ತುಳು ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ಕಾದಂಬರಿಗಳು

ಚಿತ್ತರಂಜನದಾಸ್ ಶೆಟ್ಟಿ ಬೋಳ, ೧೯೯೦
ಅಳಿದುಳಿದವರು
ನಾಗಶಕ್ತಿ ಪ್ರಕಾಶನ ಮಂಗಳೂರು
ಕ್ರೌನ್ ೧/೮, ಪುಟಗಳು : ೧೯+೫೮೯, ರೂ. ೬೫/-

ತುಳುನಾಡಿನ ಅಳಿಯ ಸಂತಾನ ಕಟ್ಟು, ಗುತ್ತಿನ ಮನೆ, ಅದರ ವೈಭವ ಇಂಥ ಕಳೆದು ಹೋದ ಪರಂಪರೆಯ ನೋಟವನ್ನು ನೀಡುವ ಕಾದಂಬರಿಯಾಗಿದೆ.

ನಾರಾಯಣ ಎಂ. ಮಂಗಳೂರು, ೧೯೬೩
ದಳಪತಿ ದೇವು ಪೂಂಜ
ವಿವೇಕ ಸಾಹಿತ್ಯ ಮಾಲೆ ಮಂಗಳೂರು, ರೂ. ೧/-

ದೇವು ಪುಂಜನ ತುಳು ಪಾಡ್ದನವನ್ನಾಧರಿಸಿ ಬರೆದಂಥ ಕನ್ನಡ ಜಾನಪದ ಕಾದಂಬರಿ.

ಪೂಜಾರಿ ಕೆ.ಕೆ., ೧೯೬೧
ವೀರ ಸಹೋದರರು ಕೋಟಿ ಚೆನ್ನಯರು
ನೇತ್ರಾವತಿ ಪ್ರಕಾಶನ

ರಾವ್ ಕೆ.ವಿ. ಉಜಿರೆ, ೧೯೯೬
ಬಾಡ
ಕನ್ನಡ ಪ್ರಪಂಚ ಪ್ರಕಾಶನ, ದರ್ಬೆ, ಪುತ್ತೂರು, ಕ್ರೌನ್ ೧/೮, ರೂ. ೧೩೫/-

ದಲಿತರ ಜೀವನ ಮತ್ತು ಹೋರಾಟವನ್ನು ಹೇಳುವ ಮೂರು ತಲೆಮಾರಿನ ಚಿತ್ರಣವನ್ನು ನೀಡುವಂತಹ ಸಾಮಾಜಿಕ ಕಾದಂಬರಿ.

ರಾವ್ ಎನ್.ವಿ. ೧೯೮೪
ತುಳುನಾಡ ಸಿರಿ (ಕನ್ನಡ ಜಾನಪದ ಕಾದಂಬರಿ)
ಪ್ರಗತಿ ಪಬ್ಲಿಕೇಷನ್ಸ್ ಬೆಂಗಳೂರು, ರೂ. ೧೫/-

ತುಳುವಿನ ‘ಸಿರಿ’ ಪಾಡ್ದನವನ್ನಾಧರಿಸಿ ಬರೆದ ಕನ್ನಡ ಜಾನಪದ ಕಾದಂಬರಿ.

ವೀರಪ್ಪ ಮೊಯಿಲಿ ಎಂ., ೧೯೯೩
ಕೊಟ್ಟ (ಕನ್ನಡ ಸಾಮಾಜಿಕ ಕಾದಂಬರಿ)
ಆಶಾ ಸಾಹಿತ್ಯ ಪ್ರಕಾಶನ, ಬೆಂಗಳೂರು
ಕ್ರೌ. ೧/೮, ಪುಟಗಳು : ೧೬+೪೨೪, ರೂ. ೧೪೦/-

ಕೊರಗರ ಸಮಗ್ರ ಬದುಕಿನ ಚಿತ್ರಣ ನೀಡುವ ಸಾಮಾಜಿಕ ಕಾದಂಬರಿ.

ವೀರಪ್ಪ ಮೊಯಿಲಿ ಎಂ., ೧೯೯೯
ತೆಂಬರೆ
ಅಂಕಿತ ಪುಸ್ತಕ, ಬೆಂಗಳೂರು, ಡೆಮಿ ೧/೮, ಪುಟ ೨೦೮, ರೂ. ೯೬/-

ತುಳುನಾಡಿನ ಭೂತನರ್ತನ ಕಲಾವಿದರಾದ ಪಂಬದ ಜನಾಂಗದ ವಿಸ್ತೃತ ಕ್ಷೇತ್ರಕಾರ್ಯಾಧಾರಿತ ಅನುಭವದ ಹಿನ್ನೆಲೆಯಲ್ಲಿ ಮೂಡಿ ಬಂದ ವಿಶಿಷ್ಟ ಕನ್ನಡ ಕಾದಂಬರಿ.

ಶಕುಂತಳಾ ಎಚ್. ಭಟ್, ೧೯೯೮
ತುಳುನಾಡ ಕಣ್ಮನೆ (ಮಕ್ಕಳ ಕನ್ನಡ ಕಿರುಕಾದಂಬರಿ)
ಶ್ರೀರಾಮ ಪ್ರಕಾಶನ ಹಳೆಯಂಗಡಿ, ಕ್ರೌನ್ ೧/೮, ಪುಟಗಳು: ೪೨, ರೂ. ೨೨/-

ವೀರರಾಣಿ ಅಬ್ಬಕ್ಕಳ ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳ ಮೂಲಕ ಲೇಖಕಿ ಎಳೆಯರಲ್ಲಿ ದೇಶಪ್ರೇಮದ ಕಿಚ್ಚನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದಾರೆ.

 

ಯಕ್ಷಗಾನ ಪ್ರಸಂಗಗಳು

ತುಳು

ಅನಂತರಾಮ ಬಂಗಾಡಿ, ೧೯೮೭
ಗೋಣತಂಕರೆ
ನಿತ್ಯಾನಂದ ಗ್ರಂಥಾಲಯ ಮಂಗಳೂರು
ಕ್ರೌನ್ ೧/೮, ಪುಟಗಳು ೩೨+೪, ರೂ. ೪/-

ಅನಂತರಾಮ ಬಂಗಾಡಿ, ೧೯೯೪
ತುಳುನಾಡ ಬಲಿಯೇಂದ್ರೆ
ನಿತ್ಯಾನಂದ ಗ್ರಂಥಾಲಯ ಮಂಗಳೂರು
ಕ್ರೌನ್ ೧/೮, ಪುಟಗಳು : ೬+೩೦, ರೂ. ೬/-

ಬಲೀಂದ್ರನ ಪಾಡ್ದನವನ್ನಾಧರಿಸಿ ಬರೆದ ತುಳು ಯಕ್ಷಗಾನ ಪ್ರಸಂಗ

ಅನಂತರಾಮ ಬಂಗಾಡಿ, ೧೯೮೪
ಬೊಳ್ಳಿ ಗಿಂಡ್ಕೆ
ನಿತ್ಯಾನಂದ ಗ್ರಂಥಾಲಯ ಮಂಗಳೂರು
ಕ್ರೌನ್ ೧/೮, ಪುಟಗಳು : ೨+೩೬, ರೂ. ೨.೫೦/-

ತುಳು ಯಕ್ಷಗಾನದ ಸ್ವತಂತ್ರವಾದ ಕೃತಿ.

