ದೇಶೀ ಔಷಧಿಗಳು ಮತ್ತು ಭಾರತದ ಸಾಮಾನ್ಯ ಸಸ್ಯಗಳ ಉಪಯೋಗ

೧೮೮೦ರಲ್ಲಿ ೨೨೦ ಪುಟಗಳಲ್ಲಿ ಪ್ರಕಟವಾದ ಈ ಪುಸ್ತಕದ ಲೇಖಕರು ವಾರ್ನಿಂಗ್‌.

South Canara (Madras District Manuals) Vol. I
Compiled by J. Sturock Paged 232.

South Canara (Madras District Manuals)Vol. II
Compiled by Harold A. Stuart Pages 283

ಈ ಎರಡು ಕೃತಿಗಳು ಮದ್ರಾಸು ಸರಕಾರದಿಂದ ಪ್ರಕಟಗೊಂಡಿದ್ದು ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಭಾಷೆ, ಜನಜೀವನ, ಬೇಸಾಯ, ನೀರಾವರಿ, ಧರ್ಮ ಮುಂತಾದ ವಿವರಗಳನ್ನೊಳಗೊಂಡಿದೆ. ತುಳು ಭಾಷೆಯ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಹಲವಾರು ವಿಷಯಗಳು ಇದರಲ್ಲಿವೆ. ತುಳುನಾಡಿನ ಭೂತಾರಾಧನೆಯ ವಿಷಯದಲ್ಲಿ ಹಲವಾರು ಮಾಹಿತಿಗಳಿವೆ. ಅಲ್ಲದೆ ವಾಲ್‌ಹೌಸ್‌ ಮತ್ತು ಮ್ಯಾನರ್‌ ಇವರ ಭೂತಾರಾಧನೆಯ ವಿವರಣೆಗಳನ್ನು ಇದರಲ್ಲಿ ಸಂಗ್ರಹಿಸಿಕೊಡಲಾಗಿದೆ.

A Journey from Madras through the countries of Mysore,
Canara and Malabar By Francis Buchanan

ಈ ಕೃತಿಯು ಮೂರು ಸಂಪುಟದಲ್ಲಿದ್ದು ಒಂದೊಂದು ಸಂಪುಟದಲ್ಲಿ ಸುಮಾರು ೪೮೦ ಪುಟಗಳಿದ್ದು ಇದನ್ನು Higginbotham & Co. Madras ೧೮೭೦ರಲ್ಲಿ ಪ್ರಕಟಿಸಿದೆ. ಜಿಲ್ಲೆಯ ಚರಿತ್ರೆ, ಸಂಸ್ಕೃತಿ, ಭಾಷೆ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ಒಂದು ಆಕರ ಗ್ರಂಥವಾಗಿದೆ.

A Comparative Grammar of the Dravidian or South Indian Family of Languages by Robert Caldwell

೬೦೮ ಪುಟಗಳ ಈ ಕೃತಿಯು ೧೮೭೫ರಲ್ಲಿ ಮುದ್ರಿಸಲ್ಪಟ್ಟಿದ್ದು Trubner & Co. London ಇಲ್ಲಿಂದ ಪ್ರಕಟಗೊಂಡಿದೆ. ದ್ರಾವಿಡ ಭಾಷೆಗಳ ಚರಿತ್ರೆಯನ್ನು ತಿಳಿಸುವ ಕೃತಿ ಇದಾಗಿದ್ದು ತುಳು ಭಾಷೆಯ ಒಂದು ಅಧ್ಯಾಯವು ಈ ಪುಸ್ತಕದಲ್ಲಿದೆ.

A Catalogue of the Kannada, Badaga and Coorg

Book in the library of the British Museum complied by L. D. Barnett (1910-pages 278), London, Longmans & Co. ಈ ಕೃತಿಯು ಬ್ರಿಟಿಷ್‌ ಮ್ಯೂಸಿಯಂನಲ್ಲಿರುವ ಪುಸ್ತಕಗಳ ಪಟ್ಟಿಯಾಗಿರುತ್ತದೆ. ಬಾಸೆಲ್‌ಮಿಶನ್‌ ಪ್ರೆಸ್‌ನಲ್ಲಿ ಮತ್ತು ಜಿಲ್ಲೆಯಲ್ಲಿ ಆಗಿನ ಕಾಲಕ್ಕೆ ಮುದ್ರಣಗೊಂಡ ವಿದೇಶೀಯರ ಮತ್ತು ದೇಶೀಯರ ಕೃತಿಗಳ ಹೆಸರುಗಳನ್ನು ತಿಳಿಸುತ್ತದೆ.

ಇದರಂತೆ ಇತ್ತೀಚೆಗೆ ಪ್ರಕಟಗೊಂಡ Supplementary Catalogue (British Library-1985 Pages 339) ಈ ಕೃತಿಯಲ್ಲಿಯೂ ಜಿಲ್ಲೆಗೆ ಸಂಬಂಧಪಟ್ಟ ಸಾಹಿತ್ಯಗಳ ಮಾಹಿತಿಗಳು ಸಿಗುತ್ತವೆ.

ಕಾರ್ಕಳ ಚರಿತ್ರೆ

The History of the town and jain Sanctuary of Karkala in South Kanara District, Madras in 4 chapters of prose interspaced with verse. Pages 56, 1892 Bangalore.

ದಕ್ಷಿಣ ಕನ್ನಡವು

Decriptions of South Kanara with an introduction to geography of Beginners. 2nd ed., 1876, P.16

ಶಾಲಾ ಪುಸ್ತಕವಾಗಿ ಪ್ರಕಟಗೊಂಡ ಈ ಕೃತಿಯಲ್ಲಿ ಜಿಲ್ಲೆಯ ಸಾಮಾನ್ಯ ವರ್ಣನೆ, ಸ್ಥಳ, ಮೇರೆ, ನದಿಗಳು, ವಾಯುಗುಣ, ಬೆಳೆ, ಪ್ರಾಣಿಗಳು, ನಿವಾಸಿಗಳು ಈ ವಿಚಾರಗಳಲ್ಲಿ ವಿವರವಿದೆ. ಅಲ್ಲದೆ, ತುಳುನಾಡಿನ ಉತ್ಪತ್ತಿಯ ಬಗ್ಗೆ ಹೀಗೆ ವಿವರವಿದೆ:

ಅತೀ ಪೂರ್ವ ಕಾಲದಲ್ಲಿ ದಕ್ಷಿಣ ಕನ್ನಡವು ತುರಾಣ್ಯ ನರಕುಲಕ್ಕೆ ಸಂಬಂಧವಾದ ತುಳು ಭಾಷೆಯನ್ನಾಡುವ ಜನರಿಗೆ ವಾಸಸ್ಥಾನವಾಗಿದ್ದು ತುಳುನಾಡು ಎಂಬ ಹೆಸರನ್ನು ಧರಿಸಿಕೊಂಡಿತು. ತಾಲೂಕು ವರ್ಣನೆ – ಕಾಸರಗೋಡು, ಉಪ್ಪಿನಂಗಡಿ, ಮಂಗಳೂರು, ಉಡುಪಿ, ಕುಂದಾಪುರ,. ೯,೫೯,೦೦೦ ಒಟ್ಟು ಜನರು ೧,೨೯೮ ಊರು ಗ್ರಾಮಗಳಲ್ಲಿದ್ದಾರೆ.

