ಇತರ – ಪತ್ರಿಕಾ ಬರಹ, ಉಪನ್ಯಾಸ, ಪ್ರವಾಸ ಕಥನ ಇತ್ಯಾದಿ

ತುಳು

ಅನಂತರಾಮ ಬಂಗಾಡಿ ಕೆ., ಕೆ.ಸಿ.ಶೆಟ್ಟಿ (ಸಂಗ್ರಹ), ೧೯೯೦
ಭಕ್ತಿಗೀತೆಗಳು, (ತೃತೀಯ ಮುದ್ರಣ)
ಪಬ್ಲಿಕೇಷನ್ಸ್, ಮಂಗಳೂರು, ಕ್ರೌನ್ ೧/೮, ರೂ. ೫/-
ಜನಪ್ರಿಯ ಭಕ್ತಿಗೀತೆಗಳ ಮತ್ತು ಧ್ವನಿಮುದ್ರಿಕೆಗಳ ತುಳು ಭಕ್ತಿಗೀತೆಗಳ ಸಂಗ್ರಹ

ಅಬೂಬಕ್ಕರ್ ಕೆ., ೨೦೦೧
ಓಲೆ (ತುಳು) ಹಾಗೂ ಭಕ್ತೆರ್ನ ಮಾಲೆ (ತುಳು) (ಪುನರ್ಮುದ್ರಣ)
ಕ್ರೌ. ೧/೮, ಪುಟಗಳು : ೩೫/- ರೂ. ೨೦/-

ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ೪೮ ದಿನಗಳ ವ್ರತಾಚರಣೆಯ ಮಾಹಿತಿಯನ್ನು ‘ಭಕ್ತೆರ್ನ ಓಲೆ’ಯಲ್ಲೂ, ಶ್ರೀ ಬಬ್ಬುಸ್ವಾಮಿ ಹಾಗೂ ತಾಯಿ ಕಚ್ಚೂರ ಮಾಲತಿ ಮತ್ತು ಪರಿವಾರ ದೈವಗಳ ಪುಣ್ಯಕಥೆಯನ್ನು ‘ಭಕ್ತರ್ನ ಮಾಲೆ’ಯಲ್ಲಿಯೂ ನೀಡಲಾಗಿದೆ.

ಇಬ್ರಾಹಿಂ ಎಂ.ಎಸ್.
ಸಾಮಾಜಿಕ ತುಳು ನಾಟಕಗಳ ಪದ್ಯಾವಳಿ
ರೂ. ೬೦ ಪೈಸೆ

ಈಶ್ವರ ಭಟ್ ಪಿ., ಪುತ್ತಿಗೆ, ೧೯೮೨
ಈಶ್ವರ ಪುರಾಣ – ೨
ರತ್ನತ್ರಯ ಪ್ರಕಾಶನ, ಮಂಗಳೂರು
ಕ್ರೌನ್ ೧/೮, ಪುಟಗಳು : ೪+೨೬, ರೂ. ೫/-

ರಾಜಕೀಯಕ್ಕೆ ಸೇರಿದವನ ಬಗ್ಗೆ ಕಥೆಯ ರೂಪದಲ್ಲಿ ಶಿವಳ್ಳಿ ಬ್ರಾಹ್ಮಣರ ತುಳು ಭಾಷೆಯಲ್ಲಿ ಬರೆದಂಥ ಕಾಲ್ಪನಿಕ ಹಾಸ್ಯ ಪುರಾಣ.

ಈಶ್ವರ ಭಟ್ಟ ಪಿ., ಪುತ್ತಿಗೆ, ೧೯೮೮
ಬೆಸ್ನೀರ್ ಕೇಣ್ವೇ (ಹಾಸ್ಯ ಕೃತಿ)
ಶಾರದಾ ಪ್ರಕಾಶನ, ಪುತ್ತಿಗೆ, ಮೂಡಬಿದ್ರೆ, ಕ್ರೌನ್ ೧/೮, ರೂ. ೬/-

ಶಿವಳ್ಳಿ ಬ್ರಾಹ್ಮಣರ ತುಳು ಭಾಷೆಯಲ್ಲಿ ಬರೆದ ಹಾಸ್ಯಕೃತಿ.

ಯು.ಪಿ. ಉಪಾಧ್ಯಾಯ, ೧೯೯೮, ೨೦೦೨
ಕೈಪಿಡಿ
ನಾಟಕ ತುಳು ಸಾಹಿತ್ಯ ಅಕಾಡೆಮಿ, ಡೆ. ೧/೮, ರೂ. ೧೫/-

ಏಯ್ಯಲಕ್ಷ್ಮೀನಾರಾಯಣ ಆಳ್ವ, ೧೯೮೭
ಮಂಗಳ ತಿಮರು
ಅಮಟಾಡಿ ಮಂಗಳತಿಮಾರು ಶ್ರೀ ಅಣ್ಣಪ್ಪ ಸ್ವಾಮಿ ದೇವಸ್ಥಾನ ಇದರ ನವೀಕರಣ
ಬ್ರಹ್ಮಕಲಶದ ನೆನಪಿನ ಸಂಚಿಕೆ
ಡೆ. ೧/೮, ಪುಟಗಳು: ೯೦ ಬೆಲೆ ರೂ : ೩೦/-

ತುಳು ನಾಡಿನ ದೈವಾರಾಧನೆಯ ಮತ್ತು ದಕ್ಷಿಣ ಭಾರತದ ಜಾನಪದ ಆರಾಧನೆಗಳ ಬಹುಮುಖಿ ಅಧ್ಯಯನ, ತುಳುನಾಡಿನ ಭೂತಾರಾಧನೆ ಮತ್ತು ಹೊರನಾಡ ಜಾನಪದ ಆರಾಧನೆಗಳಿಗೆ ಸಂಬಂಧಿಸಿ ೧೫ ಮಂದಿ ಲೇಖಕರ ಸಂಶೋಧನಾ ಪ್ರಬಂಧಗಳು ಇಲ್ಲಿವೆ. ಅಚ್ಚುಕಟ್ಟಾದ ಸಂಗ್ರಾಹ್ಯ ನೆನಪಿನ ಸಂಚಿಕೆ ಇದು.

ಕುದ್ಯಾಡಿ ವಿಶ್ವನಾಥ ರೈ (ಸಂ.) ೧೯೯೮, ೨೦೦೨
ಜೋಕುಲೆ ಸಂಚಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕ್ರೌ. ೧/೮, ರೂ. ೫/-

ಕೃಷ್ಣ ಭಟ್ ಎಚ್., ೨೦೦೫
ತುಳುವ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂ.ಜಿ.ಎಂ. ಕಾಲೇಜು,
ಉಡುಪಿ ಡೆ. ೧/೮, ಪುಟಗಳು : ೪೮, ಬೆಲೆ : ರೂ. ೮೦/-

ಈ ಹಿಂದೆ ಪ್ರಕಟಗೊಳ್ಳುತ್ತಿದ್ದ ತುಳುವ ಪತ್ರಿಕೆಯ ನವೀಕೃತ ಪತ್ರಿಕೆಯಾಗಿ ಇದು ಪ್ರಕಟಗೊಳ್ಳುತ್ತಿದೆ. ಇದು ಆಗಸ್ಟ್, ಸಪ್ಟಂಬರ್ ಎಂದರೆ ನವೀಕೃತ ತುಳುವ ಪತ್ರಿಕೆಯ ಮೊದಲ ಸಂಚಿಕೆ. ತುಳುನಾಡು, ನುಡಿ ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನ ಲೇಖನಗಳು ಈ ಸಂಚಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.