ಅನಂತರಾಮ ಬಂಗಾಡಿ ಕೆ., ೧೯೭೯-೮೦
ಪಟ್ಟದ ಪದ್ಮಲೆ
ಬಿ. ಐತಪ್ಪ ಶೆಟ್ಟಿ, ಪುಸ್ತಕ ವ್ಯಾಪಾರಿ, ವಿ.ಆರ್. ಕಂಪೌಂಡು, ಮಂಗಳೂರು
ಕ್ರೌನ್ ೧/೮, ರೂ. ೨/-

ಅನಂತರಾಮ ಬಂಗಾಡಿ ಕೆ., ೧೯೮೮
ಪಟ್ಟದ ಪೆರುಮಳೆ
ಕ್ರೌನ್ ೧/೮, ಪುಟಗಳು : ೩೬, ರೂ. ೪/-

ಅನಂತರಾಮ ಬಂಗಾಡಿ ಬರೆದ ಪುರಾಣದ ಯಕ್ಷಗಾನ ಪ್ರಸಂಗಗಳು
ಭೀಷ್ಮಗ್ ಪಗರಿ ಮಂಚ (ತುಳು ಪ್ರಸಂಗ)
ಬಾಲೆ ಅಭಿಮನ್ಯು (ತುಳು ಯಕ್ಷಗಾನ)
ಉತ್ತರನ ಬಿರ್ಸ್‌(ತುಳು ಪ್ರಸಂಗ)
ಶಲ್ಯ ಸಾರಥಿ (ತುಳು ಪೌರಾಣಿಕ ಪ್ರಸಂಗ)
ಕರ್ಣನ ಅಂತ್ಯೊ (ತುಳು ಪೌರಾಣಿಕ ಪ್ರಸಂಗ)

ಕೃಷ್ಣ ಭಟ್ಟ ತಾಳ್ತಜೆ., ೧೯೮೭
ರಾವಣ ಚರಿತೊ
ಕ್ರೌನ್ ೧/೮, ಪುಟಗಳು : ೩೬, ರೂ. ೫/-

ಕೇಶವ ಶೆಟ್ಟಿ ಪೊಳಲಿ, ೧೯೯೯
ಕಾರಿಂಜ ಕಾಂಜವೆ
ಶ್ರೀ ಮನೋಹರ್ ನಂದಳಿಕೆ ಯಕ್ಷಕಲಾ ಮಿತ್ರ ಬಳಗ ಮುಂಬಯಿ -೭
ಕ್ರೌನ್ ೧/೮, ಪುಟಗಳು : ೪೮, ರೂ. ೩೦/-

ಕೇಶವ ಶೆಟ್ಟಿ ಪೊಳಲಿ, ೧೯೯೯
ಗಿಂಡೆ ದಾರಮ್ಮ
ಶ್ರೀ ಮನೋಹರ್ ನಂದಳಿಕೆ ಯಕ್ಷಕಲಾ ಮಿತ್ರ ಬಳಗ ಮುಂಬಯಿ -೭
ಕ್ರೌನ್ ೧/೮, ಪುಟಗಳು : ೬೦, ರೂ. ೩೦/-

ಕೇಶವ ಶೆಟ್ಟಿ ಪೊಳಲಿ, ೧೯೯೯
ಜಾಗೆದ ಪಂಜುರ್ಲಿ
ಶ್ರೀ ಮನೋಹರ್ ನಂದಳಿಕೆ ಯಕ್ಷಕಲಾ ಮಿತ್ರ ಬಳಗ ಮುಂಬಯಿ -೭
ಕ್ರೌನ್ ೧/೮, ಪುಟಗಳು : ೫೨, ರೂ. ೩೦/-

ಜಾರು ಪೇರೂರು, ೨೦೦೧
ಕೋಟಿ ಚೆನ್ನಯ (ತುಳು ಯಕ್ಷಗಾನ ರೂಪಕ)
ಚಿಂತಕ ಪ್ರಕಟನಾಲಯ ಅಂಗಡಿ ಮನೆ ಪೇರೂರು
ಕ್ರೌನ್ ೧/೮, ಪು. ೨೮+೪, ರೂ. ೬/-

ಈ ಯಕ್ಷಗಾನ ರೂಪಕದಲ್ಲಿ ಕೋಟಿ ಚೆನ್ನಯರ ಒಲವು ನಿಲುವು, ಜಾತೀ ಗೂಂಡಾಗಳ ವಿರುದ್ಧ ಅವರು ಏರಿಸಿದ ಜಟ್ಟಿಗಚ್ಚೆಯ ಚಿತ್ರಣಕ್ಕೆ ಮುಖ್ಯ ಒತ್ತು ನೀಡಲಾಗಿದೆ.

ತ್ಯಾಂಪಣ್ಣ ಶೆಟ್ಟಿ ದೇರಂಬಳ, ೧೯೩೮
ಪಂಚವಟಿ ವಾಲಿ ಸಂಹಾರ
ಡೆಮಿ ೧/೮, ಪುಟಗಳು : ೪೮, ಬೆಲೆ : ನಾಲ್ಕಾಣೆ

ತುಳು ಯಕ್ಷಗಾನ ಪ್ರಸಂಗ.

ನಾರಾಯಣ ಎಂ. ಸಪಲಿಗ, ೧೯೯೬
ಪರಕೆದ ಬದಿಕರ (ಜಾನಪದ ತುಳು ಯಕ್ಷಗಾನ ಪ್ರಸಂಗ)
ಕ್ರೌನ್ ೧/೮, ಪುಟಗಳು : ೨೮, ರೂ. ೬/-

ನಿತ್ಯಾನಂದ ಕಾರಂತ ಪೊಳಲಿ (ರಚನೆ) ಡಿ. ಮನೋಹರ್ ಕುಮಾರ್ (ಕಥಾ ಸಂಗ್ರಹ),
೧೯೮೭
ಗೆಜ್ಜೆದ ಪೂಜೆ (ತುಳು ಯಕ್ಷಗಾನ ಪ್ರಸಂಗ)
ಯುವಕ ಯಕ್ಷಗಾನ ಮಂಡಳಿ, ಮಂಗಳೂರು, ಕ್ರೌನ್ ೧/೮, ರೂ. ೪/-

ಪುರುಷೋತ್ತಮ ಪೂಂಜ ಬೊಟ್ಟಿಕೆರೆ, ೧೯೯೯
ಕುಡಿಯನ ಕೊಂಬಿರೆಲ್
ತುಳುಕೂಟ (ರಿ) ಉಡುಪಿ, ಪು: ii +೨೫, ರೂ. ೧೫/-

ಮಹಾಭಾರತದ ಆದಿಪರ್ವದಲ್ಲಿ ಬರುವ ಏಕಲವ್ಯನ ಕತೆಯನ್ನು ಸ್ವತಂತ್ರ ರೀತಿಯಲ್ಲಿ ಯಕ್ಷಗಾನ ಕೃತಿಯಾಗಿ ಬರೆದಿದ್ದಾರೆ.

ಮಧುಕುಮಾರ್ ನಿಸರ್ಗ ಬೋಳೂರು, ೨೦೦೩
ಸಿರಿ ಸತ್ಯನಾರಾಯಣ ಮಹಾತ್ಮೆ (ತುಳು ಯಕ್ಷಗಾನ ಪ್ರಸಂಗ)
ಬೋಳೂರು ದೋಗ್ರ ಪೂಜಾರಿ ಯಕ್ಷಗಾನ ಕೇಂದ್ರ, ಮಂಗಳೂರು
ಡೆ ೧/೮, ರೂ. ೧೫/-

ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆಯ ೫ ಅಧ್ಯಾಯಗಳನ್ನು ತುಳು ಭಾಷೆಯಲ್ಲಿ ಯಕ್ಷಗಾನ ರೂಪಕವನ್ನಾಗಿಸಲಾಗಿದೆ.

