ಜೀವನ ಚರಿತ್ರೆ

ತುಳು

ಕಿಞ್ಞಣ್ಣ ರೈ ಕಯ್ಯಾರ, ೧೯೯೬
ನಾರಾಯಣ ಕಿಲ್ಲೆ ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು : ೪೮, ರೂ. ೧೨/-

ಕೆದಂಬಾಡಿ ತಿಮ್ಮಪ್ಪ ರೈ, ೨೦೦೪
ಕೆದಂಬಾಡಿ ಜತ್ತಪ್ಪ ರೈ, ಪ್ರ.ಸಂ. : ವಾಮನ ನಂದಾವರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು : ೫೬, ರೂ. ೨೦/-

ಕೇಶವ ಭಟ್ ಮಂದಾರ, ೧೯೯೫
ಬಡಕ್ಕೆಲ್ ಪರಮೇಸ್ರಯ್ಯೆರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೧೨, ರೂ. ೫/-

ಕ್ಯಾಥರಿನ್ ರಾಡ್ರಿಗಸ್, ೧೯೯೮
ಕೆಮ್ತೂರು ದೊಡ್ಡಣ್ಣ ಶೆಟ್ರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೬೨, ರೂ. ೧೨/-

ಗಣನಾಥ ಎಕ್ಕಾರು, ೨೦೦೧
ಕು.ಶಿ. ಹರಿದಾಸ ಭಟ್ರ್, ಪ್ರ.ಸಂ. : ಅ. ಬಾಲಕೃಷ್ಣ ಶೆಟ್ಟಿ ಪೊಳಲಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೫೪, ರೂ. ೧೫/-

ಜೀವನ ಸಾಧನೆ

ಜಯರಾಮ ರೈ ಎಂ., ೧೯೮೫
ಪುಣ್ಯ ಭೂಮಿ ಪುಟ್ಟಪರ್ತಿ, ಕ್ರೌ ೧/೮, ರೂ. ೩/-

ಭಗವಾನ್ ಶ್ರೀ ಸತ್ಯಸಾಯಿ ಬಾಬರ ಪುಣ್ಯ ಚರಿತ್ರೆಯನ್ನು ತುಳು ಭಾಷೆಯಲ್ಲಿ ಬರೆಯಲಾಗಿದೆ.

ಡೀಕಯ್ಯ ಪಿ., ೧೯೯೭
ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ,
ಬೆಂಗಳೂರು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೫೬, ರೂ. ೧೮/-

ನರೇಂದ್ರ ರೈ ದೇರ್ಲ, ೧೯೯೯
ನವಯುಗ ಹೊನ್ನಯ್ಯ, ಶೆಟ್ರ್, ಪ್ರ.ಸಂ. : ಅ. ಬಾಲಕೃಷ್ಣ ಶೆಟ್ಟಿ ಪೊಳಲಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೩೨, ರೂ. ೧೨/-

ನಾ ವುಜಿರೆ, ೧೯೯೬
ಧರ್ಮಸ್ಥಳ ಮಂಜಯ್ಯ ಹೆಗ್ಗಡೇರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೪೮, ರೂ. ೧೨/-

ಪದ್ಮನಾಭ ಕೇಕುಣ್ಣಾಯ, ೧೯೯೫
ರೆವರೆಂಡ್ ಆಗಸ್ಟ್ ಮೇನರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೪೬, ರೂ. ೧೨/-

ಪೀಟರ್ ವಿಲ್ಸನ್ ಪ್ರಭಾಕರ್, ೧೯೯೭
ಸತ್ಯಮಿತ್ರ ಬಂಗೇರ, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೪೮, ರೂ. ೧೨/-

ಪ್ರಭಾಕರ ಜೋಶಿ ಎಂ., ೧೯೯೮
ಮಂದಾರ ಕೇಶವ ಭಟ್ರ್
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೪೪ + ೧೦, ರೂ. ೧೨/-

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೯೫
ಎನ್.ಎ. ಶೀನಪ್ಪ ಹೆಗ್ಗಡ್ರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೩೮, ರೂ. ೧೦/-

ಮಾಧವ ಕುಲಾಲ್, ೧೯೯೭
ವಿಶುಕುಮಾರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆಮಿ ೧/೮, ಪುಟಗಳು: ೫೬, ರೂ. ೧೨/-

ಮುರಳೀಧರ ಉಪಾಧ್ಯ ಹಿರಿಯಡಕ, ೧೯೯೫
ಎಸ್.ಯು. ಪಣಿಯಾಡಿ, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೪೫, ರೂ. ೧೨/-

ಮುಂಡಪ್ಪ ಬೋಳೂರು, ೧೯೯೮
ಬಿ. ರಾಮ ಕಿರೋಡಿಯನ್ ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೬೦, ರೂ. ೧೨/-

ಯಜ್ಞಾವತಿ ಕೇಶವ ಕಂಗೆನ್, ೧೯೯೫
ಮೂವೆರ್ ತಿಂಗಳಾಯೆರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೬೩, ರೂ. ೧೨/-

ರಘುನಾಥ ಶೆಟ್ಟಿ ಎನ್., ೧೯೯೭
ನರ್ಕಳ ಮಾರಪ್ಪ ಶೆಟ್ರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೫೬, ರೂ. ೧೨/-

ರತ್ನಕುಮಾರ್ ಎಂ., ೧೯೯೭
ಮಟ್ಟಾರು ವಿಠಲ ಹೆಗ್ಡೆ, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೩೮, ರೂ. ೧೨/-

ರತ್ನಕುಮಾರ್ ಎಂ.
ಪುಲ್ಯಾನಗ ನೆನೆಪೊಡಾಯಿನ ಎಸ್.ಆರ್. ಹೆಗ್ಡೆ
ಅಖಿಲ ಭಾರತ ತುಳು ಒಕ್ಕೂಟ (ರಿ). ಮಂಗಳೂರು
ಕ್ರೌನ್ ೧/೮, ಪುಟಗಳು : ೪+೨೮, ರೂ. ೧೨/-

ಎಸ್.ಆರ್. ಹೆಗ್ಡೆಯವರ ಬದುಕು – ಸಾಧನೆಗಳನ್ನು ವಿವರಿಸುವ ಕಿರುಕೃತಿ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೨೦೦೩
ಶಿವರಾಮ ಕಾರಂತೆರ್, ಪ್ರ.ಸಂ. : ವಾಮನ ನಂದಾವರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೮೦, ರೂ. ೧೫/-

ವೆಂಕಟರಾಜ ಪುಣಿಂಚತ್ತಾಯ, ೧೯೯೫
ಬಾಯಾರು ಸಂಕಯ್ಯ ಭಾಗೋತೇರ್, ಪ್ರ.ಸಂ. : ಬಿ.ಎ. ವಿವೇಕ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೩೪, ರೂ. ೧೦/-

ಶೆಟ್ಟಿ ಎನ್.ಪಿ., ೨೦೦೨
ಅ. ಬಾಲಕೃಷ್ಣ ಶೆಟ್ಟಿ ಪೊಳಲಿ, ಪ್ರ.ಸಂ. ವಾಮನ ನಂದಾವರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ಪುಟಗಳು: ೩೮, ರೂ. ೧೫/-

ಬಾಲಕೃಷ್ಣ ಶೆಟ್ಟಿ ಪೊಳಲಿಯವರ ಬದುಕು – ಸಾಧನೆಗಳನ್ನು ವಿವರಿಸುವ ಕೃತಿ.

