ತುಳು ಮತ್ತು ತಮಿಳು ಭಾಷೆಗಳೆರಡೂ ಜ್ಞಾತಿ ಭಾಷೆಗಳೆಂಬ ಅಂಶವು ಈಗಾಗಲೇ ನಿರ್ವಿವಾದವಾಗಿ ವೇದ್ಯವಾಗಿರುವ ವಿಷಯವಾಗಿದ್ದು ಈ ಲೇಖನದ ವ್ಯಾಪ್ತಿಯಲ್ಲಿ ಇವೆರಡೂ ಭಾಷೆಗಳ ಜ್ಞಾತಿ ಸಂಬಂಧದ ಸ್ವರೂಪವನ್ನು ಕುರಿತಂತೆ ಈಗಾಗಲೇ ಸ್ಥಾಪಿತವಾಗಿರುವ ದ್ರಾವಿಡ ಭಾಷಾ ಕುಟುಂಬದ ಮಾಹಿತಿಗಳ ಜೊತೆಗೆ, ಈ ಎರಡೂ ಭಾಷೆಗಳ ಇತರ ಸಂಬಂಧಗಳನ್ನು ಕುರಿತಂತೆ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ತುಳು – ತಮಿಳು ಸಾಹಿತ್ಯಿಕ ಸಂಬಂಧ ಅತ್ಯಂತ ಕ್ಷೀಣವಾಗಿ ಲಭಿಸುತ್ತದೆ. ಆದ್ದರಿಂದ ಈ ಲೇಖನದಲ್ಲಿ ಭಾಷಿಕ ಸಂಬಂಧದ ಕಡೆಗೆ ಮಾತ್ರ ಹೆಚ್ಚಿನ ಗಮನವನ್ನು ಕೊಡಲಾಗಿದೆ.

ದ್ರಾವಿಡ ಭಾಷಾ ವರ್ಗವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳ ದಕ್ಷಿಣ ದ್ರಾವಿಡ, ಮಧ್ಯ ದ್ರಾವಿಡ ಮತ್ತು ಉತ್ತರ ದ್ರಾವಿಡಗಳೆಂದು ಕರೆಯಬಹುದು. ತಮಿಳು, ಮಲಯಾಳಂ. ಕನ್ನಡ, ತುಳು, ಕೋಟ, ತೋಡ, ಕೊಡಗು ಇತ್ಯಾದಿ ಭಾಷೆಗಳು ದಕ್ಷಿಣ ದ್ರಾವಿಡ ಉಪವರ್ಗಕ್ಕೆ ಸೇರಿದವುಗಳು. ತೆಲುಗು, ಗೋಂಡಿ, ಕೊಂಡ, ಪೆಂಗೊ, ಮಂಡ, ಕುಈ, ಕುವಿ, ನಾಯ್ಕಿ, ಪಾರ್ಜಿ, ಗದಬ ಇತ್ಯಾದಿ ಭಾಷೆಗಳು ಮಧ್ಯ ದ್ರಾವಿಡಕ್ಕೆ ಸೇರಿದವುಗಳು, ಕುಡುಖ್, ಮಲ್ತೊ ಹಾಗೂ ಬ್ರಾಹೂ ಈ ಭಾಷೆಗಳು ಉತ್ತರ ದ್ರಾವಿಡ ಉಪವರ್ಗಕ್ಕೆ ಸೇರಿರುವ ಭಾಷೆಗಳು.

ಪಂಚದ್ರಾವಿಡ ಭಾಷೆಗಳಾದ ತಮಿಳು, ಮಲಯಾಳಂ, ತೆಲುಗು, ಕನ್ನಡ ಮತ್ತು ತುಳುಗಳಲ್ಲಿ ತಮಿಳು ಭಾಷೆಯ ತೀರ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದ್ದರೆ ತುಳು ಭಾಷೆಗೆ ಲಿಪಿ ಇಲ್ಲವೆಂದು ಬಗೆದು ಕನ್ನಡ ಭಾಷೆಯ ಲಿಪಿಯನ್ನು ಬಳಸಲಾಗುತ್ತಿದೆ. ಆದರೆ ಮಲಯಾಳಂ ಲಿಪಿಯನ್ನೇ ಹೋಲುವ ಲಿಪಿಯಲ್ಲಿ ಕೆಲವೊಂದು ತುಳು ಕಾವ್ಯಗಳು ಸಿಕ್ಕಿದ್ದು ಆ ಲಿಪಿಯನ್ನೇ ಈತ ತುಳುಲಿಪಿಯೆಂದು ಕರೆಯಲಾಗುತ್ತಿದೆ. ತುಳು ಭಾಷೆಯಲ್ಲಿರುವ ಒಂದೆರಡು ಸ್ವರಗಳನ್ನು ಕನ್ನಡ ಲಿಪಿಯಲ್ಲಿ ಬಳಸಲು ಕಷ್ಟ. ಕಾರಣ ಈ ಸ್ವರಗಳು ಕನ್ನಡದಲ್ಲಿ ಇಲ್ಲ. ಆದ ಕಾರಣ ಕನ್ನಡ ಲಿಪಿಯನ್ನು ಸ್ವಲ್ಪ ಮಾರ್ಪಡಿಸಿ ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ‘ಯಾವ್‌ಬರ್ಪೆ’ ಎಂಬುದನ್ನು ಕನ್ನಡದಲ್ಲಿ ಯ್‌+ ಆ+ನ್ ಬ್+ಅ+ರ್+ಪ್+ಎಂದು ಧ್ವನಿಗಳನ್ನು ಬೇರ್ಪಡಿಸಬೇಕಾಗುತ್ತದೆ. ಆಗ ತುಳುವಾಕ್ಯದ ಅರ್ಥ ಬರುವಂತಿಲ್ಲ. ತುಳುವಿನಲ್ಲಿ ಸರಿಯಾದ ಅರ್ಥ ಬರುವ ಹಾಗೆ ಕನ್ನಡದ ಲಿಪಿಯನ್ನು ಸ್ವಲ್ಪ ಬದಲಾಯಿಸಿ ಬರೆಯಬೇಕಾಗುತ್ತದೆ. ಅದಕ್ಕೆ ಇಂಗ್ಲಿಷ್‌ನಲ್ಲಿ ‘Modified Kannada Script’ ಎಂದು ಕರೆಯಬಹುದು. ಆದ್ದರಿಂದ ತುಳುವಿನಲ್ಲಿ ಅದನ್ನು ಯ್+ಆ+ನ್+ಅ ಬ+ಅ+ರ್+ಪ್+ಎ ಎಂಬ ಧ್ವನಿಗಳಾಗಿ ಬರುವುದರಿಂದ ಇದನ್ನು ‘ಯಾನ್ ಬರ್ಪೆ’ ಎಂದು ಕನ್ನಡ ಲಿಪಿಯನ್ನು ಮಾರ್ಪಡಿಸಿ ಬರೆದರೆ ಮಾತ್ರ ಸರಿಯಾದ ಅರ್ಥವನ್ನ ಕೊಡುತ್ತದೆ. ಈ ರೀತಿ ಬರೆಯತೊಡಗಿದ್ದರೆ ಮಾತ್ರ ನಮಗೆದುರಾಗುವ ಕೆಲವೊಂದು ಗೊಂದಲಗಳು ದೂರವಾಗಲು ಸಾಧ್ಯ. ಇಲ್ಲದಿದ್ದರೆ ತುಳುವೇತರ ಭಾಷಿಕರಿಗೆ ಕನ್ನಡ ಲಿಪಿಯಲ್ಲಿ ಬರೆದ ತುಳುಭಾಷೆಯನ್ನು ಓದುವಾಗ ತೊಡಕುಂಟಾಗುವುದು ಸಹಜ.

