ತುಳುವಿಗೆ ಸಂಬಂಧಿಸಿದ ಕನ್ನಡ ಕವನ ಸಂಕಲನ – ಖಂಡ ಕಾವ್ಯ

ಕೃಷ್ಣ ಭಟ್ಟ ವಿ.ಬಿ. ಪಂಡಿತ, ೧೯೪೩
ಶ್ರೀ ಕ್ಷೇತ್ರ ಧರ್ಮಸ್ಥಳ ಮಹಾತ್ಮೆ
ರೂ. ೧-೮-೦.

ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲಾಗಿದೆ.

ನರಸಿಂಹ ಭಟ್ ಕೈಂತಜೆ, ೧೯೯೭
ಗರತಿ ಮಂಗಣೆ (ಜಾನಪದ ಖಂಡ ಕಾವ್ಯ)
ಕ್ರೌನ್ ೧/೮, ಪುಟಗಳು : ೪೬, ರೂ. ೧೮/-

ತುಳುನಾಡಿನಲ್ಲಿ ಪತಿವತ್ರೆಯರ ಸಾಲಿಗೆ ಸೇರಿದ ಅಸ್ಪೃಶ್ಯ ವರ್ಗದ ಪರವ ಜಾತಿಯ ಮಂಗಣೆಯ ಬಾಳಿನ ಒಂದು ಭಾಗವನ್ನು ವಸ್ತುವಾಗಿರಿಸಿಕೊಂಡು ಮಲ್ಲಿಕಾ ಮಾಲಾ ಸಮವೃತ್ತದ ಧಾಟಿಯಲ್ಲಿ ೩x೪ ಮಾತ್ರೆಗಳ ಗಣಗಳಿರುವ ಭಾಮಿನೀ ಷಟ್ಪದಿಯಲ್ಲಿ ಈ ಖಂಡಕಾವ್ಯವನ್ನು ರಚಿಸಲಾಗಿದೆ.

ನರಸಿಂಹ ಭಟ್ ಕೈಂಜತೆ, ೧೯೮೪
ತುಳುನಾಡ ಕಲಿಗಳು ಕೋಟಿಚೆನ್ನಯ
ಕ್ರೌನ್ ೧/೮, ಪುಟಗಳು : ೧೪+೭೬, ರೂ. ೧೦/-

ತುಳುನಾಡಿನ ಜನಪದ ವೀರರಾದ ಕೋಟಿ ಚೆನ್ನಯರ ಕುರಿತ ಖಂಡಕಾವ್ಯ.

ಮಹಾಬಲೇಶ್ವರ ಭಟ್ಟ ಪಡಾರು, ೧೯೯೨
ಜಾನಪದ (ಕನ್ನಡ ಕವಿತೆಗಳು)
ಜನಪದ ಸಾಹಿತ್ಯ, ಮಂಚಿ, ಪುಟಗಳು : ೧೫, ರೂ. ೧.೫೦/-

೫ ಕವನಗಳಿದ್ದು ಅವುಗಳಲ್ಲಿ ತುಳುವರ ಸಂಸ್ಕೃತಿಗೆ ಸಂಬಂಧಿಸಿದಂತಹ ‘ತುಳುವರ ಸಂಧಿ’ ಹಾಗೂ ‘ಟ್ರುವೇಲೆ ಹಾಡು’ (ತೊಟ್ಟಿಲ ಹಾಡು) ಎಂಬ ೨ ಕವನಗಳಿವೆ.

 

ತುಳು ನಾಟಕಗಳು
(ಐತಿಹಾಸಿಕ, ಸಾಮಾಜಿಕ, ಪೌರಾಣಿಕ)

ಅನ೦ತರಾಮ ಬಂಗಾಡಿ ಕೆ., ೧೯೯೧
ದೇವು ಪೂಂಜೆ (ತುಳು ಚಾರಿತ್ರಿಕ ನಾಟಕ)
ವಿ.ಪಿ.ಸಿ. ಪಬ್ಲಿಕೇಷನ್ಸ್, ಮಂಗಳೂರು
ಕ್ರೌನ್ ೧/೮, ಪುಟಗಳು ೨+೩೦, ರೂ. ೫/-

ಬಂಟ ಕುಲದ ಪರಾಕ್ರಮಿಯಾದ ದೇವು ಪೂಂಜನ ಕಥೆಯ ಒಂದು ಘಟನೆಯನ್ನು ಲೇಖಕರು ನಾಟಕವಾಗಿಸಿದ್ದಾರೆ. ಹೆಣ್ಣೊಬ್ಬಳ ಸಾಮರ್ಥ್ಯ, ದೇವು ಪೂಂಜನ ಪರಾಕ್ರಮ, ಹಾಗೆಯೇ ಗಂಡ – ಹೆಂಡತಿಯ ದುರಂತ, ಇತ್ಯಾದಿಗಳನ್ನು ಈ ನಾಟಕ ಚಿತ್ರಿಸುತ್ತದೆ. ಇದು ಒಂದು ಘಂಟೆಯ ಅವಧಿಯಲ್ಲಿ ಪ್ರದರ್ಶಿತವಾಗುವ ಕಿರುನಾಟಕ.

ಅನ೦ತರಾಮ ಬಂಗಾಡಿ ಕೆ., ೧೯೯೧
ಸಿರಿಗಂಗೆ (ತುಳು ಚಾರಿತ್ರಿಕ ನಾಟಕ)
ವಿ.ಪಿ.ಸಿ. ಪ್ರಕಾಶನ, ಮಂಗಳೂರು, ಕ್ರೌನ್ ೧/೮, ರೂ. ೫/-

ಪಾಡ್ದನದಲ್ಲಿ ನಡೆದ ಸಂಗತಿಯಂತೆ ಕಾಣುವ ಹೆಣ್ಣೊಬ್ಬಳ ತ್ಯಾಗ ಬಲಿದಾನ ಕಥೆ ಸಿರಿ-ಗಂಗೆ ಇಬ್ಬರ ದೇಶಭಕ್ತಿಯನ್ನು ಮೆರೆಸುವ ಸನ್ನಿವೇಶವಿರುವ ನಾಟಕ.

ಅಮೃತ ಸೋಮೇಶ್ವರ, ೧೯೮೦
ಗೋಂದೊಳು (ತುಳು ನಾಟಕ)
ಪ್ರಕೃತಿ ಪ್ರಕಾಶನ ಕೋಟೆಕಾರು, ಡೆಮಿ ೧/೮, ಪುಟಗಳು : ೪೪+೮, ರೂ. ೫/-

ಈ ನಾಟಕದಲ್ಲಿ ತಲೆಮಾರಿನ ಹಿಂದಿನ ತುಳುನಾಡಿನ ಜನರ ನಡವಳಿಕೆಗಳನ್ನು ಸಹಜವಾಗಿ ಚಿತ್ರಿಸಲಾಗಿದೆ. ಇದರಲ್ಲಿನ ಪಾಡ್ದನ, ನುಡಿಕಟ್ಟು, ಹಾಡುಗಳು ತುಳುನಾಡಿನ ಸಂಸ್ಕೃತಿಯನ್ನು ಹೇಳುತ್ತವೆ.