ರಾಮಕೃಷ್ಣ ತಳೆಂಗಳ, ೧೯೮೫
ಚೆನ್ನೆದ ಮಣೆ (ತುಳು ಯಕ್ಷಗಾನ ಪ್ರಸಂಗ)
ಶೋಭಾ ಪ್ರಕಾಶನ, ಏಳ್ಮುಡಿ ಪುತ್ತೂರು, ರೂ. ೪.೫೦/-

ತುಳು ಜನಪದ ಕತೆಯೊಂದನ್ನು ಆಧರಿಸಿ ಚಾರಿತ್ರಿಕವಾದ ಕೆಲವು ಎಳೆಗಳನ್ನು ಸೊಗಸಾಗಿ ಪೋಣಿಸಿ ಈ ಪ್ರಸಂಗ ರಚನೆಯಾಗಿದೆ. ಮಾನವನ ಮೂಲಭೂತ ಸ್ವಭಾವಗಳ ವಿಜ್ರಂಭಣೆಯನ್ನು ವಿವಿಧ ಪಾತ್ರಗಳ ಮೂಲಕ ಅಲ್ಲಲ್ಲಿ ದರ್ಶಿಸಬಹುದು.

ಸಂಕಯ್ಯ ಭಾಗವತ ಬಾಯಾರು ಪೆರ್ವಡಿ, ೧೯೨೯
ಪಂಚವಟಿ ರಾಮಾಯಣ ವಾಲಿಸುಗ್ರೀವೆರ ಕಾಳಗೊ ೧೯೬೮ (IV)
ಕ್ರೌನ್ ೧/೮ ಪುಟಗಳು : ೪೬, ರೂ. ೦-೮-೦ ಪೈಸೆ

ಪಾರ್ತಿಸುಬ್ಬನ ಪಂಚವಟಿ ಪ್ರಸಂಗದ ಆಧಾರದಲ್ಲಿ ರಚಿತವಾದ ಸ್ವತಂತ್ರ ಕೃತಿ. ರಾಮಾಯಣದ ಪಂಚವಟಿ ಕಥಾಸಂದರ್ಭದ ಯಕ್ಷಗಾನ ಪ್ರಸಂಗ, ದಕ್ಷಿಣ ತುಳುನಾಡಿನ ಸಾಮಾನ್ಯ ಆಡುನುಡಿಯಲ್ಲಿ ರಚಿತವಾಗಿದೆ. ತೃತೀಯ ಮುದ್ರಣ.

ಸದಾಶಿವ ಭಟ್ ಡಿ., ೧೯೮೦
ಸೃಗಾಲ ವಧೆ
ಶ್ರೀ ಸತ್ಯನಾರಾಯಣ ಯಕ್ಷಗಾನ ಕಲಾಕೂಟ ನಿಡ್ಪಳ್ಳಿ, ಪುತ್ತೂರು
ಕ್ರೌನ್ ೧/೮, ಪುಟಗಳು : ೮+೩೭, ರೂ. ೩/-

ಸೀತಾನದಿ ಗಣಪಯ್ಯ ಶೆಟ್ಟಿ, ೧೯೬೪
ಕೋಡ್ದಬ್ಬು ತನಿಮಾನಿಗ
ಸುಬೋಧ ಸಾಹಿತ್ಯಮಾಲೆ, ಹಿರಿಯಡ್ಕ
ಕ್ರೌನ್ ೧/೮, ಪುಟಗಳು : ೨೪, ಬೆಲೆ ೪೦ ನಯಾ ಪೈಸೆ

ಯಕ್ಷಗಾನ ತುಳು ಪ್ರಸಂಗ

ಕನ್ನಡ

ಅಮೃತ ಸೋಮೇಶ್ವರ, ೧೯೯೦
ಯಕ್ಷಗಾನ ಕೃತಿ ಸಂಪುಟ (ಯಕ್ಷಗಾನ ಪ್ರಸಂಗಗಳ ಸಂಗ್ರಹ)
ಶ್ರೀ ಸೋಮೇಶ್ವರ ಯಕ್ಷಗಾನ ಕೃತಿ ಪ್ರಕಾಶನ ಸಮಿತಿ
ರೂ. ೮೦/- ಕ್ಯಾಲಿಕೋ ಪ್ರತಿ ರೂ. ೧೨೦/-

ಅಮೃತರು ಬರೆದ ಹದಿಮೂರು ಪ್ರಸಂಗಗಳನ್ನು ಇಲ್ಲಿ ಸಂಕಲಿಸಲಾಗಿದೆ. ಈ ೧೩ ಪ್ರಸಂಗಳಲ್ಲಿ ‘ಚಾಲುಕ್ಯ ಚಕ್ರೇಶ್ವರ’ ಮತ್ತು ಅಮರಶಿಲ್ಪಿ ‘ವೀರ ಕಲ್ಕುಡ’ ಇವೆರಡನ್ನುಳಿದು ಮಿಕ್ಕ ಪ್ರಸಂಗಗಳೆಲ್ಲವೂ ಪೌರಾಣಿಕ ಕಥೆಗಳ ಪ್ರಸಂಗಗಳು ಪ್ರತಿ ಪ್ರಸಂಗದ ಪ್ರಾರಂಭದಲ್ಲಿ ಕಥಾ ಸಾರವನ್ನು, ಕೊನೆಗೆ ಪಾತ್ರಗಳ ಪಟ್ಟಿಯನ್ನು ಕೊಡಲಾಗಿದೆ. ಹಾಗೆಯೇ ಅಮೃತರು ಪ್ರತೀ ಪ್ರಸಂಗದ ಆದಿಯಲ್ಲಿ ನಾಂದೀ ಪದ್ಯವೊಂದನ್ನು ಪ್ರಾರ್ಥನಾರೂಪದಲ್ಲಿ ಹೇಳಿದ್ದಾರೆ. ಮತ್ತು ಕೊನೆಯಲ್ಲಿ ಮಂಗಳ ಪದ್ಯವನ್ನು ನೀಡಲಾಗಿದೆ ಕೆಲವು ಕಡೆ ಪಾತ್ರಾನುಸಾರವಾಗಿ ಭಾಷೆ ಶೈಲಿಯನ್ನು ವಿಶಿಷ್ಟವಾಗಿ ಅಳವಡಿಸಿದ್ದಾರೆ.

ಅಮೃತ ಸೋಮೇಶ್ವರ, ೧೯೯೮
ಅಮರ ವೀರದ್ವಯ ಕೋಟಿಚೆನ್ನಯ (ಯಕ್ಷಗಾನ ಪ್ರಸಂಗ)
ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ.) ಉಡುಪಿ
ರೂ. ೧/೮, ಪುಟಗಳು : ೩೫, ರೂ. ೨೫/-

ಕೋಟಿ ಚೆನ್ನಯರ ಸಾಧನೆ, ಸಾಂಸ್ಕೃತಿಕ ಸೇವೆಗಳಿಗೆ ಗಮನವೀಯಲಾಗಿದೆ. ಪ್ರಸಂಗದಲ್ಲಿ ಪ್ರಾರಂಭದಲ್ಲಿ ನಾಗಬ್ರಹ್ಮನ ಅವಿರ್ಭಾವದ ಐತಿಹ್ಯವನ್ನು ಸೇರಿಸಿಕೊಳ್ಳಲಾಗಿದೆ.

