ಮಲಯಾಳ

ರಾಘವನ್ ಸಿ., ೨೦೦೩
ತುಳುನಾಡುಂ ಭಾಷಯುಂ ನಾಟ್ಟರಿವುಂ
State Institute of languages Thiruvananthapuram, Kerala – 3
ಪು. ೩೭೮+೧೬, ರೂ. ೧೧೫/-

ತುಳು ಭಾಷೆ, ಸಾಹಿತ್ಯ – ಸಂಸ್ಕೃತಿಯ ಅಧ್ಯಯನ ಈ ಕೃತಿಯಲ್ಲಿದೆ.

ಇಂಗ್ಲಿಷ್

Burnell A.C.
The Devil Worship of the Tuluvas

ಈ ಸಂಶೋಧನಾ ಪ್ರಬಂಧಗಳ ಮಾಲಿಕೆಯಲ್ಲಿ ೨೬ ಭೂತಗಳ ಪಾಡ್ದನಗಳನ್ನು ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಆರಾಧನೆಯ ಹಿನ್ನೆಲೆಯಿಂದ ಈ ಕೃತಿಯ ಪ್ರಾರಂಭದ ಅಧ್ಯಾಯಗಳು ಮುಖ್ಯವಾಗುತ್ತವೆ.

Gururaj Bhat P., 1975
Studies in Tuluva History any Culture (ಅಧ್ಯಯನ ಗ್ರಂಥ)
ಲೇಖಕರಿಂದ ಪ್ರಕಾಶಿತ c. ೧/೪, Foreign Edition – 100 dollars

ಐತಿಹಾಸಿಕ ನೋಟದ ಮೂಲಕ ಈ ಪ್ರದೇಶದ (ತುಳುನಾಡಿನ) ಪುನರ್ರಚನೆ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ತುಳುವರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಇತಿಹಾಸ ಪೂರ್ವ ಕಾಲದಿಂದ ಆಧುನಿಕ ಕಾಲದವರೆಗಿನ ಅಧ್ಯಯನ ಈ ಗ್ರಂಥದಲ್ಲಿದೆ ಹಾಗೂ ಅನೇಕ ಪೂರಕ ಛಾಯಾಚಿತ್ರಗಳೂ ಇವೆ.

Gururaja Bhat P., 1969
Antiquities of-South Kanara
Rs. 50/-

ದ.ಕ.ದ ಐತಿಹಾಸಿಕ ಸ್ಥಳಗಳನ್ನು ತಿಳಿಸುವ ಕೈಪಿಡಿ. ಜಿಲ್ಲೆಯ ಪ್ರಾಕೃತಿಕ ತಾಣಗಳು ಹಾಗೂ ಮಾನವ ನಿರ್ಮಿತ ಸ್ಮಾರಕಗಳ ಪರಿಚಯವನ್ನು ನೀಡುತ್ತದೆ ಮತ್ತು ಅವುಗಳಿಗೆ ಸಂಬಂಧಿಸಿದಂಥ ಭಾವಚಿತ್ರಗಳೂ ಇಲ್ಲಿದೆ.

Heidrun Bruckner Lothar Lutze & Adity Malik (Ed.), 1993
Flags of Fame
Publisher & Distributors : Ajay Kumar Jain Manohar 2/6
Ansari Road, Daryaganj, Rs. 500/-

ಈ ಕೃತಿಯಲ್ಲಿ ಬೇರೆ ಬೇರೆ ಜಾನಪದ ವಿದ್ವಾಂಸರು ಬರೆದ ೧೫ ಲೇಖನಗಳಿವೆ. ಒಟ್ಟಾಗಿ ಇಲ್ಲಿನ ಲೇಖನಗಳು ದ. ಏಷ್ಯಾದ ಜಾನಪದ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತವೆ. ಇಲ್ಲಿನ ಲೇಖನಗಳಲ್ಲಿ ೨ ವಿಭಾಗಗಳಿವೆ. ೧. Devine Performance -ಮುಖ್ಯವಾಗಿ ಪ್ರದರ್ಶನಾತ್ಮಕ ಆಚರಣೆಯನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ೨. Textual Networks ಬಹುವಾಗಿ ಮೌಖಿಕ ಕಾವ್ಯ ಪ್ರಕಾರಗಳು, ಹಬ್ಬ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಲೇಖನಗಳು ಇವೆ.

Lawrance D’Souza S.J.
Koragas A Premitive Tribe of South India

Unesco Co-Action Learning Centre Mangalore D 1/8 P : 10+133

ಕೊರಗ ಜನಾಂಗದ ಅಧ್ಯಯನ ಈ ಕೃತಿಯಲ್ಲಿದೆ. ಉದಾ: ಅವರ ಮನೆಗಳು, ದಿನನಿತ್ಯದ ಕೆಲಸಗಳು, ನಂಬಿಕೆ, ಆಚರಣೆ, ಜೀವನ ಪದ್ಧತಿ ಇತ್ಯಾದಿಗಳ ಅಧ್ಯಯನವಿದೆ. ಹಾಗೂ ಅನೇಕ ದೇವಸ್ಥಾನ ಹಾಗೂ ದೈವಸ್ಥಾನಗಳ ಛಾಯಾಚಿತ್ರವೂ ಇದೆ.

Padmanabha P., 1971
Census of India
Special Study Report on Bhuta Cult in South Kanara District.

