೧.೩.೩. ವ್ಯಾಕರಣಾತ್ಮಕ ವ್ಯತ್ಯಾಸ

ಕೊಂಕಣಿಯಲ್ಲಿ ಸ್ವೀಕೃತಗೊಂಡ ತುಳು ಆಕೃತಿಮಗಳು ತಮ್ಮ ವ್ಯಾಕರಣ ವರ್ಗಗಳನ್ನು ಬದಲಾಯಿಸಿ ಕೊಂಡು ಕೊಂಕಣಿ ವ್ಯಕರಣ ವರ್ಗಗಳ ಸದಸ್ಯಗಳಾಗಿವೆ.

ಅ) ನಾಮಪ್ರಕೃತಿಗಳು
ತುಳು ಭಾಷೆಯಲ್ಲಿ ಲಿಂಗ ವ್ಯವಸ್ಥೆ ಪ್ರಾಕೃತಿಕವಾಗಿದ್ದರೆ, ಕೊಂಕಣಿ ಯಲ್ಲಿ ಅದು ವ್ಯಾಕರಣಾತ್ಮಕ. ವಸ್ತುಸ್ಥಿತಿ ಹೀಗಿರುವುದರಿಂದ-

(ಕ) ಉಕಾರಾಂತ ನಪುಂಸಕ ತುಳು ನಮಪ್ರಕೃತಿಗಳು ಕೊಂಕಣಿಯಲ್ಲಿ ಪುಲ್ಲಿಂಗಿಗಳಾಗುತ್ತವೆ:

೫೫. ಚೆಣ್ಡು << ಚೆಂಡು >> (DED ೨೨೭೫) ‘play ball’
೫೬. ದುಡ್ಡು (DED ೨೭೦೫) > ದುಡು ‘money’
೫೭. ಚೆಮ್ಟು << ಚೆಂಬು >> (DED ೨೨೮೨) ‘small copper or other metal pot’
೫೮. ಗುಟ್ಟು (DED ೧೨೯೨) > ಗುಟ್‌’secret’

(ಖ) ಇಕಾರಾಂತ ತುಳು ನಾಮಪ್ರಕೃತಿಗಳು ಕೊಂಕಣಿಯಲ್ಲಿ ಸ್ತ್ರೀಲಿಂಗಿಗಳಾಗುತ್ತವೆ.
೫೯. ಕುಟ್ಟಿ (DED?) ‘peg’ (ಕೊಕ್ಕೆ)
೬೦. ಕೊಣ್ಡೆ << ಕೊಂಡಿ >> (DED ೧೭೮೮) ‘hook’
ನೋಡಿ : ೭-೧೨; ೧೪-೧೬; ೧೮-೨೨

(ಗ) ಎಕಾರಾಂತ ಪುಲ್ಲಿಂಗ ಮತ್ತು ಎ… / e / ಕಾರಾಂತ ನಪುಂಸಕ ತುಳುನಾಡು ಪ್ರಕೃತಿಗಳ ಅಂತ್ಯಸ್ವರಕ್ಕೆ ಒ / ɔ / ಅಥವಾ ಅಕಾರಗಳು ಆದೇಶವಾಗಿ ಬಂದರೆ ಅವು ಕೊಂಕಣಿಯಲ್ಲಿ ಪುಲ್ಲಿಂಗಿಗಳಾಗುತ್ತವೆ. ನಪುಂಸಕಗಳ ಅಂತ್ಯಸ್ವರ ಲೋಪಗೊಂಡರೆ ಸ್ತ್ರೀಲಿಂಗಿಗಳಾಗುತ್ತವೆ; ಲೋಪಾದೇಶಗಳು ಆಗದಿದ್ದರೆ ಆ ಸ್ವರಗಳು ಅನುನಾಸಿಕ್ಯಗೊಂಡು ನಪುಸಂಕಗಳಾಗಿಯೇ ಉಳಿಯುತ್ತವೆ.

ಪುಲ್ಲಿಂಗಿಗಳಿಂದ ಪುಲ್ಲಿಂಗಿಗಳಿಗೆ
ಎ > ಅ

೬೧. ಕುದ್ಕೆ (DED?) > ಕುದ್ಯ ‘foxy man’

೬೨. ಕುಣ್ಟೆ <<ಕುಂಟಎ>> (DED 1408) > ಕುನ್ಟ <<ಕುಂಟ>> (Lame) ‘dwarf man’ (ಕುಬ್ದ)

೬೩. ದೋಣ್ಟೆಲೆ <<ದೋಂಟೆಲೆ>> (DED 2925) > ದೋಣ್ಟೆಲ <<ದೋಂಟೆಲ > ‘lean and tall fellow’

ಎ > ಒ

೬೪. ದಡ್ಡ (DED 1910 > ದಡ್ಡೊ / daḍḍɔ / ‘stupid fellow’

೬೫. ದೊಣ್ಣೆ (DED 2883) > ದೊಣ್ಣೊ / dɔṇṇ / (Stick) ‘cudgel’

೬೫. ಸೋಗೆ (DED 2348) > ಸೊಗೊ / sɔgɔ / ‘leaf of the palms’

ನಪ್‌ಲಿಂಗಿಗಳಿಂದ ಪುಲ್ಲಿಂಗೆಗಳಿಗೆ

ಎ > ಒ

೬೭. ಗುತ್ತೆ (DED?) > ಗುತ್ತೊ / guttɔ / ‘tavern’

೬೮. ಗುಜ್ಜೆ (DED?) > ಗುಜ್ಜೊ / gujjɔ / (gudzdzɔ) ‘tender jack fruit’

