ವ್ಯಾಕರಣ ವರ್ಗ ಸೂಚಕಗಳ ಅನಂತರ ಮುಖ್ಯ ಉಲ್ಲೇಖವು ಪ್ರತ್ಯಯಗಳ ಪೂರ್ವದಲ್ಲಿ ಅಥವಾ ಸಮಾಸದಲ್ಲಿ ಪೂರ್ವಪದವಾಗಿ ಬರುವಾಗ ರೂಪಭೇದ ಹೊಂದಿದ್ದರೆ ಆ ವಿಕೃತ ರೂಪವನ್ನು ಬರೆದು ಅದರ ಮುಂದೆ ‘-‘ (ಅಡ್ಡಗೀಟು) ಹಾಗೂ ಪೂರ್ಣವಿರಾಮ ಹಾಕಿ ‘obl.’ ಅಥವಾ ಇನ್ನಿತರ ಚಿಹ್ನೆಗಳನ್ನು ಓರೆ ಅಕ್ಷರದಲ್ಲಿ ಚೌಕ ಕಂಸದೊಳಗೆ ಸೂಚಿಸಲಾಗಿದೆ. ಉದಾ:

ಅವು avu; ಔ au;Bh. prn (ಅಯಿ – ayi – obl. before case suffixes, and before plural suffix – kulu in N. dialects; ಅಯೆ – aye – Bh. Kv. obl.)…

ಅಯಿನ್ (ಐನ್) ayinu (ainu). num (ಅಯಿ – ayi – as first work in compounds)…..ಇತ್ಯಾದಿ.

ಮುಖ್ಯ ಉಲ್ಲೇಖದ ಅರ್ಥವನ್ನು ಹೋಲುವ ಅಥವಾ ಅದಕ್ಕೆ ಸಂವಾದಿಯಾದ ಇತರ ಅರ್ಥವನ್ನು ಕೊಡುವ ಪದಗಳಿದ್ದರೆ ಅವುಗಳನ್ನು ಚೌಕ ಕಂಸದೊಳಗೆ ಓರೆ ಅಕ್ಷರದಲ್ಲಿ ‘q.v.’ ಎಂದು ಸೂಚಿಸಿ ಕೊಡಲಾಗಿದೆ. ಉದಾ :

ಅಗೆಲ್ agelu. (q.v. ೩ಇಡೆ, ಪಸಾನೆ್ ೩ iḍ e, pasaarne) …..ಇತ್ಯಾದಿ.

ಇಷ್ಟಾದ ಬಳಿಕ ಉಲ್ಲೇಖದ ಅರ್ಥ, ಒಂದಕ್ಕಿಂತ ಹೆಚ್ಚು ಅರ್ಥಭೇದಗಳು ಕಂಡುಬಂದಾಗ ಅವುಗಳನ್ನು ೧, ೨, ೩ … ಎಂದು ಸಂಖ್ಯೆ ಹಾಕಿ ಕೊಡಲಾಗಿದೆಯಲ್ಲದೆ ಪ್ರತಿಯೊಂದು ಅರ್ಥಘಟಕವನ್ನೂ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಉಲ್ಲೇಖಿಸಲಾಗಿದೆ. ಒಂದು ಸಂಖ್ಯೆಯೊಳಗೆ ಒಂದಕ್ಕಿಂತ ಹೆಚ್ಚು ಅರ್ಥಸೂಚಕ ಪದಗಳನ್ನು ಬರೆಯುವಾಗ ಅವುಗಳ ನಡುವೆ ಅರ್ಧವಿರಾಮವನ್ನು ಹಾಕಿ ಕೊನೆಯ ಅರ್ಥಸೂಚಕದ ಅನಂತರ ಪೂರ್ಣ ವಿರಾಮ ಇಟ್ಟು ಇಂಗ್ಲಿಷ್ ಅರ್ಥವನ್ನು ಕೊಡಲಾಗಿದೆ. ಇದೇ ಕ್ರಮವನ್ನು ಇಂಗ್ಲಿಷಿನಲ್ಲಿ ಅರ್ಥ ಕೊಡುವಾಗಲೂ ಬಳಸಲಾಗಿದೆ. ಉದಾ :

ಅದೆadḛ ಅದೆ ade. Bh.n. ೧. ಕೋಣೆ; ಚಿಕ್ಕ ಕೊಠಡಿ A room; a small room. ೨. ಒಳಕೋಣೆ An inner room ೩.ಅರೆ, ಅಂಕಣ A compartment. ೪. ಅಂತಸ್ತು ಹಲಗೆ; ಬಡು A shelf. ೫. ವಿಭಾಜಕರ ರೇಖೆ, ಗುರುತು Demarcation line; a mark. … ಇತ್ಯಾದಿ.

ಕೆಲವು ಆಲಂಕಾರಿಕಾರ್ಥ, ವ್ಯಂಗ್ಯಾರ್ಥ ಮೊದಲಾದ ವಿಶಿಷ್ಟಾರ್ಥಗಳನ್ನು ಸೂಚಿಸುವಾಗ ರೋಮನ್ ಲಿಪಿಯ ಓರೆ ಅಕ್ಷರಗಳಲ್ಲಿ ಮಾತ್ರ fig., der., abu. ಮುಂತಾದ ಚಿಹ್ನೆಗಳನ್ನು ಬಳಸಲಾಗಿದೆ. ಉದಾ:

ಅಸಲ್‌ಜನ asalujana ೧. ಸಾಚಾ ಮನುಷ್ಯ A trustworthy person ೨. fig. ಮೋಸಗಾರ A deceiver.

