ಮಾರಪ್ಪ ಶೆಟ್ಟಿ ನರ್ಕಳ, ೧೯೩೦
ಪೋರ್ಲಕಂಟ್
ಪುಟಗಳು : ೮, ರೂ. ೦-೨೦

ಸ್ವತಂತ್ರವಾದ ತುಳು ಕವಿತೆಗಳು.

ಮಾರಪ್ಪ ಶೆಟ್ಟಿ ನರ್ಕಳ, ೧೯೮೯ (೧೯೨೯)
ಪೋರ್ಲಕಂಟ್ ಮತ್ತು ಅಮಲ್ ದೆಪ್ಪಡೆ (ತುಳು ಕವನ ಸಂಕಲನ)
ಹೇಮಾಂಶು ಪ್ರಕಾಶನ, ಕಾಟಿಪಳ್ಳ,

‘ಪೊರ್ಲಕಂಟ್’ ಕವನ ಸಂಕಲನದಲ್ಲಿ ನಾವು ಹೆಚ್ಚಾಗಿ ಪ್ರಕೃತಿ ಗೀತೆಗಳನ್ನು ಕಂಡರೆ ‘ಅಮಲ್ ದೆಪ್ಪಡೆ’ ಸಂಕಲನದಲ್ಲಿ  ಸಾಮಾಜಿಕ ಪಿಡುಗುಗಳಾದ ಕುಡಿತ, ಜುಗಾರಿ, ಬಂಗಿ ಇತ್ಯಾದಿಗಳ ದುಷ್ಪರಿಣಾಮಗಳನ್ನು ಹೇಳುವ ಕವನಗಳನ್ನು ಕಾಣುತ್ತೇವೆ.

ಮದ್ದು ಮೂಡುಬೆಳ್ಳೆ (ಗೌ. ಪ್ರ.ಸಂ.), ೧೯೯೭
ಪರ್ವ ಪರ್ಬದ ಪೊರ್ಲು ಕಬಿತೆಲು (ತುಳು ಕವನಗಳ ಸಂಗ್ರಹ)
ತುಳು ಸಾಹಿತ್ಯ ಪರಿಷತ್ತು (ರಿ.) ಮಂಗಳೂರು
ಡೆಮಿ ೧/೮, ಪುಟಗಳು : ೧೫+೭೩, ರೂ. ೩೫/-

ಬೇರೆ ಬೇರೆ ಕವಿ – ಕವಯತ್ರಿಯರು ಬರೆದಂಥ ತುಳುನಾಡು, ಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ೨೫ ಕವನಗಳಿವೆ.

ಮೋಹನ್ ಸುವರ್ಣ ಕೆ.ಎಸ್. ಜೋಕಟ್ಟೆ, ೨೦೦೨
ತುಡರ್ (ತುಳು ಕವನ ಸಂಕಲನ)
ಬಲ್ಲಾಳ ಪ್ರತಿಷ್ಠಾನ, ಪಂಜಬೀಡು
ಕ್ರೌನ್ ೧/೧೬, ಪುಟಗಳು : ೮+೨೮, ರೂ. ೧೦/-

೧೪ ಕವನಗಳ ಸಂಗ್ರಹ.

ಯಶವಂತ ಬೋಳೂರು, ೧೯೮೪
ಬುಲೆ ಕಾನಿಗೆ (ತುಳು ಕವನ ಸಂಗ್ರಹ)
ಡೆಮಿ ೧/೮, ರೂ. ೩/-

೨೫ ಕವನಗಳಲ್ಲಿ ೩ ಹನಿಗವನಗಳೂ ಇವೆ.

ಯೋಗೀಶ್ ಕಾಂಚನ್ ಬೈಕಂಪಾಡಿ, ೧೯೮೯
ಕಂಚಿಲ್ (ತುಳು ಕವನ ಸಂಗ್ರಹ)
ಶ್ರೀ ದೇವಿ ಪ್ರಿಂಟರ್ಸ್, ಪಕ್ಷಿಕೆರೆ, ಡೆಮಿ ೧/೮, ಪುಟಗಳು : ೨೦, ರೂ. ೬/-

೧೧ ಕವನಗಳು ಹಾಗೂ ಪೂಮಾಲೆ, ಕಬಿತೆ, ತುಡರ್, ಆಶೆ ಎಂಬ ಹನಿಗವನಗಳೂ ಇವೆ. ತುಳುಭಾಷೆಗೆ ಸಂಬಂಧಿಸಿದಂತೆ ‘ತುಳುವಪ್ಪೆಗ್’ ತುಳುವರ ಜಾತ್ರೆಯ ತಯಾರಿಯನ್ನು ವಿವರಿಸುವ ‘ಜಾತ್ರೆ’ ಮಾನವೀಯ ಅಂತಃಕರಣ ಸಂಬಂಧವನ್ನು ಹೇಳುವ ‘ಉಡಲ ಎತೆ’, ‘ಮೈಗ್ಯಗ್ ರಡ್ದ್ ಪಾತೆರ’, ಪ್ರಕೃತಿಯ ಸೂಕ್ಷ್ಮಾವಲೋಕನ ಮಾಡುವ ‘ಕಡಲ್’, ‘ಮನುಷ್ಯೆ ಬೊಕ್ಕ ಪ್ರಕೃತಿ’ ಕವನಗಳಿವೆ.

