ತುಳು ಭಾಷೆ – ನಾಡಿಗೆ ಸಂಬಂಧಿಸಿದ ಇತಿಹಾಸ ಕೃತಿಗಳು

ಅನಂತರಾಮ ಬಂಗಾಡಿ ಕೆ., ೨೦೦೨
ಬಂಗಾಡಿಯ ಇತಿಹಾಸ
ಬಿ. ಭುಜಬಲಿ ಧರ್ಮಸ್ಥಳ ಪ್ರಕಾಶನ, ಡೆ. ೧/೮, ಪು: ೧/೮, ಪು. ೮+೪೮, ರೂ. ೩೦/-

‘ಬಂಗಾಡಿಯ ಇತಿಹಾಸ’ ಎಂಬ ಈ ಕೃತಿಯು ಬಂಗರಾಜ ಮನೆತನದ ಸಮಗ್ರ ಚರಿತ್ರೆಯನ್ನು ಒಳಗೊಂಡಿದೆ. ಈ ಸೀಮೆಗೆ ಸೇರಿದ ದೈವಗಳ ಪಾಡ್ದನಗಳು, ದಂತಕತೆಗಳು, ಇತಿಹಾಸ ವಿಚಾರಗಳನ್ನು ಇದರಲ್ಲಿ ಒಟ್ಟು ಮಾಡಲಾಗಿದೆ. ಹಾಗಾಗಿ ‘ಬಂಗ’ ವಂಶಜರಾಳಿದ ಬಂಗಾಡಿಯ ಪ್ರಕೃತಿ ವಿಶೇಷತೆಯೊಂದಿಗೆ ಅಲ್ಲಿನ ಧಾರ್ಮಿಕ ಕಟ್ಟುಕಟ್ಟಲೆಗಳು, ಭೂತಾರಾಧನೆಗೆ ಸಂಬಂಧಿಸಿದ ಪಾಡ್ದನದ ಸೊಗಡಿನೊಂದಿಗೆ ರಾಜವಂಶದವರ ಆಳ್ವಿಕೆಯ ಕಾಲದ ವೈಭವಗಳನ್ನು ಈ ಪ್ರಬಂಧದಲ್ಲಿ ನೀಡಲಾಗಿದೆ. ಶಾಸನ, ಶಿಲ್ಪ, ದೈವಸ್ಥಾನಗಳ ಚಿತ್ರಗಳನ್ನು ಕೃತಿಯ ಒಳಪುಟ ಹಾಗೂ ಹೊರಕವಚಗಳಲ್ಲಿ ನೀಡಲಾಗಿದೆ.

ಅಮೃತ ಸೋಮೇಶ್ವರ, ಕೆ.ಆರ್. ಚಂದ್ರ (ಸಂ), ೧೯೯೭
ಉಳ್ಳಾಲ ಇತಿ ಆದಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆ. ೧/೮, ಪು. ೧೨೦+೪, ರೂ. ೩೦/-

ಇದರಲ್ಲಿ ಅಬ್ಬಕ್ಕ ರಾಣಿಯ ಕುರಿತ ಲೇಖನಗಳು, ಉಳ್ಳಾಲದ ಇತಿಹಾಸ, ಉಳ್ಳಾಲದ ಸಾಂಸ್ಕೃತಿಕ ಕೇಂದ್ರಗಳು, ತುಳುನಾಡಿನ ಮಹಿಳೆ, ತುಳು ಜಾನಪದದ ವೀರರಂನಿಯರು, ತುಳುನಾಡಿನಲ್ಲಿ ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯ ಹೋರಾಟಗಾರರು, ಮಾತೃಪ್ರಧಾನ ಸಂಸ್ಕೃತಿ ಇಂತಹ ಅನೇಕ ಬರಹಗಳಿವೆ.

ಉದಯ ವರ್ಮರಾಜ, ೧೯೯೮
ತುಳುನಾಡಿನ ಗತವೈಭವ
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ವಿಶೇಷ ಘಟಕ ಕಾಸರಗೋಡು
ಡೆ. ೧/೮, ಪು. ೧೬+೨೩೧, ರೂ. ೧೫೦/-

ಈ ನಾಡಿನ ಇತಿಹಾಸದಲ್ಲಿ ಆಗಿಹೋದ ಅನೇಕ ಘಟನೆಗಳ ಮೇಲೆ ಬೆಳಕು ಚೆಲ್ಲುವ ಗ್ರಂಥ. ಕುಂಬಳೆ ಸೀಮೆಯ ಇತಿಹಾಸದೊಂದಿಗೆ, ಕನ್ನಡ ಜಿಲ್ಲೆಯ ಆಡಳಿತ ವಿವರಗಳನ್ನೂ ತಿಳಿಸುವ ಈ ಲೇಖನ ಮಾಲೆಯಲ್ಲಿ ಬನವಾಸಿ, ಕದಂಬರು, ಹಂಗಳದ ಕದಂಬರು, ಗೋವೆ ಕದಂಬರು ಮತ್ತು ಹಾನಗಲ್ಲು ಕದಂಬರು ಎಂಬ ೪ ವಂಶಗಳ ಚರಿತ್ರೆಯನ್ನು ವಿವರಿಸಿ, ಕುಂಬಳೆ ಸೀಮೆಯ ಚರಿತ್ರೆಗೆ ಸಹಾಯವಾಗುವ ಹಲವಾರು ದಾಖಲೆಗಳನ್ನೊದಗಿಸಿದ್ದಾರೆ ಸುಮಾರು ೨೦೦-೨೫೦ ವರ್ಷಗಳಿಂದೀಚೆಗಿನ ಕುಂಬಳೆ ಅರಸು ಮನೆತನದ ಸಂತತಿ ನಕ್ಷೆಯನ್ನು ಒದಗಿಸಿದ್ದಾರೆ. ಯಕ್ಷಗಾನ ಮತ್ತು ಪಾರ್ತಿಸುಬ್ಬನಿಗೆ ಸಂಬಂಧಿಸಿದ ವಿಚಾರಗಳೂ, ನಾಡಿನ ಇತಿಹಾಸ-ಸಂಸ್ಕೃತಿಗಳಿಗೆ ಕುಂಬಳೆ ಅರಸರ ಕೊಡುಗೆಯೇನೆಂಬುದನ್ನು ವಿಶ್ಲೇಷಿಸಿದ್ದಾರೆ ಪೂರಕವಾದ ಛಾಯಾಚಿತ್ರಗಳೂ ಇವೆ.

