೧೧. ಕೊರಗ ಭಾಷೆಯಲ್ಲಿ ವಿಧ್ಯರ್ಥಕ ಬಹುವಚನ ಪ್ರತ್ಯಯ – ಲೆರ್ಕಂಡುಬಂದರೆ ತುಳುವಿನಲ್ಲಿ – ಲೆ ಆಗಿ ಕಂಡುಬರುತ್ತದೆ. ಇವು ಉಭಯ ಲಿಂಗಕ್ಕೂ ಅನ್ವಯಿಸುತ್ತವೆ. ಉದಾಹರಣೆಗಾಗಿ
ಕೊರಗ ತುಳು ಅರ್ಥ
ತಾ – ತಲ್ಲೆ್ | ಕೊರು – ಕೊರ್ಲೆ | ಕೊಡಿರಿ! |
ಪೋ – ಪೋಲೆ್ | ಪೋ – ಪೋಲೆ | ಹೋಗಿರಿ! |
ಕೊರು – ಕೊರ್ಲ್ಲೆ್ | ಕೆರ್ಕೆರ್ಲೆ | ಕೊಲ್ಲಿರಿ! |
ಆರ್ಟ್ಆರ್ಟ್ಲೆ್ | ದಕ್ಕ್ದಕ್ಕ್ಲೆ | ಬಿಸಾಡಿರಿ! |
೧೨. ಕೊರಗ ಭಾಷೆಯಲ್ಲಿ ವಿಧ್ಯರ್ಥಕ ನಿಷೇಧ ಪ್ರತ್ಯಯ – ಬ – ಕಂಡುಬರುತ್ತದೆ. ಆದರೆ ತುಳು ಭಾಷೆಯಲ್ಲಿ ಇದು ಕಂಡುಬರುವುದಿಲ್ಲ. ಕೊರಗರ ವಿಧ್ಯರ್ಥಕ ನಿಷೇಧ ಭಾಷೆಯಲ್ಲಿ ಇದು ಸ್ತ್ರೀಲಿಂಗ ಏಕವಚನದಲ್ಲಿರುವ – ನ್ಪ್ರತ್ಯಯ – ನ್ನ್ಆಗಿಯೂ ಬಹುವಚನದಲ್ಲಿ ಉಭಯ ಲಿಂಗಕ್ಕೆ ಸಾಮಾನ್ಯವಾಗಿರುವ – ಲ್ಪ್ರತ್ಯಯವು – ಲ್ಲ್ಆಗಿ ಮಾರ್ಪಡುತ್ತವೆ. ಉದಾಹರಣೆಗಾಗಿ,
ಕೊರಗ
ಪುಲ್ಲಿಂಗ ಏಕವಚನ | ಸ್ತ್ರೀ ಲಿಂಗ ಏಕವಚನ | ಉಭಯಲಿಂಗ ಬಹುವಚನ |
ಚೂ ನೋಡು | ಜಾ ಬನ್ನೆ್ | ಚಾಬಲ್ಲೆ್ |
ಚಾಬಡ | ‘ನೋಡಬೇಡ!’ | ‘ನೋಡಬೇಡಿ!’ |
ಪೋ ಹೋಗು | ಪಾಬನ್ನೆ್ | ಪಾಬಲ್ಲೆ್ |
ಪಾಬಡ | ‘ಹೋಗಬೇಡ!’ | ‘ಹೋಗಬೇಡಿ!’ |
ತುಳು
ಉಭಯಲಿಂಗ ಏಕವಚನ | |||
ತಿನ್ | ತಿನ್ನು | ತಿನಡ | ‘ತಿನ್ನಬೇಡ!’ |
ಕೊರು | ಕೊಡು | ಕೊರಡ | ‘ಕೊಡಬೇಡ!’ |
ಉಭಯಲಿಂಗ ಬಹುವಚನ | |||
ತಿನ್ | ತಿನ್ನು | ತಿನಡೆ | ‘ತಿನ್ನಬೇಡಿ!’ |
ಕೊರು | ಕೊಡು | ಕೊರಡೆ | ‘ಕೊರಡಬೇಡಿ!’ |
೧೩. ಕೊರಗ ಭಾಷೆಯಲ್ಲಿ ಅ ಭೂತ ಕ್ರಿಯಾ ವಿಶೇಷಣ ಪ್ರತ್ಯಯ – ಅ ಕಂಡುಬಂದರೆ ತುಳುವಿನಲ್ಲಿ – ಒಂದು ಬರುತ್ತದೆ. ಉದಾಹರಣೆಗಾಗಿ
