ವಸಂತ ಋತು ವರ್ಣನೆ

ಸೀತೊ ಪೋಸ್ಟ್ ಣ್ ಮೆಲ್ಲ
ಜಾತೊಮಾಸ್ಟ್ ಣ್ ದಾಹೊ
ಕಾತ್ ಟಾಸ್ಟ್ ಣಪೇಕ್ಷೆ ಮರಕೆಯ್ಯಾ
ಆತಪಾ ಕಿರಣೊಂಕು
ಳಾತಲಾ ಪೊಡಿಯಾಯೆ
ಭೂತಲೊಂಟ್ ವಸಂತೆರ್ ತನ್ನಾಪೂ

‘ಚಳಿಯ ದೂರವಾಗಿ ಸೆಕೆಯು ಆರಂಭವಾಗುತ್ತಿದ್ದಂತೆ, ಮಂದಾನಿಲವೂ ಬೀಸಿ ಸೂರ್ಯಕಿರಣಕ್ಕೆ ಮರಗಿಡಗಳು ಚಿಗುರುತ್ತಿದ್ದಂತೆ ಭೂತಳಕ್ಕೆ ವಸಂತಾಗಮನವಾಯ್ತು’.

ಸುರಗೀ ಸಂಪಗೆಯಾದಿ
ವರಪುಷ್ಪೋಂಬುಳಕಾಸ್ಟ್
ಮರಕುಳು ಪುಷ್ಟಿತೊ ಪುಷ್ಪಯುಧಕೆಡ್ಡಾ
ತರೊಮೆ ಕಟ್ಟೊಯಿಜಿತ್ತಿನ್
ಫೆರಿಯಾ ಶಾಲೆಕುಳೋನ್ ಕೀ
ಪರಿಶೇ ಶೋಭಿಪವರ್ತೆ ಋತು ವಸಂತೇ           (೨-೬೪)

‘ರೋಮಾಂಚನಗೊಂಡು ಸುರಗಿ- ಸಂಪಿಗೆಯೇ ಮೊದಲಾದ ಹೂವುಗಳು ಮರ ಮರಗಳಲ್ಲಿ ಮೂಡಿದಾಗ, ಮನ್ಮಥನಿಗೆ ಕಟ್ಟಿಸಿಟ್ಟ ವಿಹಾರಧಾಮಗಳೋ ಎಂಬಂತೆ ಶೋಭಿಸುತ್ತಿರಲು ಋತುವಸಂತ ಆಗಮಿಸಿದನು.

ತೆಳಿಯೇ ವಾರಿಟ್ ನಿಂಜ
ನಳಿನೊ, ಶಿಂದಣಿಯಾಂಚಿಲ್
ಕಳಹಂಸೆರ್ ಕರೆಟ್ ಮಿತ್ತೌಳ್ ಪಾಡಪ್ಪಿನ್
ಅಳಿವೃಂದೊಂಕುಳೆಟಾವ
ಕುಳುಕುಳು ಶೋಭಿತೊ ಭೂಮೀ
ತುಳೆಯಿಂಚ ವರಕ್ ಕ್ ಋತುವಂಸತನ್          (೨-೬೬)

‘ನಿರ್ಮಲವಾದ ಸರೋವರದಲ್ಲಿ ತಾವರೆಗಳು, ನೈದಿಲೆಗಳು, ದಡದಲ್ಲಿ ಕಳಹಂಸಗಳು, ಮೇಲೆ ಹಾಡುವ ದುಂಬಿಗಳು ವಸಂತನ ಬರುವಿಕೆಗಾಗಿ ಶೋಭಿಸಿದವು’.

ಸಿತಸೈತಕುಳತೌಳೆ
ತಳಿರ್ ಚಾಮರೊಮೆಡ್ಡಾಳ್
ಗ್ ಳಿಕುಳು ಪಾಠಕೆರಾಯೊ ಸ್ತುತಿ ಪಾಡ್ ಪ್ಪಿನ್
ಹಿತೆಮಂತ್ರೀ ಹಂಸೆಕುಳಾ
ಅರಿರಮ್ಯಂತವ ಪೆಚ್ಚಿ
ಕ್ಷಿತಿಟ್ ರಾಜವಸಂತೆ ನಡತೇರಿಂಚಾ     (೨-೬೭)

‘ತಳಿರು ಬೆಳ್ಗೊಡಿ ಹಿಡಿದು ಚಾಮರ ಬೀಸಿತು. ಗಿಳಿಗಳು ಸ್ತುತಿಪಾಠಕರಾದವು. ಹಂಸಗಳು ಮಂತ್ರಿಗಳಾದವು. ಹೀಗೆ ಹಿಗ್ಗಿನಿಂದ ರಾಜ ವಸಂತನು ಭೂಮಿಯಲ್ಲಿ ನಡೆತಂದನು’.

ವೃಕ್ಷ ವರ್ಣನೆ

ಕೊಂದೆ ಶಮೀ ಚಂದನೊಮಾಮಲಕಂ ಜಗಿಲ್ ಗುಗ್ಗುಳ ಗೋಳಿ
ನಂದಿಪಿಲ ಚೂತೊ ಪಾತೆರಿಯಾ ವರ ತಂತ್ರಿಣಿಯೆಂದಾ
ಮಂದೋ ಬಳತ್ ತ್ತಿ ಮಹಾಮರತಾ ಮಲೆಟಾಸ್ಟ್ ಕೃಶಾನು
ತಿಂದೆಯ್ಯ ನಶೀಪೊಸ್ಟೆರಕ್ಷಿಣೊಮೇ ಕ್ಷಣಕಂ ಪದಟಾವಾ ||           (೨೪-೩)
ಮಾರೋಡೌದುಂಬರೊ ಜೆಂಬಣಿಲೆ ಅಶ್ವತ್ಥೊ ಕಪಿತ್ಥೊ
ಕಾರೇ ಕರ್ ನೆಕ್ಕಿಲ್ ಚೊರ್ಕಿಸ್ಟ್ ನಾ ಬಕುಳೋ ಮರನೆಲ್ಲಿ
ಬೇರ್ ಕಮೆಳ್ ಪ್ಪುಕಿನಾ ಇಜಿನ್ ಪಿಜಯೆಂದಂಬೆನೊಂಜಿ
ಬಾರಾತಲ ಶೀಷಿಪನಾ ಪರಿಶೇ ಭಸ್ಮೀಕರೊಮಾಂತೆರ್ || (೨೪-೩)
ಸ್ಟೀೞದ್ವಯೊ ಬೆದ್ರ್ ಕುಳು ಮಾದೃ ನಾರಂಗಕುಳೆಡ್ಡಾ
ಬಾೞೇ ಬಹುನಾಮೆರ್ ಡೀಡ್ರ್ ಫಲೊ ಕರ್ಜೂರಮನನೇಕೊ
ತಾೞೇಫಲೊ ಸಂಯುತೊಮಾಸ್ಟಧಿಕೋ ಶೋಭಿಪ್ಪುಣವೆಯ್ಯಾ
ಪಾಳಾಕೊಸ್ಟೆರಗ್ನಿ ದಹೀತ್ ಡ್ ಸ್ಟ್ ನಿಮಿಷೊಂಟವನೀಶಾ ||       (೨೪-೪)
ಬೆತ್ತೊ ಬೆದ್ ರೋಟೆಯ ಕೆಂಜೆರಿಯಾ ತಿಮೆ ಚೂರೆಲಂದುಳ್ಳಾ
ಚುತ್ಥಾ ವನರಕ್ಷಕೆರಾಸ್ಟವುಳ್ ಕೊಡಿತೇ ಕಡೆಕೂಡ
ಮಿತ್ತಂಬರೊಮುಟ್ಟ್ ಬಳಾತ್ತ್ ಮಸ್ಟೇ ಮುದೆಲ್ ತ್ತೆ ಕೃಶಾನು
ಮುತ್ಥೋಸ್ಟೆರ್ ಭಕ್ಷಿತುಪೇಕ್ಷಿಪನೇ ಜನಮೇಜಯ ಕೇಳ್ ||          (೨೪-೧೧)

