ಮಚ್ಚೇಂದ್ರನಾಥ್ ಪಾಂಡೇಶ್ವರ, ೧೯೮೮
ಕೌನ್ಸಿಲರ್ ಕೊಗ್ಗಣ್ಣೆ (ತುಳು ಹಾಸ್ಯಮಯ ನಾಟಕ)
ವಿ.ಪಿ.ಸಿ. ಪಬ್ಲಿಕೇಷನ್ಸ್, ಮಂಗಳೂರು, ಕ್ರೌ ೧/೮, ರೂ. ೫/-

ಮನು ಇಡ್ಯ, ೧೯೮೯
ಬಲಿ (ತುಳು ನಾಟಕ)
ಸಿಂಗಾರ ಪ್ರಕಾಶನ ಸುರತ್ಕಲ್, ಡೆಮಿ ೧/೮, ರೂ. ೬/-

ಬಲೀಂದ್ರ ತುಳು ಸಂಧಿಯ ಕೆಲವು ಭಾಗಗಳನ್ನು ಆಧರಿಸಿ ಬರೆದ ನಾಟಕ. ಭೂಮಿಪುತ್ರನ್ನು ಬೇರೆ ಮಂದಿ ಹೇಗೆ ಸೋಲಿಸುತ್ತಾರೆ. ನಿರಪರಾಧಿಯಾಗಿರುವ ಬಲೀಂದ್ರನನ್ನು ಸತ್ಯದ ಹೆಸರಿನಲ್ಲಿ ಕಟ್ಟಿಹಾಕಿ ಹೇಗೆ ಕುತಂತ್ರದಿಂದ ಬಲಿಪಶುವನ್ನಾಗಿ ಮಾಡಿದರೆಂದು ಮಾರ್ಮಿಕವಾಗಿ ಚಿತ್ರಿಸಲಾಗಿದೆ.

ಮನು ಇಡ್ಯ, ೧೯೯೨
ತಿರ್ಸಂಕು (ತುಳು ನಾಟಕ)
ಸಿಂಗಾರ ಪ್ರಕಾಶನ ಸುರತ್ಕಲ್, ಕ್ರೌನ್ ೧/೮, ರೂ. ೧೫/-

ಗುರಿಕಾರ ಮತ್ತು ಜನಶಕ್ತಿಯ ನಡುವಿನ ಸಂಘರ್ಷಗಳನ್ನು ಚಿತ್ರಿಸುವ ನಾಟಕ.

ಮಾಧವ ಕಾಡ್ಪೆಟ್ಟು, ಉಡುಪಿ, ೧೯೯೫
ಸತ್ಯೊದ ಬೊಲ್ಪು
ಕೃತ್ತಿಕಾ ಪ್ರಕಾಶನ ಉಡುಪಿ, ಕ್ರೌನ್ ೧/೮, ಪುಟಗಳು : ೮+೮೭, ರೂ. ೨೫/-

ಕುತೂಹಲಕಾರಿ ತುಳು ಸಾಮಾಜಿಕ ನಾಟಕ

ಮಾಧವ ತಿಂಗಳಾಯ, ೧೯೩೩
ಜನಮರ್ಲ್‌(ತುಳು ನಾಟಕ)
ತುಳುನಾಡು ಛಾಪಖಾನೆ ಉಡುಪಿ, ರೂ. ೦.೬೦

ಮುದ್ದು ಮೂಡುಬೆಳ್ಳೆ, ೧೯೯೧
ನಮ್ಮ ಎಡ್ದೆನಾ ಊರ್ಯೆಡ್ಡೆ (ತಳು ಏಕಾಂಕ ನಾಟಕಗಳು)
ತುಳು ಚೇತನ ಬೆಂಗಳೂರು, ಕ್ರೌನ್ ೧/೮, ಪುಟಗಳು : ೨೮, ರೂ. ೪/-

‘ಪೊಣ್ಣಗೊಂಜಿ ಮದಿಮೆ’ ಹಾಗೂ ‘ನಮ್ಮ ಎಡ್ಡೆನಾ ಊರ್ಯೆಡ್ಡೆ’ ನಾಟಕಗಳು ಈ ಪುಸ್ತಕದಲ್ಲಿದೆ.

ಮುದ್ದು ಮೂಡುಬೆಳ್ಳೆ, ೧೯೯೧
ಇನೆ ರೂಪಕೊಲು
ತುಳು ಚೇತನ ಬೆಂಗಳೂರು, ಕ್ರೌನ್ ೧/೮, ಪುಟಗಳು : ೪೦, ರೂ. ೬/-

ತುಳು ಜಾನಪದ ರೂಪಕಗಳು.

ರಾಮ ಕಿರೋಡಿಯನ್ ಬಿ., ೧೯೭೦
ಸರ್ಪ ಸಂಕಲೆ (ತುಳು ಹಾಸ್ಯಮಯ ಸಾಮಾಜಿಕ ನಾಟಕ)
ಕೋಕಿಲ ಆರ್ಟ್ಸ್ ಮಂಗಳೂರು, ಕ್ರೌನ್ ೧/೮, ರೂ. ೧.೫೦/-

ಜೀವಿತದಲ್ಲಿನ ವಿವಾಹವು ಬಾಳನ್ನು ಹಸನಾಗಿಸುವ ಬದಲು ಅಧೋಗತಿಗೂ ಕಾರಣವಾಗುವುದೆಂಬುದನ್ನು ನಾಟಕರೂಪದಲ್ಲಿ ಅಳವಡಿಸಲಾಗಿದೆ.