ಮದ್ರಾಸು ಸಂಸ್ಥಾನದ ವಿವರ

(A Short account of the Madras Presidency 1877 pages 87) ಈ ಕೃತಿಯ ಪುಟ ೭ರಲ್ಲಿ ಜಿಲ್ಲೆಯ ಮಾಹಿತಿ ಇದೆ.

ಮದ್ರಾಸು ಆಧಿಪತ್ಯದ ವಿವರ, E. Marsden 1895

ಈ ಕೃತಿಯ ಪುಟ ೭೫ರಲ್ಲಿ ಜಿಲ್ಲೆಯ ವಿವರಗಳು ಹೀಗಿವೆ. ದ. ಕ. ಜಿಲ್ಲೆಗೆ ಮೇರೆಗಳು ಉತ್ತರದಲ್ಲಿ ಬೊಂಬಾಯಿಯ ಆಧಿಪತ್ಯಕ್ಕೆ ಸೇರಿದ ಉತ್ತರ ಕನ್ನಡ, ಪೂರ್ವದಲ್ಲಿ ಮೈಸೂರು, ದಕ್ಷಿಣದಲ್ಲಿ ಮಲಬಾರ ಜಿಲ್ಲೆಯೂ ಪಶ್ಚಿಮದಲ್ಲಿ ಹಿಂದೂ ಸಾಗರ. ಬೆಟ್ಟಗಳು, ನದಿಗಳು, ಜನಸಂಖ್ಯೆಯು ೧೦,೫೫,೦೦೦. ಇದರಲ್ಲಿ ೧೦೦ರಲ್ಲಿ ೮೪ ಹಿಂದುಗಳು, ೧೦ ಮಹಮದೀಯರು, ೬ ಕ್ರೈಸ್ತರು.

ಮದ್ರಾಸಿ ಆಧಿಪತ್ಯದ ಸಾರಾಂಶ, ಮ. ಲಕ್ಷ್ಮಣ ಭಟ್ಟ, ೧೮೯೬

೮೬ ಪುಟಗಳಷ್ಟಿರುವ ಈ ಕೃತಿಯಲ್ಲಿ ಜಿಲ್ಲೆಯ ವಿವರ ಹೀಗಿದೆ : ಮಲಬಾರು ಜಿಲ್ಲೆಯಲ್ಲಿದ್ದ ದ. ಕ. ಜಿಲ್ಲೆಯ ಉದ್ದಳತೆ ೪೦ ರಿಂದ ೫೦ ಮೈಲು ಅಗಲ.

Manual of the Administration of the Madras Presidency

ಮೂರು ಸಂಪುಟಗಳಲ್ಲಿ ೧೮೮೫ರಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ ಜಿಲ್ಲೆಯ ಇತಿಹಾಸ, ಭಾಷೆ, ಜನಸಂಖ್ಯೆ, ಸಂಸ್ಕೃತಿ, ಆಡಳಿತದಲ್ಲಿ ತುಳು ಶಬ್ದಗಳ ಬಳಕೆ, ಜಿಲ್ಲಾ ಸಂಪತ್ತು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಇದ್ದು ಜಿಲ್ಲೆಯ ಆಗಿನ ಇತಿಹಾಸವನ್ನು ತಿಳಿಯಲು ಇಂಗ್ಲಿಷ್‌ನಲ್ಲಿರುವ ಅಮೂಲ್ಯ ಗ್ರಂಥವಾಗಿದೆ.

Geography Part-II (A Description of South Kanara) E. Marsden 1921, pages 74

ಈ ಕೃತಿಯಲ್ಲಿ ಜಿಲ್ಲೆಯ ನಕಾಶೆ, ಪರ್ವತಶ್ರೇಣಿ, ಬಯಲು ಪ್ರದೇಶ, ನದಿಗಳು, ಸಮುದ್ರತೀರ, ಜಿಲ್ಲೆಯ ಹವೆ, ಉತ್ಪತ್ತಿ, ವೃತ್ತಿ, ವ್ಯಾಪಾರ, ಪಟ್ಟಣಗಳು, ತಾಲೂಕುಗಳು ಇತ್ಯಾದಿಗಳ ವಿವರಗಳಿವೆ.

ಕನ್ನಡ ಪಂಚಾಗ

ಈ ವಾರ್ಷಿಕವು ೧೮೫೩ ರಿಂದ ೧೯೩೪ರ ತನಕ ಸುಮಾರು ೬ ಸಾವಿರ ಪ್ರತಿಗಳಷ್ಟು ಮುದ್ರಣಗೊಳ್ಳುತ್ತಿದ್ದು ೮೦ ವರ್ಷಗಳ ಕಾಲ ಪ್ರಕಟಗೊಂಡಿದೆ. ಈ ಪಂಚಾಂಗದ ಸಂಪಾದಕರಾಗಿ ವಿದೇಶೀಯರಾದ ಹಾಕ್‌, ಮ್ಯಾನರ್‌, ಸ್ಟೋಲ್‌ಝ್‌ರವರೂ ದೇಶೀಯರಾದ ಕ್ರಿಸ್ತಾನುಜ ವಾತ್ಸ, ಶಿವರಾವ್‌, ಬಾಲಪ್ಪಯ್ಯ ಮುಂತಾದವರು ದುಡಿದಿರುತ್ತಾರೆ. ಈ ಪಂಚಾಂಗದಲ್ಲಿ ಆಗಿನ ಕಾಲಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಗಸ್ಥರ ಮಾಹಿತಿಗಳು, ಮತ್ತಿತರ ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಇದೇ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯವಸಾಯ ಸಂಘದವರು ಪ್ರಕಟಿಸುತ್ತಿದ್ದ ವ್ಯಾವಸಾಯಿಕ ಪಂಚಾಂಗವು ಪ್ರಕಟಗೊಳ್ಳುತ್ತಿತ್ತು. ಇದರಲ್ಲಿ ಬೇಸಾಯದ ವಿವರಗಳು ಮತ್ತು ಅಲ್ಲಲ್ಲಿ ತುಳು ಗಾದೆಗಳನ್ನು ಪ್ರಕಟಿಸುತ್ತಿದ್ದರು.