ಅರ್ಥ ಕೊಡುವಾಗ ಪಾಡ್ದನ ಮುಂತಾದ ಜನಪದ ಸಾಹಿತ್ಯದಲ್ಲಿ ಅಥವಾ ‘ಶ್ರೀ ಭಾಗವತೊ’ ಮೊದಲಾದ ಶಿಷ್ಟ ಸಾಹಿತ್ಯಕೃತಿಗಳಲ್ಲಿ ಅಥವಾ ಮೂಲ ನಿಘಂಟುಗಳಲ್ಲಿ ಮಾತ್ರ ಕಂಡುಬರುವ ಅರ್ಥವಾಗಿದ್ದರೆ, ಆ ಉಲ್ಲೇಖಕ್ಕೆ ಸಂಪಾದಕರಿಗೆ ಆಡುಭಾಷೆಯಲ್ಲಿ ದೊರಕಿದ ಮಾಹಿತಿಯಲ್ಲಿ ಸಿಕ್ಕುವ ಅರ್ಥವನ್ನು ಮೊದಲು ಕೊಟ್ಟು ಅನಂತರ ಅವುಗಳನ್ನು pad., Bh. (M) ಇತ್ಯಾದಿ ಸಂಜ್ಞೆಗಳನ್ನು ಮೊದಲು ಸೂಚಿಸಿ ಕೊಡಲಾಗಿದೆ. ಅರ್ಥದ ಜೊತೆಗೆ ಅವಶ್ಯವೆಂದು ಕಂಡುಬಂದಲ್ಲಿ ವ್ಯಾಕರಣ ಸಂಬಂಧೀ ವಿವರಣೆ, ಸಾಂಸ್ಕೃತಿಕ ವಿವರಣೆ ಮೊದಲಾದುವಗಳನ್ನೂ ನಿರೂಪಿಸಲಾಗಿದೆ. ಔಷಧೀಯ ಅಥವಾ ಬಹೂಪಯೋಗಿ ಸಸ್ಯ, ವೃಕ್ಷ, ಗಿಡಮೂಲಿಕೆ ಮೊದಲಾದುವಗಳ ಸಸ್ಯಶಾಸ್ತ್ರೀಯ ಹೆಸರುಗಳನ್ನೂ, ಆಯಾ ಗಿಡ, ಕಾಯಿಗಳ ಉಪಯೋಗ, ಔಷಧೀಯತೆ ಮೊದಲಾದವುಗಳನ್ನು ಸಂಕ್ಷಿಪ್ತವಾಗಿ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಕೊಡಲಾಗಿದೆ. ಸಾಂಸ್ಕೃತಿಕವಾಗಿ ಅವುಗಳಿಗೆ ಏನಾದರೂ ಮಹತ್ವವಿದ್ದರೆ ಅದನ್ನೂ ವಿವರಿಸಲಾಗಿದೆ.

ಇಲ್ಲಿಗೆ ಒಂದು ಉಲ್ಲೇಖದ ಮೊದಲು ಪ್ಯಾರಾ ಕೊನೆಗೊಳ್ಳುತ್ತದೆ. ಆಮೇಲೆ ಉಲ್ಲೇಖಿತ ಪದವು ಸಮಾಸ ಅಥವಾ ಸಾಧಿತ ಪದವಾಗಿದ್ದರೆ ಧ್ವನಿಲಿಪಿಯ ಓರೆ ಅಕ್ಷರ ರೂಪದಲ್ಲಿ ಆ ಪದವನ್ನು ‘+’ (ಕೂಡಿಸು) ಚಿಹ್ನೆಗಳ ಮೂಲಕ ಬೇರ್ಪಡಿಸಿ ತೋರಿಸಲಾಗಿದೆ. ಉದಾ : ‘ಅಡ್ಯರ’ ಎಂಬ ಉಲ್ಲೇಖದ ಕೆಳಗೆ

aḍi + kara. ಇತ್ಯಾದಿ.

ಹೀಗೆ ಬೇರ್ಪಡಿಸುವಾಗ ಅದರಲ್ಲಿ ಯಾವುದಾದರೊಂದು ಪದದ ಅರ್ಥ ತಿಳಿಯದಿದ್ದ ಪಕ್ಷದಲ್ಲಿ ಅದರ ಮುಂದೆ ಕಂಸದೊಳಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ ಸಂದೇಹವನ್ನು ವ್ಯಕ್ತಪಡಿಸಲಾಗಿದೆ. ಉದಾ :

‘ಅಜಕಾಯಿ’ ಎಂಬ ಉಲ್ಲೇಖದ ಕೆಳಗೆ

aja (?) + kaayi.

‘ಅತ್ಲಾಸ್‌ಕೊಪ್ಪು’ ಎಂಬ ಉಲ್ಲೇಖದ ಅಡಿಯಲ್ಲಿ

atlassu (?) + koppu

ಈ ವಿಭಕ್ತಿ ಪದಗಳಲ್ಲಿ ಒಂದು ಅಥವಾ ಎರಡೂ ತುಳುವೇತರ ಭಾಷೆಯಾಗಿದ್ದರೆ ಆ ರೂಪವನ್ನು ಕೊಟ್ಟು ಕಂಸದೊಳಗೆ ಮೂಲಭಾಷೆಯ ಸೂಚಕ ಚಿಹ್ನೆಯನ್ನು ಹಾಕಲಾಗಿದೆ. ಉದಾ:

‘ಆಚಪಿರು’ ಉಲ್ಲೇಖದ ಕೆಳಗೆ –

aacara (Skt) + ipu. ಇತ್ಯಾದಿ.

ಮುಂದಿನ ಪ್ಯಾರಾದಲ್ಲಿ ಆ ಪದ ದ್ರಾವಿಡ ಮೂಲದ ಪದವಾಗಿದ್ದರೆ ಇತರ ದ್ರಾವಿಡ ಭಾಷೆಗಳಲ್ಲಿರುವ ಅದರ ರೂಪಗಳನ್ನು ಧ್ವನಿಲಿಪಿಯಲ್ಲಿ ಓರೆ ಅಕ್ಷರದಲ್ಲಿ ಕೊಡಲಾಗಿದೆ. ಪದಕ್ಕಿಂತ ಮೊದಲು ಭಾಷಾ ಸೂಚಕ ಚಿಹ್ನೆಯನ್ನು ರೋಮನ್ ಲಿಪಿಯಲ್ಲಿ Ta., Ma., ಇತ್ಯಾದಿಯಾಗಿ ಕೊಡಲಾಗಿದೆ. ಇವುಗಳನ್ನು ಕೊಡುವಾಗ ಈ ನಿಘಂಟಿನ ಲಿಪ್ಯಂತರ ಕ್ರಮಕ್ಕನುಸಾರವಾಗಿ ಬರೋ, ಎಮಿನೋ ಇವರುಗಳ ನಿಘಂಟಿನಿಂದ ಅಥವಾ ಇತರ ಆಕರ ನಿಘಂಟುಗಳಿಂದ ಕೆಲವು ವ್ಯತ್ಯಾಸಗಳನ್ನು ಮಾಡಿಕೊಳ್ಳಲಾಗಿದೆ. ಉದಾ : ದೀರ್ಘ ಸ್ವರಕ್ಕೆ ಆ ಸ್ವರಸಂಜ್ಞೆಯನ್ನು ಎರಡು ಬಾರಿ ಉಲ್ಲೇಖಿಸುವುದು, ‘ಜ್ವ’ ಕಾರಕ್ಕೆ ‘n’ ಎಂಬ ಚಿಹ್ನೆ ಬಳಸುವುದು, ಇತ್ಯಾದಿ. ಉದಾ: ೧ ‘ಅಂಗಡಿ’ ಎಂಬ ಉಲ್ಲೇಖದ ಕೆಳಗೆ –

Ta. aṅkaaṭ i; Ma. aṅṅaaṭi; Ko. aṅga.ḍ y; To. ogody; Ka., Te., Kol. aṅgadi;

 Nk. aṅgaaṛi; Pa. aṅgod courtyard. compound.

