ಸಮಯ
ಬೊಳ್ಳಿರ್ | ಬೆಳ್ಳಮಾನ್ | ಮುಂಜಾನೆ |
ಇರ್ಳ್ | ಇರ್ಟ್ | ಇರುಳು |
ಪಗೆಲ್ | ಪವೊಳು | ಹಗಲು |
ಮೂಜಂಜ | ಮೂನುಮೋಂದಿ | ಮುಸ್ಸಂಜೆ |
ಬಯ್ಯ | ಬಯ್ಯ | ಬೈಗು, ಇಳಿಹೊತ್ತು |
ಮುರಾನಿ | ಮುಣಿಞ್ಞಾನ್ | ಮೊನ್ನೆ |
ತಿಂಗೊಳು | ತಿಙ್ಙೊ | ತಿಂಗಳು |
ಈಯೊಡು | ಈಯೊಂಡ್ | ಈ ವರ್ಷ |
ತಿಂಗಳುಗಳು
ಪಗ್ಗ್ | ಪಗ್ಗ್ | ಮೇಷ |
ಬೇಸ್ಯ | ಬೇಸ್ಯ | ವೃಷಭ |
ಕಾರ್ತೆಲ್ | ಕಾರ್ತಿಙ್ಙೊ | ಮಿಥುನ |
ಅಟಿ | ಅಟಿ | ಕರ್ಕಾಟಕ |
ಸೋಣ | ಚೋಣೊಂ | ಸಿಂಹ |
ನಿರ್ನಾಲ್ | ನೀಡ್ನಾಲೊಂ | ಕನ್ಯಾ |
ಬೊಂತೆಲ್ | ಬೆಂಡಿತಿಙ್ಙೊ | ತುಲಾ |
ಜಾರ್ದೆ | ಜಾರ್ದ | ವೃಶ್ಚಿಕಾ |
ಪೆರಾರ್ದೆ | ಪೆರಾರ್ದ | ಧನು |
ಪೊನ್ನಿ | ಪೊನ್ನಿ | ಮಕರ |
ಮಾಯಿ | ಮಾಯಿ | ಕುಂಭ |
ಸುಗ್ಗಿ | ಸುಗ್ಗಿ | ಮೀನ |
ಲೋಹಗಳು
ಬೊಲ್ಲಿ | ಬೆಳ್ಳಿ | ಬೆಳ್ಳಿ |
ಕಂಚಿ | ಕಂಚಿ | ಕಂಚು |
ಚೊಂಬು | ಚೆಂಬು | ತಾಮ್ರ |
ಪಿತ್ತಳೆ | ಪಿತ್ತಳ | ಹಿತ್ತಾಳೆ |
ಕೀಜಿ | ಕೀಜಿ | ಎಲ್ಯೂಮಿನಿಯಂ |
ಮಿಲಾವು | ಮಿಲಾವೂ | ಉಕ್ಕು |
ಕ್ರಿಯಾಧಾತುಗಳು
ತಿನ್ | ತಿನ್ನು | ತಿನ್ನು |
ಉಣು | ಉಣ್ಣು | ಉಣ್ಣು |
ಬುಲ್ಪು | ಬುಳಿಡ್ | ಅಳು |
ನಿಲ್ಕ್ | ನಿಳ್ಕ್ | ಇಣಿಕು |
ಕೇನ್ | ಕೇಳ್ | ಕೇಳು |
ಮುಚ್ಚು | ಮೂಡು | ಮುಚ್ಚು |
ಕಟ್ಟ್ | ಕೆಟ್ಟ್ | ಕಟ್ಟು |
ಡಂಕ್ | ಎಡಕ್ಕ್ | ಎಡಹು(ಮುಗ್ಗರಿಸು) |
ನಡಪು | ನಡೆ | ನಡೆ |
ತುಂಡಿಂಪು | ತುಡಿ | ತುಡಿಯು |
ಬರ್ಚ್ | ಬಾರಿ | ಬಾಚು |
