೦೪. ಮೂಲ ದ್ರಾವಿಡದ ಪದಾದಿಯ ‘ವ್’ ಕಾರ ತುಳುವಿನಲ್ಲಿ ‘ಬ್’ ಕಾರವಾಗುತ್ತದೆ.
ವಿಳೈ | ವಿಳ | ಬುಳೆ | ಬೆಳೆ |
ವಾತಿಲ್ | ವಾತಿಲ್ | ಬಾಕಿಲ್ | ಬಾಗಿಲು |
ವೆಳ್ಳಿ | ವೆಳ್ಳಿ | ಬಾಕಿಲ್ | ಬಾಗಿಲು |
ವೆಳ್ಳಿ | ವೆಳ್ಳಿ | ಬೊಳ್ಳಿ | ಬೆಳ್ಳಿ |
ವರ | ವರ | ಬರೆ | ಬರೆ / ಗುರುತು |
ವಳ್ಳಿ | ವಳ್ಳಿ | ಬೂರು / ಬಳ್ಳ್ | ಬಳ್ಳಿ |
ವಾಲ್ | ವಾಲ್ | ಬೀಲೊ | ಬಾಲ |
೦೫. ಮೂಲ ದ್ರಾವಿಡದ ‘ಳ್’, ‘ಲ್’ ಕಾರಗಳು ತುಳುವಿನಲ್ಲಿ ‘ರ್’ ಆಗುತ್ತದೆ.
ವಾಳ | ವಾಳ | ಬಾರೆ | ಬಾಳೆ |
ಕೊಳಿ | ಕೋಳಿ | ಕೋರಿ | ಕೋಳಿ |
ಕಾಲ್ | ಕಾಲ್ | ಕಾರ್ | ಕಾಲು |
ತಲೈ | ತಲ | ತರೆ | ತಲೆ |
ಮುಲೈ | ಮುಲ | ಮಿರೆ | ಮೊಲೆ |
ಪಲ್ಲ್ | ಪಲ್ಲ್ | ಪರು | ಹಲ್ಲು |
೦೬. ಮೂಲ ದ್ರಾವಿಡದ ‘ರ್’ ತುಳುವಿನಲ್ಲಿ ‘ತ್’, ‘ದ್’ ಆಗುತ್ತದೆ.
ವೇರೆ | ವೇರೆ | ಬೇತೆ | ಬೇರೆ |
ಪಾರೈ | ಪಾರ | ಪಾದೆ | ಪಾರೆ |
೦೭. ಮೂಲ ದ್ರಾವಿಡದ ಪದಾದಿಯ ‘ಚ್’ ತುಳುವಿನಲ್ಲಿ ‘ಕ್’ ಆಗುತ್ತದೆ.
ಚೆವಿ | ಚೆವಿ | ಕೆಬಿ | ಕಿವಿ |
ಚಿರೈ | ಚಿರ | ಕೆದು | ಕೆರೆ |
ಚುಮಪ್ಪು | ಚುಮಪ್ಪು | ಕೆಂಪು | ಕೆಂಪು |
೦೮. ಮೂಲ ದ್ರಾವಿಡದ ಪದಾದಿಯ ‘ಕ್’ ಕಾರದೊಂದಿಗೆ ‘ಉ’ ಇದ್ದರೆ ತುಳುವಿನಲ್ಲಿ ‘ಓ’ ಆಗುತ್ತದೆ. ಆಗದೆ ಉಳಿದುದೂ ಇದೆ.
ಕುರವನ್ | ಕುರವನ್ | ಕೊರಗೆ | ಕೊರಗ |
ಕುರತ್ತಿ | ಕುರತ್ತಿ | ಕೊರತ್ತಿ / ಕೊರಗತ್ತಿ | ಕೊರತ್ತಿ |
ಕುಡೈ | ಕುಡ | ಕೊಡೆ | ಕೊಡೆ |
ಕುಡಂ | ಕುಡಂ | ಕೊಡಪಾನೊ | ಕೊಡಪಾನ |
ಕುಳಿಯನ್ | ಕುಳಿಯನ್ | ಗುಳಿಗೆ | ಗುಳಿಗ (ಭೂತ) |
೦೯. ಮೂಲ ದ್ರಾವಿಡದ ‘ಉ’, ‘ಊ’ ಗಳು ತುಳುವಿನಲ್ಲಿ ‘ಉ’, ‘ಊ’ ಗಳಾಗಿಯೇ ಉಳಿಯುತ್ತದೆ.
