ಇನ್ನಾವ ಭಾಷೆಯಲ್ಲಿಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕ್ಷೇತ್ರಕಾರ್ಯ ನಡೆಸಿ ಪದಸಂಗ್ರಹ ಮಾಡಿ ನಿಘಂಟು ರಚನೆ ಮಾಡಿದ ದಾಖಲೆಯಿಲ್ಲ. ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಿವಿಧ ವರ್ಗದ ಜನರನ್ನು ಸಂಪರ್ಕಿಸಿ ಅವರವರ ವೃತ್ತಿ ಕಸುಬು, ನಂಬಿಕೆ, ಆಚರಣೆ, ಕಲೆ, ವಿನೋದ ಮುಂತಾದ ಸಂದರ್ಭಗಳಲ್ಲಿ ಭಾಗವಹಿಸಿ ಸಂದರ್ಶನ ಪದ್ಧತಿ (Interview method), ಭಾಗವಹಿಸುವಿಕೆ ಪದ್ಧತಿ (Participation method) ಮುಂತಾದ ವಿಧಾನಗಳ ಮೂಲಕ ಇಷ್ಟು ಪ್ರಮಾಣದಲ್ಲಿ ಪದಸಂಗ್ರಹ ಮಾಡಿದ ದಾಖಲೆಯಿಲ್ಲ. ಅದಕ್ಕಾಗಿ ನಾವು ಕರಾವಳಿಯ ಬೆಸ್ತ (ಮೊಗವೀರ)ರಿಂದ ಹಿಡಿದು ಪಶ್ಚಿಮ ಘಟ್ಟದ ಮಲೆಕುಡಿಯರವರೆಗೆ, ಉಡುಪಿಯ ಬ್ರಾಹ್ಮಣರಿಂದ ಸುಳ್ಯದ ಗೌಡರವರೆಗೆ, ಕಾಸರಗೋಡಿನ ಕೋಪಾಲರಿಂದ ಕಾರ್ಕಳದ ಜೈನರವರೆಗೆ ಪ್ರತಿಯೊಂದು ಪ್ರದೇಶದ ವಿವಿಧ ಸಾಮಾಜಿಕ ವರ್ಗದ ಜನರೊಂದಿಗೆ ಬೆರೆತು ಪದಸಂಗ್ರಹ ಮಾಡಿದ್ದೇವೆ. ಬಂಟರ ಗುತ್ತು, ಬೀಡಿಗಳಿಂದ ಹಿಡಿದು ಹರಿಜನರ ಕೇಲ್, ಕೊಪ್ಪ, ಪಟ್ಟ, ದಟ್ಟಿಗೆಗಳವರೆಗೆ ಪ್ರತಿಯೊಂದು ವರ್ಗದವರ ವಾಸಪ್ರದೇಶಗಳಲ್ಲಿ ಕ್ಷೇತ್ರಕಾರ್ಯ ನಡೆಸಿದ್ದೇವೆ. ಮೇರರ ಅಡ್ಯೆ ತಚುಲ್ಲೆಲ್ ನಿಂದ ಬ್ರಾಹ್ಮಣರ ಸೀಮಂತದವರೆಗಿನ ಆಚರಣೆಗಳು, ಬುಟ್ಟಿ ಹೆಣೆಯುವಲ್ಲಿಂದ ಮೂರ್ತೆ ಮಾಡುವಲ್ಲಿ ನವರೆಗಿನ ವೃತ್ತಿ ಕಸುಬುಗಳು, ಚೆನ್ನೆಮಣೆಯಿಂದ ಕೋಳಿ ಅಂಕದವರೆಗಿನ ವಿನೋದಗಳು, ಪಾಡ್ದನಗಳಿಂದ ದೂರುವ ಪದಗಳವರೆಗಿನ ಹಾಡುಗಳು ಮುಂತಾದ ಹತ್ತು ಹಲವಾರು ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದೇವೆ.ಹೀಗೆ ವಿವಿಧ ಸಾಮಾಜಿಕ ಹಾಗೂ ಭೌಗೋಳಿಕ ಉಪಭಾಷೆಗಳ ಆಡುನುಡಿಗಳಿಂದ ಪದ ಸಂಗ್ರಹ ಮಾಡಿ ಪ್ರತಿಯೊಂದು ಉಪಭಾಷಾ ಆಡುನುಡಿಗಳಿಂದ ಪದ ಸಂಗ್ರಹ ಮಾಡಿ ಪ್ರತಿಯೊಂದು ಉಪಭಾಷಾ ರೂಪಗಳನ್ನು ನಮೂದಿಸಿ ಆ ಸಾಮಾಜಿಕ ಭೌಗೋಳಿಕ ಉಪಭಾಷೆಗಳ ಆಡುನುಡಿಗಳಿಂದ ಪದಸಂಗ್ರಹ ಮಾಡಿ ಪ್ರತಿಯೊಂದು ಉಪಭಾಷಾ ರೂಪಗಳನ್ನು ನಮೂದಿಸಿ ಆ ಸಾಮಾಜಿಕ ಭೌಗೋಳಿಕ ಉಪಭಾಷೆಯನ್ನು ಸೂಚಿಸುವ ಚಿಹ್ನೆಗಳನ್ನು ಕೊಡುವ ನಿಘಂಟು ಭಾರತದ ಇತರ ಭಾಷೆಗಳಲ್ಲಿ ಮೂಡಿಬಂದಿಲ್ಲ. ಶಿಷ್ಟರೂಪಗಳಿಗೂ, ಗ್ರಾಮ್ಯರೂಪಗಳಿಗೂ ಸಮಾನವಾದ ಸ್ಥಾನ ನೀಡಿದ್ದೂ ಉಲ್ಲೇಖನೀಯ. ಇತ್ತೀಚೆಗೆ ಸೃಜನಶೀಲ ಸಾಹಿತ್ಯ ಕೃತಿಗಳಲ್ಲಿ ಪ್ರಾದೇಶಿಕ ಹಾಗೂ ಗ್ರಾಮ್ಯ ರೂಪಗಳೂ ಶೈಲಿಗಳೂ ಸಾಕಷ್ಟು ಕಂಡುಬರುತ್ತವೆ. ಬೆಳೆಯುತ್ತಿರುವ ಭಾಷೆಗಳಲ್ಲಿ ಇದು ಸಹಜ ಹಾಗೂ ಅನಿವಾರ್ಯ; ಶಿವರಾಮ ಕಾರಂತ, ಮಿರ್ಜಿ ಅಣ್ಣಾರಾಯ, ರಾವ್‌ಬಹದ್ದೂರ್ ಮುಂತಾದವರ ಕಾದಂಬರಿ ಗಳನ್ನೋದುವಾಗ ಕನ್ನಡದ ಯಾವ ನಿಘಂಟೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಬೆಳೆಯುತ್ತಿರುವ ಪ್ರತಿಯೊಂದು ಭಾಷೆಗೂ ಶಿಷ್ಟ ಶಬ್ದಗಳೊಂದಿಗೆ ವಿವಿಧ ಪ್ರದೇಶಗಳ ಆಡುನುಡಿಗಳ ಸಂಪತ್ತನ್ನೊಳಗೊಂಡ ನಿಘಂಟಿನ ಅವಶ್ಯಕತೆಯಿದೆ. ಈ ದೃಷ್ಟಿಯಿಂದಲೂ ನಮ್ಮ ಈ ಪ್ರಯತ್ನ ಭಾರತದ ಇತರ ಭಾಷೆಗಳಲ್ಲಿ ಸರ್ವಸಂಗ್ರಾಹಕವಾದ ನಿಘಂಟು ರಚನೆ ಮಾಡುವವರಿಗೆ ಮಾರ್ಗದರ್ಶನ ಮಾಡಬಹುದು.