ನಪ್‌ಲಿಂಗಿಗಳಿಂದ ಸ್ತ್ರೀಲಿಂಗಿಗಳಿಗೆ

v # > Ø

೬೯. ಮೆರವಣಿಗೆ (DED4163) > ಮೆರಮಣಿಗ್ (ಮೆರ್ವಣಿಗಾ) ‘procession’

೭೦. ಒಪ್ಪಿಗೆ (DED 781) > ಒಪ್ಪಿಗ್ (ಒಪ್ಪಿಗಾ) ‘consent’

೭೧. ಬೋಣ್ಟೆ (DED 4547) ? ಬೋಣ್ಟ್ ‘hunting’

v # > υ

೭೨. ಕಟ್ಟ್ಯೆ (DED 961) > ಕಟ್ಯೆಂ << ಕಾಟೇಂ>> / kate / (ಕಟ್ಟೊ) ‘structure of earth or stone(s) to sit upon or around a holy plant / tree’

೭೩. ಬುಳ್ಯೆ (DED 4464) ? ಬ್ಯೆಳ್ಯೆಂ / bele / ‘crop’

೭೪. ತಿರಗಣಿ (DED 25665) > ತಿರ್ಗಣ್ಯೆಂ / tirgane / ‘revolving lid’

(ಘ) ತುಳುವಿನ ಅಕಾರಾಂತ ನಾಮಪ್ರಕೃತಿಗಳು ಕೊಂಕಣಿಯಲ್ಲಿ ಪುಲ್ಲಿಂಗ ಅಥವಾ ನಪುಂಸಕಗಳಾಗುತ್ತವೆ. ಹೀಗಾಗುವಾಗ ಅವುಗಳ ಅಂತ್ಯಸ್ವರಕ್ಕೆ ಲೋಪ ಉಂಟಾಗುತ್ತದೆ.

ಕೊಂಕಣಿ ಪುಲ್ಲಿಂಗಿಗಳಿಗೆ (ನಪ್ > ಪು.)

೭೫. ಮಗ್ಗ (DED 3775) > ಮಾಗ್ ‘loom’

೭೬. ಕಮ್‌ಬ್ಳ <<ಕಂಬ್ಳ>> (DED 1037) > ಕಮ್ಬೊಳ್ / kabol / <<ಕಾಬೊಳ್>>’buffalo race’

ಕೊಂಕಣಿ ನಪುಂಸಕಗಳಿಗೆ (ನಪ್ > ನಪ್.)

೭೭. ಬೀಗ (DED 3456) > ಬೀಗ್ ‘lock’

೭೮. ಮೋಡ (DED 4132) > ಮೋಡ್ / mc:d / ‘cloud’

೭೯. ಕಟ್ಟೋಣ (DED 961) > ಕಟ್ಟೋಣ್ ‘building’

೮೦. ತೂಕ (DED 2777) > ತೂಕ್ ‘weight’

ಆ) ಕ್ರಿಯಾಪ್ರಕೃತಿಗಳು

ಬರೆ ಎಂಬ ಕ್ರಿಯಾಪ್ರಕೃತಿಯು ಅಂತ್ಯಸ್ವರ ಲೋಪಗೊಂಡು (ಅಯ್) y / ಪ್ರತ್ಯಯ ಸೇರಿದರೆ (ಕಳೆ) ಎಂಬ ಕ್ರಿಯಾ ಪ್ರಕೃತಿಯ ಸ್ವರ ಲೋಪಗೊಂಡು (-ವಿ) -wi / ಪ್ರತ್ಯಯ ಸೇರಿ ಕೊಂಕಣಿ ಸಕರ್ಮಕ ಕ್ರಿಯಾಪ್ರಕೃತಿಗಳು ಸಾಧಿತಗೊಳ್ಳುತ್ತವೆ.

೮೧. ಬರೆ (DED 4304) > ಬರ್ + ಅಯ್ > ಬರ್ / bry / ‘write’ (ಬರಯ್)

೮೨. ಕರೆ (DED 1142) > ಕಳ್ + ವಿ > ಕಳ್ವಿ / klwi / ‘deduct’ (ಕಳುಯಿ)

(ಖ) ಉಕಾರಾಂತ ಕ್ರಿಯಾಪ್ರಕೃತಿಗಳಿಗೆ ಇಕಾರಾಂತ ಆದೇಶವಾದರೆ (-ಇಸು) ಪ್ರತ್ಯಯಕ್ಕೆ (-ಸಿ) ಪ್ರತ್ಯಯ ಅದೇಶವಾಗುತ್ತದೆ. (+ಉಯ್)

೮೩. ಕುಟ್ಟು (DED 1391) > ಕುಟ್ಟಿ ‘give a blow’

೮೪. ಕೊಚ್ಚು (DED 1697) > ಕೊಚ್ಚಿ ‘brag, part’

೮೫. ಕೂಡಿಸು (DED 1562) > ಕುಡ್ಸಿ (kudši) ‘add’

೮೬. ತೀರಿಸು (DED 2683) > ತೀರ್ಸಿ (triši) ‘finish’, ‘complete’, ‘settle’

(ಗ) ತುಳು ನಾಮ ವಿಶೇಷಣಗಳು ಕೊಂಕಣಿಯಲ್ಲಿ ಸ್ವೀಕೃತಗೊಂಡಾಗ ಅವು ಲಿಂಗಭೇದ ರೂಪಗಳನ್ನು ಪಡೆದುಕೊಳ್ಳುತ್ತವೆ.

