ತುಳು – ಜಾನಪದ

ಅಮೃತ ಸೋಮೇಶ್ವರ (ಸಂ), ೧೯೯೭
ತುಳು ಪಾಡ್ದನ ಸಂಪುಟ
ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ, ಡೆಮಿ ೧/೮, ಪು : ೮+೫೦೨, ರೂ. ೧೫೦/-

ತುಳು ಪಾಡ್ದನಗಳ ಸ್ವತಂತ್ರ ಸಂಗ್ರಹಣಾ ಕೃತಿ.

ಅಮೃತ ಸೋಮೇಶ್ವರ, ೧೯೯೮
ಪೊಸ ಗಾದೆಲು
ಪ್ರಕೃತಿ ಪ್ರಕಾಶನ, ಕೋಟೆಕಾರು, ಡೆಮಿ ೧/೮, ಪುಟಗಳು : ೪+೫೦, ರೂ. ೮/-

ತುಳುವಿನ ಹೊಸ ಗಾದೆಗಳ ಸಂಗ್ರಹವನ್ನು ಕನ್ನಡಾನುವಾದ ಸಮೇತ ನೀಡಲಾಗಿದೆ.

ಅಮೃತ ಸೋಮೇಶ್ವರ (ಸಂ / ಅನು.), ೧೯೭೮
ಬಾಮಕುಮಾರ ಸಂಧಿ (ಗಣಪತಿಯ ಪಾಡ್ದನ), ಪ್ರಕೃತಿ ಪ್ರಕಾಶನ, ಕೋಟೆಕಾರು.
ಡೆಮಿ ೧/೮, ಪುಟಗಳು : ೧೮, ರೂ. ೧/-

ಗಣಪತಿಯ ಹುಟ್ಟು, ಮಹಿಮೆಗಳನ್ನು ಜನಪದ ನೆಲೆಯಲ್ಲಿ ವಿವರಿಸುವ ಪಾಡ್ದನರೂಪದ ಪುಟ್ಟ ಕೃತಿ. ಮೂಲ ತುಳು ಪಾಡ್ದನದೊಂದಿಗೆ ಕನ್ನಡದಲ್ಲಿ ಅನುವಾದವನ್ನೂ ಕೊಡಲಾಗಿದೆ.

ಆಗಸ್ಟ್ ಮ್ಯಾನರ್, ೧೮೮೯
ಪಾಡ್ದನೊಳು
ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು.

ಬೊಬ್ಬರ್ಯ, ಪಂಜುರ್ಲಿ (ಬೇರೆ ಬೇರೆ ಪಾಠಾಂತರಗಳಿವೆ) ಜುಮಾದಿ, ಕಲ್ಕುಡ ಕಲ್ಲುರ್ಟಿ, ಕೋಟಿ ಚೆನ್ನಯ ಇತ್ಯಾದಿ ಬೇರೆ ಬೇರೆ ಭೂತಗಳ ೨೧ ಪಾಡ್ದನಗಳನ್ನು ಸಂಗ್ರಹಿಸಲಾಗಿದೆ.

ಕಮಲಾಕ್ಷ ಕೆ., ೨೦೦೩
ಬಾಲೆ ಪಿನವುಳ್ಳ ದೇವುಪೂಂಜೆ ಸಂಧಿ ಮತ್ತು ವಿಶ್ಲೇಷಣೆ
ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು, ಡೆ. ೧/೮, ಪು: ೮+೧೧೧, ರೂ. ೬೦/-

‘ಸಂಧಿ’ ಪದದ ವಿಶ್ಲೇಷಣೆಯ ಮೂಲಕ ‘ದೇವುಪೂಂಜ’ ಪಾಡ್ದನದ ವೈಶಿಷ್ಟ್ಯ, ವೈಶಾಲ್ಯಗಳನ್ನು ಹೇಳಿದ್ದಾರೆ. ಪಾಡ್ದನದಲ್ಲಿ ಬರುವ ವಿವಿಧ ಘಟನೆಗಳ ಒಳಹೊಕ್ಕು ಅದರಲ್ಲಿ ಸಮನ್ವಯಗೊಂಡಿರುವ ತುಳು ಸಂಸ್ಕೃತಿಯ ರೂಪುರೇಷೆಗಳನ್ನು ಪರಿಶೀಲಿಸಿದ್ದಾರೆ.

ಕದ್ರಿ ನವನೀತ ಶೆಟ್ಟಿ, ೨೦೦೬
ನಮ್ಮ ತುಳುವೆರೆ ಎದುರು ಕತೆಕ್ಲು
ಯಗಪುರುಷ ಕಿನ್ನಿಗೋಳಿ
ದ.ಕ. ಕ್ರೌ. ೧/೮, ಪುಟಗಳು : ೪೮, ಬೆಲೆ : ರೂ. ೨೦/-

ಅಲ್ಲಲ್ಲಿ ಹರಡಿ ಹೋಗಿರುವ ತುಳು ಪರಂಪರೆಯ ೩೮೯ ಇದಿರು ಕತೆಗಳನ್ನು ಸಿಕ್ಕಿದಂತೆ ಇಲ್ಲಿ ಪೋಣಿಸಿಕೊಟ್ಟಿರುತ್ತಾರೆ.

ಮ್ಯಾನರ್ ಎ. (ಡಾ. ಶ್ರೀಕೃಷ್ಣ ಭಟ್ಟ, ಅರ್ತಿಕಜೆ (ಸಂ), ೧೯೮೩
ಸಹಸ್ರಾರ್ಧ ತುಳು ಗಾದೆಳು

ಸುಮಾರು ೫೦೦ ತುಳು ಗಾದೆಗಳ ಸಂಕಲನ. ಜರ್ಮನ್ ಕ್ರಿಶ್ಚಿಯನ್ ಮಿಶನರಿಗಳು ಸಂಗ್ರಹಿಸಿ ಪ್ರಕಟಿಸಿದ ತುಳು ಗಾದೆಗಳ ಮೊತ್ತಮೊದಲ ಸಂಕಲನ.

ಜಾರು ಪೇರೂರು
ಜೋಕುಲೆ ರಾಗೊಲು
ಚಿಂತಕ ಪ್ರಕಟಣಾಲಯ, ಕೆಂಗೇರಿ, ಕ್ರೌನ್ ೧/೮, ಪುಟಗಳು : ೨೦

ಮಕ್ಕಳ ಜಾನಪದದ ಸಂಗ್ರಹ

ದಾಮೋದರ ಕಲ್ಮಾಡಿ (ಸಂ), ೨೦೦೨
ಕೋಟಿ ಚೆನ್ನಯ ಪಾರ್ದನ ಸಂಪುಟ
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಕ್ರೌನ್ ೧/೪, ಪುಟ: ೨೦+೩೧೫, ರೂ. ೨೦೦/-

ದ.ಕ.ದ ವಿಶಿಷ್ಟ ಮೌಖಿಕ ಕಾವ್ಯವಾದ ಕೋಟಿ ಚೆನ್ನಯ ಪಾಡ್ದನವನ್ನು ಸಂಗ್ರಹಿಸಿ ಮೂಲಪಠ್ಯ, ಅನುವಾದ, ಟಿಪ್ಪಣಿಗಳ ಸಹಿತ ನೀಡಲಾಗಿದೆ. ಹಾಗಾಗಿ ಪ್ರತಿಯೊಂದು ಅಧ್ಯಾಯದ ಮಹತ್ವದೊಂದಿಗೆ ಪಾಡ್ದನದ ಭಾವಾರ್ಥ ಹಾಗೂ ಶಬ್ದಾರ್ಥಗಳನ್ನೂ ನೀಡಲಾಗಿದೆ.

