಯಾರಾಯ, ಮಾಮಂತಾಯ, ಉಳಿತಾಯ, ಆದೂಂಡತಾಯ, ಊರಾಳ, ಪಡ್ಡಿಲ್ಲಾಯ, ನಕಕಟತಾಯ, ಪೊಣೆತ್ತಾಯ, ಕಬೆಕೊಡಿನಾಯ.

ಅಧಿವಾಸಿಗಳು

ಅರಿಪಾಡಿತ್ತಾಯ, ಮಡುವಿನ್ನಾಯ, ಅರ್ಬಿತಾಯ, ಕೊದ್ವಟರಾಯ (ಕೆದಟಿರಾಯ), ಅಗ್ಗಿತ್ತಾಯ, ಕಬೆಕೊಡಿನಾಯ, ರೆದೆವೂರಾಯ, ಕುದುರಾಯ, ಬಳ್ಳಂಣ್ಣಾಯ, ಗಂಜಿತ್ತಾಯ, ಬಾರಿತ್ತಾಯ, ಪೊಯ್ಯತ್ತಾಯ, ಕೊಡಿಶಿಲ್ಲಾಯ, ಉಚ್ಚಿಲಣ್ಣಾಯ, ಇಲ್ಲಡಿತಾಯ, ಮಿತ್ತಡ್ಕತ್ತಾಯ, ಪಾಂಗಣ್ಣಾಯ, ಅತಿವೂರಾಯ, ಕುದುರೆತ್ತಾಯ, ಅಂಣಕುಂಜತ್ತಾಯ ಅಂಬಿತಾಯ, ಕನ್ನರ್ಪಾಡಿತ್ತಾಯ, ಕಂಬರಣ್ಣಾಯ, ಪೆಡಂಗಾಯ, ಮಲೆಪಾಡಿತ್ತಾಯ, ಮೂಡುಪಡಿಕತ್ತಾಯ,  ಪರಿಕತ್ತಾಯ, ಮಂಜರೋಡಿತ್ತಾಯ, ಪಡುಕಣ್ಣಾಯ, ನಿಂಜೂರಾ.

ತುಳು ಬ್ರಾಹ್ಮಣದಲ್ಲಿ ಆಚಾರ್ಯ, ಉಪಾಧ್ಯಾಯ, ಸೋಮಯಾಜಿ, ದೀಕ್ಷಿತ, ಶ್ಯಾನುಭಾಗ, ದಾಸ, ರಾವ್, ಪಟ್ಟಾಭಿ, ಮಧ್ಯಸ್ಥ, ಶರ್ಮ, ಶಾಸ್ತ್ರಿ ಅಡಿಗ, ಅವಧಾನಿ ಎಂಬ ಮೇಲ್ ಹೆಸರುಗಳೂ ಇವೆ. ಮಡಿ, ಹಡಪ, ಮಡಿಕೂಳ, ಸೂರ, ಕರಬ, ಉಪ್ಪೂರ, ವರ್ಣ, ಹತ್ವಾರ, ಕೊಡಗಿ, ಉಳ್ಳೂರ ಎಂಬ ಹೆಸರುಗಳೂ ಕಂಡುಬರುತ್ತವೆ.

೫. ಇತರ ನಾಮಧೇಯಗಳು

ಕುರುಬರ ವರ್ಗದಲ್ಲಿ ಹೆಗ್ಗಡೆ, ಗೌಡವೆಂದೂ, ಒಕ್ಕಲಿಗರಲ್ಲಿ ಗೌಡವೆಂದೂ, ಸೇರ್ವೆಗಾರರಲ್ಲಿ ಕ್ಷತ್ರಿಯ, ನಾಯಕ, ಅಯ್ಯ, ಶೇರಿಗಾರ ಮತ್ತು ರಾವು ಎಂಬ ಹೆಸರುಗಳೂ, ಪಾಂಚಾಲರಿಗೆ ಆಚಾರಿ ಎಂದೂ, ಚೆಪ್ಟೆಗಾರರಲ್ಲಿ ನಾಯಕ್‌ಮತ್ತು ಶೆನ್ವಾಯೆಂದೂ, ಚರೋಡಿಯವರಲ್ಲಿ ನಾಯ್ಕನೆಂದೂ, ಗುಡಿಗಾರರಲ್ಲಿ ಸೆಟ್ಟಿ ಎಂದೂ, ಕಾಡು ಕೊಂಕಣದಲ್ಲಿ ನಾಯ್ಕವೆಂದೂ, ದೇವಾಂಗರಲ್ಲಿ ಚೆಟ್ಟಿ ಎಂದೂ, ನೇಯ್ಕಾರರಲ್ಲಿ ಸೆಟ್ಟಿಗಾರನೆಂಬುದಾಗಿಯೂ, ಕುಂಬಾರರಲ್ಲಿ ಹಂಡವೆಂದೂ, ಹಳೆಪೈಕರಲ್ಲಿ ಪೂಜಾರಿ ಎಂದೂ, ಇನ್ನಿತರರಲ್ಲಿ, ಓಡಾರಿ, ಖಾರ್ವಿ ಮಡಿವಾಳ, ಕೆಲಸಿ (ಭಂಡಾರಿ) ಕೊಡಿಯ, ಕುಡುಬಿ, ಕೊಟ್ಟಾರಿ, ಮೊಯಿಲಿ, ಮೂಲಿಯ, ದೋಲಿಯ, ಮೂಲ್ಯ, ಸಪ್ಪಳಿಗ, ಒಡೆಯ, ನಾರಿಗ, ದೇವಡಿಗ, ಗಾಣಿಗ, ಬಂದಿರ, ಶೇರಿಗಾರ, ಮೇಸ್ತ್ರಿ, ವೈದ್ಯ, ಯಡೆಯಾಲ, ಕನಡ, ಜೋಗಿ, ಬೆಳ್ಚಡ, ಬಾಕುಡ, ಇತ್ಯಾದಿ ಕೌಟುಂಬಿಕ ಹೆಸರುಗಳಿವೆ.

