ತುಳುವಿನಿಂದ ಕನ್ನಡಕ್ಕೆ ಅನುವಾದಿತ ಕೃತಿಗಳು

ಕೇಶವ ಭಟ್ಟ ಮಂದಾರ, ೨೦೦೧
ಮಂದಾರ ರಾಮಾಯಣ
ಸಾಹಿತ್ಯ ಅಕಾಡೆಮಿ, ಡೆಮಿ ೧/೮, ರೂ. ೧೫೦/-

ಇವರೇ ಬರೆದ ತುಳು ಮಹಾಕಾವ್ಯ ‘ಮಂದಾರ ರಾಮಾಯಣ’ದ ಕನ್ನಡ ಅನುವಾದವಾಗಿದೆ.

ಚಂದ್ರಕಲಾ ನಂದಾವರ, ೧೯೯೯
ಯಾರಿಗೆ ಯಾರುಂಟು?
ಹೇಮಾಂಶು ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು : ೧೦೪, ರೂ. ೩೬/-

ಜಾನಕಿ ಬ್ರಹ್ಮಾವರ ಅವರ ತುಳುವಿನ ‘ಕುದುರದ ಕೇದಗೆ’ ಕಾದಂಬರಿಯನ್ನು ಚಂದ್ರಕಲಾ ಅವರು ‘ಯಾರಿಗೆ ಯಾರುಂಟು’ ಎಂದು ಅನುವಾದಿಸಿದ್ದಾರೆ. ತುಳುನಾಡಿನ ಸಣ್ಣ ಪ್ರಾದೇಶಿಕ ಪರಿಸರ ‘ಕುದುರು’ವಿನೊಳಗಿನ ಜಗತ್ತಿನ ಬಹುಬಗೆಯ ನೋವುಗಳು ಮತ್ತು ಅವುಗಳ ಸಂಕೀರ್ಣ ಸಂಬಂಧಗಳು ಅನಾವರಣಗೊಂಡಿವೆ.

ಜಾನಕಿ ಬ್ರಹ್ಮಾವರ ಎಂ., ೧೯೯೯
ತಿರುಗಾಟದ ತಿರುಳು (ಪ್ರವಾಸ ಕಥನ)
ಹೇಮಾಂಶು ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು :೧೩೬, ರೂ. ೫೦/-

ಇದೇ ಲೇಖಕಿ ಬರೆದ ತುಳುವಿನ ‘ತಿರ್ಗಾಟದ ತಿರ್ಲ್’ ಪ್ರವಾಸ ಕಥನದ ಕನ್ನಡ ಭಾಷಾಂತರ.

ಜಾರು ಪೇರೂರು, ೧೯೮೯ (ಕನ್ನಡ ಅನುವಾದ), ರಾಜಶೇಖರ, ವಿ.ಟಿ.
ತುಳುವರ ಯಾರು?
ದಲಿತ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಕ್ರೌನ್ ೧/೮, ಪುಟಗಳು :೧೦, ರೂ. ೫೦ ಪೈಸೆ

ತುಳುವರ ಬೇರು – ದಾರಿ ಎಲ್ಲಿ? ಎಂಬುದರ ಚರ್ಚೆ ಇಲ್ಲಿದೆ.

ಪಳಕಳ ಸೀತಾರಾಮ ಭಟ್ಟ, ೧೯೯೭, ವಾಮನ ನಂದಾವರ (ಮೂಲ ಸಂಗ್ರಹ)
ಕಿಡಿಗೇಡಿಯ ಕೀಟಲೆ (ತುಳು ಜನಪದ ಕತೆಗಳು)
ಶಿಶು ಸಾಹಿತ್ಯಮಾಲೆ, ಮಿತ್ತಬೈಲು, ಕ್ರೌನ್ ೧/೮, ಪುಟಗಳು : ೪೮, ರೂ. ೧೫/-

ಒಟ್ಟು ೧೨ ಕತೆಗಳಿವೆ. ಇದೊಂದು ತುಳು ಜನಪದ ಕತೆಗಳ ಸಂಗ್ರಹ.

ಬಾಲಕೃಷ್ಣ ಶೆಟ್ಟಿ, ಪೊಳಲಿ ಅ., ೨೦೦೩, ಆನಂದಕೃಷ್ಣ (ತುಳುಮೂಲ)
ಕರಿಯವಜ್ಜನ ಕತೆಗಳು (ಅನುವಾದಿತ ಕನ್ನಡ ಸಣ್ಣ ಕತೆಗಳು)
ಶೃಂಗಾರ ಪ್ರಕಾಶನ, ತುಮಕೂರು, ಡೆಮಿ ೧/೮, ಪುಟಗಳು : ೫೬, ರೂ. ೪೦/-

ಆನಂದಕೃಷ್ಣರು ತುಳುವಲ್ಲಿ ಬರೆದ ‘ಕರಿಯವಜ್ಜೆರೆನ ಕತೆಕುಲು’ ಕಥಾ ಸಂಕಲನದ ಕನ್ನಡಾನುವಾದ. ಇದರಲ್ಲಿ ೧೨ ಕಥೆಗಳಿವೆ. ಮತ್ತು ಎಲ್ಲಾ ಕಥೆಗಳೂ ನೇರವಾಗಿ ಅಥವಾ ಪರೋಕ್ಷವಾಗಿ ಕರಿಯವಜ್ಜ ಎಂಬ ಪಾತ್ರದ ಬದುಕಿನ ಅನುಭವಗಳನ್ನೂ ಮತ್ತು ಘಟನೆಗಳನ್ನು ನಿರೂಪಿಸುತ್ತವೆ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೨೦೦೩, ಆನಂದಕೃಷ್ಣ (ತುಳುಮೂಲ), ಹುಲಿ ಹಿಡಿದ ಕಡಸು (ಅನುವಾದಿತ ಕನ್ನಡ ನಾಟಕ)
ಶೃಂಗಾರ ಪ್ರಕಾಶನ, ತುಮಕೂರು, ಡೆಮಿ ೧/೮, ಪುಟಗಳು : ೪೪, ರೂ. ೩೫/-
ಆನಂದಕೃಷ್ಣರ ‘ಪಿಲಿಪತ್ತಿ ಗಡಸ್’ ನಾಟಕದ ಕನ್ನಡ ಭಾಷಾಂತರ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೯೦, ಶೀನಪ್ಪ ಹೆಗಡೆ ಎನ್.ಎ. ನಂದೊಳ್ಗೆ (ತುಳು ಮೂಲ)