ಖಾಂಡವದಹನದಲ್ಲಿ ಬೆಂಕಿಯಲ್ಲಿ ಬೂದಿಯಾದ ವೃಕ್ಷಗಳನ್ನು ಕವಿ ಹೆಸರಿಸುತ್ತಾ ಹೋಗುವ ಸಂದರ್ಭವಿದು. ಇಲ್ಲಿರುವ ಅನೇಕ ಮರಗಳ ತುಳು ಹೆಸರುಗಳು ಈಗಲೂ ರೂಢಿಯಲ್ಲಿ ಇರುವುದನ್ನು ಗಮನಿಸಬಹುದು.

ಪಕ್ಷಿ ವರ್ಣನೆ

ಕಳಹಂಸೆ ಚಿಕೋರೆರ ಸಾರಸೆರಾ ಮಯಿರ್ ಕುಪ್ಪುಳ್ ಕಕ್ಕೆ
ಕಳಕಂದ್ಯೆರ್ ಪಾಂಡಿಲೊ ಪಾಂದೆಟಿಕ್ಳು ಪುರುಳಿ ಪುದ ಗುಬ್ಬೀ
ಗ್ ಳಿ ನೆತ್ತಿಗೆಯಾಂಗೆಲ್ ಮರಕುಟಪೆ ಬಕೆ ಕೊಂರ್ಗಂಬೆನೆಯ್ಯಾ
ತಡೆತೇ ತನ ಜ್ವಾಲೆತ ಕಂಟವಲೇತುಳೈ ಚಿರ್ತೋಸ್ಟೆರಗ್ನಿ ||          (೨೪-೧೪)

ಇಲ್ಲಿಯೂ ಮಯಿರ್ (ನವಿಲು), ಕುಪ್ಪುಳ್ (ಕೆಂಬೋತ), ಕಕ್ಕೆ (ಕಾಗೆ), ಕಳಕಂದ್ಯೆ(ಗಿಡುಗ), ಪುದ, ಗುಬ್ಬಿ, ಗ್ ಳಿ, ನೆತ್ತಿಗೆ (ನೆತ್ತಿಯಲ್ಲಿ ಪುಕ್ಕ ಇರುವ ಹಕ್ಕಿ), ಮರಕುಡಪೆ (ಮರಕುಟಿಗ), ಬಕೆ, ಕೊಂರ್ಗ್ (ಕೊಕ್ಕರೆ) – ಮುಂತಾದ ತುಳು ಹೆಸರುಳ್ಳ ಪಕ್ಷಿ ಸಂಕುಲಗಳೇ ಅಧಿಕವಾಗಿರುವುದು ವಿಶೇಷವಾಗಿದೆ. ಇಲ್ಲಿರುವ ಪಾಂಡಿಲೊ, ಪಾಂದೆಟಿ, ಅಂಗೆಲ್ ಗಳೆಂಬ ಪಕ್ಷಿಗಳು ಯಾವುದೆಂಬುದು ಈಗ ನಮಗೆ ತಿಳಿದಿಲ್ಲದಿರುವದು ವಿಷಾದಕರ. ಆ ಜಾತಿಯ ಪಕ್ಷಿಗಳೇ ನಾಶವಾಗಿಯೇ ಅಥವಾ ಆ ಹೆಸರುಗಳನ್ನು ನಾವಿಂದು ಮರೆತಿದ್ದೇವೆಯೇ ಹೇಳಲಾಗದು.

ಹಿಡಿಂಬೆಯ ಶೃಂಗಾರ

ಭೀಮನ್ ಚೂಸ್ಟ್ ಹಿಡಿಂಬೀ
ತಾಮಸೀಪನತೆತ್ತ್
ರೋಮೊ ಕೋೞ್ಮೈತ್ ಬಾಡ್ ಸ್ಟ್ ಶರೀರೊ
ಕಾಮಬಾದೆಟ್ ಮೆಲ್ಲ
ಸ್ವಾಮಿ ನಟ್ಟಿಕೆನೆಂದ್
ಕೋಮಳಾಂಗಿ ಧರಿತ್ ನಿನೆತ್ ವರ್ಕಳ್ ||
ಕ್ರೂರವೇಷೊಮಿ ಚೂವಿನ್
ಏರಾ ಪೋಡಿಪೆರೆಂದ್
ನಾರೀ ವಂಚಿತ್ ವಕ್ರ್ತಂಕುಳೆ ಜಾಡೆನಿಸ್
ಸೌರಸೌಂದರ್ಯಂತ
ವಾರಿಜಾನನೆಯಾಸ್ಟ್
ಮಾರುತಿನರ್ ಕಾವ ತೆಳಿತ್ ವರ್ಕಳ್ || (೯-೧೩)

ಭೀಮನನ್ನು ನೋಡಿದ ಹಿಡಿಂಬೆಗೆ ರೋಮಾಂಚನವುಂಟಾಗಿ, ಕಾಮಬಾಧೆಯಿಂದ ಮೆಯ್ ಬಸವಳಿದು, ಅವನಲ್ಲಿ ಪ್ರೇಮಭಿಕ್ಷೆ ಬೇಡುವುದಕ್ಕಾಗಿ ಬರುತ್ತಾಳೆ. ತನ್ನ ಘೋರರೂಪವನ್ನು ಮರೆಮಾಚಿ, ಕೋಮಲಾಂಗಿಯಾಗಿ ಬಂದು ನಸುನಗುತ್ತಾ ಆಕೆ ಬಿನ್ನಬಿಸುವ ರೀತಿ ನೋಡಿ –

ವನಹಿಡಿಂಬೆ[1] ಯತಾ
ಯನ್ ಮೆಗ್ ದಿನೇನ್ ಹಿಡಿಂಬಿ
ಯಿನಿನ್ ಚೂಸ್ಟ್ ಮದನಟಾತುರೇತಿಯಾಯೆನ್
ಇನಿಯೇ ಪೋಕೊ ಹಿಮಾದ್ರಿನ್
ಎನ್ ಕೀಯ್ಯ್ ಪ್ರತಿಯಾಲ
ಅನುಜೆ ಭಕ್ಷಿಪುಡಂಳ್ ಸ್ಟಂಬುಕುಳೆನಿನ್ ||        (೯-೧೫)

‘ನಾನು ಹಿಡಿಂಬಾಸುರನ ಸೋದರಿ, ನಿನ್ನನ್ನು ನೋಡಿ ಕಾಮಾತುರಳಾಗಿದ್ದೇನೆ. ನನಗೆ ನೀನೇ ಪತಿಯಾಗು. ನಾವಿಂದೇ ಹಿಮಾಲಯಕ್ಕೆ ಹೋಗಿ ವಿಹರಿಸೋಣ. ನನ್ನ ಅಣ್ಣ ಬಂದು, ಇವರನ್ನೆಲ್ಲ, ಭಕ್ಷಿಸಲಿ’.