ಸುನೀತಾ ಶೆಟ್ಟಿ ಮುಂಬಯಿ, ೨೦೦೨
ಕಲಾತಪಸ್ವಿ ಕೆ.ಕೆ. ಹೆಬ್ಬಾರ್, ಪ್ರ.ಸಂ. : ವಾಮನ ನಂದಾವರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು
ಡೆಮಿ ೧/೮, ರೂ. ೧೫/-

ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರರ ಬದುಕು – ಸಾಧನೆಯನ್ನು ಕುರಿತ ಕೃತಿ.

ರತ್ನತ್ರಯ (ವ್ಯಕ್ತಿ ಪರಿಚಯ), ೧೯೯೪
ರತ್ನತ್ರಯ ಪ್ರಕಾಶನ, ಮಂಗಳೂರು, ಕ್ರೌನ್ ೧/೮

ತುಳುನಾಡಿನ ಪ್ರಸಿದ್ಧ ಕ್ಷೇತ್ರವಾದ ಧರ್ಮಸ್ಥಳದ ಸುವ್ಯವಸ್ಥೆಯ ಕಾರಣಕರ್ತರಾದ ಮೂವರು ವ್ಯಕ್ತಿಗಳ ಚಿತ್ರಣವನ್ನು ಇದರಲ್ಲಿ ತುಳುವಲ್ಲಿ ನೀಡಲಾಗಿದೆ. ಮೂವರು ಬೇರೆ ಬೇರೆ ಲೇಖಕರು ವ್ಯಕ್ತಿ ಪರಿಚಯವನ್ನು ನೀಡಿದ್ದಾರೆ. ೧. ರಾಜರ್ಷಿ ವೀರೇಂದ್ರ ಹೆಗ್ಗಡೆರ್ – ಜೆ.ಕೆ. ಜೈನ್, ಮಹಾಸಾಧನೆದ ದಿ. ರತ್ನವರ್ಮ ಹೆಗ್ಗಡೆರ್ – ನಾ ಉಜಿರೆ, ಧರ್ಮಸ್ಥಳದ ಶ್ರೀಮತಿ ರತ್ನಮ್ಮ ಹೆಗ್ಗಡೆರ್ – ಶಾರದಾ ರಮೇಶ್.

ಕನ್ನಡ

ಅಂಬಾತನಯ ಮುದ್ರಾಡಿ, ೧೯೮೯
ಉತ್ತುಂಗ (ವ್ಯಕ್ತಿ ಪರಿಚಯ)
ಸಾಹಿತ್ಯ ಸಂಘ, ಮಣಿಪಾಲ, ಕ್ರೌ ೧/೮, ಪು : ೬+೩೯

ಪೊಲ್ಯ ದೇಜಪ್ಪ ಶೆಟ್ಟಿಯೆಂಬ ಹಿರಿಯ ಯಕ್ಷಗಾನ ಅರ್ಥಧಾರಿಗಳ ವ್ಯಕ್ತಿತ್ವ, ಸಾಧನೆ, ಸಿದ್ಧಿಗಳ ಬಗೆಗೆ ಕಿರು ಪರಿಚಯ ನೀಡುವ ಪುಸ್ತಕ.

ಅಣ್ಣಾರಾಐ ಮಿರ್ಜಿ, ೧೯೫೬
ಮಹಾಪುರುಷ (ಜೀವನ ದರ್ಶನ)
ವಿವೇಕಾಭ್ಯುದಯ ಕಾರ್ಯಾಲಯ ವೀರಭವನ, ಮಂಗಳೂರು, ಕ್ರೌ. ೧/೮

ಈ ಕೃತಿಯು ಲೇಖಕರು ತಮ್ಮದೇ ಆದ ರೀತಿಯಲ್ಲಿ ಬರೆಯಲಾದ ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರ ಪವಿತ್ರ ಜೀವನವನ್ನು ಯಥಾವತ್ತಾಗಿ ರೂಪಿಸಿರುವ ಕೃತಿಯಾಗಿದೆ.

ಅಮೃತ ಸೋಮೇಶ್ವರ, ೧೯೮೮
ಬಡೆಕ್ಕಿಲ ವೆಂಕಟರಮಣ ಭಟ್ಟರು (ಜೀವನ ಮತ್ತು ಕೃತಿಗಳು)
ಕರ್ನಾಟಕ ಸಂಘ, ಪುತ್ತೂರು, ಡೆ. ೧/೮, ಪು. ೪+೫೬, ರೂ. ೮/-

ಯಕ್ಷಗಾನದ ಅರ್ಥದಾರಿಗಳು, ವಿದ್ವಾಂಸರು, ಕವಿಗಳು ಆದ ದಿ. ಬಡೆಕ್ಕಿಲ ವೆಂಕಟರಮಣ ಭಟ್ಟರ ಜೀವನ ಹಾಗೂ ಬರಹಗಳು ಪರಿಚಯ ಈ ಕೃತಿಯಲ್ಲಿದೆ.

ಅಮೃತ ಸೋಮೇಶ್ವರ, ಗಣೇಶ ಅಮೀನ್ ಸಂಕಮಾರ್, ೨೦೦೧
ಬ್ರಹ್ಮಬಲಾಂಡಿ ಶ್ರೀ ಕ್ಷೇತ್ರ ಪೆರಾರ
ಸುರಭಿ ಪ್ರಕಾಶನ, ಮಂಗಳೂರು, ಪು. ೪೮, ರೂ. ೫೦/-

ಶ್ರೀ ಕ್ಷೇತ್ರ ಪೆರಾರದ ಬ್ರಹ್ಮರ ಮತ್ತು ರಾಜನ್ ದೈವಗಳಾದ ಅರಸುದೈವ, ಬಲವಂಡಿ, ಪಿಲಿಚಾಮುಂಡಿ (ಮೂವೆರ್ ಉಳ್ಳಾಕುಲು) ದೈವಗಳ ಚರಿತ್ರೆ ಇಲ್ಲಿದೆ. ಕ್ಷೇತ್ರಗಳ ಛಾಯಾಚಿತ್ರಗಳನ್ನು ಆರಂಭದ ಪುಟಗಳಲ್ಲಿ ನೀಡಲಾಗಿದೆ.