ಎನ್. ಚಂದ್ರಶೇಖರ, ೨೦೦೪
ಭೂತಾಳಪಾಂಡ್ಯನ ಅಳಿಯ ಸಂತಾನಕಟ್ಟು ಒಂದು ವಿಭಿನ್ನ ನಿರೂಪಣೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಡೆ. ೧/೮, ರೂ. ೩೦/-

ಚಿನ್ನಪ್ಪ ಗೌಡ ಕೆ., ೧೯೮೯
ಪನಿಯಾರ
ತುಳುಕೂಟ ಕುಡ್ಲ. ಕ್ರೌ. ೧/೪, ಪುಟಗಳು : ೪೦+೨೨೬, ಬೆಲೆ : ರೂ. ೩೫/-

೨ನೆಯ ತುಳು ಸಮ್ಮೇಳನಾಂಕ. ಸಮ್ಮೇಳನಾಧ್ಯಕ್ಷ ಅಮೃತ ಸೋಮೇಶ್ವರ ಅವರ ಅಧ್ಯಕ್ಷ ಭಾಷಣ ಪೂಕರೆಯನ್ನೊಳಗೊಂಡಂತೆ ವಿವಿಧ ವಿಷಯಗಳ ಮೇಲೆ ವಿದ್ವಾಂಸರು ಬರೆದಿರುವ ಅಧ್ಯಯನ ಲೇಖನಗಳು ಇಲ್ಲಿವೆ.

ಜತ್ತಪ್ಪ ರೈ ಕೆದಂಬಾಡಿ, ೧೯೮೦
ತುಳುತ್ತ ಪೊರ್ಲು (ಉಪನ್ಯಾಸ)
ಕನ್ನಡ ಸಂಘ, ಮಂಗಳೂರು, ಕ್ರೌನ್ ೧/೮, ಪುಟಗಳು : ೨೮, ರೂ. ೧/-

ತೆಕ್ಕುಂಜ ನೆನಪು ಕಾರ್ಯಕ್ರಮದಲ್ಲಿ ಕೆದಂಬಾಡಿ ಜತ್ತಪ್ಪ ರೈಗಳು ತುಳುವಿನ ಬಗ್ಗೆ ಮಾಡಿದ ಉಪನ್ಯಾಸ.

ಜಾರು ಪೇರೂರು
ಜಾರು ಜೋಕುಲು (ಹಾಸ್ಯ ಬರಹ)
ಚಿಂತಕ ಪ್ರಕಟನಾಲಯ, ಕೆಂಗೇರಿ, ಕ್ರೌನ್ ೧/೮, ರೂ. ೨/-

ಹಾಸ್ಯ ಬರಹಗಳ ಸಂಗ್ರಹ.

ದೊಡ್ಡಣ್ಣ ಶೆಟ್ಟಿ ಕೆಮ್ತೂರು, ೧೯೫೫
ಕಸ್ತೂರಿ ಭಜನೆದ ಪದೊಕುಲು
ಕಸ್ತೂರಿ ಸಾಹಿತ್ಯ ಮಾಲೆ, ಕೊರಂಗ್ರಪಾಡಿ ಪೋಸ್ಟ್, ಉಡುಪಿ, ರೂ. ನಾಲ್ಕಾಣೆ ತುಳು ಕನ್ನಡ ಭಜನೆಯ ಪದಗಳನ್ನು ಧಾಟಿ – ತಾಳಗಳೊಂದಿಗೆ ನೀಡಲಾಗಿದೆ.

ದೊಡ್ಡಣ್ಣ ಶೆಟ್ಟಿ ಕೆಮ್ತೂರು
ಬೊಂಬಾಯಿ ಸಂಗತಿ, ಲಾವಣಿ ಕಸ್ತೂರಿ ಸಾಹಿತ್ಯ ಮಾಲೆ, ಉಡುಪಿ,
ಕ್ರೌನ್ ೧/೮, ಪುಟಗಳು : ೨೨, ರೂ. ೦-೪-೦

ಸಂವಾದ ಹಾಡು ಮತ್ತು ತುಳುನಾಟಕದ ಹಾಡುಗಳು (ಮೂರನೇ ಮುದ್ರಣ).

ದೊಡ್ಡಣ್ಣ ಶೆಟ್ಟಿ ಕೆಮ್ತೂರು
ತುಳುನಾಡ ಮಲ್ಲಿಗೆ (ತುಳು ಭಾವಗೀತೆಗಳ ಸಂಗ್ರಹ)
ಕಸ್ತೂರಿ ಸಾಹಿತ್ಯಮಾಲೆ, ಉಡುಪಿ, ರೂ. ೩ ಆಣೆ

ನಾಯಕ್ ಯು.ವಿ. ೧೯೭೯
ಶ್ರೀ ರಾಜರಾಜೇಶ್ವರಿ ಅಮ್ಮನವರ ತುಳು ಭಜನಾವಳಿ (೮ನೇ ಆವೃತ್ತಿ)
ಯಂ. ವೆಂಕಟರಾವ್ ಶ್ರೀ ನಿತ್ಯಾನಂದ ಗ್ರಂಥಾಲಯ, ಮಂಗಳೂರು
ಕ್ರೌ. ೧/೮, ರೂ. ೧/-

ನಿತ್ಯ ಭಜನೆಗಾಗಿ ಸ್ವಭಾಷೆಯಾದ ತುಳು ನುಡಿಯಲ್ಲಿ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಕೀರ್ತನೆಗಳನ್ನು ರಚಿಸಲಾಗಿದೆ.

ಪಣಿಯಾಡಿ ಎಸ್.ಯು., ೧೯೨೯
ತುಳುವ ಮಹಾಸಭೆತ್ತ ವಾರ್ಷಿಕ
ಕ್ರೌನ್ ೧/೮, ಪುಟ : ೮೮, ರೂ. ನಾಲ್ಕಾಣೆ

ತುಳುವ ಮಹಾಸಭೆಯ ವಿವರಗಳು ಈ ಕೃತಿಯಲ್ಲಿದೆ.

ಪ್ರಭಾಕರ ರೈ ಬಿ.ಎ., ೨೦೦೩
ಮದಪ್ಪಂದಿ ನೆಂಪು (ತುಳು ಆತ್ಮಕಥೆ)
ಸಾತ್ವಿಕ ಪ್ರಕಾಶನ, ಬೆಂಗಳೂರು, ಡೆಮಿ ೧/೮, ಪುಟಗಳು : ೨೨೯, ರೂ. ೧೫೦/-

ತುಳುಭಾಷೆಯಲ್ಲಿ ಬಂದಂತಹ ಮೊದಲ ಆತ್ಮಚರಿತ್ರೆ ಇದಾಗಿದೆ. ಅಧಿಕಾರದ ಪೈಪೋಟಿ ಈ ಕೃತಿಯ ಕೇಂದ್ರ, ಹಾಗಾಗಿ ತನ್ನ ವೃತ್ತಿಜೀವನದ ಕಷ್ಟ-ಸುಖ, ಸಮಸ್ಯೆಗಳು, ಅಡ್ಡಗಾಲು, ಸಾಧನೆ, ಸಂತುಷ್ಟಿ-ಸಂಕಷ್ಟಗಳನ್ನು ವಿಶೇಷವಾಗಿ ಲೇಖಕರು ವಿವರಿಸಿದ್ದಾರೆ.