ಅಮೃತ ಸೋಮೇಶ್ವರ, ೧೯೮೨
ರಾಯರಾವುತೆ (ತುಳು ನಾಟಕ)
ತುಳುವ ಪ್ರಕಾಶನ ಮಂಗಳೂರು, ಡೆಮಿ ೧/೮, ಪುಟಗಳು : ೬+೪೮, ರೂ. ೬/-

ಕಮ್ಮಟ ದುರ್ಗದ ಶೂರ ಕುಮಾರರಾಮನ ಕಥೆಗೆ ತುಳು ಸಂಸ್ಕೃತಿಯ ಚೌಕಟ್ಟನ್ನು ಹಾಕಿ ಮಾಡಿದ ನಾಟಕ. ಹೆಣ್ಣೊಬ್ಬಳ ಅಹಂಕಾರ ಅಧಿಕವಾದರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದೆಂಬುದನ್ನು ಅಜ್ಜಿಕತೆಯ ಧಾಟಿಯಲ್ಲಿ ಹೇಳುವಂತೆ ತುಳುವ ಸಂಸ್ಕೃತಿಯ ಮಗ್ಗುಲನ್ನು ತೋರಿಸುವ ಪ್ರಯತ್ನ ಇಲ್ಲಿದೆ.

ಅಮೃತ ಸೋಮೇಶ್ವರ, ೧೯೮೪
ಪುತ್ತೂರ್ದ ಪುತ್ತೊಳಿ (ತುಳು ನಾಟಕ)
ಸಮೀರ ಪ್ರಕಾಶನ ಪುತ್ತೂರು, ಡೆಮಿ ೧/೮, ಪುಟಗಳು : ೪+೨೬, ರೂ. ೪/-

ಬೆಲ್ಜಿಯಂ ದೇಶದ ಕಲಿ ಮಾರಿಸ್ ಮ್ಯಾಟರ್ಲಿಂಕ್ ಬರೆದ ‘ಮೊನ್ನವನ್ನ’ದ ಕನ್ನಡ ಅನುವಾದ – ಎಸ್.ಜಿ. ಸ್ವಾಮಿ ನಾಟಕದ ಒಂದು ಭಾಗ ಈ ಕೃತಿಗೆ ಪ್ರೇರಕ. ಸೀಮೆಯ ಸಾವಿರ ಮಂದಿಯ ಜೀವ ಉಳಿಸಲು ಮುತ್ತೈದೆ ಹೆಣ್ಣೊಬ್ಬಳು ತನ್ನ ಮಾನವನ್ನು ಒತ್ತೆ ಇಟ್ಟು ಹೋಗುವಂಥ ಧರ್ಮ ಸಂಕಟದ ವಿಷಯ ಈ ನಾಟಕದ ತಿರುಳು.

ಅಮೃತ ಸೋಮೇಶ್ವರ, ೧೯೮೯
ಎಳುವೆರ್ ದೆಯ್ಯಾರ್ (ತುಳು ನೃತ್ಯರೂಪಕ)
ಪ್ರಕೃತಿ ಪ್ರಕಾಶನ, ಕೋಟೆಕಾರು – ೫೭೪ ೧೫೨
ಡೆಮಿ ೧/೮, ಪುಟಗಳು : ೪+೨೦, ರೂ. ೬/-

ನಾರಾಯಣ ದೇವರ ಏಳು ಹನಿ ಕಣ್ಣೀರಿನಿಂದ ಏಳು ದೇವಿಯರು ಹುಟ್ಟಿದುಷ್ಟ ಶಿಕ್ಷಣ ರಕ್ಷಣೆ ಮಾಡುತ್ತಾ ತುಳುನಾಡಿನ ವಿವಿಧ ದಿಕ್ಕುಗಳಲ್ಲಿ ನೆಲೆ ನಿಂತ ಕಥೆಯನ್ನು ಹೇಳುತ್ತದೆ.

ಅಮೃತ ಸೋಮೇಶ್ವರ, ೧೯೮೯
ತುಳುನಾಡ ಕಲ್ಕುಡೆ (ತುಳು ನಾಟಕ)
ಪ್ರಕೃತಿ ಪ್ರಕಾಶನ ಕೋಟೆಕಾರು, ಡೆಮಿ ೧/೮, ಪುಟಗಳು ೪+೪೨, ರೂ. ೧೦/-

ತುಳುನಾಡಿನ ಹೆಸರಾಂತ ಭೂತಗಳಾದ ಕಲ್ಕುಡ – ಕಲ್ಲುರ್ಟಿಯರ ಪಾಡ್ದನದ ಆಧಾರದಿಂದ ಈ ನಾಟಕವನ್ನು ರಚಿಸಲಾಗಿದೆ. ಶ್ರವಣಬೆಳ್ಗೊಳ, ಕಾರ್ಕಳ, ವೇಣೂರು ಈ ಮೂರು ಪ್ರದೇಶಗಳಲ್ಲಿರುವ ಗೊಮ್ಮಟನ ರಚನೆ ಈ ನಾಟಕದ ವಸ್ತು. ಪಾಡ್ದನಗಳಲ್ಲಿರುವ ಕತೆಗೆ ಚಾರಿತ್ರಿಕ ಸಂಗತಿಗಳನ್ನು ಸೇರಿಸಿ ಈ ನಾಟಕವನ್ನು ರಚಿಸಿರುತ್ತೇನೆಂದು ಲೇಖಕರು ಹೇಳಿಕೊಂಡಿದ್ದಾರೆ.

ಅಮೃತ ಸೋಮೇಶ್ವರ, ೧೯೯೦
ಅಟೊ ಮುಗಿಂಡ್ (ತುಳು ನಾಟಕ)
ತುಳು ಸಂಘ, ವಿವೇಕಾನಂದ ಕಾಲೇಜು, ಪುತ್ತೂರು
ಡೆ. ೧/೮, ಪು. ೪+೨೪, ರೂ. ೫/-

ಯಕ್ಷಗಾನ ಬಯಲಾಟದ ಕಾಲವಿದನ ಕೀರ್ತಿಯ ಉದಯಾಸ್ತ ಮಾನದ ಚಿತ್ರಣವನ್ನು ಈ ನಾಕಟಕೃತಿ ನೀಡುತ್ತದೆ.

ಅಮೃತ ಸೋಮೇಶ್ವರ, ೨೦೦೫
ತುಳು ನಾಟ್ಯ ರೂಪಕೊಲು
ಯುಗಪುರುಷ, ಕಿನ್ನಿಗೋಳಿ, ದ.ಕ., ಡೆ. ೧/೮, ಪು. Vi + ೭೨. ರೂ. ೪೦/-

ಬಾಮಕುಮಾರೆ, ಎಳುವೆರ್ ದೆಯ್ಯಾರ್, ತುಳುವಾಲ ಬಲಿಯೇಂದ್ರೆ, ಸತ್ಯನಾಪುರದ ಸಿರಿ ಈ ನಾಲ್ಕು ರೂಪಕಗಳ ಸಂಕಲನ.

ಅಶೋಕ್ ಕುಮಾರ್ ಪಿ., ೧೯೯೩
ಸುಳಿಕ್ ತಿಕ್ಕಿನ ಬದ್‌ಕ್‌
ಸಾಜ್ ಎಂಟರ್ಪ್ರೈಸಸ್ ಪಬ್ಲಿಷರ್ಸ್ ಎಂಡ್ ಕಮಿಷನ್ ಏಜೆಂಟ್ಸ್, ಮಂಗಳೂರು
ಕ್ರೌ. ೧/೮, ರೂ. ೧೨/-

ತುಳು ಸಾಮಾಜಿಕ ನಾಟಕ.