ಕೊರಗ | ತುಳು | ಅರ್ಥ |
ಊ – ಓಕುಲ | ಉಪ್ಪು -ಇತ್ತೊಂದು | ‘ಇರುತ್ತಾ’ |
ಚೂ – ಚಾಕಲ | ತೂ -ತೂವೊಂದು | ‘ನೋಡುತ್ತಾ’ |
ಪೋ – ಪಾಕಲ | ಪೋ – ಪೋವೊಂದು | ‘ಹೋಗುತ್ತಾ’ |
ತಾ – ತರಕಲ | ಕೊರು – ಕೊರೊಂದು | ‘ಕೊಡುತ್ತಾ’ |
ದೆಕ್ಕಿ – ದೆಕ್ಯಲ | ದೆಪ್ಪು – ದತ್ತೊಂದು | ‘ತೆಗೆಯುತ್ತಾ’ |
ಭೂತ ಕ್ರಿಯಾ ವಿಶೇಷಣ ಪ್ರತ್ಯಯ ಕೊರಗದಲ್ಲಿ – ತನ್ಕಂಡು ಬಂದರೆ ತುಳುವಿನಲ್ಲಿ ಅದರ ಬದಲು – ದ್ಹಾಗೂ – ದು ಪ್ರತ್ಯಯಗಳು ಕಂಡುಬರುತ್ತವೆ – ಅ (ದ್) ಉದಾಹರಣೆಗಾಗಿ
ಕೊರಗ: | |||
ಊ | ‘ಇರು’ | ವಾತ್ನ್ | ‘ಇದ್ದು’ |
ಜೂ | ಇಡು | ಜಾತ್ನ್ | ‘ಇಟ್ಟು’ |
ಪೋ | ಹೋಗು | ಪಾತ್ನ್ | ‘ಹೋಗಿ’ |
ಕೊರು | ಕೊಲ್ಲು | ಕೊರತ್ನ್ | ‘ಕೊಂದು’ |
ಪುಡ್ದು | ಹಿಡಿ | ಪುಡ್ಡತ್ನ್ | ‘ಹಿಡಿದು’ |
ತುಳು | |||
ಕಲ್ಪು | ‘ಕಲಿ’ | ಕತ್ತ್(ದ್) | ‘ಕಲಿತು’ |
ಗರ್ಪು | ‘ಅಗೆ’ | ಗರ್ತ್(ದ್) | ‘ಅಗೆದು’ |
ಉಪ್ಪು | ‘ಇರು’ | ಇತ್ತ್(ದ್) | ‘ಇದ್ದು’ |
ಪರ್ | ‘ಕುಡಿ’ | ಪರ್ದ್ | ‘ಕುಡಿದು’ |
ಪನ್ | ‘ಹೇಳು’ | ಪಂದ್ | ‘ಹೇಳಿ’ |
ಓದು | ‘ಓದು’ | ಓದುದು | ‘ಓದಿ’ |
ಉನು | ‘ಊಟ ಮಾಡು’ | ‘ಉಂಡುದು’ | ‘ಊಟ ಮಾಡಿ’ |
೧೪. ಕೊರಗ ಭಾಷೆಯಲ್ಲಿ ನಿಷೇಧಾರ್ಥಕ ಕ್ರಿಯಾ ವಿಶೇಷಣ ಪ್ರತ್ಯಯಗಳು – ನ್ತ್ಹಾಗೂ – ಅಂತ್ಆಗಿದ್ದು ತುಳುವಿನಲ್ಲಿ – ಅಂದೆ ಮಾತ್ರ ಕಂಡುಬರುತ್ತದೆ. ಉದಾಹರಣೆಗಾಗಿ
ಕೊರಗ: | |||
– ನ್ತೆ್: | |||
ಊ | ‘ಇರು’ | ವಾಂತೆ್ | ‘ಇರದೆ’ |
ಚೂ | ‘ನೋಡು’ | ಚಾಂತೆ್ | ‘ನೋಡದೆ’ |