ನಿಘಂಟುಗಳಲ್ಲಿ ಸಾಮಾನ್ಯವಾಗಿ ಮೂಲ ಧಾತುಗಳನ್ನು, ಶಬ್ದಗಳನ್ನು ಮಾತ್ರ ಕೊಡುತ್ತಾರೆ. ಆದರೆ ನಮ್ಮ ಈ ನಿಘಂಟಿನಲ್ಲಿ ತುಳುಭಾಷೆಯ ಪ್ರತ್ಯಯಗಳನ್ನೂ, ಬೇರೆ ಬೇರೆ ಉಪಭಾಷೆಗಳಲ್ಲಿ ಕಂಡುಬರುವ ಆ ಪ್ರತ್ಯಯಗಳ ರೂಪಭೇದಗಳನ್ನೂ ಅವುಗಳ ಕನ್ನಡ ಹಾಗೂ ಇಂಗ್ಲಿಷ್ ಅರ್ಥಗಳನ್ನೂ, ಪ್ರಯೋಗಗಳನ್ನೂ ಕೊಟ್ಟಿದ್ದೇವೆ (ನೋಡಿ :ಅ್ಂಡ್, ಅ್ಂಡ, ಅ ಅಂತ್, ಅಂದ್, ಅಂದೆ್, ಆನೆ್ ಇತ್ಯಾದಿ) ತುಳುಭಾಷೆಯ ವೈಜ್ಞಾನಿಕ ವಿಶ್ಲೇಷಣೆ ಮಾಡುವವರಿಗೂ ಉಪಭಾಷೆಗಳ ತೌಲನಿಕ ಅಧ್ಯಯನ ಮಾಡುವವರಿಗೂ, ತುಳು ಹಾಗೂ ಇತರ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಮಾಡುವವರಿಗೂ, ತುಳುಭಾಷೆಯ ಚಾರಿತ್ರಿಕ ಪುನರ್ನಿರ್ಮಾಣ ಮಾಡುವವರಿಗೂ, ತುಳು ಹಾಗೂ ಇತರ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಮಾಡುವವರಿಗೂ ನಮ್ಮ ಈ ಪ್ರಯತ್ನ ಸಾಕಷ್ಟು ಮಾಹಿತಿಗಳನ್ನು ನೀಡಬಹುದು. ಅಂತೆಯೇ ಒಂದು ಮೂಲ ಶಬ್ದ ಅಥವಾ ಧಾತು ಬೇರೆ ಬೇರೆ ಪ್ರತ್ಯಯಗಳ ಹಿಂದೆ ಬರುವಾಗ ಅಥವಾ ಸಮಾಸದಲ್ಲಿ ಇನ್ನೊಂದು ಪದದ ಹಿಂದೆ ಬರುವಾಗ ಆಗುವ ವಿಕೃತ ರೂಪಗಳನ್ನು obl. ಎಂಬ ಚಿಹ್ನೆ ಹಾಕಿ ಕೊಟ್ಟಿದ್ದೇವೆ. ಆ ವಿಕೃತ ರೂಪದಿಂದ ಸಾಧಿತವಾದ ರೂಪಗಳು ಬಹುಸಂಖ್ಯೆಯಲ್ಲಿ ಬಳಕೆಯಲ್ಲಿದ್ದರೆ ಆ ವಿಕೃತ ರೂಪವನ್ನೂ ಮುಖ್ಯ ಉಲ್ಲೇಖವಾಗಿ ಉಲ್ಲೇಖಿಸಿ ಅದರಿಂದ ಸಾಧಿತವಾಗುವ ಮುಖ್ಯ ಸಮಾಸ ಹಾಗೂ ಸಂಧಿರೂಪಗಳನ್ನು ಉಪ ಉಲ್ಲೇಖಗಳಾಗಿ ಕೊಟ್ಟಿದೇವೆ. ಉದಾ: ಅಯಿನ್ (ಐನ್) ‘ಐದು’ ಈ ಪದದ ವಿಕೃತ ರೂಪ ಅಯಿ ಮತ್ತು ಅದರಿಂದ ಸಾಧಿತವಾದ ಅಯಿಂಬಳ, ಅಯಿನಿಂಗಳ್ ಇತ್ಯಾದಿ ರೂಪಗಳು. ಮೂಲಧಾತು ಹಾಗೂ ನಾಮಪದಗಳನ್ನು ಮುಖ್ಯ ಉಲ್ಲೇಖಗಳಾಗಿ ಕೊಟ್ಟಾಗ ಧಾತುಗಳ ಕ್ರಿಯಾರೂಪಗಳೂ ನಾಮಪದಗಳ ಬಹುವಚನ ರೂಪಗಳು ಅಥವಾ ವಿಭಕ್ತಿ ಪ್ರತ್ಯಯಯುಕ್ತ ರೂಪಗಳೂ ವಿಶಿಷ್ಟವೆಂದು ಕಂಡುಬಂದರೆ ಅವುಗಳನ್ನು ಕಂಸದೊಳಗೆ ಕೊಟ್ಟಿದ್ದೇವೆ. ಉದಾ: ಅಜ್ಜಿ; ಅಜ್ಜಿಡಿಯಕ್ಳು ಬಹುವಚನ. ಆತ್ಮಾರ್ಥಕ, ಪ್ರೇರಣಾರ್ಥಕ ಕ್ರಿಯಾಧಾತುಗಳನ್ನು ಕೊಡುವಾಗ ಅವು ಯಾವ ಮೂಲಧಾತುಗಳ ಆತ್ಮಾರ್ಥಕ ಪ್ರೇರಣಾರ್ಥಕ ರೂಪಗಳು ಎಂದು ಕಂಸದೊಳಗೆ ಸೂಚಿಸಿದ್ದೇವೆ. ಕೆಲವು ವಿಭಕ್ತಿ ರೂಪಗಳೂ ಕ್ರಿಯಾಪದ ರೂಪಗಳೂ ಸಂಬೋಧನ ರೂಪಗಳೂ ವಿಶಿಷ್ಟವೆಂದು ಕಂಡುಬಂದಾಗ ಅಂತಹ ಪದಗಳ ಪ್ರತ್ಯಯಯುಕ್ತ ರೂಪಗಳನ್ನು ಮುಖ್ಯ ಉಲ್ಲೇಖವಾಗಿ ಕೊಟ್ಟಿದ್ದೇವೆ. (ನೋಡಿ :ಅ್ ಮುಕ್, ಇನ್ನಟ ಇತ್ಯಾದಿ.) ತುಳುವಿನ ವಿಶಿಷ್ಟ ನುಡಿಗಟ್ಟುಗಳಲ್ಲಿ ಬರುವ ನುಡಿವೈಶಿಷ್ಟ್ಯದ ತುಣುಕುಗಳಾದ ಅ್ಬರಾ, ಅ್ಂದ, ಇನ್ಪೀ, ಇಂದ್‌ದ್‌ ಮುಂತಾದ ಘಟಕಗಳನ್ನೂ, ಅಡ್ಯೆ್ಗಿಡ್ಯೆ, ಆಮಜಿಪಾಮಜಿ ಮುಂತಾದ ಅನುರಣನ ಪದಗಳನ್ನೂ, ಅಂಬೇ ಮುಂತಾದ ಅನುಕರಣಾತ್ಮಕ ಪದಗಳನ್ನೂ ನಿಘಂಟಿನಲ್ಲಿ ಸೇರಿಸಿದ್ದೇವೆ. ಆ ಮುಖ್ಯ ಉಲ್ಲೇಖ ಸಮಾಸದಲ್ಲಿ ಪರಪದವಾಗಿ ಬಂದಾಗ ಅಂತಹ ಸಮಾಸ ಪದಗಳನ್ನೆಲ್ಲ ಒಟ್ಟು ಸೇರಿಸಿ vide.ಎಂಬ ಚಿಹ್ನೆ ಹಾಕಿ ಅದರ ಮುಂದೆ ಕೊಟ್ಟಿದ್ದೇವೆ (ನೋಡಿ : ಆಟ, ಅಡ್ಡಿಗೆ್ ಅಣ್ಣೆ, ಇಲ್ಲ್, ಆನೆ್ ಇತ್ಯಾದಿ.) ಸಮಾಸ ರೂಪವನ್ನು ಅಥವಾ ಪ್ರತ್ಯಯಯುಕ್ತ ಪದವನ್ನು ಮುಖ್ಯ ಉಲ್ಲೇಖವಾಗಿ ಕೊಟ್ಟಾಗ ಅವುಗಳನ್ನು ವಿಂಗಡಿಸಿ ಧನಚಿಹ್ನೆ + ಕೊಟ್ಟು ಉಲ್ಲೇಖಿಸಿದ್ದೇವೆ (ನೋಡಿ : ಅಡ್ಯರ, ಅರ್ತ್ನಿರ್, ಇರ್ಮೆನ್‌ದಡ್ಯೆ ಇತ್ಯಾದಿ). ಹೀಗೆ ಒಂದು ಭಾಷೆಯ ವ್ಯಾಕರಣ ಹಾಗೂ ಪ್ರಯೋಗಗಳ ಬಗ್ಗೆ ಇಷ್ಟು ವಿಸ್ತಾರವಾಗಿ ಮಾಹಿತಿಗಳನ್ನು ನೀಡುವ ನಿಘಂಟು ಭಾರತದ ಇತರ ಭಾಷೆಗಳಲ್ಲಿ ಮೂಡಿಬಂದುದು ಕಾಣುವುದಿಲ್ಲ. ಈ ದೃಷ್ಟಿಯಿಂದಲೂ ನಾವು ಅನುಸರಿಸಿದ ಸೂತ್ರಗಳು ಭಾರತದ ಇತರ ಭಾಷೆಗಳಲ್ಲಿನ ನಿಘಂಟು ನಿರ್ಮಾಪಕರಿಗೆ ಸಾಕಷ್ಟು ಮಾರ್ಗದರ್ಶನ ನೀಡಬಹುದು ಎಂದು ನಮ್ಮ ಅಭಿಪ್ರಾಯ.

ಸಮಾನಾರ್ಥಕ ಪದಗಳನ್ನು ಗುರುತಿಸಿ ದಾಖಲಿಸುವುದು ಈ ನಿಘಂಟಿನ ಇನ್ನೊಂದು ವೈಶಿಷ್ಟ್ಯ. ಉದಾ ಆಸರ್ ಪದ ಉಲ್ಲೇಖಿಸಿ ಅದರ ಮುಂದೆ cf. ಚಿಹ್ನೆ ಹಾಕಿ ಅಂಗತ್ನೆ್, ಬಾಜೆಲ್, ತುಶೆ್ ಇತ್ಯಾದಿಗಳನ್ನು ನಮೂದಿಸುವುದು. ಮೂಲ ಪದಗಳಿಗೆ ಮಾತ್ರವಲ್ಲದೆ ಪ್ರತ್ಯಯಗಳನ್ನು ಉಲ್ಲೇಖಿಸುವಾಗಲೂ ಈ ಸೂತ್ರವನ್ನು ಅನುಸರಿಸಿದ್ದೇವೆ. ಸಮಾನಾರ್ಥಕವಾಗಿರದಿದ್ದರೂ ಆ ಶಬ್ದದೊಂದಿಗೆ ಹೋಲಿಸಬಹುದಾದ ಶಬ್ದಗಳನ್ನು q.v. ಎಂಬ ಚಿಹ್ನೆ ಹಾಕಿ ಚೌಕ ಕಂಸದೊಳಗೆ ಕೊಟ್ಟಿದ್ದೇವೆ. ಉದಾ : ಅಗೆಲ್ ಶಬ್ದಕ್ಕೆ ಅರ್ಥ ಬರುವಾಗ ಪಸಾರ್ನೆ್, ಇಡೆ್ ಇತ್ಯಾದಿ. ಎಲ್ಲವೂ ದೈವ ದೇವರುಗಳಿಗೆ ಅರ್ಪಿಸುವ ಆಹಾರವಾದರೂ ಅವುಗಳಲ್ಲಿ ವ್ಯತ್ಯಾಸವಿದೆ. ಆದರೂ ಪರಸ್ಪರ ಹೋಲಿಕೆಯಿದೆ. ಅಂತೆಯೇ ಭೂತಕಾಲದ ನಿಷೇದ ಪ್ರತ್ಯಯ – ಇಜ್ ಮತ್ತು ವರ್ತಮಾನ ಕಾಲದ ನಿಷೇಧ ಪ್ರತ್ಯಯ – ಉಜ್. ಹೀಗೆ ಸಮಾನಾರ್ಥಕ ಪದಗಳನ್ನೂ ಹೋಲಿಸಬಹುದಾದ ಉಲ್ಲೇಖಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಕೊಟ್ಟಿದ್ದೇವೆ. ಶಬ್ದಾರ್ಥಗಳ ಅಧ್ಯಯನದ ದೃಷ್ಟಿಯಿಂದ ಇಂತಹ ಮಹತ್ವದ ಮಾಹಿತಿಗಳನ್ನು ನೀಡುವ ನಿಘಂಟುಗಳು ಅತಿ ವಿರಳ.

