ಕಾಲಸೂಚಕ ಪ್ರತ್ಯಯ

ಭೂತಕಾಲ ಸೂಚಕ ಪ್ರತ್ಯಯ: ತುಳುವಿನ ಭೂತಕಾಲದಲ್ಲಿ ಎರಡು ಕಾಲಸೂಚಕ ಪ್ರತ್ಯಯಗಳಿವೆ. ೧. ಪೂರ್ಣ ಭೂತಕಾಲ

(ತತ್ಪೂರ್ವ) ೨. ಪೂರ್ಣ ಭೂತಕಾಲ

ಅಪೂರ್ಣ ಭೂತಕಾಲ ಸೂಚಕ ಪ್ರತ್ಯಯಗಳು: /-ಯ್‌>ತ್‌>ದ್‌(>ಡ್‌)

ಪೂರ್ಣಭೂತಕಾಲ ಸೂಚಕ ಪ್ರತ್ಯಯಗಳು : /-ತ್‌ದ್‌>ತ್‌>ದ್‌/

ಈ ಎರಡೂ ಪ್ರತ್ಯಯಗಳು – ತ್‌-ಮತ್ತು -ದ್‌ಎಂಬ ಉಪಾಕೃತಿಗಳನ್ನು ಪಡೆದಿರುತ್ತವೆಯಾದರೂ ಅವುಗಳು ಬಳಕೆಯಾಗುವ ಸಂದರ್ಭದಗಳು ಬೇರೆ ಬೇರೆ. ಈ ಕೆಳಗಿನ ಉದಾಹರಣೆಗಳಲ್ಲಿ ಕಾಣುವಂತೆ, ಅಪೂರ್ಣ ಭೂತಕಾಲವು ಮೂಲದ್ರಾವಿಡದ ಭೂತಕಾಲದ ಮುಂದುವರಿದ ರೂಪ ಮತ್ತು ಪೂರ್ಣ ಭೂತಕಾಲವು ತುಳುವಿನ ವಿಶಿಷ್ಟತೆಯಾಗಿದೆ ಎಂಬುದನ್ನು ತೋರಿಸುತ್ತದೆ.

ತುಳು                                                                 ತಮಿಳು

ತತ್ಪೂರ್ವದ (ಅಪೂರ್ಣ) ಭೂತಕಾಲಪೂರ್ಣ ಭೂತಕಾಲ

ಕಾ-ತ್‌ಎ                                                 ಕಾ-ತ್‌ದ್‌ಎಎ

ಮೇಲಿನ ಉದಾಹರಣೆಗಳಲ್ಲಿ ತುಳುವಿನ ತ್‌- <*-ತ್‌, *-ತ್ತ್‌,-ನ್ತ್‌; -ಯ್‌< – ಇ-; – ದ್‌/-ದ್‌< – ಣ್ತ್‌/ – ಣ್ಟ್‌< – ನ್ತ್‌(ಅಪೂರ್ಣ ಭೂತಕಾಲದಲ್ಲಿ) ಮೂಲದ್ರಾವಿಡದ ಭೂತಕಾಲದ ಉಪಆಕೃತಿಗಳ ಸರಳೀಕರಣವಾಗಿ ಇವು ಕಂಡುಬರುತ್ತವೆ. ಮೂಲದ ಇ ಉಪಆಕೃತಿ ಮತ್ತು ಉಳಿದ ಮೂರು ದಂತ್ಯ ಉಪಆಕೃತಿಗಳ ಮಧ್ಯದ ವ್ಯತ್ಯಾಸವನ್ನು ತುಳು ಸ್ಪಷ್ಟವಾಗಿ ಉಳಿಸಿಕೊಂಡಿದೆ. ಮತ್ತೊಂದೆಡೆ, ಎಮಿನೋ ಗಮನಿಸಿದಂತೆ, ಕನ್ನಡ ಕೂಡಾ ಸರಳೀಕರಣವನ್ನು ಹೊಂದಿದ್ದು, ಮೂಲಭೂತವಾಗಿ *-ಇ- ಎಂಬ ಭೂತ ಉಪಆಕೃತಿಯಿಂದ ಕೂಡಿದ್ದ ಕ್ರಿಯಾಪದಗಳಿಗೂ ಸಾದೃಶ್ಯವನ್ನು ಅವಲಂಬಿಸಿ, ದಂತ್ಯ ಉಪಆಕೃತಿಗಳನ್ನು ಹೊಂದಿದೆ. ಇದರಿಂದಾಗಿ ಭೂತಕಾಲದ ಸಂರಚನೆಯಲ್ಲಿ ತುಳು, ದ. ದ್ರಾವಿಡ ಭಾಷೆಗಳನ್ನೇ ಸಂಪೂರ್ಣವಾಗಿ ಹೋಲುತ್ತದೆ ಎಂದು ನಿರ್ಧರಿಸಬಹುದು ಮತ್ತು ಮೂಲದ ಸಂರಚನೆಯ ಸರಳೀಕರಣದ ವಿವರಗಳಲ್ಲಿ ತುಳು ಮತ್ತು ಕನ್ನಡ ಸ್ವತಂತ್ರವಾಗಿವೆ. ಪೂರ್ಣ ಭೂತಕಾಲವು ಅಪೂರ್ಣ ಭೂತಕಾಲದ ಬೆಳವಣಿಗೆ ಎಂಬುದು ಖಚಿತವಾಗಿದ್ದರೂ ಅದರ ನಿಜವಾದ ಬೆಳವಣಿಗೆಯ ಪ್ರಕ್ರಿಯೆಯು ಇಂದಿಗೂ ಅಸ್ಪಷ್ಟವಾಗಿದೆ. ಹಾಗಿದ್ದಾಗ್ಯೂ, ಪೂರ್ಣ ಭೂತರೂಪವು ಮೂಲದಲ್ಲಿ ಭೂತಕ್ರಿಯಾವಿಶೇಷಣ ರೂಪ ಮತ್ತು ತತ್ಕಾಲೀನ ಕ್ರಿಯಾರೂಪ ‘ಉಪ್ಪು’ (to be -ಇರು) ಎಂಬುದರ (ಅಪೂರ್ಣ) ಭೂತರೂಪ ಇವೆರಡನ್ನು ಒಳಗೊಂಡ ಸಂರಚನೆಯಾಗಿರಬಹುದೇ ಎಂಬ ಅನುಮಾನವನ್ನು ಮುಂದಿಡಬಹುದು.

೧೪. ಭೂತೇತರ ಪ್ರತ್ಯಯಗಳು

ಸಾಮಾನ್ಯ ತುಳುವಿನಲ್ಲಿ ವರ್ತಮಾನ- ಭವಿಷ್ಯತ್‌ಕಾಲ ಸೂಚಕ ಪ್ರತ್ಯಯ /-ಪ್‌>>ಪುಬ್‌>>-ಬ್‌/ ಮತ್ತು ಭವಿಷ್ಯತ್‌ಕಾಲ ಸೂಚಕ ಪ್ರತ್ಯಯ /-ಪ್‌>>-ವ್‌>>-ಬ್‌/. ಬ್ರಾಹ್ಮಣ ತುಳುವಿನಲ್ಲಿ ವರ್ತಮಾನ-ಭವಿಷ್ಯತ್‌ಕಾಲ ಸೂಚಕ ಪ್ರತ್ಯಯ / – ಪ್‌>>-ಪ್‌ವ್‌>>-ವ್‌/ ಕೆಳಗಿನ ಉದಾಹರಣೆಗಳು, ಅವುಗಳ ಉಪಆಕೃತಿಗಳ ಪ್ರಸಾರದಿಂದ ತಿಳಿಸುವುದೇನೆಂದರೆ, ತುಳುವಿನಲ್ಲಿ ಕಾಣುವ ಭವಿಷ್ಯತ್‌ಕಾಲವು ಮೂಲದ ಭವಿಷ್ಯತ್‌ಕಾಲದ (ಅಥವಾ ಭೂತೇತರ ಕಾಲದ) ಮುಂದುವರಿಕೆಯಾಗಿದೆ ಮತ್ತು ವರ್ತಮಾನ – ಭವಿಷ್ಯತ್‌ಕಾಲವು ಅದೇ ಮೂಲದ ಕಾಲದಿಂದ ಬೆಳವಣಿಗೆಯಾಗಿದ್ದರೂ, ಹೊಸ ಅನ್ವೇಷಣೆಯಾಗಿದೆ.

ತುಳು   ತಮಿಳು
ವರ್ತಮಾನ- ಭವಿಷ್ಯತ್‌ ಭವಿಷ್ಯತ್‌ ಭವಿಷ್ಯತ್‌
ಕಲ್‌-ಪುಬ್‌-ಎ ಕಲ್‌-ಪ್‌-ಎ ಕಱ್‌-ಪ್‌-ಆನ್‌
(ಕಲ್‌ಕಲಿಯುವುದು)
ಕಾ-ಪುಬ್‌-ಎ ಕಾ-ಪ್‌-ಎ ಕಾ-ಪ್ಪ್‌-ಆನ್‌
(:ಕಾ-ಕಾಯುವುದು)
ಪೋ-ಪ್‌-ಎ ಪೋ-ವ್‌-ಎ ಪೋ-ವ್‌-ಆನ್‌
ಬರ್-ಪ್‌-ಎ ಬರ್-ವ್‌-ಎ ವರು-ವ್‌-ಆನ್‌
(:ವರ್(ಉ)-ಬರುವುದು)
ತಿನ್‌-ಪ್‌-ಎ ತಿನ್‌-ಬ್‌-ಎ ತಿನ್‌-ಪ್‌-ಆನ್‌
(:ತಿನ್‌ತಿನ್ನುವುದು)