ಪೋ | ‘ಹೋಗು’ | ಪಾಂತೆ್ | ‘ಹೋಗದೆ’ |
– ಅಂತೆ್ | |||
ಆ | ಆಗು | ಆಗಂತೆ್ | ಆಗದೆ |
ತಾ | ಕೊಡು | ತರಂತೆ್ | ಕೊಡದೆ |
ಬೊಡು ಬಿಡು | ಬೊಡಂತೆ | ಬಿಡದೆದ್ | ಬಿಡದೆ |
ಮಾಟ್ | ಮಾಡು | ಮಾಟಂತೆ್ | ಮಾಡದೆ |
ತುಳು | |||
ಕಲ್ಪು | ಕಲಿ | ಕಲ್ಪಂದೆ್ | ಕಲಿಯದೆ |
ಕನ | ತರು | ಕನಂದೆ್ | ತರದೆ |
ಬರ್ | ಬರು | ಬರಂದೆ್ | ಬರದೆ |
ಕೆಕ | ಕೊಲ್ಲು | ಕೆರಂದೆ್ | ಕೊಲ್ಲದೆ |
ತಿನ್ | ತಿನ್ನು | ತಿನಂದೆ್ | ತಿನ್ನದೆ |
೧೫. ಕೊರಗ ಭಾಷೆಯಲ್ಲಿ ನಾಮಪದ ವಿಶೇಷಣ ಪ್ರತ್ಯಯಗಳಾದ ‘ಅ’ವು ಅಭೂತ ಕ್ರಿಯಾ ಪ್ರಕೃತಿಗೂ – ‘ವ’ ಮತ್ತು ‘ಎ’ ಪ್ರತ್ಯಗಳು ಭೂತ ಕ್ರಿಯಾ ಪ್ರಕೃತಿಗಳಿಗೂ ‘ಇನ’ ಪ್ರತ್ಯಯವು ಕ್ರಿಯಾ ವಿಶೇಷಣ ನಿಷೇಧ ರೂಪಕ್ಕೂ ಸೇರಿಸಿದಾಗ ಕ್ರಮವಾಗಿ ಅಭೂತ, ಭೂತ ಹಾಗೂ ನಿಷೇಧಾರ್ಥಕ ನಾಮ ವಿಶೇಷಣ ರೂಪಗಳನ್ನು ಪಡೆಯಬಹುದು. ಉದಾಹರಣೆಗಾಗಿ
– ಅ: | |||
ತಾ | ಕೊಡು | ತನ್ನ | ಕೊಡವು |
ಪುಡ್ಡು | ಹಿಡಿ | ಪುಡ್ಣ | ಹಿಡಿಯುವ |
ಬುತ್ತಕ | ಬೀಳು | ಬುತ್ತರ್ನ | ಬೀಳುವ |
-ಏ: | |||
ಪೋ | ಹೋಗು ಪೇ | ಹೋದ | |
– ಎ: | |||
ಚೂ | ನೋಡು | ಚೂವೆ | ನೋಡಿದ |
ತಾ | ಕೊಡು | ತರೆ | ಕೊಟ್ಟ |
ಬುತ್ತಕ | ಬೀಳು | ಬುತ್ತರೆ | ಬಿದ್ದ |
– ಇನ: | |||
ಊ | ಇರು | ವಾಂತಿನ | ‘ಇಲ್ಲದ’ |
ಚೂ | ನೋಡು | ಚಾಂತಿನ | ‘ನೋಡದ’ |
ಪೋ | ಹೋಗು | ಪಾಂತಿನ | ‘ಹೋಗದ’ |
ಗೇರ್ಪು | ‘ಎತ್ತು’ | ಗೇರ್ಪಚಿನ | ‘ಎತ್ತದ’ |