ತುಳುವಿನಲ್ಲಿರುವ ಈ ಎರಡು ಸ್ವರಗಳಾದ ಅ ಮತ್ತು ಎ ತಮಿಳಿನಲ್ಲಿಲ್ಲ. ಆದರೆ ತುಳುವಿನಲ್ಲಿ ಅ ಉಚ್ಚರಿಸಲ್ಪಡುವ ಕಡೆ ಬರವಣಿಗೆಯಲ್ಲಿ ಉ ಅಂತಲೇ ಬರೆಯುತ್ತಾರೆ. ತಮಿಳಿನಲ್ಲಿ ಸಹಜ ಳ್ ಮತ್ತು ವಿಶೇಷ ಳ್ ಧ್ವನಿಮಾಗಳಿದ್ದರೆ ತುಳುವಿನಲ್ಲಿ ಸಹಜ ಳ್ ಧ್ವನಿಮಾ ಮಾತ್ರ ಇದೆ. ತಮಿಳಿನ ಸಹಜ ಕ ಮತ್ತು ವಿಶೇಷ ರ್ ಧ್ವನಿಮಾಗಳ ಬದಲಿಗೆ ತುಳುವಿನಲ್ಲಿ ರ್‌ಧ್ವನಿಮಾ ಮಾತ್ರ ಇದೆ. ತಮಿಳಿನಲ್ಲಿ ಎರಡು ಬಗೆಯ ‘ನ್’ ಧ್ವನಿಮಾಗಳಿದ್ದು ತುಳುವಿನಲ್ಲಿ ಒಂದು ಬಗೆಯ ‘ನ್’ ಧ್ವನಿಮಾ ಮಾತ್ರ ಬಳಕೆಯಲ್ಲಿದೆ. ತಮಿಳಿನಲ್ಲಿರುವ ವರ್ಣಮಾಲೆ ವ್ಯವಸ್ಥೆ ಬಹಳ ಸರಳ ಎಂದು ಹೇಳಬಹುದು. ಅಘೋಷ ವ್ಯಂಜನಗಳು ಮಾತ್ರ ಬರವಣಿಗೆಯಲ್ಲಿದ್ದು ಅವು ಪದಮಧ್ಯ ಹಾಗೂ ಪದಾಂತ್ಯಗಳಲ್ಲಿ ಘೋಷ ವ್ಯಂಜನಗಳಾಗಿ ಉಚ್ಚರಿಸಲ್ಪಡುತ್ತವೆ. ತಮಿಳು ಹಾಗೂ ತುಳು ವರ್ಣಮಾಲೆಗಳನ್ನು ಗಮನಿಸುವಾಗ ಅವುಗಳೊಳಗಿನ ಸಂಬಂಧ ಜಾಸ್ತಿ ಇಲ್ಲವೆಂದೇ ಹೇಳಬಹುದು. ಕಾರಣ ಕನ್ನಡ, ತುಳು, ತೆಲುಗು ಭಾಷೆಗಳು ಸಂಸ್ಕೃತ ವರ್ಣಮಾಲೆಯ ಪದ್ಧತಿಯನ್ನನುಸರಿಸಿವೆ.

ಪಂಚದ್ರಾವಿಡ ಭಾಷೆಗಳಲ್ಲಿ ತುಳು – ತಮಿಳು ಭಾಷೆಗಳ ನಡುವೆ ನಿಕಟ ಸಂಬಂಧವಿದೆ. ಶತಶತಮಾನಗಳಿಂದ ಬೆಳೆದು ಬಂದ ಸಂಬಂಧವಿದು ಎಂದು ಹೇಳಬಹುದು. ತುಳು – ತಮಿಳು ಭಾಷೆಗಳಲ್ಲಿ ಅನೇಕ ಸಮಾನ ಪದಗಳು (ಪಾಂಬು, ಕಲ್ಲ್, ಮಣ್ಣ್, ಎಲಿ, ನಾಯಿ, ಕೈ, ಜಲ್ಲಿ ಇತ್ಯಾದಿ) ಬಳಕೆಯಲ್ಲಿದ್ದು ಈ ಎರಡು ಭಾಷೆಗಳ ನಡುವೆ ಉತ್ತಮ ಸಂಬಂಧ ಬೆಳೆದುಬರುವಲ್ಲಿ ಸಹಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ತುಳು ಹಾಗೂ ತಮಿಳು ಭಾಷೆಗಳಲ್ಲಿಲ ಇದೀಗ ಉಳಿದುಕೊಂಡು ಬಂದಿರುವ ಹಾಗೂ ಪರಿವರ್ತನೆಯಾಗಿರುವ ಕೆಲವೊಂದು ಮೂಲದ್ರಾವಿಡ ರೂಪಗಳನ್ನು (ಧ್ವನಿಮಾ ಹಾಗೂ ಆಕೃತಿಯಾ ವ್ಯವಸ್ಥೆಗಳಲ್ಲಿ) ಈ ಲೇಖನದಲ್ಲಿ ಕೊಡಲು ಪ್ರಯತ್ನಿಸಲಾಗಿದ್ದು ಈ ಎರಡೂ ಭಾಷೆಗಳ ಜ್ಞಾತಿ ಸಂಬಂಧ ತಿಳಿಯಲು ಸಹಕಾರಿಯಾಗಿವೆ :

೧. ಮೂಲ ದ್ರಾವಿಡ ಪದಾಂತ್ಯ ಧ್ವನಿಮಾ ‘ಮ್’ ತಮಿಳಿನಲ್ಲಿ ಉಳಿದುಬಂದಿದ್ದು ತುಳುವಿನಲ್ಲಿ ಕಂಡುಬರುತ್ತಿಲ್ಲ. ಉದಾ:

ಮೂಲದ್ರಾವಿಡ: *ಮರಮ್ (ಮ್+ಅ+ರ್+ಅ+ಮ್)

ತಮಿಳು : ಮರಂ (DED 3856)

ತುಳು : ಮರ

೨. ಮೂಲ ದ್ರಾವಿಡದ *ಉ ಧ್ವನಿಮಾ ತುಳುವಿನಲ್ಲಿ ಉ ಮತ್ತು ಅ ಎಂದು ಎರಡು ಧ್ವನಿಮಾಗಳಾಗಿ ಪರಿವರ್ತನೆಗೊಂಡಿವೆ. ಆದರೆ ತಮಿಳಿನಲ್ಲಿ ಇದು ‘ಉ’ ಧ್ವನಿಮಾವಾಗಿಯೂ ಅಲ್ಲದೆ, ಪದಾಂತ್ಯದಲ್ಲಿ ಅ ಉಪಧ್ವನಿಮಾ ವಾಗಿಯೂ ಪರಿವರ್ತನೆಗೊಂಡಿವೆ. ಬರವಣಿಗೆಯಲ್ಲಿ ಮೇಲೆ ತಿಳಿಸಿರುವಂತೆ,

ಉದಾ:

  ‘ಉ’ ‘ಆ್’
ತುಳು: ಕುಡು ಹುರುಳಿ ಕಾರ್ ಕಾಲು
ತಮಿಳು : ಉಣ್ ಉಣ್ಣು ಕಾಲು (ಅ್) ಕಾಲು

೩. ಮೂಲ ದ್ರಾವಿಡದ ಧ್ವನಿಮಾ *ಳ್ ತಮಿಳಿನಲ್ಲಿ ಹಾಗೇನೇ ಉಳಿದುಕೊಂಡು ಬಂದಿದ್ದು ಬ್ರಾಹ್ಮಣ ತುಳು ಉಪಭಾಷೆಯಲ್ಲಿ ಳ್ ಆಗಿಯೂ, ಸಾಮಾನ್ಯ ತುಳುಭಾಷೆಯಲ್ಲಿ ರ್ ಧ್ವನಿಮಾವಾಗಿಯೂ ಪರಿವರ್ತನೆಗೊಂಡಿವೆ. ಉದಾಹರಣೆಗಾಗಿ

 1. ತಮಿಳು : ಉಳ್ಕೆ (DED 598)
  ತುಳು : ಉಳೆ (ಬ್ರಾಹ್ಮಣ ತುಳು ) ಉರೆ (ಸಾಮಾನ್ಯ ತುಳು)

ii. ತಮಿಳು : ವಾಳೈ (DED 4403)
ತುಳು : ಬಾಳೆ (ಬ್ರಾಹ್ಮಣ ತುಳು ) ಬಾಳೆ (ಸಾಮಾನ್ಯ ತುಳು)

೪. ಮೂಲದ್ರಾವಿಡದ ಧ್ವನಿಮಾ *ಳ್ ತಮಿಳಿನಲ್ಲಿ ಹಾಗೇನೇ ಉಳಿದುಕೊಂಡು ಬಂದಿದ್ದು ಬ್ರಾಹ್ಮಣ ತುಳು ಭಾಷೆಯಲ್ಲಿ ಳ್ ಧ್ವನಿಮಾ ವಾಗಿಯೂ, ಸಾಮಾನ್ಯ ತುಳುಭಾಷೆಯಲ್ಲಿ ಲ್ ಧ್ವನಿಮಾವಾಗಿಯೂ ಪರಿವರ್ತನೆಗೊಂಡಿವೆ. ಉದಾಹರಣೆಗಾಗಿ

ತಮಿಳು : ವೆಳ್ ಕ. ಬೆಳಕು

ತುಳು : ಬೊಳ್ಪು (ಬ್ರಾಹ್ಮಣ ತುಳು)
ಬೊಲ್ಪು (ಸಾಮಾನ್ಯ ತುಳು)

೫. ಮೂಲದ್ರಾವಿಡದ ಧ್ವನಿಮಾ *ಣ್ ತಮಿಳು ಹಾಗೂ ಬ್ರಾಹ್ಮಣ ತುಳು ಉಪಭಾಷೆಯಲ್ಲಿ ಹಾಗೇನೇ ಉಳಿದುಕೊಂಡಿದೆ. ಆದರೆ ಸಾಮಾನ್ಯ ತುಳು ಉಪಭಾಷೆಯಲ್ಲಿ ನ್‌ಧ್ವನಿಮಾವಾಗಿ ಪರಿವರ್ತನೆಗೊಂಡಿದೆ.