ದ.ಕ.ದ ಇತಿಹಾಸ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಲಕ್ಷಣಗಳ ಬಗ್ಗೆ ವಿವರ ನೀಡಿ ‘ಭೂತ’ ಪದದ ವ್ಯಾಖ್ಯೆ, ವರ್ಗೀಕರಣ, ಭೂತಸ್ಥಾನಗಳ ಬಗ್ಗೆ, ಭೂತಾರಾಧನೆಯ ವಿವಿಧ ಪ್ರಕಾರಗಳು (ಮೆಚ್ಚಿ, ಆಯನ, ಒತ್ತೆಕೋಲ) ವಾರ್ಷಿಕ ಉತ್ಸವಗಳು (ಉದಾ: ಜುಮಾದಿ, ಕವತ್ತಾರು, ಬೆಣ್ಣೆ ಕುದ್ರು, ಸುರತ್ಕಲ್ ಮುಂತಾದ ಕಡೆಗಳ) ಜುಮಾದಿ, ಮಲಾರ್, ಪಂಜುರ್ಲಿಯ ಪಾಡ್ದನಗಳು, ಬೊಬ್ಬರ್ಯ, ಕಲ್ಕುಡ – ಕಲ್ಲುರ್ಟಿ, ಕೋಟಿ ಚೆನ್ನಯ, ಪಂಜುರ್ಲಿ ಮುಂತಾದ ಭೂತಗಳ ಕಥೆಗಳನ್ನು ನೀಡಲಾಗಿದೆ. ಹಾಗೂ ಪೂರಕವಾಗಿ ಛಾಯಾಚಿತ್ರಗಳನ್ನೂ ನೀಡಲಾಗಿದೆ.

Peter J. Claus and Frank J. Korom, 1991
Folkloristics and Indian Folklore
Regional Resources Centre for Folk Performing Arts
D. 1/8, Rs. 120/- (hard bound) Rs. 80/- (Soft bound)

ಭಾರತೀಯ ಜಾನಪದ ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕ, ಆಧುನಿಕ ತತ್ವ ಸಿದ್ಧಾಂತಗಳ ಮೂಲಕ ಈ ಕೃತಿಯನ್ನು ರಚಿಸಲಾಗಿದೆ.

Rao Saheb P.R. Ranganatha Poonja, 1948
India’s Legacy The World’s Heritage Dravidian Vol. I
Basel Mission Book Depot, Mangalore

ಶಿಲಾಯುಗದ ಮಾನವನ ಇತಿಹಾಸದಿಂದ ತೊಡಗಿ ಮಲೆಕುಡಿಯ, ಕುಡುಬಿ, ಇರುಳ ಇತ್ಯಾದಿ ಬುಡಕಟ್ಟು ಜನಾಂಗಗಳ ಮಾಹಿತಿಗಳಿವೆ. ದ್ರಾವಿಡ ಸಂಸ್ಕೃತಿಯ ಕುರಿತಂತೆಯೂ ಮಾಹಿತಿಗಳಿವೆ. ಹಾಗೆಯೇ ಪಂಚ ದ್ರಾವಿಡ ಸಂಸ್ಕೃತಿಯ ಕುರಿತಂತೆಯೂ ಮಾಹಿತಿಗಳಿವೆ. ಹಾಗೆಯೇ ಪಂಚ ದ್ರಾವಿಡ ಭಾಷೆಗಳಾದ ತಮಿಳು, ತೆಲಗು, ಮಲಯಾಳಂ, ಕನ್ನಡ ಮತ್ತು ತುಳುವಿನ ಕುರಿತೂ ಮಾಹಿತಿಗಳಿವೆ.

Ravindranath Rao Y., 2003
Tribal Tradition and Change : A Study of Kudubis South
India (ಪರಿಷ್ಕೃತ ಪಿ.ಎಚ್‌ಡಿ. ಗ್ರಂಥ)
Mangala Publicantions, Mangalore & Bangalore
D. 1/8, Pages : 8+263, Rs. 380/-

ದ.ಕ.ದ ಕುಡುಬಿಯರ ಸಮಾಜ, ಸಂಸ್ಕೃತಿ, ಕುಟುಂಬ, ವಿವಾಹ, ಧಾರ್ಮಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುವ ಸಂಶೋಧನ ಗ್ರಂಥ ಇದಾಗಿದೆ.

Robert Caldwell Rev., 1875
A Comparative Grammar of The Dravidian or South Indian
Family of Languages Second Edition Revisied & Enlarges,
London : Trubner & Co. Ludgate Hill.

ದ್ರಾವಿಡ ಭಾಷೆಗಳ ವ್ಯಾಕರಣದ ಕುರಿತ ತುಲನಾತ್ಮಕ ಅಧ್ಯಯನ ಗ್ರಂಥ. ಉದಾ: ತೆಲುಗು, ಮಲಯಾಳಂ, ತುಳು, ಕೊಡವ, ತೊದ, ಕೋತ ಇತ್ಯಾದಿ ಭಾಷೆಗಳಿಗೆ ಸಂಬಂಧಿಸಿದಂತೆ.

Shyam Bhat N., 1998
South Kanara
Mittal Publications, New Delhi, D. 1/8

ಈ ಪ್ರದೇಶದ ಶಿಕ್ಷಣ, ಉದ್ಯಮ, ಕೈಗಾರಿಕೆ, ಸಂಸ್ಕೃತಿ, ಕಟ್ಟುಪಾಡುಗಳ ಕುರಿತ ಅಧ್ಯಯನವನ್ನು ಮಾಡುವ ಕೃತಿ.