ಕಮಲಾಕ್ಷ ಪಿ., ೨೦೦೦
ತುಳುನಾಡ ಕಾರಣಿಕ ಪುರುಷ ಶ್ರೀ ಬಬ್ಬು ಸ್ವಾಮಿ (ಜೀವನ ಚರಿತ್ರೆ)
ಪಿ. ಕಮಲಾಕ್ಷ ಚಿತ್ರಾ ಕುಟೀರ, ಸೂಟರ್ ಪೇಟೆ, ಮಂಗಳೂರು
ಕ್ರೌ. ೧/೮, ರೂ. ೪೦/- (ಉತ್ತಮ) ರೂ. ೩೦/- (ಸಾದಾ ಪ್ರತಿ)

ರಾಜನ್ ದೈವವಾದ ಬಬ್ಬು ಸ್ವಾಮಿಯ ಹುಟ್ಟು ಬದುಕಿನ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ.

ಕಮಲಾಕ್ಷ ಪಿ., ೧೯೮೬
ದಲಿತೋದ್ಧಾರಕ ಕುದ್ಮುಲ್ ರಂಗರಾವ್ (ಜೀವನ ಚರಿತ್ರೆ)
ಪಿ. ಕಮಲಾಕ್ಷ ಸೂಟರ್ ಪೇಟೆ ಮಂಗಳೂರು, ಕ್ರೌ. ೧/೮, ರೂ. ೧೦/-

ಗಣಪಯ್ಯ ಅಲ್ಸೆ. ಅ., ೧೯೭೪
ಯಕ್ಷಗಾನ ಕಲಾವಿದರು (ಪರಿಚಯ)
ಮಯೂರ ಪ್ರಕಾಶನ, ಬೆಂಗಳೂರು
ಕ್ರೌನ್ ೧/೮, ಪು. ೧೨೮, ರೂ. ೬/- (ಸಾದಾ) ರೂ. ೯/- (ಉತ್ತಮ)

ಈ ಕೃತಿಯಲ್ಲಿ ಬಡಗು ಹಾಗೂ ತೆಂಕುಟ್ಟಿನ ಯಕ್ಷಗಾನ ಕಲಾವಿದರ ಪರಿಚಯ ನೀಡುವ ಲೇಖನಗಳಿವೆ. ಉದಾ : ಹಾರಾಡಿ ರಾಮ, ಕೋಟ ವೈಕುಂಠ, ಹಿರಿಯಡಕ ಗೋಪಾಲ ರಾವ್, ಮಾರ್ತಾ ಆಸ್ಟಿನ್, ಶೇಣಿ ಗೋಪಾಲಕೃಷ್ಣ ಭಟ್ಟ, ಕುರಿಯ ವಿಠಲ ಶಾಸ್ತ್ರೀ ಮಲ್ಪೆಶಂಕರನಾರಾಯಣ ಸಾಮಗ, ಕುಂಬಳೆ ಸುಂದರರಾವ್, ಬಣ್ಣದ ಮಹಾಲಿಂಗ, ಕೋಳ್ಯೂರು ರಾಮಚಂದ್ರರಾವ್ ಮುಂತಾದವರ ಪರಿಚಯ.

ಗೋಪಾಲ ಸಂಪಾಜೆ ಕೆ. (ಸಂಗ್ರಹ), ೧೯೮೮
ಪರಿಚಯ
ಚೇತನ ಪ್ರಕಾಶನ ಸುಳ್ಯ, ಕ್ರೌ. ೧/೮, ರೂ. ೧೫/-

ಹಲವು ಕನ್ನಡ, ತುಳು ಯಕ್ಷಗಾನ ಕಲಾವಿದರ ಪರಿಚಯ ನೀಡುವ ಕೃತಿ. ಭಾಗವತರು, ಸಂಗೀತಗಾರರು, ಚೆಂಡೆ-ಮದ್ದಳೆಗಾರರು, ಹಾಸ್ಯಗಾರರು, ಬಣ್ಣದ ವೇಷಧಾರಿಗಳು, ಸ್ತ್ರೀ ಪಾತ್ರಧಾರಿಗಳು, ಪ್ರಧಾನ ಪಾತ್ರಧಾರಿಗಳು ಮುಂತಾದ ೧೦೫ ಕಲಾವಿದರ ಪರಿಚಯ ನೀಡಲಾಗಿದೆ.

ಚಂದ್ರಕಲಾ ಕೆ.ವಿ., ೧೯೭೩
ಪ್ರಾಧ್ಯಾಪಕ ಎಂ. ಮರಿಯಪ್ಪ ಭಟ್ಟರು
ಕನ್ನಡ ಸಂಘ ಸ್ನಾತಕೋತ್ತರ ಶಿಕ್ಷಣ ಕೇಂದ್ರ, ಮಂಗಳಗಂಗೋತ್ರಿ, ರೂ. ೧/-

ಮರಿಯಪ್ಪ ಭಟ್ಟರ ಬದುಕು, ಸಾಧನೆಗಳ ಚಿತ್ರಣ ಇದರಲ್ಲಿದೆ.

ಚಂದ್ರಹಾಸ ಕಣಂತೂರು, ೧೯೯೭
ಕಣಂತೂರು ಧರ್ಮ ಅರಸು ಶ್ರೀ ತೋಡಕುಕ್ಕಿನಾರ್
ಪ್ರಕಾಶಕ : ಶ್ರೀ ಬಾಲಕೃಷ್ಣ ಪೊಯ್ಯತ್ತಾಯ, ಡೆ. ೧/೮, ಪು: ೯೬, ರೂ. ೪೫/-

ಕಣಂತೂರಿನಲ್ಲಿ ನಡೆಯುವ ವಾರ್ಷಿಕ ಉತ್ಸವಗಳು, ಇಲ್ಲಿಯ ಭೂತಾರಾಧನೆಯ ತಾಂತ್ರಿಕ ಹಾಗೂ ಸಾಂಸ್ಕೃತಿಕ ಸ್ವರೂಪ, ಕಣಂತೂರಿನ ಸ್ಥಳಪುರಾಣ, ಜನಪದ ಪುರಾಣಗಳಾದ ಪಾಡ್ದನಗಳ ಪಠ್ಯ, ಭೂತಗಳ ನುಡಿಕಟ್ಟು, ಕಣಂತೂರು ಧಾರ್ಮಿಕ ಕೇಂದ್ರದ ಹುಟ್ಟುವಳಿ ಹಾಗೂ ಉಂಬಳಿ, ಆಡಳಿತ ವ್ಯವಸ್ಥೆ ಇತ್ಯಾದಿ ವಿವರಗಳನ್ನು ವರ್ಗೀಕರಿಸಿ ಬೇರೆ ಬೇರೆ ಅಧ್ಯಾಯಗಳ ರೂಪದಲ್ಲಿ ವಿವರಿಸಲಾಗಿದೆ. ಪೂರಕ ಛಾಯಾಚಿತ್ರಗಳೂ ಇವೆ.

