ಹೀಗೊಂದು ಅಚ್ಚರಿ

ಮನು ಇಡ್ಯರ ನಾಟಕಗಳು ತುಳು ರಂಗಭೂಮಿಯ ಅಚ್ಚರಿಗಳು ಸ್ವತಃ ಅವರು ಯಾವ ಬಿಳಿಕಾಲರಿನ ಉದ್ಯೋಗದವರಲ್ಲ. ಅವರು ಬರೆದ ನವ್ಯ ನಾಟಕಗಳು ತಮ್ಮೊಳಗಿನ ತೀವ್ರ, ಪ್ರಖರ ಚೈತನ್ಯದಿಂದ ಮೆರೆಯುತ್ತವೆ. ಹಲವು ತುಳುನಾಟಕಕಾರರ ದುರದೃಷ್ಟದಂತೆ ಮನು ಇಡ್ಯರ ನವ್ಯ ನಾಟಕಗಳು ತಡವಾಗಿ ಮುದ್ರಿತವಾದುವು. ‘ತಿರ್ಸಂಕು’ (೧೯೯೨) ಬಹು ಹಿಂದೆಯೇ ಪ್ರದರ್ಶಿತವಾಗಿದ್ದ ತುಳು ನವ್ಯ ನಾಟಕ. ‘ಬಲಿ’ (೧೯೮೯) ಅವರ ಇನ್ನೊಂದು ಮುದ್ರಿತ ನಾಟಕ. ವಸ್ತುವಿನಲ್ಲಿರುವ ಬಂಡಾಯದ ಕಾವು, ಭಾಷೆಯ ಶಕ್ತಿ ಶಕ್ತಿಶಾಲಿ ಅಭಿವ್ಯಕ್ತಿಯ ಧೈರ್ಯ ಮನು ಇಡ್ಯರಲ್ಲಿದೆ. ಹಾಡು ಮತ್ತು ಮಾತುಗಳು ತೀವ್ರ ಚೈತನ್ಯಕ್ಕಾಗಿ ಆರಿಸಿ ಪೋಣಿಕೆಯಾಗುತ್ತವೆ. ಇವರಲ್ಲಿ ವೈಚಾರಿಕತೆ ಎಂಬುದು ಸಾಮಾಜಿಕ ಅನ್ಯಾಯದ ವಿಶ್ಲೇಷಣೆಯನ್ನು ಆವೇಶದಿಂದ ಮಾಡಿಕೊಡುವುದಕ್ಕಾಹಿದೆ. ಮನು ಇಡ್ಯರು ಬರೆದ ಹಲವು ನಾಟಕಗಳು ಮುದ್ರಿತವಾಗಿಲ್ಲ. ಅವುಗಳಲ್ಲಿ ಸಾಂಪ್ರದಾಯಿಕ ಕ್ರಮದ ನಾಟಕಗಳೂ ಇದ್ದುವು. ಹೀಗಾಗಿ ಮನು ಇಡ್ಯರು ತುಳು ರಂಗಭೂಮಿ ಹೇಗೆ ಹೊಸತನ ತಂದಿದ್ದಾರೆಂಬುದು ಅವರ ಇತರ ನಾಟಕಗಳ ಮುದ್ರಣಗಳಿಲ್ಲದೆ ಪೂರ್ತಿ ಚರ್ಚೆಗೆ ಸಿಗದು.

ಬಲಿಯ ಕತೆ ತುಳು ಪಾಡ್ದನಗಳಲ್ಲಿದೆ. ಅದನ್ನೆತ್ತಿಕೊಂಡಾಗಲೂ ಎಡಪಂಥೀಯ ಧೋರಣೆಗಳನ್ನು ಸೂಕ್ಷ್ಮವಾಗಿ ನಿರ್ವಹಿಸಿಕೊಂಡು, ವಿವಿಧ ಪಂಕ್ತಿಗಳನ್ನು – ಲೋಕಗಳನ್ನು ರಂಗದಲ್ಲಿ ಸೃಷ್ಟಿಸಲಾಗುತ್ತದೆ. ರಾಜ ಬಲಿಯ ದುರಂತವು ಕೆಳಗಿನನ ಲೋಕದವರ ಮಾಗದ ನೋವಾಗುತ್ತದೆ. ‘ತಿರ್ಸಂಕು’ವಿನಲ್ಲಿ ಊರಿನ ಮುಖಂಡನ ಅನ್ಯಾಯಗಳನ್ನು ಪದರ ಪದರಗಳಲ್ಲಿ ಚರ್ಚಿಸಿ, ಊರಿನ ಆಕ್ರೋಶಕ್ಕೆ ಅವನು ಬಲಿಯಾಗುವುದನ್ನು ಚಿತ್ರಿಸಲಾಗುತ್ತದೆ. ಮನೆಗೂ, ನಾಡಿಗೂ ನೋವೇ ಕೊಟ್ಟಿದ್ದ ದುಷ್ಟನ ಬಲಿಯು ಅಧಿಕಾರಶಾಹಿಯೊಂದರ ಬಿಡುಗಡೆಯಾಗುತ್ತದೆ.

ಯಾವ ಅಕಡೆಮಿಕ್‌ ಹಿನ್ನೆಲೆಗಳನ್ನು ಕಲಿಕೆಯಲ್ಲಾಗಲೀ, ವೃತ್ತಿಯಲ್ಲಾಗಲೀ, ಪ್ರವೃತ್ತಿಗಳಲ್ಲಾಗಲೀ ಹೊಂದದಿದ್ದಾಗ – ತನ್ನೊಳಗಿನ ತೀವ್ರ ಪ್ರತಿಭಾಶಕ್ತಿಯಿಂದಲೇ ಹೊಸ ದಾರಿಯನ್ನು ತೆರೆದುಕೊಂಡ ನಾಟಕಕಾರ ಮನು ಇಡ್ಯ. ‘ತಿರ್ಸಂಕು’ ನಾಟಕವನ್ನು ಅವರು ಬರೆದ ಕಾಲಕ್ಕೆ ತುಳು ನಾಟಕಗಳ ಲೋಕದಲ್ಲಿ ಅವರು ಸಾಧಿಸಿದ ಮಹಾನ್‌ ಜಿಗಿತ ಎಷ್ಟೊಂದು ಮಾರು ದೂರವಿತ್ತೆಂದರೆ, ಅದರ ಪ್ರಯೋಗಕ್ಕೆ ಸ್ವತಃ ಅವರೇ ಅಂಜಿದ್ದರು. ತುಳು ಭಾಷೆಯ ಅಸಾಧಾರಣ ಹಿಡಿತಕ್ಕೆ, ಅದರಲ್ಲಿ ಪ್ರಚಂಡ ರಂಗಚೈತನ್ಯ ತರುವ ನಿಟ್ಟಿನಲ್ಲಿ, ತುಳು ಭಾಷೆಯ ರೂಪಕ ಶಕ್ತಿಗೆ ಮನು ಇಡ್ಯರ ನಾಟಕಗಳಲ್ಲಿ ಅಪಾರ ಮಾದರಿಗಳಿವೆ.

‘ನಮ ಎಡ್ಡೆನಾ ಊರ್ಯೆಡ್ಡ’ (೧೯೯೧) ಹಾಗೂ ‘ಇನೆ ರೂಪಕೊಲು’ (೧೯೯೧) ಕೃತಿಗಳಲ್ಲಿ ಮುದ್ದು ಮೂಡುಬೆಳ್ಳ ಕೂಡಾ ಪ್ರಯೋಗಕ್ಕಿಳಿಯುತ್ತಾರೆ. ಪಾಡ್ದನಗಳಿಂದ ಅವರು ಪಡಕೊಳ್ಳುತ್ತಾರೆ – ಹಾಗೂ ಪ್ರಯೋಗಿಸುತ್ತಾರೆ. ಪಂಜುರ್ಲಿಯ ಹುಟ್ಟು, ಅಬ್ಬಗ – ದಾರಗೆಯ ದುರಂತ – ಹೀಗೆ ಬಂದಂಥವು. ಲಘುದಾಟಿಯಲ್ಲಿಯೇ, ಸಮಾಜಕ್ಕೊಂದು ಸಂದೇಶ ಕೊಡಲು ಪ್ರಹಸನದ ದಾರಿಯನ್ನು ಪೊಣ್ಣಗೊಂಜಿ ಮದಿಮೆಯಂತಹ ನಾಟಕಗಳು ಅನುಸರಿಸಿವೆ.

ಶಿವಾನಂದ ಕರ್ಕೇರರ ‘ಎರುಮೈದೆ’ (೧೯೯೭) ತುಳು ಸಮ್ಮೇಳನಗಳಲ್ಲಿ ಬಹುಮಾನಿತ. ಕಂಬಳದಲ್ಲಿ ಕೋಣ ಓಡಿಸುವವನ ಬದುಕಿನ ಸೂತ್ರವಾಗಿ ನಾಟಕ ಓಡುತ್ತದೆ. ಯಕ್ಷಗಾನ, ಭೂತ, ಕಂಬಳ, ಕೋಳಿಕಟ್ಟದ ದೃಶ್ಯಗಳೆಲ್ಲಾ ಅಲಂಕರಣಗಳಾಗಿ ಬಂದು ತುಳುವಿಗೆ ತಥಾತಥಿಕ ‘ದೇಸಿ’ ಸ್ಪರ್ಶ ಕೊಡುತ್ತವೆ. ನಾಟಕ ಸ್ಪರ್ಧೆಗೆ ಬೇಕಾದ ಬಲ ಕೊಡುತ್ತವೆ. ವಸ್ತುವಿನ ಸಹಜತೆಗೆ ಅವನ್ನು ಪೂರಕವಾಗಿಸಿಕೊಂಡಿರುವುದು ನಾಟಕದ ಯಶಸ್ಸಿಗೆ ಕಾರಣ. ಸೂತ್ರಧಾರನ ಮಾದರಿಯಲ್ಲಿ ಇಲ್ಲಿ ‘ಕತೆಗಾರ’ನ ಪಾತ್ರವಿದೆ. ‘ಮಕ್ಕಳ ಪದ’ಗಳನ್ನು ಹೊಸ ಅರ್ಥಕ್ಕೆ ಹೊರಳುವಂತೆ ಬಳಸಿರುವುದು ವಿಶೇಷತೆ. ಕೋಣ ಓಡಿಸುವ ‘ಎರುಮೈಂದ’ ತನ್ನ ಮಗನೇ ಎಂಬ ಅರಿವನ್ನು ಊರ ಮುಖಂಡನಿಗೆ ‘ರಹಸ್ಯಸ್ಫೋಟ’ವಾಗಿ ನಾಟಕ ಕೊಡುತ್ತದೆ.