ಉಮಾನಾಥ ವೈ. ಶೆಣೈ, ೧೯೮೫
ಪುತ್ತೂರು ಕ್ಷೇತ್ರದ ಇತಿಹಾಸ
ಆಡಳಿತ ಮಂಡಳಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ,
ಪುತ್ತೂರು, ಡೆ. ೧/೮, ರೂ. ೬/-

ಮಹಾಲಿಂಗೇಶ್ವರ ದೇವಾಲಯದ ಪ್ರಾಂಗಣದಲ್ಲಿರುವ ಶಿಲಾಶಾಸನಗಳು, ದೇವಾಲಯದ ವಾಸ್ತು, ಪರಿವಾರ ದೇವತೆಗಳ ಮೂರ್ತಿಗಳು, ಇತರ ದೈವ ದೇವರುಗಳು, ಇಲ್ಲಿನ ಇತಿಹಾಸ, ಸ್ಥಳಪುರಾಣ, ಸಂಪ್ರದಾಯ ಇವೆಲ್ಲವುಗಳನ್ನು ಅಧ್ಯಯನ ಮಾಡಿ ಈ ಕ್ಷೇತ್ರದ ಹಲವು ಐತಿಹಾಸಿಕ ಸಂಗತಿಗಳನ್ನು ಲೇಖಕರು ಪ್ರಸ್ತುತಪಡಿಸಿದ್ದಾರೆ.

ಉಮಾನಾಥ ವೈ. ಶೆಣೈ, ೧೯೮೫
ಬಂಗರ ಇತಿಹಾಸ
ಶ್ರೀ ರವಿರಾಜ ಬಲ್ಲಾಳರು, ಬಂಗಾಡಿ ಅರಮನೆ, ಬಂಗಾಡಿ, ಕ್ರೌ. ೧/೮, ರೂ. ೫/-

ಬಂಗಾಡಿಯ ಅರಸರ ಮೂಲ, ಇತಿಹಾಸ, ಬಂಗರ ರಾಜ್ಯದ ಸ್ಥಿತಿ, ಸಾಹಿತ್ಯ ಕಲೆಗಳಿಗೆ ಬಂಗರಸರ ಕೊಡುಗೆ ಮುಂತಾದವುಗಳನ್ನು ಓಲೆ ಗ್ರಂಥಗಳು, ಶಿಲಾಲೇಖನ ಮತ್ತು ತಾಮ್ರ ಶಾಸನಗಳ ಆಧಾರದಿಂದ ವಿವರಿಸಲಾಗಿದೆ.

ಕೇಶವ ಕೃಷ್ಣ ಕುಡ್ವ, ಕಾರ್ಕಳ, ೧೯೪೮
ದಕ್ಷಿಣ ಕನ್ನಡದ ಇತಿಹಾಸ (ತುಳುವ ಚರಿತ್ರೆ)
ಕೇಶವ ಕೃಷ್ಣ ಕುಡ್ವ, ಕಾರ್ಕಳ ಲಾಲ್‌ಬಾಗ್‌, ಮಂಗಳೂರು, ರೂ. ೨-೧೨-೦

ತುಳುನಾಡು, ಭಾಷೆ, ಜನರು, ತುಳುನಾಡಿನ ಪ್ರಮುಖ ಪದ್ಧತಿಯಾದ ಅಳಿಯ ಕಟ್ಟು, ತುಳುನಾಡನ್ನಾಳಿದ ಅರಸುವಂಶಗಳು, ಇಲ್ಲಿನ ಸಾಮಾಜಿಕ – ರಾಜಕೀಯ ಸ್ಥಿತಿಗಳು, ಇಲ್ಲಿನ ಪ್ರಸಿದ್ಧ ಸ್ಥಳಗಳು ಮೊದಲಾದವುಗಳ ಬಗ್ಗೆ ವಿವರಗಳಿವೆ. ಕದ್ರಿ ದೇವಸ್ಥಾನ, ಲೋಕೇಶ್ವರ ಪ್ರತಿಮೆ, ಕಾರ್ಕಳದ ಗೊಮ್ಮಟ ಪ್ರತಿಮೆಗಳ ಚಿತ್ರಗಳಿವೆ.

ಕೃಷ್ಣ ಭಟ್ ಹೆರಂಜೆ, ಎಸ್.ಡಿ.ಶೆಟ್ಟಿ ಡಾ. (ಸಂ), ೨೦೦೦
ತುಳು ಕರ್ನಾಟಕ ಅರಸು ಮನೆತನಗಳು (ವಿಚಾರಸಂಕಿರಣದ ಪ್ರಬಂಧಗಳು)
ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ, ಡೆ ೧/೮, ಪು. ೧೬+೨೫೨, ರೂ. ೨೦೦/-

ತುಳುನಾಡಿನ ಅರಸು ಮನೆತನಗಳಾದ ಅಳುಪ, ಸಾಳ್ವರು, ಭೈರರಸ, ಬಂಗರು, ಕುಂಬಳೆ ಅರಸು ಮನೆತನ, ಚೌಟರು, ಡೊಂಬ ಹೆಗ್ಗಡೆ, ಸಾವಂತರು, ಅಜಿಲರು ಮುಂತಾದವರ ಕುರಿತು ವಿವಿಧ ವಿದ್ವಾಂಸರು ತಮ್ಮ ವಿಚಾರ ಸಂಕಿರಣದ ಪ್ರಬಂಧಗಳಲ್ಲಿ ಚರ್ಚೆ ನಡೆಸಿದ್ದಾರೆ.

ಕೃಷ್ಣಯ್ಯ ಹೊಳ್ವ, ೧೯೨೪
ಭಟ್ಟಾಚಾರ್ಯರು ಮಾಡಿದ ದ್ವಾತ್ರಿಂಶ ಗ್ರಾಮ ಪದ್ಧತಿ
ಕ್ರೌ. ೧/೮, ಪು. ೫೪.

