ಕಾಸರಗೋಡು ಪ್ರದೇಶವೂ ಸೇರಿದ್ದ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ ತುಳುನಾಡು ಬಹುಭಾಷಿಕ ವಲಯವಾಗಿದ್ದು, ಭಾಷಾ ಸಂಸ್ಕೃತಿ ಸಂಬಂದವಾದ ಅಧ್ಯಯನಗಳಿಗೆ ಸಮೃದ್ಧವಾದ ಕ್ಷೇತ್ರವಾಗಿದೆ. ಈ ಪ್ರದೇಶದ ಪ್ರಾಚೀನ ಭಾಷೆ ತುಳುವಾಗಿದ್ದು, ಕನ್ನಡ ಮಲೆಯಾಳ, ಕೊಂಕಣಿ ಮರಾಠಿ ಇತ್ಯಾದಿ ಭಾಷೆಗಳನ್ನಾಡುವ ಮಂದಿ ಇಲ್ಲಿಗೆ ಕಾಲಕ್ರಮೇಣ ಬಂದು ನೆಲಸಿ ಇಲ್ಲಿನವರೇ ಆದುದು ಇತಿಹಾಸವಾಗಿದೆ. ರಾಜಕೀಯವಾಗಿ ತುಳುನಾಡು ಹಲವು ಪ್ರಸಿದ್ಧ ಕನ್ನಡ ರಾಜವಂಶಗಳ ಆಡಳಿತಕ್ಕೆ ಬಹುಕಾಲ ಒಳಪಟ್ಟುದರಿಂದ ಆ ಮೇಲರಸರ ಭಾಷೆಯಾದ ಕನ್ನಡವೇ ಇಲ್ಲಿ ರಾಜಭಾಷೆಯಾಯಿತು. ಇಲ್ಲಿನ ಬಹುಸಂಖ್ಯಾತರ ಮಾತೃ ಭಾಷೆಯಾಗಿದ್ದು, ಭಾಷಿಕವಾಗಿ ಸಾಕಷ್ಟು ವಿಕಸಿತವಾಗಿದ್ದರೂ, ತುಳು ಭಾಷೆ ಪ್ರತಿಷ್ಠಿತ ಭಾಷೆಯೆನಿಸದೆ, ಬಹುಮಟ್ಟಿಗೆ ಆಡುಮಾತಾಗಿ, ಸಾಮಾನ್ಯ ಮಟ್ಟದ ಸಂಪರ್ಕ ಭಾಷೆಯಾಗಿ, ಜನಪದ ಸಾಹಿತ್ಯ ಭಾಷೆಯಾಗಿ ಪ್ರಚುರವಾಗುವಷ್ಟಕ್ಕೆ ತೃಪ್ತವಾಗುಂತಾಯಿತು. ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದ, ‘ತುಳು ಭಾಗವತೊ’, ‘ತುಳು ಮಹಾಭಾರತೊ’ ಇತ್ಯಾದಿ ಪ್ರೌಢ ಕಾವ್ಯ ಪರಂಪರೆ ಅದೇಕೋ ತೆರೆಯ ಮರೆಗೆ ಸರಿಯುವಂತಾಯಿತು. ಹೀಗಿದ್ದರೂ, ಈ ಪ್ರದೇಶದಲ್ಲಿ ಭಾಷಾ ಸಂಬಂಧವಾದ ಕೊಡು ಕೊಳ್ಳುವುದಂತೂ ಸಹಜವಾಗಿ ನಿರಂತರ ನಡೆದುಕೊಂಡು ಬಂದಿದೆ.