ತುಳುವಾಲ ಬಲಿಯೇಂದ್ರ, ಕ್ರೌನ್ ೧/೮, ಪುಟಗಳು :೧೮, ರೂ. ೩/-

ದಿ. ಪೊಳಲಿ ಶೀನಪ್ಪ ಹೆಗ್ಡೆಯವರು ಬರೆದಿರುವ ತುಳುವಾಲ ಬಲಿಯೇಂದ್ರ (ಬಲಿ ಚಕ್ರವರ್ತಿಯ ಕತೆ) ಪಾಡ್ದನ ಕಾವ್ಯದ ಕನ್ನಡ ಅನುವಾದ.

 

ತುಳುವಿನಿಂದ ಇತರ ಭಾಷೆಗೆ ಅನುವಾದಿತ ಕೃತಿಗಳು

ಜಾನಕಿ ಎಂ. ಬ್ರಹ್ಮಾವರ, ೨೦೦೪
ಐಲೆಟ್ಸ್ ಸ್ಕೂ – ಪೈನ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಡೆ. ೧/೮, ರೂ. ೧೫/-

ನಾಗೇಶ್ ಕಾಲೂರು, ೨೦೦೫
ಕವನ ಪತ್ತಾಯ ಅನು, ಮೂಲ ತುಳು: ರವಿಕಿರಣ (ಎಂ.ಕೆ. ರವೀಂದ್ರನಾಥ)
ಕೊಡವತಕ್ಕ್ ಎಳ್ತ್‌ಕಾರಡ ಕೂಟ (ರಿ.)

ಜನಪ್ರಿಯ ಕೊಡವ ಸಾಹಿತ್ಯಮಾಲೆ (೨೧)ಯಲ್ಲಿ ಪ್ರಕಟವಾದ ರವಿಕಿರಣ್ ಅವರ ಕಬಿತಾಕೋಪೆಯ ೨೪ ಕವಿತೆಗಳ ಕೊಡವ ಅನುವಾದ.

 

ಇಂಗ್ಲಿಷ್‌ನಿಂದ ತುಳುವಿಗೆ ಅನುವಾದಿತ ಕೃತಿಗಳು

ಕೆ.ಟಿ.ಗಟ್ಟಿ, ೧೯೯೮
ಎನ್ನ ಮೋಕೆದ ಪೊಣ್ಣು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಡೆ. ೧/೮, ಬೆಲೆ ರೂ. ೨೫/-

ಬೈಬಲ್ ಸೊಸೈಟಿ, ೧೯೪೨
ಗೋಸ್ಟೆಲ್ ಆಫ್ ಸೈಂಟ್ ಮ್ಯಾಥ್ಯೂ (ಅನು)
ಬೈಬಲ ಸೊಸೈಟಿ

ಬೈಬಲ್ ಸೊಸೈಟಿ, ೧೮೪೭
ನ್ಯೂ ಟೆಸ್ಟಾಮೆಂಟ್ (ಪೊಸ ಒಡಂಬಡಿಕೆ)
ಬೈಬಲ್ ಭಾಷಾಮತರ, ಬೈಬಲ್ ಸೊಸೈಟಿ.

ಬೈಬಲ್ ಸೊಸೈಟಿ
ಸುಪ್ರೀತಿದ ಸುವರ್ತಮಾನ (ಪೊಸ ಒಡಂಬಡಿಕೆ) ತುಳು ಬೈಬಲ್
ಬೈಬಲ್ ಸೊಸೈಟಿ ಆಫ್ ಇಂಡಿಯಾ.

 

ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿತ ಕೃತಿಗಳು

ಪೀಟರ್ ಜೆ. ಕ್ಲಾಸ್, ೧೯೮೭, ಕನ್ನಡಕ್ಕೆ : ಎ.ವಿ. ನಾವಡ/ಸುಭಾಶ್ಚಂದ್ರ
ತುಳುವ ದರ್ಶನ
ಡೆ. ೧/೮, ಪು. ೩೨೪+೨೨, ರೂ. ೨೦೦

ಕರ್ನಾಟಕದ ಜಾನಪದಗಳ ಕುರಿತು ಅಧ್ಯಯನ ಕುರಿತ ಕೃತಿ.

 

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿತ ಕೃತಿ

Ashok Alva Translation: N. Thirumaleshwara Bhatt, 2001
Olasari (ಪ್ರಬಂಧಗಳು)
Regional Resources Centre for Folk Performing Arts
D 1/8, P: 12+118+8 (Photos), Rs. 100/-

ತುಳು ಹಾಗೂ ಕೊಡವರ ಬೇರೆ ಬೇರೆ ಜನಪದ ಆಚರಣೆ ಹಾಗೂ ಕುಣಿತಗಳನ್ನು ಹೇಳುವ ೧೬ ಪ್ರಬಂಧಗಳು ಈ ಕೃತಿಯಲ್ಲಿದೆ. ಉದಾ: ತುಳುನಾಡಿನ ಆಚರಣಾತ್ಮಕ ಕುಣಿತ ಹಾಗೂ ಕ್ರೀಡೆಗಳಾದ ಬಾಲೆಸಾಂತು, ಗೋಂದೊಳು, ಕಂಗಿಲು, ಕಂಬಳ, ತೂಟೆದಾರ ಹಾಗೆಯೇ ಕಜಂಬುಗಳು, ಉತ್ಸವ ಇತ್ಯಾದಿ ಕೊಡವ ಸಂಸ್ಕೃತಿಯಲ್ಲಿನ ಜೋಯಿಕಳಿ, ಬೋದ್ಕಳಿ, ಕಾಕೋಟು ಪರಂಬು, ಅಂಗಕಳಿ ಇತ್ಯಾದಿಗಳ ಮೇಲಿನ ಪ್ರಬಂಧಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಕೆಲವು ಛಾಯಾಚಿತ್ರಗಳನ್ನೂ ನೀಡಲಾಗಿದೆ.