ಕ್ರಿ.ಶ. ೬-೭ನೇ ಶತಮಾನದಲ್ಲಿದ್ದ ಮಯೂರವರ್ಮ ಎಂಬ ಅರಸ ‘ಅಹಿಕ್ಷೇತ್ರ’ ಎಂಬಲ್ಲಿಂದ ಅಲ್ಲಿನ ಬ್ರಾಹ್ಮಣರನ್ನು ತಂದು ತೌಳವ ಕ್ಷೇತ್ರದಲ್ಲಿ ಸ್ಥಾಪಿಸಿ ಮತಮಾನ್ಯಗಳನ್ನು ಕೊಟ್ಟಿದ್ದರ ಬಗ್ಗೆ ‘ಗ್ರಾಮಪದ್ಧತಿ’ ಗ್ರಂಥದಲ್ಲಿ ಮಾಹಿತಿಯಿದೆ. ಹಾಗಾಗಿ ಲೇಖಕರು ಅನೇಕ ವರ್ಷಗಳ ಕಾಲ ಸಂಗ್ರಹಿಸಿದ ಶ್ರೀ ತಾಳಿವಾಲೆ ಪುಸ್ತಕದಿಂದ ಯಥಾಪ್ರತಿಯಾಗಿ ಓದುಗರಿಗೆ ಒದಗಿಸಿದ್ದಾರೆ.

ಗಣಪತಿ ರಾವ್ ಎಂ., ೧೯೨೩
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ
ಡೆ. ೧/೮, ಪು: ೪೪೮, ರೂ. ೨-೪ ಆಣೆ

ದಕ್ಷಿಣ ಕನ್ನಡ ಜಿಲ್ಲೆಯ ಭೌಗೋಳಿಕ ಲಕ್ಷಣಗಳನ್ನು ಆರಂಭದಲ್ಲಿ ನೀಡಿದ ಈ ಕೃತಿಯಲ್ಲಿ ದಕ್ಷಿಣ ಕನ್ನಡದ ಪೂರ್ವಸ್ಥಿತಿ, ಪ್ರಾಚೀನ ಕಾಲದ ಸಾಮಾಜಿಕ ಪದ್ಧತಿಗಳು, ಇಲ್ಲಿನ ರಾಜವಂಶಗಳು ಹಾಗೂ ಕರ್ನಾಟಕದ ಅರಸು ಮನೆತನಗಳ ಬಗ್ಗೆ ವಿವರಗಳಿವೆ.

ಗುರುರಾಜ ಭಟ್ ಪಿ., ೧೯೭೬
ಅಳುಪರಸರು
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ಪು. ೪೮, ರೂ. ೧.೫೦/-

ದ.ಕ.ದ ಅರಸು ಮನೆತನದ ಪರಿಚಯವನ್ನು ಮಕ್ಕಳಿಗಾಗಿ ಈ ಕಿರುಕೃತಿಯಲ್ಲಿ ನೀಡಲಾಗಿದೆ. ಆ ಕಾಲದ ರಾಜಕೀಯ-ಧಾರ್ಮಿಕ ಇತಿಹಾಸವನ್ನು ನೀಡಿ ಶಾಸನಗಳ ಪರಿಚಯವನ್ನು ಕೂಡ ಚಿತ್ರಗಳ ಮೂಲಕ ನೀಡಲಾಗಿದೆ.

ಗುರುರಾಜ ಭಟ್ಟ ಪಿ., ೧೯೭೧
ಉಡುಪಿ ಇತಿಹಾಸ ಆಗಸ್ಟ್
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ರೂ. ೧.೫೦/-

‘ಉಡುಪಿ’ ಪದನಿಷ್ಪತ್ತಿಯಿಂದ ತೊಡಗಿ ಉಡುಪಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಇತಿಹಾಸದ ಕುರಿತು ಬೆಳಕು ಚೆಲ್ಲುವ ಕೃತಿ ಹಾಗೂ ಅನೇಕ ದೇವರು ದೇವಾಲಯಗಳ ಛಾಯಾಚಿತ್ರಗಳೂ ಇವೆ.

ಗುರುರಾಜ ಭಟ್ ಪಿ., ೧೯೬೩
ತುಳುನಾಡು (ಸಾಮಾಜಿಕ ಚರಿತ್ರೆಯಲ್ಲಿ ಒಂದು ಸಂಶೋಧನಾತ್ಮಕ ವಿವೇಚನೆ) ಪ್ರಕಾಶಕರು: ಕೆ. ಲಕ್ಷ್ಮೀನಾರಾಯಣ ಭಟ್, ಸಂಪಾದಕ ‘ಭವ್ಯವಾಣಿ’ ಪಡುಪೇಟೆ, ಉಡುಪಿ
‘ತುಳುವರ’ ಹುಟ್ಟು, ತುಳುವರ ಬೇರೆ ಬೇರೆ ಜಾತಿಗಳು -ಬಂಟ, ಬ್ರಾಹ್ಮಣ, ಸ್ಥಾನಿಕ, ಆಳುವ ಮುಂತಾದವುಗಳ ಮೂಲಕ ನಡೆಸಿದ ಅಧ್ಯಯನ, ಕುಲನಾಮಗಳು, ಸ್ಥಳನಾಮಗಳು ಹೇಳುವ ತುಳುನಾಡಿನ ಕತೆಯ ಪರಿಶೀಲನೆಯನ್ನು ನಡೆಸಿ ತುಳುನಾಡಿನ ಕುರಿತು ಅಧ್ಯಯನ, ಕೈಗೊಳ್ಳಲಾಗಿದೆ.

ಗುರುರಾಜ ಭಟ್ ಪಾದೂರು, ೧೯೬೬
ತುಳುನಾಡಿನ ಇತಿಹಾಸದಲ್ಲಿ ಸ್ಥಾನಿಕರು (ಅಧ್ಯಯನ)
ಸ್ಥಾನಿಕ ದ್ರಾವಿಡ ಬ್ರಾಹ್ಮಣ ಸಂಘ ಉಡುಪಿ, ಕ್ರೌ ೧/೮, ರೂ. ೪/-

ಸ್ತಾನಿಕರು ಯಾರು? ಅವರು ಮೂಲತಃ ದೇವಸ್ಥಾನದಲ್ಲಿ ಯಾವ ಅಧಿಕಾರವನ್ನು ಹೊಂದಿದ್ದರೆಂಬ ಬಗ್ಗೆ ಶಾಸನಗಳ ಆಧಾರದ ಮೇಲಿಂದ ಚರ್ಚಿಸುವ ಯತ್ನವನ್ನು ಈ ಗ್ರಂಥದಲ್ಲಿ ಮಾಡಲಾಗಿದೆ.