ನರೇಂದ್ರ ರೈ ದೇರ್ಲ, ೧೯೯೮
ವಿಶುಕುಮಾರ
ಪ್ರಸಾರಾಂಗ ಮಂಗಳೂರು ವಿ.ವಿ., ಕ್ರೌ. ೧/೮, ಪು. ೫೨, ರೂ. ೧೫/-

ವಿಶುಕುಮಾರರ ಬದುಕು – ಸಾಧನೆಗಳ ಚಿತ್ರಣ ಇಲ್ಲಿದೆ.

ನಾ. ವುಜಿರೆ, ೨೦೦೩
ಧರ್ಮಸ್ಥಳ ಮಂಜಯ್ಯ ಹೆಗ್ಗಡೆ, ಪ್ರ.ಸಂ. : ವಾಮನ ನಂದಾವರ
ಕರ್ನಾಟಕ ತುಳು ಸಾಃಇತ್ಯ ಅಕಾಡೆಮಿ, ಡೆ. ೧/೮, ಪು. ೪೮, ರೂ. ೧೫/-

ಬಾಬು ಅಮೀನ್ ಬನ್ನಂಜೆ, ೧೯೮೨
ಕೋಟಿ ಚೆನ್ನಯ
ಪ್ರಕಾಶನ : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ)
ಆದಿ ಉಡುಪಿ, ಉಡುಪಿ-೫೭೬ ೧೦೩, ಡೆ ೧/೮, ಪು: ೮+೧೨+೯೦, ರೂ. ೫/-

ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಕುರಿತ ಜೀವನ ವೃತ್ತ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೯೦
ಗೌರವದ ಗರಿಗಳು (ವ್ಯಕ್ತಿ ಚಿತ್ರಗಳು)
ಹೇಮಾಂಶು ಪ್ರಕಾಶನ, ಕಾಟಿಪಳ್ಳ, ಕ್ರೌ. ೧/೮, ಪು. ೧೬+೧೩೪, ರೂ. ೨೪/-

೧೬ ವ್ಯಕ್ತಿಗಳ ಸಿದ್ಧಿ ಸಾಧನೆಗಳ ಸ್ಪಷ್ಟ ಚಿತ್ರಣವಿದೆ. ತುಂಬ ಪ್ರಸಿದ್ಧರು, ತಕ್ಕ ಮಟ್ಟಿಗೆ ವಿಖ್ಯಾತರು, ಅಪ್ರಸಿದ್ಧರಾದರೂ ಗೌರವ ಭಾಜನರು, ಕವಿ, ಕಲಾವಿದ. ಪತ್ರಕರ್ತರು, ಯಕ್ಷಗಾನ ತಾಳಮದ್ದಳೆ ಧಾರಿಗಳು, ಉಪಾಧ್ಯಾಯರು, ವಾಗ್ಮಿಗಳು, ದೇಶ ಪ್ರೇಮಿಗಳು, ಕನ್ನಡ, ತುಳುವಿನ ವಿದ್ವಾಂಸರು ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವರ ಪರಿಚಯ ಇಲ್ಲಿದೆ ಉದಾ: ಶೀನಪ್ಪ ಸೇಡಿಯಾಪು, ವಿ.ಸೀ. ರಾಜರತ್ನಂ, ನಾರಾಯಣ ಕಿಲ್ಲೆ, ಕಯ್ಯಾರ, ಶೀನಪ್ಪ ಹೆಗ್ಗಡೆ, ಮಂದಾರ ಕೇಶವ ಭಟ್ಟ, ಅಳಕೆ ರಾಮಯ್ಯ ರೈ ಮುಂತಾದವರ ಕುರಿತ ವ್ಯಕ್ತಿ ಚಿತ್ರಗಳು.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೯೬
ಪೊಳಲಿ ಶೀನಪ್ಪ ಹೆಗ್ಗಡೆ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ
ಕ್ರೌ. ೧/೮, ಪು : ೭೩, ರೂ. ೨೦/-

ಪೊಳಲಿ ಶೀನಪ್ಪ ಹೆಗ್ಗಡೆಯವರ ಜೀವನ – ಸಾಧನೆಗಳನ್ನು ಪರಿಚಯಿಸುವ ಕೃತಿ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೯೪
ಮರೆಯಬಾರದ ಮಹನೀಯರು (ವ್ಯಕ್ತಿ ಚಿತ್ರಗಳ ಸಂಕಲನ)
ಬಂಟರ ಯಾನೆ ನಾಡವರ ಸಂಘ, ಮುಲ್ಕಿ, ಕ್ರೌ. ೧/೮, ಪು. ೯೫, ರೂ. ೨೦/-

ಈ ಸಂಕಲನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿದು ಪ್ರಸಿದ್ಧಿ ಪಡೆದ ೨೨ ಮಂದಿ ಬಂಟ ಸಮುದಾಯದ ಮಹನೀಯರುಗಳ ಕಿರು ಪರಿಚಯವಿದೆ. ಇಲ್ಲಿನ ಲೇಖನಗಳು ಮುಂಬಯಿಯ ‘ಬಂಟರವಾಣಿ’ಯಲ್ಲಿ ಪ್ರಕಟಗೊಂಡ ಕಾಲಾನುಕ್ರಮದಲ್ಲಿ ಸಂಕಲನಗೊಂಡಿವೆ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೯೯
ಯಕ್ಷಗಾನ ವಾಚಸ್ಪತಿ (ಜೀವನ ವೃತ್ತ)
ಪ್ರಸಾರಾಂಗ ಮಂಗಳೂರು ವಿ.ವಿ. ಮಂಗಳಗಂಗೋತ್ರಿ
ಕ್ರೌ. ೧/೮, ಪು: ೫೮, ರೂ. ೧೫/-

ನಮ್ಮ ಜಿಲ್ಲೆಯ ಸಾಂಸ್ಕೃತಿಕ ಜಗತ್ತಿನ ಯಕ್ಷಗಾನ, ತಾಳಮದ್ದಳೆ ರಂಗದಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿಯವರ ಬದುಕು – ಸಾಧನೆ, ಸಂದ ಸನ್ಮಾನ – ಗೌರವಗಳು ಇತ್ಯಾದಿಗಳ ಕುರಿತು ಮಾಹಿತಿ ನೀಡುವ ಪುಸ್ತಕ.

