ಇಂಗ್ಲಿಷ್‌ ಮೂಲ : ಪಿ.ಎಸ್. ಸುಬ್ರಹ್ಮಣ್ಯಂ
ಕನ್ನಡಕ್ಕೆ : ಬಿ. ಶಿವರಾಮ ಶೆಟ್ಟಿ

ತುಳು ಭಾಷೆಯನ್ನು ಪ್ರಧಾನವಾಗಿ ಮೈಸೂರು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ, ಕಾರ್ಕಳ, ಮಂಗಳೂರು ಮತ್ತು ಪುತ್ತೂರು ತಾಲೂಕುಗಳಲ್ಲಿ ಹಾಗೂ ಕೇರಳ ರಾಜ್ಯದ ಕಾರಸಗೋಡು ತಾಲೂಕುಗಳಲ್ಲಿ ೧೦ ಲಕ್ಷ ಜನರು ಮಾತಾಡುತ್ತಿದ್ದಾರೆ. ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣದ ಪಿತಾಮಹ ಎಂದೆನಿಸಿಕೊಂಡಿರುವ ರಾಬರ್ಟ್‌ ಕಾಲ್ಡ್‌ವೆಲ್‌ ತನ್ನ ಉದ್ಗ್ರಂಥವಾದ ‘ಎ ಕಂಪಾರೆಟಿವ್‌ ಗ್ರಾಮರ್ ಆಫ್‌ದಿ ಡ್ರಾವಿಡಿಯನ್ ಓರ್ ಸೌತ್‌- ಇಂಡಿಯನ್ ಫ್ಯಾಮಿಲಿ ಆಫ್‌ಲಾಂಗ್ವೇಜಸ್‌’ (೧೮೫೬) ಗ್ರಂಥದಲ್ಲಿ ತುಳುವನ್ನು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆ ಎಂಬುದಾಗಿ ಪರಿಗಣಿಸಿದ್ದಾನೆ. ಭಾಷೆಯ ಸಾದೃಶ್ಯತೆಯ ಬಗ್ಗೆ ಈತ ಪ್ರಸ್ತಾಪಿಸುತ್ತಾ, ತುಳು ಮಲೆಯಾಳಂನ ಉಪಭಾಷೆ ಎಂಬ ಈ ಮೊದಲಿನ ಅಭಿಪ್ರಾಯವನ್ನ ತಿರಸ್ಕರಿಸಿ, ತುಳು ಮಲಮಾಳಂಗಿಂತ ತೀರಾ ಭಿನ್ನವಾದ ಭಾಷೆ ಎಂಬುದಾಗಿ ಪ್ರತಿಪಾದಿಸಿದ. ತಮಿಳು- ಮಲೆಯಾಳಂನ ನಡುವೆ ಹೆಚ್ಚು ನಿಕಟತೆ ಇರುವಂತೆ ತುಳು ಮಲೆಯಾಳಂನ ನಡುವೆ ಅಷ್ಟು ಸಾಮ್ಯ ಇಲ್ಲ ಎಂಬುದು ಕಾಲ್ಡ್‌ವೆಲ್‌ನ ವಾದ. ಆ ಮೂಲಕ ತುಳು, ಮಲೆಯಾಳಂನ ಉಪಭಾಷೆ ಎಂಬುದಾಗಿ ಆವರೆಗೆ ಇದ್ದ ಅಭಿಪ್ರಾಯವನ್ನು ಆತ ಅಲ್ಲಗಳೆಯುತ್ತಾನೆ. ತುಳು ಕನ್ನಡದಿಂದ ಭಿನ್ನ ಎಂದೆನಿಸಿದರೂ ಅದು ಅಷ್ಟೇನೂ ಭಿನ್ನವಲ್ಲ. ಆದರೆ ಕೂರ್ಗ್‌ ಮತ್ತು ತುಳುವಿನ ನಿಕಟತೆಗಳನ್ನು ಗಮನಿಸಿದರೆ ಕನ್ನಡಕ್ಕಿಂತ, ಕೂರ್ಗ್‌ ತುಳುವಿಗೆ ಹೆಚ್ಚು ನಿಕಟವಗಿದೆ ಎಂಬುದು ಕಾಲ್ಡ್‌ವೆಲ್‌ನ ಅಭಿಮತ. ತಮಿಳಿಗಿಂತ ತುಳು ಬಹಳಷ್ಟು ಭಿನ್ನ ಎಂಬುದಾಗಿಯೂ ಆತ ಪ್ರತಿಪಾದಿಸುತ್ತಾನೆ. ಮೇಲಿನ ಹೆಳೀಕೆ ಪ್ರಕಾರ, ಕಾಲ್ಡ್‌ವೆಲ್‌ ಹೆಚ್ಚು ಒತ್ತು ಕೊಟ್ಟಿರುವ ಅಂಶವೆಂದರೆ ಈ ಹಿಂದಿನ ವಾದದಂತೆ, ತುಳು ಇತರ ಕೆಲವು ಭಾಷೆಗಳ ಉಪಭಾಷೆ ಅಲ್ಲ ಎನ್ನುವುದು. ಬದಲಾಗಿ ಅದೊಂದು ಸ್ವತಂತ್ರವಾದ ಭಾಷೆ. ತುಳು ಕನ್ನಡಕ್ಕೆ ಹೆಚ್ಚು ಹತ್ತಿರವಾಗಿರುವುದಲ್ಲದೆ, ಇನ್ನು ಕೆಲವು ಸಂದರ್ಭಗಳಲ್ಲಿ, ಕೊಡವ ಭಾಷೆಗೆ ಹೆಚ್ಚು ಹತ್ತಿರವಾಗಿದೆಯೇ ವಿನಾ ಅದು ಇತರ ಯಾವುದೇ ದಕ್ಷಿಣ ದ್ರಾವಿಡ ಭಾಷೆಗಳನ್ನು ಹೋಲುವುದಿಲ್ಲ. ಯೂಲ್ಸ್‌ಬ್ಲಾಕ್‌ (೧೯೫೪) ಕೂಡಾ ಹೇಳುವಂತೆ, ”ಈ ಉಪಭಾಷೆ (ತುಳು) ಕನ್ನಡಕ್ಕೆ ನಿಕಟವಾಗಿರುವುದು ಬಹಳ ಸ್ಪಷ್ಟ. ಆದರೆ ಅವೆರಡರ ನಡುವೆ ನೇರ ಸಂಬಂಧ ಇದೆ ಅನ್ನುವುದು ಮಾತ್ರ ತೀರಾ ವಿವಾದಾಸ್ಪದವಾದ ವಾದವಾಗುತ್ತದೆ.” ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಇಬ್ಬರು ಮಹನೀಯರು ಇತರ ದ್ರಾವಿಡ ಭಾಷೆಗಳ ಜೊತೆಗೆ ತುಳುವಿನ ಸಂಬಂಧದ ಕುರಿತು ನೇರವಾಗಿ ಏನನ್ನೂ ಹೇಳಿಲ್ಲವಾದರೂ ತುಳು ಮತ್ತು ಕನ್ನಡದ (ಮತ್ತು ಕೊಡಗು) ನಡುವೆ ಕೆಲವು ಸಾಮ್ಯತೆಗಳಿವೆ ಎಂಬುದನ್ನು ಅವರು ಗಮನಿಸಿದ್ದಾರೆ. ಆದರೂ ಅವೆರಡರ ನಡುವೆ ಬಹಳ ನಿಕಟವಾದ ಸಂಬಂಧವಿದೆ ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟತೆ ಇಲ್ಲ. ಹೀಗೆಲ್ಲ ಇದ್ದರೂ, ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿನ ಸ್ಥಾನವಿವೇಚನೆ ಬಗ್ಗೆ ದ್ರಾವಿಡ ಭಾಷಾ ವಿಜ್ಞಾನಿಗಳಲ್ಲಿ ಸ್ಪಷ್ಟ ನಿಲುವನ್ನು ಇದುವರೆಗೆ ತಳೆಯಲು ಸಾಧ್ಯವಾಗಿಲ್ಲ. ಭ. ಕೃಷ್ಣಮೂರ್ತಿ, ತುಳುವಿನ ಸ್ವತಂತ್ರ ಸ್ವರೂಪವನ್ನು ಮಾನ್ಯ ಮಾಡುವಾಗ ಎರಡು ಲಕ್ಷಣಗಳಿಂದ ತುಳು ಮೂಲಮಧ್ಯ ದ್ರಾವಿಡ ಭಾಷೆಯಿಂದ ಕವಲೊಡೆದ ಭಾಷೆ ಎಂದು ಹೇಳುವಲ್ಲಿ ತಮ್ಮ ಒಲವನ್ನು ವ್ಯಕ್ತಪಡಿಸುತ್ತಾರೆ. (ನೋಡಿ ಕೆಳಗೆ ೮ ಮತ್ತು ೧೦).ಎಂ.ಬಿ. ಎಮಿನೋ, ತುಳು ಮತ್ತು ಅದರ ಉಪಭಾಷೆಗಳ ಬಗ್ಗೆ ಸಮರ್ಪಕ ಆಧಾರಗಳು ದೊರೆತರೆ ಮಾತ್ರ ತುಳುವಿನ ಸ್ಥಾನವಿವೇಚನೆ ಇತ್ಯರ್ಥವಾದೀತು ಎಂಬುದನ್ನು ಅಂಗೀಕರಿಸುತ್ತಾರೆ. ತುಳು ದಕ್ಷಿಣ ದ್ರಾವಿಡ ಭಾಷೆಯಲ್ಲಿ ಎಂಬ ಸಾಮಾನ್ಯ ಅಭಿಪ್ರಾಯವನ್ನು ಅವರು ಒಪ್ಪಿಕೊಳ್ಳುತ್ತಾ ಭೂತಕಾಲ ಸೂಚಕ ಪ್ರತ್ಯಯದ ರೂಪುಗೊಳ್ಳುವಿಕೆಯ ಸ್ವರೂಪವನ್ನು ಈ ಅಭಿಪ್ರಾಯಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಾರೆ.

ಇತ್ತೀಚಿನ ಕೆಲವು ಪ್ರಕಟಣೆಗಳಿಂದಾಗಿ ಅದೃಷ್ಟವಶಾತ್‌ತುಳು ಮತ್ತು ಅದರ ಉಪಭಾಷೆಗಳ ಬಗೆಗಿನ ನಮ್ಮ ತಿಳುವಳಿಕೆ ಗಮನಾರ್ಹವಾಗಿ ಹೆಚ್ಚಾಗಿದೆ (ಪರಾಮರ್ಶನವನ್ನು ಗಮನಿಸಿ). ಇದರಿಂದಾಗಿಯೇ, ಎಮಿನೋ ಅವರ ಮೇಲಿನ ಮಾತಿನಂತೆ, ಇತ್ತೀಚಿನ ದಿನಗಳಲ್ಲಿ, ತುಳು ಮತ್ತು ಇತರ ದ್ರಾವಿಡ ಭಾಷೆಗಳ ನಡುವಿನ ಸಾದೃಶ್ಯ-ವೈದೃಶ್ಯದ ಕುರಿತು ಅಧ್ಯಯನ ಮಾಡುವುದಕ್ಕೆ ಸಾಧ್ಯವಾಗಿದೆ. ಇಂತಹ ಕೂಲಂಕಷವಾದ ಅಧ್ಯಯನದಿಂದ ಮಾತ್ರ ದ್ರಾವಿಡ ಭಾಷಾವರ್ಗದಲ್ಲಿ ತುಳುವಿನ ಸ್ಥಾನವಿವೇಚನೆ ಬಗ್ಗೆ ಸರಿಯಾದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾದೀತು. ವಿದ್ವಾಂಸರು ಈವರೆಗೆ ಈ ಬಗ್ಗೆ ಒಂದೋ ಅಸ್ಪಷ್ಟವಾದ. ಹೇಳಿಕೆಗಳನ್ನು ನೀಡಿದ್ದಾರೆ; ಇಲ್ಲವೇ ಈ ಕುರಿತಂತೆ, ಕೆಲವೇ ಅಂಶಗಳನ್ನು ಮಾತ್ರ ವಿಪರೀತವಾಗಿ ನೆಚ್ಚಿಕೊಂಡಿದ್ದಾರೆ. ಈ ಕಾರಣದಿಂದ, ಕೆಳಗಿನ ಪ್ಯಾರಾಗಳಲ್ಲಿ, ಮೊದಲಿಗೆ  ತುಲನಾತ್ಮಕ ದೃಷ್ಟಿಕೋನದಿಂದ ತುಳು ಭಾಷಿಕ ಸಂರಚನೆಯ ಪ್ರತಿಯೊಂದು ಅಂಶಗಳನ್ನು ಅಭ್ಯಾಸ ಮಾಡುವ ಪ್ರಯತ್ನವನ್ನು ಮಾಡಲಾಗುವುದು. ಆ ಬಳಿಕೆ ಈ ಎಲ್ಲ ಸಾಕ್ಷ್ಯಾಧಾರಗಳನ್ನು ಗಮನಕ್ಕೆ ತಂದುಕೊಂಡು ದ್ರಾವಿಡ ಭಾಷೆಯಲ್ಲಿ ತುಳುವಿನ ಸ್ಥಾನವಿವೇಚನೆಯನ್ನು ಮಾಡಲಾಗುವುದು.