ಚಂದ್ರಶೇಖರ ದಾಮ್ಲೆ, ೧೯೯೧
ಗತಿಬಿಂಬ ಸುಳ್ಯ
ಸಮಾಜ ಶಾಸ್ತ್ರ ಸಂಘ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ
ಕ್ರೌ ೧/೮, ಪು. ೧೪+೧೩೬, ರೂ. ೨೦/-

ಈ ಪುಸ್ತಕದಲ್ಲಿ ಸುಳ್ಯದ ಇತಿಹಾಸದ ಬಗ್ಗೆ ಲಭ್ಯ ಮಾಹಿತಿಗಳನ್ನು ದಾಖಲಿಸಲಾಗಿದೆ. ಸುಳ್ಯದ ಪ್ರಸ್ತುತ ಚಿತ್ರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವ್ಯಾಪಾರೋದ್ಯಮ, ಸಾರಿಗೆ -ಸಂಪರ್ಕ ಮುಂತಾದವುಗಳ ಕುರಿತು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.

ಜಾರು ಪೇರೂರು, ೧೯೯೪
ಉಳ್ಳಾಲದ ಅಬ್ಬಕ್ಕಂದಿರು
ಚಿಂತಕ ಪ್ರಕಟನಾಲಯ ಬೆಂಗಳೂರು, ಕ್ರೌ. ೧/೮, ಪು. ೨೦, ರೂ. ೨.೫೦

ಅಬ್ಬಕ್ಕ ರಾಣಿಯ ಹಿನ್ನೆಲೆ, ಯುದ್ಧದ ಹಿನ್ನೆಲೆ ಇಸ್ಲಾಮಿಯರ ಹಿನ್ನೆಲೆಯ ಕುರಿತು ಮಾಹಿತಿ ನೀಡುವ ಪುಸ್ತಕ.

ಜಾರು ಪೇರೂರು, ೧೯೯೬
ಮಣ್ಣಿನ ಮಗ ಮಹಾಬಲಿ
ಆಟಕೂಟ, ಪದ್ಮುನ್ಜ ಬೆಳ್ತಂಗಡಿ ತಾಲೂಕು, ಡೆ. ೧/೮, ಪು. ೨೪+೪, ರೂ. ೩/-

ತುಳುನಾಡು ಬಲಿಯ ಸತ್ಯ ರಾಜ್ಯ ಮತ್ತು ಸತ್ಯ ಪುತ್ರ ರಾಜ್ಯಗಳು ಹಾಗೂ ತಿರುಪತಿಯ ತಿಮ್ಮಪ್ಪನೇ ಬಲೀಜಿ ಹೊಸ ನೋಟದ ಚರಿತ್ರೆಯನ್ನು ಲೇಖಕರು ಇಲ್ಲಿ ನಮ್ಮ ಮುಂದಿಟ್ಟಿದ್ದಾರೆ.

ಜಾರು ಪೇರೂರು ೧೯೯೫ (೧೯೯೪)
ಮುಸ್ಲಿಂ ಮೊಗವೀರ ಸಾಮರಸ್ಯದ ಪ್ರತೀಕ ಉಳ್ಳಾಲದ ಅಬ್ಬಕ್ಕಂದಿರು
ಚಿಂತಕ ಪ್ರಕಟಣಾಲಯ, ಬೆಂಗಳೂರು, ಡೆ. ೧/೮, ಪು. ೧೬+೪, ರೂ. ೪/-

ಅಬ್ಬಕ್ಕ ಒಬ್ಬರಲ್ಲ ಇಬ್ಬರು ಎಂದು ಹೇಳುತ್ತಾ ಇದರಲ್ಲಿ ಉಳ್ಳಾಲದ ಅಬ್ಬಕ್ಕನ ಹಿನ್ನೆಲೆಯನ್ನು ಹೇಳಲಾಗಿದೆ.

ತುಕಾರಾಂ ಪೂಜಾರಿ, ಆಶಾಲತಾ ಎಸ್. ಸುವರ್ಣ (ಸಂ), ೨೦೦೩
ಬಂಟ್ವಾಳ ಇತಿಹಾಸ ದರ್ಶನ (ಲೇಖನಗಳ ಸಂಗ್ರಹ)
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ, ದ.ಕ.
ಡೆ. ೧/೮, ಪು. ೮+೧೫೬+೨೦ (ಪೋಟೋ), ರೂ. ೧೪೦/-

೨೦ ಲೇಖನಗಳಿವೆ : ಅವುಗಳಲ್ಲಿ ‘ತುಳುನಾಡಿನ ಇತಿಹಾಸತಜ್ಞ ಪಿ. ಗುರುರಾಜ ಭಟ್, ‘ಬಂಟ್ವಾಳಕ್ಕುಂಟು ಜಾನಪದ ನಂಟು’, ‘ತುಳು ಸಂಸ್ಕೃತಿ ಶೋಧಕ ಎನ್.ಎ. ಶೀನಪ್ಪ ಹೆಗ್ಗಡೆ’, ‘ಸಾಂಸ್ಕೃತಿಕ ಕೇಂದ್ರವಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’, ‘ದ.ಕ.ಜಿಲ್ಲೆಯ ಇತಿಹಾಸ ಪಿತಾಮಹ ಗಣಪತಿ ರಾವ್ ಐಗಳ್’ ಹೀಗೆ ತುಳು ಜಾನಪದ, ಸಂಸ್ಕೃತಿ, ತುಳುವಿನ ವಿದ್ವಾಂಸರುಗಳ ಕುರಿತು ಲೇಖನಗಳಿವೆ.

ಧರಣೇಂದ್ರಯ್ಯ ಕಾ.ಸ., ೧೯೭೧
ಕಾರ್ಕಳ – ವೇಣೂರು ಆಗಸ್ಟ್
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ಪು. ೪೪

ಕಾರ್ಕಳ ಮತ್ತು ವೇಣೂರಿನ ಇತಿಹಾಸ ಮತ್ತು ಗೊಮ್ಮಟ ಮೂರ್ತಿಗಳ ಕುರಿತ ಹಿನ್ನೆಲೆಯನ್ನು ಹೇಳುವ ಕಿರುಕೃತಿ.

ನಾರಾಯಣ ಶೆಟ್ಟಿ ಕೆ. (ಸಂ), ೨೦೦೧
ನೀರೆ – ಗರಡಿ ಇತಿಹಾಸ
ಮೈನಾ ಪ್ರಕಾಶನ ಕಲ್ಯಾಣಪುರ, ಡೆ. ೧/೮, ಪು. ೧೨೪+೮, ರೂ. ೬೦/-

ಕೋಟಿ ಚೆನ್ನಯರು ನೀರೆ ಗಡಿಯಲ್ಲಿ ನೆಲೆಯಾದ ಬಗೆ, ಅನ್ಯ ಗರಡಿಗಳಿಗಿಂತ ವಿಶೇಷವಾಗಿರುವ ಈ ಗರಡಿಯ ಇತಿಹಾಸ, ಪೂಜಾಕ್ರಮ, ‘ನೀರೆ’ ಪದನಿಷ್ಪತ್ತಿ, ಅಲ್ಲಿ ನಡೆಯುವ ನೇಮೋತ್ಸವ, ಕಂಬಳ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವ ಲೇಖನಗಳಿವೆ. (ಬೇರೆ ಬೇರೆ ಲೇಖಕರ) ಹಾಗೂ ಗರಡಿಗಳು, ಅಲ್ಲಿನ ಮೂರ್ತಿಗಳು, ಹಾಗೆಯೇ ಕೆಲವು ಆಚರಣೆಗಳನ್ನು ಬಿಂಬಿಸುವ ಛಾಯಾಚಿತ್ರಗಳೂ ಇವೆ.