ಪದಗಳ ಉಚ್ಚಾರಣೆಯನ್ನು ತಿಳಿಸಲು ಅಥವಾ ಆ ಭಾಷೆಯ ಲಿಪಿ ತಿಳಿಯದವರ ಉಪಯೋಗಕ್ಕಾಗಿ ಹಾಗೂ ಅಂತಾರಾಷ್ಟ್ರೀಯ ನೆಲೆಯ ವಿದ್ವಾಂಸರುಗಳ, ಸಂಶೋಧಕರುಗಳ ಅವಗಾಹನೆಗಾಗಿ ಪರಿಷ್ಕೃತ ರೋಮನ್ ಲಿಪಿ ಅಥವಾ ಅಂತಾರಾಷ್ಟ್ರೀಯ ಧ್ವನಿ ಲಿಪಿಯಲ್ಲಿ ಪದಗಳನ್ನು ಉಲ್ಲೇಖಿಸಿರುವುದು ಕೆಲವು ನಿಘಂಟುಗಳಲ್ಲಿ ಕಂಡುಬರುತ್ತದೆ. ಆದರೆ ಇಲ್ಲಿ ನಾವು ಮುಖ್ಯ ಉಲ್ಲೇಖಗಳನ್ನು ಮಾತ್ರವಲ್ಲದೆ ಉಪ ಉಲ್ಲೇಖಗಳನ್ನೂ, ಸಾಧಿತ ಪದಗಳನ್ನೂ, ಸಾಹಿತ್ಯ, ಪಾಡ್ದನ ಮುಂತಾದವುಗಳಿಂದ ತೆಗೆದ ಪ್ರಯೋಗಗಳನ್ನೂ, ಗಾದೆ ನುಡಿಗಟ್ಟುಗಳನ್ನು ಕನ್ನಡ ಲಿಪಿಯೊಂದಿಗೆ ಪರಿಷ್ಕೃತ ರೋಮನ್ ಲಿಪಿಯಲ್ಲಿ ನಮೂದಿಸಿ ಪ್ರಪಂಚದಾದ್ಯಂತ ವಿದ್ವಾಂಸರುಗಳ ತೌಲನಿಕ ಅಧ್ಯಯನಕ್ಕಾಗಿ ತುಳುವಿನ ಪದಗಳನ್ನೂ ಪ್ರಯೋಗಗಳನ್ನೂ ಬಳಸಲಿಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಅರ್ಥಗಳನ್ನು ವಿವರಿಸುವಾಗ ಆ ಪದದ ಸಾಮಾನ್ಯ ಅರ್ಥ, ವಿಶೇಷಾರ್ಥ, ಆಲಂಕಾರಿಕ ಅರ್ಥ, ನೀಚಾರ್ಥ, ಗೂಢಾರ್ಥ ಮುಂತಾದವುಗಳನ್ನೆಲ್ಲ ವಿವರಿಸುವ ಪ್ರಯತ್ನ ಮಾಡಿದ್ದೇವೆ. ಉದಾಹರಣೆಗೆ ಆ, ಅಂಡೆ್, ಅಳಾ ಮುಂತಾದ ಪದಗಳ ವಿವಿಧ ಅರ್ಥಗಳನ್ನೂ, ಅಟ್ಟೆ್, ಆ, ಆರ್, ಆಳ್, ಅರಿ ಮುಂತಾದ ಪದಗಳ ವಿವಿಧ ಸಮಾನೋಚ್ಚಾರಣ ರೂಪಗಳ ಉಲ್ಲೇಖಗಳನ್ನೂ ನೋಡಬಹುದು. ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ ವೈಶಿಷ್ಟ್ಯಗಳಿಗೆ ಸಂಬಂಧಿಸಿದ ಪದಗಳ, ವೃತ್ತಿ ಕಸುಬುಗಳಿಗೆ ಸಂಬಂಧಿಸಿದ ಪದಗಳ ವಿವರಣೆಗಳನ್ನು ಕೊಡುವಾಗ ವಿಶ್ವಕೋಶದ ಮಾದರಿಯಲ್ಲಿ ಅರ್ಥವಿವರಣೆ ಕೊಡಲಿಕ್ಕೆ ಪ್ರಯತ್ನಿಸಿದ್ದೇವೆ. ಆಟಿ (ಕರ್ಕಾಟಕ ಮಾಸ) ಎಂಬ ಪದದ ಅಡಿಯಲ್ಲಿ ಬರುವ ಆಟಿದ ಪುಣ್ಣಮೆ, ಆಟಿದ ಅಗೆಲ್, ಆಟಿಕಳಂಜ, ಆಟಿ ಕುಲ್ಲುನಿ ಎಂಬ ಉಪ ಉಲ್ಲೇಖಗಳ ಅರ್ಥ ಬರೆಯುವಾಗ ಆಯಾ ಸಂದರ್ಭಗಳ ಆಚರಣೆಗಳ ವಿವರ ನೀಡಿದ್ದೇವೆ. ಅರಿ ಎಂಬ ಪದದ ಉಲ್ಲೇಖಗಳಾಗಿ ಉಲ್ಲೇಖಿಸಿದ ಅರಿಕುರ್ಕುನಿ, ಅರಿಪಣವು, ಅರಿಪಣವು, ಅರಿಪಾರಾವುನಿ, ಅರಿತ್ತ ಬಿರು ಮುಂತಾದ ಪದಗಳನ್ನೂ, ಅಮೆ ಎಂಬ ಪದ ಉಪ ಉಲ್ಲೇಖಗಳಾದ ಅಮೆ‌್ಕತ್ತಿ, ಅಮೆ್ಕ್ಕಲೆ್, ಅಮೆ್ಚಟ್ಟ್, ಅಮೆ್ನೀರ್, ಅಮೆ್ಮೂರಿ ಮುಂತಾದ ಅನೇಕ ಉಪಉಲ್ಲೇಖಗಳನ್ನೂ ನೋಡಬಹುದು. ಸಸ್ಯಗಳ ಹೆಸರುಗಳನ್ನು ಉಲ್ಲೇಖಿಸುವಾಗ ತಿನ್ನುವ ಪದಾರ್ಥವಾಗಿ, ಕೃಷಿ ಕಸುಬುಗಳ ಸಾಧನವಾಗಿ, ಔಷಧೀಯ ಮೂಲಿಕೆಯಾಗಿ ಜನಪದ ಆರಾಧನೆಯ ಸಾಧನವಾಗಿ ಅವುಗಳ ಉಪಯೋಗವನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ. ಉದಾ: ಇಟ್ಟೆಯಿ : “ಇದರ ಚಿಗುರನ್ನು ಜೀರಿಗೆಯೊಂದಿಗೆ ಅರೆದು ಸೇವಿಸಿದರೆ ಹೊಟ್ಟೆನೋವು ಶಮನನವಾಗುತ್ತದೆ. ಬತ್ತದ ಬೀಜವನ್ನು ಮೊಳಕೆ ಬರಿಸುವಾಗ ಇದರ ಎಲೆಗಳನ್ನು ಶಾಖಕ್ಕಾಗಿ ಇಟ್ಟು ಕಟ್ಟುತ್ತಾರೆ. ಕದಿರುಕಟ್ಟಿ ಮನೆ ತುಂಬಿಸುವಾಗ ಬತ್ತದ ತೆನೆ, ಮಾವು ಹಲಸುಗಳ ಚಿಗುರೆಲೆ ಮುಂತಾದವುಗಳನ್ನು ಇದರಲ್ಲಿ ಸುತ್ತಿ ಮನೆ, ಕಂಬ, ಫಲ ಬಿಡುವ ಮರ ಮೊದಲಾದವುಗಳಿಗೆ ಕಟ್ಟುತ್ತಾರೆ”. ಹಾಗೆಯೇ ನೋಡಿ ಈಂದ್: “ಕೆಲವು ಭೂತಗಳ ಆಕರ್ಷಣೆಗೆ ಇದರ ಹೂಗಳನ್ನು ಬಳಸುತ್ತಾರೆ. ಕಣ್ಣಿಯು ಹಗ್ಗವಾಗಿಯೂ ಕಾಂಡವು ನೀರನ್ನು ಹರಿಸುವ ಕಾಲುವೆಯಂತಹ ದಂಬೆಯಾಗಿಯೂ ಉಪಯುಕ್ತ. ಹೆರಿಗೆಯ ಬಳಿಕ ಮಾಸನ್ನು ಹೊರಬರಿಸಲು ಇದರ ಸೊಪ್ಪಿನ ರಸವನ್ನು ಕೊಡುತ್ತಾರೆ.” ಆಮೇಲೆ ಈ ಮರಕ್ಕೆ ಸಂಬಂಧಪಟ್ಟ ಗಾದೆಗಳನ್ನೂ, ಒಗಟುಗಳನ್ನೂ, ನಂಬಿಕೆಗಳನ್ನೂ ಕೊಡಲಾಗಿದೆ. ಆಯಾ ಮರಗಳ ಸಸ್ಯಶಾಸ್ತ್ರೀಯ ಪಾರಿಭಾಷಿಕ ಪದಗಳನ್ನೂ ಇಲ್ಲಿ ಕೊಡುತ್ತೇವೆ. ಹೀಗೆ ವಿಶ್ವಕೋಶದ ಮಾದರಿಯಲ್ಲಿ ರಚಿಸಿದ ಈ ನಿಘಂಟು ಇತರ ಭಾರತೀಯ ಭಾಷೆಗಳಲ್ಲಿ ರಚಿಸಬೇಕಾದ ನಿಘಂಟುಗಳಿಗೆ ಮಾರ್ಗದರ್ಶಕವಾಗಬಹುದು. ಅರ್ಥನಿರೂಪಣೆಯಲ್ಲಿನ ಖಚಿತತೆಗಾಗಿ ಅಂದ, ಅಂದೆ, ಅಲ, ಅಗರ್, ಅರ್ಕಿಲ್, ಈಡ್, ಅವು ಮುಂತಾದ ಉಲ್ಲೇಖಗಳನ್ನು ನೋಡಬಹುದು.