ದ್ರಾವಿಡದಲ್ಲಿ ಭೂತೇತರ ಕಾಲ ಸೂಚಕದ ತುಲನಾತ್ಮಕ ಅಧ್ಯಯನದಿಂದ (ನೋಡಿ ಸುಬ್ರಹ್ಮಣ್ಯಂ, ೧೧೯೭೦, ಧ್ಯಾಯ III) ಮೂಲದ್ರಾವಿಡ ಭಾಷೆಯಲ್ಲಿ *ಪ್ಪ್‌ಮತ್ತು *ತ್ತ್‌ ಎಂಬ ಎರಡು ಭೂತೇತರ ಪ್ರತ್ಯಯಗಳು ಇದ್ದಾಗ್ಯೂ (ಇನ್ನು ಕೆಲವು ಇರುವಂತೆಯೇ) ದಕ್ಷಿಣ ದ್ರಾವಿಡದಲ್ಲಿ ಓಷ್ಠ್ಯ ಪ್ರತ್ಯಯಗಳು ಉಳಿದುಕೊಂಡವು (ಮತ್ತು ಉತ್ತರ ದ್ರಾವಿಡದಲ್ಲಿರುವ ಓ-ಭವಿಷ್ಯತ್‌ ಕಾಲಸೂಚಕ ಪ್ರತ್ಯಯಕ್ಕೆ ಮೂಲದ್ರಾವಿಡದ *ಪ್ಪ್‌ (ನೋಡಿ, ಎಮಿನೋ, ೧೯೬೨ : ೬೩). ಇ್ ತೆಗೆ, ಸಂಬಂಧ ಕಲ್ಪಿಸಲು ಸಾಧ್ಯವಾಗುವುದಾದರೆ, ಉತ್ತರ ದ್ರಾವಿಡದಲ್ಲಿ ಕೂಡಾ ಅವು ಉಳಿದುಕೊಂಡವು ಎನ್ನಬಹುದು. ಅಲ್ಲದೆ, ದಂತ್ಯ ಪ್ರತ್ಯಯಗಳು ಮಧ್ಯ ದ್ರಾವಿಡ ಗುಂಪಿನಲ್ಲಿ ಹೆಚ್ಚು ಪ್ರಧಾನವೆನಿಸಿದವು ಎಂಬುದು ತಿಳಿದು ಬರುತ್ತದೆ. (ಕುರುಕ್‌ ಭಾಷೆಯಲ್ಲಿ ವರ್ತಮಾನ ಕಾಲಸೂಚಕವಾಗಿ ದಂತ್ಯ ಪ್ರತ್ಯಯ ಬಳಕೆಯಲ್ಲಿದೆ). ಪ್ರತ್ಯಯಗಳ ಈ ಸಮಾನ ಭಾಷಿಕಾಂಶವು ತುಳುವನ್ನು ಸ್ಪಷ್ಟವಾಗಿ ದಕ್ಷಿಣ ದ್ರಾವಿಡ ಗುಂಪಿಗೆ ಸೇರಿರುತ್ತದೆ ಮತ್ತು ಮಧ್ಯ ದ್ರಾವಿಡ ಗುಂಪಿನಿಂದ ಪ್ರತ್ಯೇಕಿಸುತ್ತದೆ.

ಇದರ ಜೊತೆಗೆ, ತುಳುವಿನ ಪ್ರಥಮ ಪುರುಷ ನಪುಂಸಕ ಲಿಂಗ ಏಕವಚನ ಭವಿಷ್ಯತ್‌ ಕಾಲ ಸೂಚಕ ರೂಪಗಳಾಗಿರುವ (ರಾಮಚಂದ್ರ ರಾವ್‌೧೯೬೮ :೭೩) ಬರ್-ಉ-೦/’ಅದು ಬರುವುದು’, (: ತ. ವರ್-ಉಮ್‌೦/), ತಿನ್‌ಉ-೦/’ಅದು ತಿನ್ನುವುದು’ (:ತ. ತಿಣ್ಣಾ-ಉಮ್‌೦/), ಪರ್-ಉ-೦/ ‘ಅದು ಕುಡಿಯುವುದು’ (:ತ. ಪರುಕ್‌ಉಮ್‌೦/) ನಂತರ ರೂಪಗಳು ಪ್ರಾಚೀನ*-ಉಮ್‌ನಿಂದ ಬಂದ ಭವಿಷ್ಯತ್‌ಕಾಲ ಸೂಚಕ ಪ್ರತ್ಯಯದ ಉಪಆಕೃತಿ-ಉ- ವನ್ನು ಹೊಂದಿದೆ ಎನ್ನುವುದು ಇನ್ನೂ ಒಂದು ಕುತೂಹಲದ ಸಂಗತಿ ಯಾಗಿದೆ (ಪದಾಂತ್ಯದ ‘ಮ್‌’ ಲೋಪದ ಬಗ್ಗೆ ನೋಡಿ ಮೇಲಿನ ೪).

೧೫. ನಿಷೇಧಾತ್ಮಕ ಪ್ರತ್ಯಯಗಳು

ತುಳುವಿನಲ್ಲಿ ಎಲ್ಲ ಪುರುಷವಾಚಕಗಳಿಗೂ ನಿಷೇಧಾರ್ಥಕ ಪ್ರತ್ಯಯಗಳಾದ ಅ-/-ಅಯ್‌ಗಳು ಸೇರುತ್ತವೆ.

  ಏಕವಚನ ಬಹುವಚನ
ಉದಾ: ಪುಲ್ಲಿಂಗ: ೧. ಕಲ್ಪ್‌-ಅಯ್‌-ಎ‌್ ಕಲ್ಪ್‌-ಅಯ್‌- ಅ
೨. ಕಲ್ಪ್‌-ಅಯ್‌-ಅ‌ ಕಲ್ಪ್‌-ಅಯ್‌-ಅರ್
೩. ಕಲ್ಪ್‌-ಅಯ್‌-ಎ‌  
ಸ್ತ್ರೀಲಿಂಗ : ಕಲ್ಪ್‌-ಅಯ್‌-ಅಲು‌್ ಪುಂ ಸ್ತ್ರೀ: ಕಲ್ಪ್‌-ಅಯ್‌-ಎರು್‌  
ನಪುಂಸಕ : ಕಲ್ಪ್‌-ಅ-ನ್ದು್‌ ಕಲ್ಪ್‌-ಅಯ್‌-ಅ

ಉಳಿದ ಎಲ್ಲ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಪ್ರಥಮ ಪುರುಷ ನಪುಂಸಕ ಲಿಂಗ ಏಕ ಮತ್ತು ಬಹುವಚನಗಳಿಗೆ ಮಾತ್ರ ನಿಷೇಧಾರ್ಥಕ ಪ್ರತ್ಯಯ ಆ – ಬರುತ್ತಿದ್ದು, ಉಳಿದ ಪುರುಷವಾಚಕಗಳ ಸಂದರ್ಭದಲ್ಲಿ ನಿಷೇಧಾರ್ಥಕ ಪ್ರತ್ಯಯವಾಗಿ ಅದರ ಉಪಾಕೃತಿ ಶೂನ್ಯಧ್ವನಿಮಾ ಆಗುತ್ತದೆ. ಮತ್ತೊಂದೆಡೆ ಮಧ್ಯದ್ರಾವಿಡದ ಭಾಷೆಗಳಲ್ಲಿ ಮತ್ತು ಬ್ರಾಹೂ ಈ ಭಾಷೆಯ್ಲಲಿ ಎಲ್ಲ ಪುರುಷವಾಚಕಗಳ ಸಂದರ್ಭದಲ್ಲಿ ನಿಷೇಧಾರ್ಥಕ ಪ್ರತ್ಯಯ ಮೂಲದ್ರಾವಿಡ -*ಆ-ವೇ ಬಳಕೆಯಲ್ಲಿದೆ. ಅದುದರಿಂದ ಈ ಅಂಶಕ್ಕೆ ಸಂಬಂಧಿಸಿದಂತೆ, ತುಳು ದಕ್ಷಿಣ ದ್ರಾವಿಡ ಭಾಷೆಗಳಿಗಿಂತ ಮಧ್ಯದ್ರಾವಿಡ ಮತ್ತು ಬ್ರಾಹು ಈ ಭಾಷೆಗಳೊಂದಿಗೆ ಹೊಂದಿಕೊಳ್ಳುತ್ತದೆ ಎನ್ನಬಹುದು. ಈಗಿನ ಸ್ಥಿತಿಯಲ್ಲಿ ಈ ಎರಡು ರೂಪಗಳಲ್ಲಿ (-ಆ-) ಮತ್ತು ಶೂನ್ಯಧ್ವನಿಮಾ) ಯಾವುದು ಮೂಲದ್ರಾವಿಡದ ರೂಪವನ್ನು ಪ್ರತಿನಿಧಿಸುತ್ತದೆ ಎಂದು ಹೇಳುವುದು ಕಷ್ಟ. ನನ್ನ ಸದ್ಯದ ದೃಷ್ಟಿಕೋನದಂತೆ, ತುಳು, ಮಧ್ಯದ್ರಾವಿಡ ಗುಂಪುಗಳು ಮತ್ತು ಬ್ರಾಹುಈ (ಕುರುಕ್‌ಮತ್ತು ಮಲ್ತೋ ಭಾಷೆಗಳಲ್ಲಿ ನಿಷೇಧಾರ್ಥಕ ಪ್ರತ್ಯಯವೇ ಇಲ್ಲ) ಭಾಷೆಗಳು ಎಲ್ಲ ಪುರುಷವಾಚಕಗಳ ಸಂದರ್ಭದಲ್ಲಿ ಆ- ಎಂಬ ನಿಷೇಧಾರ್ಥಕ ಪ್ರತ್ಯಯವನ್ನು ಬಳಸುತ್ತಾ, ಪೂರ್ವದ ಸ್ಥಿತಿಯನ್ನೆ ಉಳಿಸಿಕೊಂಡಿವೆ ಮತ್ತು ದಕ್ಷಿಣ ದ್ರಾವಿಡ ಭಾಷೆಗಳು ಸ್ವರಾದಿಯ ಪ್ರತ್ಯಯಗಳು ಮೊದಲು ‘ಅ’ವನ್ನು ಕೈಬಿಡುವ ಮೂಲಕ ಹೊಸತನ್ನು ಸಾಧಿಸಿವೆ. ಈ ನಿರ್ಧಾರವೇ ಅಂತಿಮವೆಂದು ತೀರ್ಮಾನವಾದಲ್ಲಿ ತುಳುವಿನಲ್ಲಿ ಬದಲಾವನೆಗಳಾಗಿಲ್ಲದೆ, ಉಳಿದ ದಕ್ಷಿಣ ದ್ರಾವಿಡ ಭಾಷೆಗಳು ಬದಲಾವಣೆ ಮಾಡಕೊಂಡಿವೆ ಎನ್ನಬಹುದು. ಹೆಚ್ಚಿನ ಅಧ್ಯಯನದ ಬಳಿಕ ದಕ್ಷಿಣೇತರ ದ್ರಾವಿಡ ಭಾಷೆಗಳು ಮತ್ತು ತುಳು ಈ ದೃಷ್ಟಿಯಲ್ಲಿ ಹೊಸತನು ರೂಪಿಸಿಕೊಂಡಿವೆ ಎಂಬುದೇ ನಿರ್ಧಾರವಾದರೂ ತುಳು ಇತರ ದಕ್ಷಿಣ ದ್ರಾವಿಡ ಭಾಷೆಗಳಿಗಿಂತ ಭಿನ್ನವಾಗುತ್ತದೆ ಎಂಬುದು ಸ್ಪಷ್ಟ.