ಉದಾಹರಣೆಗಾಗಿ:

ತಮಿಳು : ಪಿಣಂ, ಪಿಣನ್ (DED 3420)ಕ.ಹೆಣ

ತುಳು:    ಪುಣ (ಬ್ರಾಹ್ಮಣ ತುಳು)
ಪುನ (ಸಾಮಾನ್ಯ ತುಳು)

೬. ಮೂಲ ದ್ರಾವಿಡದ ಧ್ವನಿಮಾ ‘ಲ್’ ತಮಿಳಿನಲ್ಲಿ ಹಾಗೇ ಉಳಿದು ಕೊಂಡಿದ್ದು ತುಳುವಿನಲ್ಲಿ ಮಾತ್ರ ‘ರ್’ ಧ್ವನಿಮಾವಾಗಿ ಬದಲಾವಣೆಗೊಂಡಿದೆ.

ಉದಾಹರಣೆಗಾಗಿ:

ತಮಿಳು : ಕಾಲ್ (DED 1238) ಕ.ಕಾಲು

ತುಳು: ಕಾರ್ (ಅ)

ತಮಿಳು : ತಲೈ (DED 2529)ಕ.ತಲೆ

ತುಳು :   ತರೆ

೭. ಮೂಲದ್ರಾವಿಡದ * ಪ್ ಧ್ವನಿಮಾ ತಮಿಳು ತುಳು ಎರಡರಲ್ಲಿಯೂ ಪರಿವರ್ತನೆಗೊಳ್ಳದೆ ಹಾಗೇ ಉಳಿದುಕೊಂಡು ಬಂದಿದೆ. ಉದಾ:

ತಮಿಳು : ಪಾಲ್ ಕ.ಹಾಲು

ತುಳು: ಪೇರ್

೮. ಮೂಲ ದ್ರಾವಿಡದ ಧ್ವನಿಮಾ *ವ್ ತಮಿಳಿನಲ್ಲಿ ಹಾಗೇ ಉಳಿದುಬಂದಿದ್ದು ತುಳುವಿನಲ್ಲಿ ಮಾತ್ರ ‘ಬ್’ ಆಗಿ ಪರಿವರ್ತನೆಗೊಂಡಿದೆ.

ಉದಾ:

ಪದಾದಿಯಲ್ಲಿ:

i. ತಮಿಳು : ವೆರಿನ್, ವೆನ್ (DED 4518) ಕ. ಬೆನ್ನು
ತುಳು : ಬೆರಿ

ii. ತಮಿಳು: ವಿಲೈ ಕ. ಬೆಲೆ
ತುಳು : ಬಿಲೆ

 1. ತಮಿಳು: ವೇಟ್ಟೈ        ಕ.ಬೇಟೆ
  ತುಳು : ಬೋಂಟೆ / ಬೇಂಟೆ

ಪದಮಧ್ಯದಲ್ಲಿ

ತಮಿಳು : ಚೆವಿ (DED 1645)       ಕ.ಕಿವಿ
ತುಳು : ಕೆಬಿ

೯. ಮೂಲ ದ್ರಾವಿಡದ *ರ್ ಧ್ವನಿಮಾ ತಮಿಳಿನಲ್ಲಿ ಬದಲಾಗದೆ ಹಾಗೆಯೇ ಉಳಿದುಕೊಂಡು ಬಂದಿದೆ. ಆದರೆ ತುಳುವಿನಲ್ಲಿ ಇದು ಮಾತ್ರ ‘ಜ್’ ಧ್ವನಿಮಾವಾಗಿ ಪರಿವರ್ತನೆಗೊಂಡಿದೆ. ಉದಾಹರಣೆಗಾಗಿ

ತಮಿಳು : ಅರ್ ಕ.ಆರು
  ತುಳು : ಆಜಿ  
ತಮಿಳು: ತುರೈ ಕ.ನದಿ
  ತುಳು: ತುದೆ  

೧೦. ಮೂಲದ್ರಾವಿಡ ಸ್ವರಗಳಾದ *ಇ, *ಈ, *ಎ, *ಏಗಳು ಪದಾದಿ ಅಕ್ಷರಗಳಲ್ಲಿ ತಮಿಳಿನಲ್ಲಿ ಹಾಗೇನೇ ಉಳಿದುಕೊಂಡು ಬಂದಿವೆ. ಆದರೆ ತುಳುವಿನಲ್ಲಿ ಇವೆಲ್ಲಾ ಕ್ರಮವಾಗಿ *ಇ > ಉ, *ಈ> ಊ, *ಎ> ಒ, *ಏ > ಓಗಳಾಗಿ ಪರಿವರ್ತನೆಗೊಂಡಿವೆ. ಉದಾ:

*ಇ – ತಮಿಳು : ಪಿಣಮ್ (DED 3420) ತುಳು:ಪುಣ / ಪುನ ಕ.ಹೆಣ
*ಈ -ತಮಿಳು : ವೀಡ್ ಮನೆ ತುಳು : ಬೂಡು, ಕ.ಬೀಡು
*ಎ-ತಮಿಳು :ಪೆಟ್ಟುಲೈ ತುಳು:ಪೊಟ್ಟು.ಕ.ಹೊಟ್ಟು
*ಏ-ತಮಿಳು: ಪೇಟಿ ತುಳು:ಪೋಡಿಗೆ ಕ.ಹೆದರಿಕೆ

ಇತ್ಯಾದಿ.

೧೧. ಮೂಲ ದ್ರಾವಿಡದ ವಿಜಾತೀಯ ಕಾಗುಣಿತ ವ್ಯಂಜನ ಧ್ವನಿಮಾಗಳಾದ *ನ್‌ರ್ ತಮಿಳಿನಲ್ಲಿ ಹಾಗೇನೇ ಉಳಿದುಕೊಂಡು ಬಂದಿದೆ. ಆದರೆ ತುಳುವಿನಲ್ಲಿ ಹ್ರಸ್ವಸ್ವರದ ಮುಂದೆ ‘ನ್ ಜ್’ (ನ್ಜ್), ರ್‌ದ್‌(ರ್ದ್) ಆಗಿಯೂ ದೀರ್ಘಸ್ವರದ ಮುಂದೆ ‘ಜ್’ ಆಗಿಯೂ ಪರಿವರ್ತನೆಗೊಂಡಿವೆ.

ಉದಾ:

 1. ಹ್ರಸ್ವ ಸ್ವರದ ಮುಂದೆ :
ಅ) ತಮಿಳು : ಒನ್ರು (DED 834) ಕ.ಒಂದು
ತುಳು: ಒಂಜಿ  
ಆ) ತಮಿಳು: ಪನ್ರಿ (DED 3326) ಕ.ಹಂದಿ
ತುಳು : ಪಂಜಿ  

ii) ದೀರ್ಘ ಸ್ವರದ ಹಿಂದೆ :

ತಮಿಳು : ಮೂನ್ರೂ ಕ.ಮೂರು
ತುಳು : ಮೂಜಿ ಇತ್ಯಾದಿ.

೧೨. ಮೂಲ ದ್ರಾವಿಡದ ಸಜಾತೀಯ ಸಂಯುಕ್ತ (ಕಾಗುಣಿತ) ವ್ಯಂಜನ ಧ್ವನಿಮಾಗಳಾದ *ರ್‌ರ್ (ಟ್ರ್) ತಮಿಳಿನಲ್ಲಿ ಹಾಗೇ ಉಳಿದುಕೊಂಡಿದೆ. ಆದರೆ ಇದು ತುಳುವಿನಲ್ಲಿ ತ್‌ತ್ (ತ್ತ್) ಆಗಿ ಪದದ ಹ್ರಸ್ವಸ್ವರದ ಹಿಂದೆಯೂ, ಹಾಗೆಯೇ ತ್ ಆಗಿ ಪದದ ದೀರ್ಘ ಸ್ವರದ ಹಿಂದೆಯೂ ಪರಿವರ್ತನೆಗೊಂಡಿವೆ. ಉದಾ:

 1. ಹ್ರಸ್ವ ಸ್ವರದ ಹಿಂದೆ:
ಅ) ತಮಿಳು: ಒಟ್ರು (ಅ) ಕ.ಒತ್ತು
ತುಳು : ಒತ್ತು  
ಆ) ತಮಿಳು : ಪೆಟ್ರಂ ಕ.ದನ
ತುಳು : ಪೆತ್ತ  
ಇ) ತಮಿಳು : ಪಟ್ರು (ಅ) ಕ.ಹತ್ತು
ತುಳು : ಪತ್ತ್  
 1. ದೀರ್ಘ ಸ್ವರದ ಹಿಂದೆ:
ತಮಿಳು : ನೂಟ್ರು (ಅ) ಕ.ನೂರು
ತುಳು : ನೂತ (ವಿಭಕ್ತ್ಯಂಗ) ನೂರ ಇತ್ಯಾದಿ.

