ಕೆಳದಿ ಅರಸರ ಆಳ್ವಿಕೆಯ ಅವಧಿಯಲ್ಲಿ ತುಳುನಾಡಿ ಇಸ್ಲಾಂ ಮತ್ತು ಕ್ರೈಸ್ತ ಮತಗಳ ಅಭಿವೃದ್ಧಿಯನ್ನು ಹೊಸ ಆಯಾಮದಲ್ಲಿ ಕಂಡಿತು. ಇಸ್ಲಾಂ ಮತಸ್ಥರಿಗೆ ಪೋರ್ತುಗೀಜ ಚಟುವಟಿಕೆಗಳು ಒಂದು ಕಂಟಕವಾಗಿ ಪರಿಣಮಿಸಿತು. ಇವರ ಸಾಗರೋತ್ತರ ವ್ಯಾಪಾರಗಳನ್ನು ಭಗ್ನಗೊಳಿಸಲು ಪೋರ್ತುಗೀಜರು ಶ್ರಮಿಸಿದರು. ಮಹಮ್ಮದೀಯರ ನೌಕೆಗಳು ಸಾಗರದಲ್ಲಿ ಸಂಚರಿಸಲು ಆಗದಷ್ಟು ಸಂದಿಗ್ಧ ಪರಿಸ್ಥಿತಿಯನ್ನು ಫರಂಗಿಯವರು ಕೈಗೊಂಡರು. ಈ ಕಠಿಣ ಸಮಯದಲ್ಲಿ ಮುಸ್ಲಿಂ ನಾವಿಕರಿಗೆ ಕೆಳದಿ ಅರಸರು ಬೆಂಬಲಿಗರಾಗಿ ಬಂದರು. ಇದರ ಪರಿಣಾಮವಾಗಿ ತುಳುನಾಡಿನಲ್ಲಿ ನೆಲೆಸಿದ್ದ ಮುಸ್ಲಿಮರು ನಾಯಕರ ನಿಷ್ಠಾವಂತ ಪ್ರಜೆಗಳಾಗಿ ರಾಜ್ಯಕ್ಕೆ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸಿದರು. ಮುಸ್ಲಿಮರು ಕೆಳದಿ ರಾಜ್ಯದ ನೌಕಾ ಬಲದಲ್ಲಿ ಸೇರಿಕೊಂಡರು. ಕೆಲವು ಮುಸ್ಲಿಮರು ಸೇನೆಯಲ್ಲಿ ಸೇವೆ ಸಲ್ಲಿಸಿ ಕೆಳದಿ ನಾಯಕರ ಗೌರವಕ್ಕೆ ಪಾತ್ರರಾದರು.ಇದಕ್ಕೆ ಮುಖ್ಯ ಉದಾಹರಣೆ ಮುಸಾಬಿ ಮತ್ತು ಪೊಕಚು ಬ್ಯಾರಿ. ಮೊದಲನೆಯವ ಕೆಳದಿ ವೆಂಕಟಪ್ಪನ ನೌಕಾಬಲದಲ್ಲಿ ಮುಖ್ಯಸ್ಥನಾಗಿದ್ದರೆ ಎರಡನೆಯವನು ಕೆಳದಿ ಒಂದನೆ ಬಸಪ್ಪನ ಕಾಲದಲ್ಲಿ ದಂಡನಾಯಕನಾಗಿ ಮಲಬಾರಿನಲ್ಲಿ ನಾಯರ್ ಡಚ್ ಮತ್ತು ಪೋರ್ತುಗೀಜರ ಬಲಗಳನ್ನು ಕುಂದಿಸಲು ಕಾರಣನಾದನು. ಮುಸ್ಲಿಮರಿಗೆ ಕೃಷಿ ಮತ್ತು ಇನ್ನಿತರ ಉದ್ಯೋಗಗಳನ್ನು ನಡೆಸಿಕೊಂಡು ಹೋಗುವ ಅವಕಾಶಗಳನ್ನು ಕೆಳದಿ ನಾಯಕರು ನೀಡಿದ್ದರೆಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ. ತುಳುನಾಡಿನಲ್ಲಿ ಇಸ್ಲಾಂ ಮತಕ್ಕೆ ಇನ್ನೊಂದು ಘಟನೆ ನಡೆದದ್ದು, ಈ ಮತಸ್ಥರ ಸಂತ ಆಗಮನ ಮತ್ತು ಅವರ ಸ್ಮಾರಕಗಳಾಗಿನಡೆಯು ‘ಉರುಸು’ ಸೇವೆಕಲ. ಇದರಿಂದಾಗಿ ಹಲವಾರು ದರ್ಗಾಗಳು ಕರಾವಳಿ ಕರ್ನಾಟಕದಲ್ಲಿ ಕಾಣಿಸಿಕೊಂಡದ್ದು ಕೆಳದಿ ಅರಸರ ಆಳ್ವಿಕೆಯಲ್ಲಿ.

ಕೆಲವು ಮುಸ್ಲಿಂ ಯೋಧರನ್ನು ದೈವಗಳೆಂದು ಆರಾಧಿಸುವ ಪದ್ಧತಿ ತುಳುನಾಡಿನಲ್ಲಿ ನಡೆದದ್ದು ಕೆಳದಿ ನಾಯಕರ ಆಳ್ವಿಕೆಯಲ್ಲಿ. ಉದಾಹರಣೆಗೆ ಬೊಬ್ಬರಿಯ, ಆಲಿಭೂತ, ಅತ್ತವಾರ ದೈಯಂಕುಳು ಮತ್ತು ಸಾಹೇಬರ ಮಕ್ಕಳ ದೈವಗಳು ತುಳುನಾಡಿನ ಭೂತಗುಡಿಗಳಲ್ಲಿ ಕಾಣಿಸಿಕೊಂಡು ಅವುಗಳ ಆರಾಧನೆ ನಡೆಯಿತು. ಹೀಗೆ ವಿಶೇಷ ಬಗೆಯಲ್ಲಿ ಇಸ್ಲಾಂ ಮತದ ಬೆಳವಣಿಗೆ ತುಳುನಾಡಿನಲ್ಲಿ ನಡೆಯಿತು.

ಹದಿನೇಳನೇ ಶತಮಾನದ ಆರಂಭದಿಂದ ಹದಿನೆಂಟನೆ ಶತಮಾನದ ಮಧ್ಯಾವಧಿಯವರೆಗೆ ಕ್ರೈಸ್ತಧರ್ಮ ಪ್ರಚಾರಕ್ಕೆ ಪೋರ್ತುಗೀಜರುಬಹಳ ಸಹಕರಿಸಿದ್ದರು. ತಮ್ಮ ವ್ಯಾಪಾರ ಕೊಠಡಿ (Factory)ಯ ಆವರಣದಲ್ಲಿ ಪೋರ್ತುಗೀಜರು ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸಿಅಲ್ಲಿ ಧರ್ಮಬೋಧನೆ ನಡೆಸಲು ಗುರುಗಳನ್ನು ನೇಮಿಸಿದರು. ಕೆಲವು ಉತ್ಸಾಹೀ ಗುರುಗಳು ತಮ್ಮ ಧರ್ಮ ತತ್ವಗಳನ್ನು ತಮ್ಮ ಪರಿಸರದಲ್ಲಿದ್ದ ಸ್ಥಳೀಯರಿಗೆ ತಿಳಿಸಿ, ಅವರಲ್ಲಿ ಕೆಲವರನ್ನು ಮತಾಂತರಗೊಳಿಸಿದರು. ಈ ಕಾರ್ಯ ನಡೆಸುವಲ್ಲಿ ಕ್ರೈಸ್ತ ಗುರುಗಳು ಒಲುಮೆ ಮತ್ತು ಆಮಿಷ ತೋರಿಸುತ್ತಿದ್ದರು. ಈ ಕಾರ್ಯಗಳಿಗೆ ಪೋರ್ತುಗೀಜರು ಸಹಕರಿಸುತ್ತಿದ್ದರೆಂದು ಅವರ ದಾಖಲೆಗಳಿಂದ ವ್ಯಕ್ತವಾಗುತ್ತದೆ.