ನಾರಾಯಣ ಎಮ್. (ಸಂಗ್ರಹ), ೧೯೬೨
ತುಳು ಒಗಟುಗಳು
ಪ್ರಭಾತ, ರಥಬೀದಿ, ಮಂಗಳೂರು, ಕ್ರೌನ್ ೧/೮, ರೂ. ೧.೫೦/-

೨೦೨ ತುಳು ಒಗಟುಗಳನ್ನು ಕನ್ನಡ ತಾತ್ಪರ್ಯ ಸಮೇತ ನೀಡಲಾಗಿದೆ.

ನಾವಡ ಎ.ವಿ. (ಸಂ), ೧೯೯೯
ಗಿಡಿಕೆರೆ ರಾಮಕ್ಕ ಮುಗ್ಗೇರ್ತಿ ಕಟ್ಟಿದ ‘ಸಿರಿ ಪಾಡ್ದನ’
ಪ್ರಸಾರಾಂಗ ಕನ್ನಡ ವಿ.ವಿ. ಹಂಪಿ, ವಿದ್ಯಾರಣ್ಯ
ಡೆ. ೧/೮, ಪು. ೩೩೫+೯೦, ರೂ. ೧೫೦/-

ಕರಾವಳಿ ಕರ್ನಾಟಕದ ಶ್ರೀಮಂತ ಮೌಖಿಕ ಪರಂಪರೆಯನ್ನು ಹೊಂದಿರುವ ತುಳು ಭಾಷೆಯ ಪಾಡ್ದನ ಕಾವ್ಯ. ಸಿರಿ ಪಾಡ್ದನವನ್ನು ಹಾಡುವ ಸಂದರ್ಭ ಪಠ್ಯದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಮೌಖಿಕ ಕಾವ್ಯದಲ್ಲಿ ತುಳುವರ ಆದರ್ಶ, ಮೌಲ್ಯ, ಸಂಪ್ರದಾಯ, ಕುಟುಂಬ ಪದ್ಧತಿಗಳು ಹೆಣೆಯಲ್ಪಟ್ಟಿವೆ. ಸಿರಿ ಪಾಡ್ದನದ ಕಥಾಸಾರವನ್ನು ಕನ್ನಡದಲ್ಲಿ ಆರಂಭದಲ್ಲಿ ನೀಡಲಾಗಿದೆ.

ಬಾಲಕೃಷ್ಣ ಶೆಟ್ಟಿ ಪೊಳಲಿ., ೧೯೯೫
ಪೊಳಲಿ ನುಡಿಮಾಲೆ
ಕನ್ನಡ ಚೈತನ್ಯ ನವದೆಹಲಿ, ಡೆಮಿ ೧/೮, ರೂ. ೭೫/-

ತುಳು ಗಾದೆಗಳ ಸಂಗ್ರಹ ಈ ಪುಸ್ತಕದಲ್ಲಿದೆ.

ಬುಧಾನಂದ ಶಿವಳ್ಳಿ, ೨೦೦೪
ತುಳು ಪಾತೆರೊ
ಸಂ. : ಬಿ.ಎ. ರವೀಂದ್ರ, ಮಂದಿರ ಪ್ರಕಾಶನ, ಬೋಂದೆಲ್, ಮಂಗಳೂರು-
೫೭೫ ೦೦೮, ಡೆ. ೧/೮, ಪುಟಗಳು : ೩೨೦, ಬೆಲೆ : ರೂ. ೧೦೦/-

ಭಾಷಾ ಶಾಸ್ತ್ರ, ತುಳು ವ್ಯಾಕರಣ, ಜನಪದ ಸಾಹಿತ್ಯ, ಸಂಸ್ಕೃತಿ, ತುಳು- ಕನ್ನಡ ಸಂಬಂಧ, ಕನ್ನಡ ಲಿಪಿಯ ವಿಕಾಸ, ತುಳು ಭಾಷೆ ನಡೆದು ಬಂದ ಹಾದಿ ಇಂತಹ ಅಧ್ಯಯನ ವಿಶ್ಲೇಷನಾತ್ಮಕ ಲೇಖನಗಳ ಸಂಕಲನ.

ರಾವ್ ಪಿ.ಎಸ್. (ಸಂಗ್ರಹ), ೨೦೦೧
ಡಾಂ ಡೀಮ್ ಡುಸ್ ತುಳು ಒಗಟುಲು
ದುರ್ಗಾ ಪ್ರಕಾಶನ, ಮಣ್ಣಗುಡ್ಡೆ, ಕ್ರೌನ್ ೧/೮, ಪುಟಗಳು : ೨೪, ರೂ. ೧೨/-

ತುಳುವಿನ ಅನೇಕ ಒಗಟುಗಳನ್ನು ಉತ್ತರ ಸಮೇತ ನೀಡಲಾಗಿದೆ.

ರಾವ್ ಪಿ.ಎಸ್. (ಸಂಗ್ರಹ), ೧೯೯೨
ತುಳು ಗಾದೆಲು
ಕ್ರೌನ್ ೧/೮, ರೂ. ೮/-

ತುಳುಗಾದೆಗಳ ಸಂಗ್ರಹ ಕೃತಿ.

ವಾದಿರಾಜ ಭಟ್ಟ ಕನರಾಡಿ, ೧೯೭೭
ಪಾಡ್ದನಗಳು
ಕ್ರೌನ್ ೧/೮, ಪುಟಗಳು : ೨೪೪, ರೂ. ೧೦/-

ಪಾಡ್ದನ ಸಾಹಿತ್ಯ ಪ್ರಕಾರದ ಬಗ್ಗೆ ವಿಮರ್ಶಾತ್ಮಕ ಅಧ್ಯಯನವಿದೆ. ‘ಪಾಡ್ದನ’ದ ನಿಷ್ಪತ್ತಿ, ಸ್ವರೂಪ, ಇತಿಹಾಸ, ಶೈಲಿ ಮುಂತಾದವುಗಳ ವಿಸ್ತೃತ ನಿರೂಪಣೆ ಇದೆ. ೨೮ ಪಾಡ್ದನ ಪಠ್ಯಗಳ ಸಂಗ್ರಹ ಸಹಿತ ಸಂಶೋಧನಾತ್ಮಕ ಅಧ್ಯಯನದ ಕೃತಿ.