ಪುರುಷೋತ್ತಮ ಬಿಳಿಮಲೆ (ಸಂ.), ೧೯೯೫
ಸಿರಿ
ಕಲಾಗಂಗೋತ್ರಿ, ಅಮೃತ ಸೋಮೇಶ್ವರ ಅಭಿನಂದನ ಸಮಿತಿ, ಸೋಮೇಶ್ವರ
ಉಚ್ಚಿಲ, ಕ್ರೌ. ೧/೪, ಪುಟಗಳು : ೪೯೦ ಬೆಲೆ : ರೂ. ೩೫೦/-

ಎ.ವಿ. ನಾವಡ, ರಾಮಚಂದ್ರ ಉಚ್ಚಿಲ್ ಇವರು ಕೂಡ ಇದರ ಸಂಪಾದಕ ಮಂಡಳಿಯಲ್ಲಿದ್ದಾರೆ. ಸಿರಿ ೧, ಸಿರಿ ೨, ಸಿರಿ ೩, ಸಿರಿ ೪, ಸಿರಿ ೫, ಸಿರಿ ೬ ಎಂಬ ವಿಭಾಗಗಳಲ್ಲಿ ಸುಮಾರು ೬೦ಕ್ಕೂ ಮಿಕ್ಕಿ ವಿದ್ವಾಂಸರ ಅಧ್ಯಯನ ಲೇಖನಗಳು ಇಲ್ಲಿವೆ. ಇದೊಂದು ಮಾದರಿ ಅಭಿನಂದನಾ ಗ್ರಂಥ ಮಾತ್ರವಲ್ಲದೆ ಅಮೂಲ್ಯ ಆಕರಗ್ರಂಥವೂ ಆಗಿದೆ.

ಫಕೀರ ಎಂ. ಮುಲಯ, ೨೦೦೪
ಅಳಿಯ ಸಂತಾನ ಕಟ್ಟಿನ ತುಳು ಜನರ ಶುಭಾಶುಭ ಕಟ್ಟಳೆಗಳು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಡೆ. ೧/೮, ರೂ. ೩೦/-

ಬನ್ನಂಜೆ ಬಾಬು ಅಮೀನ್, ೨೦೦೬
ನುಡಿಕಟ್ಟ್ (ತುಳು ಜಾನಪದೀಯ ಪ್ರಾರ್ಥನೆಗಳ ಸಂಕಲನ)
ಕೆಮ್ಮಲಜೆ ಜಾನಪದ ಪ್ರಕಾಶನ, ನಿಟ್ಟೂರು, ಉಡುಪಿ – ೩
ಡೆ. ೧/೮, ಪುಟಗಳು : ೧೫೮, ಬೆಲೆ : ರೂ. ೭೫/-

ತುಳುವರ ಬದುಕಿನ ವಿವಿಧ ಆಚರಣೆಗಳು ಆಯಾ ಸಂದರ್ಭ ಬಳಕೆಗೊಳ್ಳುವ ನುಡಿಕಟ್ಟುಗಳ ಸಂಗ್ರಹ ಪರಿಚಯ ವಿವರಣೆಗಳಿರುವ ಹೊತ್ತಗೆ.

ಭಾಸ್ಕರ ಶೆಟ್ಟಿ ಪೆರ್ಡೂರು, ೧೯೯೧
ತುಳು ದೈವಿಕ ಭಜನಾವಳಿ (ಪರಿಷ್ಕೃತ ತೃತೀಯ ಮುದ್ರಣ)
ಗೀತೋದಯ ಪ್ರಕಾಶನ, ಉಡುಪಿ, ಕ್ರೌನ್ ೧/೮, ಪುಟಗಳು : ೪+೩೬, ರೂ. ೮/-

ಜನಪ್ರಿಯ ಭಕ್ತಿಗೀತೆಗಳ ಧಾಟಿಯಲ್ಲಿ ತುಳುವಿನಲ್ಲಿ ಬರೆದಂತಹ ಭಜನೆ ಪದ್ಯಗಳು.

ಭೋಜ ಶೆಟ್ಟಿ ಕೋಡು, ೨೦೦೧
ಪುಲಿ ಮುಂಚಿ (ತುಳು ಹಾಸ್ಯ ಚುಟುಕು)
ಸಾಹಿತ್ಯ ಲಹರಿ ಪ್ರಕಾಶನ, ಔರಂಗಾಬಾದ್
ಡೆಮಿ ೧/೮, ಪುಟಗಳು : ೧೨೧, ರೂ. ೫೦/-

ಇದರಲ್ಲಿರುವ ೩೫೦ ಜೋಕುಗಳು ಬಗೆಬಗೆಯ ಹೊಸ ಹೊಸ ಅನುಭವಗಳನ್ನು ಕೊಡುತ್ತವೆ. ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಮೊದಲ ಸುತ್ತಿನಲ್ಲಿ ಈ ಜೋಕುಗಳು ಪ್ರಕಟವಾಗಿರುವುದನ್ನೂ, ಆ ಬಳಿಕ ಮತ್ತೆ ಅಷ್ಟೇ ಸಂಖ್ಯೆಯಲ್ಲಿ ಅವು ಪ್ರಕಟವಾಗಿರುವುದನ್ನೂ ‘ಪುಲಿ ಮುಂಚಿ’ಯ ಮುನ್ನುಡಿಯಲ್ಲಿ ಕವಿ ದಾಖಲಿಸಿದ್ದಾರೆ.

ಮಂಜಯ್ಯ ಹೆಗ್ಡೆ ಧರ್ಮಸ್ಥಳ, ೧೯೪೦
ತುಳು ನಿತ್ಯವಿಧಿ
ರೂ. ೯ ಪೈಸೆ.

ತುಳುವಿನಲ್ಲಿ ಸಂಧ್ಯಾವಂದನೆ ಮತ್ತು ದೇವರ ಪೂಜೆ ಮಾಡುವ ಕ್ರಮವನ್ನು ಸಂಕ್ಷಿಪ್ತವಾಗಿ ಹೇಳುವ ಕಿರುಕೃತಿ.

ಮುಕುಂದಪ್ರಭು, ೨೦೦೦
ಪೊಲಿ, ಕೆನರಾ ೨೦೦ ಸಂದರ್ಭದ ಲೇಖನಗಳು
ಡೆ. ೧/೪, ಪುಟಗಳು : ೬೪೮ ಪುಟಗಳು, ಬೆಲೆ : ರೂ. ೫೦೦/-

ಈ ಸಂಪುಟದಲ್ಲಿ ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದ ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ, ಸಾಹಿತ್ಯಿಕ ಲೇಖನಗಳಿವೆ.

ಮೋನಪ್ಪ ತಿಂಗಳಾಯ, ೧೯೪೦
ತುಳು ಪದ್ಯಾವಳಿ
ರೂ. ೦-೨-೬

ತುಳು ದೇವರ ಭಜನೆ ಪದ್ಯಗಳ ಸಂಗ್ರಹ.

ಮೋಹನ ಕೆ. ಬೋಳಾರ್
ತುಳು ಅಕ್ಷರಮಾಲೆ ತುಳು ಲಿಪಿ ಅವಿಷ್ಕಾರ

ತುಳು ಲಿಪಿ ಆವಿಷ್ಕಾರದ ಪುಸ್ತಕ ಬಿಡುಗಡೆ ಸಮಿತಿ, ಕುಡ್ಲ (ಮಂಗಳೂರು).