 

ಕೋಶಗಳು – ಕೈಪಿಡಿ – ನಿಘಂಟು

ಕರೀಗೌಡ ಬೀಚನಹಳ್ಳಿ (ಸಂ), ೨೦೦
ಕನ್ನಡ ವಿ.ವಿ. ವಿಶ್ವಕೋಶ ೨ ಕರಕುಶಲ ಕಲೆಗಳು
ಪ್ರಸಾರಾಂಗ ಕನ್ನಡ ವಿ.ವಿ. ಹಂಪಿ, ಡೆ. ೧/೪, ಪು. ೧೨+೩೯೪, ರೂ. ೩೦೦/-

೬ ಪ್ರಮುಖ ಅಧ್ಯಾಯಗಳಿವೆ – ಕರಕುಶಲ ಕಲೆಗಳ ಪರಂಪರೆ ಮತ್ತು ಇತಿಹಾಸ, ಅಲಂಕರಣ ಸಂಬಂಧಿ ಕರಕುಶಲ ಕಲೆಗಳು – ಉಡುಗೆ, ತೊಡುಗೆಗಳು, ಚಿತ್ರಕಲೆ, ರಂಗೋಲಿ, ಹಚ್ಚೆ ಕಸೂತಿ, ಪದುಕೆಗಳ ಕುರಿತ ಮಾಹಿತಿ. ಆರಾಧನಾ ಸಂಬಂಧಿ ಕರಕುಶಲ ಕಲೆಗಳು – ಕ್ರೈಸ್ತ, ಇಸ್ಲಾಂ, ಬೌದ್ಧ, ಜೈನ ಕೇಂದ್ರಗಳ ಕೆತ್ತನೆ, ಭೂತಾರಾಧನೆಯ ವೇಷಭೂಷಣ, ಪೂಜಾ ಸಾಮಗ್ರಿಗಳು ಗಂಟೆಗಳು ಇತ್ಯಾದಿ. ಗೃಹೋಪಯೋಗಿ ಕರಕುಶಲ ಕಲೆಗಳು – ಪೀಠೋಪಕರಣಗಳು, ನಾಣ್ಯಗಳು, ಪಿಂಗಾಣಿ, ಲೇಖನ ಸಾಮಗ್ರಿಗಳು, ಅಡುಗೆ ಮನೆಯ ಪರಿಕರಗಳು ಇತ್ಯಾದಿ. ಮನರಂಜನಾ ಸಂಬಂಧಿ ಕರಕುಶಲ – ಭಾರತೀಯ ಜನಪದ ಪ್ರದರ್ಶನ ಕಲೆಗಳ, ಕರ್ನಾಟಕ ಜನಪದ ಪ್ರದರ್ಶನ ಕಲೆಗಳ, ಯಕ್ಷಗಾನದ, ಬೊಂಬೆಯಾಟದ ವೇಷಭೂಷಣಗಳು, ಜನಪದ ವಾದ್ಯಗಳು ಇತ್ಯಾದಿ. ವ್ಯವಸಾಯ ಸಂಬಂಧಿ ಕರಕುಶಲ ಕಲೆಗಳು – ಕಮ್ಮಾರಿಕೆ ಧಾನ್ಯ ಸಂಗ್ರಾಹಕಗಳು, ಅಳತೆಯ ಮಾನಗಳು, ಗಾಣದ ಕಲೆ, ಸಾಗಾಣಿಕಾ ಸಲಕರಣೆಗಳು ಇತ್ಯಾದಿ ಹಲವು ಪ್ರಕಾರಗಳ ಕರಕುಶಲ ಕಲೆಗಳ ಮಾಹಿತಿಗಳನ್ನು ವಿವಿಧ ಲೇಖಕರು ನೀಡಿದ್ದಾರೆ.

ಚಂದ್ರಶೇಖರ ಕಂಬಾರ (ಸಂ), ೧೯೮೫
ಕನ್ನಡ ಜಾನಪದ ವಿಶ್ವಕೋಶ ಸಂಪುಟ ೧ ಮತ್ತು ೨
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಕ್ರೌ ೧/೪, ಪು: ೯೩೦+೧೨+೧೨ (ಸಂಪುಟ ೧), ಪು: ೯೭೬+೧೨+೧೨(ಸಂಪುಟ ೨)

ನಾಗೇಗೌಡ ಎಚ್.ಎಲ್. (ಪ್ರ. ಸಂ.), ೧೯೯೮, ಟಿ.ಆರ್. ಮಹಾದೇವಯ್ಯ (ಸಂ.)
ಕನ್ನಡ ಜಾನಪದ ಕೋಶ (ಜಾನಪದ ನಿಘಂಟು)
ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು
ಕ್ರೌ ೧/೪, ಪು: ೮೨೮+೨೦+೫೨, ರೂ. ೩೭೯/-

ನಾವಡ, ಎ.ವಿ. (ಸಂ), ೧೯೮೬, ಸಿ. ಉಪೇಂದ್ರ ಸೋಮಯಾಜಿ
ಗೋವಿಂದ ಪೈ ಪದಪ್ರಯೋಗ ಕೋಶ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಪರವಾಗಿ ಗೀತಾ ಬುಕ್
ಹೌಸ್ ಮೈಸೂರು, ಕ್ರೌ ೧/೮, ಪು: ೧೧೨, ರೂ. ೩೫/-

ಗೋವಿಂದ ಪೈಯವರು ತಮ್ಮ ಕೃತಿಗಳಲ್ಲಿ ಬಳಸಿದಂಥ ವಿಶಿಷ್ಟ ಪದಗಳ ಅರ್ಥವನ್ನು ಈ ಕಿರು ಕೃತಿಯಲ್ಲಿ ನೀಡಲಾಗಿದೆ. ಇದರಲ್ಲಿ ನಾವು ಗೋವಿಂದ ಪೈಯವರು ಬಳಸಿದ ತುಳುಭಾಷೆಯ ಶಬ್ದಗಳನ್ನು ಕೂಡ ಕಾಣಬಹುದಾಗಿದೆ. ಉದಾ: ಗವುಜ, ಜಂಬರ, ತನೆ, ಆಟಿ, ಸೋಣ, ಮೂರು, ಬಚ್ಚು, ಮರಿ, ಆಟಿಕಳಂಜ ಇಂಥ ಅನೇಕ ತುಳು ಶಬ್ದಗಳು ಹಾಗೂ ಅವುಗಳ ಅರ್ಥವನ್ನು ಕಾಣಬಹುದು.