ದ್ರಾವಿಡ ಮೂಲದ ಪದಗಳಿಗೆ ಇತರ ದ್ರಾವಿಡ ಭಾಷೆಗಳ ಜ್ಞಾತಿಪದಗಳನ್ನು ಕೊಡುವಾಗಲೂ ಬರೋ ಮತ್ತು ಎಮಿನೋ ಅವರುಗಳ ದ್ರಾವಿಡಭಾಷಾ ಜ್ಞಾತಿ ಪದಕೋಶ ಮಾತ್ರವಲ್ಲದೆ ವಿವಿಧ ಭಾಷೆಗಳ ಹಲವಾರು ನಿಘಂಟುಗಳನ್ನು ಪರಿಶೀಲಿಸಿದ್ದೇವೆ. ಸಂಸ್ಕೃತ, ಅರಾಬಿಕ್, ಪರ್ಷಿಯನ್, ಪೋರ್ಚುಗೀಸ್, ಮರಾಠೀ, ಹಿಂದೀ, ಇಂಗ್ಲಿಷ್ ಮುಂತಾದ ಭಾಷೆಗಳಿಂದ ಎರವಲು ಪಡೆದ ಪದವಾದರೆ ಈ ಪದಗಳ ಮೂಲರೂಪವನ್ನು ಕೊಟ್ಟಿದ್ದೇವೆ. ಹೀಗೆ ತುಳು ಭಾಷೆಯ ಪ್ರತಿಯೊಂದು ಶಬ್ದಗಳ, ಮೂಲವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ.

ಮುಖ್ಯ ಉಲ್ಲೇಖಗಳ ಉಪ ಉಲ್ಲೇಖಗಳಾಗಿ ಸಾಧಿತ ಪದ, ಸಮಾಸ ಪದಗಳು ಮಾತ್ರವಲ್ಲ ಆ ಪದದಿಂದ ಸಾಧಿತವಾದ ವಾಗ್ರೂಢಿ, ನುಡಿಗಟ್ಟುಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಕೊಟ್ಟಿದ್ದೇವೆ. ಉದಾಹರಣೆಗೆ ಅಡಿ ಎಂಬ ಪದದ ಉಪ ಉಲ್ಲೇಖವಾಗಿ ಅಡಿ ಅಂತರ, ಅಡಿಕಣ್ಣಿ, ಅಡಿತ್ತಡ್ಯ, ಅಡಿಪಾಯ, ಅಡಿಬಂಜಿ ಮುಂತಾದ ಸಮಾಸ ರೂಪಗಳನ್ನು ಮಾತ್ರವಲ್ಲದೆ ಮಡಿಮುದೆಲ್ ತಪ್ಪುನಿ, ಅಡಿಕಂತ ಪಾಡುನಿ, ಅಡಿಪೂಜುನಿ ಮುಂತಾದ ವಾಗ್ರೂಢಿ, ನುಡಿಗಟ್ಟುಗಳನ್ನೂ ಕೊಟ್ಟು ‘ಭಾಷೆಯಲ್ಲಿ ಬಳಕೆಯಲ್ಲಿರುವ ವಾಕ್ಯಾಂಶಗಳನ್ನೂಶೈಲಿಯ ವೈಶಿಷ್ಟ್ಯಗಳನ್ನೂ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ಅಡಿ ಎಂಬ ಉಲ್ಲೇಖದ ಅಡಿಯಲ್ಲಿ ಐವತ್ತಕ್ಕೂ ಹೆಚ್ಚು ಉಪ ಉಲ್ಲೇಖಗಳನ್ನು ಕಾಣಬಹುದು. ಇದೇ ರೀತಿ ಅಟ್ಟೆ್. ಅಡ್ಡ, ಅಮೆ, ಅರಿ, ಆಟಿ, ಅಂಡೆ್ ಮುಂತಾದ ಉಲ್ಲೇಖಗಳ ಉಪ ಉಲ್ಲೇಖಗಳನ್ನು ಪ್ರಾರಂಭಿಕ ಪುಟಗಳಲ್ಲಿಯೇ ಗಮನಿಸಬಹುದು.

ಹೀಗೆ ನಿಘಂಟು ಸರ್ವಸಂಗ್ರಾಹಕವಾಗಿದ್ದು ತುಳುಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಆಕರ ಗ್ರಂಥವಾಗಬೇಕು ಎಂಬ ಮಹದಾಸೆಯಿಂದ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿದ್ದೇವೆ. ನಡೆಯುವವನು ಎಡವುತ್ತಾನೆ. ನಾವೂ ಅಲ್ಲಲ್ಲಿ ಎಡವಿಬಿದ್ದಿರಬಹುದು. ಸಹೃದಯರಾದ ತುಳು ಅಭಿಮಾನಿಗಳೂ ಭಾಷಾ ವಿದ್ವಾಂಸರೂ ಸಹಾನುಭೂತಿಯಿಂದ ಪರಿವೀಕ್ಷಿಸಿ ತಮ್ಮ ಅನಿಸಿಕೆಗಳನ್ನು ತಿಳಿಸಿದರೆ ನಮ್ಮನ್ನು ನಾವು ತಿದ್ದಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ.

ನಾವು ಯೋಜನೆ ಹಾಕಿಕೊಂಡಾಗ ೧೯೮೫ರ ಹೊತ್ತಿಗೆ ಈ ಕಾರ್ಯ ಮುಗಿಯಬೇಕೆಂದು ಸಂಕಲ್ಪಿಸಿದ್ದೆವು. ನಾವು ಕ್ಷೇತ್ರಕಾರ್ಯ ಮಾಡಿದಷ್ಟು ಅದರ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಗುತ್ತಿದೆ. ತುಳುಭಾಷೆಗಳ ವಿವಿಧ ಉಪಭಾಷೆಗಳ, ಸಾಂಸ್ಕೃತಿಕ – ಸಾಮಾಜಿಕ ಆಚರಣೆಗಳ, ವೃತ್ತಿ ಕಸುಬುಗಳ ಶಬ್ದಸಂಪತ್ತು ಎಷ್ಟರಮಟ್ಟಿಗೆ ಇದೆ ಎಂಬ ಬಗ್ಗೆ ಈವರೆಗೆ ಯಾವ ವಿದ್ವಾಂಸರೂ ಅಂದಾಜು ಮಾಡಲಿಲ್ಲ. ಇಲ್ಲಿನ ಬೇಸಾಯ ಹಾಗೂ ತೋಟಗಾರಿಕೆ, ಮೀನುಗಾರಿಕೆ, ಬೇಟೆ, ಪ್ರಾಣಿ, ಸಸ್ಯವರ್ಗ, ಭೂತಾರಾಧನೆ ಯಂತಹ ಆಚರಣೆಗಳು ಇವುಗಳಲ್ಲಿ ಬಳಕೆಯಲ್ಲಿರುವ ಸಾವಿರಾರು ಪದಗಳ ಪಟ್ಟಿ ನಾವು ಸಂಗ್ರಹ ಮಾಡುತ್ತಿರುವಂತೆ ಹೆಚ್ಚುತ್ತಾ ಹೋಗುತ್ತಿದೆ. ಜನಪದ ಸಾಹಿತ್ಯವಾದ ಪಾಡ್ದನ ಹಾಗೂ ಅದರಲ್ಲಿನ ಭಾಷಾಸಂಪತ್ತು ನಮ್ಮ ಎಣಿಕೆಯಿಂದ ಎಷ್ಟೋ ಪಾಲು ಮೀರಿದೆ. ಹೊಸತಾಗಿ ಪ್ರಕಟವಾದ ಪ್ರಾಚೀನ ಕಾವ್ಯಗಳಾದ ‘ಶ್ರೀ ಭಾಗವತೊ’ ಹಾಗೂ ‘ಕಾವೇರಿ’, ಅಂತೆಯೇ ಆಧುನಿಕ ಕಾವ್ಯ ‘ಮಂದಾರ ರಾಮಾಯಣ’ ಮುಂತಾದ ಕೃತಿಗಳು ಸಾಕಷ್ಟು ಶಬ್ದರಾಶಿಯನ್ನು ಒದಗಿಸಿವೆ. ನಾವು ಯೋಜನೆ ಪ್ರಾರಂಭಿಸಿದಾಗ ತುಳುನಾಡಿನ ವಿವಿಧ ಪ್ರದೇಶಗಳಲ್ಲಿರುವ ನಮ್ಮ ಪ್ರತಿನಿಧಿಗಳಾದ ಸ್ಥಳೀಯ ವಿದ್ವಾಂಸರು ತಮ್ಮ ಬಿಡುವಿನ ವೇಳೆಯಲ್ಲಿ ಕ್ಷೇತ್ರಕಾರ್ಯ ನಡೆಸಿ ನಮ್ಮೊಡನೆ ಸಹಕರಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಶಾಲಾ ಕಾಲೇಜುಗಳ ಬೋಧನ ಕೆಲಸದ ಬಾಹುಲ್ಯದಿಂದಲೂ ರಜೆಯ ಸಮಯದಲ್ಲಿಯೂ ಉತ್ತರ ಪತ್ರಿಕೆಗಳ ಮೌಲ್ಯಾಂಕನವೇ ಮೊದಲಾದ ಕಾರ್ಯಭಾರಗಳಿಂದಲೂ ಅವರುಗಳಿಗೆ ಬಿಡುವು ಸಿಕ್ಕಿಲ್ಲ. ಹೀಗಾಗಿ ನಿಘಂಟು ಯೋಜನೆಯ ಇಬ್ಬರು ಮೂವರು ಸಂಶೋಧಕರಿಂದಲೇ ಎಲ್ಲ ಕ್ಷೇತ್ರಕಾರ್ಯಗಳೂ ನಡೆಯಬೇಕಾಯಿತು. ಯೋಜನೆಯ ಹುದ್ದೆಗಳ ತಾತ್ಕಾಲಿಕ ಹುದ್ದೆಗಳಾಗಿ ಖಾಯಂ ಹುದ್ದೆಗಳಲ್ಲದಿದ್ದುದರಿಂದಲೂ, ನಮ್ಮ ವೇತಕ್ಕೆ ತುಟ್ಟಿಭತ್ತೆಯಾಗಲೀ, ವಾರ್ಷಿಕ ಹೆಚ್ಚಳವಾಗಲಿ ಇಲ್ಲದಿದ್ದುದರಿಂದಲೂ ನಮ್ಮ ಜಾಹೀರಾತುಗಳಿಗೆ ಸರಿಯಾದ ಸಂಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಲಿಲ್ಲ. ಹೀಗಾಗಿ ಯೋಜನೆಯ ಕಾರ್ಯ ವ್ಯಾಪ್ತಿ ಹೆಚ್ಚಾಗಿ ಸಿಬ್ಬಂದಿವರ್ಗ ಕಡಿಮೆಯಾಗುತ್ತಿದ್ದುದರಿಂದ ಯೋಜನೆಯನ್ನು ಮುಂದುವರಿಸುವುದು ಅನಿವಾರ್ಯವಾಗಿದೆ.