ಪದದ ಅರ್ಥ ಮುಖ್ಯ ಉಲ್ಲೇಖದ ಅರ್ಥಕ್ಕಿಂತ ಭಿನ್ನವಾಗಿದ್ದ ಸಂದರ್ಭದಲ್ಲಿ ಅದರ ಅರ್ಥವನ್ನು ೯ ಪಾಯಿಂಟ್ ತೆಳು ಅಕ್ಷರದಲ್ಲಿ ಆಂಗ್ಲಭಾಷೆಯಲ್ಲಿ ಕೊಡಲಾಗಿದೆ. ಉದಾ :

ಅಂಬೆಲ ಎಂಬ ಉಲ್ಲೇಖದ ಅಡಿಯಲ್ಲಿ –

Ta., Ma. ampalam; Ka. ambala; Kod. ambila ‘house on village green for meeting’ – ಇತ್ಯಾದಿ.

ಮುಖ್ಯ ಉಲ್ಲೇಖವು ಸಸ್ಯಾದಿಗಳಿಗೆ ಸಂಬಂಧಪಟ್ಟುದಾದರೆ ಅನ್ಯ ಭಾಷೆಗಳಿಂದ ಕೊಟ್ಟಿರುವ ಎಲ್ಲ ಪದಗಳೂ ಮುಖ್ಯ ಉಲ್ಲೇಖದ ಸರಿಯಾದ ಜ್ಞಾತಿ ಪದಗಳಲ್ಲದಿದ್ದರೂ ತೌಲನಿಕ ಅಧ್ಯಯನಕ್ಕೆ ಅನುಕೂಲವಾಗಲೆಂಬ ದೃಷ್ಟಿಯಿಂದ cf. ಎಂಬ ಸಂಜ್ಞೆ ಹಾಕಿ ಆಯಾ ಭಾಷೆಗಳಲ್ಲಿ ಸಿಗುವ ತುಳುವಿನ ಮುಖ್ಯ ಉಲ್ಲೇಖಕ್ಕೆಸಮಾನಾರ್ಥಕ ಪದಗಳನ್ನು ಕೊಡಲಾಗಿದೆ.

‘ಅಂತರಗಂಗೆ‘ ಎಂಬ ಉಲ್ಲೇಖದ ಕೆಳಗೆ –

Ta. antaragage. cf. Ta antarattamaraj;

Ma. aṅṅillaappoṅṅu kuṭappaayal;

antaradaamare; Te. antaradaamara. – ಇತ್ಯಾದಿ.

Ka, ಪದವು ಸಂಸ್ಕೃತ, ಅರಾಬಿಕ್, ಪರ್ಷಿಯನ್, ಮರಾಠಿ ಮೊದಲಾದ ದ್ರಾವಿಡೇತರ ಭಾಷೆಗಳಿಂದ ಎರವಲು ಪಡೆದದ್ದಾದರೆ ಆ ಭಾಷೆಗಳ ಸೂಚಕ ಚಿಹ್ನೆಯೊಂದಿಗೆ ಆ ಪದಗಳನ್ನು ಮೇಲಿನ ಕ್ರಮದಲ್ಲೇ ನಮೂದಿಸಲಾಗಿದೆ. ದುಆ

‘ಅಟ್ಟೆಮಿ’ ಉಲ್ಲೇಖದ ಅಡಿಯಲ್ಲಿ

Skt. aṣṭ amii.

ಅಕಲ್’ ಉಲ್ಲೇಖದ ಕೆಳಗೆ –

Ar. a’ ql’ wisdom’. -ಇತ್ಯಾದಿ.

ಮೂಲವು ಸಂದೇಹಾಸ್ಪದವಾಗಿದ್ದರೆ ಕಂಸದೊಳಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಲಾಗಿದೆ. ಉದಾ :

‘ಅಂಸಣಿ’ ಎಂಬ ಉಲ್ಲೇಖದ ಕೆಳಗೆ –

Skt. amarṣaṇa (?); Eng. amazon (?) ಇತ್ಯಾದಿ.

ಇಲ್ಲಿಗೂ ಒಂದು ಹಂತ ಮುಗಿದು ಪ್ಯಾರಾ ಕೊನೆಗೊಳ್ಳುತ್ತದೆ. ಮುಂದಿನ ವ್ಯಾಪಾರದಲ್ಲಿ ಆ ಉಲ್ಲೇಖ ಸಮಾಸದಲ್ಲಿ ಉತ್ತರ ಪದವಾಗಿ ಬರುವಾಗ ಉಂಟಾಗುವ ರೂಪಗಳನ್ನು ‘vide’ ಎಂಬ ಸಂಜ್ಞೆ ಹಾಕಿ ಕೊಡಲಾಗಿದೆ.

ಉದಾ:

‘ಅಡ್ಯೆ‘ ಎಂಬ ಉಲ್ಲೇಖದ ಕೆಳಗೆ-

vide ಇರೆ್ ಅಡ್ಯೆ್; ಕಯಿದಡ್ಯೆ್; ನೂಕಡ್ಯೆ್; ಪೇರಡ್ಯೆ್; ಪೊಟ್ಟಡ್ಯೆ್; ಪೊರಿಯಡ್ಯೆ್; ಮೀಯಡ್ಯೆ್; ಸಿಕ್‌ಅಡ್ಯೆ್ . ire aḍye kayiḍaye nuukaḍye neyyaḍye peeraḍye poṭṭ aḍye muyaḍye muujaḍye sike aḍye – ಇತ್ಯಾದಿ.