ಇದರೊಂದಿಗೆ ಕ್ರೈಸ್ತರು ಗೋವೆಯಿಂದ ಕನ್ನಡ ಕರಾವಳಿಗೆ ವಲಸೆ ಬರಲು ಪ್ರಾರಂಭಿಸಿದರು. ಇದಕ್ಕೆ ಮುಖ್ಯ ಕಾರಣ ಗೋವೆಯ ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಸ್ಥಿತಿಗತಿಗಳು. ಗೋವೆಯಿಂದ ಬಂದ ಕ್ರೈಸ್ತರು ಶ್ರಮಜೀವಿಗಳಾಗಿದ್ದರು. ಕೃಷಿಯಲ್ಲಿ ತರಬೇತಿ ಹೊಂದಿದವರಾಗಿದ್ದರು. ಈ ಶ್ರಮಜೀವಿಗಳನ್ನು ಕೆಳದಿ ನಾಯಕರು ಪ್ರೋತ್ಸಾಹಿಸಿದರು. ಪೋರ್ತುಗೀಜರು ತಮ್ಮ ಠಾಣೆಯಿರುವ ಪ್ರದೇಶಗಳಲ್ಲಿ ಈ ವಲಸೆ ಬಂದ ಕ್ರೈಸ್ತರಿಗೆ ಸಹಾನುಭೂತಿ ತೋರಿಸಿದರು. ಆದರೆ ನಿರೀಕ್ಷಿಸಿದಷ್ಟು ಕ್ರೈಸ್ತ ಜನಸಂಖ್ಯೆ ತುಳುನಾಡಿನಲ್ಲಿ ಹೆಚ್ಚಲಿಲ್ಲ. ಇದನ್ನು ಸಮಕಾಲೀನ ಐತಿಹಾಸಿಕ ದಾಖಲೆಗಳಾದ ಡೆಲ್ಲೊವೆಲ್ಲ ಮತ್ತು ಅಂಥೋನಿಯೊ ಬೊಕೆರೊ (Dello Valle 1623, Antonio Boccaro) ಬರಹಗಳಿಂದ ತಿಳಿದುಬರುತ್ತದೆ. ಇದಕ್ಕೆ ಮುಖ್ಯ ಕಾರಣ ಕ್ರೈಸ್ತಮತ ಪ್ರಚಾರದ ವೈಖರಿ ಹೆಚ್ಚಿನವರಿಗೆ ಹಿಡಿಸಲಿಲ್ಲ. ಏಕೆಂದರೆ ಅವರು ದುಂಡಾವೃತ್ತಿ ವ್ಯಾಪಾರ ಮಾಡುತ್ತಿದ್ದ ಪೋರ್ತುಗೀಜರ ನಿಕಟ ಕಾರ್ಯಕರ್ತರಾಗಿದ್ದರು. ಎರಡನೆಯದಾಗಿ ವಿದೇಶದಿಂದ ಬಂದ ಕ್ರೈಸ್ತಮತ ಪ್ರಚಾರಕರಿಗೆ ಕನ್ನಡ ಅಥವಾ ತುಳು ಭಾಷೆಗಳ ಜ್ಞಾನ ಏನೇನೂ ಇರಲಿಲ್ಲ. ಈ ಭಾಷೆಗಳನ್ನು ಕಲಿತುಕೊಳ್ಳುವ ಹವ್ಯಾಸಕ್ಕೆ ಈ ವಿದೇಶೀ ಮಿಶನರಿಗಳು ಪ್ರಯತ್ನಿಸುವ ಗೋಜಿಗೆ ಸಹ ಹೋಗಲಿಲ್ಲ. ಇದರಿಂದಾಗಿ ಕರಾವಳಿ ಕರ್ನಾಟಕದಲ್ಲಿ ಮುಖ್ಯವಾಗಿ ತುಳುನಾಡಿನಲ್ಲಿ ಕ್ರೈಸ್ತಮತವು ನಿರುತ್ಸಾಹ ಸ್ಥಿತಿಯಲ್ಲಿದ್ದಿತು. ಈ ಸ್ಥಿತಿಗಳ ವಿವರಣೆಯು ಆಂಗ್ಲ ಪ್ರವಾಸಿ ಪೀಟರಮಮಂಡಿ (೧೬೪೦) ಮತ್ತು ಪ್ರಾಯರ್ (೧೬೭೫) ವರದಿಗಳಲ್ಲಿವೆ.

ಹದಿನೇಳನೇ ಶತಮಾನದ ಕೊನೆಯ ಭಾಗದಿಂದ ಮುಂದಿನ ಶತಮಾನದ ಅಂತ್ಯದವರೆಗೆ ಕ್ರೈಸ್ತಮತ ಪ್ರಚಾರದ ಇನ್ನೊಂದು ಮುಖವು ತೋರಿಬರುತ್ತದೆ. ಇದರ ಮುಖ್ಯ ಲಕ್ಷಣ ಪೋರ್ತುಗೀಜರು ತುಳುನಾಡಿನಲ್ಲಿದ್ದ ಕ್ರೈಸ್ತರ ಹಿತಾಸಕ್ತಿ ಮತ್ತು ವಿಶೇಷ ಹಕ್ಕುಗಳನ್ನು ಸಂಪಾದಿಸುವಲ್ಲಿ ಆಸಕ್ತಿ ತೋರಿಸಿದ್ದು. ಇದು ಕೆಳದಿ ನಾಯಕರೊಂದಿಗೆ ಪೋರ್ತುಗೀಜರು ಮಾಡಿಕೊಳ್ಳುವ ಒಪ್ಪಂದಗಳಲ್ಲಿ ವ್ಯಕ್ತವಾಗಿವೆ. ಈ ಸವಲತ್ತುಗಳ ಕ್ರಿ.ಶ. ೧೬೭೮ ಮತ್ತು ೧೭೧೪ರ ಒಪ್ಪಂದಗಳಲ್ಲಿವೆ. ಈ ಸವಲತ್ತುಗಳಲ್ಲಿ ಮುಖ್ಯವಾದವುಗಳು ಯಾವುದೆಂದರೆ ಕ್ರೈಸ್ತರಿಗೆ ತಮ್ಮ ಇಗರ್ಜಿಗಳನ್ನು ಮಿರ್ಜಾನ, ಚಂದಾವರ, ಹೊನ್ನಾವರ, ಭಟ್ಕಳ (ಉ.ಕ.) ಮತ್ತು ಕಲ್ಯಾಣಪುರಗಳಲ್ಲಿ ಸ್ಥಾಪಿಸಲು ಅನುಮತಿ ಸಿಕ್ಕಿತು. ಆದರೆ ಒತ್ತಾಯದ ಮತಾಂತರ ಮಾಡುವ ಹಕ್ಕನ್ನು ಕೆಳದಿ ನಾಯಕರು ಪೋರ್ತುಗೀಜರಿಗಾಗಲೀ ವಿದೇಶೀ ಮಿಶನರಿಗಳಿಗಾಗಲೀ ನೀಡಲಿಲ್ಲ. ಇದನ್ನು ಕೆಳದಿ ನಾಯಕರು ನಿಷೇದಿಸಿದ್ದರು. ಇದು ಕ್ರಿ.ಶ. ೧೬೭೧ರ ಕೌಲಿನಲ್ಲಿ ಸ್ಪಷ್ಟವಾಗಿ ನಿರೂಪಿಸಿದೆ.