ಸಾರ್ವತ್ರಿಕವಾಗಿ ಉಪಯೋಗಕ್ಕೆ ಅನುಕೂಲವಾಗುವಂತೆ ಮುದ್ರಣಕ್ಕೆ, ಬೆರಳಚ್ಚಿಗೆ, ಕಂಪ್ಯೂಟರಿಗೆ ಸಹಕಾರಿಯಾಗುವಂತೆ ಹೊಂದಿ ಬರಲು ಪ್ರಾಚೀನ ತುಳು ಲಿಪಿಯ ಮೂಲಾಧಾರವನ್ನಿಟ್ಟು ಈ ಹೊಸ ಆವಿಷ್ಕಾರದ ಅಕ್ಷರಮಾಲೆಯನ್ನು ಸಿದ್ಧಪಡಿಸಲಾಗಿದೆ. ಹಾಗಾಗಿ ಇದರಲ್ಲಿ ಕನ್ನಡದ ಸ್ವರಾಕ್ಷರ, ವ್ಯಂಜನಾಕ್ಷರಗಳು, ಗುಣಿತಾಕ್ಷರಗಳು, ತುಳುವಿನಲ್ಲಿ ಪಕ್ಷಿ, ಪ್ರಾಣಿ, ಶರೀರದ ಅಂಗಗಳ ಹೆಸರುಗಳು, ಆರಾಧನೆಯ ಕೇಂದ್ರಗಳು, ಉದಾ: ಆಯನೊ, ಇಲ್ಲೆಚ್ಚಿದ ನೇಮೊ, ಗೋಂದೊಲು, ಬಲಿ, ಅಗೆಲ್, ಪನಿಯಾರೊ ಇತ್ಯಾದಿಗಳನ್ನು – ಈ ಲಿಪಿಯಲ್ಲಿ ನೀಡಲಾಗಿದೆ.

ರತ್ನಾಕರ ಶೆಟ್ಟಿ, ೨೦೦೩
ಜೋಕುಲು ತೆಲಿಪುಲೆ ತುಕಾ! (ತುಳು ಹಾಸ್ಯ ಚುಟುಕು)
ಸಾಹಿತ್ಯ ಬಳಗ, ಮುಂಬಯಿ, ಪುಟಗಳು : ೧೦೫, ಕ್ರೌನ್ ೧/೮, ರೂ. ೫೦/-

ಸುಮಾರು ೩೦೦ ಹಾಸ್ಯ ಚುಟುಕುಗಳಿರುವ ಕೃತಿ.

ರಾವ್ ಪಿ.ಎಸ್., ೧೯೯೧
ತೆಲಿಪುಲೆ ತೆಲಿಪಾಲೆ
ಸಹೋದರ ಕಲಾವೃಂದ ಪ್ರಕಾಶನ, ಮಂಗಳೂರು, ಕ್ರೌನ್ ೧/೮, ರೂ. ೭/-

ತುಳು ಹಾಸ್ಯ ಬರಹಗಳ ಸಂಗ್ರಹವಿದೆ.

ವಾಮನ ನಂದಾವರ (ಸಂ), ೧೯೯೫
ತುಳು ಸಾಹಿತಿ ಕಲಾವಿದೆರೆ ಮಾಹಿತಿ
ತುಳುಕೂಟ ಉಡುಪಿ, ಡೆಮಿ ೧/೮, ಪುಟಗಳು : ೧೩೫, ರೂ. ೪೫/

ತುಳು ಸಾಹಿತಿಗಳ ಮತ್ತು ಕಲಾವಿದರ ವಿಳಾಸ ಮತ್ತು ಅವರ ಕೊಡುಗೆಗಳ ಕುರಿತ ಸಂಕ್ಷಿಪ್ತ ಪರಿಚಯವುಳ್ಳ ಕೃತಿ. ತುಳುನಾಡಿನ ಕೆಲವು ಸಂಘ ಸಂಸ್ಥೆಗಳ ಸಂಶೋಧನಾ ಕೇಂದ್ರಗಳ, ನಾಟಕ, ಚಲನಚಿತ್ರಗಳ ಅಧಿಕೃತ ಮಾಹಿತಿಗಳ ಸಂಕಲನ.

ಅಜಯಕುಮಾರ್ ಭಂಡಾರಿ ಹೆಬ್ಬಾರಬೈಲು (ಸಂ), ೨೦೦೨
ಅಪ್ಪೆಗ್ ಬಾಲೆದ ಓಲೆ (ತುಳು ಓಲೆಗಳ ಗೊಂಚಲು)
ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್ತು, ವಿ.ಯಂ.ಎಸ್. ವಿಟ್ಲ – ೫೭೪
೨೪೩, ಡೆಮಿ ೧/೮, ಪುಟಗಳು : ೯೬, ರೂ. ೫೦/-

ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್ತಿನಲ್ಲಿ ರಾಜ್ಯಮಟ್ಟದ ‘ಅಮ್ಮನಿಗೆ ಮಗುವಿನ ಪತ್ರ’ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ (ಬಹುಮಾನ ಪಡೆದ) ಪತ್ರಗಳ ಸಂಗ್ರಹ.

ವಿಶುಕುಮಾರ್ (ಸಂ.), ೧೯೮೩
ಪೊರ್ಲು ತುಳು ಸಾಹಿತ್ಯ ಸಮ್ಮೇಳನಾಂಕ
ತುಳುಕೂಟ ೨೩೮, ೪ನೇ ಮುಖ್ಯ ರಸ್ತೆ, ವೆಯ್ಯಾರಿ ಕಾವಲ್
ಬೆಂಗಳೂರು- ೫೬೦ ೦೦೩. ಡೆ. ೧/೪

ಫೆಬ್ರವರಿ ೨೦, ೨೧, ೧೯೮೩ರಲ್ಲಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಕು.ಶಿ. ಹರಿದಾಸ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ತುಳು ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ.

ಶೆಟ್ಟಿ ಕೆ.ಸಿ. (ಸಂಗ್ರಹಿಸಿರುವ), ೧೯೯೪
ಹೊಸ ತುಳು ಚಿತ್ರಗೀತೆಗಳು
ವಿ.ಪಿ.ಸಿ. ಪ್ರಕಾಶನ, ಮಂಗಳೂರು, ಕ್ರೌನ್ ೧/೮, ರೂ. ೯/-

ಬಿಡುಗಡೆಗೊಂಡಿರುವ ೨೪ ತುಳು ಚಿತ್ರಗಳ ಜನಪ್ರಿಯ ಗೀತೆಗಳ ಸಂಗ್ರಹ.

ಶೆಟ್ಟಿ ಕೆ.ಸಿ. (ಸಂಗ್ರಹ) ರಾವ್ ಪಿ.ಎಸ್. (ಸಹಾಯಕರು), ೧೯೮೦
ಹೊಸ ತುಳು ಚಿತ್ರಗೀತೆಗಳು
ವಿ.ಪಿ.ಸಿ. ಪ್ರಕಾಶನ, ಮಂಗಳೂರು, ಕ್ರೌ. ೧/೮, ರೂ. ೧.೫೦/- ೧೬

ತುಳು ಸಿನಿಮಾಗಳ ಹಾಡುಗಳಿವೆ.