ತುಳು ಮತ್ತು ಮಲೆಯಾಳಂ ಭಾಷೆಗಳು ದ್ರಾವಿಡ ಪರಿವಾರದ ಸೋದರ ಭಾಷೆಗಳಷ್ಟೆ? ತುಳುನಾಡು ಹಾಗೂ ಕೇರಳ ಪ್ರಾಂತಗಳು ಅಕ್ಕಪಕ್ಕದ ರಾಜ್ಯಗಳೂ ಹೌದು. ಕಾಸರಗೋಡಿನಿಂದ ದಕ್ಷಿಣದ ಕೇರಳ ಭಾಗದಲ್ಲಿ ಮಲೆಯಾಳಂ ಆಡುನುಡಿಗಳ ವರಸೆಯಲ್ಲಿ ಒಂದಿಷ್ಟು ವ್ಯತ್ಯಾಸಗಳಿದ್ದರೂ, ಬಹುಮಟ್ಟಿಗೆ ಗ್ರಾಂಥಿಕ ಭಾಷೆಗೆ ಹತ್ತಿರುವ ಭಾಷೆಯನ್ನು ಸರ್ವತ್ರ ಮಾತನಾಡಲಾಗುತ್ತದೆ. ಆದರೆ, ಕಾಸರಗೋಡಿನಿಂದ ಮಂಗಳೂರು ವರೆಗಿನ ಉತ್ತರ ಭಾಗದಲ್ಲಿ ಮಲೆಯಾಳ ಭಾಷೆಯ ಹಲವು ಉಪಭಾಷೆಗಳನ್ನು ಮಾತನಾಡುವ ಜನವರ್ಗಗಳಿವೆ. ಉದಾ : ಶಾಲಿಯಾರ್ (ನೇಕಾರ), ಚೆಲ್ಯ (ಗಾಣಿಗ), ಮಣಿಯಾಣಿ (ಯಾದವ), ಬಲ್ಯಾಯ (ಕಣಿಯ ನಿಮಿತ್ತ ಹೇಳುವವರು), ವಣ್ಣಾನ್ (ದೈವ ನರ್ತಕ), ಮಲೆಯಾನ್ (ದೈವ ನರ್ತಕ), ತೀಯನ್ (ಬಿಲ್ಲವ), ಮೋಯನ್ (ಬೋವಿ), ಬ್ಯಾರಿ (ಮಾಪಿಳ್ಳೆ) ಇತ್ಯಾದಿ. ಇವರ ಆಡುನುಡಿಗಳಲ್ಲಿ ಪರಸ್ಪರ ಸಾದೃಶ್ಯದೊಂದಿಗೆ ಒಂದಿಷ್ಟು ವ್ಯತ್ಯಾಸವಿದೆಯಲ್ಲದೆ, ಪ್ರಾದೇಶಿಕ ವ್ಯತ್ಯಾಸಗಳೂ ಇವೆ. ಈ ದೃಷ್ಟಿಯಿಂದ, ಕಾಸರಗೋಡಿನಿಂದ ಉತ್ತರಕ್ಕಿರುವ ಮಲೆಯಾಳ ಆಡುನುಡಿಗಳ ಸ್ವರೂಪ ಬಾಹುಳ್ಯ ಉಲ್ಲೇಖನೀಯವಾದದ್ದು. ಸುಮಾರು ಇಪ್ಪತ್ತು ಕಿಲೋಮೀಟರ್ದೂರದಲ್ಲಿ ದ್ದರೂ ಗುರುತಿಸುವಷ್ಟರ ಮಟ್ಟಿನ ವ್ಯತ್ಯಾಸವನ್ನು ಪ್ರತಿಯೊಂದು ಆಡುನುಡಿಯೂ ಹೊಂದಿರುವುದು ಗಮನಾರ್ಹ.
ಪ್ರತಿಯೊಂದು ಉಪಭಾಷೆ ತನ್ನ ಜನಾಂಗದ ಸಾಮುದಾಯಿಕ ಪ್ರಜ್ಞೆಯನ್ನೂ, ವಿವಿಧ ಚಟುವಟಿಕೆಗಳ ವಿವರಗಳನ್ನೂ, ಎಲ್ಲ ಬಗೆಯ ಭಾವನೆಗಳ ಸೂಕ್ಷ್ಮತೆಯನ್ನೂ ಬಿಂಬಿಸುವ ಸಜೀವಸಾಧನವಾಗಿ ರೂಪುಗೊಂಡಿರುತ್ತದೆ. ಲಿಪಿಗಿಳಿಸಲಾದಂಥ ವೈವಿಧ್ಯವೂ ಮಾತಿನ ವರಸೆ, ಉಚ್ಚಾರಗಳಲ್ಲಿ ರುವುದುಂಟು. ಜೊತೆಗೆ ಬಗೆ ಬಗೆಯ ಜನಪದ ಸಾಹಿತ್ಯದ ಐಸಿರಿಯೂ ಉಪಭಾಷೆಗಳಲ್ಲಿರುತ್ತದೆ. ಶಿಷ್ಟ ಭಾಷೆಗಳಿಗಿರುವಂತೆ ಇವುಗಳಿಗೆ ಲಿಖಿತ ವ್ಯಾಕರಣ ವಿಲ್ಲದಿದ್ದರೂ, ಆಯಾ ಆಡುನುಡಿಯೊಂದಿಗೆ ಅವಿನಾಭಾವವಾಗಿ ಬೆಳೆದು ಬಂದಿರುವ ಅಲಿಖಿತ ವ್ಯಾಕರಣವೂ ಅರಿವಿಲ್ಲದೇ ಆಯಾ ಭಾಷೆಗಳಲ್ಲಿ ಅಂತರ್ಗತವಾಗಿರುವುದು ಕುತೂಹಲಕರವಾಗಿದೆ.