ಬೂರು | ಬೀದ್ | ಬೀಳು |
ದೀಡ್ | ಇಡ್ | ಇಡು |
ತೂಂಕು | ತೂಕು | ತೂಗು |
ಜುಂಬು | ಉಜುಂಬು | ಚೀಪು |
ತದ್ಭವಗಳು
ಸಂಸ್ಕೃತ | ತುಳು | ಮೋಯ ಮಲೆಯಾಳ |
ಬ್ರಾಹ್ಮಣ | ಬಿರಾಣೆ | ಪಿರಾಣಂ |
ಐಶ್ವರ್ಯ | ಐಸಿರೊ | ಐಸಿರೊಂ |
ಜೀವ | ಜೀವೊ | ಜೀವೊಂ |
ವೇಷ | ಯೇಸೊ | ಯೇಸೊಂ |
ಅಮಾವಾಸ್ಯೆ | ಅಮಾಸೆ | ಅಮಾಸ |
ಉಪವಾಸ | ಉಪಾಸೊ | ಉಪಾಸೊಂ |
ಅಭ್ಯಾಸ | ಅಬ್ಬೆಸೊ | ಅಬ್ಬೆಸೊಂ |
ಕಲಿಯುಗ | ಕಲ್ಜಿಗೊ | ಕಲ್ಜಿಗೊಂ |
ತೀರ್ಥ | ಸೀತೊಂ | ಸೀರ್ತೊಂ |
ಸಾಮರ್ಥ್ಯ | ಸಾಮಾರ್ತಿಗೆ | ಸಾಮರ್ತಿಗ |
ದಾಕ್ಷಿಣ್ಯ | ಜಾಕಿನೋ | ಜಾಣನೊಂ |
ವಿವಿಧ ವಿಷಯಗಳಿಗೆ ಸಂಬಂಧಿಸಿದ ಸದೃಶ ಶಬ್ಧ ಸಮೂಹಗಳನ್ನು ನೋಡಿದ್ದಾಯಿತು. ಇನ್ನು ನಿರ್ದಿಷ್ಟ ನಿಯಮಗಳಿಗನುಸರಿಸಿ ಧ್ವನಿಮಾ ಪಲ್ಲಟಗೊಳ್ಳುವ ರೀತಿಗಳನ್ನು ಸ್ಥೂಲವಾಗಿ ತಿಳಿದುಕೊಳ್ಳಬಹುದು.
ತುಳುವಿನ ಅನುಸ್ವಾರಾಂತವಲ್ಲದ ಅನೇಕ ಪದಗಳು ಮೋಯ ಮಲೆಯಾಳದಲ್ಲಿ ಅನುಸ್ವಾರಾಂತವಾಗುತ್ತವೆ.
ತುಳು | ಮೋಯ ಮಲೆಯಾಳ | ಕನ್ನಡ |
ಮರೊ | ಮದೊಂ | ಮರ |
ಮೇಳೊ | ಮೇಳೊಂ | ಮೇಳ |
ಕರೊ | ಕಲೊಂ | ಗಡಿಗೆ |
ಅಯೆ | ಆವೊಂ | ಅವನು |
ಗುಂಡೊ | ಗುಂಡೊ | ಗರ್ಭಗುಡಿ |
ಕುಮ್ಮಾಯೊ | ಕುಮ್ಮಾಯೊಂ | ಗಾರೆ |
ಪಿಂಗಾರೊ | ಪಿಂಗಾರೊ | ಹಿಂಗಾರ (ಕಮಂಗಿನ ಹೂ) |
ಉಳ್ಳಾಯೊ | ಉಳ್ಳಾಯೊ | ಒಡೆತನ |
ತುಳುವಿನಲ್ಲಿ ಎ ಕಾರಾಂತವಾದ ಹಲವು ಪದಗಳು ಮೋಯ ಮಲೆಯಾಳದಲ್ಲಿ ಅಕಾರಾಂತವಾಗುತ್ತವೆ:
ಗೊಂಡೆ | ಗೊಂಡ | ಗೊಂಡೆ |
ಮಂಡೆ | ಮಂಡ | ಹಂಡೆ |