ಜಿಲ್ಲೆಯಲ್ಲಿ ಕೆಥೋಲಿಕ್‌ ಕ್ರೈಸ್ತರು ಮತ್ತು ತುಳು ಸಾಹಿತ್ಯ

ವಿದೇಶೀಯರು ಜಿಲ್ಲೆಯಲ್ಲಿ ಮಾಡಿದ ಸಾಹಿತ್ಯ ಸೇವೆಯನ್ನು ಅಭ್ಯಾಸ ಮಾಡುವಾಗ ಪ್ರೊಟೆಸ್ಟಾಂಟ್‌ ಕ್ರೈಸ್ತರ ಚರಿತ್ರೆಯನ್ನು ಮಾತ್ರ ನೋಡುವುದಿದೆ. ಆದರೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಕೆಥೋಲಿಕ್‌ಕ್ರೈಸ್ತರ ಕೊಡುಗೆಯನ್ನು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಕೆಥೋಲಿಕ್‌ ಪಂಥದ ಧಾರ್ಮಿಕ ನಾಯಕರುಗಳು ೧೫೦೦ ರಿಂದ ಜಿಲ್ಲೆಯಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ೧೮ನೇ ಶತಮಾನದ ನಂತರದ ವರ್ಷಗಳಲ್ಲಿ ಅವರು ಜಿಲ್ಲೆಯಲ್ಲಿ ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ತಾಂತ್ರಿಕ ರಂಗಗಳಲ್ಲಿ ಅಪಾರ ಸೇವೆಯನ್ನು ಮಾಡಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹತ್ತರ ಸಾಧನೆಯನ್ನು ಮಾಡಿರುತ್ತಾರೆ. ಕನ್ನಡ, ತುಳು, ಕೊಂಕಣಿ ಭಾಷೆಗಳಿಗೆ ಅವರಿತ್ತ ಕೊಡುಗೆ ಅಪಾರ. ಅವರ ಸಂಸ್ಥೆಗಳಿಗೆ ಧಾರ್ಮಿಕ ಮುಂತಾದ ಸಾಹಿತ್ಯಗಳನ್ನು ಬಾಸೆಲ್‌ಮಿಶನ್‌ ಪ್ರೆಸ್‌ ಮುದ್ರಿಸಿಕೊಡುತ್ತಿತ್ತು ೧೮೮೩ರಲ್ಲಿ Angelus Francis Xavier Maffei ರವರ ಇಂಗ್ಲಿಷ್‌ ಕೊಂಕಣಿ ನಿಘಂಟು ಮತ್ತು ೧೮೮೧ರಲ್ಲಿ ಕೊಂಕಣಿ ವ್ಯಾಕರಣ ಇದೇ ಪ್ರೆಸ್‌ನಲ್ಲಿ ಮುದ್ರಣಗೊಂಡು ಪ್ರಕಟಗೊಂಡಿದೆ. ಇವರ ಖರ್ಚು ವೆಚ್ಚಗಳು ದುಬಾರಿಯಾದ್ದರಿಂದ ಮತ್ತು ತಮ್ಮ ಧಾರ್ಮಿಕ ಸಾಹಿತ್ಯಗಳನ್ನು ಪ್ರಕಟಿಸಲು ತಮ್ಮದೇ ಆದ ಮುದ್ರಣಾಲಯವೊಂದು ಬೇಕೆಂದು ಮೊದಲಿಗೆ ಸಂತ ಎಲೋಶಿಯಸ್‌ ಕಾಲೇಜಿನ ಆವರಣದಲ್ಲಿ ನಾಲ್ಕು ಮಂದಿ ಕೆಲಸಗಾರರೊಂದಿಗೆ ಕೊಡಿಯಾಲ್‌ ಬೈಲ್‌ಪ್ರೆಸ್‌ ೧೮೮೨ರಲ್ಲಿ ಜೆಸುಯಿತ ಮಿಶನ್‌ ಸಂಸ್ಥೆಯಿಂದ ಸ್ಥಾಪನೆಯಾಯಿತು. ಈ ಪ್ರೆಸ್‌ಗೆ ಪ್ಯಾರಿಸ್‌ನಿಂದ ಒಂದು ಕೈ ಯಂತ್ರವನ್ನು ತರಿಸಲಾಯಿತು. ಅನಂತರದ ವರ್ಷಗಳಲ್ಲಿ ರೋಮನ್‌ ಟೈಪ್‌ಗಳೊಂದಿಗೆ ಕನ್ನಡ ಟೈಪ್‌ಗಳನ್ನು ಬೆಂಗಳೂರಿನಿಂದ ತರಿಸಲಾಯಿತು. ಈ ಛಾಪಖಾನೆಯಲ್ಲಿಯೂ ಬೊಂಬಾಯಿ ಸರಕಾರದ ಹಲವಾರು ಪಠ್ಯ ಪುಸ್ತಕಗಳೂ, ಕನ್ನಡ ಲಿಪಿಯಲ್ಲಿ ಕೊಂಕಣಿ ಭಾಷೆಯ ಕೃತಿಗಳೂ ಪ್ರಕಟಗೊಂಡಿವೆ. ೧೮೯೦ರಲ್ಲಿ ಇಲ್ಲಿ ಸ್ವಂತ ಅಚ್ಚುಮೊಳೆ ತಯಾರಿಸುವ ಘಟಕಗವನ್ನು ಸ್ಥಾಪಿಸಲಾಯಿತು. ಅಕ್ಷರ ನಮೂನೆ ತಯಾರಿಸುವ ಪ್ರಖ್ಯಾತಿಯ ಅತ್ತಾವರ ಅನಂತಾಚಾರ್ಯ ಎಂಬವರು ಈ ವಿಭಾಗದಲ್ಲಿ ಸೇವೆಗೈದಿದ್ದಾರೆ. ಇವರು ಬಾಸೆಲ್‌ಮಿಶನ್‌ ಪ್ರೆಸ್‌ನಲ್ಲಿ ನುರಿತವರು ಮತ್ತು ಅವರದೇ ಶೈಲಿಯ ಅಚ್ಚುಮೊಳೆಗಳನ್ನು ತಯಾರಿಸುವಲ್ಲಿ ನಿಸ್ಸೀಮರು. ಇವರ ಅಚ್ಚುಮೊಳೆಗಳು Ananta Shade ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿತ್ತು. ಈ ಪ್ರೆಸ್‌ನಲ್ಲಿ ಕೆಥೋಲಿಕ್‌ ಕ್ರೈಸ್ತರಿಂದ ತುಳುವಿನಲ್ಲಿ ಹಲವಾರು ಧಾರ್ಮಿಕ ಸಾಹಿತ್ಯಗಳು ಹೊರಬಂದಿವೆ.