೬. ಗೌಡ ಸಾರಸತ್ವರು

ಕಾಮತ, ನಾಯಕ, ಕಿಣಿ, ಪ್ರಭು, ಹೆಗ್ಗಡೆ, ಬಾಳಿಗ, ಪೈ, ಪಡಿಯಾರ, ಭಂಡಾರಿ, ಶೆನಾಯಿ, ಮಲ್ಯ, ಕುಡುವ, ಶ್ಯಾನುಭಾಗ, ಭಕ್ತ, ಪುರಾಣಿಕ, ಭಟ್ಟ, ಪಂಡಿತ, ರಾವ್, ಆಚಾರ್ಯ, ಜ್ಯೋತಿ, ಗಡಿಯಾರ, ಅವಧಾನಿ.

೭. ಸಾರಸತ್ವರು

ಕರಣಿ, (ನಾಡ ಕರಣಿ) ಶ್ಯಾನುಭಾಗ, ಭಟ್ಟ, ರಾವ್‌, ಶೆಣ್ವಿ.

ಮೇಲಿತ್ತ ಹೆಸರುಗಳನ್ನು ಜಾತಿಗೆ, ಉದ್ಯೋಗಕ್ಕೆ ಮತ್ತು ಗೌರವಕ್ಕೆ ಸಂಬಂಧಿಸಿದವುಗಳೆಂದು ಮೂರು ವಿಭಾಗಗಳಾಗಿ ಮಾಡಬಹುದು. ಈಗ ಜಾತಿ ಸಂಬಂಧವಾದ ಹೆಸರುಗಳನ್ನು ಬರೆಯುವುದು ಬಹಳ ವಿರಳವಾಗಿದೆ. ಗೌರವಾರ್ಥವಾಗಿಯೂ ಪದವಿಯಿಂದಲೂ ಹೆಸರುಗಳೂ ಹೇಗೆ ಬಂದುವೆಂಬುದನ್ನು ಅನುಬಂಧದಲ್ಲಿ ಕಾಣಬಹುದು.

Proper names consitst of three parts: – First, village names; Second proper nouns; and third cast, profession, and honorific names. It is not however an invariable rule that the first name is taken from avillage; it is sometimes taken from a proper name. Likewise it must be understood that but a very small proportion of the terms indicating destinations of caste are employed as theird names.

ಈ ವಿವರವೂ ಪರಿಪೂರ್ಣವೂ, ಸಂಪೂರ್ಣವೂ ಆಗಿದೆಯೆಂಬ ಭರವಸೆ ನನಗಿಲ್ಲ. ಸಾಮಾನ್ಯ ದಾಖಲೆಗಳ ಆಧಾರದಿಂದ ನಿರೂಪಣೆ ಮಾಡಿದ್ದೇನೆ. ಈ ಲೇಖನದ ವಸ್ತುವೇ ಆಳವಾದ ಅಭ್ಯಾಸಕ್ಕೆ ಯೋಗ್ಯವಾದುದಾಗಿದೆ. ಒಂದು ಸಂಗತಿಯು ಈಗ ಸ್ಪಷ್ಟವಿದೆ. ಆಧುನಿಕ ಹೆಸರುಗಳಿಂದ ನಮಗೆ ಈಗ ಯಾವ ನಿರ್ಧಾರಗಳನ್ನು ಮಾಡುವುದಕ್ಕೂ ಸಾಧ್ಯವಿಲ್ಲ. ಈಗ ನಾವಿಡುವ ಹೆಸರುಗಳು ಜಾತಿಯನ್ನಾಗಲೀ, ಉದ್ಯೋಗವನ್ನಾಗಲೀ ತಿಳಿಸುವುದಿಲ್ಲ. ಬ್ರಾಹ್ಮಣರ ಅನೇಕ ಕುಲನಾಮಗಳು ಈಗ ಮರೆತೇ ಹೋಗಿವೆ. ಮಾಡುವ ಕರ್ತವ್ಯಕ್ಕನುಗುಣವಾಗಿ ಹಿಂದಿನ ಕೌಟುಂಬಿಕ ಹೆಸರುಗಳಿದ್ದುವೆಂಬುದರಲ್ಲಿ ಸಂದೇಹವಿಲ್ಲ.