ಪೀಟರ್ ವಿಲ್ಸನ್ ಪ್ರಭಾಕರ್, ೧೯೯೫
ತುಳುನಾಡಿನ ಕಂದಾಯ ಶಬ್ದಗಳ ಪದಕೋಶ
ಡೆ. ೧/೮, ಪು: ೬+೨೪, ರೂ. ೧೫/-

ತುಳುನಾಡಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಅಪೂರ್ವ ದಾಖಲೆ ಮತ್ತು ಮಾಹಿತಿಗಳ ಸಂಕ್ಷಿಪ್ತ ಪರಿಚಯ ನೀಡುವ ಕೃತಿ.

ಪ್ರಭಾಕರ ಜೋಶಿ ಎಂ., ೧೯೯೪
ಯಕ್ಷಗಾನ ಪದಕೋಶ (ವಿವರಣಾತ್ಮಕ ನಿಘಂಟು)
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ
ಡೆ. ೧/೮, ಪು: ೮+೧೭೨, ರೂ. ೧೦೫/-

ಯಕ್ಷಗಾನ ಕಲೆಗೆ ಸಂಬಂಧಿಸಿದ ವಿವಿಧ ಪರಿಭಾಷಿಕ ಪದಗಳನ್ನು ವಿವರವಾಗಿ ಹೇಳುವ ಗ್ರಂಥ.

ಬೋರಲಿಂಗಯ್ಯ ಹಿ.ಚಿ. (ಸಂ), ೧೯೯೬
ಕರ್ನಾಟಕ ಜನಪದ ಕಲೆಗಳ ಕೋಶ
ಪ್ರಸಾರಾಂಗ ಕನ್ನಡ ವಿ.ವಿ. ಹಂಪಿ, ಡೆ. ೧/೪, ಪು. ೩೩೬+೨೪+೨೪, ರೂ. ೩೦೦/-

ವಿವಿಧ ರೀತಿಯ ಆರಾಧನೆಗಳು (ಮಾರಿ, ಭೂತಾರಾಧನೆ, ನಾಗಾರಾಧನೆ ಮೈಲಾರಲಿಂಗನಾರಾಧನೆ ಇತ್ಯಾದಿ) ಆಚರಣಾತ್ಮಕ ಕುಣಿತಗಳು (ಹೋಳಿಕುಣಿತ, ಆಟಿಕಳೆಂಜ, ಕಂಗಿಲು, ಕರಂಗೋಲು), ಚೆನ್ನು, ಪಿಲಿಪಂಜಿ, ಬಾಲೆಸಂತು ಇತ್ಯಾದಿ) ಬುಡಕಟ್ಟುಗಳ ಕೆಲವು ಕಲೆಗಳು (ಕೊರಗರ ಕುಣಿತ, ನಲ್ಕೆಯವರ ಕೊರಗ ತನಿಯ, ಮೇರರ ದುಡಿ ಕುಣಿತ, ಕುಡುಬಿಯರ ಕುಣಿತ, ಕುಲೆ ನಲಿಕೆ ಇತ್ಯಾದಿ) ಸಂಕೀರ್ಣ ಕಲೆಗಳು (ಜಾಲಾಟ, ಹಗರಣ, ಯಕ್ಷಗಾನ, ತಾಳ ಮದ್ದಳೆ, ದೊಡ್ಡಾಟ, ಸಣ್ಣಾಟ, ದಾಸರಾಟ ಇತ್ಯಾದಿ) ಇಂಥ ಕರ್ನಾಟಕದ ಜನಪದ ಕಲೆಗಳ ಕುರಿತು ಮಾಹಿತಿ ನೀಡುವ ಗ್ರಂಥ ಹಾಗೂ ಹಲವು ಪೂರಕ ಛಾಯಾಚಿತ್ರಗಳು ಇವೆ.

ಮ್ಯಾನರ್ ಎ., ೧೮೮೬ / ೧೯೮೩
ತುಳು – ಇಂಗ್ಲಿಷ್ ಶಬ್ದಕೋಶ
ಬಾಸೆಲ್ ಮಿಶನ್,

ಲಕ್ಕಪ್ಪ ಗೌಡ ಎಚ್.ಜೆ. (ಪ್ರ. ಸಂ.), ೧೯೯೭
ಜನಾಪದ ಕೈಪಿಡಿ
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಡೆ. ೧/೮, ಪು: ೬೦೪+೧೨, ರೂ. ೧೦೦/-

ಪರಿಕಲ್ಪನೆಗಳು, ಪರಿಕರಣಗಳು, ಪ್ರಕಾರಗಳು, ಸಿದ್ಧಾಂತ ವಿಧಾನಗಳು, ವಿದ್ವಾಂಸರು ಇತ್ಯಾದಿಗಳ ಕುರಿತ ಮಾಹಿತಿ ನೀಡುವ ಆಕರ ಗ್ರಂಥ

ವೆಂಕಟಸುಬ್ಬಯ್ಯ ಜಿ., ೧೯೯೬
ಮುದ್ದಣ ಪದಪ್ರಯೋಗ ಕೋಶ
ಕರ್ನಾಟಕ ಸಂಘ ಪುತ್ತೂರು, ಕ್ರೌ. ೧/೮, ಪು: IX + ೧೮೨ + ೨೬, ರೂ. ೧೦೫/-

ಮುದ್ದಣನ ಕೃತಿಗಳ ಶಬ್ದಗಳ ಅರ್ಥವನ್ನು ಈ ಕೋಶದಲ್ಲಿ ನೀಡಲಾಗಿದೆ. ಅಲ್ಲದೆ ನಾವು ಮುದ್ದಣ ತನ್ನ ಕೃತಿಗಳಲ್ಲಿ ತುಳುಭಾಷೆಯ ಶಬ್ದಗಳನ್ನು ಬಳಸಿದ್ದನೆಂಬುದನ್ನು ಈ ಕೋಶದಿಂದ ತಿಳಿಯಬಹುದು. ಉದಾ: ಅಟ್ಟ, ಅಟ್ಟಸ, ಅನ್ನೆಯ, ಅಳೆ, ದಿಬ್ಬಣ ಇತ್ಯಾದಿ ಅನೇಕ ತುಳು ಶಬ್ದಗಳು ಈ ಕೋಶದಲ್ಲಿದೆ.