ರಘು ಇಡ್ಕಿದು, ೨೦೦೫
ಅಜ್ಜನ ಗಡ್ಡ
ವಿದ್ಯಾ ಪ್ರಕಾಶನ, ಸುಮಾ ಅತ್ತಾವರ, ಮಂಗಳೂರು – ೫೭೫ ೦೦೧
ಡೆ. ೧/೮, ಪುಟಗಳು : ೭೬, ಬೆಲೆ : ರೂ ೩೫/-

ಮಕ್ಕಳಿಗಾಗಿ ಬರೆದಿರುವ ೩೨ ತುಳು ಕವಿತೆಗಳ ಸಂಕಲನ.

ರತ್ನಕುಮಾರ್ ಎಂ., ೧೯೯೩
ತೆರಿವು
ರತ್ನತ್ರಯ ಪ್ರಕಾಶನ, ಮಂಗಳೂರು, ಕ್ರೌನ್ ೧/೮, ಪುಟಗಳು : ೧೨, ರೂ. ಉಚಿತ.

೭ ಕವಿತೆಗಳ ಸಂಕಲನ.

ರತ್ನಕುಮಾರ್ ಎಂ., ೧೯೮೬
ರತ್ನನ ಕರ್ಮ (ತುಳು ಕವನ ಸಂಕಲನ)
ರತ್ನತ್ರಯ ಪ್ರಕಾಶನ, ಮಂಗಳೂರು, ಪುಟಗಳು : ೧೬, ಕ್ರೌನ್ ೧/೮

ತುಳುಭಾಷೆ, ನಾಡು, ಸಂಸ್ಕೃತಿಗೆ ಸಂಬಂಧಿಸಿದಂತಹ ಕವನ ಸಂಕಲನ.

ರತ್ನಕುಮಾರ್ ಎಂ., ೧೯೮೭
ರುಕುಮನ ಪದ
ಕ್ರೌನ್ ೧/೮, ಪುಟಗಳು : ೧೨, ರೂ. ಉಚಿತ

೭ ಸ್ವತಂತ್ರ ತುಳು ಕವಿತೆಗಳ ಸಂಕಲನ.

ರಮೇಶ್ ಉಳಯ, ೨೦೦೦
ಪುಟ್ಟುದಿನ (ತುಳು ಮಕ್ಕಳ ಪದಗಳು)
ಸ್ವರ ಪ್ರಕಾಶನ, ಪಂಜಿಕಲ್ಲು, ಅಡ್ಯನಡ್ಕ, ದ.ಕ.
ಕ್ರೌನ್ ೧/೪, ಪುಟಗಳು : ೪೧, ರೂ. ೨೦/-

೨೪ ಶಿಶಿಗೀತೆಗಳ ಸಂಗ್ರಹ ಕೃತಿ.

ರವಿಕಿರಣ (ಎಂ.ಕೆ. ರವೀಂದ್ರನಾಥ), ೧೯೯೫
ಕಬಿತೆಲು ಚಿತ್ರೊಲು
ಪ್ರಕಾಶಕರು : ‘ಸುವೃತ’ ನಿಲಯ, ದಾನಶಾಲೆ ರಸ್ತೆ, ಕಾರ್ಲ
ಕ್ರೌನ್ ೧/೮, ಪುಟಗಳು : ೨೦, ರೂ ಉಚಿತ.

೨೯ ತುಳು ಕವಿತೆಗಳ ಸಂಕಲನ.

ರಸಿಕ ಪುತ್ತಿಗೆ, ೧೯೮೮
ಪರವನ ಮೋಕೆ
ಹೇಮಾಂಶು ಪ್ರಕಾಶನ, ಕಾಟಿಪಳ್ಳ, ಡೆ. ೧/೧೨, ಪುಟಗಳು : ೨೫, ರೂ. ೪/-

ತುಳು ಕವನಸಂಕಲನ. ತುಳು ಬ್ರಾಹ್ಮಣರ ಭಾಷೆಯಲ್ಲಿ ಬರೆದಿರುವ ಕವಿತೆಯೂ ಆರಂಭದಲ್ಲಿದೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೧೯೯೨
ಧುನಿಪು
ಡೆಮಿ ೧/೮, ಪುಟಗಳು : ೮+೩೨, ರೂ. ೧೫/-

ತುಳು ಕವಿತೆಗಳ ಸಂಕಲನ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೧೯೮೭
ಪಚ್ಚೆ ಕುರಲ್
ಡೆಮಿ ೧/೮, ಪುಟಗಳು : ೭+೪೦, ರೂ. ೬/-

ತುಳು ಕವಿತೆಗಳ ಸಂಕಲನ.