ವಾಮನ ರೈ ಬಿ.ಎ., ೧೯೭೧
ತುಳು ಒಗಟುಗಳು
ಕನ್ನಡ ಸಂಘ, ಮಂಗಳಗಂಗೋತ್ರಿ
ಕ್ರೌನ್ ೧/೮, ಪುಟಗಳು : ೧೩+೮೦, ರೂ. ೨.೫೦/-

೫೦೭ ತುಳು ಒಗಟುಗಳ ಸಂಗ್ರಹವಿದೆ. ಕನ್ನಡಾನುವಾದವನ್ನೂ ಆಯಾ ಒಗಟುಗಳೊಂದಿಗೆ ನೀಡಲಾಗಿದೆ.

ವಿವೇಕ ರೈ ಬಿ.ಎ., ರಾಜಶ್ರೀ (ಸಂಗ್ರಹ), ೧೯೯೬
ತುಳು ಕಬಿತಗಳು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮಂಗಳಗಂಗೋತ್ರಿ
ಡೆ. ೧/೮, ಪು. ೨೭೩, ರೂ. ೯೦/-

೪೮ ಕಬಿತಗಳು ಸಂಕಲನಗೊಂಡಿವೆ. ಇಲ್ಲಿ ತುಳು ಕಬಿತಗಳ ಕನ್ನಡಾನುವಾದನ್ನು ನೀಡಲಾಗಿದೆ.

ವಿವೇಕ ರೈ ಬಿ.ಎ. ೧೯೭೧
ತುಳು ಗಾದೆಗಳು
ಪಲಚಂವಿ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ರೂ. ೪/- (ಸಾದಾ) ರೂ. ೭/- (ಉತ್ತಮ)

೭೦೦ ತುಳು ಗಾದೆಗಳ ಸಂಗ್ರಹ ಈ ಕೃತಿಯಲ್ಲಿದೆ.

ವಿವೇಕ ರೈ ಬಿ.ಎ. ಡಾ., ಉಪಾಧ್ಯಾಯ ಯು.ಪಿ. ಡಾ., ಶ್ರೀ ಅಮೃತ ಸೋಮೇಶ್ವರ ಸಂ. ಸಮಿತಿ, ೧೯೮೯
ಶ್ರೀ ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ಗಾದೆಗಳು
ಮಂಗಳೂರು ವಿ.ವಿ. ಮಂಗಳಗಂಗೋತ್ರಿ, ಡೆ. ೧/೮, ರೂ. ೬೦/-

ಸುಮಾರು ಐದೂವರೆ ಸಾವಿರದಷ್ಟು ತುಳು ಗಾದೆಗಳ ಸಂಗ್ರಹ ಈ ಕೃತಿಯಲ್ಲಿದೆ. ಕನ್ನಡದ ಅನುವಾದವನ್ನು ನೀಡಲಾಗಿದ್ದು ಅಗತ್ಯವಿದ್ದೆಡೆ ಗಾದೆಗಳ ಹಿನ್ನೆಲೆ, ವಿವರಣೆಯನ್ನು ಸಾಕಷ್ಟು ವಿವರವಾಗಿ ಕನ್ನಡದಲ್ಲಿ ಕೊಡಲಾಗಿದೆ. ತುಳುವಿನ ವಿಶಿಷ್ಟ ಪದಗಳಿಗೂ ಕನ್ನಡದಲ್ಲಿ ಅರ್ಥವನ್ನು ನೀಡಲಾಗಿದೆ.

ಶ್ರೀ ಕೃಷ್ಣ ಭಟ್ ಅರ್ತಿಕಜೆ, ೧೯೮೮
ಜನಪ್ರಿಯ ತುಳು ಗಾದೆಗಳು
ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ, ಡೆ. ೧/೮, ರೂ. ೮/-

ತುಳುವಿನಲ್ಲಿ ಹೆಚ್ಚು ಜನಪ್ರಿಯವಾದ ಗಾದೆಗಳಲ್ಲಿ ೫೮೧ ಗಾದೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಗಾದೆಗಳ ಸ್ವಾರಸ್ಯವನ್ನು ತಿಳಿಸಲು ಗಾದೆಗಳ ಕನ್ನಡಾನುವಾದವನ್ನು ನೀಡಲಾಗಿದೆ.

ತೌಳವ ಗಾಆ ಮಂಜರಿ ಅಂದ್‌೦ಡ ಸಾರ ತುಳು ಗಾದೆಳು
೧೮೯೬, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು.

೧೮೭೪ನೇ ಇಸವಿಯಲ್ಲಿ ಪ್ರಕಟವಾದ ‘ಸಹಸ್ರಾರ್ಧ ತುಳು ಗಾದೆಗಳು’ ಪುಸ್ತಕದಿಂದ ಮುಖ್ಯವಾದ ಗಾದೆಗಳನ್ನು ಮಾತ್ರ ಆರಿಸಿಕೊಂಡು ಮತ್ತು ತುಳುವರಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಒಳ್ಳೆಯ ಅರ್ಥವಿರುವ ಗಾದೆಗಳನ್ನು ಆರಿಸಿ ಒಟ್ಟು ೧೦೦೦ ತುಳು ಗಾದೆಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿ ಕೊಡಲಾಗಿದೆ.

ಕೋಟಿ ಚೆನ್ನಯ ಪಾಡ್ದನ (ತುಳುವಿನಲ್ಲಿ ಮತ್ತು ಇಂಗ್ಲಿಷಿನಲ್ಲಿ ಅದರ ಸಾರವನ್ನು ನೀಡಲಾಗಿದೆ).

ನೀತಿ ವಚನೊಳು, ೧೯೦೩
ಮುದ್ರಣ : ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು

೩೧ ಸಂಧಿಗಳಲ್ಲಿ ಹೇಳಲಾದ ತುಳುಗಾದೆಗಳು.

ಜುಮಾದಿ ಮತ್ತು ಮಲರಾಯಿ ಪಾಡ್ದನ
ಟ್ಯುಬಿಂಗನ್ ವಿಶ್ವವಿದ್ಯಾನಿಲಯ

ಮಲರಾಯ ಪಾಡ್ದನ

ತುಳು ಪಾಡ್ದನೊಳು, ತೊಡಕಿನಾರ್ (ಕಣಂದೂರು ದೈವಗಳು) ೧೯೨೪
ಪ್ರಕಾಶಕರು : ಎಂ. ಗಣಪತಿ ರಾವ್ ಐಗಳ್, ಮಂಜೇಶ್ವರ,

ಆರಂಭದಲ್ಲಿ ಕಣಂದೂರು ದೈವಗಳ ಕಥಾ ಸಾರಾಂಶವನ್ನು ಕನ್ನಡದಲ್ಲಿ ನೀಡಿ ನಂತರ ಪಾಡ್ದನವನ್ನು ತುಳುವಿನಲ್ಲಿ ನೀಡಲಾಗಿದೆ.