ಕುಳಿಯನ್ | ಕುಳಿಯನ್ | ಗುಳಿಗೆ | ಗುಳಿಗ |
ಚುಣ್ಣಾಂಬು | ಚುಣ್ಣಾಂಬು | ಸುಣ್ಣೊ | ಸುಣ್ಣ |
ಕುತುರೈ | ಕುದ್ರ | ಕುದ್ರೆ | ಕುದುರೆ |
ಉಗ್ರ್ | ಉಗ್ರ್ / ನಖಂ | ಉಗುರು | ಉಗುರು |
ಊಸಿ / ಸೂಜಿ | ಊರ್ | ಊರು | ಊರು |
೧೦. ಮೂಲ ದ್ರಾವಿಡದ ‘ಇ’, ‘ಎ’ ಗಳಾಗಿಯೇ ಉಳಿದಿವೆ.
ಇಲೈ | ಇಲ | ಇರೆ | ಎಲೆ |
ವಿಲ | ವಿಲ | ಬಿಲೆ | ಬೆಲೆ |
ವಿರಲ್ | ವಿರಲ್ | ಬಿರೆಲ್ | ಬೆರಳು |
ನಿನಕ್ಕ್ | ನಿನಕ್ಕ್ | ನಿಕ್ಕ್ | ನಿನಗೆ |
ಎಲಿ | ಎಲಿ | ಎಲಿ | ಇಲಿ |
ಎನಕ್ಕ್ | ಎನಿಕ್ಕ್ | ಎಂಕ್ | ಎನಗೆ / ನನಗೆ |
ಚೆವಿ | ಚೆವಿ | ಕೆಬಿ | ಕಿವಿ |
೧೧. ಮೂಲ ದ್ರಾವಿಡದ ‘ಈ’, ‘ಏ’ ಗಳು ‘ಈ’, ‘ಏ’ ಗಳಾಗಿಯೇ ಉಳಿದಿವೆ.
ನೀ | ನೀ | ಈ | ನೀನು |
ಎನ್ | ಞಾನ್ | ಏನ್ / ಯಾನ್ | ನಾನು |
ತೇಳ್ | ತೇಳ್ | ಚೇಳ್ | ಚೇಳು |
೧೨. ಮೂಲ ದ್ರಾವಿಡದ ‘ಈ’, ‘ಊ’ ಆದುದು ಇದೆ.
ತೀ | ತೀ | ತು / ಸೂ | ಬೆಂಕಿ |
ವೀಳ್ | ವೀಳ್ | ಬೂರು | ಬಳ್ಳಿ / ಬೇರು |
೧೩. ಮೂಲ ದ್ರಾವಿಡದ ‘ಎಯ್ / ಐ’ ತುಳುವಿನಲ್ಲಿ ‘ಎ’ ಆಗಿದೆ.
ತಲೈ | ತಲ | ತರೆ | ತಲೆ |
ವಲೈ | ವಲ | ಬಲೆ | ಬಲೆ |
ಮಲೈ | ಮಲ | ಮಲೆ | ಮಲೆ |
ವಿಳೈ | ವಿಳ | ಬುಳೆ | ಬೆಳೆ |
೧೪. ಮೂಲ ದ್ರಾವಿಡದ ‘ಆ’ ಧ್ವನಿಮಾ ‘ಏ’ ಆಗಿದೆ.
ಆಡ್ | ಆಡ್ | ಏಡ್ | ಆಡು |
ಆಮ | ಆಮ | ಏಮೆ | ಆಮೆ |
ಪಾಲ್ | ಪಾಲ್ | ಪೇರ್ | ಹಾಲು |
೧೫. ಮೂಲ ದ್ರಾವಿಡದ ‘ಏ’ ತುಳುವಿನಲ್ಲಿ ‘ಓ’ ಆಗಿದೆ.