ನಿಘಂಟು ಯೋಜನೆ ಕಾರ್ಯರೂಪಕ್ಕೆ ಬರಲು ಹಲವಾರು ಮಹನೀಯರು ಶ್ರಮಿಸಿದ್ದಾರೆ. ನಮಗೆ ಅನುದಾನ ನೀಡುತ್ತಿರುವ ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದ ಶ್ರೀ ಸುಬ್ಬಯ್ಯ ಶೆಟ್ಟರು, ಶ್ರೀ ವೀರಪ್ಪ ಮೊಯಿಲಿಗಳು ಹಾಗೂ ಶ್ರೀ ಬಿ. ಶಂಕರರಾಯರು ಇದಕ್ಕೆ ಪ್ರೇರಣೆ ನೀಡಿದ್ದಾರೆ. ಈಗಿನ ಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಜೀವರಾಜ ಆಳ್ವ ಹಾಗೂ ಶ್ರೀ ಎಂ.ಪಿ.ಪ್ರಕಾಶ್ ನಮಗೆ ಅಭಯಹಸ್ತ ನೀಡಿದ್ದಾರೆ. ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ನಿರ್ದೇಶಕರೂ, ತುಳುಭಾಷೆ ಹಾಗೂ ಸಂಸ್ಕೃತಿಯ ಪುನರುಜ್ಜೀವನದ ಮಹತ್ವವನ್ನರಿತು ನಮಗೆ ಬೆಂಬಲವಿತ್ತಿದ್ದಾರೆ. ಎಂ.ಜಿ.ಎಂ.ಕಾಲೇಜಿನ ಧರ್ಮದರ್ಶಿ ಮಂಡಳಿ, ಮಣಿಪಾಲದ ಎಕಾಡೆಮಿ ಆಫ್ ಜನರಲ್ ಎಜುಕೇಶನ್ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನಮ್ಮ ಆಪದ್ಭಾಂಧವರಾಗಿದ್ದಾರೆ. ಸಂಪಾದಕೀಯ ಸಲಹಾ ಮಂಡಳಿಯ ಸದಸ್ಯರು ನಾವು ಕರೆದಾಗಲೆಲ್ಲ ಬಂದು ನಮ್ಮ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರಚನಾತ್ಮಕ ಸಲಹೆಗಳನ್ನು ಕೊಟ್ಟಿದ್ದಾರೆ. ತುಳುನಾಡಿನ ಬೇರೆ ಬೇರೆ ಕೇಂದ್ರಗಳಲ್ಲಿರುವ ನಮ್ಮ ಪ್ರತಿನಿಧಿಗಳಾದ ವಿದ್ವಾಂಸರು ನಾವು ಬರೆದು ಕೇಳಿದಾಗಲೆಲ್ಲ ತಮ್ಮ ಸಹಕಾರ ನೀಡಿ ನಮ್ಮ ಸಂಶೋಧಕರ ಕ್ಷೇತ್ರಕಾರ್ಯಗಳಿಗೆ ಸಹಾಯ ಮಾಡುವುದು, ತಮಗೆ ತಿಳಿದ ಮಾಹಿತಿಗಳನ್ನು ಕಳಿಸಿ ಕೊಡುವುದು ಮುಂತಾದ ಹಲವು ರೀತಿಯ ಸಹಕಾರಗಳನ್ನು ನೀಡಿದ್ದಾರೆ. ತಮ್ಮ ಅಧ್ಯಾಪನ ಕಾರ್ಯದಿಂದಾಗಿ ಹೆಚ್ಚಿನ ಕ್ಷೇತ್ರಕಾರ್ಯಗಳನ್ನು ನಡೆಸಲಿಕ್ಕೆ ಅವರುಗಳಿಗೆ ಸಮಯಾವಕಾಶ ಸಿಗದಿದ್ದರೂ ನಮ್ಮ ಪ್ರತಿನಿಧಿಗಳಾದ ವಿದ್ವಾಂಸರು ನಾವು ಬರೆದು ಕೇಳಿದಾಗಲೆಲ್ಲ ತಮ್ಮ ಸಹಕಾರ ನೀಡಿ ನಮ್ಮ ಸಂಶೋಧಕರ ಕ್ಷೇತ್ರಕಾರ್ಯಗಳಿಗೆ ಸಹಾಯ ಮಾಡುವುದು, ತಮಗೆ ತಿಳಿದ ಮಾಹಿತಿಗಳನ್ನು ಕಳಿಸಿ ಕೊಡುವುದು ಮುಂತಾದ ಹಲವು ರೀತಿಯ ಸಹಕಾರಗಳನ್ನು ನೀಡಿದ್ದಾರೆ. ತಮ್ಮ ಅಧ್ಯಾಪನ ಕಾರ್ಯದಿಂದಾಗಿ ಹೆಚ್ಚಿನ ಕ್ಷೇತ್ರಕಾರ್ಯಗಳನ್ನು ನಡೆಸಲಿಕ್ಕೆ ಅವರುಗಳಿಗೆ ಸಮಯಾವಕಾಶ ಸಿಕ್ಕಿದಿದ್ದರೂ ನಮ್ಮ ಪ್ರತಿನಿಧಿಗಳಾಗಿ ಹಾಗೂ ಹಿತೈಷಿಗಳಾಗಿ ತಮ್ಮಿಂದಾದಷ್ಟು ಸೇವೆ ಸಲ್ಲಿಸಿದ್ದಾರೆ. ನಮ್ಮ ಸಂಶೋಧಕರೂ ಕ್ಷೇತ್ರಕಾರ್ಯಗಳಿಗೆ ಹಳ್ಳಿಗಳಿಗೆ ಹೋದಾಗ ಅಲ್ಲಿನ ಸಮಾಜ ಸೇವಕರು, ಗ್ರಾಮ ಪಂಚಾಯತ್ ಕಾರ್ಯಕರ್ತರು, ಊರಿನ ಮುಖಂಡರು, ವೈದ್ಯರು, ಬ್ಯಾಂಕ್ ಅಧಿಕಾರಿಗಳು; ಶಾಲಾ ಅಧ್ಯಾಪಕರು, ದೇವಸ್ಥಾನ, ಮಠ, ಭೂತಾಲಯದ ಆಡಳಿತ ವರ್ಗದವರು ಅವರಿಗೆ ಮಾರ್ಗದರ್ಶನ ಮಾಡಿದ್ದಾರೆ. ಹಳ್ಳಿಗರ ಸಂದರ್ಶನಕ್ಕೆ ನೆರವಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಹಳ್ಳಿಗಾಡಿನ ಆ ಮುಗ್ಧ ಸರಳ ನಿಷ್ಕಲ್ಮಷ ಹೃದಯದ, ಭೌತಿಕವಾಗಿ ಬಡವರಾಗಿದ್ದು, ಸಾಂಸ್ಕೃತಿಕ ಶ್ರೀಮಂತರಾಗಿರುವ ಜನಸಾಮಾನ್ಯರ ಸಹಕಾರ, ಬಿಚ್ಚು ಮನಸ್ಸಿನಿಂದ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿದ ರೀತಿಗಳು, ಹಾಡಿದ ಪಾಡ್ದನಗಳು, ಆಡಿದ ಕುಣಿತಗಳು, ತೋರಿದ ಆಚರಣೆಗಳು, ಮಾಡಿ ತೋರಿಸಿದ ವೃತ್ತಿ ಕಸುಬುಗಳ ಕ್ರಮಗಳು ಇವೇ ನಮ್ಮ ಸಾಧನೆಗೆ ಮುಖ್ಯ ಆಧಾರಗಳು. ಈ ತುಳುವ ಜಾನಪದ ಸಮಾಜ ತೋರಿದ ಉತ್ಸಾಹಪೂರ್ಣ ಹಾಗೂ ಉಲ್ಲಾಸಮಯ ಸಹಕಾರಕ್ಕೆ ಯೋಜನೆ ಚಿರಋಣಿಯಾಗಿರುತ್ತದೆ.

