ಗೋಪಾಲಕೃಷ್ಣ ಭಟ್ಟ ಶೇಣಿ
ಯಕ್ಷಗಾನ ಮತ್ತು ನಾನು (ಅನುಭವ ಕಥನ)
ಡೆ. ೧/೮.

ಹಳೆಯ ತಲೆಮಾರಿನ ಸುಪ್ರಸಿದ್ಧ ಕಲಾವಿದರು ಮತ್ತು ಅರ್ಥಧಾರಿಗಳ ಪರಿಚಯ, ಯಕ್ಷಗಾನ, ಆಟಕೂಟಗಳ ವಿವೇಚನೆ, ಚಿಂತನೆಗಳನ್ನೊಳಗೊಂಡ ಈ ಕೃತಿಯಲ್ಲಿ ಶೇಣಿಯವರ ಹಲವು ಪಾತ್ರಗಳ, ತಾಳಮದ್ದಳೆ ಕೂಟಗಳ ಮತ್ತು ಹಿರಿಯ ಯಕ್ಷಗಾನ ಕಲಾವಿದರ ಭಾವಚಿತ್ರಗಳನ್ನಳವಡಿಸಲಾಗಿದೆ.

ಚಿನ್ನಪ್ಪ ಗೌಡ ಕೆ., ಶ್ರೀ ಶೆಟ್ಟಿ ಎಸ್.ಡಿ. (ಸಂ.), ೧೯೯೨
ರತ್ನಮಾನಸ
ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಉಜಿರೆ, ಪು. ೧೨+೧೪೩

ಶ್ರೀ ಧರ್ಮಸ್ಥಳ ಬಾಹುಬಲಿಯ ಕೆತ್ತನೆ, ಸಾಗಾಣಿಕೆ ಮತ್ತು ಪ್ರತಿಷ್ಠಾಪನೆಯನ್ನು ಕುರಿತಂತೆ ಚಾರಿತ್ರಿಕ ದಾಖಲೆಯನ್ನು ನೀಡುವ ಕೃತಿ.

ಜಗತ್ಪಾಲಯ್ಯ ಜ್ಯೋ. ಎಂ., ೧೯೭೫
ಶ್ರೀ ಕ್ಷೇತ್ರ ಧರ್ಮಸ್ಥಳದ ಇತಿಹಾಸ ಮತ್ತು ಬಾಹುಬಲಿ ಪ್ರಸ್ಥಾನ (ಲಾವಣಿ)
ಡೆ. ೧/೮, ರೂ. ೧.೫೦/-

ಈ ಕೃತಿಯು ೪೨೬ ಶ್ಲೋಕಗಳನ್ನೊಳಗೊಂಡಿದೆ. ಪ್ರಾರಂಭದ ಆರು ಶ್ಲೋಕಗಳು ಭಾಮಿನೀ ಷಟ್ಟದಿಯಲ್ಲಿ ಇದರಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆಯನ್ನು ಹೇಳಲಾಗಿದೆ. ಈ ಕೃತಿಯಲ್ಲಿ ಪ್ರತಿಯೊಂದು ಭಾಗಕ್ಕೂ, ಒಂದೊಂದು ಶಿರೋನಾಮೆಯನ್ನು ಕೊಡಲಾಗಿದೆ.

ಜಯಮ್ಮ ಬ. ಚೆಟ್ಟಿಮಾಡ (ಸಂ.) ೧೯೯೬, ೧೯೯೭, ೧೯೯೮, ೨೦೦೧, ೨೦೦೫, ೨೦೦೭
ಹಳಬರ ಜೋಳಿಗೆ (ಭಾಗ ೧-೬) (ಪ್ರಬಂಧ ಸಂಕಲನ)
ಕಾವ್ಯ ಕಾವೇರಿ ಸಾಹಿತ್ಯ ಸಂದೀಪಿನಿ ಮೊಗರ್ಪಣೆ, ಸುಳ್ಯ, ಡೆ. ೧/೮

ತುಳುವಿಗೆ ಸಂಬಂಧಿಸಿದ ಲೇಖನಗಳು ಭಾಗ ೧ : ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕಲಿಗರ ಹಬ್ಬ ಕೆಡ್ಡಸ (ಪು. ೨೩) – ಫೆಬ್ರವರಿ ತಿಂಗಳಲ್ಲಿ ಬರುವ ಈ ಹಬ್ಬದ ವಿಧಿ -ವಿಧಾನ, ಎಣ್ಮೂರು ಪಂಜದ ಪಿಲಿಕುಞ (ಪು. ೫೪- ೫೫) – ಮುಸ್ಲಿಂ ತರುಣ ಕುಞನ ಸಾಹಸ – ಪರಾಕ್ರಮ. ಭಾಗ ೨ : ಪಂಚ ಮಾಗಣೆ ಸ್ಥಳ ಇತಿಹಾಸ ಮತ್ತು ಕೋಟಿ ಚೆನ್ನಯರು (ಪು. ೨೯- ೩೪) – ಕ್ಷೇತ್ರೀಯ ಸಂಶೋಧನಾ ಲೇಖನ. ಮರೆಯುತ್ತಿರುವ ಆಟ ‘ಚೆನ್ನೆಮಣೆ’ (ಪು. ೬೨) – ತುಳುನಾಡಿನ ಈ ಆಟದ ವಿಧಾನ ಹಾಗೂ ಅದರಲ್ಲಿ ಆಡುವ ಇತರ ಆಟಗಳ ಉಲ್ಲೇಖ. ಭಾಗ ೩ : ಜನಪದರಲ್ಲಿ ಆಟಿ ತಿಂಗಳು (ಪು. ೪೭ – ೪೮) – ತುಳುನಾಡಿನ ‘ಆಟಿ’ ತಿಂಗಳ ನಂಬಿಕೆಗಳು. ಅಜ್ಜಿ ಭೂತ (ಪು. ೩೮) – ತುಳುನಾಡ ಜನಪದರು ನಂಬುವ ಭೂತಗಳಲ್ಲೊಂದಾದ ಅಜ್ಜಿ ಭೂತದ ನಂಬಿಕೆಯ ಕುರಿತು. ಭಾಗ ೪ : ಎಣ್ಮೂರಿನ ಕೋಟಿ ಚೆನ್ನಯರ ಯುದ್ಧ (ಪು. ೩೧ – ೩೩) – ಕ್ರಿ.ಶ. ೧೫೭೫ರ ನಂತರ ಎಣ್ಮೂರಿನಲ್ಲಿ ಪಂಜದವರೊಡನೆ ಕೋಟಿ ಚೆನ್ನಯರ ಯುದ್ಧ ನಡೆದದ್ದನ್ನು ಕಥಾರೂಪದಲ್ಲಿ ನೀಡಲಾಗಿದೆ. ತೌಳವ ಜಾನಪದ ವೈದ್ಯ ವೇದ (ಪು. ೭೬ – ೮೫) – ತುಳುನಾಡಿನ ಜನತೆ ಪ್ರಯೋಗಿಸುವ ಮನೆಮದ್ದು, ಪರಿಸರದ ಮದ್ದು ಹಾಗೆಯೇ ಪ್ರಾಣಿಗಳಿಂದ ಔಷಧಗಳನ್ನು ಪಡೆಯುವ ಮಾಹಿತಿ ಇದೆ. ಭಾಗ ೫ರಲ್ಲಿ ಜಾನುವಾರು ಜಾತ್ರೆ, ತೆನೆತೋರಣ, ಹುಲಿ ಬೇಟೆ ಒಂದು ನೆನಪು ಮೊದಲಾದ ೪೬ ಲೇಖನಗಳಿವೆ. ಭಾಗ ೬ ರಲ್ಲಿ (ಸುವರ್ಣ ಕರ್ನಾಟಕ ಸಂಚಿಕೆ) ಜನಪದ ದೈವಗಳ ಪಾತ್ರಿಗಳು, ಕಪ್ಪುಳು ತರುವ ಸಂಜೀವಿನಿ ಕಡ್ಡಿ, ನೂರು ಸೀರೆಯ ಗಂಟು ಮೊದಲಾದ ೩೧ ಲೇಖನಗಳಿವೆ.