Surendra Rao B.K. Chinnappa Gowda (Ed), 2003
The Retrieved Acre
Mangalore University Mangalagangothri
D. 1/8, P. 192, Rs. 150/-

೧೨ ಸಂಶೋಧನಾ ಲೇಖನಗಳಿದ್ದು ಅವೆಲ್ಲವೂ ತುಳುವರ ಬೇರೆ ಬೇರೆ ಸ್ವಭಾವ-ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತವೆ. ಕೆಲವು ಬುಡಕಟ್ಟು ಜನಾಂಗಗಳಾದ ಕೊರಗರು, ಮಲೆಕುಡಿಯರ ಬಗೆಗಿನ ಮಾನವಶಾಸ್ತ್ರೀಯ ಅಧ್ಯಯನ, ವಸಾಹತು ಪೂರ್ವ ಮತ್ತು ವಸಾಹತಿಗೆ ಸಂಬಂಧಿಸಿದ ಆರ್ಥಿಕ ಮತ್ತು ಸಾಮಾಜಿಕ ರಚನೆಗಳ ಐತಿಹಾಸಿಕ ಅಧ್ಯಯನ, ತುಳುನಾಡಿನ ಬಗ್ಗೆ ವಸಾಹತುವಿಗಿದ್ದ ಜ್ಞಾನದ ಮೌಲ್ಯಮಾಪನ ತುಳು ಜಾನಪದ ಆಚರಣೆಗಳು ಮತ್ತು ಪ್ರದರ್ಶನಗಳಿಗೆ ಸಂಬಂಧಿಸಿದ ಜಾನಪದೀಯ ಮತ್ತು ಸಂರಚನಾ ವಿಶ್ಲೇಷಣೆ ಮತ್ತು ಪ್ರಸ್ತುತ ವಿದ್ಯಮಾನಗಳ ರಾಜಕೀಯ ವಿಶ್ಲೇಷಣೆಗಳು ಈ ಕೃತಿಯ ಲೇಖನಗಳಲ್ಲಿವೆ. (ಬೇರೆ ಬೇರೆ ಲೇಖಕರು ಬರೆದಿದ್ದಾರೆ)

Sturrock J. (Compiled by), 1894
Madras District Manuals South Canara Vol. I
Madras Printed by Superintendent Government Press, D. 1/8

ದ.ಕ. ಜಿಲ್ಲೆಯ ಭೌಗೋಳಿಕತೆ, ಇತಿಹಾಸ, ಆಡಳಿತ ಇಲ್ಲಿನ ವಿವಿಧ ಜಾತಿಗಳು, ಕೃಷಿ ಇತ್ಯಾದಿಗಳ ಕುರಿತಂತೆ ಮಾಹಿತಿ ನೀಡುವ ಕೃತಿ.

Upadhyaya U.P. / Susheela P. Upadhyaya, 1984
Bhuta Worship Aspects of Ritualistric Theatre
R.R.C. Udupi, D. 1/4, P. 10+64+ illustrate 16 pages, Rs. 35/-

ಒಂದನೇ ಭಾಗವು ಸಾಮಾನ್ಯ ಪರಿಚಯವನ್ನು ನೀಡುವಂಥ ಉದಾ: ಭೂತಾರಾಧನೆಯ ಹುಟ್ಟು ಇತಿಹಾಸ, ಅದರ ಆಚರಣೆಗಳು, ಸಾಮಾಜಿಕ ಮಹತ್ವ, ಇತ್ಯಾದಿಗಳನ್ನು ಚರ್ಚಿಸುತ್ತದೆ. ೨ನೇ ಭಾಗವು ಭೂತಾರಾಧನೆಯ ಕುರಿತು ಕೆಲವೊಂದು ಮಹತ್ವದ ವಿವರಗಳನ್ನು ನೀಡಿ, ಭೂತಾರಾಧನೆಗೆ ಸಂಬಂಧಿಸಿದ ಪಾಡ್ದನಗಳನ್ನು ತುಳು ಹಾಗೂ ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಕೊನೆಯ ಅನುಬಂಧದಲ್ಲಿ ಕೆಲವೊಂದು ಮುಖ್ಯವಾದ ದೈವಗಳ ಹುಟ್ಟು ಅವುಗಳ ವಿಶಿಷ್ಟ ಲಕ್ಷಣಗಳ (ಆರಾಧನೆಯಲ್ಲಿ ವ್ಯಕ್ತವಾಗುವಂತೆ) ಬಗ್ಗೆ ವಿವರ ನೀಡಲಾಗಿದೆ ಭೂತಾರಾಧನೆಗೆ ಸಂಬಂಧಿಸಿದಂತೆ ಛಾಯಾಚಿತ್ರಗಳನ್ನು ನೀಡಲಾಗಿದೆ.

Upadhyaya U.P. (Edit), 1996
Coastal Karnataka (ವಿಚಾರಗೋಷ್ಠಿಯ ಪ್ರಬಂಧಗಳು)
Rastrakavi Govinda Pai Research Centre, Udupi)
D 1/8, P. 18+330, Rs. 180/-