ಇವೆಲ್ಲವೂ ಧ್ವನಿಮಾ ವ್ಯವಸ್ಥೆಯಲ್ಲಿ ಉಳಿದುಕೊಂಡು ಬಂದಿರುವ ಹಾಗೂ ಪರಿವರ್ತವನೆಗೊಂಡಿರುವ ಮೂಲದ್ರಾವಿಡ ರೂಪಗಳು. ಇನ್ನು ಆಕೃತಿಮಾ ವ್ಯವಸ್ಥೆಯಲ್ಲಿ ಉಳಿದಿರುವ ಹಾಗೂ ಪರಿವರ್ತನೆಗೊಂಡಿರುವ ಮೂಲದ್ರಾವಿಡ ರೂಪಗಳನ್ನು ಗಮನಿಸಿದರೆ ಈ ಎರಡು ಭಾಷೆಗಳೊಳಗಿರುವ ಜ್ಞಾತಿ ಸಂಬಂಧವನ್ನು ತಿಳಿದುಕೊಳ್ಳಬಹುದು. ಅವುಗಳನ್ನಿಲ್ಲಿ ಕೆಲವೊಂದನ್ನು ಮಾತ್ರ ಕೊಡಲಾಗಿದೆ.

೧. ಮೂಲದ್ರಾವಿಡದ *ಆನ್ ಪುಲ್ಲಿಂಗ ಪ್ರತ್ಯಯ ತಮಿಳಿನಲ್ಲಿ ಹಾಗೇನೇ ಉಳಿದುಕೊಂಡು ಬಂದಿದೆ. ಆದರೆ ಇದು ತುಳುವಿನಲ್ಲಿ ‘ಎ’ ಆಗಿ ಪರಿವರ್ತನೆಗೊಂಡಿದೆ. ಉದಾ:

ಅ) ತಮಿಳು : ಮಕನ್ ಕ.ಮಗ
ತುಳು : ಮಗೆ  
ಆ) ತಮಿಳು: ಅಣ್ಣನ್ ಕ.ಅಣ್ಣ
ತುಳು : ಅಣ್ಣೆ  

೨. ಮೂಲ ದ್ರಾವಿಡದ *ವನ್ ಪುಲ್ಲಿಂಗ ಪ್ರತ್ಯಯ ತಮಿಳಿನಲ್ಲಿ ಉಳಿದುಕೊಂಡು ಇದು ತುಳುವಿನಲ್ಲಿ ‘ವೆ’ ಆಗಿ ಪರಿವರ್ತನೆಗೊಂಡಿದೆ. ಉದಾ:

ತಮಿಳು : ಕಳ್ವನ್  ಕ.ಕಳ್ಳ

ತುಳು: ಕಳ್ವೆ / ಕಲ್ವೆ

೩. ಮೂಳ ದ್ರಾವಿಡದ *ತ್ತಿ ಸ್ತ್ರೀಲಿಂಗ ಪ್ರತ್ಯಯ ತಮಿಳಿನಲ್ಲಿ ಪರಿವರ್ತನೆ ಆಗಿಲ್ಲ. ಆದರೆ ತುಳುವಿನಲ್ಲಿ ‘ತಿ’ ಆಗಿ ಪರಿವರ್ತನೆಗೊಂಡಿದೆ.

ಉದಾ:

ತಮಿಳು : ಒರುತ್ತಿಕ.ಒಬ್ಬಳು

ತುಳು : ಒರ್ತಿ

೪. ಮೂಲ ದ್ರಾವಿಡದ *ಅಳ್ ಸ್ತ್ರೀಲಿಂಗ ಪ್ರತ್ಯಯ ತಮಿಳಿನಲ್ಲಿ ಹಾಗೇ ಉಳಿದುಕೊಂಡಿದ್ದು ತುಳುವಿನಲ್ಲಿ ಮಾತ್ರ ಅಳ್ (ಅ) ಆಗಿ ಪರಿವರ್ತನೆಗೊಂಡಿದೆ. ಉದಾ:

ತಮಿಳು : ಮಕಳ್  ಕ.ಮಗಳು

ತುಳು : ಮಗಳ್ (ಅ)

೫. ಮೂಲ ದ್ರಾವಿಡದ *ಇ ಸ್ತ್ರೀಲಿಂಗ ಪ್ರತ್ಯಯ ಎರಡೂ ಭಾಷೆಗಳಲ್ಲಿ ತಮಿಳಿನಲ್ಲಿ ಉಳಿದುಕೊಂಡಿದ್ದು ತುಳುವಿನಲ್ಲಿ ವೆರ್ (ಅ) ಆಗಿ ಪರಿವರ್ತನೆಗೊಂಡಿದೆ. ಉದಾ:

ತಮಿಳು : ಇರುವರ್ ಕ.ಇಬ್ಬರು

ತುಳು : ಇರುವೆರ್ (ಅ)

೭. ಮೂಲ ದ್ರಾವಿಡದ *ಕಳ್ ಹಾಗೂ *ಳ್ ಸಾಮಾನ್ಯ ಲಿಂಗ ಬಹುವಚನ ಪ್ರತ್ಯಯಗಳಲ್ಲಿ ತಮಿಳಿನಲ್ಲಿ *ಕಳ್ ಮಾತ್ರ ಉಳಿದುಕೊಂಡಿದೆ. ಆದರೆ ತಮಿಳಿನಲ್ಲಿ -ಕುಲು / -ಕುಳು ಆಗಿ ಪರಿವರ್ತನೆಗೊಂಡಿದೆ. ಉದಾ:

ತಮಿಳು : ಮಕ್ಕಳ್            ಕ.ಮಕ್ಕಳು

ತುಳು : ಜೋಕುಲು / ಜೋಕುಳು

೮. ಮೂಲ ದ್ರಾವಿಡದ *ಕಳ್ ಮತ್ತು *ಳ್ ಪ್ರತ್ಯಯಗಳಲ್ಲಿ ತಮಿಳಿನಲ್ಲಿ ಕಳ್ ಮಾತ್ರ ಉಳಿದುಕೊಂಡಿದೆ. ಆದರೆ ತಮಿಳಿನಲ್ಲಿ ಕುಳು / ಕುಲು ಹಾಗೂ ಲು / ಳು ಆಗಿ ಪರಿವರ್ತನೆಗೊಂಡಿದೆ. ಉದಾ:

ತಮಿಳು ಅರ್ಥ ತುಳು
ಕಿಳಿಕಳ್ ಗಿಳಿಗಳು ಗಿಳಿಕುಲು / ಗಿಳಿಕುಳು
ಕಣ್‌ಕಳ್ ಕಣ್ಣುಗಳು ಕಣ್ಣುಲು / ಕಣ್ಣುಳು
ಎಲಿಕಳ್ ಇಲಿಗಳು ಎಲಿಕುಲು / ಎಲಿಕುಳು