ಪ್ರಕೃತ ತುಳು ಹಾಗೂ ಮೋಯ ಮಲೆಯಾಳ ಭಾಷೆಗಳ ಸಾಹಚರ್ಯ ಸಂಬಂಧಗಳ ಕುರಿತಾಗಿ ಕೆಲವೊಂದು ಮಾತುಗಳು ಹೇಳಬಹುದು. ಮೋಯ (ಮಲೆಯಾಳ ಬೋವಿ) ಜನಾಂಗವು ಉತ್ತರ ಕೇರಳದ ಬಡಗರಯಿಂದ ತೊಡಗಿ, ಮಂಗಳೂರುವರೆಗಿನ ಕರೆನಾಡಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಚಿಕ್ಕ ಸಮೂಹಗಳಾಗಿ ಮಾತ್ರ ನೆಲೆಸಿದ ಒಂದು ಜನವರ್ಗವಾಗಿದೆ. ಮೀನುಗಾರಿಕೆ ಹಾಗೂ ಬೋವತನ (ವಾಹಕತ್ವ -ದೋಣಿ, ಪಲ್ಲಕಿ ಇತ್ಯಾದಿ) ಇವರ ಪರಂಪರೆಯ ವೃತ್ತಿಯಾಗಿತ್ತು. ಈ ಸಮಾಜಕ್ಕೆ ಸಂಬಂಧಟ್ಟ ಧಾರ್ಮಿಕ ಹಾಗೂ ಸಾಂಸ್ಕೃತಿಕ ಘಟಕಗಳಾಗಿ, ತ್ರಿಕರಪೂರದಿಂದ ಸೋಮೇಶ್ವರದವರೆಗೆ ಭಗವತೀ ದೇವಿಯ ಹನ್ನೊಂದು ಪ್ರಮುಖ ದೇವಳಗಳಿವೆ.
ಇಲ್ಲಿ ಉದ್ದಿಷ್ಟ ಆಡುನುಡಿಯು ಪ್ರಧಾನವಾಗಿ ಸೋಮೇಶ್ವರ ಪರಿಸರದ ಮೋಯ ಸಮುದಾಯದ್ದಾದರೂ, ಉಪ್ಪಳ, ಕುಂಬಳೆ ಕಡೆಯಲ್ಲಿ ಈ ಸಮಾಜದ ಆಡುನುಡಿಯ ಪ್ರಭೇಧಗಳನ್ನೂ ಸಾಂದರ್ಭಿಕವಾಗಿ ಲಕ್ಷಿಸಲಾಗಿದೆ. ತುಳು ಭಾಷೆಯಲ್ಲೂ ಪ್ರಾದೇಶಿಕ ಹಾಗೂ ಜಾನಾಂಗಿಕ ಪ್ರಭೇದಗಳಿವೆ. ಈ ಪ್ರಬಂಧದಲ್ಲಿ ಮುಖ್ಯವಾಗಿ ಮಂಗಳೂರು ಪರಿಸರದ ತುಳು ನುಡಿಯನ್ನು ಬಳಸಿಕೊಳ್ಳಲಾಗಿದೆ. ಮೋಯ ಮಲೆಯಾಳವನ್ನು ಆಡುವ ಒಟ್ಟು ಜನಸಂಖ್ಯೆ ತುಳುವನ್ನು ಮಾತಾನಾಡುವ ಜನಸಂಖ್ಯೆಗಿಂತ ಅದೆಷ್ಟೋ ಕಡಿಮೆಯಾಗಿದೆ.
ಕಾಸರಗೋಡಿನಿಂದ ದಕ್ಷಿಣಕ್ಕಿರುವ ಎಲ್ಲ ಜನವರ್ಗಗಳ ಆಡುಮಾತಿನಲ್ಲೂ ಸಂಸ್ಕೃತ ಶಬ್ಧಗಳು ಸಾಕಷ್ಟು ಪ್ರಮಾಣದಲ್ಲಿವೆ. ತುಳು ಆಡುನುಡಿಯಲ್ಲೂ ಮೋಯ ಮಲೆಯಾಳದಲ್ಲೂ ಸಂಸ್ಕೃತ ಪ್ರಾಚುರ್ಯ ತೀರಾ ಕಡಿಮೆ. ಆದರೆ ತದ್ಭವ ಶಬ್ಧಗಳನ್ನು ಎರಡು ಭಾಷೆಗಳಲ್ಲಿ ತಕ್ಕಷ್ಟು ಬಳಸುತ್ತಾರೆ. ಈ ಉಭಯ ಭಾಷೆಗಳಲ್ಲೂ ಮಹಾ ಪ್ರಾಣ ಧ್ವನಿಮಾಗಳೂ ಸಹಜವಾಗಿ ಇರುವುದಿಲ್ಲ. ಇಂದಿನ ಕನ್ನಡದಲ್ಲಿರುವಷ್ಟೇ ಧ್ವನಿಮಾಗಳು ತುಳುವಿನಲ್ಲಿವೆ.