ರಾವ್ ಪಿ.ಎಸ್., (ಸಂ.), ೧೯೯೮
ಬಂಗಾರ್ ಪರ್ಬದ ಸಿಂಗಾರ ಪದೊಕುಲು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಕ್ರೌನ್ ೧/೮, ಪುಟಗಳು : ೮೦+೪+೬, ರೂ. ೨೦/-

ಸ್ವಾತಂತ್ರ್ಯೋತ್ಸವದ ಸುವರ್ಣೋತ್ಸವ ಸ್ಮರಣೆಗಾಗಿ ೫೦ ಮಂದಿ ಕವಿಗಳು ದೇಶ, ನಾಡು, ಭಾರತಮಾತೆ, ತುಳುಮಾತೆ ಈ ಬಗೆಗೆ ಬರೆದಿರುವ ಕವಿತೆಗಳ ಸಂಕಲನ.

ಲೀಲಾವತಿ ಕೆ., ೧೯೯೪
ತಿಬಿಲೆ
ರತ್ನತ್ರಯ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು : ೩೦, ರೂ. ೮/-

ಕವನ ಸಂಕಲನ – ಇದರಲ್ಲಿ ಹೆಚ್ಚಿನ ಕವಿತೆಗಳು ‘ಗೇಯ’ ರೀತಿಯವು.

ವಸಂತಕುಮಾರ ಪೆರ್ಲ, ೧೯೯೪
ಪ್ರಾತಿನಿಧಿಕ ತುಳು ಕಬಿತೆಲು
ಡೆಮಿ ೧/೮, ಪುಟಗಳು : ೧೬+೧೧೮, ರೂ. ೪೦/-

ಸಮಕಾಲೀನ ಕವಿಗಳ ಪ್ರಾತಿನಿಧಿಕ ಕವಿತೆಗಳ ಸಂಕಲನ.

ವಾದಿರಾಜ ಭಟ್ಟ ಕನರಾಡಿ, ೧೯೮೯
ಜೀವನ ಪಾಡ್ದನ
ತುಳುಕೂಟ ಉಡುಪಿ, ಕ್ರೌನ್ ೧/೮, ಪುಟಗಳು : ೧೦+೩೨, ರೂ. ೫/-

೧೦ ತುಳು ಕವಿತೆಗಳ ಸಂಕಲನ.

ವಾದಿರಾಜ ಭಟ್ಟ ಕನರಾಡಿ, ೧೯೮೬
ಜೋಕ್ಲೆ ಪದೊಕ್ಲು
ಕ್ರೌನ್ ೧/೮, ಪುಟಗಳು : ೩೩, ರೂ. ೩/-

ಮಕ್ಕಳಿಗಾಗಿ ಬರೆದಿರುವ ಸ್ವತಂತ್ರವಾದ ತುಳು ಕವಿತೆಗಳು.

ವಾಮನ ನಂದಾವರ, ೧೯೯೨
ಬೀರ (ಕವನ ಸಂಕಲನ)
ಹೇಮಾಂಶು ಪ್ರಕಾಶನ, ಕಾಟಿಪಳ್ಳ, ಡೆಮಿ ೧/೮, ಪುಟಗಳು : ೨೦+೯೧, ರೂ. ೩೦/- (ಸಾಮಾನ್ಯ) ರೂ. ೪೫/- (ಗ್ರಂಥಾಲಯ)

೭೦ ತುಳು ಕವಿತೆಗಳ ಸಂಕಲನ. ಇದರ ಪ್ರಸ್ತಾವನೆಯಲ್ಲಿ ತುಳು ಕಾವ್ಯ ಸಮೀಕ್ಷೆಯನ್ನು ಕನ್ನಡದಲ್ಲಿ ನಡೆಸಲಾಗಿದೆ. ೧೯೯೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದ ಕೃತಿ.

ವಿಘ್ನರಾಜ ಎಸ್.ಆರ್. (ಸಂ), ೨೦೦೫
ತುಳು ರಾಮಾಯಣ
ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನಮಾಲೆ, ಉಜಿರೆ – ೫೭೪ ೨೪೦.
ಡೆ. ೧/೮, ಪುಟಗಳು : ೩೬+೧೮೪, ಬೆಲೆ ರೂ. ೮೫/-