೨ ಭಾಗಗಳಲ್ಲಿ ಒಟ್ಟು ೨೨ ಪ್ರಬಂಧಗಳಿವೆ. ಒಂದನೇ ಭಾಗದಲ್ಲಿನ ೬ ಪ್ರಬಂಧಗಳು ಈ ಪ್ರದೇಶದಲ್ಲಿನ ಭಾಷೆಗಳಿಗೆ ಸಂಬಂಧಿಸಿವೆ. ೨ನೇ ಭಾಗದಲ್ಲಿರುವ ೧೬ ಪ್ರಬಂಧಗಳು ಜಾನಪದ ಆಚರಣೆ – ಕಲೆಗಳ ವಿವಿಧ ಪ್ರಕಾರಗಳನ್ನೊಳಗೊಂಡಿದೆ. ಉದಾ: ಜಾನಪದ ಸಂಗೀತ, ಭೂತಾರಾಧನೆ, ಭೂತಾರಾಧನೆಯ ಪ್ರಭೇದವಾದ ಜಾಲಾಟ, ಢಕ್ಕೆ ಬಲಿ, ನಾಗಮಂಡಲ, ಸಿದ್ಧವೇಷ ಇತ್ಯಾದಿಗಳಿಗೆ ಸಂಬಂಧಿಸಿದಂತೆ ವಿವಿಧ ವಿದ್ವಾಂಸರ ಪ್ರಬಂಧಗಳಿವೆ.

Upadhyaya U.P.Dr. (Edit),1986
Folk Epics of Tulunad (ವಿಚಾರಗೋಷ್ಠಿಯ ಪ್ರಬಂಧ ಸಂಗ್ರಹ)
Regional Research Centre for Folk Performing Arts, Udupi
C. 1/4, P.8+59, Rs. 15/-

Structure of Tulu Paddanas (ತುಳು ಪಾಡ್ದನಗಳ ಸಂರಚನೆ)- ಡಾ.ಯು.ಪಿ. ಉಪಾಧ್ಯಾಯ ಮತ್ತು ಶ್ರೀಮತಿ ಉಪಾಧ್ಯಾಯ (P. 1-8) Paddanas as folk epics (ಜನಪದ ಮಹಾಕಾವ್ಯಗಳಾಗಿ ಪಾಡ್ದನಗಳು)- ಬಿ.ಎ. ವಿವೇಕ ರೈ (೯-೧೩) Folk poem as epic (ಮಹಾಕಾವ್ಯವಾಗಿ ಜನಪದ ಹಾಡು) – ಡಾ. ಬಿ. ದಾಮೋದರ ರಾವ್ (೧೪-೨೩) Women in Paddanas (ಪಾಡ್ದನಗಳಲ್ಲಿ ಸ್ತ್ರೀಯರು)- ಶ್ರೀಮತಿ ಬಿ. ಲೀಲಾ ಭಟ್ (೨೪-೩೪) The Kalevala (ಕಲೇವಾಲ)- ಕೆ.ವಿ. ರಮೇಶ್ (೩೫-೩೮) ಹೀಗೆ ತುಳು ಜನಪದ ಮಹಾಕಾವ್ಯ ಹಾಗೂ ಫಿನ್ನಿಶ್ ಮಹಾಕಾವ್ಯದ ಕುರಿತು ಚಿಂತನೆ ನಡೆಸಿರುವುದನ್ನು ಈ ಪ್ರಬಂಧಗಳಲ್ಲಿ ಕಾಣಬಹುದು.

Valentina Stache – Rosen, 1978
Bhutas and Teyyams An Exhitition prepared by Max Muller
Bhavan Bangalore Texts & Photographs

ದ.ಕ.ದಲ್ಲಿ ಆರಾಧಿಸಲಾಗುವ ‘ಭೂತ/ದೈವ’ ಮತ್ತು ದಕ್ಷಿಣ ಹಾಗೂ ಉತ್ತರ ಮಲಬಾರಿನ ಮಲಯಾಳಿ ಮಾತೃಭಾಷೆಯವರು ಆರಾಧಿಸುವ ‘ತೆಯ್ಯಂ’ನ ಅಧ್ಯಯನ ಈ ಕೃತಿಯಲ್ಲಿದೆ. ಹಾಗೆಯೇ ವಿವಿಧ ಭೂತ ಹಾಗೂ ತೆಯ್ಯಂ ಕಲಾವಿದರು, ಮುಖವಾಡ, ವಿವಿಧ ಆಚರಣೆಗಳನ್ನು ಬಿಂಬಿಸುವ ಚಿತ್ರಗಳೂ ಇವೆ.

Vasantha Madhava K.G., 1995
Religions in Coastal Karnataka 1500-1763
Inter Media Publication

ಕರಾವಳಿ ಕರ್ನಾಟಕದ ವಿವಿಧ ಧರ್ಮಗಳಾದ ಹಿಂದೂ, ಜೈನ, ಇಸ್ಲಾಂ, ಕ್ರೈಸ್ತ ಧರ್ಮಗಳ ಬಗ್ಗೆ ಚರ್ಚೆ ಹಾಗೂ ಧಾರ್ಮಿಕ ಆಚರಣೆಗಳ ಕುರಿತ ಚರ್ಚೆಯನ್ನು ಶಾಸನ, ಲಿಖಿತ ಮಾಧ್ಯಮಗಳು, ವಿದೇಶೀ ಮೂಲಗಳ ಮುಖಾಂತರ ಮಾಡಲಾಗಿದೆ.

Vasudevan C., 1998
Koragas
D. 1/8, P. 31+222+8, Rs. 395/-

ಕೊರಗ ಜನಾಂಗದ ಬಗ್ಗೆ ಅಧ್ಯಯನ ಗ್ರಂಥ.