ಬಾಲಚಂದ್ರ ರಾವ್ ನಂದಳಿಕೆ (ಸಂ.), ೨೦೦೧
ನಂದಳಿಕೆಯ ನಂದಾದೀಪಗಳು (ವ್ಯಕ್ತಿ ಪರಿಚಯದ ಲೇಖನಗಳು)
ಕರ್ನಾಟಕ ಸಂಘ ದರ್ಬೆ, ಪುತ್ತೂರು, ಕ್ರೌ ೧/೮, ಪು: ೧೪+೯೮, ರೂ. ೬೦/-

ಇದರಲ್ಲಿ ಮುದ್ದಣ, ಬಿಡಾರಂ ಕೃಷ್ಣಪ್ಪ, ನಂದೊಳ್ಗೆ ಶೀನಪ್ಪ ಹೆಗ್ಗಡೆ, ನ್ಯಾ. ಎನ್.ಡಿ. ಕೃಷ್ಣರಾವ್ – ಮುಂತಾದವರ ಜೀವನ – ಸಾಧನೆಗಳ ಚಿತ್ರಗಳಿವೆ.

ಭಟ್ ಕೆ.ಎನ್. ಶಿರಾಡಿಪಾಲ್, ೧೯೮೩
ಧರ್ಮವೀರ ರತ್ನವರ್ಮ ಹೆಗ್ಗಡೆ
ಐಬಿಎಚ್ ಪ್ರಕಾಶನ ಬೆಂಗಳೂರು, ಕ್ರೌ. ೧/೮, ಪು. ೫೬, ರೂ. ೨/-

ಧರ್ಮಸ್ಥಳದ ರತ್ನವರ್ಮ ಹೆಗ್ಗಡೆಯವರ ಜೀವನ ಚಿತ್ರಣ ನೀಡುವ ಕಿರುಕೃತಿ ಹಾಗೂ ಪೂರಕ ಛಾಯಾಚಿತ್ರಗಳಿವೆ.

ಭಟ್ ಕೆ.ಎನ್. ಶಿರಾಡಿಪಾಲ್, ೧೯೮೨
ಪಾಣಾಜೆ ಪಂಡಿತರು
ಐಬಿಎಚ್ ಪ್ರಕಾಶನ ಬೆಂಗಳೂರು, ಕ್ರೌ. ೧/೮, ಪು. ೪೪, ರೂ. ೨/-

ಆಯುರ್ವೇದ ವೈದ್ಯಪದ್ಧತಿಯ ಪಾಣಾಜೆ ಪಂಡಿತರ ಜೀವನ ಚರಿತ್ರೆ ಈ ಕಿರುಕೃತಿಯಲ್ಲಿದೆ.

ಮಾಧವ ನಾಯಕ ಪಿ., ಬೊಳುವಾರು, ೧೯೯೦
ವ್ಯಕ್ತಿ – ವಿಚಾರ (ವ್ಯಕ್ತಿ ಚಿತ್ರಗಳ ಮತ್ತು ಲೇಖನಗಳ ಸಂಕಲನ)
ಕನ್ನಡ ಸಂಘ ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ಡೆ. ೧/೮, ಪು. ೮+೭೯, ರೂ. ೧೫/-

ಈ ಕೃತಿಯಲ್ಲಿ ಕನ್ನಡ ನಾಡಿನ ೬ ಮಂದಿ ಉದ್ದಾಮ ಸಾಹಿತಿ, ಕಲಾವಿದರ ಮತ್ತು ಸಂಗೀತಗಾರರ ವ್ಯಕ್ತಿ ಚಿತ್ರಗಳನ್ನು ನೀಡಿದ್ದಾರೆ. ಉದಾ: ಬೀಚಿ, ಶೇಣಿ, ಮಂಡೆಚ್ಚರು, ಶಿವರಾಮ ಕಾಂತ ಮುಂತಾದವರ ಕುರಿತಂತೆ ‘ವಿಚಾರ’ ಭಾಗದಲ್ಲಿ ಪುತ್ತೂರಿನ ಹಿಂದಿನ ಮತ್ತು ಇಂದಿನ ಯಕ್ಷಗಾನ ಚಟುವಟಿಕೆಗಳು, ಕಲಾವಿದರು, ಬಣ್ಣದ ವೇಷಗಳ ವೈಶಿಷ್ಟ್ಯಗಳು, ಬಣ್ಣದ ವೇಷಧಾರಿಗಳ ಪರಿಚಯ ಹಾಗೆಯೇ ಯಕ್ಷಗಾನದ ವಿವೇಚನೆಯನ್ನು ‘ಯಕ್ಷಗಾನಕ್ಕೆ ಪುತ್ತೂರಿನ ಕೊಡುಗೆ’ ಹಾಗೂ ‘ಯಕ್ಷಗಾನ ಒಂದು ವಿವೇಚನೆ’ ಲೇಖನಗಳಲ್ಲಿ ನೀಡಿದ್ದಾರೆ. ‘ಜಾನಪದ ಸ್ಪಂದನ’ ಲೇಖನದಲ್ಲಿ ಜಾನಪದ ಹಾಡುಗಳಲ್ಲಿ ಸ್ಪಂದಿಸಿದ ಅಂತರಂಗಿಕ ಭಾವಗಳನ್ನು, ಸನ್ನಿವೇಶಗಳನ್ನು, ಕೌಟುಂಬಿಕ ಬದುಕಿನ ಒಳನೋಟಗಳನ್ನೂ ವಿವರಿಸಲಾಗಿದೆ.

ಮುರಳೀಧರ ಉಪಾಧ್ಯ ಹಿರಿಯಡಕ, ೧೯೮೯
ಕಯ್ಯಾರ ಕಿಞ್ಞಣ್ಣ ರೈ ಒಂದು ಪ್ರಸ್ತಾವನೆ
ಕಯ್ಯಾರ ೭೫ ಅಭಿನಂದನಾ ಸಮಿತಿ ಮಣಿಪಾಲ
ಕ್ರೌ. ೧/೮, ಪು. ೬+೪೦, ರೂ. ೫/-

ಕಯ್ಯಾರರ ಬದುಕು – ಸಾಧನೆಗಳ ಪರಿಚಯ ನೀಡುವ ಕೃತಿ.

ಮುರಳೀಧರ ಉಪಾಧ್ಯ ಹಿರಿಯಡಕ, ೧೯೯೭
ಎಸ್.ಯು. ಪಣಿಯಾಡಿ
ಪ್ರಸಾರಾಂಗ ಮಂಗಳೂರು ವಿ.ವಿ., ಕ್ರೌ. ೧/೮, ಪು. ೧೦+೩೨, ರೂ. ೧೫/-

ಪಣಿಯಾಡಿಯವರ ಬದುಕು ಮತ್ತು ಸಾಧನೆಗಳ ಕುರಿತು ಉಪಾಧ್ಯರು ತುಳುವಿನಲ್ಲಿ ಬರೆದಿರುವ ಕೃತಿಯನ್ನು ಕ.ತು. ಸಾ. ಅ. ಪ್ರಕಟಿಸಿದೆ. ಆ ಕೃತಿಯನ್ನು ಪರಿಷ್ಕರಿಸಿ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ.