೧. ಧ್ವನಿಮಾ ವಿಜ್ಞಾನ

೧. ಮೂಲದ್ರಾವಿಡದ ಪದಾದಿಯ ಚ್‌ಕಾರ ತುಳುವಿನಲ್ಲಿ ಲೋಪವಾಗಿರುವುದು ತುಳುವಿನ ಧ್ವನಿಮಾ ವಿಜ್ಞಾನದಲ್ಲಿ ಕಾಣಿಸಿಕೊಳ್ಳುವ ಒಂದು ಪ್ರಧಾನವಾದ ಬದಲಾವಣೆ,

ತು. ಅಳೆ್, ಅಲೆ್ ‘ಮಜ್ಜಿಗೆ’; ತ. ಅಳೈ, ಕ. ಅಳೆ. ತೆ. ಚಲ್ಲ (೧೯೯೨)

ತು. ಆಜಿ ‘ಆರು’; ತ. ಮ. ಕ. ತೆ. ಆರು; ಗೊ. ಸಾರೂಙ (೨೦೫೧)

ತು. ಉಪ್ಪು ‘ಉಪ್ಪು’; ತ.ಮ.ಕ.ತೆ. ಉಪ್ಪು; ಕೊಲಾಮಿ, ಸುಪ್‌. ಪ. ಚುಪ್‌(೨೨೦೧)

ತು. ಉಲೆ್ ‘ಒಲೆ’; ತ. ಉಲೈ, ಕ. ಒಲೆ. ಕೊಂಡ. ಸೊಲ್‌, ಕುಇ. ಸೊಡು (೨೩೩೭)

ಈ ಬದಲಾವಣೆ ಎಲ್ಲ ದಕ್ಷಿಣ ದ್ರಾವಿಡ ಭಾಷೆಗಳ ಮೇಲೆ ಪರಿಣಾಮ ಬೀರಿದ್ದು ಈಗಾಗಲೇ ಗಮನಿಸಿರುವಂತಹ ಸಂಗತಿಯಾಗಿದೆ. ಹೀಗಾಗಿ ಇದು ಈ ಉಪಗುಂಪುಗಳಲ್ಲಿ ಕಂಡುಬರುವ ಬಹಳ ಮಹತ್ತ್ವದ ಗುಣಲಕ್ಷಣವಾಗಿದೆ. ತುಳು ಇತರ ದಕ್ಷಿಣದ್ರಾವಿಡ ಭಾಷೆಗಳ ಜೊತೆಗೆ ಈ ಲಕ್ಷಣವನ್ನು ಹಂಚಿಕೊಂಡಿದೆ.

೨. ಮೂಲದ್ರಾವಿಡದ ಊ ಕಾರ ತುಳುವಿನ ಪದಾಂತ್ಯದಲ್ಲಿ ಉ ಮತ್ತು ಉ ಗಳಾಗಿ ಒಡೆದುಕೊಳ್ಳುವುದು: ಎಲ್‌.ವಿ. ರಾಮಸ್ವಾಮಿ ಐಯರ್ (೧೯೩೬:೧೨೫-೭). ತುಳುವಿನ ಪದಾಂತ್ಯದಲ್ಲಿ ಈ ಎರಡು ಸ್ವರಗಳು ಹಂಚಿಕೆಯಾಗುವ ಬಗ್ಗೆ ಹೇಳಿದ್ದಾರೆ. ಅವರ ಪ್ರಕಾರ ಸಂವೃತ ಸ್ವರ  ಉ ಹ್ರಸ್ವ ತದ್ಧಿತ ಸ್ವರಗಳು ಮತ್ತು ಹ್ರಸ್ವ ಪದಾಂತ್ಯ ವ್ಯಂಜನಗಳು ಇರುವ ಏಕವರ್ಣದ ಪ್ರಕೃತಿಗಳ ಕೊನೆಗೆ ಬರುತ್ತದೆ. ಅಂತೆಯೇ ಪಕ್ಕದ ವರ್ಣದಲ್ಲಿ ಓಷ್ಠ್ಯ ವ್ಯಂಜನ ಅಥವಾ ಪಶ್ಚ ಸ್ವರಗಳನ್ನು ಹೊಂದಿದ ಎಲ್ಲ ಪದಗಳ ಅಂತ್ಯದಲ್ಲಿ ಬರುತ್ತದೆ.

ಉದಾ : ಕಡು, ‘ಗಟ್ಟಿ’, ‘ದೃಢ’; ನಡು ‘ಮಧ್ಯ’ ; ಪುರು ‘ಹುಳು’, ಪೊಣ್ಣು ‘ಹೆಣ್ಣು’, ಜೋವು ‘ಮಗು’; ಉಚ್ಚು, ‘ಹಾವಿನ ಒಂದು ಜಾತಿ’; ಊರು ‘ಹಳ್ಳಿ’; ಕಪ್ಪು ‘ಕಪ್ಪು ಬಣ್ಣ’;

ವಿವೃತ ಸ್ವರ ಉ್ ಉಳಿದ ಎಲ್ಲಾ ಕಡೆಗಳಲ್ಲಿ ಬರುತ್ತದೆ. ಉದಾ : ನಾಡು್ ‘ದೇಶ’; ಕಾರು್ ‘ಕಾಲು’; ಕಣ್ಣು್ ‘ಕಣ್ಣು’; ಪುದರು್ ‘ಹೆಸರು’.

ಎಂ.ಬಿ. ಎಮೀನೋ ಕೊಡಗು ಸ್ವರಗಳ ಕುರಿತಾದ ತಮ್ಮ ಪ್ರಬಂಧದಲ್ಲಿ (೭) ಕೊಡಗು ಭಾಷೆಯಲ್ಲಿ ಉ ಸ್ವರ ಉ ಮತ್ತು ಉ್ಗಳಾಗಿ ಒಡೆದಿದ್ದು ಆ ಭಾಷೆಯ ಸಂರಚನೆಯಲ್ಲಾದ ಬದಲಾವಣೆಯ ಕಾರಣದಿಂದ ಅವು ಧ್ವನಿಮಾದ ಸ್ಥಾನಮಾನವನ್ನು ಪಡೆದಿವೆ ಎಂಬ ಅಂಶವನ್ನು ಗುರುತಿಸುತ್ತಾರೆ. ಉ ಸ್ವರ ಈ ರೀತಿಯಲ್ಲಿ ಒಡೆದುಕೊಳ್ಳುವುದನ್ನು ತಮಿಳು ಮತ್ತು ಮಲಯಾಳಂ (ಕೆಲವು ಉಪಭಾಷೆಗಳಲ್ಲಿ) ಭಾಷೆಗಳಲ್ಲೂ ಗುರುತಿಸುತ್ತಾರೆ. ಆದರೆ ಕನ್ನಡದಲ್ಲಿ ಹೀಗಾಗಲಿಲ್ಲ. ”ಹೀಗಾಗಿ ಕನ್ನಡವನ್ನು ಹೊರತುಪಡಿಸಿ ಮಿಕ್ಕ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಕಂಡು ಬರುವಂತಹ ಒಂದು ಹೊಸತನ ಎಂಬುದಾಗಿ ಇದನ್ನು ಪರಿಗಣಿಸಬಹುದಾಗಿದೆ.” ತುಳುವಿನ ಈ ವಿದ್ಯಮಾನದ ಬಗ್ಗೆ ಅವರು ಹೇಳುತ್ತಾ ”ತುಳುವಿನ ಈ ಬೆಳವಣಿಗೆ ದಕ್ಷಿಣ ದ್ರಾವಿಡ ಭಾಷೆಗಳ ಜೊತೆಗೆ ಹೇಗೆ ಸಂಬಂಧ ಹೋಂದಿದೆ ಎಂಬುದು ಇನ್ನೂ ಬಗೆಹರಿಯದ ಸಮಸ್ಯೆ” ಎಂದು ಹೇಳುತ್ತಾರೆ. ದಕ್ಷಿಣೇತರ ದ್ರಾವಿಡ ಭಾಷೆಗಳಲ್ಲಿ ತೆಲುಗು, ಕೊಂಡ, ಕುಇ, ಕುವಿ, ಮಾಲ್ತೊ ಮತ್ತು ಗೊಂಡಿ ಹಾಗೂ ಗದಬ ಇವುಗಳ ಉಪಭಾಷೆಗಳ ಉಪಗುಂಪುಗಳಲ್ಲಿ ವಿವೃತ ಸ್ವರ ಇನ್ನೂ ಕೂಡಾ ಕಾಣಿಸಿಕೊಂಡಿಲ್ಲ. ಅಲ್ಲಿ ಸ್ವರವಿದೆ. ಇದನ್ನು ದಕ್ಷಿಣ ದ್ರಾವಿಡ ಭಾಷೆಗಳ ಉಪಗುಂಪುಗಳ ಲಕ್ಷಣ ಎಂಬುದಾಗಿ ಪರಿಗಣಿಸಬಹುದಾಗಿದೆ. ಹೀಗಾಗಿ, ಕನ್ನಡವನ್ನು ಹೊರತುಪಡಿಸಿ ಮೂಲ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಉ ಸ್ವರ ಉ ಮತ್ತು ಉ್ ಗಳಾಗಿ ಬೆಳೆವಣಿಗೆಯನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಅವು ಉ ಸ್ವರದಲ್ಲಿ ಅಂತರ್ಗತವಾಗಿದೆ. ಈ ಅಂಶವನ್ನು ಈ ಉಪಗುಂಪಿನ ಎಲ್ಲ ಭಾಷೆಗಳೂ ಉಳಿಸಿಕೊಂಡಿವೆ. ಈವೊಂದು ಸಾಕ್ಷ್ಯಾಧಾರ ತುಳುವನ್ನು ದಕ್ಷಿಣ ದ್ರಾವಿಡ ಭಾಷಾವರ್ಗದಲ್ಲಿ ಗುರುತಿಸುವಂತೆ ಮಾಡುತ್ತದೆ.