೧. ಪರಿಶುದ್ಧ ಸ್ನಾನ ಕೊರ್ಪಿ ದುಂಬು ಕಲ್ಪವೊಡಾಯಿಶಾಸ್ತ್ರ

೨. ಎಲ್ಲ್ಯ ಜೋಕುಳೆಗ್‌ ಕಲ್ಪಾವೊಡಾಯಿ ಕ್ರಿಸ್ತಾನ್‌ ಶಾಸ್ತ್ರ ೧೯೧೦

೩. ದೇವರೆ ಚಾಕ್ರಿ ಮಳ್ಪೆರೆ ಮನಸ್ಸ್‌ ಇತ್ತಿನಾಕುಳೆಗ್‌ ಕಲ್ಪಾವೊಡಾಯಿ ಶಾಸ್ತ್ರ ಭಾಗ ೧ ಮತ್ತು ೨. ೧೯೧೮

೪. ತುಳು ಭಾಷೆಡ್‌ ಕ್ರಿಸ್ತಾನ್‌ ಶಾಸ್ತ್ರದ ಪುಸ್ತಕ ೧೯೨೫

ಈ ನಾಲ್ಕು ಪುಸ್ತಕಗಳು ಕ್ರೈಸ್ತ ಮತಕ್ಕೆ ಸೇರುವಾಗ ಕಲಿಯುವ ಮತ್ತು ಕ್ರೈಸ್ತರಾದವರು ಕಲಿಯತಕ್ಕ ಸತ್ಯವೇದದ ವಿಚಾರಗಳು, ಸಂಸ್ಕಾರಗಳು, ಕ್ರಮ ನಿಯಮಗಳನ್ನು ಒಳಗೊಂಡಿದೆ.

ಬಾಸೆಲ್‌ಮಿಶನ್‌ ಸಂಸ್ಥೆಯವರು ಮತ್ತು ಆ ಕಾಲದಲ್ಲಿ ಮುದ್ರಣಗೊಂಡು ಪ್ರಕಟವಾಗುತ್ತಿದ್ದ ಜಿಲ್ಲೆಯ ಸಾಹಿತ್ಯ ಪ್ರಕಾರಗಳ ಎಲ್ಲ ಕೃತಿಗಳನ್ನು ಮಂಗಳೂರಿನ ಕರ್ನಾಟಕ ಥಿಯೊಲಾಜಿಕಲ್‌ ಕಾಲೇಜಿನ ಪತ್ರಾಗಾರ ವಿಭಾಗ ಮತ್ತು ಜರ್ಮನಿಯ ಬಾಸೆಲ್‌ನಲ್ಲಿರುವ ಪತ್ರಾಗಾರವು ಪುಸ್ತಕಗಳ ಮೂಲಕ ಹಾಗೂ ಮೈಕ್ರೋ ಫಿಲ್ಮಗಳ ಮೂಲಕ ಸಂಗ್ರಹಿಸಿದೆ. ಇವುಗಳಲ್ಲದೆ ಮಿಶನರಿಗಳ ಕಾಲದಲ್ಲಿ ಪ್ರಕಟವಾಗದೇ ಇದ್ದ ತುಳುನಾಡಿಗೆ ಸಂಬಂಧಪಟ್ಟ ಹಲವಾರು ಹಸ್ತಪ್ರತಿಗಳೂ ಈ ಎರಡು ಸಂಗ್ರಹಾಲಯದಲ್ಲಿ ಜೋಪಾನ ಮಾಡಿಟ್ಟಿದ್ದಾರೆ. ಮಂಗಳೂರಿನಲ್ಲಿರುವ ಕರ್ನಾಟಕ ಥಿಯೊಲಾಜಿಕಲ್‌ಕಾಲೇಜಿನ ಪತ್ರಗಾರ ವಿಭಾಗದಲ್ಲಿ ೧೮೪೯ರಲ್ಲಿ ರಂಗಣಾಚಾರ್ಯ ಬರೆದ ಪಂಚತಂತ್ರ ಉಳಯಿದ ಕತೆ (ಅಪೂರ್ಣ), ಜುಮಾದಿ, ಅಕ್ಕೆರಸು ಪೂಂಜೆದಿ, ದೇವು ಪೂಂಜ, ರಾಮಸ್ವಾಮಿ, ಮಹಿಸಂದಾಯ, ಬೈದೆರ್ಲು- ಈ ಭೂತಗಳ ಪಾಡ್ದನಗಳು ಅಲ್ಲದೆ ಹಲವಾರು ಕಥೆ-ಲೇಖನಗಳಿರುವ ಮತ್ತೊಂದು ದೊಡ್ಡ ಹಸ್ತಪ್ರತಿ ಪುಸ್ತಕವೊಂದು ಇದರ ಸಂಗ್ರಹದಲ್ಲಿದೆ. ಈ ಪುಸ್ತಕದಲ್ಲಿ ನೀತಿಕತೆಗಳು, ದೇವರ ಲಕ್ಷಣಗಳು, ತ್ರಿಮೂರ್ತಿಗಳ ಕತೆ, ಬ್ರಹ್ಮಕಥೆ, ಗೃಹರಾಶಿ ಫಲಗಳು, ಹೊಗೆಸೊಪ್ಪು ಮುಂತಾದ ಹಲವಾರು ಲೇಖನಗಳಿವೆ.

