ತುಳು ಕಥಾ ಸಂಕಲನಗಳು

ಅಮೃತ ಸೋಮೇಶ್ವರ, ೧೯೯೮
ಕಲ್ಲುರ್ಟಿ ಕಲ್ಕುಡೆ
ರೂ. ೧೫/-, ಕ್ರೌನ್ ೧/೪, ಪುಟಗಳು : ೧೬, ರೂ. ೧೫/-

ಅರಸು ಮಗ ಉಂಗಿಲದ ಸಾಮ್ಯ
The King’s son and his ring, ತುಳು ಜನಪದ ಕಥೆ, ೧೯೦೧
Mangalore Basel Mission Book and tract depository, ರೂ. ೧

ಅಶೋಕ ಎಂ. ಭಂಡಾರಿ ಕೆ., ೧೯೯೫
ಮಾಮಿ ಮರ್ಮಾಲ್ (ತುಳು ಹಾಸ್ಯ ಸಣ್ಣ ಕತೆಗಳು)
ಪ್ರಕಾಶಕರು : ಅಶೋಕ ಎಂ. ಭಂಡಾರಿ, ಕ್ರೌನ್ ೧/೮, ಪುಟಗಳು : ೧೦

೫ ಸಣ್ಣ ಕತೆಗಳಿವೆ. ಹಾಗೆಯೇ ಅಲ್ಲಲ್ಲಿ ಲೇಖಕರು ಕನ್ನಡದ ನಗೆಹನಿಗಳನ್ನೂ ನೀಡಿದ್ದಾರೆ.

ಆನಂದಕೃಷ್ಣ, ೧೯೯೭
ಕರಿಯವಜ್ಜೆರೆನ ಕತೆಕುಲು (ಕಥಾ ಸಂಕಲನ)
ತುಳುಕೂಟ, ಬೆಂಗಳೂರು (ರಿ.), ಡೆಮಿ ೧/೮, ಪುಟಗಳು : ೮+೬೯, ರೂ. ೩೦/-

೧೨ ಕಥೆಗಳಿವೆ. ತುಳುನಾಡಿನ ಸಂಸ್ಕೃತಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಹಾಗೆಯೇ ವ್ಯಂಗ್ಯ, ವಿಡಂಬನೆ, ಹಾಸ್ಯ ಮುಂತಾದ ಭಾವಗಳನ್ನು ಕೂಡ ನಾವು ಇಲ್ಲಿನ ಕಥೆಗಳಲ್ಲಿ ಗುರುತಿಸಬಹುದಾಗಿದೆ.

ಆನಂದಕೃಷ್ಣ, ೨೦೦೧
ಪತ್ತ್ ಪಜ್ಜೆಲು (ತುಳು ಸಣ್ಣ ಕಥೆಗಳು)
ಕರಾವಳಿ ಪ್ರಕಾಶನ, ೮೨೬, ೫ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು –
೫೬೦ ೦೪೦, ಡೆಮಿ ೧/೮, ಪುಟಗಳು : ೫೬+೮, ರೂ. ೨೫/-

೧೦ ಕಥೆಗಳ ಒಂದು ಸಂಕಲನ. ಹಳ್ಳಿ – ನಗರ, ಹಳತು – ಹೊಸತು, ಕಟ್ಟುಕಟ್ಟಳೆ – ಚಿಂತನೆಯ ಹೊಸ ಹರಿವು ಹೀಗೆ ಎರಡು ಮಗ್ಗುಲುಗಳಲ್ಲಿ ನಡೆಯುವ ಜಗ್ಗಾಟಗಳನ್ನು ನತದೃಷ್ಟೆದಿ, ಸುನೀತ ಮದಿಮೆ ಆಯಲ್ ಮುಂತಾದ ಕಥೆಗಳು ವಿವರಿಸಿದರೆ, ಕತೆಯಾದ್ ಪೋಯೆರ್, ಪೊಣ್ಣ ಕೋಪ ಮುಂತಾದವುಗಳು ಹಿಂದೆ ನಡೆದು ಹೋದಂತಹ ಸಂಗತಿಗಳನ್ನು ನೆನಪಿಸುತ್ತವೆ. ಉದಾ : ಸೀಮೆಯ ಗುತ್ತುಗಳು, ಒಕ್ಕಲುಗಳು ಇತ್ಯಾದಿ.

ಕ್ಯಾಥರೀನ್ ರಾಡ್ರಿಗಸ್, ೧೯೯೮
ಬನ್ನಾಲ್, ಕ್ರೌನ್ ೧/೮, ಪುಟಗಳು : ೨೪ ರೂ. ೧೫/-

ಕೊಯಿರಾ ಎನ್. ಬಾಳೆಪುಣಿ, ೧೯೯೮
ಮುಡಿಪ್ಪೆರಾವಂದಿ ಮಲ್ಲಿಗೆ
ಕ್ರೌನ್ ೧/೪, ಪುಟಗಳು : ೨೩, ರೂ. ೧೫/-

ಗಣನಾಥ ಶೆಟ್ಟಿ ಎಕ್ಕಾರ್, ೧೯೯೮
ಮಾಮಿ ಮರ್ಮಲ್
ಕ್ರೌನ್ ೧/೪, ಪುಟಗಳು : ೨೬, ರೂ. ೧೫/-

ಗಣೇಶ್ ಅಮೀನ್ ಸಂಕಮಾರ್, ೧೯೯೮
ಅಗೋಳಿ ಮಂಜನೆ
ಕ್ರೌನ್ ೧/೪, ಪುಟಗಳು : ೨೪, ರೂ. ೧೫/-

ಗಣೇಶ್ ಅಮೀನ್ ಸಂಕಮಾರ್, ೧೯೯೮
ದೋಲು (ತುಳು ಕಥಾ ಸಂಕಲನ)
ಸಿರಿ ಪ್ರಕಾಶನ, ಹಳೆಯಂಗಡಿ, ಕ್ರೌನ್ ೧/೮, ಪುಟಗಳು : ೫೪, ರೂ. ೨೫/-