೧೬. ವಿಧ್ಯರ್ಥಕ ಪ್ರತ್ಯಯ

ಮಧ್ಯಮ ಪುರುಷಏಕವಚನ ವಿಧ್ಯರ್ಥಕ ಪ್ರತ್ಯಯವು / -ಲ->ಶೂನ್ಯಧ್ವನಿಮಾ / ಮಧ್ಯ ದ್ರಾವಿಡ ಬಹುವಚನ ಪ್ರತ್ಯಯ / -ಲೆ->ಇ/ ಈ ಆಗಿವೆ. ತುಳುವಿನ – ಲ , -ಲೆ ರೂಪಗಳನ್ನು ತಮಿಳು ಮಲಯಾಳಂ ರೂಪಗಳಾ ಅಲಾಮ್‌ಜೊತೆಗೆ ಹೋಲಿಸಬಹುದು(<ಕ್ರಿಯಾ ನಾಮಪದ ಪ್ರತ್ಯಯ ಅಲ್‌+ ಆಕುಮ್‌’ಆಗುವುದು’). ತುಳು: ಪೋ-ಲ (ಎ.ವ.), ಪೋ-ಲೆ (ಬ,ವ,) ‘ನೀನು ಹೋಗು’ ಮತ್ತು ತ. ಮ. ಪೋಕ್‌ಅಲ್‌ಆಮ್‌(ಯಾರೂ) ಹೋಗು / ಹೋಗಬಹುದು. ‘ಮ್‌’ ಲೋಪದೊಂದಿಗೆ ಪದಾಂತ್ಯದ ಸ್ವರದ ಮೂಲಕ ಏಕವಚನ ಮತ್ತು ಬಹುವಚನದ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಾಸವು ತುಳುವಿನ ಹೊಸ ಅನ್ವೇಷಣೆಯಾಗಿದೆ.

ಕನ್ನಡದಲ್ಲಿ ಮಧ್ಯಮ ಪುರುಷ ಬಹುವಚನದ ಸಂದರ್ಭದಲ್ಲಿ ಈ (< ಹಳಗನ್ನಡ ಇಮ್‌< ಮೂಲದ್ರಾವಿಡ *-ಉಮ್‌) ಇದ್ದ ಹಾಗೆ ತುಳುವಿನಲ್ಲಿ ಮಧ್ಯಮ ಪುರುಷ ಬಹುವಚನದಲ್ಲಿ ಇ-ಬರುತ್ತದೆ. (‘ಇ’ ಯು ಮಧ್ಯಮ ಪುರುಷ ಬಹುವಚನದ ಸಂದರ್ಭದಲ್ಲಿ ಪ್ರಧಾನವಾಗಿ ಬರುತ್ತದೆಯಾದುದರಿಂದ) ಕನ್ನಡ ಮತ್ತು ತುಳುವಿನಲ್ಲಿ ಮೂಲದ ಪ್ರತ್ಯಯ ಉ ಅನ್ನುವುದಕ್ಕೆ ಬದಲಾಗಿ ಇ ಪ್ರತ್ಯಯ ಬಂದಿದೆ. ವಿಧ್ಯರ್ಥಕ ಪ್ರತ್ಯಯದ ಸಂರಚನೆಯಲ್ಲಿ ತುಳು ದಕ್ಷಿಣ ದ್ರಾವಿಡದ ಲಕ್ಷಣವನ್ನು ಹೊಂದಿರುತ್ತದೆ.

೧೭. ನಿಷೇಧಾರ್ಥಕ ಪ್ರತ್ಯಯ

ಮಧ್ಯಮ ಪುರುಷ ಏಕವಚನದಲ್ಲಿ ಕ್ರಿಯಾಧಾತುವಿನ ಬಳಿಕ-ಅಡ ಅನ್ನುವ ಪ್ರತ್ಯಯವನ್ನು, ಮಧ್ಯಮ ಪುರುಷ ಬಹುವಚನದಲ್ಲಿ -ಅಡೆ ಅನ್ನುವ ಪ್ರತ್ಯಯವನ್ನು ಒಳಗೊಳ್ಳುತ್ತದೆ. ಉದಾ: ಬರ್ -ಅಡ (ಏ.ವ.) ಬರ್-ಅಡೆ (ಬ.ವ.) (ಬರಬೇಡ) (ತ: ವರ್-ಅ, ವೇಣ್ಟ್‌-ಆ; ಕ: ಬರ್-ಅ, ಬೇಡ್‌-ಅ). ತಮಿಳು ಮತ್ತು ಕನ್ನಡಗಳ ನಡುವಿನ ಸಂವಾದಿ ರೂಪಗಳು ತೋರಿಸಿ ಕೊಡುವಂತೆ, ಮೂಲತಃ ಕ್ರಿಯಾಪದದ ಧಾತ್ವರ್ಥವಾಚಿ ರೂಪ (infinitive) ರೂಪ (ಬರುಲು, ಹೋಗಲು ಎಂಬ ರೂಪ) ಮತ್ತು ವೇಂಟ್‌-ಆ ‘ಅಗತ್ಯವಿಲ್ಲ’ ಎನ್ನುವ ಪದವನ್ನು ಒಳಗೊಂಡ ವಾಕ್ಯಾತ್ಮಕ ಸಂರಚನೆ ಯಾಗಿದೆ. (ಬರಲು-ವೇಂಟ ಎಂಬಂತೆ) ಈ ಸಂರಚನೆಯು ದಕ್ಷಿಣ ದ್ರಾವಿಡಕ್ಕೆ ವಿಶಿಷ್ಟವಾದ ಸಂರಚನೆಯಾಗಿದ್ದು ಈ ಸಮಾನ ಭಾಷಿಕಾಂಶವು ತುಳುವನ್ನು ದಕ್ಷಿಣ ದ್ರಾವಿಡ ಭಾಷಾಗುಂಪಿಗೆ ಸೇರಿಸುತ್ತದೆ.

೧೮. ನಿರ್ಬಂಧಾತ್ಮಕ ಪ್ರತ್ಯಯ

ಒಡು ಪ್ರತ್ಯಯ. ಉದಾ ಪೋ-ಒಡು (‘ಹೋಗಲೇ ಬೇಕು’) (:ತ. ಪೋಕ್‌-ಅ ವ್ಭೆಣ್ಟ್‌-ಉಮ್‌), ಕೊಯ್ಯ್‌-ಒಡು (‘ಕೊಯ್ಯಬೇಕು’) (:ತ. ಕೋಯ್ಯ್‌-ಅ ವೇಣ್ಟ್‌-ಉಮ್‌), ನಿಷೇಧಾರ್ಥಕದ ಹಾಗೆಯೇ, ಇದೂ ಕೂಡಾ ಮೂಲದಲ್ಲಿ ವಾಕ್ಯರ್ಥಕ ಸಂರಚನೆಯಾಗಿದ್ದು ಇದು ದಕ್ಷಿಣ ದ್ರಾವಿಡ ಭಾಷಾಗುಂಪಿನ ಲಕ್ಷಣವಾಗಿದೆ. ಈ ಉದಾಹರಣೆ, ತುಳುವನ್ನು ದಕ್ಷಿಣ ದ್ರಾವಿಡ ಭಾಷಾ ಗುಂಪಿನಲ್ಲಿ ಸೇರಿಸುತ್ತದೆ.

೧೯. ಇಚ್ಛಾರ್ಥಕ ಪ್ರತ್ಯಯ

ಡು ಪ್ರತ್ಯಯ ಇದ್ದು; ಇದು ಮಧ್ಯಮ ಪುರುಷದಲ್ಲಿ ಮಾತ್ರ ಬಳಕೆಯಾಗುತ್ತದೆ. ಉದಾ : ಕಲ್ಪ್‌ಅಡು‌’ಅವನು, ಅವಳು, ಅದು ಅಥವಾ ಅವರು ಕಲಿಯಲಿ’ (:ತ. ಕಱ್ಕ್‌ಅಟ್ಟುಮ್‌’ಕಲಿಯಲಿ’, ಬರ್-ಅಡು ‘ಅವನು, ಅವಳು, ಅದು ಅಥವಾ ಅವರು ಬರಲಿ’ (:ತ. ವರು-ಕ ‘ಬರಲಿ’!, ಕ. ಬರು-ಗೆ). ತುಳುವಿನ ಅಡು‌ಮತ್ತು ಮತ್ತು ತಮಿಳಿನ-ಅಟ್ಟುಮ್‌ಇವು ಪರಸ್ಪರ ಸಂಬಂಧಪಟ್ಟವುಗಳಾಗಿದ್ದು, ಈ ಭಾಷಿಕಾಂಶವು ಕೂಡಾ ತುಳುವನ್ನು ಇದೂ ತುಳುವನ್ನು ದಕ್ಷಿಣ ದ್ರಾವಿಡ ಭಾಷಾವರ್ಗದಲ್ಲಿ ಸೇರಿಸುತ್ತದೆ.

೨೦. ಪ್ರೇರಕಾರ್ಥಕ ಪ್ರತ್ಯಯ

/-ಕ >> -ಗ / ಪ್ರೇರಕಾರ್ಥಕ ಪ್ರತ್ಯಯವಾಗಿದೆ; – ಗ ಪ್ರತ್ಯಯ ಉ‌ಅಥವಾ ಉ ಇವುಗಳಿಂದ ಅಂತ್ಯಗೊಳ್ಳುವ ಕ್ರಿಯಾಪದಗಳ ನಂತರ ಬಂದರೆ, -ಕ ಎಲ್ಲ. ಕಡೆಗಳಲ್ಲೂ ಬರುತ್ತದೆ. ಉದಾ. ಕಲ್ಪು-ಗ ‘ಕಲಿಯುವ!’ (:ತ. ಕಱ್‌-ಕ ‘ಕಲಿಯಬಹುದು!’, ಕ. ಕಲ್‌-ಗೆ); ಬರ್-ಕ ‘ಬರಲಿ’ (:ತ. ವರು-ಕ ‘ಬರಬಹುದು!’, ಕ. ಬರು-ಗೆ). ಮೇಲಿನ ಉದಾಹರಣೆಗಳಲ್ಲಿ ತೋರಿಸಿರುವಂತೆ, ಇದು ಹಳೆಯ ತಮಿಳು ಮತ್ತು ಹಳೆಯ ಕನ್ನಡಗಳ ಇಚ್ಛಾರ್ಥಕ ಪ್ರತ್ಯಯಗಳಿಗೆ ಸಂಬಂಧಿಸಿದುದಾಗಿದೆ. ಹೀಗಾಗಿ ಈ ಸಮಾನ ಭಾಷಿಕಾಂಶವೂ ತುಳುವನ್ನು ದಕ್ಷಿಣ ದ್ರಾವಿಡ ಭಾಷಾ ಗುಂಪಿಗೆ ಸೇರಿಸುತ್ತದೆ.

೨೧. ಸಂಭಾವನಾತ್ಮಕ ಪ್ರತ್ಯಯಗಳು

ಒಳಿ / (ಬ್ರಾಹ್ಮಣ ತುಳು) -ಒಲಿ (ಸಾಮಾನ್ಯ ತುಳು), ಉದಾ: ತಿನ್‌ಒಳಿ / ತಿನ್‌ಒಲಿ ‘ತಿನ್ನಬಹುದು’, ಬರ್-ಒಳಿ / ಬರ್-ಒಲಿ ‘ಬರಬಹುದು’. ಇತರ ಯಾವುದೇ ಭಾಷೆಯಲ್ಲಿ ಈ ರೀತಿಯ ಪ್ರತ್ಯಯವಿದೆಯೇ ಎಂಬುದು ಅಸ್ಪಷ್ಟ.