ರಾಮಚಂದರ್ ಬೈಕಂಪಾಡಿ, ೧೯೮೯
ಪಿಂಗಾರ (ತುಳು ಜಾನಪದ ನಾಟಕ)
ಅಂಜನಿ ಪ್ರಕಾಶನ, ಬೈಕಂಪಾಡಿ, ಮಂಗಳೂರು, ಡೆಮಿ ೧/೮, ರೂ. ೫/-

ತುಳುನಾಡಿನ ಪ್ರಸಿದ್ಧ ಕಲೆಯಾದ ಯಕ್ಷಗಾನದ ಅಂತಸ್ತನ್ನು ನಂಬಿ ಕೊನೆಗೂ ಸೋತು ಗೆಲ್ಲುವ ಕಲಾವಿದರ ಬದುಕಿನ ಸುತ್ತ ಹೆಣೆದ ಕಥೆಯ ಕಲ್ಪನೆಯಲ್ಲಿ ಸೃಷ್ಟಿಸಿದಂಥ ತುಳು ನಾಟಕ.

ರಾವ್ ಪಿ.ಎಸ್., ೧೯೭೦
ಎಂಕ್‌ಲಾ ಮದ್ಮೆ ಆವೊಡೇ (ತುಳು ಸಾಮಾಜಿಕ ನಾಟಕ)
ಸಹೋದರ ಕಲಾವೃಂದ (ಸಾಹಿತ್ಯ ವಿಭಾಗ) ಮಣ್ಣ ಗುಡ್ಡೆ
ಕ್ರೌನ್ ೧/೮, ರೂ. ೧.೫೦ ಮರುಮುದ್ರಣ.

ರಾವ್ ಪಿ.ಎಸ್., ೧೯೭೨
ಪೊಸ ಜೋಡಿ (ತುಳು ಸಾಮಾಜಿಕ ನಾಟಕ)
ಸಹೋದರ ಕಲಾವೃಂದ, ಮಣ್ಣಗುಡ್ಡೆ, ಕ್ರೌ. ೧/೮, ರೂ. ೧.೫೦/-

ರಾವ್ ಪಿ.ಎಸ್., ೧೯೭೪
ಕೆಸರ್ (ತುಳು ಸಾಮಾಜಿಕ ನಾಟಕ)
ಸಹೋದರ ಕಲಾವೃಂದ ಮಣ್ಣಗುಡ್ಡೆ, ಕ್ರೌನ್ ೧/೮, ರೂ. ೨.೫೦/-

ರಾವ್ ಪಿ.ಎಸ್., ೧೯೭೭
ಇಂಚಾಂಡ ಎಂಚ?
ಸಹೋದರ ಕಲಾ ವೃಂದ (ಸಾಹಿತ್ಯ ವಿಭಾಗ) ಮಣ್ಣಗುಡ್ಡೆ
ಕ್ರೌನ್ ೧/೮, ರೂ. ೨.೫೦/-

ತುಳು ಸಾಮಾಜಿಕ ಪ್ರಹಸನ

ರಾವ್ ಪಿ.ಎಸ್., ೧೯೭೭
ಲವ್ Marriage (ಹಾಸ್ಯ ಪ್ರಧಾನ ತುಳುನಾಟಕ)
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ರೂ. ೨.೫೦/-

ರಾವ್ ಪಿ.ಎಸ್., ೧೯೮೦
ಮಾರಪ್ಪಣ್ಣನ ಮಗೆ
ಸಹೋದರ ಕಲಾವೃಂದ ಮಂಗಳೂರು
ಕ್ರೌನ್ ೧/೮, ಪುಟಗಳು : ೬೫+೭, ರೂ. ೩.೫೦

ರಾವ್ ಪಿ.ಎಸ್., ೧೯೮೦
ಮಾಮಣ್ಣ
ಸಹೋದರ ಕಲಾವೃಂದ, ಪ್ರಕಾಶನ ಮಂಗಳೂರು
ಕ್ರೌನ್ ೧/೮, ಪುಟಗಳು ೫೮+೨, ರೂ. ೩/-

ತುಳು ಹಾಸ್ಯಪ್ರಧಾನ ನಾಟಕ

ರಾವ್ ಪಿ.ಎಸ್., ೧೯೮೨
ಬೆನ್ಪಿನ ಪೊಣ್ಣು
ಸಹೋದರ ಕಲಾವೃಂದ ಪ್ರಕಾಶನ, ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೭೯, ರೂ. ೫/-

ತುಳು ಸಾಮಾಜಿಕ ಬೋಧಪ್ರದ ನಾಟಕ. ಮೂರನೆಯ ಮುದ್ರಣ.

ರಾವ್ ಪಿ.ಎಸ್., ೧೯೮೩
ಪಿಕ್‌ನಿಕ್‌ದ ಪೊರ್ಲು
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು ೩೨+೨, ರೂ. ೨.೫೦

ತುಳು ಹಾಸ್ಯ ನಾಟಕ

ರಾವ್ ಪಿ.ಎಸ್., ೧೯೮೪
ಪಗೆತ ಪುಗೆ (ಸಾಮಾಜಿಕ ತುಳು ನಾಟಕ)
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೬೪, ರೂ. ೫/- ತೃತೀಯ ಮುದ್ರಣ

ರಾವ್ ಪಿ.ಎಸ್., ೧೯೮೪
ಪೊರ್ಲುದ ಪೊಣ್ಣು (ತುಳು ನಾಟಕ)
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು: ೬೬+೧೦, ರೂ. ೫/-

ರಾವ್ ಪಿ.ಎಸ್., ೧೯೮೫
ಪೊತ್ತಂದಿ ಪಗೆ
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು: ೪೧+೯, ರೂ. ೫/-

ತುಳು ಸಾಮಾಜಿಕ ನಾಟಕ.