ಆನಂದಕೃಷ್ಣರ ‘ಪಿಲಿಪತ್ತಿ ಗಡಸ್‌’ (೧೯೯೭) ರಂಗಪ್ರದರ್ಶನದ ದೃಷ್ಟಿಯಿಂದ ವೈಭವವನ್ನು ಸಾಧಿಸಿದ ನಾಟಕ. ಮಗಳ ಹುಟ್ಟಿನ ಬಗೆಗಿನ ‘ರಹಸ್ಯ ಸ್ಫೋಟ’ವನ್ನು ಅವಳನ್ನೇ ಅನುಭವಿಸಿದ ಅಪ್ಪನಿಗೆ ಮಾಡಿಕೊಡುವ ವಸ್ತು ನಿರ್ವಹಣೆ ಈ ನಾಟಕದಲ್ಲೂ ಬಂದಿದೆ. ತುಳುವಿನ ನವ್ಯ ನಾಟಕಗಳಲ್ಲಿ ಈ ರಹಸ್ಯಸ್ಫೋಟದ ಮಾದರಿಗಳು ಹೀಗೆ ಒಟ್ಟು ಮೂರು ಬಾರಿ ಬಂದಿವೆ. ದಾಸಯ್ಯನ ಗೂಢ ಮಾತು, ಕಾಲೈಕ್ಯ ತಂತ್ರದಲ್ಲಿ ಸಾಗುವ ಏಕದೃಶ್ಯ, ಮಗಳನ್ನು ಅನುಭವಿಸುವ ಅಪ್ಪನ ದುರಂತಗಳಲೆಲ್ಲಾ ಗ್ರೀಕ್‌ ನಾಟಕಗಳ ನೆನಪು ಈ ನಾಟಕದಲ್ಲಿ ಬಂದೀತು; ಗುತ್ತಿನ ಮನೆ – ಭೂತಗಳ ಕಲ್ಪನೆಯಲ್ಲಿ ತುಳುವಿನ ಪ್ರಾಚೀನ ಮನೆತನಗಳ ದರ್ಪದ ಅರಿವೂ ಆದೀತು. ಹೀಗೆ ನಾಟಕಕ್ಕೆ ವಿಶಿಷ್ಟ ವಿಶಾಲ ಹೆಣಿಗೆಗಳಿವೆ. ನಾಟಕವು ಹೆಣ್ಣಿನ ಪರವಾಗಿ ನಿಲ್ಲುವ ಬಗೆ ತುಳುನಾಟಕಗಳಿಗೆ ಹೊಸತು. ತನ್ನ ಗಂಡ ತುಂಬುಯೌವ್ವನದ ತರುಣಿಯ ಎದುರು ಸೋಲುವುದನ್ನು ಬಯಸುವ ಹೆಂಡತಿ, ಅವನ್ನು ಸೋಲಿಸಬಯಸುವ ಶೋಷಿತ ಪರವ ಹೆಂಗಸು – ಹೀಗೆ ಹೆಣ್ಣು ಮಕ್ಕಳು ಪೆರ್ಗಡೆಯ ಕುಸಿತವನ್ನು ಬಯಸುತ್ತಾರೆ. ಅದುಲೈಂಗಿಕವಾಗಿ ಸಂಭವಿಸಬೇಕಾಗಿದೆ. ಕಂಬಾರರ ಕಾದಂಬರಿ ನಾಟಕಗಳಲ್ಲಿ ಚರ್ಚಿತವಾಗುವ ಲೈಂಗಿಕ ವಸ್ತುವಿನ್ಯಾಸವೂ ಇಲ್ಲಿ ನೆನಪಾಗ ಬಲ್ಲುದು. ‘ಪಿಲಿಪತ್ತ್‌ ಗಡಸ್‌’ ನಾಟಕದ ಶಕ್ತಿ ಇರುವುದು ಅದರ ತೀವ್ರ ಸಂಭಾಷಣೆಗಳಲ್ಲಿ. ರಂಗ ಚೈತನ್ಯವನ್ನು ತೀವ್ರತೆಯ ಕಡೆಗೆ ವಾಲಿಸಿ ರಂಗವನ್ನು ಬೆಳೆಸುವ ದಾರಿಯ ನಾಟಕವಿದು.

ಗಣೇಶ್‌ ಅಮೀನ್‌ ಸಂಕಮಾರರ ‘ಮಾಯದ ಕಾಯಿ’ ಯ (೨೦೦೨) ಕಾಲಕ್ಕೆ ಬಂದಾಗ ಆಧುನಿಕ ರಂಗತಂತ್ರಗಳನ್ನು ಅವು ಸೂಚಿತ ರಂಗದಲ್ಲಿ ಹೇಗೆಬಳಸಿಕೊಳ್ಳುತ್ತವೆಯೆಂದರೆ – ಇವಕ್ಕೆ ‘ದೂಜಿ ಬೊಲ್ಪು’ (ಸ್ಪಾಟ್‌ಲೈಟ್‌) ಬೇಕೇ ಬೇಕು. ಆಧುನಿಕ ರಂಗಕಲ್ಪನೆಗಳೇ ಇಲ್ಲಿ ನಾಟಕವನ್ನು ನಿಯಂತ್ರಿಸಿ ಒಯ್ಯುತ್ತವೆ. ಈ ಬಗೆಯ ನಾಟಕಗಳಿಗೆ ಬೇಕಾದ ಮಾಯಾಲೋಕ, ಹಾಡು ಮತ್ತು ಮಾಂತ್ರಿಕ ಮಾತುಗಳನ್ನು ಪಾಡ್ದನ, ನುಡಿಗಟ್ಟು, ಭೂತಾರಾಧನೆಗಳಿಂದ ಪಡಕೊಳ್ಳಲಾಗಿದೆ. ರಂಗವನ್ನೇ ತುಳುವೀಕರಣ ಮಾಡಹೊರಟ ಉತ್ಸಾಹದಿಂದಾಗಿ ವಸ್ತುವಿನ ವಿನ್ಯಾಸದಲ್ಲಿ ಕುಸುರಿ ಕಾಣುವುದಕ್ಕಿಂತಲೂ ಹೆಚ್ಚಾಗಿ ರಂಗಕೃತಿಯ ಸ್ವರೂಪದಲ್ಲೇ ಹೊಸ ಕೆತ್ತನೆ ಕೆತ್ತಲು ನಾಟಕ ಸನ್ನದ್ಧವಾಗಿದೆ.

ತುಳುವಿನ ನವ್ಯ ನಾಟಕಗಳ ಮೊತ್ತ ಕಡಿಮೆ; ಪ್ರಯೋಗಗಳ ಸಂಖ್ಯೆ ಕಡಿಮೆ: ಪ್ರಯೋಗಶೀಲತೆ ಮಾತ್ರ ಸಣ್ಣದಲ್ಲ.

ಎರಡು ವಿಚಾರ

ಅ. ಬೆರಳೆಣಿಕೆಯ ನಾಟಕಕಾರ್ತಿಯರ ಜೊತೆ

ಸ್ತ್ರೀಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದ, ಮಾಡುತ್ತಿರುವ ರಂಗಭೂಮಿ ಇದು. ಮಹಿಳೆ ಎಲ್ಲಾದರೂ ಹೆಣ್ಣುದನಿಯಾಗಿ ಹಾಡಿಗೆ ಬರುತ್ತಿದ್ದರೆ ಹೆಚ್ಚು. ತೀರಾ ಇತ್ತೀಚೆಗಿನವರೆಗೂ ಹೆಣ್ಣು ತುಳು ರಂಗಭೂಮಿಗೆ ಜೋರಾಗಿ ಬಂದುದಿಲ್ಲ. ಇಂಥಲ್ಲೂ ಮಹಿಳೆ ನಾಟಕ ಬರೆದ ಮಾದರಿಗಳು ಇವೆ.

ಕ್ಯಾಥರೀನ್ ರಾಡ್ರಿಗಸ್‌ ‘ಕೇದಗೆ’ (೧೯೯೨) ಹಾಗೂ ‘ಸಿರಿತುಪ್ಪೆ’ (೧೯೯೫)ರಲ್ಲಿ ಮುದ್ರಿಸಿದರು. ತುಳು ಜಾನಪದ ಮತ್ತು ಹೊಸ ರಂಗತಂತ್ರಗಳಿಂದ ಅವರು ಪ್ರಭಾವಿತ. ದೊಡ್ಡ ಪ್ರಮಾಣದಲ್ಲಿ ತುಳು ಜಾನಪದ ಕತೆಗಳ ಸಂಗ್ರಹ ಕ್ಯಾಥರೀನ್‌ಅವರಲ್ಲಿ ಇರುವುದರಿಂದ ಅದಕ್ಕೆ ಹಾಗೆಯೇ ರಂಗರೂಪ ಕೊಟ್ಟುಬಿಡುವ ದಾರಿ ನಾಟಕಕಾರ್ತಿಯದ್ದು. ‘ಸಿರಿತುಪ್ಪೆ’ ಯಲ್ಲಿರುವುದು ಆಕಾಶವಾಣಿ ರಚನೆಗಳು. ಕೇದಗ ಎಂಬ ಹೆಸರಿನ ಹಳೆ ಮತ್ತು ಹೊಸ ಈರ್ವರು ಹೆಣ್ಣು ಮಕ್ಕಳ ಕತೆಯೇ ‘ಕೇದಗ’’ ಎಂಬ ನಾಟಕ. ಜನಪದ ಕತೆಗಳಲ್ಲಿ ಕಾಣಿಸುವ ಹೆಣ್ಣಿನ ನೋವು ನಾಟಕಗಳಿಗೂ ಇಳಿದಿದೆ. ಕ್ರಿಶ್ಚನ್‌ ಹಿನ್ನೆಲೆಯ ಕ್ಯಾಥರೀನ್‌ ತುಳುನಾಟಕಗಳಲ್ಲಿ ತೊಡಗಿಸಿಕೊಂಡ ಕ್ರಮವೇ ಕುತೂಹಲಕರ ಇಲ್ಲಿ ಉಡುಪಿ ಕಡೆಯ ತುಳು ಯಾವ ಎಗ್ಲಿಲ್ಲದೆ ಬಳಕೆಯಾಗಿದೆ.

ಜಯಂತಿ ಎಸ್‌. ಬಂಗೇರರ ‘ಸತ್ಯ ನೆಗಪುನಗ’ (೧೯೯೯) ವಿಶಿಷ್ಟ ಕೃತಿ. ಗುರ್ಕಾರ ಅನ್ಯಾಯ ಮಾಡಿದಾಗ ಜುಮಾದಿಯ ಕಡ್ತಲೆ (ಖಡ್ಗ)ವನ್ನು ಹಿಡಿದು ಓಡುವ ಹೆಣ್ಣು ದಾರು. ಹೆಣ್ಣೊಬ್ಬಳ ಸಮರ್ಥ ಬಂಡಾಯವಾಗುತ್ತಾಳೆ. ಭೂತದ ಕತ್ತಿಯನ್ನು ಹೆಣ್ಣಿನ ಕೈಯಲ್ಲಿ ಹಿಡಿಸುವ ಕ್ರಾಂತಿಯನ್ನು ಪುರುಷ ನಾಟಕಕಾರನಿಗೂ ಕಲ್ಪಿಸಲು ಸಾಧ್ಯವಾಗಿಲ್ಲ – ಜಯಂತಿಯವರ ಶಕ್ತಿ ಇದು. ಆದರೆ ನಾಟಕ ಜುಮಾದಿಯ ಸತ್ಯವನ್ನು ಮೆರೆಸುವ ಬಗ್ಗೆಯೂ ಸಾಂಪ್ರದಾಯಿಕ ದೃಷ್ಟಿಯಲ್ಲಿ ನೋಡಲು ಹೋಗಿ, ದಾರುವಿನ ಪ್ರತಿಭಟನೆಯ ಪ್ರಖರತೆಗೆ ಮಸುಕು ಬಂದು ಬಿಟ್ಟಿದೆ.