ಕ್ರೈಸ್ತರು ಮತ್ತು ತುಳುಭಾಷೆ

ಬಾಸೆಲ್‌ಮಿಶನ್‌ನವರು ಜಿಲ್ಲೆಯಲ್ಲಿ ಕ್ರೈಸ್ತ ಮತ ಸ್ಥಾಪನೆ ಮಾಡಿದ ನಂತರ ಇಲ್ಲಿಯ ಸಭೆಗಳಲ್ಲಿ ಆರಾಧನೆ, ಬೋಧನೆ, ಬೈಬಲ್‌ ಪಠಣ, ಸಂಗೀತ, ಸಂಸ್ಕಾರಗಳು, ಗುರುದೀಕ್ಷೆ, ಸಭಾ-ಮೀಟಿಂಗ್‌ಗಳು ತುಳುವಿನಲ್ಲಿಯೇ ನಡೆಯುತ್ತಿತ್ತು. ಅಲ್ಲದೆ, ಸಭಾ ವರದಿಗಳನ್ನು ತುಳುವಿನಲ್ಲಿಯೇ ಬರೆದಿಡುವ ಕ್ರಮವೂ ಬಳಕೆಯಲ್ಲಿತ್ತು. ಜಿಲ್ಲೆಯಲ್ಲಿರುವ ಹೆಚ್ಚಿನ ಕ್ರೈಸ್ತರ ಆಡುಭಾಷೆ ತುಳು. ಆರಾಧನೆಗಳಲ್ಲಿ ಈಗಲೂ ತುಳು ಭಾಷೆಯನ್ನು ಬಳಸಲಾಗುತ್ತದೆ. ಸಂಗೀತ ಹಾಡುತ್ತಾರೆ. ಕೆಲವು ಬೋಧಕರು ತುಳುವಿನಲ್ಲಿ ಬೋಧನೆಗಳನ್ನು ಕೊಡುತ್ತಾರೆ. ಈಗಲೂ ತುಳು ಪದ್ಯಗಳನ್ನು ರಚಿಸಿ ಮಕ್ಕಳಿಗೆ ಕಲಿಸುವ ರೂಢಿಯೂ ಇದೆ. ಆದರೆ ಪೇಟೆ ಸಭೆಗಳಲ್ಲಿ ಸಂಗೀತ ಬಿಟ್ಟು ಬೇರೆ ವಿಷಯದಲ್ಲಿ ತುಳು ಬಳಕೆ ಕಡಿಮೆ ಆಗಿದೆ. ಹಳ್ಳಿ ಸಭೆಗಳಲ್ಲಿ ಈಗಲೂ ಸಭಾ – ಮೀಟಿಂಗ್‌ಗಳು ತುಳುವಿನಲ್ಲಿಯೇ ನಡೆಯುತ್ತಿದೆ. ಜಿಲ್ಲೆಯ ಕ್ರೈಸ್ತ ಸಭೆಗಳ ಪ್ರಧಾನ ಭಾಷೆ ಕನ್ನಡವಾದರೂ ತುಳುವಿಗೆ ಜಿಲ್ಲೆಯಲ್ಲಿ ಈಗಲೂ ಪ್ರಾಧಾನ್ಯ ಇದೆ. ತುಳುವನ್ನು ವಿವಿಧ ವಿಧಿ ವಿಧಾನಗಳಲ್ಲಿ ಬಳಸುವುದಲ್ಲದೆ ತಮ್ಮ ದಿನನಿತ್ಯದ ಬಳಕೆಯಲ್ಲಿ ಮತ್ತು ಧಾರ್ಮಿಕ ಆಚರಣೆಗಳಲ್ಲಿ ತುಳು ಭಾಷೆಯನ್ನು ಜಿಲ್ಲೆಯ ಮತ್ತು ಹೊರ ದೇಶಗಳಲ್ಲಿರುವ ಜಿಲ್ಲೆಗೆ ಸಂಬಂಧಪಟ್ಟವರು ಹೆಮ್ಮೆಯಿಂದ ಉಳಿಸಿಕೊಂಡು ಬಂದಿದ್ದಾರೆ.

ಮಿಶನರಿಗಳ ಕಾಲದ ಸಾಹಿತ್ಯ ಪ್ರಕಾರಗಳಲ್ಲಿ ತುಳು ನಿಘಂಟು, ವ್ಯಾಕರಣ ಇವುಗಳನ್ನು ದೆಹಲಿಯ ಏಶ್ಯನ್‌ ಎಜುಕೇಶನಲ್‌ ಸರ್ವಿಸ್‌ ಎಂಬ ಸಂಸ್ಥೆಯೊಂದು ಪ್ರಕಟಿಸಿದೆ. ತುಳು ಪೊಸ ಒಡಂಬಡಿಕೆಯನ್ನು ಬೆಗಳೂರಿನಲ್ಲಿರುವ ಸತ್ಯವೇದ ಸಂಸ್ಥೆಯು ಪ್ರಕಟಿಸಿದೆ. ತುಳು ಸಂಗೀತಗಳು ಮತ್ತು ಗೀತಗಳಿಗೆ ತಕ್ಕ ರಾಗಗಳು ಎಂಬ ಕೃತಿಗಳನ್ನು ಮಂಗಳೂರಿನಲ್ಲಿರುವ ಬಲ್ಮಠ ಇನ್ಸ್‌ಟ್ಯೂಟ್‌ ಆಫ್‌ ಪ್ರಿಂಟಿಂಗ್‌ ಟೆಕ್ನಾಲಜಿ (ಹಿಂದಿನ ಬಾಸೆಲ್‌ಮಿಶನ್‌ಪ್ರೆಸ್‌) ಸಂಸ್ಥೆಯು ಪ್ರಕಟಿಸಿದೆ. ಉಳಿದೆಲ್ಲವುಗಳಲ್ಲಿ ಹೆಚ್ಚಿನವು ಬಾಸೆಲ್‌ನ ಪತ್ರಾಗಾರದಲ್ಲಿ ಮತ್ತು ಕೆ. ಟಿ. ಸಿ. ಪತ್ರಾಗಾರದಲ್ಲಿ ಪುಸ್ತಕ ರೂಪದಲ್ಲಿ ಮತ್ತು ಮೈಕ್ರೋಫಿಲ್ಮ್‌ ರೂಪದಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಇವುಗಳಲ್ಲದೆ ಲಂಡನ್ನಿನ ಬ್ರಿಟಿಷ್‌ಲೈಬ್ರೆರಿಯಲ್ಲಿಯೂ ತುಳುವಿನ ಸಂಗ್ರಹವಿದೆ.

ಮಿಶನರಿಗಳ ತುಳು ಸೇವೆಯನ್ನು ಪ್ರತಿಬಿಂಬಿಸುವ ಬಾಯ್ದೆರೆ ಸಂಗ್ರಹವೂ ಜಿಲ್ಲೆಯಲ್ಲಿದ್ದು ಅದನ್ನು ಕಲೆ ಹಾಕಬೇಕಾಗಿದೆ. ಹಳ್ಳಿ ಹಳ್ಳಿಗಳಲ್ಲಿದ್ದ ಮಿಶನರಿಗಳು ತುಳು ಸಂಗೀತಗಳನ್ನು ಕಲಿಸುತ್ತಿದ್ದರು. ಆ ಕಾಲದಲ್ಲಿ ದೇಶೀಯರೂ ತುಳು ಗೀತೆಗಳನ್ನು ರಚಿಸಿ ಹಾಡುತ್ತಿದ್ದರು ಹಾಗೂ ಮಕ್ಕಳಿಗೆ ಕಲಿಸುತ್ತಿದ್ದರು. ಅವುಗಳ ಸಂಗ್ರಹ ಈ ತನಕ ಮಾಡಿಲ್ಲ.