ಅಮೃತ ಸೋಮೇಶ್ವರ, ೧೯೭೯
ಅಮರ ಶಿಲ್ಪಿ ವೀರಕಲ್ಕುಡ (ಯಕ್ಷಗಾನ ಪ್ರಸಂಗ)
ಪ್ರಕೃತಿ ಪ್ರಕಾಶನ, ಕೋಟೆಕಾರ್, ಡೆಮಿ ೧/೮, ಪುಟಗಳು: ೬+೪೭, ರೂ. ೩.೫೦/-

ಮೂಲತಃ ತುಳು ಪಾಡ್ದನದಲ್ಲಿದ್ದ ಕಲ್ಕುಡನ ಕಥೆಗೆ ಕೆಲವು ಚಾರಿತ್ರಿಕಾಂಶಗಳನ್ನು, ಪೌರಾಣಿಕವಾದ ವಿಶ್ವರೂಪನ ಕಥೆಯನ್ನು ಜೋಡಿಸಿ, ಯಕ್ಷಗಾನ ರಂಗಸ್ಥಳಕ್ಕೆ ಬೇಕಾದ ರೀತಿಯಲ್ಲಿ ಈ ಪ್ರಸಂಗವನ್ನು ಅಳವಡಿಸಲಾಗಿದೆ.

ಬಸಯ್ಯ ಶೆಟ್ಟಿ ಸೀತಾನದಿ, ೧೯೭೩
ತುಳುನಾಡ ಸಿರಿದೇವಿ (ಕನ್ನಡ ಯಕ್ಷಗಾನ ಪ್ರಸಂಗ)
ಶೋಧ ಸಾಹಿತ್ಯ ಭಂಡಾರ, ಹಿರಿಯಡಕ
ಕ್ರೌನ್ ೧/೮, ಪುಟಗಳು : ೩೨, ರೂ. ೬೦ ಪೈಸೆ.

ಸತ್ಯನಾಪುರದ ಸಿರಿಯ ಕತೆಯನ್ನು ಹೇಳುತ್ತದೆ. ತೃತೀಯ ಮುದ್ರಣ.

ರಾಮಾಯಣ ಭಾಗವತ ಬಲಿಪ
ಗ್ರಾಮ, ಕಾಸರಗೋಡು ತಾಲೂಕು (ಲೇಖಕ ಮತ್ತು ಪ್ರಕಾಶಕ) ೧೯೬೪
ಸ್ಕಾಂದ ಪುರಾಣದೊಳಗಣ ನಾಗವಿಜಯ ಅಥವಾ ನಾಗ ಸಿರಿಕನ್ಯೆ
(ಕನ್ನಡ ಯಕ್ಷಗಾನ ಪ್ರಸಂಗ), ಕ್ರೌನ್ ೧/೮, ರೂ. ೦-೭೫

ನಾಗ ಸಿರಿಕನ್ಯೆ ಅಥವಾ ನಾಗವಿಜಯವೆಂಬ ಕಥಾಭಾಗವನ್ನು ತುಳು ಪಾಡ್ದನಗಳಿಂದ ಸಂಗ್ರಹಿಸಿ ಬರೆಯಲಾಗಿದೆ.

ವೆಂಕಟರಾಯ ಪಂದುಬೆಟ್ಟು, ೧೮೮೧ (೧೯೩೯)
ಕಾರ್ಕಳ ಪ್ರತಾಪ (ಕನ್ನಡ ಯಕ್ಷಗಾನ) (IV)
ಉಡುಪಿ ಶ್ರಮನ್ಮಧ್ವ ಸಿದ್ಧಾಂತ ಗ್ರಂಥಾಲಯ, ರೂ. ೦-೮-೦.

ವಿದ್ವಾಂಸರಾದ ಹಳ್ಳಿಗರಿಂದ ‘ಬಂಟರ ಸಂಧಿ’ ಎಂಬ ಕೋಟಿ ಚೆನ್ನಯರ ತುಳು ಪಾಡ್ದನವನ್ನು ಹಾಡಿಸಿ, ಕೇಳಿ ಮುಖ್ಯಾಂಶಗಳನ್ನು ಕೊಂಡು, ಕವಿಶಿಷ್ಯ ಪಂಜೆಯವರ ‘ಕೋಟಿ ಚೆನ್ನಯ’ ಪುಸ್ತಕದಿಂದಲೂ ಕೆಲವು ಅಂಶಗಳನ್ನು ಆರಿಸಿಕೊಂಡು ಈ ಯಕ್ಷಗಾನ ಪ್ರಸಂಗ ರಚನೆಗೊಂಡಿದೆ.

ಶ್ರೀನಿವಾಸ ಭಾಗವತ ಅಗರಿ, ೧೯೬೯
ಯಕ್ಷಗಾನ ಸಿರಿ ಮಹಾತ್ಮ್ಯೆ
ಕ್ರೌನ್ ೧/೮, ರೂ. ೦-೭೫ ಪೈಸೆ, ಪುಟಗಳು : ೩೧.

ಸತ್ಯನಾಪುರದ ಸಿರಿ ಕತೆಯನ್ನು ಹೇಳಲಾಗಿದೆ.

 

ಜಾನಪದ

ಕನ್ನಡ

ಕಾಳೇಗೌಡ ನಾಗವಾರ ಪ್ರೊ. ಬೋರಲಿಂಗಯ್ಯ ಹಿ.ಚಿ. ಪ್ರೊ. (ಸಂ.), ೨೦೦೦
ಗಿರಿಜನ ಕಾವ್ಯ (ಮೌಖಿಕ ಕಾವ್ಯಗಳು)
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು
ಡೆ. ೧/೮, ಪು ೩೬+೪೫೪, ರೂ. ೩೦೦/-

ಗೊಲ್ಲ, ಬೇಡ, ಹಾಲಕ್ಕಿ, ಒಕ್ಕಲಿಗ, ಗೊಂಡ, ದೊಂಬ, ಸಿದ್ಧಿಯರ ಕಾವ್ಯಗಳೊಂದಿಗೆ ‘ತುಳು ಕಾವ್ಯಭಾಗ’ದಲ್ಲಿ (ಪುಟ. ೩೦೩ – ೩೪೭) ಕೊರಗ ತನಿಯನ (ಕನ್ನಡ) ಪಾಡ್ದನ, ಮಲೆಕುಡಿಯರ ಪದಗಳು – ಕೃಷ್ಣನ ಪಾಡ್ದನ (ತುಳು + ಕನ್ನಡ ಅನುವಾದ) ಅಪ್ಪೆ ದಾರಕ್ಕು ಸಂಧಿ (ತುಳು + ಕನ್ನಡ ಅನುವಾದ), ಕಾಡ್ಯನ ಹುಟ್ಟು (ಕನ್ನಡ) ಕರಂಗೋಲು (ಪಠ್ಯದ ವಿಶ್ಲೇಷಣೆ) ಇದೆ.