ಕಟ್ಟೆ | ಕಟ್ಟ | ಕಟ್ಟೆ |
ತೊಟ್ಟೆ | ತೊಟ್ಟ | ದೊನ್ನೆ |
ನೆಸಲ್ | ನೆಸಲ | ಮಣ್ಣಿನ ಒಂದು ಪಾತ್ರೆ |
ಬಸಲೆ | ಬಸಳ | ಬಸಳೆ |
ಕಂಡೆ | ಕಂಡ | ಗದ್ದೆ |
ಉಂಡ್ಯೆ | ಉಂಡ್ಯ | ಹುಲಿನ ಸೂಡಿ |
ಕಜನೆ | ಕಜನ | ಕಸ |
ಅಜನೆ | ಅಜನ | ನಿಗೂಢ ಶಬ್ಧ |
ಪುಣ್ಣಾಮೆ | ಪುಣ್ಣಾಮೆ | ಹುಣ್ಣಿಮೆ |
ಕೇರಳ ಮಲೆಯಾಳದಲ್ಲಿ ೞ (ಳ) ಕಾರಯುಕ್ತ ಪದಗಳು ಮೋಯ ಮಲೆಯಾಳದಲ್ಲಿ ದ ಕಾರಯುಕ್ತವಾಗಿಯೂ ತುಳುವಿನಲ್ಲಿ ರ ಕಾರಯುಕ್ತವಾಗಿಯೂ ಕನ್ನಡದಲ್ಲಿ ಳ ಕಾರಯುಕ್ತವಾಗಿಯೂ ಕಾಣಿಸಿಕೊಳ್ಳುತ್ತವೆ:
ಕೇರಳ ಮಲೆಯಾಳ | ಮೋಯ ಮಲೆಯಾಳ | ತುಳು | ಕನ್ನಡ |
ಕೋೞೆ | ಕೋದಿ | ಕೋರಿ | ಕೋಳಿ |
ವಾೞ | ಬಾದ | ಬಾರೆ | ಬಾಳೆ |
ಪುೞು | ಪುದು | ಪುರಿ | ಹುಳು |
ನಿೞಲ್ | ನೆದಳು | ನಿರೆಲ್ | ನೆರಳು |
ಕುೞೆ | ಕುದಿ | ಗುರಿ | ಗುಳಿ |
ಪೞ | ಪದಿಯೆ | ಪರ | ಹಳೆಯ |
ಕಿೞಂಜ್ | ಕೆದಂಙ | ಕೆರೆಂಗ್ | ಗೆಣಸು |
ಅೞೆ | ಅದಿ | ಅರುವೆ | ಅಳಿವೆ |
ಕುಂಬಳೆ ಕಡೆಯ ಮೋಯ ಮಲೆಯಾಳದಲ್ಲಿ ದ ಕಾರದ ಬದಲು ಯ ಕಾರ ಬರುತ್ತದೆ.
ಉದಾ : ಕೋಯಿ, ಬಾಯ ಮೋಯ ಮಲೆಯಾಳದ ಱ (ರ) ಕಾರಯುಕ್ತ ಪದಗಳು ತುಳುವಿನಲ್ಲಿ ದ ಕಾರಯುಕ್ತವಾಗುತ್ತವೆ:
ಮೋಯ ಮಲೆಯಾಳ | ತುಳು | ಕನ್ನಡ |
ಪೊದ | ಪುದೆ | ಹೊರೆ |
ಅರ | ಅದೆ | ಅರೆ(ಅಂಕಣ) |
ಒರ | ಉದೆ | ಒರೆ |
ಮರ | ಮದೆ | ಮರೆಟ |
ತುಳುವಿನ ಸಕಾರಯುಕ್ತ ಕೆಲವು ಮೋಯ ಮಲೆಯಾಳದಲ್ಲಿ ಚಕಾರ ಯುಕ್ತವಾಗುತ್ತವೆ:
ತುಳು | ಮೋಯ ಮಲೆಯಾಳ | ಕನ್ನಡ |