೨೨. ಭೂತ ಕ್ರಿಯಾವಿಶೇಷಣ ಕೃದಂತ

ಸಾಮಾನ್ಯ ತುಳುವಿನಲ್ಲಿ (ರಾಮಚಂದ್ರ ರಾವ್‌ಪ್ರಕಾರ, ೧೯೬೯, ೧೫) ಮೊದಲ ವರ್ಗದ ಕ್ರಿಯಾಪದಗಳು ಎರಡು ಕೃದಂತಗಳನ್ನು ಹೊಂದಿದ್ದು, ಇವುಗಳು ಅಪೂರ್ಣ ಮತ್ತು ಪೂರ್ಣಭೂತಕಾಲಸೂಚಕ ಧಾತುಗಳಲ್ಲಿ ಒಂದೇ ರೀತಿಯಲ್ಲಿ ಬರುವುದನ್ನು ಗುರುತಿಸಬಹುದಾಗಿದೆ.

ಉದಾ.

ಕಲ್‌-ತು್‌, ಕಲ್‌-ತು್‌ದು್     ‌’ಕಲಿತು’

ಅಡಿ-ತು್, ಅಡಿ-ತು್ದು್     ‘ಗುಡಿಸಿ’

ಎರಡನೆಯ ವರ್ಗದ ಕ್ರಿಯಾಪದಗಳಲ್ಲಿ, ಸಾಮಾನ್ಯ ತುಳುವಿನಲ್ಲಿ ದು‌ಹಾಗೂ ಬ್ರಾಹ್ಮಣ ತುಳುವಿನಲ್ಲಿ ತು‌ಪ್ರತ್ಯಯಗಳಿವೆ.

(ಸಿ) ಕೊರ್-ದು್/(ಬಿ) ಕೊರ್-ತು್      ‘ಕೊಟ್ಟು’

ಪೋ-ದು್/ ಪೋ-ತು್                     ‘ಪೋದು್’

ಕೊಯ್‌ದು್/ ಕೊಯ್‌/ತು್              ‘ಕೊಯ್ದು’

ಮೂರನೆಯ ವರ್ಗದಲ್ಲಿ, ಪೂರ್ಣ ಭೂತಕಾಲ ಸೂಚಕ ಧಾತುಗಳು ಮಾತ್ರ ಕೃದಂತವಾಗಿ ಕಾರ್ಯ ನಿರ್ವಹಿಸುತ್ತವೆ.

ಪಾಡ್‌ದ್ಡು‌್                  ‘ಹಾಕಿ’
ಲಕ್ಕು‌್ -ದು ್              ‘ಎದ್ದು’

ನಾಲ್ಕನೆಯ ವರ್ಗದಲ್ಲಿ

ಪಣ್-ಡು ್ ‌ದು ್                     ‘ಹೇಳಿ’
ಕೇಣ್‌ಡು ್ ‌ದು ್                      ‘ಕೇಳಿ’
ತಿನ್‌ದು ್ ದು    ್                    ‘ತಿಂದು’
ಬತ್ತು‌್ -, ಬತ್ತು ್ ದು‌್           ‘ಬಂದು’

ಇಲ್ಲಿಯ ಸಂರಚನೆಯನ್ನು ಒಟ್ಟಾಗಿ ಗಮನಿಸಿದರೆ, ಇದು ದಕ್ಷಿಣ ದ್ರಾವಿಡದ ಭೂತ ಕ್ರಿಯಾವಿಶೇಷಣಸೂಚಿ ಕೃದಂತಕ್ಕೆ ಹೆಚ್ಚು ಹತ್ತಿರವಾಗುತ್ತದೆಯೇ ಹೊರತು ದ್ರಾವಿಡ ಭಾಷೆಗೆ ಅಲ್ಲ (ನೋಡಿ ಸುಬ್ರಹ್ಮಣ್ಯಂ ೧೯೬೯ ಎ, ೬). ಇದಕ್ಕೆ ಸಂಬಂಧಿಸಿದಂತೆ, ತುಳು ಮತ್ತು ಇತರ ದಕ್ಷಿಣ ದ್ರಾವಿಡ ಭಾಷೆಗಳ ನಡುವಿನ ಒಂದೇ ಒಂದು ವ್ಯತ್ಯಾಸವೆಂದರೆ, ತುಳುವಿನಲ್ಲಿ ಭೂತ ಕಾಲಸೂಚಕ *-ಇ ಉಪಆಕೃತಿಮಾಕ್ಕೆ ಬದಲಿಯಾಗಿ ದಂತ್ಯ ಉಪಆಕೃತಿಮಾಗಳು ಬಂದಿವೆ.

೨೩. ನಿರಂತರ ಕ್ರಿಯಾ ಸೂಚಿ ಕೃದಂತ

ತುಳುವಿನ ನಿರಂತರ ಕ್ರಿಯಾ ಸೂಚಿ ಕೃದಂತವು ಮೂಲತಃ ಕೊನ್‌(<*ಕೊಳ್‌) ಕ್ರಿಯಾಪದದ ಭೂತ ಕ್ರಿಯಾವಿಶೇಷಣಸೂಚಿ ಕೃದಂತದಿಂದ ಬರುವ ವಾಕ್ಯಾತ್ಮಕ ಸಂರಚನೆಯಾಗಿದೆ.

ಉದಾ. (ಸಿ)

ಕಲ್‌=ತ್‌ಒನ್ದು / (ಬಿ) ಕಲ್‌ತ್‌ಒನ್ತು ‘ಕಲಿಯುತ್ತಾ’
(ತ.ಕಱ್‌ಱುಕ್ಕೊಣ್‌ತು)
ಕೇಣ್‌ಡ್‌ಒನ್ದು/ಕೇಣ್‌ಡ್‌ಒನ್ತು ‘ಕೇಳುತ್ತಾ’
(:ತ. ಕೇಟ್‌ತುಕ್ಕೊಣ್‌ಟು)
ತಿನ್‌ದ್‌ಒನ್ದು/ತಿನ್‌ದ್‌ಒನ್ತು ‘ತಿನ್ನುತ್ತಾ’
(:ತ. ತಿ-ರುಕ್ಕೊಣ್‌ಟು)
(:ತ. ತಿಣ್‌ರುಕ್ಕೊಣ್‌ಟು)

ಮೇಲಿನ ಉದಾಹರಣೆಗಳಲ್ಲಿ ಕಾಣಿಸಿಕೊಂಡಂತೆ, ತಮಿಳಲ್ಲಿ ಕೂಡಾ ಇದೇ ರೀತಿಯ ಸಂರಚನೆ ಇದೆ. ಇದೂ ತುಳು ದಕ್ಷಿಣ ದ್ರಾವಿಡ ಭಾಷೆ ಎಂಬುದನ್ನು ತೋರಿಸಿಕೊಡುತ್ತದೆ.

೨೪. ನಕಾರಾತ್ಮಕ ಕ್ರಿಯಾ ವಿಶೇಷಣ ಸೂಚಿ ಕೃದಂತ

ಸಾಮಾನ್ಯ ಉಪಭಾಷೆಯಲ್ಲಿ -ಅನ್ದೆ ಮತ್ತು ಬ್ರಾಹ್ಮಣ ಉಪಭಾಷೆಯಲ್ಲಿ -ಅನ್ದೆ ಪ್ರತ್ಯಯಗಳಿವೆ.

ಕಲ್ಪ್‌ಅನ್ದೆ/ಕಲ್ಪ್‌ಅನ್ತೆ        ‘ಕಲಿಯದೆ’
ಕೊರ್-ಅನ್ದೆ/ಕೊರ್-ಅನ್ತೆ    ‘ಕೊಡದೆ’
ಪೋವ್‌ಅನ್ದೆ/ಪೋ-ಅನ್ತೆ    ‘ಹೋಗದೆ’
ಬರ್-ಅನ್ದೆ/ಬರ್-ಅನ್ತೆ       ‘ಬರದೆ’

ಈ ರೂಪ ಬಹಳ ಸ್ಪಷ್ಟವಾಗಿ, ದಕ್ಷಿಣ ದ್ರಾವಿಡ ಭಾಷೆಗಳ ನಕಾರಾತ್ಮಕ ಕ್ರಿಯಾ ವಿಶೇಷಣ ಸೂಚಿ ಕೃದಂತಕ್ಕೆ ಹತ್ತಿರವಿದೆ ಹೊರತು, ಮಧ್ಯ ದ್ರಾವಿಡ ಭಾಷೆಗಳಿಗೆ ಅಲ್ಲ. ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಪ್ರತ್ಯಯಗಳು ಹಳೆಯ ತಮಿಳು. ಆ, ಆತು, ಮ. ಆತು, ಕೊ. ಆದ್‌, ಕ. ಅದೆ. ಮೂಲದ್ರಾವಿಡದಲ್ಲಿ ಹಳೆಯ ತಮಿಳಿನಲ್ಲಿರುವಂತೆ, ನಕಾರಾತ್ಮಕ ಪ್ರತ್ಯಯ ‘ಅ’. ಮಾತ್ರ ಇತ್ತು. ಆದರೆ, ಬಳಿಕ ದಕ್ಷಿಣ ದ್ರಾವಿಡ ಭಾಷೆಯಲ್ಲಿ ಸೂಚಕ ಪ್ರತ್ಯಯ (-ನ್ತ್‌ ತುಳುವಿನಲ್ಲಿ, -ತ್‌ ಇತರ ಭಾಷೆಗಳಲ್ಲಿ) ಇವುಗಳು ಸೇರ್ಪಡೆಗೊಂಡಿದ್ದು, ಭೂತಕಾಲದಲ್ಲಿ ಸಾಮಾನ್ಯವಾಗಿ ನಕಾರಾತ್ಮಕ ಅರ್ಥವನ್ನು ಪಡೆಯುತ್ತದೆ. (ಸುಬ್ರಹ್ಮಣ್ಯಂ ೧೯೬೩, ಅಧ್ಯಾಯ IV). ಇತರ ದಕ್ಷಿಣ ದ್ರಾವಿಡ ಭಾಷೆಗಳ ಜೊತೆಗೆ ತುಳು ಈ ಹೊಸ ಅನ್ವೇಷಣೆಯನ್ನು ಹಂಚಿಕೊಂಡಿದೆ.