ಅಶೋಕ್ ಕುಮಾರ್ ಪಿ., ೧೯೯೪
ಬದ್‌ಕ್‌ದ ಎತೆ-ಕತೆ (ತುಳು ಸಾಮಾಜಿಕ ನಾಟಕ)
ಸಾಜ್ ಎಂಟರ್ಪ್ರೈಸಸ್ ಪಬ್ಲಿಷರ್ಸ್, ಎಂಡ್ ಕಮಿಷನ್ ಏಜೆಂಟ್ಸ್, ಮಂಗಳೂರು
ಕ್ರೌನ್ ೧/೮, ರೂ. ೧೦/-

ಮಾನವ ಅತಿಯಾದ ಆಸೆಗಳಿಗೆ ಬಲಿ ಬೀಳಬಾರದು. ಅದು ಅವನನ್ನೇ ಅವನತಿಯೆಡೆಗೆ ಕೊಂಡೊಯ್ಯುತ್ತದೆ. ಈ ಮಾತುಗಳನ್ನು ಬೊಟ್ಟು ಮಾಡಿ ತೋರುವಂತೆ ಚಿತ್ರಿಸಿದ್ದೇನೆ ಎಂದು ಲೇಖಕರು ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಆದ್ದರಿಂದ ಬದುಕಿನಲ್ಲಿ ನಡೆಯಬಹುದಾದ ಘಟನೆಗಳ ಎಳೆಗಳಲ್ಲೇ ಈ ಕತೆ ಹರಿಯುತ್ತದೆ.

ಆನಂದ ಪಾ.ಕೃ., ೧೯೮೪
ಗೂಡುಡಿತ್ತಿನಪಕ್ಕಿ (ತುಳು ಸಾಮಾಜಿಕ ನಾಟಕ)
ವಿಶ್ವಕಲಾನಿಕೇತನ ಪ್ರಕಾಶನ ಪುತ್ತೂರು
ಕ್ರೌನ್ ೧/೮, ಪುಟಗಳು : ೪+೨೮, ರೂ. ೩/-

ಆದರ್ಶ ಪ್ರೇಮದ ಸುತ್ತ ಹೆಣೆದ ಕಥೆ ಇಲ್ಲಿದೆ.

ಆನಂದ ಪಾ.ಕೃ., ೧೯೮೫
ಒಂಜಿ ತಾಳಿ ರಡ್ದ್ ಸಾದಿ (ತುಳು ಸಾಮಾಜಿಕ ನಾಟಕ)
ಪ್ರತಿಮಾ ಪ್ರಕಾಶನ ಪಂಜ, ಕ್ರೌನ್ ೧/೮, ರೂ. ೫/-

ಆನಂದ ಪ್ರಾ.ಕೃ., ೧೯೮೬
ಬ್ರಹ್ಮರ್ಕಟ್ (ತುಳು ಸಾಮಾಜಿಕ ನಾಟಕ)
ಸುಪ್ರಿಯಾ ಪ್ರಕಾಶನ ಮಾಡಾವು, ಕ್ರೌನ್ ೧/೮, ಪುಟಗಳು : ೪+೩೨ ರೂ. ೫/-

ನಮ್ಮ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಬಾಲ ವಿಧವೆಯರನ್ನು ಹೀನವಾಗಿ ಕಾಣುವ ಕೆಟ್ಟ ಸಂಪ್ರದಾಯವನ್ನು ಹೋಗಲಾಡಿಸಲು ಹಾಗೂ ನಡೆಯುತ್ತಿರುವ ಅನ್ಯಾಯಗಳನ್ನು ಸಾಧ್ಯವಾದಷ್ಟು ತಡೆಯುವ ಉದ್ದೇಶದಿಂದ ಈ ನಾಟಕದ ರಚನೆಯಾಗಿದೆ.

ಆನಂದ ಪಾ.ಕೃ., ೧೯೮೮
ಕಲ್ಯಾಣಿ (ತುಳು ನಾಟಕ)
ಆನಂದ ಪ್ರಕಾಶನ ಪಾಲ್ತಾಡಿ, ಕ್ರೌನ್ ೧/೮, ಪು: ೬+೩೮, ರೂ. ೫/-

ಒಂದು ಊರಿನ ವಿದ್ಯಾವಂತರಾದ ಯುವಕರು ಆ ಊರು ಒಳ್ಳೆಯದಾಗಲು ಪ್ರಯತ್ನಿಸುವಂಥ ಕಥೆ ಇದೆ. ಸ್ವಾರ್ಥ ಮತ್ತು ತ್ಯಾಗ ಈ ಎರಡು ಪಶು ದೈವ ಶಕ್ತಿಗಳ ಹೋರಾಟದಲ್ಲಿ ದೈವಶಕ್ತಿಗೆ ಜಯವೆಂಬುದನ್ನು ಈ ನಾಟಕ ತೋರಿಸುತ್ತದೆ.

ಆನಂದ ಪಾ.ಕೃ., ೨೦೦೦
ರಾಮೆ (ತುಳು ನಾಟಕ)
ಆನಂದ ಪ್ರಕಾಶನ ಪಾಲ್ತಾಡಿ, ಕ್ರೌ. ೧/೮, ಪುಟಗಳು : ೩೪, ರೂ. ೨೫/-

ಮನುಷ್ಯನ ವ್ಯಕ್ತಿತ್ವದ ಒಳಮಗ್ಗುಲುಗಳ ಕೆಲವು ವಿಚಾರಗಳನ್ನು ಈ ನಾಟಕ ಹೇಳುತ್ತದೆ. ಮನುಷ್ಯನಲ್ಲಿ ಸಹಜವಾಗಿರುವ ಮದ-ಮತ್ಸರ, ಛಲ, ಮೋಸ ಇತ್ಯಾದಿ ಸಂಗತಿಗಳು ಹೇಗೆ ಆಟವಾಡಿಸುತ್ತವೆಂಬುದನ್ನು ತಿಳಿಸುವ ಉದ್ದೇಶವೂ ಈ ನಾಟಕದಲ್ಲಿದೆ. ಹಳ್ಳಿಯ ರೀತಿ-ರಿವಾಜು ನಂಬಿಕೆಗಳನ್ನು ಇದರಲ್ಲಿ ಅನಾವರಣಗೊಳಿಸಿಸಲಾಗಿದೆ.

ಆನಂದ ಪಾ.ಕೃ. ೨೦೦೩
ದೈವೊ ನಿರ್ಣಯೊ (ತುಳು ನಾಟಕ)
ಆನಂದ ಪ್ರಕಾಶನ, ಪಾಲ್ತಾಡಿ ಕ್ರೌ. ೧/೮, ಪು. ೪೪, ರೂ. ೨೦/-

ಈ ಕೃತಿಯನ್ನು ನೂರಾರು ವರ್ಷಗಳ ಹಿಂದೆ ಒಂದು ಊರಿನಲ್ಲಿ ನಡೆದ ಸತ್ಯಕತೆಯ ಎಳೆಯನ್ನು ತೆಗೆದುಕೊಂಡು ಅದಕ್ಕೆ ಕಾಲ್ಪನಿಕ ಸನ್ನಿವೇಶಗಳನ್ನು ಸೇರಿಸಿ ಲೇಖಕರು ಬರೆದಿದ್ದಾರೆ.