ತುಳುವಿನಲ್ಲೂ ಮೋಯ ಮಲೆಯಾಳದಲ್ಲಿಯೂ, ಕನ್ನಡದಲ್ಲಿ ಅದಂತೆ ಪ ಕಾರವು ಹ ಕಾರವಾಗಿಲ್ಲ. ಕರ್ಮಣಿ ಪ್ರಯೋಗವು ರೂಢಿಯಲ್ಲಿಲ್ಲ. ಕ್ರಿಯಾಪದ ರೂಪಗಳಲ್ಲಿ ಲಿಂಗ, ವಚನ, ಪುರುಷ ವೈವಿಧ್ಯವಿದೆ. ಕೇರಳ ಮಲೆಯಾಳದ ಈಗಿನ ರೂಪದಲ್ಲಿ ಈ ವೈವಿಧ್ಯವಿಲ್ಲ (ಪ್ರಾಚೀನ ಮಲೆಯಾಳದಲ್ಲಿ ಇತ್ತು) ಎರಡೂ ಭಾಷೆಗಳಲ್ಲಿ ಸಂವೃತ್ತ ಉಕಾರ (ಅರ್ಧ ಆಕಾರ ಅಥವಾ ಕಿರಿಯ ಉಕಾರ – ‘ಅ’) ಬಳಕೆ ವಿಪುಲವಾಗಿದೆ. ಹಾಗೆಯೇ ಸಂವೃತ್ತ ಎಕಾರ ಮತ್ತು ವಿವೃತ ಎಕಾರಗಳು ನಿರ್ದಿಷ್ಟವಾಗಿವೆ. ಎರಡೂ ಭಾಷೆಗಳು ತಮ್ಮ ಪ್ರಾಚೀನತೆಯ ಕೆಲವಂಶಗಳನ್ನು ಉಳಿಸಿಕೊಂಡಿವೆ.
ಕೇರಳ ಮಲೆಯಾಳದ ಬ ಕಾರ (ರಳ) ಎಂಬ ಒಂದು ಧ್ವನಿಮಾ ವನ್ನುಳಿದು ಉಳಿದೆಲ್ಲ ಧ್ವನಿಮಾಗಳೂ ಮೋಯ ಮಲೆಯಾಳದಲ್ಲಿವೆ. ತುಳುವಿನಲ್ಲಿ ಕೆಲವು ವಿಶಿಷ್ಟ ಧ್ವನಿಮಾಗಳು ಈ ಆಡುನುಡಿಯಲ್ಲಿವೆ:
೧. ಸಂವೃತ ಅಕಾರ – ಅ ಉದಾ: ಎಂದ್ (ಎನು?)
ಞಿಂಙ್ಙಳ (ನಮ್ಮ) ತಾಣ (ತಗ್ಗಿದ)
೨. ಮೃದು ಟಕಾರ (ಟ಼) ಉದಾ: ನೆಟ್ಟಿ಼ (ನೆತ್ತಿ) ಚುಟ್ಟಿ಼ (ಸುತ್ತು) ಕಾಟಿ಼ (ಗಾಳಿ)
೩. ಮೃದು ಡಕಾರ (ಡ಼) ಉದಾ: ಇಂಡೆ಼ ಉದಾ: ಎಂಡೆ಼ (ನನ್ನ), ಬನ್ನಂಡ಼ (ಬಂದಿಲ್ಲ, ಅಕ್ಕಂಡೋ಼ರು (ಅಕ್ಕನವರು)
೪. ಱಕಾರ (ಕಂಪಿತ ರಕಾರ – ಶಕಟ ರೇಫ) ಮತ್ತು ರೇಫ (ರ)
ಈ ಎರಡೂ ಧ್ವನಿಮಾ ಪ್ರಭೇದಗಳ ಉಚ್ಚಾರ ಸ್ಪಷ್ಟವಾಗಿ ಪ್ರತ್ಯೇಕವಾಗಿ ಉಳಿದುಕೊಂದಿದೆ.
ಉದಾ: ಅಱಿ (ತಿಳಿ) ಅರಿ-ಅಕ್ಕಿ
ಕಱೆ (ಕಲೆ) ಕರ಼ – ಕರೆ, ಬದಿ
ಪೊಱ (ಹೊರೆ) ಪೊರ಼ – ಮನೆ
೫. ಕನ್ನಡ ಲಕಾರಕ್ಕಿಂದ ಭಿನ್ನವಾದ ‘ಲ’ ಧ್ವನಿಮಾದ ಬಳಕೆ ಇದೆ.
೬. ‘ನ’ ಧ್ವನಿಮಾದ ಭಿನ್ನ ಪ್ರಭೇದಗಳು ಬಳಕೆಗೆ ಇದೆ.
೭. ಅರ್ಧಾನುಸ್ವಾರ ಉದಾ: ರಾಮ೦, ಅವೊ೦, ಅಚ್ಚ೦
ತುಳು ಮತ್ತು ಮೋಯ ಮಲೆಯಾಳದ ಕೆಲವು ಸಾದೃಶ್ಯ ಶಬ್ಧರೂಪಗಳನ್ನು ಈಗ ಗಮನಿಸಬಹುದು.