೩. ಡಿ.ಎನ್. ಶಂಕರಭಟ್ಟರು ಈಗಾಗಲೇ ಗಮನಿಸಿರುವಂತೆ, ಅದಿಂದ ಆರಂಭವಾಗುವ ತದ್ಧಿತ ಪ್ರತ್ಯಯ ಬರುವ ಸಂದರ್ಭಗಳಲ್ಲಿ ಇತರ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಆಗುವ ಹಾಗೆ ತುಳುವಿನಲ್ಲಿ ಇ/ಎ ಮತ್ತು ಉ/ಒ ಸ್ವರ ಪ್ರತ್ಯಯ ಆಗುವುದಿಲ್ಲ. ತುಳುವಿನಲ್ಲಿ ಬಹಳಷ್ಟು ಸಂದರ್ಭಗಳಲ್ಲಿ, ತದ್ಧಿತ ಪ್ರತ್ಯಯವಾಗಿ ಎ (*ಅಯ್‌) ಬಂದಾಗ ಅಥವಾ ತದ್ಧಿತ ಪ್ರತ್ಯಯವು ‘ಅ’ ದಿಂದ ಆರಂಭವಾದಾಗ ಅಥವಾ ಕೆಲವು ಸಂದರ್ಭಗಳಲ್ಲಿ ‘ಎ’ ಯಿಂದ ಆರಂಭವಾದಾಗ (ಧಾತುವಿನಲ್ಲಿ) ಮೂಲವರ್ಣದಲ್ಲಿ ‘ಇ’ ಮತ್ತು ‘ಉ’ಗಳು ಬರುತ್ತವೆ. ಹಾಗೆಯೇ ಅದೇ ಪರಿಸರದಲ್ಲಿ ಎ, ಒ ಗಳು ಬರುವ ಸನ್ನಿವೇಶಗಳೂ ಗಮನಾರ್ಹ ಸಂಖ್ಯೆಯಲ್ಲಿ ಕಂಡುಬರುತ್ತವೆ. ಹೀಗಾಗಿ, ತದ್ಧಿತ ಪ್ರತ್ಯಯಗಳನ್ನೊಳಗೊಂಡ ಎಲ್ಲ ೧೫೬ ನಿದರ್ಶಗಳ (ಸುಮಾರಾಗಿ) ೨೪ ಸನ್ನೀವೇಶಗಳಲ್ಲಿ ಮೂಲ ಸ್ವರ ಇ ಆಗಿರುತ್ತದೆ. ಮೂವತ್ತರಲ್ಲಿ ಎ ಬರುತ್ತದೆ. ಉ ನಲ್ವತ್ತೆಂಟರಲ್ಲಿ ಹಾಗೂ ಮೂವತ್ತೊಂದರಲ್ಲಿ ಒ, ಐದರಲ್ಲಿ ಇ ಮತ್ತು ಎ ಹಾಗೂ ಹದಿನೆಂಟು ನಿದರ್ಶನಗಳಲ್ಲಿ ಉ ಮತ್ತು ಒ ಕಾಣಿಸಿಕೊಳ್ಳುತ್ತವೆ. ಕೆಳಗೆ ಉಲ್ಲೇಖಿಸಿರುವ ಉದಾಹರಣೆಗಳು ಮೂಲದ್ರಾವಿಡ ಸ್ವರವನ್ನು ಕೇವಲ ಉಳಿಸಿಕೊಂಡಿದ್ದನ್ನು ಮಾತ್ರ ತೋರಿಸಿಕೊಡುವುದಲ್ಲ; ತುಳುವಿನಲ್ಲಿ ಕೆಲವು ನಿದರ್ಶನಗಳಲ್ಲಿ ಮೂಲ ಉನ್ನತ ಸ್ವರಕ್ಕೆ ಮಧ್ಯಸ್ವರ ಹಾಗೂ ಮೂಲ ಮಧ್ಯಸ್ವರಕ್ಕೆ ಉನ್ನತ ಸ್ವರ ಬಳಕೆಯಾಗುತ್ತವೆ. ಇನ್ನೊಂದು ಗಮನಾರ್ಹವಾದ ಸಂಗತಿ ಎಂದರೆ ಸುಮಾರು ಕಾಲು ಭಾಗದಷ್ಟು ಸಂದರ್ಭಗಳಲ್ಲಿ ಮಾತ್ರ ತುಳನಾತ್ಮಕ ಅಧ್ಯಯನ ಮೂಲದ್ರಾವಿಡ ಭಾಷೆಯ ಮಧ್ಯಸ್ವರಗಳನ್ನು ಪುನಾರಚಿಸುವ ಕಡೆಗೆ ಕೊಂಡೊಯ್ಯುತ್ತದೆ.

೧. ತು. ಉಣಸು ್, ‘ಊಟ’; ತ. ಮ. ಕ. ತು. ಉಣ್ ‘ತಿನ್ನು’ (ಅಥವಾ ‘ಕುಡಿ’) (೧೫೬;*ಉ)

೨. ತು, ಉರ್-ಕುಲ್ಲು ್, ಬರ್-ಕಲ್ಲು ್ ‘ಬರೆಗಲ್ಲು’ ತ. ಉರೈ-ಕಲ್‌, ಮ ಉರ-ಕಲ್ಲು ಕ. ಒರೆ- ಗಲ್‌(೫೭೨;*ಉ:ತ. ಉರ್-ಇಞ್ಚು ‘ಉಜ್ಜು’)

೩. ತು, ಉರ್, ಉಳ್ (ಜಿಂಕೆ) : ತ, ಉಳೈ: ತೆ. ದುಪ್ಪಿ; ಪ. ಉಱುಪ್‌(೫೯೮;ಉ)

೪. ತು. ಕುರ್ ‘ಕೊರಂಬೆ್’, ಕೊಳಂಬ್‌ತ. ಕೞೈ, ಕೂೞೈ ‘ಮೆದು ಮಣ್ಣು’; ಕ. ಕೊೞಚಿ, ಕೊೞಚೆ (೧೫೧೪;ಊ/*ಉ)

೫. ತು. ಕಿರ್, ಕೆರೆ್, ಕೆದು ‘ಕೆರೆ’; ತ, ಚಿಱೈ; ಮ. ಚಿಱ; ಕ. ಕೆಱೆ; ತೆ. ಚೆಱುವು (೧೬೪೮/;*ಚ್‌)

೬. ತು. ಇಮೆ್, ಸಿಮೆ್ ‘ಹುಬ್ಬು’; ತ. ಇಮೈ;ಮ. ಇಮ;ಕ. ಎಮೆ (೨೦೯೭;*ಇ);ತ. ಚಮಿೞ್‌

೭. ತು. ಸುಡರು ್, ತುಡರು ್ ‘ದೀಪ’, ಸೊಡರ್ ‘ಸುಡುವ ವಾಸನೆ’; ತ. ಚುಟರ್ ‘ಸೊಡರು’; ಮ. ಚುಟರ್ರ್; ಕೆ. ಸೊಡರ್ (೨೧೮೩;* ಉ:ತ. ಮ. ಚುಟು ‘ಸುಡು’)

೮. ತು. ತುಡ್‌, ತೊಡ್‌;ತ. ತುಟೈ;ಮ ತುಡೆ, ಕ. ತೊಡೆ, ತೆ . ತುಡುಚು (೨೭೦೩;*ಉ)

೯. ತು. ನಿರೆಲು ್, ಇರೆಲು ್ ‘ನೆರಳು’: ತ. ನಿೞಲ್; ಕ. ನಿೞಲ್:ತೆ. ನೀಡ (೩೦೪೬;*ಈ/*ಇ)

೧೦. ತು. ನುರೆ್, ನೊರ್ ‘ನೋರೆ’; ತ. ನುರೈ;ಮ. ನುರ; ಕ. ನೊರೆ, ತೆ. ನುರೂಗು (೩೦೭೪;*ಉ)

೧೧. ತು. ನಿರೆ್, ನೆರೆ್,’ನೆರೆಕರೆ’; ತ. ನೆರುಕ್ಕಮ್‌’ಪಕ್ಕ’ ನೇರ್; ಕ. ‘ನೆರೆಕರೆ’ (೩೧೨೪;ಏ/ಎ)

೧೨. ತು. ಪುಗೆ್, ಪೊಗೆ್ ‘ಹೊಗೆ’; ತ. ಪುಕೈ: ಮ. ಪುಕ; ಕ. ಪೊಗೆ; ಗೊ. ಪೋಯಾ (೩೪೮೩; ಓ/ಓ)

೧೩. ತು. ಪುದರು ್ ‘ಹೆಸರು’; ತ. ಮ . ಪೆಯರ್, ಪೇರ್; ಕ. ಪೆಸರ್; ತೆ. ಪೇರು; ಪ. ಗ. ಪಿದಿರ್: ಕುರ್. ಮಲ್ತೊ. ಪಿಂಜ್‌’ಹೆಸರಿಸು’, ಬ್ರಾಹುಈ  ಪಿನ್‌’ಹೆಸರು’ (೩೬೧೨;*ಇ)

೧೪.ತು. ಪುದೆ್ ‘ಹೊರೆ’; ತ. ಪೊಱೈ, ಕ. ಕೊಡವ. ಪೊಱೆ (೩೭೨೯; *ಒ:ತ. ಮ. ಪೊಱು ‘ಹೊರು’)

೧೫. ತು. ಮುನೆ್ ಮೊನೆ್ ‘ಮೊನೆ’; ತ. ಮುನೈ; ಮುನ; ಕ. ಮೊನೆ (೫೧೧೯) (ಎ);* ಉ; ತ. ಮ. ಕ. ತೆ. ಮುನ್  (ಎದುರು)

೧೬. ತು. ಪಿರೆಲು ್ ಬಿರೆಲು ್, ಬೆರೆಲು ್ ‘ಬೆರಳೂ’; ತ. ಮ. ವಿರಲ್‌; ಕ. ಬೆರಲ್; ತೆ. ವಿರೇಲು; ಕೊಲಾ, ನಾಯ್ಕಿ. ವೆನ್ದೆ (೪೪೩೬:*ಚ್‌)

೧೭. ತು. ಬಿಲೆ್ ಬೆಲೆ್ ‘ಬೆಲೆ’; ತ. ವಿಲೈ; ಮ. ವಿಲ; ಕ. ಬಿಲಿ, ಬೆಲೆ; ತೆ. ವೆಲ (೪೪೪೮;* ಇ;ತ ಮ. ವಿಲ್‌’ ಮಾರಾಟಕ್ಕಿರುವುದು’)

೧೮. ತು. ಕೊಜಪು ‘ಮೊಸರು’, ‘ಕೊಜೆಪು’ ಹಾಲನ್ನು ಮೊಸರನ್ನಾಗಿ ಮಾಡುವ ಮಜ್ಜಿಗೆ; ಗೊ. ಕೊರೋಪ್‌(ಎಸ್‌೩೨೨;*ಒ)

ಮೇಲಿನ ಉದಾಹರಣೆಗಳು ಸ್ಪಷ್ಟವಾಗಿ ತೋರ್ಪಡಿಸುವುದೇನೆಂದರೆ ಕನ್ನಡ ಹಾಗೂ ತೆಲುಗಿನಂತಲ್ಲದೆ, ತುಳುವಿನಲ್ಲಿ ತದ್ಧಿತ *-ಅ ದ ಮೊದಲು ಎ ಮತ್ತು ಒ ಗಳು ಬರುವುದನ್ನು ಕಾಣಬಹುದು. ಮಧ್ಯ ಸ್ವರಗಳನ್ನು ಒಳಗೊಂಡು ಭಾಷಾ ವೈವಿಧ್ಯ (dialectical variants)  ಮತ್ತು ಇನ್ನು  ಕೆಲವು ಸಂದರ್ಭಗಳಲ್ಲಿ ಮಧ್ಯ ಸ್ವರಗಳನ್ನೇ ಒಳಗೊಂಡಿರುವ ರೂಪಗಳು ಕನ್ನಡದ ಪ್ರಭಾವದಿಂದ ಆಗಿರುವಂತಹದು ಎಂಬುದನ್ನು ವಿವರಸಲು ಸಾಧ್ಯವಿದೆ. ಹಾಗೆಯೇ ಉನ್ನತ ಸ್ವರಗಳನ್ನು ಹೊಂದಿರುವ ತುಳು  ಮತ್ತು ಪ್ರಾಚೀನ ತಮಿಳು-ಮಲಯಾಳಂ ಇವುಗಳ ನಡುವಿನ ಸಮರೂಪತೆಗೆ ಸಮಾನಾಂತರ ಬೆಳವಣಿಗೆ ಕಾರಣ ಎನ್ನಬಹುದು. ಯಾಕೆಂದರೆ ತುಳುವನ್ನು ತಮಿಳು ಮಲಯಾಳಂಗಳ ಜೊತೆಗೆ ಗುರುತಿಸಲು ಅನುಕೂಲವಾಗುವ ಬೇರೆ ಯಾವುದೇ ಸಮಾನ ಭಾಷಿಕಾಂಶವಿಲ್ಲ.

೪. ತುಳು ಮತ್ತು ಕನ್ನಡ ಪದಗಳ ಪದಾಂತ್ಯದಲ್ಲಿ ಮೂಲದ ಮ್‌ವನ್ನು ಲೋಪಗೊಳಿಸುವಲ್ಲಿ ಸಮಾನವಾದ ಭಾಷಿಕಾಂಶವನ್ನು ಹೊಂದಿವೆ.

ತು. ಕುಳ ‘ಕೆರೆ’; ಕ. ಕೊಳ್‌; ತ. ಮ. ಕುಳಮ್‌(೧೫೧೮)

ತು. ಚಟ್ಟ ‘ಬಿದಿರನ್ನು ಹಗ್ಗದಿಂದ ಕಟ್ಟಿ ಹೆಣ ಮಲಗಿಸಲು ಮಾಡುವ ವ್ಯವಸ್ಥೆ; ಕ. ಚಟ್ಟ; ತ. ಮ. ಚಟ್ಟಮ್‌(೧೮೯೯)

ತು. ಪಳ್ಳ ‘ಹಳ್ಳ; ಕ. ಪೆಣ; ತ. ಮ. ಪುಣಮ್‌(೩೪೨೦)

ತು. ಮರ ‘ಮರ’; ಕ. ಮರ; ತ. ಮ. ಮರಮ್‌(೩೮೫೬)

೫. ತುಳು ಮತ್ತು ಕನ್ನಡ ಹಾಗೂ ಕೊಡಗು ಭಾಷೆಗಳಲ್ಲಿ ಪದಾಧಿಯಲ್ಲಿ ಮೂಲದ್ರಾವಿಡದ *ವ್‌>ಬ್‌- ಆಗಿ ಬೆಳವಣಿಗೆಯನ್ನು  ಪಡೆದುಕೊಂಡಿರುವುದು ಧ್ವನಿಮಾದಲ್ಲಾಗಿರುವ ಸಾಮಾನ್ಯ ಬದಲಾವಣೆ.