ಶ್ರೀ ಮದ್ಭಾಗವತಾಂತರ್ಗತ ತುಳು ರಾಮಾಯಣ ಲಭ್ಯ ಪ್ರಾಚೀನ ತುಳು ಕಾವ್ಯಗಳಲ್ಲಿ ಐದನೆಯದಾಗಿದೆ. ಇದರ ಕವಿಯು ಸಂಸ್ಕೃತ ಭಾಗವತವನ್ನು ತನ್ನ ಕಾವ್ಯದ ಮೂಲ ವಸ್ತುವಾಗಿರಿಸಿಕೊಂಡು ಪ್ರಾಚೀನ ತುಳು ಭಾಷೆಯಲ್ಲಿ ಇಕ್ಷಾಕು ವಂಶದ ಪೂರ್ವಜರ ಕತೆಯನ್ನು ಜನಸಾಮಾನ್ಯರಿಗೆ ತಿಳಿಸುವುದೇ ತನ್ನ ಪರಮ ಉದ್ದೇಶವಾಗಿದೆ ಎಂಬುದಾಗಿ ಕಾವ್ಯದ ಪ್ರಾರಂಭದಲ್ಲಿ ಹೇಳಿರುವನು. ಇದರ ಹತ್ತು, ಹನ್ನೊಂದು ಮತ್ತು ಹನ್ನೆರಡನೆಯ ಅಧ್ಯಾಯಗಳು ಶ್ರೀರಾಮ ಚರಿತೆಯಾಗಿದ್ದು ಇಕ್ಷಾಕು ವಂಶಜರನ್ನು ಹೇಳುವುದರೊಂದಿಗೆ ಸಂಕ್ಷಿಪ್ತವಾಗಿಯಾದರೂ ಸಂಪೂರ್ಣ ರಾಮಾಯಣ ಕತೆಯನ್ನು ಸೊಗಸಾಗಿ ವರ್ಣಿಸಿರುವುದು ಈ ಕಾವ್ಯದ ವೈಶಿಷ್ಟ್ಯ.

ವಿಠಲ ಪುತ್ತೂರು ಮ., ೧೯೯೦
ದೀಪದ ಮಲ್ಲಿ
ಕ್ರೌನ್ ೧/೮, ಪುಟಗಳು : ೨೪+೪, ರೂ. ೨/-

ಸ್ವತಂತ್ರವಾದ ತುಳು ಕವಿತೆಗಳ ಸಂಕಲನ.

ವಿಠಲ ಪುತ್ತೂರು ಎಂ., ೧೯೭೭
ಕೇದಗೆ
ಕ್ರೌನ್ ೧/೮, ಪುಟಗಳು : ೬೦, ರೂ. ೩/-

ತುಳು ಕವಿತಾ ಸಂಕಲನ.

ವೆಂಕಟರಾಜ ಪುಣಿಂಚತ್ತಾಯ, ೧೯೮೩
ಆಲಡೆ
ಡೆಮಿ ೧/೮, ಪುಟಗಳು : ೨೮, ರೂ. ೩/-

೧೩ ತುಳು ಕವನಗಳಿರುವ ಸಂಕಲನ.

ವೆಂಕಟರಾಜ ಪುಣಿಂಚತ್ತಾಯ (ಸಂ.), ೧೯೮೭
ಕಾವೇರಿ
ಡೆಮಿ ೧/೮, ಪುಟಗಳು : ೬೪, ರೂ. ೧೫/-

‘ಕಾವೇರಿ’ ನದಿಯ ಉದ್ಭವ, ಪ್ರಸಾರ, ಮಹಿಮೆ ಮೊದಲಾದವುಗಳನ್ನು ವರ್ಣಿಸುವ ತುಳುವಿನ ಒಂದು ಪ್ರಾಚೀನ ಕಾವ್ಯ.

ವೆಂಕಟರಾಜ ಪುಣಿಂಚತ್ತಾಯ (ಸಂ), ೧೯೯೧
ತುಳು ದೇವಿ ಮಹಾತ್ಮೆ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ
ಡೆಮಿ ೧/೮, ಪುಟಗಳು : ೧೧೦, ರೂ. ೩೫/-

ದೇವಿಯ ಮಹಿಮಾತಿಶಯವನ್ನು ತುಳುವಿನಲ್ಲಿ ಗದ್ಯರೂಪದಲ್ಲಿ ವರ್ಣಿಸುವ ಒಂದು ಪ್ರಾಚೀನ ಗದ್ಯಕಾವ್ಯ. ಇದು ಸಂಸ್ಕೃತದ ದೇವೀ ಮಹಾತ್ಮೆಯ ಕಥೆಯನ್ನೊಳಗೊಂಡಿದ್ದು ಕಾಸರಗೋಡು ಪರಿಸರದ ಬ್ರಾಹ್ಮಣರ ಹಳೆಯ ಆಡುನುಡಿಯಲ್ಲಿ ರಚಿತವಾದ ಕಥನರೂಪದ ಕೃತಿ.