ಪ್ರಕೃತಿ
ತುಳು | ಮೋಯ ಮಲೆಯಾಳ |
ನೆಲ | ನೆಲೊಂ |
ಕಡಲ್ | ಕಡ್ಳ್ |
ಗಾಳಿ | ಕಾಟಿ಼ |
ಬೊಲ್ಲ | ವೆಳ್ಳೊ |
ಪಾದೆ | ಪಾರ |
ಮುರ | ಮೊರಂ |
ಬೊಲ್ಪು | ಬೆಳ್ಚೊಂ |
ಮೆಂಚಿ | ಮಿನ್ನಿ |
ಕಲ್ಲ್ | ಕಲ್ಲಿ |
ಕೆಸರ್ | ಚೇರ್ |
ಪಳ್ಳ | ಪಳ್ಳೊಂ |
ನುರೆ | ನೊರ಼ |
ಕಂಡ | ಕಂಡೊಂ |
ದಿಕ್ಕುಗಳು
ತುಳು | ಮೋಯ ಮಲೆಯಾಳ |
ಪಡ್ಡೆಯಿ | ಪಡಿಞ್ಞಾರ್ |
ಬಡಕ್ಕಾಯಿ | ಪಡ್ ಕ್ಕ್ |
ತೆನ್ಕಾಯಿ | ತೆಕ್ಕಂ |
ದತ್ತ | ಎಡತ್ತ |
ಬಲತ್ತ | ಬಲ್ತ |
ಕರೆ | ಕದ |
ಮೇಲ್ಡ್ | ಮೇಲ |
ಮಿತ್ತ್ | ಮೀದ |
ಪ್ರಾಣಿ, ಪಕ್ಷಿ, ಉರಗ, ಕೀಟ
ನಾಯಿ | ನಾಯಿ | ನಾಯಿ |
ಪುಚ್ಚೆ | ಪೂಚ | ಬೆಕ್ಕು |
ಬೋರಿ | ಬೋರಿ | ಎತ್ತು |
ಪಂಜಿ | ಪನ್ನಿ಼ | ಹಂದಿ |
ಕುದ್ಕೆ | ಕುರ್ಕಂ | ನರಿ |
ಮುಂಗುಲಿ | ಮುಂಗುಲಿ | ಮುಂಗುಸಿ |
ನೀರ್ನಾಯಿ | ನೀರ್ಯಾಯಿ | ನೀರುನಾಯಿ |
ಎಲಿ | ಎಲಿ | ಇಲಿ |
ಕಿನ್ನಿ | ಕುಞ್ಞೆ | ಮರಿ |
ಕಕ್ಕೆ | ಕಾಕ | ಕಾಗೆ |
ಗುರ್ಬಿ | ಗುರ್ಬಿ | ಗುಬ್ಬಿ |
ಕರು | ಕದು | ಹದ್ದು |
ಕೊರುಂಗು | ಕೊರುಂಗು | ಕೊಕ್ಕರೆ |
ಗುಮ್ಮೆ | ಗುಮ್ಮಂ | ಗೂಗೆ |
ಬಾವಲಿ | ಬಾವೊಳು | ಬಾವಲಿ |
ಕೋರಿ | ಕೊದಿ | ಕೋಳಿ |
ಪೂಂಜೆ | ಪೂವಂ | ಹುಂಜ |
ಪೆರಡೆ | ಪಡ್ಚಿ | ಹೇಂಟೆ |
ಮರಕೊಡ್ಪೆ | ಮರಕೊಡ್ಪಂ | ಮರಕುಟಿಗ ಹಕ್ಕಿ |
ಕುಪ್ಪುಳು | ಕುಪ್ಪುಳು | ಕೆಂಬೋತ |
ಕೇರೆ | ಚೇರ಼ | ಕೇರೆ ಹಾವು |
ಕಡಂಬಳೆ | ಬಳಕಡ್ಪಂ | ಕಡಂಬಳ ಹಾವು |
ಪೆರ್ಮರಿ | ಪೆರಿಪಾಂಬು | ಹೆಬ್ಬಾವು |
ಒಳ್ಳೆ | ಒಳ್ಳ | ಒಳ್ಳೆ |
ಕಂದಾಡಿ | ಕಂದಾಡಿ | ಕನ್ನಡಿಹಾವು |
ಅರಣೆ | ಅರ್ಣ | ಹಾವು ರಾಣಿ |
ಓಂತಿ | ಓಂತಿ | ಓತಿ |
ಪಲ್ಲಿ | ಪಲ್ಲಿ | ಹಲ್ಲಿ |
ಒಡು | ಒಡು | ಉಡು |
ಮುದ್ದಳೆ | ಮೊದಳ | ಮೊಸಳೆ |
ಕೊಂಬಚ್ಚೇಳ್ | ಕೊಂಬಂಚೇಳ್ | ಕೊಂಬುಚೇಳು |
ತೇರಂಟೆ | ಚೇರ್ಟ | ಚೇರಟೆ |