ಸುಬ್ಬಣ್ಣ ರೈ ಎ. ಹಾಗೂ ಇತರರು (ಸಂ.), ೨೦೦೧
ದ್ರಾವಿಡ ನಿಘಂಟು
ಪ್ರಸಾರಾಂಗ ಕನ್ನಡ ವಿ.ವಿ. ಹಂಪಿ, ಡೆ. ೧/೮, ಪು: ೧೪+೧೪೮ ರೂ. ೮೦/-

ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಕನ್ನಡ, ತುಳು, ತೆಲುಗು ಮತ್ತು ಮಲಯಾಳಂ ಭಾಷೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವುಗಳಲ್ಲಿರುವ ಸಂವಾದಿ ಪದಗಳಿಗೆ ಇರುವ ಸಂಬಂಧ ಮತ್ತು ಸ್ವರೂಪಗಳನ್ನು ಸಮಗ್ರ ಪ್ರಮಾಣದಲ್ಲಿ ವಿವರಿಸುವಂಥ ಕೋಶ.

 

ತುಳು ನಿಘಂಟು – ಕೈಪಿಡಿ

ಉಪಾಧ್ಯಾಯ ಯು.ಪಿ., ೧೯೯೮
ತುಳು ಕೈಪಿಡಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಕ್ರೌನ್ : ೧/೪ ಪುಟಗಳು : ೬+೧೦೬, ರೂ. ೩೦/-

ಇದು ಕನ್ನಡದ ಮೂಲಕ ವೈಜ್ಞಾನಿಕವಾಗಿ, ಆದರೆ ಸರಳವಾಗಿ ತುಳುವನ್ನು ಕಲಿಯುವ ಒಂದು ಮಾದರಿ ಪಠ್ಯ ಗ್ರಂಥ. ಇಲ್ಲಿರುವ ಒಟ್ಟು ೧೨ ಪಾಠಗಳನ್ನು ೨೪ ಗಂಟೆಗಳ ಅವಧಿಯಲಲ್‌ಇ ಕಲಿಸಬಹುದಾಗಿದೆ. ಒಂದೊಂದು ಪಾಠದಲ್ಲಿ ವಾಕ್ಯಗಳ ಗೊಂಚಲುಗಳು, ಸಂಭಾಷಣೆಗಳ ಗೊಂಚಲುಗಳು, ವ್ಯಾಕರಣಾಂಶಗಳ ಗೊಂಚಲುಗಳು ಹಾಗೂ ಅಭ್ಯಾಸಗಳ ಗೊಂಚಲು ಗಳಿರುವುದರಿಂದ ಈ ಪಾಠಗಳಿಗೆ ಗೊಂಚಲು ಎಂದು ಹೆಸರಿಡಲಾಗಿದೆ.

ಉಪಾಧ್ಯಾಯ ಯು.ಪಿ. ಸಂ.
ತುಳು ನಿಘಂಟು (ಸಂ ೧ರಿಂದ ೬)
ವರ್ಷ : ೧೯೯೮ ಸಂಪುಟ ೧, ೧೯೯೨ ಸಂಪುಟ ೨, ೧೯೯೫ ಸಂಪುಟ ೩, ೧೯೯೭ ಸಂಪುಟ ೪, ೧೯೯೭ ಸಂಪುಟ ೫, ಪುಟಗಳು : ೧೬+೯೬+೩೩೮, ೧೦+೨೨+೪೬೦+೧೬+೧೫೭, ೪೮೪, ೧೬+೫೯೮ ರೂ. ೬೦, ೪೦, ೬೦+೮೦, ೮೦+೧೦೦, ೧೦೦+೧೨೦+೧೦೦.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ – ೫೭೬ ೧೦೨

ತುಳು-ಕನ್ನಡ-ಇಂಗ್ಲಿಷ್ ನಿಘಂಟು, ತುಳು ಶಬ್ದಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅರ್ಥಗಳನ್ನು, ತುಳು ಶಬ್ದಗಳಿಗೆ ವ್ಯಾಪಕವಾಗಿ ದೊರೆಯುವ ಉಲ್ಲೇಖ, ನುಡಿಗಟ್ಟು, ಗಾದೆ ಮೊದಲಾದ ಉದಾಹರಣೆಗಳನ್ನು ಇತರ ದ್ರಾವಿಡ ಭಾಷೆಗಳಲ್ಲಿ ಸಿಕ್ಕುವ ಜ್ಞಾತಿಪದಗಳನ್ನೂ ಕೊಡುವ ಬಹುವಿಸ್ತಾರವಾದ ಶಬ್ದಕೋಶ. ಇದರಲ್ಲಿ ಉಲ್ಲೇಖಿತವಾದ ಸಮಸ್ತ ತುಳು ಶಬ್ದಗಳನ್ನು ಕನ್ನಡ ಲಿಪಿ ಮಾತ್ರವಲ್ಲದೆ ಪರಿಷ್ಕೃತ ರೋಮನ್ ಲಿಪಿಯಲ್ಲಿಯೂ ಕೊಟ್ಟದ್ದು ಈ ನಿಘಂಟುವಿನ ವಿಶೇಷತೆಗಳಲ್ಲೊಂದು.

ಉಪಾಧ್ಯಾಯ ಯು.ಪಿ. ಸಂ., ೨೦೦೫
ಸಂಕ್ಷಿಪ್ತ ತುಳು ಪದಕೋಶ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ – ೫೭೬ ೧೦೨
ಕ್ರೌನ್ ೧/೮, ಪುಟಗಳು ೪೦೨, ರೂ. ೧೦೦

೧೯೯೭ರಲ್ಲಿ ತುಳು-ಕನ್ನಡ -ಇಂಗ್ಲಿಷ್ ಪದಕೋಶದ ೬ ಸಂಪುಟಗಳು ಪ್ರಕಟವಾದ ಬಳಿಕ ಬಂದ ಅವುಗಳ ಸಂಕ್ಷಿಪ್ತ ಪದಕೋಶ.