ಕ್ರೈಸ್ತರು ಆಗಿಂದಾಗ್ಗೆ ಕೆಳದಿ ನಾಯಕರ ಅತೃಪ್ತಿಗೆ ಬಲಿಯಾಗುತ್ತಿದ್ದರು. ಇದಕ್ಕ ಮುಖ್ಯ ಕಾರಣ ಕ್ರೈಸ್ತರು ಪೋರ್ತುಗೀಜರ ಪರವಾಗಿ ಯಾ ಕಾರ್ಯಸ್ಥರಾಗಿ ಕೆಳದಿ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಳದಿ ನಾಯಕರು ಕ್ರೈಸ್ತರನ್ನು ದಂಡಿಸಿದ್ದರು. ಉದಾಹರಣೆಗೆ ಕ್ರಿ.ಶ. ೧೬೬೮ರಲ್ಲಿ ಕೆಳದಿ ಸೋಮಶೇಖರ ನಾಯಕನ ತನ್ನ ರಾಜ್ಯದ ಕರಾವಳಿಯಲ್ಲಿ ವಾಸಿಸುತ್ತಿದ್ದ ಕ್ರೈಸ್ತರನ್ನು ಸೆರೆಯಲ್ಲಿರಿಸಿದನು.

ಕ್ರೈಸ್ತ (ಮುಖ್ಯವಾಗಿ ಕೆಥೋಲಿಕ್) ಧರ್ಮ ಪ್ರಚಾರದಲ್ಲಿ ಮಿಶನರಿಗಳು ಶ್ರಮಿಸಿದ್ದರು. ಈ ಮಿಶನರಿಗಳು ತಮ್ಮ ಮತದ ನೆರಳು ಜನಸಾಮಾನ್ಯರಿಗೂ ತಿಳಿಯುವಂತೆ ಶ್ರಮಿಸಿದರು. ಇವರಲ್ಲಿ ಪ್ರಮುಖ ಮಿಶನರಿ ಧುರೀಣರು ಥೋಮಸ್ ಡಿ ಕೆಸ್ಪರೊ (Thomas de Castro) ಮತ್ತು ಜೋಸೆಫ್ ವಾಝ್ (Joseph Vaz) ಇವರ ಶ್ರಮದಿಂದಾಗಿ ಕ್ರೈಸ್ತ ಕೆಥೋಲಿಕ್ ಪಂಥವು ಚಂದಾವರ, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಕಲ್ಯಾಣಪುರ, ಬಾರಕೂರು, ಮೂಲ್ಕಿ, ಆರ್ಕುಳಗಳಲ್ಲಿ ಬಲಗೊಂಡಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಈ ಪಂಥದವರು ಈ ಸ್ಥಳಗಳಲ್ಲಿ ನೆಲೆಸಿದ್ದರೆಂದು ವಿದೇಶೀ ದಾಖಲೆಗಳ ಅಧ್ಯಯನದಿಂದ ತಿಳಿದುಬರುತ್ತದೆ.

ಕ್ರೈಸ್ತಧರ್ಮದ ಇನ್ನೊಂದು ಪಂಥವಾದ ಪ್ರೊಟೆಸ್ಟಂಟ್ ಹದಿನೇಳನೇ ಶತಮಾನದ ಮಧ್ಯಾವಧಿಯಲ್ಲಿ ಬೆಳಕಿಗೆ ಬಂತು. ತುಳುನಾಡಿನ ಕೆಲವು ಆಯಕಟ್ಟಿನ ಸ್ಥಳಗಳಾದ ಮಂಗಳೂರು, ಮೂಲ್ಕಿ, ಬಾರಕೂರು, ಬಸ್ರೂರು, ಬಯಿಂದೂರು ಮತ್ತು ಹೊನ್ನಾವರಗಳು ಈ ಪಂಥದ ಕೇಂದ್ರಗಳಾಗಿದ್ದವು. ಈ ಪಂಥ ಪ್ರಚಾರವಾಗಲು ಡಚ್ಚರ ಚಟುವಟಿಕೆಗಳು ಕಾರಣವಾಗಿತ್ತು.ಆದರೆ ಡಚ್ಚರು ತಮ್ಮ ಧೋರಣೆಯಲ್ಲಿ ಆರ್ಥಿಕ ಮತ್ತು ಧಾರ್ಮಿಕತೆಯನ್ನು ಸಂಯೋಜಿಸಲಿಲ್ಲ. ಸ್ಥಳೀಯ ಭಾಷೆಗಳನ್ನು ಕಲಿತ ಈ ಮಿಶನರಿಗಳು ಶಾಲೆಗಳನ್ನು ತೆರೆದರಲ್ಲದೆ ಅಲ್ಲಿ ಧರ್ಮ ಬೋಧೆಯೊಂದಿಗೆ ಲೌಕಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಭೂಗೋಳ ಶಾಸ್ತ್ರದ ನಕಾಶೆಯನ್ನು ತಯಾರಿಸುವ ಕ್ರಮ, ಸಾಮಾನ್ಯ ಗಣಿತ ಇತ್ಯಾದಿಗಳು ಇವರ ಲೌಕಿಕ ವಿಷಯಗಳಾಗಿದ್ದವು. ಕೃಷಿ, ಸ್ಥಳೀಯ ಕೈಗಾರಿಕೆಗಳ ಅಭಿವೃದ್ಧಿಗೆ ಪ್ರಾಟೆಸ್ಟಂಟ್ ಮಿಶನರಿಗಳು ಪ್ರೋತ್ಸಾಹಿಸುತ್ತಿದ್ದರು. ಹಲವು ಧರ್ಮ ಮತ್ತು ಪಂಥಗಳು ತುಳುನಾಡಿನಲ್ಲಿ ಅಭಿವೃದ್ಧಿ ಹೊಂದಲು ಕೆಳದಿ ನಾಯಕರು ಉತ್ತಮ ಅವಕಾಶವನ್ನು ನೀಡಿದ್ದರು. ಇದರಿಂದಾಗಿ ಈ ಎಲ್ಲಾ ಮತ ಮತ್ತು ಧರ್ಮಗಳು ಸಾಧ್ಯವಾದಷ್ಟು ಪರಸ್ಪರ ಹೊಂದಿಕೊಂಡು ಬಾಳುವುದರ ಮಹತ್ವವನ್ನು ಅರಿತುಕೊಂಡರು. ಮತೀಯ ಘರ್ಷಣೆ ನಡೆದಾಗ ಅವುಗಳನ್ನು ಪರಿಹರಿಸಲು ಕೆಳದಿ ನಾಯಕರು ಪ್ರಯತ್ನಿಸಿ ಯಶಸ್ವಿಯಾದರೆಂದು ಸಮಕಾಲೀನ ದಾಖಲೆಗಳು ಹೇಳುತ್ತವೆ. ತುಳುನಾಡಿನಲ್ಲಿ ಧರ್ಮ ಪರಿಪಾಲನೆ ಮತ್ತು ಧಾರ್ಮಿಕ ಕಟ್ಟು ನಿಯಮಗಳು ಸುಸಂಘಟಿತವಾದದ್ದು ಕೆಳದಿ ನಾಯಕರ ಆಳ್ವಿಕೆಯಲ್ಲಿ. ಈ ನಾಯಕರ ಧಾರ್ಮಿಕ ಧೋರಣೆಯಿಂದಾಗಿ ತುಳುನಾಡಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಉಡುಪಿಯಲ್ಲಿ ಕೃಷ್ಣ, ಕೊಲ್ಲೂರು ಮೂಕಾಂಬಿಕೆ ಮತ್ತು ಗೋಕರ್ಣ ಮಹಾಬಲೇಶ್ವರ ಧಾರ್ಮಿಕ ಪ್ರಭಾವ ವರ್ಧಿಸಲು ಕಾರಣವಾಯಿತು. ಧರ್ಮರಕ್ಷಣೆ ಮತ್ತು ಅದರ ಪಾಲನೆ ಕೊಟ್ಟಷ್ಟು ಮಹತ್ವವನ್ನು ಕೆಳದಿ ನಾಯಕರು ತಮ್ಮ ರಾಜ್ಯ ಸಂರಕ್ಷಣೆಗೆ ಕೊಡಲಿಲ್ಲವೆಂಬ ಅಭಿಪ್ರಾಯವನ್ನು ಕೆಲವು ಇತಿಹಾಸಕಾರರು ಹೇಳುತ್ತಾರೆ.