ಇಂಗ್ಲಿಷ್

Chinnappa Gowda, Annele Hanko, B.A. Viveka Rai, 1998
The SIri Epic as performed by Gopala Naika Part I
D 1/8, P: 491+68 & Part II, D 1/8, P: 15+395 (499to 893)

ಸಿರಿ ಪಾಡ್ದನಗಳ ಬಗ್ಗೆ ಇಂಗ್ಲಿಷಿನಲ್ಲಿ ಅಧ್ಯಯನ ಗ್ರಂಥ

Kurion J.C. Dr.
Plants thal Heal 1995 (1st) 1999, P. 332, Rs. 525/-

ತುಳುನಾಡಿನ ಗಿಡಮೂಲಿಕೆಗಳಿಂದಾಗು ಔಷಧಗಳ ಕುರಿತ ಕೃತಿ.

Klaus L. Janert and N. Narasimhan Poti Editiors.
Yakka Salere Kathe 1981
Franz Steince verlag GMBIA Wiesbaden

ಭಾರತದ ದಕ್ಷಿಣ ಭಾಗದ ದ್ರಾವಿಡ ಜಾನಪದ ಕಾವ್ಯದ ತುಳು ಪಠ್ಯಗಳು. ಇದರಲ್ಲಿ ಇಂಗ್ಲಿಷಿನ ಅನುವಾದ ಹಾಗೂ ಪದಕೋಶವು ಇದೆ.

Five Hundred Indian Plants Their use in Medicine & the arts in Canarese

ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ Vol. I 1881, Vo, II 1908, Mangalore Basel Mission Book & Tract Depository, Rs. 1/-

ಗಿಡಗಳ ಔಷಧೀಯ ಉಪಯೋಗಗಳ ಕುರಿತು ಮಾಹಿತಿ ನೀಡುವ ಪುಸ್ತಕ. ಗಿಡಗಳ ಹೆಸರುಗಳನ್ನು ತಮಿಳು, ತೆಲುಗು, ಮಲಯಾಳಂ, ತುಳು, ಹಿಂದೂಸ್ಥಾನಿ, ಸಂಸ್ಕೃತ ಇತ್ಯಾದಿ ಭಾಷೆಗಳಲ್ಲಿಯೂ ನೀಡಲಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಉಪಯೋಗಗಳನ್ನು ನೀಡಲಾಗಿದೆ.

 

ಅನುವಾದಗಳು

ಅನಂತರಾಮ ಬಂಗಾಡಿ
ಸ್ವಾಮಿಭಕ್ತೆ ಅತಿಕಾಯೆ
ಅಮೃತ ಸೋಮೇಶ್ವರ (ಅನು), ೧೯೫೮,
ಕಾಲೆವಾಲ (ಮೋಕೆದ ಬೀರೆ ಲಿಮಿಂಕಾಯೆ)
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ
ಡೆಮಿ ೧/೧೨, ಪುಟಗಳು : ೮+೮೯, ರೂ. ೭.೫೦/-

ಫಿನ್ಲೆಂಡಿನ ಜನಪದ ಮಹಾಕಾವ್ಯ ‘ಕಲೇವಾಲ’ದ ೧೧ರಿಂದ ೧೪ನೆಯ ಅಧ್ಯಾಯಗಳು ತುಳು ಪಾಡ್ದನ ಶೈಲಿಯಲ್ಲಿ ಅನುವಾದಿಸಲಾದ ಕೃತಿ. ‘ಕಲೇವಾಲ’ದ ಕಥಾನಾಯಕ ‘ಲೆಮಿಂಕಾಯ’ನ ಶೌರ್ಯಪ್ರದರ್ಶನದ ಕಥಾನಿರೂಪಣೆಯ ಭಾಗವಿರುವ ಕೃತಿ.

ಅಮೃತ ಸೋಮೇಶ್ವರ, ೧೯೮೮
ತುಳು ಕಾವ್ಯ
ಅನಿಕೇತನ, ಸಂಚಿಕೆ ೧-೧, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ಡೆ. ೧/೮,

ಅಮೃತ ಸೋಮೇಶ್ವರ, ೧೯೮೮
ಪೊಸ ಗಾದೆಲು (ಕನ್ನಡ ಅನುವಾದ ಸಹಿತ)
ಪ್ರಕೃತಿ ಪ್ರಕಾಶನ, ಕೋಟೆಕಾರ್.

ಈಶ್ವರ ಭಟ್ಟ ಕಿನ್ನಿಮಜಲ್
ತುಳು ಸೇತುಬಂಧೊ

ಕನ್ನಡದ ‘ಸೇತುಬಂಧ’ ಕೃತಿಯ ಅನುವಾದ.

ಕರ್ಕೇರಾ ಎಚ್ಕೆ, ೧೯೯೮,
ಕಾಲಚಕ್ರ
ಡೆಮಿ ೧/೮, ಪುಟಗಳು : ೮+೯೭, ರೂ. ೪೦/-

ಜಯವಂತ ದಳ್ವಿಯವರ ಮರಾಠಿ ಮೂಲದ ಸಾಮಾಜಿಕ ನಾಟಕದ ತುಳು ಅನುವಾದಿತ ಕೃತಿ.

ಕರ್ಕೇರಾ ಎಚ್ಕೆ (ಅನು), ೧೯೯೮
ಪುರುಷೆ
ಡೆಮಿ ೧/೮, ಪುಟಗಳು : ೯೦+೮, ರೂ. ೩೫/-

ತುಳು ಸಾಮಾಜಿಕ ನಾಟಕ. ಮೂಲ : ಮರಾಠಿ – ಜಯವಂತ ದಳ್ವಿ.

ಕಬ್ಬಿನಾಲೆ ವಸಂತ ಭಾರದ್ವಾಜ, ೨೦೦೫
ತುಳು ಸೋಮೇಶ್ವರ ಶತಕ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಡೆ. ೧೮, ರೂ. ೧೫/-

ಕೇಶವ ಭಟ್ಟ ಮಂದಾರ (ಅನು), ೧೯೯೬
ಭರತನ ಮೋಕೆ ಬೊಕ್ಕ ಮಾಯೆದ ಸೂರ್ಪನಕಿ
ಶ್ರೀ ದೇವಿ ಪ್ರಕಾಶನ, ಪರ್ಕಳ, ಕ್ರೌನ್ ೧/೮, ಪುಟಗಳು : ೨೨, ರೂ. ೮/-

ಮೂಲ : ಪಾರ್ತಿ ಸುಬ್ಬನ ‘ಪಾದುಕಾ ಪ್ರದಾನ’ ಮತ್ತು ‘ಸೂರ್ಪನಖಾ ಪ್ರಸಂಗ’ಗಳ ತುಳು ಭಾಷಾಂತರ.