ರಾವ್ ಪಿ.ಎಸ್., ೧೯೮೫
ಸೊರ್ಕುಗು ಸವಾಲ್ (ತುಳು ನಾಟಕ)
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೪೮+೧೨, ರೂ. ೫/-

ರಾವ್ ಪಿ.ಎಸ್., ೧೯೮೫
ಊರು ಪೂರಾ ಸುದ್ದಿ
ಸಹೋದರ ಕಲಾವೃಂದ ಪ್ರಕಾಶನ, ಕ್ರೌನ್ ೧/೮, ಪುಟಗಳು : ೫೮, ರೂ. ೫/-

ತುಳು ಹಾಸ್ಯ ನಾಟಕ

ರಾವ್ ಪಿ.ಎಸ್., ೧೯೮೬
ತಿಂಗೊಲ್ದ ಕಾನಿಕೆ
ಸಹೋದರ ಕಲಾವೃಂದ ಪ್ರಕಾಶನ ಮಂಗಳೂರು
ಕ್ರೌನ್ ೧/೮, ಪುಟಗಳು: ೨೬+೬, ರೂ. ೩/-

ರಾವ್ ಪಿ.ಎಸ್., ೧೯೮೬
ಜವಾನ್ದಿ ಪೊಣ್ಣು (ಸಾಂಸಾರಿಕ ತುಳು ನಾಟಕ)
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೭೦+೮ ರೂ. ೫/- ಮರುಮುದ್ರಣ

ರಾವ್ ಪಿ.ಎಸ್., ೧೯೮೬
–ರ್ಯಾದಿ ಮುಖ್ಯ
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು ೬೮+೧೨, ರೂ. ೫/-

ತುಳು ಸಾಮಾಜಿಕ ನಾಟಕ

ರಾವ್ ಪಿ.ಎಸ್., ೧೯೮೭
ಮೋಕೆ! ಮರ್ಲಾ?
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು : ೫೫+೯, ರೂ. ೫/-

ತುಳು ಸಾಮಾಜಿಕ ನಾಟಕ

ರಾವ್ ಪಿ.ಎಸ್., ೧೯೮೮
ಗೊಬ್ಬುದ ಗೊಬ್ಬು, ಬೊಕ್ಕ ಇತರ ನಾಟಕೋಲು (ತುಳು ಪ್ರಹಸನಗಳು)
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೫೬+೮, ರೂ. ೫/-
೭ ಸಣ್ಣ ನಾಟಕಗಳ ಸಂಗ್ರಹವಿದೆ.

ರಾವ್ ಪಿ.ಎಸ್., ೧೯೯೦
ನೆಲೆದಾಂತಿ ಪೊಣ್ಣು
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ, ಮಂಗಳೂರು
ಕ್ರೌನ್ ೧/೮, ಪುಟಗಳು : ೫೩+೯, ರೂ. ೫/-

ಸಾಂಸಾರಿಕ ತುಳು ಸಾಮಾಜಿಕ ನಾಟಕ. ತೃತೀಯ ಮುದ್ರಣ

ರಾವ್ ಪಿ.ಎಸ್., ೧೯೯೦
ಅಮ್ಮೆಗೊರಿ ಅಂಡೆಮಗೆ
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು: ೫೭+೯, ರೂ. ೬/-

ತುಳು ಹಾಸ್ಯ ನಾಟಕ.

ರಾವ್ ಪಿ.ಎಸ್., ೧೯೯೦
ಯಾನ್ ಬುಡಾಯೆ
ಸಹೋದರ ಕಲಾವೃಂದ ಪ್ರಕಾಶನ ಮಂಗಳೂರು
ಕ್ರೌನ್ ೧/೮, ಪುಟಗಳು : ೩೯+೫, ರೂ. ೪.೫೦

ಹೆಣ್ಣಿನ ಪಾತ್ರವಿಲ್ಲದಿರುವಂಥ ತುಳು ಹಾಸ್ಯ ನಾಟಕ. ತೃತೀಯ ಮುದ್ರಣ.

ರಾವ್ ಪಿ.ಎಸ್., ೧೯೯೧
ಬರ್ಪನಾ? (ತುಳು ನಾಟಕ)
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೨೨+೧೦, ರೂ. ೪/-

ರಾವ್ ಪಿ.ಎಸ್., ೧೯೯೧
ಆಣ್ ಮಗೆ ಸೋಂಪೆ
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೬೮+೮, ರೂ. ೬೧/-

ರಾವ್ ಪಿ.ಎಸ್., ೧೯೯೧
ಎನ್ನ ಕಂಡಾನಿಗ್ ಯಾನೇ ಬುಡೆದಿ
ಸಹೋದರ ಕಲಾವೃಂದ ಪ್ರಕಾಶನ ಮಣ್ಣಗುಡ್ಡೆ
ಕ್ರೌನ್ ೧/೮, ಪುಟಗಳು : ೬೫+೧೧, ರೂ. ೬/-

ರಾವ್ ಪಿ.ಎಸ್., ೧೯೯೧
ಪನಂದೆ ಪದ್ರಾಡ್
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು: ೪೪, ರೂ. ೫/-

ಸಮಸ್ಯಾತ್ಮಕ ತುಳು ನಾಟಕ. ದ್ವಿತೀಯ ಮುದ್ರಣ

ರಾವ್ ಪಿ.ಎಸ್., ೧೯೯೧
ಮುಠ್ಠಾಳ ಮಾಮೆ
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು : ೩೨+೮, ರೂ. ೫/-

ರಾವ್ ಪಿ.ಎಸ್., ೧೯೯೪
ಪದ್ದಕ್ಕನ ಕಂಡನಿ ಪಿರಬೈದೆ
ಸಹೋದರ ಕಲಾವೃಂದ ಪ್ರಕಾಶನ ಮಂಗಳೂರ
ಕ್ರೌನ್ ೧/೮, ಪುಟಗಳು : ೬೫+೯, ರೂ. ೯/-

ತುಳು ಬೋಧಪ್ರದ ನಾಟಕ.