ಇವುಗಳ ಅರ್ಥವನ್ನು ಇಲ್ಲಿ ಕೊಡಲಿಲ್ಲ. ಮುಂದೆ ಆಯಾ ಸಮಸ್ತ ಪದಗಳ ಪೂರ್ವಪದ ಅಕಾರಾದಿಯಲ್ಲಿ ಎಲ್ಲಿ ಬರಬೇಕೋ ಅಲ್ಲಿ ಅದರ ಅರ್ಥ, ವಿವರಗಳನ್ನು ಕೊಡಲಾಗಿದೆ. ಇಲ್ಲಿ ಆ ಉಲ್ಲೇಖ ಸಮಾಸದ ಉತ್ತರಪದವಾಗಿ ಬರುವಾಗ ಇಂತಿಂತಹ ರೂಪಗಳು ಸಾಧಿತವಾಗುತ್ತವೆ ಎಂದು ತೋರಿಸಲು ಕೆಲವು ಉದಾಹರಣೆಗಳನ್ನು ಮಾತ್ರ ಕೊಡಲಾಗಿದೆ. ಅಲ್ಲದೆ ಇದು ಅಂತಹ ಪದಗಳ ಸಂಪೂರ್ಣ ಯಾದಿಯೂ ಅಲ್ಲ. ಇಲ್ಲಿಗೆ ಮತ್ತೂ ಒಂದು ಭಾಗ ಮುಗಿದು ಸಾಲು ಕೊನೆಯಾಗುತ್ತದೆ. ಮುಂದಿನ ಪ್ಯಾರಾದಲ್ಲಿ ಆ ಉಲ್ಲೇಖಕ್ಕೆ ಸಂಬಂಧಿಸಿದ ಪ್ರಾಚೀನ – ನವೀನ ಕಾವ್ಯಕೃತಿಗಳ ಪ್ರಯೋಗಗಳು, ಪಾಡ್ದನ, ಗಾದೆ, ನುಡಿಗಟ್ಟು, ಒಗಟು, ಚಮತ್ಕಾರದ ಬಳಿಕ ಅಲ್ಪವಿರಾಮ ಹಾಕಿ ಅದರ ಮೂಲ ಆಕರವನ್ನು ಗುರುತಿಸುವ Bh., kv., pad., prv., rid., ora., bab. ಮೊದಲಾದ ಚಿಹ್ನೆಗಳನ್ನು ಕೊಟ್ಟು ಕನ್ನಡದಲ್ಲಿ ಮಾತ್ರ ಅರ್ಥಗಳನ್ನು ಕೊಡಲಾಗಿದೆ. Bh. Kv. ಮೊದಲಾದ ಸಾಹಿತ್ಯ ಕೃತಿಗಳಿಂದ ಉದ್ಧರಿಸುವಾಗ ಪರಾಮರ್ಶೆ (reference) ಗಾಗಿ ಅವುಗಳ ಸ್ಕಂಧ, ಅಧ್ಯಾಯ, ಪದ್ಯ ಸಂಖ್ಯೆ, ಪುಟ ಇತ್ಯಾದಿಗಳನ್ನು ಲಭ್ಯತೆಗನುಸಾರ ಕಂಸದೊಳಗೆ ಸೂಚಿಸಲಾಗಿದೆ. ಉದಾ:

ಅ್ ಎಂಬ ಉಲ್ಲೇಖದ ಕೆಳಗೆ –

ತುಳು ಭಾಷೆಂದುವೆಂದ್ ಖೇದೀಪನನೇಪ್ಪೊಡು tuḷ ubheaṣenduvendu kheediipananeeppoḍ u, Bh. (1.1.16,6)- ಇತ್ಯಾದಿ.

ಇಲ್ಲಿ ದುಂಡುಕಂಸದೊಳಗೆ ಕೊಟ್ಟಿರುವ ಸಂಖ್ಯೆಗಳು ಕ್ರಮವಾಗಿ ಸ್ಕಂಧ, ಅಧ್ಯಾಯ, ಪದ್ಯ ಹಾಗೂ ಪುಟಸಂಖ್ಯೆಗಳಾಗಿವೆ. ಬೇರೆ ಸಾಹಿತ್ಯ ಕೃತಿಗಳಿಂದ ಉದ್ಧರಿಸುವ ಈ ರೀತಿ ಕಂಸದೊಳಗೆ ಕೊಟ್ಟಿರುವ ಸಂಖ್ಯೆಗಳಲ್ಲಿ (ಅಲ್ಪ ವಿರಾಮದ ಅನಂತರದ) ಕೊನೆಯ ಸಂಖ್ಯೆ ಆ ಕೃತಿಯ ಪುಟಸಂಖ್ಯೆಯೆಂದೂ, ಅಲ್ಪವಿರಾಮಕ್ಕೆ ಮೊದಲಿನದು ಪದ್ಯ ಸಂಖ್ಯೆಯೆಂದೂ, ಅದಕ್ಕಿಂತಲೂ ಪೂರ್ವದ್ದು ಅಧ್ಯಾಯ ಸಂಖ್ಯೆಯೆಂದೂ ತಿಳಿಯಬೇಕು. ಕೇವಲ ಒಂದೇ ಸಂಖ್ಯೆ ಕೊಟ್ಟಿದ್ದರೆ ಅದು ಪುಟ ಸಂಖ್ಯೆ ಮಾತ್ರ ಆಗಿರುತ್ತದೆ. ಒಗಟನ್ನು ಉಲ್ಲೇಖಿಸುವಾಗ ಅದರ ಉತ್ತರವನ್ನು ಚೌಕಕಂಸದೊಳಗೆ ‘=’ (ಸಮ) ಚಿಹ್ನೆ ಹಾಕಿ ಕೊಡಲಾಗಿದೆ. ಉದಾ:

‘ಅಕ್ಕ ಪಕ್ಕ’ಎಂಬ ಉಲ್ಲೇಖದ ಕೆಳಗೆ –

ಅಕ್ಕಪಕ್ಕೊಡು ಬದುಕುವೆರ್, ಒರಿಯನೊರಿ ತೂಪಿಜೆರ್

akkapakkaoḍ u badukuveru oriyanori tuupijeru, rid.

ಅಕ್ಕ ಪಕ್ಕದಲ್ಲಿ ಬದುಕುತ್ತಾರೆ, ಒಬ್ಬರನ್ನೊಬ್ಬರು ನೋಡುವುದಿಲ್ಲ (=ಕಣ್ಣುಗಳು) – ಇತ್ಯಾದಿ.