ವೇಟ | ವೇಟ | ಬೋಂಟೆ | ಬೇಟೆ |
ವೇಂಡ | ವೇಂಡ | ಬೋಡ್ಚಿ | ಬೇಡ |
ವೇರ್ಣಂ | ವೇಣಂ | ಬೋಡು | ಬೇಕು |
೧೬. ಮೂಲ ದ್ರಾವಿಡದ ‘ಎ’ ಧ್ವನಿಮಾ ತುಳುವಿನಲ್ಲಿ ‘ಏ’ ಆಗಿದೆ.
ಎಪ್ಪೊಳ್ಳ್ | ಎಪ್ಪೊಳ್ಳ್ | ಏಪೊ | ಯಾವಾಗ |
ಎತ್ತಿರ | ಎತ್ತಿರ | ಏತ್ | ಎಷ್ಟು |
೧೭. ಮೂಲ ದ್ರಾವಿಡದ ‘ಆವ್’ ಅಕ್ಷರ (Syllable) ತುಳುವಿನಲ್ಲಿ ‘ಆ’ ಆಗಿದೆ.
ಅವಳ್ | ಅವಳ್ | ಆಳ್ | ಅವಳು |
ಅವರ್ | ಅವರ್ | ಆರ್ | ಅವರು |
ಅವನ್ | ಅವನ್ | ಆಯೆ | ಅವನು |
೧೮. ಮೂಲ ದ್ರಾವಿಡದ ಪದಾಂತ್ಯಾನುಸ್ವಾರ ಮಲಯಾಳ ಉಳಿಸಿಕೊಂಡಿದೆ, ತುಳು ಕಳಕೊಂಡಿದೆ.
ಮರಂ | ಮರಂ | ಮರ | ಮರ |
ಪೂತಂ | ಭೂತಂ | ಬೂತ | ಭೂತ |
ತೈವಂ | ದೈವಂ | ದೆಯ್ಯೊ / ದೈವ | ದೈವ |
೧೯. ಮೂಲ ದ್ರಾವಿಡದ ಪದದಾದಿಯ ‘ಅ’, ‘ಆ’ ಧ್ವನಿಮಾಗಳು ತುಳುವಿನಲ್ಲಿ ಬದಲಾಗದೆ ಉಳಿದಿವೆ.
ಅಕ್ಕ | ಅಕ್ಕ | ಅಕ್ಕೆ | ಅಕ್ಕ |
ಅಣ್ಣನ್ | ಅಣ್ಣನ್ | ಅಣ್ಣೆ | ಅಣ್ಣ |
ಅರಚನ್ | ಅರಸನ್ | ಅರಸೆ | ಅರಸ |
ಆಣ್ | ಆಣ್ | ಆಣ್ | ಗಂಡು |
ಆಸಾರಿ | ಆಶಾರಿ | ಆಚಾರಿ | ಆಚಾರಿ |
ಆಟಂ | ಆಟಂ | ಆಟೊ | ಆಟ |
ಆನೈ / ಯಾನೈ | ಆನ | ಆನೆ | ಆನೆ |
೨೦. ಅನುನಾಸಿಕ ಧ್ವನಿಮಾಗಳಾದ ‘ಞ’, ‘ಙ’ಗಳು ತುಳು ಮಲೆಯಾಳಗಳಲ್ಲಿವೆ.
ಕುಂಞಿ | ಕುಂಞಿ | ಕುಂಞಿ | ವ್ಯಕ್ತಿ ಹೆಸರು (ಮಗು) |
ಕುಂಞಾಲಿ | ಕುಂಞಾಲಿ | ಕುಂಞಾಲಿ | ವ್ಯಕ್ತಿ ಹೆಸರು (ಮಗು) |
ಅಂಙಣಂ | ಅಂಙಣಂ | ಅಂಙಣೊ | ಅಂಗಣ |
ಬಂಙೊ | ಬಂಙೊ | ಕಷ್ಣ | ತುಂಡು |
ಈ ಮೇಲೆ ಹೇಳಿದವುಗಳಲ್ಲದೆ ಬೇರೆ ಕೆಲವು ಬದಲಾವಣೆಗಳಾಗಿ ತುಳು ಮಲೆಯಾಳಂ ಭಾಷೆಗಳಲ್ಲಿನ ಜ್ಞಾತಿ ಪದಗಳಾಗಿ ಉಳಿದಿವೆ.