ತು. ಬಡಕಾಯಿ ‘ಉತ್ತರ’; ಕ. ಬಡ(ಗ); ಕೊಡವ. ಬಡಕು ್ ; ತ. ಮ. ವಟ (ಕ್ಕು) (೪೨೬೭)

ತು. ಬಯಿಲು ್ ‘ಅಕ್ಕಿಯ ಗದ್ದೆ’; ಕ. ಬಯಲು ‘ಗದ್ದೆ’; ಕೊಡವ. ಬೇಲು ್ ‘ಭತ್ತದ ಗದ್ದೆ’; ತ. ಮ. ವಯಲ್‌(೪೨೯೮)

ತು. ಬುಳೆ್ ‘ಬೆಳೆ’; ಕ. ಬೆಳೆ; ಕ. ಬೆಳೆ; ಕೊಡವ. ಬೊಳೆ್; ತ. ವಿಳೈ; ಮ. ವಿಳ (೪೪೬೧)

ತು. ಬೆರಿ ‘ಬೆನ್ನು’; ಕ. ಬೆನ್‌(ನು); ಕೊಡ. ಬೆನ್ನು ್; ತ. ವೆರಿನ್‌, ವೆನ್ (೬೫೧೮)

ಮೇಲಿನ ಎರಡು ಲಕ್ಷಣಗಳಲ್ಲಿ ಕನ್ನಡ, ಕೊಡಗು ಮತ್ತು ತುಳು ಇವುಗಳ ನಡುವಿನ ಸಮಾನತೆಯ ಬಗ್ಗೆ ಹಾಗೂ ಈ ಕೆಳಗೆ ಪ್ರಸ್ತುತಪಡಿಸಿರುವ ಸಂಗತಿಗಳಿಗೆ ಈಗಲೇ ವಿವರಣೆಯನ್ನು ಕೊಡುವುದು ಉಚಿತವಲ್ಲ. ಯಾಕೆಂದರೆ, ಅದರಿಂದ ಪೂರ್ವಾಗ್ರಹ ಉಂಟಾಗುವ ಸಾಧ್ಯತೆ ಇದೆ.

೬. ಇತರ ಸೋದರ ಭಾಷೆಗಳೊಂದಿಗೆ ಸಮಾನಾಂತರವಾಗಿ ತುಳುವಿನ ಧ್ವನಿಮಾದಲ್ಲಿ ಕಾಣಿಸಿಕೊಳ್ಳುವ ಇತರ ಬದಲಾವಣೆಗಳು ದ್ರಾವಿಡ ಭಾಷೆಯಲ್ಲಿ ತುಳುವಿನ ಸ್ಥಾನ ವಿವೇಚನೆ ಮಾಡಿಕೊಳ್ಳುವುದಕ್ಕೆ ಅಷ್ಟೊಂದು ಪ್ರಯೋಜನಕಾರಿಯಾಗಿಲ್ಲ. ಅವುಗಳಲ್ಲಿ ಬಹಳ ಮಹತ್ತ್ವದ್ದು  ಎನಿಸಿದ್ದನ್ನು ಈ ಕೆಳಗೆ ಸೂಚಿಸಲಾಗಿದೆ.

ಅ) ಮೂಲದ್ರಾವಿಡ *ೞ > ತು. ಳ (ಬ್ರಾಹ್ಮಣ)/ (ಸಾಮಾನ್ಯ) ರ್/ಲ್‌. ೫ ಮೂಲದ್ರಾವಿಡದ * ೞ>ಳ ಬದಲಾವಣೆ ತಮಿಳಿನ ಆಡುಮಾತಿನಲ್ಲಿ, ಹೊಸಗನ್ನಡ ಮತ್ತು ಕೊಡವ ಭಾಷೆಗಳಲ್ಲೂ ಆಗಿದೆ. ಮೂಲದ್ರಾವಿಡದ *ೞ>ರ್ ಬದಲಾವಣೆ ವ್ಯಂಜನಪೂರ್ವದ ಸ್ಥಾನದಲ್ಲಿ ಕನ್ನಡದಲ್ಲಿ ಮೊದಲ ವ್ಯಂಜನದ ಬಳಿಕ ತೆಲುಗಿನಲ್ಲಿ ಹಾಗೂ ಕೊಲಾಮಿ-ನಾಯ್ಕಿ ಇವುಗಳಲ್ಲೂ ಕಂಡುಬರುತ್ತದೆ. ಇದನ್ನು ಸಮಾನಾಂತರ ಬೆಳಬಣಿಗೆ ಎಂದು ಹೇಳಬಹುದಾಗಿದೆ.

ಆ) ಮೂಲದ್ರಾವಿಡದ *ನ್‌,  *ಱ್‌> ತು. ನ್ಜ್‌, ಜ್‌ ಹಾಗೂ ನ್ದ್‌, ದ್‌ ಆಗಿ ಕೆಲವು ಸಂದರ್ಭಗಳಲ್ಲಿ ಬದಲಾಗುತ್ತದೆ. (ಶಂಕರ ಭಟ್ಟ ೧೯೬೬ ೫).  ಹೆಚ್ಚಿನ ಸಂದರ್ಭಗಳಲ್ಲಿ ತುಳುವಿನಲ್ಲಿ ಪೂರ್ವ ಸ್ವರ ಇ ಅನುಸರಿಸಿ ಬಂದಾಗ ಮೂಲದ ವತ್ಸ್ಯ ಧ್ವನಿಮಾ ತಾಲವ್ಯಗಳಾಗಿ ಪರಿವರ್ತನೆ ಪಡೆಯುವುದು ಗಮನಾರ್ಹವಾದ ಸಂಗತಿಯಾಗಿದೆ. ಕುಇ-ಕುವಿ, ಪೆಂಗೊ ಮತ್ತು ಮಂಡ ಭಾಷೆಗಳಲ್ಲಿ ಮೂಲದ ವತ್ಸ್ಯ ತಾಲವ್ಯ ಧ್ವನಿಗಳಾಗಿ ಪರಿವರ್ತನೆ ಹೊಂದುವುದು ಒಂದು ರೂಢಿಯಾಗಿದೆ. ಇದು ಕೂಡಾ ಸಮಾನಾಂತರ ಬೆಳವಣಿಗೆಯ ಸಂಗತಿಯಾಗಿದೆ.

ಇ) ಮೂಲದ್ರಾವಿಡದ ಲ್‌> ತು. ರ್ ಆಗಿ ಪರಿವರ್ತನೆಯನ್ನು ಪಡೆಯುತ್ತದೆ. ಬಹಳಷ್ಟು ಪದಗಳಲ್ಲಿ (ಸುಮಾರು ೧೨) ಈ ಬದಲಾವಣೆ ಕಂಡುಬರುತ್ತದೆ. (ತರೆ ತಲೆ < * ತಲೈ ೨೫೨೯; ಕಾರು ‌<*) ಕಾಲ್‌೧೨೩೮). ಆದರೆ ಇದಕ್ಕೆ ಪ್ರತಿಯಾಗಿ ಈ ರೀತಿ ಧ್ವನಿ ಪರಿವರ್ತನೆಯಾಗದಿರುವ ಉದಾಹರಣೆಗಳೂ ದೊರೆಯುತ್ತವೆ. ಕಣ್ಣಿಗೆ ಹೊಡೆದು ಕಾಣುವ ಈ ಬದಲಾವಣೆಯ ನಿಯಮಗಳನ್ನು ತಿಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಬದಲಾವಣೆ ಇತರ ಯಾವುದೇ ಭಾಷೆಗಳಲ್ಲಿ ಕಂಡುಬರುವುದಿಲ್ಲ.

ಈ) ಸುಮಾರು ಐದು ಸಂದರ್ಭದಗಳಲ್ಲಿ ಮೂಲದ್ರಾವಿಡದ -ವ್‌> ತು. – ಬ್‌ (ಪದ ಮಧ್ಯದ ಸ್ಥಾನದಲ್ಲಿ) ಆಗಿ ಪರಿವರ್ತನೆಯನ್ನು ಪಡೆದುಕೊಳ್ಳುತ್ತದೆ. ಉದಾ: ಕೆಬಿ ‘ಕಿವಿ’ <* ಕೆವಿ ೧೬೪೫ ಬಿ; ಅಬೆಯು ‘ಹೊಟ್ಟು ತೆಗೆಯುವುದಕ್ಕಾಗಿ ಅಕ್ಕಿಯನ್ನು ಕುಟ್ಟುವುದು’ <* ಅವಯ್‌೧೯೭೬; ಉಬರು ್‌’ ಉಪ್ಪುಪ್ಪಾದ’ <* ಉವರ್ ೨೨೦೧

(ಆ) ಕನ್ನಡ ಮತ್ತು ಕೊಡವವನ್ನು ಒಳಗೊಂಡಂತೆ ಇತರ ಯಾವುದೇ ಭಾಷೆಗಳಲ್ಲಿ ಈ ಪರಿವರ್ತನೆ ಕಂಡುಬರುವುದಿಲ್ಲ.

ಎ) ಮೂಲದ್ರಾವಿಡದ *ಳ್‌ ಬ್ರಾಹ್ಮಣ ತುಳುವಲ್ಲಿ ಹಾಗೆಯೇ ಉಳಿದುಕೊಂಡಿದೆ. ಆದರೆ ಇದು ಸಾಮಾನ್ಯ ತುಳುವಿನಲ್ಲಿ ವತ್ಸ್ಯದ ಜೊತೆಗೆ ಅಂತರ್ಗತವಾಗಿದೆ. ಮಧ್ಯ ದ್ರಾವಿಡದ ಹೆಚ್ಚಿನ ಎಲ್ಲ ಭಾಷೆಗಳಲ್ಲಿ (ಕೊಲಾಮಿಯ ಉಪಭಾಷೆಯಾಗಿರುವ ನಾಯ್ಕೀ ಭಾಷೆಯನ್ನು ಹೊರತುಪಡಿಸಿ) ಮತ್ತು ಉತ್ತರ ದ್ರಾವಿಡ ಭಾಷೆಗಳಾದ ಕುರುಖ್‌, ಮಾಲ್ತೊ ಮತ್ತು ಬ್ರಾಹುಇ ಇವುಗಳಲ್ಲಿ ಈ ಬೆಳವಣಿಗೆ ಕಂಡುಬರುತ್ತದೆ. ಆದರೆ ತುಳು ಮತ್ತು ಇತರ ಭಾಷೆಗಳ ನಡುವಿನ ನಿಕಟ ಸಂಬಂಧವನ್ನು ಪರಿಭಾವಿಸುವುದು ತುಂಬಾ ಕಷ್ಟ. ಇದೊಂದು ಉಪಭಾಷಿಕ ಲಕ್ಷಣವಾಗಿರುವುದಿಂದ ಇತ್ತೀಚಿನ ಬೆಳವಣಿಗೆಯಾಗಿರಬಹುದೆಂದು ಹೇಳಬಹುದಷ್ಟೇ.