ಇಲ್ಲಿಗೆ ಮುಖ್ಯ ಉಲ್ಲೇಖದ ವಿವರಣೆ, ಉದಾಹರಣೆಗಳು ಮುಗಿಯುತ್ತವೆ. ಆ ಬಳಿಕ ಆ ಮುಖ್ಯ ಉಲ್ಲೇಖದಿಂದ ಸಾಧಿತವಾದ ಪದಗಳನ್ನೂ ಸಮಾಸ ಪದಗಳನ್ನೂ ಉಪ ಉಲ್ಲೇಖವಾಗಿ ಅಕಾರಾದಿ ಕ್ರಮದಲ್ಲಿಯೇ ನಮೂದಿಸಲಾಗಿದೆ. ಹೀಗೆ ಮಾಡುವಾಗ ಉಪ ಉಲ್ಲೇಖದ ಕೊನೆಗಿರುವ ವಿಭಕ್ತಿ ಪ್ರತ್ಯಯವನ್ನು ಗಣನೆಗೆ ತೆಗೆದುಕೊಳ್ಳದೆ ಅದರ ಮುಂದಿನ ಪದದ ಆದ್ಯಕ್ಷರವನ್ನು ಪರಿಗಣಿಸಲಾಗಿದೆ. ಮಾತ್ರವಲ್ಲದೆ, ಉಪ ಉಲ್ಲೇಖದ ಮೊದಲ ಪದ ಸಾಮಾನ್ಯವಾಗಿ ಮುಖ್ಯ ಉಲ್ಲೇಖದ ರೂಪವೇ ಆಗಿದ್ದರೂ ಕೆಲವೊಮ್ಮೆ ಮುಖ್ಯ ಉಲ್ಲೇಖದ ವಿಭಿನ್ನ ರೂಪವನ್ನು ಉಪಉಲ್ಲೇಖದ ಮೊದಲ ಪದವಾಗಿ ಮಾಡಿದ ಸಂದರ್ಭಗಳೂ ಇವೆ. ಉದಾ: ‘ಆಯುಷ್ಯ’ ಎಂಬ ಮುಖ್ಯ ಉಲ್ಲೇಖಕ್ಕೆ ‘ಅವುಸ’ ಎಂಬುದು ಒಂದು ವಿಭಿನ್ನ ರೂಪ. ‘ಆಯುಷ್ಯ’ ಎಂಬ ಉಲ್ಲೇಖದ ಕೆಳಗೆ –

ಅವುಸ ಮುತ್ತಂದಿನಕುಳು avusa muttandinakuḷ u, MR. ದೇವತೆಗಳು. Gods.

– ಎಂಬುದನ್ನು ಉಪ ಉಲ್ಲೇಖವಾಗಿ ನಮೂದಿಸಲಾಗಿದೆ. ಇವುಗಳ ಅರ್ಥಗಳನ್ನೂ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕೊಡಲಾಗಿದೆ. ಈ ಉಪಉಲ್ಲೇಖಗಳ ಕೊನೆಯ ಭಾಗದಲ್ಲಿ ಕ್ರಿಯಾಪದವಿದ್ದರೆ ಅದರ ಪ್ರತ್ಯಯವು ಸಾಮಾನ್ಯವಾಗಿ ತುಳುನಾಡಿನ ಉತ್ತರದ ಸಾಮಾನ್ಯ ಉಪಭಾಷೆಯದ್ದಾಗಿರುತ್ತದೆ. ಉದಾ: ಅಗರ್‌ಕಡ್ಪುನಿ, ಅಗರ್ ಪಾಡುನಿ – ಇತ್ಯಾದಿ. ಆದರೆ ಆ ಉಲ್ಲೇಖ ಉತ್ತರ ಭಾಗದಲ್ಲಿ ಮಾತ್ರ ಬಳಕೆಯಲ್ಲಿದೆಯೆಂದು ಅರ್ಥವಲ್ಲ. ಸಾಮಾನ್ಯೀಕರಣದ ದೃಷ್ಟಿಯಿಂದ ಇಂತಹ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ವಿಶೇಷ ಸಂದರ್ಭಗಳಲ್ಲಿ, ಅಂದರೆ ಉಪ ಉಲ್ಲೇಖ ಕೇವಲ ದಕ್ಷಿಣದ ಆಡುನುಡಿಯಲ್ಲಿ ಕಂಡುಬಂದಂತಹದಾಗಿದ್ದರೆ (ಉತ್ತರದ ಆಡುನುಡಿಯಲ್ಲಿ ಇಲ್ಲವಾದರೆ) ಅಂತಹ ಕಡೆ ದಕ್ಷಿಣದ ಸಾಮಾನ್ಯ ಆಡುನುಡಿಯಲ್ಲಿರುವ ಕ್ರಿಯಾರೂಪವನ್ನೇ ಇಟ್ಟುಕೊಳ್ಳಲಾಗಿದೆ.

ಉದಾ:

ಅಳೆ್’ ಎಂಬ ಉಲ್ಲೇಖದ ಕೆಳಗೆ

ಅಳೆ್ ಸುಳಿಪ್ಪುನೆ್aḷ e suḷippune Schtj ಮೊಸರು ಕಡೆಯುವುದು To churn. – ಇತ್ಯಾದಿ

ಅಲ್ಲದೆ ಒಂದು ಉಪ ಉಲ್ಲೇಖ ಕೇವಲ ಒಂದು ಉಪಭಾಷೆಯಲ್ಲಿದ್ದರೆ ಆ ಆಡುನುಡಿಯ ಕ್ರಿಯಾರೂಪವನ್ನೇ ಕೊಡಲಾಗಿದೆ. ಉದಾ :

‘ಅರ್ಘ್ಯ’ ಎಂಬ ಉಲ್ಲೇಖದ ಅಡಿಯಲ್ಲಿ

ಅರ್ಘ್ಯ ಕೊಳ್ಪುಣarghya koḷpuṇa ೧.ಅರ್ಘ್ಯ ಕೊಡುವುದು Offering libation. ೨. Sb. ಸಂಧ್ಯಾವಂದನೆ ಮಾಡುವುದು. Doing the morning or evening prayers. -ಇತ್ಯಾದಿ.