೯. ಮೂಲ ದ್ರಾವಿಡ ಸರ್ವನಾಮರೂಪಗಳು

i. ಉತ್ತಮ ಪುರುಷ ಏಕವಚನ ರೂಪಗಳು
ಮೂಲದ್ರಾವಿಡ ರೂಪ *ಯನ್
ಉದಾ: ಪ್ರಥಮಾ ವಿಭಕ್ತಿ ವಿಭಕ್ತ್ಯಂಗ
ತಮಿಳು: ಯಾನ್, ನಾನ್ ಎನ್-
    ಎನ
    ಎನ್ನ್
    ಎರ್
ತುಳು: ಎನ್ (ಅ್ ) ಎನ್
  ಯಾನ್ (ಅ್ )  
 1. ಉತ್ತಮ ಪುರಷ ಅಸಮಾವೇಶಕ ಬಹುವಚನ ರೂಪಗಳು:
  ಅ) ಮೂಲದ್ರಾವಿಡ ರೂಪ : *ಯಾಮ್ (ಪ್ರಥಮಾ ವಿಭಕ್ತಿ ರೂಪ)
ಉದಾ:    
ತಮಿಳು: ಯಾಮ್ ತುಳು : ಯಂಕುಳು
  ಯಾಂಕಳ್ ಎಂಕುಲು
  ನಾಂಕಳ್ ಎಂಕುಳ್ (ಅ್ )
ಆ) ಮೂಲ ದ್ರಾವಿಡ ರೂಪ: ಯಮ್ – (ವಿಭಕ್ತ್ಯಂಗ)
  ತಮಿಳು: ಎಮ್ ತುಳು : ಯಂಕುಲೆ
  ಎಂಕಳ್ ಎಂಕುಳೆ
    ಎಂಕುಲೆ
 1. ಉತ್ತಮ ಪುರುಷ ಸಮಾವೇಶಕ ಬಹುವಚನ ರೂಪಗಳು
  ಮೂಲ ದ್ರಾವಿಡ ರೂಪ : * ನಾಮ್ (DED 3019) ಉದಾ:
  ಪ್ರಥಮಾ ವಿಭಕ್ತಿ ರೂಪ ವಿಭಕ್ತ್ಯಂಗ ರೂಪ
ತಮಿಳು : ನಾಮ್ ನಮ್ –
    ನಂಕಳ್
ತುಳು: ನಮ ನಮ್
  ನಾಮ  
 1. ಮಧ್ಯಮ ಪುರುಷ ಏಕವಚನ ರೂಪಗಳು (DED 3051)
  ಮೂಲ ದ್ರಾವಿಡ ರೂಪಗಳು *ನೀನ್ (ಪ್ರಥಮಾ ವಿಭಕ್ತಿ), *ನಿನ್ (ವಿಭಕ್ತ್ಯಂಗ) ಉದಾ:
  ಪ್ರಥಮಾ ವಿಭಕ್ತಿ ರೂಪ ವಿಭಕ್ತ್ಯಂಗ ರೂಪ
ತಮಿಳು : ನೀ ನಿನ್
    ನಿರ್
    ಉನ್
    ನಿನ್
ತುಳು: ನಿನ್
    ಇನ್ನ್
v. ಮಧ್ಯಮ ಪುರುಷ ಬಹುವಚನ ರೂಪಗಳು (DED 3055)
ಮೂಲದ್ರಾವಿಡ ರೂಪಗಳು : *ನೀಮ್ (ಪ್ರಥಮಾ ವಿಭಕ್ತಿ), ನಿಮ್ (ವಿಭಕ್ತ್ಯಂಗ) ಉದಾ:
  ಪ್ರಥಮಾ ವಿಭಕ್ತಿ ರೂಪ ವಿಭಕ್ತ್ಯಂಗ ರೂಪ
ತಮಿಳು: ನೀಮ್ ನುಮ್
  ನೀಂಕಳ್ ಉಮ್
    ನುಂಕಳ್
ತುಳು: ನಿಕುಳು ನಿಂಕ್ಳೆ
  ನಿಕುಲು ನಿಕಳೆ
  ನಿಗುಲು ನಿಕಲೆ
  ನಿಂಕ್ಳು ನಿಗಲೆ
vi) ಆತ್ಮಾರ್ತಕ ರೂಪ:
ಅ) ಏಕವಚನ ರೂಪ :
ಮೂಲದ್ರಾವಿಡ ರೂಪಗಳು : *ತಾನ್ (ಪ್ರಥಮಾ ವಿಭಕ್ತಿ ರೂಪ)*ತನ್ (ವಿಭಕ್ತ್ಯಂಗ ರೂಪ) ಉದಾ:
  ಪ್ರಥಮಾ ವಿಭಕ್ತಿ ರೂಪ ವಿಭಕ್ತ್ಯಂಗರೂಪ
ತಮಿಳು: ತಾನ್ ತನ್
ತುಳು: ತಾನು / ತಾನ್ (ಅ) ತನ್
ಆ) ಬಹುವಚನ ರೂಪ :
ಮೂಲ ದ್ರಾವಿಡ ರೂಪಗಳು : * ತಾಮ್ (ಪ್ರಥಮ ವಿಭಕ್ತಿ ರೂಪ). *ತಮ್ (ವಿಭಕ್ತ್ಯಂಗ ರೂಪ) ಉದಾ:
  ಪ್ರಥಮಾ ವಿಭಕ್ತಿ ರೂಪ ವಿಭಕ್ತ್ಯಂಗ ರೂಪ
ತಮಿಳು: ತಾಮ್ ತಮ್
  ತಾಂಕಳ್ ತಂಕಳ್
ತುಳು: ತಂಕುಳು ತಂಕುಳೆ
  ತಂಕುಲು ತಂಕುಲೆ

೧೦. ಸಂಖ್ಯಾವಾಚಕದ ರೂಪಗಳು

ಇದರ ಬಗ್ಗೆ ವಿಸ್ತಾರವಾಗಿ ಬರೆಯದೆ ಸಂ‌ಕ್ಷಿಪ್ತ ರೀತಿಯಲ್ಲಿ ಬರೇ ಮೂಲ ಸಂಖ್ಯಾವಾಚ ರೂಪಗಳನ್ನು (ಸಾಧಿತ ಸಂಖ್ಯಾವಾಚಕ ರೂಪಗಳನ್ನು ಕೊಟ್ಟಲ್ಲಿ) ಒಂದೊಂದನ್ನೇ ಕೊಟ್ಟು ಅವುಗಳ ಮೂಲದ್ರಾವಿಡ ರೂಪವನ್ನು ಕೊಟ್ಟು ತಮಿಳು ಹಾಗ ತುಳುವಿನಲ್ಲಿ ಉಳಿದುಕೊಂಡಿರುವ ಹಾಗೂ ಪರಿವರ್ತನೆಗೊಂಡಿರುವ ರೂಪಗಳನ್ನು ಮಾತ್ರ ಕೊಡಲಾಗಿದೆ.

 1. ಒಂಜಿ ಒಂದು ಮೂಲದ್ರಾವಿಡ ರೂಪ : *ಒಕ್ಕಂತ್

ಉದಾ: ತಮಿಳು : ಒನ್ರು (ಅ್ ) ತುಳು : ಒಂಜಿ

 1. ರಡ್ಡ್ ಎರಡು ಮೂಲದ್ರಾವಿಡ ರೂಪ :*ಇರಂಟ್

ತಮಿಳಿನಲ್ಲಿ ಹಾಗೇನೇ ಉಳಿದುಕೊಂಡು ಬಂದಿದೆ. ಆದರೆ ತುಳುವಿನಲ್ಲಿ ಮಾತ್ರ ರಡ್ಡ್ / ಎರಡ್ (ಅ್ ) ಎಂದು ಪರಿವರ್ತನೆಗೊಂಡಿವೆ.

 1. ಮೂಜಿ ಮೂರು ಮೂಲದ್ರಾವಿಡ ರೂಪ :*ಮೂನ್ತು

ತಮಿಳಿನಲ್ಲಿ ಮೂನ್ರು (ಅ್ ) ಹಾಗೂ ತಮಿಳಿನಲ್ಲಿ ಮೂಜಿ ಆಗಿ ಪರಿವರ್ತನೆಗೊಂಡಿವೆ.

iv. ನಾಲ್ (ಅ್ ) ನಾಲ್ಕು ಮೂಲದ್ರಾವಿಡ ರೂಪ :* ನಾಲ್ಕು

ತಮಿಳಿನಲ್ಲಿ ನಾಲ್ಕು (ಅ್ ) ನಾನ್ಕು (ಅ್ ), ನಾಲು (ಅ್ ) ಹಾಗೂ ತುಳುವಿನಲ್ಲಿ ನಾಲು / ನಾಲ್ (ಅ್ ) ಆಗಿ ಪರಿವರ್ತನೆಗೊಂಡಿವೆ.

v) ಐನ್ ಐದು ಮೂಲದ್ರಾವಿಡ ರೂಪ : *ಚಯಿಂತು

ತಮಿಳಿನಲ್ಲಿ ಐಂತ್ (ಅ್ ), ಅಂಚ್ (ಅ್ )ಆಗಿಯೂ ತುಳುವಿನಲ್ಲಿ ಐನು, ಐನ್ (ಅ್ ) ರೂಪಗಳಾಗಿಯೂ ಪರಿವರ್ತನೆಗೊಂಡಿವೆ.