ರಾವ್ ಪಿ.ಎಸ್., ೨೦೦೦
ಬರಡ್! ಬರಡ್! (ತುಳು ನಾಟಕ)
ದುರ್ಗಾ ಪ್ರಕಾಶನ, ಮಣ್ಣಗುಡ್ಡೆ, ಮಂಗಳೂರು
ಕ್ರೌ. ೧/೮, ಪು. ೪+೫೨, ರೂ. ೨೪/-

ರಾವ್ ಪಿ.ಎಸ್., ೨೦೦೫
ತಾಕತ್ತ್ ಇತ್ತ್‌೦ಡ ತಾಂಟ್‌ಲ
ಕ್ರೌನ್ ೧/೮, ಪುಟಗಳು: ೬೪, ರೂ. ೨೪/-

ಇದೇ ರೀತಿ ಮತಿದಾಂತಿ ಮಾಟ, ಈ ಪ್ರೀತಿ ಬದ್ಕೊಡಾ, ಬದಿತ್ತ ಉರ್ಲು, ಗೊಬ್ಬುದ ಗೊಬ್ಬು, ಬರ್ಪನಾ ಎನ್ನುವ ೩೫ ನಾಟಕಗಳನ್ನು ಪ್ರಕಟಿಸಿದ್ದಾರೆ.

ರಾವ್ ಪಿ.ಎಸ್., ೨೦೦೬
ಯಾನ್ ಬೆನ್ಪಿನಾಲ್‌ಯೇ
ದುರ್ಗಾ ಪ್ರಕಾಶನ, ಮಣ್ಣಗುಡ್ಡೆ, ಮಂಗಳೂರು – ೩
ಕ್ರೌ. ೧/೮, ಪುಟಗಳು : ೬೪ ಬೆಲೆ : ರೂ. ೨೪/-

ರಾವ್ ಪಿ.ಎಸ್., ೨೦೦೬
ತುಳು ತೆರಿಯೋನ್ಲೆ
ದುರ್ಗಾ ಪ್ರಕಾಶನ, ಮಣ್ಣಗುಡ್ಡೆ, ಮಂಗಳೂರು – ೩
ಕ್ರೌ. ೧/೮, ಪುಟಗಳು : ೯೬, ಬೆಲೆ : ರೂ. ೨೪/-

ಕನ್ನಡ, ಇಂಗ್ಲಿಷ್‌ನಿಂದ ತುಳು ಭಾಷೆಯನ್ನು ತಿಳಿದುಕೊಳ್ಳಲು ಸುಲಭದ ಕೈಪಿಡಿ.

ಲೀಲಾಬಾಯಿ ಸುರತ್ಕಲ್, ೧೯೮೯
ವಂಶದ ಗೌರವ (ತುಳು ಸಾಮಾಜಿಕ ನಾಟಕ)
ಪ್ರಕಾಶಕರು : ಲೀಲಾಬಾಯಿ ಪಿ. ಸುರತ್ಕಲ್
ಕ್ರೌನ್ ೧/೮, ಪುಟಗಳು : ೩೭+೪, ರೂ. ೫/-

ವಾಮನ ನಂದಾವರ (ಸಂ), ೨೦೦೪
ಅಜ್ಜಿ ತಾಂಕಿನ ಪುಳ್ಳಿ
ಲೇಖಕ : ಮಚ್ಚೇಂದ್ರನಾಥ ಪಾಂಡೇಶ್ವರ, ಮಚ್ಚೇಂದ್ರನಾಥ ಪಾಂಡೇಶ್ವರ ೭೦
ಅಭಿನಂದನಾ ಸಮಿತಿ, ಮಂಗಳೂರು
ಕ್ರೌನ್ ೧/೮, ಪುಟಗಳು : ೪೬ : ರೂ. ೩೬/-

ತುಳು ಸಾಮಾಜಿಕ ನಾಟಕ.

ವಾಮನ ನಂದಾವರ (ಸಂ), ೨೦೦೪
ನೆತ್ತೆರಾ ನೀರಾ?
ಲೇಖಕ : ಮಚ್ಚೇಂದ್ರನಾಥ ಪಾಂಡೇಶ್ವರ, ಮಚ್ಚೇಂದ್ರನಾಥ ಪಾಂಡೇಶ್ವರ ೭೦
ಅಭಿನಂದನಾ ಸಮಿತಿ, ಮಂಗಳೂರು
ಡೆ. ೧/೮, ಪುಟಗಳು : ೪೬ ರೂ. ೩೬/-

ತುಳು ಸಾಮಾಜಿಕ ನಾಟಕ.

ವಿಜಯ್ ಕುಮಾರ್ ಶೆಟ್ಟಿ, ೧೯೯೭
ಈ ನಲ್ಕೆದಾಯೆ…? (ತುಳು ನಾಟಕ)
ಕಲಾಜಗತ್ತು ಪ್ರಕಾಶನ, ಡೆಮಿ ೧/೮, ಪುಟಗಳು: ೭೬+೧೦, ರೂ. ೫೦/-

ಶೋಷಿತ ವರ್ಗದ ಬೇನೆ – ಬೇಸರಗಳೊಂದಿಗೆ ಸಂತೋಷ, ಬದುಕಿನ ಪರಿಭಾಷೆ, ಆಶಯ, ಇವೆಲ್ಲ ನಷ್ಟವಾಗುತ್ತಿರುವಾಗಲೇ ‘ಕುಣಿತ’ದ ಬದುಕು ಒಡ್ಡುವ ಸವಾಲೇ ‘ಈ ನೆಲ್ಕೆ ದಾಯೆ? (ಈ ಕುಣಿತ ಏಕೆ?). ಭೂತಕ್ಕೆ ಕಟ್ಟುವ ಪಾತ್ರಿ ‘ನಲಿಕೆ’ ಜನಾಂಗದವರಿಗೆ ಜಾತಿಯೇ ಒಂದು ನಿಮಿತ್ತವಾಗಿ ಉಂಟಾಗುವ ದೌರ್ಬಲ್ಯ, ಅಸಹಾಯಕತೆ-ಹೀಗೆ ಎರಡು ದೃಷ್ಟಿಕೋನಗಳಿಂದ ನಾಟಕವನ್ನು ನೋಡಬಹುದು.

