ಕನ್ನಡ ನಾಟಕಗಳು
(ತುಳು ಸಂಸ್ಕೃತಿಗೆ ಸಂಬಂಧಿಸಿದಂತೆ)

ಅಮೃತ ಸೋಮೇಶ್ವರ, ೧೯೮೨
ಕೋಟಿ ಚೆನ್ನಯ (ಮಕ್ಕಳ ನಾಟಕ)
ಪ್ರಕೃತಿ ಪ್ರಕಾಶನ, ಕೋಟೆಕಾರು, ಡೆ. ೧/೮, ಪು. ೪+೩೪, ರೂ. ೬/-

ತುಳುನಾಡಿನ ಕಾರಣಿಕ ಪುರುಷರೂ ಸಾಂಸ್ಕೃತಿಕ ವೀರರೂ ಆದ ಕೋಟಿ ಚೆನ್ನಯರ ‘ಬಂಟರ ಸಂಧಿ’ಯನ್ನು ಆಧರಿಸಿ ಹಾಗೂ ಪಂಜೆಯವರ ಕೋಟಿ ಚೆನ್ನಯರ ಕತೆಯನ್ನಾಧರಿಸಿ ಬರೆದ ನಾಟಕ.

ರತ್ನಾಕರರಾವ್, ಕಾವೂರು, ೧೯೮೪
ಅಮರ ನಾರಿ ಅಬ್ಬಕ್ಕ (ಐತಿಹಾಸಿಕ ನಾಟಕ) (ದ್ವಿ.ಮು.)
ಡೆಮಿ ೧/೮, ಪುಟಗಳು ೬+೭೫, ರೂ. ೯/-

ಸ್ವಾತಂತ್ರ್ಯ ಸಮರ ಘೋಷಿಸಿ ಅಮರಳಾದ ಅಬ್ಬಕ್ಕ ದೇವಿಯು ಸ್ತ್ರೀ ಸಮುದಾಯದ ವೀರ ವನಿತೆಯಲ್ಲಿ ಮೊದಲಿಗಳು. ಹಾಗಾಗಿ ತುಳುನಾಡಿಗೆ ಕೀರ್ತಿ ತಂದ ಅಬ್ಬಕ್ಕನ ಚರಿತ್ರೆಯನ್ನು ಲೇಖಕರು ನಾಟಕದ ಮೂಲಕ ಅನಾವರಣಗೊಳಿಸಿದ್ದಾರೆ.

ರಾಮನಾಯಕ ಬೇಕಲ (ಲೇಖಕ – ಪ್ರಕಾಶಕ), ೧೯೩೭
ತೌಳವ ಸ್ವಾತಂತ್ರ್ಯ (ಐತಿಹಾಸಿಕ ನಾಟಕ)
ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, ರೂ. ೪ ಆಣೆ

ಇತಿಹಾಸದ ಪ್ರಸಿದ್ಧರಾದ ಲೋಕಾದಿತ್ಯ, ಜಯಸಿಂಹ ಮೊದಲಾದ ವೀರ ಪುರುಷರ ಕೆಲವು ಕಥಾಭಾಗವನ್ನು ಸ್ಥಳ ಪುರಾಣಗಳಿಂದ ಆಯ್ದುಕೊಂಡು ಅದಕ್ಕೆ ‘ತೌಳವ ಸ್ವಾತಂತ್ರ್ಯ’ ಎಂಬ ವೀರರಸ ಪ್ರಧಾನವಾದ ನಾಟಕದ ರೂಪದಲ್ಲಿ ನೀಡಲಾಗಿದೆ.

ವಿಶ್ವನಾಥ ರೈ ಕುದ್ಕಾಡಿ, ೧೯೭೪
ದೇವಿ ಅಬ್ಬಕ್ಕ (ಐತಿಹಾಸಿಕ ನಾಟಕ) ಪ್ರ. ಮು) ೧೯೯೪ (ದ್ವಿ. ಮು),
ವಿಶ್ವಕಲಾನಿಕೇತನ ಪುತ್ತೂರು, ಕ್ರೌನ್ ೧/೮, ಪುಟಗಳು : ೮+೫೯ ರೂ. ೫/-