vi) ಆಜಿ ಆರು ಮೂಲ ದ್ರಾವಿಡ ರೂಪ : *ಚಾತು

ತಮಿಳಿನಲ್ಲಿ ಆರ್ (ಅ್ ) ಆಗಿಯೂ, ತುಳುವಿನಲ್ಲಿ ಆಜಿ ಆಗಿಯೂ ಪರಿವರ್ತನೆಗೊಂಡಿದೆ.

vii) ಏಳ್ (ಅ್ ) ಏಳು ಮೂಲದ್ರಾವಿಡ ರೂಪ: *ಏಳ್

ತಮಿಳಿನಲ್ಲಿ ಏಳ್, ಏಳ್ (ಅ್ ) ಆಗಿಯೂ ತುಳುವಿನಲ್ಲಿ ಏಳು, ಏಳ್ (ಅ್ ), ಏಲ್ (ಅ್ ) ರೂಪಗಳಾಗಿಯೂ ಪರಿವರ್ತನೆಗೊಂಡಿವೆ.

viii) ಎಣ್ಮ ಎಂಟು ಮೂಲದ್ರಾವಿಡ ರೂಪ : * ಎಂಟ್ಟ್, * ಎಣ್‌ತ್ತು

ತಮಿಳಿನಲ್ಲಿ ಎಟ್ಟು (ಅ್ ) ಆಗಿ ಪರಿವರ್ತನೆಗೊಂಡಿದೆ. ತುಳುವಿನಲ್ಲಿ ಎಣ್ಮ, ಎಡ್ಮ, ಎಣ್ಮೊ, ಎಡ್ಮೊ ರೂಪಗಳಾಗಿ ಪರಿವರ್ತನೆಗೊಂಡು ತುಳು ಉಪಭಾಷೆಗಳಲ್ಲಿ ಬಳಕೆಯಲ್ಲಿವೆ.

ix) ಒಂರ್ಬ ಒಂಬತ್ತು ಮೂಲ ದ್ರಾವಿಡ ರೂಪ : *ಒನ್ಪತು

ತಮಿಳಿನಲ್ಲಿ ಒನ್ಪತು (ಅ್ ) (ಉಳಿದಿರುವ ರೂಪ), ಒನ್‌ಪಾದ್‌ನ್, ಒನ್‌ಪಾಕು (ಅ್ ) ಆಗಿಯೂ ತುಳುವಿನಲ್ಲಿ ಒಂರ್ಬ ಆಗಿಯೂ ಪರಿವರ್ತನೆಗೊಂಡಿವೆ.

x) ಪತ್ತ್ ಹತ್ತು ಮೂಲ ದ್ರಾವಿಡ ರೂಪ : * ಪತ್ತು

ತಮಿಳಿನಲ್ಲಿ ಮೂಲದ್ರಾವಿಡ ರೂಪವನ್ನು ಉಳಿಸಿಕೊಂಡು ಬಂದಿದೆ. ಈಗಲೂ ಅದೇ ರೂಪ ಬಳಕೆಯಲ್ಲಿದೆ. ತುಳುವಿನಲ್ಲಿ ಪತ್ತು ಅಲ್ಲದೆ ಪತ್ತ್ (ಅ್ ) ರೂಪಗಳಾಗಿ ಪರಿವರ್ತನೆಗೊಂಡಿದ್ದು ಪತ್ತ್ (ಅ್ ) ರೂಪ ಈಗ ಬಳಕೆಯಲ್ಲಿದೆ.

xi) ನೂದು ನೂರು ಮೂಲದ್ರಾವಿಡ ರೂಪ : *ನೂತ್ತು

ಇದು ತಮಿಳಿನಲ್ಲಿ ನೂರು (ಅ್ ) ಆಗಿಯೂ ತುಳುವಿನಲ್ಲಿ ನೂದು ಆಗಿಯೂ ಪರಿವರ್ತನೆಗೊಂಡು ಈಗ ಬಳಕೆಯಲ್ಲುಂಟು.

xii) ಸಾವಿರ ಸಾವಿರ ಮೂಲದ್ರಾವಿಡ ರೂಪ : * ಚಾಯಿರಮ್ ಮೂಲದ್ರಾವಿಡ ರೂಪಕ್ಕೆ ಬಹಳ ಹತ್ತಿರದ ಸಂಬಂಧವನ್ನಿಟ್ಟುಕೊಂಡಿದೆ. ಇದು ಸಂಸ್ಕೃತದಿಂದ ಮೂಲ ದಕ್ಷಿಣ ದ್ರಾವಿಡ ರೂಪಕ್ಕೆ ಸ್ವೀಕೃತವಾದ ಸಂಖ್ಯಾವಾಚಕ ರೂಪವೆಂದು ಹೇಳಬಹುದು. ತುಳುವಿನಲ್ಲಿ ಇದು ಪರಿವರ್ತನೆಗೊಂಡು ಸಾವಿರ / ಸಾರ / ಸಾವಿರೊ ಇತ್ಯಾದಿ ರೂಪಗಳಾಗಿ ತುಳುವಿನ ಬೇರೆ ಬೇರೆ ಉಪಭಾಷೆಗಳಲ್ಲಿ ಬಳಕೆಯಾಗುತ್ತಿವೆ.

೧೧. ವಿಭಕ್ತಿ ಪ್ರತ್ಯಯದ ರೂಪಗಳು

i) ದ್ವಿತೀಯಾ (ಕರ್ಮ) ವಿಭಕ್ತಿ ಪ್ರತ್ಯಯ ರೂಪಗಳು:

ಮೂಲ ದ್ರಾವಿಡ ಪ್ರತ್ಯಯ ರೂಪಗಳು : *ಆನ್, *ಅಯ್ ಮತ್ತು * (ಸ್ವರ)ವ್ಕ್

ಅ) ಮೂಲದ್ರಾವಿಡ ಪ್ರತ್ಯಯ ರೂಪ *ಅನ್ ತಮಿಳಿನಲ್ಲಿ ಕಂಡುಬರುವುದಿಲ್ಲ. ಆದರೆ ತುಳುವಿನಲ್ಲಿ ಇದು -ನ್, / -ನ್ ಆಗಿ ಪರಿವರ್ತನೆಗೊಂಡಿವೆ. ಉದಾ :

ತುಳು : ಅಣ್ಣನ್ (ಅ್ ) ಅಣ್ಣನನ್ನು

ಬಡುನು            ಬೆತ್ತವನ್ನು

ಆ) ಮೂಲದ್ರಾವಿಡ ಪ್ರತ್ಯಯ ರೂಪ *ಅಯ್ ಇದು ತಮಿಳಿನಲ್ಲಿ ಉಳಿದುಕೊಂಡಿದೆ. ಆದರೆ ತಮಿಳಿನಲ್ಲಿ ಕಂಡುಬರುವುದಿಲ್ಲ. ಉದಾ:

ತಮಿಳು : ರಾಮನೈ           ರಾಮನನ್ನು

ಮರತ್ತೈಮರವನ್ನು

ಆದರೆ ಮೂಲದ್ರಾವಿಡ ಪ್ರತ್ಯಯ ರೂಪ * (ಸ್ವರ) ನ್ಕ್ ಈಗ ತಮಿಳಿನಲ್ಲಾಗಲೀ ತುಳುವಲ್ಲಾಗಲೀ ಕಂಡುಬರುವುದಿಲ್ಲ. (ತುಳು: ಎನ್ಕ – ಎನನ)

 1. ತೃತೀಯಾ (ಕರಣ) ವಿಭಕ್ತಿ ಪ್ರತ್ಯಯ ರೂಪಗಳು:

ಮೂಲದ್ರಾವಿಡ ಪ್ರತ್ಯಯ ರೂಪಗಳು:

* ಆನ್ / ಆಲ್, *ಒಟು / ಓಟು ಮತ್ತು * (ಸ್ವ) ನ್

ಅ)ಮೂಲ ದ್ರಾವಿಡ ಪ್ರತ್ಯಯ ರೂಪ ತಮಿಳಿನಲ್ಲಿ ಉಳಿದುಕೊಂಡಿದ್ದು ತುಳುವಿನಲ್ಲಿ ಕಂಡುಬರುವುದಿಲ್ಲ. ಉದಾ :

ತಮಿಳು : ರಾಮನಾಲ್ ರಾಮನಿಂದ
  ಮರತ್ತಾಲ್ ಮರದಿಂದ
ಹಳೆಯ ತಮಿಳು: ಆಲ್ ಕೈಯಾಲ್ ಕೈಯಿಂದ
  ಆನ್ ಮರಪ್ಪಿನಾತ್ ಸೊಂಡಿಲಿನಿಂದ