ನಕ್ಕುರು | ನಕ್ಕಳ್ | ಎರೆಹುಳ |
ಮೀನ್ | ಮಿನಿ | ಮೀನು |
ಬಾಳೆ | ಬಾಳ | ಬಾಳೆ ಮೀನು |
ಮುಗುಡು | ಮುಗುಡು | ಮುಗುಡು ಮೀನು |
ಕಾಣಿ | ಕಾಣ | ಕಾಣಿ ಮೀನು |
ಯೇರಿ | ಯೇರಿ | ಯೇರಿ ಮೀನು |
ತೇಡೆ | ಯೇಟ | ಸೇಟೆ ಮೀನು |
ಮಡೆಂಜಿ | ಮಡ್ಂಡಿ | ಮಡೆಂಜಿ ಮೀನು |
ಗುಮ್ಮೆ | ಕುಮ್ಮಂ | ಗುಮ್ಮೆ ಮೀನು |
ಮಾಂಜಿ | ಮಾಞಿ | ಮಾಂಜಿ ಮೀನು |
ಅಂಜಾಳ್ | ಅಂಜಾಳ್ | ಅಂಜಾಲು ಮೀನು |
ಎಟ್ಟಿ | ಇಟ್ಟಿ | ಸಿಗಡಿ ಮೀನು |
ಅಟ್ಟೆ | ಅಟ್ಟ | ಜಿಗಳೆ |
ಉದಲ್ | ಚೆದಾಳ್ | ಗೆದ್ದಲು ಹುಳ |
ಉಮಿಲ್ | ಉಮಿಲಿ | ನುಸಿ |
ನರ್ತೆ | ನರ್ತ | ಕಪ್ಪೆಚಿಪ್ಪು |
ಮನುಷ್ಯ ಶರೀರದ ಅಂಗಗಳು
ತುಳು | ಮೋ. ಮಲೆಯಾಳ | ಕನ್ನಡ |
ತರೆ | ತಲ | ತಲೆ |
ಮುಂಡ | ಮುಂಡೊಂ | ಹಣೆ |
ಕೆನ್ನಿ | ಚೆನ್ನಿ | ಕೆನ್ನೆ |
ಕಣ್ಣ್ | ಕಣ್ಣ್ | ಕಣ್ಣು |
ಇಮೆ | ಎಮ | ಎವೆ |
ಮೂಂಕು | ಮೂಕು | ಮೂಗು |
ಮೀಸೆ | ಮೀಸ | ಮೀಸೆ |
ಮಿರೆ | ಮೊಲ | ಮೊಲೆ |
ಪೂವುಳು | ಪೊಕ್ಕುಳು | ಹೊಕ್ಕುಳು |
ತುಡೆ | ತೊಡ | ತೊಡೆ |
ಕಾರ್ | ಕಾಳ್ | ಕಾಲು |
ಕೈ | ಕೈ | ಕೈ |
ಬಾಯಿ | ಬಾಯಿ | ಬಾಯಿ |
ದೊಂಡೆ | ತೊಂಡ | ಗಂಟಲು |
ನಾಲಯಿ | ನಾವು | ನಾಲಗೆ |
ಬೆಗರ್ | ಬೇರ್ಪು | ಬೆವರು |
ಎಲು | ಎಲುಂಬು | ಎಲುಬು |
ನರಂಬು | ನರ್ಂಬು | ನರ |
ಸಂಬಂಧ ವಾಚಕಗಳು
ಕುಟುಮೊ | ಕುಡುಮೊಂ | ಕುಟುಂಬ |
ಪಿಜ್ಜೆ | ಪಿಜ್ಜಂ | ಅಜ್ಜನ ತಂದೆ, ಪಿಜ್ಜ |
ಅಜ್ಜೆ | ಅಜ್ಜಂ | ಅಜ್ಜ |
ಅಜ್ಜಿ | ಅಜ್ಜಿ | ಅಜ್ಜಿ |
ಅಕ್ಕೆ | ಅಕ್ಕ | ಅಕ್ಕ |
ಮೈತಿನೆ | ಮಚ್ಚಿನು | ಮೈದುನ |
ಮರ್ಮಯೆ | ಮರಮೊಂ | ಅಳಿಯ |
ಮರ್ಮಳ್ | ಮರಿಮೊಳ್ | ಸೊಸೆ |
ಪುಳ್ಳಿ | ಪುಳ್ಳಿ | ಮೊಮ್ಮಗ |
ಸರ್ವನಾಮಗಳು
ಯಾನ್ | ಞಾನಿ | ನಾನು |
ಈಯಿ | ನೀ | ನೀನು |
ಆಯೆ | ಆವೊಂ | ಅವನು |
ಆಲ್ | ಅವೊ | ಅವಳು |