ಶಾರದಾ ಆರ್‌. ರಾವ್‌ ಅವರ ‘ಪ್ರೀತಿದ ಬಿಲೆ’ (೨೦೦೧) ‘ರಾಜಕುಮಾರಿ ಲವಂಗಿ’ ಆಧಾರವಾಗಿಸಿದೆ. ಷಾಜಹಾನ್‌ನಂತಹ ಚರಿತ್ರೆಯ ಪಾತ್ರಗಳಿಗಿರುವ ನಾಟಕವಿದು. ‘ಬೂದಮ್ಮನ ಬಿರ್ಸಾತಿಕೆ’ (೧೯೯೬)ಯಲ್ಲಿ ವಸ್ತು ನಿರ್ವಹಣೆಯಲ್ಲಿ ವಿಶಿಷ್ಟತೆ ಇದೆ. ಸ್ತ್ರೀಪಾತ್ರಗಳನ್ನು ಕೇಂದ್ರವಾಗಿಸಿದ ತುಳುವಿನ ಸಾಂಪ್ರದಾಯಿಕ ನಾಟಕಗಳು ಚಿತ್ರಿಸಿದ ಹೆಣ್ಣಿನ ಗೋಳಿನ ಕತೆಯ ಏಕತಾನತೆಯನ್ನು ಇಲ್ಲಿ ಅಚ್ಚರಿದಾಯಕವಾಗಿ ಮೀರಲಾಗಿದೆ. ನಾಯಕಿ ಬೂದ್ಯಮ್ಮ ನಡುವಯಸ್ಸಿನ ಹೆಂಗಸು. ಆಕೆ ಜಾತಿ, ನಿಯಮಗಳ ಮಿತಿ ಮೀರುತ್ತಾಳೆ. ‘ಪಿಂಡ ಪ್ರದಾನಕ್ಕೂ’ ಮುಂದಾಗುವ ಕೆಚ್ಚು ಅವಳಲ್ಲಿದೆ. ಸ್ತ್ರೀ ಚೈತನ್ಯವೊಂದು ಕುಟುಂಬದ ಶಕ್ತಿಯಾಗುವಂತಹ ವಿಶಿಷ್ಟ ವಸ್ತು ವಿನ್ಯಾಸವಿದು. ಆಶಯದಲ್ಲಿರುವ ಕ್ರಾಂತಿಕಾರತನವು ರಂಗತಂತ್ರಕ್ಕೆ ದಕ್ಕಿದರೆ ನಾಟಕದ ಹೊಸತನದ ಸ್ವರೂಪವೇ ಬೇರಾಗುತ್ತಿತ್ತು.

ಆ. ಹಾರುತ್ತಿರುವ ಕಾಲ ಹಿಡಿದು

ತುಳು ನಾಟಕಗಳಿಗೆ ಮುಕ್ತಾಯದ ಮಾತು ಹೇಗೆ? ಭಾಷೆ ಇರುವವರೆಗೂ ನಾಟಕ ಬಾಳುತ್ತದೆ. ದೂರದರ್ಶನ ಕಾಲಿಟ್ಟು ಕನ್ನಡ ರಂಗಭೂಮಿಯೇನೋ ಸ್ಥಿತ್ಯಂತರ ಅನುಭವಿಸಿತು. ಆದರೆ ತುಳು ರಂಗ ಕಲಾವಿದರು ಬೆಂಗಳೂರಿನಿಂದ ದೂರದಲ್ಲಿರುವವರು. ತುಳುಭಾಷೆ ರಾಜಧಾನಿಯ ದೂರದರ್ಶನದ ಮೊದಲ ಆದ್ಯತೆಯೂ ಅಲ್ಲ. ಹಾಗಿದ್ದರೂ ದೂರದರ್ಶನದಲ್ಲಿ ದಕ್ಕದ್ದನ್ನು ತುಳು ತನ್ನ ರಂಗಭೂಮಿಯಲ್ಲಿ ಸಾಧಿಸಿ, ಜನರನ್ನು ಸೆಳೆಯಿತು. ಶತಮಾನದ ಕೊನೆಯ ದಶಕದಲ್ಲಿ ಎದ್ದ ನಗೆ ನಾಟಕಗಳ ಹುಟ್ಟು ಇಲ್ಲಿದೆ. ತೀವ್ರ ನಮನೀಯತೆಯ ಗುಣವುಳ್ಳ ಇವು ಮುದ್ರಿತವಾಗಲಿಲ್ಲ, ಬಹುಶಃ ಆಗುವುದೂ ಇಲ್ಲ. ಆದರೆ ದೃಶ್ಯ ಶ್ರವ್ಯ ಮಾಧ್ಯಮಗಳೆರಡರಲ್ಲೂ ದಾಖಲಾಗಿವೆ.

ಈ ನಗೆನಾಟಕಗಳು ಮತ್ತೆ ಮಂಗಳೂರು ನಗರಕೇಂದ್ರಿತ ನಗೆನಾಟಕಗಳ ಮೂಲ ಎಳೆಗಳು ಹಿಂದಿನ ತುಳು ನಾಟಕಗಳ ವಿದೂಷಕ ಪಾತ್ರಗಲ್ಲಿದ್ದುವು. ಅಲ್ಲಿ ನಗೆ ಸನ್ನಿವೇಶಗಳು ಮುಖ್ಯ ಕತೆಯ ಅಲಂಕರಣಕ್ಕೆ ಬರುತ್ತಿದ್ದರೆ, ಇಲ್ಲಿ ನಗೆ ದೃಶ್ಯಗಳ ಹಿಂದೆ ಒಂದು ಸರಳ ಕತಾಸೂತ್ರ ಮರೆಯಲ್ಲಿ ಓಡುತ್ತಿರುತ್ತದೆ.

ಮಂಗಳೂರು ನಗರದ ಅಸಂಖ್ಯಾತ ಬಿಳಿಕಾಲರಿನ ಉದ್ಯೋಗಿಗಳಲ್ಲದವರ ವೃತ್ತಿಪಾಡು, ಆ ವೃತ್ತಿ ಸನ್ನಿವೇಶಗಳ ಹಾಸ್ಯ, ನಗರದ ಹೊರಗಿರುವ ಹಿತ್ತಿಲು ತುಂಬಾ ತುಂಬಿರುವ ಮಧ್ಯಮವರ್ಗ, ಅಲ್ಲಿಯ ಕಿಕ್ಕಿರಿದ ಘಟನಾವಳಿಗಳು – ಹೀಗೆ ತುಳುವಿನ ಮಧ್ಯಮವರ್ಗದ ಬದುಕಿನ ಪಾಡಿಗೆ ಬಲಶಾಲಿ ಕನ್ನಡಿಯಾಗಿ ಈ ನಾಟಕಗಳು ನಿಂತಿವೆ.

ಈ ಕಾಲದ ಸಾಮಾಜಿಕ ಸನ್ನಿವೇಶ ನೋಡೋಣ. ತುಳುವರು ಆರ್ಥಿಕವಾಗಿ ಈಗ ಸಾಕಷ್ಟು ಬಲಿಷ್ಠರು. ಎಷ್ಟೆಂದರೆ ಇಲ್ಲಿ ಕಠಿಣಶ್ರಮದ ಮಣ್ಣಿನ ದುಡಿಮೆಗಾಗಿ ಉತ್ತರ ಕರ್ನಾಟಕದಿಂದ ಕಾರ್ಮಿಕರು ಬರುವ ಕಾಲ ಘಟ್ಟವಿದು. ಇತರರಿಂದ ಬೇಕಿದ್ದನ್ನು ಮಾಡಿಸಿ ಅವರು ಮಾಡಿಕೊಟ್ಟದ್ದನ್ನು ಖರೀದಿಸುವ ಒಲವಿನ ಯುಗವಿದು. ನಾಟಕವೂ ಅಷ್ಟೇ – ಆರ್ಡರ್‌ ಕೊಟ್ಟಾಗ ಬಂದು ಆಡಿ ಹೋಗಬೇಕು. ‘ಉತ್ಪನ್ನಗಳು – ಪ್ಯಾಕೇಜ್‌ ಆಗಿ ಲಭ್ಯವಿರಲಿ’ ಎಂಬಂತಹಾ ಧೋರಣೆ ಸಮುದಾಯದಲ್ಲಿದ್ದಾಗ, ಬಂದು ಆಡಿಹೋಗುವ ವೃತ್ತಿಪರ ತಂಡಗಳು ಹುಟ್ಟುತ್ತವೆ. ಜನರೆದುರು ನಿರಂತರವಾಗಿ ಗೆಲ್ಲುವುದು – ಸೋಲದೆ ಉಳಿಯುವುದೇ ಈ ತಂಡಗಳ ಯಶಸ್ಸಿನ ಗುಟ್ಟಾಗುತ್ತದೆ. ಶತಮಾನದಾಟುತ್ತಿರುವಾಗ ತುಳುವಿನ ಜನಪ್ರಿಯ ನಾಟಕಗಳು ಮಗುದೊಮ್ಮೆ ವೃತ್ತಿಪರತೆ ರೂಢಿಸಿದ್ದು ಕಾಣುತ್ತದೆ. ಹಳ್ಳಿಗಳಲ್ಲಿ ಹಳೆ ಮಾದರಿಯಲ್ಲಿ ನಾಟಕವಾಡುವುದನ್ನು ಸಂಘ ಸಂಸ್ಥೆಗಳು ಕಡಿಮೆ ಮಾಡಿ ನಗರದ ತಂಡಗಳಿಗೆ ‘ಆರ್ಡರ್‌’ ಕೊಡುತ್ತಿದ್ದಾರೆ.

ತುಳು ನಾಟಕಗಳು ಬರುತ್ತಲೇ ಇವೆ – ಮತ್ತೆ ಮುದ್ರಿತವಾಗದೆ ಕೇವಲ ರಂಗದಲ್ಲಿ ಹುಟ್ಟಿ- ರಂಗದಲ್ಲಿ ಕರಗುತ್ತಾ. ಯಾವ ಸೈದ್ಧಾಂತಿಯ ತರ್ಕಕ್ಕೂ ಸುಲಭಕ್ಕೆ ಸಿಕ್ಕದೆ ಜನರಿಗಾಗಿ ಬಾಳುತ್ತಾ.