ಶೆಟ್ಟಿ ಕೆ.ಸಿ. (ಸಂಗ್ರಹ) ರಾವ್ ಪಿ.ಎಸ್. (ಸಹಾಯಕರು), ೧೯೭೮
ನೆಮ ಪದಧಾಟಿದ ತುಳು ಪದತ ಮಾಲೆ (ತುಳುನಾಟಕಗಳಿಗೆ ಹಾಡುಗಳ ಸಂಗ್ರಹ)
ಕ್ರೌ. ೧/೮, ರೂ. ೧/-

ತುಳು ನಾಟಕಗಳಿಗಾಗಿ ಸಿದ್ಧಪಡಿಸಿದ ಕನ್ನಡ-ಹಿಂದಿ ಸಿನೆಮಾ ಹಾಡುಗಳ ಧಾಟಿಯಲ್ಲಿರುವ ಹಾಡುಗಳು.

ಶೆಟ್ಟಿ ಕೆ.ಪಿ. (ಸಂಗ್ರಹ). ೧೯೮೫
ಹೊಸ ತುಳು ಚಿತ್ರಗೀತೆಗಳು
ವಿ.ಪಿ.ಸಿ. ಪ್ರಕಾಶನ, ಮಂಗಳೂರು, ಕ್ರೌ. ೧/೮, ರೂ. ೩.೫೦/-

ಬಿಡುಗಡೆಗೊಂಡಿರುವ ೨೦ ತುಳು ಚಿತ್ರಗಳ ಗೀತೆಗಳ ಸಂಗ್ರಹ.

ಸುಬ್ರಮಣ್ಯ ಭಟ್ಟ ಬೈಲಮಠ, ೧೯೮೭
ಕಟೀಲು ಶ್ರೀ ದುರ್ಗಾಪರಮೇಶ್ವರಿ ತುಳು ಸುಪ್ರಭಾತ ಪುಣ್ಯದಾ ಪುಲ್ಯಕಾಂಡೇ ರೂ. ೨/-

ದುರ್ಗಾಪರಮೇಶ್ವರಿಯ ಕಾರಣಿಕವನ್ನು ಹೇಳುತ್ತದೆ.

ಸಮಾಗ ಬಾ. ಮಲ್ಪೆ, ೧೯೮೦
ಡಾ.ಪಿ. ಗುರುರಾಜ ಭಟ್ಟೆರ್ (ಆತ್ಮಕಥೆ)
ತುಳುನಾಡ್ ಪ್ರಗತಿ ಪ್ರಕಾಶನಾಲಯ, ಮಲ್ಪೆ, ಡೆ. ೧/೮, ಪು. ೧೬, ರೂ. ೨/-

ಇದರಲ್ಲಿ ಗುರುರಾಜ ಭಟ್ಟರು ಬದುಕು – ಬರವಣಿಗೆಯ ಕುರಿತು ಹೇಳಿಕೊಂಡಿರುವುದನ್ನು ಕಾಣಬಹುದು.

ಸುವಾಸಿನಿ ಹೆಗ್ಡೆ ಡಿ., ೧೯೯೮
ದೇಸಾಂತ್ರೊಡು (ಪ್ರವಾಸ ಕಥನ)
ಡೆಮಿ ೧/೮, ಪುಟಗಳು : ೮೦, ರೂ. ೩೬/-

ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಅಮೇರಿಕಾ ಮೊದಲಾದ ದೇಶಗಳಿಗೆ ಲೇಖಕಿ ಕೈಗೊಂಡ ಪ್ರವಾಸದ ಅನುಭವ ಕಥನ. ತುಳುಭಾಷೆಯಲ್ಲಿ ಪ್ರಕಟಗೊಂಡ ಮೊತ್ತಮೊದಲ ಹೊರದೇಶಗಳ ಪ್ರವಾಸ ಕಥನ.

ಹರಿದಾಸ ಭಟ್ಟ ಕು.ಶಿ.
ತುಳುತೊ ಬುಳೆ, ನಿಲೆ, ಬಿಲೆ
ತುಳು ಸಾಹಿತ್ಯ ಸಮ್ಮೇಳನ, ತುಳುಕೂಟ, ಬೆಂಗಳೂರು.

ಬೆಂಗಳೂರಿನಲ್ಲಿ ೧೯೮೩ ಫೆಬ್ರವರಿ ೨೦ನೇ ತಾರೀಕಿನಲ್ಲಿ ನಡೆದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ. ತುಳು ಭಾಷೆಯ ಸಾಹಿತ್ಯದ ಬೆಳವಣಿಗೆಯ ಹಂತಗಳನ್ನು ವಿವರಿಸಿದ್ದಾರೆ.

ಹರಿದಾಸ ಭಟ್ಟ ಕು.ಶಿ., ೧೯೭೯
ತುಳುವ, ಸಂಪುಟ ೧, ಸಂಚಿಕೆ , ಇಂಗ್ಲಿಷ್ – ಕನ್ನಡ – ತುಳು ಅಕ್ಟೋಬ – ದಶಂಬರ, ೧೯೭೯, ಗೋವಿಂದ ಪೈ ಸಂಶೋಧನ ಕೇಂದ್ರ
ಡೆ. ೧/೮, ಪುಟಗಳು : ೩೬

ತುಳು ಭಾಷೆ, ನಾಡು ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತ್ರೈಮಾಸಿಕ. ಈ ಪತ್ರಿಕೆಯ ೭ ಸಂಪುಟಗಳು ೧೯೮೭ರ ವರೆಗೆ (ಸಂ. ೧೯-೨೦) ಪ್ರಕಟವಾಗಿವೆ.

ಹರಿಶ್ಚಂದ್ರ ಸಾಲಿಯಾನ್ ಪಿ., ೨೦೦೬
ಮದಿಪು ನುಡಿಕಟ್ಟುಲು
ಯುಗಪುರಷ ಪ್ರಕಾಶನ, ಕಿನ್ನಿಗೋಳಿ, ದ.ಕ.
ಕ್ರೌ. ೧/೮, ಪುಟಗಳು : ೪೦ ಬೆಲೆ : ರೂ. ೩೦/-

ಸ್ವತಃ ದೈವಸ್ಥಾನದ ಗುರಿಕಾರರಾಗಿ, ಮದಿಪು ಮಧ್ಯಸ್ಥರಾಗಿ ಅನುಭವವಿರುವ ಲೇಖಕರು ಸಂಗ್ರಹಿಸಿರುವ ಮದು ಮದಿಪು ನುಡಿಕಟ್ಟುಗಳು ಇಲ್ಲಿವೆ.

ತುಳು ಅಕ್ಷರಮಾಲೆ
Mangalore Basel Mission Book & Tract depository, ೧೮೯೦
ತುಳುವಿನ ಅಕ್ಷರಮಾಲೆ ಹಾಗೂ ಮಾತನಾಡುವ ಶೈಲಿಯನ್ನು ಈ ಪುಸ್ತಕದಲ್ಲಿ ತಿಳಿಸಿ ಕೊಡಲಾಗಿದೆ. ಹಾಗೆಯೇ ತುಳುವಿನ ಕೆಲವು ಅಂಕೆಗಳು, ವಾರಗಳ ಹೆಸರು, ತಿಂಗಳುಗಳ ಹೆಸರು, ಆ ಕಾಲದ ನಾಣ್ಯಗಳು ಇತ್ಯಾದಿಗಳ ಮಾಹಿತಿಯೂ ಇದೆ.