William Pais Vincent Mendonca, 2000
TheLand Called South Kanara
Imageflex Publishers, Mangalore, Rs. 2295/-

ಇಡೀ ದ.ಕ. ಜಿಲ್ಲೆಯ ಇತಿಹಾಸ, ಇಲ್ಲಿನ ಜನಪದ ಕಲೆ – ಯಕ್ಷಗಾನ, ಆರಾಧನೆಗಳಾದ ಭೂತಾರಾಧನೆ, ನಾಗಾರಾಧನೆ, ಕ್ರೀಡೆಗಳಾದ ಕಂಬಳ, ಕೋಳಿ ಅಂಕ, ಹಬ್ಬಗಳು, ಇಲ್ಲಿನ ಬುಡಕಟ್ಟು ಜನಾಂಗಗಳು, ಹಾಗೆಯೇ ದೇವಾಲಯಗಳು, ವಾಸ್ತುಶಿಲ್ಪ, ವಿವಿಧ ಜಾತಿಯ ಜನರು, ಸ್ಥಳಗಳು, ಮನೆಗಳ ರಚನೆ ಇತ್ಯಾದಿಗಳ ಕುರಿತಂತೆ ಛಾಯಾಚಿತ್ರಗಳ ಸಮೇತ ಮಾಹಿತಿ ನೀಡಲಾಗಿದೆ.

Willie R. de Silva, 1985
From RTA to Dharma (ಪ್ರೌಢಪ್ರಬಂಧ)
Pragati Prakashana, Kanara, D. 1/8, Rs. 200/-

‘Janapada’ ವಿಭಾಗದಲ್ಲಿ ಮಲೆಕುಡಿಯ, ಸಿದ್ಧಿ, ಕೊರಗ, ಮೊಗೇರ ಅಥವಾ ಖಾರ್ವಿ ಜನಾಂಗದ ಅಧ್ಯನವಿದೆ. ‘Cult of Bhuta’ ವಿಭಾಗದಲ್ಲಿ ಭೂತಾರಾಧನೆಯ ಸಂರಚನೆ, ಸಂಸ್ಕೃತಿಯ ಕುರಿತಂತೆ ಹಾಗೂ ಕೋಟಿ ಚೆನ್ನಯ, ಅಬ್ಬಗೆ, ಕಲ್ಕುಡ – ಕಲ್ಲುರ್ಟಿ ಭೂತಗಳ ಕುರಿತಂತೆ ಇರುವ ದಂತಕಥೆಯನ್ನು ಹೇಳಲಾಗಿದೆ.

ಓರ್ವ ತುಳುವ, ೧೯೯೬
Tuluva a Miniature India (ಲೇಖನಗಳ ಸಂಗ್ರಹ)
C. 1/8, P. 176

ಓರ್ವ ತುಳುವಿನಿಂದ ರಚಿತ ತುಳುವರ ವಿದೇಶಗಳೊಂದಿಗೆ ಸಂಪರ್ಕ, ತುಳುವರ ಇತಿಹಾಸ, ತುಳುವರ ಮೇಲಿನ ನಂದರ ಹಾಗೂ ಮೌರ್ಯರ ಆಳ್ವಿಕೆ, ತುಳುವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ಮಾರಕಗಳು, ೧೬ನೇ ಶ.ದ ತುಳುವರ ರಾಜಕೀಯ ಸಾಮಾಜಿಕ ಸ್ಥಿತಿಗಳ ಕುರಿತ ಲೇಖನಗಳಿವೆ.

Prospectives on Dakshina Kannada and Kodagu 1991
ಸಂಪಾದಕ ಮಂಡಳಿ – ಮಂಗಳೂರು ವಿಶ್ವವಿದ್ಯಾಲಯ
D. 1/8, P. 14+349, Rs. 250/-

ಪೀಟರ್ ಜೆ. ಕ್ಲಾಸ್, ಚಿನ್ನಪ್ಪ ಗೌಡ, ಮೊದಲಾದವರು ಬರೆದ ಪಾಡ್ದನ, ಭೂತಾರಾಧನೆಗಳ ಕುರಿತು ಅಧ್ಯಯನ ಲೇಖನ ಸಂಕಲನ ಕೃತಿ.

ಜರ್ಮನ್

Heidrun Bruckner, 1995
Furstiche Feste Texte and Rituale der Tulu-Volksreligion an
der westkuste sudindiens
Harrassowitz Verlag Wiesbaden

೭ ಅಧ್ಯಾಯಗಳಿರುವ ಈ ಗ್ರಂಥದಲ್ಲಿ ಪಾಡ್ದನಗಳು ಮತ್ತು ಅವುಗಳು ಬಳಕೆಯಾಗುವ ಆಚರಣಾತ್ಮಕ ಸಂದರ್ಭ, ಭೂತಗಳ ಆರಾಧನಾ ಸಂಕೀರ್ಣ, ತುಳು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಜನಪದ ಆಚರಣೆಗಳ ಸ್ವರೂಪ ಮತ್ತು ವ್ಯಾಪ್ತಿ ಮುಂತಾದ ವಿಷಯಗಳ ಕುರಿತಂತೆ ಚರ್ಚೆ ಇದೆ.