ಮುಕ್ | ಮೂಕ್ | ಮೂಂಕ್ | ಮೂಗು |
ನಾಕ್ | ನಾಕ್ | ನಾಲಗೆ / ನಾಲಯಿ | ನಾಲಿಗೆ |
ವಿಳಕ್ಕ್ | ವಿಳಕ್ಕ್ | ಬೊಳಿಚ್ಚೊ | ಬೆಳಕು |
ಮಕನ್ | ಮಕನ್ | ಮಗೆ | ಮಗ |
ಕಾಕ್ಕ | ಕಾಕ್ಕ | ಕಕ್ಕೆ | ಕಾಗೆ |
ಎನಕ್ | ಎನಿಕ್ಕ್ | ಎಂಕ್ | ನನಗೆ |
ಯಾರ್ | ಯಾರ್ | ಏರ್ | ಯಾರು |
ಕೂಂದಲ್ | ಕೂಂದಲ್ | ಕುಜಲ್ | ಕೂದಲು |
ಚೊರಕೈ | ಚೊರಕ್ಕೆ | ತುರೆ | ಸೋರೆಕಾಯಿ |
ತುಳು ಮಲೆಯಾಳ ಭಾಷೆಗಳ ಸಂಪರ್ಕದಿಂದ ಪರಸ್ಪರ ಸ್ವೀಕರಿಸಿಕೊಂಡ ಪದಗಳು ತುಳು ನಿಘಂಟುವಿನಲ್ಲಿ ಸೇರಿಕೊಂಡ ಮಲೆಯಾಳಂ ಪದಗಳು:
ಕಾಕ್ಕಕುಯಿಲ್ | ಕಾಗೆ ಹಕ್ಕಿ |
ಅನ್ನನೈವೇದ್ಯ | ಅನ್ನನೈವೇದ್ಯ |
ಅಂಬರಪ್ಪ | ಅವಸರ, ಗಡಿಬಿಡಿ |
ಅಡ್ಕ್ಕಳ | ಅಡುಗೆ ಕೋಣೆ |
ಅರಂಞಾಣಂ | ಸೊಂಟದ ಪಟ್ಟಿ |
ಕುಂಞಕತ್ತಿ | ಸಣ್ಣಕತ್ತಿ |
ಓಮನ | ಸುಂದರವಾದ ಹೆಸರು |
ಕೀಶಾಂತಿ | ದೇವಸ್ಥಾನದ ಉಪಪೂಜಾರಿ |
ಕೈಲ್ | ಬಾಳೆಹಣ್ಣಿನ ಗೊನೆ, ಸೌಟ್ಟು |
ಉಮಿಕ್ಕರಿ | ಭತ್ತದ ಹೊಟ್ಟನ್ನು ಉರಿಸಿ ಮಾಡಿದ ಕರಿ |
ಉರ್ಕ್ಕ್ | ತಾಯ್ತ |
ಓಲಕ್ಕುಡ | ಈಚಲ ಗರಿಯ ಛತ್ರಿ |
ಓತ್ತ್ | ಓದು |
ಓನ್ದ್ | ಓತಿ |
ಇತ್ಯಾದಿ ಅನೇಕ ಪದಗಳು ಸೇರಿಕೊಂಡಿವೆ. ಅಲ್ಲದೆ ಪಿಕ್ಕಾಸ್, ಕೈಕೊಟ್ಟು, ಪಾರೆಂಗಿ, ಕುಂಞತ್ತಿ, ಕಡ್ಪತ್ತಿ, ಮುಟ್ಟಾಳೆ (ಮುಟ್ಟಪ್ಪಾಳೆ), ನೇಜಿ, ಬೋರಿ, ಕರ್ಕ್, ಕೊದಂಟಿ, ಉಳಿ, ಬಾಜಿ, ಬಟ್ಟಿ, ಕಾಂಟ್ಯ, ತೋಟೊ, ಬಾಣಬೊಟ್ಟು ಮೊದಲಾದ ಅನೇಕ ಪದಗಳನ್ನು ಸಮಾನವಾಗಿ ನಿತ್ಯ ವ್ಯವಹಾರದ ಮಾತುಗಳಲ್ಲಿ ತುಳು ಮಾತನಾಡುವವರೂ ಮಲೆಯಾಳ ಮಾತನಾಡುವವರೂ ಬಳಸುತ್ತಾರೆ.