ಹಾಗೆಯೇ ಶ್ರೀಭಾಗವತೊ, ಕಾವೇರಿ, ಮಂದಾರರಾಮಾಯಣ ಮೊದಲಾದ ಗ್ರಂಥಗಳಲ್ಲಿ ಮಾತ್ರ ಕಂಡುಬಂದದ್ದಾದರೆ ಅಂತಹ ಸಂದರ್ಭಗಳಲ್ಲಿಯೂ ಅವುಗಳ ಮೂಲ ಸೂಚಕ ಚಿಹ್ನೆ ಹಾಕಲಾಗಿದೆ. ಹಾಗೂ ಅದರ ಉಲ್ಲೇಖವನ್ನು ಸೂಚಿಸುವ ಮೂಲವಾಕ್ಯವನ್ನೂ ತದ್ಗ್ರಂಥದಿಂದ ಹೆಚ್ಚಿನ ಕಡೆ ಉದ್ಧರಿಸಲಾಗಿದೆ. ಉದಾ:

೫. ‘ಅರೆ್’ ಎಂಬ ಉಲ್ಲೇಖದ ಕೆಳಗೆ –

ಅರೆತಾರೊaretaaro, Bh. ಅರ್ಧತಾರ; ತಾಮ್ರದ ನಾಣ್ಯದ ಎರಡನೆ ಒಂದು ಭಾಗ. Half of a taara, a copper coin. ಕೈತೋಳರೆತಾರೊಲ ಶೂನ್ಯೊಮತೀ ಬದ್‌ಕೇ ಮಹಕಷ್ಟೊkaitooḷaretaarola badukuu mahakaṣṭoo. Bh. (1.12.16.118). ಕೈಯಲ್ಲಿ ಅರ್ಧತಾರವೂ ಇಲ್ಲವಲ್ಲ, ಈ ಬದುಕು ದೊಡ್ಡ ಕಷ್ಟ – ಇತ್ಯಾದಿ.

ಉಪ ಉಲ್ಲೇಖಗಳಿಗೂ ಅವಶ್ಯವೆಂದು ಕಂಡುಬಂದರೆ ಉದಾಹರಣೆಗೆ ಪ್ರಯೋಗ, ಮುಂತಾದವುಗಳನ್ನು ನಮೂದಿಸಲಾಗಿದೆ. ಒಂದು ಮುಖ್ಯ ಉಲ್ಲೇಖದ ಕೆಳಗೆ ಬರುವ ಒಂದಕ್ಕಿಂತ ಹೆಚ್ಚು ಉಪ ಉಲ್ಲೇಖಗಳ ಅರ್ಥ ಒಂದೇ ಆಗಿದ್ದರೆ ಅವುಗಳನ್ನು ಅಕಾರಾದಿ ಕ್ರಮದಲ್ಲಿಯೇ ಬೇರೆ ಬೇರೆಯಾಗಿ ನಮೂದಿಸಿ ಅವುಗಳಲ್ಲಿ ಬಹುಪ್ರಚಲಿತವಿರುವ ಒಂದಕ್ಕೆ ಅರ್ಥ ಕೊಟ್ಟು ಉಳಿದವುಗಳನ್ನು ಕೊಡುವಾಗ ‘=’ (ಸಮ) ಸಂಜ್ಞೆ ಹಾಕಿ ಅರ್ಥ ಕೊಟ್ಟಿರುವ ಉಲ್ಲೇಖವನ್ನು ನೋಡುವಂತೆ ತಿಳಿಸಲಾಗಿದೆ. ಉದಾ:

‘೧ಅಂಗಡಿ’ ಎಂಬ ಉಲ್ಲೇಖದ ಕೆಳಗೆ =

ಅಂಗಡಿಗಾರೆaṇgaḍigaare. ಅಂಗಡಿಗಾರ. A shopkeeper

ಅಂಗಡಿ ಗುರ್ಬಿaṇgaḍigurbi = ಅಂಗಡಿಪಕ್ಕಿ aṇgaḍipakki.

ಅಂಗಡಿದಾಯೆ aṅaḍ daaye = ಅಂಗಡಿಗಾರೆ aṅgaḍigaare = ಇತ್ಯಾದಿ

ಮುಖ್ಯ ಉಲ್ಲೇಖಗಳಲ್ಲಿ ಸಂಬಂಧವಿಲ್ಲದ ವಿಭಿನ್ನಾರ್ಥಗಳಿರುವ ಆದರೆ ಒಂದೇ ರೂಪವಿರುವ ಪದಗಳನ್ನೂ೧, ೨, ೩ ಇತ್ಯಾದಿ ಸಂಖ್ಯೆಗಳನ್ನು ಕೊಟ್ಟು ಉಲ್ಲೇಖಿಸಲಾಗಿದೆ. ಉದಾ:

ಅಡಿ’ ಎಂಬ ಉಲ್ಲೇಖದ ಕೆಳಗೆ –

ಅಡಿಮುಟ್ಟುನಿ aḍimuṭṭuni. ಓಲೆಕೊಡೆಗೆ ಮೂಲರಚನೆಯನ್ನು ಹೆಣೆಯುವುದು. Putting the base for the palm leaf umbrella.

ಅಡಿಮುಟ್ಟುನಿaḍimuṭ ṭ uni (ಕೆರೆ, ಬಾವಿ, ಮೊ.ಗಳ ನೀರು) ಬುಡ ಮುಟ್ಟುವುದು; ಆರುವುದು. Water in tank etc. reaching the bottom; becoming less – ಇತ್ಯಾದಿ.

ಹಾಗೆಯೇ ಒಂದು ಉಪ ಉಲ್ಲೇಖದ ಅರ್ಥಗಳಲ್ಲಿ ವೈವಿಧ್ಯ ಇದ್ದಾಗಲೂ ಅವುಗಳನ್ನು ಸಂಖ್ಯೆ ಹಾಕಿ ಪ್ರತ್ಯೇಕಿಸಲಾಗಿದೆ. ಉದಾ : ‘೧ ಅಡಿ’ ಎಂಬ ಉಲ್ಲೇಖದ ಕೆಳಗೆ

ಅಡಿಕ್ ಬೂರುನಿ aḍiku buuruni. ೧. ಅಡಿಗೆ ಬೀಳುವುದು To fall under or into ೨.ಸೋಲುವುದು; to the defeated or conquered. ೩. ಕಷ್ಟಕ್ಕೊಳಗಾಗುವುದು; ತೊಂದರೆಪಡುವುದು To suffer…- ಇತ್ಯಾದಿ.