ಹೀಗೆ ಹಿಡಿಂಬೆಯ ಶೃಂಗಾರಭಿಕ್ಷೆ ರಸೋತ್ಕಟತೆಯಿಂದ ಕಂಗೊಳಿಸುತ್ತದೆ.

ಭೂತಾರಾಧನೆ

ಅರುಣಾಬ್ಜನ ಕಾವ್ಯದಲ್ಲಿ ‘ಮೂಡಾಂಬಿ’ ಎನ್ನುವ ಜನಪದ ದೈವವೊಂದರ ಉಲ್ಲೇಖ ಬರುತ್ತದೆ. ಮದುವೆ ಮುಂತಾದ ಶುಭಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆ, ಆಯಾ ಊರಿನ ಭಗವತೀ ಗುಡಿಗಳಲ್ಲಿ ಹರಕೆ ಹೇಳುವ ಈಗಿನ ಜನಪದ ರೂಢಿಯಂತೆಯೇ ಆ ಕಾಲದಲ್ಲೂ ಅಂತಹ ಒಂದು ಪದ್ಧತಿ ಬಳಕೆಯಲ್ಲಿ ಇದ್ದಿರಬೇಕೆಂದು ಅರುಣಾಬ್ಜನ ಕಾವ್ಯ ನಮಗೆ ಸೂಕ್ಷ್ಮ ಸೂಚನೆಯೊಂದನ್ನು ನೀಡುತ್ತದೆ. ಈ ಬಗ್ಗೆ ಸಂಪಾದಕರಾದ ವೆಂಕಟರಾಜ ಪುಣಿಂಚತ್ತಾಯರು ಗ್ರಂಥದ ಪ್ರಸ್ತಾವನೆಯಲ್ಲಿ ಬೆಳಕು ಚೆಲ್ಲಿದ್ದಾರೆ. ದ್ರೌಪದಿ ಸ್ವಯಂವರ ಮಂಟಪದಲ್ಲಿ ಕೌರವಾದಿಗಳಿಂದ ಗಲಭೆ ಉಂಟಾಗಿ ವಿವಿಧ ರಾಜಕುಮಾರರು ಹೋರಾಟಕ್ಕಿಳಿಯುತ್ತಾರೆ. ಆಗ ಬಂದ ಅತಿಥಿಗಳೆಲ್ಲ ಭಯಭೀತರಾಗಿ ಓಡಿಹೋಗುತ್ತಾರೆ. ಪರಿಸ್ಥಿತಿ ತಿಳಿಯಾದ ಮೇಲೆ ಎಲ್ಲರೂ ಮತ್ತೆ ಹಿಂದಿರುಗಿ ‘ಮಾಡಾಂಬಿ’ ಮಹಿಮೆಯಿಂದ ಶಾಂತಿ ನೆಲೆಯಾಯಿತೆಂದು ಭಾವಿಸಿ ನಿಟ್ಟುಸಿರು ಬಿಡುತ್ತಾರೆ.

ಪೋಡಿತೋಡ್ ಸ್ಟ್ ಪೋಸ್ಟೀ
ನಾಡೆತಾ ಪ್ರಜೆ ವರ್ತ್
ಕೂಡ್ ಸ್ಟ್ ಣಡೆಯಾ ಭೂಸುರ ಸಮೂಹೊ
ಪಾಡ್ ಅಡ್ ಸ್ಟ್ ಬೆಂದೀನ್
ಮಾಡಾಂಬಿ ಮಹಿಮೆನೀ-
ಯಾಡ್ ಸ್ಟೇರ್ ದೃಪದಾ ನುಂಬಟ್ ತ್ತೋಂಪೆರಾ || (೧೬-೫೪)

ಹಾಡು ಹಾಡಿ ಕುಣಿದು ಮೂಡಾಂಬಿಯ ಮಹಿಮೆಯನ್ನು ಕೊಂಡಾಡುವ ಆ ಹೇಳಿಕೆ ಆ ಕಾಲದಲ್ಲೂ ಭೂತಾರಾಧನೆ ತುಳುನಾಡಿನಲ್ಲಿ ಪ್ರಚಲಿತವಾಗಿತ್ತೆಂಬುದನ್ನು ತಿಳಿಸುತ್ತದೆ. ಒಂದೆಡೆ ಕವಿಯು ಬಳಸುವ ‘ಮಂಜುಕುಳ ಮಠಕೂಪ ತಟಾಕೊ’ (೨೪-೯) ಎಂಬಲ್ಲಿರುವ ‘ಮಂಜುಕುಳು’ ದೈವಗಳ ಆರಾಧನಾ ಸ್ಥಳವೆಂದು ಗಮನಾರ್ಹ. ಇದಕ್ಕೆ ಪೂರಕವಾಗಿ ಇನ್ನೊಂದೆಡೆ ಭೂತಾವೇಶ ಬರುವ ವಿಚಾರವೂ ದೊರೆಯುತ್ತದೆ.

ಜ್ಯೋತಿಷೊ ಮುದೆಲಾಸ್ಟಿ
ನೀತಿಶಾಸ್ತ್ರ ಪುರಾಣೊಂ
ಟೇತ್ ಳ್ಳೊ ಶಕುನೊಮಾತೆಟ್ ಚೂಪೋಯೆ
ಭೂತಲಾಧಿಪೆರೆಡ್ಡ
ಭೂತಾವೇಶ ಮುಖಂಟ್
ಭೇತ್ ಕೇಳಕಿ ವಾಕ್ ಪ್ರಶ್ನೊಮಿನಿ ಕೇಂಡೆ ||      (೯-೯೮)

ಪಂಚ ಪಾಂಡವರು ಅರಗಿನಾಲಯದಲ್ಲಿ ಬೆಂದು ಹೋದರೆಂಬ ಸುದ್ದಿ ತಿಳಿದ ಪಾಂಚಾಲರಾಯ ಆ ಬಗ್ಗೆ ಖಿನ್ನನಾಗಿ ಭೂತಾವೇಶ ಮುಖದಿಂದ ಪ್ರಶ್ನೆ ಕೇಳುತ್ತಾನೆಂಬ ಈ ವಿಚಾರ ಭೂತಾರಾಧನೆಯ ಪ್ರಾಚೀಲನತೆಯ ದೃಷ್ಟಿಯಿಂದ ಪ್ರಮುಖವೆನಿಸುತ್ತದೆ. ಹರಿಕಥೆ, ಭೂತಾರಾಧನೆಗಳಿಗೆ ಪ್ರಾಮುಖ್ಯವಿದ್ದ ಮೇಲೆ ತುಳುನಾಡಿನ ಪ್ರಸಿದ್ಧ ಯಕ್ಷಗಾನ ಕಲೆಯ ಪ್ರಸ್ತಾವ ಯಾಕಿಲ್ಲವೆಂಬುದು ಸೋಜಿಗವೆನಿಸುತ್ತದೆ. ಆದರೆ ದ್ರೌಪದೀ ಸ್ವಯಂವರದಲ್ಲಿ ‘ವೃತ್ತ ಸುಗಾಯಕೇರ ನಟ ಕೇರ್ಕುಳನೇಕೋ’ ಎನ್ನುತ್ತಾ ವಾಚಾಟಕವೃಂದ ಎಂದು ಕವಿ ಹೇಳುತ್ತಾನೆ (೧೧-೨೨). ಆ ವಾಚಾಟಕವೃಂದ ಕೇವಲ ವಾಚಾಳಿಗಳ ಗುಂಪಾಗಿರದೆ ಅಪೂರ್ವ ವಚೋವಿಲಾಸವುಳ್ಳ ಯಕ್ಷಗಾನ ತಾಳಮದ್ದಳೆಯೂ ಆಗಿರಬೇಕೆಂಬ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಇತರ ವೈಶಿಷ್ಟಗಳು