೬ ಕಥೆಗಳಿವೆ ‘ದೊಲು’ ಕಥೆ – ಮೇಲ್ಜಾತಿಯವರು ಕೆಳವರ್ಗದ ಜನರಿಗೆ ಮಾಡುವ ಶೋಷಣೆಯನ್ನು ತಿಳಿಸುತ್ತದೆ. ‘ಒಂಜಿ ಮರ್ಯಾದಿದ ಕತೆ’, ‘ಪುನ ಪಂಡಿತನ ಕತೆ’, ‘ನನ ದಾಯೆ’, ‘ಒಂಜಿ ಸಾದಿದ ಪೊಣ್ಣು’ – ಈ ನಾಲ್ಕು ಕಥೆಗಳಲ್ಲಿಯೂ ಸಾವು ಮತ್ತು ಹೆಣ ಕಥೆಯ ತಿರುಳಾಗಿದೆ. ‘ಮೋಕೆ ಮಲ್ತಿನ ಮೋಸ’ ಕಥೆಯಲ್ಲಿ ಹೆಣ್ಣೊಬ್ಬಳನ್ನು ಗಂಡು ವಂಚಿಸುವ ಕಥೆ ಇದೆ. ಈ ಸಂಕಲನದ ಎಲ್ಲಾ ಕಥೆಗಳಲ್ಲಿಯೂ ತುಳು ಸಂಸ್ಕೃತಿಯೆಂಬ ಪರಿಸರವಿದೆ. ತುಳು ಸಂಸ್ಕೃತಿಯೊಳಗಿನ ಹೆಣ್ಣುಮಕ್ಕಳ, ಬಡವರ ನೋವಿನ ಧ್ವನಿಗಳು ಈ ಕಥೆಗಳಲ್ಲಿ ವ್ಯಕ್ತವಾಗುತ್ತದೆ.

ಗಣೇಶ ಅಮೀನ್ ಸಂಕಮಾರ್, ೧೯೯೬
ಅಗೋಳಿ ಮಂಜಣೆ
ಕ್ರೌನ್ ೧/೮, ಪುಟಗಳು : ೪೦, ರೂ. ೧೫/-

ತುಳುನಾಡಿನ ಜನಪದ ವೀರ ಅಗೋಳಿ ಮಂಜಣನ ಕುರಿತ ಕಿರುಕತೆ.

ಚಿನ್ನಪ್ಪಗೌಡ ಕೆ. ಡಾ., ೧೯೯೮
ಮೂಂಕು ಸಂಬಳೊ
ಕ್ರೌನ್ ೧/೪, ಪುಟಗಳು : ೨೮, ರೂ. ೧೫/-

ಜಯರಾಮ ರೈ ಮಲಾಲ್, ೨೦೦೧
ರಸೊ ದಿಂಜಿ ರಾಮಾಯಣೊ ರೈ, ಡೆಮಿ ೧/೮, ಪುಟಗಳು : ೫೧, ರೂ. ೨೫/-

ಕನ್ನಡ ಭಾಷೆಯಲ್ಲಿ ರಾಮಾಯಣದ ಕಥೆ ಹೇಳುವ ಹಲವು ಪುಸ್ತಕಗಳಿವೆ. ತುಳು ಭಾಷೆಯಲ್ಲಿ ಇಲ್ಲದ ಕಾರಣದಿಂದ ರಾಮಾಯಣದ ಕಥೆಯನ್ನು ತುಳುವಲ್ಲಿ ಸಂಕ್ಷಿಪ್ತವಾಗಿ ಇದರಲ್ಲಿ ನೀಡಲಾಗಿದೆ.

ಜಯಂತಿ ಎಸ್. ಬಂಗೇರ, ೨೦೦೩
ನೀಲಿ ಕಡಲ್ದ ನಡುಟು (ತುಳು ಕಥಾಸಂಕಲನ)
ದುರ್ಗಾ ಪ್ರಕಾಶನ, ಮಂಗಳೂರು, ಕ್ರೌ. ೧/೮, ಪುಟಗಳು : ೮೦, ರೂ. ೪೦/-

೧೩ ಕತೆಗಳಿವೆ. ಇಲ್ಲಿನ ಎಲ್ಲಾ ಕಥೆಗಳೂ ಬದುಕಿನ ಬೇರೆ ಬೇರೆ ಮಗ್ಗುಲುಗಳು, ಅನುಭವಗಳನ್ನು ಹೇಳುತ್ತವೆ. ‘ಕೋರ್ದಟದ ಮರ್ಲೆ’ ಕಥೆ ಕೋಳಿ ಅಂಕದ ಹುಚ್ಚನ್ನು ಬಿಡಿಸಿ ಒಳ್ಳೆಯ ಬದುಕನ್ನು ಬದುಕುವ ದಾರಿ ತೋರಿಸುವ ಕಥೆಯಾಗಿದೆ. ‘ಎನ್ನಂದಿ ಭಾಗ್ಯ’ ಹೆಣ್ಣು ಗಂಡಿನ ಸಂಬಂಧವನ್ನು ಸಮಾಜದ ಜನ ಯಾವ ರೀತಿ ನೋಡುತ್ತಾರೆಂಬುದನ್ನು ತೆರೆದಿಡುತ್ತದೆ. ‘ಉಡಲ್’ ಎನ್ನುವ ಕಥೆಯಲ್ಲಿ ‘ಉಡಲ್’ ಎಂಬ ಹೆಸರಿನ ಸಂಸ್ಥೆಯೊಂದು ಯಾರಿಗೆ ಹೇಗೆ ಆಸರೆ ನೀಡುವುದೆಂಬುದನ್ನು ತಿಳಿಸುತ್ತದೆ.