ಅನುಬಂಧ

ಲಭ್ಯ ಮುದ್ರಿತ ನಾಟಕಗಳು

[ನಾಟಕ ಸಂಗ್ರಹಕ್ಕೆ ಸಹಕಾರ : ಶ್ರೀಯುತರಾದ ಪ್ರಭಾಕರ ಕಲ್ಯಾಣಿ, ಉದಯಶಂಕರ ಎನ್‌.ಎ., ತಮ್ಮ ಲಕ್ಷ್ಮಣ, ಕಿಶೋರ್‌ಕುಮಾರ್‌ ಶ್ರೇಣಿ, ಕೆ.ಜೆ. ಶೆಟ್ಟಿ ಕಡಂದಲೆ, ಇಬ್ರಾಹಿಂ ಎಂ ಎಸ್‌., ಸತ್ಯಗಣಪತಿ ಎಂ.ಪಿ.ಆರ್‌.ಕೆ. ಮಂಗಳೂರು, ಸಂಜೀವ ಅಡ್ಯಾರ್‌, ಐ.ಕೆ. ಬೊಳುವಾರು, ಮುದ್ದು ಮೂಡುಬೆಳ್ಳೆ, ಅಮೃತ ಸೋಮೇಶ್ವರ, ಉದಯ್‌ ಉಳ್ಳಾಲ್‌, ಚೇತನ್‌ ಸೋಮೇಶ್ವರ, ಕೆ.ಎನ್‌. ಟೇಲರ್‌, ಪಿ.ಎಸ್‌. ರಾವ್‌, ಟಿ.ಜಿ. ಮುಡೂರು ಶಿಮಂತೂರು ಚಂದ್ರಹಾಸ ಸುವರ್ಣ, ಶಕುಂತಲಾ ಸಾಲ್ಯಾನ್‌, ಸೋಮನಾಥ ಕರ್ಕೇರ, ತಿಮ್ಮಪ್ಪ ಪುತ್ತೂರು, ಮಾಧವ ಕಾಡ್ಬೆಟ್ಟು, ಶಾರದಾ ರಮೇಶ್‌ ರಾವ್‌, ಚಂದ್ರಹಾಸ ಕಣಂತೂರು, ರಾಮ ಕಿರೋಡಿಯನ್ನರ ಕುಟುಂಬ, ತುಳು ಸಾಹಿತ್ಯ ಅಕಾಡೆಮಿ, ತುಳುಪೀಠ ಮಂಗಳೂರು ವಿಶ್ವವಿದ್ಯಾನಿಲಯ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ]

ನಾಟಕಕಾರನ ಪ್ರಕಟಿತ ಮೊದಲ ನಾಟಕದ ವರುಷವನ್ನು ಆಧರಿಸಿ ಕೆಳಗಿನ ಹೆಣಿಗೆ ಇದೆ.