೮೭. ದಡ್ಡ ದಡ್ಡೊ / daḍḍɔ ಪುಲ್ಲಿಂಗ

ದಡ್ಡಿ / daḍḍi / ಸ್ತ್ರೀಲಿಂಗ

ದಡ್ಡೈಂ / daḍḍé / ನಪ್. ಲಿಂಗ

(ಘ) ಕೆಲವು ತುಳು ರೂಪಗಳಿಗೆ ಕೊಂಕಣಿ ರೂಪಗಳು ಸೇರಿಕೊಂಡು ಮಿಶ್ರರೂಪಗಳು ಉಂಟಾಗುತ್ತವೆ.:

೮೮. ಗೊತ್ತು (DED1533) + ಅಸ / asa / ‘exists’ > ಗೊತ್ತಸ > ‘is known’

೮೯. ಗೊತ್ತು + ನ / na / > ಗೊತ್ತುನ / gottuna / ‘not known’

ಒಟ್ಟಿನಲ್ಲಿ ತುಳು -ಕೊಂಕಣಿ ಭಾಷಿಕ ಸಂಬಂಧ ಕೇವಲ ನಿಘಂಟಾತ್ಮಕ ಆಗಿರದೆ (Katre, ೧೭೮) ಅದು ಧ್ವನ್ಮಾತ್ಮಕ, ಆಕೃತಿಮಾತ್ಮಕ, ವ್ಯಾಕರಣಾತ್ಮಕ ಹಾಗೂ ಮಿಶ್ರರೂಪಗಳ ನಿರ್ಮಾಣ – ಹೀಗೆ ಬೇರೆ ಬೇರೆ ಹಂತಗಳಲ್ಲಿಯೂ ಆಗಿದೆ ಎಂಬುದಕ್ಕೆ ಇಲ್ಲಿಯ ತನಕ ಮಾಡಿದ ವಿಶ್ಲೇಷಣೆಯಿಂದ ಖಚಿತವಾಗುತ್ತದೆ. ಆದರೆ ಕೊಂಕಣಿಯಿಂದ ತುಳುವಿನ ಮೇಲೆ ಭಾಷಿಕ ಪ್ರಭಾವ ಆಗಿಲ್ಲವೆಂದೇ ಹೇಳಬೇಕು. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಕೊಂಕಣಿ ಅತಿಥಿಭಾಷೆಯಾಗಿರುವುದಲ್ಲದೆ ಅದು ಹೆಚ್ಚಾಗಿ ಮನೆ ಮಾತಾಗಿ / ಸೀಮಿತ ವಲಯದಲ್ಲಿ ಬಳಕೆಯಲ್ಲಿ ಇದ್ದದ್ದೆಂದು ಹೇಳಬಹುದು. ಹೀಗೆ ತುಳುಭಾಷೆ, ಕೊಂಕಣಿ ಭಾಷೆಗೆ ದಾನಿ ಸ್ಥಾನದಲ್ಲಿದೆ ಎನ್ನಬಹುದು.

೨. ತುಳು -ಕೊಂಕಣಿ ಸಾಹಿತ್ಯಕ ಸಂಬಂಧ

ತುಳುವರು ಹಾಗೂ ಕೊಂಕಣಿಗರು ತಮ್ಮ ಸಾಹಿತ್ಯಕ ಶಕ್ತಿಯನ್ನು ಕನ್ನಡಕ್ಕೆ ಧಾರೆ ಎರೆದಿದ್ದರೆ. ಇದಕ್ಕೆ ಪ್ರಬಲ ಕಾರಣವೆಂದರೆ ಅವೆರಡಕ್ಕೂ ರಾಜಕೀಯ ಆಶ್ರಯ ಇಲ್ಲದಿರುವುದು. ಅಲ್ಪಸಂಖ್ಯಾತರ ಭಾಷೆಗಳು ಬಹುಸಂಖ್ಯಾತರ ಭಾಷೆಯ ನೆರಳಲ್ಲಿ ಸ್ವತಂತ್ರವಾಗಿ ಬೆಳೆಯಲಾರವು ಎಂಬುದಕ್ಕೆ ತುಳು, ಕೊಂಕಣಿಗಳು ಒಳ್ಳೆಯ ಉದಾಹರಣೆಗಳು, ಅಲ್ಪಸಂಖ್ಯಾಯತರು ಬಹುಸಂಖ್ಯಾಯತರ ಸಂಸ್ಕೃತಿಗೆ ಹೊಂದಿಕೊಂಡು ತಮ್ಮ ಅನನ್ಯತೆಯನ್ನು ಆಡಗಿಸಿಕೊಂಡು, ಜೀವಿಸುವ ಪ್ರಸಂಗ ಬಂದಲ್ಲಿ ಅವರ ಸಾಹಿತ್ಯ ಪ್ರತಿಭೆ ಬಹುಸಂಖ್ಯಾಯತರ ಭಾಷೆಯತ್ತ ಹರಿದುಹೋಗುವುದು ಸ್ವಾಭಾವಿಕ. ಇದಕೆ ಗೋವಿಂದ ಪೈ, ಪಂಜೆ ಮಂಗೇಶರಾವ್‌, ನಾ. ಡಿಸೋಜ, ಕಿಞ್ಞಣ್ಣ ರೈ ಮೊದಲಾದವರೇ ಸಾಕ್ಷಿ.