ಕೇಶವ ಭಟ್ಟ ವಿದ್ವಾನ್ ಟಿ., ೧೯೯೬
ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಗೀತೆಗಳು (ಸಂಶೋಧನಾ ಕೃತಿ)
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಡೆ. ೧/೮, ಪು. ೮+೨೭೩, ರೂ. ೪೫/-

ಇದರಲ್ಲಿ ತುಳು ಜನಪದ ಗೀತೆಗಳು (ಪಾಡ್ದನಗಳು, ನಲಿಕೆ ಹಾಡುಗಳು, ಲಾವಣಿ ಹಾಡುಗಳು, ಮದ್ದಿನ ಹಾಡುಗಳು) ಮಕ್ಕಳ ಹಾಡುಗಳು, ಗಂಡುಸರ ಹಾಡು, ಹೆಂಗಸರ ಹಾಡುಗಳು, ಗೋವಿನ ಕತೆಯ ಹಾಡುಗಳು ಮುಂತಾದ ದ.ಕ. ಜಿಲ್ಲೆಯ ಹಲವು ಜನಪದ ಹಾಡುಗಳ ಅಧ್ಯಯನವಿದೆ. ಮೊದಲ ಅಧ್ಯಾಯ ವಿಷಯ ಪ್ರವೇಶಕ್ಕೆ ಮೀಸಲಾಗಿದ್ದು, ಉಳಿದ ೮ ಅಧ್ಯಾಯಗಳಲ್ಲಿ ದ.ಕ. ಜಿಲ್ಲೆಯ ಜನಪದ ಗೀತೆಯ ಧಾಟಿ, ಓಟ, ಛಂದಸ್ಸು, ಚದುರು, ಜನ್ಮಕುಂಡಲಿ, ಜಾತಕಗಳನ್ನು ಸೋದಾಹರಣವಾಗಿ ವಿವರಿಸಿದ್ದಾರೆ.

ಚಂದ್ರಶೇಖರ ದಾಮ್ಲೆ (ಸಂ), ೧೯೯೦
ಜಾತ್ರೆ ಮತ್ತು ಇತರ ಸಂಶೋಧನಾತ್ಮಕ ಪ್ರಬಂಧಗಳು
ಸಮಾಜ ಶಾಸ್ತ್ರ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ
ಕ್ರೌ. ೧/೮, ಪು: ೧೦+೧೦೬, ರೂ. ೧೫/-

ಒಟ್ಟು ೧೦ ಪ್ರಬಂಧಗಳುಳ್ಳ ಸಂಕಲನ. ಜನಪದ ಜೀವನದ ಶೈಲಿ, ವಿಧಿ ವಿಧಾನಗಳು, ಹಬ್ಬ ಹರಿದಿನಗಳು, ನಂಬಿಕೆಗಳು, ಆಚರಣೆಗಳನ್ನು ಈ ಪ್ರಬಂಧಗಳು ವ್ಯಕ್ತಪಡಿಸುತ್ತವೆ. ಉದಾ: ಚೆನ್ನುನಲಿಕೆ, ದೃಷ್ಟಿ, ಕೃಷಿ ನಂಬಿಕೆಗಳು, ಹರಿಜನ ಕಾಲೊನಿ, ಜೀರ್ಮುಕ್ಕಿಯ ಮುಸ್ಲಿಮರು ಮುಂತಾದ ಪ್ರಬಂಧಗಳು ಇಲ್ಲಿ ಸಂಕಲನಗೊಂಡಿವೆ.

ಚನ್ನಬಸಪ್ಪ ಗೊ.ರು. (ಸಂ), ೧೯೭೭
ಕರ್ನಾಟಕ ಜನಪದ ಕಲೆಗಳು (ಸ್ಥೂಲ ಪರಿಚಯ)
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಕ್ರೌ. ೧/೪, ಪು. ೧೬+೧೨+೨೦೦, ರೂ. ೧೫/-

ಕರ್ನಾಟಕ ಗ್ರಾಮ ಕಲೆಗಳ ಒಂದು ಪಕ್ಷನೋಟವನ್ನು ಇಲ್ಲಿ ಕೊಡಲಾಗಿದೆ ಹಾಗಾಗಿ ಕರ್ನಾಟಕದ ಬೇರೆ ಭಾಗದಲ್ಲಿನ ಕುಣಿತ, ಹಾಡು, ಕಥೆ, ವೇಷ ನೃತ್ಯ, ತಾಳಮ್ದಳೆ, ಯಕ್ಷಗಾನ, ಭೂತಾರಾಧನೆ, ನಾಗಮಂಡಲಾರಾಧನೆ ಮುಂತಾದ ಹಲವು ಜಾನಪದ ಕಲೆ – ಆರಾಧನೆಗಳನ್ನು ಪರಿಚಯಿಸುವ ಕೃತಿ ತುಳುನಾಡಿನಲ್ಲಿ ಪ್ರಚಲಿತವಿರುವ ಕುಣಿತಗಳಾದ ಆಟಿ ಕಳೆಂಜ, ಪಿಲಿಪಂಜಿ, ಸೋಣ ಜೋಗಿ, ಚೆನ್ನಕುಣಿತ, ಕರುಂಗೋಲು, ಕಂಗಿಲು, ದುಡಿಕುಣಿತ, ಮತ್ತು ಜಾನಪದ ಕಲೆಗಳನ್ನು ತೋರಿಸುವಂಥ ಅನೇಕ ಛಾಯಾಚಿತ್ರಗಳೂ ಇಲ್ಲಿವೆ.

ಚಿನ್ನಪ್ಪ ಗೌಡ (ಸಂ), ೨೦೦೦
ಸೇರಿಗೆ (ಜಾನಪದ ಲೇಖನಗಳ ಸಂಪುಟ)
ಮದಿಪು ಪ್ರಕಾಶನ ಮಂಗಳಗಂಗೋತ್ರಿ, ಡೆ. ೧/೮, ಪು. ೩೮೮, ರೂ. ೧೫೦/-

೨೩ ಸಂಪ್ರಬಂಧಗಳ ಸಂಗ್ರಹ ಈ ಕೃತಿಯಲ್ಲಿದೆ. ಇದರಲ್ಲಿ ಚೆನ್ನುಕುಣಿತ, ಮುಗೇರ ಕೋಲಗಳಂಥ ಪ್ರದರ್ಶನ ಕಲೆಗಳಿವೆ, ಕೆಲಿಂಜ ಮತ್ತು ಕಾರಿಂಜದಂಥ ಸ್ಥಳಗಳ ಪ್ರಾದೇಶಿಕ ಅಧ್ಯಯನವಿದೆ. ಮಕ್ಕಳ ಆಟಗಳ ಮತ್ತು ಕೋಳಿ ಅಂಕದಂಥ ಕ್ರೀಡೆಗಳ ವಿವರಣೆ ಇದೆ. ಪರ್ಬ, ಅಮವಾಸ್ಯೆ, ಕೋಡಿ ಸಂಪ್ರದಾಯ ಮರಣೋತ್ತರ ಆಚರಣೆಗಳೇ ವಿವೇಚನೆಯಿದೆ. ಬಾಕುಡರು ಮತ್ತು ಕರೆಕುಡುಬಿ ಜನಾಂಗಗಳ ಜನಾಂಗಿಕ ಅಧ್ಯಯನವಿದೆ. ಹಾಗೆಯೇ ‘ವಿಷಯನಿಷ್ಠ ಜಾನಪದ’ದ ವ್ಯಾಪ್ತಿಯಲ್ಲಿ ಜಗಲಿ, ಕಳ್ಳು, ಕಾಸರಕ, ಬಾಳೆ, ಉಪ್ಪು, ಪಿಂಗಾರ, ದಕ್ಷಿಣ ದಿಕ್ಕು, ಮದರಂಗಿಗಳ ಕೇಂದ್ರೀಕೃತ ಅಧ್ಯಯನವಿದೆ ಮತ್ತು Devil worship of Tuluvas ಮತ್ತು ತುಳುನಾಡ ಗರೊಡಿಗಳ ಸಾಂಸ್ಕೃತಿಕ ಅಧ್ಯಯನದಂಥ ಕೃತಿ ಸಮೀಕ್ಷೆಯಿದೆ.