ವಿಶ್ವನಾಥ ರೈ ಕುದ್ಕಾಡಿ ಸಂ., ೧೯೯೮
ಜೋಕುಲೆ ಸಂಚಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಕ್ರೌನ್ ೧/೮, ಪುಟಗಳು ೪೨, ರೂ. ೫

ತುಳುವಿನ ಅಂಕೆ ಸಂಖ್ಯೆ, ಅಕ್ಷರ, ವಾರ, ತಿಂಗಳು, ಕಾಲ, ತಿಥಿ, ಪ್ರಾಣಿ ಪಕ್ಷಿಗಳ ಹೆಸರುಗಳು, ಹಬ್ಬಗಳು, ಆಟಗಳು, ದೇಹದ ಅಂಗಗಳು, ಆರಾಧನೆ – ಆರಾಧನೆಯ ಕೇಂದ್ರಗಳು, ಅಳತೆಗಳು, ಮೀನುಗಳು, ತಿಂಡಿಗಳು ಇತ್ಯಾದಿಗಳನ್ನು ತುಳು ಭಾಷೆಯಲ್ಲಿ ಹೇಳಲಾಗಿದೆ.

 

ಇಂಗ್ಲಿಷ್ ಕೋಶ – ನಿಘಂಟು

Manner A. Rev, 1886
Tulu English Dictionary (1983), D1/8, P.8+688, Rs. 395/-

ತುಳು ಇಂಗ್ಲಿಷ್ ಶಬ್ದಕೋಶ

Manner A. Rev, 1888
English – Tulu Dictionary
D. 1/8

ಇಂಗ್ಲಿಷ್ ಶಬ್ದಗಳಿಗೆ ತುಳುವಿನಲ್ಲಿ ಅರ್ಥ ನಿರೂಪಣೆ ನೀಡಲಾಗಿದೆ.

Mariyappa Bhat M. Prof. and Shanker Kedilaya (Ed.), 1967
Tulu English Dictionary
University of Madras, D. 1/8, Page 230+20, Rs. 5.00

ತುಳು- ಇಂಗ್ಲಿಷ್ ನಿಘಂಟು. ತುಳು ಶಬ್ದಗಳಿಗೆ ಇಂಗ್ಲಿಷಿನಲ್ಲಿ ಅರ್ಥ ನಿರೂಪಣೆ, ಅಲ್ಲಲ್ಲಿ ಕೆಲವು ಗಾದೆ, ನುಡಿಗಟ್ಟುಗಳ ಉಲ್ಲೇಖ – ಉದಾಹರಣೆಗಳಿವೆ. ಶಬ್ದಮೂಲ ಯಾವುದೆಂದು ಆ ಭಾಷೆಗೆ ಒಂದು ಸಂಕೇತಾಕ್ಷರದ ಮೂಲಕ ಉಲ್ಲೇಖ ನೀಡಲಾಗಿದೆ.

Raghupathi Kemthuru, 1989
A Glossary of Placename elements in Tulu and Kannada
Janavadi Publication Gundmi, C. 1/8, Page 173, Rs. 30/-

ಸುಮಾರು ಸಾವಿರಕ್ಕಿಂತಲೂ ಹೆಚ್ಚಿನ ಪದಗಳ ಪಟ್ಟಿಯನ್ನು ನೀಡಲಾಗಿದೆ. ಮತ್ತು ೩,೦೦೦ಕ್ಕಿಂತಲೂ ಹೆಚ್ಚಿನ ಸ್ಥಳನಾಮಗಳ ಮೂಲ /ಧಾತುಗಳನ್ನು ಸಂಗ್ರಹಿಸಿ ನೀಡಲಾಗಿದ್ದು, ಕೆಲವೊಂದು ಮನೆತನದ ಹೆಸರುಗಳನ್ನು ಸಂಗ್ರಹಿಸಿ ದಾಖಲುಗೊಳಿಸಲಾಗಿದೆ.

Shu Hikosaka, G. John Samual (Chief Editiors)
Dr. Krishnamurthy Hanur Editior,
1991
Encyclopedia of the folk Culture of Karnataka (Vol. 1)
Institute of Asian Studies Madras, Rs. 400/-

ಎರಡು ವಿಭಾಗಗಳು -೧) Classical Culture ಕರ್ನಾಟಕ ಭೌಗೋಳಿಕತೆ, ಕನ್ನಡ ಭಾಷೆ, ಧರ್ಮ, ಸಂಸ್ಕೃತಿ, ಸಾಹಿತ್ಯಿಕ ಇತಿಹಾಸ, ರಾಜಕೀಯ ಇತಿಹಾಸ, ಶಿಲ್ಪ ಕಲೆ (ವಾಸ್ತು) ನೃತ್ಯ, ಸಂಗೀತ ಇತ್ಯಾದಿ. ೨)Folk Culture ಬುಡಕಟ್ಟುಗಳ ಸಂಸ್ಕೃತಿ, ಕೃಷಿ, ಜನಪದ ವೈದ್ಯ, ನಂಬಿಕೆಗಳು, ಆಚರಣೆಗಳು, ಜನಪದ ಕಥೆ, ಗಾದೆ, ಒಗಟು, ಹಾಡು, ಸಂಗೀತ ಇಂಥ ಹಲವು ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳು ಈ ವಿಶ್ವಕೋಶದಲ್ಲಿ ಲಭ್ಯವಿದೆ.

 

ಭಾಷೆಗೆ ಸಂಬಂಧಿಸಿದ ಕೃತಿಗಳು

ತುಳು

ಜಯರಾಮ ಸೂಡ ಕೆ., ೨೦೦೦
ತುಳು ಭಾಷೆ ಕಲಿಯಿರಿ – ತುಳು ಭಾಷೆ ಕಲ್ಪುಲೆ
ಸೂಡಾ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ಪುಟಗಳು : ೪೮, ರೂ. ೨೦/-

ತುಳುವಿನಲ್ಲಿ ನಿತ್ಯ ಬಳಸುವ ಶಬ್ದಗಳು, ಸಾಮಾನ್ಯ ಸಂಭಾಷಣೆಗಳು, ಸಂಬಂಧವಾಚಿ ಶಬ್ದಗಳು, ಗಾದೆಗಳು ಮುಂತಾದವುಗಳನ್ನು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನೀಡಿ ತುಳು ಭಾಷೆಯನ್ನು ಕಲಿಸುವ ಕಿರುಪ್ರಯತ್ನ ಮಾಡಲಾಗಿದೆ.