ತುಳು ಭಜನಾವಳಿ (೭ನೇ ಆವೃತ್ತಿ) ೧೯೮೩
ಸುಬೋಧ ಸಾಹಿತ್ಯ ಭಂಡಾರ, ಹಿರಿಯಡಕ
ಕ್ರೌನ್ ೧/೮, ಪುಟಗಳು : ೨೦, ರೂ. ೧.೨೫/-

ತುಳುವಿನಲ್ಲಿ ಬರದಂಥ ಭಜನಾ ಪದ್ಯಗಳು

ತುಳು ಗೀತೊಳು (ತುಳು ಪ್ರಾರ್ಥನೆಗಳು), ೧೯೬೬
ಬಾಸೆಲ್ ಮಿಶನ್ ಬುಕ್ ಡಿಪೊ, ಮಂಗಳೂರು, ಕ್ರೌನ್ ೧/೮

ಕ್ರಿಸ್ತನ ಪ್ರಾರ್ಥನಾ ಪದ್ಯಗಳ ಕೃತಿ.

ದಿನದಿನತ ಪ್ರಾರ್ಥನೆಗಳು, ೧೯೫೬
ಬಾಸೆಲ್ ಮಿಶನ್ ಬುಕ್ ಡಿಪೋ.

ಕ್ರಿಸ್ತನ ಪ್ರಾರ್ಥನೆಯನ್ನು ತುಳುವಲ್ಲಿ ನೀಡಲಾಗಿದೆ.

ದೇವಾರಾಧನೆದ ಕ್ರಮ (ಆರಾಧಕರ ಕೈಪಿಡಿ), ೧೯೪೫
ಬಾಸೆಲ್ಮಿಶನ್ ಬುಕ್ ಡಿಪೋ, ಮಂಗಳೂರು, ಪುಟಗಳು : ೨೪

ಕ್ರಿಸ್ತನಿಗೆ, ಕ್ರೈಸ್ತ ಧರ್ಮೀಯರಿಗೆ ಸಂಬಂಧಿಸಿದಂತೆ ಪ್ರಶ್ನೋತ್ತರಗಳನ್ನು ತುಳುವಲ್ಲಿ ನೀಡಲಾಗಿದೆ. ಕೊನೆಯಲ್ಲಿ ದೃಢೀಕರಣದ ಸಂದರ್ಭದಲ್ಲಿ, ರಾತ್ರೆ ಭೋಜನದ ಸಂದರ್ಭದಲ್ಲಿ ಮಾಡಲಾಗುವ ಪ್ರಾರ್ಥನೆಗಳನ್ನೂ ನೀಡಲಾಗಿದೆ.

ನಮ ರಾಗೊಳು, ೧೯೪೮
ಬಾಸೆಲ್ ಮಿಶನ್ ಮುದ್ರಣ ಪ್ರೆಸ್, ಮಂಗಳೂರು.

ಕ್ರಿಸ್ತನ ಕುರಿತ ಹಾಡುಗಳನ್ನು ತುಳುವಿನಲ್ಲಿ ಹೇಳಲಾಗಿದೆ.

ಸುವಾರ್ತಾ ಕ್ರೈಸ್ತರೆ ಸಭೆಟ್ ನಡಪು ದೇವಾರಾಧನೆದ ಕ್ರಮ, ೧೮೯೭
Mangalore Bsel Mission Book & Tract Depository.

ಈ ಪುಸ್ತಕದ ಪ್ರಾರ್ಥನೆಗಳು ವಿದೇಶದ ಬೇರೆ ಬೇರೆ ಸುವಾರ್ತಾ ಸಭೆಗಳ ಪ್ರಾರ್ಥನೆ ಪುಸ್ತಕಗಳಿಂದ ಒಂದೊಂದನ್ನು ಆರಿಸಿಕೊಂಡು ನೀಡಿದವುಗಳಾಗಿವೆ.

ಕನ್ನಡ

ಅನಂತ ಪದ್ಮನಾಭ ಶಾಸ್ತ್ರಿ, ೧೯೯೮
ಸೌತಡ್ಕ ಅಪಟಲ ಪ್ರೇಮ ಪಟಲಮ್ ಮತ್ತು ಭಕ್ತಿಗೀತೆಗಳು
ಆಡಳಿತ ಮಂಡಳಿ, ಶ್ರೀ ಸೌತಡ್ಕ ಮಹಾಗಣಪತಿ ಕ್ಷೇತ್ರ, ಕೊಕ್ಕಡ
ಕ್ರೌ. ೧/೮, ಪು. ೧೦+೩೦, ರೂ. ೧೦/-

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತೆ ತಸ್ಕ ಎಂಬಲ್ಲಿ ನೆಲೆಸಿರುವ ಶ್ರೀ ಗಣೇಶನ ಮಹಿಮೆಯನ್ನು ವರ್ಣಿಸಿ ಸ್ತುತಿಸುವ ೪೧ ಪದ್ಯಗಳಿಗೆ ‘ಪ್ರೇಮ ಪಟಲ’ ಎಂದು ಹೆಸರಿಸಲಾಗಿದೆ. ಇವಲ್ಲದೆ ಶ್ರೀ ಗಣೇಶನ ಪರವಾಗಿರುವ ೭ ಭಕ್ತಿಗೀತೆಗಳೂ ಈ ಕೃತಿಯಲ್ಲಿದೆ.

ಅನಂತರಾಮ ರಾವ್ ಕೆ. (ಸಂ.), ೧೯೯೮
ಸಮ್ಮೇಳನ ಸಾರ
ಸ್ವಾಗತ ಸಮಿತಿ, ಅಖಿಲ ಭಾರತ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮಂಗಳೂರು.

ಇದರಲ್ಲಿ ಸಮ್ಮೇಳನದ ಮೊದಲು, ಸಮ್ಮೇಳನದ ದಿನಗಳಲ್ಲಿ ಮತ್ತು ಅನಂತರ ನಡೆದ ಹಲವು ಕಲಾಪಗಳನ್ನು, ಚರ್ಚೆಗಳು, ಕಾರ್ಯಕರ್ತರ ಅಪಾರ ಶ್ರಮ, ಇತರ ಹಲವು ವಿಚಾರಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಹಾಗೆಯೇ ಸಮ್ಮೇಳನದಲ್ಲಿ ಬಿಡುಗಡೆಗೊಂಡ ೬೬ ಪುಸ್ತಕಗಳಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಮತ್ತು ತುಳುವಿನಿಂದ ಅನುವಾದಗೊಂಡ ಕೃತಿಗಳೂ ಸೇರಿದ್ದವೆಂದೂ ತಿಳಿಯುತ್ತದೆ. ಕೆಲವೊಂದು ಚಿತ್ರಗಳನ್ನು ಕೂಡ ಈ ಸಣ್ಣ ಪುಸ್ತಕದಲ್ಲಿ ನೀಡಲಾಗಿದೆ.

ಅನಂತರಾಮು ಕೆ., ೧೯೯೭
ದಕ್ಷಿಣ ಸಿರಿನಾಡು (ಪ್ರವಾಸ ಕಥನ)
ಅನಂತ ಪ್ರಕಾಶನ, ಮೈಸೂರು, ಕ್ರೌ. ೧/೪, ಪು: ೧೬+೧೧೦೮, ರೂ. ೬೦೦/-

ಕರಾವಳಿ ಜಿಲ್ಲೆಯನ್ನು ಸಮಗ್ರವಾಗಿ ಸಂದರ್ಶಿಸಿ ಇಲ್ಲಿನ ಸ್ಥಳ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪರಿಚಯ ನೀಡಲು ಪ್ರಯತ್ನಿಸಿರುವ ಕೃತಿ.