ಶಿವರಾಮ ಶಿಶಿಲ, ೧೯೮೭
ಕೋಟಿ ಚೆನ್ನಯ್ಯ
ಯುಗಪುರುಷ ಪ್ರಕಟನಾಲಯ ಕಿನ್ನಿಗೋಳಿ
ಕ್ರೌನ್ ೧/೮, ಪುಟಗಳು : ೪೫, ರೂ. ೫/-

ಮಕ್ಕಳ ಕನ್ನಡ ನಾಟಕ

 

ತುಳು ಸ್ವತಂತ್ರ ಕಾದಂಬರಿಗಳು

ಆನಂದಕಂದ, ೨೦೦೫
ಮಿತ್ತಬೈಲ್ ಯುಮುನಕ್ಕೆ – ಒಂಜಿ ಗುತ್ತದ ಕತೆ
ಹೇಮಾಂಶು ಪ್ರಕಾಶನ, ದೃಶ್ಯ ಗೊಲ್ಲಚ್ಚಿಲ್‌, ಮಂಗಳೂರು – ೫೭೫ ೦೦೬
ಡೆ. ೧/೮, ಪುಟಗಳು : ೩೦೪, ಬೆಲೆ : ರೂ. ೧೫೦/-

ಅಳಿಯಕಟ್ಟು ಪರಂಪರೆಯ ಬೀಡುಗುತ್ತಗಳ ಬದುಕಿನ ಸಂಬಂಧ, ಸಂಘರ್ಷ, ಹೆಣ್ಣಿನ ಆಳ್ವಿಕೆಯ ಭರತ, ಇಳಿತಗಳು ಕೃಷಿ ಕುಟುಂಬದಲ್ಲಿ ಗಂಡಿನ ಸ್ಥಾನಮಾನ, ಸಾಧನೆ, ಸಾಹಸಗಳು ತುಳು ಭಾಷಾ ಸೊಗಡಿನ ಹೆಣಿಗೆಯಲ್ಲಿ ನುಡಿಬೆಡಗಿನ ಒಪ್ಪ ಓರಣದಲ್ಲಿ ಕಾದಂಬರಿ ಚೌಕಟ್ಟಿನಲ್ಲಿ ಸೊಗಸಾಗಿ ಮೂಡಿಬಂದಿದೆ.

ಆಲ್ವರಿಸ್ ಜೊ. ಸಂ., ೧೯೭೯
ಪಾಪೊದ ಶಾಪ
ತುಳು ಸಾಹಿತ್ಯ ಪ್ರಕಾಶನ, ಮಂಗಳೂರು
ಡೆಮಿ ೧/೮, ಪುಟಗಳು : ೧೩೬+೨, ರೂ. ೫/-

ಸಾಮಾಜಿಕ ತುಳು ಕಾದಂಬರಿ

ಉಮೇಶ್ ಬಂಗೇರ, ೨೦೦೧
ಶಿಲ್ಪೊ ಶಿವಾನಿ
ಮಿತ್ರ ಮಂದಾರ ಪ್ರಕಾಶನ ಮೂಡಬಿದ್ರಿ
ಕ್ರೌನ್ ೧/೮, ಪುಟಗಳು : ೪+೫೨, ರೂ. ೪೦/-

ಕೃಷ್ಣ ಸಾಲ್ಯಾನ್ ಸಂಕಲಕರಿಯ, ೧೯೯೭
ಚಂದ್ರಳ್ಳಿಡ್ ಬೊಳ್ಪಾಂಡ್
ತುಳುಕೂಟ ಉಡುಪಿ, ಡೆಮಿ ೧/೮, ಪುಟಗಳು : ೧೦+೭೭, ರೂ. ೩೫/-

ಎಸ್.ಯು. ಪಣಿಯಾಡಿ ಪ್ರಶಸ್ತಿ ವಿಜೇತ ಈ ಕಾದಂಬರಿಯ ಕಥೆ ತುಳುನಾಡಿನ ಒಂದು ಹಳ್ಳಿಯಲ್ಲಿ ನಡೆದಂತಿದೆ. ಎರಡು ಹಳ್ಳಿಗಳಲ್ಲಿ ಕೆಲವೇ ವರ್ಷಗಳಲ್ಲಿ ನಡೆದ ಬದಲಾವಣೆಯ ಕೆಲವು ಮುಖಗಳನ್ನು ಲೇಖಕರು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಒಂದು ರೀತಿಯಲ್ಲಿ ಇದು ನಮ್ಮ ದೇಶದ ಪ್ರತಿಯೊಂದು ಹಳ್ಳಿಯ ಕಥೆ-ವ್ಯಥೆ, ನಿತ್ಯ ಗ್ರಾಮಾಯಣವೂ ಆಗಿದೆ.