ವಿಜಯಕುಮಾರ್ ಶೆಟ್ಟಿ, ೧೯೯೯
ಬದಿ (ತುಳು ನಾಟಕ)
ಕಲಾಜಗತ್ತು ಪ್ರಕಾಶನ, ಮುಂಬಯಿ, ಡೆ. ೧/೮, ಪು. ೮+೭೩, ರೂ. ೫೦/-

ಒಂದು ಸಾಮಾಜಿಕ ಸಮಸ್ಯೆಯ ಆಳಕ್ಕೆ ಹೋಗಿ ಅದನ್ನು ಎಸಳು ಎಸಳಾಗಿ ಬಿಡಿಸಿ ನಮ್ಮೆದುರಿಗಿಟ್ಟು ಈ ಸಮಸ್ಯೆಗೆ ಪರಿಹಾರ – ವ್ಯವಸ್ಥೆ ಬದಲಾದರೆ ಮಾತ್ರ ಸಾಧ್ಯ ಎನ್ನುವ ಉತ್ತರವನ್ನು ಪರೋಕ್ಷ ರೂಪದಲ್ಲಿ ಸಮರ್ಥವಾಗಿ ‘ಬದಿ’ ನಾಕಟವು ನೀಡುತ್ತದೆ.

ವಿಜಯಕುಮಾರ್ ಶೆಟ್ಟಿ
ಬೂತೊದ ಇಲ್ಲ್ (ತುಳು ನಾಟಕ)
ಕಲಾಜಗತ್ತು ಪ್ರಕಾಶನ, ಮುಂಬಯಿ, ಡೆ. ೧/೮, ಪು. ೯+೯೯, ರೂ. ೫೦/-

ಮನುಷ್ಯ ಸಂಬಂಧದ ಅರ್ಥವನ್ನು ಅಥವಾ ಅರ್ಥಹೀನತೆಯನ್ನು ಬಗೆದು ನೋಡುವುದೇ ಇಲ್ಲಿಯ ನಾಟಕದ ಧ್ವನಿ. ಮಾನವ ದೌರ್ಬಲ್ಯಗಳಾದ ಲೋಭ, ಕಾಮ, ಮೋಹ ಮುಂತಾದವು ವರ್ಗ, ವರ್ಣವನ್ನು ಲೆಕ್ಕಿಸದೆ ಹಂತ ಹಂತವಾಗಿ ದೈತ್ಯಾಕಾರ ಪಡೆಯುವುದನ್ನು ಇಲ್ಲಿ ಕಾಣಬಹುದು.

ವಿಶ್ವನಾಥ ರೈ ಕುದ್ಕಾಡಿ, ೧೯೮೧
ಸಂಕ್ರಾನ್ತಿ (ತುಳು ನಾಟಕ)
ತುಳುಕೂಟ ಬೆಂಗಳೂರು (ರಿ) ಬೆಂಗಳೂರು, ಡೆಮಿ ೧/೮, ರೂ. ೫/-

ತುಳುಕೂಟ ಬೆಂಗಳೂರು ಏರ್ಪಡಿಸಿದ ತುಳು ನಾಟಕ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿ. ಸಾಮಾಜಿಕ ವಸ್ತುವನ್ನೊಳಗೊಂಡ ನಾಟಕ ಸಾಮಾಜಿಕ ಬದಲಾವಣೆಯ ಈ ಕಾಲದಲ್ಲಿ ಹಿರಿಯ ವ್ಯಕ್ತಿಗಳಿಬ್ಬರು ಪರಿಸ್ಥಿತಿಯನ್ನೆದುರಿಸಿದ ರೀತಿಗಳು ಈ ನಾಟಕದ ಒಳ ತಿರುಳು.

ವಿಶ್ವನಾಥ ರೈ ಕುದ್ಕಾಡಿ, ೧೯೮೩
ಮಂಜತ ಕಾಪಡೆ ಮತ್ತು ಸತ್ಯೊಮ್ಮೆ ದೆಯ್ಯಾರ್
ವಿಶ್ವಕಲಾ ನಿಕೇತನ ಪುತ್ತೂರು, ಕ್ರೌನ್ ೧/೮, ಪುಟಗಳು : ೮-೨೦ ರೂ. ೫/-

‘ಮಂಜತ ಕಾಪಡೆ’ ನಾಟಕ ‘ಆತ್ಮಶ್ರೀ’ ಎಂಬುದು ನಾವು ಅಜ್ಞಾನಿಗಳೆಂಬವರಲ್ಲಿ ಇನ್ನೂ ಉಳಿದಿದೆ. ಅದನ್ನು ಇಣುಕಿ ನೋಡಲು ಪ್ರೇರೇಪಿಸುತ್ತದೆ. ‘ಸತ್ಯೊಮ್ಮ ದೆಯ್ಯಾರ್’ ನಾಟಕವು ದುಡಿಮೆಯ ಮುಂದಿಯ ಪರವಾಗಿ, ಪಟ್ಟಭದ್ರ ಶಕ್ತಿಗಳ ವಿರುದ್ಧವಾಗಿವೆ.