ಮುಲ್ಕಿಯಲ್ಲಿದ್ದ ಬ್ರಿಗೆಲ್‌ ಎಂಬ ಮಿಶನರಿಯವರ ನೆನಪಿಗಾಗಿ ರಚನೆಯಾಗಿರುವ ಸಂಗೀತವೊಂದರ ಕೆಲವು ಸಾಲುಗಳು ಹೀಗಿದೆ (ನನ್ನ ಅಜ್ಜಮ್ಮ ಹೇಳಿದ್ದು – ಜೀವರತ್ನಿ ಕರ್ಕಡ – ತೀರಿಕೊಂಡಾಗ ೯೪ ವರ್ಷ ಪ್ರಾಯ, ಹಳೆಯಂಗಡಿಯವರು)

ಒಡೆಗ್‌ ಪೋಪರ್‌ ಬ್ರಿಗೆಲಯ್ಯ
ಕುಡಲಗ್‌ ಪೋಪೆ ಜೋಕುಲೆ
ಎಂಕುಲ್ಲ ಬರೊಡೆ ಬ್ರಿಗೆಲಯ್ಯ
ಸಾದಿಡ್‌ ಕಷ್ಟಾವು ಜೋಕುಲೆ
ತಿನ್ಯರೆ ಕನಪರ ಬ್ರಿಗೆಲಯ್ಯ
ಎನಡ ಕಾಸಿಜ್ಜಿ ಜೋಕುಲೆ

ಎಲ್ಲಿಗೆ ಹೋಗುವಿರಿ ಬ್ರಿಗೆಲಯ್ಯ, ಮಂಗಳೂರಿಗೆ ಹೋಗುತ್ತೇನೆ ಮಕ್ಕಳೇ, ನಾವು ಬರಬೇಕೆ ಬ್ರಿಗೆಲಯ್ಯ, ದಾರಿಯಲ್ಲಿ ಕಷ್ಟವಾಗಬಹುದು ಮಕ್ಕಳೆ, ತಿನ್ನಲು ತಿಂಡಿ ತರುತ್ತೀರಾ ಬ್ರಿಗೆಲಯ್ಯ, ನನ್ನತ್ರ ದುಡ್ಡಿಲ್ಲ ಮಕ್ಕಳೇ, ಈ ಅರ್ಥ ಕೊಡುವಪದ್ಯವು ಮುಲ್ಕಿ, ಹಳೆಯಂಗಡಿ ಪ್ರದೇಶದಲ್ಲಿ ಬಳಕೆಯಲ್ಲಿತ್ತು. ಬ್ರಿಗೆಲ್‌ರವರು ಮುಲ್ಕಿಯಲ್ಲಿ ಹೆಣ್ಮಕ್ಕಳ ಅನಾಥ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು (೧೮೬೦). ಅಲ್ಲಿದ್ದ ಮಕ್ಕಳು ಮಿಶನರಿಯೊಂದಿಗಿದ್ದ ಸಂಬಂಧದ ವಿಚಾರವಾಗಿ ಈ ಸಂಗೀತ ರಚನೆಯಾಗಿರಬೇಕು.

ವಿದೇಶದಲ್ಲಿ ಹುಟ್ಟಿ ತಮಿಳುನಾಡಿಗೆ ಆಗಮಿಸಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಹಲವಾರು ಸಾಹಿತ್ಯಗಳನ್ನು ನಿರ್ಮಿಸಿ ತುಳು ಸಾಹಿತ್ಯದ ಚರಿತ್ರೆಯನ್ನು ಆರಂಭಿಸಿದ ಮಿಶನರಿಗಳ ಕೊಡುಗೆಯನ್ನು ತುಳುನಾಡು ಎಂದೂ ಮರೆಯುವಂತಿಲ್ಲ. ಇವರು ರಚಿಸಿದ ಸಾಹಿತ್ಯ ಪ್ರಕಾರಗಳಲ್ಲಿ ಸಂಶೋಧನೆಗೆ ಹಲವಾರು ಮಾರ್ಗಗಳು ನಮಗಾಗಿ ತೆರೆದಿವೆ. ಇವುಗಳಿಂದ ನಾವು ಪ್ರೇರಣೆ ಪಡೆದು ತುಳುನಾಡಿನ, ತುಳು ಮಣ್ಣಿನ ವಾಸನೆಯನ್ನು ಜಗತ್ತಿಗೇ ತಿಳಿಸುವಂತೆ ಕಾರ್ಯ ನಡೆಯಬೇಕಾಗಿದೆ.

ಅನುಬಂಧ

ಬಾಸೆಲ್‌ಮಿಶನ್‌ ಮತ್ತು ಜೆಸುವಿತ ಸಂಸ್ಥೆಯವರ ತುಳು ಪ್ರಕಟಣೆಗಳು

ಸತ್ಯವೇದ

೧. ಮೋಸೆನವು ರಡ್ಡನೆ ಪುಸ್ತಕ ಹೊರಡೋಣವು ೧೯೦೯

೨. ಮೂಸೆನವು ದುಂಬುದ ಪುಸ್ತಕ ಉತ್ಪತ್ತಿ ೧೯೦೫

೩. ಯೋನ ಪುಸ್ತಕ ೧೯೦೦

೪. ನೀತಿ ವಚನೊಳು ೧೮೯೦

೫. ಕೀರ್ತನೆಗಳು ೧೮೬೩

೬. ದಾನಿಯೇಲ್‌ ಪ್ರವಾದಿ ಪುಸ್ತಕ ೧೮೭೨

೭. ಪೊಸತ ಒಡಂಬಡಿಕೆ ೧೮೪೭ (೨೭ ಪುಸ್ತಕಗಳಿವೆ)