ಆನಂದಕೃಷ್ಣ, ೧೯೯೭
ಪಿಲಿಪತ್ತಿ ಗಡಸ್ (ತುಳು ಜಾನಪದ ನಾಟಕ)
ದುರ್ಗಾ ಪ್ರಕಾಶನ ಮಂಗಳೂರು, ಡೆಮಿ ೧/೮, ರೂ. ೩೦/-

ಇಲ್ಲಿನ ಮಾತುಕತೆಗಳಲ್ಲಿ ಒಟ್ಟಾರೆ ಎದ್ದು ಕಾಣುವುದು ಹೆಣ್ಣು -ಗಂಡಿನ ಸಂಬಂಧ ಪ್ರೀತಿ -ಪ್ರೇಮ, ಗೆಳೆತನ ಇವೆಲ್ಲವೂ ಗಂಡ-ಹೆಂಡತಿ ಎಂಬ ಚೌಕಟ್ಟನ್ನು ಮೀರಿ ಮುಂದುವರಿದದ್ದು, ಅಡ್ಡದಾರಿ ಹಿಡಿದದ್ದು, ಬಲಾತ್ಕಾರ, ಅನ್ಯಾಯ, ಅತ್ಯಾಚಾರ, ವ್ಯಭಿಚಾರ, ಕ್ರೌರ್ಯ, ಚಿತ್ರಹಿಂಸೆಗಳ ಚಿತ್ರಣವನ್ನು ಈ ನಾಟಕದಲ್ಲಿ ನೀಡಲಾಗಿದೆ.

ಇಬ್ರಾಹಿಂ ಎಮ್. ಎಸ್‌., ೧೯೬೫
ಪೊಣ್ಣೇ ಸಮಾಜದ ಕಣ್ಣ್ (I) ೧೯೬೬ (II)
ವೀಣಾ ಸಾಹಿತ್ಯ ನಿಲಯ ಮಂಗಳುರು, ಕ್ರೌನ್ ೧/೮, ರೂ. ೧.೨೦/-

ಬೋಧಪ್ರದ, ದುಃಖದಾಯಕ, ಹಾಸ್ಯಮಯ ತುಳು ಸಾಮಾಜಿಕ ನಾಟಕ.

ಇಬ್ರಾಹಿಂ ಎಂ.ಎಸ್., ೧೯೯೨
ಮೋಕೆದ ಪೊದು
ತುಳು ಹಾಸ್ಯ ನಾಟಕ, ವೀಣಾ ಸಾಹಿತ್ಯ ನಿಲಯ, ಎಂ.ಎಸ್. ಆರ್ಟ್ಸ್‌ಮಣ್ಣಗುಡ್ಡ
ಕ್ರೌನ್ ೧/೮, ರೂ. ೧೨/-

ಉದಯಶಂಕರ್ ಎನ್.ಎ., ೨೦೦೦
ನವರಂಗ್ ಆಟ್ಸ್, ಗಾಂಧಿನಗರ, ಕೊಲ್ಲಂಗಾನ, ಉಲ್ಲೋಡಿ, ಕಾಸರಗೋಡು-
೬೭೧ ೩೨೧, ಕ್ರೌನ್ ೧/೮, ಪುಟಗಳು : ೮+೬೪ ರೂ. ೨೦/-

ಕುಮಾರ್ ಕೆ.ವಿ., ೧೯೬೬
ತ್ಯಾಗ ಮಲ್ತಿನ ಜೀವ
ಕೆ.ವಿ. ಕುಮಾರ್, ಫಿಜಿಕಲ್ ಎಜುಕೇಶನ್ ಟೀಚರ್, ಕೆನರಾ ಹೈಸ್ಕೂರ್,
ಮಂಗಳೂರು, ಕ್ರೌ. ೧೮

ತುಳು ಹಾಸ್ಯ ನಾಟಕ.

ಕೆದಂಬಾಡಿ ಜತ್ತಪ್ಪ ರೈ, ೧೯೮೮
ಪಡಿಲ್ ಪಂಪೆ (ತುಳು ನಾಟಕೊ)
ಕೆದಂಬಾಡಿ ಪ್ರಕಾಶನ, ಪಾಣಾಜೆ, ದ.ಕ.
ಕ್ರೌ. ೧/೮, ಪುಟ ೫೨, ಬೆಲೆ ರೂ. ೧೦/-

ಎಂ.ಆರ್. ಶ್ರೀ ಅವರ ನಾಗರಿಕ ನಾಟಕದ ಚೌಕಟ್ಟಿನಲ್ಲಿ ರಚನೆಗೊಂಡ ನಾಟಕ.

ಕೊಕ್ರಾಡಿ, ಕೆ.ಜೆ. ಉಜಿರೆ, ೧೯೮೪
ಕಾವೇರಿ
ಪ್ರಕಾಶಕರು : ಕೆ.ಜೆ. ಕೊಕ್ರಾಡಿ, ಕ್ರೌನ್ ೧/೮, ರೂ. ೫/-

ತುಳು ಸಾಮಾಜಿಕ ನಾಟಕ, ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿದೆ.

ಕೊಕ್ರಾಡಿ ಕೆ.ಜೆ. ಉಜಿರೆ, ೧೯೮೪
ಬೈರನ ಬದ್‌ಕ್, ಕ್ರೌ. ೧/೮, ರೂ. ೬/-

ತುಳು ಸಾಮಾಜಿಕ ತುಳುಕೂಟ ಮಂಗಳೂರು ಇವರು ಏರ್ಪಡಿಸಿದ ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಗಳಿಸಿದೆ.

ಕೋಡು ಭೋಜ ಶೆಟ್ಟಿ, ೧೯೯೨
ಪೊಸ ಬಿನ್ನೆರ್
ಸಾಹಿತ್ಯಲಹರಿ ಪ್ರಕಾಶನ, ಔರಂಗಬಾದ್, ಕ್ರೌ. ೧/೮, ಪುಟ ೫೨+೮

ಸಾಮಾಜಿಕ ನಾಟಕ

ಕ್ಯಾಥರಿನ್ ರಾಡ್ರಿಗಸ್, ೧೯೯೨
ಕೇದಗ (ತುಳು ನಾಟಕ)
ತುಳುಕೂಟ ಉಡುಪಿ, ಕ್ರೌನ್ ೧/೮, ರೂ. ೮/-

ಪಾಡ್ದನದ ಆಧಾರದಿಂದ ರಚಿಸಲಾದ ನಾಟಕ ‘ಕೇದಗ’ ತುಳುಕೂಟದವರು ನಡೆಸಿದ ದಿ. ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ನಾಟಕ.

ಕ್ಯಾಥರಿನ್ ರಾಡ್ರಿಗಸ್, ೧೯೯೫
ಸಿರಿತುಪ್ಪೆ (ತುಳು ನಾಟಕ, ರೂಪಕ)
ಪ್ರೀತಿ ಪ್ರಕಾಶನ ಕಟಪಾಡಿ, ಡೆಮಿ ೧/೮, ಪುಟಗಳು : ೮+೧೦೦, ರೂ. ೨೦/-

ಇವರು ಬರೆದ ೧೦ ರೇಡಿಯೊ ನಾಟಕಗಳು ಈ ಪುಸ್ತಕದಲ್ಲಿದೆ. ಉದಾ: ನಾಗಸಿರಿ ಕನ್ನಿಕಾ, ಕಾಂತು ಕಬೇದಿ, ಪಂಥ, ಕಾರ್ನಿಕದ ದೈವ, ಜೋಗಿ ಪುರ್ಸೆ ಇತ್ಯಾದಿ ಇಲ್ಲಿನ ಹೆಚ್ಚಿನ ನಾಟಕಗಳಲ್ಲಿ ತುಳು ಪಾಡ್ದನ ಕತೆಗಳ ವಸ್ತುವಿದೆ. ತುಳು ಪಾಡ್ದನ ಕಥೆಗಳಿಗೆ ರೇಡಿಯೋ ನಾಟಕದಲ್ಲಿ ಹೊಸ ಒಪ್ಪ ನೀಡುವ ಕೆಲಸವನ್ನು ಇವರು ಮಾಡಿದ್ದಾರೆ. ಇಲ್ಲಿನ ನಾಟಕಗಳಲ್ಲಿ ಗಂಡು – ಹೆಣ್ಣಿನ ಸಂಬಂಧದ ಬೇರೆ ಬೇರೆ ಮುಖಗಳು ವ್ಯಕ್ತವಾಗುತ್ತವೆ. ‘ಕಾರ್ನಿಕದ ದೈವ’ ನಾಟಕ ಭೂತದ ಕಾರಣಿಕವನ್ನು ದೊಡ್ಡದಾಗಿ ಹೇಳುತ್ತದೆ.