ವಿಶಿಷ್ಟ ಚಿಹ್ನೆ, ಗುರುತುಗಳ ಉಪಯೋಗ

. ದುಂಡುಕಂಸ

ವ್ಯಾಕರಣ ಸೂಚಕ ಚಿಹ್ನೆಯನ್ನು ಕೊಟ್ಟಾದ ಮೇಲೆ ಇನ್ನಷ್ಟು ಸ್ಪಷ್ಟತೆಗಾಗಿ ಮುಖ್ಯ ಉಲ್ಲೇಖದ ಮೂಲರೂಪವನ್ನು ತೋರಿಸುವಾಗ –

ಉದಾ:

ಅರ್ಲಾarlaa. vc. (of ಅರ್ಲ್) – ಇತ್ಯಾದಿ.

ಬರವಣಿಗೆಯಲ್ಲಿರುವ ಉಲ್ಲೇಖಿತ ಪದದ ಬೇರೊಂದು ರೂಪವನ್ನು ಕೊಡುವಾಗ – ಉದಾ:

ಕಯಿ (ಕೈ) Kayi (kai)

ಅಯಿನ್ (ಐನ್) ayinu (ainu)

ಅರ್ಥಗಳನ್ನು ಕೊಡುವಾಗ ಇನ್ನಷ್ಟು ಸ್ಪಷ್ಟತೆಗಾಗಿ ಅರ್ಥಗಳೊಡನೆ ಪದಗಳನ್ನು ಸೇರಿಸುವಾಗ – ಉದಾ :

ಅಗ್ಗಳಿಪುaggaḷpu. vn. ೧. ಹೌಹಾರು; (ಭಯ, ವಿಸ್ಮಯಾದಿಗಳಿಂದ ಶರೀರ) ಬೆಚ್ಚಿಬೀಳು. Get shocked; stunned; feel a sort of sudden jerk in body (due to fear, astonishment) etc.

೨. ಹೇವರಿಸು (ಒಂದು ವಸ್ತುವನ್ನು ಮೇಲಿಂದ ಮೇಲೆ ನೋಡಿ ಅಥವಾ ತಿಂದು ಅದರ ಮೇಲೆ) ತಿರಸ್ಕಾರವುಂಟಾಗು. Get disguested; recoil. – ಇತ್ಯಾದಿ.

ಕೆಲವು ಉಲ್ಲೇಖಗಳಿಗೆ ಆಕರಗಳಾದ ಮೂಲ ನಿಘಂಟುಗಳ ಸಂಕೇತಸೂಚಿಯನ್ನು ಹಾಕುವಾಗ – ಉದಾ :

ಅಜಂತ ajanta, (M). adj. … – ಇತ್ಯಾದಿ

ತುಳು ಉಲ್ಲೇಖಗಳಿಗೆ ಉದಾಹರಣೆಗಳನ್ನೋ ಉದ್ಧೃತ ವಾಕ್ಯಗಳನ್ನೋ ಕೊಡುವಾಗ ಪರಾಮರ್ಶೆಗಾಗಿ ನಮೂದಿಸುವ ಅವುಗಳ ಆಕರ ಗ್ರಂಥಗಳ ಪುಟ, ಪದ್ಯ, ಅಧ್ಯಾಯ ಮೊದಲಾದವುಗಳನ್ನು ಕೊಡುವಾಗ –

ಉದಾ:

ಅಂಬರ‘ ಉಲ್ಲೇಖದ ಕೆಳಗೆ –

Bh. (1, 2, 32, 18) -ಇತ್ಯಾದಿ

ಮುಖ್ಯ ಉಲ್ಲೇಖಗಳು ಸಮಸ್ತ ಪದಗಳಾಗಿದ್ದಲ್ಲಿ ಅವುಗಳನ್ನು ವಿಂಗಡಿಸಿ ಕೊಡುವಾಗ ಅವುಗಳ ಒಂದು ಪದವು ತುಳುವೇತರ ಭಾಷೆಯದ್ದಾಗಿದ್ದರೆ ಆ ಮೂಲ ಭಾಷೆಯ ಸಂಕೇತಸೂಚಿಯನ್ನು ಕೊಡುವಾಗ ಉದಾ :

‘ಅರ್ಚಿಪು’ – ಎಂಬ ಉಲ್ಲೇಖದ ಕೆಳಗೆ

are (Skt) + ipu. – ಇತ್ಯಾದಿ.

ಒಂದು ಪದದ ಅರ್ಥ ಅಥವಾ ಮೂಲವು ಸಂದೇಹಾಸ್ಪದವಾಗಿದ್ದಾಗ ಸಂದೇಹ ಸೂಚಕ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುವಾಗ – ಉದಾ :

ಅಸಕ್ಕ asakka. n., ೧. ಬೆರಗು (?) Wonder (?) ೨. ಭಯ (?) Fear (F)

ajane (?) + buuru – ಇತ್ಯಾದಿ

ಒಂದು ಪದವು ಇನ್ನೊಂದರಿಂದ ಸಾಧಿತವಾದದ್ದೆಂದು ಸೂಚಿಸುವಾಗ ಉದಾ :

aḍḍ a + kaattu (<kaarru). – ಇತ್ಯಾದಿ.

. ಚೌಕಕಂಸ

q.v., obl. ಮೊದಲಾದ ವಿಶೇಷ ವಿಷಯಗಳನ್ನು ನಮೂದಿಸುವಾಗ ಉದಾ:

ಅಸ್ತ asta. n. (q.v. ಅಸ್ತಮಯ; ಅಸ್ತಮಾನ. astamaya; astamaana).

ಅಜ್ಜೆ ajje. (ಅಜ್ಜೆರ್ ajjeru, hon, sg.; ಅಜ್ಜಡಿಕ್ಲು ajjaḍikḷu, pl.; ಅಜ್ಜಾ / ಅಜ್ಜೆರೇ್ ajja / ajjeree,. volc).-ಇತ್ಯಾದಿ

ಒಗಟುಗಳ ಅರ್ಥವನ್ನು ಕೊಡುವಾಗ – ಉದಾ :

‘ಅಂಕಣ’ ಉಲ್ಲೇಖದ ಕೆಳಗೆ –

ಅಂಕಣ ಅಂಕಣ ಪದಿನಾಜಿ ಅಂಕಣ ಮುಗುಳಿ ಮಾತ್ರ ತಿರ್ತ್ aṅkaṇa aṅkaṇa padinaaja aṅkaṇa muguḷi maatra tirtu, rid. ಅಂಕಣ ಅಂಕಣ ಹದಿನಾರು ಅಂಕಣ, ಕಳಸ ಮಾತ್ರ ಕೆಳಗೆ. (=ಬಾಳೆಗೊನೆ).