ಕೇಶವ ಭಟ್ಟ ಮಂದಾರ (ಅನು)
ಕನತ್ತ ಪೊಣ್ಣು
ಕ್ರೌನ್ ೧/೮, ಪುಟಗಳು : ೫೪, ರೂ. ೬/-

ಸಂಸ್ಕೃತದ ಪ್ರಸಿದ್ಧ ನಾಟಕಕಾರ ಭಾಷ ಕವಿಯ ‘ಸ್ವಪ್ನವಾಸವ ದತ್ತ’ ನಾಟಕದ ತುಳು ಅನುವಾದ.

ಕ್ಯಾಥರೀನ್ ರೊಡ್ರಿಗಸ್, ಕಟಪಾಡಿ ೨೦೦೧ (ಕೊಂಕಣಿಯಿಂದ ತುಳು ಅನುವಾದ)
ಬಂಜಿ ಸಂಕಡ – ಬೆಂದ್ ಸಂಕಡ (ತುಳು ಚುಟುಕು)
ಕೊಂಕಣಿ ಪ್ರಕಾಶನ, ಮುಂಬಯಿ
ಕ್ರೌನ್ ೧/೧೬, ಪುಟಗಳು : ೧೧೬, ರೂ. ೩೦/-

ಪದ್ಯ ಹಾಗೂ ಗದ್ಯಗಳೆರಡನ್ನು ಮಿಶ್ರ ಮಾಡಿದಂತಹ ಕೃತಿ. ಹಳ್ಳಿಯ, ಪೇಟೆಯ ಬದುಕಿನಲ್ಲಿ ಆಗುತ್ತಿರುವಂತಹ ಸಂಗತಿ, ಸಂತೋಷ, ಪ್ರೀತಿ, ಮತ್ಸರ, ಗಂಡ ಹೆಂಡತಿ, ತಾಯಿ ಮಗು, ಅತ್ತೆ ಸೊಸೆ ಇಂತಹ ವಿಷಯಗಳ ಸುತ್ತಲೇ ಚುಟುಕುಗಳನ್ನು ರಚಿಸಲಾಗಿದೆ.

ಕ್ಯಾಥರಿನ್ ರೊಡ್ರಿಗಸ್, ಕಟಪಾಡಿ, ೨೦೦೦ (ಕೊಂಕಣಿಯಿಂದ ತುಳು ಅನುವಾದ)
ಸತ್ಯೊ ಮಿತ್ಯೊ
ಕೊಂಕಣಿ ಪ್ರಕಾಶನ, ಮುಂಬಯಿ
ಕ್ರೌನ್ ೧/೧೬, ಪುಟಗಳು : ೧೨೦, ರೂ. ೩೦/-

ಗಣೇಶ ಅಮೀನ್ ಸಂಕಮಾರ್, ೨೦೦೦ (ಅನುವಾದ)
ವಿಶಕುಮಾರ್ (ಕನ್ನಡ ಮೂಲ)

ಕರ್ಮ (ತುಳು ಕಾದಂಬರಿ)
ಶ್ರೀ ಬಿ. ದಾಮೋದರ ನಿಸರ್ಗ, ಅಧ್ಯಕ್ಷರು, ತುಳುಕೂಟ (ರಿ.), ಮಂಗಳೂರು
ಡೆಮಿ ೧/೮, ಪುಟಗಳು : ೭೨+೯, ರೂ. ೪೦/-

ಒಂದು ದೇವಸ್ಥಾನದ ಆಡಳಿತ, ಪೂಜೆಯ ಜನರು, ಅಲ್ಲಿಗೆ ಬರುವ ಬೇರೆ ಬೇರೆ ಜನರ ಮನಸ್ಸಿನ ಆಶೆಗಳೇನೆಂಬುದನ್ನು ಅರ್ಥ ಮಾಡಿಕೊಂಡು ಈ ಕಾದಂಬರಿಯನ್ನು ಬರೆಯಲಾಗಿದೆ. ಕೆಳಜಾತಿಯವರನ್ನು ಮುಟ್ಟದ ಜನರು ಅವರ ಹಣವನ್ನು ಬಯಸುವುದನ್ನೂ ಈ ಕಾದಂಬರಿ ಚಿತ್ರಿಸುತ್ತದೆ.

ಜತ್ತಪ್ಪ ಐ ಕೆದಂಬಾಡಿ, ೧೯೮೨
ಅಜ್ಜಬಿರು
ಡೆಮಿ ೧/೮, ಪುಟಗಳು : ೬೮, ಮೂಲ : ಎಸ್‌.ವಿ. ಪರಮೇಶ್ವರ ಭಟ್ಟ,
ಇ೦ದ್ರಚಾಪ.

ಜತ್ತಪ್ಪ ರೈ ಕೆದಂಬಾಡಿ, ೧೯೯೪ (ಅನುವಾದ)
ಅಸೆನಿಯಾಗೊ ಕಾಂತಗೋ ಜೋಗಿ
ತುಳುಕೂಟ ಉಡುಪಿ, ಕ್ರೌನ್ ೧/೮, ಪುಗಳು : ೩೪+೧೦, ರೂ. ೧೫/-
ಮೂಲ : ‘ದಿ ಪೈಡ್ ಪೈಪರ್ ಆಫ್ ಹೇಮಲಿನ್’ ಮತ್ತು ಕುವೆಂಪು ಅವರ
ಕಿದಂರಿಜೋಗಿ’.

ಜತ್ತಪ್ಪ ರೈ ಕೆದಂಬಾಡಿ, ೧೯೮೬
ತುಳು ಕಾಬೂಲಿವಾಲಾ
ರೂ. ೫/-, ಡೆಮಿ ೧/೮, ಪುಟಗಳು : ೪೬ ನೊಬೆಲ್ ಪ್ರಶಸ್ತಿ ವಿಜೇತ ವಿಶ್ವಕವಿ
ರವೀಂದ್ರನಾಥ ಠಾಗೋರ್ ರವರ ಕಾಬೂಲಿವಾಲದ ತುಳು ಅನುವಾದ.

ಜತ್ತಪ್ಪ ರೈ ಕೆದಂಬಾಡಿ, ೧೯೮೬
ಕುಜಿಲಿ ಪೂಜೆ
ಮೂಲ : ಉಮರ ಖಯ್ಯಾಮ್‌ರ ರುಬಾಯತುಗಳ ತುಳು ಅನುವಾದ.

ಜತ್ತಪ್ಪ ರೈ ಕೆದಂಬಾಡಿ, ೧೯೮೪
ಮದಪ್ಪಂದಿ ನೆಂಪು
ಕ್ರೌನ್ ೧/೮, ಪುಟಗಳು : ೧೨+೩೪೨, ರೂ. ೨೭/-

ನಿರಂಜನರ ‘ಚಿರಸ್ಮರಣೆ’ ಎಂಬ ಪ್ರಖ್ಯಾತ ಕಾದಂಬರಿಯ ತುಳು ಅನುವಾದ.