ವೆಂಕಟರಾಜ ಪುಣಿಂಚತ್ತಾಯ (ಸಂ), ೨೦೦೨
ಅರುಣಾಬ್ಜ ಕವಿ ವಿರಚಿತ ಮಹಾಭಾರತೊ ತುಳು ಮಹಾಕಾವ್ಯ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು : ೬೦+೩೭೬, ರೂ. ೨೪೦/-

ತುಳುವಿನ ಆದಿ ಕಾವ್ಯವಾದ ತುಳು ಮಹಾಭಾರತೊ ಅನೇಕ ದೃಷ್ಟಿಗಳಿಂದ ಕನ್ನಡ ಮಹಾಭಾರತಕ್ಕಿಂತ ಭಿನ್ನವಾಗಿ ವಿಶಿಷ್ಟವಾಗಿದೆ. ಪುಣಿಂಚತ್ತಾಯರು ಅಂಥ ವಿಶಿಷ್ಟ ಸನ್ನಿವೇಶಗಳನ್ನು ವಿವರವಾಗಿ ವಿಮರ್ಶಿಸಿದ್ದಾರೆ. ಇದರ ಭಾಷಾ ಪ್ರಯೋಗ ಇತರ ಕಾವ್ಯಗಳ ಭಾಷಾ ಪ್ರಯೋಗಕ್ಕಿಂತ ಭಿನ್ನವಾಗಿದೆ.

ವೆಂಕಟರಾಜ ಪುಣಿಂಚತ್ತಾಯ (ಸಂ.), ೧೯೮
ವಿಷ್ಣು ತುಂಗನ ಶ್ರೀ ಭಾಗವತೊ
ರೂ. ೫೦/-

ಭಾಗವತದ ಕಥೆಯೇ ವಸ್ತು. ಸಂಸ್ಕೃತ ಭಾಗವತ ಮಹಾಪುರಾಣದ ರೂಪಾಂತರ. ವೃತ್ತ ಛಂದಸ್ಸಿನಲ್ಲಿ ರಚಿತವಾಗಿದೆ. ಪ್ರಾಚೀನ ಕಾವ್ಯವೆಂದು ಮೊತ್ತಮೊದಲು ಉಪಲಬ್ಧವಾದ ಕೃತಿ. ಕಾಳ ಸುಮಾರು ೧೭ನೆಯ ಶತಮಾನ. ಪ್ರೌಢವಾದ ಗ್ರಾಂಥಿಕ ತುಳು (ಕಾಸರಗೋಡು ಪರಿಸರದ ಬ್ರಾಹ್ಮಣರ ಆಡುನುಡಿ ಭಾಷೆಯಲ್ಲಿ ವಿರಚಿತ). ಪ್ರಾಚೀನ ತುಳು ರೂಪವನ್ನು (ಹಳೆ ತುಳು) ಕಾಣಬಹುದಾದ ಐತಿಹಾಸಿಕ ಮಹತ್ತ್ವದ ಕೃತಿ.

ಶಂಕರ ಖಂಡೇರಿ ಡಾ. ಮತ್ತಿತರರು (ಸಂ), ೧೯೯೩
ತುಳು ಕಬಿತೆಲು ಬೊಕ್ಕ ಗಾದೆಲು
ತುಳುಕೂಟ, ಬೆಂಗಳೂರು, ಡೆಮಿ ೧/೮, ರೂ. ೩೦/-

ತುಳುವಿನ ೪೮ ಪದ್ಯಗಳೂ, ೩೪೨ ಗಾದೆಗಳು, ೨ ಹಾಸ್ಯ ಚುಟುಕುಗಳೂ ಇವೆ.

ಶಂಕರ ನಾರಾಯಣ ಪಾಣಾಜೆ ವೈದ್ಯ (ಸಂ), ೧೯೯೬
ಪಾಣಾಜೆ ಪಂಡಿತರ ತುಳು ವೈದ್ಯರ ರತ್ನಮಾಲೆ
ಕ್ರೌನ್ ೧/೮, ಪುಟಗಳು : ೭+೩೩ ರೂ. ೧೫/-

ತುಳುನಾಡಿನ ಮೂಲಿಕಾ ವೈದ್ಯ ಚಿಕಿತ್ಸೆಯ ಕುರಿತ ಕವನ ಸಂಕಲನಾಕೃತಿ.

ಶಿಮುಂಜೆ ಪರಾರಿ, ೧೯೯೭
ಯಾನ್ ಪಣ್ಪಿನಿ ಇಂಚ, ಭಾಗ ೧೦೦
ಉಚಿತ, ಪುಟಗಳು : ೮+೯೯+೧೧. ಭಾಗ ೨೦೦, ೧೯೯೮, ಉಚಿತ. ಪುಟಗಳು : ೧೦೦ – ೨೦೦. ಭಾಗ ೩೦೦, ೧೯೯೮, ಪುಟಗಳು : ೨೦೧ – ೩೦೦. ಭಾಗ ೪೦೦, ೧೯೯೮, ಪುಟಗಳು : ೩೦೧ – ೪೦೦. ಭಾಗ ೫೦೦, ೧೯೯೮, ಪುಟಗಳು : ೪೦೧ – ೫೦೦. ಭಾಗ ೬೦೦, ೨೦೦೦, ಪುಟಗಳು : ೫೦೧ – ೬೦೦. ಭಾಗ ೭೦೦, ೨೦೦೦, ಪುಟಗಳು : ೬೦೧-೭೦೦.