ನಾವಡ ಎ.ವಿ. (ಸಂ), ೧೯೯೬
ಜಾನಪದ ವರ್ಷ
ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಬೆಂಗಳೂರು, ಡೆ. ೧/೮, ರೂ. ೨೫/-

೧೯೯೫-೯೬ರಲ್ಲಿ ಪ್ರಕಟಗೊಂಡಿರುವ ಜಾನಪದ ಕೃತಿಗಳ ಸಮೀಕ್ಷೆ ಈ ಕೃತಿಯಲ್ಲಿದೆ ತುಳು ಜಾನಪದ ಕೃತಿಗಳೂ ದ.ಕ.ದ ಪ್ರಸಿದ್ಧ ರಂಗಕಲೆಯಾದ ಯಕ್ಷಗಾನದ ಬಗ್ಗೆ ಬಂದಂಥ ಕೃತಿಗಳ ವಿವೇಚನೆಯೂ ಇಲ್ಲಿದೆ.

ಪಾಲ್ ಜಾದವ್ ಯಂ.ಡಿ., ೧೯೮೯
ನೂತನ ಯಕ್ಷಗಾನ ಸಭಾ ಲಕ್ಷಣ ಮತ್ತು ಪ್ರಸಂಗ ಪೀಠಿಕೆ (ಯಕ್ಷಗಾನ ಬಯಲಾಟ ಮಾರ್ಗದರ್ಶಿ)
ಶ್ರೀ ಮೂಕಾಂಬಿಕಾ ಪ್ರಕಾಶನ, ಮುಂಡೋಡು, ಡೆ. ೧/೮, ರೂ. ೧೦/-

ಇದು ಯಕ್ಷಗಾನದ ಪೂರ್ವರಂಗಕ್ಕೆ ಸಂಬಂಧಿಸಿದ ಕೃತಿ. ಹಳೆಯ ಸಭಾ ಲಕ್ಷಣದ ಕೆಲವು ಮುಖ್ಯ ಅಂಶಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಜೊತೆಯಲ್ಲಿ ಭಾಗವತಿಕೆ ಹಾಗೂ ಚೆಂಡೆ ಮದ್ದಳೆಗಳನ್ನು ಕಲಿಯುವವರಿಗೆ ಅನುಕೂಲವಾಗುಂತೆ ಸಭಾಲಕ್ಷಣದ ಮುಖ್ಯ ಪದಗಳಿಗೆ ಬಾಯಿತಾಳ -ತಾಳ ಪ್ರಸ್ತಾರಗಳನ್ನೂ ಒದಗಿಸಲಾಗಿದೆ.

ಪುರುಷೋತ್ತಮ ಬಿಳಿಮಲೆ, ೧೯೯೦
ಮಿತ್ಯನಾರಾಯಣನ ಕತೆ – ಒಂದು ವಿಶ್ಲೇಷಣೆ
ಪ್ರಬುದ್ಧ ಕರ್ನಾಟಕ ಸಂಪುಟ ೭೨, ಸಂಚಿಕೆ ೨.

ಶೀನಪ್ಪ ಹೆಗ್ಗಡೆಯವರ ‘ಮಿತ್ಯನಾರಾಯಣ ಕತೆ’ಯನ್ನು ಸ್ಥೂಲವಾಗಿ ನೀಡಿ ಅದನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಲಾಗಿದೆ.

ಪ್ರಣತಾರ್ತಿಹರನ್, ೧೯೯೯
ಮಂಜಿತ್ತಾಯರು
ಸಮುದಾಯ ಅಧ್ಯಯನ ಕೇಂದ್ರ, ಮೈಸೂರು, ಪು. ೧೬+೭೬.

ಪ್ರಸ್ತುತ ಕೃತಿ ಮಂಜಿತ್ತಾಯರ ಒಂದು ಕುಟುಂಬದ ವೃತ್ತಾಂತವನ್ನು ನಿರೂಪಿಸುತ್ತದೆ. ಮಧ್ಯರಿಂದ (ಕ್ರಿ. ಶ. ೧೨೩೮) ಹರಿ ಆಚಾರ್ಯರ (೧೯೮೫) ವರೆಗೆ ಒಂದು ನಿರ್ದಿಷ್ಟ ಪರಂಪರೆಗೆ ಸೇರಿದ ಕುಟುಂಬವೊಂದರಲ್ಲಾದ ಸಾಂಪ್ರದಾಯಿಕ ಬದಲಾವಣೆಯ ಚಿತ್ರವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ತುಳುನಾಡಿನ ಜನ, ಭಾಷೆ, ಜೀವನಕ್ರಮ, ವಿಜ್ಞಾನ – ತಂತ್ರಜ್ಞಾನ, ಚರಿತ್ರೆ, ಪುರಾಣ, ನಿಸರ್ಗ, ಹಬ್ಬ, ಅಡುಗೆ, ಸಂಪ್ರದಾಯ, ಸಾಹಿತ್ಯ – ಹೀಗೆ ಸಮಸ್ತವೂ ಈ ಕೃತಿಯಲ್ಲಿ ಅಡಕವಾಗಿದೆ.

ಬೋರಲಿಂಗಯ್ಯ ಹಿ.ಚಿ., ೧೯೯೧
ಗಿರಿಜನ ನಾಡಿಗೆ ಪಯಣ (ಪ್ರವಾಸ ಕಥನ)
ರಾಗಿರೊಟ್ಟಿ ಪ್ರಕಾಶನ, ಬೆಂಗಳೂರು
ಕ್ರೌನ್ ೧/೮, ಪುಟಗಳು : ೧೪೮+೮+೩೦ ಛಾಯಾಚಿತ್ರಗಳು, ರೂ. ೫೦/-

ಗಿರಿಜನರ ನಾಡಿಗೆ ಪ್ರಯಾಣ ಕೈಗೊಂಡು ಅವರ ಸಂಸ್ಕೃತಿ ಮಾತ್ರವಲ್ಲ ಸಮಸ್ಯೆಗಳನ್ನೂ ಈ ಕೃತಿಯಲ್ಲಿ ಮೂಡಿಸಿದ್ದಾರೆ. ಗಿರಿಜನರ ಸಂಸ್ಕೃತಿ, ಆಚರಣೆಗಳನ್ನು ಬಿಂಬಿಸುವ ಅನೇಕ ಛಾಯಾಚಿತ್ರಗಳೂ ಇದರಲ್ಲಿದೆ.

ಮಾಧವ ಕೆ.ಕೆ., ೧೯೯೪
ಭೂತಾರಾಧನೆ (ಪಠ್ಯ ಪುಸ್ತಕ)
ಪ್ರಸಾರಾಂಗ ಕನ್ನಡ ವಿ.ವಿ. ಹಂಪಿ, ಕ್ರೌ. ೧/೪, ಪು. ೨+೨೬, ರೂ. ೮/-

ನವಸಾಕ್ಷರರಿಗಾಗಿ ಸಿದ್ಧಪಡಿಸಿದ ಪುಸ್ತಕ. ಭೂತ, ಭೂತ ಕಟ್ಟುವವರು, ಭೂತಾರಾಧನೆಯ ವಿಧಿ ವಿಧಾನಗಳ ಮಾಹಿತಿಯನ್ನು ಸಂಭಾಷಣೆಯ ರೂಪದಲ್ಲಿ ಹೇಳಲಾಗಿದೆ.