ಖರ್ಜೂರಪ್ರಿಯತೆ

ಮಂಜಕಂಠ ಪ್ರಿಯ ಈರೇ
ಕಜೊವಂತೇನ್ ಸದಾಂತೊ
ಬಜೀಲ್ ಶರ್ಕರೆ ಖರ್ಜೂರೊ ಆರ್ಪಿಪೆನೇನ್
ಗಜಚರ್ಮಾಂಬರಧಾರೀ
ಭುಜಗಾಭರಣಾ ನಿತ್ಯೊ
ನಿಜೊಮಾಯಿ ಕವಿತೆಕ್ ವರದೇರಾಲೇ ||          (೧-೨)

ಕವಿಯು ಕಾವ್ಯಾರಂಭದಲ್ಲೇ ಮಾಡಿದ ಶಿವಸ್ತುತಿಯಿದು. ಇದರಲ್ಲಿ ಪರಮೇಶ್ವರನಿಗೆ ಅವಲಕ್ಕಿ, ಸಕ್ಕರೆಯ ಜೊತೆಗೆ ಖರ್ಜೂರವನ್ನು ಕವಿ ಸಮರ್ಪಿಸಿದ್ದಾನೆ. ಇದೊಂದು ಅತ್ಯಂತ ಅಪೂರ್ವವೂ, ಅನ್ಯತ್ರ ದುರ್ಲಭವೂ ಆದ ವಿಶಿಷ್ಟ ಕಲ್ಪನೆ. ಬೇರೆ ಯಾವ ಕವಿಗಳೂ ಶಿವನಿಗಾಗಲೀ, ಇತರ ದೇವತೆಗಳಿಗಾಗಲೀ ಖರ್ಜೂರ ನೈವೇದ್ಯ ಮಾಡಿದ ಉಲ್ಲೇಖಗಳಿಲ್ಲ. ಖಾಂಡವ ದಹನದ ಸಂದರ್ಭದಲ್ಲಿ ವಿವಿದ ವೃಕ್ಷ ಸಂಕುಲಗಳು ಅಗ್ನಿಗಾಹುತಿಯಾದಾಗ ಖರ್ಜೂರ ವೃಕ್ಷವು ಭಸ್ಮವಾಯಿತೆಂದು ಕವಿ ಹೇಳುತ್ತಾನೆ. ಪ್ರಾಯಃ ಸ್ವತಃ ಕವಿಯೇ ಖರ್ಜೂರಪ್ರಿಯನಾಗಿರಬೇಕೆಂದು ಇದರಿಂದ ತರ್ಕಿಸಬಹುದು. ಹಡಗಿನಲ್ಲಿ ಕೊಡವೂರಿನ ಕಡಲತಡಿಗೆ ಕಡೆಗೋಲು ಕೃಷ್ಣನು ಬಂದಿರುವಂತೆಯೇ ಖರ್ಜೂರದ ಡಬ್ಬಗಳು ಬಂದಿರಬೇಕು!

ಶೈತ್ಯಜಲ ವಿತರಣೆ

ದ್ರೌಪದೀ ಸ್ವಯಂವರಕ್ಕೆ ಬಂದವರಿಗೆ ಬಿಸಿಲಿನ ಬೇಗೆಯನ್ನು ನಿವಾರಿಸಲು ಹಿಮಾಂಬು ವಿತರಣೆಯ ವ್ಯವಸ್ಥೆಯಿದ್ದಿತೆಂಬುದನ್ನು ಕವಿ ವರ್ಣಿಸುವ ಬಗೆ ನೋಡಿ:

ಕೂಪೊಂಕುಳೆ ತೋಡ್ ಸ್ಟ್ ಕಟ್ಟವೇಕ್ ಪೂಜಿಸ್ಟ್ ನಿಂಜ
ಪೊಯ್ಪೋಸ್ಟ್ ಹಿಮಾಂಬುಡ್ ಪೋಸ್ಟ್ ಪಣೇ[2] ಉಳೈಪೋಯಿ ಜನೊಂಕ್
ಚೂಪೋಯೆರ್ ನೀರ ಪ್ರಕರೊಮಿನೀ ಕೊಳಿಯೆರ ಕಡೆಕೂಡ
ಜಾಪಣ್ಕೊ ಸ್ವಯಂವರ ಸಂಭ್ರಮೊನೀ ಪಾಂಚಾಲೆ ಸೈಜೀತಿ ||
(೧೧-೧೩)

‘ಭಾವಿಗಳನ್ನು ತೋಡಿಸಿ ಅದರೊಳಭಾಗಕ್ಕೆ ಸುಣ್ಣವನ್ನು ಲೇಪಿಸಿ ಅದರ ತುಂಬಾ ತಣ್ಣೀರು ತುಂಬಿಸಿ ಏತದಿಂದ ಅದನ್ನೆತ್ತಿ ಮದುವೆ ಮನೆಯ ಒಳಗೆ ಬಂದ ಅತಿಥಿಗಳಿಗೆ ಆ ವ್ಯವಸ್ಥೆಯನ್ನು ತೋರಿಸಿ ಸರ್ವತ್ರ ತಂಪು ನೀರನ್ನು ವಿತರಿಸಿದರು. ಹೀಗೆ ದ್ರುಪದ ರಾಯನು ವ್ಯವಸ್ಥೆ ಮಾಡಿದ ಸ್ವಯಂವರದ ಸಂಭ್ರಮವನ್ನು ಏನೆಂದು ವರ್ಣಿಸಲಿ?’

ತುಳುನಾಡಿನಲ್ಲಿ ಸೆಕೆ ವಿಪರೀತವಾದಾಗ ತಂಪು ನೀರನ್ನು ಕುಡಿಯಲು ಬೇಕಾದ ವೈಜ್ಞಾನಿಕ ವ್ಯವಸ್ಥೆಯೊಂದನ್ನು ಅರುಣಾಬ್ಜನ ಕಾಲದಲ್ಲಿ ಪ್ರಚಲಿತವಾಗಿತ್ತೆಂದು ತುಳುಜನರು ಸಂಶೋಧನ ಬುದ್ಧಿಗೆ ನಿದರ್ಶನವಾಗಿ ನಿಲ್ಲುತ್ತದೆ!