ಜತ್ತಪ್ಪ ರೈ ಕೆದಂಬಾಡಿ, ೧೯೮೮
ಸಿರಿ ರಾಮಾಶ್ವಮೇದೊ
ಕೆದ೦ಬಾಡಿ ಪ್ರಕಾಶನ, ಪಾಣಾಜೆ, ಡೆಮಿ ೧/೮, ಪುಟಗಳು : ೧೩೫, ರೂ. ೨೦/-

ನಂದಳಿಕೆಯ ಮುದ್ದಣ ಕವಿಯ ‘ಶ್ರೀ ರಾಮಾಶ್ವಮೇಧ’ ಹಳೆಗನ್ನಡ ಕಾವ್ಯದ ತುಳು ಅನುವಾದ.

ಜತ್ತಪ್ಪ ರೈ ಕೆದಂಬಾಡಿ (ಅನು), ೧೯೮೬
ಸೂದ್ರೆ ಏಕಲವ್ಯೆ
ಕ್ರೌನ್ ೧/೮, ಪುಟಗಳು : ೬೮, ರೂ. ೮/-
ಮೂಲ : ಕುವೆಂಪು ಅವರ ಬೆರಳ್ಗೆ ಕೊರಳ್.

ಜಾನಕಿ ಬ್ರಹ್ಮಾವರ, ೨೦೦೬
ಕೋರ್ಟ್ ಮಾರ್ಯಲ್
ಪವನ, ಕಪಿಲಾ ಕಂಪೌಂಡ್, ಹೇರೂರು, ಬ್ರಹ್ಮಾವರ
ಡೆಮಿ ೧/೮, ಪುಟಗಳು : ೬೦, ರೂ. ೪೦/-

ಹಿಂದಿ ನಾಟಕಕಾರ ಸ್ವದೇಶ್ ದೀಪಕ್ ಬರೆದ ಕೋರ್ಟ್‌ ಮಾರ್ಶಲ್ ನಾಟಕದ ತುಳು ರೂಪಾಂತರ. ಈ ನಾಟಕವನ್ನು ಕನ್ನಡಕ್ಕೆ ಸಿದ್ಧಲಿಂಗ ಪಟ್ಟಣಶೆಟ್ಟಿ ಅನುವಾದ ಮಾಡಿದ್ದಾರೆ.

ತ್ಯಾಂಪಣ್ಣ ಶೆಟ್ಟಿ ದೇರಂಬಳ, ೧೯೩೮
ತುಳು ಪಂಚವಟಿ ವಾಲಿ ಸಂಹಾರ
ಪ್ರಕಾಶಕರು : ಬೆಳೆಯೂರುಗುತ್ತು ಸುಬ್ಬಯ್ಯ ಶೆಟ್ಟಿ, ರೂ. ೦-೪-೦
ಮೂಲ : ಪಾರ್ತಿಸುಬ್ಬನ ಪಂಚವಟಿ ವಾಲಿ ಸುಗ್ರೀವರ ಕಾಳಗ.

ದೊಡ್ಡಣ್ಣ ಶೆಟ್ಟಿ ಕೆಮ್ತೂರು, ೧೯೫೪
ಅಂಗದ ರಾಜಿ ಪರ್ಸಂಗ (ತುಳು ಯಕ್ಷಗಾನ)
ಕಸ್ತೂರಿ ಸಾಹಿತ್ಯಮಾಲೆ, ಉಡುಪಿ, ಕ್ರೌನ್ ೧/೮, ಪುಟಗಳು : ೨೪, ರೂ. ನಾಲ್ಕಾಣೆ

ನರಸಿಂಗ ರಾವ್ ಮೂಲ್ಕಿ, ೧೯೩೪
ಗೀತೆಮಲ್ಲಿಗೆ
ಕ್ರೌನ್ ೧/೮

ಭಗವದ್ಗೀತೆಯ ೧೮ ಅಧ್ಯಾಯಗಳ್ನೂ ಪದ್ಯಶಃ ಅನುವಾದ ಮಾಡಿದ ಕೃತಿ. ಬೇರೆ ಬೇರೆ ಪದ್ಯಬಂಧಗಳಿದ್ದು ಅವುಗಳ ಧಾಟಿಗಳನ್ನು ಅಲ್ಲಲ್ಲೇ ಸೂಚಿಸಲಾಗಿದೆ.

ಪರಮೇಶ್ವರಯ್ಯ ಬಡಕಬೈಲು, ೧೯೯೯
ತುಳು ಕಿಟ್ಲರಾಜಿ ಪರ್ಸಂಗೊ
ಪ್ರಕಾಶನ : ಎಸ್.ಯು. ಪಣಿಯಾಡಿ ಪ್ರಕಾಶನ, ಶ್ರೀ ಭಾರತ ವಸ್ತು ಮಂದಿರ,
ಉಡುಪಿ, ರೂ. ೦-೮-೦

ಕನ್ನಡದ ‘ಕೃಷ್ಣ ಸಂಧಾನ’ ಯಕ್ಷಗಾನ ಪ್ರಸಂಗದ ಯಥಾನುವಾದದ ಕೃತಿ.

ಪಳನೀರು ವಾಸುದೇವ ಭಟ್, ೨೦೦೪
ದೇವಿನ ದಿನ್ಯ ಕತೆಕ್ಕುಲು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕ್ರೌ. ೧/೪, ರೂ. ೧೫.೦೦/-

ಪಾರ್ವತಿ ಜಿ. ಐತಾಳ, ೨೦೦೪
ಬಿನ್ನೆ (ರಡ್ಡ್ ಏಕಾಂಕ ನಾಟಕೊಲು)
ಸುವರ್ಣಗಿರಿ ಪ್ರಕಾಶನ, ಅಬ್ಬಕ್ಕನಗರ, ಮಂಗಳೂರು.

ರೂಪರ್ಟ್‌ ಬ್ರೂಕ್ ಅವರ ಲಿಥೈನಿಯಾ ಮತ್ತು ಪ್ಲೇರ್ಡ್‌ ಅವರ ದಿ ಮೇನ್ ಆಪ್‌ಸ್ಟೇರ್ ಆಂಗ್ಲ ನಾಟಕಗಳನ್ನು ಬಿನ್ನೆ ಮತ್ತು ಆ ಇಲ್ಲ್‌ದಾಯೆ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.

ಪ್ರೇಮಾನಂದ ಕಿಶೋರ್ ಬಿ. ೧೯೮೧
ಯಯಾತಿ
ಪುಟಗಳು : ೮೬+೬, ರೂ. ೫/-, ತುಳು ನಾಟಕ

ಗಿರೀಶ್ ಕಾರ್ನಾಡರ ಕನ್ನಡ ‘ಯಯಾತಿ’ಯ ತುಳು ಅನುವಾದ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೮೮
ಪೊಡುಂಬ ತಿಂಮನ ಕಗ್ಗ
ಸಾಹಿತ್ಯ ಸಂಘ, ಮಣಿಪಾಲ, ಪುಟಗಳು : ೮+೨೮, ರೂ. ೩/-

ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ ದಿಂದಾಯ್ದ ೧೬೭ ಕಗ್ಗಗಳ ತುಳು ಅನುವಾದ.