ಭಾಸ್ಕರ್ ಕೊಗ್ಗ ಕಾಮತ್ ಉಪ್ಪಿನಕುದ್ರು, ಸಂಸ್ಕೃತಿ ಗುಲ್ವಾಡಿ, ೧೯೯೬
ಉಪ್ಪಿನಕುದರು ಸೂತ್ರದ ಗೊಂಬೆಗಳ ಸೀಮೊಲ್ಲಂಘನ (ಪ್ರವಾಸ)

ಲೀಲಾ ಭಟ್, ೧೯೮೧
ಭೂತ – ನಾಗರ ನಡುವೆ (ಪ್ರವಾಸ ಕಥನ)
ಪ್ರಕೃತಿ ಪ್ರಕಾಶನ, ಕೋಟೆಕಾರು, ಡೆಮಿ ೧/೮, ಪುಟಗಳು : ೬+೧೦+೧೫೮, ರೂ. ೧೦/-

ಇದರಲ್ಲಿ ನಂಬಿಕೆ, ಐತಿಹ್ಯ, ವಿವಿಧ ಆರಾಧನಾ ವೈಚಿತ್ರ್ಯಗಳ ವಿಶ್ಲೇಷಣೆ ಇದೆ. ಕಲಾ ಸಮೀಕ್ಷೆ ಇದೆ.

ಲೀಲಾ ಭಟ್ ಬಿ., ೧೯೮೯
ಶಕ್ತಿಯ ಶೋಧನೆಯಲ್ಲಿ (ಸಂಶೋಧನಾ ಪ್ರವಾಸ ಕಥನ)
ಕರ್ನಾಟಕ ಸಂಘ, ಪುತ್ತೂರು – ೫೭೪ ೨೦೧
ಡೆಮಿ ೧/೮, ಪುಟಗಳು : ೮+೧೮೦, ರೂ. ೩೦/-

ದ.ಕ. ದೇವೀ ಸ್ಥಾನಗಳಿಗೆ ಸಂಬಂಧಿಸಿದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಸಂಪ್ರದಾಯ, ತಾತ್ವಿಕ ಆಧಾರ, ಆರಾಧನಾ ವೈಚಿತ್ರ್ಯ, ಕಲಾ ವೈವಿಧ್ಯ, ಸಾಮಾಜಿಕ ನಂಬಿಕೆ, ವೈಯಕ್ತಿಕ ಧೋರಣೆಗಳ ರಂಜಕ ಮತ್ತು ವ್ಯಂಜಕ ನಿರೂಪಣೆ ಇದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಶಕ್ತಿ ಸ್ಥಳಗಳ ಪರಿಸರ, ಜಾತ್ರೆ, ಉತ್ಸವ, ಪೂಜೆ, ಬಲಿ, ತರ್ಪಣಗಳ ವಿಶ್ಲೇಷಣೆಯೂ ಇದೆ.

ವಿಘ್ನರಾಜ ಎಸ್.ಆರ್. (ಸಂ.), ೧೯೯೭
ತುಳುಲಿಪಿ ಹಸ್ತಪ್ರತಿಗಳ ಸೂಚಿ
ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಉಜಿರೆ
ಡೆ. ೧/೮, ಪು. ೨೧+೯೭, ರೂ. ೫೦/-

೪೮೯ ತುಳು ಲಿಪಿಯ ಹಸ್ತಪ್ರತಿಗಳಿವೆ. (ತಾಡವೋಲೆ ಗ್ರಂಥಗಳು ೪೩೧ + ಕಾಗದದ ಗ್ರಂಥಗಳು ೫೮) ಹೆಚ್ಚಿನ ಗ್ರಂಥಗಳು ಸಂಸ್ಕೃತ ಭಾಷೆಯ ಗ್ರಂಥಗಳಾಗಿವೆ. ವೇದ, ಉಪನಿಷತ್, ಜ್ಯೋತಿಷ್ಯ, ಗೃಹಸೂತ್ರ, ಗುಹ್ಯ ಪ್ರಯೋಗ, ಪುರಾಣ, ಮಹಾತ್ಮೆ, ಸ್ತೋತ್ರ, ವ್ಯಾಖರಣ, ಛಂದಶಾಸ್ತ್ರ, ಯೋಗ, ನ್ಯಾಯ, ಅದ್ವೈತ, ತಂತ್ರಾಗಮ, ವೈದ್ಯ ಮುಂತಾದ ಕಾವ್ಯ ಶಾಸ್ತ್ರ ಕೃತಿಗಳಿವೆ. ಒಟ್ಟು ತಾಡವಾಲೆ ಹಸ್ತಪ್ರತಿ – ೭೯೦. ಕಾಗದದ ಹಸ್ತಪ್ರತಿ – ೬೪. ಒಟ್ಟು ಹಸ್ತಪ್ರತಿಗಳು – ೮೫೪.

ವಿವೇಕ ರೈ. ಬಿ.ಎ. ಡಾ. (ಸಂ), ೨೦೦೧
ಅಗ್ರಾಳ ಪುರಂದರ ರೈ ಸಮಗ್ರ ಸಾಹಿತ್ಯ
ಅಕ್ಕೆ ಸಿರಿ ಸಾಂಸ್ಕೃತಿಕ ಕೇಂದ್ರ ಮಂಗಳೂರು
ಡೆ. ೧/೮, ಪು. ೧೯೨, ರೂ. ೬೦/-

ಪುರಂದರ ರೈ ಅವರು ಬರೆದಂಥ ಕೃತಿಗಳು, ಲೇಖನಗಳು, ಚಿಂತನಗಳು, ಹಾಸ್ಯ ವಿಡಂಬನೆ, ತುಳು ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ. ಕೊನೆಯಲ್ಲಿ ಪುರಂದರ ರೈಗಳ ವ್ಯಕ್ತಿ ಪರಿಚಯದ ಲೇಖನಗಳು ಹಾಗೂ ಭಾವಚಿತ್ರಗಳೂ ಇವೆ.

ವಿವೇಕ ರೈ ಬಿ.ಎ., ಯದುಪತಿ ಗೌಡ, ರಾಜಶ್ರೀ (ಸಂ.), ೨೦೦೧
ಭೂತಾರಾಧನೆಯ ಬಣ್ಣಗಾರಿಕೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮಂಗಳಗಂಗೋತ್ರಿ
ಡೆ. ೧/೮, ಪು. ೧೯೨ ರೂ. ೧೨೦/-

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ೧೯೯೩ರಲ್ಲಿ ನಡೆಸಿದ ಭೂತಾರಾಧನೆಯ ಬಣ್ಣಗಾರಿಕೆ ಕಮ್ಮಟದ ಸಮಗ್ರ ಸಂವಾದ ಫಲಶ್ರುತಿಗಳನ್ನು ಪುಸ್ತಕ ರೂಪದಲ್ಲಿ ತರಲಾಗಿದೆ. ಇದರಲ್ಲಿ ಬೇರೆ ಬೇರೆ ಭೂತ ಕಲಾವಿದರೊಂದಿಗೆ ಪ್ರಶ್ನೋತ್ತರ ನಡೆಸಿದ್ದನ್ನು ಕಾಣಬಹುದು. ಹಾಗಾಗಿ ಆ ಭೂತ ಕಲಾವಿದರ ಚಿತ್ರಗಳನ್ನು ನೀಡಲಾಗಿದೆ. ಉದಾ: ಮಲರಾಯಿ, ಪಂಜುರ್ಲಿ, ನಂದಿಗೋಣ, ಗುಳಿಗ, ಬಿರ್ಮೆರ್, ಪಿಲಿಚಾಮುಂಡಿ, ಮರ್ಲ್ ಜುಮಾದಿ ಕಲ್ಲುರ್ಟಿ, ಬೊಬ್ಬರ್ಯ, ಭೈರವ ಇತ್ಯಾದಿ.