ಸಂಕೊ | ಚಂಗ್ | ಶಂಖ |
ಸಂಕೊ | ಚಂಗೊ | ಸೇತುವೆ |
ಸಕ್ಕರೆ | ಚಕ್ಕರ | ಸಕ್ಕರೆ |
ಸಾವು | ಚಾವು಼ | ಮರಣ |
ಸುತ್ತು | ಚುಟ್ಟಿ | ಸುತ್ತು |
ತುಳುವಿನ ಕೆಲವು ಕ ಕಾರಾದಿಯಾದ ಪದಗಳು ಮೋಯ ಮಳೆಯಾಳದಲ್ಲಿ ಚ ಕಾರಾದಿಯಾಗಿ ಮಾರ್ಪಡುತ್ತವೆ:
ತುಳು | ಮೋಯ ಮಲೆಯಾಳ | ಕನ್ನಡ |
ಕೆತ್ತ್ | ಚೆತ್ತ್ | ಕೆತ್ತು |
ಕೆಸರ್ | ಚೇರ್ | ಕೆಸರ್ |
ಕೆನ್ನಿ | ಚೆನ್ನಿ | ಕೆನ್ನೆ |
ಕೆಬಿ | ಚೆಯಿ | ಕಿವಿ |
ಇನ್ನು ಕೆಲವು ತ ಕಾರಾದಿಯಾಗಿ ತುಳು ಪದಗಳು ಮೋಯ ಮಳೆಯಾಳದಲ್ಲಿ ಚ ಕಾರಾದಿಯಾಗಿ ಮಾರ್ಪಡುತ್ತವೆ:
ತಾರಿ | ಚಾದಿ | ತಾಳೆ |
ತುರೆ | ಚೊರಿಙ್ಙ | ಸೋರೆ |
ತೆಕ್ಕಿ | ಚೊಕ್ಕಿ | ತೇಗ |
ತೆಮ್ಮ | ಚೊಮ | ಕೆಮ್ಮು |
ತುಳುವಿನ ಗ ಕಾರ ಮೋಯ ಮಳೆಯಾಳದಲ್ಲಿ ವ ಕಾರವಾಗಿ ಮಾರ್ಪಡುವುದಕ್ಕೆ ಉದಾಹರಣೆ :
ಪಗೆಲ್ | ಪವೊಳು | ಹಗಳು |
ಅಗೆಲ | ಅವಾಲೊಂ | ಅಗಲ |
ತೆಗ್ಲ್ | ತೆವುಳ | ಚಿಗುರು |
ತುಳುವಿನ ಕೆಲವು ಪದಗಳಲ್ಲಿ ಮೋಯ ಮಳೆಯಾಳವು ನೇರವಾಗಿ ಸ್ವೀಕರಿಸಿ ಏನೊಂದು ವ್ಯತ್ಯಾಸವಿಲ್ಲದೆ ಬಳಸುತ್ತದೆ.
ಉಪ್ಪಾಡ್ ಪಚ್ಚಿಳ್ | ಉಪ್ಪಾಡ್ ಪಚ್ಚಿಳ್ | ಉಪ್ಪಿನಲ್ಲಿ ಹಾಕಿದ ಹಲಸಿನ ಸೊಳೆ |
ಪಿಲಿಕಂದಾಡಿ | ಪಿಲಿಕಂದಾಡಿ | ಹುಲಿಕನ್ನಡಿ ಹಾವು |
ಬುಳ್ಪೊಳು | ಬುಳ್ಪೋಲು | ಅಳುಬುರುಕಿ |
ಕೊಂಗರ್ಕೂಳಿ | ಕೊಂಗರ್ಕೂಳಿ | ಉಬ್ಬು ಹಲ್ಲು |
ಅಡರ್ | ಅಡರ್ | ಸಪೂರಗೆಲ್ಲು |
ಕುಡು | ಕುಡು | ೧. ಹುರಳಿ ೨. ಪ್ರಾಣಿಗಳ ಬೀಜ ಹೋರಿ |
ಬೋರಿ | ಬೋರಿ | ಹೋರಿ |