ಕೀಲು ಕೊಡೆಗಳು

ಮುತ್ತೀ ಸತ್ಯೆಕುಳೇ ಕೀ-
ಲೊತ್ತೋಸ್ಟ್ ಮುಡಿಮಿತ್ತೇ
ಪತ್ತೋಸ್ಟ್ ಸಳೆಕುಳೆ ಚುೞಿಲಾಸ್ಟೊಂಡ್
ಉತ್ತಮ ರಭಸಂಟ್
ಪತ್ತೆದಿಕ್ಕೆದ್ ರಾಸ್ಟ್
ವರ್ತೇರಾ ಭೀಷ್ಮೆರುಪ್ಪರ್ಯೇಕಾವ ||            (೩-೪೧)

ಕುರುಪಾಂಡವ ಶಸ್ತ್ರವಿದ್ಯಾ ಪದರ್ಶನಗಳನ್ನು ವೀಕ್ಷಿಸಲು ಭೀಷ್ಮರು ಬರುವ ಚಿತ್ರವಿದು. ‘ಮುತ್ತಿನ ಕೊಡೆಗಳ ಕೀಲನ್ನೊತ್ತಿ ಅದನ್ನು ಅವರ ತಲೆಮೇಲೆ ಅರಳಿಸಿ ಹಿಡಿದು, ಚಾಮರ ಬೀಸುತ್ತಿರಲು, ಭೀಷ್ಮಾಚಾರ್ಯರು ಕ್ರೀಡಾಂಗಣದ ಉಪ್ಪರಿಗೆಗೆ ಬಂದರು’ ಎಂಬಲ್ಲಿ ಕವಿಕಲ್ಪನೆ ಗರಿಗೆದರಿದೆ. ಈಗ ನಾವು ಬಳಸುತ್ತಿರುವ ಆಧುನಿಕ ಕೊಡೆಗಳ ಸ್ವರೂಪವನ್ನು ಆರುನೂರು ವರ್ಷಗಳಷ್ಟು ಹಿಂದೆಯೇ ಕಲ್ಪಿಸಿಕೊಂಡಿತ್ತೆಂದರೆ, ಅದೊಂದು ಅದ್ಭುತವೇ ಸರಿ. ರವಿ ಕಾಣದ್ದನ್ನು ಕವಿ ಕಂಡನೆಂಬ ಮಾತು ಸತ್ಯಸ್ಯ ಸತ್ಯ!

ಗೊಂಬೆಗಳ ಚಮತ್ಕೃತಿ

ದ್ರೌಪದೀ ಸ್ವಯಂವರ ಮಂಟಪ ಹಲವು ಅಚ್ಚರಿಗಳ ಹಂದರವೆಂದರೆ ಅತಿಶಯೋಕ್ತಿಯಲ್ಲ. ಪಾಂಚಲನಗರಿಯಲ್ಲಿ ಅಲ್ಲಲ್ಲಿ ಕೆಲವು ಗೊಂಬೆಗಳನ್ನು ಕೀಲಿಸಿ, ಅವುಗಳ ತಮ್ಮ ಕೈಕಾಲುಗಳನ್ನು ಅಲ್ಲಾಡಿಸಿ ಹತ್ತಿರ ಬಂದವರನ್ನು ಕಣ್ ಸನ್ನೆ ಮಾಡಿ ಕರೆಯುತ್ತಿದ್ದವೆಂಬ ವಿವರಗಳು ಆ ಕಾಲದ ಜನಪದರ ಕಲಾಕೌಶಲವನ್ನು ಎತ್ತಿತೋರಿಸುತ್ತವೆ.

ಸಂಚೊಂಟಾವ ರೆಚೀತ್ ಕೀಲಿತಿ ಯಂತ್ರ ಪಾಪೆಕುಳೌಳೌಳೇ
ಚಂಚಲೀಪ್ಪೊನವೆನ್ಕ್ ಣಂದೊಮೆ ಕಾರ್ ಕೈತರೆ ಪಂದೊಸ್ಟ್
ಮೆಂಚೂರೀ ವರಪಾಯ ಚೂಸ್ಟುಳೆಪ್ಪುಪ್ಪೊ ಕಣ್ಕುಳೆಟ್ ನ್ಕ್ ಣಂ-
ದಂಚನೇಕೋ ವಿನೋದೊಮುಳ್ಳೊನ ಚೂವುಟಾ ನಗರುತುಳ್ಕೆ ||   (೧೧-೧೩)

ಇನ್ನು ಕೆಲವು ಗೊಂಬೆಗಳು ಕರ್ಪೂರಚಂದನಕಸ್ತೂರಿಗಳನ್ನು ಬಂಗಾರದ ಕೊಪ್ಪರಿಗೆಯಿಂದ ತೆಗೆದು, ಕೈಯೊಡ್ಡಿದ ಜನರಿಗೆ ನೀಡುತ್ತಿದ್ದವಂತೆ!

ಕರ್ಪೂರೊಮ ಚಂದನೊ ಕಸ್ತುರಿಯಾ ಪನಿನೀರ್ ಟ್ ತೇತ್
ತರ್ಪೋಸ್ಟ್ ಹಿರಣ್ಯಯೆಕೊಪ್ಪರಿಯೇಕುಳೆಟ್ ಪ್ಪಿಜಿಪೋಸ್ಟ್
ನಿಲ್ಪೋಸ್ಟಯೆನಂತ್ ಟ್ ಯಂತ್ರಮಯಂತಾ ಪಾಪೆಕುಳೌಳ್
ವರ್ಪೀ ಜನೊವೊಡ್ಡದ ಕೈಕುಳೆನೀಯವುಕೋರ್ ಕೊಳ್ ಪ್ಪೊ ||    (೧೧-೨೭)

ಮದುವೆ ಮನೆಯ ಚಪ್ಪರದ ಗೊಂಬೆಗಳು ಇನ್ನಷ್ಟು ವಿಸ್ಮಯಕಾರಿಯಾಗಿದ್ದವು!

ಚಿಲುಪಾಪೆಕ್ಳು ಮುಟ್ಟಟೆ ಪೋವಿನೊರಿ ಚುಳೆಪುಪ್ಪೊ ಚುಳಂತ್ಯೆ
ಚಿಲುಚಾಮರೊ ವೀಜಿಕೊ ಮೋಜೆತವಾ ತೇಜೊಂತ ಜನೊಂಕ್
ಚಿಲುಮಾಲೆನಿ ನೀಳ್ ಕೊ ಲೋಕೆರಕ್ ಪರಲೈತ್ತ್ ೞ್ ಸ್ಟೊಂಡ್
ಫಲು ವಿಸ್ಮಯೊಮುಳ್ಳೆನ ಪಂದೆಲ್ ಟ್ ನೃಪೆ ನಿರ್ಮಿತಿಜಿತ್ತೀ ||     (೧೧-೨೮)

ಕೆಲವು ಗೊಂಬೆಗಳು ಹತ್ತಿರ ಹೋದವರಿಗೆ ಆರತಿ ಎತ್ತಿದರೆ, ಮತ್ತೆ ಕೆಲವು ಚಾಮರ ಬೀಸುತ್ತವೆ. ವಿಶೇಷ ವ್ಯಕ್ತಿಗಳು ಬಂದಾಗ ಮಾಲೆ ಹಾಕಿ ಗೌರವಿಸುತ್ತವೆ. ಈ ಗೊಂಬೆಗಳ ಚಮತ್ಕೃತಿಯನ್ನು ಆಧುನಿಕ ಕಾಲದ ವಿವಾಹಮಂಟಪದ ಯಂತ್ರಗಳೊಂದಿಗೆ ಹೋಲಿಸಿ ನೋಡಬಹುದು. ಕುಮಾರವ್ಯಾಸನು ವರ್ಣಿಸಿದ ‘ಸೊದೆಗಳ ಬಾವಿ’, ‘ಪಕ್ಕಲೆಯ ಪನ್ನೀರು’, ‘ನವಯಂತ್ರಮು ಪುತ್ಥಳಿ’, ‘ಸುತ್ತಣ ಸಾಲಭಂಜಿಕೆ’ – ಮೊದಲಾದ ಸೂಚನೆಗಳನ್ನು ಅರುಣಾಬ್ಜನು ಸ್ವೀಕರಿಸಿ, ಅದನ್ನು ತನ್ನ ಪ್ರತಿಭಾ ಪ್ರಕಾಶದಿಂದ ಕೋರೈಸುವ ಕಲ್ಪನೆಗಳನ್ನಾಗಿ ದುಡಿಸಿಕೊಂಡಿದ್ದು ಕವಿಪ್ರತಿಭೆಗೆ ಹಿಡಿದ ಕೈಗನ್ನಡಿ!