ವಿಶ್ವನಾಥ ರೈ ಕುದ್ಕಾಡಿ, ೧೯೮೭
ಅಬ್ಬಕ್ಕಬ್ಬೆ (ತುಳು ಚಾರಿತ್ರಿಕ ನಾಟಕ)
ವಿ.ಪಿ.ಸಿ. ಪ್ರಕಾಶನ ಮಂಗಳೂರು, ಕ್ರೌನ್ ೧/೮, ಪುಟಗಳು ೮೦, ರೂ. ೫/-

ಊರಿನ ಮೇಲಿನ ಅಬ್ಬಕ್ಕನ ಪ್ರೀತಿ, ಅಭಿಮಾನ, ಹಠದ ಸ್ವಭಾವ, ಇಂಥ ಗುಣಸ್ವಭಾವವಿರುವ ಅಬ್ಬಕ್ಕರಾಣಿಯ ಸುತ್ತ ಹೆಣೆದ ಇತರ ಗ್ರಂಥಗಳ ಆಧಾರದಿಂದ ರಚಿತವಾದ ನಾಟಕ.

ಶಕುಂತಲಾ ಭಟ್ ಎಚ್., ೨೦೦೨
ಪಂಚಾಕ್ಷರಿ (ಮಕ್ಕಳ ತುಳು ನಾಟಕಗಳು)
ಶಕುಂತಳಾ ಭಟ್ ಶ್ರೀ ರಾಮ ಪ್ರಕಾಶನ ಹಳೆಯಂಗಡಿ
ಡೆಮಿ ೧/೮, ಪುಟಗಳು ೯೩+೫+೨, ರೂ. ೬೦/-

ಮೂರು ಪೌರಾಣಿಕ ನಾಟಕಗಳಿವೆ ೧. ‘ಪಂಚಾಕ್ಷರಿ’ – ಮಾರ್ಕಾಂಡೇಯನ ಶಿವ ಭಕ್ತಿಯನ್ನು ತೋರಿಸುವ ನಾಟಕ ೨. ‘ಮಾತೃ ಭಕ್ತಿ’ -ಗಣಪತಿಗೆ ಆನೆ ಮುಖ ಬಂದಂಥ ಕತೆಯನ್ನು ವಿವರಿಸುವ ನಾಟಕ. ೩.’‘ಭೂಕೈಲಾಸ’ ತಾಯಿಯ ಬಯಕೆಯಂತೆ ಈಶ್ವರನನ್ನು ಒಲಿಸಿ ಅವನ ಆತ್ಮಲಿಂಗವನ್ನೇ ತೆಗೆದುಕೊಂಡು ಬರಲು ಹೊರಟ ರಾವಣ, ಅದರ ಪರಿಣಾಮವನ್ನು ವಿವರಿಸುವ ನಾಟಕ.

ಶಾರದಾ ರಮೇಶ್ ರಾವ್, ೧೯೯೬
ಬೂದಮ್ಮನ ಬಿರ್ಸಾತಿಕೆ (ತುಳು ಸಾಮಾಜಿಕ ನಾಟಕ)
ಇಂದಿರಾ ಹಾಲಂಬಿ ಸಂದೀಪ ಸಾಹಿತ್ಯ ಅತ್ರಾಡಿ, ಉಡುಪಿ
ಡೆಮಿ ೧/೮, ಪುಟಗಳು: ೯೪+೮, ರೂ. ೫೦/-

ಈ ಕೃತಿಯ ಒಡಲಲ್ಲಿ ಸಮಾಜದ ಬದುಕು ಸಮಸ್ಯೆಗಳು, ಸ್ತ್ರೀಯರ ಮೇಲಿನ ಶೋಷಣೆ, ಮದ್ಯಪಾನದ ದುಷ್ಪರಿಣಾಮ, ತಂದೆತಾಯಿಯನ್ನು ಕಡೆಗಣಿಸುವ ಮಕ್ಕಳು ಹೀಗೆ ಸಮಾಜದ ಜನರ ಜೀವನದ ಸೂಕ್ಷ್ಮವಿದ್ದು ಶೋಷಣೆಯ ವಿರುದ್ಧ ಬಂಡಾಯವೇಳುವ ಬೂದಮ್ಮ ಸಮಾಜದ ಕಟ್ಟುಪಾಡುಗಳನ್ನೆಲ್ಲಾ ಮೀರಿ ಮಾನವ ಧರ್ಮವನ್ನು ಮೆರೆಸುವ ಕಥೆ ಈ ನಾಟಕದಲ್ಲಿದೆ ದಿ. ರತ್ನವರ್ಮ ಹೆಗ್ಗಡೆ ಸ್ಮಾರಕ ತುಳುನಾಟಕ ರಚನಾ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಗಳಿಸಿದ ಕೃತಿ.

ಶಾರದಾ ಆರ್. ರಾವ್, ೨೦೦೧
ಪ್ರೀತಿದ ಬಿಲೆ (ತುಳು ನಾಟಕ)
ಇಂದಿರಾ ಹಾಲಂಬಿ ಸಂದೀಪ ಸಾಹಿತ್ಯ ಉಡುಪಿ
ಡೆಮಿ ೧/೮, ಪುಟಗಳು ೮+೮೮, ರೂ. ೫೦/-

ಷಹಜಹಾನ್ ಚಕ್ರವರ್ತಿಗೆ ಸಂಬಂಧಿಸಿದ ಒಂದು ಐತಿಹಾಸಿಕ ಕಾದಂಬರಿಯಲ್ಲಿ ಓದಿದ ಒಂದು ಘಟನೆಯನ್ನೇ ಲೇಖಕಿ ನಾಟಕದ ರೂಪದಲ್ಲಿ ರಚಿಸಿದ್ದಾರೆ. ದಿ. ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ್ಪರ್ಧೆಯಲ್ಲಿ (೨೦೦೧) ಪ್ರಥಮ ಬಹುಮಾನ ಪಡೆದ ಕೃತಿ.