ಏ) ಮೂಲದ್ರಾವಿಡದ *ಇ *ಎ > ಉ ಒ ಆಗಿ ತುಳುವಿನಲ್ಲಿ ಓಷ್ಠ್ಯ ವ್ಯಂಜನದ ನಂತರ ಮತ್ತು ಮೂರ್ಧ್ಯನ್ಯ ವ್ಯಂಜನದ ಮೊದಲು ಬಂದಾಗ ಪರಿವರ್ತನೆಯನ್ನು ಪಡೆದುಕೊಳ್ಳುತ್ತವೆ. (ರಾಮಸ್ವಾಮಿ ಅಯ್ಯರ್. ಎಮಿನೋ, ‘ಕೊಡಗು ಸ್ವರಗಳು’ ೧೪)

ತು. ಪೊಣ್ಣು ‘ಹೆಣ್ಣು’: ತ. ಪೆಣ್ (ಪೊಣ್ಣು); ಮ. ಪೆಣ್‌; ಕ. ಪೆಣ್‌ಕೊಡವ. ಪೊಣ್ಣು ್‌(೩೬೦೮ (ಅ))

ತು. ಬೊಳ್ಪ ‘ಬೆಳಕು’, ಬೊಳಿ ‘ಬಿಳಿ’; ತ. ವೆಳ್‌’ಬಿಳಿ’; ಮ. ವೆಳಿ ‘ಬೆಳಕು’; ಕ. ಬೆಳ್‌(ಉ) ಬಿಳಿ; ಕೊಡವ. ಬೊಳು ್ಪು ್‌. ‘ಬಿಳಿ’ (೪೫೨೪)

ತು. ಪುಣ ‘ಹೆಣ’: ತ. ಪಿಣಮ್‌(ಪೊಣಮ್‌); ಮ. ಪಿಣಮ್‌; ಕ. ಪೆಣ (೩೪೨೦)

ತು. ಪುಲೆವು ‘ಒಡೆಯುವುದು’; ತ. ಪಿಳಿ (ಪೊಳ) ‘ಉಗುಳು’ ಮ. ಪಿಳರು; ಕ. ಪಿಳಿಗು ‘ಒಡೆಯುವುದು’ (೩೪೪೬)

ತು. ಪುಳ್ಳಿ ‘ಮೊಮ್ಮಗು’; ತ. ಪಿಳೈ (ಪುಳ್ಳಿ) ‘ಮಗ’; ಮ . ಪಿಳ್ಳ;ಕ ಪಿಳ್ಳೆ (೩೪೪೯)

ತು. ಮುಣ್‌(ಉ)ಚಿ. ಮೊಣೆಂಚಿ ‘ಮೆಣಸು’;ತ. ಮಿಳಕು (ಮೊಳಕು); ಮ. ಮಿಳುಕು; ಕ. ಮೊಣಸು (೩೯೮೬)

ತು. ಬೂರು/ಬೂಳು ‘ಬಿಳು’, ‘ಸಾಯು’: ತ. ವೀೞ್‌, ವೀೞ್‌, ವೀೞು (ಉಳು) ಬೀಳು; ಮ. ವೀೞು (ಉಳು);ಕ. ಬೀೞು; ಕೊಡವ. ಬೀಳ್‌(೪೪೫೭)

ತು. ಬೋಂಟೆ್/ಬೇಂಟೆ್ ‘ಬೇಟೆ’; ತ. ವೇಟ್ಟೈ; ಮ. ವೇಟ್ಟ; ಕ. ಬೇಟೆ, ಬೇಂಟೆ; ಕೊಡವ. ಬೋಟೆ (೪೫೪೭)

ಮೇಲೆ ಕಾಣಿಸಿದ ಉದಾಹರಣೆಗಳಿಂದ, ತುಳುವಿನಂತೆ, ತಮಿಳು ಮತ್ತು ಕೊಡವದ ಆಡುಮಾತುಗಳಲ್ಲಿ ಕೂಡಾ (ಆದರೆ ಕನ್ನಡದಲ್ಲಿ ಹೀಗಾಗಿಲ್ಲ) ಈ ಬೆಳವಣಿಗೆ ಆಗಿದೆ ಎಂಬುದು ಕಂಡುಬರುತ್ತದೆ. ಎಮಿನೋ (ಮೇಲೆ ಉದ್ಧೃತ, ಮತ್ತು ೧೯೬೭ ಪು. ೧.೯.೧) ಸೂಚಿಸಿರುವಂತೆ, ಕೊಡಗಿನ ಹಿಂದೂ ದೇವಾಲಯಗಳಲ್ಲಿ ಬಹಳ ಹಿಂದಿನಿಂದಲೂ ತುಳುವ ಬ್ರಾಹ್ಮಣರು ಅರ್ಚಕರಾಗಿದ್ದುದರಿಂದ ಒಗ್ಗೂಡುವಿಕೆಯ (ಏರಿಯಲ್‌ಕನ್ವರ್ಜೆನ್ಸ್‌) ಪರಿಣಾಮವಾಗಿ ಈ ಭಾಷಿಕಾಂಶ ಕೊಡವದಿಂದ ತುಳುವಿಗೆ ಪಸರಿಸಿದೆ. (ಉದಾಹರಣೆಗೆ, ಕಾವೇರಿ ನದಿಮೂಲ ಮತ್ತು ಮಡಿಕೇರಿ ಬಗೆಗಿನ ಉಲ್ಲೇಖಗಳು) ಇತರ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ತಮಿಳು ಈ ಬೆಳವಣಿಗೆಯನ್ನು ಬಹಳ ವಿಶಿಷ್ಟವಾಗಿ ಬಿಂಬಿಸುತ್ತದೆ. (ಸಾಮಾನ್ಯವಾಗಿ ಪ್‌ಮತ್ತು ಮ್-ಗಳ ನಂತರ; ವ್‌ನಂತರ ಇಲ್ಲ). ಹೀಗಾಗಿ, ತುಳು ಮತ್ತು ಕೊಡವಕ್ಕಿಂತ ಭಿನ್ನವಾಗಿ ತಮಿಳಿನ ಆಡುಮಾತಿನಲ್ಲಿ ಈ ಬೆಳವಣಿಗೆ ಕಂಡುಬಂದಿದೆ.

೨. ಆಕೃತಿಮಾ ವಿಜ್ಞಾನ

೧. ನಾಮಪದ

೭. ಲಿಂಗ ವಿವಕ್ಷೆ : ಇತರ ದಕ್ಷಿಣ ದ್ರಾವಿಡ ಭಾಷೆಗಳ ಲಿಂಗ ವಿವಕ್ಷೆಯನ್ನು ತುಳುವೂ ಒಳಗೊಂಡಿದೆ. (ತೊದವನ್ನು ಹೊರತುಪಡಿಸಿ. ತೊದ ಎಲ್ಲ ಲಿಂಗಬೇಧವನ್ನು ಕೈಬಿಟ್ಟಿದೆ) ತುಳುವಿನಲ್ಲಿ ಕೆಳಗೆ ಸೂಚಿಸಿರುವ ವರ್ಗದ ರೀತಿಯಲ್ಲಿ ಲಿಂಗವ್ಯವಸ್ಥೆ ಇದೆ.

ಪುಲ್ಲಿಂಗ. ಏಕವಚನ. ಆಯೆ (ದೂರನಿರ್ದೇಶಕ), ಇಂಬ್ಯೆ (ಸಮೀಪನದೇಶಕ)

ಸ್ತ್ರೀಲಿಂಗ ಏಕವಚನ (ಆಲು‌, ಮೋಲು‌)

ಮಾನವ ಬಹುವಚನ (ಅಕುಲು, ಮೊಕುಲು)

ನಪುಂಸಕ ಬಹುವಚನ (ಐಕುಲು, ಉಂದೆಕುಲು)

ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಂಡಿರುವಂತೆ, ನಿರ್ದೇಶಕ ಸರ್ವನಾಮ ಮತ್ತು ಕ್ರಿಯಾಪದಗಳಲ್ಲಿ ಸ್ತ್ರೀವರ್ಗದ ಸೃಷ್ಟಿ ಈ ಗುಂಪಿನ ಭಾಷೆಗಳಲ್ಲಿ ಸಮಾನವಾದ ಹೊಸ ಬೆಳವಣಿಗೆಯಾಗಿದೆ. ಉಳಿದ ದಕ್ಷಿಣ ದ್ರಾವಿಡ ಭಾಷಾ ಗುಂಪಿನಲ್ಲಿ ತುಳುವನ್ನು ಗುರುತಿಸಿಕೊಳ್ಳುವುದಕ್ಕೆ ಈ ಸಮಾನ ಭಾಷಿಕಾಂಶವು ಸಹಾಯ ಮಾಡುತ್ತದೆ. (ಹೆಚ್ಚಿನ ವಿವರಗಳಿಗೆ, ನೋಡಿ ಪಿ.ಎಸ್. ಸುಬ್ರಹ್ಮಣ್ಯಂ, ೧೯೬೯).

೮. ಬಹುವಚನ ಪ್ರತ್ಯಯ (ಮಾನವೇತರ): ತುಳುವಿನಲ್ಲಿ (ಮಾನವೇತರ) ಬಹುವಚನ ಪ್ರತ್ಯಯ ಎರಡು ಉಪ ಆಕೃತಿಮಾಗಳನ್ನು ಹೊಂದಿದೆ: ವ್ಯಂಜನ ಸ್ವರ, (ವ್ಯ)_ ಸ್ವರ ವ್ಯಂಜನ, ಮತ್ತು (ವ್ಯ) ಸ್ವರ ವ್ಯಂಜನ ಸ್ವರ ಈ ವಿನ್ಯಾಸದ ನಾಮಪದಗಳ ಬಳಿಕ ಹಾಗೂ ಮೂಲದ ಮ್‌ವ್ಯಂಜನಾಂತ್ಯದ ಪದಗಳಿಗೆ ಕುಳು (/ಕ್ಳು) ಹಾಗೂ ಎಲ್ಲಾ ಕಡೆಗಳಲ್ಲಿ -ಳು ಸೇರಿಕೊಳ್ಳುತ್ತವೆ. (ಶಂಕರ ಭಟ್‌೧೯೬೭: ೧೮-೨; ಸುಬ್ರಹ್ಮಣ್ಯಂ ೧೯೬೯ ಬಿ, ೧೭) ಉದಾ:- ಕುಳು: ಪೂ-ಕುಳು ‘ಹೂವುಗಳು’, ಕೈ-ಕುಳು ‘ಕೈಗಳು’, ಪಿಲಿ-ಕುಳು ‘ಹುಲಿಗಳು’, ಮರ-ಕುಳು ‘ಮರಗಳು’, ಸಿಮ್ಮೊ-ಕುಳು ‘ಸಿಂಹಗಳು'(ಏ.ವ. ಸಿಮ್ಮ);-ಳು; ಕುಣ್ಣು-ಳು ‘ಕಣ್ಣುಗಳು’ (ಏ.ವ. ಕಣ್ಣು), ಬೋರಿ-ಳು ‘ಎತ್ತುಗಳು’, ಬಿರೆಲು-ಳು ‘ಬೆರಳುಗಳು’ (ಏ.ವ. ಬಿರೆಲು).

ಕೋಲಾಮಿ – ಪರ್ಜಿ ಗುಂಪಿನ ಭಾಷೆಗಳಲ್ಲಿ ಪುಲ್ಲಿಂಗೇತರ ಬಹುವಚನ ಪ್ರತ್ಯಯ ಎರಡು ಉಪ ಆಕೃತಿಮಾಗಳನ್ನು ಹೊಂದಿದ್ದು, ಅವುಗಳ ಪುನಾರಚಿತ ರೂಪ*-ಕಳ್‌ ಎಂದಾಗುತ್ತದೆ. (>ಕೊಲಾಮಿ.-ಕುಲ್‌; ನಾಯ್ಕಿ. ಕು (-ಗು;ಪ. -ಕುಲ್‌) ಮತ್ತು *-ಳ್‌ (>ಕೊಲಾಮಿ. -ಲ್‌, -ಉಲ್‌; ನಾಯ್ಕಿ. -ಲ್‌;ಪ. -ಲ್‌, -ಉಲ್‌, -ಇಲ್‌). ಇದನ್ನು ಹೊರತುಪಡಿಸಿದರೆ, ಕೊಲಾಮಿ -ಪರ್ಜಿ ಗುಂಪುಗಳಿಗೆ ತುಳು ಹತ್ತಿರವಾಗಿದೆ ಎನ್ನುವುದಕ್ಕೆ ಬೇರೆ ಯಾವುದೇ ಆಧಾರಗಳು ದೊರೆಯುವುದಿಲ್ಲ. ಮೂಲ ದ್ರಾವಿಡ ಭಾಷೆಗೆ *-ಕಳ್‌ ಮತ್ತು*-ಳ್‌ ಇವನ್ನು ಪುನಾರಚಿಸಿದಾಗ ಎಲ್ಲ ದ್ರಾವಿಡ ಭಾಷೆಗಳ ಬೆಳವಣಿಗೆಯನ್ನು ತೃಪ್ತಿಕರವಾಗಿ ವಿವರಿಸಬಹುದಾಗಿದೆ. ತುಳು ಮತ್ತು ಕೊಲಾಮಿ-ಪರ್ಜಿ ಭಾಷೆಗಳು ಸ್ವತಂತ್ರವಾಗಿ ಈ ಲಕ್ಷಣವನ್ನು ಉಳಿಸಿಕೊಂಡಿವೆ ಎನ್ನಬಹುದೇ ಹೊರತು ಆ ಭಾಷೆಗಳು ಜೊತೆಯಾಗಿಯೇ ರೂಪಿಸಿಕೊಂಡ ಹೊಸತನಗಳಲ್ಲ (ಹೆಚ್ಚಿನ ಚರ್ಚೆಗೆ, ನೋಡಿ, ಸುಬ್ರಹ್ಮಣ್ಯಂ, ಉಲ್ಲೇಖ ೩೨). ಹೀಗಾಗಿ ತುಳು ಇತರ ದ್ರಾವಿಡ ಭಾಷೆಗಳಿಗಿಂತ ಭಿನ್ನವಾಗುತ್ತದೆ. (ತೊದವನ್ನು ಹೊರತುವಪಡಿಸಿ). ಯಾಕೆಂದರೆ, ದಕ್ಷಿಣ ದ್ರಾವಿಡ ಭಾಷೆಗಳು -ಳ್‌ಬದಲಿಗೆ -ಕಳ್‌ಎನ್ನುವ ಉಪ ಆಕೃತಿಮಾವನ್ನು ಸಾಮಾನ್ಯೀಕರಣಗೊಳಿಸಿವೆ. ಹೀಗಿದ್ದರೂ ಸಾಮಾನ್ಯ ತುಳುವಿನ ಕೆಲವು ಪ್ರಭೇದಗಳಲ್ಲಿ ಮಾನವೇತರ ನಾಮಪದಗಳಿಗೆ ಸಂಬಂಧಿಸಿದಂತೆ, ಬಹುವಚನ ಸೂಚಕ ಪ್ರತ್ಯಯವು ಕಡ್ಡಾಯವಲ್ಲ. ಇದು ಮೂಲ ದ್ರಾವಿಡದಲ್ಲೂ ಕಡ್ಡಾಯವಲ್ಲ ಎನ್ನುವುದಕ್ಕೆ ದಕ್ಷಿಣ ಮತ್ತು ಉತ್ತರ ದ್ರಾವಿಡ ಭಾಷೆಗಳಲ್ಲಿ ಆಧಾರವಿದೆ. ದಕ್ಷಿಣ ಮತ್ತು ಉತ್ತರ ದ್ರಾವಿಡ ಭಾಷೆಗಳ ಜೊತೆಗೆ ತುಳು ಮೂಲದ್ರಾವಿಡದ ಈ ಲಕ್ಷಣವನ್ನು ಉಳಿಸಿಕೊಂಡಿದೆ.