೨.೧ ಕೊಂಕಣಿ ಸಾಹಿತ್ಯಕ್ಕೆ ತುಳುವರ ಕೊಡಗೆ

ಕನ್ನಡ ಸಾಹಿತ್ಯಕ್ಕೆ ತುಳುವರ ಕೊಡುಗೆ ಸಾಕಷ್ಟಿದೆ. ಆದರೆ ಕೊಂಕಣಿ ಸಾಹಿತ್ಯ ನಿರ್ಮಾಣದಲ್ಲಿ ಅವರ ಕೊಡುಗೆ ವಿಶೇಷವಾಗಿ ಕಂಡುಬರುತ್ತಿಲ್ಲ. ಕೊಂಕಣಿ ಮತ್ತು ತುಳು ಎರಡು ವಿಭಿನ್ನ ಪ್ರವಾಹಗಳಾಗಿ ಹರಿದು ಕನ್ನಡ ಸಾಗರವನ್ನು ಸೇರಿಯೇ ಹೊರತು ಅವುಗಳ ಸಂಗಮ ನಾವು ಕಾಣಿತ್ತಿಲ್ಲ. ತುಳುವರು ಕೊಂಕಣಿಗರನು ಭಾತೃತ್ವಭಾವದಿಂದ ಕಂಡರೂ ಅವರ ಸಾಹಿತ್ಯ ಪ್ರಪಂಚದಲ್ಲಿ ಹೋಗುವ ಪ್ರಯತ್ನ ಮಾಡಿಲ್ಲ. ಇದು ಕೊಂಕಣಿ ಸಾಹಿತ್ಯದ ದೌರ್ಭಾಗ್ಯವೂ ಸರಿ! ಆದರೂ ಅಲ್ಲಲ್ಲಿ ಕೆಲವೊಂದು ಅಪವಾದ ಎಂಬಂತೆ ತುಳುವರು ಕೊಂಕಣಿ ಸಾಹಿತ್ಯದಲ್ಲಿ ಕೃಷಿ ಮಾಡಿದ್ದು ಕಂಡುಬಂದಿದೆ.

ಶ್ರೀ ಮುದ್ದು ಮೂಡುಬೆಳ್ಳೆ (ಆಕಾಶವಾಣಿ ಮಂಗಳೂರು) ಇವರು ತುಳು ಮಾತೃಭಾಷಿಗರಿದ್ದು ಕೊಂಕಣಿ ಸಾಹಿತ್ಯ ರಚಿಸಿದವರಲ್ಲಿ ಬಹುಶಃ ಏಕೈಕ ವ್ಯಕ್ತಿ. ಇವರ ಪ್ರಥಮ ಕೊಂಕಣಿ ಕಥೆ ‘ಚುಕೊನ್‌ ಗೆಲ್ಲೊ ಖುನಿಗಾರ್‌’ ಅದು ಪಯ್ಣಾರಿ (ಸಪ್ಟೆಂಬರ್‌ / ಒಕ್ಟೋಬರ್‌೧೯೬೮) ಯಲ್ಲಿ ಬೆಳಕನ್ನು ಕಂಡಿದೆ. ೧೯೬೮ -೭೫ ರ ಅವಧಿಯಲ್ಲಿ ಅವರ ಪತ್ರಿಕಾ ಸಾಹಿತ್ಯವನ್ನು ಪಯ್ಣಾರಿ, ರಾಕ್ಣೊ ಪತ್ರಿಕೆಗಳಲ್ಲಿ ಗಮನಿಸಬಹುದು. ಕಾಣಿಕ್‌ ಪತ್ರಿಕೆಯಲ್ಲಿಯೂ ಅವರ ಪಥಿಕ್‌ (೧೯೭೫) ಹಾಗೂ ಜಿವಿತ್‌ ಆಮ್ಚೆಂ ಆಶೆಂ, ಮೋಗ್‌ ಮುಂತಾದ ಕಥೆಗಳು ಪ್ರಕಟಿತಗೊಂಡಿವೆ. ಉದೆವ್‌ ಪತ್ರಿಕೆಯಲ್ಲಿಯೂ ಅವರ ನೆರವಿದೆ. ೧೯೮೦-೯೦ರಲ್ಲಿ ಕೊಂಕಣಿ ನಾಟಕಗಳಲ್ಲಿ ಪಾತ್ರಾಭಿನಯವನ್ನೂ ಮಾಡಿದ್ದಾರೆ. ಕೊಂಕಣಿ ರೇಡಿಯೋ ನಾಟಕಗಳಲ್ಲಿ ಪುರುಷ ಧ್ವನಿಯನ್ನು ನಿರ್ವಹಿಸಿದ್ದಾರೆ; ಕೊಂಕಣಿ ಕಾರ್ಯಕ್ರಮಗಳನ್ನೂ ನಿರ್ವಹಿಸಿದ್ದಾರೆ. ಇವರು ೧೯೯೮ರಲ್ಲಿ ಅಲೋಶಿಯಸ್‌ಕಾಲೇಜಿನ ಕೊಂಕಣಿ ಸಂಸ್ಥೆಯಿಂದ ಕೊಂಕಣಿ ಸ್ನಾತಕೋತರ ಡಿಪ್ಲೊಮಾದಲ್ಲಿ ಶ್ರೇಷ್ಠ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ತುಳು ಸಾಹಿತಿಗಳಿಂದ ಕೊಂಕಣಿ ಸಾಹಿತ್ಯ ರಚನೆಯ ಬಗೆಗೆ ಹೆಚ್ಚಿನ ಕ್ಷೇತ್ರಕಾರ್ಯವಾಗಬೇಕು. ಕರ್ನಾಟಕ ಸರಕಾರದ ತುಳು ಸಾಹಿತ್ಯ ಆಕಾಡೆಮಿ ಮತ್ತು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಈ ದೆಸೆಯಲ್ಲಿ ಹೆಚ್ಚು ಗಮನ ನೀಡಿದರೆ ಸಾರ್ಥಕವಾದೀತು.