ರಘುನಾಥ ಶೆಟ್ಟಿ ಎನ್., ೨೦೦೨
ನರ್ಕಳ ಮಾರಪ್ಪ ಶೆಟ್ಟಿ, ಪ್ರ.ಸಂ. ವಾಮನ ನಂದಾವರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆ. ೧/೮, ಪು. ೫೬, ರೂ. ೧೫/-

ಮರೆಯಲಾರದ ತುಳುವರು ಮಾಲಿಕೆ ೧, ವ್ಯಕ್ತಿಪರಿಚಯ

ರತ್ನಕುಮಾರ್ ಎಂ., ೨೦೦೩
ಮಟ್ಟಾರು ವಿಠಲ ಹೆಗ್ಡೆ, ಪ್ರ.ಸಂ. ವಾಮನ ನಂದಾವರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆ. ೧/೮, ಪು. ೪೮, ರೂ. ೧೫/-

ಮರೆಯಲಾರದ ತುಳುವರು ಮಾಲಿಕೆ ೨, ವ್ಯಕ್ತಿಪರಿಚಯ

ರಾಜಗೋಪಾಲಾಚಾರ್ಯ ಎನ್. ಪ್ರೊ. (ಸಂ), ೧೯೮೧
ವಾಗ್ಗೇಯಕಾರ ಶ್ರೀ ವಾದಿರಾಜರು ಮತ್ತು ಇತರ ಪ್ರಬಂಧಗಳು
ಕ್ರೌ ೧/೮, ಪು. ೪+೨೮, ರೂ. ೪/-

ವಾದಿರಾಜ ಸ್ವಾಮಿಗಳ ಬದುಕು ಬರಹ ಕುರಿತ ಕಿರುಕೃತಿ. ವಾದಿರಾಜರು ತುಳು ಭಾಷೆಯಲ್ಲಿ ‘ದಶಾವತಾರ’ ಎನ್ನುವ ಸ್ತುತಿರೂಪವಾದ ಹಾಡನ್ನು ಬರೆದಿರುವ ಉಲ್ಲೇಖ ಈ ಕೃತಿಯಲ್ಲಿದೆ.

ಲಕ್ಷ್ಮೀನಾರಾಯಣ ಆಳ್ವ ಏರ್ಯ, ೧೯೭೧
ಮುಳಿಯ ತಿಮ್ಮಪ್ಪಯ್ಯ
ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ, ರೂ. ೫೦ ಪೈಸೆ

ಮುಳಿಯ ತಿಮ್ಮಪ್ಪಯ್ಯರ ಜೀವನ ಸಾಧನೆಗಳನ್ನು ಪರಿಚಯಿಸುವ ಕಿರುಕೃತಿ.

ವಾಮನ ನಂದಾವರ, ೧೯೯೭, ಲಕ್ಕಪ್ಪಗೌಡ ಎಚ್.ಜೆ. ಡಾ. (ಪ್ರ. ಸಂ.)
ಸರ್ ಜೇಮ್ಸ್ ಜಾರ್ಜ್‌ಫ್ರೇಜರ್
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು
ಡೆ. ೧/೮, ಪು: ೬+೬೧, ರೂ. ೨೦/-

ಈ ಕೃತಿಯಲ್ಲಿ ಫ್ರೇಜರ್ನನ್ನು ಆತನ ಉದ್ದೇಶ, ಸಾಧನೆ, ಪ್ರತಿಪಾದನೆಗಳೊಂದಿಗೆ ಪರಿಚಯಿಸುವುದರ ಜೊತೆಗೆ ಆದಿಮಾನವ ಪರಂಪರೆಯ ವಿಶಿಷ್ಟ ಲೋಕದ ದರ್ಶನ ಮಾಡಿಕೊಟ್ಟ ಈ ವಿದ್ವಾಂಸ ಮಾನವಕುಲ ಶಾಸ್ತ್ರದ ಆಧುನಿಕ ಅಧ್ಯಯನಕ್ಕೆ ನೀಡಿದ ಕೊಡುಗೆಯೇನೆಂಬುದನ್ನು ನಿರೂಪಿಸಲಾಗಿದೆ.

ವಾಮನ ನಂದಾವರ, ೨೦೦೪
ಕೋಟಿ ಚೆನ್ನಯ, ಮಕ್ಕಳಿಗಾಗಿ ಕತೆಗಳು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಕ್ರೌ. ೧/೪, ಪು. ೩೨, ರೂ. ೨೦/-

ವಿಜಯ ವಿಕ್ರಮ್, ಗಾಂಧಿಪೇಟೆ, ೨೦೦೩
ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಚರಿತ್ರೆ (ಮೊಗೇರ್ಕಳ ದೈವಗಳ ಜೀವನ ಚರಿತ್ರೆ) ಶ್ರೀ ಆದಿಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್, ಗಾಂಧಿಪೇಟೆ ರಾಮಕುಂಜ – ದ.ಕ., ಡೆ. ೧/೮, ಪು: ೧೦+೪೨, ರೂ. ೨೦/-

ತುಳು ಮೌಖಿಕ ಸಾಹಿತ್ಯ ಪಾಡ್ದನ ಮತ್ತು ಐತಿಹ್ಯಗಳ ಆಧಾರದಿಂದ ಈ ಕಥಾನಕವನ್ನು ರಚಿಸಲಾಗಿದೆ. ತುಳುನಾಡಿನ ಮೂಲ ನಿವಾಸಿಗಳಾದ ಮುಗೇರರ ಆರಾಧ್ಯ ದೈವಗಳಾದ ಮುದ್ದ – ಕಳಲರ ಮನುಷ್ಯ ಜನ್ಮದ ಪೂರ್ಣ ಜೀವನ ಚರಿತ್ರೆ, ಅವರ ಸಾಹಸ, ಪವಾಡಗಳನ್ನೂ ಇದರಲ್ಲಿ ವಿವರಿಸಲಾಗಿದೆ.