ಕೋಡಿ ಬೆಂಗ್ರೆ ಬಿ.ಪಿ., ೨೦೦೧
ಕಡಲ ಬರಿತ ಕಂಜರಣ್ಣೆ
ಸಾವು ಪ್ರಕಾಶನ ಬಜ್ಜೆ, ಕ್ರೌನ್ : ೧/೮, ಪುಟ: ೬+೭೬, ರೂ. ೪೦/-

ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ನೆಪ ಮಾತ್ರ. ಮುಖ್ಯವಾಗಿ ಇದರಲ್ಲಿ ವೈಭವೀಕರಿಸುವುದು ‘ಕಡಲು’ ಮಾತ್ರ. ಸಮುದ್ರ ತೀರದಲ್ಲಿ ಮನುಷ್ಯನಿಗೆ ಕಡಲನ್ನು ಬಿಟ್ಟರೆ ಬೇರೆ ಬಂಧುಗಳಿಲ್ಲವೆಂಬ ಚಿತ್ರಣ ಇದರಲ್ಲಿದೆ. (ಮುನ್ನುಡಿಯಿಂದ)

ಗಟ್ಟಿ ಕೆ.ಟಿ., ೧೯೯೪
ಬೊ೦ಬಾಯಿದ ಇಲ್ಲ್
ಕ್ರೌನ್ ೧/೮, ಪುಟ: ೯+೯೫, ರೂ. ೩೦/-

ತುಳು ಸಾಮಾಜಿಕ ಕಾದಂಬರಿ

ಗಣೇಶ್ ಅಮೀನ್ ಸಂಕಮಾರ್, ೧೯೯೭
ಅಮರ ಬೀರೆರ್ ಕೋಟಿ ಚೆನ್ನಯೆರ್
ತುಳುಕೂಟ ಕುಡ್ಲ (ರಿ.), ಡೆ. ೧/೮, ಪುಟ: ೬+೭೪, ರೂ. ೪೦/-

ತುಳುನಾಡಿನ ಅವಳಿ ವೀರ ಸಹೋದರರಾದ  ಕೋಟಿ ಚೆನ್ನಯರ ಕುರಿತ ತುಳು ಕಾದಂಬರಿ

ಜಯಂತಿ ಎಸ್. ಬಂಗೇರ, ೨೦೦೨
ಸೊರಗೆದ ಪೂ
ದುರ್ಗಾ ಪ್ರಕಾಶನ ಮಣ್ಣಗುಡ್ಡೆ, ಮಂಗಳೂರು
ಡೆಮಿ ೧/೮, ಪುಟಗಳು ೭೨+೮, ರೂ. ೪೫/-

ಹಳ್ಳಿಯ ಬದುಕಿನ ಚಿತ್ರಣ ಇದರಲ್ಲಿದೆ. ಗ್ರಾಮೀಣ ಪ್ರದೇಶದ ಎರಡು ಮನೆತನಗಳ ಕಥೆಯನ್ನು ಹೆಣೆಯಲಾಗಿದೆ. ಹಾಗಾಗಿ ಹಳ್ಳಿಯ ಬದುಕಿನ ಸಾರವಾದ ದುಡಿಮೆ, ಬೆಳೆ, ದೈವಗಳ ಪವಾಡ, ಜನರ ನಂಬಿಕೆ ಇತ್ಯಾದಿಗಳೊಂದಿಗೆ ಕೆಲವು ಜನರ ಅಸೂಯೆ, ದಬ್ಬಾಳಿಕೆ, ಅನ್ಯಾಯದ ಚಿತ್ರಣವೂ ಇದೆ.