ವಾದ್ಯ ವಿಶೇಷ

ಐರಾವತ ಪೂಜಾ ಸಂದರ್ಭದಲ್ಲಿ
ಉಡುಡಕ್ಕೆಯುಡುಕ್ಕೆಯ ದಕ್ಕೆಕುಳಾ ಪಟಹಂ ಪಟುಭೇರಿ
ನ್ ಡ್ ವಾದ್ಯೊಮ ಕೈಮಣಿ ತಾಳರವೊಮಿರೆತಾಳೊಮನೇಕೊ
ನಡತೇ ಕರಿರಾಜ ಸಮೀಪದಂಟಾಸ್ಟೀ ಸಮಯಂಟ್
ಉಡುರಾಜನಿಭಾನನೆ ದಂಟೈ ಟ್ ತ್ತ್ ಜತಳ್ ತೆಳಿತಂಚಾ ||            (೫-೧೬)
ದ್ರೌಪದೀ ಸ್ವಯಂವರದಲ್ಲಿ
ಕಡುವೈದುಡಿ ಮದ್ದಳಿ ಭೇರಿಕುಳೆಡ್ಡಡ್ಡಾರೆ ಮೃದಂಗೊ
ಪಡಡಕ್ಕೆ ಕರಂಡೆಯ ಚೌಂಡಕೆಯಾ ಪಟಹೋ ತಿಮಿಲ್ಕೆಂದಾ
ಪಡೆಯುರ್ಬುಕಿ ಚಂಬಟೊ ಚೆಂಬಕರೆ ನೆಸಳಾದಿ ಸುವಾದ್ಯಂ
ಕಡಲೇಳ್ ಲ ನಾದಿಪ ಫೋರ್ಣಿಪಸ್ಟ್ ಮಗ್ ೞ್ ಪ್ಪುಣಸಂಖ್ಯೊ || (೧೧-೩)

ತಾಳೋ ಪುೞಲ್ ವೀಣೆ ದುಡೀ ಪದೆಢಕ್ಕೆಯುಡುಕ್ಕೆ
ಕಾಳೇ ವರಮದ್ದಳಿ ಗೋಮುಖೊಂಮಾಂದಿತ್ಯಾದಿ ಸುವಾದ್ಯೋ
ಮೇಳೈಪೊಸ್ಟ್ ನೃತ್ತಸುಗಾಯಕೆರಾ ನಟುಕೇರ್ಕುಳನೇಕೊ
ಘೋಳೆಂದುಳೇಯಾಸ್ಟ್ ಣ್ ಪಂದೆಲ್ ಟೇ ಪರವೋತ್ಸಹೊ ಚೂವೆರಾ || (೧೧-೨೧)

ಯಕ್ಷಗಾನದ ಮದ್ದಳೆ, ನಾಗಾರಾಧನೆಯ ಢಕ್ಕೆ, ಜಾನಪದೀಯ ಶಾಸ್ತ್ರೀಯ ಸಂಗೀತದ ಮೃದಂಗ, ದೇವಸ್ಥಾನಗಳ, ಭೇರಿ, ರಣವಾದ್ಯ, ತಂಬಟೆ ಮುಂತಾದ ಸುಮಾರು ಇಪ್ಪತ್ತಾರು ವಾದ್ಯಗಳ ಉಲ್ಲೇಖ ಇಲ್ಲಿ ಕಂಡುಬರುತ್ತದೆ. ಸಂಸ್ಕೃತ- ಕನ್ನಡ ಭಾರತಗಳಲ್ಲಿ ಕಾಣಸಿಗದ ವಾದ್ಯವೈಭವ ತುಳುನಾಡಿನಲ್ಲಿ ಪ್ರಚಲಿತವಾಗಿದ್ದುದರಿಂದಲೇ ಕವಿಗೆ ಅವುಗಳ ಹೆಸರುಗಳನ್ನು ಬಳಸಿಕೊಳ್ಳುವುದು ಸಾಧ್ಯವಾಯಿತು. ತೌಳಮಂಡಲದ ಕಲಾ ಶ್ರೀಮಂತಿಕೆ ಇದರಿಂದ ವೇದ್ಯವಾಗುತ್ತದೆ.

ತುಳು ಸಂಸ್ಕೃತಿ

ಅರುಣಾಬ್ಜ ಕವಿಗೆ ತುಳುನಾಡು – ನುಡಿಯ ಬಗ್ಗೆ ವಿಶೇಷವಾದ ಪ್ರೀತಿ ಇದ್ದಿತೆಂಬುದರಲ್ಲಿ ಅನುಮಾನವಿಲ್ಲ. ತೀರ್ಥಯಾತ್ರೆಗೆ ಹೊರಟ ಅರ್ಜುನನನ್ನು ಕವಿಯು ತನ್ನ ತುಳುನಾಡಿಗೂ ಕರೆಸಿಕೊಳ್ಳುತ್ತಾನೆ! ತುಳುನಾಡಿದ ‘ಕೈಧಾರೆ’ ಹಾಗೂ ‘ಪಜೆಮದಿಮೆ’ಗಳ ವಿವಾಹಪದ್ದತಿಯನ್ನು ಕವಿ ಸಾಂದರ್ಭಿಕವಾಗಿ ಬಳಸಿಕೊಂಡಿದ್ದಾನೆ.

ಕೌರವ ಪಾಂಡವರು ಹುಡುಗರಾಗಿದ್ದಾಗ ಆಡುತ್ತಿದ್ದ ಆಟಗಳ ವಿವರಗಳಂತೂ ಕುತೂಹಲ ಹುಟ್ಟಿಸುತ್ತದೆ.