ಜತ್ತಪ್ಪ ರೈ ಕೆದಂಬಾಡಿ, ೧೯೭೯
ಈಡೊಂದು ಹುಲೆಯೆರಡು (ಬೇಟೆ ಸಾಹಿತ್ಯ), ಶ್ರೀ ಕೆದಂಬಾಡಿ ಜತ್ತಪ್ಪ ರೈ ಸನ್ಮಾನ
ಸಮಿತಿ ಮಂಗಳೂರು, ಪು. ೧೦+೧೪೪, ರೂ. ೧೦/-

ಬೇಟೆಯ ಅನುಭವದ ನೆನಪುಗಳನ್ನು ವಿವರಿಸುವ ಕೃತಿ.

ಜತ್ತಪ್ಪ ರೈ ಕೆದಂಬಾಡಿ, ೧೯೮೨
ಬೇಟೆಯ ಉರುಳು
ಭಾರದ್ವಾಜ ಪ್ರಕಾಶನ ಕದ್ರಿ, ಪು. ೧೧+೧೦೩+೭, ರೂ. ೧೯/-

ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಮೌಲ್ಯವನ್ನು ಈ ಕೃತಿ ಚಿತ್ರಿಸುತ್ತದೆ.

ಜತ್ತಪ್ಪ ರೈ ಕೆದಂಬಾಡಿ, ೧೯೭೯ (೧೯೭೮)
ಬೇಟೆಯ ನೆನಪುಗಳು
ಸಾಹಿತ್ಯ ಸಂಘ ಮಣಿಪಾಲ, ಪು. ೧೦+೧೪೨, ರೂ. ೮/-

ಲೇಖಕರ ತಾರುಣ್ಯದ ಬೇಟೆಯ ಅನುಭವದ ಮುಖಗಳನ್ನು ಪರಿಚಯಿಸುವ ಕೃತಿ. ಮರುಮುದ್ರಣ.

ಜಾರು ಪೇರೂರು, ೨೦೦೧
ಕೋಟಿ ಚೆನ್ನಯ ಕೆಲವು ಪ್ರಶ್ನೋತ್ತರಗಳು
ಚಿಂತಕ ಪ್ರಕಟನಾಲಯ ಅಂಗಡಿಮನೆ, ಪೇರೂರು, ಪು. ೧೬, ರೂ. ೨.೫೦/-

ಪೇರೂರು ಜಾರರ ವಾಸ್ತವಿಕ ನೆಲೆಗಟ್ಟಿನ ಮೇಲೆ, ಚಾರಿತ್ರಿಕ ಕಣ್ಣೊಟದಲ್ಲಿ ಪ್ರಾಮಾಣಿಕ ಪ್ರಯತ್ನವಾಗಿ ಮೂಡಿದೆ ಈ ಪ್ರಶ್ನೋತ್ತರ.

ತುಕಾರಾಂ ಪೂಜಾರಿ (ಸಂ.), ೧೯೯೭
ಕಣ್ಮರೆಯಾಗುತ್ತಿರುವ ತುಳು ಬದುಕು (ಪ್ರಬಂಧಗಳ ಸಂಗ್ರಹ)
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ
ಡೆ. ೧/೮, ಪು. ೧೨+೮೦, ರೂ. ೬೦/-

‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ದ ಉದ್ಘಾಟನಾ ವೇಳೆಯಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯ ಪ್ರಬಂಧಗಳು ಇವು. ಒಟ್ಟು ೬ ಪ್ರಬಂಧಗಳಿವೆ. ತುಳುವರ ವ್ಯವಸಾಯ, ವೃತ್ತಿ – ವ್ಯಾಪಾರ, ಆಟ ಮನೋರಂಜನೆಗಳು, ಗೃಹಕೃತ್ಯದ ಉಪಕರಣಗಳು, ಆಹಾರ – ಆಹಾರ ಮತ್ತು ಆರಾಧನಾ ವಿಷಯಗಳಲ್ಲಿ ಕಣ್ಮರೆಯಾಗುತ್ತಿರುವ ಅನೇಕ ವಸ್ತುಗಳನ್ನು, ಚಿತ್ರಗಳನ್ನು ಭವಿಷ್ಯದ ಅವಲೋಕನಕ್ಕಾಗಿ ಕಾದಿರಿಸಬೇಕಾದ ಅವಶ್ಯಕತೆಯ ಕಾಳಜಿ ಈ ಪ್ರಬಂಧಗಳಲ್ಲಿವೆ ಹಾಗೆಯೇ ತುಳು ಭಾಷೆ- ಸಾಹಿತ್ಯದ ಚಾರಿತ್ರಿಕತೆಯನ್ನು ವಿವರಿಸುವ ಪ್ರಬಂಧವೂ ಇದೆ.

ದೇವೇಂದ್ರ ಕುಮಾರ್ ಹಕಾರಿ ಡಾ., ಕೆ.ಆರ್. ಸಂಧ್ಯಾ ರೆಡ್ಡಿ ಡಾ. (ಸಂ), ೨೦೦೦
ಗ್ರಾಮೀಣ ಬೇಟೆಗಳು
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಡೆ. ೧/೮, ರೂ. ೪೫/-

ಬೇರೆ ಬೇರೆ ಲೇಖಕರು ಬರೆದ ಪ್ರಬಂಧಗಳಲ್ಲಿ ಬಯಲು ಸೀಮೆ, ಮಲೆನಾಡು, ಕೊಡಗು, ದ.ಕ., ಉ.ಕ. ಹೀಗೆ ಕರ್ನಾಟಕದ ವಿವಿಧ ಪರಿಸರಗಳಲ್ಲಿ ಪ್ರಚಲಿತವಾಗಿದ್ದ ಮತ್ತು ಇರುವ ಬೇಟೆಯ ಸಂಪ್ರದಾಯಗಳನ್ನು ಕುರಿತು ಮಾಹಿತಿಗಳಿವೆ. ‘ದಕ್ಷಿಣ ಕನ್ನಡದಲ್ಲಿ ಪ್ರಾಣಿ ಬೇಟೆ – ನರೇಂದ್ರ ರೈ ಡೇರ್ಲ (ಪು. ೫೩-೭೩) ಈ ಪ್ರಬಂಧದಲ್ಲಿ ತುಳುನಾಡಿನ ಜನಪದ ಸಾಹಿತ್ಯದಲ್ಲಿ ದೊರಕುವ ಬೇಟೆಯ ಬಗೆಗಿನ ಮಾಹಿತಿಗಳು, ತುಳುನಾಡಿನಲ್ಲಿ ಪ್ರಚಲಿತದಲ್ಲಿದ್ದಂಥ ಮತ್ತು ಪ್ರಚಲಿತದಲ್ಲಿರುವ ಬೇಟೆಗಳ ಬಗ್ಗೆ ಮಾಹಿತಿ ಇದೆ ಬೇಟೆಯ ವಿಧಿ ವಿಧಾನಗಳು, ಬೇಟೆ ಸಾಹಿತ್ಯದ ಕುರಿತೂ ಈ ಪ್ರಬಂಧ ನಮಗೆ ಮಾಹಿತಿ ನೀಡುತ್ತದೆ.