ಜಾನಕಿ ಎಂ. ಬ್ರಹ್ಮಾವರ, ೧೯೯೮
ಕಪ್ಪುಗಿಡಿ
ಹೇಮಾಂಶು ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು: ೧೨೦, ರೂ. ೩೬/-

ತುಳು ಸಾಮಾಜಿಕ ಕಾದಂಬರಿ. ಭೂಮಸೂದೆ ಕಾನೂನು ಜಾರಿಗೆ ಬಂದ ಹಿಂದುಮುಂದಿನ ಕತೆಯ ಚಿತ್ರಣವಿದೆ. ಭೂಮಸೂದೆಯಿಂದಾಗಿ ಸಮಾಜದಲ್ಲಿ ದನಿ ಒಕ್ಕಲುಗಳ ನಡುವೆ ಇದ್ದ ಸಂಬಂಧ, ಬಂದ ಸಂಘರ್ಷ, ಆದ ಪರಿವರ್ತನೆ ಇಂಥ ಸಂಗತಿಗಳ ಸುತ್ತಮುತ್ತಲಿನ ಚಿತ್ರಣ ಇದರಲ್ಲಿದೆ.

ಜಾನಕಿ ಎಂ. ಬ್ರಹ್ಮಾವರ, ೧೯೯೪
ಕುದುರುದ ಕೇದಗೆ
ಹೇಮಾಂಶು ಪ್ರಕಾಶನ ದೇರೆಬೈಲು, ಮಂಗಳೂರು
ಕ್ರೌನ್ ೧/೮, ಪುಟಗಳು: ೮೩+೪, ರೂ. ೨೭/-

ಒಂದು ಕುದುರಿನ ಸುತ್ತಮುತ್ತ ಆಗಿಹೋದ, ಕೇಳಿದ, ನೋಡಿದ ಸಂಗತಿಗಳನ್ನು, ಆ ಊರಿನ ಬೇರೆ ಬೇರೆ ಸ್ವಭಾವದ ಜನರ ಒಳ ಹೊರಗನ್ನು ಚಿತ್ರಿಸುತ್ತದೆ. ಹಾಗೂ ಸಮಾಜದಲ್ಲಿ ನಡೆಯುವ ಹೆಣ್ಣಿನ ಶೋಷಣೆಯ ಒಳಬೇರುಗಳನ್ನು ತೆರೆದಿಡುತ್ತದೆ.

ಜಾನಕಿ ಎಂ. ಬ್ರಹ್ಮಾವರ, ೨೦೦೨
ಯುಗ ಮಗ್‌ರ್ನಗ
ಹೇಮಾಂಶು ಪ್ರಕಾಶನ, ಮಂಗಳೂರು, ಡೆಮಿ. ೧/೮, ಪು. ೨೦೨, ರೂ. ೬೦/-

ಪಟೇಲ ಮನೆತನದ ಪುಣ್ಯಾತ್ಮನೊಬ್ಬನ ಬದುಕಿನ ನಡುವೆ ಇಡೀ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದುಕಿನೊಟ್ಟಿಗೆ ತುಳುವರ ಸಂಸ್ಕೃತಿ, ಕಲೆ, ಕಾರಣಿಕದ ನೆಲೆ ಬೆಲೆಗೆ ಒತ್ತು ನೀಡಿದಂಥ ಕಾದಂಬರಿ ‘ಯುಗ ಮಗ್‌ರ್ನಗ’.

ಜಿತು ನಿಡ್ಲೆ, ೧೯೯೯
ಮೂಜಂಜ ಆನಗ
ಕ್ರೌನ್ ೧/೮, ಪುಟ: ೪+೮೦, ರೂ. ೨೫/-

ತುಳು ಸಾಮಾಜಿಕ ಕಾದಂಬರಿ.

ಪಣಿಯಾಡಿ ಎಸ್.ಯು., ೧೯೭೬
ಸತೀ ಕಮಲೆ
ತುಳುನಾಡ್ ಛಾಪಖಾನೆ, ಉಡುಪಿ, ಕ್ರೌನ್ ೧/೮

ತುಳುವಿನ ಮೊತ್ತ ಮೊದಲ ಕಾದಂಬರಿ. ದೇಶಭಕ್ತಿ, ಪಾತಿವ್ರತ್ಯಗಳಂತಹ ಮೌಲ್ಯಗಳೊಂದಿಗೆ ಸ್ತ್ರೀವಿದ್ಯಾಭ್ಯಾಸ, ಸಮಾಜ ಸುಧಾರಣೆಯಂತಹ ಅಂಶಗಳೂ ಕಂಡುಬರುವ ಹಾಗೂ ಸ್ವಾತಂತ್ರ್ಯ ಚಳವಳಿಯ ದಟ್ಟ ಪ್ರಭಾವದಿಂದ ಕೂಡಿದ ಕಾದಂಬರಿ.