ಗ್ ಡಿಯೆ ಬದ್ದೆಯ ಕಂಬೊಂ-
ತ್ ಡೆಕೋಟಿ ಕಣ್ಮುರ್ಚಿಲ್
ಗ್ ಡೆಕಷ್ಷ್ ನಲಿಪುಕೀಡಶೆಂಡ್
ಖಡುಕೈಟ್ ಮರಿಯಾಟಂ-
ಟ್ ಡೆಪೋ ಬುೞ್ಪಕಿ ಪಲ್ಲಿ
ಪುಡಮೀಶಾಶ್ಮಜೆರೇ ಲೀಲೆಕುಳುಂಬೆಯ್ಯಾ ||    (೨-೧೩೮)

ಒಂಜಿ ಮುಂಡ್ ಣೆಯಾಡ್ ಸ್ಟ್
ಪಂಜಿಕುಂಬುಟೆ ಪಲ್ಲಿ
ಶಂಜೆ ಕರ್ತ್ಥಲೆ ಗ್ ದ್ದ್ ಳೆನಿಕೀ ನಾನಾ
ರಂಜಕೊಂಕುಳೆಟೆಯ್ಯಾ
ಸ್ಪೊಂಜಾಸ್ಟ್ ನಲಿತ್ ತ್ತೆರ್
ವೆಂಜೀಪೊಯೆನ ಭೀಮೆ ತನ ಶೌರ್ಯೊಂಟ್ ||    (೨-೧೩೯)

ತುಳುನಾಡಿನ ಮಕ್ಕಳು ಹಿಂದಿನ ಕಾಲದಲ್ಲಿ ಆಡುತ್ತಿದ್ದ ವಿವಿಧ ಆಟಗಳೇ ಇಲ್ಲಿ ವರ್ಣಿತವಾಗಿವೆ : ಮುಟ್ಟಾಟ, ಕಂಬಾಟ, ಕಣ್ಣಾಮುಚ್ಚಾಲೆ, ಚೆಂಡಾಟ, ಪಲ್ಲಿ ಬಿಡಿಸುವಾಟ ಮುಂತಾದ ಅನೇಕ ಕ್ರೀಡೆಗಳನ್ನು ಕವಿ ಬಳಸಿಕೊಂಡಿರುವುದು ವಿಶೇಷವಾಗಿದೆ. ನಾಗರಿಕತೆ ಬೆಳೆದಂತೆಲ್ಲಾ ಇವುಗಳಲ್ಲಿ ಎಷ್ಟೋ ಆಟಗಳು ಮರೆತುಹೋಗಿವೆ ಎಂಬುದು ಬೇಸರದ ಸಂಗತಿ. ವಿದ್ವಾನ್ ವೆಂಕಟರಾಜ ಪುಣಿಂಚಿತ್ತಾಯರು ಹೇಳುವಂತೆ ‘ತಾನು ಬರೆಯುತ್ತಿರುವುದು ತುಳುವಿನಲ್ಲಿ, ತುಳು ಜನರಿಗಾಗಿ ಎಂಬ ಪ್ರಶ್ನೆ ಆತನಲ್ಲಿ ಕೊನೆವರೆಗೂ ಜಾಗೃತವಾಗಿತ್ತು. ತುಳುನಾಡಿನ ಈ ಕವಿ ತುಳುಮಣ್ಣಿನ ಸಂಸ್ಕೃತಿಯನ್ನು ಅಘ್ರಾಣಿಸಿಕೊಂಡೇ ಕಾವ್ಯ ಬರೆದಿದ್ದಾನೆಎಂದರೂ ತಪ್ಪಿಲ್ಲ”.[3]

ಉಪಸಂಹಾರ

ಅರುಣಾಬ್ಜನ ‘ಮಹಾಭಾರತೊ’ ಅರ್ಧದಲ್ಲಿ ನಿಂತುಹೋದಂತೆ ಭಾಸವಾಗುತ್ತದೆ. ಏಕೆಂದರೆ ಸಮಗ್ರ ಭಾರತವನ್ನು ಕಾವ್ಯವಾಗಿ ರಚಿಸುವ ಬಯಕೆ ಕವಿಗಿತ್ತೆಂಬುದು ಅವನ ನಾಂದೀಪದ್ಯಗಳಿಂದ ತಿಳಿಯುತ್ತದೆ. ‘ಭಾರತಾಮೃತೊ ಮೆನ್ಕೀ ಸಾರೊಮೆನ್ಕ್ ರೆಚೀಪೆರ ಈರ್ ವೃತ್ತಿಪೊಡೆನ್ನ ಮುಖರಂಗಂಟ್’ ಹಾಗೂ ‘ಇಳೆಟ್’ ಭಾರತಕಾವ್ಯೊ ರಚಿಯೀಪುಪ್ಪೆ’ ಎಂಬ ಪದ್ಯಪಾದಗಳಿಂದ ಅದು ವಿಶದವಾಗುತ್ತದೆ. ಆದರೆ ‘ತೆರಿತ್’ ಸಂಭವಪರ್ವೊಮರುಣಾಬ್ಜೇ ವಿರಚೀತೆ’ (೧-೧೩) ಎಂದೂ ಅವನು ಹೇಳಿರುವುದರಿಂದ ಅದು ಕೃತಿ ರಚನೆಯ ಅನಂತರದಲ್ಲಿ ಸೇರಿಸಿದ ಪ್ರಕ್ಷಿಪ್ತ ಭಾಗವೇನೋ ಎಂಬ ಸಂದೇಹ ಬಾರದಿರದು. ಆದರೆ ಲಭ್ಯ ಕಾವ್ಯದ ಕೊನೆಯಲ್ಲಿರುಯವ ಫಲಶ್ರುತಿ ರೂಪದ ಪದ್ಯಗಳನ್ನು ನೋಡುವಾಗ ಸಂಭವಪರ್ವ ಮುಗಿಸುವ ಕಾಲಕ್ಕೆ ಕವಿಗೆ ಅನಾರೋಗ್ಯವೋ ಅಥವಾ ವೃದ್ದಾಪ್ಯ ಸಹಜ ದೌರ್ಬಲ್ಯವೋ ಬಂದು ಕಾವ್ಯವನ್ನು ಅನಿರೀಕ್ಷಿತವಾಗಿ ಪರಿಸಮಾಪ್ತಿಗೊಳಿಸಬಹುದೆಂದು ಭಾವಿಸಬಹುದು.

ಈ ಪದೊಂಕುಳೆ ಪಂಡ ಕೇಂಡ ಪಠೀತಮಾನಿತಿ ಜಂತುವಿನ್
ತಾಪೊಚೆಟ್ಟ್ ಸ್ಟ್ ರೂಪೊ ವರ್ಧಿತ್ ಕೋಪೊ ಮಚ್ಚರೊ ವರ್ಜಿತ್
ಶ್ರೀಪತಿ ಪ್ರಿಯೆಯಾಸ್ಟನೇಕ ಸುಖಾನುಭೊಂಕುಳೆ ಭೋಗಿತ್
ದೀಪೊಂತಂದೊ ವಿರಾಜಿತಚ್ಯುತಟೂಡ ಕೂಡುವೆ ಮಿತ್ತ್ ಕ್ || (೨೪-೨೯)

‘ಈ ಪದ್ಯಗಳನ್ನು ಹೇಳಿ ಕೇಳಿ ಓದಿ ಬಹುಮಾನಿಸಿದವರಿಗೆ ಕಷ್ಟಗಳು ತೊಲಗಿ, ಆರೋಗ್ಯ ವರ್ಧಿಸಿ ಕ್ರೋಧ ಮತ್ಸರ ವರ್ಜಿಸಿ ಭಗವದ್ ಭಕ್ತಿಯುಂಟಾಗಿ, ಸುಖ ಭೋಗಭಾಗ್ಯಗಳು ದೊರಕಿ ದೀಪದಂತೆ ಕಂಗೊಳಿಸಿ ಕೊನೆಗೆ ಹರಿಪದ ಪ್ರಾಪ್ತಿಯಾಗುತ್ತದೆ’ ಎಂಬ ಫಲಶ್ರುತಿ ಕಾವ್ಯ ಸಮಾಪ್ತಿಯ ಸೂಚನೆ ನೀಡುತ್ತದೆ.