ದೊಡ್ಡಣ್ಣ ಬರೆಮೇಲು, ೨೦೦೦
ಲಗೋರಿ ಆಟದ ನಿಯಮಗಳು (ಜಾನಪದ ಕ್ರೀಡೆ)
ಪಯಸ್ವಿನಿ ಕ್ರೀಡಾ ಸಂಘ ಸುಳ್ಯ, ಕ್ರೌ ೧/೮, ಪು: ೧೨+೩೨+೨, ರೂ. ೨೫/-

ಜಾನಪದ ಕ್ರೀಡೆ ಲಗೋರಿಯ ಸಚಿತ್ರ ವಿವರಣೆಯ ಹಾಗೂ ನಿಯಮಾವಳಿಗಳನ್ನೊಳಗೊಂಡ ಕಿರುಪುಸ್ತಕ.

ಪುರುಷೋತ್ತಮ ಬಿಳಿಮಲೆ, ೧೯೮೯
ಕಂಬಳ
ರಾಜ್ಯ ಸಂಪನ್ಮೂಲ ಕೇಂದ್ರ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಮೈಸೂರು, ಕ್ರೌ ೧/೪, ಪು. ೪೦, ರೂ. ೫.೫೦/-

ವಯಸ್ಕರ ಶಿಕ್ಷಣ ಕಾರ್ಯಕ್ರಮದ ಸಲುವಾಗಿ ಬರೆದ ಈ ಪುಸ್ತಕದಲ್ಲಿ ತುಳು ನಾಡಿನ ಜನಪ್ರಿಯ ಕ್ರೀಡೆಯಾದ ಕಂಬಳದ ಕುರಿತು ಸಂಭಾಷಣೆ, ಹಾಗೂ ಚಿತ್ರಗಳ ಸಹಾಯದಿಂದ ಮಾಹಿತಿ ನೀಡಲಾಗಿದೆ.

ಮರಕಿಣಿ ಎಂ.ಬಿ., ೧೯೬೦
ದಕ್ಷಿಣ ಕನ್ನಡದ ಜನಪದ ಗೀತೆಗಳು (ಭಾಗ ೧)
ಕ್ರೌ ೧/೮, ರೂ. ೦.೨೫/-

ನೂರು ಬಿಡಿ ಕನ್ನಡ ಜನಪದ ಗೀತೆಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿ ನೀಡಲಾಗಿದೆ.

ರಾಜೇಗೌಡ ಹ.ಕ., ೧೯೮೦
ಕರ್ನಾಟಕ ವ್ಯವಸಾಯ ಉಪಕರಣಗಳು
ಬಿಎಚ್ ಪ್ರಕಾಶನ ಬೆಂಗಳೂರು, ಕ್ರೌ ೧/೮, ಪು. ೬೦, ೨/-

ಕರ್ನಾಟಕದಲ್ಲಿ ಬಳಕೆಯಲ್ಲಿರುವ ಕೃಷಿ ಸಂಬಂಧೀ ಉಪಕರಣಗಳ ಪರಿಚಯ ನೀಡುವ ಕಿರು ಪುಸ್ತಕ. ಉದಾ: ಹಲುಬೆ, ಮೇಣಿಗೋಲು, ಪಿಕಾಸಿ, ಮಚ್ಚು, ಕುಡುಗೋಲು, ಉಳಿ, ಗರಗಸ, ಕತ್ತಿ, ಕತ್ತರಿ, ದೊಣ್ಣೆ, ಮೊರ, ಒಂದರಿ, ಪೊರಕೆ ಇಂಥ ಹಲವು ವಸ್ತುಗಳ ಉಪಯೋಗದ ಕುರಿತು ಹೇಳುತ್ತಾ ಅವುಗಳ ಚಿತ್ರಗಳನ್ನು ನೀಡಲಾಗಿದೆ.

ವಾಮನ ನಂದಾವರ, ೧೯೯೨
ಪಟ್ಟಾಂಗ
ಕ್ರೌ ೧/೮, ಪು. ೬೫, ರೂ. ೧೫/-

ದೈನಂದಿನ ಜೀವನದ ಘಟನೆ ಸಂಗತಿಗಳನ್ನು ಆಧಾರವಾಗಿರಿಸಿ ರಚಿಸಿದ ಲಲಿತ ನಿಬಂಧಗಳ ಸಂಕಲನಾ ಕೃತಿ.

ವೆಂಕಟಕೃಷ್ಣಯ್ಯ ಕೆ. (ಸಂ), ೧೯೯೨
ಬೊಂಬೆಯಾಟವಯ್ಯ
ಶ್ರೀ ಕೆ. ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.), ಕಾಸರಗೋಡು
೧/೮, ರೂ. ೪೫/-

ಈ ಗ್ರಂಥದಲ್ಲಿ ಬೇರೆ ಬೇರೆ ಲೇಖಕರು ಬರೆದ ಲೇಖನಗಳಿದ್ದು, ದಕ್ಷಿಣ ಕನ್ನಡದ ಗೊಂಬೆಯಾಟದಿಂದ ಹಿಡಿದು ಪ್ರಪಂಚದ ವಿವಿಧ ದೇಶಗಳಲ್ಲಿನ ಗೊಂಬೆಯಾಟಗಳನ್ನು ಪರಿಚಯಿಸುವ ಲೇಖನಗಳಿವೆ. ಹಾಗೆಯೇ ವೆಂಕಟರಾಜ ಪುಣಿಂಚತ್ತಾಯರು ಬರೆದ ‘ಕಾಸರಗೋಡಿನ ತುಳು ಜಾನಪದ ಸಾಹಿತ್ಯ’ ಲೇಖನದಲ್ಲಿ ಜನಪದ ಸಾಹಿತ್ಯದಲ್ಲಿ ಬರುವ ಪಾಡ್ದನ, ಕಬಿತ, ಜನಪದ ಹಾಡುಗಳು ಇತ್ಯಾದಿಗಳ ಕುರಿತ ಮಾಹಿತಿಗಳಿವೆ. (ಪು. ೧೬೬-೧೭೭) ‘ಜಾನಪದ ಗೀತೆಗಳು’ ಕೆ. ಸದಾಶಿವ ಶ್ಯಾನುಭಾಗ್ – ಜಾಣಪದ ಗೀತೆಗಳ ಸಂಗ್ರಹವನ್ನು ಕೊಡಲಾಗಿದೆ. (ಪು. ೧೭೮-೧೯೩)

ಶಂಕರನಾರಾಯಣ ತೀ. ನಂ. ಡಾ. (ಸಂ), ೧೯೯೮
ಕರ್ನಾಟಕ ಜನಪದ ಮಹಾಕಾವ್ಯಗಳು (ವಿಚಾರ ಸಂಕಿರಣದ ಪ್ರಬಂಧಗಳ ಸಂಕಲನ)
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು
ಡೆ. ೧/೮, ಪು. ೨೬+೧೫೯, ರೂ. ೩೦/-