ಪ್ರಕಟಿತ ವರ್ಷ ಲೇಖಕ ಕೃತಿ ಪ್ರಕಾಶನ
೧೯೩೩ ಮಾಧವ ತಿಂಗಳಾಯ ಜನಮರ್ಲ್‌ ಎಸ್‌. ಯು. ಪಣಿಯಾಡಿ, ಉಡುಪಿ
೧೯೩೭ ತುಳುವಾಲೆ ವಂದೇ ಮಾತರಂ ನವಯುಗ-ತುಳು ಸಂಚಿಕೆಗಳು
೧೯೩೭ ಬಾಲಬಂಧು, ‘ಬಾಲವೃಂದೊ’-ಸುಳ್ಯ ಮಾತಲಾ ಇಂಚನೇ ಅಥವಾ ಮಡಿತ್ತ ಛಡಿ ನವಯುಗ-ತುಳು ಸಂಚಿಕೆಗಳು
೧೯೪೦ ಪಡುಬಿದ್ರಿ ಶಿವಣ್ಣ ಹೆಗ್ಡೆ ವಿದ್ಯೆದ ತಾದಿ ಲೇಖಕರು (?)
೧೯೬೪ ರಾಮ ಕಿರೋಡಿಯನ್‌ ಕಾಂಪರನ ಕಟಿಪಿಟಿ (?)
೧೯೬೫ ರಾಮ ಕಿರೋಡಿಯನ್‌ ಈ ಪಿರಯೊಡ್ಲಾ ಬರವಾ? ಜ್ಯುಲಿಯೆಟ್‌ ಪ್ರಿಂಟಿಂಗ್‌ ಪ್ರೆಸ್‌, ಮಂಗಳೂರು
೧೯೭೦ ರಾಮ ಕಿರೋಡಿಯನ್‌ ಸರ್ಪಸಂಕಲೆ ಕೋಕಿಲಾ ಆರ್ಟ್ಸ್‌, ಮಂಗಳೂರು
೧೯೬೫ ಇಬ್ರಾಹಿಂ ಯಂ. ಯಸ್‌. ಪೊಣ್ಣೇ ಸಮಾಜದ ಕಣ್ಣ್‌ ವೀಣಾಸಾಹಿತ್ಯ ನಿಲಯ, ಮಂಗಳೂರು
೧೯೭೧ ಇಬ್ರಾಹಿಂ ಯಂ. ಯೆಸ್‌. ಒಂಜಿ ಪೊಣ್ಣು ಅಜಿಕಣ್ಣ್‌ ವೀಣಾಸಾಹಿತ್ಯನಿಲಯ, ಮಂಗಳೂರು
೧೯೯೨ (೪ನೇಮು.) ಇಬ್ರಾಹಿಂ ಯಂ. ಎಸ್‌. ಮೋಕೆದ ಪೊದು ವೀಣಾಸಾಹಿತ್ಯನಿಲಯ, ಮಂಗಳೂರು
೧೯೯೨ (೩ನೇಮು.) ಇಬ್ರಾಹಿಂ ಯಂ.ಎಸ್‌. ನಂಜಿದ ನಾಲಾಯಿ ವೀಣಾಸಾಹಿತ್ಯನಿಲಯ, ಮಂಗಳೂರು
೧೯೬೬ ಬಿ. ಎಸ್‌.ರಾವ್‌ ಸಂಶಯದ ಸಂಕಲೆ ಯಂ. ವೆಂಕಟರಾವ್‌, ಮಂಗಳೂರು
೧೯೬೭ ವಿಶುಕುಮಾರ್‌ ಕೋಟಿಚೆನ್ನಯ ಲೇಖಕ
(?) ಕೆ. ಬಿ. ಭಂಡಾರಿ ಬದಿತ್ತ ಬಯಕೆ ಕಪ್ಪು ಪೊಣ್ಣು  
    ನಾರದೆರೆನ ವಕಾಲತ್‌ ಲೇಖಕ
೧೯೬೮ರ ಮೊದಲು ಕೆ. ಯನ್‌. ಟೇಲರ್‌ ಯೇರ್‌ಮಲ್ತಿನ ತಪ್ಪು? (ದ್ವಿ.ಮು. ೧೯೭೪) ಯಂ. ವೆಂಕಟರಾವ್‌ ಮಂಗಳೂರು-೧
೧೯೬೮ ಕೆ. ಯನ್‌. ಟೇಲರ್‌ ಕಲ್ಲ್‌ದ ದೇವರ್‌ ಜಯಂತಿ ಪಬ್ಲಿಕೇಶನ್ಸ್‌, ಮಂಗಳೂರು
೧೯೭೦ ಕೆ. ಯನ್‌. ಟೇಲರ್‌ ತಮ್ಮಲೆ ಅರುವತ್ತನ ಕೋಲ ಯಂ. ವೆಂಕಟರಾವ್‌, ಮಂಗಳೂರು-೧
೧೯೭೯ ಕೆ. ಯನ್‌. ಟೇಲರ್‌ ಕಾಸ್‌ದಾಯೆ ಕಂಡನಿ ಜಯಂತಿ ಪಬ್ಲಿಕೇಶನ್ಸ್‌, ಮಂಗಳೂರು
೧೯೮೩ ಕೆ. ಯನ್‌. ಟೇಲರ್‌ ಕಂಡನೆ ಬುಡೆದಿ ಜಯಂತಿ ಪಬ್ಲಿಕೇಶನ್ಸ್‌, ಮಂಗಳೂರು
೧೯೮೫ ಕೆ. ಯನ್‌. ಟೇಲರ್‌ ದೇವರ್‌ಕೊರ್ಪೆರ್‌ ಯಂ. ವೆಂಕಟರಾವ್‌, ಮಂಗಳೂರು-೧
(?) ಕೆ. ಯನ್‌. ಟೇಲರ್‌ ಇಂದ್ರನ ಆಸ್ತಿ (?)
(?) ಕೆ. ಯನ್‌. ಟೇಲರ್‌ ಯಾನ್‌ಸನ್ಯಾಸಿ ಆಪೆ (?)
(?) ಕೆ. ಯನ್‌. ಟೇಲರ್‌ ವಿಶ್ವಾಮಿತ್ರ ಮೇನಕ (?)
(?) ಕೆ. ಯನ್‌. ಟೇಲರ್‌ ಶಾಂತಿ (?)
೧೯೬೮ ಡಾ| ಸಂಜೀವ ದಂಡಕೇರಿ ಬಯ್ಯಮಲ್ಲಿಗೆ ಲೇಖಕರು
೧೯೬೯ ಡಾ| ಸಂಜೀವ ದಂಡಕೇರಿ ಪಾದ ಕಾನಿಗೆ ಲೇಖಕರು
(?) ಡಾ| ಸಂಜೀವ ದಂಡಕೇರಿ ರಾಧಾ-ಕೃಷ್ಣ ಲೇಖಕರು
(?) ಡಾ| ಸಂಜೀವ ದಂಡಕೇರಿ ಗಂಗಾ-ರಾಮ್‌ ಲೇಖಕರು
(?) ಡಾ| ಸಂಜೀವ ದಂಡಕೇರಿ ಸರಸ್ವತಿ ಲೇಖಕರು
೧೯೬೯ ಎಂ. ಪುರುಷೋತ್ತಮ ಬೊಲ್ಪುದಾಂತಿ ತುಡರ್‌ ಸಹೋದರ ಕಲಾವೃಂದ, ಮಂಗಳೂರು
೧೯೭೦ ಸಂಜೀವ ಎ. B.Sc. ನೆತ್ತರ್‌ದ ಕಾನಿಗೆ ಲೇಖಕರು(?)
೧೯೭೨ ಸಂಜೀವ ಎ. B.Sc. ಮರ್ಲೆದಿ ಯಂ. ವೆಂಕಟರಾವ್‌, ನಿತ್ಯಾನಂದ ಗ್ರಂಥಾಲಯ, ಮಂಗಳೂರು
೧೯೭೨ ಸಂಜೀವ ಎ. B.Sc. ಎನ್ನ ಮಾಮಿ ಯಂ. ವೆಂಕಟರಾವ್‌, ನಿತ್ಯಾನಂದ ಗ್ರಂಥಾಲಯ, ಮಂಗಳೂರು
೧೯೭೭ ಸಂಜೀವ ಎ. B.Sc. ಗಾಳಿಗ್‌ತಿಕ್ಕಿನ ತುಡರ್‌ ವಿ.ಪಿ.ಸಿ. ಪಬ್ಲಿಕೇಶನ್ಸ್‌, ಮಂಗಳೂರು.
೧೯೮೦ ಸಂಜೀವ ಎ. B.Sc. ಗಂಗೆ-ಗೌರಿ ವಿ.ಪಿ.ಸಿ. ಪಬ್ಲಿಕೇಶನ್ಸ್‌, ಮಂಗಳೂರು.
೧೯೮೩ ಸಂಜೀವ ಎ. B.Sc. ಪೊರ್ತು ಕಂತ್‌ನಗ ವಿ.ಪಿ.ಸಿ. ಪಬ್ಲಿಕೇಶನ್ಸ್‌, ಮಂಗಳೂರು.
೧೯೭೦ ಪಿ.ಎಸ್‌. ರಾವ್‌ ಪಗೆತ ಪುಗೆ ಯಂ. ವೆಂಕಟರಾವ್‌, ಮಂಗಳೂರು
೧೯೭೦ ಪಿ. ಎಸ್‌. ರಾವ್‌ ಸೊರ್ಕುದ ಪೊಣ್ಣು ಸಹೋದರ ಕಲಾವೃಂದ, ಮಂಗಳೂರು
೧೯೭೧ ಪಿ. ಎಸ್. ರಾವ್‌ ಮತಿದಾಂತಿ ಮಾಟ ಸಹೋದರ ಕಲಾವೃಂದ, ಮಂಗಳೂರು
೧೯೭೧ ಪಿ. ಎಸ್‌. ರಾವ್ ಬೆನ್ಪಿನ ಪೊಣ್ಣು ಸಹೋದರ ಕಲಾವೃಂದ, ಮಂಗಳೂರು
೧೯೭೨ ಪಿ. ಎಸ್‌. ರಾವ್‌ ಪೊಸ ಜೋಡಿ ಸಹೋದರ ಕಲಾವೃಂದ, ಮಂಗಳೂರು
೧೯೭೩ ಪಿ. ಎಸ್‌. ರಾವ್‌ ಈ ಪ್ರೀತಿ ಬದ್ಕೊಡಾ? ಸಹೋದರ ಕಲಾವೃಂದ, ಮಂಗಳೂರು
೧೯೭೪ ಪಿ. ಎಸ್‌. ರಾವ್‌ ಕೆಸರ್‌ ಸಹೋದರ ಕಲಾವೃಂದ, ಮಂಗಳೂರು
೧೯೭೭ ಪಿ. ಎಸ್‌. ರಾವ್‌ ಇಂಚಾಂಡ ಎಂಚ? ಸಹೋದರ ಕಲಾವೃಂದ, ಮಂಗಳೂರು
೧೯೭೯ ಪಿ. ಎಸ್‌. ರಾವ್‌ ನಿಲೆದಾಂತಿ ಪೊಣ್ಣು ಸಹೋದರ ಕಲಾವೃಂದ, ಮಂಗಳೂರು
೧೯೮೦ ಪಿ. ಎಸ್‌. ರಾವ್‌ ಮಾಮಣ್ಣ ಸಹೋದರ ಕಲಾವೃಂದ, ಮಂಗಳೂರು
೧೯೮೦ ಪಿ. ಎಸ್‌. ರಾವ್‌ ಮಾರಪ್ಪಣ್ಣನ ಮಗೆ ಸಹೋದರ ಕಲಾವೃಂದ, ಮಂಗಳೂರು
೧೯೮೨ ಪಿ. ಎಸ್‌. ರಾವ್‌ ಪನಂದೆ ಪದ್ರಾಡ್‌ ಸಹೋದರ ಕಲಾವೃಂದ, ಮಂಗಳೂರು
೧೯೮೩ ಪಿ. ಎಸ್‌. ರಾವ್‌ ಪಿಕ್‌ನಿಕ್‌ದ ಪೊರ್ಲು ಸಹೋದರ ಕಲಾವೃಂದ, ಮಂಗಳೂರು
೧೯೮೪ ಪಿ. ಎಸ್‌. ರಾವ್‌ ಪೊರ್ಲುದ ಪೊಣ್ಣು ಸಹೋದರ ಕಲಾವೃಂದ, ಮಂಗಳೂರು
೧೯೮೫ ಪಿ. ಎಸ್‌. ರಾವ್‌ ಪೊತ್ತಂದಿ ಪಗೆ ಸಹೋದರ ಕಲಾವೃಂದ, ಮಂಗಳೂರು
೧೯೮೫ (೨ನೇ.ಮು.) ಪಿ. ಎಸ್‌. ರಾವ್‌ ಊರು ಪೂರಾ ಸುದ್ದಿ ಸಹೋದರ ಕಲಾವೃಂದ, ಮಂಗಳೂರು
೧೯೮೫ ಪಿ. ಎಸ್‌. ರಾವ್‌ ಸೊರ್ಕುಗು ಸವಾಲ್‌ ಸಹೋದರ ಕಲಾವೃಂದ, ಮಂಗಳೂರು
೧೯೮೬ (೨ನೇ ಮು.) ಪಿ. ಎಸ್‌. ರಾವ್‌ ಜವಾನ್ದಿ ಪೊಣ್ಣು ಸಹೋದರ ಕಲಾವೃಂದ, ಮಂಗಳೂರು