ಅಮೃತ ಸೋಮೇಶ್ವರರು ಹೇಳಿರುವ ‘ಮೋಯ ಮಲಯಾಳ – ಕನ್ನಡ ಪದಕೋಶದಲ್ಲಿ’ ತುಳುವಿನಿಂದ ಮೋಯ ಮಲಯಾಳದಲ್ಲಿ ಸ್ವೀಕರಿಸಿದ ಪದಗಳ ಒಂದು ಪಟ್ಟಿ ಹೀಗಿದೆ –
ತುಳು | ಮೋಯ ಮಲಯಾಳ | ಅರ್ಥ |
ಅರೆಮಡಲ್ | ಅರೆಮಡಲ್ | ತಾಳೆ, ತೆಂಗುಗಳ ಒಣಗಿದ ಸೋಗೆ |
ಉಪ್ಪಾಡ್ಪಚ್ಚಿಲ್ | ಉಪ್ಪಾಡ್ಪಚ್ಚಿಲ್ | ಉಪ್ಪಿನಲ್ಲಿ ಹಾಕಿದ ಹಲಸಿನ ಸೋಳೆ |
ಕುಡು | ಕುಡು | ಹುರುಳಿ |
ಕಂಡು | ಕಂಡು | ಕಳ್ಳ, ಮೋಸಗಾರ |
ಪೂಜಿಕಟ್ಟುನಿ | ಪೂಜಿಕೆಟ್ಟ್ನ್ನ˚ | ಎಲ್ಲವನ್ನೂ ಬಾಚಿ ಕಟ್ಟುವುದು |
ಗೂಂಜಿ | ಕೂಂಜಿ | ಹಲಸಿನ ಹಣ್ಣಿನ ನಡುವಿನ ದಿಂಡು |
ಅಡರ್ | ಅಡರ್ | ಸಪೂರ ಗೆಲ್ಲು |
ಗುತ್ತಾಯ | ಗುತ್ತಾಯೊ˚ | ಕರಾರು, ಕಂತ್ರಾಟು, ಗುತ್ತಿಗೆ |
ಕುಂಡಕೋರಿ | ಕುಂಡಕೋದಿ | ಚಿಕ್ಕ ಕಾಡು ಕೋಳಿ |
ಕುಪ್ಪುಳು | ಕುಪ್ಪುಳು | ಕೆಂಬೋತ |
ಕುಜಿಲಿ | ಕುಜಿಲಿ | ಮಣ್ಣಿನ ಮೊಗೆ |
ಅಮೆ | ಅಮ | ಜನನ ಸೂತಕ |
ಬೈತರಿ | ಬೈತರಿ | ಕಳಪೆ ಅಕ್ಕಿ |
ಬೋರಿ | ಬೋರಿ | ಹೋರಿ |
ಇವುಗಳಲ್ಲಿ ಬೋರಿ, ಕಂಡು, ಕೂಂಜಿ, ಅರೆಮಡಲ್, ಪೂಜಿ ಕೆಟ್ಟ್ನ್ನ, ಅಡರ್ಕುಪ್ಪುಳು, ಕುಜಿಲಿ ಇತ್ಯಾದಿ ಪದಗಳನ್ನು ಮಲೆಯಾಳ ಮಾತನಾಡುವ ಇತರ ಸಮುದಾಯದವರೂ ಬಳಸುತ್ತಾರೆ.