ಪೀಟರ್ ವಿಲ್ಸನ್ ಪ್ರಭಾಕರ್, ೨೦೦೦
ಸ್ವಾತಂತ್ರ್ಯ ಸಂಗ್ರಾಮ ೨೦೦ರ ನೆನಪು ವಿಟ್ಲದ ಕ್ರಾಂತಿ
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ
ಡೆ. ೧/೮, ಪು. ೮+೭೨, ರೂ. ೪೫/-

ವಿಟ್ಲದ ಡೊಂಬ ಹೆಗ್ಗಡೆ ಅರಸು ಮನೆತನ ಮತ್ತು ಅದರ ಸುತ್ತಲೂ ಹೆಣೆದಿರುವ ಘಟನೆಗಳನ್ನು ಪರಿಚಯಿಸುವಂಥ ಸಂಶೋಧನಾ ಕೃತಿ

ಪುಟ್ಟಸ್ವಾಮಿ ಡಿ.
ಕಾರ್ಕಳದ ಚರಿತ್ರೆ
ಕ್ರೌ. ೧/೮, ಪು. ೧೭ ಒಂದಾಣೆ ಮಾಲೆ, ಮಂಗಳೂರು.

ಕಾರ್ಕಳದ ಇತಿಹಾಸವನ್ನು ರಾಜವಂಶಗಳ ಮೂಲಕ, ಬಸದಿಗಳು, ದೇವಸ್ಥಾನಗಳ ಮೂಲಕ ನೀಡಲಾಗಿದೆ.

ಪುರುಷೋತ್ತಮ ಬಿಳಿಮಲೆ, ೧೯೯೪
ವೀರ ಮಹಿಳೆ ಅಬ್ಬಕ್ಕ
ಪು: ೨+೨೬, ರೂ. ೫/-

ರಾಣಿ ಅಬ್ಬಕ್ಕನ ಕುರಿತ ಲೇಖನಮಾಲೆ

ಬಾಬು ಎಂ., ೧೯೨೪
ಬಾರಕೂರಿನ ಗತ ವೈಭವ
ಕ್ರೌ ೧/೪, ಪು. ೪೮, ರೂ. ನಾಲ್ಕಾಣೆ

ಮಣಿಪಾಲ ಆರ್ಕೆ ಡಾ., ೧೯೮೯
ಹೆಸರಿನಲ್ಲೇನಿದೆ?
ನ್ಯಾಸ್ಟಾರ್ ಪಬ್ಲಿಕೇಷನ್, ಸಾರಕ್ಕಿ, ಬೆಂಗಳೂರು – ೫೬೦ ೦೭೮
ಕ್ರೌ ೧/೮, ಪು: ೪+೧೭೨, ರೂ. ೨೫/-

ತುಳುನಾಡಿನ ಸ್ಥಳನಾಮಗಳ ಕುರಿತ ಸ್ಥೂಲ ಮತ್ತು ಸೂಕ್ಷ್ಮ ನಾಮ ವೈಜ್ಞಾನಿಕ ಬರಹಗಳ ಸಂಕಲನ.

ರಮೇಶ್ ಕೆ.ವಿ. ಹಾಗೂ ಎಂ.ಜೆ. ಶರ್ಮ, ೧೯೮೫
ತುಳುನಾಡಿನ ಅರಸುಮನೆತನಗಳು ಮತ್ತು ಧರ್ಮಸಮನ್ವಯ (ಸಂಶೋಧನಾ
ಲೇಖನಗಳು)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಉಜಿರೆ
ಡೆ. ೧/೮, ಪು. ೧೧+೧೨೦, ರೂ. ೧೨/-

ತುಳುನಾಡನ್ನಾಳಿದ ಆಳುಪರು ಹಾಗೆಯೇ ತುಂಡರಸರಾದ ಭೈರರಸರು, ಸಾಳ್ವರು, ಚೌಟರು, ಬಂಗರು, ಅಜಿಲರ ಕುರಿತಂತೆ, ಅವರ ವಂಶಾವಳಿಯ ಕುರಿತಂತೆ ಮಾಹಿತಿ ನೀಡುವ ಲೇಖನಗಳಿವೆ.

ರಮೇಶ್ ಕೆ.ವಿ., ೧೯೬೮
ತುಳುನಾಡಿನ ಇತಿಹಾಸ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ (ಪರವಾಗಿ)
ಗೀತಾ ಬುಕ್ ಹೌಸ್, ಪು. ೧೪೨

ಪುರಾತನ ತುಳುನಾಡು, ಪ್ರಾಚೀನ ಆಳುಪರು, ಮಧ್ಯಯುಗೀನ ಆಳುಪರು, ವಿಜಯನಗರ ಕಾಲದ ತುಳುನಾಡು ಎಂಬ ೪ ಅಧ್ಯಯನಗಳ ಮೂಲಕ ತುಳುನಾಡಿನ ಇತಿಹಾಸವನ್ನು ಪರಿಶೀಲಿಸಲಾಗಿದೆ.

ಲೋಕನಾಥ ಶಾಸ್ತ್ರಿ ವೇ.ದಿ, ಸರಸ್ವತಿ ಭೂಷಣ, ೧೯೫೬ (ದ್ವಿ.ಮು)
ವೇಣೂರಿನ ಗತವೈಭವ
ಒಂದಾಣೆ ಮೂಲೆ ಮಂಗಳೂರು, ಕ್ರೌ. ೧/೮

ವೇಣೂರಿನ ಭೌಗೋಳಿಕ ವ್ಯಾಪ್ತಿ, ಸ್ಥಳ ಪುರಾಣ, ವೇಣೂರಿನಲ್ಲಿರುವ ಜೈನ ಬಸದಿಗಳು, ಅವುಗಳ ನಿರ್ಮಾಣ ಕಾಲ, ವೇಣೂರನ್ನಾಳಿದ ಅಜಿಲರಸರ ವಂಶದ ಸಂಕ್ಷಿಪ್ತ ಮಾಹಿತಿಗಳು ಈ ಕೃತಿಯಲ್ಲಿವೆ.