೨.೨ ತುಳು ಸಾಹಿತ್ಯಕ್ಕೆ ಕೊಂಕಣಿಗರ ಕೊಡುಗೆ

ಕೊಂಕಣಿಗರು ತುಳುವರ ಜೊತೆ ಜೊತೆಯಲ್ಲಿಯೇ ಶತಮಾನಗಳನ್ನು ಕಳೆದರೂ ಅವರಿಬ್ಬರೂ ದ್ವೀಪಗಳಾಗಿಯೇ ಉಳಿದರು. ಸಾಂಸ್ಕೃತಿಕವಾಗಿ ಕೊಡುಕೊಳ್ಳುವಿಕೆಗಳು ಅವರ ನಡುವೆ ಇಲ್ಲವೆನ್ನುವಷ್ಟು ಕಡಿಮೆ. ಇದಕ್ಕೆ ಧಾರ್ಮಿಕ ಹಾಗೂ ಸಾಮಾಜಿಕ ಅಂತರಗಳೂ ಕಾರಣವಾಗಿರಬಹುದು. ಅವು ಹಲವು ಬಾರಿ ಸಂಬಂಧವನ್ನು ನಿರ್ಮಿಸುವ ಸೇತುವೆಗಳು ಆಗುವ ಬದಲು ಅದನ್ನು ಕಡಿದುಹಾಕುವ ಕೋಟೆಗಳು ಆಗುವುದೇ ಜಾಸ್ತಿ.

ಈ ಮೇಲಿನ ಅಭಿಪ್ರಾಯಕ್ಕೆ ನನ್ನ ಗಮನಕ್ಕೆ ಬಂದ ಅಪವಾದ ಎಂದರೆ ಕುಮಾರಿ ಕ್ಯಾಥರೀನ್‌ರೊಡ್ರಿಗಸ್‌ಕಟಪಾಡಿ ಇವರ ಮನೆಮಾತು ಕೊಂಕಣಿಯಾಗಿದ್ದರೂ ಇವರು ತುಳು ಸಾಹಿತ್ಯದಲ್ಲಿ ಕೈಯಾಡಿಸಿದ್ದಾರೆ. ಇವರು ಕವಿರಾಜ್‌ಜೆ. ಬಿ. ಸಿಕ್ವೇರಾ ಅವರ ಸತಾಂ- ಬತಾಂ ಎಂಬ ಕೊಂಕಣಿ ಕವನಸಂಕಲನ, ಸತ್ಯೊಮಿತ್ಯೊ (೨೦೦೦) ಎಂಬ ಶ್ರೋನಾಮೆಯನ್ನಿಟ್ಟು ಅಂತೆಯೇ ಸಿಕ್ವೇರಾ ಅವರ ಆವಾಳೆ -ದುವಾಳೆ ಎಂಬ ಕವನ ಸಂಕಲವನ್ನು ಬಂಜಿ ಸಂಕಡ -ಬೆಂದ್‌ಸಂಕಡ (೨೦೦೧) ಎಂಬ ಶಿರೋನಾಮೆಯನ್ನಿಟ್ಟು ತುಳುವಿಗೆ ಅನುವಾದಿಸಿದ್ದಾರೆ; ತುಳು ರೇಡಿಯೋ ನಾಟಕಗಳು ಜನಮೆಚ್ಚುಗೆಯನ್ನು ಪಡೆದಿವೆ; ಸಿರಿತುಪ್ಪೆ -ತುಳು ರೇಡಿಯೋ ನಾಟಕಗಳ ಒಂದು ಸಂಗ್ರಹ ಪ್ರಕಟವಾಗಿದೆ. ಅವರ ತುಳು ನಾಟಕಗಳಿಗೊಸ್ಕರ ಧರ್ಮಸ್ಥಳ ರತ್ನ ವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆಯಲ್ಲದೆ ಜಯವಿಜಯ (೧೯೮೪) ಹಾಗೂ ಕನ್ನಿಕ (೧೯೮೫) ತುಳು ನಾಟಕಗಳಿಗೆ ಡಾ. ರಾಜಕುಮಾರ್‌ಅಭಿಮಾನಿಗಳ ಸಂಘ, ಮಂಗಳೂರು ಇವರ ‘ಕಲ್ಪನಾ ಪ್ರಶಸ್ತಿ’ ದೊರಕಿದೆ. ಅವರ ಬನ್ನಾಲ್‌ಕಾದಂಬರಿಯನ್ನು ಕರ್ನಾಟಕ ಸರಕಾರದ ತುಳು ಸಾಹಿತ್ಯ ಆಕಾಡೆಮಿ ೧೯೯೮ರಲ್ಲಿ ಪ್ರಕಟಿಸಿದರೆ, ಅದೇ ವರ್ಷ ಕೆಮ್ತೂರು ದೊಡ್ಡಣ್ಣ ಶೆಟ್ರ್‌ಎಂಬ ಜೀವನ ಚರಿತ್ರೆಯೂ ಅದೇ ಆಕಾಡೆಮಿ ಪ್ರಕಟಿಸಿದೆ (ಈ ಮಾಹಿತಿಗೆ ನಾನು ಶ್ರೀಮತಿ ಕೊನ್ಸಾಪ್ಪಾ ಫೆರ್ನಂಡಿಸ್‌, ಮಂಗಳೂರು ಆಕಾಶಾವಾಣಿ ಇವರಿಗೆ ಋಣಿ).