ತುಳು

ಗಣೇಶ ಅಮೀನ್ ಸಂಕಮಾರ್, ೧೯೯೮
ತುಳು ನಡಕೆ (ಲೇಖನಗಳ ಸಂಗ್ರಹ)
ಸಿರಿ ಪ್ರಕಾಶನ, ಹಳೆಯಂಗಡಿ, ಡೆಮಿ ೧/೮, ಪುಟಗಳು ೪೨, ರೂ. ೨೫/-

ಒಟ್ಟು ೭ ಲೇಖನಗಳಿವೆ. ‘ಮಣ್ಣ್‌ಡಿತ್ತಿ ಪೊಣ್ಣ ನಿರೆಲ್’ – ಜನಪದ ಕಾವ್ಯಗಳಲ್ಲಿ ಪಾಡ್ದನಗಳಲ್ಲಿ ಚಿತ್ರಿತವಾದ ಹೆಣ್ಣಿನ ಕುರಿತು. ‘ಮಾಜೊಂದುಪ್ಪುನ ತುಳು ಸೀಮೆದ ಗೊಬ್ಬುಲು’ – ಹಳ್ಳಿಗಳಲ್ಲಿ ಒಂದು ಕಾಲದಲ್ಲಿ ಆಡುತ್ತಿದ್ದ ಆಟಗಳ ಬಗ್ಗೆ, ವಿಶು ಹಬ್ಬದ ಕಟ್ಟುಕಟ್ಟಳೆಗಳನ್ನು, ಮದಿಪು – ನುಡಿಕಟ್ಟುಗಳನ್ನು ಹೇಳಿದ್ದಾರೆ. ‘ಕಾಂತಾಬಾರೆ ಬೂದಬಾರೆ’- ಅವಳಿ ವೀರರಾದ ಬಾರೆಯರ ಹುಟ್ಟು ಹಾಗೂ ಬದುಕು ಪಾಡ್ದನಗಳಲ್ಲಿ ಹೇಗೆ ವ್ಯಕ್ತವಾಗಿದೆ ಎಂಬುದನ್ನು ತಿಳಿಸುತ್ತದೆ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೮೯
ಪಾತೆರಕತೆ (ತುಳು ಪ್ರಬಂಧಗಳು)
ಹೇಮಾಂಶು ಪ್ರಕಾಶನ, ಕಾಟಿಪಳ್ಳ, ಪುಟಗಳು ೬+೩೫, ರೂ. ೬/-

ತುಳುವಿನಲ್ಲಿ ಬಳಸಲಾಗುವ ಬೇರೆ ಬೇರೆ ಸಂಭಾಷಣೆ, ವ್ಯಾಕರಣ, ಊರಿನ ಹೆಸರುಗಳ ವಿಶ್ಲೇಷಣೆಗೆ ಸಂಬಂಧಿಸಿದಂಥ ಪ್ರಬಂಧಗಳಿವೆ. ಕೊನೆಯಲ್ಲಿ ತುಳು ಭಾಷೆಯನ್ನು ಬರವಣಿಗೆಯಲ್ಲಿ ಹೇಗೆ ಉಪಯೋಗಿಸಬಹುದೆಂಬ ಮಾಹಿತಿ ನೀಡುವ ಪ್ರಬಂಧವೂ ಇದೆ. ಒಟ್ಟು ೫ ಪ್ರಬಂಧಗಳಲ್ಲಿ ತುಳು ಭಾಷೆಯನ್ನು ಬಳಸುವ ರೀತಿಯನ್ನು ಹೇಳಲಾಗಿದೆ.

ಮುದ್ದು ಮೂಡುಬೆಳ್ಳೆ, ೧೯೯೯
ಪೂವರಿ (ಲೇಖನಗಳ ಸಂಗ್ರಹ)
ಸಾಹಿತ್ಯ ಸಂಸ್ಕೃತಿ ವೇದಿಕೆ, ಬೆಳ್ಳೆ, ಕ್ರೌ. ೧/೮, ಪು. : ೮೪, ರೂ. ೩೦/-

ತುಳುಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದಕ್ಕೆ ಸಂಬಂಧಿಸಿದಂತೆ ಒಟ್ಟು ೮ ಲೇಖನಗಳು ಇಲ್ಲಿವೆ. ಉದಾ : ‘ತುಳುಬಾಸೆದ ಬುಳೆಚ್ಚಿಲ್ ಎಂಚ?’ (ಪುಟ ೧೧ – ೧೫). ‘ತುಳು ಬಾಸೆಗ್ ಸಂವಿಧಾನ ಮಾನ್ಯತೆ’ (ಪುಟ ೧೬- ೧೯)- (ಭಾಷೆಯ ಕುರಿತಂತೆ) ‘ತುಳುತ್ತ ಕಿನ್ಯ ಕತೆಕುಳು (ಪುಟ ೨೦-೩೬), ‘ತುಳು ಕಾವ್ಯ : ಒಂಜಿ ಸಮೀಕ್ಷೆ’ (೩೭-೫೦) – (ಸಾಹಿತ್ಯಕ್ಕೆ ಸಂಬಂಧಿಸಿದಂತೆ). ‘ಪರ್ಬದ ಗದ್ದಲ : ಬಜಿಲ್‌…?’ (ಪುಟ ೫೮ – ೬೧), ‘ಮರಿಯಾದ ಅಟ್ಟಣೆ (ಪುಟ ೬೨ – ೬೫) – (ಸಂಸ್ಕೃತಿಗೆ ಸಂಬಂಧಿಸಿದಂತೆ). ಜಾನಪದಕ್ಕೆ ಸಂಬಂಧಿಸಿದ – ‘ಕೋಟಿ ಚೆನ್ನಯೆರೆ ಪಡುಮಲೆ, ಎಣ್ಮೂರು’ (ಪುಟ ೭೮ -೮೪) ಲೇಖನವಿದೆ. ಇಲ್ಲಿನ ಶೀರ್ಷಿಕೆಗಳು ಸೂಚಿಸುವಂತೆ ಇವೆಲ್ಲವೂ ತುಳುಭಾಷೆ, ಸಾಹಿತ್ಯ, ತುಳುವರ ಸಂಸ್ಕೃತಿ, ಜಾನಪದಗಳಿಗೆ ಸಂಬಂಧಿಸಿವೆ.