ಆ) ಮೂಲ ದ್ರಾವಿಡ ಪ್ರತ್ಯಯ ರೂಪ * ಒಟು / ಓಟು ತಮಿಳಿನಲ್ಲಿ ಕಂಡುಬರುತ್ತದೆ. ತುಳುವಿನಲ್ಲಿ ಕಂಡುಬರುತ್ತಿ ಉರವ ಟ್ / ಡ್ ಮೂಲದ್ರಾವಿಡ ರೂಪಕ್ಕೆ *ಒಟುಗೆ ಸಂಬಂಧವನ್ನಿರಿಸಿಕೊಂಡಿರಬಹುದು. ತಮಿಳಿನಲ್ಲೂ ಈ ರೂಪ ಸಪ್ತಮೀ (ಅಧಿಕರಣ) ವಿಭಕ್ತಿಯ ಅರ್ಥದಲ್ಲಿ ಕಂಡುಬರುತ್ತದೆ. ಕಾಲ್ಡ್‌ವೆಲ್ ಅವರು ತುಳುವಿನ ಟು / ಡು ವಿಭಕ್ತಿ ಪ್ರತ್ಯಯಗಳು ತಮಿಳಿನಲ್ಲಿರುವ ಇಟಮ್ ಅಥವಾ ಇಟೈ ರೂಪಗಳಿಗೆ ಸಂಬಂಧವನ್ನಿಟ್ಟುಕೊಂಡಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಈ ರೂಪ ತುಳುವಿನಲ್ಲಿ ಉಳಿದುಬರದೆ ಟ್ / ಟು / ಡ್ / ಡು ಗಳಾಗಿ ಪರಿವರ್ತನೆಗೊಂಡಿವೆ.

ಉದಾ: ಹಳೆ ತಮಿಳು
  ನಾವಾಯ್ ಕಾತೋಟು ಹಡಗು, ಗಾಳಿ ಸಹಾಯದಿಂದ
ತುಳು ಕೈಟ್ ಕೈಯಿಂದ
  ಬಡುಟು ಬೆತ್ತದಿಂದ
  ಕತ್ತಿಡ್ ಕತ್ತಿಯಿಂದ
  ದೊಡ್ಡುದು ಹಣದಿಂದ
ತಮಿಳು : (ಸಪ್ತಮೀ ವಿಭಕ್ತಿಯರ್ಥದಲ್ಲೆ)
ಒಟು ನೆಂಜ ಮೊಟು ಹೃದಯದಲ್ಲಿ
ಇಟ್ಟೆ ಕಾಟ್ಟಿಟೈ ಕಾಡಿನಲ್ಲಿ
ಇಟಮ್ ಪೊಳಿಲಿಟಮ್ ಪಾರ್ಕಿನಲ್ಲಿ

ಮೂಲ ದ್ರಾವಿಡ ವಿಭಕ್ತಿ ಪ್ರತ್ಯಯ ರೂಪ * (ಸ್ವರ)ನ್ ತುಳುವಿನಲ್ಲಾಗಲೀ ತಮಿಳಿನಲ್ಲಾಗಲೀ ಕಂಡುಬರುತ್ತಿಲ್ಲ.

iii) ಚತುರ್ಥೀ (ಸಂಪ್ರದಾನ) ವಿಭಕ್ತಿ ಪ್ರತ್ಯಯ ರೂಪಗಳು : ಮೂಲದ್ರಾವಿಡ ಪ್ರತ್ಯಯ ರೂಪ *ಕ್‌ಕ್ ಸ್ವರ ತಮಿಳಿನಲ್ಲಿ ಹಾಗೂ ತುಳುವಿನಲ್ಲಿ ಕಂಡುಬರುತ್ತದೆ. ತಮಿಳಿನಲ್ಲಿ ‘ಉ’ ಸ್ವರ ಧ್ವನಿಮಾ ಮಾತ್ರ ಉಪಧ್ವನಿಮಾವಾಗಿದೆ. ಉದಾ:

ತುಳು: ಕ್ ಮರಕ್ ಮರಕ್ಕೆ
  ಗ್ ರಾಮಗ್ ರಾಮನಿಗೆ
  ಕು ಮುಡುಕು ಭುಜಕ್ಕೆ
  ಗು ಗೂಡುಗು ಗೂಡಿಗೆ
ತಮಿಳು: ಕ್ಕ ಆಸರಿಯಕಕ್ಕ ಅಧ್ಯಾಪಕರಿಗೆ
  ಕ್ಕು ಯಾನ್ಯೆಕ್ಕು (ಅ್ ) ಆನೆಗೆ

iv) ಪಂಚಮೀ (ಅಪಾದಾನ) ವಿಭಕ್ತಿ ಪ್ರತ್ಯಯ ರೂಪ:

ಮೂಲ ದ್ರಾವಿಡ ಪ್ರತ್ಯಯ ರೂಪ * ನಿನ್ರು (ಅ್ ) ತಮಿಳಿನಲ್ಲಿ ಉಳಿದುಕೊಂಡಿದೆ. ಉದಾ:

ಹಳೆ ತಮಿಳು  
 / -ನಿಮ್ರ (ಅ್ ) / : ನೀರ್ ನಿನ್ರು (ಅ್ ) ನೀರಿನಿಂದ
 / – ಇರ್‌ಂತು (ಅ್ ) / ” ಕಾಲೈಯಿರಂತು (ಅ್ ) ಬೆಳಿಗ್ಗೆಯಿಂದ
ತುಳು:  
 / -ಡ್ಡ್ (ಅ್ ) . :ಬಂಜಿಡ್ಡ್ (ಅ್ ) ಹೊಟ್ಟೆಯಿಂದ
 / -ಡ್ಡು / : ಗುಡುಡ್ಡು ಗೂಡಿನಿಂದ

v) ಷಷ್ಠೀ (ಸಂಬಂಧ) ವಿಭಕ್ತಿ ಪ್ರತ್ಯಯ ರೂಪಗಳು
ಮೂಲ ದ್ರಾವಿಡ ಷಷ್ಠೀ ವಿಭಕ್ತಿ ಪ್ರತ್ಯಯ ರೂಪಗಳು

* ಅ ಮತ್ತು * ಅತು

ಈ ಎರಡೂ ಮೂಲದ್ರಾವಿಡ ರೂಪಗಳು ತಮಿಳಿನಲ್ಲಿ ಉಳಿದು ಬಂದಿವೆ. ಆದರೆ ತಮಿಳಿನಲ್ಲಿ * ಅ ಪ್ರತ್ಯಯ ರೂಪ ಮಾತ್ರ ಕಂಡುಬರುತ್ತದೆ.

ಉದಾ:

ತುಳು : / -ಅ / ರಾಮನ ರಾಮನ
  ಮರತ ಮರದ
ಹಳೆಯ ತಮಿಳು : / -ಅತು (ಅ್ ).    
ವೇಂತನತು (ಅ್ ) ರಾಜನ  
  ಕಾಕೈಯತು (ಅ್ ) ಕಾಗೆಯ
ನಡು ಹಳೆ ತಮಿಳು :  / -ಆತು (ಅ್ ) ತಾನಾತು (ಅ್ ) ತನ್ನ

vi) ಸಂಬೋಧನಾ ವಿಭಕ್ತಿ ಪ್ರತ್ಯಯ ರೂಪಗಳು

ಮೂಲ ದ್ರಾವಿಡ ರೂಪಗಳಾದ *ಏ ಮತ್ತು *ಓ ತಮಿಳು ಹಾಗೂ ತುಳುವಿನಲ್ಲಿ ಉಳಿದುಕೊಂಡು ಬಂದಿದೆ. ತುಳುವಿನಲ್ಲಿ ಇವಲ್ಲದೆ ಆ ಹಾಗೂ ಏ ಪ್ರತ್ಯಯ ರೂಪಗಳೂ ಕಂಡುಬರುತ್ತದೆ. ಉದಾ:

ತಮಿಳು :  / -ಏ / ಮಕನೇ ಮಗನೇ !
   / -ಓ / ಅಪ್ಪಾವೋ ಅಪ್ಪಾ!
ತುಳು:  / -ಏ / ಕಂಜೇ ಕರುವೇ!
   / -ಓ / ಮಾಮೋ ಮಾವಾ!
   / -ಆ / ಪಲಯಾ ಅಣ್ಣಾ!
   / -ಏ್ / ಆನೇ್ ಹುಡುಗಾ!