ಪಣಿಯಾಡಿ ಎಸ್.ಯು., ೧೯೩೨
ತುಳು ವ್ಯಾಕರಣ
ಕ್ರೌನ್ ೧/೮, ಪುಟಗಳು : ೧೨೮

ತುಳು ಭಾಷೆಯಲ್ಲೇ ಬರೆದ ತುಳುವಿನ ಮೊತ್ತಮೊದಲ ವ್ಯಾಕರಣಕೃತಿ.

ರಾಮಕೃಷ್ಣ ಶೆಟ್ಟಿ ಟಿ., ೧೯೮೯
ತುಳು ಬಾಸೆ
ಹೇಮಾಂಶು ಪ್ರಕಾಶನ ಕಾಟಿಪಳ್ಳ, ಕ್ರೌನ್ ೧/೮, ಪು: ೮+೬೧, ರೂ. ೧೦/-

ದ್ರಾವಿಡ ಭಾಷಾವರ್ಗದಲ್ಲಿ ತುಳುವಿನ ಸ್ಥಾನ ಹಾಗೂ ತುಳುವಿನ ಭಾಷಾ ಪ್ರಭೇದಗಳಾವುವು ಎಂಬುದನ್ನು ಇಲ್ಲಿ ತುಳುಭಾಷೆಯಲ್ಲಿ ಚರ್ಚೆ ಮಾಡಲಾಗಿದೆ.

ರಾವ್ ಪಿ.ಎಸ್., ೧೯೮೦
ತುಳು ತೆರಿಲೆ
ಕ್ರೌನ್ ೧/೮, ಪುಟಗಳು: ೯೨, ರೂ. ೧೦/-

ಕನ್ನಡದ ಮೂಲಕ ಸ್ವತಂತ್ರವಾಗಿ ತುಳುವನ್ನು ಕಲಿಯಬಹುದಾದ ಸುಲಭ ಕೈಪಿಡಿ.

ಲಾರೆನ್ಸ್ ಡಿಸೋಜ ಎಸ್.ಜೆ. (ಸಂಗ್ರಹ ಮತ್ತು ಸಂ.)
ನಂವ್ಮೋ ಬಾಸೆ, ಕೊರಗರ ಭಾಷೆ
ಯುನೆಸ್ಕೋ ಕೋಯೆಷನ್ ಲರ್ನಿಂಗ್ ಸೆಂಟರ್, ಮಂಗಳೂರು.

ಈ ಪುಸ್ತಕದಲ್ಲಿ ಕೊರಗರ ಭಾಷೆಯನ್ನು ಜೀವಂತವಾಗಿಡಬೇಕೆಂಬ ಉದ್ದೇಶದಿಂದ ಕೆಲವು ಲೇಖನಗಳು, ಕತೆಗಳು, ಗಾದೆಗಳು, ಒಗಟುಗಳನ್ನು ಅವರ ಭಾಷೆಯಲ್ಲಿ ಬರೆಯುವ ಪ್ರಯತ್ನವನ್ನು ಮಾಡಲಾಗಿದೆ. ಕನ್ನಡ-ಇಂಗ್ಲಿಷ್ ಈ ಎರಡೂ ಭಾಷೆಗಳಲ್ಲಿಯೂ ಅವುಗಳ ಅನುವಾದವೂ ಇದೆ.

ಕನ್ನಡ

ಆನಂದ ಶೆಟ್ಟಿ ಮಂ., ೨೦೦೪
ತುಳು ಭಾಷೆ ಮಾನಾದಿಗೆ
ಡೆ ೧/೮, ರೂ. ೨೦/- ಪು: ೭೮

ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ತುಳು ಭಾಷೆಯ ಸೇರ್ಪಡೆಗೆ ಸಂಬಂಧಿಸಿದ ಲೇಖನಗಳು.

ನಾಗರಾಜಯ್ಯ ಹಂಪ, ೧೯೯೬
ದ್ರಾವಿಡ ಭಾಷಾ ವಿಜ್ಞಾನ (೧೯೭೨, ೧೯೯೧, ೧೯೯೪)
ಡೆ ೧/೮, ಪು: ೧೮+೨೯೦

ಆತ್ಯಾಧುನಿಕ ವಿಚಾರಧಾರೆಗಳನ್ನೊಳಗೊಂಡ ಸಕಲ ದ್ರಾವಿಡ ಭಾಷೆಗಳ ಸಮಗ್ರ ಚಿತ್ರಣವನ್ನು ಪರಿಚಯಿಸುವ ಗ್ರಂಥ.

ರಾಮಕೃಷ್ಣ ಶೆಟ್ಟಿ ಟಿ., ೧೯೮೬
ತುಳು ವ್ಯಾಕರಣ
ಡೆ. ೧/೮, ರೂ. ೨೫/- ಪು: ೮+೧೫೪

ಆಧುನಿಕ ಭಾಷಾವಿಜ್ಞಾನದ ಹಿನ್ನೆಲೆಯಿಂದ ತುಳು ವ್ಯಾಕರಣವನ್ನು ನಿರೂಪಿಸುವ ಕೃತಿ.