ವಿವೇಕ ರೈ ಬಿ.ಎ., ೨೦೦೧
ಅಗ್ರಾಳ ಪುರಂದರ ರೈ – ಸಮಗ್ರ ಸಾಹಿತ್ಯ
ಅಕ್ಕೆಸಿರಿ ಸಾಂಸ್ಕೃತಿಕ ಕೇಂದ್ರ, ಮಂಗಳೂರು
ಡೆ. ೧/೮, ಪುಟಗಳು : ೧೯೨, ಬೆಲೆ : ರೂ. ೬೦/-

ತುಳು ಯಕ್ಷಗಾನ ಕವಿಗಳು, ತುಳು ಸಾಹಿತ್ಯದ ಮೊದಲ ಬೆಳವಣಿಗೆ, ಮೊದಲ ತುಳು ಯಕ್ಷಗಾನ ಪ್ರಸಂಗದಲ್ಲಿ ರಾಮರಾಜ್ಯದ ಕಲ್ಪನೆ ಮೊದಲಾದ ಏಳು ತುಳು ಲೇಖಗಳು ಈ ಗ್ರಂಥದಲ್ಲಿವೆ.

ವಿಷ್ಣುಭಟ್ ಪಾದೆಕಲ್ಲು, ೧೯೯೭
ತುಳುವರಿವರು (ಪ್ರಥಮ ಭಾಗ)
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ
ಡೆ. ೧/೮, ಪು: ೨೪+೨೮೦, ರೂ. ೭೫/-

ತುಳು ತಾಯ್ನುಡಿಯಲ್ಲದ ತುಳು ಮಹನೀಯರು ತುಳು ಭಾಷೆ ಸಾಹಿತ್ಯ, ಸಂಸ್ಕೃತಿಗೆ ನೀಡಿರುವ ಕೊಡುಗೆಯ ಕುರಿತ ಸಮೀಕ್ಷೆ ಮತ್ತು ವ್ಯಕ್ತಿ ಪರಿಚಯ ಗ್ರಂಥ.

ಶಂಕರನಾರಾಯಣ ತೀ. ನಂ., ೨೦೦೧
ಫಿನ್ಲೆಂಡಿನ ಜಾನಪದ ವಿದ್ವಾಂಸರು (ವ್ಯಕ್ತಿ ಪರಿಚಯ)
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು
ಡೆ. ೧/೮, ಪು: ೨೬+೨೨೧, ರೂ. ೧೫೦/-

ಆರಂಭದಲ್ಲಿ ಫಿನ್ಲೆಂಡಿನ ಭೌಗೋಳಿಕ, ಐತಿಹಾಸಿಕ, ರಾಜಕೀಯ ಹಿನ್ನೆಲೆಗಳು, ಅಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿನ ಜಾನಪದ ಅಧ್ಯಯನದ ಕುರಿತಂತೆ ಮಾಹಿತಿ ನೀಡುತ್ತಾ ಅಲ್ಲಿನ ಪ್ರಮುಖ ಜಾನಪದ ವಿದ್ವಾಂಸರುಗಳಾದ ಎಲಿಯಾಸ್ ಲೆನ್ರೂಟ್, ಕಾರ್ಲೆ ಕ್ರಾನ್, ಯೂಲಿಯಸ್ ಕ್ರಾನ್, ಉನೊ ಹಾರ್ವ, ಲೌರಿ ಹಾಂಕೊ ಹಾಗೂ ಮತ್ತಿರ ವಿದ್ವಾಂಸರುಗಳ ಸಾಧನೆ, ಬದುಕಿನ ಕುರಿತ ಪರಿಚಯ ನೀಡುವ ಕೃತಿಯಾಗಿದೆ.

ಶೇಖರ ಇಡ್ಯ, ೧೯೭೧
ಪಂಜೆಮಂಗೇಶರಾವ್
ಮಹಾತ್ಮಾಗಾಂಧೀ ಮೆಮೋರಿಯಲ್ ಕಾಲೇಜು, ಉಡುಪಿ, ರೂ. ೫೦ ಪೈಸೆ.

ಪಂಜೆ ಮಂಗೇಶ್‌ರಾವ್ ಅವರ ಬದುಕು ಸಾಧನೆಗಳನ್ನು ತಿಳಿಸುವಂತಹ ಕಿರುಕೃತಿ. ಇದರಲ್ಲಿ ಪಂಜೆಯವರಿಗೆ ತುಳು ಜಾನಪದ ಸಾಹಿತ್ಯ ಸಂಸ್ಕೃತಿಯತ್ತ ಒಲವು ಹುಟ್ಟಿಕೊಳ್ಳಲು ಕಾರಣವೇನು ಹಾಗೂ ಪರಿಣಾಮವಾಗಿ ‘ಕೋಟಿ ಚೆನ್ನಯ’ ಎಂಬ ತುಳು ಜಾನಪದ ಸಾಹಿತ್ಯ ಸಂಸ್ಕೃತಿಯತ್ತ ಒಲವು ಹುಟ್ಟಿಕೊಳ್ಳಲು ಕಾರಣವೇನು ಹಾಗೂ ಪರಿಣಾಮವಾಗಿ ‘ಕೋಟಿ ಚೆನ್ನಯ’ ಎಂಬ ತುಳು ಪಾಡ್ದನವನ್ನಾಧರಿಸಿ ಬರೆಯಲಾದ ಗದ್ಯ ಹೇಗೆ ಹುಟ್ಟಿಕೊಂಡಿತೆಂಬುದನ್ನೂ ವಿವರಿಸಲಾಗಿದೆ.

ಶೋಭಾನಂದ ರಾವ್ ಮಲಾ ಬೂಡು
ಮಲಾರ ಮಲರಾಯಿ, ಡೆ. ೧/೮, ಪು : ೧೦+೩೨

ವಿಟ್ಲ ಸೀಮೆಯಲ್ಲಿ ಪ್ರಸಿದ್ಧವಾದ ಅನೇಕ ದೈವ ದೇವಸ್ಥಾನಗಳ ಪೈಕಿ ಮಲಾರಿನ ಇತಿಹಾಸ – ಚರಿತ್ರೆಯನ್ನು, ಶ್ರೀ ಮಲರಾಯಿ ಭೂತದ ಕಾರಣಿಕವನ್ನು ಪಾಡ್ದನಗಳ ಮೂಲಕ ಬರೆಯಲಾಗಿದೆ.

ಶ್ರೀನಿವಾಸ ಭಟ್ ಪು., ೧೯೭೩
ಯಕ್ಷಗಾನ ಕಲಾವಿದರು (ಪರಿಚಯ) ಭಾಗ – ೧
ಯುಗಪುರುಷ ಪ್ರಕಟಣಾಲಯ ಕಿನ್ನಿಗೋಳಿ
ಕ್ರೌ. ೧/೮, ಪು: ೧೬೦+೧೨, ರೂ. ೧೦/-

ದ.ಕ.ದ ಪ್ರಸಿದ್ಧ ಕಲೆಯಾದ ಯಕ್ಷಗಾನಕ್ಕಾಗಿ ತಮ್ಮ ದುಡಿಮೆಯನ್ನು ಮುಡಿಪಾಗಿಟ್ಟು ಕೆಲವು ತೆಂಕುತಿಟ್ಟು ಕಲಾವಿದರ ಪರಿಚಯವನ್ನು ನೀಡಲಾಗಿದೆ. ಒಟ್ಟು ೨೬ ಕಲಾವಿದರ ಪರಿಚಯ ಇಲ್ಲಿದೆ.