೧೨. ಭೂತಕಾಲ ಪ್ರತ್ಯಯ ರೂಪಗಳು

i)ಇದರ ಮೂಲದ್ರಾವಿಡ ರೂಪ *ನ್ತ್ ತಮಿಳಿನಲ್ಲಿ ಉಳಿದು ಕೊಂಡಿರುವುದು ಮಾತ್ರವಲ್ಲ ನ್ರ್, ನ್ದ್ ಮತ್ತು ಟ್ ರೂಪಗಳಾಗಿಯೂ ಪರಿವರ್ತನೆಗೊಂಡಿವೆ. ಆದರೆ ತುಳುವಿನಲ್ಲಿ ತ್‌ಆಗಿ ಮಾತ್ರ ಪರಿವರ್ತನೆಗೊಂಡಿದೆ. ಉದಾ:

ತಮಿಳು : ನಡನ್ತೇನ್ ನಡೆದೆ(ನು
  ನಿನ್ರೇನ್ ನಿಂತೆ(ನು)
  ತಂದೇನ್ ತಂದೆ(ನು)
  ಕೊಂಟೇನ್ ತೆಗೆದುಕೊಂಡೆ(ನು)
ತುಳು: ಕನತೆ್ ತಂದೆ(ನು)
  ಬತ್ತೆ್ ಬಂದೆ(ನು)
  ಮಲ್ತೆ್ ಮಾಡಿದೆ (ನು)

ii) ಇದರ ಇನ್ನೊಂದು ಮೂಲ ದ್ರಾವಿಡ ರೂಪ *ತ್ತ್ ತಮಿಳಿನಲ್ಲಿ ಹಾಗೇನೇ ಉಳಿದುಕೊಂಡಿದ್ದು ತುಳುವಿನಲ್ಲಿ ತ್ ಆಗಿ ಪರಿವರ್ತನೆಗೊಂಡಿದೆ. ಉದಾ:

ತಮಿಳು: ಅಡಿತ್ತೇನ್ ಹೊಡೆದೆ(ನು)
ತುಳು: ಕಾತೆ್ ಕಾದೆ(ನು) ಇತ್ಯಾದಿ.

ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು. ತಮಿಳು ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ. ೩ನೇ ಶತಮಾನ. ತುಳುವಿನಲ್ಲಿ ಉಪಲಬ್ಧವಾಗಿರುವ ‘ಮಹಾಭಾರತೊ’ ಕಾವ್ಯವು ಸುಮಾರು ೧೪ನೇ ಶತಮಾನದ ಉತ್ತರಾರ್ಧದಲ್ಲಿ ರಚಿತವಾದುದೆಂದು ನಿರ್ಣಯಿಸಲಾಗಿದೆ. ಈ ಕಾವ್ಯದ ಆಧಾರದ ಮೇಲೆ ಹೇಳುವುದಾದರೆ ತುಳು ಸಾಹಿತ್ಯಕ್ಕೆ ಕನಿಷ್ಠವೆಂದರೂ ಸುಮಾರು ಏಳುನೂರು ವರ್ಷಗಳ ಪರಂಪರೆಯಿದೆ ಎಂದು ದೃಢಪಡಿಸಬಹುದು. ತಮಿಳಿನ ಹಾಗೇನೇ ತುಳು ಭಾಷೆಯು ಕೂಡಾ ಮೂಲ ದ್ರಾವಿಡದ ಅನೇಕ ಮೌಲಿಕಾಂಶಗಳನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ ಸಂಗತಿ. ತುಳು ಸ್ವತಂತ್ರವಾದ ದ್ರಾವಿಡ ಭಾಷೆ ಎಂದು ಹೇಳಿರುವ ಕೀರ್ತಿ ತೌಲನಿಕ ದ್ರಾವಿಡ ವ್ಯಾಕರಣದ ಪಿತಾಮಹನೆನಿಸಿಕೊಂಡಿರುವ ರಾಬರ್ಟ್‌ಕಾಲ್ಡ್‌ವೆಲ್ (೧೮೫೬ : ೩೨) ಅವರಿಗೆ ಸಲ್ಲುತ್ತದೆ. ಈ ಭಾಷೆ ಪ್ರಪ್ರಥಮವಾಗಿ ಮೂಲ ದ್ರಾವಿಡದಿಂದ ಪ್ರತ್ಯೇಕವಾಗಿ ಕವಲೊಡೆದಿರುವ ಸ್ವತಂತ್ರ ಭಾಷೆ ಎಂದು ಹೇಳಬಹುದು.

ತುಳು ತಮಿಳಿನಲ್ಲಿರುವ ಆಧುನಿಕ ವರ್ಣನಾತ್ಮಕ ವ್ಯಾಕರಣವನ್ನು ಗಮನಿಸಿದರೆ ಅವುಗಳ ಮಧ್ಯೆ ಕೆಲವೊಂದು ಭಿನ್ನತೆಗಳು ಕಂಡುಬರುತ್ತವೆ. ಆದರೆ ಅವುಗಳ ಭಾಷಿಕ ಜ್ಞಾತಿ ಸಂಬಂಧದ ಬಗ್ಗೆ ಮೇಲೆ ಕೊಟ್ಟಿರುವ ಹಲವಾರು ಅಂಶಗಳನ್ನು ಗಮನಿಸಿದಾಗ ತುಳು – ತಮಿಳು ಭಾಷೆಗಳ ನಡುವೆ ನಿಕಟವಾದ ಭಾಷಿಕ ಸಂಬಂಧವಿದೆಯೆಂದು ದೃಢೀಕರಿಸಬಹುದು.

ಆಕರಸೂಚಿ

೧. ಬರೋ ಟಿ. ಮತ್ತು ಎಮಿನೋ ಎಂ.ಬಿ., ೧೯೬೧

ಅ) ‘ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್‌ಶ್ನರಿ’, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್.

ಆ) ‘ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್‌ಶ್ನರಿ’, ಸಪ್ಲಿಮೆಂಟ್, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೬೮.

೨. ತಂಗ ಮಣಿಯನ್, ೨೦೦೩, ‘ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ’, ಮಾನಸ ಗಂಗೋತ್ರಿ, ಮೈಸೂರು.

೪. ಜಲಜಾಕ್ಷಿ ಕೆ.ವಿ., ೨೦೦೩, ‘ತುಳು ಭಾಷೆ, ಸಾಹಿತ್ಯ, ಸಂಪ್ರದಾಯ’, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ೨೦೦೩.

೪. ಕಾಲ್ಡ್‌ವೆಲ್ ಆರ್., ೧೯೭೬, ‘ಎ ಕಂಪ್ಯಾರೆಟಿವ್ ಗ್ರಾಮರ್ ಆಫ್ ದಿ ದ್ರವಿಡಿಯನ್ ಒರ್ ಸೌತ್ ಇಂಡಿಯನ್ ಲಾಂಗ್ವೇಜಸ್’, ಯುನಿವರ್ಸಿಟಿ ಆಫ್ ಮದ್ರಾಸ್, (ಮೂಲ ಆವೃತ್ತಿ : ೧೮೫೬)

೫. ಶೆಟ್ಟಿ, ರಾಮಕೃಷ್ಣ ಟಿ., ೧೯೮೬, ಅ) ‘ವರ್ಣನಾತ್ಮಕ ತುಳು ವ್ಯಾಕರಣ’, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ.

ಆ) ‘ತುಳು ಬಾಸೆ’, ೧೯೮೯, ಹೇಮಾಂಶು ಪ್ರಕಾಶನ, ಕಾಟಿಪಳ್ಳ, ದ.ಕ.

೬. ಷಣ್ಮುಗಂ ಎಸ್.ವಿ., ೧೯೭೧, ‘ದ್ರವಿಡಿಯನ್ ನೌನ್ಸ್ : ಎ ಕಂಪ್ಯಾರೆಟಿವ್ ಸ್ಟಡಿ’, ಅಣ್ಣಾಮಲೈ ಯುನಿವರ್ಸಿಟಿ, ಅಣ್ಣಾಮಲೈ ನಗರ.

೭. ಸುಬ್ರಹ್ಮಣ್ಯ ಪಿ.ಎಸ್., ೧೯೭೧, ಅ) ‘ದಿ ಪೊಸಿಷನ್ ಆಫ್ ತುಳು ಇನ್ ದ್ರವಿಡಿಯನ್’, ಇಂಡಿಯನ್ ಲಿಂಗ್ವಿಸ್ಟಿಕ್ಸ್, ೨೯, ೪೭-೬೬, ೧೯೬೮.

ಆ) ‘ದ್ರವೀಡಿಯನ್ ವರ್ಸ್ ಮಾರ್ಫೊಲಜಿ : ಎ ಕಂಪ್ಯಾರೆಟಿವ್ ಸ್ಟಡಿ’ ಅಣ್ಣಾಮಲೈ ಯುನಿವರ್ಸಿಟಿ, ಅಣ್ಣಾಮಲೈ ನಗರ.