ವಿಷ್ಣುಭಟ್ಟ ಪಾದೆಕಲ್ಲು (ಸಂ), ೧೯೯೨
ಸೇಡಿಯಾಪು ಕೃಷ್ಣಭಟ್ಟರ ವಿಚಾರ ಪ್ರಪಂಚ (ವಿಮರ್ಶಾ ಬರವಣಿಗೆಗಳು)
ಕರ್ನಾಟಕ ಸಂಘ ಪುತ್ತೂರು, ಡೆ. ೧/೮, ಪು. ೩೨+೫೮೦ ರೂ. ೧೦೫/-

ಸೇಡಿಯಾಪು ಕೃಷ್ಣ ಭಟ್ಟರು ೭೦ ವರ್ಷಗಳ ಅವಧಿಯಲ್ಲಿ ಬರೆದಂಥ ಲೇಖನಗಳ ಸಂಕಲನವೇ ‘ವಿಚಾರ ಪ್ರಪಂಚ’ ಹಾಗಾಗಿ ಇದರಲ್ಲಿ ಸಂಗ್ರಹಿಸಲ್ಪಟ್ಟದ್ದು ವೈಚಾರಿಕ ಲೇಖನಗಳು. ಒಟ್ಟು ೫ ಭಾಗಗಳಿವೆ. ೧) ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗಳು. ಭಾಷೆಗೆ ಸಂಬಂಧಿಸಿದ ವಿಚಾರಗಳು. ೩) ಕಲೆಗೆ ಸಂಬಂಧಿಸಿದ ವಿಚಾರಗಳು ೪) ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರಗಳು ೫) ಸಂಕೀರ್ಣ. ಕನ್ನಡ ಸಂಶೋಧನ ರಂಗದಲ್ಲಿ ಅಪ್ರತಿಮವೆನಿಸುವ ‘ಭಾನುಮತಿಯ ನೆತ್ತ’ ಭಾಷಾ ಸಂಶೋಧನೆಯ ಮೈಲುಗಲ್ಲುಗಳಂತಿರುವ ‘ಪಂಚಮೀ ವಿಭಕ್ತಿ’ ಮತ್ತು ‘ಗಮಕ ಸಮಾಸ’, ಕಲಾ ಸಂಶೋಧಕರಿಗೆ ಆಧಾರವೆನಿಸುವ ‘ಯಕ್ಷಗಾನದ ಸ್ತ್ರೀವೇಷ’ದ ಜ್ಞಾಪಕ ಚಿತ್ರ ಹಾಗೇ ಸರ್ವವ್ಯಾಪಿ ಇಡ್ಲಿಯ ಮೇಲೂ ಸೇಡಿಯಾಪು ಸಂಶೋಧನೆ ನಡೆಸಿರುವುದನ್ನು ಈ ಗ್ರಂಥದಲ್ಲಿ ಕಾಣಬಹುದು.

ವಿಷ್ಣಭಟ್ ಮಾಸ್ತರ್ ಕೀರಿಕ್ಕಾಡು, ೧೯೮೧
ಯಕ್ಷರಸಜೀವನ (ಆತ್ಮಕಥೆ)
ಕೀರಿಕ್ಕಾಡು ಮಾಸ್ತರ್ ಶ್ರೀ ವಿಷ್ಣು ಭಟ್ಟರ ಸನ್ಮಾನ ಸಮಿತಿ, ಕಾಸರಗೋಡು
ಡೆ. ೧/೮, ಪು. ೧೨+೧೪೩+೧೦, ರೂ. ೧೦/-

ಕುತೂಹಲಕಾರಿಯಾದ ರಮ್ಯ ಕಾದಂಬರಿಯ ಶೈಲಿಯಲ್ಲಿ ಮೂಡಿಬಂದ ಈ ಗ್ರಂಥದಲ್ಲಿ ಪ್ರಸಿದ್ಧ ಹಿರಿಯ ಯಕ್ಷಗಾನ ಕಲಾವಿದರಾದ ವಿಷ್ಣು ಭಟ್ಟರ ಆತ್ಮಕಥೆಯೂ ಅದರೊಂದಿಗೆ ಯಕ್ಷಗಾನ ಕಲೆಯು ಹಂತಹಂತವಾಗಿ ಬೆಳೆದು ಬಂದ ವಿಶ್ಲೇಷಣೆಯೂ, ಅವರಿದ್ದು ಜರುಗಿದ ಅಸಂಖ್ಯಾತ ಯಕ್ಷಗಾನ ಕೂಟಗಳ, ಆ ಕೂಟಗಳಲ್ಲಿ ಭಾಗವಹಿಸಿದ ಕಲಾವಿದರ, ಕಥಾನಕಗಳ, ಪರಸ್ಪರ ನಡೆದ ಸಂಭಾಷಣೆಗಳ, ವಾದ – ಪ್ರತಿವಾದಗಳ ಆಕಸ್ಮಿಕವಾಗಿ ಘಟಿಸಿದ ಸ್ವಾರಸ್ಯ ಪ್ರಕರಣಗಳ ಕರಾರುವಕ್ಕಾದ ದಾಖಲೆಗಳೂ ಇವೆ.

ಶಿವರಾಮಯ್ಯ ಡಿ.ವಿ. (ಸಂ.), ೧೯೯೨
ತಾಳಮದ್ದಳೆ ಪರಂಪರೆ ಮತ್ತು ಮಾರ್ಗ (ವಿಚಾರ ಸಂಕಿರಣಗಳ ಸಂಗ್ರಹ)
ಶ್ರೀ ತ್ರಿಪುರಾಂತಕೇಶ್ವರ ಯಕ್ಷಗಾನ ಕಲಾ ಸಂಘ ಸಿರಿವಂತೆ
ಡೆ. ೧/೮, ರೂ. ೨೫/-

ಸಿರಿವಂತೆಯಲ್ಲಿ ೧೯೯೦ರಲ್ಲಿ ಶ್ರೀ ತ್ರಿಪುರಾಂತಕೇಶ್ವರ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣದ ಪ್ರಬಂಧರೂಪ. ತಾಳಮದ್ದಳೆಯ ವಿವಿಧ ವಿಚಾರಗಳ ಮಂಥನ ಇದರಲ್ಲಿದೆ ಉದಾ: ‘ತಾಳಮದ್ದಳೆ ಪ್ರಸಂಗ ಕೃತಿ’, ‘ತಾಳಮದ್ದಳೆ ಹಿಮ್ಮೇಳ’, ‘ತಾಳಮದ್ದಳೆ ನಟಪಾತ್ರ ಸಂಬಂಧ’, ‘ತಾಳ ಮದ್ದಳೆ ಪಾತ್ರ ಚಿತ್ರಣ ಕ್ರಮ’, ‘ತಾಳಮದ್ದಳೆ ಅರ್ಥಕ್ರಮ’ ಇಂಥ ೭ ವಿಚಾರ ಸಂಕಿರಣದ ಪ್ರಬಂಧಗಳನ್ನು ಖ್ಯಾತ ವಿದ್ವಾಂಸರು ಮಂಡಿಸಿರುವುದನ್ನು ನಾವು ಈ ಕೃತಿಯಲ್ಲಿ ಕಾಣಬಹುದು.