ಹದಿನೆಂಟನೇ ಶತಮಾನದ ಅಂತ್ಯದಲ್ಲಿ ತುಳುನಾಡು ಮೈಸೂರು ಸಂಸ್ಥಾನದ ಅಧಿಕಾರಿಗಳಾದ ಹೈದರ್ ಮತ್ತು ಟಿಪ್ಪು ಸುಲ್ತಾನರ ವಶಕ್ಕೆ ಬಂತು. (೧೭೬೩ – ೧೭೯೯). ಈ ಅವಧಿಯಲ್ಲಿ ಕರಾವಳಿ ಕರ್ನಾಟಕದಲ್ಲಿ ಮುಸ್ಲಿಮರು ರಾಜಕೀಯ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡರು. ಆದರೆ ಈ ಪ್ರಾಬಲ್ಯಗಳಿಸಿದ ಮುಸ್ಲಿಮರು ಘಟ್ಟದ ಮೇಲಿನಿಂದ ಬಂದವರು. ಇಷ್ಟರಲ್ಲೆ ನೆರೆರಾಜ್ಯವಾದ ಮಲಬಾರಿನಿಂದ ಬಂದ ಮುಸ್ಲಿಮರು ತುಳುನಾಡಿನ ನೆರವಿನಲ್ಲಿ ಸಾಗರೋತ್ತರ ವ್ಯಾಪಾರವನ್ನು ವೃದ್ಧಿಸಿಕೊಂಡರು.

ಇದರಿಂದಾಗಿ ತುಳುನಾಡಿನ ಮುಸ್ಲಿಮರಲ್ಲಿ ತುಳು ಭಾಷೆಯ ವರ್ಚಸ್ಸು ಕ್ಷೀಣಿಸಿ ಬ್ಯಾರಿ ಭಾಷೆ ಬಳಕೆಗೆ ಬಂತು. ಹೈದರನು ಪ್ರಗತಿಪರ ಧಾರ್ಮಿಕ ವ್ಯವಹಾರವನ್ನು ನಡೆಸಿದನು. ಧಾರ್ಮಿಕ ಸಹಿಷ್ಣುತೆಯನ್ನು ಇವನು ತನ್ನ ಆಡಳಿತದಲ್ಲಿ ಹೆಚ್ಚಿನ ಕಡೆಯಲ್ಲಿ ತೋರಿಸಿದನು. ಇವನ ಪುತ್ರ ಟಿಪ್ಪುವಿಗೆ ತನ್ನ ಮತದಲ್ಲಿ ಅಭಿಮಾನವಿತ್ತು. ಆದರೆ ಹಿಂದುಗಳಿಗೆ ತನ್ನ ಧರ್ಮದೃಷ್ಟಿಯಲ್ಲಿ ದ್ವೇಷ ತೋರಿಸಿಲ್ಲ. ರಾಜಕೀಯ ಕಾರಣವಾಗಿ ಮುಖ್ಯವಾಗಿ ತನ್ನ ರಾಜ್ಯದ ಭದ್ರತೆಯನ್ನು ಅಲುಗಾಡಿಸಲು ನಿರತರಾಗಿದ್ದ ತುಳುನಾಡಿನಲ್ಲಿದ್ದ ಕೆಲವು ಮತಸ್ಥರನ್ನು ಶಿಕ್ಷಿಸಿದನು. ಉದಾಹರಣೆಗೆ ಮೂರನೇ ಮೈಸೂರು ಯುದ್ಧದಲ್ಲಿ ಆಂಗ್ಲೇಯರಿಗೆ ಸಹಾಯವನ್ನು ಮಾಡಿದ ಕಾರಣದಿಂದಾಗಿ ಇಲ್ಲಿದ್ದ ಕೆಥೋಲಿಕ್ ಕ್ರೈಸ್ತರನ್ನು ಭೀಕರ ರೀತಿಯಲ್ಲಿ ಶಿಕ್ಷಿಸಿದನು. ಇದರೊಂದಿಗೆ ಗೌಡ ಸಾರಸ್ವತರು ಮತ್ತು ಸಾರಸ್ವತರು ಟಿಪ್ಪುವಿನ ಕೋಪಕ್ಕೆ ಒಳಗಾದರು. ಇಂತಹ ಅಪರಾಧಗಳನ್ನು ಮಾಡಿದ್ದ ತನ್ನ ಮತದವರನ್ನು ಶಿಕ್ಷಿಸಿದ್ದನು. ಸದಾ ಶತ್ರಗಳನ್ನು ಎದುರಿಸಬೇಕಾಗಿದ್ದ ಟಿಪ್ಪುಸುಲ್ತಾನ ತನ್ನ ರಾಜ್ಯದ ಒಳಗಡೆ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದ್ದರೂ ರಾಜ್ಯದ ಹೊರಭಾಗಗಳಿಗೆ ದಂಡೆತ್ತಿ ನಡೆದಾಗ (ಮುಖ್ಯವಾಗಿ ತುಳುನಾಡು, ಕೊಡಗು ಮತ್ತು ಕನ್ನಡ ಮಾತಾಡುವ ಕರಾವಳಿ ಪ್ರದೇಶ) ಅದೇ ಔದಾರ್ಯ ಹೊಂದಿರಲಿಲ್ಲ. ‘ನಡತೆಯೇ ಪ್ರಾರಬ್ಧ’ (Character destiny) ಎಂಬ ಉಕ್ತಿ ಟಿಪ್ಪುವಿನ ಆಡಳಿತ ಕಾಲದಲ್ಲಿ ಕರಾವಳಿ ಕರ್ನಾಟಕದಲ್ಲಿ ನಡೆಯಿತು. ಇದು ಕರಾವಳಿ ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ನಡೆದ ಒಂದು ರುದ್ರನಾಟಕವಾಗಿದೆ.