೨೫. ಕ್ರಿಯಾಸೂಚಿ ನಾಮವಿಶೇಷಣ

ತುಳುವಿನಲ್ಲಿ ನಾಲ್ಕು ಕ್ರಿಯಾ ಸೂಚಿ ವಿಶೇಷಣಗಳಿವೆ. ೧. ತತ್ಪೂರ್ವ ಭೂತ ಪ್ರತ್ಯಯವನ್ನೊಳಗೊಂಡ ತತ್ಪೂರ್ವ ಭೂತನಾಮ ವಿಶೇಷಣ. (೧೩), ೨. ಪೂರ್ಣ ಭೂತ ಪ್ರತ್ಯಯವನ್ನೊಳಗೊಂಡ ಪೂರ್ಣ ಭೂತ ನಾಮ ವಿಶೇಷಣ (೧೩), ೩. ವರ್ತಮಾನ ಪ್ರತ್ಯಯವನ್ನೊಳಗೊಂಡ ವರ್ತಮಾನ  ನಾಮ ವಿಶೇಷಣ (೧೪). ೪. ನಕಾರಾತ್ಮಕ ಪ್ರತ್ಯಯವನ್ನೊಳಗೊಂಡ ನಕಾರಾತ್ಮಕ ನಾಮ ವಿಶೇಷಣ (ಸಿ) ಅನ್ದ್‌(ಬಿ)ಅನ್ತ್‌. ಈ ಎಲ್ಲ ನಾಲ್ಕರಲ್ಲೂ ವಿಶೇಷಣ ಸೂಚಕ-ಇ ಆಗಿದೆ. (ಕೋಷ್ಠಕ ನೋಡಿ)

ತತ್ಪೂರ್ವ ಭೂತ ನಾಮ ವಿಶೇಷಣ ಬಹಳ ನಿಕಟವಾಗಿ ದಕ್ಷಿಣ ದ್ರಾವಿಡ ಭೂತ ನಾಮ ವಿಶೇಷಣವನ್ನು ಹೋಲುತ್ತದೆ. ಈಗಾಗಲೇ ಗುರುತಿಸಿರುವಂತೆ ತುಳುವಿನಲ್ಲಿ ಪೂರ್ಣಭೂತಕಾಲ ಸೂಚಕ ಹೊಸ ಅನ್ವೇಷಣೆಯಾಗಿದೆ.

ತುಳುವಿನ ವರ್ತಮಾನ ನಾಮ ವಿಶೇಷಣಕ್ಕೆ ಮತ್ತು ಕನ್ನಡದ ವರ್ತಮಾನ- ಭವಿಷ್ಯತ್‌ನಾಮ ವಿಶೇಷಣಕ್ಕೆ ನಿಕಟ ಸಮಾನತೆ ಇದೆ. ಉದಾ. ತಿನ್‌-ಪ್‌-ಇ: ಕ. ತಿನ್‌-ಬ್‌-ಅ, ತು. ಬರ್-ಪ್‌-ಇ: ಕ. ಬರ್-ಪ್‌(ಪ್‌)- ಅ. ಈ ಸಂರಚನೆ ತಮಿಳಿನಲ್ಲಿಲ್ಲದಿದ್ದರೂ, ಭೂತೇತರ ಸೂಚಕವಾದ *-ಪ್ಪ್‌ಜೊತೆಗಿನ ಈ ಸಂರಚನೆಯು ಕನಿಷ್ಠ ಮೂಲ ದ್ರಾವಿಡದ ಹಂತದವರೆಗಾದರೂ ಹೋಗುತ್ತದೆ ಎಂಬುದನ್ನು ತಿನ್‌-ಪ್‌-ಅವನ್‌ ‘ತಿನ್ನುವವನು’, ವರು-ಪ್‌-ಅವನ್‌ ‘ಬರುವವನು’ ಎಂಬೀ ರೀತಿಯ ತಮಿಳಿನ ಸಂರಚನೆಗಳು ತೋರಿಸಿಕೊಡುತ್ತವೆ. ಹೀಗೆ (ಮೂಲದ್ರಾವಿಡದ) ಈ ನಾಮ ವಿಶೇಷಣವನ್ನು ಉಳಿಸಿಕೊಂಡಿರುವುದು ಕನ್ನಡ ಮತ್ತು ತುಳುವಿನಲ್ಲಿರುವ ಸಮಾನ ಅಂಶ ಎನ್ನಬಹುದು.

ತುಳುವಿನ  ನಕಾರಾತ್ಮಕ ನಾಮ ವಿಶೇಷಣ ಕೂಡಾ ದಕ್ಷಿಣ ದ್ರಾವಿಡ ಭಾಷೆಗಳ ನಕಾರಾತ್ಮಕ ನಾಮ ವಿಶೇಷಗಳಿಗೆ ಸಮಾನವಾಗಿದೆ. ಮೂಲ ದ್ರಾವಿಡ ಮತ್ತು ಹಳೆಯ ತುಳುಗಳಲ್ಲಿ ನಕಾರಾತ್ಮಕ ನಾಮ ವಿಶೇಷಣವು ನಕಾರಾತ್ಮಕ ಕ್ರಿಯಾವಿಶೇಷಣ ಸೂಚಿ ಕೃದಂತದಂತೆ ಕೇವಲ ನಕಾರಾತ್ಮಕ ಪ್ರತ್ಯಯ – ಆ ವನ್ನ ಒಳಗೊಂಡಿರುತ್ತದೆ. ದಕ್ಷಿಣ ದ್ರಾವಿಡದಲ್ಲಿ ಇದು ಭೂತಕಾಲವನ್ನು ಸೂಚಿಸುವುದರಿಂದ ಇದಕ್ಕೆ ಭೂತಕಾಲ ಸೂಚಕ ಪ್ರತ್ಯಯ ಸೇರ್ಪಡೆಯಾಗಿದ್ದು, ದಕ್ಷಿಣ ದ್ರಾವಿಡದ ಉಳಿದ ಭಾಷೆಗಳಲ್ಲಿ ಭೂತಕಾಲವನ್ನು ಸೂಚಿಸುವ ಈ ಪ್ರತ್ಯಯಗಳಿವೆ. ಉದಾ. ತ. -ಆತ್‌, ಮ. ಆತ್ತ್‌, ಕೊ.- ಆದ್‌, ಕ. -ಅ‌ದ್‌- ಮತ್ತು ತು. -ಅನ್ದ್‌.  ಆದ್ದರಿಂದ ನಕಾರಾತ್ಮಕ ಕೃದಂತಗಳಲ್ಲಿ (ಕ್ರಿಯಾವಿಶೇಷಣ ಸೂಚಿ ಮತ್ತು ನಾಮ ವಿಶೇಷಣ ಸೂಚಿ ಎರಡರಲ್ಲೂ) ಭೂತಕಾಲಸೂಚಕ ಪ್ರತ್ಯಯದ ಸೇರ್ಪಡೆಯ ತುಳುವನ್ನೂ ಒಳಗೊಂಡು ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಕಂಡುಬರುವ ಹೊಸ ಅನ್ವೇಷಣೆಯಾಗಿದೆ.

ಹೀಗಿದ್ದರೂ ತುಳುವಿನಲ್ಲಿ ನಾಮ ವಿಶೇಷಣ ಸೂಚಕ -ಇ ಇದ್ದು, ಇತರ ದಕ್ಷಿಣ (ಕೆಲವು ಮಧ್ಯ ದ್ರಾವಿಡ ಭಾಷೆಗಳಲ್ಲೂ) ದ್ರಾವಿಡ ಭಾಷೆಗಳಲ್ಲಿ -ಇದೆ. ಈ ಕಾರಣದಿಂದ ತುಳು ದಕ್ಷಿಣ ದ್ರಾವಿಡ ಭಾಷೆಗಳಿಗಿಂತ ಭಿನ್ನವಾಗುವುದು ಮಾತ್ರವಲ್ಲ ಅದು ತೆಲುಗು, ಕೊಂಡ, ಕುಇ, ಕುವಿನ ಜೊತೆಗೆ ಹೊಂದಿಕೊಳ್ಳುತ್ತದೆ. ನಕಾರಾತ್ಮಕ ಪ್ರತ್ಯಯ – ತೆಲುಗಿನಲ್ಲಿ -ಇ (ಚೇಯ್‌

ಕೋಷ್ಠಕ

  ತತ್ಪೂರ್ವ ಭೂ. ನಾ ವಿ. ಪೂರ್ಣಭೂ.ನಾವಿ. ವರ್ತಮಾನ ನಾವಿ. ನಕಾರಾತ್ಮಕನಾವಿ.
(ಕಲ್-‘ಕಲಿ’) ಕಲ್‌ತ್‌ಇ ಕಲ್‌ತು‌ದ್‌ಇ ಕಲ್‌ಪ್‌ಇ/
ಕಲ್ಪ್‌ಅನ್ದ್‌ಇ
ಕಲ್‌ಪುಬ್‌ಇ
(ಪೋ-‘ಹೋಗು’) ಪೋ-ಯ್‌ಇ ಪೋ-ತ್‌ಇ ಪೋ-ಪ್‌ಇ ಪೋವ್‌ಅನ್ದ್‌ಇ
(ಪಾಡು‌’ಹಾಕು’) ಪಾಡ್‌೦/-ಇ ಪಾಡ್‌ಉ‌ದ್‌ಇ ಪಾಡು‌ಬ್‌ಇ ಪಾಡ್‌ಅನ್ದ್‌ಇ
(ತಿನ್‌’ತಿನ್ನು’) ತಿನ್‌ದ್‌ಇ ತಿನ್‌ತ್‌ಇ ತಿನ್‌ಪ್‌ಇ ತಿನ್‌ಅನ್ದ್‌ಇ
(ಬರ್-‘ಬರು’) ಬ-ತ್ತ್‌ಇ ಬ-ತ್ತು‌ಇ ಬರ್-ಪ್‌ಇ ಬರ್–ಅನ್ದ್‌ಇ

ಅನ್‌-ಇ ಮಾಡದ), ಕೊಂಡ -ಕುಇ-ಕುವಿ ಇವುಗಳಲ್ಲಿ ನಾವು ವಿಶೇಷಣಗಳು-ಇ ಆಗಿವೆ. (ಕುಇ ತಿ-ಸ್‌-ಇ ‘ತಿಂದ’, ತಿ-ನ್‌ಇ ‘ತಿನ್ನುವ’, ತಿನ್‌-ಅ-ವ್‌-ಇ ‘ತಿನ್ನದ’. ತಿನ್‌-ಅ-ತ್‌-ಇ ‘ತಿನ್ನದ’). ಹೀಗಿದ್ದರೂ ಇದು ತುಳು, ತೆಲುಗು ಮತ್ತು ಕೊಂಡ-ಕುಇ-ಕುವಿ ಈ ಭಾಷೆಗಳಲ್ಲಿ ಸಮಾನವಾಗಿರುವ ಹೊಸ ಅನ್ವೇಷಣೆ ಎಂದು  ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ಅವುಗಳಿಗೆ ಮಾತ್ರ ವಿಶಿಷ್ಠವಾದ ಹೊಸ ಅನ್ವೇಷಣೆಯಾದ ಬೇರಾವುದೇ ಸಮಾನ ಭಾಷಿಕಾಂಶವಿಲ್ಲ. ಇದರಿಂದಾಗಿ ನಾಮ ವಿಶೇಷಣ ಸೂಚಕಗಳಾದ -ಅ ಮತ್ತು – ಇ ಇವೆರಡೂ ಮೂಲದ್ರಾವಿಡದಲ್ಲಿ ಪ್ರಚಲಿತವಾಗಿದ್ದವು ಮತ್ತು ‘-ಅ’ ವನ್ನು ಬಹುತೇಕ ಭಾಷೆಗಳು ಉಳಿಸಿಕೊಂಡವು ಎಂದು ತೀರ್ಮಾನಿಸಬಹುದು. ಹಾಗೆಯೇ ‘-ಇ’ ಯನ್ನು ತುಳು ಮತ್ತು ಕುಇ ಎಲ್ಲಾ ವಿಶೇಷಣಗಳಲ್ಲೂ ಉಳಿಸಿಕೊಂಡವು ಮತ್ತು ತೆಲುಗು ನಕಾರಾತ್ಮಕ ನಾಮ ವಿಶೇಷಣದಲ್ಲಿ ಮಾತ್ರ ಉಳಿಸಿತು ಎಂದು ತೀರ್ಮಾನಿಸಬಹುದು.