೯. ವಿಭಕ್ತಿ ಪ್ರತ್ಯಯಗಳು

ತುಳುವಿನಲ್ಲಿ ವಿಭಕ್ತಿ ಪ್ರತ್ಯಯಗಳು ಈ ಕೆಳಗಿನಂತಿವೆ. (ಪ್ರಥಮಾ ವಿಭಕ್ತಿ ಪ್ರತ್ಯಯವನ್ನು ಹೊರತುಪಡಿಸಿ) (ನೋಡಿ, ಶಂಕರ್ ಭಟ್‌, ೧೯೬೭:೮೨-೯)

(ಅ). ದ್ವೀತಿಯಾ : – ನು ್

(ಆ). ‌ತೃತೀಯಾ : – ಡ (>> – ಟ)

(ಇ). ‌ಚತುರ್ಥೀ : – ಗು ್ (>> – ಕು ್‌)

(ಈ). ‌ಪಂಚಮೀ : – ಟ್ಟು‌್ (ಸಾ.ತು.) ಡ್ದು‌್.

(ಉ). ಷಷ್ಟೀ : -ದ (>>-ತ) >>-ನ />>-ದ್‌

(ಊ). ಸಪ್ತಮೀ : -ಡು‌್ (>>-ಟು ್‌)>> – ಒಲು

ಆವರಣದೊಳಗೆ ಕಾಣಿಸಿರುವ ಪಾಠಾಂತರಗಳು ಏಕವರ್ಣ; (ವ್ಯ) (ವ್ಯ) ಸ್ವವ್ಯಂಸ್ವ ಹಾಗೂ ಮೂಲದ್ರಾವಿಡದ ಮ್‌ದಿಂದ ಅಂತ್ಯಗೊಳ್ಳುವ ಪದಗಳಲ್ಲಿ ಬರುತ್ತವೆ. ಏಕ ವರ್ಣದ ವ್ಯಂಜನಾಂತ್ಯ ಪದಗಳಿಗೆ ಪಂಚಮೀ ವಿಭಕ್ತಿ ಪ್ರತ್ಯಯ ತ್ತು‌್ ಗೆ ಪಾಠಾಂತರವಾಗಿ-ತು ್‌ಬರುತ್ತದೆ. ಉದಾ. ಕೈ – ತು ್ (ಕೈಯಿಂದ). ಪದಾಂತ್ಯದಲ್ಲಿ *ಮ್‌ವನ್ನು ಹೊಂದಿರುವ ಮೂಲದ್ರಾವಿಡ ಪದಗಳಲ್ಲಿ ಚುತುರ್ಥೀ, ಷಷ್ಠೀ, ಮತ್ತು ಸಪ್ತಮಿ ವಿಭಕ್ತಿ ಪ್ರತ್ಯಯಗಳು ಸೇರಿಕೊಳ್ಳುವ ಸಂದರ್ಭಗಳನ್ನು ಹೊರತುಪಡಿಸಿ (ರಾಮಚಂದ್ರರಾವ್‌ ಪ್ರಕಾರ ಪಂಚಮೀಯನ್ನು ಹೊರತುಪಡಿಸಿ ೧೯೬೬, ೪.೧) ಉಳಿದ ಸಂದರ್ಭಗಳಲ್ಲಿ *ಮ್‌ ಲೋಪವಾಗುತ್ತದೆ.

ಮ್‌ ಗಿಂತ ಮೊದಲು ಬರುವ ‘ಅ’ ಸ್ವರವು ಚತುರ್ಥೀ ಹಾಗೂ ಸಪ್ತಮೀ (ಮತ್ತು ಪಂಚಮೀ) ವಿಭಕ್ತಿ ಪ್ರತ್ಯಯಗಳು ಸೇರುವ ಮೊದಲು ಒ ಆಗಿ ಬದಲಾಗುತ್ತದೆ. ಇದರ ಪರಿಣಾಮವಾಗಿ ಈ ಪ್ರತ್ಯಗಳಲ್ಲಿರುವ ಅಂತ್ಯದ ಉ‌್, ಉ ಆಗಿ ಬದಲಾಗುತ್ತದೆ.

ಸಾಮಾನ್ಯ ತುಳುವಿನಲ್ಲಿ ಪಂಚಮೀ ಮತ್ತು ಸಪ್ತಮೀ ಪ್ರತ್ಯಯಗಳ ಮೊದಲು ಅನುನಾಸಿಕ ಲೋಪವಾಗುತ್ತದೆ. ಸಪ್ತಮೀ ಮತ್ತು ಪಂಚಮೀಯಲ್ಲಿ ಉಪಆಕೃತಿಮಾ ‘ಡು’ ಬರುತ್ತದೆ. ಉದಾ. ಕಂಡೊ – ಡು ‘ಗದ್ದೆಯಲ್ಲಿ’, ಕಂಡೊಡ್ದು ‘ಗದ್ದೆಯಿಂದ’. ಎಲ್ಲ ಮಾನವ ಸೂಚಕ ಪದಗಳಿಗೆ ಷಷ್ಠೀ ವಿಭಕ್ತಿ ಪ್ರತ್ಯಯವಾಗಿ ಉಪ ಆಕೃತಿಮಾ-ನ ಬರುತ್ತದೆ. ಹಾಗೆಯೇ, ‘ಎ’ ಕಾರಾಂತ ಪದಗಳು ಮತ್ತು ಬಹುವಚನ ಸೂಚಕ ಪ್ರತ್ಯಯಗಳ ಬಳಿಕ ‘ನ’ ಬರುತ್ತದೆ. ಉದಾ. ಪುರುಷೆ-ನ /ಪುರುಷ್‌- ಅ ‘ಗಂಡನ’, ಮಗಲ್‌-ನ ‘ಮಗಳ’, ಮರ್ಲೆ – ರ್-ನ ‘ಹುಚ್ಚರ’, ಕರಡಿಲ್‌- ನ ‘ಕರಡಿಗಳ’, ಪಿಲಿ-ಕ್ಲ್‌-ಎನ ‘ಹುಲಿಗಳ’. ಮೇಲಿನ ಉದಾಹರಣೆಗಳ ಪ್ರಕಾರ ಎ ಅಥವಾ ಉ‌ಕಾರಾಂತ ಪದಗಳಲ್ಲಿ – ನ ಬದಲು -ಅ ಕೂಡಾ ಬರುತ್ತದೆ. ಬಹುವಚನ ಪ್ರತ್ಯಯ ವ್ಯಂಜನ ಬಂದಾಗ – ಎನ ಎಂಬ ಉಪಆಕೃತಿಮಾ ಅಡೆ, ಇಲ್ಲ್‌’ಮನೆ’- ಇದಕ್ಕೆ ಚತುರ್ಥಿ ಪ್ರತ್ಯಯ ಉಪಆಕೃತಿಮಾ ಅಡೆ, ಇಲ್ಲ್‌ಗ್‌/ಇಲ್ಲ್‌-ಅಡೆ; ಷಷ್ಠೀಯಲ್ಲಿ ಉಪಆಕೃತಿಯಾ ಅತ್ತ್‌, ದ ಇಲ್ಲ್‌ಅತ್ತ, ಇಲ್ಲ್‌ದ; ಪಂಚಮೀ ವಿಭಕ್ತಿ ಪ್ರತ್ಯಯದ ಉಪಆಕೃತಿಮಾ ಅತ್ತ್‌, ಇಲ್ಲ್‌ಅತ್ತ್‌, ಮತ್ತು ಸಪ್ತಮಿಯಲ್ಲಿ ಒಳು, ಇಲ್ಲ್‌ ಒಳು ಉಪಆಕೃತಿಮಾಗಳಿವೆ.

ದ್ವಿತೀಯಾ ವಿಭಕ್ತಿ ಪ್ರತ್ಯಯ-ನು ್‌ಮೂಲದ್ರಾವಿಡ *-ವ್‌ನ್‌ನಿಂದ ಬಂದಿದ್ದು ಇದು  ತಮಿಳು – ಮಲಯಾಳಂ ಹೊರತುಪಡಿಸಿ ಎಲ್ಲ ಭಾಷೆಗಳಲ್ಲಿ ಇದೆ. ತಮಿಳು-ಮಲಯಾಳ ಭಾಷೆಗಳಲ್ಲಿ *-ಅಯ್‌ಇದೆ. ಸಪ್ತಮೀ ಪ್ರತ್ಯಯ -ಡ (>>-ಟ) ತ. ಮ. -ಒಟ್ಟು/ಓಟು, ಕೊತ. -ಓರ್, ಕೊಲಮಿ – ಅಡ್‌(>> – ನಡ್‌) ಮತ್ತು ಪರ್ಜಿ – ಒಡ್‌(>> – ನೊಡ್‌); ಇವುಗಳಿಗೆ ಸಂಬಂಧಿಸಿರುವುದು. ಇವುಗಳೆಲ್ಲವನ್ನು ಮೂಲ ದ್ರವಿಡದ – ಓಟ್‌/ಒಟ್‌ರೂಪಗಳಿಗೆ ಪುನರ್ ರಚಿಸಿಕೊಳ್ಳಬಹುದು. ಚತುರ್ಥೀ ವಿಭಕ್ತಿ ಪ್ರತ್ಯಯ-ಗು ್ (>>-ಕು ್‌) ಇದು ಮೂಲದ್ರಾವಿಡದ *-ಕ್ಕ್‌ಇದರ ಪ್ರತಿರೂಪ. ಇದು ಎಲ್ಲ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ತುಳುವಿನ ಪಂಚಮೀ ವಿಭಕ್ತಿ ಪ್ರತ್ಯಯ – ಡ್ದು‌ ್ ಸಪ್ತಮೀ ಪ್ರತ್ಯಯ -ಡು‌್ ಮತ್ತು ಉಪ್ಪು ‘ಇರು’ (ತ. ಇಲ್ಲ (ಸಪ್ತಮೀ) ಎಂಬುದರ ಭೂತಕಾಲ ಸೂಚಕ ಕ್ರಿಯಾವಿಶೇಷಣ ಇತ್ತ್‌ದ್‌+ಇರು-ನ್ಟು. ‘ಇರುವುದರಿಂದ’ ಇವೆರಡರ ಸಂಯೋಜನೆಯಂತೆ ತೋರುತ್ತದೆ. ಷಷ್ಠೀ ವಿಭಕ್ತಿ ಪ್ರತ್ಯಯ ಮೂಲತಃ ಅ ಆಗಿದ್ದು, ಇದು ಪ್ರಾಚೀನ ತ. -ಅಟು/ -ಅ, ಕ. -ಅ, ಗೊ. -ಆ ಮತ್ತು ಪ. -ತ (/-ತೊ/ತ್‌) (ಕೊಲ್‌.-ಎ) ಆಗಿದೆ. ತುಳುವಿನಲ್ಲಿರುವ ಷಷ್ಠಿಯ ಮೊದಲು ಬರುವ ದ್‌/ -ತ್‌ಗಳನ್ನು ಮ್‌ನಿಂದ ಅಂತ್ಯವಾಗುವ ದಕ್ಷಿಣ ದ್ರಾವಿಡದ ನಾಮಪದಗಳ ಪ್ರತ್ಯಯಗಳಿಗೆ ಮತ್ತು ಗೊಂಡಿಯ -ತ್‌/-ದ್‌ಗಳಿಗೆ (ಸುಬ್ರಹ್ಮಣ್ಯ ೧೯೬೮/೩.೭) ಮತ್ತು ಪರ್ಜಿಯ ಷಷ್ಠಿಯಲ್ಲಿ ಬರುವ ತ್‌ಗೆ ಹೋಲಿಸಬಹುದು. ಇದರಿಂದ ತಿಳಿದು ಬರುವುದೇನೆಂದರೆ, ತುಳು, ಗೊಂಡಿ ಮತ್ತು ಪರ್ಜಿ ಭಾಷೆಗಳಲ್ಲಿ ಮ್‌ದಿಂದ ಅಂತ್ಯಗೊಳ್ಳುವ ನಾಮಪದಗಳಿಗೆ ಮಾತ್ರ ಸೀಮಿತವಾಗಿದೆ. ಪುಲ್ಲಿಂಗ ಸೂಚಕ ನಾಮಪದಗಳಲ್ಲಿ ‘ಅ’ದ ಮೊದಲು ಬರುವ ‘ನ್‌’, ಮೂಲದಲ್ಲಿ ಏಕವಚನ ಪುಲ್ಲಿಂಗ ಸೂಚಕ ಪ್ರತ್ಯಯ ‘ಅನ್’ ನಿಂದ ಬಂದುದು ಮತ್ತು ಉಳಿದ ವರ್ಗಗಳಲ್ಲಿ ಅದು ‘ಇನ್‌’ ಮೂಲದಿಂದ ಬಂದುದಾಗಿದೆ. ಸಪ್ತಮೀ ಪ್ರತ್ಯಯ ಡು‌(>>-ಟು‌) ಮೂಲತಃ *ಇಟೈ ‘ಜಾಗ’ (>ತು. ಇಡೆ‌್; ೩೬೮). ತೊಲ್ಕಾಪ್ಪಿಯಮ್‌ನಲ್ಲಿ (ಚೊಲ್ಲತಿಕಾರಮ್‌, ಸೂತ್ರ ೮೨) ಈ ಎರಡೂ ಪದಗಳು ಸಪ್ತಮೀ ವಿಭಕ್ತಿ ಸೂಚಕವಾಗಿ ಉಲ್ಲೇಖಿತಗೊಂಡಿವೆ( ಇತರ ಪದಗಳೊಂದಿಗೆ). ಇಲ್ಲ್‌ಒಳು, ತೆ. – ಲೋ ಇವೆಲ್ಲವೂ ಸಪ್ತಮೀ ವಿಭಕ್ತಿಯನ್ನು ಸೂಚಿಸುತ್ತವೆ ಮತ್ತು ಅಂತಿಮವಾಗಿ ಇದು * ಉಳ್‌’ಒಳಗೆ’ ಇದರಿಂದ ಬಂದುದಾಗಿದೆ. (೬೦೦)