೧೯೮೭ ಪಿ. ಎಸ್‌. ರಾವ್‌ ಮೋಕೆ ಮರ್ಲಾ ಸಹೋದರ ಕಲಾವೃಂದ, ಮಂಗಳೂರು
೧೯೮೮ ಪಿ. ಎಸ್‌. ರಾವ್‌ ತಬುರನ ಪರಕೆ ಸಹೋದರ ಕಲಾವೃಂದ, ಮಂಗಳೂರು
೧೯೮೮ ಪಿ. ಎಸ್‌. ರಾವ್‌ ಗೊಬ್ಬುದ ಗೊಬ್ಬು ಸಹೋದರ ಕಲಾವೃಂದ, ಮಂಗಳೂರು
೧೯೯೦ (೩ನೇ ಮು.) ಪಿ. ಎಸ್‌. ರಾವ್‌ ಯಾನ್‌ಬುಡಾಯೆ ಸಹೋದರ ಕಲಾವೃಂದ, ಮಂಗಳೂರು
೧೯೯೦ ಪಿ. ಎಸ್‌. ರಾವ್‌ ಅಮ್ಮೆಗೊರಿ ಅಂಡೆ ಮಗೆ ಸಹೋದರ ಕಲಾವೃಂದ, ಮಂಗಳೂರು
೧೯೯೧ ಪಿ. ಎಸ್‌. ರಾವ್‌ ಆಣ್‌ಮಗೆ ಸೋಂಪೆ ಸಹೋದರ ಕಲಾವೃಂದ, ಮಂಗಳೂರು
೧೯೯೧ ಪಿ. ಎಸ್‌. ರಾವ್‌ ಬರ್ಪನಾ? ಸಹೋದರ ಕಲಾವೃಂದ, ಮಂಗಳೂರು
೧೯೯೧ ಪಿ. ಎಸ್‌. ರಾವ್‌ ಎನ್ನ ಕಂಡಾನಿಗ್‌ಯಾನೆ ಬುಡೆದಿ ಸಹೋದರ ಕಲಾವೃಂದ, ಮಂಗಳೂರು
೧೯೯೧ ಪಿ. ಎಸ್‌. ರಾವ್‌ ಮುಠ್ಯಾಳ ಮಾಮೆ? ಸಹೋದರ ಕಲಾವೃಂದ, ಮಂಗಳೂರು
೧೯೯೩ (೨ನೇ ಮು.) ಪಿ. ಎಸ್‌. ರಾವ್‌ ಬದಿತ ಉರ್ಲು ಸಹೋದರ ಕಲಾವೃಂದ, ಮಂಗಳೂರು
೧೯೯೪ ಪಿ. ಎಸ್‌. ರಾವ್‌ ಪದ್ದಕ್ಕನ ಕಂಡನಿ ಪಿರಬೈದೆ ಸಹೋದರ ಕಲಾವೃಂದ, ಮಂಗಳೂರು
(?) ಪಿ. ಎಸ್‌. ರಾವ್ ಲವ್‌ marrage ಸಹೋದರ ಕಲಾವೃಂದ, ಮಂಗಳೂರು
೨೦೦೦ ಪಿ. ಎಸ್‌. ರಾವ್‌ ಬರಡ್‌!ಬರಡ್‌!!! ಸಹೋದರ ಕಲಾವೃಂದ, ಮಂಗಳೂರು
೨೦೦೫ ಪಿ. ಎಸ್‌. ರಾವ್‌ ತಾಕತ್ತ್‌ ಇತ್ತ್‌೦ಡ ತಾಂಟ್‌ಲ! ದುರ್ಗಾ ಪ್ರಕಾಶನ, ಮಂಗಳೂರು
೨೦೦೫ ಪಿ. ಎಸ್‌. ರಾವ್‌ ಮಾಮಿಗೊಂತೆ ಕಮ್ಮಿ ದುರ್ಗಾ ಪ್ರಕಾಶನ, ಮಂಗಳೂರು
೧೯೭೦ ಎಂ. ವೆಂಕಪ್ಪಯ್ಯ ಕಾರಂತ್‌ ಮಾಸ್ಟೆರೆ ಫಜೀತಿ ಎಂ. ತಿರುಮಲೇಶ್ವರ ಭಟ್‌
(?) ಎನ್‌. ಗೋಪಾಲಕೃಷ್ಣ ಪವಿತ್ರ ಪಾಪಿ ಯಂ. ಬಿ. ದೇವಾಡಿಗ, ಮಂಗಳೂರು
೧೯೭೪ ಎನ್‌. ಗೋಪಾಲಕೃಷ್ಣ ಗೊಮ್ಮಡ್ದೇವೆರ್‌ ಯಂ. ಬಿ. ದೇವಾಡಿಗ, ಮಂಗಳೂರು
೧೯೮೪ ಎನ್‌. ಗೋಪಾಲಕೃಷ್ಣ ಕಲ್ಕುಡ ಕಲ್ಲುರ್ಟಿ ಯಂ. ಬಿ. ದೇವಾಡಿಗ, ಮಂಗಳೂರು
೧೯೭೧ ಟಿ.ಜಿ. ಮುಡೂರು ಜೋಕುಳೆ ಬುದ್ದಿ ಪ್ರತಿಮಾ ಪ್ರಕಾಶನ, ಪಂಜ
೨೦೦೩ ಟಿ. ಜಿ. ಮುಡೂರು ಅಮರ ಕಲ್ಯಾಣ ಕ್ರಾಂತಿ  
೧೯೭೩ ಬಿ. ಚಿತ್ತರಂಜನ್‌ ದಾಸ್‌ ಶೆಟ್ಟಿ ಪೊಣ್ಣು ಮಣ್ಣ್‌ದ ಬೊಂಬೆ ನಾಗಶಕ್ತಿ, ಪ್ರಕಾಶನ, ಬೋಳ
೧೯೭೫ ಬಾಲಕೃಷ್ಣ ಮುದ್ಯ ಚೇರ್‌ಮನ್‌ ಕಿಟ್ಟಣ್ಣೆ ವಿಪಿಸಿ ಪಬ್ಲಿಕೇಶನ್ಸ್‌, ಮಂಗಳೂರು
೧೯೭೯ ಬಾಲಕೃಷ್ಣ ಮುದ್ಯ ಲಿಲ್ಲಿ ವಿಪಿಸಿ ಪಬ್ಲಿಕೇಶನ್ಸ್‌, ಮಂಗಳೂರು
೧೯೮೭ ಬಾಲಕೃಷ್ಣ ಮುದ್ಯ ಯಾನ್ಲಾ ಬದ್‌ಕೊಡಾ ವಿಪಿಸಿ ಪಬ್ಲಿಕೇಶನ್ಸ್‌, ಮಂಗಳೂರು
೧೯೭೫ ಕೆ. ಕೆ. ಸಾಲಿಯಾನ್‌ ಮುಗಲ್‌ಕಬಿನಗ ಶ್ರೀ ದುರ್ಗ ಸೇವಾದಳ, ಬಡಾನಿಡಿಯೂರು
೧೯೭೬ ಕೆ. ಆರ್‌. ಶೆಟ್ಟಿ ಕೊಲೆಗಾರೆ ಯೇರ್‌? ವೀಣಾ ಸಾಹಿತ್ಯ ನಿಲಯ, ಮಂಗಳೂರು
೧೯೭೮ ಭಾಸ್ಕರ ಟಿ. ಬಂಗೇರ ಬಂಗಾರ್ದ ಬಿಸತ್ತಿ ವೀಣಾ ಸಾಹಿತ್ಯ ನಿಲಯ, ಮಂಗಳೂರು
೧೯೭೮ ಶಿಮಂತೂರು ಚಂದ್ರಹಾಸ ಸುವರ್ಣ ಬ್ರಹ್ಮನ ಬರವು (?)
೧೯೮೦ ಅಮೃತ ಸೋಮೇಶ್ವರ ಗೋಂದೊಳು ಪ್ರಕೃತಿ, ಪ್ರಕಾಶನ, ಕೋಟೆಕಾರು
೧೯೮೨ ಅಮೃತ ಸೋಮೇಶ್ವರ ರಾಯರಾವುತೆ ತುಳುವ ಪ್ರಕಾಶನ, ಮಂಗಳೂರು
೧೯೮೪ ಅಮೃತ ಸೋಮೇಶ್ವರ ಪುತ್ತೂರ್ದ ಪುತ್ಥೊಳಿ ಸಮೀರ ಪ್ರಕಾಶನ, ಪುತ್ತೂರು
೧೯೮೯ ಅಮೃತ ಸೋಮೇಶ್ವರ ಎಳುವೆರ್‌ದೆಯ್ಯಾರ್‌ ಪ್ರಕೃತಿ ಪ್ರಕಾಶನ, ಕೋಟೆಕಾರು
೧೯೮೯ ಅಮೃತ ಸೋಮೇಶ್ವರ ತುಳುನಾಡ ಕಲ್ಕುಡೆ ಪ್ರಕೃತಿ ಪ್ರಕಾಶನ, ಕೋಟೆಕಾರು
೧೯೯೦ ಅಮೃತ ಸೋಮೇಶ್ವರ ಆಟೊ ಮುಗಿಂಡ್‌ ತುಳುಸಂಘ, ವಿವೇಕಾನಂದ ಕಾಲೇಜು, ಪುತ್ತೂರು
೨೦೦೫ ಅಮೃತ ಸೋಮೇಶ್ವರ ತುಳು ನಾಟಕ ಸಂಪುಟ ಪ್ರಕೃತಿ ಪ್ರಕಾಶನ, ಕೋಟೆಕಾರು
೨೦೦೫ ಅಮೃತ ಸೋಮೇಶ್ವರ ತುಳು ನಾಟ್ಯ ರೂಪಕೊಲು ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ
೧೯೮೧ (೨ನೇ ಮು.) ಸೀತಾನದಿ ಗಣಪಯ್ಯ ಶೆಟ್ಟಿ ಕೋಟಿ ಚೆನ್ನಯ ಸುಬೋಧ ಸಾಹಿತ್ಯ ಭಂಡಾರ, ಹಿಡಿಯಡಕ
೧೯೮೧ ಕುದ್ಕಾಡಿ ವಿಶ್ವನಾಥರೈ ಸಂಕ್ರಾನ್ತಿ ತುಳುಕೂಟ, ಬೆಂಗಳೂರು
೧೯೮೩ ಕುದ್ಕಾಡಿ ವಿಶ್ವನಾಥರೈ ಮಂಜತ ಕಾಪಡೆ ಸತ್ಯೊಮ್ಮೆ ದೆಯ್ಯಾರ್‌ ವಿಶ್ವಕಲಾ ನಿಕೇತನ, ಪುತ್ತೂರು
೧೯೮೭ ಕುದ್ಕಾಡಿ ವಿಶ್ವನಾಥರೈ ಅಬ್ಬಕ್ಕಬ್ಬೆ ವಿಪಿಸಿ ಪಬ್ಲಿಕೇಶನ್ಸ್‌, ಮಂಗಳೂರು
೧೯೮೨ ಎಂ. ಬಿ. ಸಾಲ್ಯಾನ್‌ ಬಂಗಾರ್ದ ಕುರಲ್‌ ಮೈನಾ ಪಬ್ಲಿಕೇಶನ್ಸ್‌, ಮಂಗಳೂರು
೧೯೮೪ ಎಂ. ಬಿ. ಸಾಲ್ಯಾನ್‌ ಧರ್ಮ ಕೈ ಬುಡಂದ್‌ ಮೈನಾ ಪಬ್ಲಿಕೇಶನ್ಸ್‌, ಮಂಗಳೂರು
೧೯೮೫ ಎಂ. ಬಿ. ಸಾಲ್ಯಾನ್‌ ಸತ್ಯದ ತುಡರ್‌ ಮೈನಾ ಪಬ್ಲಿಕೇಶನ್ಸ್‌, ಮಂಗಳೂರು
೧೯೮೯ ಎಂ. ಬಿ. ಸಾಲ್ಯಾನ್‌ ಕತ್ತಲೆದ ಕಥೆ ಮೈನಾ ಪಬ್ಲಿಕೇಶನ್ಸ್‌, ಮಂಗಳೂರು
೧೯೮೩ ಸದಾನಂದ ಸುವರ್ಣ ಗುಡ್ಡೆದ ಭೂತ ರಂಗ-ರಶ್ಮಿ ಪ್ರಕಾಶನ, ಮುಂಬಯಿ
೧೯೮೩ ಪಾ. ಕೃ. ಆನಂದ ಚದಿತ್ತ ಬದಿ ಸುಪ್ರಿಯಾ ಪ್ರಕಾಶನ, ಮಾಡಾವು
೧೯೮೪ ಪಾ. ಕೃ. ಆನಂದ ಗೂಡುಡಿತ್ತಿನ ಪಕ್ಷಿ ವಿಶ್ವ ಕಲಾನಿಕೇತನ ಪ್ರಕಾಶನ, ಪುತ್ತೂರು
೧೯೮೫ ಪಾ. ಕೃ. ಆನಂದ ಒಂಜಿ ತಾಳಿ ರಡ್ಡ್‌ಸಾದಿ ಪ್ರತಿಮಾ ಪ್ರಕಾಶನ, ಪಂಜ
೧೯೮೬ ಪಾ. ಕೃ. ಆನಂದ ಬ್ರಹ್ಮರ್ಕಟ್‌ ಸುಪ್ರಿಯಾ ಪ್ರಕಾಶನ, ಮಾಡಾವು