ಕುಜಿಲ | ಕುಜಿಲ | ಮಣ್ಣಿನ ಮೊಗೆ |
ಮುಂಡಿ | ಮುಂಡಿ | ಮರಸಣಿಗೆ |
ಕೆಲವು ಅನ್ಯ ಭಾಷೆಗಳ ರೂಪಾಂತರ ಶಬ್ಧಗಳನ್ನು ಎರಡೂ ಆಡುನುಡಿಗಳೂ ಬಳಸುತ್ತವೆ. ಇವುಗಳ ಸ್ವರೂಪ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುತ್ತದೆ:
ಕಂತ್ರಾಟ್ | ಕಂತ್ರಾಟ್ |
ದಾಕ್ದಾರ್ | ದಾಕ್ದಾರ್ |
ಮಾಸ್ಟ್ | ಮಾಸ್ಟ್ |
ಬೂಕು | ಬೂಕು |
ಬೆಂಚಿ | ಬೆಂಚಿ |
ಅಬುರು | ಅಬುರು |
ಕಬರ್ | ಕಬರ್ |
ಅಕೇರಿ | ಅಕೇರಿ |
ಅಸಳ್ | ಅಸಳ್ |
ಕೊಸಿ | ಕೊಸಿ |
ನಜರ್ | ನಜರ್ |
ಇಣಾಮು | ಇಣಾಮು |
ಕುಸಾಳ್ | ಕುಸಾಳ್ |
ಪಿಕ್ರ್ | ಪಿಕ್ರ್ |
ಪರಸ್ಪರ ಸಾದೃಶ್ಯ ಸಂಬಂಧವೇನೂ ಇಲ್ಲದ ಪದಗಳೂ ತುಳು ಮತ್ತು ಮೋಯ ಮಲೆಯಾಳದಲ್ಲಿ ಸಾಕಷ್ಟು ಇವೆ. ಆಯಾ ಭಾಷೆಯ ಸ್ವಂತ ಸೊತ್ತು ಎನ್ನಬಹುದಾದ ಇಂಥ ಪದಗಳು ಭಾಷೆಯ ಅನನ್ಯತೆಯನ್ನೂ ಎರಡು ಭಾಷೆಗಳ ನಡುವಿನ ವ್ಯತ್ಯಾಸವನ್ನೂ ಸೂಚಿಸಲು, ಅಂಶಗಳೂ ಆಗಿವೆ.
ಮೋಯ ಮಲೆಯಾಳ | ತುಳು | ಕನ್ನಡ |
ಮೀಡ್ | ಮೋಣೆ | ಮುಖ |
ಬಯರ್ | ಬಂಜಿ | ಹೊಟ್ಟೆ |
ಕಿಡಾವು | ಬಾಲೆ | ಮಗು |
ತಲನಾರ಼್ | ಕುಜಲ್ | ಕೂದಲು |
ಪೊದಂ | ಕಂಡಾನಿ | ಗಂಡ |
ಮುಟ್ಟೊಂ | ಜಾಲ್ | ಅಂಗಳ |
ತುಣಿ | ಕುಂಟು | ಬಟ್ಟೆ |
ಜೋರು | ಉಣ್ಪು | ಅನ್ನ |
ಕೆಣರ್ | ಉಗ್ಗೆಲ್ | ಬಾವಿ |
ಚಿರಿಕ | ತೆಲಿಕೆ | ನಗು |
ಪದ್ಕೊಂ | ಪಾತೆರ | ಮಾತು |
ಬೊರೊವು | ಕಣಕ್ | ಕಟ್ಟಿಗೆ |
ತುಳು ಮತ್ತು ಮೋಯ ಮಲೆಯಾಳದ ಅದೆಷ್ಟೋ ನುಡಿಗಟ್ಟುಗಳಲ್ಲಿ ಪರಸ್ಪರ ಸಾದೃಶ್ಯ ಕಂಡುಬರುತ್ತವೆ.