ಟಿಪ್ಪುವಿನ ನಿಧನದ ನಂತರ ತುಳುನಾಡಿನ ಧಾರ್ಮಿಕ ಇತಿಹಾಸ ಇನ್ನೊಂದು ತಿರುವು ಕಂಡಿತು. ಇದರ ಮುಖ್ಯ ಲಕ್ಷಣಗಳಾವುದೆಂದರೆ ಕ್ರೈಸ್ತ ಪಂಥದವರು ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಗಮನವಿಟ್ಟು ತಮ್ಮ ಧರ್ಮ ಪ್ರಚಾರ ಮಾಡಿದ್ದು ಮತ್ತು ಇದಕ್ಕೆ ಸ್ಥಳೀಯ ಮುಸ್ಲಿಮರು ಮತ್ತು ಮೇಲುಜಾತಿ ಹಿಂದು ಮತಸ್ಥರ ಪ್ರತಿಕ್ರಿಯೆ. ಇದಲ್ಲದೇ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ತುಳುನಾಡಿನ ಧಾರ್ಮಿಕ ಜೀವನಕ್ಕೆ ಒಳಗಾದದ್ದು. ಇದರಿಂದಾಗಿ ಇಲ್ಲಿನ ಧಾರ್ಮಿಕ ಜೀವನದ ಕುರಿತಾಗಿ ವಿಮರ್ಶೆ ನಡೆಯಿತು.ಇದರ ಪರಿಣಾಮವಾಗಿ ಬ್ರಹ್ಮ ಸಮಾಜ, ಆರ್ಯಸಮಾಜ ಮತ್ತು ರಾಮಕೃಷ್ಣ ಮಿಶನರಿಗಳ ಚಟುವಟಿಕೆಗಳು ಬೆಳೆದು ಇಲ್ಲಿನ ಧಾರ್ಮಿಕ ಜೀವನಕ್ಕೆ ಒಂದು ಹೊಸ ಆಯಾಮವನ್ನು ತೋರಿಸಿಕೊಟ್ಟಿತು. ಇದರೊಂದಿಗೆ ತುಳುನಾಡಿನ ಧಾರ್ಮಿಕ ಇತಿಹಾಸದ ಸಂಶೋಧನೆ ಕಾರ್ಯವು ಹೊಸ ಬಗೆಯಲ್ಲಿ ಆರಂಭವಾಯಿತು.

ತುಳುನಾಡಿನ ಧಾರ್ಮಿಕ ವೈಶಿಷ್ಟ್ಯ

ತುಳುನಾಡಿನ ಧಾರ್ಮಿಕ ಇತಿಹಾಸವು ಸಮೃದ್ಧ ಮತ್ತು ವೈವಿಧ್ಯಮಯ ಆಕರಗಳನ್ನು ಹೊಂದಿದೆ. ಹೀಗಿದ್ದರೂ ಇಲ್ಲಿನ ಧಾರ್ಮಿಕ ಇತಿಹಾಸದ ವೈಜ್ಞಾನಿಕ ಅಧ್ಯಯನ ಆರಂಭ ನಡೆದದ್ದು ಹತ್ತೊಂಬತ್ತನೇ ಶತಮಾನದ ಅಂತ್ಯಕಾಲದಲ್ಲಿ. ಈ ಬಗ್ಗೆ ಮೊದಲ ಪ್ರಯತ್ನ ನಡೆಸಿದವರು ವಿದೇಶೀ ವಿದ್ವಾಂಸರು. ಇವರು ಆರಂಭಿಸಿದ ಕೆಲಸವನ್ನು ಸ್ಥಳೀಯ ವಿದ್ವಾಂಸರು ಮುಂದುವರಿಸಿಕೊಂಡು ಬಂದು ತುಳುನಾಡಿನ ಧಾರ್ಮಿಕ ಇತಿಹಾಸದ ಹಲವಾರು ಮುಖಗಳನ್ನು ಬೆಳಕಿಗೆ ತಂದರು. ಈ ಪ್ರಯತ್ನ ಈಗಲೂ ಮುಂದುವರಿಯುತ್ತಾ ಇದೆ. ಇಲ್ಲಿನ ಧಾರ್ಮಿಕ ಇತಿಹಾಸವು ಪರಿಸರದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿ ಬೆಳೆಯಿತು. ಇದನ್ನು ಇಲ್ಲಿನ ಜನರ ರೀತಿ ರಿವಾಜುಗಳಲ್ಲಿ, ಕಟ್ಟುಕಟ್ಟಳೆಗಳಲ್ಲಿ ನೊಡಬಹುದು. ಉದಾ : ದೇವಾಲಯಗಳಲ್ಲಿ ನಡೆಯುವ ಸೋಣೆಯಾರತಿ, ವೈವಿಧ್ಯಮಯ ದೀಪೋತ್ಸವ, ಧನುರ್ಮಾಸ ಪೂಜೆ, ದೀಪಾವಳಿಯ ಆಚರಣೆಗಳು, ರಥಸಪ್ತಮಿ ಇತ್ಯಾದಿ ಇತ್ಯಾದಿ. ಇಷ್ಟಲ್ಲದೇ ಕೆಲವು ಸ್ಥಳೀಯ ಶಕ್ತಿಗಳು ದೇವತ್ವನ್ನು ಹೊಂದಿ ಅವುಗಳನ್ನು ಆರಾಧಿಸುವ ಪದ್ಧತಿಗಳು ಋತುಮಾನದ ವಾರ್ಷಿಕಾವರ್ತನದ ಪ್ರಭಾವದಿಂದಾಗಿದೆ. ಇವುಗಳನ್ನು ಶಿವ, ಶಕ್ತಿ, ನಾಗ ಕೆಲವು ಸಂದರ್ಭಗಳಲ್ಲಿ ವೈಷ್ಣವ ಆರಾಧನೆಯಲ್ಲೂ ನೋಡಬಹುದು.