೧೯೮೮ ಪಾ. ಕೃ. ಆನಂದ ಕಲ್ಯಾಣಿ ಆನಂದ ‌ಪ್ರಕಾಶನ, ಪಾಲ್ತಾಡಿ
೨೦೦೦ ಪಾ. ಕೃ. ಆನಂದ ರಾಮೆ ಆನಂದ ಪ್ರಕಾಶನ, ಪಾಲ್ತಾಡಿ
೨೦೦೩ ಪಾ. ಕೃ. ಆನಂದ ದೈವೊ ನಿರ್ಣಯೊ ಆನಂದ ಪ್ರಕಾಶನ, ಪಾಲ್ತಾಡಿ
೧೯೮೪ ಬಿ. ಉಮೇಶ ಶೆಟ್ಟಿ ಸಾದಿದ ಬೊಲ್ಪು ಸರಳ ಪ್ರಕಾಶನ, ಪಚ್ಚಿನಡ್ಕ
೧೯೮೪ ಕೆ. ಜೆ. ಕೊಕ್ರಾಡಿ ಕಾವೇರಿ ಲೇಖಕ
೧೯೮೪ ಕೆ. ಜೆ. ಕೊಕ್ರಾಡಿ ಒಂಜಿ ಪೊಣ್ಣನ ಕಥೆ ಲೇಖಕ
೧೯೮೪ ಕೆ. ಜೆ. ಕೊಕ್ರಾಡಿ ಬೈರನ ಬದ್‌ಕ್‌ ಲೇಖಕ
೧೯೮೭ ಕೆ. ಜೆ. ಕೊಕ್ರಾಡಿ ಭಾಗ್ಯಲಕ್ಷ್ಮಿ ಲೇಖಕ
೧೯೯೯ ಕೆ. ಜೆ. ಕೊಕ್ರಾಡಿ ರಕ್ಕಸೆರ್ ಲೇಖಕ
೧೯೮೫ ಸೋಮನಾಥ ಎಸ್‌. ಕರ್ಕೇರ ರಜನಿ ಸರ್ವೋದಯ ಸಾಹಿತ್ಯ ಮಾಲೆ, ಡೊಂಬಿವಿಲಿ
೧೯೮೯ ಸೋಮನಾಥ ಎಸ್‌. ಕರ್ಕೇರ ಅಂಚಿ-ಇಂಚಿ ಸರ್ವೋದಯ ಸಾಹಿತ್ಯ ಮಾಲೆ, ಡೊಂಬಿವಿಲಿ
೧೯೯೧ ಸೋಮನಾಥ ಎಸ್‌. ಕರ್ಕೇರ ಪರ್ದೆದ ಪಿರಾವುದ ನಾಟಕ ಸರ್ವೋದಯ ಸಾಹಿತ್ಯ ಮಾಲೆ, ಮುಂಬಯಿ
೧೯೮೬ ಕೆದಂಬಾಡಿ ಜತ್ತಪ್ಪ ರೈ ಸೂದ್ರೆ ಏಕಲವ್ಯೆ ಭಾರದ್ವಾಜ ಪ್ರಕಾಶನ, ಕದಿರೆ, ಮಂಗಳೂರು
೧೯೮೮ ಕೆದಂಬಾಡಿ ಜತ್ತಪ್ಪ ರೈ ಪಡಿಲ್‌ಪಂಪೆ ಕೆದಂಬಾಡಿ ಪ್ರಕಾಶನ, ಪಾಣಾಜೆ
೧೯೮೬ ಎಂ. ಶ್ಯಾಮರಾಯ ಆಚಾರ್ಯ ಬೆಚ್ಚ ನೆತ್ತೆರ್‌ ಲೇಖಕ
೧೯೮೬ ಶ್ರೀ ಭವ್ಯಾ ಆರತಿ ಕೆ. ವಿ. ಭಟ್‌, ಮಂಗಳೂರು
೧೯೮೬ ಶ್ರೀ ಭವ್ಯಾ ತೂ-ತುಡರ್‌ ಕೆ. ವಿ. ಭಟ್‌, ಮಂಗಳೂರು
೧೯೯೩ ಶ್ರೀ ಭವ್ಯಾ ಝಾನ್ಸಿದ ರಾಣಿ ಲಕ್ಷ್ಮೀಬಾಯಿ ಕೆ. ವಿ. ಭಟ್‌, ಮಂಗಳೂರು
೧೯೯೫ ಶ್ರೀ ಭವ್ಯಾ ಅಂಗಲಾಪು ಕೆ. ವಿ. ಭಟ್‌, ಮಂಗಳೂರು
೧೯೮೬ ಡಿ. ಕೆ. ಜೈನ್‌, ಕೊಯ್ಯೂರು ಪಲಯನ ಪ್ರೀತಿ ಲೇಖಕ
೧೯೮೭ ಗಂಗಾಧರ್‌ ಕಿದಿಯೂರು ವಿಜಯಲಕ್ಷ್ಮೀ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೧೯೯೨ ಗಂಗಾಧರ್‌ ಕಿದಿಯೂರು ಬದ್‌ಕೊಂಜಿ ಸರಿಗಮ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೧೯೯೪ ಗಂಗಾಧರ್‌ ಕಿದಿಯೂರು ಇಲ್ಲ್‌ಒಕ್ಕೆಲ್‌ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೧೯೯೫ ಗಂಗಾಧರ್‌ ಕಿದಿಯೂರು ವಿಧಿ ತೋಜಾಯಿ ನಿಧಿ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೧೯೯೬ ಗಂಗಾಧರ್‌ ಕಿದಿಯೂರು ಬಗ್ಗನ ಬಾಗ್ಯೊ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೧೯೯೯ ಗಂಗಾಧರ್‌ ಕಿದಿಯೂರು ಎಣ್ಣೆದಾಂತಿ ತುಡರ್‌ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೨೦೦೨ ಗಂಗಾಧರ್‌ಕಿದಿಯೂರು ಪೊಣ್ಣೊಂಜಿ ಕಲ್ಪವೃಕ್ಷ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೨೦೦೩ ಗಂಗಾಧರ್‌ಕಿದಿಯೂರು ಇಲ್ಲ್‌ಗೊಂಜಿ ಯೋಧೆ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೨೦೦೪ ಗಂಗಾಧರ್‌ಕಿದಿಯೂರು ಪಿಂಗಾರದ ಬಾಲೆಸಿರಿ ಮಧುಶ್ರೀ ಪ್ರಕಾಶನ, ಕಿದಿಯೂರು, ಉಡುಪಿ
೧೯೮೮ ಮಚ್ಚೇಂದ್ರನಾಥ್‌ ಪಾಂಡೇಶ್ವರ ಕೌನ್ಸಿಲರ್‌ಕೊಗ್ಗಣ್ಣೆ ವಿಪಿಸಿ ಪಬ್ಲಿಕೇಶನ್ಸ್‌, ಮಂಗಳೂರು
೨೦೦೪ ಮಚ್ಚೇಂದ್ರನಾಥ್‌ ಪಾಂಡೇಶ್ವರ ನೆತ್ತೆರಾ?…. ನೀರಾ…..? ಮಚ್ಚೇಂದ್ರನಾಥ ಪಾಂಡೇಶ್ವರ ಅಭಿನಂದನ ಸಮಿತಿ, ಮಂಗಳೂರು
೨೦೦೪ ಮಚ್ಚೇಂದ್ರನಾಥ್‌ ಪಾಂಡೇಶ್ವರ ಅಜ್ಜಿ ತಾಂಕಿನ ಪುಳ್ಳಿ ಮಚ್ಚೇಂದ್ರನಾಥ ಪಾಂಡೇಶ್ವರ ಅಭಿನಂದನ ಸಮಿತಿ, ಮಂಗಳೂರು
೧೯೮೯ ಮನು, ಇಡ್ಯಾ ಬಲಿ ಸಿಂಗಾರ, ಸುರತ್ಕಲ್‌
೧೯೯೨ ಮನು, ಇಡ್ಯಾ ತಿರ್ಸಂಕು ಸಿಂಗಾರ, ಸುರತ್ಕಲ್‌
? ವೀರಪ್ಪ ಯನ್‌. ಬಂಗೇರ ಭಾಗ್ಯದ ಜ್ಯೋತಿ ?
೧೯೯೦ ವೀರಪ್ಪ ಯನ್‌. ಬಂಗೇರ ಬೀದಿದ ಭಿಕಾರಿ ಲೇಖಕ
೧೯೮೯ ವಿಠಲಗಟ್ಟಿ ಉಳಿಯ ಬೇಲಿ ಅಭಿಮನ್ಯು ಪ್ರಕಾಶನ, ಕಾಸರಗೋಡು
೧೯೮೯ ಲೀಲಾಬ್ಯಾ, ಸುರತ್ಕಲ್‌ ವಂಶದ ಗೌರವ ಲೇಖಕಿ
೧೯೮೯ ರಾಮಚಂದರ್‌ ಬೈಕಂಪಾಡಿ ಪಿಂಗಾರ ಅಂಜನಿ ಪ್ರಕಾಶನ, ನವಮಂಗಳೂರು
೧೯೮೯ ಚೆಲುವರಾಜ್‌ ಪೆರಂಪಳ್ಳಿ ಸಂಸಾರೊಡೊಂಜಿ ಸನ್ಯಾಸಿ ಪ್ರಿಯದರ್ಶಿನಿ ಪ್ರಕಾಶನ, ಪೆರಂಪಳ್ಳಿ
೧೯೯೧ ಯನ್‌. ಮೋಹನ ಭಟ್‌ ಮದ್ಮೆಗ್‌ಬರೊಡು ಶ್ರೀ ವಿನಾಯಕ ಶಕ್ತಿ ನಾಟಕ ಸಭಾ, ಮಂಗಳೂರು-೧೨
(?) ಯನ್‌. ಮೋಹನ ಭಟ್‌ ಮಾಮಿಗ್‌ಪನ್ತ್‌ನ ಮರ್ಮಾಲ್‌ ಶ್ರೀ ವಿನಾಯಕ ಶಕ್ತಿ ನಾಟಕ ಸಭಾ, ಮಂಗಳೂರು-೧೨
೧೯೯೧ ಮುದ್ದು ಮೂಡುಬೆಳ್ಳೆ ನಮ ಎಡ್ಡೆನಾ ಊರ್ಯಡ್ಡೆ ತಳು ಚೇತನ, ಬೆಂಗಳೂರು-೭೮
೧೯೯೧ ಮುದ್ದು ಮೂಡುಬೆಳ್ಳೆ ಇನೆ ರೂಪಕೊಲು ತುಳು ಚೇತನ, ಬೆಂಗಳೂರು-೭೮
೧೯೯೧ ಕೆ. ಅನಂತರಾಮ ಬಂಗಾಡಿ ದೇವು ಪೂಂಜೆ ವಿ.ಪಿ.ಸಿ. ಪ್ರಕಾಶನ, ಮಂಗಳೂರು-೧
೧೯೯೧ ಕೆ. ಅನಂತರಾಮ ಬಂಗಾಡಿ ಸಿರಿಗಂಗೆ ವಿ.ಪಿ.ಸಿ. ಪ್ರಕಾಶನ, ಮಂಗಳೂರು-೧
೧೯೯೨ ಕ್ಯಾಥರೀನ್‌ ರಾಡ್ರಿಗಸ್‌ ಕೇದಗ ತುಳುಕೂಟ, ಉಡುಪಿ
೧೯೯೫ ಕ್ಯಾಥರೀನ್‌ ರಾಡ್ರಿಗಸ್‌ ಸಿರಿತುಪ್ಪೆ ಪ್ರೀತಿ ಪ್ರಕಾಶನ, ಕಟಪಾಡಿ
೧೯೯೨ ಕೋಡು ಭೋಜ ಶೆಟ್ಟಿ ಕಪ್ಪು ನೆತ್ತೆರ್‌ ಸಾಹಿತ್ಯ ಲಹರಿ ಪ್ರಕಾಶನ, ಔರಂಗಾಬಾದ್‌
೧೯೯೨ ಕೋಡು ಭೋಜ ಶೆಟ್ಟಿ ಪೊಸ ಬಿನ್ನೇರ್‌ ಸಾಹಿತ್ಯ ಲಹರಿ ಪ್ರಕಾಶನ, ಔರಂಗಾಬಾದ್‌