ಆದರೆ ತುಳುವಿನಲ್ಲಿ ನಾಮ ವಿಶೇಷಣ ಪ್ರತ್ಯಗಳು – ಇ (ನ) ಹಾಗೂ ಉ (ನ) ಗಳಾಗಿದ್ದು ನಾಮ ವಿಶೇಷಣ ನಿಷೇಧ ಪ್ರತ್ಯಯವು – ಅಂದ್ಆಗಿದ್ದು ಇದು ಕ್ರಿಯಾ ಪ್ರಕೃತಿಗಳ ಹಾಗೂ ನಾಮ ವಿಶೇಷಣ ಪ್ರತ್ಯಯ – ಇ (ನ) ದ ಮಧ್ಯೆ ಬರುತ್ತದೆ. ಉದಾಹರಣೆಗಾಗಿ:
ಉನು | ಉಣ್ಣು | ಉಂಡ (ನ) | ಉಂಡ |
ಬುಡು | ಬಿಡು | ಬುಡ್ತಿ (ನ) | ಬಿಟ್ಟಿದ್ದು |
ತಿನ್ | ತಿನ್ನು | ತಿನ್ಪಿ (ನ) | ತಿನ್ನುವ |
ನಾಡ್ | ಹುಡುಕು | ನಾಡು (ನ) | ಹುಡುಕುವ |
ಪನ್ | ಹೇಳು | ಪಂನಂದಿ (ನ) ಹೇಳದ |
೧೬. ಕೊರಗ ಹಾಗೂ ತುಳು ಭಾಷೆಗಳಲ್ಲಿ ವ್ಯತ್ಯಾಸವಾಗಿ ಕಂಡುಬರುವ ಕೆಲವೊಂದು ವಿಶಿಷ್ಟ ಪದಗಳು ಈ ರೀತಿ ಇವೆ:
ಕೊರಗ | ತುಳು | ಅರ್ಥ |
ಅಬ | ಅಂಚಿ | ‘ಅತ್ಲಗೆ’, ಆಚೆ |
ಅಜಲಾಯಿ | ಪೂಜಾರಿ | ‘ಬಿಲ್ಲವ ಗಂಡಸು’ |
ಅಜಲ್ತಿ | ಪುಜಾರ್ದಿ | ‘ಬಿಲ್ಲವ ಹೆಂಗಸು’ |
ಅತೆ್ರೆ್ | ಇಜಾಂಡ | ‘ಇಲ್ಲದಿದ್ದರೆ’ |
ಅವುರು | ನುಪ್ಪು | ‘ಅನ್ನ’ |
ಆಕ್ಡೆ್ | ಆಂಡ | ‘ಆದರೆ’ |
ಆರ್ಟ್ | ದಕ್ಕ್ | ‘ಎಸೆ’ |
ಬದ್ಕಲೆ | ಬವುತೆಲೆ್ | ‘ಬೈತಲೆ’ |
ಬತ್ತ | ಬಾಕ | ‘ಭತ್ತ’ |
ಬೈದ | ಮರ್ದ್ | ‘ಮದ್ದು’ |
ಬೆಕ್ಕ್ | ಪುಚ್ಚೆ್ | ‘ಬೆಕ್ಕು’ |
ಬೇಲ್ಕಲುರು | ಓಂತಿ | ‘ಓತಿ’ |
ಬಿಜ್ಜಿ | ಕನಕ್ | ‘ಕಟ್ಟಿಗೆ’ |
ಬಿರ್ದ್ / ಪುಡರತ | ಮದ್ಮೆ್ | ‘ಮದುವೆ’ |
ಬೊಲ್ದು ಪಕ್ಕಿ | ಕೊಂರ್ಗು | ‘ಕೊಕ್ಕರೆ’ |
ಬೋಂಕುದಾಯಿ | ಓಡಾರಿ | ‘ಕುಂಬಾರನು’ |
ಜೋಂಕುದದ್ದ್ | ಓಡಾರ್ದಿ | ‘ಕುಂಬಾರ ಹೆಂಗಸು’ |
ಬುತ್ತರ | ಬೂರು | ‘ಬೀಳು’ |
ಚಂಕ | ತಂಕ | ‘ಹೃದಯ’ |
ಚರಲ್ಗೆ್ | ಅರಕ್ತೇಲ್ | ‘ಲಕ್ಷ್ಮೀ ಚೇಳು’ |
ಚೊಮ್ಮ | ತೆಮ್ಮ | ‘ಕೆಮ್ಮು’ |