ಸತ್ಯವೇದ ಆಧಾರಿತ

೮. ಯೇಸುಕ್ರಿಸ್ತ ಶ್ರಮೆಳೆ ವರ್ತಮಾನ ೧೮೯೬

೯. ರಕ್ಷಣೆದ ಕ್ರಮತ್ತ ಪ್ರಕಾರ ಜತ್ತ್‌ದ್‌ ದೆತ್ತಿ ವಚನೊಳು ೧೮೬೭

೧೦. ಯೇಸು ಮಳ್ತಿ ಪರ್ವತ ಪ್ರಸಂಗ ೧೯೦೦

೧೧. ದೇವರೆ ವಾಕ್ಯದ ಬೋಧನೆದ ಪ್ರಶ್ನೋತ್ತರ ೧೮೮೫

೧೨. ಕ್ರೈಸ್ತೆರೆ ಜೋಕುಗಳು ಕಲ್ಪಡಾಯಿ ವಚನಲಾ ಗೀತಲಾ ೧೯೦೧

೧೩. ಪರ ಪೊಸ ಒಡಂಬಡಿಕೆದ ಕಥೆಲು ೧೮೬೨

೧೪. ದೇವೆರೆ ವಾಕ್ಯದ ಎಲ್ಯ ಕಥೆಗಳು ೧೮೭೯

೧೫. ದೇವೆರೆ ರಾಜ್ಯದ ಮುತ್ತುಳು ೧೯೩೪

ಕ್ರೈಸ್ತ ಆರಾಧನೆ, ಸಂಸ್ಕಾರ, ಪ್ರಾರ್ಥನೆ, ಕಟ್ಟಳೆ ಮತ್ತಿತರ

೧೬. ಪರಲೋಕ ಮಹಿಮೆಡ್‌ಶೇರಿ ಯೇಸು ಕ್ರಿಸ್ತೆ ತನ ಸಭೆಟ್ಟ್‌ ನಡಪುಡು ಕೆಲಸದ ವಿಷ್ಯೊಡು ೧೯೦೧

೧೭. ಬಾಸೆಲ್‌ಮಿಶನ್‌ಗ್‌ ಹಿಂದೂಸ್ಥಾನೊಡುಪ್ಪು ಸೌರ್ವಾತಿಕ ಸಭೆತ್ತ ಕಟ್ಟ್‌ ೧೯೦೩

೧೮. ಹಿಂದೂಸ್ಥಾನೊಡುಲಾ ಆಫ್ರಿಕೊಡುಲಾ ಇಪ್ಟಿ ಬಾ. ಮಿ. ಸುವಾರ್ತಾ ಸಬೆಳೆ ಕಟ್ಟ್‌

೧೯. ಕರ್ತವ ಸೇವಕೆರೆ ಮಾನಸಾಂತರಲಾ ಅಕುಳೆ ಸೇವೆಲಾ ೧೯೦೧

೨೦. ಕ್ರೈಸ್ತಗ್‌ ರಕ್ಷಣೆ ಆಂಡ್‌ ಇನ್ಪಿ ನಿಶ್ಚಯ ಆಯಗ್‌ ಆಪಿನಿ ಎಂಚ ೧೮೯೯

೨೧. ದೇವರಾಧನೆದ ಕ್ರಮ ೧೮೫೯

೨೨.ದೇವರಾಧನೆದ ಕ್ರಮ (ಉತ್ತರ ಪ್ರತ್ಯುತ್ತರ) ೧೯೪೬

೨೩. ದೃಢೀಕರಣ ಪ್ರಶ್ನೋತ್ತರ ೧೮೮೫

೨೪. ದೃಢೀಕರಣದ ವಿಷಯೊಡು ೧೮೯೭

೨೫. ದಿನದಿನತ ಪ್ರಾರ್ಥನೆಗಳು ೧೮೬೯

೨೬. ಪರಿಶುದ್ಧ ಸ್ನಾನ ಕೊರ್ಪಿ ದುಂಬು ಕಲ್ಪಾವೊಡಾಯಿ ಶಾಸ್ತ್ರ (ಜೆ.)

೨೭. ಎಲ್ಲ್ಯ ಜೋಕುಳೆಗ್‌ ಕಲ್ಪಾವೊಡಾಯಿ ಕ್ರಿಸ್ತಾನ್‌ ಶಾಸ್ತ್ರ ೧೯೧೧ (ಜೆ)

೨೮. ದೇವೆರೆ ಚಾಕ್ರಿ ಮಳ್ಪೆರೆ ಮನಸ್ಸ್‌ ಇತ್ತಿನಾಕುಳೆಗ್‌ ಕಲ್ಪಾವೊಡಾಯಿ ಶಾಸ್ತ್ರ ಭಾಗ ೧ ಮತ್ತು ೨. ೧೯೧೮ (ಜೆ.)

೨೯. ತುಳು ಭಾಷೆಡ್‌ ಕ್ರಿಸ್ತಾನ್‌ ಶಾಸ್ತ್ರದ ಪುಸ್ತಕ ೧೯೨೫ (ಜೆ.)