ಅಕುಲು | ಅವೊರು | ಅವರು |
ನಮೊ | ನಮೊ | ನಾವು |
ಮನೆ, ಮನೆವಾರ್ತೆ
ತುಳು | ಮೋ. ಮಲೆಯಾಳ | ಕನ್ನಡ |
ಇಲ್ಲ್ | ಇಲ್ಲೊಂ | ಮನೆ |
ಕಂಬೊ | ಕಂಬೊ | ಕಂಬ |
ಚಾವಡಿ | ಚಾವಡಿ | ಚಾವಡಿ |
ತಿಣೆ | ತೆಣ | ಹಜಾರ |
ಕಂಡಿ | ಕಂಡಿ | ಕಿಟಿಕಿ |
ಬೆಂದ್ರಕೊಟ್ಟ | ಬೆಂದ್ರ್ಕೊಟ್ಳು | ಬಿಸೀರ ಕೊಟ್ಟಿಗೆ (ಬಚ್ಚಲು) |
ಅಟ್ಟೊ | ಅಟ್ಟೊಂ | ಅಟ್ಟ |
ಮಾಡ್ | ಮಾಡ್ | ಮಾಡು, ಮನೆಯ ಹೊದಿಕೆ |
ಕಡೆಪಿಕಲ್ಲ್ | ಕಡ್ನೇಲಿ | ಕಡೆಯುವ ಕಲ್ಲು |
ಜಗಲಿ | ಜಗೆಲಿ | ಜಗಲಿ |
ಐಮೂಲೆ | ಐಮೂಲ | ಐಮೂಲೆ |
ಬಾಕಿಲ್ | ಬಯಲ್(ಬಾದಳ್) | ಬಾಗಿಲು |
ಲೆಂಚಿ | ಎಣ್ಚಿ | ಏಣಿ |
ತೊಟ್ಟಿಲು | ತೊಟ್ಳು | ತೊಟ್ಟಿಲು |
ಓಡು | ಓಡು | ಹಂಚು |
ತಡ್ಪೆ | ತಡ್ಪ | ಗೆರಸೆ |
ಮುಟ್ಟತ್ತಿ | ಮುಟ್ಟತ್ತಿ | ಮೆಟ್ಟುಕತ್ತಿ |
ಬೀಸತ್ತಿ | ಬೀಚತ್ತಿ | ಚೂರಿ |
ಕುಡ್ಪು | ತುಡ್ಪು | ಎಸರು ತಟ್ಟೆ |
ತರ್ಮುರ್ಚ್ಚಿ | ಅರ್ಮೇಚಿ | ಎಸರ್ಮುಚ್ಚಿ |
ಚೊಂಬು | ಚೆಂಬು | ತಂಬಿಗೆ |
ಮಂಡೆ | ಮಂಡ | ಹಂಡೆ |
ಮಡು | ಮದು | ಕೊಡಲಿ |
ಕಾಂಟ್ಯ | ಕಾಂಟ್ಯ | ಗಾಟಿಗೆ (ಬುಟ್ಟಿ) |
ಉಡುಗೆ ತೊಡುಗೆ
ಅಂಗಿ | ಅಂಗಿ | ಅಂಗಿ |
ರವಕೆ | ರಾವುಕ | ರವಿಕೆ |
ಲಂಗೊ | ಳಂಗೊ | ಲಂಗ |
ಜೋತ್ರ | ಜೋತ್ರಂ | ದೋತ್ರ |
ಸಾಲ್ | ಸಾಳ್ | ಶಾಲು |
ಟೊಪ್ಪಿ | ತೊಪ್ಪಿ | ಟೋಪಿ |
ಮುಂಡಾಸ್ | ಮುಂಡಾಸ್ | ಮುಂಡಾಸು, ಪೇಟ |
ಮುಟ್ಟಾಳೆ | ಮುಟ್ಟಪಾಳ | ಮುಟ್ಟಾಳೆ |
ಎಲಾರ | ಎಲಾರ | ಎಲವಸ್ತ್ರ |
ಸೆರಂಗ್ | ಸೆರ್ಮಂಗ್ | ಸೆರಗು |
ಮುನ್ನಿ | ಮುನ್ನಿ | ಬಟ್ಟೆಯ ಅಂಚು |
ಆಹಾರ ಜೀನಸು
ಅರಿ | ಅರಿ | ಅಕ್ಕಿ |
ರೊಟ್ಟಿ | ಒರೊಟಿ | ರೊಟ್ಟಿ |
ಸಾರ್ | ಚಾರ್ | ಸಾರು |
ಪೇರ್ | ಪಾಳ್ | ಹಾಲು |
ಕೊಜಪು | ಕೊಜಪು | ಮೊಸರು |
ನೆಯ್ | ನೆಯ್ | ತುಪ್ಪ |
ಬೊಳ್ನೆಯಿ | ಬೆಣ್ಣ | ಬೆಣ್ಣೆ |