ಗಂಗಾಧರ್ ಕಿದಿಯೂರು, ೧೯೯೪
ಇಲ್ಲ್ ಒಕ್ಕೆಲ್ (ತುಳು ಸಾಮಾಜಿಕ ನಾಟಕ)
ಮಧುಶ್ರೀ ಪ್ರಕಾಶನ ಕಿದಿಯೂರು, ಉಡುಪಿ – ೫೭೬ ೧೦೩
ಕ್ರೌನ್ ೧/೮, ಪುಟಗಳು : ೧೨+೧೦೦+೧೨, ರೂ. ೨೦/-

ಇದು ನಮಗೆ ನಮ್ಮ ಮನೆಯನ್ನುಳಿಸಿಕೊಳ್ಳುವ ದಾರಿ ತೋರಿಸುತ್ತದೆ. ಹೇಗೆಂದರೆ ಒಂದು ಮನೆಯಲ್ಲಿ ನಾವು ಪರಸ್ಪರ ಪ್ರೀತಿಯಿಂದ ಇದ್ದರೆ ಮಾತ್ರ ಜೀವನ ನಿರ್ವಹಣೆ ಸಾಧ್ಯ. ಎಲ್ಲಿ ಪ್ರೀತಿ-ವಾತ್ಸಲ್ಯಗಳು ಅರ್ಥ ಕಳೆದುಕೊಳ್ಳುತ್ತವೆಯೋ ಅಲ್ಲಿ ಜೀವನ ಕೂಡ ಹಾಳಾಗಿ ಹೋಗುತ್ತದೆ ಎಂಬುದನ್ನು ಈ ನಾಟಕ ತಿಳಿಸುತ್ತದೆ.

ಗಂಗಾಧರ್ ಕಿದಿಯೂರ್, ೧೯೯೯
ಎಣ್ಣೆದ್ದಾಂತಿ ತುಡರ್
ಮಧುಶ್ರೀ ಪ್ರಕಾಶನ ಉಡುಪಿ, ಕ್ರೌನ್ : ೧/೮
ಪುಟಗಳು : ೧೦+೧೨೪, ರೂ. ೩೦/-

ತುಳು ಸಾಮಾಜಿಕ ನಾಟಕ. ಒಳ್ಳೆಯದು ಕೆಟ್ಟದ್ದನ್ನು ಬೇರೆ ಬೇರೆಯಾಗಿ ಇಟ್ಟುಕೊಂಡು ಅವು ಒಂದನ್ನೊಂದು ಒಟ್ಟಿಗೆ ಸೇರಿಕೊಂಡು ಒಂದು ಸಂಸಾರವನ್ನು ಹಾಳುಗೆಡುವಂಥ ಕತೆಯನ್ನು ಈ ನಾಟಕದಲ್ಲಿ ಚಿತ್ರಿಸಿದ್ದಾರೆ.

ಗಂಗಾಧರ್ ಕಿದಿಯೂರ್, ೧೯೯೭
ಬಗ್ಗನ ಭಾಗ್ಯೊ (ಸಾ. ಜಾನಪದ ತುಳುನಾಟಕ)
ಮಧುಶ್ರೀ ಪ್ರಕಾಶನ ಅಂಬಲಪಾಡಿ ಉಡುಪಿ
ಕ್ರೌನ್ ೧/೮, ಪುಟಗಳು : ೧೨ ೧೨+೩೦, ರೂ. ೨೦/-

ಬಹಳ ಹಿಂದೆ ನಡೆದ ಕತೆಯನ್ನು ಹೇಳುವ ನಾಟಕ. ವಿಷಯವನ್ನು ಇಲ್ಲಿ ಕಾಲ್ಪನಿಕವಾಗಿ ತಿಳಿಸಲಾಗಿದೆ. ಭಕ್ತಿ ಈ ನಾಟಕದಲ್ಲಿ ಮನುಷ್ಯನ ಒಂದು ಅಂಗ. ಹಾಗಾಗಿ ಭಕ್ತಿಯಿಂದ ನಾವು ಯಾವ ಕೆಲಸವನ್ನೂ ಮಾಡಬಹುದೆಂಬ ಸಂದೇಶ ಈ ನಾಟಕದಲ್ಲಿದೆ.

ಗಂಗಾಧರ್ ಕಿದಿಯೂರು, ೧೯೯೨
ಬದುಕೊಂಜಿ ಸರಿಗಮ
ಮಧುಶ್ರೀ ಪ್ರಕಾಶನ ಕಿದಿಯೂರು, ಉಡುಪಿ
ಕ್ರೌನ್ ೧/೮, ಪುಟಗಳು : ೧೧+೮೩+೧೩, ರೂ. ೧೮/-

ತುಳು ಹಾಸ್ಯಮಯ ಸಾಮಾಜಿಕ ನಾಟಕ. ನೈತಿಕ ದೃಷ್ಟಿಯೂ ಒಂದು ಮಿತಿಯಲ್ಲಿ ಇದರಲ್ಲಿದೆ.

ಗಂಗಾಧರ್ ಕಿದಿಯೂರು, ೧೯೯೫
ವಿಧಿ ತೋಜಾಯಿ ನಿಧಿ (ತುಳು ಸಾಮಾಜಿಕ ನಾಟಕ)
ಮಧುಶ್ರೀ ಪ್ರಕಾಶನ ಕಿದಿಯೂರು, ಉಡುಪಿ
ಕ್ರೌನ್ ೧/೮, ಪುಟಗಳು : ೧೨+೬೪, ರೂ. ೨೦/-

ಇದು ಹೊಸ ಪರಂಪರೆಗೆ ಸೇರುವ ನಾಟಕ. ಇದರಲ್ಲಿ ಬ್ರೆಕ್ಟನ ತಂತ್ರ, ಸಂಸ್ಕೃತ ನಾಟಕಗಳಲ್ಲಿ ಬರುವ ಸೂತ್ರಧಾರನ ತಂತ್ರ ಹಾಗೆಯೇ ಶಾಕುಂತಲ ನಾಟಕದ ತಂತ್ರವೂ ಅಡಕಗೊಂಡಿದೆ. ಏಕೆಂದರೆ ವಿಧಿಯ ಕ್ರೂರತನಕ್ಕೆ ಬಲಿಯಾದ ಗಂಡು-ಹೆಣ್ಣುಗಳೂ ಬೇರಾದರೂ ಅವರ ಪ್ರೀತಿಯ ದ್ಯೋತಕವಾದ ಮಗುವಿನಿಂದಲೇ ಕೊನೆಗೆ ಅವರ ಸಮಾಗಮವಾಗುತ್ತದೆ. ಹಾಗಾಗಿ ಪ್ರಾರಂಭದ ದುಃಖ ನೋವೇ ಕೊನೆಗೆ ಸುಖ-ಸಂತೋಷಗಳಾಗಿ ಮುಕ್ತಾಯಗೊಳ್ಳುತ್ತದೆ.