. ಮಾಗುಗೆರೆ (bar)

ಮುಖ್ಯ ಮತ್ತು ಉಪ ಉಲ್ಲೇಖಗಳಿಗೆ ಒಂದಕ್ಕಿಂತ ಹೆಚ್ಚು ವಿಭಿನ್ನ ರೂಪಗಳಿರುವಾಗ ಅವುಗಳು ಸಮಾನವಾಗಿ ಪ್ರಯೋಗಗೊಳ್ಳುತ್ತವೆ ಎಂಬುದನ್ನು ಸೂಚಿಸಲು ಅವುಗಳ ನಡುವೆ ಮಾಲುಗೆರೆ ಹಾಕಲಾಗಿದೆ. ಉದಾ:

ಅರಂಟ್ / ಅರಟ್ಟ್ / ಅರಟ್ araṇṭu / araṭṭu / araṭu. va… – ಇತ್ಯಾದಿ.

ಜ್ಞಾತಿಪದಗಳನ್ನು ಕೊಡುವಾಗಲೂ ಕೆಲವು ಕಡೆ ಇದೇ ರೀತಿ ಮಾಲುಗೆರೆಗಳನ್ನು ಉಪಯೋಗಿಸಲಾಗಿದೆ. ಉದಾ :

Ta. ivan; Ma. ivan; Ka. ivan (u); Te. iitanu; Kol. im / imd; Nk. ivnd; Kui. ianju.

. ಸಮಚಿಹ್ನೆ

ಒಂದೇ ಮುಖ್ಯ ಉಲ್ಲೇಖದ ಕೆಳಗೆ ಸಮಾನ ಅರ್ಥದ ಒಂದಕ್ಕಿಂತ ಹೆಚ್ಚು ಉಪ ಉಲ್ಲೇಖಗಳು ಬಂದರೆ ಅಕಾರಾದಿಕ್ರಮದಲ್ಲಿ ನಮೂದಿಸಲಾದ ಅವುಗಳಲ್ಲಿ ಒಂದಕ್ಕೆ ವಿವರವಾದ ಅರ್ಥಗಳನ್ನು ಕೊಟ್ಟು ಉಳಿದವುಗಳ ಮುಂದೆ ‘=’ (ಸಮ) ಚಿಹ್ನೆ ಹಾಕಿ ಅರ್ಥಕ್ಕೋಸ್ಕರ ನೋಡಬೇಕಾದ ಉಲ್ಲೇಖವನ್ನು ನಮೂದಿಲಾಗಿದೆ. ಉದಾ :

ಅಣಿ’ – ಎಂಬ ಉಲ್ಲೇಖದ ಕೆಳಗೆ

ಅಣಿಕಟ್ಟುನಿaṇikaṭṭuni. ಅಣಿಯನ್ನು ಧರಿಸುವುದು.

wearing ani.

ಅಣಿಕೋಪುನಿaṇ ikoopuni = ಅಣಿಕಟ್ಟುನಿ aṇikaṭṭuni.

ಅಣಿದೀಪುನಿaṇidiipuni = ಅಣಿಕಟ್ಟುನಿ aṇikaṭṭuni –ಇತ್ಯಾದಿ

ಒಗಟನ್ನು ಕೊಡುವಾಗ ಅದರ ಕನ್ನಡಾನುವಾದವನ್ನು ಕೊಟ್ಟ ಬಳಿಕ ಚೌಕಕಂಸದ ಒಳಗೆ ಅರ್ಥವನ್ನು ಕೊಡುವ ಮೊದಲು ಸಮಚಿಹ್ನೆ ಹಾಕಲಾಗಿದೆ.

ಉದಾ:

‘ಅಂಗಿ’ ಎಂಬ ಉಲ್ಲೇಕದ ಅಡಿಯಲ್ಲಿ –

ಅಂಗಿ ದೆತ್ತೆ ಗುವೆಲ್ಗ್ ಲಾಗ್ಯೆ angi dette guvelugu laayge, rid. ಅಂಗಿ ತೆಗೆದ, ಬಾವಿಗೆ ಹಾರಿದ (= ಬಾಳೆಹಣ್ಣು). – ಇತ್ಯಾದಿ.

. ಪ್ರಶ್ನಾರ್ಥಕ ಚಿಹ್ನೆ

ಅರ್ಥದಲ್ಲಿ ಸಂದೇಹವಿದ್ದಾಗ – ಉದಾ :

ಅಬಿ abi, SWht. n. ನಂಜು; ಮಾಸು (?) Placenta (?) – ಇತ್ಯಾದಿ.

ಮುಖ್ಯ ಉಲ್ಲೇಖ ಸಮಾಸವಾಗಿದ್ದು ಅದನ್ನು ವಿಂಗಡಿಸಿಕೊಡುವಾಗ ಆ ವಿಭಕ್ತ ಪದಗಳಲ್ಲಿ ಒಂದರ ಅಥವಾ ಎರಡೂ ಪದಗಳ ಅರ್ಥ ಮತ್ತು ಮೂಲದ ಬಗ್ಗೆ ಸಂದೇಹವಿರುವಾಗ – ಉದಾ :

‘ಅತ್ರಿಮಿತ್ರಿ’ ಉಲ್ಲೇಖದ ಕೆಳಗೆ –

atri (?)+ mitri (Skt. maitri?) – ಇತ್ಯಾದಿ.

ಮುಖ್ಯ ಉಲ್ಲೇಖವು ಬೇರೊಂದು ಪದದ ವಿಕೃತರೂಪವೋ, ಅಥವಾ ಏನಾದರೊಂದು ರೀತಿಯಲ್ಲಿ ಸಂಬಂಧಿಯೋ ಎಂಬ ಅನುಮಾನ ಬಂದಾಗ ಉದಾ:

ಅದ್ದಯ / ಅದ್ದಯೊ addaya / addayo, n

Skt. adhyaaya (?) ಇತ್ಯಾದಿ.