‘ಮೋಯ ಮಲಯಾಳ’ ಎಂಬ ತನ್ನ ಪ್ರಬಂಧದಲ್ಲಿ ಎಂ. ರಾಮ ಅವರು ತುಳು ತಿಂಗಳನ್ನು ಅದೇ ರೀತಿಯಲ್ಲಿ ಅಥವಾ ಅಲ್ಪ ಸ್ವಲ್ಪ ಧ್ವನಿಮಾ ವ್ಯತ್ಯಾಸದೊಂದಿಗೆ ಉಪಯೋಗಿಸುತ್ತಾರೆಂದು ಗುರುತಿಸಿದ್ದಾರೆ.
ತುಳು ತಿಂಗಳುಗಳ ಹೆಸರು | ಮೋಯ ಮಲಯಾಳದಲ್ಲಿ |
ಆಟಿ | ಆಟಿ |
ಸೋಣ / ಣೊ | ಚೋಣಂ |
ನಿರ್ನಾಳಂ | ನಿರ್ನಾಳಂ |
ಬೋಂತೇಳ್ | ಬೋತಿಂಙೊ |
ಜಾರ್ದೆ | ಜಾರ್ದ |
ಪಿರಾರ್ದೆ | ಪಿರಾರ್ದ |
ಪುಯಿತ್ತೇಲ್ | ಪುಯಿತ್ತೇಲ್ |
ಮಾಯಿ | ಮಾಯಿ (ತಿಂಙೊ) |
ಸುಗ್ಗಿ | ಸುಗ್ಗಿ |
ಪಗ್ಗು | ಪಗ್ಗು |
ಬೇಸ್ಯ | ಬೇಸ್ಯ |
ಕಾರ್ತೇಲ್ | ಕಾರ್ತಿಂಙ |
ಮಲೆಯಾಳ ತುಳು ಸಂಬಂಧವನ್ನು ಸೂಚಿಸುವ ಇನ್ನೊಂದು ಪದವೇ ‘ಪೊಲಿ’ ‘ವೃದ್ಧಿ’ ಎಂಬ ಅರ್ಥದಲ್ಲಿ ಕೇರಳದ ಪುರಕ್ಕಳಿಯ ವೇಳೆಯಲ್ಲಿಯೂ ತುಳುನಾಡಿನಲ್ಲಿ ಬತ್ತದೈ ಪೈರು ಕಟಾವು ಮಾಡಿ ತೆನೆಬಡಿದು ಭತ್ತದ ರಾಶಿ ಮಾಡಿ ಅದರ ಸುತ್ತ ಜನ ನಿಂತು ಪೊಲಿ ಹಾಡುತ್ತಾರೆ.
ಅನ್ಯದೇಶಿಯ ಪದಗಳ ಬಳಕೆಯಲ್ಲಿಯೂ ತುಳು ಮಲೆಯಾಳಗಳ ಸಂಬಂಧವನ್ನು ಗುರುತಿಸಿಕೊಳ್ಳಬಹುದು. ಇತರ ದ್ರಾವಿಡ ಭಾಷೆಗಳೆಂಬಂತೆ, ತುಳು ಮಲೆಯಾಳ ಭಾಷೆಗಳನ್ನಾಡುವವರೂ ಅನ್ಯದೇಶೀಯ ಪದಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಗ್ರೀಕ್, ಅರೆಬಿಕ್, ಪರ್ಶಿಯನ್, ಪೋರ್ಚುಗೀಸ್, ಇಂಗ್ಲೀಷ್ಮೊದಲಾದ ಅನ್ಯದೇಶೀಯ ಭಾಷೆಗಳ ಪದಗಳೂ ಹಿಂದೂಸ್ಥಾನಿ, ಮರಾಠಿ ಮೊದಲಾದ ದ್ರಾವಿಡೇತರ ಭಾಷೆಗಳ ಪದಗಳೂ ಈ ಭಾಷೆಗಳಲ್ಲಿ ಸೇರಿಕೊಂಡಿವೆ. ಎರಡು ಭಾಷೆಗಳ ಸಮಾನವಾಗಿ ಬಳಕೆಯಾಗುತ್ತಿರುವ ಕೆಲವು ಪದಗಳನ್ನು ಗಮನಿಸಬಹುದು.