ಶೆಟ್ಟಿ ಜಿ.ಯಂ. ಮೋಹನ್ ದಾಸ್ ಸುರತ್ಕಲ್ (ಸಂ), ೧೯೮೯
ಸಂಚಯ (ಆಯ್ದ ಬರಹಗಳ ಸಂಕಲನ)
ಪ್ರಕಾಶಕ : ಜಿ. ಎಂ. ಶೆಟ್ಟಿ, ಡೆ. ೧/೮, ರೂ. ೪/-

‘ಚಿಂತನ’ನ ಭಾಗದಲ್ಲಿ ‘ಮದು ನುಡಿಗಟ್ಟುಗಳು’ – ಬರಹದಲ್ಲಿ ಭೂತಾರಾಧನೆಯಲ್ಲಿ ಹೇಳಲಾಗುವ ನಿರ್ದಿಷ್ಟ ದೈವದ ಪೂರ್ವಕಥೆಯನ್ನು ಉದಾ: ಇಲ್ಲಿ ಧೂಮಾವತಿ ಭೂತದ ಪೂರ್ವಕಥೆ ನುಡಿಗಟ್ಟಿನ ರೂಪದಲ್ಲಿ (ತುಳುವಿನಲ್ಲಿ) ಹೇಳಲಾಗಿದೆ. ‘ಮದು’ ಹೇಳಿ ಭೂತ ಕಲಾವಿದನಿಗೆ ಆವೇಶ ಬರುವಂತೆ ಮಾಡುವುದನ್ನು ಇದರಲ್ಲಿ ನೀಡಲಾಗಿದೆ. (ಪು. ೬೪-೬೯)

ಸಂಜೀವಯ್ಯ ಸಿ.ಬಿ. ಲಾವಣ್ಯ ಕವಿರತ್ನ ರಾಯಸಂ ಹಣ್ಣಿ ಗ್ರಾಮ, ಅಜ್ಜಂಪುರ,
ಮೈಸೂರು (ಲೇಖಕರು ಮತ್ತು ಪ್ರಕಾಶಕರು)
ಶ್ರೀ ಕ್ಷೇತ್ರ ಧರ್ಮಸ್ಥಳ ಮಹಿಮೆ ಶ್ರೀ ಮಹಾನಡಾವಳಿ ಮಹದೋತ್ಸವ ಲಾವಣಿ,
ಕ್ರೌ. ೧/೮, ರೂ. ೦-೮-೦.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿರುವ ಮಹಾನಡಾವಳಿ, ಮಹದೋತ್ಸವ ಸಮಾರಂಭಗಳಲ್ಲಿ ಲೇಖಕರು ಕಂಡು ಕೇಳಿ ತಿಳಿದ ವಿಷಯಾನುಭವಗಳನ್ನು ಲಾವಣಿಯ ರೂಪದಲ್ಲಿ ಪ್ರಕಟಿಸಲಾದ ಕೃತಿ.

ಸಾಮಗ ಬಾ. ಮಲ್ಪೆ, ೧೯೮೦
ಕೂಡ್ಲು ಮೇಳ (ಪರಿಚಯ)
ತುಳುನಾಡ್ ಪ್ರಗತಿ ಪ್ರಕಾಶನಾಲಯ, ಮಲ್ಪೆ, ಡೆ. ೧/೮, ರೂ. ೨/-

ಯಕ್ಷಗಾನ ಮೇಳಗಳಲ್ಲಿ ಪ್ರಸಿದ್ಧವಾದ ಧರ್ಮಸ್ಥಳ ಮೇಳದ ಪರಿಚಯ, ಅದರಲ್ಲಿನ ಕಲಾವಿದರ ಪರಿಚಯವನ್ನು ನೀಡಿ ಕೆಲವು ಪಾತ್ರಗಳ ಪರಿಚಯ ನೀಡುವ ಛಾಯಾಚಿತ್ರಗಳನ್ನೂ ಕೊನೆಯಲ್ಲಿ ನೀಡಲಾಗಿದೆ.

ಸುಶೀಲ ಪಿ. ಉಪಾಧ್ಯಾಯ, ೧೯೯೭
ಶಬ್ದಾತೀತ (ಅನುಭವ ಕಥನ)
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ
ಡೆ. ೧/೮, ಪು. ೨೪, ರೂ. ೧೦/-

ತುಳುವಿನ ನಿಘಂಟಿಗಾಗಿ ವಿವರ ಸಂಗ್ರಹಿಸಲು ಮಾಡಿದ ಕ್ಷೇತ್ರಕಾರ್ಯದ ಅನುಭವ ಪೂರ್ಣ ವಿವರಣೆ ಇಲ್ಲಿದೆ.

ಹರಿದಾಸ ಭಟ್ಟ ಕು.ಶಿ. ೧೯೯೩
ಕರ್ನಾಟಕ ಜಾನಪದ ಅಧ್ಯಯನ ನಿನ್ನೆ, ಇಂದು, ನಾಳೆ – ಮುಂಬಯಿ ವಿ.ವಿ.ದಲ್ಲಿ ಫೆ. ೨೪-೨೫ಕ್ಕೆ ನೀಡಿದ ಬೇಂದ್ರೆ ಸ್ಮಾರಕ ದತ್ತಿ ಉಪನ್ಯಾಸ, ಡೆ. ೧/೮.

ಮುಂಬಯಿ ವಿ.ವಿ.ದಲ್ಲಿ ನಡೆದ ಈ ಉಪನ್ಯಾಸದಲ್ಲಿ ಕರ್ನಾಟಕದಲ್ಲಿ ನಡೆದಂಥ ಹಾಗೂ ನಡೆಯುತ್ತಿರುವಂಥ ಜಾನಪದ ಅಧ್ಯಯನ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ಆರಂಭ ಯುಗದಿಂದ ಹಿಡಿದು ಇಂದಿನ ವೈಜ್ಞಾನಿಕ ಯುಗದವರೆಗೆ ಜಾನಪದದಲ್ಲಿ ನಡೆದ ಕೆಲಸ – ಕಾರ್ಯಗಳನ್ನು ತಿಳಿಸುತ್ತಲೇ ದ.ಕ. ಜಿಲ್ಲೆಯಲ್ಲಿ ತುಳುವಿನ ಬಗ್ಗೆ ನಡೆದ ಕೆಲಸಗಳ ಹಾಗೂ ತುಳು ವಿದ್ವಾಂಸರ ಸಂಕ್ಷಿಪ್ತ ಮಾಹಿತಿ ನೀಡುತ್ತದೆ.

ಹರಿದಾಸ ಭಟ್ಟ ಕು.ಶಿ. ಮತ್ತು ಇತರರು
ತುಳು ನಿಘಂಟು ಯೋಜನೆ ಮತ್ತು ಯೋಚನೆ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧಣಾ ಕೇಂದ್ರ, ಉಡುಪಿ, ಪು. ೨೪, ರೂ. ೧/-

ತುಳು ನಿಘಂಟು ಯೋಜನೆಯ ಉದ್ದೇಶ ಮತ್ತು ಅದು ಹುಟ್ಟಿಕೊಳ್ಳಲು ಕಾರಣವೇನೆಂಬುದರ ಸಲುವಾಗಿ ಬೇರೆ ಬೇರೆ ವಿದ್ವಾಂಸರ ಆಲೋಚನೆಗಳನ್ನು ಇದರಲ್ಲಿ ನೀಡಲಾಗಿದೆ.