ದತ್ತ್ | ಉಂತು | ‘ನಿಲ್ಲು’ |
ದಾರಯಿ | ಬೊಲ್ಲಿ | ‘ನಕ್ಷತ್ರ’ |
ದೆಂಗಿ | ದೆಂಜಿ | ‘ಏಡಿ’ |
ದುವೆರ್ದಾಯಿ | ಬೇರಿ | ‘ಮುಸ್ಲಿಂ ಹೆಂಗಸು’ |
ದೊವೆರೆ | ಉಜ್ಜೆರ್ | ‘ಒನಕೆ’ |
ಎರ್ದ್ | ಎರು | ‘ಕೋಣ’ |
ಎರು | ಕೊಡೆ್ | ‘ನಿನ್ನ’ |
ಗದಿಗೆ್ದಿನ | ಅಂಗಾರೆ್ | ‘ಮಂಗಳವಾರ’ |
ಗಂಡೆ | ಆನ್ | ‘ಗಂಡು’ |
ನೇರ್ಪು | ದೆರ್ಪು | ‘ಎತ್ತು’ |
ಗೊಯಿಜಿ | ನೆರ್ | ‘ಬೈಯು’ |
ಇಚ್ಚಿ | ಇಂಚ | ‘ಹೀಗೆ’ |
ಇಕ್ಕತ್ | ಇತ್ತೆ್ | ‘ಈಗ’ |
ಜಗರ್ | ಕಾಜಿ | ‘ಬಳೆ’ |
ಜೇಕ್ | ದೆಕ್ಕ್ | ‘ತೊಳೆ’ |
ಜೂ | ದೀ | ‘ಇಡು’ |
ಕಡ್ಡಯಿ | ದೋಲು | ‘ಡೋಲು’ |
ಕಂಡ್ಚರೆ | ಮರ್ಲೆ | ‘ಹುಚ್ಚ’ |
ಕಂಡರ್ತಿ | ಮರ್ತಿ | ‘ಹುಚ್ಚಿ’ |
ಕಂಡ್ಜರ್ | ಮರ್ಲ | ‘ಹುಚ್ಚುತನ’ |
ಕಲ್ಲ್ | ಕಲ್ಪು | ‘ಕಲಿ’ |
ಕಂಡೆರ್ | ಬೊಗ್ಗಿ | ‘ಹೆಣ್ಣು ನಾಯಿ’ |
ಕಂಚಲ್ದಾಯಿ | ಪರ್ಬು | ‘ಕ್ರಿಶ್ಚಿಯನ್ಗಂಡಸು’ |
ಕಂಚಲ್ದ್ | ಬಾಯಿ | ‘ಕ್ರಿಶ್ಚಿಯನ್ಹೆಂಗಸು’ |
ಕಪ್ಪು | ಕೂವುಂಪು | ‘ಹೂಳು’ |
ಕಾವು | ಕಾಪು | ‘ಕಾಯು’ |
ಕೇಲ್ | ಕೇನ್ | ‘ಕೇಳು’ |
ಕೇರಮಟೆ್ | ತೇರಂಟೆ್ | ‘ಚೇರಟೆ’ |
ಕೊದಂಟಿದಿನ | ಗುರುವಾರ | ‘ಗುರುವಾರ’ |
ಕೊಡಂಕ್ರೆ | ಆಚಾರಿ | ‘ಬಡಗಿ’ |
ಕೊಡಂಕರ್ದಿ | ಆಚಾರ್ದಿ | ‘ಬಡಗಿಯ ಹೆಂಗಸು’ |
ಕೊಡ್ತಾಯಿ | ಗುರ್ಕಾರೆ | ‘ಯಜಮಾನ’ |
ಕೊಡ್ತದ್ದ್ | ಗುರ್ಕಾರ್ದಿ | ‘ಯಜಮಾನತಿ’ |
ಕೊಲಂಪು | ಅಬಡ್ | ‘ಗೊರಸು’ |
ಕೊಂಡಲ್ದಾಯಿ | ಉಚ್ಚು, ಸರ್ಪೆ | ‘ಹಾವು’, ‘ಸರ್ಪ’ |
ಕೊಂಗರ | ಕಕ್ಕೆ್ | ‘ಕಾಗ’ |
ಕೊಂಗು | ನಾಯಿ | ‘ನಾಯಿ’ |