ಪ್ರಭಾಕರ ನೀರುಮಾರ್ಗ, ೨೦೦೩
ದಳವಾಯಿ ದುಗ್ಗಣ್ಣ
ಸಿರಿ ಪ್ರಕಾಶನ ಅಗೊಳಿ ಮಂಜಣ ಜಾನಪದ ಕೇಂದ್ರ (ರಿ) ಪಾವಂಜೆ
ಡೆಮಿ ೧/೮, ಪುಟಗಳು ೮+೧೧೦, ರೂ. ೫೦/-

ಐತಿಹಾಸಿಕ ಕಾದಂಬರಿಯಾದ ‘ದಳವಾಯಿ ದುಗ್ಗಣ್ಣ’ದಲ್ಲಿ ನಾಲ್ಕೈದು ಶತಮಾನಗಳ ಹಿಂದಿನ ತುಳುನಾಡಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಗಳ ಚಿತ್ರಣಗಳನ್ನು ನೀಡಿದ್ದಾರೆ. ಅಲ್ಲದೆ ಇದೊಂದು ರಾಜನ ಕಥೆಯಾಗದೆ ಸಾಮಾನ್ಯ ಪ್ರಜೆಗಳ ಸ್ಥಿತಿಗತಿಗಳನ್ನು ಕೂಡ ಹೇಳುವ ಕಥೆಯಾಗಿದೆ. ಸಾಮಾನ್ಯ ಪ್ರಜೆಯ ಸುಖ -ದುಃಖ, ನೋವು – ನಲಿವು ಮುಂತಾದ ವಿವರಗಳೂ ಈ ಕಾದಂಬರಿಯ ಒಡಲಲ್ಲಿವೆ.

ಬಾಬು ಅಮೀನ್ ಬನ್ನಂಜೆ, ೨೦೦೩
ಪೂ – ಪೊದ್ದೊಲ್
ಕೆಮ್ಮಲಜೆ ಜಾನಪದ ಪ್ರಕಾಶನ, ಉಡುಪಿ
ಡೆ. ೧/೮, ಪುಟ : ೮+೧೭, ರೂ. ೭೫/-

ಪ್ರಾಚೀನ ತುಳುನಾಡಿನ ಜನರ ಬುದುಕು ಭಾಗ್ಯಗಳು ಈ ಕೃತಿಯಲ್ಲಿ ಅಡಕವಾಗಿದೆ. ‘ಪೆರಲ’ವೆಂಬ ಒಂದು ತುಳು ಸೀಮೆಯೊಳಗಿನ ಕೂಡು ಕುಟುಂಬ, ಸಂತಾನ, ಗಂಜಿ ನೀರಿನ ಬದುಕು ಇಲ್ಲಿ ಇಡಿಯಾಗಿ ಬಿಚ್ಚಿಕೊಳ್ಳುತ್ತಾ ಹೋಗಿದೆ. ಅದೇ ರೀತಿ ದುಡಿಮೆ, ಕೋಲ, ಕಂಬಳ, ಬೇಸಿಗೆ, ಮಳೆಗಾಲ, ಮದುವೆ ಇಂತಹ ವಿಷಯಗಳೂ ಕೂಡ ನಿರೂಪಿತಗೊಂಡಿವೆ.