೧೯೯೩ ಪಿ. ಅಶೋಕ ಕುಮಾರ್‌ ಸುಳಿಕ್‌ತಿಕ್ಕಿನ ಬದ್‌ಕ್‌ ಸಾಜ್‌ ಎಂಟರ್‌ಪ್ರೈಸಸ್‌, ಮಂಗಳೂರು-೫
೧೯೯೩ ಪಿ. ಅಶೋಕ ಕುಮಾರ್‌ ನಿಲದಾಂತಿ ಬದ್‌ಕ್‌ ಸಾಜ್‌ ಎಂಟರ್‌ಪ್ರೈಸಸ್‌, ಮಂಗಳೂರು-೫
೧೯೯೪ ಪಿ. ಅಶೋಕ ಕುಮಾರ್‌ ಬದ್‌ಕ್‌ದ ಎತೆ-ಕತೆ ಸಾಜ್‌ ಎಂಟರ್‌ಪ್ರೈಸಸ್‌, ಮಂಗಳೂರು-೫
೧೯೯೪ ಯಂ. ತಿಮ್ಮಪ್ಪ ಪುತ್ತೂರು ಧ್ರುವನಕ್ಷತ್ರ ಪ್ರಜ್ವಲ ಪ್ರಕಾಶನ, ಬೆಳ್ತಂಗಡಿ
೧೯೯೬ ಯಂ. ತಿಮ್ಮಪ್ಪ ಪುತ್ತೂರು ಮಧುಚಂದ್ರ ಪ್ರಜ್ವಲ ಪ್ರಕಾಶನ, ಬೆಳ್ತಂಗಡಿ
೧೯೯೭ ಯಂ. ತಿಮ್ಮಪ್ಪ ಪುತ್ತೂರು ಗಗನ ಕುಸುಮ ಪ್ರಜ್ವಲ ಪ್ರಕಾಶನ, ಬೆಳ್ತಂಗಡಿ
೧೯೯೮ ಯಂ. ತಿಮ್ಮಪ್ಪ ಪುತ್ತೂರು ಕಡಲ್‌ ಪ್ರಜ್ವಲ ಪ್ರಕಾಶನ, ಬೆಳ್ತಂಗಡಿ
೨೦೦೧ ಯಂ. ತಿಮ್ಮಪ್ಪ ಪುತ್ತೂರು ಚಂದ್ರೆದಾಂತಿ ಬಾನ ಪ್ರಜ್ವಲ ಪ್ರಕಾಶನ, ಬೆಳ್ತಂಗಡಿ
೨೦೦೩ ಯಂ. ತಿಮ್ಮಪ್ಪ ಪುತ್ತೂರು ಮರತ್‌ ಬುಡಡೆ ಲೇಖಕ
೨೦೦೩ ಯಂ. ತಿಮ್ಮಪ್ಪ ಪುತ್ತೂರು ಪೊರ್ಲುಗಾದ್‌ ಮುಡಿತಿನ ಪೂ ಲೇಖಕ
೧೯೯೫ ಮಾಧವ ಕಾಡ್ಬೆಟ್ಟು ಸತ್ಯೊದ ಬೊಲ್ಪು ಕೃತ್ತಿಕಾ ಪ್ರಕಾಶನ, ಉಡುಪಿ
(?) ವಿಜಯ ಕುಮಾರ ಶೆಟ್ಟಿ ಬತೊದ ಇಲ್ಲ್‌ ಕಲಾಜಗತ್ತು ಪ್ರಕಾಶನ, ಮುಂಬಯಿ
೧೯೯೭ ವಿಜಯಕುಮಾರ ಶೆಟ್ಟಿ ಈ ನಲ್ಕೆದಾಯೆ ಕಲಾಜಗತ್ತು ಪ್ರಕಾಶನ, ಮುಂಬಯಿ
೧೯೯೯ ವಿಜಯಕುಮಾರ ಶೆಟ್ಟಿ ಬದಿ ಕಲಾಜಗತ್ತು ಪ್ರಕಾಶನ, ಮುಂಬಯಿ
೧೯೯೬ ಶಾರದಾ ರಮೇಶ ರಾವ್ ಬೂದಮ್ಮನ ಬಿರ್ಸಾತಿಕೆ ಸಂದೀಪ ಸಾಹಿತ್ಯ ಅತ್ರಾಡಿ
೨೦೦೧ ಶಾರದಾ ರಮೇಶ ರಾವ್‌ ಪ್ರೀತಿದ ಬಿಲೆ ಸಂದೀಪ ಸಾಹಿತ್ಯ ಅತ್ರಾಡಿ
೧೯೯೬ ಅನಂತ್‌ಎಸ್‌. ಇರ್ವತ್ರಾಯ ಆಸೆಗ್‌ಒಂಜಿ ಅಂತ್ಯ ಕಲಾ ಸಂಗಮ ಬಾಳ
೧೯೯೭ ಆನಂದಕೃಷ್ಣ ಪಿಲಿಪತ್ತಿ ಗಡಸ್‌ ದುರ್ಗಾ ಪ್ರಕಾಶನ, ಮಂಗಳೂರು
೧೯೯೭ ರವಿಪ್ರಸಾದ್‌ ಪೆರ್ಲಂಪಾಡಿ ಮಾಮು ಬರ್ಪೆರ್‌ ಕಲಾಶ್ರೀ ಪ್ರಕಾಶನ, ಪೆರ್ಲಂಪಾಡಿ
೧೯೯೭ ಸದಾನಂದ ಅಂದ್ಹೆ..ಮರ್ಯಾದ್ಹೆಪ್ಪಡೆ ಯುಗಪುರುಷ ಮುದ್ರಣಾಲಯ, ಕಿನ್ನಿಗೋಳಿ
೧೯೯೭ ಅತ್ತಾವರ ಶಿವಾನಂದ ಕರ್ಕೇರಾ ಎರುಮೈಂದೆ ಸ್ವೀಕಾರ್‌ಪ್ರಕಾಶನ, ಮಂಗಳೂರು
೨೦೦೫ ಅತ್ತಾವರ ಶಿವಾನಂದ ಕರ್ಕೇರಾ ಕಾರ್ನಿಕದ ದೈವ ವೈದ್ಯನಾಥ ಸ್ವೀಕಾರ್‌ಪ್ರಕಾಶನ, ಮಂಗಳೂರು
೧೯೯೮ ಕೆ. ಅಬೂಬಕ್ಕರ್‌ ಭಕ್ತರ್ನ ಓಲೆ ಲೇಖಕ
೧೯೯೮ ಸುಧಾಕರ ಕೋಟ್ಯಾನ್‌ ಪೆರಂಪಳ್ಳಿ ಸಂಶಯದ ಸಂಕಲೆ ಯುವಕ ಮಂಡಲ, ಪೆರಂಪಳ್ಳಿ
೧೯೯೯ ಜಯಂತಿ ಎಸ್‌. ಬಂಗೇರ ಸತ್ಯ ನೆಗೆಪುನಗ ದುರ್ಗಾ ಪ್ರಕಾಶನ, ಮಂಗಳೂರು
೧೯೯೯ ನೆಟ್ಟಣಿಗೆ ಪುರೊಷೋತ್ತಮ ಆಚಾರ್ಯ ಬದಿತ ಕೊದಿ ಕಲಾ ಸಾಹಿತ್ಯ ವೇದಿಕೆ, ಬೆಳ್ಳೂರು
೨೦೦೦ ಮಂಗಳೂರು ಮಣಿ ಬೊಳ್ಳಿ ಮೂಡ್‌೦ಡ್‌, ಸಿಗ್ನಲ್‌ ವೀರಪ್ಪ ದುರ್ಗಾ ಪ್ರಕಾಶನ, ಮಂಗಳೂರು
೨೦೦೦ ಉದಯಶಂಕರ್‌ ಎನ್‌. ಎ. ದಾರೆದಾಂತಿ ಮದಿಮೆ ನವರಂಗ ಆರ್ಟ್ಸ್‌, ಕೊಲ್ಲಂಗಾನ, ಕಾಸರಗೋಡು
೨೦೦೦ ಪಿ. ಶಿವಾನಂದ ಗಟ್ಟಿ ಬೊಡ್ಚೆಂಕ್‌ಈ ಬದ್‌ಕ್‌ ಲೇಖಕ
೨೦೦೧ ಯಮ್‌. ಕೆ. ಸೀತಾರಾಮ ಕುಲಾಲ್‌ ನಾಟಕದಾಯೆ ಶುಭಾ ಪ್ರಕಾಶನ, ಮಂಗಳೂರು
೨೦೦೧ ಕದ್ರಿ ನವನೀತ ಶೆಟ್ಟಿ ಬೀರೆ ದೇವು ಪೂಂಜೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು
೨೦೦೨ ಕದ್ರಿ ನವನೀತ ಶೆಟ್ಟಿ ಯಕ್ಷಮಣಿ ಕಲ್ಕೂರ ಪ್ರಕಾಶನ, ಮಂಗಳೂರು
೨೦೦೧ ರವಿ ಕುಮಾರ್‌ಕಡೆಕಾರ್‌ ಸೂರ್ಯ ಕಂತಿಯೆ ಶ್ರೀ ವಿಠೋಭ ರುಕುಮಾಯಿ ಭಜನಾ ಮಂದಿರ, ಕಡೆಕಾರ್‌
೨೦೦೪ ರವಿ ಕುಮಾರ್‌ ಕಡೆಕಾರ್‌ ಕಡಲ್‌ಗ್‌ಸೇರಂದಿ ಸುದೆ ಶ್ರೀ ವಿಠೋಭ ರುಕುಮಾಯಿ ಭಜನಾ ಮಂದಿರ, ಕಡೆಕಾರ್‌
೨೦೦೨ ನಂದಳಿಕೆ ನಾರಾಯಣ ಶೆಟ್ಟಿ ಬೊಜ್ಜ ಪಲ್ಲವಿ ಆರ್ಟ್ಸ್‌, ಮುಂಬಯಿ
೨೦೦೨ ಎಚ್‌. ಶಕುಂತಳಾ ಭಟ್‌ ಪಂಚಾಕ್ಷರಿ ಲೇಖಕಿ
೨೦೦೨ ಗಣೇಶ್‌ ಅಮೀನ್‌ ಸಂಕಮಾರ್‌ ಮಾಯದ ಕಾಯಿ ಸಿರಿಪ್ರಕಾಶನ, ಹಳೆಯಂಗಡಿ
೨೦೦೩ ಅಲ್ವಿನ್‌ ದೇವದಾಸ್‌ ಸಾಧನ ಲೇಖಕ
೨೦೦೩ ಯು. ಗೋಪಾಲ ಶೆಟ್ಟಿ, ಕವತ್ತಾರು ಜೋಕ್ಲೆನ ನಾಟಕೊಲು ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ
೨೦೦೪ ಸಾ. ದಯಾ ಒಸರ್‌ ಜಗಜ್ಯೋತಿ ಕಲಾವೃಂದ, ಡೊಂಬಿವಿಲಿ
೨೦೦೪ ನಾಗರಾಜ ಗುರುಪುರ ಸಂಶಯ ತುಳು ಸಮಿತಿ, ಕನ್ನಡ ಸೇವಾ ಸಂಘ, ಪೋವಾಯಿ (ರಿ.)
೨೦೦೪ ಯು. ಆರ್‌. ಚಂದರ್‌ ಕೋರ್ದಬ್ಬು ತನ್ನಿಮಾನಿಗ ಸಂಗಾತಿ ಪ್ರಕಾಶನ, ಸುಂದರಬಾಗ್‌, ಉಳ್ಳಾಲ
೨೦೦೫ ಪ್ರಭಾಕರ ನೀರ್‌ಮಾರ್ಗ ಭೀಕರ ನ್ಯಾಯಕಟ್ಟೆ ಹೇಮಾವತಿ ಪ್ರಕಾಶನ, ನೀರ್‌ಮಾರ್ಗ
೨೦೦೫ ರತ್ನಾಕರ ರಾವ್‌, ಕಾವೂರು ತಬುರನ ತೆಲಿಕೆ ಶಶಿಪ್ರಕಾಶನ, ಪಬ್ಲಿಕೇಶನ್‌, ಮಂಗಳೂರು
೨೦೦೫ ಎಚ್ಕೆ ನಯನಾಡು ಮಾರಿ ಗಿಡಪುಲೆ ಅಕ್ಷರ ಪ್ರಕಾಶನ, ಆಲದಪದವು
೨೦೦೫ ಜಗದೀಶ್‌ಶೆಟ್ಟಿ ಕೆಂಚನಕರೆ ಸತ್ಯದ ಸಿರಿ ಬಂಟ ಸಂಘ ಮುಂಬಯಿ
೨೦೦೫ ಪುತ್ತಿಗೆ ಈಶ್ವರ ಭಟ್ಟ ದುಡ್ಡುದ ಸೊರ್ಕು ಗಾಯತ್ರಿ ಪ್ರಕಾಶನ, ಕಿನ್ನಿಗೋಳಿ

(ಇನ್ನೂ ಉಳಿದಿರುವ ಬೆರಳೆನಿಕೆಯಷ್ಟು ಮುದ್ರಿತ ನಾಟಕಗಳನ್ನು ಎಲ್ಲ ಪ್ರಯತ್ನಗಳ ಬಳಿಕವೂ ಕಾಲದ ತೆರೆಯ ಮರೆಯಿಂದ ಹೊರತರಲು ಸಾಧ್ಯವಾಗಲಿಲ್ಲ-ಲೇಖಕರು)