ಸಮಾರೋಪ

೨೬. ತುಳುವಿನ ಧ್ವನಿಮಾ ಹಾಗೂ ಆಕೃತಿಮಾ ಸಂರಚನೆಗಳ ಕುರಿತು ಮೇಲಿನ ವಿಸ್ತೃತವಾದ ತುಲನಾತ್ಮಿಕ ಅಧ್ಯಯನ ತುಳು ಮೂಲತಃ ದಕ್ಷಿಣ ದ್ರಾವಿಡ ಉಪಗುಂಪಿನ ಭಾಷೆ ಎಂಬುದನ್ನು ಬಹಳ ನಿಖರವಾಗಿ ಸ್ಪಷ್ಟಪಡಿಸುತ್ತದೆ. ದಕ್ಷಿಣ ದ್ರಾವಿಡ ಭಾಷೆಗಳ ಜೊತೆಗೆ ತುಳುವನ್ನು ಸೇರಿಸಲು ಅನುಕೂಲವಾಗುವ ಅನೇಕ ಹೊಸ ಅನ್ವೇಷಣೆಗಳಾದ ಸಮಾನ ಭಾಷಿಕಾಂಶಗಳು ದಕ್ಷಿಣ ದ್ರಾವಿಡ ಮತ್ತು ತುಳು ಭಾಷೆಗಳಲ್ಲಿ ಇವೆ. ಆದರೆ, ಮಧ್ಯ ದ್ರಾವಿಡ ಅಥವಾ ಉತ್ತರ ದ್ರಾವಿಡ ಭಾಷಾ ಗುಂಪಿನಲ್ಲಿ ತುಳುವನ್ನು ಗುರುತಿಸಿಕೊಳ್ಳಲು ಅನುಕೂಲವಾದ ಯಾವುದೇ ಸಮಾನ ಭಾಷಿಕಾಂಶಗಳು ದೊರೆಯುವುದಿಲ್ಲ ದಕ್ಷಿಣ ದ್ರಾವಿಡ ಭಾಷೆಯ ಉಪಗುಂಪಿನ ಸದಸ್ಯ ಭಾಷೆಯಾಗಿ ತುಳುವನ್ನು ಪರಿಗಣಿಸುವುದಕ್ಕೆ ತುಳು ಮತ್ತು ಇತರ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಸಮಾನವಾಗಿರುವ ಹೊಸ ಅನ್ವೇಷಣೆಗಳಾದ ಈ ಕೆಳಗಿನ ಸಮಾನ ಭಾಷಿಕಾಂಶಗಳು ಆಧಾರವಾಗಿವೆ.

೧. ಮೂಲದ್ರಾವಿಡದ ಪದಾದಿಯ *ಚ್‌-ಲೋಪಗೊಳ್ಳುವುದು (೧).

೨. ಮೂಲದ್ರಾವಿಡದ *ಉ ಉ ಮತ್ತು ಉ್‌ಗಳಾಗಿ ಒಡೆದಿರುವುದು (೨)

೩. ಇ/ಎ ಮತ್ತು ಉ/ ಒ ಸ್ವರ ವ್ಯತ್ಯಯ (೩)

೪. ಸ್ತ್ರೀ ವರ್ಗದ ಸೃಷ್ಟಿ (೭)

೫. ಉತ್ತಮ ಪುರುಷ ಏಕವಚನ ಮತ್ತು ಬಹುವಚನ ವ್ಯಾವರ್ತಕ ಸರ್ವನಾಮದಲ್ಲಿ ಮೂಲದ್ರಾವಿಡದ *ಯ> ಎ ಬದಲಾವಣೆ (೧೦)

೬. ನಕಾರಾತ್ಮಕ ಕೃದಂತಕ್ಕೆ ದಂತ್ಯ ಭೂತಕಾಲ ಸೂಚಕ ಪ್ರತ್ಯಯದ ಸೇರ್ಪಡೆ (೨೪, ೨೫). ತುಳು ಮತ್ತು ದಕ್ಷಿಣ ದ್ರಾವಿಡ ಭಾಷೆಗಳು ಸಮಾನವಾಗಿ ಉಳಿಸಿಕೊಂಡಿರುವ ಸಮಾನ ಭಾಷಿಕಾಂಶಗಳು ಇದಕ್ಕೆ ಇನ್ನಷ್ಟು ಆಧಾರವನ್ನು ನೀಡುತ್ತವೆ. (ಕೆಲವು ಸಂದರ್ಭಗಳಲ್ಲಿ ಒಂದು ಲಕ್ಷಣವನ್ನು ಉಳಿಸಿಕೊಂಡುದೋ ಅಥವಾ ಅದು ಹೊಸ ಅನ್ವೇಷಣೆಯೋ ಎಂದು ನಿರ್ದಿಷ್ಟವಾಗಿ ಹೇಳುವುದು ಅಸಾಧ್ಯ)

೧. ಬಹುವಚನ ಸೂಚಕದಲ್ಲಿ ಐಚ್ಛಿಕದ ಗುಣ (೮)

೨. ಮೂಲದ್ರಾವಿಡದಿಂದ ತೃತೀಯ ವಿಭಕ್ತಿ ಪ್ರತ್ಯಯ ಒಟು/ಓಟು (೯)

೩. ಭೂತ ಧಾತುವಿನ ಸಂರಚನೆ (೧೩, ೨೨.)

೪. ಮೂಲ ದ್ರಾವಿಡದ *ಪ್ಪ್‌ಭೂತೇತರ ಸೂಚಕದ ವ್ಯಾಪಕ ಬಳಕೆ (೧೪.೧೫)

೫. ನಿಷೇಧಾರ್ಥಕ ಸಂರಚನೆ (೧೭)

೬. ನಿರ್ಬಂಧ ಸೂಚಕಗಳ ಸಂರಚನೆ (೧೮,೭)

೭. ಇಚ್ಛಾರ್ಥಕ (೧೯)

೮. ಪ್ರೇರಣಾರ್ಥಕ (೨೦) ಇತ್ಯಾದಿ.

ಇನ್ನೊಂದು ಗುರುತಿಸಬಹುದಾದ ಸಂಗತಿ ಏನೆಂದರೆ, ದ್ರಾವಿಡ ಭಾಷೆಗಳ ನಿಷ್ಪತ್ತಿ ಕೋಶದಲ್ಲಿ (ಡ್ರಾವಿಡಿಯನ್ ಎಟಿಮೊಲೋಜಿಕಲ್ ಡಿಕ್ಷ್ನರಿ) ಸುಮಾರು ೨೧೦ ಉಲ್ಲೇಖಗಳಲ್ಲಿ ತುಳು ಶಬ್ದಗಳಿಗೆ ಸಂವಾದಿ ಶಬ್ದಗಳು ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಮಾತ್ರ ಇವೆ. (ಉದಾ. ೯೬, ೯೮, ೧೪೫, ೧೭೦, ೧೭೬, ೩೮೯, ೬೯೭, ೭೨೬, ೮೫೪, ೧೦೦೨, ೧೨೧೩, ೧೬೭೭, ೨೯೩೬, ೨೯೪೦, ೩೬೭೧, ೩೭೮೬, ೪೪೦೩, ೪೫೫೭, ೪೫೬೬). ಇತರ ಯಾವುದೇ ಉಪಗುಂಪುಗಳ ಜೊತೆಗೆ ಪ್ರತ್ಯೇಕವಾಗಿ ತುಳು ಅಷ್ಟು ಸಮಾನ ಅಂಶಗಳನ್ನು ಹೊಂದಿಲ್ಲ. ಈ ಎಲ್ಲ ಆಧಾರಗಳು ತುಳು ದ್ರಾವಿಡ ದಕ್ಷಿಣ ಉಪಗುಂಪಿಗೆ ಸೇರಿದ ಭಾಷೆ ಎಂಬುದನ್ನು ಸಾಬೀತು ಪಡಿಸುತ್ತವೆ. ಇದರ ಜೊತೆಗೆ, ಉದಾ. ಮೂಲದ ವರ್ತ್ಸ್ಯಧ್ವನಿಮಾಗಳು ತಾಲವ್ಯಗಳಾಗುವಂತಹ ಬೆಳವಣೆಗೆ (ತುಳು ಮತ್ತು ಕುಇ-ಕುವಿ-ಪೆಂಗೊ-ಮಂಡ:  ೬) (ii). ಮಧ್ಯಮ ಪುರುಷ ಸರ್ವನಾಮಗಳಲ್ಲಿ ಪದಾದಿಯ ನ್‌ ಲೋಪಗೊಳ್ಳುವುದು (ತುಳು ಮತ್ತು ಮಧ್ಯ ದ್ರಾವಿಡ: ೧೦), ಮೂಲ ದ್ರಾವಿಡದ *-ಕಳ್‌ ಮತ್ತು *-ಳ್‌ ಇವುಗಳಿಂದ ನಪುಂಸಕ ಬಹುವಚನ ಸುಚಕದ ಉಪಆಕೃತಿಮಾಗಳಿರುವುದು (ತುಳು ಮತ್ತು ಕೊಲಾಮಿ-ಪರ್ಜಿ ; ೮) ಮತ್ತು ಶಾಬ್ದಿಕ ವಿಶೇಷಣಗಳಲ್ಲಿ – ಇ ವಿಶೇಷಣ ಸೂಚಕ (ತುಳು, ತೆಲುಗು ಮತ್ತು ಕೊಂಡ-ಕುಇ-ಕುವಿ; ೨೫) ಈ ಮೊದಲಾದ, ತುಳು ಮತ್ತು ಮಧ್ಯ ದ್ರಾವಿಡ ಭಾಷೆಗಳ ನಡುವಿನ ಸಾಮ್ಯತೆಗಳು ಈ ಭಾಷೆಗಳಲ್ಲಿ ಸ್ವತಂತ್ರವಾಗಿ ಉಳಿದುಕೊಂಡ ಅಥವಾ ಸಮಾನಾಂತವಾಗಿ ಬೆಳವಣಿಗೆಯಾದ ಅಂಶಗಳು ಎಂಬುದನ್ನೂ ಉಲ್ಲೇಖಿಸಬೇಕು. ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ, ಮಧ್ಯದ್ರಾವಿಡದ ಯಾವುದೇ ಉಪಗುಂಪುಗಳ ಜೊತೆಗೆ ತುಳು ಹೊಂದಾಣಿಕೆ ಮಾಡಿಕೊಳ್ಳದಿರುವುದನ್ನು ಸೂಚಿಸುತ್ತದೆ.