ಬನ್ನಂಜೆ ಬಾಬು ಅಮೀನ್, ೨೦೦೩
ಪೂ – ಪೊದ್ದೆಲು
ಕೆಮ್ಮಲಜೆ ಪ್ರಕಾಶನ, ಉಡುಪಿ – ೩
ಡೆ. ೧/೮, ಪುಟಗಳು : ೧೭೮ ಬೆಲೆ : ರೂ. ೩೫/-

ಅಳಿಯಕಟ್ಟು ಪರಂಪರೆಯಲ್ಲಿ ಪಾಲ್ಗೊಳ್ಳುವ, ಊರಿಗೆ ಉಪಕಾರಿಯಾಗುವ ಮತ್ತು ವ್ಯಕ್ತಿ ವ್ಯಕ್ತಿಗಳೊಳಗಣ ಸಂಬಂಧವನ್ನು ಕಾದಂಬರಿ ಸ್ವರೂಪದಲ್ಲಿ ತೆರೆದಿರುವ ಪ್ರಯತ್ನದ ಬರವಣಿಗೆ.

ಬನ್ನಂಜೆ ಬಾಬು ಅಮೀನ್, ೨೦೦೫
ಮಾನ್ಯೆಚ್ಚಿ
ಕೆಮ್ಮಲಜಿ ಜಾನಪದ ಪ್ರಕಾಶನ, ಉಡುಪಿ – ೩
ಡೆ. ೧/೮, ಪುಟಗಳು : ೮+೩೦೬, ಬೆಲೆ : ರೂ. ೧೦೦/-

ಬಡಗಣ ತುಳುನಾಡಿನ ಉಡುಪಿ ಪರಿಸರದ ಸುತ್ತಮುತ್ತ ಅರೆ ಶತಮಾನದ ಹಿಂದಿನ ತುಳುವರ ಬದುಕಿನ ನಡಾಳಿ ಕೂಡುಕಟ್ಟು, ನೆರೆಕರೆ ಸಂಬಂಧಗಳ ಕಥಾನಕ ಈ ಕಾದಂಬರಿಯ ಹಂದರ.

ಬಾಲಕೃಷ್ಣ ಕೊಲ್ಯ ಬಿ., ೨೦೦೦
ಅಗ್ಗ – ಓನೆ
ಲೇಖಕರಿಂದ ಪ್ರಕಾಶಿತ, ಡೆ. ೧/೮, ಪುಟ : ೧೨೪,

ಸಾವಿರಗಟ್ಟಲೆ ವರ್ಷಗಳ ಹಿಂದಿನ ತುಳುನಾಡಿನ ಕಾಡಿನ ಬದುಕಿನ ಚಿತ್ರಣವನ್ನು ಇದರಲ್ಲಿ ನೋಡಬಹುದು. ಆ ವನ್ಯಜೀವನದ ಸುಖ ಕಷ್ಟ, ಪ್ರೀತಿ ಕ್ರೌರ್ಯ, ನಿಸರ್ಗದ ನಂಟು ಇತ್ಯಾದಿಗಳನ್ನು ಚಿತ್ರಿಸಲಾಗಿದೆ.

ಮಹಾಲಿಂಗ ಭಟ್ಟ, ೧೯೯೪
ನಾಣಜ್ಜೆರ್ ಸುದೆ ತಿರ್ಗಾಯೆರ್
ನಷ್ಟ ಪ್ರಕಾಶನ, ಮಂಗಳೂರು, ಕ್ರೌ. ೧/೮, ಪುಟ : ೯೪, ರೂ. ೨೫/-

ಹೊಳೆಯನ್ನು ತಿರುಗಿಸುವ ಆಶಯದ ಕಾದಂಬರಿ

ಮಾಧವ ಪೆರಾಜೆ, ೧೯೯೭
ನಿಲೆ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಮತ್ತು ಕರ್ನಾಟಕ ತುಳು
ಸಾಹಿತ್ಯ ಅಕಾಡೆಮಿ, ಮಂಗಳೂರು, ಡೆಮಿ ೧/೮, ರೂ. ೨೮/-

ಯಜ್ಞಾವತಿ ಕೇಶವ ಕಂಗೆನ್, ೧೯೯೮
ರಂಗೆನಾ ಮಲೆ ಮಂಗೆನಾ
ಹೇಮಾಂಕು ಪ್ರಕಾಶನ, ಮಂಗಳೂರು, ಕ್ರೌ ೧/೮, ಪುಟಗಳು : ೮೦ ರೂ. ೩೬/-