೧೦. ಸರ್ವನಾಮ

ದಕ್ಷಿಣ ಮತ್ತು ಉತ್ತರ ದ್ರಾವಿಡ ಭಾಷೆಗಳಲ್ಲಿ ಆಗಿರುವಂತೆ, ತುಳುವಿನ ಉತ್ತಮ ಪುರುಷ ಏಕವಚನದ ಪ್ರಥಮ ವಿಭಕ್ತಿಯೇತರ ರೂಪಗಳು ಮತ್ತು ವ್ಯಾವರ್ತಕ ಬಹುವಚನ ಸರ್ವನಾಮಗಳಾದ ಎನ್ – (ಅ) ಮತ್ತು ಎಂಕುಲು ಇವುಗಳು ಮೂಲದ್ರಾವಿಡದ *ಯ ವು ಎ- ಆಗಿ ತುಳುವಿನಲ್ಲಿ ಪರಿವರ್ತನೆಗೊಂಡಿರುವ ಬೆಳವಣಿಗೆಯನ್ನು ತೋರಿಸುತ್ತವೆ. ಮಧ್ಯ ದ್ರಾವಿಡ ಭಾಷಾವರ್ಗದ ಎಲ್ಲಾ ಭಾಷೆಗಳಲ್ಲಿ ಮೂಲದ್ರಾವಿಡದ *ಯ ವು ಎ-ಆಗಿ ತುಳುವಿನಲ್ಲಿ ಪರಿವರ್ತನೆಗೊಂಡಿರುವ ಬೆಳವಣಿಗೆಯನ್ನು ತೊರಿಸುತ್ತವೆ. ಮಧ್ಯದ್ರಾವಿಡದ ಭಾಷಾವರ್ಗದ ಎಲ್ಲಾ ಭಾಷೆಗಳಲ್ಲಿ ಮೂಲದ್ರಾವಿಡದ ಯ ‘ಅ’ ಕಾರವಾಗಿ ಬದಲಾಗುತ್ತವೆ. ಆದ್ದರಿಂದ ತುಳು ದಕ್ಷಿಣ ದ್ರಾವಿಡ (ಮತ್ತು ಉತ್ತರ ದ್ರಾವಿಡ)ಕ್ಕೆ ಹತ್ತಿರವಾಗಿದೆ. ವ್ಯಾವರ್ತಕ ಬಹುವಚನ ಸರ್ವನಾಮದ ಪ್ರಥಮ ವಿಭಕ್ತಿ ರೂಪ ಮೂಲತಃ ಪ್ರಥಮ ವಿಭಕ್ತಿಯೇತರ ರೂಪಗಳಿಂದ ಬಂದುದು ಎಂಬುದನ್ನು ಗಮನಿಸಬೇಕಾಗುತ್ತದೆ. ತುಳು. ಎಂಕುಲು ‘ನಾವು’ (ಅಭಿವ್ಯಾಪಕ) ಮತ್ತು ನಿಕುಲು ‘ನೀವು’ (ವ್ಯಾವರ್ತಕ), ಅಕುಲು ‘ಅವರು’ (ದೂರ ನಿರ್ದೇಶನ) ಮೊಕುಲು ‘ಇವರು’ (ಸಮಿಪ ನಿರ್ದೇಶಕ), ಅಯಿಕುಲು ‘ಅವು’ (ನಪುಂಸಕ) ಮತ್ತು ಉಂದೆಕುಲು ‘ಇವು’ (ನಪುಂಸಕ), ಇವೆಲ್ಲವೂ ಬಹುವಚನ ನಾಮಪದಗಳಿಗೆ ಬಹುವಚನ ಸೂಚಕ – ಕುಲು ಹೆಚ್ಚುವರಿ ಸೇರ್ಪಡೆಯಾಗಿರುವುದನ್ನು ತೊರಿಸಿಕೊಡುತ್ತದೆ. ಈ ಬೆಳವಣಿಗೆಯನ್ನು ತಮಿಳು, ಮಲಯಾಳಂ , ತೆಲುಗು, ಗೊಂಡಿ ಭಾಷೆಗಳಲ್ಲಿ ಕಾಣಬಹುದು. ಇದನ್ನು ಒಗ್ಗೂಡುವಿಕೆ (ಏರಿಯಲ್‌ಕನ್ವರ್ಜೆನ್ಸ) ಎಂಬುದಾಗಿ ಪಡಿಗಣಿಸಬಹುದಾಗಿದೆ.

ತು. ಈ (ನಿನ್‌ಅ) ‘ನೀನು’ (ಏ.ವ.) (<ಮೂಲದ್ರಾವಿಡ *ನೀನ್‌), ಮತ್ತು ಈರು ್ ‘ನೀವು’ (ಬಹುವಚನ) (<ಮೂಲದ್ರಾವಿಡ *ನೀರ್) ಇವು ಪದಾದಿಯಲ್ಲಿರುವ ನ್‌ಲೋಪ ಆಗಿರುವುದರನ್ನು ತೋರಿಸುತ್ತದೆ. (ಏಕವಚನದಲ್ಲಿ ಪದಾಂತ್ಯದ ನ್‌ಕೂಡಾ ಲೋಪವಾಗಿದೆ). ಮಧ್ಯ ದ್ರಾವಿಡ ಭಾಷಾ ವರ್ಗದಲ್ಲೂ ಇದರ ಸಂವಾದಿ ರೂಪಗಳಲ್ಲಿ ಕೂಡಾ ಪದಾದಿಯ ‘ನ್‌’ ಕಾರ ಲೋಪವಾಗುವುದನ್ನು ಕಾಣಬಹುದು. (ನೋಡಿ ಸುಬ್ರಹ್ಮಣ್ಯ ೧೯೬೯ ಎ, ೪). ತುಳುವಿನ ಮಧ್ಯಮ ಪುರುಷ ಏಕವಚನವು ಪ್ರಥಮ ವಿಭಕ್ತಿಯೇತರ ವಿಭಕ್ತಿಗಳ ಬಳಕಯಲ್ಲಿ ಪದಾದಿಯಲ್ಲಿ ನ್‌ರೂಪವನ್ನು ಉಳಿಸಿಕೊಂಡಿದೆ. ತುಳು ಮತ್ತು ಮಧ್ಯ ದ್ರಾವಿಡ ಭಾಷೆಗಳನ್ನು ಒಂದುಗೂಡಿಸಲು ಮೇಲೆ ಹೇಳಿದ ಸಾಮ್ಯಾತೆಯನ್ನು ಹೊರತುಪಡಿಸಿ, ಬೇರೆ ಯಾವುದೇ ಉದಾಹರಣೆಗಳು ದೊರೆಯುವುದಿಲ್ಲ. ಆದುದರಿಂದ ಆ ಸಾಮ್ಯತೆಗೆ ಕಾರಣ ತುಳು ಮತ್ತು ಮಧ್ಯ ದ್ರಾವಿಡ ಭಾಷೆಗಳು ಸಮಾನಾಂತರ ಬೆಳವಣಿಗೆಯನ್ನು ಹೊಂದಿದ ಪರಿಣಾಮವಾಗಿರಬಹುದು.

ಮಧ್ಯಮ ಪುರುಷ ಏಕವಚನದ ಪ್ರಥಮ ವಿಭಕ್ತಿಯಲ್ಲಿ ಪದಾಂತ್ಯದಲ್ಲಿ ‘ನ್‌’ ಕಾರ ತುಳುವಿನ ಜೊತೆಗೆ ತಮಿಳು, ಮಲಯಾಳಂ, ಕೊತ, ತೊದ, ಕೊಡಗು, ತೆಲುಗು ಭಾಷೆಗಳಲ್ಲೂ ಲೋಪ ಆಗಿದೆ. ಈ ಎಲ್ಲ ಭಾಷೆ ಪರಸ್ಪರ ನಿಕಟವಾದ ಭಾಷೆಗಳಲ್ಲ. ಹಾಗಾಗಿ, ಇದನ್ನು ಒಗ್ಗೂಡುವಿಕೆಯ ಬೆಳವಣಿಗೆಯೆಂದು ಪರಿಗಣಿಸಬಹುದಾಗಿದೆ. (ದ್ರಾವಿಡದಲ್ಲಿ ಸರ್ವನಾಮಗಳ ವಿವರಣಾತ್ಮಕ ಅಧ್ಯಯನಕ್ಕೆ ನೋಡಿ ಸುಬ್ರಹ್ಮಣ್ಯಂ, ೧೯೬೯ ಸಿ)

೧೧. ಸಂಖ್ಯಾವಾಚಕಗಳು : (i) ತು. ಐನು‌’ಐದು’ (ನಪುಂಸಕ (ತ. ಐಂತು, ಮ. ಅಞ್ಚು; ತೊ. ಉಝ್‌/ಉಜ್‌; ಕೊಡವ. ಅಞ್ಚು; ಕ. ಅಯ್‌(ಇ)ದು;ತೆ. ಅಯಿದು, ಏನು. ೨೩೧೮).

(ii). ತು. ಎಣ್ಮ ‘ಎಂಟು’ (ವಸ್ತುಗಳು), ಎಣ್ಪ ‘ಎಂಬತ್ತು’ (ತ.ಮ.ಎಟ್ಟು, ಏಣ್‌ಪತು;ಕೊ. ಎಟ್‌, ಎಮ್ಬತ್‌; ತೊ. ಒಟ್‌; ಕೊಡವ. ಎಟ್ಟ್‌ಎಮ್-ಬದಿ; ಕ. ಎಣ್ಟು, ಎಮ್‌ಬತ್ತು; ತೆ. ಎನಿಮಿದಿ, ಎನು ಬದಿ. ೬೭೦).