ಗಂಗಾಧರ ಕಿದಿಯೂರು, ೧೯೮೭
ವಿಜಯಲಕ್ಷ್ಮಿ
ಕ್ರೌ. ೧/೮, ಪುಟಗಳು : ೧೦+೮೨+೩, ರೂ. ೧೫/-

ಪತ್ತೇದಾರಿ ಕಥೆಯಿರುವ ತುಳು ಸಾಮಾಜಿಕ ನಾಟಕ.

ಗಂಗಾಧರ ಕಿದಿಯೂರು, ೨೦೦೨
ಪೊಣ್ಣೊಂಜಿ ಕಲ್ಪವೃಕ್ಷ
ಮಧುಶ್ರೀ ಪ್ರಕಾಶನ, ಕ್ರೌ. ೧/೮, ಪುಟಗಳು : ೮೪, ಬೆಲೆ ರೂ. ೨೭/-

ತುಳು ಸಾಮಾಜಿಕ ನಾಟಕ.

ಗಣಪಯ್ಯ ಶೆಟ್ಟಿ ಸೀತಾನದಿ, ೧೯೭೮
ಕೋಟಿ ಚೆನ್ನಯ
ಸಾಹಿತ್ಯ ಸಂಘ ಹಿರಿಯಡಕ, ಕ್ರೌನ್ ೧/೮, ಪುಟಗಳು : ೬+೭೦, ಬೆಲೆ ರೂ. ೩/-

ಕೋಟಿ ಚೆನ್ನಯರ ಪಾಡ್ದನ, ಪಂಜೆ ಮಂಗೇಶರಾಯರು ಬರೆದ ಕೋಟಿಚೆನ್ನಯರ ಕಥೆಯನ್ನಾಧರಿಸಿ ಬರೆದಂಥ ತುಳು ನಾಟಕ.

ಗಣೇಶ ಅಮೀನ್ ಸಂಕಮಾರ್
ಮಾಯದ ಕಾಯಿ (ತುಳು ಜಾನಪದ ನಾಟಕ)
ಸಿರಿ ಪ್ರಕಾಶನ ಪಾವಂಜೆ, ಡೆಮಿ ೧/೮, ಪುಟಗಳು : ೩೨, ರೂ. ೨೫/-

‘ಮಾಯದ ಕಾಯಿ’ ಪಾಡ್ದನದ ಆಧಾರದ ಮೇಲಿನಿಂದ ಬರೆದ ಜಾನಪದ ನಾಟಕ ಇದರಲ್ಲಿ ಪುರಾಣದ ಕಲ್ಪನೆ, ಚರಿತ್ರೆಯ ಸತ್ಯವನ್ನು ಕಾಲ್ಪನಿಕ ರೂಪದಲ್ಲಿ ನೀಡಲಾಗಿದೆ. ಹಾಗೆಯೇ ಇಲ್ಲಿ ಬಂದಿರುವ ಎಲ್ಲಾ ಪಾತ್ರಗಳು ಪಾಡ್ದನದ ಸತ್ಯ ಮತ್ತು ನಾಟಕಕಾರರ ಕಲ್ಪನೆಯ ಚಿತ್ರಗಳು.

ಗೋಪಾಲ ಶೆಟ್ಟಿ ಯು., ೨೦೦೩
ಜೋಕ್ಲೆನ ನಾಟಕೊಲು ದೇವೆರೆ ದಯೆ ಬೊಕ್ಕ ಸತ್ಯದ ಸಾದಿ
ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ
ಕ್ರೌ. ೧/೮, ಪು. ೫+೬೮, ರೂ. ೨೫/-

ತುಳು ಸಾಮಾಜಿಕ ನಾಟಕಗಳು.

ಗೋಪಾಲಕೃಷ್ಣ ಯನ್., ೧೯೭೪
ಗೋಮಟ್ದೇವೆರ್
ಯಂ.ಬಿ. ದೇವಾಡಿಗ ಉಷಾಬುಕ್ ಸೆಂಟರ್ ಮಂಗಳೂರು
ಕ್ರೌನ್ ೧/೮, ರೂ. ೧.೫೦

ಪ್ರಶಸ್ತಿ ವಿಜೇತ ತುಳು ಐತಿಹಾಸಿಕ ನಾಟಕ

ಗೋಪಾಲಕೃಷ್ಣ ಯನ್., ೧೯೮೪
ಕಲ್ಕುಡ – ಕಲ್ಲುರ್ಟಿ
ಕ್ರೌನ್ ೧/೮, ಪುಟಗಳು : ೨೦, ರೂ. ೫/-

ಕಲ್ಕುಡ – ಕಲ್ಲುರ್ಟಿಯ ಸಾಹಸ, ಕಲಾನಿಪುಣತೆಗಳನ್ನು ಸಂಕ್ಷಿಪ್ತವಾಗಿ ನಿರೂಪಣೆ ಮಾಡುವಂಥ ತುಳು ಜಾನಪದ ನಾಟಕ.

ಚಂದ್ರಹಾಸ ಸುವರ್ಣ ಶಿಮಂತೂರು, ೧೯೭೮
ಬ್ರಹ್ಮನ ಬರವು
ರೂ. ೨.೫೦

ತುಳು ಸಾಮಾಜಿಕ ನಾಟಕ

ಚೆಲುವರಾಜ್ ಪೆರಂಪಳ್ಳಿ, ೧೯೯೮
ಸಂಸಾರೊಡೊಂಜಿ ಸನ್ಯಾಸಿ
ಯುವಕ ಮಂಡಲ (ರಿ) ಪೆರಂಪಳ್ಳಿ ಪ್ರಿಯದರ್ಶಿನಿ ಪ್ರಕಾಶನ ಪರೆಂಪಳ್ಳಿ
ಕ್ರೌನ್ ೧/೮

ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳ ಬಿರುಗಾಳಿಯಲ್ಲಿ ಯಾವುದು ಉತ್ತಮ ಯಾವುದು ಕೆಟ್ಟದು ಎಂಬ ನಿಷ್ಕರ್ಷೆಗೆ ಬರುವುದೇ ಕ್ಲಿಷ್ಟವಾಗುತ್ತಿರುವ ಸಂಧಿಕಾಲದಲ್ಲಿ ಶಾಶ್ವತ ಮೌಲ್ಯಗಳ ಎಚ್ಚರವನ್ನು ತಿಳಿಸಿ ಹೇಳುವ ಕಥಾವಸ್ತುವನ್ನು ಸಾಮಾನ್ಯ ಗ್ರಾಮೀಣ ಜನಜೀವನದಲ್ಲಿ ಪೋಣಿಸಿದ್ದಾರೆ.