ಧರ್ಮ, ದೇವರು, ಸ್ವಾಮಿ, ಸನ್ಯಾಸಿ ಇಂತಹ ಹೆಸರುಗಳಿಂದ ಹೇಗೆ ನಮ್ಮ ಜನರನ್ನು ವಂಚಿಸಿ, ಹೆದರಿಕೆ ಹುಟ್ಟಿಸಿ ಶೋಷಣೆ ಮಾಡುತ್ತಾರೆಂಬುದನ್ನು ಈ ಕಾದಂಬರಿ ತಿಳಿಹಾಸ್ಯದ ರೀತಿಯಲ್ಲಿ ಚಿತ್ರಿಸಿದರೂ. ನಮ್ಮನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ ಆಲೋಚಿಸುವಂತೆ ಮಾಡುತ್ತದೆ.

ಯಾದವ ವಿ.ಕೆ. ಸಸಿಹಿತ್ಲು, ೧೯೯೭
ಮಹಾವನಿತೆ
ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ೬೬ನೇ ಕ.ಸಾ. ಸಮ್ಮೇಳನ ಮಂಗಳೂರು, ಕ್ರೌನ್ ೧/೮, ರೂ. ೨೦/-

ಅಖಿಲ ಭಾರತ ೬೬ನೇ ಕ.ಸಾ. ಸಮ್ಮೇಳನ ಸಂದರ್ಭದಲ್ಲಿ ನಡೆಸಿದ ‘ರಾಣಿ ಅಬ್ಬಕ್ಕ’ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನಿತ ಕೃತಿ. ಅಬ್ಬಕ್ಕ ದೇವಿಯ ಕುರಿತಾಗಿ ಲಭ್ಯವಿರುವ ಆಕರ ಸಾಮಗ್ರಿಗಳನ್ನು ಸಂಗ್ರಹಿಸಿ ಕಾದಂಬರಿ ರೂಪದ ಈ ಗ್ರಂಥವನ್ನು ರೂಪಿಸಲಾಗಿದೆ.

ರಾಮಕೃಷ್ಣ ಶಾಸ್ತ್ರಿ ಪ., ೧೯೯೮
ಪುದ್ವಾರು
ಶಿವಶಕ್ತಿ ಪ್ರಕಾಶನ ಮಚ್ಚಿನ, ಕ್ರೌನ್ ೧/೮, ಪು. ೪-೮೦, ರೂ. ೨೫/-

ತುಳುನಾಡಿನ ಸಮಾಜದಲ್ಲಿ ಅಜ್ಞಾನ, ಮೂಢನಂಬಿಕೆಗಳಿಂದಾಗಿ ಕಂಡು ಬರುವ ಶೋಷಣೆ, ದಾರಿದ್ರ್ಯ ಹಾಗೇ ಎಲ್ಲಾ ಕಷ್ಟಗಳಿಗೂ ಮೂಲ ಅನಕ್ಷರತೆ ಎಂಬ ವಿಷಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಈ ಕಾದಂಬರಿಯಲ್ಲಿದೆ.

ವಸಂತ ಶೆಟ್ಟಿ ಬ್ರಹ್ಮಾವರ, ೨೦೦೪
ಉಡಲ್ದ ಸಿರಿ
ವಸುಧಾ ಪ್ರಕಾಶನ, ಸರಸ್ವತಿ ಬುಕ್ ಸೆಂಟರ್, ಎಸ್.ಎಲ್.ಎಸ್. ಕಾಂಪ್ಲೆಕ್ಸ್,
ಉಡುಪಿ – ೧. ಕ್ರೌ ೧/೮, ಪುಟಗಳು : ೧೧೮ ಬೆಲೆ : ೬೦/-

ತುಳುನಾಡಿನಲ್ಲಿ ಹುಟ್ಟಿ ಬೆಳೆದ ಮೂರು ಕುಟುಂಬಗಳು ಸುತ್ತ ಹೆಣೆದ ಕಾದಂಬರಿ.

ವಿಠಲ ಮ. ಪುತ್ತೂರು, ೧೯೯೮
ಪರಶುರಾಮ ದೇವೆರೆ ಸೃಷ್ಟಿ – ಈ ತುಳುನಾಡ್
ಕ್ರೌನ್ ೧/೮, ಪುಟ : ೮+೧೫೪, ರೂ. ೫೦/-
ಪರಶುರಾಮ ಸೃಷ್ಟಿಯ ಐತಿಹ್ಯದ ಸುತ್ತ ಹೆಣೆದ ತುಳು ಕಾದಂಬರಿ.