ರಾಮಕೃಷ್ಣ ಶೆಟ್ಟಿ ಟಿ., ೧೯೮೬
ವರ್ಣನಾತ್ಮಕ ತುಳು ವ್ಯಾಕರಣ
ಕನ್ನಡ ಸಂಘ, ವಿವೇಕಾನಂದ ಕಾಲೇಜು, ಪುತ್ತೂರು, ಡೆಮಿ ೧/೮, ರೂ. ೨೫/-

ಇದರಲ್ಲಿ ವರ್ಣನಾತ್ಮಕ ಭಾಷಾ ವಿಜ್ಞಾನದ ತತ್ವಗಳಿಗನುಸಾರವಾಗಿ ತುಳು ಭಾಷೆಯ ಧ್ವನಿಮಾ ವ್ಯವಸ್ಥೆ, ಅಕೃತಿಮಾ ವ್ಯವಸ್ಥೆ ಹಾಗೂ ವ್ಯಾಕರಚನಾ ವ್ಯವಸ್ಥೆಯ ಪರಿಚಯ ಮಾಡಿಕೊಡಲಾಗಿದೆ ಮತ್ತು ೨ನೇ ಭಾಗದಲ್ಲಿ ತುಳುವಿನ ಎರಡು ಮುಖ್ಯ ಉಪಭಾಷೆಗಳೆನಿಸಿಕೊಂಡ ಸಾಮಾನ್ಯ ತುಳು ಹಾಗೂ ಬ್ರಾಹ್ಮಣರ ತುಳುವಿನ ವ್ಯತ್ಯಾಸಗಳನ್ನು ತೌಲನಿಕ ದೃಷ್ಟಿಯಿಂದ ಪರಿಶೀಲಿಸಲಾಗಿದೆ.

ರಾಮಚಂದ್ರ ರಾವ್ ಬಿ., ೧೯೭೬
ತುಳು ಭಾಷೆ – ಕಿರು ಪರಿಚಯ
ಐಬಿಎಚ್ ಪ್ರಕಾಶನ ಬೆಂಗಳೂರು, ಕ್ರೌ. ೧/೮, ಪು. ೪೩, ರೂ. ೧.೫೦/-

ಮಕ್ಕಳಿಗಾಗಿ ಕನ್ನಡದಲ್ಲಿ ಬರೆದ ತುಳು ಭಾಷೆಯ ಕುರಿತು ಸ್ಥೂಲ ಪರಿಚಯ ನೀಡುವ ಕೃತಿ

ಇಂಗ್ಲಿಷ್

Brigel J., 1872
A Grammar of the Tulu Language
D.1/8, page 8+140, Rs. 80/-

ತುಳುವಿನ ಬಗ್ಗೆ ಮೊತ್ತಮೊದಲ ವ್ಯಾಕರಣ ಕೃತಿ. ಪಾಶ್ಚಾತ್ಯ ಭಾಷಾ ವಿಜ್ಞಾನದ ಹಿನ್ನೆಲೆಯಲ್ಲಿ ನಿರೂಪಿತವಾದ ತುಳು ವ್ಯಾಕರಣ ಇಂಗ್ಲಿಷ್ ಭಾಷೆಯಲ್ಲಿದೆ.

Padmanabha Kekunnaya K., 1994
A Comparative Study of Tulu Dialects
Rashtra Kavi Govinda Pai Research Centre, Udupi
C.1/4, Pages xii+200, Rs. 150/-

ತುಳು ಭಾಷೆಯ ವಿವಿಧ ಭೌಗೋಳಿಕ, ಸಾಮಾಜಿಕ ಪ್ರಭೇದಗಳನ್ನು ತೌಲನಿಕವಾಗಿ ವಿಶ್ಲೇಷಿಸುವ, ತುಳುವಿನ ಸಮಗ್ರ ಚಿತ್ರವನ್ನು ಕೊಡುವ ಸಂಶೋಧನಾ ಕೃತಿ.

Ramachandra Rao B., 1966
Social and Local dialects in Tulu
D. 1/8

ತುಳುವಿನ ಸಾಮಾಜಿಕ ಹಾಗೂ ಉಪಭಾಷೆಗಳ ಕುರಿತ ಅಧ್ಯಯನವಿದೆ

Ramachndra Rao B., 2001
Verb morphology of Common Tulu

Ramakrishna Shetty T. Dr.
A Comprehensive Grammar of Tulu (ತುಳು ವ್ಯಾಕರಣ)
Rashtra Kavi Govinda Pai Research Centre, Udupi
D 1/8, Rs. 65/-

ತುಳುವಿನ ವ್ಯಾಕರಣ ಗ್ರಂಥ

Shankar Bhat D.N. Dr., 1967
Descriptive Analysis of Tulu
Deccan Collage Postgraduate & Research Centre, Poona
C. 1/8, Rs. 12/-

ತುಳುವಿನ ಧ್ವನಿಮಾ, ಆಕೃತಿಮಾ, ವಾಕ್ಯ ರಚನೆಗಳನ್ನು ಬ್ರಾಹ್ಮಣ ಹಾಗೂ ಉಡುಪಿ ತುಳುವಿನ ಮೂಲಕ ಅಧ್ಯಯನ ಮಾಡಲಾಗಿದೆ.

Shankar Bhat D.N. Dr., 1971
Koraga Language
Deccan Colleage Postgraduate and Research Institute, Poona
D. 1/8, Page 5+123, Rs. 10/-

ಕೊರಗ ಭಾಷೆಯ ವಿವಿಧ ಉಪಭಾಷೆಗಳ ಅಧ್ಯಯನ ಹಾಗೆಯೇ ಅವುಗಳ ತೌಲನಿಕ ಅಧ್ಯಯನ ನಡೆಸಲಾಗಿದೆ ಮತ್ತು ಕೊರಗ ಸಾಹಿತ್ಯದ ಬಗ್ಗೆ ಉಪಭಾಷೆಯ ಕತೆಗಳ ಮೂಲಕ ತಿಳಿಸಲಾಗಿದೆ.

Shankar Bhat D.N. Dr.,
Studies in Tulu
D. 1/4, Page: 21

ತುಳು ಭಾಷೆಯ ಅಧ್ಯಯನ (ಧ್ವನಿಮಾ, ತಾಲವ್ಯೀಕರಣ, i>e, u>o ಪರಿವರ್ತನೆ ಇತ್ಯಾದಿ)

The Tulu Langurage : A historical Survey, ೧೮೮೯
A Bad mind changed, ಕೆಟ್ಟಿ ಬೊಕ್ಕ ಬುದ್ಧಿ ಸೈತಿ ಬೊಕ್ಕ ದುಃಖ
ತುಳು ಜನಪದ ಕತೆ Mangalore Basel Mission Book & Tract
Depository, ಪುಟ : ೧೬.