ಹೆಗಡೆ ಜಿ.ಎಸ್., ೧೯೯೫
ಯಕ್ಷಗಾನ ಹಸ್ತಾಭಿನಯ ದರ್ಪಣ
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು
ಡೆ. ೧/೮, ರೂ. ೧೫/-

ಯಕ್ಷಗಾನದಲ್ಲಿ ಬಳಸುವ ಮುದ್ರೆಗಳು, ಅಭಿನಯಗಳ ಕುರಿತು ಮಾಹಿತಿ ನೀಡುವ ಕೃತಿ. ಇದಕ್ಕೆ ಸಂಬಂಧಿಸಿದ ರೇಖಾಚಿತ್ರಗಳೂ, ಛಾಯಾಚಿತ್ರಗಳೂ ಕೊನೆಯಲ್ಲಿದೆ ಹಾಗೂ ಯಕ್ಷಗಾನದ ಹಸ್ತಾಭಿನಯದ ಕುರಿತು ಪಾಶ್ಚಾತ್ಯ, ಔತ್ತರೀಯ ಹಾಗೂ ದಾಕ್ಷಿಣಾತ್ಯ ವಿಮರ್ಶಕರ ಅಭಿಪ್ರಾಯಗಳೂ ಇವೆ.

ಶೀನಪ್ಪ ಹೆಗ್ಗಡೆ ಸಮಗ್ರ ಸಾಹಿತ್ಯ
ಪೊಳಲಿ ಶೀನಪ್ಪ ಹೆಗ್ಗಡೆ ಶತಾಬ್ದಿ ಸಮಿತಿಯವರಿಂದ (೧೯೯೧) ಪ್ರಕಾಶಿತ. ಪೊಳಲಿ ಎನ್.ಎ. ಶೀನಪ್ಪ ಹೆಗ್ಡೆಯವರ ಸಮಗ್ರ ಸಾಹಿತ್ಯದ ಪರಿಚಯ ಕೃತಿ. ದ.ಕ. ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯ ಕಟ್ಟು, ಎನ್.ಎಸ್. ಕಿಲ್ಲೆಯವರ ಜತೆಯಲ್ಲಿ ಬರೆದ ಪ್ರಾಚೀನ ತುಳುನಾಡು, ಪುಳಿನಾಪುರ ಮಹಾತ್ಮೆ, ಅಕ್ಕೆರಸು ಪೂಂಜೆದಿ, ತುಳುವಾಲ ಬಲಿಯೇಂದ್ರ ಮತ್ತು ಮಿತ್ಯ ನಾರಾಯಣ ಕಥೆ ಕೃತಿಗಳು ಸಂಕಲನಗೊಂಡಿವೆ.

ನಿರಂತರ ಕಲಿಕೆ (ಪಾಠ ಪುಸ್ತಕ)
ಸಂಪೂರ್ಣ ಸಾಕ್ಷರತಾ ಆಂದೋಲನ – ೧೯೯೦-೯೧, ದ.ಕ. ಜಿಲ್ಲೆ, ಕ್ರೌ. ೧/೪

ಈ ಪುಸ್ತಕದಲ್ಲಿ ತುಳುನಾಡಿನ ವೀರ ಮಹಿಳೆ ಅಬ್ಬಕ್ಕಳ ಕುರಿತಾದ ‘ವೀರನಾರಿ ಅಬ್ಬಕ್ಕ’ ಪಾಠದಲ್ಲಿ ಆಕೆ ವಿದೇಶೀಯರೊಂದಿಗೆ ಹೋರಾಡಿದ ಹಾಗೂ ಗಂಡನನ್ನು ವಿರೋಧಿಸಿದ ಬಗೆಯನ್ನು ಹೇಳಲಾಗಿದೆ. (ಪು. ೧೪-೧೬) ಹಾಗೆಯೇ ‘ನಮ್ಮ ಜಾನಪದ’ ಪಾಠದಲ್ಲಿ ಜಾನಪದಕ್ಕೆ ಸೇರಿದ ಪಾಡ್ದನ, ಕಬಿತ, ಭೂತಾರಾಧನೆ, ಯಕ್ಷಗಾನ, ನಾಗಾರಾಧನೆ, ಆಟಿಕಳೆಂಜ, ಕೋಳಿ ಅಂಕ, ಕಂಬುಳ, ಅಡುಗೆ, ಮದ್ದು ಇತ್ಯಾದಿಗಳನ್ನು ತಿಳಿಸಲಾಗಿದೆ (ಪು. ೫೩ – ೫೫)

ಕರಾವಳಿ ಕಲಿಕೆ ಭಾಗ – ೧ (ತುಳು ಪಾಠ ಪುಸ್ತಕ)
ದ.ಕ. ಜಿಲ್ಲಾ ಪರಿಷತ್ (ಪ್ರಕಟಣೆ), ೧೯೯೦ – ೯೦

ಸಾಕ್ಷರತಾ ಆಂದೋಲನದ ಸಲುವಾಗಿ ಪಾಠ ಪುಸ್ತಕಗಳನ್ನು ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಗೆ ತಕ್ಕಂತೆ ತಯಾರಿಸಲಾದ ಸಂದರ್ಭದಲ್ಲಿ ತುಳು ಭಾಷೆ – ಸಂಸ್ಕೃತಿಯ ಬಗ್ಗೆ ತಿಳಿಸಲು ‘ಕರಾವಳಿ ಕಲಿಕೆ’ ಪಾಠ ಪುಸ್ತಕ ನಿರ್ಮಾಣಗೊಂಡಿದೆ. ಹಾಗಾಗಿ ಇದರಲ್ಲಿ ತುಳುನಾಡಿನ ಯಕ್ಷಗಾನ, ಆಟಿ ಕಳೆಂಜ, ಮೀನುಗಾರಿಕೆ ಇತ್ಯಾದಿ ಹಾಗೂ ಅಂಕೆಗಳನ್ನು ಕೂಡಿಸುವಿಕೆ ಇತ್ಯಾದಿ ಪಾಠಗಳಿವೆ.

ಕರಾವಳಿ ಕಲಿಕೆ ಭಾಗ ೩ (ಪಾಠ ಪುಸ್ತಕ)

ಈ ಪುಸ್ತಕದಲ್ಲಿ ಪು. ೩೬ – ೩೭ರಲ್ಲಿನ ‘ದಕ್ಷಿಣ ಕನ್ನಡ ಜಿಲ್ಲೆ’ ಪಾಠದಲ್ಲಿ ದ.ಕ.ದ ಭೌಗೋಳಿಕ ಲಕ್ಷಣಗಳು, ಇಲ್ಲಿನ ಮುಖ್ಯ ಬೆಳೆಗಳು, ತಾಲೂಕುಗಳು, ಪ್ರೇಕ್ಷಣಿಯ ಸ್ಥಳಗಳು, ಭಾಷೆಗಳು, ಜನಪದ ಕಲೆಗಳು ಇತ್ಯಾದಿಗಳ ಕುರಿತು ವಿವರಗಳಿವೆ.

ಧರ್ಮಸ್ಥಳ ಸಾಹಿತ್ಯ ಸಮ್ಮೇಳನ (ವಿಚಾರ ಸಂಕಿರಣ ಪ್ರಬಂಧಗಳು), ೧೯೮೦
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಡೆಮಿ ೧/೮, ಪುಟಗಳು : ೮+೪೫೬, ರೂ. ೨೦/-

ಭಾಷಾ ಬಾಂಧವ್ಯ ವಿಚಾರಗೋಷ್ಠಿಯಲ್ಲಿ ತುಳು – ಕನ್ನಡ ಭಾಷೆಗಳ ಸಂಬಂಧದ ಬಗ್ಗೆ ಅಮೃತ ಸೋಮೇಶ್ವರರ ಪ್ರಬಂಧ (ಪುಟಗಳು : ೧೦೩ – ೧೧೩)ದಲ್ಲಿ ತುಳು ಹಾಗೂ ಕನ್ನಡ ಭಾಷೆಗಳ ಸಂಬಂಧವನ್ನು, ಅವುಗಳ ನಡುವಿನ ಕೊಡು – ಕೊಳ್ಳುವಿಕೆಯನ್ನು ಸೋದಾಹರಣವಾಗಿ ವಿವರಿಸಲಾಗಿದೆ.