ಕರ್ನಾಟಕ ಮಾತ್ರವಲ್ಲದೆ ವಿದೇಶದ ಮಹಾಕಾವ್ಯಗಳ ಕುರಿತಂತೆಯೂ ಪ್ರಬಂಧಗಳಲ್ಲಿ ಮಾತುಗಳು ಬಂದಿವೆ. ಹಾಗೆಯೇ ತುಳುವಿನ ಜನಪದ ಮಹಾಕಾವ್ಯವಾದ ಪಾಡ್ದನಗಳ ಉಲ್ಲೇಖವೂ ಅಲ್ಲಲ್ಲಿ ಕಂಡು ಬರುತ್ತದೆ. ಒಟ್ಟು ೯ ಪ್ರಬಂಧಗಳಿವೆ. ಕೆ. ಚನ್ನಪ್ಪ ಗೌಡರ ‘ತುಳು ಜನಪದ ಮಹಾಕಾವ್ಯಗಳು: ಅಧ್ಯಯನದ ನೆಲೆಗಳು ಮತ್ತು ಪ್ರವೃತ್ತಿಗಳು’ ಎಂಬ ಪ್ರಬಂಧದಲ್ಲಿ ತುಳು ಜನಪದ ಮಹಾಕಾವ್ಯಗಳ ಕುರಿತ ನಡೆದಂಥ ಅಧ್ಯಯನ ಸ್ಥೂಲ ಪರಿಚಯವನ್ನು ನೀಡಿದ್ದಾರೆ ಉಳಿದ ೮ ಪ್ರಬಂಧಗಳಲ್ಲಿ ಕನ್ನಡದ ಜನಪದ ಮಹಾಕಾವ್ಯಗಳ ಅಧ್ಯಯನವನ್ನು ಹೆಚ್ಚಾಗಿ ಕಾಣಬಹುದು.

ಶಂಕರನಾರಾಯಣ ತೀ. ನಂ. ಡಾ. (ಸಂ), ೧೯೮೫
ದ್ರಾವಿಡ ಜಾನಪದ (ವಿಚಾರ ಸಂಕಿರಣದ ಪ್ರಬಂಧಗಳು)
ಕನ್ನಡ ವಿಭಾಗ ಮೈಸೂರು ವಿ.ವಿ., ಡೆ. ೧/೮, ರೂ. ೨೫/-

ದ್ರಾವಿಡ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು, ತೆಲಗು, ಕೊಡವ ಜಾನಪದಗಳ ಕುರಿತಂತೆ ಪ್ರಬಂಧಗಳಿವೆ. ‘ತುಳು ಜಾನಪದ’ ಅಮೃತ ಸೋಮೇಶ್ವರ (ಪು. ೧೮೩-೨೧೦)ರ ಪ್ರಬಂಧದಲ್ಲಿ ತುಳು ಜನಪದ ಸಾಹಿತ್ಯ, ಆರಾಧನೆ, ನಂಬಿಕೆ. ಸಾಮಾಜಿಕ ಪದ್ಧತಿಗಳು, ಕಲೆಗಳು, ಕ್ರೀಡೆ- ವಿನೋದ ತುಳುವಿನ ಜಾನಪದದಲ್ಲಿ ಬಂದಂಥ ಕೃತಿಗಳ ಸಮೀಕ್ಷೆಯೂ ಇದೆ.

ಶಿವರಾಮ ಶೆಟ್ಟಿ ಬಿ., ೧೯೮೯
ಕೋಳಿ ಅಂಕ
ರಾಜ್ಯ ಸಂಪನ್ಮೂಲ ಕೇಂದ್ರ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ
ಮೈಸೂರು, ಕ್ರೌ ೧/೪, ಪು. ೪+೩೬, ರೂ. ೪.೫೦/-

‘ಜಾನಪದ ಮಾಲೆ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿರುವ ಈ ಪುಸ್ತಕದಲ್ಲಿ ತುಳುನಾಡಿದ ಜನಪ್ರಿಯ ಕ್ರೀಡೆಯಾದ ‘ಕೋಳಿ ಅಂಕ’ದ ಮಾಹಿತಿಗಳನ್ನು ಸಂಭಾಷಣೆಯ ರೀತಿಯಲ್ಲಿ ಅಂದರೆ ಕಥೆಯ ರೂಪದಲ್ಲಿ ನೀಡಲಾಗಿದೆ. ಹಾಗೆಯೇ ಕೆಲವು ಚಿತ್ರಗಳೂ ಇವೆ (ವಯಸ್ಕರ ಶಿಕ್ಷಣದ ಸಲುವಾಗಿ ಪ್ರಕಟವಾದಂಥ ಪುಸ್ತಕ).

ಶಿವರಾಮ ಶೆಟ್ಟಿ ಬಿ., ೨೦೦೦
ಸಸ್ಯ ಜಾನಪದ
ಪ್ರಸಾರಾಂಗ ಕನ್ನಡ ವಿ.ವಿ. ಹಂಪಿ, ಡೆ. ೧/೮, ಪು. ೨+೩೬, ರೂ. ೧೦/-

ಇಂದು ಭಾಷೆಯ ಮೂಲಕ ಪರಿಕಲ್ಪಿತಗೊಳ್ಳುವ ‘ಸಸ್ಯ ಜಾನಪದ’ದ ಸ್ವರೂಪವೇನು? ಈ ಪರಿಕಲ್ಪನೆಯ ಮೂಲಕ ಹೊಂದುವ ಅರಿವಿನ ವಿಧಾನ ಮತ್ತು ಅದರ ಸ್ವರೂಪವೇನು? ಈ ಪ್ರಶ್ನೆಗಳನ್ನಿಟ್ಟುಕೊಂಡು ‘ಸಸ್ಯ ಜಾನಪದ’ ವನ್ನು ಪುನರ್ ನಿರ್ವಚಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.

ಶ್ರೀನಿವಾಸ ಭಟ್ಟ ಪು. ಕಟೀಲು, ೨೦೦೫
ಜನಪದ ಶತಪಥ
ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ, ದ.ಕ.
ಡೆ. ೧/೮, ಪುಟಗಳು : ೧೮೦, ಬೆಲೆ : ರೂ. ೬೦/-

ಯುಗುಪುರುಷ ಪತ್ರಿಕೆಯಲ್ಲಿ ಬರೆದ ಜನಪದ ಲೇಖನಗಳ ಸಂಗ್ರಹ. ಸ್ಥಳನಾಮಗಳಿಂದ ತೊಡಗಿ ತುಳುನಾಡಿನ ನಾಗಬನಗಳ ತನಕ ಮೂವತ್ತಾರು ಲೇಖನಗಳಿವೆ.

ಹರಿಶ್ಚಂದ್ರ ಪಿ. ಸಾಲಿಯಾನ್ (ಸಂ), ೨೦೦೬
ಶ್ರೀ ಕ್ಷೇತ್ರ ಬಪ್ಪನಾಡು (ಕ್ಷೇತ್ರ ಪರಿಚಯದ ಲೇಖನಗಳ ಸಂಗ್ರಹ)
ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ, ದ.ಕ.
ಕ್ರೌ. ೧/೮, ಪುಟಗಳು : ೬೪, ಬೆಲೆ : ರೂ. ೩೦/-

ಕೆಲವು ಲೇಖಕರು ಈ ಕ್ಷೇತ್ರದ ಕುರಿತು ಬರೆದ ಲೇಖನಗಳ ಸಂಗ್ರಹ.

ರಸಿಕ ಪುತ್ತಿಗೆ, ೧೯೮೩
ಕಂಬಳ ಕೋಳಿ ಅಂಕ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು
ಕ್ರೌ ೧/೮, ಪು. ೪೬, ರೂ. ೬/-

ತುಳುನಾಡಿನ ಜನಪದ ಕ್ರೀಡೆಗಳಾದ ಕೋಳಿ ಅಂಕ ಮತ್ತು ಕಂಬಳದ ಕುರಿತು ಮಾಹಿತಿ ನೀಡುವ ಕೃತಿ.