ದೇವಾಲಯಗಳಲ್ಲಿ ನಡೆಯುವ ವಾರ್ಷಿಕ ರಥೋತ್ಸವವು ಧಾರ್ಮಿಕ ಕಟ್ಟಳೆಗಳನ್ನು ತಿಳಿಸುವುದರೊಂದಿಗೆ ಸ್ಥಳೀಯ ಸಾಮಾಜಿಕ ಕಟ್ಟುಕಟ್ಟಳೆಗಳನ್ನು ಅರಿತುಕೊಳ್ಳುವ ಮುಖ್ಯ ಸಾಧನೆಗಳಲ್ಲಿ ಒಂದಾಗಿದೆ. ಒಟ್ಟಿನಲ್ಲಿ ಈ ರಥೋತ್ಸವ ಮತ್ತು ಜಾತ್ರೆಗಳು ತುಳುನಾಡಿನ ಧಾರ್ಮಿಕ ಪದ್ಧತಿಯ ವಿವಿಧ ಮುಖಗಳನ್ನು ತಿಳಿಸುವ ಕನ್ನಡಿಯಾಗಿದೆ.

ಧಾರ್ಮಿಕ ಸಮನ್ವಯತೆಯು ತುಳುನಾಡಿನ ಧಾರ್ಮಿಕ ಇತಿಹಾಸದ ತಿರುಳಾಗಿದೆ. ಇದು ವಿವಿಧ ಜಾತಿಯವರ ಧಾರ್ಮಿಕ ಆಚರಣೆಗಳಲ್ಲೂ ವಿವಿಧ ಧರ್ಮದವರ ಆಚಾರ ವಿಚಾರಗಳಲ್ಲೂ ನೋಡಬಹುದು. ಧಾರ್ಮಿಕ ಸೌಹಾರ್ದತೆಯ ತುಳುನಾಡಿನಲ್ಲಿ ಉತ್ತಮ ರೀತಿಯಲ್ಲಿ ಆಚರಣೆ ಇದ್ದುದಲ್ಲದೆ ಇದನ್ನು ಬಹಳ ಪ್ರಶಂಸಿಸಿ ಜಗತ್ತಿಗೆ ತಿಳಿಸಿದ ಪ್ರವಾಸಿ ಬಾರ್ಬೋಸ್. ಹಲವಾರು ಮತ, ಧರ್ಮ ಸಂಪ್ರದಾಯಗಳು ತುಳುನಾಡಿನಲ್ಲಿ ಸಹಬಾಳ್ವೆಯನ್ನು ಅರಿತು ಬೆಳೆದುಬಂದವು. ಎಲ್ಲಾ ಮತೀಯರು ಇದರ ಮಹತ್ವವನ್ನು ಅರಿತು ಇದನ್ನು ಆಚರಿಸುವ ಮಹತ್ವವನ್ನು ತಿಳಿದಿದ್ದರು. ಇದರಿಂದಾಗಿ ತುಳುನಾಡಿನವರು ತಮ್ಮ ಸಾಂಸ್ಕೃತಿಕ ಜೀವನದಲ್ಲಿ ಹೆಚ್ಚಿನ ಕಾಣಿಕೆಯನ್ನು ನೀಡಿದರು.

ತುಳುನಾಡಿನ ಧಾರ್ಮಿಕ ಇತಿಹಾಸ, ಭಾರತೀಯ ಧಾರ್ಮಿಕ ಇತಿಹಾಸದ ಅವಿಭಾಜ್ಯ ಅಂಗವಾಗಿದ್ದರೂ ಇಲ್ಲಿನ ಜನರು ತಮ್ಮದೇ ಆದ ಕೆಲವು ವಿಶಿಷ್ಟತೆಯುಳ್ಳ ಧಾರ್ಮಿಕ ಆಚರಣೆಗಳನ್ನು ಶತಮಾನಗಳಿಂದ ನಡೆಸಿಕೊಂಡು ಬಂದಿದ್ದಾರೆ. ಇಂತಹ ಆಚರಣೆಗಳಲ್ಲಿ ಗಮನಾರ್ಹವಾದವುಗಳು ಯಾವುದೆಂದರೆ, ದೇವಾಲಯಗಳಲ್ಲಿ ನಡೆಯುವ ರಂಗಪೂಜೆ, ನಾಗ ಮತ್ತು ಸ್ಕಂದರೊಳಗೆ ನಡೆಯುವ ಅಭೇದ್ಯವಾದ ಪೂಜೆ, ವೈದಿಕ ದೇವತೆಗಳಿಗೆ ದೈವದೋಪಾದಿಯಲ್ಲಿ ಅರ್ಚನೆ, ಬ್ರಹ್ಮಸ್ಥಾನಗಳಲ್ಲಿ ಪಂಚ ದೈವಾರಾಧನೆ, ಲಿಂಗೋಪಾದಿಯಲ್ಲಿ ದುರ್ಗಾದೇವಿಯ ಆರಾಧನೆ, ದ್ವಿಲಿಂಗೋಪಾದಿಯಲ್ಲಿ ಶಂಕರನಾರಾಯಣನ ಆರಾಧನೆ, ಹೋಮದೋಪಾದಿಯ ಗಣೇಶಾರಾಧನೆ ಆಚರಣೆ, ವೈದಿಕ ದೇವಾಲಯಗಳ ಜಾತ್ರೆಯ ಸಂದರ್ಭಗಳಲ್ಲಿ ಸ್ಥಳೀಯ ದೇವರ ಆರಾಧನೆ ಇವೆಲ್ಲಾ ತುಳುನಾಡಿನ ಧಾರ್ಮಿಕ ಜೀವನಕ್ಕೆ ಒಂದು ವಿಶಿಷ್ಟ ಕಳೆಯನ್ನು ನೀಡಿದೆ.

ಇದರೊಂದಿಗೆ ಇಲ್ಲಿನ ಧಾರ್ಮಿಕ ಇತಿಹಾಸ ಅಧ್ಯಯನಿಸುವಲ್ಲಿ ಕೆಲವು ಜಿಜ್ಞಾಸೆಗಳು ತೋರಿಬಂದಿವೆ. ಇಂತಹವುಗಳಲ್ಲಿ ನಮ್ಮ ಗಮನ ಸೆಳೆಯುವುದು ಪಂಚಲಿಂಗೇಶ್ವರ ಆರಾಧನೆ. ತುಳುನಾಡಿನ ಪುತ್ತೂರು ತಾಲೂಕಿನಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ. ಮತ್ತು ಶಂಕರನಾರಾಯಣನ ಆರಾಧನೆ ಕುಂದಾಪುರ ತಾಲೂಕಿನಲ್ಲಿಯೂ ಹೆಚ್ಚು ಬಳಕೆ ಇರಲು ಕಾರಣ? ಗೌಡಸಾರಸ್ವತರ ಮಲ್ಲೇಶ ಮಠಗಳ ಐತಿಹಾಸಿಕ ಹಿನ್ನೆಲೆ ಮತ್ತು ಅವುಗಳಲ್ಲಿ ಎರಡು ತುಳಸಿಕಟ್ಟೆಗಳಿರುವ ಕಾರಣವೇನು ಇತ್ಯಾದಿ – ಇವುಗಳ ಐತಿಹಾಸಿಕ ಸಂಶೋಧನೆಗಳನ್ನು ನಡೆಸುವುದು ಮುಂದಿನ ಇತಿಹಾಸ ಸಂಶೋಧಕರಿಗೆ ಬಿಟ್ಟದ್ದು. ಒಟ್ಟಿನಲ್ಲಿ, ತುಳುನಾಡಿನ ಧಾರ್ಮಿಕತೆಗೆ ದೀರ್ಘವಾದ ಇತಿಹಾಸ ಪರಂಪರೆ ಇದೆ. ಇದರ ಅಧ್ಯಯನವು ಸ್ಥಳೀಯ ಸಾಂಸ್ಕೃತಿಕ ಜೀವನಕ್ಕೆ ಒಂದು ಅರ್ಥವನ್ನು ಕೊಟ್ಟು ಶ್ರೀಮಂತಗೊಳಿಸಿದೆ.