ತುಳು | ಮೋಯಮಲೆಯಾಳ | ಕನ್ನಡ |
ಅಗ್ಗಿ ಉರ್ದಾಳೊ | ಅಗ್ಗಿ ಉರ್ದಾಳೊಂ | ಬೆಂಕಿಯ ಕಾವು, ಉರಿ |
ಪೋಕು ಮುಟ್ಟು | ಪೋಕುಮುಟ್ಟು | ಹೋಗಲುತಡೆ, ಅತಂಕ |
ಅಡ್ಯಾಣಿ ಬೊಳ್ಳ | ಅಡಾಣಿ ಬೆಳ್ಳೊಂ | ಅಸಾಧ್ಯಾ ಪ್ರವಾಹ, ಜಡಿಮಳೆ |
ಅಡಿಪೂಜುನಿ | ಅಜಿಪೂಜಿನ್ನ | ಪೂರ್ತಿ ಖಾಲಿಯಾಗು |
ಬಂಜಿ ಪೊತ್ತುನಿ | ಬಯರ್ಕತ್ತ್ನ್ನ್ | ಹೊಟ್ಟೆ ಉರಿಯುವುದು |
ಕಣ್ಣಡ್ಡ ಪೋಪನೆ | ಕಣ್ಣಡೊಂ ಪೋನೋ | ಮಂಪರು ಬರು |
ತೆತ್ತಿಡೆಕೆಲೆಪುನೆ | ಮುಟ್ಟೆಲೆ ಕುದುನ್ನೊ | ಮೊಟ್ಟೆಯಲ್ಲೇ ಕಲೆಯುವುದು, ಆಕಾಲದಲ್ಲೆ ಅಧಿಕ ಪ್ರಸಂಗ |
ಮುಂರ್ಟು ಞಾಯೆ | ಮುಂರ್ಟು ಞಾಯೊಂ | ಮುರುಟು (ವಕ್ರ) ನ್ಯಾಯ |
ತೊಲ್ಲುನ ಕೊರುಂಗು | ತೊಲೈ ಕೊಂರ್ಗು | ಗರಿಕಿತ್ತ ಕೊಕ್ಕರೆ, ಕ್ಷೀಣಕಾಯ |
ಪರ್ಕಟೆ ಬಾಯಿ | ಪರ್ಕಟಬಾಯಿ | ಹರಕುಬಾಯಿ |
ಮುಂಗೈಡ್ಮೀಸೆ | ಮುಂಗೈಲಿ ಮೀಸ | ಮುಂಗೈಯಲ್ಲಿ ಮೀಸೆ ಆಡಂಬರ, ಅಟ್ಟಹಾಸ |
ಪುಗೆ ತೂಪುನೆ | ಪೋಯ ನೋಕುನ್ನೆ | ಹೊಗೆನೋಡು, ಪ್ರತೀಕಾರ ಪ್ರತೀಕ್ಷೆ |
ತರೆಕೊರ್ಪುನೆ | ತಲಕೋಡ್ಕುನೊ | ತಲೆಕೊಡು, ಹೊಣೆ ಹೋರು |
ಸೀಗದ ಬಲ್ಲೆ | ಸೀಗಂಡೆ ಬಲ್ಲ | ಸೀಗೆಯ ಪೊದರು, ಬಿಡಿಸಲಾಗದ ಕಗ್ಗಂಟು |
ಈ ಎರಡು ಆಡುನುಡಿಗಳಲ್ಲಿ ಗಾದೆ ಮಾತುಗಳಲ್ಲೂ ಹೋಲಿಕೆಯನ್ನು ಗಮನಿಸಬಹುದು:
ತು. : ಕೋರಿ ಉಪ್ಪುನಾಗ ಕೊಂರ್ಗು ಮೆಚ್ಚುವಾ?
ಮೋ. ಮ. : ಕೋದಿ ಇರ್ಕುಂಬೊ ಕೊಂರ್ಗು ಮೆಚ್ಚುವಾ?
ಕ. : ಕೋಳಿ ಇರುವಾಗ (ಪಲ್ಯಕ್ಕೆ) ಕೊಕ್ಕರೆ ಮೆಚ್ಚುಗೆಯಾದೀತೆ
ತು. : ಅಂಡೆದ ಬಾಯಿ ಕಟ್ಟೊಲಿ, ದೊಂಡೆದ ಬಾಯಿ ಕಟ್ಟೊಲಿಯಾ?
ಮೋ. ಮ.: ಅಂದಂಡೆ ಹಾಯಿ ಕೆಟ್ಟಂ, ತೊಂಡಂಡೆ ಬಾಯಿ ಕೆಟ್ಟಾವೊ?
ಕ. : ಅಂಡೆಯ ಬಾಯಿ ಕಟ್ಟಬಹುದು, ಗಂಟಲಿನ ಬಾಯಿ ಕಟ್ಟಬಹುದೇ?