ಚಂದ್ರಭಾಗಿ ಕೆ. ರೈಯವರ ಆಯ್ದ ಬರಹಗಳು, ೧೯೯೬
ಕನ್ನಡ ಲೇಖಕಿಯರ – ವಾಚಕಿಯರ ಸಂಘ, ದ.ಕ. ಮತ್ತು ಕಾಸರೋಡು (ರಿ.),
ಡೆಮಿ ೧/೮, ರೂ. ೪೫/-

ಪ್ರಬಂಧಗಳು, ಕಿರುಗತೆಗಳು, ಸಂಪ್ರದಾಯ ಎಂಬ ಭಾಗಗಳೊಂದಿಗೆ ‘ತುಳು ಜಾನಪದ’ ಎಂಬ ವಿಭಾಗವಿದ್ದು ಇದರಲ್ಲಿ ‘ತುಳು ಸಂಧಿಗಳ ಸೊಗಸು’ ಎಂಬ ಪ್ರಬಂಧದೊಂದಿಗೆ ಅವರು ಸಂಗ್ರಹಿಸಿದ ೬ ತುಳು ಜಾನಪದ ಕಥನಗಳನ್ನು ನೀಡಲಾಗಿದೆ.

ಕಿಲ್ಲೆ (ಶತಮಾನೋತ್ಸವ ಸಂಸ್ಮರಣ ಗ್ರಂಥ) ೨೦೦೦
ದೇಶಭಕ್ತ ಎನ್. ಎಸ್.ಕಿಲ್ಲೆ, ಜನಶತಮಾನೋತ್ಸವ ಸಮಿತಿ ಪುತ್ತೂರು
ಡೆ. ೧/೮, ಪು: ೧೬+೨೬೨, ರೂ. ೨೦೦/- (ಸಾದಾ) ೨೪೦/- (ಉತ್ತಮ)

ಇದರಲ್ಲಿ ಕಿಲ್ಲೆಯವರ ಬದುಕು – ಸಾಧನೆಗಳ ಕುರಿತು ವಿವಿಧ ಲೇಖಕರು ಬರೆದಿದ್ದಾರೆ.

ಕಿಲ್ಲೆ ಕೃತಿ ಸಂಚಯ, ೨೦೦೦
ದೇಶಭಕ್ತ ಎನ್.ಎಸ್. ಕಿಲ್ಲೆ ಶತಮಾನೋತ್ಸವ ಸಮಿತಿ
ಡೆ. ೧/೮, ಪು: ೨೫+೨೯೨, ರೂ. ೧೫೦/-

ದೇಶಭಕ್ತ ಎನ್.ಎಸ್. ಕಿಲ್ಲೆಯವರ ಬದುಕು ಬರಹಗಳ ಸಮೀಕ್ಷಾ ಗ್ರಂಥ

ಕಂಬಳ – ಒಂದು ಪಕ್ಷಿನೋಟ
ಜಿಲ್ಲಾ ಕಂಬಳ ಸಮಿತಿ (ರಿ.) ದ.ಕ. ಉಡುಪಿ ಜಿಲ್ಲೆ

ದ.ಕ.ದ ಪ್ರಸಿದ್ಧ ಕ್ರೀಡೆಯಾದ ಕಂಬಳದ ಆಚರಣೆ, ವೈಶಿಷ್ಟ್ಯ ಇತ್ಯಾದಿಯನ್ನು ಸಂಕ್ಷಿಪ್ತವಾಗಿ ಚಿತ್ರಗಳ ಮೂಲಕ ಪರಿಚಯಿಸುವಂಥ ಬರಹ.

ಪೂಕರೆ (ಅಧ್ಯಕ್ಷ ಭಾಷಣ)
ಮೂಲ್ಕಿ ಬಪ್ಪನಾಡಿನಲ್ಲಿ ನಡೆದ ಅಖಿಲ ಭಾರತ ತುಳು ಸಮ್ಮೇಳನದಲ್ಲಿ ಶ್ರೀ ಅಮೃತ ಸೋಮೇಶ್ವರರು ಮಾಡಿದ ಅಧ್ಯಕ್ಷ ಭಾಷಣ.

ಇದರಲ್ಲಿ ಅವರು ಪ್ರಾಚೀನ ತುಳುನಾಡು, ತುಳುನಾಡಿನ ವೈಶಿಷ್ಟ್ಯಗಳು, ತುಳುವಿನ ಪ್ರಾಚೀನ ಕಾವ್ಯಗಳು, ತುಳು ಭಾಷೆ – ಸಾಹಿತ್ಯ ಕ್ಷೇತ್ರದಲ್ಲಿ ನಡೆದಂಥ ಕಾರ್ಯಗಳು, ತುಳುವಿನ ಯಕ್ಷಗಾನ – ಸಿನೆಮಾಗಳ ಕುರಿತಂತೆಯೂ ಚರ್ಚೆ ನಡೆಸಿದ್ದಾರೆ.

ಅಧ್ಯಕ್ಷ ಭಾಷಣ
೪೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಣಿಪಾಲ, ದ.ಕ. ಜಿಲ್ಲೆ

ಅಧ್ಯಕ್ಷರಾಗಿದ್ದ ಅ.ನ.ಕೃ. ಅವರು ತಮ್ಮ ಭಾಷಣದ ಆರಂಭದಲ್ಲಿ ದ.ಕ. ಜಿಲ್ಲೆಯ ಬಗ್ಗೆ, ಇಲ್ಲಿನ ಸಾಹಿತಿಗಳು, ಕರ್ಮಯೋಗಿಗಳಾದ ಡಾ. ಟಿ.ಎಂ.ಎ. ಪೈಗಳ ಬಗ್ಗೆ, ಇಲ್ಲಿನ ಪ್ರಸಿದ್ಧ ಕಲೆಗಳಾದ ಯಕ್ಷಗಾನ, ತಾಳಮದ್ದಳೆಯ ಬಗ್ಗೆ ಹೇಳಿದ್ದಾರೆ. ಹಾಗೆಯೇ ಕನ್ನಡ ಸಾಹಿತ್ಯದ ವ್ಯಾಪ್ತಿ, ನಾಟಕ, ವಿಮರ್ಶೆ ಮುಂತಾದ ವಿಷಯಗಳ ಕುರಿತೂ ದೀರ್ಘ ಚರ್ಚೆ ನಡೆಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಭಾಷಣ
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನ ಎಣ್ಮೂರು, ಸುಳ್ಯ, ದ.ಕ. – ೫೭೪ ೩೨೮, ಮಾರ್ಚ್‌೨೫, ೨೦೦೧ ರಾಮಚಂದ್ರದೇವ (ಅಧ್ಯಕ್ಷರು).

ತುಳುನಾಡಿನ ಪ್ರಮುಖ ಐತಿಹಾಸಿಕ ಸ್ಥಳವಾದ ಎಣ್ಮೂರಿನಲ್ಲಿ ಪ್ರಚಲಿತವಿರುವ ಕೋಟಿ ಚೆನ್ನಯ ಪಾಡ್ದನದ ಬಗ್ಗೆ, ತುಳು ಭಾಷೆಯ ಬಗ್ಗೆ, ಕುಂಞಿಹಿತ್ಲು ರಾಮಚಂದ್ರರ, ಯರ್ಮಂಜು ರಾಚಂದ್ರರ ಕವನಗಳ ಬಗ್ಗೆ, ಹಾಗೆಯೇ ಅಡಿಗರ ಕವನದ ಬಗ್ಗೆಯೂ ಹೇಳಲಾಗಿದೆ. ಮತ್ತು ಸಾಹಿತ್ಯ, ಭಾಷೆಯನ್ನು ನಾವು ಹೇಗೆ ಉಳಿಸಿಕೊಳ್ಳಬೇಕೆಂಬುದರ ಚರ್ಚೆಯೂ ಇಲ್ಲಿದೆ.