೨೭. ತುಳು ದಕ್ಷಿಣ ದ್ರಾವಿಡ ಭಾಷೆ ಎಂಬುದಾಗಿ ಸ್ಥಿರಗೊಂಡ ಬಳಿಕ ನಾವೀಗ ಆ ಉಪಗುಂಪಿನಲ್ಲಿ ತುಳುವಿನ ಸ್ಥಾನವೇನು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ತುಳು ಇತರ ದಕ್ಷಿಣ ದ್ರಾವಿಡ ಭಾಷೆಗಳಂತೆ ನಿರ್ದಿಷ್ಟವಾಗಿ ಹೊಸ ಬದಲಾವಣೆಗಳಿಗೆ ಒಳಗಾಗಿಲ್ಲ. ಉದಾ. ತಮಿಳು-ಮಲಯಾಳಂ-ಕೊತ-ತೊದ-ಕೊಡಗು ಮತ್ತು ಕನ್ನಡ ಇವು ಒಂದು ಗುಂಪಾಗಿ ಹೊಸ ಬದಲಾವಣೆಗಳಿಗೆ ಒಳಗಾದಂತೆ ತುಳು ಒಳಗಾಗಿಲ್ಲ. ಅವುಗಳು: ೧). ಮೂಲದ್ರಾವಿಡದ *-ಳ್‌ಗೆ ಬದಲಿಯಾಗಿ *ಕಳ್‌ ಉಪ ಆಕೃತಿಮಾದ  ವಿಸ್ತರಣೆ (೮). ೨). ಮ್‌/ನ್‌ಗಳಿಂದ ಅಂತ್ಯಗೊಳ್ಳುವ ನಾಮಪದಗಳಿಗೆ ಮಾತ್ರ ಮೂಲದ್ರಾವಿಡದ ಪ್ರಥಮೇತರ ವಿಭಕ್ತಿ ಸೂಚಕ *ತ್ತ್‌ ಬಳಕೆ (೯). ೩). ಐದು ಮತ್ತು ಎಂಟು ಸಂಖ್ಯಾವಾಚಕ ಪದಗಳಲ್ಲಿ ದಂತ್ಯ ತದ್ಧಿತ ಪ್ರತ್ಯಯದ ಸೇರ್ಪಡೆ ಮತ್ತು ಮೂಲದ್ರಾವಿಡದ *ಚೊನ್‌ಪತ್‌’ತೊಂಬತ್ತು ಲೋಪಗೊಂಡಿದ್ದು (೧೧) ಮತ್ತು ೪). ನಕಾರಾತ್ಮಕ ಸೂಚಕ *-ಆ- ಶೂನ್ಯಧ್ವನಿಮಾವಾಗಿ ಬದಲಾದದ್ದು (೧೫). ಎಲ್ಲಕ್ಕಿಂತ ಹೆಚ್ಚಾಗಿ ಪ್ರೇರಣಾರ್ಥಕ-ಸಕರ್ಮಕ ಕ್ರಿಯಾಪದಗಳ ರೂಪುಗೊಳ್ಳುವಿಕೆಯಲ್ಲಿ ಇತರ ಎಲ್ಲ ದಕ್ಷಿಣ ದ್ರಾವಿಡ ಭಾಷೆಗಳಿಗಿಂತ ತುಳು ವಿಭಿನ್ನವಾಗಿದ್ದು (೧೨) ಇತರ ಭಾಷೆಗಳಲ್ಲಿ ಕ್ರಿಯಾ ಸೂಚಿ ನಾಮ ವಿಶೇಷಣಗಳಲ್ಲಿ -ಅ ಇದ್ದರೆ, ತುಳು ಇದಕ್ಕೆ ಬದಲಿಯಾಗಿ ನಾಮ ವಿಶೇಷಣ ಸೂಚಕ-ಇ ಯನ್ನು ಹೊಂದಿರುವುದು (೨೫) ಇತ್ಯಾದಿ. ಹಾಗಾಗಿ ಇನ್ನುಳಿದ ದಕ್ಷಿಣ ದ್ರಾವಿಡ ಭಾಷೆಗಳು ಹೊಸ ಅನ್ವೇಷಣೆಗಳನ್ನು ಒಳಗೊಳ್ಳುವ ಮೊದಲೇ ತುಳು ಅವುಗಳಿಂದ ಪ್ರತ್ಯೇಕಗೊಂಡಿತ್ತೆಂದು ನಾವು ತೀರ್ಮಾನಿಸಬಹುದಾಗಿದೆ. ಅಂದರೆ, ಮೂಲ ದಕ್ಷಿಣ ದ್ರಾವಿಡ ಭಾಷೆಗಳಿಂದ ತುಳು ಮೊದಲು ಪ್ರತ್ಯೇಕ ಭಾಷೆಯಾಗಿ ಕವಲೊಡೆಯಿತು ಮತ್ತು ಇನ್ನುಳಿದ ಭಾಷೆಗಳು ಕೆಲವು ಅವಧಿಯವರಗೆ ಅವುಗಳು ಜೊತೆಯಾಗಿದ್ದವು.

೨೮. ತುಳು, ವಿಶೇಷವಾಗಿ ಕನ್ನಡದ (ಕೊಡಗಿನ ಜೊತೆಗೂ) ಜೊತೆಗೆ ಸಮಾನವಾಗಿ ಕೆಲವು ಹೊಸ ಅನ್ವೇಷಣೆಗಳನ್ನು ರೂಪಿಸಿಕೊಂಡಿದೆ. ಅವುಗಳು: ೧). ಪದಾಂತ್ಯದಲ್ಲಿ ಮೂಲದ್ರಾವಿಡದ *ಮ್‌ವನ್ನು ಲೋಪಗೊಳಿಸಿದ್ದು (ಕನ್ನಡ ಮತ್ತು ತುಳು, ೪), ೨). ಮೂಲದ್ರಾವಿಡದ *ವ್‌>ಬ್‌ಆಗಿ ಪರಿವರ್ತನೆಗೊಂಡಿದ್ದು (ತುಳು, ಕನ್ನಡ ಮತ್ತು ಕೊಡಗ ದಂತ್ಯ ಮತ್ತು ಮೂರ್ಧ್ಯನ್ಯಗಳ ನಡುವೆ ಪೂರ್ವಸ್ವರಗಳು ಪಶ್ಚಸ್ವರಗಳಾಗಿ ಪರಿವರ್ತನೆ ಪಡೆದಿದ್ದು (ತುಳು ಮತ್ತು ಕೊಡಗು, ೬ (iv). ಉಳಿದಂತೆ, ತುಳುವು ಕನ್ನಡ ಅಥವಾ ಕೊಡವಕ್ಕೆ ಹತ್ತಿರವಲ್ಲವಾದ್ದರಿಂದ, ಈ ನೆರೆಯ ಭಾಷೆಗಳಲ್ಲಿ ಇರುವ ಸಾಮ್ಯತೆಗಳನ್ನು ಪ್ರಾದೇಶಿಕ ಧ್ರುವೀಕರಣ ಎಂದು ವಿವರಿಸಬಹುದಾಗಿದೆ. ತುಳು ಮತ್ತು ಕನ್ನಡಗಳಲ್ಲಿ ಸಮಾನವಾಗಿರುವ ಸುಮಾರು ಎಪ್ಪತ್ತು ಶಾಬ್ದಿಕ ಸಂಗತಿಗಳಿಗೂ ಇದೇ ವಿವರಣೆಯನ್ನು ಕೊಡಬಹುದಾಗಿದೆ. (ಕೆಲವು ಕಡೆಗಳಲ್ಲಿ ಕೊಡವದಲ್ಲೂ ಕೂಡಾ) (ಉದಾ. ೮೦,೧೦೧, ೩೨೩, ೩೯೪, ೭೮೮, ೮೮೦, ೧೩೬೨, ೧೯೩೭, ೨೩೨೯, ೩೦೯೨, ೩೫೯೩, ೩೬೩೯, ೩೮೭೩, ೪೪೦೯, ೪೪೭೬೦, ಸಂಖ್ಯಾ ಸೂಚಕ ಪ್ರತ್ಯಯ ತು. ಅನೆ:ಕ. ಅನೆಯ ಮತ್ತು ತದ್ಧಿತ ಪ್ರತ್ಯಯ ತು. – (ಇ) ಕ್ : ಕ. ಇದೆ (೩೭೯೬, ೪೨೯೭, ೪೩೩೦, ೪೪೨೫, ೪೪೭೯, ಇತ್ಯಾದಿ.)

೨೯. ಎಂ.ಬಿ. ಎಮಿನೋ (೧೯೬೭:೩೭೦) ಅವರು ಪ್ರತಿಯೊಂದು ಭಾಷೆಗಳ ಬೆಳವಣಿಗೆಯನ್ನು ಅಭ್ಯಾಸ ಮಾಡಿದ ಬಳಿಕ ತುಳುವನ್ನು ಹೊರತುಪಡಿಸಿ ದಕ್ಷಿಣ ದ್ರಾವಿಡ ಭಾಷೆಗಳು ಕವಲೊಡೆದ ರೇಖಾಚಿತ್ರವನ್ನು ನೀಡಿದ್ದಾರೆ. ನಾವೀಗ ಈ ರೇಖಾಚಿತ್ರದಲ್ಲಿ ತುಳುವನ್ನು ಸೇರಿಸಿ ರೇಖಾಚಿತ್ರವನ್ನು ಈ ಕೆಳಗಿನಂತೆ ಪೂರ್ಣಗೊಳಿಸಬಹುದು.

01_42_TSC-KUH

ಟಿಪ್ಪಣಿಗಳು

೧. ಭ. ಕೃಷ್ಣಮೂರ್ತಿ ಅವರು ಹೇಳುತ್ತಾರೆ, ”ತುಳು ಮತ್ತು ಬ್ರಾಹುಇ ಅವುಗಳೇ ಸ್ವತಂತ್ರವಾಗಿ ನಿಲ್ಲುತ್ತವೆ. ತುಳು ಮೂಲ ಮಧ್ಯ ದ್ರಾವಿಡದಿಂದ ಕವಲೊಡೆದಿರುವ ಭಾಷೆ ಎನ್ನುವುದಕ್ಕೆ ಗಮನಾರ್ಹವಾದ ಸಮರ್ಥನೆಗಳು ಕಂಡುಬರುತ್ತವೆ ” (೧೯೬೧:೨೭೨)

೨. ”ದಕ್ಷಿಣ ದ್ರಾವಿಡ ಮತ್ತು ಮಧ್ಯದ್ರಾವಿಡದಕ್ಕೆ ಸಂಬಂಧಿಸಿದಂತೆ, ತುಳುವಿನ ಸ್ಥಾನವಿವೇಚನೆಯನ್ನು ಮಾಡಲು ವಿವರವಾದ ಅಧ್ಯಯನದ ಅಗತ್ಯವಿದೆ. ಭಾಷೆ ಮತ್ತು ಅದರ ಉಪಭಾಷೆಗಳ ಬಗೆಗೆ ಬೇಕಾಗುವಷ್ಟು ಉತ್ತಮ ಸಾಕ್ಷ್ಯಗಳು ದೊರೆತಾಗ ಇಂತಹ ಅಧ್ಯಯನ ಸಾಧ್ಯವಾದೀತು. ಇದೇ ವೇಳೆ, ತುಳು ದಕ್ಷಿಣ ದ್ರಾವಿಡ ಭಾಷಾಗುಂಪಿಗೆ ಸೇರಿದ ಭಾಷೆ ಅಲ್ಲ ಅನ್ನುವ ಸಾಮಾನ್ಯ ಅಭಿಪ್ರಾಯವನ್ನು ಒಪ್ಪಬಹುದು. ಮೇಲ್ನೋಟಕ್ಕೇ ಕಾಣುವಂತೆ ತುಳುವಿನ ಭೂತಕಾಲದ ನಿರೂಪಣೆ ಈ ಅಂಶವನ್ನು ತೋರಿಸಿಕೊಡುತ್ತದೆ.