ವಿ.ಸೂ. : ತುಳುವಿನ ಉಪಭಾಷಾ ಕ್ಷೇತ್ರಗಳ ನಿರ್ಧಾರ, ತುಳುವಿನ ವಿಶಿಷ್ಟ ಧ್ವನಿಗಳಿಗೆ ನಾವು ಬಳಸಿಕೊಂಡ ಲಿಪಿಚಿಹ್ನೆಗಳು ಹಾಗೂ ನಿಘಂಟು ರಚನೆಯಲ್ಲಿ ನಾವು ಅನುಸರಿಸಿದ ಸೂತ್ರಗಳು ಮುಂತಾದುವುಗಳನ್ನು Methodology ಎಂಬ ವಿಭಾಗದಲ್ಲಿ ಕಾಣಬಹುದು.

ನಿಘಂಟಿನ ಉಲ್ಲೇಖಗಳ ರಚನಾಕ್ರಮ

ಈ ನಿಘಂಟಿನಲ್ಲಿ ನಮೂದಿಸಲ್ಪಟ್ಟ ತುಳುವಿನ ಪ್ರತಿಯೊಂದು ಮುಖ್ಯ ಉಲ್ಲೇಖ, ಉಪ ಉಲ್ಲೇಖ, ಉದಾಹರಣೆ, ನಿದರ್ಶನ ಮೊದಲಾದವುಗಳನ್ನು ಕ್ರಮವಾಗಿ ಕನ್ನಡ ಮತ್ತು ಪರಿಷ್ಕೃತ ಅಂತಾರಾಷ್ಟ್ರೀಯ ಧ್ವನಿಲಿಪಿಯಲ್ಲಿ (ಪರಿಷ್ಕೃತ ರೋಮನ್ ಲಿಪಿಯಲ್ಲಿ) ಕೊಡಲಾಗಿದೆ. ಕನ್ನಡ ಲಿಪಿಯಲ್ಲಿ ಕೊಡುವಾಗ ಮುಖ್ಯ ಉಲ್ಲೇಖಗಳನ್ನು ೧೧ ಪಾಯಿಂಟ್ ದಪ್ಪಕ್ಷರಗಳಲ್ಲಿಯೂ ಉಳಿದ ಎಲ್ಲಾ ತುಳು ಉಲ್ಲೇಖಗಳನ್ನು ೧೧ ಪಾಯಿಂಟ್ ದಪ್ಪಕ್ಷರಗಳಲ್ಲಿಯೂ ಕೊಟ್ಟಿದೆ. ಧ್ವನಿಲಿಪಿಯಲ್ಲಿ ಬರೆಯುವಾಗ ತುಳುವಿನ ಯಾವತ್ತೂ ಉಲ್ಲೇಖಗಳನ್ನು ೯ ಪಾಯಿಂಟ್ ಓರೆ ಅಕ್ಷರಗಳಲ್ಲಿ ನಮೂದಿಸಲಾಗಿದೆ. ಕನ್ನಡದಲ್ಲಿ ಅರ್ಥ, ವಿವರಣೆಗಳನ್ನು ಕೊಡುವಾಗ ೧೧ ಪಾಯಿಂಟ್ ತೆಳು ಅಕ್ಷರಗಳಲ್ಲೂ ಇಂಗ್ಲಿಷಿನಲ್ಲಿ ಅರ್ಥ ವಿವರಣೆಗಳನ್ನು ಕೊಡುವಾಗ ೯ ಪಾಯಿಂಟ್ ತೆಳು ಅಕ್ಷರದಲ್ಲಿಯೂ ಬರೆಯಲಾಗಿದೆ.

ಒಂದೇ ರೀತಿಯ ರೂಪ ಹಾಗೂ ಉಚ್ಚಾರವಿದ್ದು ಅರ್ಥದಲ್ಲಿ ಸಂಪೂರ್ಣ ವ್ಯತ್ಯಾಸವಿದ್ದಾಗ ಅಂತಹ ಉಲ್ಲೇಖಗಳನ್ನು ೧,೨,೩…ಇತ್ಯಾದಿ ಸಂಖ್ಯೆಗಳನ್ನು ಕೊಟ್ಟು ಪ್ರತ್ಯೇಕ ಉಲ್ಲೇಖಗಳನ್ನಾಗಿ ನಮೂದಿಸಲಾಗಿದೆ.

ಉದಾ:

ಅಟ್ಟೆ್ aṭṭe n. ಆಧಾರ;ನಿಲುಗಡೆ. Support; stand.

ಅಟ್ಟೆ್ aṭṭe n. (ಬೆತ್ತ, ಬಿದಿರು ಮೊ.ಗಳ) ಗಂಟು.

The knot (as of bamboo, cane etc.)
…………………………………………
…………………………………………….

೧೪ಅಟ್ಟೆ್ aṭṭe n.: ಅಂಟೆ್ aṇṭe, pad. adj. ೧. ಓರೆಯಾದ ವಕ್ರ Bent, bandy. ೨.ಅಡ್ಡಲಾಗಿರುವ Crosswise… ಇತ್ಯಾದಿ.

ಸಂಪೂರ್ಣ ವಿಭಿನ್ನಾರ್ಥಕಗಳೆಂಬ ಕಾರಣಕ್ಕಾಗಿ ೧, ೨, ೩… ಇತ್ಯಾದಿ ಸಂಖ್ಯೆಗಳನ್ನು ಕೊಟ್ಟು ನಮೂದಿಸುವ ಮುಖ್ಯ ಉಲ್ಲೇಖಗಳಿಗೆ ಪ್ರತಿಯೊಂದಕ್ಕೂ ಒಂದೇ ರೀತಿಯ ವಿಭಿನ್ನರೂಪ (variant)ಗಳು ಕಂಡುಬಂದರೆ ಎಲ್ಲ ಮುಖ್ಯ ಉಲ್ಲೇಖಗಳಲ್ಲಿಯೂ ಅವುಗಳೆಲ್ಲವನ್ನೂ ನಮೂದಿಸದೆ ಅನುಕೂಲತೆ ಮತ್ತು ಸಂಕ್ಷಿಪ್ತತೆಗಾಗಿ ಕೆಲವು ಕಡೆ ಮೊದಲಿನ ಮುಖ್ಯ ಉಲ್ಲೇಖದಲ್ಲಿ ಮಾತ್ರ ವಿವರವಾಗಿ ನಮೂದಿಸಿ ಉಳಿದ ಕಡೆ ಮುಖ್ಯ ಉಲ್ಲೇಖವನ್ನು ಮಾತ್ರ ಬರೆದು ಅಲ್ಪವಿರಾಮ ಹಾಕಿ &c. (and connected forms)ಎಂಬ ಸಂಕೇತಾಕ್ಷರಯುಗ್ಮವನ್ನು ಹಾಕಲಾಗಿದೆ. ಉದಾ:

ಅಗಿನ / ಅಗ್ಗಿನ agina / aggina, N,: ಅಗಿನೊ / ಅಗ್ಗಿನೊ agino / aggino. S. …………..

ಅಗಿನ agina, &c. ………….

ಅಗಿನ agina, &c. …………..

ಅಗಿನ agina, &c. ………….ಇತ್ಯಾದಿ.

ಒಂದೇ ರೂಪದ ಉಲ್ಲೇಖ ಕ್ರಿಯಾಪದವಾಗಿಯೂ ನಾಮಪದವಾಗಿಯೂ ಬಂದರೆ ಸಾಮಾನ್ಯವಾಗಿ ಮೊದಲು ಕ್ರಿಯಾಪದವನ್ನು ಕೊಟ್ಟು ಬಳಿಕ ನಾಮಪದವನ್ನು ಕೊಡಲಾಗಿದೆ. ಉದಾ:

ಅಡಿಪ್ಪು adippu, S.: ಅಡಿಪು adipu, Nb. :ಅಡ್ಪು adpu, Nchtj. va. ೧. ಗುಡಿಸು. Sweep;……….

ಅಡಿಪ್ಪು adippu. n. ೧. ಗುಡಿಸುವಿಕೆ. Brooming …… ಇತ್ಯಾದಿ.

ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ರೂಪಗಳಿದ್ದು ಒಂದೇ ಪ್ರದೇಶದ ಹಾಗೂ ಒಂದೇ ವರ್ಗದ ಉಪಭಾಷೆಯಲ್ಲಿ ಅಥವಾ ಎಲ್ಲ ಉಪಭಾಷೆ ಗಳಲ್ಲಿಯೂ ಒಂದಕ್ಕಿಂತ ಹೆಚ್ಚು ರೂಪಗಳು ಕಂಡುಬಂದಾಗ ಅವುಗಳ ನಡುವೆ ಒಂದು ಮಾಲುಗೆರೆ (bar)ಯನ್ನು ಹಾಕಿ ನಮೂದಿಸಲಾಗಿದೆ. ಉದಾ:

ಅಟ್ಟಣಿಗೆ್ / ಅಟ್ಟಳಿಗೆ್ aṭṭaṇige / aṭṭaḷige, Nb. : ಅಟ್ಟಲಿಗೆ್ / ಅಟ್ಟೊಲಿಗೆ್ / ಅಟ್ಟೊಳಿಗೆ್ aṭṭaḷige / aṭṭoḷige S. …… ಇತ್ಯಾದಿ.

ಒಂದು ಪದಕ್ಕೆ ಬೇರೆ ಬೇರೆ ಆಡುನುಡಿಗಳಲ್ಲಿ ವಿಭಿನ್ನ ರೂಪಗಳು ಕಂಡುಬಂದಾಗ ಅವುಗಳಲ್ಲಿ ಒಂದು ರೂಪವನ್ನು ಮುಖ್ಯ ಉಲ್ಲೇಖವನ್ನಾಗಿ ಕೊಟ್ಟು ಅಲ್ಪ ವಿರಾಮ ಹಾಕಿ ಅದು ಪ್ರಚಲಿತವಿರುವ ಆಡುನುಡಿಯ ಸೂಚಕ ಚಿಹ್ನೆಯನ್ನು ಕೊಡಲಾಗಿದೆ. ಅನಂತರ ಕ್ರಮವಾಗಿ ಪೂರ್ಣ ವಿರಾಮ ಹಾಗೂ ಅರ್ಧ ವಿರಾಮಗಳನ್ನು ಹಾಕಿ ಆ ಉಲ್ಲೇಖದ ಉಳಿದ ರೂಪಗಳನ್ನೂ ಅದೇ ಕ್ರಮದಲ್ಲಿ ನಮೂದಿಸಲಾಗಿದೆ. ಉದಾ:

ಅಡ್ಯೆ aḍye, S. : ಅಡ್ಯೆ್ / ಅಡ್ಯೆ್ aḍye / aḍḍe, Nchtj. : ಅಡ್ಯ aḍya, Nb. …..ಇತ್ಯಾದಿ.