ಮೋಹನ್ ಕೋಟ್ಯಾನ್, ಹರೀಶ್ ಬೋಳೂರು, ಬಿ.ಎನ್., ೧೯೮೭
ತುಳು ಇತಿಹಾಸದ ಸ್ಮಾರಕ ಎಣ್ಮೂರು ಆದಿ ಬೈದರ್ಕಳ ಗರೊಡಿ
ತುಳುಕೂಟ, ಉಡುಪಿ, ಡೆ. ೧/೮, ರೂ. ೨/-

ಎಣ್ಮುರು ಬ್ರಹ್ಮ ಬೈದರ್ಕಳ ಗರೊಡಿಗಳ ವಿವರ ಸಂಗ್ರಹ, ಇತಿಹಾಸ ಇದರಲ್ಲಿದೆ. ಆರಂಭದಲ್ಲಿ ಕೋಟಿ ಚೆನ್ನಯರ ಸಂಕ್ಷಿಪ್ತ ಕಥೆಯೂ ಇದೆ.

ರಾಮಕೃಷ್ಣ ಟಿ. ಶೆಟ್ಟಿ, ೧೯೯೮
ತುಳು ಸಂಪೊತ್ತು
ತುಳುವೆರು ಪ್ರಕಾಶನಾಲಯ, ನ್ಯೂಡೆಲ್ಲಿ, ಪು. ೭+೫೬, ರೂ. ೧೦/-

೧೮೩೪ನೇ ಇಸವಿಯಿಂದ ಆರಂಭವಾದಂತಹ ತುಳು ಭಾಷೆ – ಸಾಹಿತ್ಯದ ಬೆಳವಣಿಗೆಯನ್ನು ಹೇಳುವ ಕೃತಿ.

ವಾಮನ ನಂದಾವರ, ೧೯೮೭, ೧೯೮೮
ತುಳುವೆರೆ ಕುಸಾಲ್ ಕುಸೆಲ್ (ಜಾನಪದ ಲೇಖನಗಳ ಸಂಗ್ರಹ) (ದ್ವಿತೀಯ ಮುದ್ರಣ)
ಹೇಮಾಂಶು ಪ್ರಕಾಶನ, ಮಂಗಳೂರು
ಡೆ. ೧/೮, ಪುಟಗಳು ೧೦+೭೧, ರೂ. ೧೨/-

ಈ ಕೃತಿಯಲ್ಲಿ ೯ ಬರೆಹಗಳಿವೆ. ಇದರಲ್ಲಿ ತುಳು ಜನಪದ ಸಾಹಿತ್ಯಕ್ಕೆ ಮತ್ತು ತುಳುವರ ಜೀವನ ವಿಧಾನಕ್ಕೆ ಸಂಬಂಧಿಸಿದಂತೆ ಕೆಲವು ಸಂಗತಿಗಳಿವೆ. ಉದಾ : ಅತ್ತೆ ಸೊಸೆಯರ ಜಾಣತನದ ಹಲವು ಸಂಗತಿಗಳು ‘ಮಾಮಿ ಇಂಚ ಮರ್ಮಾಲ್ ಎಂಚ?’ ಲೇಖನದಲ್ಲಿದೆ. ಒಗಟುಗಳ ಗೊಂಚಲನ್ನು ‘ಅಲ್ಲೆ ಗೆಲ್ಲ್‌ಡ್ ಮುಲ್ಲೆ ಪಕ್ಕಿ’ ಹಾಗೂ ‘ಎದುರು ಕತೆಕೊಂಜಿ ಪಿರವು ಕತೆ’ ಲೇಖನಗಳಲ್ಲೂ, ತುಳುನಾಡಿನಲ್ಲಿ ಪ್ರಚಲಿತವಿರುವ ಸ್ವಾರಸ್ಯಕರ ವಿಧಿ ನಿಷೇಧಗಳಲ್ಲಿ ಒಂದಾದ ‘ಗಂಡನ ಹೆಸರು ಹೆಣ್ಣು ಹೇಳಬಾರದು’ ಎಂಬುದಕ್ಕೆ ಆಕೆ ಅದನ್ನು ಸುತ್ತು ಬಳಸಿ ಹೇಳುವ ಪರಿಯನ್ನು, ‘ಪನ್ಯೆರಾವಂದ್ ಪತ್ಯೆರಾವಂದ್’ ಲೇಖನದಲ್ಲಿ ಹೀಗೆ ಜನಪದ ಜೀವನದ ಹಲವು ಮುಖಗಳನ್ನು ಲೇಖಕರು ಇಲ್ಲಿ ಪರಿಚಯಿಸಿರುವುದನ್ನು ನೋಡಬಹುದು.

ವಾಸುದೇವ ಭಟ್ ಪಳನೀರು, ೧೯೯೫
ಕಾಂಪ್ರಬೈಲ್‌ದಾ ಶ್ರೀ ಉಳ್ಳಾಲ್ತಿ ಅಜ್ವೇರ ದೈವಲು
ಕೆ.ಆರ್. ಪ್ರಭು, ಕೊಳಕೆರೆ ಪ್ರಭು ಟ್ರಸ್ಟ್, ಗೋಳ್ತಮಜಲು
ಕ್ರೌ. ೧/೮, ಪುಟಗಳು : ೪೭ + ೯, ರೂ. ೨೫/-

ಪಾಡ್ದನದ ಮೂಲಕ ಕಾಂಪ್ರಬೈಲಿನ ಉಳ್ಳಾಲ್ತಿ ಅಜ್ವೇರ ದೈವಗಳ ಉಗಮ, ಪ್ರಸರಣ, ಮಹಿಮೆಯನ್ನು ತಿಳಿಸುವ ಕೃತಿ. ತುಳು ಹಾಗೂ ಕನ್ನಡ ಈ ಎರಡು ಭಾಷೆಗಳಲ್ಲೂ ವಿವರಿಸಲಾಗಿದೆ.