ಶ್ರೀಮತಿ ರಾವ್ ಬಿ.ಕೆ., ೨೦೦೬
ಹರಿದಾಸ ವೆಂಕಣ್ಣ ಕವಿ ಮುಲ್ಕಿ
ಶ್ರೀ ಗುರುಪ್ರಿಯ ಪ್ರಕಾಶನ, ಕಂಕನಾಡಿ, ಮಂಗಳೂರು – ೨
ಡೆ. ೧/೮, ಪುಟಗಳು : ೨೭+೧೧೨, ಬೆಲೆ : ರೂ. ೮೦/-

ಜೀವನ ಹಾಗೂ ಸಾಧನೆಗಳ ಪರಿಚಯ ಸಹಿತ ಕೀರ್ತನೆಗಳ ಸಂಗ್ರಹ.

ಹರಿದಾಸ ಭಟ್ಟ ಕು.ಶಿ., ೧೯೮೮
ಕಟ್ಟಿಂಗೇರಿ ಕೃಷ್ಣ ಹೆಬ್ಬಾರ ಕಲೆ ಮತ್ತು ಬದುಕು (ಜೀವನ ಚರಿತ್ರೆ)
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ
ಕ್ರೌ ೧/೪, ರೂ. ೬೦/-

ಚಿತ್ರಕಲಾವಿದರಾದ ಕೆ.ಕೆ. ಹೆಬ್ಬಾರರ ಬದುಕು ಕಲೆಗಳ ಬಗ್ಗೆ ಪರಿಚಯ ನೀಡುವ ಜೀವನ ಚರಿತ್ರೆಯ ಸಂಪುಟ ಇಲ್ಲಿ ಕಲಾವಿದರ ಸಾಧನೆಗಳನ್ನು ವಿವರಿಸುವ ಛಾಯಾಚಿತ್ರಗಳೂ, ಅವರೇ ಸ್ವಂತವಾಗಿ ನಿರ್ಮಿಸಿದ ರೇಖಾಚಿತ್ರಗಳು, ವರ್ಣಚಿತ್ರಗಳ ಕಪ್ಪು ಬಿಳುಪು ಹಾಗೂ ವರ್ಣರಂಜಿತ ಛಾಯಾಚಿತ್ರಗಳೂ ಇವೆ.

ಅಮೃತ ೧೯೯೩
ಶ್ರೀ ಅಮೃತ ಸೋಮೇಶ್ವರರ ಸಾಹಿತ್ಯಾಭಿಮಾನಿ ಬಳಗ ಪುತ್ತೂರು
ಕ್ರೌ. ೧/೮, ಪು. ೫+೨೬, ರೂ ೫/-

ಅಮೃತ ಸೋಮೇಶ್ವರರ ಬದುಕು ಬರಹ, ಅವರಿಗೆ ಸಿಕ್ಕಿದ ಪುರಸ್ಕಾರ – ಗೌರವ ಇತ್ಯಾದಿಗಳು ಹಾಗೆಯೇ ಅಮೃತವಾಣಿಗಳನ್ನೊಳಗೊಂಡ ಕಿರು ಪುಸ್ತಕ ಇದಾಗಿದೆ.

ನವಯುಗ ಪ್ರವರ್ತಕ ಹೊನ್ನಯ್ಯ ಶೆಟ್ಟಿ ಕೆ., ೧೯೯೫ (ಸಂಸ್ಮರಣ ಲೇಖನಗಳು)
ಸಂಗ್ರಹ), ಸಾತ್ವಿಕ ಪ್ರಕಾಶನ ಬೆಂಗಳೂರು, ಕ್ರೌ. ೧/೮

ಇದರಲ್ಲಿ ಬೇರೆ ಬೇರೆ ಲೇಖಕರು ಕೆ. ಹೊನ್ನಯ್ಯ ಶೆಟ್ಟಿಯವರ ವ್ಯಕ್ತಿತ್ವದ ಕುರಿತು ಬರೆದ ಲೇಖನಗಳಿವೆ.

ಮಹಾಚೇತನ ಸಂಪುಟ-೩ (ಜನ್ಮ ಶತಾಬ್ದ ಸಂಸ್ಮರಣ ಗ್ರಂಥ).

ಮಂಜಯ್ಯ ಹೆಗ್ಗಡೆಯವರ ಜೀವನ ಸಾಧನೆ ಸಿದ್ಧಿಗಳ ಕುರಿತು ವಿವಿಧ ಲೇಖಕರ ಬರಹಗಳಿವೆ. ಹಾಗೂ ಮಂಜಯ್ಯ ಹೆಗ್ಗಡೆಯವರ ಚಿತ್ರಿಸಿರುವ ಕಲಾಕೃತಿಗಳೂ ಇವೆ.

ಇಂಗ್ಲಿಷ್

Dr. Hermann Gundert, 1977
Herrmann Moegling
D.C. Books Kottayam Kerala D. 1/8, Rs. 95/-

ಮೋಗ್ಲಿಂಗ್‌ರ ಜೀವನ ಚರಿತ್ರೆಯನ್ನೊಳಗೊಂಡಿರುವ ಕೃತಿ.

Sundara Rao H. (Writer) N. Thirumaleshwara Bhatt (Edit), 1981
Panje Mangesh Rao
Geetha Book House, Mysore Rs. 30/-

ಇದರಲ್ಲಿ ಪ್ರಾರಂಭದಲ್ಲಿ ಪಂಜೆಯವರ ಜೀವನ ಪರಿಚಯವನ್ನು ಸಂಪಾದಕರು ನೀಡಿದ್ದಾರೆ. ನಂತರದ ಭಾಗದಲ್ಲಿ ಲೇಖಕರು ಪಂಜೆಯವರ ಕಾವ್ಯ ಶ್ರೇಣಿಗಳ ವಿಮರ್ಶೆಯನ್ನು ಮಾಡುತ್ತಾ ಪಂಜೆಯವರ ಹಾಗೂ ಇಂಗ್ಲಿಷಿನ ವಿದ್ವಾಂಸರ ಕಾವ್ಯಗಳಲ್ಲಿನ ಅಭಿವ್ಯಕ್ತಿ -ಮನೋಭಾವ ಪ್ರವೃತ್ತಿಗಳಲ್ಲಿರುವ ಹೋಲಿಕೆಗಳನ್ನು ಗುರುತಿಸಿರುವುದನ್ನು ನೋಡಬಹುದು.