ತುಳು ಚಟುಕುಗಳ ಸಂಕಲನ.

ಶಿವಾನಂದ ಕರ್ಕೇರಾ ಅತ್ತಾವರ, ೨೦೦೩
ಕಡಲ್ (ಕವನ ಸಂಕಲನ)
ಸ್ವೀಕಾರ್ ಪ್ರಕಾಶನ, ಸ್ವೀಕಾರ್ ಎಂಟರ್ಪ್ರೈಸಸ್, ಸಾಯಿ ಕಾಂಪ್ಲೆಕ್ಸ್, ಹೋಟೆಲ್ ಮನೋಹರ ವಿಲಾಸದ ಹತ್ತಿರ, ಕಂಕನಾಡಿ, ಮಂಗಳೂರು – ೫೭೫ ೦೦೨
ಡೆಮಿ ೧/೮, ಪುಟಗಳು : ೬೬, ರೂ. ೩೦/-

ಒಟ್ಟು ಐವತ್ತು ಕವನಗಳುಳ್ಳ ಸಂಕಲನ. ಇದರಲ್ಲಿ ಚಿಂತನಶೀಲ ಕವಿತೆಗಳ, ಮಕ್ಕಳ ಕವಿತೆಗಳು, ಭಕ್ತಿಪ್ರಧಾನ ಕವಿತೆಗಳು, ನೆನಪಿನ ಕವಿತೆಗಳು, ಸಿರಿ ಕವಿತೆಗಳು (ಸಿರಿ ಕಬಿತೆಲು), ಹನಿ ಕವಿತೆಗಳೆಂಬ ಭಾಗಗಳಿವೆ. ಒಟ್ಟಿನಲ್ಲಿ ಇಲ್ಲಿ ದೇವರ ಸ್ತುತಿ, ಬದುಕಿನ ರೀತಿ, ವಿಡಂಬನೆ, ಹುಟ್ಟು – ಸಾವು, ಸಮಾಜದ ಅನಿಷ್ಟಗಳು, ಸಾಂಸಾರಿಕ ಬದುಕಿನ ಸುಖದುಃಖ, ಸಮಕಾಲೀನ ಸಂಗತಿಗಳು, ಮಕ್ಕಳ ಆಟ-ಕೂಟಗಳನ್ನು ಕಾಣಬಹುದು.

ಶೀನಪ್ಪ ಹೆಗ್ಡೆ ಪೊಳಲಿ, ೧೯೭೯
ತುಳುವಾಲ ಬಲಿಯೇಂದ್ರೆ
ಶ್ರೀದೇವಿ ಪ್ರಕಾಶನ, ಪರ್ಕಳ, ಕ್ರೌನ್ ೧/೮, ಪುಟಗಳು : ೨೨, ರೂ. ೦.೮೦/-

ದೀಪಾವಳಿಯ ಆಚರಣೆಯ ಹಿನ್ನೆಲೆಯನ್ನು ಹೇಳುವ ಬಲೀಂದ್ರ ಪಾಡ್ದನದ ಸುಧಾರಿತ ರೂಪ.

ಶೆಟ್ಟಿ ಎನ್.ಪಿ., ೨೦೦೬
ಬಾಯಿದೊಂಜಿ ಪಾತೆರೊ
ಯುಗಪುರುಷ ಪ್ರಕಾಶನ, ಕಿನ್ನಿಗೋಳಿ
ಡೆ. ೧/೮, ಪುಟಗಳು : ೪+೫೨, ಬೆಲೆ : ರೂ. ೩೦/-

ತುಳು ಕವನ ಸಂಕಲನ.

ಶ್ಯಾಮ್ ಗೋಪಾಲ್, ೧೯೯೮
ಮುಗುರ್
ಡೆಮಿ ೧/೮, ಪುಟಗಳು : ೩೬, ರೂ. ೨೫/-

೩೨ ಸ್ವತಂತ್ರವಾದ ತುಳು ಕವಿತಗಳ ಗೊಂಚಲು.

ಶ್ರೀನಿವಾಸ ಮಂಕುಡೆ, ೧೯೯೫
ನೆಂಪು (ತುಳು ಕವನ ಸಂಗ್ರಹ)
ವಿಷ್ಣುಪ್ರಿಯ ಕಲಾನಿಕೇತನ, ಮೀರಜ್
ಕ್ರೌನ್ ೧/೮, ಪುಟಗಳು : ೪+೮, ರೂ. ೩/-

ಒಟ್ಟು ೭ ಕವನಗಳುಳ್ಳ ಸಂಕಲನ.