ಜಯಂತಿ ಎಸ್. ಬಂಗೇರ, ೧೯೯೮
ಮನಸ್ಸ್ ಬದಲಾನಗ (ತುಳು ಕಥಾ ಸಂಕಲನ)
ದುರ್ಗಾ ಪ್ರಕಾಶನ, ಮಂಗಳೂರು, ಡೆಮಿ ೧/೮, ಪುಟಗಳು : ೯+೪೭, ರೂ. ೩೦/-

೧೧ ಕಥೆಗಳಿವೆ. ಈ ಕಥೆಗಳೆಲ್ಲಾ ಹೆಚ್ಚು ಕಮ್ಮಿ ಒಂದೇ ಮಾದರಿಯಲ್ಲಿ ಬರೆಯಲ್ಪಟ್ಟಿವೆ. ವರದಕ್ಷಿಣೆ, ಕಳ್ಳತನ, ಹೆಣ್ಣು – ಗಂಡಿನ ಗೆಳೆತನ, ಪ್ರೀತಿ-ಪ್ರೇಮ, ಕ್ಷುದ್ರ ಮನಸ್ಸುಗಳ ಅಸೂಯೆ, ಆಲಸ್ಯತನ, ನಮ್ಮ ನಂಬಿಕೆ, ಆಚರಣೆ, ಆರಾಧನೆಗಳೆಡೆಯಲ್ಲಿ ಅವಿತಿರುವ ಸತ್ಯಸಂಗತಿಗಳು ಇವನ್ನೆಲ್ಲಾ ವಸ್ತುವಾಗಿರಿಸಕೊಂಡು ಕಥೆಗಳನ್ನು ಬರೆಯಲಾಗಿದೆ.

ನಾವಡ ಎ.ವಿ., ೧೯೯೮
ಅಕ್ಕೆರಸು ಸಿರಿ
ಕ್ರೌನ್ ೧/೪, ಪುಟಗಳು : ೨೮, ರೂ. ೧೫/-

ತಿಮ್ಮಪ್ಪ ಪೂಜಾರಿ ಜ., ೧೯೯೮
ಗಾದೆಲೆಡ್ ಅಡೆಂಗ್‌ದಿ ಕತೆಕ್ಲು (ತುಳು ಕಥೆಗಳು)
ಪ್ರತಿಭಾ ಪ್ರಕಾಶನ, ಜಪ್ಪಿನಮೊಗರು, ಮಂಗಳೂರು
ಡೆಮಿ ೧/೮, ಪುಟಗಳು : ೪+೫೦, ರೂ. ೨೪/-

೨೭ ಕಥೆಗಳಿರುವ ಕೃತಿಯಿದು. ಜನಪದರ ಬದುಕಿನಲ್ಲಿರುವ ಗಾದೆಗಳನ್ನೇ ಕಥೆಯಾಗಿ ಹೇಳಲಾಗಿದೆ.

ಪ್ರಭಾಕರ ರೈ ಬಿ.ಎ., ೨೦೦೧
ಆತ್ಮಜ್ಯೋತಿ (ತುಳು ಕಥಾ ಸಂಕಲನ)
ಸಾತ್ವಿಕ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ಪುಟಗಳು : ೮+೮೭, ರೂ. ೫೦/-

ಒಟ್ಟು ೧೫ ಕಥೆಗಳಿವೆ. ‘ಪರಮಕುಶಿ’ – ಇನ್ನೊಬ್ಬರಿಗೆ ನಾವು ಸಂತೋಷವನ್ನು ನೀಡಬೇಕೇ ಹೊರತು ದುಃಖವನ್ನೆಲ್ಲ ಎಂಬ ಸಂದೇಶವಿದೆ. ‘ಅತ್ಯಾಸೆ ಗತಿಗೇಡ್’ – ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಬುದ್ಧಿವಾದ. ‘ಕುರುಡು ಪ್ರೀತಿ’ – ಪ್ರೀತಿ ಪ್ರಣಯದ ಭ್ರಮೆಯನ್ನು ಕಳಚುವಂತಹ ಸನ್ನಿವೇಶವಿದೆ. ‘ಅಮ್ಮಾ ಈರೆ ಬುಡ್ಲೆಪುಣಿ’ – ದುಶ್ಚಟಕ್ಕೆ ಬಲಿಯಾಗುವ ಮಗನ ಚಿತ್ರಣವಿದೆ. ‘ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್’ – ಅಜ್ಜಿಯ ಕಿಡ್ನಿ ಹಾಳಾದಾಗ ತನ್ನ ಕಿಡ್ನಿಯನ್ನೇ ದಾನ ಮಾಡಲು ಬರುವ ಮೊಮ್ಮಗನ ಚಿತ್ರಣವಿದೆ. ಹೀಗೆ ಪ್ರತಿಯೊಂದು ಕಥೆಯಲ್ಲೂ ಮನುಷ್ಯನ ಗುಣ ನಡತೆಯ ಬಗ್ಗೆ ಹೇಳುವ ಉದ್ದೇಶವಿರುವುದನ್ನು ಕಾಣಬಹುದು.

ಪ್ರಭಾಕರ ರೈ ಬಿ.ಎ., ೨೦೦೨
ಪರಿವರ್ತನೆ (ತುಳು ಕಥಾ ಸಂಕಲನ)
ಸಾತ್ವಿಕ ಪ್ರಕಾಶನ, ಬೆಂಗಳೂರು, ಡೆಮಿ ೧/೮, ಪುಟಗಳು : ೧೦೦, ರೂ. ೫೦/-

ಒಟ್ಟು ೬ ಕಥೆಗಳಿವೆ. ಇದರಲ್ಲಿನ ಎರಡು ಕಥೆಗಳ ಸಾಮ್ಯತೆಯೇನೆಂದರೆ ಅಮೇರಿಕದ ಬಗೆಗೆ ಕಟ್ಟಿಕೊಂಡ ರಂಗು ರಂಗಾದ ಸ್ವಪ್ನಗಳು, ಭ್ರಮೆಗಳನ್ನು ಹೋಗಲಾಡಿಸುವ ಪ್ರಯತ್ನವಿರುವುದರಿಂದ ಈ ಕಥೆಗಳು ಸಮಾಜಮುಖಿಯೇ ಕಥೆಗಳಾಗಿವೆ. ಪ್ರಾರಂಭದ ಕತೆಯಲ್ಲಿ ‘ಫ್ಯಾಂಟಸಿ’ಯ ಅಂಶವನ್ನು ಗಮನಿಸಬಹುದಾಗಿದೆ.