ವಿಲ್ಫಿ ರೆಬಿಂಬಸ್‌, ಮೆಲ್ವಿನ್‌ಪೆರಿಸ್‌, ಎರಿಕ್‌ಒಝೇರಿಯೊ, ಡೊಲ್ಫಿ ಲೋಬೊ ಮೊದಲಾದವರು ತುಳು ಹಾಡುಗಳನ್ನು ರಚಿಸಿದ್ದರೆ, ಹಾಡಿದ್ದಾರೆ. ಕ್ಯಾಸೆಟ್‌ಗಳನ್ನು ಹೊರತಂದಿದ್ದಾರೆ. ಕೆ. ಚಾರ್ಲ್ಸ್ ರೆಬೆಲ್ಲೊ ಇವರು ಸುಮಾರು ನಾಲ್ಕು ಸಾವಿರ ಹಾಡುಗಳನ್ನು ಕಟ್ಟಿದ್ದಾರೆ. ಅಲ್ಲದೆ ಅವುಗಳನ್ನು ವಿವಿಧ ಸಂದರ್ಭಗಳಲ್ಲಿ ಹಾಡುತ್ತಾರೆ. ವಿಜಯಶಾಲಿ ಗೀತೆಗಳು (೧೯೮೫ -೯೪) ಎಂಬ ೧- ೫ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅನೇಕ ಕೆಸೆಟ್‌ಗಳನ್ನು ಹೊರತಂದಿದ್ದಾರೆ. ಅವರ ಅನೇಕ ಅಪ್ರಕಟಿತ ಏಕಾಂಕ ನಾಟಕಗಳನ್ನು ಇಂದಿಗೂ ಅನೇಕ ಸಂದರ್ಭಗಳಲ್ಲಿ ಹಾಡುತ್ತಾರೆ. (ಇವರ ವಿಳಾಸ : Door No .1 / Adam Compound / Kemminiji Temple Road, Darbe P. O. / Puttur / Phone : ೦೮೨೫ -೬೨೪೦೩೫)

ಕೆಲವೊಂದು ಕ್ರೈಸ್ತ ತೀರ್ಥಕ್ಷೇತ್ರಗಳಲ್ಲಿ (ಕಾರ್ಕಾಳ, ಮುಡಿಪು, ತೊಕ್ಕೊಟ್ಟು ಇತ್ಯಾದಿ) ಕೊಂಕಣಿಯೊಂದಿಗೆ ತುಳು ಭಾಷೆಯಲ್ಲಿ ದೈವರಾಧನೆ ಹಾಗೂ ಪ್ರವಚನಗಳೂ ನಡೆಯುತ್ತವೆ. ಈ ಎಲ್ಲ ವಿಷಯಗಳ ಬಗೆಗೆ ಸೂಕ್ಷ್ಮವಾದ ಕ್ಷೇತ್ರಕಾರ್ಯ ನಡೆಯುವುದು ಅತ್ಯಾವಶ್ಯಕ. ಕ್ಯಾಥರಿನ್‍ಅವರ ತುಳು ಸಾಹಿತ್ಯದಿಂದಾಗಿ ತುಳು ಮಣ್ಣಿನ ವಾಸನೆಯ ಜೊತೆಗೆ ತುಳು ಮಲ್ಲಿಗೆಯ ಪರಿಮಳವನ್ನೂ ಜನ ಅಸ್ವಾದಿಸಿದ್ದಾರೆ. ಇದಕ್ಕಾಗಿ ಈ ಕೊಂಕಣಿ ಕನ್ಯೆ ಕೃತಾರ್ಥಳಾಗಿದ್ದಾಳೆ. ಈಕೆಗೆ ‘ಕೊಂಕಣಿಮಾಂಯ್‌’ ಜೊತೆಗೆ ‘ತುಳು ಅಪ್ಪೆ’ ಯೂ ‘ಮೋಕೆ’ / ಪ್ರೀತಿಯವಳು. ಇದು ಆಕೆಯ ಸಾಂಸ್ಕೃತಿಕ ಸಿರಿ.

೩.೦ ಕೊನೆಯ ಮಾತುಗಳು

ತುಳು ಕೊಂಕಣಿಗಳು ಕರ್ನಾಟಕದಲ್ಲಿ ಸಾಂದ್ರವಾಗಿ ದ. ಕ. ಜಿಲ್ಲೆ, ಉಡಪಿ ಜಿಲ್ಲೆಗಳಲ್ಲಿ ಹಾಗೂ ಕೇರಳದ ಕೆಲವು ತಾಲೂಕುಗಳಲ್ಲಿ ಅಂತೆಯೇ ಮಹಾರಾಷ್ಟ್ರದ ಮುಂಬಯಿಯಲ್ಲಿಯೂ ಶತಮಾನಗಳಿಂದಲೂ ಜೊತೆ ಜೊತೆಯಾಗಿ ಇದ್ದರೂ ಅವುಗಳ ಪರಸ್ಪರ ಕೊಡುಕೊಳ್ಳುವಿಕೆಗಳು ಬಹಳ ವಿರಳ. ಭಾಷಿಕವಾಗಿ ತುಳು, ಕೊಂಕಣಿಗೆ ದಾನಿಯಾಗಿ ನಿಂತರೂ ಅದು ಕೊಂಕಣಿಯಿಂದ ಸ್ವೀಕರಿಸಿದ್ದು ಇಲ್ಲವೆನ್ನುವಷ್ಟು ಕಡಿಮೆ. ಸಾಹಿತ್ಯಕವಾಗಿಯೂ ಅವುಗಳ ಕೊಡುಕೊಳ್ಳುವಿಕೆಗಳೂ ಅಲ್ಪ.ಅವುಗಳೇನಿದ್ದರೂ ಏಕ ಮುಖೀಯವೇ ಹೊರತು ಪರಸ್ಪರ ಅಲ್ಲ. ಅತ್ಮೀಯ ಸಹಬಾಳ್ವೆಯಿಂದ ಮಾತ್ರ ಪರಸ್ಪರ ಸಾಹಿತ್ಯ ಬೆಳೆಯುತ್ತದೆ ಎಂಬ ಪ್ರಮೇಯಕ್ಕೆ ಪ್ರಸ್ತುತ ಅಧ್ಯಯನ ಕೊಂಡುಯ್ಯುತ್ತದೆ. ಕೇವಲ ಇರುವುದಕ್ಕಿಂತ ಕೂಡಿರುವುದು ಮಾನವೀಯ ದೃಷ್ಟಿಯಿಂದ ಅತ್ಯಗತ್ಯ. ಕೊಡುಕೊಳ್ಳುವುದು ಕೂಡಿವಿಕೆಯ ಜೀವಂತ ಲಕ್ಷಣ. ಇಂತಹ ಜೀವನದ ಅಭಿವ್ಯಕ್ತಿಯೇ ಸಾಹಿತ್ಯ. ಜನಸಮುದಾಯಗಳ ‘ಪಾರಸ್ಪರಿಕ ಜೀವನ’ ವೇ ಭಾಷಿಕ ಹಾಗೂ ಸಾಹಿತ್ಯಕ ಸಂಬಂಧಗಳಿಗೆ ಪ್ರಬಲ ಕಾರಣವಾಗುತ್ತದೆ; ಕೇವಲ ‘ಇರುವಿಕೆ’ ಕಾರಣವಾಗಲಾರದು.