ಭೋಜರಾಜ ಕಡಂಬಾ ನಾ., ೧೯೭೯
ರತ್ನನ ಪದೊಕುಲು (ದ್ವಿತೀಯ ಮುದ್ರಣ)
ಕ್ರೌನ್ ೧/೮, ಪುಟಗಳು : ೬೮, ರೂ. ೨.೫೦/-

ಜಿ.ಪಿ. ರಾಜರತ್ನಂ ಅವರ ‘ರತ್ನನ ಪದಗಳು’ ಕೃತಿಯ ಪದ್ಯಗಳ ತುಳು ಅನುವಾದ.

ಮಧುಕುಮಾರ್ ನಿಸರ್ಗ ಬಿ., ೨೦೦೩
ಕೋಟಿ ಚೆನ್ನಯ (ತುಳು ಯಕ್ಷಗಾನ ಪ್ರಸಂಗ)
ಬೋಳೂರು ದ್ರೋಗ ಪೂಜಾರಿ ಯಕ್ಷಗಾನ ಕೇಂದ್ರ ನಿಸರ್ಗ, ಮರೋಳಿ,
ಮಂಗಳೂರು – ೫೭೫ ೦೦೫, ಡೆಮಿ ೧/೮, ಪುಟಗಳು : ೨೩, ರೂ. ೧೦/-

ಪಂದಬೆಟ್ಟು ವೆಂಕಟರಾಯರು ಕನ್ನಡದಲ್ಲಿ ಬರೆದಂಥ ಪ್ರಸಂಗವನ್ನು ಇವರು. ತುಳು ಯಕ್ಷಗಾನ ಪ್ರಸಂಗವಾಗಿಸಿದ್ದಾರೆ. ಇದರಲ್ಲಿ ತುಳುನಾಡಿನ ಕಾರಣಿಕ ಪುರುಷರಾದಂತಹ ಕೋಟಿ ಚೆನ್ನಯರ ಕಥೆಯನ್ನು ಯಕ್ಷಗಾನ ಪ್ರಸಂಗವಾಗಿ ಬರೆದಿದ್ದಾರೆ.

ಮಧುಕುಮಾರ್ ನಿಸರ್ಗ ಮರೋಳಿ, ೧೯೯೪
ತುಳು ಕರ್ಣಾವಸಾನ ಪ್ರಸಂಗ (ಯಕ್ಷಗಾನ)
ಕ್ರೌನ್ ೧/೮, ಪುಟಗಳು : ೧೨, ರೂ. ೨.೫೦/-

ವಸನ್ತ ಭಾರದ್ವಾಜ ಕಬ್ಬಿನಾಲೆ, ೧೯೯೯
ಪುರಂದರ ದಾಸೆರೆ ಪದೊಕುಲು
ಪಿಂಗಾರ ಪ್ರಕಾಶನ, ಉಡುಪಿ, ಕ್ರೌನ್ ೧/೮, ಪುಟಗಳು : ೬+೭೪, ರೂ. ೩೦/-

೭೩ ದಾಸರ ಹಾಡುಗಳನ್ನು ತುಳುವಿಗೆ ತರ್ಜುಮೆ ಮಾಡಿ ನೀಡಲಾಗಿದೆ.

ವಾದಿರಾಜ ಭಟ್ಟ ಕನರಾಡಿ, ೧೯೮೮
ತುಳು ಜನಪದ ಕತೆಕ್ಲು
ಕ್ರೌನ್ ೧/೮, ಪುಟಗಳು : ೧೮+೨, ರೂ. ೨/-, ಮೂಲ : ತುಳು ಜನಪದ ಕತೆಗಳು.

ವೇದಾವತಿ ಡಿ., ೧೯೯೯
ತುಳು ಜೈಮಿನಿ ಭಾರತೊ
ಸಿರಿ ಪ್ರಕಾಶನ, ಹಳೆಯಂಗಡಿ, ಡೆಮಿ ೧/೮, ಪುಟಗಳು : ೮+೨೨, ರೂ. ೯೦/-

ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ದ ತುಳು ಅನುವಾದ

ಶಾರದಾ ಆರ್. ರಾವ್, ೨೦೦೧
ಋಣ ಕಡ್ಪೆರಾಮಾ (ತುಳು ಸಾಮಾಜಿಕ ನಾಟಕ)
ಸಂದೀಪ ಸಾಹಿತ್ಯ, ಉಡುಪಿ, ಡೆಮಿ ೧/೮, ರೂ. ೩೬/-

ಇಂದಿರಾ ಹಾಲಂಬಿಯವರ ‘ಋಣ ಮುಕ್ತರಲ್ಲ’ ಕನ್ನಡ ನಾಟಕದ ತುಳು ಅನುವಾದ. ಈ ನಾಟಕದಲ್ಲಿನ ಎಲ್ಲಾ ಪಾತ್ರಧಾರಿಗಳೂ ಒಂದೊಂದು ರೀತಿಯಲ್ಲಿ ಮನುಷ್ಯ ಸಹಜ ಗುಣಧರ್ಮದ ಚೌಕಟ್ಟಿನಲ್ಲಿ ವ್ಯಕ್ತಿತ್ವವನ್ನು ಬಿಂಬಿಸಿಕೊಂಡು ಹೋಗುವ ರೀತಿ ನೋಡಿದರೆ ಜನಜೀವನದ ರೀತಿ, ನೀತಿ, ಸತ್ಯ, ಸತ್ವಗಳಿಗೆ ಕನ್ನಡಿ ಹಿಡಿದಂತಿದೆ.

ಶಿಮುಂಜೆ ಪರಾರಿ (ಅನುವಾದ), ೧೯೯೫ ಮರಾಠಿ ಮೂಲ – ಅಶೋಕ್ ಪಾಟೋಳೇ
ಜೋಕುಲು ಬಾಲೆಲು (ಅನುವಾದಿತ ತುಳು ನಾಟಕ) (ಸುಲಭಾ ಪಾಟೋಳೇ)
ರಂಗಧ್ವನಿ, ಮುಂಬಯಿ, ಡೆಮಿ ೧/೮, ಪುಟಗಳು : ೮೮, ರೂ. ೧೦೦/-

ಈ ನಾಟಕವನ್ನು ಶಿಮುಂಜೆಯವರು ತುಳುವರ ಸಂಸ್ಕೃತಿಗೆ ಹತ್ತಿರವಾಗುವಂತೆ ತುಳುವರ ಕಥೆಯಾಗಿ ರೂಪಾಂತರಿಸಿದ್ದು ಈ ನಾಟಕದ ಎಲ್ಲಾ ಪಾತ್ರಗಳು ನಮ್ಮ ಮನೆಯ ಪಕ್ಕದ ಮನೆಯ, ನಮ್ಮ ಸಂಬಂಧಿಕರ ಅಥವಾ ನಾವೇ ಅದರ ಪಾತ್ರಗಳಿರಬಹುದೇ ಎಂಬ ಭಾವನೆಯನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ ಎಂದು ಮುನ್ನುಡಿಯಲ್ಲಿ ಜಗದೀಶ ಶೆಟ್ಟಿಯವರ ಹೇಳುತ್ತಾರೆ.