ಕೊರ್ರೆಕೊರಾಯಿ | ಕೊರಗೆ | ‘ಕೊರಗ ಗಂಡಸು’ |
ಕೊರ್ರ್ಕೊರ್ತಿ | ದಿಕ್ಕೊಲು | ‘ಕೊರಗ ಹೆಂಗಸು’ |
ಕೊರಾಯಿ | ಕಂಡನೆ | ‘ಗಂಡ’ |
ಕೊರ್ತಿ | ಬುಡೆದಿ | ‘ಹೆಂಡತಿ’ |
ಕೊರು | ಕೆರು | ‘ಕೊಲ್ಲು’ |
ಕೊತ್ತ್ | ಪಡ್ಕೆ್ | ‘ಮೂತ್ರ’ |
ಕೋರು | ಕೊರು | ‘ಕೊಡು’ |
ಕುಡ್ಡು | ಕುಡ್ಪು | ‘ಕೊಡವು’ |
ಕುಂಜಾರ್ದಿನ | ಸೋಮಾರ | ‘ಸೋಮವಾರ’ |
ಕೂಜೆ | ಆನ್ | ‘ಗಂಡು’ |
ಕೂಜಿ | ಪೊಣ್ಣು | ‘ಹೆಣ್ಣು’ |
ಕೂಟಯಿ | ಪೇನ | ‘ಹೇನು’ |
ಲಾಕ್ | ಲಕ್ಕ್ | ‘ಏಳು’ |
ಮಂದರ | ಮುಂಡ | ‘ಹಣೆ’ |
ಮರಲ್ದಿನ | ಸನಿವಾರ | ‘ಶನಿವಾರ’ |
ಮರೆ | ಬರ್ಸ | ‘ಮಳೆ’ |
ಮಾವು | ಕುಕ್ಕು | ‘ಮಾವು’ |
ಮೇಲಡೆ | ಕಿಲೆಸೆ | ‘ಕ್ಷೌರಿಕ’ |
ಮಿದೆ್ | ಬೊಕ್ಕ | ‘ಮತ್ತು, ಮತ್ತೆ’ |
ನೇಕ್ಲ್ | ಪೋಡಿ | ‘ಹೆದರು’ |
ನುನು | ದಿಂಗ | ‘ನುಂಗು’ |
ಒಬ | ಒಲ್ಪ | ‘ಯಾವ ಕಡೆ’ |
ಒಲಿ | ಲೆಪ್ಪು | ‘ಕರೆ’ |
ಓಂಕದೆ್ | ಬಾಂತ್ | ‘ವಾಂತಿ’ |
ಓಂಕು | ಕಕ್ಕ್ | ‘ವಾಂತಿಮಾಡು’ |
ಪಕ್ಕಿದಿನ | ಬುದಾರ | ‘ಬುಧವಾರ’ |
ಪರೇದ್ | ಪಲ್ದಿ | ‘ಅಕ್ಕ್’ |
ಪಂರ್ಗಟೆ್ | ಬೀಜ | ‘ಬೀಜ’ |
ಪಟ್ಲೆ | ಮರಕಲೆ | ‘ಬೆಸ್ತ’ |
ಪಟಾಂದಿ | ಮರಕಲ್ದಿ | ‘ಬೆಸ್ತ ಹೆಂಗಸು’ |
ಪಯ್ಯಾರ್ | ಬಾಲೆ | ‘ಮಗು’ |
ಪೊಟು ಕನ್ನ | ಉಮಿಲ್ | ‘ಸೊಳ್ಳೆ’ |
ಪೋಂಕ್ರೆ | ಕೊಂಕನೆ | ‘ಕೊಂಕಣಿಗ’ |
ಪೋಂಕರ್ದಿ | ಕೊಂಕಂದಿ | ‘ಕೊಂಕಣಿ ಹೆಂಗಸು’ |
ಪುಡ್ಡು | ಪತ್ತ್ | ‘ಹಿಡಿ’ |
ಪುಜಾದಿನ | ಐತಾರ | ‘ಆದಿತ್ಯವಾರ’ |
ಉಂರ್ಬು | ಬರ್ಚಿ | ‘ಬಾಚು’ |
ಇತ್ಯಾದಿ.