ಇಲ್ಲಿ ಮುಖ್ಯ ಉಲ್ಲೇಖದೊಡನಿರುವ ಅದರ ವಿಭಿನ್ನ ರೂಪಗಳನ್ನು ಅಕಾರಾದಿಕ್ರಮದಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ನಮೂದಿಸಲಾಗಿದೆ. ಆಗ ಅಲ್ಲಿ ಅವುಗಳ ಮುಂದೆ ‘see’ ಎಂಬ ಸೂಚಕವನ್ನು ಹಾಕಿ ಅದು ಉಲ್ಲೇಖಗೊಂಡ ಮುಖ್ಯ ಉಲ್ಲೇಖಗಳನ್ನು ಕೊಡಲಾಗಿದೆ. ಉದಾ :

ಅಂಕಣೊ aṅkaṇo see ಅಂಕಣ aṅkaṇa
            ಅಲಾದ alaadu see ಅಲಸ್ alasu……..ಇತ್ಯಾದಿ

ಆದರೆ 1 , 2, 3 ………… ಎಂದು ಬೇರೆ ಬೇರೆಯಾಗಿ ನಮೂದಿಸಲ್ಪಟ್ಟ ಒಂದೇ ರೂಪದ ಮುಖ್ಯ ಉಲ್ಲೇಖಗಳಿಗೆ ಒಂದೇ ರೀತಿಯ ವಿಭಿನ್ನ ರೂಪಗಳು ಇದ್ದಾಗ ಅವುಗಳನ್ನು ಅಕಾರಾದಿ ಕ್ರಮದಲ್ಲಿ ಪ್ರತಿಯೊಂದನ್ನೂ ಉಲ್ಲೇಖಿಸದೆ ಒಂದನ್ನು ಮಾತ್ರ ಮುಖ್ಯ ಉಲ್ಲೇಖವನ್ನಾಗಿ ಕೊಟ್ಟು ‘see’ ಎಂದು ಬರೆದು ನೋಡಬೇಕಾದ ಉಲ್ಲೇಖಗಳ ಸಂಖ್ಯೆಗಳನ್ನೆಲ್ಲ ಮೊದಲು ಹಾಕಿ ಅನಂತರ ಆ ಮುಖ್ಯ ಉಲ್ಲೇಖವನ್ನು ಕೊಡಲಾಗಿದೆ. ಉದಾ:

ಅಪ್ಪಾ appaa. see ೨,೪,೫ ಅಪ್ಪ appa.
ಅರಳ್ araḷu see ೧, ೨ ಅರಲ್ aralu. …….ಇತ್ಯಾದಿ.

ಆಡುನುಡಿಯ ಸೂಚಕ ಚಿಹ್ನೆಯನ್ನು ಕೊಡುವಾಗ ಪ್ರದೇಶ ಸೂಚಕ ಚಿಹ್ನೆಗಳನ್ನು ರೋಮನ್ ಲಿಪಿಯ ದೊಡ್ಡಕ್ಷರ (capital letter) ಗಳಲ್ಲಿ (ಉದಾ : N., S., SE. – ಇತ್ಯಾದಿ)ಹಾಗೂ ವರ್ಗಚೂಸಚ ಚಿಹ್ನೆಗಳನ್ನು ರೋಮನ್ ಲಿಪಿ ಸಣ್ಣ ಅಕ್ಷರ (non – capital letter) ಗಳಲ್ಲಿ (ಉದಾ: c, cht., b. -ಇತ್ಯಾದಿ) ಕೊಡಲಾಗಿದೆ. ಕೊಡಲಾದ ಉಲ್ಲೇಖಗಳು ಶ್ರೀಭಾಗವತೊ, ಕಾವೇರಿ ಮೊದಲಾದ ಕಾವ್ಯಗಳಿಂದ ಅಥವಾ ಪಾಡ್ದನ ಮೊದಲಾದ ಜನಪದ ಸಾಹಿತ್ಯದಿಂದ ಆರಿಸಿದವುಗಳಾಗಿದ್ದರೆ Bh., Kv., pad. ಮುಂತಾದ ಚಿಹ್ನೆಗಳನ್ನು ಉಪಯೋಗಿಸಲಾಗಿದೆ. ಉದಾ :

ಅಪ್ಪಿಪು appipu, Bh.
ಅೞಿಲೊ aḻelo, Kv.
ಅಸನದ ಕೋಡಿ asanada kooḍi, pad. ……..ಇತ್ಯಾದಿ.

ಉಲ್ಲೇಖವು ಶಿಷ್ಟ ಭಾಷೆಯಲ್ಲಿ ಅಥವಾ ಔಪಚಾರಿಕ ಆಡುನುಡಿಯಲ್ಲಿ (formal speech) ಮಾತ್ರ ಕಂಡುಬಂದಾಗ F. ಚಿಹ್ನೆಯಿಂದ ಸೂಚಿಸಲಾಗಿದೆ. ಉದಾ:

೧ ಅಂಬರ / ಅಂಬರೊ ambara / ambaro, F. ………ಇತ್ಯಾದಿ

ಔಪಚಾರಿಕ ಆಡುನುಡಿಯಲ್ಲಿ ಪ್ರಯೋಗವಾಗುವುದು ಮಾತ್ರವಲ್ಲದೆ ಯಾವುದಾದರೊಂದು ವಿಶಿಷ್ಟ ಆಡುನುಡಿಯ ಅನೌಪಚಾರಿಕ ಪ್ರಯೋಗದಲ್ಲಿಯೂ ಕಂಡುಬಂದಾಗ ಮೊದಲು F. ಎಂದು ಹಾಕಿ ಪೂರ್ಣವಿರಾಮವನ್ನೂ ಅಲ್ಪವಿರಾಮವನ್ನೂ ಕ್ರಮವಾಗಿ ಬರೆದು ಆ ಆಡುನುಡಿಯ (ಪ್ರದೇಶ ಅಥವಾ / ಮತ್ತು ವರ್ಗಸೂಚಕ) ಚಿಹ್ನೆಯನ್ನು ಹಾಕಲಾಗಿದೆ. ಉದಾ :

ಅರ್ಘ್ಯ / ಆರ್ಗ್ಯ arghya / argya, F. Nb.; ಅಘ್ಯೊ / ಅಗ್ಯೊ / arghy / argyo, F., Sb.; ಅಘ್ಯೊ arghyo, Bh. ……

ಉಲ್ಲೇಖಿತ ಪದ ಬೇರೆಲ್ಲಿಂದಲೂ ಪಡೆದುದಾಗಿರದೆ ಮ್ಯಾನರ್‌ನ ನಿಘಂಟಿನಿಂದ ಮಾತ್ರ ಆಯ್ದುದಾದರೆ ಉಲ್ಲೇಖದ ಬಳಿಕದ ಅಲ್ಪವಿರಾಮದ ಅನಂತರ ಕಂಸದೊಳಗೆ (M) ಎಂದು ಕೊಡಲಾಗಿದೆ. ಉದಾ :

ಅಮಕೆamake, (M). n. ……

ಅದೇ ರೀತಿ, ಉಲ್ಲೇಖಿತ ಪದವು ಪ್ರೊ. ಮರಿಯಪ್ಪ ಭಟ್ಟ ಮತ್ತು ಡಾ. ಶಂಕರ ಕೆದಿಲಾಯರ ತುಳು ಇಂಗ್ಲಿಷ್ ನಿಘಂಟಿನಿಂದ ಹೆಕ್ಕಿದ್ದಾಗಿದ್ದರೆ ಕಂಸದೊಳಗೆ (MS) ಎಂದೂ ನಮೂದಿಸಲಾಗಿದೆ. ಮಾತ್ರವಲ್ಲ, ಉಲ್ಲೇಖಿತ ಪದವನ್ನೂ ಈ ಎರಡು ನಿಘಂಟುಗಳಿಂದ ಮಾತ್ರ ಪಡೆದುದಾಗಿದ್ದರೆ (M., MS)ಎಂದು ನಮೂದಿಸಲಾಗಿದೆ. ಉದಾ :

ಅರಗಣಿ aragani, (M., MS). n. …… ಇತ್ಯಾದಿ

ಆದರೆ ಅವುಗಳೊಳಗೂ ರೂಪ ವ್ಯತ್ಯಾಸ ಕಂಡುಬಂದರೆ ಒಂದನ್ನು ಪೂರ್ತಿ ಉಲ್ಲೇಖಿಸಿ, ಮೂಲ ನಿಘಂಟಿನ ಸಂಕೇತವನ್ನೂ ಬರೆದು ಅರ್ಧ ವಿರಾಮ ಹಾಕಿ ಮತ್ತೊಂದನ್ನು ಕೊಡಲಾಗಿದೆ.

ಅಡ್ಯೊಣು aḍyoṇu, (M.); ಅಡ್ಯೋಣ್ aḍyooṇu (MS). vn. …… ಇತ್ಯಾದಿ.