ಆಕರಸೂಚಿ

ತುಳು

ಪಿ. ಗುರುರಾಜ ಭಟ್‌, ೧೯೬೩, ತುಳುನಾಡು . ಉಡುಪಿ : ಭವ್ಯವಾಣಿ ಕು. ಶಿ. ಹರಿದಾಸ ಭಟ್‌ ಮತ್ತು ಯು. ಪಿ. ಉಪಾಧ್ಯಾಯ, ೧೯೮೦, (ಸಂ.), ತುಳು – ಕನ್ನಡ – ಇಂಗ್ಲಿಷ್‌ ನಿಘಂಟು (ಮಾದರಿ ಸಂಚಿಕೆ), ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ

ರಮೇಶ್‌ ಕೆ. ವಿ, ೧೯೬೯, ತುಳುನಾಡಿನ ಇತಿಹಾಸ, ಮೈಸೂರು : ಗೀತಾ ಬುಕ್‌ ಹೌಸ್‌

ಸೀತಾರಾಮಾಚಾರ್ಯ ಹೊಸಬೆಟ್ಟು, ೧೯೮೨. ‘ಸ್ವಾತಂತ್ರ್ಯಪೂರ್ವದ ತುಳು ಸೂಜನಸಾಹಿತ್ಯ’, ಕು. ಶಿ. ಹೈದಾಸಭಟ್ಟ (ಸಂ.), ಸ್ವಾತಂತ್ರ್ಯಪೂರ್ವದ ತುಳು ಸಾಹಿತ್ಯ ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ರಾಮಕೃಷ್ಣ ಟಿ. ಶೆಟ್ಟಿ, ೧೯೮೬, ವರ್ಣಾನಾತ್ಮಕ ತುಳು ವ್ಯಾಕರಣ, ಪೂತ್ತೂರು, ದ. ಕ.: ವಿವೇಕಾನಂದ ಕಾಲೇಜು.

English

Bhat D. N. S., 1966 (Studies in Tulu), Bulletin of the Deccan College Research Institute (ಸಂಶೋಧನಾ 25- 11-31)

1967, Descriptive Analysis of Tulu, Poona, Deccan Collage Brigel J., (Rev.), 1888, A Grammar Tulu Language, Mangalore : Basel Mission

Madta William, 1971 ‘Negation in Tulu,’ H. S. Biligiri (Ed). Paper and talks, Mysore : Central Institute of Indian Languages.

Manner A., (Rev.), 1986, Tulu -English Dictionary, Mangalore : Basel Mission

1888. Tulu -English Dictionary, Mangalore : Basel Mission Ramachandra Rao B., 1966,’ Social and Local Dialects of Tulu’, Journal of Osmania University

Subramanyam P. S., 1968. ‘The Position of Tulu in Dravidian’, Indian Linguistics (20 – 47 – 46)

Upadhyaya U. P. 1966 ‘Morphology of Tulu Work’, All India Oriental Conference, Aligarh

ಕೊಂಕಣಿ

ಮಾಡ್ತ ವಿಲ್ಯಂ, ೧೯೭೨, ‘ಕೊಂಕಣಿ ಭಾಷೆ ಮತ್ತು ಸಾಹಿತ್ಯ’, ಕನ್ನಡ ವಿಶ್ವಕೋಶ ಸಂ. ೫ ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ

೧೯೯೨ ‘ಎಕ್ವಿಸಾವ್ಯ ಶೆಕ್ಡ್ಯಾತ್‌ ಅಭಿವೃದ್ಧಿ ಅನಿ ಸಮಸ್ಯೆ’ : ೨೧ ವ್ಯಾ ಅಖಿಲ್‌ ಭಾರತೀಯ್‌ ಕೊಂಕಣಿ ಪರಿಷದೆಂಚೆ ಅಧ್ಯಕ್ಷೀಯ್‌ ಭಾಷಣ’,