ಪ್ರಭಾಕರ ಶಿಶಿಲ, ೧೯೯೪
ಬಾರಣೆ (ತುಳು ಕಥಾ ಸಂಕಲನ)
ಸ್ವಂತಿಕಾ ಸಾಹಿತ್ಯ ಬಳಗ, ಸುಳ್ಯ, ಕ್ರೌನ್ ೧/೮, ಪುಟಗಳು : ೮೬, ರೂ. ೨೦/-

ಒಟ್ಟು ೫ ಕಥೆಗಳಿವೆ. ನಾಗರಿಕತೆಯ ಕೋಟೆ ಕಟ್ಟಿಕೊಂಡು ಬದುಕುವ ಮನುಷ್ಯನ ‘ಬಾರಣೆ’ಯನ್ನು ಆಶ್ಚರ್ಯ ರೀತಿಯಲ್ಲಿ ವ್ಯಕ್ತಪಡಿಸಲಾಗಿದೆ. ಉದಾ : ‘ಗಗ್ಗರೊ’ – ಶಿಷ್ಟ ಸಂಸ್ಕೃತಿ ದಲಿತ ಸಂಸ್ಕೃತಿಯನ್ನು ಹೇಗೆ ಬಾರಣೆ ಮಾಡುತ್ತದೆಯೆಂದು ತೋರಿಸುತ್ತದೆ. ಹಾಗೆಯೇ ‘ಬೇಂಟಿ’ ಕಥೆ – ಇಂಗ್ಲಿಷರು ಭಾರತವನ್ನು ಹೇಗೆ ಬಾರಣೆ ಮಾಡಿದರೆಂಬುದನ್ನು ತಿಳಿಸುತ್ತದೆ. ಹಾಗಾಗಿ ಇಲ್ಲಿನ ಕಥೆಗಳಲ್ಲಿ ಕ್ರೌರ್ಯವನ್ನು ವಿಡಂಬನೆ ಹಾಗೂ ವಿಷಾದದೊಂದಿಗೆ ವ್ಯಕ್ತಪಡಿಸಲಾಗಿದೆ.

ಬಾಲಕೃಷ್ಣ ಶೆಟ್ಟಿ ಪೊಳಲಿ ಆ., ೨೦೦೨
ತೆಲ್ಪು ತೆಲಿಕೆದ ಕತೆಕುಲು, ವಾಮನ ನಂದಾವರ (ಸಂ.)
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು : ೮೪, ರೂ. ೩೦/-

ಒಟ್ಟು ೮೫ ಕಥೆಗಳಿವೆ. ಒಟ್ಟಾಗಿ ಇವುಗಳು ಒಂದು ಊರಿನ ಒಂದು ಭಾಗದ, ಒಂದು ಜನಾಂಗ ಗುಂಪಿನ ಹಾಗೇ ಒಂದು ಕಾಲದ ಒಂದು ಸಂಸ್ಕೃತಿಯ ಚಾರಿತ್ರಿಕ ವಿವರಗಳನ್ನು ಸೂಕ್ಷ್ಮವಾಗಿ ಹೇಳುತ್ತವೆ. ಇಲ್ಲಿನ ೮೫ ಕಥೆಗಳೂ ಕೂಡ ಆಟ-ಕೂಟದ ಕತೆಗಳು, ತಿಂಡಿ ತಿನಿಸಿನ ಕತೆಗಳು, ಬಿರುದು ಬಹುಮಾನದ ಕತೆಗಳು, ಸುಮ್ಮನೇ ಚರ್ಚೆ ಮಾಡುವ ರೀತಿಯ ಕತೆಗಳು, ಹಾಗೆಯೇ ಒಂದನ್ನು ಬೇರೆ ಯಾವುದಕ್ಕೋ ಜೋಡಿಸುವ ರೀತಿಯ ಕತೆಗಳು – ಹೀಗೆ ಬೇರೆ ಬೇರೆ ಮಗ್ಗಲುಗಳಲ್ಲಿ ಇಲ್ಲಿನ ಕತೆಗಳನ್ನು ನೋಡಲು ಸಾಧ್ಯ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., (ಪ್ರ.ಸಂ.) ವಾಮನ ನಂದಾವರ (ಸಂ.), ೨೦೦೦
ಜೋಕ್ಲೆ ದನಿ (ತುಳು ಕಥೆ ಮತ್ತು ಕವನಗಳ ಸಂಗ್ರಹ)
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ಡೆಮಿ ೧/೮, ರೂ. ೫/-

ಉಜಿರೆಯಲ್ಲಿನ ಕಮ್ಮಟದಲ್ಲಿ ಹಿರಿಯರು ಮತ್ತು ಮಕ್ಕಳು ರಚನೆ ಮಾಡಿದ ಕಥೆ – ಕವಿತೆಗಳ ಸಂಗ್ರಹ ಇದಾಗಿದೆ. ಇದರಲ್ಲಿ ೧೩ ಕವಿತೆಗಳು ಹಾಗೂ ೧೫ ಕಥೆಗಳಿವೆ.