ಕಾವ್ಯಾರಂಭದಲ್ಲಿಯೂ ಕುಮಾರವ್ಯಾಸ ‘ವೇದ ಪಾರಾಯಣದ ಫಲಗಂಗಾದಿ ತೀರ್ಥಸ್ನಾನಫಲ’ ಎಂಬರ್ಥವುಳ್ಳ ಪದ್ಯಗಳನ್ನು ಕಾಣಬಹುದು.

ಗಂಗಾಸ್ನಾನಫಲೋ ಸಾ
ರಂಗಪಾಣಿಯುತನ್ ಶ್ರೀ
ರಂಗನ್ ಪೂಜಿಕ್ ಣಾರ್ ಫಲೊಮುಂಡಾವು
ಸಂಗೀಪಂತೆಯನಂತ
ರೆಂಗಬುದ್ಧಿ[4] ತವಾಸ
ತ್ಸಂಗಂಟೀ ಕಥೆ ಕೇಂಡೀ ಮನುಜೆರಕ್ ||          (೧-೨೪)

ಕನ್ಯಾದಾನಫಲಂ ನಿ-
ತ್ಯಾನ್ನದಾನೊಮಿನ್ ವೆಂದೀ ಫಲಮುಂಡಾವು
ಸನ್ನದ್ಧೇರಾಸ್ಟ್ ಸಂ
ಪನ್ನ ಭಾರತೊಮಿನ್ ಪ್ರ
ಸನ್ನಬುದ್ಧಿಟ್ ಕೇಂಡೀ ಮನಜೆರಕ್ ||            (೧-೨೫)

ಇಲ್ಲಿ ಗಂಗಾಸ್ನಾನ ಫಲ, ಕನ್ಯಾದಾನ ಫಲ, ನಿತ್ಯಾನ್ನದಾನ ಫಲಗಳೊಂದಿಗೆ ‘ಶಂಕರನಾರಾಯಣ’ ಪೂಜಾಫಲವು ಸೇರಿಕೊಂಡಿದೆ. ‘ಸಂಗೀಪಂತೆ ಅನಂತರೆಂಗೆ ಬುದ್ಧಿತವ’ ಎಂಬ ಮಾತು ಗಮನಾರ್ಹವಾಗಿದೆ. ಅಸಂಖ್ಯವಾದ ದುರ್ವಿಷಯಗಳಲ್ಲಿ ಮನಸ್ಸನ್ನು ಹರಿಯಬಿಡದೆ ಸತ್ಸಂಗದಲ್ಲಿ ಈ ಕಥೆಯನ್ನು ಶ್ರವಣ ಮಾಡಿದವರಿಗೆ ಪೂರ್ವೋಕ್ತ ಫಲಗಳು ಉಂಟಾಗುತ್ತವೆ. ಎಂಬ ಕವಿಯ ಹೇಳಿಕೆಯಲ್ಲಿ ಸ್ವಂತಿಕೆ ಇದೆ.

ಕವಿಯು ಕುಮಾರವ್ಯಾಸನ ನೆರಳಿದ್ದರೂ ತನ್ನ ಪ್ರತಿಭೆಯ ಪ್ರಕಾಶದಿಂದ ಕಾಳಿಮೆಯನ್ನು ಕಳೆದುಕೊಳ್ಳುತ್ತಾನೆ. “ಭಾರತದೊಳೊಂದಕ್ಷರವ ಕೇಳ್ದರಿಗೆ’ ಎಂಬುದರ ಬದಲಿಗೆ ‘ಭಾರತೊಂಟರೆಯಕ್ಷರೊ ದ್ವಂದ್ವಕರ್ಣ ಪುಡೊಂಕ್ ಕೇಳುವೆನ್ ಮೋಕ್ಷೊ ಪ್ರಾಪೀಪೆರಣಕ್ಷಿಣಂ’ಎನ್ನುತ್ತಾರೆ. ತುಳು ಭಾರತದ ಅರ್ಧಾಕ್ಷರವನ್ನು ಕೇಳಿದರೂ ಮುಕ್ತಿ ಕಟ್ಟಿಟ್ಟ ಬುತ್ತಿ ಎಂಬ ಅವನ ಶ್ರದ್ಧೆ ಮೆಚ್ಚತಕ್ಕದ್ದು.

ಗದುಗಿನ ಭಾರತವನ್ನು ವಾಚನ ಮಾಡುವಾಗ ಮಂಗಲ ಪದ್ಯದಂತೆ ‘ವೇದಪಾರಾಯಣದ ಫಲ’ ಷಟ್ಪದಿಯನ್ನು ಹಾಡುವುದು ಸಂಪ್ರದಾಯ. ಅದೇ ರೀತಿಯಿಂದ ಸಂಭವ ಪರ್ವದ ಕೊನೆಗೆ ಫಲಶ್ರುತಿಯನ್ನು ಪ್ರತಿಕಾರನು ಬರೆದುಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಹಸ್ತಪ್ರತಿಯ ಕೊನೆಯಲ್ಲಿರುವ ‘ಮಹಾಭಾರತೊಂಟ್ ಸಂಭವ ಪರ್ವಂತ ಗ್ರಂಥೊಂತ ಪಾಟ್ ಸಾರತ್ತ ಅಜಿನೂತ್ತ ಐವತ್ತೇಳ್’ ಎಂಬುದನ್ನು ಗಮನಿಸಿದರೆ ಮಹಾಭಾರತದ ಇತರ ಪರ್ವಗಳು ಮುಂದಕ್ಕಿವೆಯೆಂಬ ಭಾವನೆಗಳುಂಟಾಗುತ್ತವೆ.

ಅರುಣಾಬ್ಜನ ಕಾವ್ಯದ ಫಲಶ್ರುತಿ ಮಂಗಳವನ್ನು ತರಲಿ.

 

[1] ‘ವರಹಿಡಿಂಬೆ’ಎಂಬಮೂಲಪಾಠವನ್ನುಪ್ರಾಸಸ್ಥಾನಕ್ಕೆಹೊಂದುವಂತೆಬದಲಿಸಿಕೊಳ್ಳಲಾಗಿದೆ.

[2] ಪಣೆ = ನೀರನಏತ. (ಮೂಲದಲ್ಲಿಪನ್ನೀರುಎಂಬಅರ್ಥವನ್ನುಆರೋಪಿಸಲಾಗಿದೆ)

[3] ತುಳುಮಹಾಭಾರತಸ್ವಾರಸ್ಯಗಳು- ವೆಂಕಟರಾಜಪುಣಿಂಚತ್ತಾಯ, ಉದಯವಾಣಿ, ೫-೧೨-೯೮

[4] ರೆಂಗಬುದ್ಧಿ = ವಿಷಯಾಸಕ್ತಿ (ಮೂಲದಲ್ಲಿ ‘ವಿವೇಕಪೂರ್ಣಬುದ್ಧಿ’ ಎಂದುಅರ್ಥೈಸಲಾಗಿದೆ. ಆಗ ‘ಸಂಗೀಪಂತೆ ’ ಎನ್ನುವುದುನಿರರ್ಥಕವಾಗುತ್ತದೆ)