ಈ ನಿಘಂಟುಗಳಿಂದ ಉಲ್ಲೇಖಗಳನ್ನು ನಮೂದಿಸುವಾಗ ಅರ್ಥ ಸ್ಪಷ್ಟವಿಲ್ಲದಿದ್ದರೆ ಕನ್ನಡದಲ್ಲಿ ಅರ್ಥವನ್ನು ಕೊಡದೆ ಮೂಲ ನಿಘಂಟಿನಲ್ಲಿ ಇದ್ದಂತೆ ಇಂಗ್ಲಿಷಿನಲ್ಲಿ ಮಾತ್ರ ಅರ್ಥಗಳನ್ನು ಕೊಡಲಾಗಿದೆ. ಉದಾ:

ಅಮಾರಿಗೆamaarige, (M). n. A trunk

ನಮೂದಿಸಿದ ಉಲ್ಲೇಖದ ಅರ್ಥಗಳೆಲ್ಲ ಸ್ಪಷ್ಟವಿದ್ದು ಆ ಉಲ್ಲೇಖಕ್ಕೆ ಮೂಲ ನಿಘಂಟಿನಲ್ಲಿ ಇನ್ನೂ ಒಂದೋ ಎರಡೋ ಹೆಚ್ಚಿನ ಅರ್ಥವನ್ನು ಕೊಟ್ಟಿದ್ದರೆ ಸ್ಪಷ್ಟಾರ್ಥಗಳನ್ನು ಸಂಖ್ಯೆ ಹಾಕಿ ಮೊದಲು ಕೊಟ್ಟು ಬಳಿಕ ಆ ಅರ್ಥವನ್ನೂ ಕೊಡಲಾಗಿದೆ. ಉದಾ :

ಅರ್ಪೆಲೆ arpele, Nchtj; ಅಳ್ಪೆಲೆ alpele, Nb., c.f. ಬುಳ್ಪೆಲೆ bulpele. n. ೧. ಅಳುಬುರುಕ One easily moved to tears ೨. (M). A fretful person.

ಅಂದರೆ, ಹೀಗೆ ಮೂಲ ನಿಘಂಟು ಅಥವಾ ಇನ್ನಾವುದೇ ಕೃತಿಯಿಂದ ಪಡೆದ ಉಲ್ಲೇಖ ಅಥವಾ ಅವುಗಳ ಅರ್ಥವು ಸಂಪಾದಕರಿಗೆ ದಿನ ಬಳಕೆಯ ಮಾತಿನಲ್ಲಿ ಅಥವಾ ಯಾವುದಾದರೊಂದು ಆಡುನುಡಿಯಲ್ಲಿ ದೊರಕಿದವುಗಳಲ್ಲವೆಂದು ತಿಳಿಯಬೇಕು. ಅದರಂತೆ ಒಂದು ವಿಶಿಷ್ಟ ಶೈಲಿಯಲ್ಲಿ ಬಳಕೆಯಲ್ಲಿರುವ ಪದ ಪ್ರಯೋಗವನ್ನು ಉಲ್ಲೇಖವನ್ನಾಗಿ ಕೊಡುವಾಗ ಆ ಶೈಲಿಯ ಸೂಚಕ ಚಿಹ್ನೆಯನ್ನು ಹಾಕಿ ಅರ್ಥವಿವರಣೆಯನ್ನು ಕೊಡಲಾಗಿದೆ.

ಉದಾ:

ಆಮು aamu, bab. n. ೧. ಅನ್ನ Cooked rice. ೨. ತಿಂಡಿ Eatable.
ಆದಾರ aadaara, ora. n. ಆಜ್ಞೆ, ಇಚ್ಛೆ. Order; desire. ಇತ್ಯಾದಿ.

ಮುಖ್ಯ ಉಲ್ಲೇಖ ಅಥವಾ ಅದರ ಒಂದು ರೂಪಭೇದವು ಯಾವುದೋ ಒಂದು ಆಡುನುಡಿಯಲ್ಲಿ ವಿರಳವಾಗಿ ಕಂಡುಬಂದುದಾದರೆ ಆ ರೂಪವನ್ನು ನಮೂದಿಸಿ ಅಲ್ಪವಿರಾಮ ಹಾಕಿ r.o. ಎಂದು ಓರೆ ಅಕ್ಷರ (ಇಟಾಲಿಕ್ಸ್) ದಲ್ಲಿ ಬರೆದು ಅದು ಕಂಡು ಬಂದ ಪ್ರದೇಶ ಹಾಗೂ ವರ್ಗಸೂಚಕ ಚಿಹ್ನೆಯನ್ನು ಹಾಕಲಾಗಿದೆ. ಉದಾ :

ಅಕ್ರೊಟ್ಟು akroṭṭu, r.o. NWc. n.
ಅಗ್ರ agra, n.; ಅಗ್ರೊ agro, S.; ಅಕ್ರ akra, r.o. Sht. n. …..ಇತ್ಯಾದಿ.

ಯಾವುದೇ ಮೂಲಸೂಚಕ ಸಂಜ್ಞೆ ಹಾಕದಿದ್ದಾಗ ಆ ಪದ ನಮ್ಮ ತಿಳುವಳಿಕೆಯ ಮಟ್ಟಿಗೆ ಸಾಮಾನ್ಯವಾಗಿ ಎಲ್ಲ ಆಡುನುಡಿಗಳಲ್ಲಿಯೂ ಬಳಕೆಯಲ್ಲಿದೆ ಎಂದು ತಿಳಿಯಬಹುದು. ಕೆಲವೊಮ್ಮೆ ಒಂದು ರೂಪವನ್ನು ಕೊಟ್ಟು ಯಾವ ಸಂಜ್ಞೆಯನ್ನೂ ಹಾಕದೆ ಅರ್ಧವಿರಾಮ ಹಾಕಿ ಆಮೇಲೆ ಮತ್ತೊಂದು ರೂಪ ಕೊಟ್ಟು ಆಡುನುಡಿ ಅಥವಾ ಮೂಲ ಆಕರದ ಚಿಹ್ನೆ ಕೊಟ್ಟರೆ ಮೊದಲಿನ ರೂಪ ಸಾಮಾನ್ಯವಾಗಿ ಎಲ್ಲ ಆಡುನುಡಿಗಳಲ್ಲಿಯೂ ಇರುತ್ತದೆಂದೂ ಮತ್ತೊಂದು ರೂಪ ಒಂದು ಪ್ರದೇಶಕ್ಕೆ ಅಥವಾ ಸಾಮಾಜಿಕ ವರ್ಗಕ್ಕೆ ಅಥವಾ ಶೈಲಿಗೆ ಮಾತ್ರ ಸೀಮಿತವೆಂದೂ ತಿಳಿಯಬೇಕು. ಉದಾ :

                ೧ಅಣಿಲೆaṇile; ಅಳಿಲ್ aḷile, r.o. NEc. …..
ಅರ್ಬಿ arbi.; ಅರ್ವಿ arvi, Bh. n. …..ಇತ್ಯಾದಿ.

ಒಂದು ಉಲ್ಲೇಖಕ್ಕೆ ಸಿಗುವ ಒಂದು ಅಥವಾ ಹೆಚ್ಚಿನ ಎಲ್ಲ ರೂಪಗಳನ್ನೂ, ಅವುಗಳಿಗೆ ಸಂಬಂಧಿಸಿದ ಪ್ರದೇಶ ಹಾಗೂ ವರ್ಗಸೂಚಕ ಚಿಹ್ನೆಯನ್ನೂ ಕೊಟ್ಟ ಅನಂತರ ಪೂರ್ಣವಿರಾಮ ಹಾಕಲಾಗಿದೆ. ಆಮೇಲೆ ‘cf.’ ಎಂಬ ಚಿಹ್ನೆ ಹಾಕಿ ಮುಖ್ಯ ಉಲ್ಲೇಖಕ್ಕೆ ಸಮಾನಾರ್ಥಕಗಳಾದ (ಅಂಶತಃ ಸಮಾನ ರೂಪದ ಅಥವಾ ಭಿನ್ನ ರೂಪದ) ಪದಗಳನ್ನು ನಮೂದಿಸಲಾಗಿದೆ. ಉದಾ:

್ ಬುಳ್ / ಇಂಬುಳ್ / ಅ್ ಬುಳ್ umbuḷua / imbuḷu / ubuḷu, Bh. cf. ಮುಳ್ಪ; ಮೂಳು; ಸ್ಟ್ಂಬುಳ್ muḷpa muuḷu; sṭumbuḷu. adv. …..

ಅಟ್ಟೆಮಿ aṭṭemi, chtj., cf. ಅಷ್ಟಮಿ aṣṭami. n. ……

ಆದರ aadara, N.; ಆದರೊ aadaro, S. cf., ಆದರಣೆaadaraṇe.

ಆದಾಯ aadaaya, N,; ಆದಾಯೊ aadaayo, S., Bh. cf. ಆದಿಕ;೪ ಆಯ. aadika, aaya.n. ….ಇತ್ಯಾದಿ.

ಅನಂತರ ಪೂರ್ಣವಿರಾಮ ಹಾಕಿ ಮುಖ್ಯ ಉಲ್ಲೇಖದ ವ್ಯಾಕರಣ ವರ್ಗದ ನಿಷ್ಕರ್ಷೆ ಮಾಡಿ ಅದನ್ನು ರೋಮನ್ ಲಿಪಿಯಲ್ಲಿ ೯ ಪಾಯಿಂಟ್ ಓರೆ ಅಕ್ಷರದಲ್ಲಿ ಕೊಟ್ಟು ಪೂರ್ಣವಿರಾಮ ಹಾಕಲಾಗಿದೆ. ಉದಾ;

ಅದ್‌ರ್ aduru. vn. ……..

ಅದ್‌ರ್ / ಅದಿರ್ aduru / adiru. cf. ಅದಿಲ್ adilu. n…….ಇತ್ಯಾದಿ.

ಇನ್ನೂ ಹೆಚ್ಚಿನ ವಿವರಣೆಗಳ ಅಗತ್ಯ ಕಂಡುಬಂದರೆ ಅದನ್ನು ದುಂಡು ಕಂಸದೊಳಗೆ ಸೂಚಿಸಲಾಗಿದೆ. ಉದಾ:

ಅದ್‌ರಾ aduraa, chtj.; ಅದ್‌ರೋ aduro.. bi. vv. (of ಅದ್‌ರ್)…..ಇತ್ಯಾದಿ.