ಶಿವಾನಂದ ಎ. ಕರ್ಕೇರಾ, ೧೯೯೭
ಎರು ಮೈಂದೆ (ತುಳು ಜಾನಪದ ನಾಟಕ)
ಸ್ವೀಕಾರ ಪ್ರಕಾಶನ ಮಂಗಳೂರು
ಡೆಮಿ ೧/೮, ಪುಟಗಳು: ೬೮+೫೮, ರೂ. ೩೫/-

ಬೇರೆ ಬೇರೆ ಗುಣಗಳುಳ್ಳ ಮನುಷ್ಯರನ್ನು ಈ ನಾಟಕದಲ್ಲಿ ಕಾಣಬಹುದು. ಹಳ್ಳಿಯ ವಾತಾವರಣದ ಸಹಜತೆ ಇದರಲ್ಲಿದೆ. ತುಳುನಾಡಿನ ಊಳಿಗಮಾನ್ಯ ಬದುಕಿನ ಕೆಲವು ಬಿಂಬಗಳನ್ನು, ಗ್ರಾಮೀಣ ಜೀವನದ ಅಂಗವಾಗಿರುವ ಭೂತದ ಪ್ರಭಾವವನ್ನು ಕೂಡ ಈ ನಾಟಕದಲ್ಲಿ ಕಾಣಬಹುದು. ಮುಲ್ಕಿಯಲ್ಲಿ ನಡೆದ ತುಳು ಸಮ್ಮೇಳನದಲ್ಲಿ ನಡೆದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ನಾಟಕ.

ಶೆಟ್ಟಿ ಕೆ.ಆರ್., ೧೯೭೬
ಕೊಲೆಗಾರೆ ಯೇರ್…?
ವೀಣಾ ಸಾಹಿತ್ಯ ನಿಲಯ, ಎಂ.ಎಸ್.ಆರ್ಟ್ಸ್‌, ಮಂಗಳೂರು, ಕ್ರೌ ೧/೮, ರೂ. ೩/-

ತುಳು ಪತ್ತೇದಾರಿ ಸಾಮಾಜಿಕ ನಾಟಕ.

ಶ್ರೀ ಭವ್ಯಾ (ಶ್ರೀ ಕೆ.ವಿ. ಭಟ್), ೧೯೯೧
ಅಂಗಲಾಪು (ತುಳು ನಾಟಕ)
ಕ್ರೌನ್ ೧/೮, ಪುಟಗಳು: ೮+೮೪, ರೂ. ೯/-

ಸಂಜೀವ ದಂಡಕೇರಿ
ಗಂಗಾರಾಮ್ (ತುಳು ಸಾಮಾಜಿಕ ನಾಟಕ)
ಡೆಮಿ ೧/೮, ಪುಟಗಳು : ೫+೫೯, ರೂ. ೨೫/-

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಕೃತಿ ಇದು. ಸಾಂಸಾರಿಕ ಬದುಕಿನ ನೋವು ನಲಿವುಗಳ ಸಿಹಿ-ಕಹಿಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸಿದ್ದಾರೆ. ಹೆಣ್ಣಿನ ಹೃದಯ ಶ್ರೀಮಂತಿಕೆ, ಸಂಸಾರದಲ್ಲಿ ಹೆಣ್ಣಿನ ಸಂಯಮಶೀಲತೆಯ ಕರ್ತವ್ಯ, ಹೆಣ್ಣು ಸಮಾಜದ ಕಣ್ಣು ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸುವ ಇವರ ಹೆಚ್ಚಿನ ನಾಟಕಗಳ ಕಥಾವಸ್ತು ಸ್ತ್ರೀ ಪ್ರಧಾನ.

ಸಂಜೀವ ದಂಡಕೇರಿ, ೧೯೬೮
ಬಯ್ಯ ಮಲ್ಲಿಗೆ (ತುಳು ನಾಟಕ)
ರೂ. ೧/-

ಸಂಜೀವ ದಂಡಕೇರಿ, ೧೯೭೦
ಬೊಳ್ಳಿ ಮೂಡುಂಡು (ತುಳು ಸಾಮಾಜಿಕ ನಾಟಕ)
ರೂ. ೧.೫೦/-

ಸಂಜೀವ ದಂಡಕೇರಿ
ರಾಧಾ-ಕೃಷ್ಣ (ತುಳು ಸಾಮಾಜಿಕ ನಾಟಕ)
ಡೆಮಿ ೧/೮, ರೂ. ೨೫/-

ಇದೊಂದು ತರ್ಕಬದ್ಧವಾದ, ಮನೋವೈಜ್ಞಾನಿಕವಾದ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿದ ನಾಟಕ. ಜೀವನದ ತಿರುವಿನ ಒಂದು ಘಟಕಾಧಾರಿತವಾಗಿ ಮೂಲಕಥೆ ಸಾಗುತ್ತಿದ್ದಂತೆ ಕಥೆಯ ಗಂಭೀರತೆಯ ಜೊತೆ ಅಲ್ಲಲ್ಲಿ ತಿಳಿ ಹಾಸ್ಯದ ಹೊನಲೂ ಇದೆ.

ಸಂಜೀವ ಸಿ., ೧೯೭೨
ಮರ್ಲೆದಿ
ಯಂ. ವೆಂಕಟರಾವ್, ಶ್ರೀ ನಿತ್ಯಾನಂದ ಗ್ರಂಥಾಲಯ, ಮಂಗಳೂರು
ಕ್ರೌ. ೧/೮, ಪು. ೪+೭೦, ರೂ. ೧.೨೫/

ನವೀನ ರೀತಿಯ ಸಮಸ್ಯಾತ್ಮಕ ಸಾಮಾಜಿಕ ತುಳು ನಾಟಕ.