ಆಕರಸೂಚಿ

ಶಾಸನಗಳು

 • Epigraphia Canarica (Rivised I & X)
 • Epigraphia Indico Archaeological Survey of India
 • Indian Antiquary Volumes
 • Karnataka Inscriptions Vol. I, II, III, V, VII (Dharwad)
 • South Indian Inscriptions Vol. VII, IX, PT. & II XXVII

ಸಂಗ್ರಹಿತ ಮತ್ತು ಸಂಪಾದಿಸಿದ ಶಾಸನಗಳು

 • John Faithful Fleet, Pali, Sanskrrit and old Canarese Inscriptions from the Bombay Presidency, Part of the Madras Presidency preparedk lby James Burgess London 1878.
 • Annual Report of Indian Epigraphy           (New Delhi & Revised 1985)
 • Annual Report of Mysore Archaeological Department upto 1956.
 • Epigraphia Carnalica (Revised)
 • Epigraphia Indica Volumes (New Delhi)
 • Indian Antiquary Volumes (Calcutta)
 • Karnataka Inscriptions (Dharwar) Vol. I to VI
 • South Indian Inscriptions Series VII, IX pt. I and II XXVIII

ಸಂಪಾದಿಸಿದ ಮತ್ತು ಸಂಗ್ರಹಿಸಿದ ಶಾಸನಗಳು

 • John Faithful Fleet, Pali, Sanskrit and Old Canarese Inscriptions from the Bombay Presidency prepared by james Burgess London 1878
 • Gopal B.R. Banavasi Kadamba (includes Inscriptions) Siri, 1983.
 • Ibid, Corpus of Kadamba Inscriptions Vol. I, 1985.
 • Ibid Vijayanagara Inscriptions Vol. II, Mysore, 1986.
 • Ibid, Summaries of Inscriptions (Pub KRI, Dharwad)
 • Gurav R.N., Kadambas of Goa and their Inscriptions, unpublished Ph.D. Thesis Dharwad, 1969.
 • Ramesh K.V. & M.J. Sharma, Tulunadina Sasanagalu Vol. I (kan,), Udupi, 1978.
 • Sircar D.C., Select Inscriptions bearing on Indian HIstory and Culture, Vol. I & II, New Delhi, 1983.
 • Vasantha Madhava, Karavali Karnatakada Kannada Sasanagala Adhyayana (Haleangadi 2001)
 • Vasantha Shetty, Selected Indian Inscriptions, Brahmavar, 1986.
 • Ibid, Ithihasika Mahatvada Udupi Talukina Sasanagalu (Brahmavara, 1995.
 • Venkatesha Joisa Keladi, Keladi Arasara Saasana Samputa. (kan), Gadg. 2001.

ವ್ಯಾಖ್ಯಾನಿಸಿದ ಶಾಸನ ಗ್ರಂಥಗಳು

 • Anantharangacharya, 1971, Karnataka Sasangalu (kan.), Mysore.
 • Annigeri A.M., 1972, Sasana Samgraha (Kan.) Bangalore.
 • Basavaraja Sabarada, 1999, Sashanagala Prabhutva Mattu Janate (Kan.), Hampi.
 • Chidananda Murthi, 1975, Viragallu Mattu Mastigallu (Kan.), Bangalore.
 • Chidananda Murthi, 1955, Kannada Sasanagala Samskrithika Adhyayana (Kan.), Mysore.
 • Desai P.B., 1966, Jainism in South India and Some Jaina Ehigraphs, Sudapur.
 • Ibid, 1971, Kannadanadina Sasanagalu, Dharwad.
 • Gurava R.N. Karvar, 1975, Jilleya Sasanaglu, Dharwad (Kan.)
 • Ramesh K.V., Karnataka Sasanagala Sameekshe, Bangalore.
 • Ibid, 1981, Indian Epigraphy, New Delhi.
 • Sircar D.C., 1971, Studeies in Religious life of Ancient and Medieval India, Study based on Inscriptions Delhi.
 • Venkatesha Joisa, Keladi Sasanagala Samskritika Adhyayana, Bangalore, 1996.

ಶಾಸನಗಳ ಪಾರಿಭಾಷಿಕ ಗ್ರಂಥಗಳು

 • St. Shivas Ritte & Others (Ed.), Descriptions Glossary of Administrative terms in Ancient Karnataka, Mysore 2000.
 • Sircar D.C., Indian Epigraphical Glossary, Delhi, 1966.

ಕಡತ

ಅಪ್ರಕಟಿತ

 • Shastry A.K. Selections from the Kadithas of the Sringeri Matha (submitted to) ICHR, New Delhi, 1982.

ಪ್ರಕಟಿತ

 • ಗಣಪತಿರಾವ್ಮಂಜೇಶ್ವರ, ಮಂಗಳೂರು, ೧೯೨೪
 • A.K. Shastry, The Records of the Sringeri Matha Relating to Keladi, Keladi, 2001.
 • Subrahmanya Iyer, Selection of Records of the Sringeri Mutt, Mysore, 1927.

ವಿಶ್ವಕೋಶ

 • Bhaskar Panikkar, Dravidian Encyclopaedia Three Volumes Trivandrum, 1983.
 • james Hastings, Encyclopedia of Religions and Ethics Edinburgh, 1964.
 • John Dawson, Hindu Mythology and Religions, Geography History and Literature, Rupa & Co., 1987.
 • Krishno Murthy Hanur,Encyclopaedia of the Folk Culture of Karnataka, Madras, 1991
 • H.M. Nayaka, Karnataka Visvaskosa, Mysore, 1979 (Kan.)
 • Saletore R.No. Encyclopaedia of Indian Culture, Vol. I to V, New Delhi, 1990.

ಇನ್ನಿತರ ದಾಖಲೆ ಪತ್ರಗಳು

 • Kalburgi (Ed.), Karnatakada Kaipiyattugalu, Hampi, 1994 (Kan.)
 • K. Kushalappa Gowda & K. Chinnappa Gowda, Dakshina Kannada Jilleya Kaipiyattugalu, Ujire, 1983 (Kan.)
 • Mahalingam T.V., Mekenzie Manuscripts (Summaries of historical Manuscripts in the Mekenzie Collection, Madras, 1976.