ಕೆಳಗೆ ಕೊರಗದ ನಾಲ್ಕು ಉಪಭಾಷೆಗಳ ಕೆಲವೊಂದು ವಿಶಿಷ್ಟ ಪದಗಳನ್ನು ಕೊಡಲಾಗಿದೆ. ಒಂಟಿ, ಮೂಡ ಹಾಗೂ ತಪ್ಪು ಕೊರಗ ಉಪಭಾಷೆಗಳ ವಿಶಿಷ್ಟ ಪದಗಳನ್ನು ಡಿ. ಎನ್ಶಂಕರ ಭಟ್ಟರ ‘Koraga languages’ (೧೯೭೧) ನಿಂದ ತೆಗೆದು ಕೊಳ್ಳಲಾಗಿದೆ.
ಒಂಟಿ | ಮೂಡು | ತಪ್ಪು | ಅಂಡೆ | ಅರ್ಥ |
ಪುಡ್ಡು | ಹುಡಾ | ಹುಡ್ | ಪುಡ್ದು | ಹಿಡಿಯು |
ಪೋ | ಹೋಗ | ಹೋ | ಪೋ | ಹೋಗು |
ಪೆದ್ಮಯಿ | ಹೆರ್ಮಿ | ಹಿದ್ಮಯಿ | ಪಿದೆಯಿ | ಹೊರಗೆ |
ಪರಿ | ಹರಿ | ಹರಿ | ಪರ | ‘ಕುಡಿಯು’ |
ಭಾಷಾವಿಜ್ಞಾನದ ದೃಷ್ಟಿಯಿಂದ ಇಷ್ಟರವರೆಗೆ ಕೊರಗ ಭಾಷೆಯ ಬಗ್ಗೆ ನಡೆದಿರುವ ಎಲ್ಲಾ ಅಧ್ಯಯನವನ್ನು ನಾನು ಈ ಬರಹದಲ್ಲಿ ಬಳಸಿಕೊಂಡಿದ್ದೇನೆ. ಆದರೆ ಕೊರಗ ಉಪಭಾಷೆಗಳ ಅಧ್ಯಯನವನ್ನು ಇಲ್ಲಿಗೇ ನಿಲ್ಲಿಸದೆ ಇನ್ನೂ ವ್ಯಾಪಕವಾದ ಅಧ್ಯಯನವನ್ನು ಕೈಗೊಂಡರೆ ಇದೊಂದು ಪ್ರತ್ಯೇಕ ದ್ರಾವಿಡ ಭಾಷೆ ಹಾಗೂ ದ್ರಾವಿಡ ಭಾಷಾ ವರ್ಗದಲ್ಲಿ ಇದರ ಸ್ಥಾನವನ್ನು ಇನ್ನಷ್ಟು ಖಚಿತಪಡಿಸಲು ತುಂಬಾ ಸಹಕಾರಿಯಾದೀತು. ಇದೀಗ ಯು. ಜಿ. ಸಿ ಪ್ರಾಜೆಕ್ಟ್(A Survey of Koraga Dialects of Karnataka) ನನಗೆ ದೊರೆತಿದ್ದು ಅದರ ಸರ್ವೇಕ್ಷಣ ಕಾರ್ಯವನ್ನು ಆರಂಭಿಸಿದ್ದೇನೆ. ಅದಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇನೆ. ನನ್ನ ಪಿಎಚ್. ಡಿ. ವಿದ್ಯಾರ್ಥಿ ಒಬ್ಬರು ‘An ethnolinguistic Study of Koraga Tribes in Karnataka’ ಎಂಬುದರ ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಕೊರಗರು ತಮ್ಮ ಸಂಕೋಚನಾ ಭಾವನೆಯನ್ನು ಬಿಟ್ಟು ಹೊರಬಂದು ತಮ್ಮ ಭಾಷೆಯನ್ನು ಬಳಸಿದರೆ ಮಾತ್ರ ಅದರ ಸಂರಕ್ಷಣೆ ಸಾಧ್ಯವೆಂದು ಹೇಳಬಹುದು.
Leave A Comment