ಸಂಜೀವ ಶೆಟ್ಟಿ ಕೆ., ೧೯೯೪
ಬೊಳ್ಪಾಂಡ್
ಪ್ರಕಾಶಕ : ಕೆ. ಸಂಜೀವ ಶೆಟ್ಟಿ ಕಟಪಾಡಿ, ಪುಟಗಳು : ೧೮, ರೂ. ೬/-

೧೫ ತುಳು ಕವಿತೆಗಳ ಸಂಕಲನಗೊಂಡಿವೆ.

ಸತೀಶ ರೈ, ಬೆಳ್ಳಿಪ್ಪಾಡಿ
ತುಳುನಾಡ್ದ ಪೊರ್ಲು (ತುಳು ಕವನ ಸಂಕಲನ)
ಲಕ್ಷ್ಮೀಪತಿ ಪ್ರಕಾಶನ, ಕಳ್ಳಿಗೆ, ಕ್ರೌನ್ ೧/೮, ಪುಟಗಳು : ೩೪+೯, ರೂ. ೧೦/-

ಸತೀಶ ರೈ, ಬೆಳ್ಳಿಪ್ಪಾಡಿ, ೧೯೮೮
ತುಳುನಾಡ್ದ ಬೊಳ್ಳಿಲು
ಕ್ರೌನ್ ೧/೮, ಪುಟಗಳು : ೭+೩೨, ರೂ. ೬/-

ಕೆಲವು ಕ್ಷೇತ್ರಗಳ, ಗಣ್ಯ ವ್ಯಕ್ತಿಗಳ ಮತ್ತು ಕವಿ ಲೇಖಕರ ಕುರಿತು ಬರೆದಿರುವ ಚುಟುಕುಗಳ ಸಂಗ್ರಹ.

ಸಾಮಗ ಬಾ. ಮಲ್ತೆ, ೧೯೮೦
ಬದ್‌ಕೊಂದುಲ್ಲರಾ ?
ತುಳುನಾಡ್ ಪ್ರಗತಿ ಪ್ರಕಾಶನಾಲಯ, ಮಲ್ಪೆ ಡೆಮಿ ೧/೮, ಪುಟಗಳು : ೧೬, ರೂ. ೨/-

ತುಳು ಕವನ ಸಂಕಲನ.

ಸಿದ್ಧಕಟ್ಟೆಯಲ್ಲಿ ಮಲ್ಲಿಕಾ ಶೆಟ್ಟಿ, ೨೦೦೫
ಪದ್ದೆಯಿ
ಹೇಮಾಂಶು ಪ್ರಕಾಶನ, ಗೊಲ್ಲಚ್ಚಿಲ್, ದೇರೆಬೈಲ್, ಮಂಗಳೂರು – ೫೭೫ ೦೦೬
ಕ್ರೌ. ೧/೮, ಪುಟಗಳು : ೩೨, ಬೆಲೆ : ರೂ. ೧೫/-

೨೧ ತುಳು ಕವಿತೆಗಳ ಸಂಕಲನ.

ಸೀತಾರಾಮ ಆಳ್ವ, ನಡುವಳಬೈಲ್, ೧೯೯೧
ಕೆಲಿಂಜ ಶ್ರೀ ಸವೇಶ್ವರಿ ಕ್ಷೇತ್ರ, ೧/೮, ಪುಟಗಳು : ೧೪+೨.

ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಶ್ರೀ ಉಳ್ಳಾಲ್ತಿ ದೈವದ ಮಹಿಮೆ.

ಸೀತಾರಾಮ ಆಳ್ವ ಎನ್. ಕೆಲಿಂಜ, ೧೯೯೭
ಭೂಮಿಪುತ್ರೆ ಬಲಿಯೇಂದ್ರೆ (ತುಳು ಕಾವ್ಯ)
ನಿತ್ಯಾನಂದ ಗ್ರಂಥಾಲಯ, ಮಂಗಳೂರು
ಕ್ರೌನ್ ೧/೮, ಪುಟಗಳು : ೩೨, ರೂ. ೮/-

ಹಬ್ಬದ ಆಚರಣೆ ವಿವರ ಸಹಿತವಾಗಿ ಬಲಿಯೇಂದ್ರನ ಕಥೆಯನ್ನು ಕಾವ್ಯರೂಪದಲ್ಲಿ ವಿವರಿಸಲಾಗಿದೆ.

ಸೀತಾರಾಮ ಆಳ್ವ ಎನ್. ಕೆಲಿಂಜ, ೧೯೮೪
ಮಹಾವೀರ ವಾಣಿ
ತುಳು ತುಡಾರ್, ವಿಟ್ಲ, ದ.ಕ. – ೫೭೪ ೨೪೩
ಕ್ರೌನ್ ೧/೮, ಪುಟಗಳು : ೧೫+೭೦, ರೂ. ೫/-

ಭಾಮಿನಿ ಷಟ್ಪದಿಯಲ್ಲಿ ಬರೆದ ಮಹಾವೀರನ ಚರಿತ್ರೆ.