ವಸಂತ ಮಾಧವ ಕೆ. ಜಿ., ೧೯೯೮
ಅಬ್ಬಕ್ಕ ದೇವಿಯರು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆ. ೧/೮, ಪು. ೧೦+೭೦, ರೂ. ೨೫/-

ಈ ಗ್ರಂಥದಲ್ಲಿ ಲೇಖಕರು ತುಳುನಾಡಿನ ಇತಿಹಾಸದಲ್ಲಿ ನಾಲ್ವರು ಅಬ್ಬಕ್ಕರು ಇದ್ದುದನ್ನು ಗುರುತಿಸಿದ್ದಾರೆ. ಉಳ್ಳಾಲದಲ್ಲಿ ಆಳಿದ ಇಬ್ಬರು ವೀರರಾಣಿ ಅಬ್ಬಕ್ಕರು, ಇನ್ನಿಬ್ಬರು ಪುತ್ತಿಗೆಯಲ್ಲಿ ಇದ್ದ ಕಲಾಪೋಷಕರಾದ ಅಬ್ಬಕ್ಕರು. ಪರಾಕ್ರಮ, ಸ್ವಾಭಿಮಾನ, ಹೋರಾಟಗಳ ದೃಷ್ಟಿಯಿಂದ ವಿದೇಶೀ ಪ್ರವಾಸಿಗರು, ಐತಿಹ್ಯಗಳು ವರ್ಣಿಸುವ ಅಬ್ಬಕ್ಕರು ಆರಂಭದ ಇಬ್ಬರು ಅಬ್ಬಕ್ಕರು, ತಾಯಿ ಮತ್ತು ಮಗಳು ಛಲ ಮತ್ತು ಧೀಮಂತಿಕೆಯಿಂದ ಪೋರ್ಚುಗೀರಸರೊಡನೆ ಹೋರಾಡಿದ್ದನ್ನು, ರಾಜನೀತಿಜ್ಞೆಯನ್ನು ಮೆರೆದದ್ದನ್ನು ಸಂಶೋಧಕರು ಎಲ್ಲಾ ದಾಖಲೆಸಹಿತ ವಿವರಿಸಿದ್ದಾರೆ.

ವಸಂತ ಮಾಧವ, ೧೯೯೮
ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸ ಮತ್ತು ಅಧ್ಯಯನ
(ಲೇಖನಗಳ ಸಂಗ್ರಹ), ನಮ್ಮಿ ಅನಂತ ಮಂಗಳೂರು, ಕ್ರೌ ೧/೮, ಪು. ೨೦೦

ಕರಾವಳಿ ಕರ್ನಾಟಕದ ಇತಿಹಾಸದ ಸಮೀಕ್ಷೆ, ಕರವಾವಳಿ ಕರ್ನಾಟಕದ ಅಪರೂಪ ದಾಖಲೆಗಳು, ಶಾಸನಗಳು, ಕರ್ನಾಟಕ ಮತ್ತು ಕರವಾಳಿಯ ಅರಸು ಮನೆತನಗಳು ಹಾಗೂ ಕರಾವಳಿ ಕರ್ನಾಟಕದ ಅರಸು ಮನೆತನಗಳ ಸಂಶೋಧನಾತ್ಮಕ ಅಧ್ಯಯನ ಈ ಕೃತಿಯಲ್ಲಿದೆ.

ವಸಂತ ಶೆಟ್ಟಿ, ೧೯೮೮
ಬ್ರಹ್ಮಾವರದ ಇತಿಹಾಸ
ಅಜಪುರ ಕರ್ನಾಟಕ ಸಂಘ (ರಿ.) ಬ್ರಹ್ಮಾವರ
ಡೆ. ೧/೮, ಪು. ೮+೫೪, ರೂ. ೧೦/-

ಐತಿಹಾಸಿಕ ಘಟನೆಗಳನ್ನು ನಿರೂಪಿಸುವಲ್ಲಿ ಹೆಚ್ಚಾಗಿ ಶಾಸನಗಳನ್ನು ಇತಿಹಾಸ ಸಾಮಗ್ರಿಗಳನ್ನಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಹಲವಾರು ಶಾಸನಗಳನ್ನು ಪತ್ತೆಹಚ್ಚಿ ಅವುಗಳ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ. ಬ್ರಹ್ಮಾವರವು ಆಳುಪರಸರಿಂದ, ಬ್ರಿಟಿಷ್ ಆಡಳಿತದವರೆಗೆ ಯಾವ ರೀತಿಯಲ್ಲಿ ಪ್ರಗತಿ ಪಥದಲ್ಲಿ ಮುಂದುವರಿಯುತ್ತಾ ಬಂದಿದೆಯೆಂದು ವಿಶ್ಲೇಷಿಸಿ, ಬ್ರಹ್ಮಾವರ ಗ್ರಾಮಸಭೆಯ ಸ್ವರೂಪ ಇಲ್ಲಿನ ಮಹಾಜನ, ಬೆಣ್ಣೆ ಕುದುರಿನ ಸಂಕ ಧರ್ಮಶಾಸನ, ಬ್ರಹ್ಮಾವರದ ಭೂಕಂದಾಯ, ಮಟಪಾಡಿ ಗ್ರಾಮಸಭೆ, ಬ್ರಹ್ಮಾವರದಲ್ಲಿ ಆಡಳಿತ ಅತಿರೇಖಗಳು, ಇಲ್ಲಿನ ದೇವಾಲಯಗಳು ಮತ್ತು ಧಾರ್ಮಿಕ ಕಟ್ಟಳೆಗಳ ಚಿತ್ರಣವನ್ನು ನೀಡಲಾಗಿದೆ.

ವೆಂಕಟೇಶ ಜೋಯಿಸ್ ಕೆಳದಿ, ೨೦೦೦
ಕೆಳದಿ ಸಂಸ್ಥಾನ
ಶ್ರೀ ಸರಸ್ವತಿ ಸೇವಾ ಸಮಿತಿ ಕೆಳದಿ, ಕ್ರೌ ೧/೮, ಪು. ೬+೫೦, ರೂ. ೧೫/-

ಕೆಳದಿಯ ಇತಿಹಾಸ, ಕೆಳದಿಯನ್ನಾಳಿದ ಪ್ರಮುಖ ರಾಜರು, ಕೆಳದಿ ಕಾಲದ ರಾಜಕೀಯ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ, ಆಡಳಿತ, ಕೆಳದಿಯ ರಾಜಧಾನಿಗಳು, ದೇವಾಲಯಗಳು ಇತ್ಯಾದಿಗಳ ಕುರಿತು ಮಾಹಿತಿ ಮಾಡುವ ಕಿರು ಹೊತ್ತಿಗೆ.