ಕೊದ್ದೆಲ್ | ಕೊದ್ಯಳ್ | ಕೊದ್ದೆಲು (ಪದಾರ್ಥ) |
ತೆಲ್ಲವು | ತೆಳ್ಳೊಂ | ನೀರು ದೋಸೆ |
ಕುರ್ಲೆಂ | ಕುರ್ಲೆಂ | ಹುರಿಯಕ್ಕಿ |
ಪೊರಿ | ಪೊರಿ | ಅರಳಕ್ಕಿ |
ಸೆಕ್ಕರೆ | ಚಕ್ಕರ | ಸಕ್ಕರೆ |
ಪುಳಿ | ಪುಳಿ | ಹುಣಸೆ ಹುಳಿ |
ದಾಸೆಮಿ | ದಾಸೆಮಿ | ಸಾಸಿವೆ |
ಮೆಂತೆ | ಮೆತ್ತ | ಮೆಂತೆ |
ಉಪ್ಪಾಡ್ | ಉಪ್ಪೇರ್ | ಉಪ್ಪಿನಕಾಯಿ |
ಬೊಳ್ಳುಳ್ಳಿ | ಬೆಳ್ಳುಳ್ಳಿ | ಬೆಳ್ಳುಳ್ಳಿ |
ಜೀರ್ದರಿ | ಜೀರ್ತೆರಿ | ಜೀರಿಗೆ |
ಹಣ್ಣು ತರಕಾರಿ
ಬಾರೆದ ಪಂರ್ದ್ | ಬಾದಂಡೆ಼ ಪದೊಂ | ಬಾಳೆಹಣ್ಣು |
ಚಿತ್ತುಪುಳಿ | ಚಿತ್ತುರ್ಳಿ | ಕಿತ್ತಳೆ |
ಪೇರಂಗಾಯಿ | ಪೇರಂಗಾಯಿ | ಪೇರಳೆ |
ಬಚ್ಚಂಗಾಯಿ | ಬಚ್ಚುಂಗಾಯಿ | ಕಲ್ಲಂಗಡಿ |
ಬಪ್ಪಂಗಾಯಿ | ಬಪ್ಪಂಗಾಯಿ | ಪಪ್ಪಾಯಿ |
ಅಂಬಡೆ | ಅಂಬಟ | ಅಮಟೆ |
ಕಂಚೊಲು | ಕಂಚಿಪಾಳ್ | ಹಾಗಲ |
ಜೀಗುಜ್ಜೆ | ಜೀಗುಜ್ಜ | ದೀವಿಹಲಸು |
ಕಿರೆಂಗ್ | ಕೆದಂಜ್ | ಗೆಣಸು |
ತುರೆ | ಚೊರಿಙ್ಙ | ಸೋರೆಕಾಯಿ |
ಪೀರೆ | ಪೀರ | ಹೀರೆ |
ತೆಕ್ಕರೆ | ಕೆಕ್ಕಿರಿಕ | ಮುಳ್ಳುಸೌತೆ |
ಕೇನೆ | ಚೇನ | ಸುವರ್ಣಗೆಡ್ಡೆ |
ಕುಂಬುಡೊ | ಕುಂಬುಡೊಂ | ಕುಂಬಳ |
ಲತ್ತಣೆ | ಅಳ್ತಂಡ | ಅಲಸಂಡೆ |
ಬದನೆ | ಬಯಿರಿಙ್ಙ | ಬದನೆ |
ಕಾಯಿಮಣ್ಯೆ | ಕಾಯಿಮೊಳೊಮು | ಕಾಯಿಮೆಣಸು |
ಸಂಖ್ಯಾವಾಚಕ
ಒಂಜಿ | ಒನ್ನು | ಒಂದು |
ರಡ್ಡ್ | ಜಂಡ್ | ಎರಡು |
ಮೂಜಿ | ಮೂನು | ಮೂರು |
ನಾಲ್ | ನಾಲಿ | ನಾಲ್ಕು |
ಐನ್ | ಅಂಜಿ | ಐದು |
ಆಜಿ | ಆರ್ | ಆರು |
ಏಳ್ | ಏದ್ | ಏಳು |
ಎಣ್ಮ | ಏಟ್ಟ್ | ಎಂಟು |
ಒಂರ್ಬ | ಒನುಂಬೊವು | ಒಂಬತ್ತು |
ಪತ್ತ್ | ಪತ್ತ್ | ಹತ್ತು |
ಪತ್ತೊಂಜಿ | ಪವುನೊನ್ನ್ | ಹನ್ನೊಂದು |
ಇರ್ವ | ಇರುವೊವು | ಇಪ್ಪತ್ತು |
ಮುಪ್ಪ | ಸುಪ್ಪೊವು | ಮೂವತ್ತು |
ನೂದಿ | ನೂರು | ನೂರು |
ಸಾವಿರ | ಆಯಿರೊಂ | ಸಾವಿರ |
Leave A Comment