ಮುಂಬಯಿ, ಚಿಂಚೇ ಪುಲಾಂ : ಸಂಸ್ಮರಣ್‌ ಗ್ರಂಥ್‌

೧೯೯೫, ‘ಕೊಂಕಣಿ ಭಾಷೆಯ ಅಭಿವೃದ್ಧಿ’, ಮುರಳೀಧರ ಉಪಾಧ್ಯ, ಹಿರಿಯಡ್ಕ (ಸಂ.) ಕೊಂಕಣಿ ಭಾಷೆ -ಸಾಹಿತ್ಯ, ಉಡಪಿ : ಕೊಂಕಣಿ ಅಧ್ಯಯನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ವಾಲ್ಟರ್‌(ಫಾ.), ಮಾರ್ಕ್ (ಸಂ.), ೧೯೭೪, ಅಮರ್‌ ಕೊಂಕ್ಲಿ ಮುಂಗ್ಳೂರು : ರಾಕ್ಣೊ ಪ್ರಕಾಶನ್‌

ವಾಲ್ಟರ್‌ (ಬಾವ್), ಮಾರ್ಕ್ ಅನಿ ಸಿರಿಲ್‌ಜೆ. ಸಿಕ್ವೇರ, ೧೯೮೮, ‘ಮಂಗ್ಳೂರಾಂತ್‌ ಕೊಂಕ್ಣಿ ಸಾಹಿತ್ಯ್’, ರಾಕ್ಣೊ, ದಸಂಬರ್‌೧೦

ಶೆಣೈ ಬಸ್ತಿ ಪುಂಡಲಿಕ, ೧೮೯೦ (ಶಕೆ), ಕೊಂಕ್ಣಿ ಮತ್ತು ಮರಾಠಿ ಇವುಗಳ ತುಲನಾತ್ಮಕ ವಿಮರ್ಶೆ ಹಾಗೂ ಸಾರಸ್ವತ ಬ್ರಾಹ್ಮಣರ ಪ್ರಾಚೀನ ಇತಿಹಾಸ, ಮಂಗಳೂರು : ಶ್ರೀ ಲಲಿತಾ ಪ್ರಾಚ್ಯ ಸಂಶೋಧನಾಲಯ

ಸಲ್ದಾಂಞ, ವಿ. ಜೆ. ಪಿ., (ಸಂ.), ೧೯೮೧, ಅಮರ್‌ಕೊಂಕ್ಣಿ (೧.೧. -೨), ಮಂಗ್ಳೂರ್‌: ಸಾಂ. ಲೂವಿಸ್‌ ಕಾಲೇಜ್‌

Crawford Arthur, 1909, Legends of Konkan. Allahabad : Pioneer Press

Gomes, Olivinho. 1997 (July), ‘The Konkanis : Community Unveiled’. Goa Today.

1999, ‘Konkani : An Overview’ Mogren : xvII All India Konkani Sahitya Parishad Souvenir, Manipal

Katre, S. M. 1966, The Formation of Konkani, Poona, Deccan College

Madtha William, 1971, ‘Some Comments on the Language Situation of Goa in the 16th and 17th Centuries’, H. S. Biligiri (ed.) Papers and Talks, Mysore ” Central Institute of Indian Languages

1976, The Christian Konkani of South Kanara, Dharwad, Karnataka University

1980-81’Konkani Dialects in the Dravidian Area’. Karnataka University Journal: Humanities (Vol . XXIV and XXV)

Maffei (S. J.) Angelus Francisus Xavierus, 1992, A Konkani Grammar, Mangalore: Basel Mission Press.

1883, An English – Konkani Dictionary, Mangalore : Basel Mission Press.

1891, The Confessors’ Konkani Vade Mecus, Mangalore

1892, Konkani Ranantlo Sobi Sundar Talo (A Sweet Voice from the Konkani Desert)., Mangalore.

Miranda, Rocky V., 1977, ‘The Assimilation of Dravidian

Loans to Konkany Phonological and Morphological Patterns’ in Indo -Iranian Journal (19.247-65)

(1978, ‘Caste, Religion and Dialect Differentiation in the Konkani Area’, in International Journal of the Sociology of Language, Vol. 16.

Pai (S.j.) C. C. A., 1981, Konkany Riddles of Mangalore Catholics. Bangalore, Loyola Mandir

Pereira Jose, ೧೯೭೧, Konkani : A Language, Dharwad, Karnataka University

1973, Literary Konkany : A Brief History, Dharwad : Konkani Satiya Prakashana

Shanbhag D. No, (Chief Ed.), 1970, Essays on Konkani Language Literature : Professor Armando Menezes Felictation Volume. Dharwad : Konkani Satiya Prakashana.

ಸಾಮಾನ್ಯ

Aguiar B. M., 1981, The Examiner, 32.24 (June 13). Bombay Burrow T. and Emeneau. M. b. 1961, A. Dravidian Etymological Dictionary (DED). Oxford : Clarendon Press. Caldwell, Robert (Rt. Rev.) 1856. A Comparative Grammar of the Dravidian or South Indian Family of Languages (3rd edn. reprinted 1996). Madras : University of Madras (Munshiram Manoharlal edition 1974).

Census of India, 1961, Delhi : Office of the Registrar General.

Census of India, 1971, Delhi : Office of the Registrar General.

Emerneau M.G., 1967, ‘The South Dravidian Languages’, Jaos, 87:365-412.

Krishnamurti, B.H., 1961, Telugu Verbal Base : A Comparative and Descriptive Study, Berkerley and Los Angeles : University of California Press.

S. Tuner (Sir) Ralph Lilly, 1962, A Comparative Dictionary of the indo-Aryan Languages Vo. I to II (DCIAL), k London.