ಮನೋಹರ ಪ್ರಸಾದ್
ಬದ್‌ಕ್‌ದ ಬಂಡಿ (ಸಣ್ಣ ಕತೆಗಳು)
ರತ್ನತ್ರಯ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು : ೬+೩೮, ರೂ. ೧೦/-

ಒಟ್ಟು ೬ ಕಥೆಗಳಿವೆ. ‘ಪಿರ ಬರಂದ್ ಬದ್‌ಕ್‌ದ ಬಂಡಿ’ ಕಥೆಯಲ್ಲಿ ಸದಾ ಕನಸು ಕಾಣುವ ಹೆಣ್ಣಿನ ಕಥೆ ಇದೆ. ‘ನಮ ತೆರಿಯಂದಿ ಬದ್‌ಕ್‌’ – ಮನುಷ್ಯನ ಬದುಕಿನೊಳಗಿನ ಅಭದ್ರತೆ, ಘೋರ ಸತ್ಯವನ್ನು ಹೇಳುತ್ತದೆ. ‘ಒಂಜಿ ವಾರದ ಕತೆ’ಯಲ್ಲಿ ಕಾಲೇಜು ಕಲಿಯುವ ಗಂಡು – ಹೆಣ್ಣಿನ ಪ್ರೀತಿಯ ಚಿತ್ರಣವಿದೆ. ‘ನರಮಾನಿಲು’ ಕತೆಯು ಮನುಷ್ಯರೊಳಗಿನ ಅಂಕುಡೊಂಕನ್ನು ಚಿತ್ರಿಸುತ್ತದೆ.

ಮುದ್ದು ಮೂಡುಬೆಳ್ಳೆ, ೧೯೮೮ (೧೯೮೭)
ಉದಿಪು (ತುಳು ಕಥಾ ಸಂಕಲನ)
ಹೇಮಾಂಶು ಪ್ರಕಾಶನ, ಕಾಟಿಪಳ್ಳ – ೫೭೪ ೧೪೯
ಡೆಮಿ ೧/೮, ಪುಟಗಳು : ೮+೩೮, ರೂ. ೯/-

೫ ಕಥೆಗಳ ಕೃತಿ. ಕಥೆಗಾರ ಹತ್ತಾರು ಊರುಗಳಲ್ಲಿ ಸಂಚರಿಸಿ, ನೋಡಿ ಕೇಳಿ ಪಡೆದ ಅನುಭವ ಹಾಗೆಯೇ ತನ್ನ ಸ್ವಂತ ಅನುಭವಗಳನ್ನು ಸೇರಿಸಿ ಕಥೆಗಳನ್ನು ರಚಿಸಿದ್ದಾರೆ. ಮನುಷ್ಯನ ಸಂಸಾರ, ಆತನ ಸುಖ – ದುಃಖ, ಗಂಡು ಹೆಣ್ಣಿನ ಪ್ರೇಮ – ಕಾಮ ಮುಂತಾದವುಗಳನ್ನು ಇಲ್ಲಿನ ಕಥೆಗಳ ವಸ್ತುವಾಗಿವೆ.

ಮುದ್ದು ಮೂಡುಬೆಳ್ಳೆ, ೧೯೯೮
ಅಪ್ಪೊದಡ್ಯೆ
ಕ್ರೌನ್ ೧/೪, ಪುಟಗಳು : ೩೨, ರೂ. ೧೫/-

ಯದುಪತಿ ಗೌಡ ಡಿ., ೧೯೯೮
ಮಾಯೊದ ಪೊಣ್ಣು
ಕ್ರೌನ್ ೧/೪, ಪುಟಗಳು ೨೪, ರೂ. ೧೫/-

ಯಶವಂತ ಎಸ್. ಸುವರ್ಣ, ೧೯೯೮
ಮಾಯಂದಾಳ್
ಕ್ರೌನ್ ೧/೪, ಪುಟಗಳು : ೨೦, ರೂ. ೧೫/-

ಯಶವಂತಿ ಎಸ್. ಸುವರ್ಣ, ೨೦೦೩
ದೇಯಿ ಬೈದೆತಿ (ತುಳು ಜನಪದ ಕಥೆ)
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಬಂಟ್ವಾಳ, ದ.ಕ.
ಕ್ರೌನ್ ೧/೮, ಪುಟಗಳು ೮+೪೪, ರೂ. ೩೦/-

ಕೋಟಿ ಚೆನ್ನಯರ ವೀರಗಾಥೆಯೇ ಇದರ ತಿರುಳಾದರೂ ಈ ಕಥೆ ಶುರುವಾಗುವುದು ಭೂಮಿಯ ಸೃಷ್ಟಿಯಲ್ಲಿಂದ. ಸಾಮಾನ್ಯವಾಗಿ ಪಾಡ್ದನ ಹೇಳುವವರು ಕೋಟಿ ಚೆನ್ನಯರ ಕಥೆಯನ್ನು ಮಾತ್ರ ಹೇಳುತ್ತಾರೆ. ಅವರ ಮೊದಲಿನ ಕತೆಯನ್ನು ಕೂಡ ಅಂದರೆ ದೇಯಿ ಬೈದೆತಿಯ ಕತೆಯನ್ನು ಪಾಡ್ದನದ ಆಧಾರದಿಂದ ಇದರಲ್ಲಿ ನೀಡಲಾಗಿದೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ ಡಾ., ೧೯೯೮
ಭೂತಾಳ ಪಾಂಡ್ಯೆ
ಕ್ರೌನ್ ೧/೪, ಪುಟಗಳು : ೨೮, ರೂ. ೧೫/-

ರಮೇಶ್ ಕರ್ನಾಡ್, ೧೯೭೩
ಪೊಸ ಜೀವನ (ತುಳು ಕಥಾ ಸಂಕಲನ)
ತುಳುವ ಸಾಹಿತ್ಯ ಮಾಲೆ, ಮಂಗಳೂರು, ರೂ. ೧/-

ಒಟ್ಟು ೪ ಕತೆಗಳಿವೆ. ಪೊಸ ಜೀವನ, ಕಡೆತ ಪಾತೆರ, ರಡ್ದನೇ ಮದ್ಮೆ, ಪಶ್ಚಾತ್ತಾಪ.