(iii) ತು. ಒರ್ಮ್ಬ ‘ಒಂಬತ್ತು’, ಸೊಣ್ಪ ‘ತೊಂಬತ್ತು’ (ತ.ಮ. ಒನ್ಪತು. ಒಮ್ಪತು. ತೊಂಟು/ತೊಳ್‌’ಒಂಬತ್ತು’; ಕೊ. ಒರ್ಬಾದ್‌/ ಒನ್ಬಾದ್‌; ತೊ. ವಿನ್ಬೋ; ಕೊಡವ. ಒಯ್ಮ್ಬದ್‌, ತೊಮ್ಬದ್‌; ಕ. ಒಮ್ಬ್‌(ಹ್‌)ತ್ತು, ತೊಮ್‌ಬ್‌(ಹ್‌) ಅತ್ತು); ತೆ. ತೊಮ್ಮಿದಿ, ತೊಮ್ಬದಿ. ೮೬೨; ೨೯೧೦).

ಮೇಲಿನ ಮೂರೂ ಉದಾಹರಣೆಗಳಿಂದ, ತುಳು ಉಳಿದ ದಕ್ಷಿಣ ದ್ರಾವಿಡ ಭಾಷೆಗಳಿಗಿಂತ ಭಿನ್ನವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಮೊದಲ ಎರಡು ರೂಪಗಳಲ್ಲಿ ತಮಿಳು – ಮಲಯಾಳ – ಕೊತ – ತೊದ – ಕೊಡಗು – ಕನ್ನಡ ಕ್ರಮವಾಗಿ *ಅಯ್ನ್‌ತ್‌ಮತ್ತು *ಎಣ್‌ತ್ತ್‌೭ ರೂಪಗಳಾಗಿ ಪುನಾರಚಿತಗೊಳ್ಳುತ್ತದೆ. ಈ ಭಾಷೆಗಳ ರೂಪಗಳನ್ನು ಗಮನಿಸಿದಾಗ ತುಳುವಿನ ರೂಪಗಳು ತದ್ಧಿತ ಪ್ರತ್ಯಯಗಳನ್ನು ಅದೇ ರೀತಿಯಲ್ಲಿ ಹೊಂದಿಲ್ಲ. ಹಾಗಾಗಿ ಈ ಪ್ರತ್ಯಯ ಮೂಲ ತಮಿಳು, ಮಲಯಾಳಂ, ಕನ್ನಡಗಳ ಹಂತದಲ್ಲಿಯೇ ಧಾತುವಿಗೆ ಸೇರಿದ್ದು ಎಂದು ನಿರ್ಧರಿಸಬಹುದು ಮತ್ತು ಆ ವೇಳೆಗಿಂತ ಪೂರ್ವದಲ್ಲಿಯೇ ತುಳು ಆ ಭಾಷೆಗಳಿಂದ ಬೇರ್ಪಟ್ಟಿದೆ. ತೆಲುಗಿನಲ್ಲೂ ತದ್ಧಿತ ಪ್ರತ್ಯಯ *-ತ್‌ಇದ್ದು, ಇದು ಕನ್ನಡದಿಂದ ಪಡೆದುಕೊಂಡದ್ದಾಗಿರಬಹುದು.

ತು. ಸೊಣ್ಪ, ಕೊಡವ. ಅಯ್ಮ್ಬದು‌್, ಕ. ತೊಮ್‌ಬ್ (ಹ್‌) ಅತ್ತು ಮತ್ತು ತೆ. ತೊಮ್ಬದಿ  ಈ ರೂಪಗಳನ್ನು ಮೂಲ ದ್ರಾವಿಡ ಚೊಣ್‌ಪತ್‌ರೂಪಕ್ಕೆ ಪುನಾರಚಿಸಿಕೊಳ್ಳಲು ಸಾಧ್ಯವಿದೆ. ಈ ಪದದ ಸಂರಚನೆ ಹತ್ತರ ಸರಣಿಯನ್ನು ಸೂಚಿಸುವ ಪದಗಳ ಸಂರಚನೆಗೆ ಅನುಗುಣವಾಗಿಯೇ ಇದೆ.  ಉದಾ: *ಇರು- ವತ್‌’೨೦’, *ಎಣ್‌ಪತ್‌’೮೦’, ಇತ್ಯಾದಿ. ಹೀಗಾಗಿ ಈ ಪದ ಮೂಲದ್ರಾವಿಡದ ಹಂತದ ಪದ ಅನ್ನುವ ಬಗ್ಗೆ ಸಂದೇಹವಿಲ್ಲ. ತುಳು ಮತ್ತು ಕೊಡಗು, ಕನ್ನಡ ಮತ್ತು ತೆಲುಗು ಇವುಗಳ ನಡುವಿನ ಸಮಾನತೆಗೆ ಕಾರಣವೆಂದರೆ ಮೂಲದ್ರಾವಿಡದ ರೂಪವನ್ನು ಸ್ವತಂತ್ರವಾಗಿ ಉಳಿಸಿ ಕೊಂಡಿದ್ದು. ಇತರ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಇದರ ಬಳಕೆಯನ್ನು ಕೈ ಬಿಡಲಾಯಿತು. ತು. ಎಣ್ಮ ಮತ್ತು ತೆ. ಎನಿಮಿದಿ ಇವುಗಳಲ್ಲಿ ತದ್ಧಿತ ಪ್ರತ್ಯಯಗಳು ಉಳಿದುಕೊಂಡದ್ದು ಇದು ಅಂತಿಮವಾಗಿ ಪತ್ತ್‌/ಪತ್‌ಇದಕ್ಕೆ ಸಂಬಂಧಿಸಿದುದಾಗಿದೆ. ಎರಡೂ ಭಾಷೆಗಳಲ್ಲಿ ಒಂಬತ್ತಕ್ಕೆ ಸಾದೃಶ್ಯವಾಗಿ ಈ ತದ್ಧಿತ ಪ್ರತ್ಯಯಗಳು ಅವುಗಳ ಧಾತುಗಳಿಗೆ ಸೇರ್ಪಡೆಯಾಗಿದ್ದಿರಬಹುದು: ‘ಒಂಬತ್ತು’ ಇದರಲ್ಲಿರುವ ‘ಪತ್ತ್‌’ ತದ್ಧಿತ ಪ್ರತ್ಯಯವು ಮೂಲದ್ರಾವಿಡದ ಹಂತಕ್ಕೇ ಸೇರಿದುದಾಗಿದೆ ಎಂಬುದು ಸೋದರ ಭಾಷೆಗಳನ್ನು ನೋಡಿದರೆ ತಿಳಿಯುತ್ತದೆ.

೧೨. ಕ್ರಿಯಾಪದ

ತು. ಪ್ರೇರಣಾರ್ಥಕ-ಸಕರ್ಮಕ ಪ್ರತ್ಯಯಗಳು (causative-transitive suffix): ಬ್ರಾಹ್ಮಣ ಉಪಭಾಷೆಯಲ್ಲಿ ಪ್ರೇರಣಾರ್ಥಕ ಕ್ರಿಯಾಪದ ಪ್ರತ್ಯಯ ಓ-(-ಪೋ) ಆಗಿದೆ ಮತ್ತು ಸಾಮಾನ್ಯ ಉಪಭಾಷೆಯಲ್ಲಿ ಅದರ ಪ್ರತ್ಯಯ-ಆ-(-ಪಾ) ಆಗಿದೆ.

ಒಂದು ಉಚ್ಚಾರಾಂಶವನ್ನು (ಏಕ ವರ್ಣಾತ್ಮಕ monosyllabic) ಒಳಗೊಂಡ ರೂಪಗಳ ಬಳಿಕ ಮತ್ತು ‘ಎ’ ಕಾರ ಅಥವಾ ಕಾರದಿಂದ ಅತ್ಯವಾಗುವ (ವ್ಯ) ಸ್ವರ ವ್ಯಂಜನ ಸ್ವರ ರೂಪಗಳ ಸಂದರ್ಭದಲ್ಲಿ ಅದು -ಪೋ-/-ಪ-ರೂಪಗಳನ್ನು ಹೊಂದಿದೆ ಮತ್ತು ಎರಡು ರೂಪಗಳು ಎರಡು ಉಚ್ಚಾರಾಂಶ (ದ್ವಿ ವರ್ಣಾತ್ಮಕ dysyllabic) ಮತ್ತು ಮೂರು ಉಚ್ಚಾರಾಂಶಗಳ (ತ್ರಿವರ್ಣಾತ್ಮಕ trysyllabic) ಶಬ್ದ ರೂಪಗಳ (ದ್ವಿತ್ವ ವ್ಯಂಜನಗಳನ್ನು ಹೊಂದಿರದ ಮತ್ತು ಸು ಮತ್ತು ಸು ್‌ಗಳು ಅಂತ್ಯದಲ್ಲಿ ಇರಬಾರದು) ಸಂದರ್ಭದಲ್ಲಿ ಸ್ವಚ್ಫಂದ ಪ್ರಸಾರದಲ್ಲಿ ಇರುತ್ತವೆ. ಇನ್ನು ಕೆಲವು ಪದಗಳ ಸಂದರ್ಭದಲ್ಲಿ ಸೋ ಎಂಬ ಉಪಆಕೃತಿಯನ್ನು ಹೊಂದಿದೆ.

ಬೂಳು ‘ಬೀಳು’, ಪ್ರೇರಣಾರ್ಥಕ. ಬೂಳ್‌ಓ > ಬೂಳ್ಪೋ

ಸೇರು‌’ಸೇರು’, ಪ್ರೇರಾಣಾರ್ಥಕ. ಸೇರ್-ಬ>ಸೇರ್

ಒರಗ್‌’ಒರಗು’, ಪ್ರೇರಣಾರ್ಥಕ ಒರಗ್‌ಪೋ

ಓದು‌’ಓದು’ ಪ್ರೇರಣಾರ್ಥಕ. ಓದ್‌ಓ > ಓದ್‌ಪೋ> ಓದ್‌ಸೋ-

೧೩. ಸಕರ್ಮಕ ಪ್ರತ್ಯಯ: -ಪು ಆಗಿದೆ.

ಬೊಳೆ ‘ಬೆಳೆಯು’ ಬೊಳೆ-ಪು-ಬೆಳೆಯುವಂತೆ ಮಾಡು

ಒಳಿ ‘ಉಳಿ’ ಒಳಿ-ಪು-ಉಳಿಯು

ಮೂಲಭೂತವಾಗಿ ತುಳುವಿನಲ್ಲಿ ಪ್ರೇರಣಾರ್ಥಕ ಸಕರ್ಮಕ ಪ್ರತ್ಯಯ-ಪ್‌;-ಪಾ- ಎಂಬುದು ಸ್ಪಷ್ಟವಾಗಿ ಇದೆ. ಬ್ರಾಹ್ಮಣ ತುಳುವಿನಲ್ಲಿ ಆ, ಓ ಆಗಿ ಬದಲಾಗಲು ಕಾರಣ, ಅದರ ಹಿಂದಿರುವ ‘ಪ್‌’ ಧ್ವನಿ. ವ್ಯಂಜನಾಂತ್ಯ ಕ್ರಿಯಾಪದಗಳ ಹಂತದಲ್ಲಿ ದ್ವಿತ್ವ ವ್ಯಂಜನವನ್ನು ಸರಳಗೊಳಿಸುವ ಸಂದರ್ಭದಲ್ಲಿ ಪ್‌ಕಾರ ಲೋಪವಾಗಿರಬಹುದು. ಮೂಲದ್ರಾವಿಡದ ಪ್ರೇರಣಾರ್ಥ ಪ್ರತ್ಯಯ -ಪ್ಪ್‌(ದ್ವಿತ್ವ)ಆಗಿದ್ದು, ಅದು ಮೂರೂ ಭಾಷಾ ಗುಂಪಿನ ಭಾಷೆಗಳಲ್ಲಿ ಉಳಿದುಕೊಂಡಿದೆ.

-ಸೋ-ಎಂಬ ಪ್ರತ್ಯಯ ಕೆಲವೇ ಕ್ರಿಯಾಪದಗಳ ಹಂತದಲ್ಲಿ (ಉಳಿದ ಆಕೃತಿಗಳ ಜೊತೆಗೆ ಸ್ವಚ್ಛಂದ ಪ್ರಸಾರದಲ್ಲಿ ಕಂಡುಬರುವುದರಿಂದ)

ಕನ್ನಡದ ಪ್ರೇರಣಾರ್ಥಕ ಸಕರ್ಮಕ ಪ್ರತ್ಯಯ – ಇಸು ಮತ್ತು-ಸು- ಇವುಗಳ ಪ್ರಭಾವವೇ ಇದಕ್ಕೆ ಕಾರಣವೆನ್ನಬಹುದು.