ಜತ್ತಪ್ಪ ರೈ ಕೆದಂಬಾಡಿ, ೧೯೮೮
ಪಡಿಲ್ ಪಂಪೆ (ತುಳು ನಾಟಕ)
ಕೆದಂಬಾಡಿ ಪ್ರಕಾಶನ ಪಾಣಾಜೆ, ಡೆಮಿ: ೧/೩, ಪುಟ : ೫೮ ರೂ. ೧೦/-

ಎಂ.ಆರ್. ಶ್ರೀನಿವಾಸ ಮೂರ್ತಿಯವರು ಬರೆದ ‘ನಾಗರಿಕ’ ನಾಟಕದ ಆಧಾರದಲ್ಲಿ ಈ ನಾಟಕವನ್ನು ಬರೆಯಲಾಗಿದೆ. ಇದರಲ್ಲಿ ಹಂಪೆಯ ಕಥೆಯ ಚಿತ್ರಣವಿದೆ.

ಟೇಲರ್ ಕೆ.ಎನ್., ೧೯೭೭
ಇಂದ್ರನ ಆಸ್ತಿ
ಜಯಂತಿ ಪಬ್ಲಿಕೇಶನ್ಸ್ ಮಂಗಳೂರು, ಕ್ರೌ. ೧/೮, ರೂ. ೨.೫೦/-

ಹಾಸ್ಯಮಯ ತುಳು ಸಾಮಾಜಿಕ ನಾಟಕ.

ಟೇಲರ್ ಕೆ.ಎನ್., ೧೯೭೭
ಯಾನ್ ಸನ್ಯಾಸಿ ಆಪ್ಹೆ
ಜಯಂತಿ ಪಬ್ಲಿಕೇಷನ್ಸ್, ಮಂಗಳೂರು, ಕ್ರೌ. ೧/೮, ಪು. ೪೫, ರೂ. ೨.೫೦/-

ಹಾಸ್ಯಪ್ರಧಾನ ಸಾಮಾಜಿಕ ತುಳು ನಾಟಕ.

ಟೇಲರ್ ಕೆ.ಎನ್‌., ೧೯೭೭
ವಿಶ್ವಾಮಿತ್ರ – ಮೇನಕ
ಜಯಂತಿ ಪಬ್ಲಿಕೇಷನ್ಸ್ ಮಂಗಳೂರು, ಕ್ರೌ. ೧/೮, ರೂ. ೩/-

ಹಾಸ್ಯಪ್ರಧಾನ ತುಳು ಸಾಮಾಜಿಕ ನಾಟಕ.

ಟೇಲರ್ ಕೆ.ಎನ್., ೧೯೭೭
ಶಾಂತಿ
ಜಯಂತಿ ಪಬ್ಲಿಕೇಷನ್ಸ್, ಮಂಗಳೂರು, ಕ್ರೌ ೧/೮, ರೂ. ೨.೫೦/-

ಕ್ರಾಂತಿಕಾರಿ ತುಳು ಸಾಮಾಜಿಕ ನಾಟಕ.

ಟೇಲರ್ ಕೆ.ಎನ್., ೧೯೭೯
ಕಾಸ್‌ದಾಯೆ ಕಂಡನೆ
ಜಯಂತಿ ಪಬ್ಲಿಕೇಷನ್ಸ್, ಮಂಗಳೂರು, ಕ್ರೌ. ೧/೮, ರೂ. ೩/-

ಕ್ರಾಂತಿಕಾರಿ ತುಳು ಸಾಮಾಜಿಕ ನಾಟಕ.

ಟೇಲರ್ ಕೆ.ಎನ್., ೧೯೮೩
ಕಂಡನೆ ಬುಡೆದಿ
ಜಯಂತಿ ಪಬ್ಲಿಕೇಷನ್ಸ್, ಮಂಗಳೂರು, ಕ್ರೌ. ೧/೮, ರೂ. ೫/-

ತುಳು ನೀತಿಬೋಧಕ ಸಾಮಾಜಿಕ ನಾಟಕ.

ಟೇಲರ್ ಕೆ.ಎನ್., ೧೯೮೫
ದೇವೆರ್ ಕೊರ್ಪೆರ್
ಜಯಂತಿ ಪಬ್ಲಿಕೇಷನ್ಸ್, ಮಂಗಳೂರು, ಕ್ರೌ. ೧/೮, ರೂ. ೧೦/-

ಹಾಸ್ಯಪ್ರಧಾನ ಸಾಮಾಜಿಕ ತುಳು ನಾಟಕ.

ತಿಮ್ಮಪ್ಪ ಪುತ್ತೂರು ಯಂ., ೧೯೯೪
ಧ್ರುವ ನಕ್ಷತ್ರ (ತುಳು ನಾಟಕ)
ಪ್ರಜ್ವಲ ಪ್ರಕಾಶನ ಬೆಳ್ತಂಗಡಿ, ಡೆಮಿ ೧/೮, ಪುಟಗಳು : ೬+೬೬, ರೂ. ೧೫/-

ಸಾಮಾಜಿಕ ಬದುಕಿನಲ್ಲಿರುವ ಪ್ರೀತಿ, ಪ್ರೇಮ, ದರ್ಪ, ವಿಷಾದ, ವಿನೋದ ಎಲ್ಲವುಗಳೂ ಈ ನಾಟಕದಲ್ಲಿ ಅಡಕವಾಗಿವೆ. ಅಹಂಗಳ ನಡುವಿನ ವ್ಯಕ್ತಿಗಳ ಬದುಕಿನ ಅವಾಂತರ, ಪ್ರೀತಿ-ಪ್ರೇಮಗಳಲ್ಲಿ ಸಿಲುಕಿದ ಮನಸ್ಸುಗಳ ತುಮುಲ ಮೊದಲಾದವುಗಳನ್ನು ಬಿಚ್ಚುತ್ತಾ ಹೋಗುತ್ತದೆ.

ತಿಮ್ಮಪ್ಪ ಪುತ್ತೂರು ಯಂ., ೧೯೯೬
ಮಧುಚಂದ್ರ (ತುಳು ನಾಟಕ)
ಪ್ರಜ್ವಲ ಪ್ರಕಾಶನ ಬೆಳ್ತಂಗಡಿ, ಡೆ ೧/೮, ಪುಟಗಳು : ೫+೬೩, ರೂ. ೨೫/-

ದುರಂತ ನಾಯಕನ ಚಿತ್ರಣದೊಂದಿಗೆ ಪ್ರೇಮಕತೆ, ಹಾಸ್ಯವೂ ಕಾಣಿಸಿಕೊಂಡಿದೆ. ಆದರ್ಶ ಪ್ರೀತಿ, ಪ್ರೇಮಗಳ ನಾಯಕ, ನಾಯಕಿಯರ ನಾಟಕ ಇದಾಗಿದೆ.

ತಿಮ್ಮಪ್ಪ ಪುತ್ತೂರು ಯಂ., ೧೯೯೮
ಕಡಲ್ (ತುಳು ಸಾಮಾಜಿಕ ನಾಟಕ)
ಪ್ರಜ್ವಲ ಪಕಾಶನ ಬೆಳ್ತಂಗಡಿ ಡೆಮಿ ೧/೮, ಪುಟಗಳು ೬+೪೦+೬, ರೂ. ೨೫/-

ತುಳುನಾಡಿನ ಜನಜೀವನದ ವಾಸ್ತವಿಕ ಚಿತ್ರವಿದೆ. ಇಡೀ ನಾಟಕದ ವಸ್ತು ತುಳುನಾಡಿನ ಬದಲಾಗಿರುವ ಜನಜೀವನದ ಯಥಾರ್ಥ ಚಿತ್ರವನ್ನು ನೀಡುತ್ತದೆ. ಕಡಲಿಗೆ ಧನಾತ್ಮಕ ಅಂಶಗಳ ಮೂಲಕ ಹೇಗೆ ವೈಭವೀಕರಿಸಿ ಆದರ್ಶದ ಚೌಕಟ್ಟನ್ನು ನೀಡಲಾಗುತ್ತದೋ ಹಾಗೇ ಇಲ್ಲಿನ ಕಥಾ ನಾಯಕಿಯೂ ತನ್ನ ತ್ಯಾಗದಿಂದಾಗಿ ಆದರ್ಶ ಪಾತ್ರಳಾಗಿ ಬಿಂಬಿತಳಾಗುತ್ತಾಳೆ.