ರೈ. ಕೆ.ಆರ್., ೧೯೯೮
ಕಣ್ಣ್‌ಡ್ ತೂವಂದಿನ ಕೆಬಿಟ್ ಕೇನಂದಿನ
ಕ್ರೌನ್ ೧/೪, ಪುಟಗಳು: ೨೬, ರೂ. ೧೫/-

ಲೀಲಾವತಿ ಕೆ., ೧೯೯೮
ಪರತಿ ಮಂಗನೆ
ಕ್ರೌನ್ ೧/೪, ಪುಟಗಳು : ೨೪, ರೂ. ೧೫/-

ವಾಮನ ನಂದಾವರ, ೧೯೯೮
ಕೋಟಿ ಚೆನ್ನಯ
ಕ್ರೌನ್ ೧/೪, ಪುಟಗಳು: ೪೦, ರೂ. ೧೫/-

ವಸಂತಕುಮಾರ್ ಪೆರ್ಲ, ೧೯೯೬
ಆಕಾಶವಾಣಿ ತುಳು ಕತೆಕ್ಕುಲು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು : ೧೫೪, ರೂ. ೨೮/-

ಇದರಲ್ಲಿ ಬೇರೆ ಬೇರೆ ಲೇಖಕ – ಲೇಖಕಿಯರು ಬರೆದ ೨೦ ಕಥೆಗಳಿವೆ. ೧೯೮೫ – ೧೯೯೫ ಈ ಹತ್ತು ವರ್ಷಗಳಲ್ಲಿ ಆಕಾಶವಾಣಿಯಿಂದ ಪ್ರಸಾರವಾದಂತಹ ಕಥೆಗಳಲ್ಲಿ ಆಯ್ಕೆ ಮಾಡಿ ಈ ಇಪ್ಪತ್ತು ಕಥೆಗಳನ್ನು ನೀಡಲಾಗಿದೆ. ಇತಿಹಾಸ, ಸಾಮಾಜಿಕ ಸಮಸ್ಯೆ, ಕುಟುಂಬ, ದೈವ ಸತ್ಯ, ಮನುಷ್ಯ ಬದುಕು ಮುಂತಾದವುಗಳು ಇಲ್ಲಿನ ಕಥೆಗಳ ವಸ್ತುವಾಗಿವೆ.

ವಿಶ್ವನಾಥ ರೈ ಕುದ್ಯಾದಿನ
ಜೋಗಿ ಪುರುಷೆರ್
ಕ್ರೌನ್ ೧/೪, ಪುಟಗಳು : ೨೮, ರೂ. ೧೫/-

ವೆಂಕಟರಾಜ ಪುಣಿಂಚತ್ತಾಯ, ೧೯೯೮
ಪುಳ್ಳೂರು ಬಾಚೆ
ಕ್ರೌನ್ ೧/೪, ಪುಟಗಳು : ೨೦, ರೂ. ೧೫/-

ಶಂಕರ ಖಂಡೇರಿ, ೨೦೦೧
ತನಿಕೆ (ತುಳು ಸಣ್ಣ ಕತೆಗಳು)
ಹೇಮಾಂಶು ಪ್ರಕಾಶನ, ಮಂಗಳೂರು

ಕ್ರೌನ್ ೧/೮, ಪುಟಗಳು :೬೮, ರೂ. ೩೬/-

೫ ಕಥೆಗಳ ಸಂಕಲನ. ಇದರ ಒಂದೊಂದು ಕಥೆಯೂ ಬದುಕಿನ ವಿವಿಧ ಮಜಲು – ಮಗ್ಗುಲುಗಳನ್ನು ನಮ್ಮ ಮುಂದಿಡುತ್ತದೆ. ಇವೆಲ್ಲಾ ಕಾಲ್ಪನಿಕ ಕಥೆಗಳಲ್ಲ. ಬದಲಾಗಿ ನಮ್ಮ ದೈನಂದಿನ ಬದುಕಿನ ಅನುಭವಗಳೇ ಕಥೆಯ ರೂಪವನ್ನು ಪಡೆದುಕೊಂಡಿದೆ.

ಶ್ರೀಮತಿ ರಾವ್ ಬಿ.ಕೆ., ೨೦೦೬
ಗುರುದಕ್ಷಿಣೆ
ಶ್ರೀ ಗುರುಪ್ರಿಯ ಪ್ರಕಾಶನ, ಕಂಕನಡಿ, ಮಂಗಳೂರು – ೫೭೫ – ೦೦೨
ಕ್ರೌ. ೧/೮, ಪುಟಗಳು :೧೦೦, ಬೆಲೆ : ರೂ. ೫೦/-

ತುಳು ಪೌರಾಣಿಕ ಕಥಾಸಂಕಲನ.

ಶೆಟ್ಟಿ ಕೆ.ಜೆ. ಕಡಂದರೆ, ೧೯೯೮
ಅಬ್ಬಗೆ ದಾರಗೆ
ಕ್ರೌನ್ ೧/೪, ಪುಟಗಳು : ೩೬, ರೂ. ೧೫/-

ಸಾಮಗ ಬಾ. ಮಲ್ಪೆ, ೧೯೯೮
ಕಿನ್ಯ ಕತೆಕ್ಲು (ತುಳು ಕಥಾ ಸಂಕಲನ)
ತುಳುವೆರ್ ಪ್ರಕಾಶನಾಲಯ, ದೆಹಲಿ, ಡೆಮಿ ೧/೮, ಪುಟಗಳು : ೫೦, ರೂ. ೫/-

೧೭ ಕಥೆಗಳಿವೆ. ಪ್ರತಿಯೊಂದು ಕಥೆಯಲ್ಲಿಯೂ ಕೂಡ ಸಮಾಜದಲ್ಲಿ ಪ್ರತಿನಿತ್ಯ ನಡೆಯುವ ಘಟನೆಗಳನ್ನು ಕಾಣಬಹುದು.

ಸುಶೀಲಾ ಉಪಾಧ್ಯಾಯ ಡಾ., ೧೯೯೮
ಕೋಡ್ದಬು
ಕ್ರೌನ್ ೧/೪, ಪುಟಗಳು : ೩೨, ರೂ. ೧೫/-

 

ತುಳುವಿಗೆ ಸಂಬಂಧಿಸಿದ ಕನ್ನಡ ಕಥಾ ಸಂಕಲನಗಳು

ಗಾಯತ್ರಿ ನಾವಡ, ೧೯೯೪
ಸಿರಿಕತೆ
ಪುಟಗಳು : ೨೮, ರೂ. ೮/-

ತುಳುನಾಡಿನ ಸಾಂಸ್ಕೃತಿಕ ವೀರ ಮಹಿಳೆ ಸಿರಿಯ ಕುರಿತು ಕಿರಿಯರಿಗಾಗಿ ಬರೆದ ಕೃತಿ.