ಇನಾಮು | ಬಹುಮಾನ |
ಅಬುರು | ಮರ್ಯಾದೆ |
ಕೊಸಿ | ಇಷ್ಟ |
ಕಲಾಸ್ | ನಾಶ |
ಕಾಸಾ | ಸ್ವಂತ |
ಕುಸಾಲ್ | ವಿನೋದ |
ತಾಜಾ | ಶುದ್ಧ |
ಇಂಗ್ರೇಜಿ | ಇಗರ್ಜಿ |
ಅಕೇರಿ | ಕೊನೆ |
ಬಸ್ | ಬಸ್ |
ಅಸಲ್ | ಅಸಲು |
ಮೇಜ್ | ಮೇಜು |
ದೌಲತ್ತು | ದರ್ಪ |
ಬೆಂಚ್ | ಬೆಂಚು |
ಪುರ್ಬು | ಕ್ರಿಶ್ಚಿಯನ್ ಗಂಡಸು |
ಬರ್ಕತ್ | ಏಳಿಗೆ |
ಪಾಸ್ | ತೇರ್ಗಡೆ |
ಪಿಕ್ | ಹುಚ್ಚುತನ, ಎಚ್ಚರ ಇಲ್ಲದಿರುವಿಕೆ |
ಕಾಐಪೇತ್ | ವ್ಯಾಜ್ಯ, ಕೈಪಿಯತ್ತು |
ನಗದ್ | ನಿಗದಿತ ಹಣ |
ನೋಟೀಸ್ | ನೋಟೀಸು |
ದೋಸ್ತಿ | ಮಿತ್ರ |
ನದ್ರ್ | ಜಾಗ್ರತೆ |
ದುರಸ್ತಿ | ರಿಪೇರಿ |
ಇತ್ಯಾದಿ ಇನ್ನೂ ಅನೇಕ ಪದಗಳು ಬಳಕೆಯಲ್ಲಿವೆ.
ಮಲೆಯಾಳದಲ್ಲಿ ಹೊಸತಾಗಿ ಉಂಟಾದ ಒಂದು ಪದ ‘ಅಡಿಪ್ಪೊಳಿ’. ಬಹಳ ಚೆನ್ನಾದುದು ಎಂಬ ಅರ್ಥದಲ್ಲಿ ಬೆಳದೆ ಬಂದ ಈ ಪದವು ಕಾಸರಗೋಡು ಭಾಗದ ತುಳುವಿನಲ್ಲೂ ಉಪಯೋಗಿಸಲು ಪ್ರಾರಂಭಿಸಿದ್ದಾರೆ. ಉದಾ: ಅವು ಅಡಿಪೊಳಿ ಸಿನೆಮ. ಹಾಗೇ ತುಳುವಿನಲ್ಲಿ ಹೊಸತಾಗಿ ಬಳಕೆಗೆ ಬಂದ ಒಂದು ಪದ ‘ರಪ್ಪ’ ಎಂಬುದು. ಕೂಡಲೇ, ಅತಿಬೇಗ ಎಂಬ ಅರ್ಥದಲ್ಲಿ ಬಳಕೆಗೆ ಬಂದ ಈ ಪದವನ್ನು ಕಾಸರಗೋಡಿನ ಮಲೆಯಾಳ ಮಾತನಾಡುವವರೂ ಉಪಯೋಗಿಸುತ್ತಾರೆ.
ಉದಾ: ಞಾನ್ ಅವುಡೆ ಪೋಯಿಟ್ಟ್ ರಪ್ಪ್ ಬರ್ನ್ನ.
ಯಾನ್ ಅವುಳು ಪೋದು ರಪ್ಪ ಬರ್ಪೆ.
ಬಹಳ ಪುರಾತನ ಕಾಲದಿಂದಲೇ ತುಳು ಮಲಯಾಳ ಭಾಷೆಗಳೊಳಗೆ ಆತ್ಮೀಯ ಸಂಬಂಧ ಇತ್ತು ಹಾಗೂ ಇದೆಯೆಂಬುದಕ್ಕೆ ಮೇಲಿನ ಉಲ್ಲೇಖಾಂಶಗಳು ನಿದರ್ಶನಗಳಾಗಬಹುದು.
Leave A Comment