ಶಿವಮುಂಜೆ ಪರಾರಿ, ೨೦೦೫
ಅಡ್ಡ ಬೂರೊಂಡೆ
ಮನಕುಲ ಪ್ರಕಾಶನ, ಲಿಬರ್ಟಿ ಗಾರ್ಡನ್, ರಸ್ತೆ ೧, ಮಲಾಡ್ (ಪ),
ಮುಂಬಯಿ – ೪೦೦ ೦೬೪. ಡೆ. ೧/೮, ಪುಟಗಳು : ೩೦, ಬೆಲೆ ರೂ. ೩೫/-

ಕವಿ ಸನದಿಯವರ ಆಯ್ದ ಕವಿತೆಗಳನ್ನು ಶಿವಮುಂಜೆ ಪರಾರಿಯವರು ತುಳುವಿಗೆ ಅನುವಾದಿಸುತ್ತ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಅವೆಲ್ಲವನ್ನು ಇಲ್ಲಿ ಸಂಕಲಿಸಿದ್ದಾರೆ.

ಶೆಟ್ಟಿ ಎನ್.ಪಿ., ೧೯೯೨
ಬತ್ತೆ ಕೆತ್ತೆರೆ ಉತ್ತರೆ
ಅಭಿನವ ಪ್ರಕಾಶನ, ಮುಂಬಯಿ, ಕ್ರೌನ್ ೧/೮, ಪುಟಗಳು : ೫೨, ರೂ. ೧೫/-

ಕುಮಾರವ್ಯಾಸ ಭಾರತದ ಉತ್ತರನ ಪೌರುಷ ಭಾಗದ ತುಳು ಅನುವಾದ ಕಾವ್ಯ.

ಸ.ಬಿ.ಕು., ೧೯೯೯ (೧೯೮೯, ೧೯೦೦)
ಪಿರತಿರ್ಗ್‌ತೂನಗ (ಬಾಲ್ಯದ ನೆನಪುಗಳು)
ಕ್ರೌನ್ ೧/೮, ಪುಟಗಳು : ೭+೯೫, ರೂ. ೨೫/-

‘ಪಿರತಿರ್ಗ್‌ತೂನಗ’ ಇದು ‘ನಡೆವುದೆನ್ನ ಮನವು ಹಿಂದೆ’ಯ ತುಳು ಭಾಷಾಂತರ. ತುಳುನಾಡಿನ ಜನಜೀವನದ ಆಧಾರದಲ್ಲಿ ಬರೆದಿರುವ ಪುಸ್ತಕವಾದ ಕಾರಣ ತುಳುವಿಗೆ ಭಾಷಾಂತರ ಮಾಡಲಾಗಿದೆ. ಲೇಖಕರ ಆತ್ಮಕಥನದಂತಿರುವ ಈ ಪ್ರಬಂಧದಲ್ಲಿ ಲೇಖಕರು ಹುಟ್ಟಿ ಬೆಳೆದ ಪರಿಸರದ ಕುರಿತಾದ ಕೀಳರಿಮೆಯಾಗಲಿ, ಇತರ ಜಾತಿ ಮತಗಳ ಕುರಿತಾದ ದ್ವೇಷ – ಮತ್ಸರವಾಗಲೀ ಇಣಿಕಿ ಹಾಕಿಲ್ಲ. ಕರಾವಳಿ ಪ್ರದೇಶದ ಜನಜೀವನದಲ್ಲಿ ಬಂದ ಕಟು – ಮಧುರ ಅನುಭವಗಳನ್ನು ಯಥಾಪ್ರಕಾರ ಚಿತ್ರಿಸಿದ್ದಾರೆ.

ಸೀತಾರಾಮ ಆಳ್ವ ಎನ್., ೧೯೮೧
ಗೀತೆದ ತಿರ್ಲ್‌ಶ್ರೀಮದ್ಭಗವದ್ಗೀತೆದ ಸಾರೊ
ಪ್ರಕಾಶನ : ಶಾರದಾ ನಿಲಯ, ಕೆಲಿಂಜ, ವೀರಕಭ ಅಂಚೆ
ಕ್ರೌನ್ ೧/೮, ಪುಟಗಳು : ೧೧೦, ರೂ. ೮/-

ಶ್ರೀಮದ್ಭಗವದ್ಗೀತೆಯನ್ನು ಭಾಮಿನೀಷಟ್ಪದಿಯಲ್ಲಿ ಅನುವಾದಿಸಿದ ಕೃತಿ.

ಸೀತಾರಾಮ ಆಳ್ವ ಕೆಲಿಂಜ, ೧೯೯೪
ತುಳು ಹರಿಶ್ಚಂದ್ರ ಕಾವ್ಯೊ
ತುಳುವೆರೆಂಕುಳು ಕುಡಲ (ಮಂಗಳೂರು)
ಕ್ರೌನ್ ೧/೮, ಪುಟಗಳು : ೧೪೮, ರೂ. ೩೫/-

ರಾಘವಾಂಕ ಕವಿಯ ‘ಹರಿಶ್ಚಂದ್ರ ಕಾವ್ಯ’ದ ತುಳು ಅನುವಾದ.

ಸೀತಾರಾಮ ಆಳ್ವ ನಡುವಳಚ್ಚಿಲ್
ರಾವಣ ಮೋಕ್ಷ

ಹೊಸ ಒಡಂಬಡಿಕೆ
ಬ್ರಿಟಿಷ್ ಮತ್ತು ಫಾರಿನ್ ಬೈಬಲ್ ಸೊಸೈಟಿ, ೧೯೪೬

ಬೈಬಲ್
ಕ್ರಿಶ್ಚಿಯನ್ ಮಿಶನರಿಗಳು, ಬೈಬಲ್‌ನ ತುಳು ಅನುವಾದ.

ಸುಪ್ರೀತದ ಸುವರ್ತಮಾನ (ಪೊಸ ಒಡಂಬಡಿಕೆ)
ಭಾರತೀಯ ಸತ್ಯವೇದ ಸಂಸ್ಥೆ, ಪುಟಗಳು : ೫೬೪,
ಹೊಸ ಒಡಂಬಡಿಕೆ – ಬೈಬಲ್‌ನ ತುಳು ಅನುವಾದ ಗ್ರಂಥ.