ಸದಾನಂದ ಸುರತ್ಕಲ್, ೧೯೯೭
ಅಂದ್ಹೆ ಮರ್ಯಾದ್ದೆಪ್ಪಡೆ (ತುಳು ಹಾಸ್ಯ ನಾಟಕ)
ಕ್ರೌನ್ ೧/೮, ಪುಟಗಳು ೬೮+೪, ರೂ. ೨೦/-

ಹಾಸ್ಯದೃಷ್ಟಿಯನ್ನಿಟ್ಟುಕೊಂಡು ಈ ನಾಟಕವನ್ನು ಬರೆಯಲಾಗಿದೆ. ಕುಡಿತದ ಚಟ. ಅದರಿಂದಾಗುವ ಮಾನಸಿಕ ಹಿಂಸೆ ಇಂಥ ಇತರ ದುಷ್ಟರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಾಟಕವನ್ನು ರಚಿಸಲಾಗಿದೆ. ಹಾಗೆಯೇ ಇದರಲ್ಲಿ ೧೧೧ ಗಾದೆಗಳನ್ನು ಆಯ್ಕೆ ಮಾಡಿ ನೀಡಲಾಗಿದೆ.

ಸಾಲಿಯಾನ್ ಎಂ.ಬಿ., ೧೯೮೨
ಬಂಗಾರ್ದ ಕುರಲ್
ಮೈನಾ ಪಬ್ಲಿಕೇಷನ್ಸ್ ಮಂಗಳೂರು, ಕ್ರೌನ್ ೧/೮, ರೂ. ೫/-

ಪ್ರೇಮ-ಕಾಮ ಕುಹಕತನ, ತ್ಯಾಗ ಮುಂತಾದ ಉದಾತ್ತ ವಿಚಾರಗಳಿಂದ ಕೂಡಿದ ದಿ. ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ತುಳು ಸಾಮಾಜಿಕ ನಾಟಕ.

ಸಾಲ್ಯಾನ್ ಪಿ.ಬಿ., ೧೯೮೪
ಧರ್ಮ ಕೈ ಬುಡಂದ್ (ತುಳು ನಾಟಕ)
ಮೈನಾ ಪಬ್ಲಿಕೇಷನ್ಸ್, ಸೂಟರ್ ಪೇಟೆ ಮಂಗಳೂರು, ಕ್ರೌನ್ ೧/೮, ರೂ. ೫/-

ಸಮಾಜದ ದ್ರೋಹಿಗಳು, ವಿಶ್ವಾಸ ಘಾತುಕರು ಬೀಸಿದ ಮೋಸದ ಬಲೆಗೆ ಬಿದ್ದು ವೇಶ್ಯಾ ಜೀವನ ನಡೆಸುವ ಹೆಣ್ಣಿನ ಸತ್ಯಕಥೆಯನ್ನಾಧರಿಸಿ ಬರೆದ ಸಾಮಾಜಿಕ ನಾಟಕ. ಇದಕ್ಕೆ ದಿ. ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಶಸ್ತಿಯೂ ಬಂದಿದೆ.

ಸಾಲ್ಯಾನ್ ಎಂ.ಬಿ., ೧೯೮೫
ಸತ್ಯದ ತುಡರ್ (ತುಳು ಸಾಮಾಜಿಕ ನಾಟಕ)
ಮೈನಾ ಪಬ್ಲಿಕೇಷನ್ಸ್ ಸೂಟರ್ ಪೇಟೆ, ಮಂಗಳೂರು
ಕ್ರೌನ್ ೧/೮, ರೂ. ೬/-

ನೀತಿಯನ್ನು ಹೇಳುವಂಥ ನಾಟಕ. ಈ ನಾಟಕದಲ್ಲಿ ನಮ್ಮ ಸಮಾಜದ ಗಂಭೀರ ಸಮಸ್ಯೆಗಳಾದ ಜಾತಿ, ವರದಕ್ಷಿಣೆಯ ಕ್ರಮಗಳನ್ನು ಚಿತ್ರಿಸಿದ್ದಾರೆ ಮಾತ್ರವಲ್ಲದೆ ದುಡಿಮೆಯ ಫಲ ಬಡವನಿಗೂ ಸಿಕ್ಕಬೇಕೆಂಬ ಆಶಯವೂ ಈ ನಾಟಕದಲ್ಲಿದೆ ‘ಕಲ್ಪನ’ ಪ್ರಶಸ್ತಿ ವಿಜೇತ ನಾಟಕ ಕೃತಿ.

ಸೀತಾರಾಮ ಕುಲಾಲ್ ಎಂ.ಕೆ., ೨೦೦೧
ನಾಟಕದಾಯೆ (ತುಳು – ಕನ್ನಡ ಸಾಮಾಜಿಕ – ಪೌರಾಣಿಕ ನಾಟಕ)
ಶುಭಾ ಪ್ರಕಾಶನ, ಮಂಗಳೂರು, ಡೆ. ೧/೮, ಪು. ೬೧, ರೂ. ೩೦/-

ಈ ನಾಟಕ ರಂಗಭೂಮಿಯ ಕೆಲವು ಮಗ್ಗಲುಗಳನ್ನು ತೋರಿಸುವ ಒಂದು ವಿಶಿಷ್ಟ ಕೃತಿ. ನಾಟಕ ರಂಗದ ಉಪ್ಪು ತಿಂದು ಆ ಕ್ಷೇತ್ರಕ್ಕೇ ತನ್ನನ್ನು ಸಮರ್ಪಣೆ ಮಾಡಿಕೊಂಡ ಒಬ್ಬ ಆದರ್ಶ ಕಲಾವಿದನ ಜೀವನದ ಏರು ತಗ್ಗಿನ ಚಿತ್ರಣವನ್ನು ನೀಡುತ್ತದೆ.

ಸೋಮನಾಥ ಎಸ್. ಕರ್ಕೇರ, ೧೯೯೧
ಪರ್ದೆದ ಪಿರಾವುದ ನಾಟಕ
ಸರ್ವೋದಯ ಸಾಹಿತ್ಯಮಾಲೆ ಮುಂಬಯಿ, ಕ್ರೌನ್ ೧/೮, ರೂ. ೩/-

ತುಳು ಏಕಾಂಕ ಪ್ರಹಸನ