ವಿಠಲ ಹೆಗ್ಡೆ ಕೆ., ೧೯೩೩
ಮದ್‌ಮಾಳತ್ತ್ ಮದ್‌ಮಾಯೆ
ಎಸ್.ಯು. ಪಣಿಯಾಡಿ ಪ್ರಕಾಶನ ತುಳುನಾಡ್ ಛಾಪಖಾನೆ, ಉಡುಪಿ
ಕ್ರೌನ್ : ೧/೮, ಪುಟಗಳು : ೫+೨೦, ರೂ. ೦-೨-೦

ತುಳು ಕಾದಂಬರಿ.

ವಿಶ್ವನಾಥ ರೈ ಕುದ್ಯಾಡಿ, ೧೯೯೪
ಲೆಕ್ಕೆಸಿರಿ
ಕ್ರೌನ್ ೧/೮, ಪುಟಗಳು : ೭+೮೩, ರೂ. ೩೦/-

ತುಳುನಾಡ ಸಿರಿಯ ಕಾರಣಿಕ ಸಂಬಂಧವಾದ ತುಳು ಕಾದಂಬರಿ.

ಶೀನಪ್ಪ ಹೆಗ್ಗಡೆ, ಎನ್., ೧೯೮೯
ಮಿತ್ಯ ನಾರಾಯಣ ಕತೆ
ಕ್ರೌನ್ ೧/೮, ಪುಟಗಳು ೧೧೫+೨.

ಅಮಾನುಷ ಘಟನೆಗಳಿಂದಲೂ ನೈಜ ಜೀವನ ಚಿತ್ರಣಗಳಿಂದಲೂ ಕೂಡಿದ ಕಿರು ಕಾದಂಬರಿ. ಮಿತ್ಯನಾರಾಯಣ ಜನಪದ ಕತೆಯ ಶೈಲಿಯಲ್ಲಿ ಜಾನಪದ ಆಶಯಗಳನ್ನು ತೆಗೆದುಕೊಂಡು ಕಾದಂಬರಿಯ ರೀತಿಯಲ್ಲಿ ಹೆಣೆಯಲಾದ ಒಂದು ಕೃತಿ ‘ಮಿತ್ಯನಾರಾಯಣ’ ಕತೆ ಅಮಾನುಷ ಘಟನೆಗಳಿಂದಲೂ ನೈಜ ಜೀವನದ ಚಿತ್ರಣಗಳಿಂದಲೂ ಕೂಡಿದ ಕತೆ ಆಸಕ್ತಿಯಿಂದ ಓದಿಸಿಕೊಂಡು ಹೋಗುವಂತಿದೆ. ಪಣಿಯಾಡಿಯವರ ತುಳು ಚಳವಳಿಯ ಕಾಲದಲ್ಲಿ ಮೂಡಿ ಬಂದ ಈ ಕೃತಿ ತುಳುವಿನಲ್ಲಿ ಸಾಹಿತ್ಯಿಕ ಗದ್ಯಕ್ಕೆ ಇನ್ನೊಂದು ಉದಾಹರಣೆಯಾಗಲ್ಲುದು.

ಹಂಝ ಮಲಾರ್, ೨೦೦೧
ಬದ್‌ಕ್‌ದ ಕನ
ಮಧುರ ಪ್ರಕಾಶನ, ಮಂಗಳೂರು, ಕ್ರೌನ್ ೧/೮, ಪುಟಗಳು : ೬೦, ರೂ. ೩೦/-

ಹಳ್ಳಿಯ ಬದುಕಿನ ಚಿತ್ರಣವನ್ನು ನೀಡುತ್ತದೆ. ಹಾಗೂ ಹಳ್ಳಿಯಲ್ಲಿ ಭಿನ್ನ ಕೋಮುಗಳು ಯಾವ ರೀತಿ ಸಾಮರಸ್ಯವನ್ನು ಹೊಂದಿವೆಯೆಂಬ ಚಿತ್ರಣವನ್ನು ನೀಡುವ ತುಳು ಕಾದಂಬರಿ.