ವಿಠಲ ಪುತ್ತೂರು ಮ., ೧೯೯೭
ಪಣೆ ಪಣೆ ತುಡರ್ (ವಿಚಾರಗಳ ಸಂಗ್ರಹ)
ತುಳು ಅಭಿಮಾನಿ ಬಂಧುಗಳು, ಮಂಗಳೂರು
ಕ್ರೌ. ೧/೮, ಪುಟಗಳು : ೮+೨೩೫, ರೂ. ೫೦/-

ತುಳುವಿಗೆ, ತುಳುನಾಡಿಗೆ, ತುಳುವರಿಗೆ ಸಂಬಂಧಿಸಿದ ಅನೇಕ ಸಂಗತಿಗಳು ಈ ಕೃತಿಯಲ್ಲಿದೆ. ತುಳುವರ ಸಮಸ್ಯೆಗಳಿಗೆ ಸ್ಪಂದಿಸಿದ ಬಗೆಗಳನ್ನು ಕೆಲವು ಲೇಖನಗಳಲ್ಲಿ ಕಾಣಬಹುದು. ತುಳುವರು ತಮ್ಮ ಅಸ್ತಿತ್ವಕ್ಕಾಗಿ ಪಟ್ಟ ಕಷ್ಟಗಳೇನೆಂಬುದನ್ನು ತಿಳಿಸುವ ಲೇಖನಗಳು – (ತುಳುವೆರೆನ ಅಗ್ಗಿಮರ್ಕ, ತುಳುಗ್ರಂಥ ಭಂಡಾರೊಲೆಗ್ ಸಾಯಕೊರ್ಲೆ, ಅಕಾಡೆಮಿಗ್ ಬತ್ತಿ ಎಣ್ಣೆ ತುಡರ್ ಇತ್ಯಾದಿ) ಕಂಬಳ, ಚೆನ್ನೆಮಣೆ ಇತ್ಯಾದಿಗಳ ಬಗೆಗಿನ ಲೇಖನಗಳೂ ಈ ಪುಸ್ತಕದಲ್ಲಿವೆ.

ಸತ್ಯಮಿತ್ರ ಬಂಗೇರ, ೧೯೩೦
ಅಳಿಯ ಸಂತಾನ ಕಟ್ಟ್‌ದ ಗುಟ್ಟು
ಕ್ರೌನ್ ೧/೮, ಪುಟಗಳು : ೮೮, ರೂ. ೦-೮-೦

ತುಳುವಿನ ಕೆಲವು ಜನವರ್ಗದವರಲ್ಲಿ ಇಂದೂ ರೂಢಿಯಲ್ಲಿರುವ ಅಳಿಯ ಸಂತಾನ ಕಟ್ಟಿನ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿಸುವ ಕೃತಿ.

ಸದಾಶಿವ ರೈ, ದಂಬೆಕ್ಕಾನ
ಬಂಟ ಮದಿಮೆ (ಅಧ್ಯಯನ)
ಬಂಟರ ಸಂಘ, ಪುತ್ತೂರು ತಾಲೂಕು
ಕ್ರೌನ್ ೧/೮, ಪುಟಗಳು ೧೨+೭೦, ರೂ. ೫೦/-

ಬಂಟ ಸಮಾಜದ ವಿವಾಹ ಕ್ರಮ, ರೀತಿ – ರಿವಾಜುಗಳನ್ನು ಹೇಳುವಂಥ ಕೃತಿ. ಬಂಟರ ವಿವಾಹದ ಕ್ರಮ – ನಡವಳಿಕೆಗಳನ್ನು ಹೇಗೆ ನಡೆಸಬೇಕೆಂಬ ಬಗ್ಗೆ ಸಂಶೋಧನಾತ್ಮಕ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ಸಮಗ.ಬಾ. ಮಲ್ಪೆ, ೧೯೮೦
ತುಳುನಾಡ್‌ದ ಪುರಾತತ್ವ ಶೋಧನೆ
ಡೆಮಿ ೧/೮, ಪುಟಗಳು : ೨೪, ರೂ. ೨/-

ತುಳುನಾಡಿನ ಪುರಾತತ್ವ ಶೋಧನೆಯನ್ನು ಕುರಿತು ಒಂದು ಸ್ಥೂಲ ಪರಿಚಯವನ್ನು ಕೊಡುವ ಕೃತಿ.

ಸುನೀತಾ ಎಂ.ಶೆಟ್ಟಿ, ೨೦೦೨
ಕರಜನ (ಲೇಖನಗಳು)
ಅಕ್ಷಯ ಪ್ರಕಾಶನ, ಮುಂಬಯಿ, ಕ್ರೌ. ೧/೮, ಪು. ೮೧, ರೂ. ೪೦/-

ಇದರಲ್ಲಿ ಪಾಡ್ದನ, ಗಾದೆ, ನಂಬಿಕೆ ಮತ್ತು ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತೆ ತುಳುಭಾಷೆಯಲ್ಲಿ ಬರೆದ ೨೦ ಲೇಖನಗಳಿವೆ.