೩. ತೆಲುಗು ಕೂಡಾ ಈ ಬದಲಾವಣೆಯನ್ನು ತೋರಿಸುತ್ತದೆ (ನೋಡಿ ಟಿ. ಬರೋ ೧೯೬೮: ೧೫೦-೭೭; ಕೃಷ್ಣಮೂರ್ತಿ ೧೯೬೧, ೪.೯.) ತೆಲುಗು ಇತರ ಮಧ್ಯದ್ರಾವಿಡ ಭಾಷೆಗಳೊಂದಿಗೆ ಅನೇಕ ಭಾಷಿಕಾಂಶಗಳನ್ನು ಹೊಂದಿದೆಯಾದ್ದರಿಂದ, ಅಲ್ಲದೆ ತೆಲುಗು ಮಧ್ಯದ್ರಾವಿಡದ ಉಪಗುಂಪಿಗೆ  ಸೇರಿದ ಭಾಷೆ ಎನ್ನುವುದು ಈಗ ಬಹಳ ಸ್ಪಷ್ಟವಾಗಿರುವುದರಿಂದ, (ಪಿ.ಎಸ್. ಸುಬ್ರಹ್ಮಣ್ಯಂ ೧೯೬೯), ಈ ರೀತಿಯಲ್ಲಿ ತೆಲುಗು ಮತ್ತು ಮಧ್ಯ ದ್ರಾವಿಡ ಭಾಷೆಗಳ ನಡುವೆ ಕಂಡುಬರುವ ಸಾಮ್ಯತೆಗೆ ಪ್ರಾದೇಶಿಕ ಧ್ರುವೀಕರಣ ಕಾರಣವೆನ್ನಬಹುದು.

೪. ನೋಡಿ ಬಿಹೆಚ್. ಕೃಷ್ಣಮೂರ್ತಿ, ೧೯೫೮ಬಿ.

೫. ಕೃಷ್ಣಮೂರ್ತಿ ೧೯೫೮, ೭; ಶಂಕರ ಭಟ್‌೧೯೬೮. ಶಂಕರ ಭಟ್ಟರ ಪ್ರಕಾರ, ಕರಾವಳಿ ತೀರದ ಉತ್ತರ ಭಾಗದ ಉದಿಯಾವರದ ಬ್ರಾಹ್ಮಣೇತರ ಭಾಷಿಕ ಪ್ರಭೇದಗಳಲ್ಲಿ (ಉಡುಪಿ ಪಟ್ಟಣವನ್ನು ಒಳಗೊಂಡು) *ಳ್‌> ಲ್‌ಉದಾ., ಬಾಳೆ್/ಬಾರೆ್/ಬಾಳೆ್ ‘ಬಾಳೆಹಣ್ಣು (:ತ. ವಾೞೈ; ೪೪೦೩);ಪುಳಿ/ಪುರಿ/ಪುಲಿ ‘ಹುಳು (: ತ. ಪುಳು ; ೩೫೩೭); ಪೊರ್ತು/ಪೋಳ್ತು/ಪೊಲ್ತು ‘ಹೊತ್ತು (:ತ ಪೊಳುತು; ೩೭೨೪), ಬೂಳು/ಬೂರು/ಊಲು ‘ಬೀಳು (:ತ. ವೀಳ್; ೪೪೫೭)

೬. ‘ಮೂಲತಃ ಪದಾಂತ್ಯದಲ್ಲಿ ‘ಮ್‌’ ಉಳ್ಳ ‘ಪ್ರಕೃತಿಗಳು’ ಎಂದರೆ ಆಕೃತಿಮಾ ಧ್ವನಿಮಾ ಸಂಬಂಧಿ ಭಿನ್ನತೆಗಳನ್ನು ತೋರಿಸುವುದನ್ನು ಅನುಸರಿಸಿ ಪುನರ್ ರಚಿಸಬೇಕಾದ ಪ್ರಕೃತಿ ರೂಪಗಳೇ (ಧಾತುರೂಪಗಳೇ) ಹೊರತಾಗಿ ಮೂಲದ್ರಾವಿಡದಲ್ಲಿ ಅಥವಾ ಅದಕ್ಕಿಂತಲೂ ಪೂರ್ವದಲ್ಲಿದ್ದ ‘ಮ್‌’ನಲ್ಲಿ ಅಂತ್ಯವಾಗುವ ಪ್ರಕೃತಿಗಳು ಎಂದಲ್ಲ. ಇಲ್ಲಿ  ತಳಸ್ತರದಲ್ಲಿರುವ ಪ್ರಕೃತಿಗಳನ್ನು ಪುನರ್ ರಚಿಸುವುದರಿಂದ ಮತ್ತು ಬದಲಾವಣೆಗಳನ್ನು ಆಕೃತಿಮಾ-ಧ್ವನಿಮಾ ನಿಯಮಗಳಿಗೆ ಅನುಸಾರವಾಗಿ ವಿವರಿಸುವುದರಿಂದ ವ್ಯಾಕರಣವು ಭಾಷೆಯ ಸಂರಚನೆಯನ್ನು ತಾರ್ಕಿಕವಾಗಿ ಅನಾವರಣಗೊಳಿಸಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ವ್ಯಾಕರಣವು ಅಪವಾದಗಳಿಂದ ಕೂಡಿದ ಮತ್ತು ಶಬ್ದರೂಪಗಳು ತುಂಬಿದ ಒಂದು ಮುದ್ದೆಯಾಗುತ್ತದೆ.

೭. ದ್ರಾವಿಡದಲ್ಲಿ ಎನ್‌ಪಿಪಿ ಸರಣಿಯನ್ನು ಪುನರ್ ರಚಿಸಬೇಕಾಗಿರುವ ಪದನಿಷ್ಪತ್ತಿ ಗುಂಪುಗಳ ಯಾದಿಗಾಗಿ ಮತ್ತು ಈ ಬಗೆಗಿನ ಚರ್ಚೆಗಾಗಿ ನೋಡಿ, ಕುಮಾರಸ್ವಾಮಿ ರಾಜ, ೧೯೬೯.

೮. ದ್ರಾವಿಡದ ಕಾರಕ-ಸಕರ್ಮಕ ಪ್ರತ್ಯಯಗಳ ಅಧ್ಯಯನಕ್ಕಾಗಿ ನೋಡಿ, ಸುಬ್ರಹ್ಮಣ್ಯಂ ೧೯೭೦, ಅಧ್ಯಾಯ I

೯. ತುಳುವಿನಲ್ಲಿ ನಕಾರಾತ್ಮಕ ಸೂಚಕ ಅ- ಮತ್ತು ಸರ್ವನಾಮ ಪ್ರತ್ಯಯದ ಪದಾದಿಯ ಸ್ವರದ ಮಧ್ಯದಲ್ಲಿ ಯ್‌ ಸೇರಿಕೊಂಡಿದೆ.

೧೦. ಈ ಭಾಷೆಗಳ ನಡುವಿನ ಅಂತರ್ ಸಂಬಂಧಗಳು ಬಹಳ ವಿವರವಾಗಿ ಎಮಿನೋ ಅವರ ೧೯೬೭ರ ಲೇಖನದಲ್ಲಿ ಚರ್ಚಿತವಾಗಿದೆ.

Bibliography

Bloch, Jules, 1954, The Grammatical Structure of Dravidian Languages (Eng. Trans. By R.G. Harshe). Poona : Deccan College

Brigel J., 1872, A Grammar of the Tulu Language, Mangalore

Burrow T. and Emeneau, M.B., 1961, A Dravidian Etymological Dictionary, Oxford : Claredon Press

1968, Ibid, Supplement, Oxford : Clarendon Press.

Caldwell Robert 1856, A Comparative Grammar of the Dravidian or South Indian Family of Language (3rd edn. reprinted 1956), Madras : U. of Madras.

DED = Burrow and Emeneau 1961 , 1968

Emeneau, M.B. 1962, Brahui and Dravidian Comparative Grammar, Berkeley and Los Angeles : U. of California P.

1967, The South Dravidian Languages, JAOS 87 : 365- 413.

1970, Kodagu Vowels. JAOS 90 : 145-58.

Krishnamurti B.H., 1958 a. “Alternations i/e and u/o in South – Dravidian” Lg. 34: 458-68.

1961 Telugu Verbal Bases : A Comparative and Descriptive Study Berkeley and Los Angeles : U of California P.

1969 Konda or Kubi, a Dravidian Language, Hyderabad

Kumaraswami Raja N., 1969, Post Nasal Voiceless Plosives in Dravidian Annamalainagar; Annamalai U.

Mariapa Bhat M. and Shanker Kedilaya A., 1967, Tulu – English Dictionary, Madras.

Ramachandra Rao B., 1966, Social and Local Dialects in Tulu, Journal of the Osmania Universities and Social Sciences, 4 : 45 – 58

1968, ”Verb Morphology of Common Tulu”, Ibid (Golden Jubilee Volume) 67-85.

Ramaswami Aiyar L.V., 1936, “Materials for a Sketch of Tulu Phonology”, IL 6 (Reprint Edition of Volumes 1-15, Vol. 11)84-127.

Shankara Bhat D.N., 1966, “Studies in Tulu”, Bulletin of the Deccan College Research Institute, 25: 11-31.

1967, Descriptive Analysis of Tulu, Poona : Deccan College.

1968, “A Note on PDr. 1 in Tulu”, Linguistic Survey Bulletin 2 : 13-4

Subrahmanyam, P.S., 1968, A Descriptive Grammar of Gondi, Annamalainagar; Annamalai University.

1969a “The Central Dravidian Languages”, Dravidian Linguistics (Seminar Papers); 107 – 34; also JAOS 89 : 739 – 50.

1969b, “The Gender and number Categories in Dravidian”, Journal of the Annamalai University 26 : 79 – 100.

1969c, “The Personal Pronouns in Dravidian”. Bulletin of the Deccan College Research Institute, 28 : 202-17.

1970, Dravidian Verb Morphology (A comparative Study), Annamalainagar.

Colophon : This paper was originally read in the seminar on comparative Dravidian – II which was conducted in September 1969 by the Centre of Advanced Study in Linguistics, Department of Linguistics, Annamalai University.