ತು. : ಅಂಬಡೆಗ್ಅಮೆ ತಪ್ಪೆರೆ ಇಜ್ಜಿ
ಮೋ. ಮ.: ಅಂಜಟಕ್ಅಮ ತಪ್ಪೊಂ ಇಲ್ಲ
ಕ. : ಅಮಟೆಗೆ ಸೂತಕ ತಪ್ಪುವಂತಿಲ್ಲ (ಸದಾ ತಾಪತ್ರಯ)
ತು. : ಅಡಿ ತತ್ತ್ಂಡ ಆನೆಲಾ ಮಗುರು
ಮೋ. ಮ.: ಅಡಿ ಮರಿಞ್ಞಿಂಗಿ ಅನೆಯಂ ಮರಿಯುಂ
ಕ. : ಅಡಿ ತಪ್ಪಿದರೆ ಆನೆಯೂ ಮುಗುಚೀತು
ತು. : ಆ ಕಾಡಂಗ್ಈ ಮುಜು
ಮೋ. ಮ.: ಆ ಕಾಟ್ಲಿಕ್ಈ ಮುಜು
ಕ. : ಆ ಕಾಡಿಗೆ ಈ ಮುಸುವ (ಸರಿಯಾದ ಜೋಡಿ)
ತು. : ಎರ್ಮೆದ ಪುಡು ಕಕ್ಕೆಗ್ಎಂಚ ತೆರಿಯು?
ಮೋ. ಮ.: ಎರ್ಮಂಡೆ ಪುಣ್ಣು ಕಾಕಕ್ಎಂದರಿಯುಂ?
ಕ. : ಎಮ್ಮೆಯ ಹುಣ್ಣು ಕಾಗೆಗೆ ಹೇಗೆ ತಿಳಿದೀತು?
ತು. : ದೆಂಜಿಲಾ ಇಜ್ಜಿ. ದೆಂಜಿಗ್ಪಾಡಿ ಕೈಲಾ ಇಜ್ಜಿ.
ಮೋ. ಮ.: ನಂಡುಂ ಇಲ್ಲ. ನಂಡಿನಿಟ್ಟ ಕೈಯಂ ಇಲ್ಲ
ಕ. : ಏಡಿಯೂ ಇಲ್ಲ. ಏಡಿಗಿಕ್ಕಿದ ಕೈಯೂ ಇಲ್ಲ.
ತು. : ಕುದ್ರೆಗ್ದುಂಬು ಕುಡು
ಮೋ. ಮ.: ಕುದ್ರನ್ಮುನ್ನು ಕುಡು
ಕ. : ಕುದುರೆಗಿಂತ ಮೊದಲು ಹುರುಳಿ (ಅತಿಸಿದ್ಧತೆ)
ತು. : ಬಿಸಲೆದ ಎಟ್ಟಿ ಓಡೆ ಲಾಗ್ಯು?
ಮೋ. ಮ.: ಚಟ್ಟಿಲಿಟ್ಟ ಇಟ್ಟಿ ವಾಟಕ್ಕ್ತುಳ್ಳುಂ?
ಕ. : ಪಾತ್ರೆಯಲ್ಲಿನ ಸಿಗಡಿ ಎಲ್ಲಿಗೆ ಹಾರೀತು? (ನಿರ್ಬಂದಿತ ಸ್ಥಿತಿ)
ತು. : ತೆಳ್ಪು ಆಂಡ ತೆಲ್ಲವು ಮಂದೊ ಆಂಡ ರೊಟ್ಟಿ
ಮೋ. ಮ.: ತೆಳ್ಪು ಆಯೆಂಗಿ ತೆಳ್ಳೊಂ ಮಂದೊ ಆಯೆಂಗಿ ಒರೋಟಿ
ಕ. : ತೆಳುವಾದರೆ ನೀರುದೋಸೆ, ಮಂದವಾದರೆ ರೊಟ್ಟಿ (ಸಂದರ್ಭ ಸಾಧಕತೆ)
ತು. : ಮದಿಪು ದುಂಬು ಮಾಯೆ ಪಿರ
ಮೋ. ಮ.: ಮದಿಪು ಮುನ್ನೆಂ ಮಾಯಾ ಪಿನ್ನೆಂ
ಕ. : (ಜನರ) ನಿರ್ಣಯ ಮೊದಲು, ಮಾಯೆ (ದೈವ) ಮತ್ತೆ.