ಶೀನಪ್ಪ ಹೆಗ್ಡೆ ನಂದೊಳ್ಗೆ ಅಮುಣಿಂಜೆ ಗುತ್ತು, ೧೯೮೧ (೧೯೧೯)
ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ
ಪು. ೨೦+೧೭೧, ರೂ. ೮/-

ಶಾಸನಗಳಂಥ ಐತಿಹಾಸಿಕ ಸಾಮಗ್ರಿಗಳನ್ನು ಗ್ರಾಮ ಪದ್ಧತಿ, ಪಾಡ್ದನ, ಸ್ಥಳ ಪುರಾಣ ಮುಂತಾದ ಅನೈತಿಹಾಸಿಕ ಪುರಾವೆಗಳನ್ನು ಬಳಸಿ ಜಿಲ್ಲೆಯ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಸ್ಥಳನಾಮಗಳ ಬಗೆಗೂ ಮಾಹಿತಿಗಳು ದೊರೆಯುತ್ತವೆ. ಭೂತಾಳ ಪಾಂಡ್ಯರಾಯನು ಜಾರಿಗೆ ತಂದನೆಂಬ ಐತಿಹ್ಯದ ಕಟ್ಟು ಕಟ್ಟಳೆಗಳೂ ತುಳುನಾಡಿನ ಜನಜೀವನದ ಮೇಲೆ ಬೆಳಕು ಚೆಲ್ಲುತ್ತದೆ.

ಶೀನಪ್ಪ ಹೆಗ್ಡೆ, ೧೯೪೯
ಪುಳಿನಾಪುರ ಮಹಾತ್ಮ್ಯೆ
ಕ್ರೌ ೧/೮, ಪು. ೨೮+೫೬, ರೂ. ೨-೮-೦

ಒಂದನೇ ಭಾಗವಾದ ‘ಸ್ಥಳಪುರಾಣ ಸಾರ’ ವನ್ನು ಕದಂಬ ಪುರಾಣದಿಂದಲೂ, ದೇವಿ ಭಾಗವತದಿಂದಲೂ ಸಂಗ್ರಹಿಸಿರುವರು. ಎರಡನೇ ಭಾಗವಾದ ‘ಮಹಿಮಾಸಾರ’ವನ್ನು ಸ್ಕಾಂದ ಪುರಾಣದಿಂದಲೂ, ಬ್ರಹ್ಮಾಂಡ ಪುರಾಣದಿಂದಲೂ ಸಂಗ್ರಹಿಸಿರುವರು. ಮೂರನೇ ಭಾಗವಾದ ‘ಚರಿತ್ರಸಾರ’ದಲ್ಲಿ ಪೊಳಲಿಯು ಮಹಾರಾಜ ಅಶೋಕನ ಕಾಲದಲ್ಲಿ, ಮತಾಚಾರ್ಯರಾದ ಶಂಕರ ಮಧ್ವರ ಕಾಲದಲ್ಲಿ ಹೇಗಿತ್ತು. ಆಮೇಲೆ ಯಾವ ರಾಜರ ಆಳ್ವಿಕೆಗೆ ಒಳಪಟ್ಟಿತು. ಇಲ್ಲಿನ ಪ್ರಾಣಿಬಲಿ ನಿಂತು ಹೋಗಲು ಕಾರಣವೇನು, ಐದು ದಿನಗಳ ಚೆಂಡಾಟ ನಡೆಯಲು ಕಾರಣವೇನೆಂಬುದನ್ನು ಶಿಲಾಶಾಸನಗಳ ಆಧಾರದಿಂದ, ಮೌಖಿಕ ಕತೆಗಳಿಂದ ಸಂಗ್ರಹಿಸಿ ನೀಡಲಾಗಿದೆ.

ಸೂರ್ಯನಾಥ ಕಾಮತ್, ೧೯೭೫
ತುಳುನಾಡಿನ ಧಾರ್ಮಿಕ ಪರಂಪರೆ
ಪ್ರಕಾಶಕರು : ಅಧ್ಯಕ್ಷರು, ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ಉಪನ್ಯಾಸ ಮಾಲೆ
ಸಮಿತಿ ಉಜಿರೆ, ಪು. ೨೪, ರೂ. ೧/-

ತುಳುನಾಡಿನ ಪ್ರಮುಖ ಆರಾಧನೆಗಳೊಂದಿಗೆ ಇಲ್ಲಿನ ಪ್ರಮುಖ ಪಂಥ ಮತ ಧರ್ಮಗಳ ಅಧ್ಯನವಿದೆ.

ಸ್ವಾಮಿ ಬಿ. ಎಸ್., ೧೯೯೮
ತುಳುನಾಡ ಐಸಿರಿ
ಡೆ. ೧/೮, ಪು. ೧೨+೨೪೮, ರೂ. ೧೨೦/-

ತುಳುನಾಡಿನ ವಿವಿಧ ಐತಿಹಾಸಿಕ ಧಾರ್ಮಿಕ ಸ್ಥಳಗಳ ಪರಿಚಯ ನೀಡುವ ಕೃತಿ, ಇಲ್ಲಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಅವಲೋಕನವೂ ಇದೆ.

ಭೂತಾಳ ಪಾಂಡ್ಯನ ಕಟ್ಟುಕಟ್ಟಳೆಗಳು ೧೯೫೭
ಭಾಸ್ಕರ ರೈ. ಬಿ.ಎಸ್ ಎಡ್ವೊಕೇಟ್ಸ್, ಹಂಪನಕಟ್ಟೆ, ರೂ. ೩ ಆಣೆ
ಭೂತಾಳ ಪಾಂಡ್ಯನ ಕಟ್ಟುಕಟ್ಟಳೆಗಳು ಭೂತಾಳ ಪಾಂಡ್ಯ, ಕಟ್ಟುಗಳ
ವಿವರ, ೧೬ ಕಟ್ಟಳೆಗಳ ವಿವರ, ಅಳಿಯ ಸಂತಾನದ ಬಳಿಗಳ ವಿವರಗಳನ್ನು ಹಳೆಗನ್ನಡದಲ್ಲಿ ಬರೆಯಲಾಗಿದೆ.