ಅಮೃತ ಸೋಮೇಶ್ವರ, ೨೦೦೩
ಸಂಭವಾಮಿ ಯುಗೇ ಯುಗೇ ಮತ್ತು ಇತರ ನೃತ್ಯರೂಪಕಗಳು
ದಿಗಂತ ಸ್ಟೇಶನರ್ಸ್ ಎಂಡ್ ಪಬ್ಲಿಷರ್ಸ್, ಕೈಗಾರಿಕಾ ಪ್ರಾಂಗಣ, ಯಯ್ಯಾಡಿ,
ಮಂಗಳೂರು, ಕ್ರೌ. ೧/೮, ರೂ. ೪೦/-

‘ಸಂಭವಾಮಿ ಯುಗೇ ಯುಗೇ’ (ದಶಾವತಾರದ ಕಥೆ) ‘ಮಹಾದಾನಿ ಬಲೀಂದ್ರ’ (ಬಲಿಯೇಂದ್ರನ ಕಥೆ), ‘ಸತ್ಯನಾಪುರದ ಸಿರಿ’ (ಸಿರಿಯ ಸ್ವಾಭಿಮಾನದ ಕಥೆ) ಎಂಬ ೩ ನೃತ್ಯರೂಪಕಗಳಿವೆ.

ಅರವಿಂದ ಮಾಲಗತ್ತಿ ಡಾ.
ಇತಿಹಾಸ ಮತ್ತು ಜನಪದ ಸಾಹಿತ್ಯ
(ಪು. ೩೯-೫೭) ಪು. ೪೫-೪೬

ಪ್ರಬಂಧದಲ್ಲಿ ಕಲ್ಕುಡ ಪಾಡ್ದನದ ಮೂಲಕ ಉದ್ಭವಿಸುವ ಪ್ರಶ್ನೆಗಳನ್ನು ನೀಡಿದ್ದಾರೆ.

ಅರವಿಂದ ಮಾಲಗತ್ತಿ ಡಾ. ಒಡೆಯರ ಡಿ. ಹೆಗ್ಗಡೆ ಡಾ.
ಕೊರಗರು : ಒಂದು ಸಾಂಸ್ಕೃತಿಕ ಅಧ್ಯಯನ
ಮಾನವಿಕ ಕರ್ನಾಟಕ ಸಂ. ೨೦, ಸಂ. ೩-೪. ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಕೊರಗರ ದೈಹಿಕ ಲಕ್ಷಣದಿಂದ ಹಿಡಿದು ಅವರ ಒಳ ಪಂಗಡಗಳು – ಬಳಿಗಳು ಹಾಗೂ ಅವರ ಜನನ – ಮರಣ ಸಂಸ್ಕಾರ, ಆಹಾರ, ಹಬ್ಬ – ಆರಾಧನೆಗಳು, ನಂಬಿಕೆ ಇತ್ಯಾದಿ ಸಾಂಸ್ಕೃತಿಕ ಅಂಶಗಳ ಕುರಿತಂತೆ ಅಧ್ಯಯನ ನಡೆಸಿರುವುದನ್ನು ಕಾಣಬಹುದು.

ಅರವಿಂದ ಮಾಲಗತ್ತಿ ಡಾ.
ತುಳುವರ ಆಟಿಕಳೆಂಜ : ಜೋಕುಮಾರನ ಮತ್ತೊಂದು ರೂಪವೇ?
ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಸಂ. ೨೧ ಸಂ. ೨ ಡಿಸೆಂ. ೧೯೮೬, ಸಂ. ೭೨. ಸಂ. ೧
ಜೂನ್ ೧೯೮೭ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಆಟಿಕಳೆಂಜ ಹಾಗೂ ಜೋಕುಮಾರ ಸ್ವಾಮಿಯಲ್ಲಿನ ಸಾಮ್ಯತೆ, ವ್ಯತ್ಯಾಸಗಳನ್ನು ಹೇಳಿ ಕೊನೆಗೆ ಕಳೆಂಜ ಹಾಗೂ ಜೋಕುಮಾರ ಸ್ವಾಮಿ ಇವರಿಬ್ಬರೂ ಒಂದೇ ಎಂಬ ನಿಲುವನ್ನು ಲೇಖಕರು ಈ ಲೇಖನದಲ್ಲಿ ಹೊಂದಿರುವುದನ್ನು ಕಾಣಬಹುದು.

ಆನಂದರಾಮ ಉಪಾಧ್ಯ ಸಿ., ೧೯೮೬
ಯಕ್ಷದರ್ಶನ (ಸಂದರ್ಶನ ಲೇಖನಗಳ ಸಂಕಲನ)
ಕೃತಿ ಪ್ರಕಾಶನ, ಬೆಂಗಳೂರು, ಡೆ. ೧/೮, ಪು. ೮+೧೫೨, ರೂ. ೧೫/-

ಯಕ್ಷಗಾನ ಪ್ರಪಂಚದ ಕೆಲವು ಪ್ರಮುಖ ಕಲಾವಿದರ ಸಂದರ್ಶನವಿದೆ. ಉದಾ. ನಾರ್ಣಪ್ಪ ಉಪ್ಪೂರ, ರಾಮಚಂದ್ರ ನಾವಡ, ದಾಮೋದರ ಮಂಡೆಚ್ಛ, ಕಾಳಿಂಗ ನಾವಡ, ಶೇಣಿ, ರಾಮದಾಸ ಸಾಮಗ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೋಳ್ಯೂರು ರಾಮಚಂದ್ರ ರಾವ್, ಕುಂಬಳೆ ಸುಂದರ ರಾವ್ ಮುಂತಾದವರ.

ಕಾರಂತ ನಾ. ಪೆರಾಜೆ (ನಿರೂಪಣೆ), ೨೦೦೨
ಹಾಸ್ಯಗಾರನ ಅಂತರಂಗ – ಪೆರುವಡಿ ನಾರಾಯಣ ಭಟ್ಟರ ಆತ್ಮಕಥನ
ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು,
ಡೆ. ೧/೮, ಪು. ೬+೮ (photos) + ೭೨, ರೂ. ೬೦/-

ಯಕ್ಷಗಾನ ಹಾಸ್ಯ ಕಲಾವಿದರಾದ ಪೆರುವಡಿ ನಾರಾಯಣ ಭಟ್ಟರು ತಮ್ಮ ಜನನ, ಬದುಕಿನ ಅನುಭವಗಳ ಕುರಿತಂತೆ ಹೇಳಿಕೊಂಡಿರುವ ಈ ಕೃತಿಯ ಕೊನೆಯ ‘ಅನುಬಂಧ’ದಲ್ಲಿ ವಿವಿಧ ಕಲಾವಿದರು ಕೂಡ ಪೆರುವಡಿಯವರ ಕುರಿತಂತೆ ಬರೆದಿರುವುದನ್ನು ಕಾಣಬಹುದು.

ಕಿಶೋರ್ ಬಿ.ಪಿ. (ಸಂ.), ೧೯೯೫
ಐಸಿರಿ, ವಿಶ್ವ ಬಂಟರ ಸಮ್ಮೇಳನ, ಬೆಂಗಳೂರು.

ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದಂಥ ಬಂಟ ಸಮುದಾಯದವರ ಕುರಿತಂತೆ ಹಾಗೂ ಪತ್ರಿಕೋದ್ಯಮ ಸಾಹಿತ್ಯ, ಧಾರ್ಮಿಕ ಕ್ಷೇತ್ರ, ಯಕ್ಷಗಾನ ಇತ್ಯಾದಿ ಕ್ಷೇತ್ರಗಳಲ್ಲಿ ಬಂಟರು ಸಾಧಿಸಿದ ಸಾಧನೆಗಳ ಕುರಿತಂತೆ ಪರಿಚಯ ನೀಡುವ ಲೇಖನಗಳನ್ನು ಬೇರೆ ಬೇರೆ ಲೇಖಕರು ಬರೆದಿದ್ದಾರೆ.