ದಿಗ್ದರ್ಶನಾರ್ಥವಾಗಿ ಕೆಲವು ಉದಾಹರಣೆಗಳನ್ನು ಕೊಟ್ಟಿದ್ದಾಯಿತು.ಇನ್ನು ಕೆಲವು ನಿಟ್ಟಿನಿಂದ ಪರಿಶೀಲಿಸುವುದು ಸಾಧ್ಯ. ಕೇರಳ ಮತ್ತು ಕನ್ನಡ (ತುಳು) ನಾಡಿನ ಗಡಿಪ್ರದೇಶದ ಭಾಷಾ ಸ್ವರೂಪಗಳ ಅಧ್ಯಯನ ಅನೇಕ ದೃಷ್ಟಿಗಳಿಂದ ಗಮನೀಯವಾಗುತ್ತದೆ. ಆಡುಮಾತುಗಳಲ್ಲಿ ಲಭ್ಯವಿರುವ ಅನೇಕ ವಿಶಿಷ್ಟ ಶಬ್ಧರೂಪಗಳ ಸಹಾಯದಿಂದ ಪೂರ್ವ ದ್ರಾವಿಡ ಭಾಷೆಯ ಕೆಲವೊಂದು ಅಂಶಗಳನ್ನು ಗುರುತಿಸಲು ಸಾಧ್ಯವಾಗಬಹುದು. ಭಾಷೆಗಳ ಅಧ್ಯಯನದ ಇನ್ನೊಂದು ಮುಖ್ಯ ಪ್ರಯೋಜನವೆಂದರೆ, ಇದು ವಿವಿಧ ಮನುಷ್ಯ ಸಮಾಜಗಳ ಮೂಲ ಸಂಬಂಧಗಳ ಬಗೆಗೆ ಬೆಳಕು ಚೆಲ್ಲುತ್ತದೆ. ಇದು ಎಲ್ಲಕ್ಕಿಂತಲೂ ಪ್ರಸ್ತುತವಾದ ವಿಚಾರ.
ನಮ್ಮ ನಾಡಿನ ಸಮೃದ್ಧ ಉಪಭಾಷೆಗಳ ಕಡೆಗೆ ಅಧ್ಯಯನಶೀಲರ ಲಕ್ಷ್ಯ ಹರಿದು ಹೆಚ್ಚಿನ ಸಂಖ್ಯೆಯಲ್ಲಿ ಉಪಭಾಷಾ ಕೋಶಗಳು ಬೆಳಕಿಗೆ ಬರುವಂತಾದರೆ ಭಾಷಾ ಸಾಹಿತ್ಯ, ಸಂಸ್ಕೃತಿಗಳ ವ್ಯಾಸಂಗಾಸಕ್ತರಿಗೆ ಉಪಕಾರವಾದೀತು.
ಆಕರಸೂಚಿ
೧. ಡಾ. ಯು. ಪಿ. ಉಪಾಧ್ಯಾಯ, ೨೦೦೧ ತುಳು ಕೈಪಿಡಿ, ಪ್ರ. : ಕರ್ನಾಟಕ ತುಳು ಸಾಹಿತ್ಯ ಆಕಾಡೇಮಿ, ಮಂಗಳೂರು
೨. ಅಮೃತ ಸೋಮೆಶ್ವರ, ೨೦೦೧ ಮೋಯ ಮಲೆಯಾಳ – ಕನ್ನಡ ಪದಕೋಶ, ಪ್ರ. : ಪ್ರಕೃತಿ ಪ್ರಕಾಶನ ಕೋಟೆಕಾರು, ದ. ಕ.
೩. ಡಾ. ಬಿ. ರಾಮ ಚಂದ್ರರಾವ್, ೧೯೮೬ ತುಳು ಭಾಷೆ, ಪ್ರ. : ಐ. ಬಿ. ಎಚ್ ಪ್ರಕಾಶನ, ಬೆಂಗಳೂರು.
Leave A Comment