ಸುನೀತಾ ಶೆಟ್ಟಿ, ೧೯೯೪
ನಾಗ ಸಂಪಿಗೆ (ತುಳು ಕವನ ಸಂಕಲನ)
ಅಕ್ಷಯ ಪ್ರಕಾಶನ, ಮುಂಬಯಿ
ಡೆಮಿ ೧/೮, ಪುಟಗಳು : ೫೦+೬, ರೂ. ೨೫/-

ತುಳುನಾಡು, ಜನ ಸಂಸ್ಕೃತಿಗೆ ಸಂಬಂಧಿಸಿದ ಕವನಗಳಿವೆ. ಈ ಸಂಕಲನದಲ್ಲಿ ನಾವು ಒಟ್ಟು ೨೬ ಕವನಗಳನ್ನು ನೋಡಬಹುದು.

ಸುನೀತಾ ಶೆಟ್ಟಿ, ೧೯೮೯
ಸಂಕ್ರಾಂತಿ (ತುಳು ಕವನ ಸಂಕಲನ), ಕ್ರೌನ್ ೧/೮, ರೂ. ೫/-

೧೫ ತುಳು ಕವನಗಳಿರುವ ಸಂಕಲನ.

ಸುನೀತಾ ಶೆಟ್ಟಿ ಎಂ., ೧೯೮೬
ಪಿಂಗಾರ, ಕ್ರೌನ್ ೧/೮, ರೂ. ೩/-

ತುಳು ಕವಿತೆಗಳ ಸಂಗ್ರಹ.

ಸುನೀತಾ ಶೆಟ್ಟಿ, ೨೦೦೬
ಪದ ಪದ್ ಕಣ್ಣಾರೋ… (ತುಳು ಭಾವಗೀತೆಗಳ ಗೊಂಚಲು)
ಅಕ್ಷಯ ಪ್ರಕಾಶನ, ಬಿ. ೨೮, ಕುರ್ಲಾ (ಪೂರ್ವ), ಮುಂಬಯಿ – ೪೦೦ ೦೨೪.
ಕ್ರೌ. ೧/೮, ಪುಟಗಳು : ೫೭, ಬೆಲೆ : ರೂ. ೩೦/-

ಕೆಡ್ಡಸ, ಬಿಸು, ಆಟಿ ಮೊದಲಾಗಿ ತುಳು ಸಂಸ್ಕೃತಿಗೆ ಸಂಬಂಧಿಸಿದಂತೆ ರಚಿಸಿರುವ ಗೇಯ ಗೀತೆಗಳ ಸಂಕಲನ.

ಸುಬ್ರಹ್ಮಣ್ಯ ಶಾಸ್ತ್ರಿ ಎಂ. ಆರ್., ೧೯೯೦ (೧೯೮೦, ೧೯೧೬)
ತುಳು ಕನ್ಯೋಪದೇಶ
ಕ್ರೌನ್ ೧/೮, ರೂ. ೧/-

ಹದಿಹರೆಯದ ಹುಡುಗಿಗೆ, ವಧುವಿಗೆ ಜೀವನಕ್ರಮವನ್ನು, ಸ್ತ್ರೀಯರ ನಡತೆಯನ್ನು, ಪತಿವ್ರತಾ ಧರ್ಮವನ್ನು ತಿಳಿಹೇಳುವ ಪುಟ್ಟ ಕೃತಿ. ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾದ ಕವಿತೆಗಳ ಗುಚ್ಛ.

ವಿವಿಧ ಕವಿಗಳು (೯ ಮಂದಿ), ೧೯೯೨
ಅಟಿಲ್ (ತುಳು ಕಬಿತೆಲ್ಲ ಗೊಂಚಿಲ್)
ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು
ಕ್ರೌನ್ ೧/೮, ಪುಟಗಳು : ೧೮, ರೂ. ೫/-

ತುಳು ಸ್ವತಂತ್ರ ಕವಿತೆಗಳ ಸಂಕಲನ.

ತುಳು ಪದ್ಯಾವಳಿ

ತುಳುನಾಡಿನ ಬಗ್ಗೆ ಬರೆದ ಪದ್ಯ ದೇವರ ನಾಮಗಳು ಹಾಗೂ ಸಾಮಾಜಿಕ ಪಿಡುಗಾದ ಮದ್ಯಪಾನದ ದುಷ್ಪರಿಣಾಮದ ಕುರಿತೂ ಬರೆದ ಭಜನಾ ರೂಪದ ಪದ್ಯಗಳಿವೆ. ಎಲ್ಲವುಗಳ ಧಾಟಿ ಹಾಗೂ ರಾಗ – ತಾಳಗಳನ್ನು ನೀಡಲಾಗಿದೆ.