ತಿಮ್ಮಪ್ಪ ಪುತ್ತೂರು ಯಂ., ೨೦೦೧
ಚಂದ್ರೇದಾ೦ತಿ ಬಾಣ
ಪ್ರಕಾಶನ ಬೆಳ್ತಂಗಡಿ, ಡೆ ೧/೮, ಪುಟಗಳು : ೫೨, ರೂ. ೨೫/-
ತುಳು ಸಾಮಾಜಿಕ ನಾಟಕ.

ನವನೀತ ಶೆಟ್ಟಿ ಕದ್ರಿ, ೨೦೦೨
ಯಕ್ಷಮಣಿ (ತುಳು ನಾಟಕ)
ಪ್ರಕಾಶನ, ಕೃಷ್ಣ ಸಂಕೀರ್ಣ ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್ ಬೈಲ್,
ಕಲ್ಕೂರು, ಕ್ರೌನ್ ೧/೮, ಪುಟಗಳು ೮+೫೭, ರೂ. ೨೫/-

ಯಕ್ಷಗಾನದಿಂದಲೇ ಪ್ರೇರಣೆ ಪಡೆದು ಹುಟ್ಟಿದಂಥ ಕೃತಿ ಇದು. ದೇವರ ಮೇಲಿನ ಭಕ್ತಿ, ಮನುಷ್ಯನ ನಡತೆಯಲ್ಲಿನ ನೀತಿ ಅವರ ನಾಟಕದ ಅಡಿಪಾಯ.

ನವನೀತ ಶೆಟ್ಟಿ ಕದ್ರಿ, ೨೦೦೬
ನಮೈ
ಗುತ್ತು ಪ್ರಕಾಶನ, ಕದ್ರಿಕಂಬಳ ಗುತ್ತು, ಮಂಗಳೂರು- ೪
ಕ್ರೌ. ೧/೮, ಪುಟಗಳು : ೧೪+೧೨೪, ಬೆಲೆ : ರೂ. ೫೦/-

ನಾಗರಾಜ ಗುರುಪುರ, ೨೦೦೬
ತೆಡಿಲ್
ಗುರುಕುಲ, ಮುಂಬಯಿ, ಪೊವಾಯಿ – ೭೨
ಕ್ರೌ ೧/೮, ಪು. ೮೨+೧೩, ಬೆಲೆ : ರೂ. ೭೫/-

ತುಳು ಸಾಮಾಜಿಕ ನಾಟಕ.

ನಾರಾಯಣ ಶೆಟ್ಟಿ ನಂದಳಿಕೆ, ೨೦೦೨
(ಬೊಜ್ಜು ತುಳು ನಾಟಕ)
ಪಲ್ಲವಿ ಆರ್ಟ್ಸ್‌, ಮುಂಬಯಿ, ಡೆ. ೧/೮, ಪು. ೧೦೬, ರೂ. ೩೫/-

ಗಡಿನಾಡ ಕಲಾವಿದರು ಕಾಸರಗೋಡು ಇವರ ಕೃತಿ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಂಥ ಎರಡಂಕದ ತುಳು ನಾಟಕ.

ಪುರುಷೋತ್ತಮ ಎಂ., ೧೯೬೯
ಬೊಲ್ಪುದಾ೦ತಿ ತುಡರ್
ಸಹೋದರ ಕಲಾವೃಂದ (ಸಾಹಿತ್ಯ ವಿಭಾಗ) ಮಂಗಳೂರು, ರೂ. ೧.೨೫

ತುಳು ಸಾಮಾಜಿಕ ನಾಟಕ

ಬಾಲಕೃಷ್ಣ ಮುದ್ಯ, ೧೯೮೭
ಯಾನ್ಲಾ ಬದ್‌ಕೊಡಾ? (ತುಳು ಸಾಮಾಜಿಕ ನಾಟಕ)
ವಿ.ಪಿ.ಸಿ. ಪಬ್ಲಿಕೇಷನ್ಸ್, ಮಂಗಳೂರು, ಕ್ರೌ. ೧/೮, ರೂ. ೩/-

ಬಾಲಕೃಷ್ಣ ಮುದ್ಯ, ೧೯೭೯
ಲಿಲ್ಲಿ
ವಿ.ಪಿ.ಸಿ. ಪ್ರಕಾಶನ, ಮಂಗಳೂರು, ಕ್ರೌ. ೧/೮, ರೂ. ೨೫೦/-

ಹಾಸ್ಯಮಯ ತುಳು ಸಾಮಾಜಿಕ ನಾಟಕ.

ಬಾಸುಮ ಕೊಡಗು, ೨೦೦೬
ತೆಂಬರೆ
ಕ್ರೌ. ೧/೮, ಪುಟಗಳು : ೪೬+೪

ಪ್ರಯೋಗ ರಂಗಭೂಮಿಯ ಶಿಸ್ತಿನ ತುಳು ಸಾಮಾಜಿಕ ನಾಟಕ.

ಭಂಡಾರಿ ಕೆ.ಬಿ., ಏಗ್ನೇಸ್ ಕೋಟೇಜ್ ಮಂಗಳೂರು (ಲೇಖಕ ಮತ್ತು ಪ್ರಕಾಶಕ)
ಕ್ರೌ. ೧/೮, ರೂ. ೬/-
ಬದಿತ್ತ ಬಯಕೆ
(೨೦ ನಿ.ದ ಸಾಮಾಜಿಕ ಏಕಾಂಕ ತುಳು ನಾಟಕ)
ಕಪ್ಪು ಪೊಣ್ಣು
(೩೦ ನಿ.ದ ಸಾಮಾಜಿಕ ತುಳು ಏಕಾಂತ ನಾಟಕ)
ನಾರದೆರೆನ ವಕಾಲತ್
(೯೦ ನಿ. ದ ಸಾಮಾಜಿಕ ಮತ್ತು ಪೌರಾಣಿಕ ಮಿಶ್ರ ತುಳು ನಾಟಕ)

ಭಟ್ ಕೆ.ವಿ. (ಶ್ರೀ ಭವ್ಯಾ) ಮಂಗಳೂರು, ೧೯೯೩
ಝಾನ್ಸಿದ ರಾಣಿ ಲಕ್ಷ್ಮೀಬಾಯಿ
ಕ್ರೌ. ೧/೮, ರೂ. ೮/-

ತುಳು ಚಾರಿತ್ರಿಕ ನಾಟಕ.

ಭಾಸ್ಕರ ಟಿ. ಬಂಗೇರ, ೧೯೭೮
ಬಂಗಾರ್ದ ಬಿಸತ್ತಿ
ವೀಣಾ ಸಾಹಿತ್ಯ ನಿಲಯ, ಎಂ.ಎಸ್. ಆರ್ಟ್ಸ್‌, ಮಂಗಳೂರು
ಕ್ರೌ ೧/೮, ರೂ. ೩/-