ಸಾಹಿತ್ಯ ಕೃತಿಗಳು

 • ಬಾಹುಬಲಿ, ನಾಗಕುಮಾರಚರಿತ್ರೆ, ಸಂ. : ಶಾಂತಿರಾಜಶಾಸ್ತ್ರಿ, ಮೈಸೂರು, ೧೯೩೩.
 • ಚಂದ್ರಮಕವಿವಿರಚಿತಕಾರ್ಕಳಗೋಮಟೇಶ್ವರಚರಿತೆ, ಮದ್ರಾಸು, ೧೯೫೧.
 • ಕವಿರಾಜಕಂಠೀರವ, ಆದಿತ್ಯಪುರಾಣ, ಸಂ. : ಕೆ. ವೆಂಕಟರಾಯಾಚಾರ್ಯ, ಸುರತ್ಕಲ್ಲು, ೧೯೭೬.
 • ಲಕ್ಷ್ಮಣಶಾಸ್ತ್ರೀ, ಗುರುವಂಶಕಾವ್ಯ, ಮೈಸೂರು, ೧೯೨೮.
 • ಲಿಂಗಣ್ಣಕವಿ, ಕೆಳದಿನೃಪವಿಜಯಂ, ಸಂಗಮಶಾಸ್ತ್ರಿ, ಮೈಸೂರು, ೧೯೭೩.
 • ಪದ್ಮನಾಭ, ಪದ್ಮಾವತಿಮಹಾತ್ಮ್ಯಅಥವಾಜಿನದತ್ತರಾಯಚರಿತ್ರೆ, ಸಂ.: ಪುಟ್ಟುಸ್ವಾಮಿ, ಮಂಗಳೂರು, ೧೯೫೦
 • ಪುಟ್ಟಯ್ಯ, ಮೂಡಬಿದಿರೆಯತ್ರಿಭುವನತಿಲಕಚೂಡಾಮಣಿಬಸದಿಯಜೀರ್ಣೋದ್ಧಾರಚರಿತೆ, ಸಂ. : ದೇವಕುಮಾರಜೈನ, ಮೂಡಬಿದ್ರೆ, ೧೯೬೫.
 • ಶ್ರೀನಿವಾಸಹಾವನೂರುಸಂ. : ಪೆರಂಪಳ್ಳಿಯನೆಕ್ಕಾರುಕೃಷ್ಣದಾಸರು, ವರಾಹತಿಮ್ಮಪ್ಪಮುದ್ರಿಕೆಯಕೀರ್ತನಸಂಪದಜೊತೆಗೆಉಡುಪಿಯಶ್ರೀಕೃಷ್ಣಚರಿತ್ರೆಮತ್ತುತಿರುಪತಿಯಾತ್ರೆಸಂ. : ಉಡುಪಿ, ೨೦೦೩.
 • ರತ್ನಾಕರವರ್ಣಿ, ಭರತೇಶವೈಭವ, ಸಂ. : ಬ್ರಹ್ಮಪ್ಪಮತ್ತುಇತರರು, ಬೆಂಗಳೂರು, ೧೯೬೭.
 • ರತ್ನಾಕರವರ್ಣಿ, ರತ್ನಾಕರಶತಕ, ಸಂ: ಕಾಂತರೈಮತ್ತುದೇವಕುಮಾರಜೈನ, ಮೂಡಬಿದ್ರೆ, ೧೯೬೭.
 • ಸಹ್ಯಾದ್ರಿಖಂಡ, ಸಂ. : ಭಾನುಮತಿ, ಮೈಸೂರ, ೧೯೮೪
 • ಸಾಳ್ವಕವಿ, ಸಾಳ್ವಭಾರತ, ಸಂ. : ಹಂ.ಪ. ನಾಗರಾಜಯ್ಯ, ಬೆಂಗಳೂರು.
 • ಸರಜನಾಗ, ಸುಕಸಪ್ತತಿ, ಸಂ. : ವೆಂಕಟ್ರಾಯಾಚಾರ್ಯ, ಸುರತ್ಕಲ್ಲು, ೧೯೭೪.
 • ಶ್ರೀವಾದಿರಾಜರಕೃತಿಗಳು, ಸಂ. : ನಾಗರತ್ನ, ಮೈಸೂರು, ೧೯೮೦.

Paper Documents

 • Gajanana Ghanekar, An Introduction to Goan Maratha Records, Margao, 1973.
 • Meckenzie Records kept in Oriental Library, Madras.

Foreign Records (Portuguese, Unpublished)

 • LivroDas Moncoes De Reino (Goa State Archives)
 • Livro Do Correspondencia Do Canara (The Book of Correspondence on Kanara, Goa State archives).

Published documents in Portuguese

 • Biker Judice, Colleccao De Tratades E concertos De Pazes (Lisbon), 1881 – 87
 • Braganca Perira, Arquivo Portuguese Oriental (Bastora, Goa, 1936-40.
 • Danvers, Report; to the Secretary of State of India in Council on the Portuguese Records relating to the East Indies contained in the Archive Do Terre Do Tombo (London, 1892)
 • Paulo De Trindade, Conquisto Espirito Do Oriente (Lisbon, 1962-67)
 • Pissurlencar, P.P.S., Assentos Do Conselho Do Estado (Bastora, Goa, 1953 – 57)

Travellers Account

 • Arab Geographical Knowledge of Southern India, Madras, 1942. Collecto 45 Muhammad Hussain Nainar
 • Baldaeuls Philip, A description of East India Coasts of Malabar as also of Isle of Ceylon (Tr. by Churchill, London 1703)
 • Barbosa Duarte, The Book of Duarte Barbosa : An Account of the Indian Ocean and the inhabitants (Tr. By Dames, London, 1918)
 • Buchanan Francis, A Journey from Madras through the countries of Mysore, Canara and Malabar, Madras, 1870.
 • Forbes J., Oriental Memories, London, 1873.
 • Francois Pyradi, The Voyage of Francois Pyradi of Lavel to East Indies, the Maldives etc., (Tr. by Albert Grey. H.C.P. Bell, London, 1887) Second AES 2000
 • Fryer John, Account of India, Reprinted in the Calcutta Weekly Englishman (London, 1873).
 • Hamilton Alexander, A New Account of the East Indies (with introductory notes by William foster, Hakluvt, London, 1930).
 • Linschoten,The Voyage of John Hughen Van Linschoten to the East Indies (Tr. by Burnell and Tiele, Hakluyt, London, 1885)
 • Pietro Della Valle, The Travels of Pietro Della Valle in India (from old English Translation of 1664 by Harves. Edited with life of author and introduction notes by Edward Grey. H. Hakhyt, London. 1892).
 • Peter Samuel, Hakluyt, Posthumous Purchas his Pilgrimes (Vol. X, Glasgow, 1905).
 • Surendranath Sen, (Ed.), Indian Travels of Thevenot and Caren Being the third part of the travels of M. De Thevenot into the Levant and the third part of voyage round the world by Dr. John Francis Gemelli Careri (National Archives, New Delhi, 1949).
 • Tome Pires, Suma – Oriental (by Armendocortese, Hakluyt, London, 1944).