ಗೀತಾ ಕುಲಕರ್ಣಿ, ೧೯೮೧
ತುಳು ಜಾನಪದ ಕಥೆಗಳು
ಐಬಿಎಚ್‌ಪ್ರಕಾಶನ, ಬೆಂಗಳೂರು
ಕ್ರೌನ್ ೧/೮, ಪುಟಗಳು : ೪೭, ರೂ. ೧.೭೫/-

ಮೂರು ತುಳು ಜನಪದ ಕಥೆಗಳನ್ನು ಕನ್ನಡದಲ್ಲಿ ನೀಡಲಾಗಿದೆ.

ಗೀತಾ ಕುಲಕರ್ಣಿ, ೧೯೮೧
ಜಾನಪದ ಮತ್ತಷ್ಟು ಕಥೆಗಳು
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ರೂ. ೨/-

ತುಳು ಜನಪದ ಕಥೆಗಳ ಸಂಗ್ರಹ. ಕನ್ನಡದಲ್ಲಿ ನೀಡಲಾಗಿದೆ. ೩ ಕಥೆಗಳಿವೆ. ಸಾಹಸ, ಹಠ, ಚಮತ್ಕಾರ, ದೈವ ನಂಬಿಕೆ, ಪ್ರೇಮ, ಹಾಸ್ಯ ಮತ್ತು ದಬ್ಬಾಳಿಕೆ ಮುಂತಾದವು ಈ ಕಥೆಗಳಲ್ಲಿ ವರ್ಣಿತವಾಗಿದೆ.

ನಮಿರಾಜ ಮಲ್ಲ ಸೇವ, ೧೯೭೦
ಭೂತಾರಾಧನೆಯ ಕಥೆಗಳು
ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ
ಡೆ. ೧/೮, ಪುಟಗಳು : ೧೨+೭೭, ರೂ. ೩.೫/- (ಸಾದಾ), ರೂ. ೭/- (ಉತ್ತಮ)

ಆರಂಭದಲ್ಲಿ ಭೂತಾರಾಧನೆಯ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಿ ಪಿಲಿ ಚಾಮುಮಡಿ, ಕೊಡಮಣಿತ್ತಾಯ, ಪಂಜುರ್ಲಿ, ಕಲ್ಕುಡ ಕಲ್ಲುರ್ಟಿ, ಜುಮಾದಿ, ಬೊಬ್ಬರ್ಯ ಇತ್ಯಾದಿ ಭೂತಗಳಿಗೆ ಸಂಬಂಧಿಸಿದ ಕತೆಗಳಿವೆ.

ನಾವಡ ಎ.ವಿ., ೧೯೯೪
ಕಾಡ್ಯನಾಟದ ಕತೆಗಳು
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ
ಕ್ರೌನ್ ೧/೪, ಪುಟಗಳು : ೨+೨೬, ರೂ. ೮/-

ನವಸಾಕ್ಷರಿಗಾಗಿ ತಯಾರಿಸಲಾದ ಈ ಪುಸ್ತಕದಲ್ಲಿ ಕಾಡ್ಯನಾಟಕ್ಕೆ ಸಂಬಂಧಿಸಿದ ಹಲವು ಜಾನಪದ ಕಥೆಗಳಿವೆ.

ಬಾಬು ಅಮೀನ್ ಬನ್ನಂಜೆ, ೨೦೦೨
ಉಗುರಿಗೆ ಮುಡಿಯಕ್ಕಿ ಮತ್ತು ಸಣ್ಣಕತೆಗಳು
ಕೆಮ್ಮಲಜೆ ಸಾಹಿತ್ಯ ಪ್ರಕಾಶನ, ಡೆಮಿ ೧/೮, ಪುಟಗಳು : ೮+೬೮, ರೂ. ೩೫/-

೨೫ ಕಥೆಗಳಿದ್ದರೂ ಒಂದಲ್ಲ ಒಂದು ರೀತಿಯಿಂದ ಹೆಚ್ಚಿನ ಎಲ್ಲಾ ಕಥೆಗಳೂ ಕೂಡ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಕಥೆಗಳಾಗಿವೆ. ಜನಸಾಮಾನ್ಯರ ನೋವು, ನಲಿವುಗಳು ಪರಿವ್ಯಕ್ತವಾಗುವುದರಿಂದ ಈ ಕೃತಿಯು ತುಳುವರ ಸಂಸ್ಕೃತಿಯ ಚರಿತ್ರೆಯೂ ಆಗಬಲ್ಲದು.

ಮಂಗೇಶರಾಯ ಪಂಜೆ, ೧೯೬೨
ಅಗೊಳಿ ಮಂಜಣ (ಮಕ್ಕಳ ಕತೆ)
ಬಾಲಸಾಹಿತ್ಯ ಮಂಡಲ ಲಿ. ಕೊಡಿಯಾಲಬೈಲ್ಝು
ಕ್ರೌ. ೧/೮, ರೂ. ೦.೫೦ ನಯಾ ಪೈಸೆ
ಅಗೊಳಿ ಮಂಜಣನ ಸಾಹಸ, ಶಕ್ತಿ ಸಾಮರ್ಥ್ಯಗಳನ್ನು ಹೇಳುವ ಕತೆ.

ಮಂಗೇಶರಾಯ ಪಂಜೆ, ೧೯೪೭ (೧೯೩೦)
ಕೋಟಿ ಚೆನ್ನಯ (ಕತೆ)
ಬಾಲ ಸಾಹಿತ್ಯ ಮಂಡಲ ಲಿ. ಕೊಡಿಯಾಲಬೈಲು
ಕ್ರೌ. ೧/೮, ಪುಟಗಳು : ೪+೬೪+೨, ರೂ. ೦-೮-೦

ತುಳುನಾಡಿನ ಸಾಂಸ್ಕೃತಿಕ ವೀರರಾದ ‘ಕೋಟಿ ಚೆನ್ನಯ’ರ ಸಂಧಿಯನ್ನಾಧರಿಸಿ ಈ ಪುಸ್ತಕದಲ್ಲಿ ಕತೆಯನ್ನು ಬರೆಯಲಾಗಿದೆ.