ಕೇಶವ ಮಡಿಕೇರಿ, ೧೯೯೪
ಪರತಿ ಮಂಗಣೆ (ಪಾಠ ಪುಸ್ತಕ)
ದ.ಕ. ಜಿಲ್ಲಾ ವಯಸ್ಕರ ಮತ್ತು ನಿರಂತರ ಶಿಕ್ಷಣ ಸಂಘ ಮಂಗಳೂರು, ಪು. ೩೬+೪

ಈ ಪುಸ್ತಕವನ್ನು ಲೇಖಕರು ಪುತ್ತೂರಿನ ಶಿವರಾಮ ಕಾರಂತರ ಬಾಲವನದಲ್ಲಿ ನಡೆಸಲಾದ ಕಮ್ಮಟದಲ್ಲಿ ಭಾಗವಹಿಸಿ ಬರೆದಿದ್ದಾರೆ. ಇದು ಜನಪ್ರಿಯ ತುಳು ಪಾಡ್ದನ ‘ಬೊಟ್ಟಂದಾಡಿ ಬಲ್ಲಾಳರ ಸಂಧಿ’ ಆಧಾರಿತ ಜಾನಪದ ಕಥೆ. ತುಳುವರ ಜಾನಪದ ಸಂಸ್ಕೃತಿಯ ಪರಿಚಯ ಈ ಪುಸ್ತಕದಿಂದ ಆಗಲು ಸಾಧ್ಯ.

ಕೃಷ್ಣ ಭಟ್ ಪೆರ್ಲ ಹಾಗೂ ಇತರರು (ಸಂ.), ೧೯೮೪
ಯಕ್ಷಕರ್ದಮ (ವಿಚಾರಗೋಷ್ಠಿಗಳ ಪ್ರಬಂಧ ಸಂಕಲನ)
ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ, ಡೆ. ೧/೮, ರೂ. ೨೫/-

ಯಕ್ಷಗಾನದ ಪರಂಪರೆ – ಸುಧಾರಣೆ, ನೈತಿಕ ಮೌಲ್ಯ, ಮನೋರಂಜನೆ ಮತ್ತು ಬುದ್ಧಿ ವಿಕಾಸ, ಅರ್ಥಗಾರಿಕೆ, ತುಳುವಿನ ಯಕ್ಷಗಾನ ಕೃತಿಗಳು, ಯಕ್ಷಗಾನದ ಹಾಡುಗಾರಿಕೆ ಇತ್ಯಾದಿಗಳ ಕುರಿತು ವಿವಿಧ ವಿದ್ವಾಂಸರು ಪ್ರಬಂಧಗಳ ಮಂಡನೆ ಮಾಡಿರುವುದನ್ನು ನೋಡಬಹುದು.

ಗೋಪಾಲಕೃಷ್ಣ ಕುರುಪ್ ಬಿ. (ಬರೆದವರು) ಕೆ. ಎಂ. ರಾಘವ ನಂಬಿಯಾರ್ (ಸಂ),
೧೯೯೫
ಯಕ್ಷಗಾನ ತೆಂಕುತಿಟ್ಟಿನ ಮದ್ದಳೆ ವಾದನ ಕ್ರಮ
ಯುವಕ ಮಂಡಲ (ರಿ) ಸಾಣೂರು, ಡೆ. ೧/೮, ಪು. ೭೮, ರೂ. ೧೫/-

ಈ ಗ್ರಂಥದಲ್ಲಿ ನುಡಿಕಾರಗಳನ್ನು ತಾಳಗಳ ಅಕ್ಷರ ಕಾಲಕ್ಕೆ ಸರಿಯಾಗಿ ವಿಂಗಡಿಸಿ, ನಾದದ ಉಚ್ಚಾರವನ್ನು ಚುಕ್ಕಿ, ಗೀಟುಗಳಿಂದ ಪ್ರತ್ಯೇಕಿಸಿ ತೋರಿಸಲಾಗಿದೆ. ‘ನಾದ ಮತ್ತು ಉಚ್ಚಾರ’ ಪಾಠದಲ್ಲಿ ಮದ್ದಳೆಯ ನಾದಗಳ ವಿವರಗಳಿವೆ. ಎರಡನೇ ಪಾಠದಲ್ಲಿ ಉರುಳಿಕೆಗಳು ಮತ್ತು ನಡೆಗಳ ಸರಣಿಗಳನ್ನು ನೀಡಲಾಗಿದೆ. ನಂತರ ವಿವಿಧ ತಾಳಗಳನ್ನು ನುಡಿಸುವ ವಿಧಾನಗಳಿವೆ ಸುಳಾದಿ ಸಪ್ತತಾಳಗಳ ೩೫ ಪ್ರಭೇದಗಳ ಕೋಷ್ಠಕವನ್ನು ಇದರಲ್ಲಿ ನೀಡಲಾಗಿದೆ.

ಗೋಪಾಲಕೃಷ್ಣ ಕುರುಪ್ ಬಿ. ಕೆ. ವಿಶೇಶ್ವರ ಭಟ್ – ರಚನೆಕಾರರು, ೧೯೮೯
ತೆಂಕುತಿಟ್ಟು ಪ್ರಾಥಮಿಕ ಯಕ್ಷಗಾನ ಪಾಠಗಳು (ಪೂರ್ವರಂಗ)
ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕ, ಲಲಿತ ಕಲಾ ತರಬೇತಿ ಕೇಂದ್ರ ಧರ್ಮಸ್ಥಳ, ಡೆ. ೧/೮

ವಿದ್ಯಾರ್ಥಿಗಳಿಗೆ ಸುಲಭ ಶೈಲಿಯಲ್ಲಿ ಯಕ್ಷಗಾನ ತರಬೇತಿಯನ್ನು ನೀಡುವ ಸಲುವಾಗಿ ಪಠ್ಯಪುಸ್ತಕವಾಗಿ ಅಚ್ಚು ಮಾಡಿಸಲಾದ ಪುಸ್ತಕ.

ಗೋಪಾಲಕೃಷ್ಣ ಕುರುಪ್ ಬಿ., ೧೯೯೮
ಯಕ್ಷಗಾನ ತೆಂಕುತಿಟ್ಟಿನ ಚೆಂಡೆವಾದನ ಕ್ರಮ (ಪಾಠ)
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ
ಡೆ. ೧/೮, ಪು. ೮+೯೮, ರೂ. ೬೦/-

ಮದ್ದಳೆ – ಚೆಂಡೆ ವಾದನಗಳಲ್ಲಿ ಅಪಾರ ಅನುಭವ ಪರಿಣತಿ ಪಡೆದ ಕುರುಪ್ ಅವರು ಈ ವಿದ್ಯಾವಿಶೇಷಗಳನ್ನು ನುಡಿಸುವ ಕ್ರಮವನ್ನು ಶಿಕ್ಷಕರ, ವಿದ್ಯಾರ್ಥಿಗಳ ಸಲುವಾಗಿ ಬರೆದಿದ್ದಾರೆ. ಚೆಂಡೆಯನ್ನು ಬಾರಿಸುವ ರೀತಿಯನ್ನು ಶಾಸ್ತ್ರೀಯವಾಗಿ ಈ ಕೃತಿ ವಿವರಿಸುತ್ತದೆ.