ಭಾರದ್ವಾಜ ಸಂಹಿತೆ -ಮಹಾಗ್ರಂಥಗಳು ೧೯೯೨
ಕ್ರೌ ೧/೮, ಪು. ೮+೫೨, ರೂ. ಉಚಿತ

ತುಳುನಾಡಿನ ಐತಿಹಾಸಿಕ ಮಹತ್ವದ ಕುರಿತು ಲೇಖನ ಸಂಕಲನ.

ಬ್ರಹ್ಮ ಮತ್ತು ಶಿವಭಕ್ತರು ಯಾವಾಗಲೂ ವಿಷ್ಣುವಿನಿಂದ ಹತರಾಗುವುದೇಕೆ?
೧೯೯೪, ಕ್ರೌ ೧/೮, ಪು. ೫೦/-, ರೂ. ೧೦/-

ಆರ್ಯದ್ರಾವಿಡರ ಸಂಬಂಧ, ಸಂಘರ್ಷ, ಭಾರತದ ಜಾತಿ ಪದ್ಧತಿ ವ್ಯವಸ್ಥೆ ಕುರಿತು ಸೂಕ್ಷ್ಮವಾಗಿ ಚರ್ಚಿಸಿರುವ ಕಿರುಕೃತಿ.

ದಕ್ಷಿಣ ಕನ್ನಡ ಜಿಲ್ಲಾ ಜೈನತೀರ್ಥ ಕ್ಷೇತ್ರ ವೇಣೂರಿನ ಇತಿಹಾಸ ಮತ್ತು ೧೯೫೬ರಲ್ಲಿ ಜರುಗಿದ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ವರದಿ
ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ, ವೇಣೂರು, ಕ್ರೌ. ೧/೮

ವೇಣೂರಿನ ಇತಿಹಾಸ, ಅಲ್ಲಿನ ಜೈನಬಸದಿಗಳು, ವೇಣೂರಿನ ಅಜಿಲರಸರ ವಂಶದ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಹಿತಿಗಳಿವೆ.

ಇಂಗ್ಲಿಷ್

Pius FIdelis Pinto, 1999
History Christians in Coastal Karnataka (1500-1763 A.D.)
Samanvaya (R) Kadri,  Mangalore
D 1/8, Pages: 7+330, Rs. 275/-

ವಿಜಯನಗರ ಸಾಮ್ರಾಜ್ಯ ಹಾಗೂ ಕೆಳದಿ ಸಾಮ್ರಾಜ್ಯದ ರಾಜಕೀಯ ಮತ್ತು ಆರ್ಥಿಕ ಇತಿಹಾಸದ ಹಿನ್ನೆಲೆಯನ್ನು ಅಧ್ಯಯನ ಮಾಡಲಾಗಿದೆ. ಈ ಪ್ರದೇಶಕ್ಕೆ ಕ್ರೈಸ್ತ ಧರ್ಮದ ಆಗಮನದ ಪೂರ್ಣ ಇತಿಹಾಸವನ್ನು ಸಂಶೋಧಕರು ನೀಡಲೆತ್ನಿಸಿದ್ದಾರೆ. ಕೆಲವೊಂದು ಮುಖ್ಯವಾದ ಮೌಲ್ಯಗಳು, ಭೂವಿವರಗಳಂತಹ ಸಮಾಜೋಸಾಂಸ್ಕೃತಿಕ ಪರಿವರ್ತನೆ ಈ ಪ್ರದೇಶದ ಸ್ಥಳೀಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ವಿಸ್ತೃತ ಅಧ್ಯಯನವನ್ನು ಕೈಗೊಳ್ಳಲಾಗಿದೆ.

Ramesh K.V., 1970
A History of South Kanara
D 1/8, P: 340, Rs. 30/-

ವಿಜಯನಗರ ಕಥನದವರೆಗಿನ ದ.ಕ. ಜಿಲ್ಲೆಯ ಚಾರಿತ್ರಿಕ ಅಧ್ಯಯನ ಕೃತಿ.

Saletore B.A., 1936
Ancient Karnataka Vol History of Tuluva
C. 1/4, P: 11+659, Rs. 7-8-0

ಐತಿಹ್ಯಗಳು ಮೂಲಕ ತುಳುವರ ಹಿನ್ನೆಲೆ, ಆಳುಪರ ಕೌಟುಂಬಿಕ ಹಾಗೂ ವಿದೇಶೀ ಸಂಬಂಧ, ತುಳುವರ ಗ್ರಾಮ ಪದ್ಧತಿ ಧರ್ಮ, ಪಾಡ್ದನಗಳ ಸಹಾಯದಿಂದ ಚಿತ್ರಿತವಾದ ತುಳುವರ ಜೀವನಕ್ರಮ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲಾಗಿದೆ.

Yasantha Madhava K.G.
Trends in Karnataka Historical Research (ಸಂಶೋಧನಾ ಲೇಖನಗಳ ಸಂಗ್ರಹ) ೧೯೯೬, D 1/8, Rs. 185/-

ಈ ಕೃತಿಯಲ್ಲಿನ ಪ್ರತೀ ಭಾಗವೂ ಕೂಡ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಸಂಶೋಧನೆಯ ಹೊಸ ಒಲವುಗಳನ್ನು ವ್ಯಕ್ತಪಡಿಸುತ್ತದೆ. ಹೊಸ ಪರಿಕಲ್ಪನೆಗಳನ್ನು ಶಾಸನಗಳನ್ನು, ಸ್ಮಾರಕಗಳನ್ನು ಅಪರೂಪದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಪರಿಚಯಿಸುತ್ತದೆ. ಉದಾ: ಸಾಮಾಜಿಕ ಆರ್ಥಿಕ, ರಾಜಕೀಯ, ರಚನೆಗಳು, ಅರಬ್ಬರ ಸಮುದ್ರ ವ್ಯಾಪಾರ, ಸಣ್ಣ ಬಂದರುಗಳು, ಶೈಕ್ಷಣಿಕ ಪದ್ಧತಿಯನ್ನೊಳಗೊಂಡ ಸಾಮಾಜಿಕ ರಚನೆ. ಹೀಗೆ ಕರ್ನಾಟಕದ ಇತಿಹಾಸದ ಸಂಶೋಧನಾತ್ಮಕ ಅಧ್ಯಯನವನ್ನು ಕಾಣಬಹುದು.