ಸಂಗೀತಗಳ

೩೦. ತುಳು ಗೀತೋಳು ೧೮೭೪

೩೧. ಜೋಕುಳು ಗೀತೋಳು ೧೮೭೮

೩೨. ಸೇಂಕಿ ಗೀತೋಳು

೩೩. ನಮ ರಾಗೊಳು ೧೮೪೮

೩೪. ಕನ್ನಡ ಮತ್ತು ತುಳು ಗೀತಗಳಿಗೆ ತಕ್ಕ ರಾಗಗಳು

ನೀತಿಬೋಧೆ

೩೫. ಎಂಕ್‌ಲಾ ಒಂಜಿ ಇಲ್ಲ್‌ಉಂಡು – ೧೮೭೭

೩೬. ಅರಸು ಮಗ ಉಂಗಿಲದ ಸಾಮ್ಯ ೧೮೮೯

೩೭. ಕಳುವೆ ವೀರಪ್ಪನ ಮಾನಸಾಂತರ ೧೯೦೯

೩೮. ಶೆಟ್ಟಿ ಬೊಕ್ಕ ಬುದ್ಧಿ ಸೈತಿ ಬೊಕ್ಕ ದುಃಖ ೧೮೭೩

೩೯. ಕ್ರೈಸ್ತರ್‌ ಕಲಿ ಗಂಗಸರ್‌ ಮಳ್ತ್‌ದ ಮಾರುನವು ಸಮಾದುಂಡಾ? ೧೮೭೮

೪೦. ಗುಡ್ಡೆನ್‌ ಲಕ್ಕಾದ್‌ ಪಾಡುನ ವಿಶ್ವಾಸ ೧೯೦೭

೪೧. ದೆತ್ತೊಣುನೆಡ್ದ್ ಕೊರ್ಪಿನವೇ ಎಡ್ಡೆ ೧೯೦೯

೪೨. ಯಾನ್‌ ಅಳೆಗ್‌ ಪಗೆ ಬೂಟಂದೆ ಕುಳ್ಳಯೆ ೧೯೦೯

೪೩. ದೇವೆರೆನ್‌ ನಂಬಿನಾಯಗ್‌ ಇಂಬು ನಂಬಂದಿನಾಯಗ್‌ ಅಂಬು ೧೯೦೩

ಭಾಷಾಂತರ

೪೪. ಫ್ಲಟಿಕ್‌ ದೊರೆ ಬರೆದ್‌ ಕೊರಿ ಸಂಸಾರದ ಕ್ರಮೊಳು ೧೯೦೨

೪೫. ಸ್ವರ್ಗಯಾತ್ರೆ ೧೯೦೧

ಭಾಷೆ – ವ್ಯಾಕರಣ – ನಿಘಂಟು

೪೬. ಇಂಗ್ಲಿಷ್‌ ತುಳು ಶಬ್ದಕೋಶ ೧೮೮೮

೪೭. ತುಳು ವ್ಯಾಕರಣ ೧೮೭೨

೪೮. ಕನ್ನಡ – ಇಂಗ್ಲಿಷ್‌ ತುಳು ಭಾಷಾಮಂಜರಿ – ೧೯೦೫

ಪಠ್ಯಪುಸ್ತಕ

೫೦. ತುಳು ಅಕ್ಷರಮಾಲೆ ೧೮೯೦

೫೧. ತುಳು ಪಾಠಾಳೆ ರಡ್ಡನೆ ಪುಸ್ತಕ ೧೮೬೨

ಭೂತಾರಾಧನೆ, ಗಾದೆಗಳು, ಮತ್ತಿತರ

೫೨. ತುಳುವೆರೆಡ್‌ ನಡಪು ಭೂತ ಸೇವೆ ೧೮೯೧

೫೩. ಪಾಡ್ಡನೊಳು ೧೮೮೬

೫೪. ಭೂತ ವಿದ್ಯೆಯು (ಕನ್ನಡ) ೧೮೬೭

೫೫. ಭೂತಾಳ ಪಾಂಡ್ಯನ ಅಳಿಯಸಂತಾನ ಕಟ್ಟ್‌೧೮೫೭

೫೬. ತೌಳವ ಗಾಥಾಮಂಜರಿ ಅಂದ್‌೦ಡ ಸಾರ ತುಳು ಗಾದೆಗಳು ೧೮೬೯

೫೭. ಸಹಸ್ರಾರ್ಧ ತುಳು ಗಾದೆಳು ೧೮೭೪

ಆಕರ ಸೂಚಿ

  1. Basel Mission Report 1841 – 1913

2. The History of printing and Publishing in India Vol. I, 1988, by B.S. Keshavan, National Book Trust, Delhi

3. Shiri Godwin (Ed). 1985, Wholeness in Christ (Tulu Hymnal – An Article by O.V. Jatthanna) Karnataka Theological Research Institute, Mangalore

೪. ಸಭಾಪತಿ ಎನ್‌., ೨೦೦೦, ಆಧುನಿಕ ಕನ್ನಡ ಸಾಹಿತ್ಯಾಭಿವೃದ್ಧಿಗೆ ಬಳ್ಳಾರಿ ಲಂಡನ್‌ಮಿಷನಿನ ಪ್ರಥಮ ಕೊಡುಗೆ. ಕನ್ನಡ ದೈವಜ್ಞಾನ ಸಾಹಿತ್ಯ ಸಮಿತಿ, ಮಂಗಳೂರು

೫. ತಲ್ವಾಡಿ ಬಿ.ಎಸ್‌., ೧೯೮೯, ಕರ್ನಾಟಕ ಕ್ರೈಸ್ತರ ಇತಿಹಾಸ, ಕನ್ನಡ ಕಥೋಲಿಕ್‌ಸಂಘ ಬೆಂಗಳೂರು,

೬. ಬೆನೆಟ್‌ ಜಿ. ಅಮ್ಮನ್ನ, ೨೦೦೧, ಸಿ.ಯಸ್‌.ಐ ದಕ್ಷಿಣ ಸಭಾ ಪ್ರಾಂತದಲ್ಲಿ ಶೈಕ್ಷಣಿಕ ರಂಗದಲ್ಲಿ ಸೇವೆ, ಕೆ.ಎಸ್‌.ಡಿ, ಮಂಗಳೂರು.

೭. ಫರ್ತ್ ಸಿ.ಬಿ., ೧೯೭೨, (ಅನು. ಮಾರಾ, ಎಸ್‌.ಎ) ಭಾರತೀಯ ಕ್ರೈಸ್ತ ಸಭಾ ಚರಿತ್ರೆ, ಪ್ರವೇಶಿಕೆ, ಕನ್ನಡ ದೈವಜ್ಞಾನ ಸಾಹಿತ್ಯ ಸಮಿತಿ ಮಂಗಳೂರು.

೮. ಎಸ್‌.ಪಿ. ಗೌಡರ. ೧೯೯೭, ಕನ್ನಡ ಕ್ರೈಸ್ತ ಗೀತೆಗಳ ಅಧ್ಯಯನ, ಕಿಟೆಲ್‌ ಮಹಾ ವಿದ್ಯಾಲಯ, ಧಾರವಾಡ

೯. ಬೆನಟ್‌ ಜಿ. ಅಮ್ಮನ್‌, ೨೦೦೦ ತುಳುಭಾಷೆ ಮತ್ತು ವಿದೇಶೀಯರು ಲೇಖನ, ಪುಟ ೫೨೯, ಪೊಲಿ, ಕೆನರಾ – ೨೦೦, ಜಿಲ್ಲಾಧಿಕಾರಿ, ದ.ಕ. ಜಿಲ್ಲೆ.

೧೦. ಬೆನೆಟ್‌ ಜಿ. ಅಮ್ಮನ್ನ, ೧೯೯೬, ನೂದು ವರ್ಷ ಪಿರವುದು ನಿಘಂಟ್‌-ಲೇಖಕ, ಮದಿಪು – ೧, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.

೧೧. ಬೆನೆಟ್‌ ಜಿ. ಅಮ್ಮನ್ನ, ೧೯೯೯, ತುಳು ಬಾಸೆ ಬೊಕ್ಕ ಕ್ರೈಸ್ತ ಸಾಹಿತ್ಯ – ಲೇಖನ, ಮದಿಪು ೧೫, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.

೧೨. ಶ್ರೀನಿವಾಸ ಹಾವನೂರು, ೨೦೦೦, ಹೊಸಗನ್ನಡ ಅರುಣೋದಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

14. Pal, M.R.T (Ed), souvenir – 1988 and 1991, Mission and Evangelism Dept. KSD CSI, Mangalore

೧೫. ಪಾದೆಕಲ್ಲು ವಿಷ್ಣು ಭಟ್ಟ (ಸಂ.) ೧೯೯೭, ತುಳುವರಿವರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೧೬. ಬಿ. ಮುತ್ತಣ, ೧೯೬೯, ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ.

೧೭. ವಿ.ಎ. ವಿವೇಕ ರೈ, ೧೯೮೫, ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು.

೧೮. ಪಾ. ಸಂಜೀವ ಬೋಳಾರ, ೧೯೮೯, ಬ್ರಹ್ಮಶ್ರೀ ನಾರಾಯಣಗುರು – ಬದುಕು – ಸಾಧನೆ, ವೈಶಿಷ್ಟ್ಯ, ಬಿಲ್ಲವರ ಯೂನಿಯನ್‌, ಮಂಗಳೂರು.

೧೯. ಬಾಬು ಪೂಜಾರಿ, ೨೦೦೩, ಬಿಲ್ಲವರು – ಒಂದು ಅಧ್ಯಯನ, ಬಿಲ್ಲವ ಜಾಗೃತಿ ಬಳಗ, ಮುಂಬಯಿ.

೨೦. ಕೆ. ಚಿನ್ನಪ್ಪಗೌಡ, ೧೯೯೦, ಭೂತಾರಾಧನೆ – ಜಾನಪದೀಯ ಅಧ್ಯಯನ ಮದಿಪು ಪ್ರಕಾಶನ, ಮಂಗಳೂರು.

೨೧. ಪುರುಷೋತ್ತಮ ಬಿಳಿಮಲೆ ಮತ್ತಿತರರು (ಸಂ.) ೧೯೯೫, ಸಿರಿ, ಶ್ರೀ ಅಮೃತ ಸೋಮೇಶ್ವರ ಅಭಿನಂದನ ಸಂಪುಟ, ಕಲಾಗಂಗೋತ್ರಿ, ಮಂಗಳೂರು.