ರಸಿಕ ಪುತ್ತಿಗೆ, ೧೯೭೧
ಕೋಟಿ ಚೆನ್ನಯ (ತುಳುನಾಡಿನ ಅವಳಿ ವೀರರು)
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌ. ೧/೮, ಪುಟಗಳು : ೫೭+೩, ರೂ. ೧.೫೦/-

ತುಳುನಾಡಿನಲ್ಲಿ ಹುಟ್ಟಿ ಬೆಳೆದ ವೀರಪುರುಷರಾದ ಕೋಟಿ ಚೆನ್ನಯರು ಮಾಡಿದ ಸಾಹಸ, ಪರಾಕ್ರಮಗಳನ್ನು ವಿವರಿಸುವ ಕತೆ ಇದಾಗಿದೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೧೯೮೭
ತುಳುವರ ಜನಪದ ಕತೆಗಳು
ಸುಪ್ರಿಯ ಪ್ರಕಾಶನ, ಮಾಡಾವು. ಕ್ರೌ. ೧/೮, ರೂ. ೧೦/-

ಈ ಕೃತಿಯಲ್ಲಿನ ೧೩ ಕತೆಗಳೂ ಕೂಡ ತುಳು ಜಾನಪದ ಕತೆಗಳ ಕನ್ನಡ ರೂಪಾಂತರ. ಎಲ್ಲವೂ ಕೂಡ ಸಂಕೀರ್ಣ ರೂಪದ ಅಥವಾ ಮಾಂತ್ರಿಕ ರೂಪದ ಕತೆಗಳ ವರ್ಗಕ್ಕೆ ಸೇರಿದವುಗಳಾಗಿವೆ.

ವಾಸುದೇವ ಭಟ್ಟ, ೧೯೯೭
ಸರ್ಪರಾಜ ಮತ್ತು ಇತರ ಕತೆಗಳು (ಸಂಗ್ರಹ)
ಗೋಕುಲ ಪ್ರಕಾಶನ, ಕೆಳಪೇಟೆ, ಸಿದ್ಧಾಪುರ -೫ (ಉಡುಪಿ ಜಿಲ್ಲೆ)
ಕ್ರೌನ್ ೧/೮, ಪುಟಗಳು : ೭+೫೧, ರೂ. ೧೫/-

ಕರಾವಳಿ ಪ್ರದೇಶದಲ್ಲಿ ಆರಾಧನೆ ಮಾಡಲಾಗುತ್ತಿರುವ ನಾಗನ ಕುರಿತು ಹಲವು ಜಾನಪದ ಕತೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಹತ್ತು ಕಥೆಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಇದರಲ್ಲಿನ ‘ಮಾಂಗಲ್ಯದಾನ’ ಎಂಬ ಕತೆ ತುಳುವಿನ ಕಾಳಿಂಗ ಪಾಡ್ದನದ ಕನ್ನಡ ರೂಪ. ಹಾಗೆಯೇ ‘ಸರ್ಪರಾಜನ ಕತೆ’ ತುಳುವಿನ ಒಂದು ದೀರ್ಘ ಕತೆ.

ವೆಂಕಪ್ಪಯ್ಯ ಸಿರಿಬಾಗಿಲು, ೧೯೬೯
ತುಳುನಾಡ ಕೇಸರಿ (ತುಳುನಾಡ ಕಲಿಯೋರ್ವನ ಸಾಹಸೀ ಜೀವನ ಕಥನ)
ಗೀತಾ ಪ್ರಕಾಶನ, ಕಾಸರಗೋಡು, ಕ್ರೌನ್ ೧/೮, ರೂ. ೦.೭೫/-

ತುಳುನಾಡಿನ ಅವಿಭಾಜ್ಯ ಅಂಗವಾದ ಕಾಸರಗೋಡು ಪ್ರದೇಶದ ಒಂದು ಚಾರಿತ್ರಿಕ ಚೌಕಟ್ಟಿನಲ್ಲಿ ದೊರೆತ ಕಥಾ ವಸ್ತುವನ್ನಾರಿಸಿಕೊಂಡು ಜಯಸಿಂಹನನ್ನು ‘ತುಳುನಾಡ ಕೇಸರಿ’ಯೆಂದು ಕೊಂಡಾಡುವ ಉದ್ದೇಶದಿಂದ ಆತನ ಕಥೆಯನ್ನು ಎಳೆಯರಿಗಾಗಿ ಬರೆಯಲಾಗಿದೆ ಹಾಗೂ ಕಣ್ವಪುರ, ಮಧುಪುರ ಕ್ಷೇತ್ರಗಳ ಪರಿಚಯವನ್ನೂ ಇದರಲ್ಲಿ ಸೇರಿಸಲಾಗಿದೆ.

ಶೆಟ್ಟಿ ಕೆ.ಜೆ. ಕಡಂದಲೆ, ೧೯೭೩
ತುಳುನಾಡ ಸಿರಿ (ತುಳು ಪಾಡ್ದನದ ಕಥೆ)
ಪುಟಗಳು : ೧೫೮, ರೂ. ೪/-
ತುಳುನಾಡ ಸಿರಿ (ತುಳು ಪಾಡ್ದನದ ಕಥೆ)
ಪುಟಗಳು : ೧೫೮, ರೂ. ೪/-

ತುಳುನಾಡ ಸಿರಿ ಎಂಬ ಪಾಡ್ದನದ ಕಥೆಯನ್ನು ಗದ್ಯದಲ್ಲಿ ಕನ್ನಡೀಕರಿಸಲಾಗಿದೆ.