ಪ್ರಥಮ ವಿಶ್ವ ತುಳು ಸಮ್ಮೇಳನ
೧೯೯೪ರ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಡಿದ ಅಧ್ಯಕ್ಷ ಭಾಷಣ ಪುಟಗಳು ೧೬.

ತುಳುನಾಡಿನ ಚರಿತ್ರೆ, ಸಂಸ್ಕೃತಿ, ಸಾಂಸ್ಕೃತಿಕ ವೈಶಿಷ್ಟ್ಯಗಳು (ನಾಗಾರಾಧನೆ, ಭೂತಾರಾಧನೆ, ಯಕ್ಷಗಾನ) ತುಳು ಭಾಷೆ, ಸಾಹಿತ್ಯ, ಚಳುವಳಿ, ಕಂಬಳದಂಥ ಜಾನಪದ ಕ್ರೀಡೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವಂಥ ಭಾಷಣ.

ಅಧ್ಯಕ್ಷ ಭಾಷಣ – ದಕ್ಷಿಣ ಕನ್ನಡ ಜಿಲ್ಲಾ ಒಂಭತ್ತನೆಯ ಸಾಹಿತ್ಯ ಸಮ್ಮೇಳನ ೨೪, ೨೫, ೨೬ ದಶಂಬರ ೧೯೬೬.
ಸೇಡಿಯಾಪು ಮಂಟಪ, ಶ್ರೀ ಭುವನೇಂದ್ರ ಕಾಲೇಜ್, ಕಾರ್ಕಳ, ದ.ಕ. ಡೆ. ೧/೮. ಎನ್. ವ್ಯಾಸರಾಯ ಬಲ್ಲಾಳ (ಅಧ್ಯಕ್ಷರು).

ಈ ಭಾಷಣದಲ್ಲಿ ದ.ಕ.ದ ಕೆಲವು ಪ್ರಖ್ಯಾತ ವಿದ್ವಾಂಸರುಗಳ ಬಗ್ಗೆ, ಕನ್ನಡ ಭಾಷೆ, ಜಾನಪದ, ದಲಿತ ಶೋಷಣೆ, ಸ್ತ್ರೀ ಸಂವೇದನೆ ಹಾಗೂ ಸ್ತ್ರೀ ಸಂವೇದನೆಯನ್ನು ವ್ಯಕ್ತಪಡಿಸಿರುವ ಲೇಖಕಿಯರ ಬಗ್ಗೆ ಸವಿಸ್ತಾರವಾಗಿ ಹೇಳಲಾಗಿದೆ.

ಬರಿಯ ಭಾವಗೀತ

ಎಂ.ಜಿ.ಎಂ. ಕಾಲೇಜು ಪ್ರಿನ್ಸಿಪಾಲರಾಗಿದ್ದ ಕು.ಶಿ. ಯವರು ತಮ್ಮ ವಿದಾಯ ಸಂದರ್ಭದಲ್ಲಿ ಮಾಡಿದ ಭಾಷಣ. ಇದರಲ್ಲಿ ಅವರ ಬದುಕು – ಅನುಭವಗಳು ಇತ್ಯಾದಿಗಳ ಕುರಿತ ಮಾತುಗಳಿವೆ.

ದಸರಾದರ್ಶಿನಿ ಮೈಸೂರು ೧೯೭೨ ಲೇಖನ

‘ಕರ್ನಾಟಕ ಜನಪದ ನೃತ್ಯಗಳು’ – ಜೀ.ಶಂ.ಪ. -ವೀರಗಾಸೆ, ಕಂಸಾಳೆ, ಗೊರವ ಕುಣಿತ, ಕೋಲಾಟ, ಡೊಳ್ಳು ಕುಣಿತವಲ್ಲದೆ ದ.ಕ.ದ ಆಟಿಕಳೆಂಜ, ಕೊರಗ ತನಿಯ, ಮಾದಿರ, ದುಡಿ ಕುಣಿತಗಳ ಕುರಿತು ಸಂಕ್ಷಿಪ್ತ ಮಾಹಿತಿ – ಉಲ್ಲೇಖಗಳಿವೆ.

ಪ್ರಗತಿ : ಬ್ಯಾರಿಗಳು ಅಂದು ಇಂದು ಮುಂದು

‘ದಕ್ಷಿಣ ಕನ್ನಡದ ಬ್ಯಾರಿಗಳು’ – ಮೂಲ ಮತ್ತು ಸಂಸ್ಕೃತಿ – ಬಿ.ಎಂ. ಇಚ್ಲಂಗೋಡು (ವಿಚಾರಗೋಷ್ಠಿಯ ಪ್ರಬಂಧ) ಬ್ಯಾರಿಗಳ ಮೂಲ, ವರ್ಗ, ಭಾಷೆ, ಸಂಸ್ಕೃತಿ, ಇತಿಹಾಸ ಇತ್ಯಾದಿಗಳ ಕುರಿತು ಮಾಹಿತಿ ನೀಡುತ್ತದೆ. ‘ಮುಸ್ಲಿಂ ಜಾನಪದ’ ವಿಭಾಗದಲ್ಲಿ ‘ಕರಾವಳಿ ಕರ್ನಾಟಕದ ಮುಸ್ಲಿಂ ಹೆಸರಿನ ದೈವಗಳು’ -ಫಕೀರ್ ಮಹಮ್ಮದ್ ಕಟ್ಟಾಡಿ – ಮುಸ್ಲಿಂ ಹಿನ್ನೆಲೆಯೊಂದಿಗೆ ಮುಸ್ಲಿಮರಿಗೂ, ಭೂತಾರಾಧನೆಗೂ ಇರುವ ಸಂಬಂಧವನ್ನು ಬೊಬ್ಬರ್ಯ – ಆಲಿಭೂತಗಳ ಕಥೆಯ ಮೂಲಕ ಪರಿಶೀಲಿಸಲಾಗಿದೆ. ‘ಬ್ಯಾರಿ ಸಾಹಿತ್ಯ’ ವಿಭಾಗದಲ್ಲಿ ಜನಪದ ಕಥೆಗಳು, ಹಾಡುಗಳನ್ನೂ ನೀಡಲಾಗಿದೆ.

ಕರಾವಳಿ ಚಿತ್ರೋತ್ಸವ – ೯೬.

Organised by : Dakshina Kannada District Administration & Darshan film Society, Sandesha, Mangalore – 575 005 In collaboration with D.K. Theatre Owner’s Association. ಲೇಖನ : ‘ತುಳು ಚಿತ್ರರಂಗದ ೨೬ ವರ್ಷಗಳು’ – ತುಳುವಿನಲ್ಲಿ ತಯಾರಾದ ಚಿತ್ರಗಳ ಮಾಹಿತಿ – ವಿಶ್ಲೇಷಣೆ ಈ ಲೇಖನದಲ್ಲಿದೆ (ಪು. ೩೧ ಮತ್ತು ೪೦).

೪೨ನೇ ಸಾಹಿತ್ಯ ಸಮ್ಮೇಳನ ವಿಚಾರಗೋಷ್ಠಿ – ಭಾಷಣಗಳು
ಮಣಿಪಾಲ, ದಶಂಬರ ೨೭, ೨೮, ೨೯ : ೧೯೬೦

ಕನ್ನಡದಲ್ಲಿ ಗದ್ಯ ಸಾಹಿತ್ಯ (ವಿಚಾರಗೋಷ್ಠಿ) – ಶ್ರೀ ಹುರುಳಿ ಭೀಮರಾಯರು, ಮಂಗಳೂರು – ಇಲ್ಲಿ ‘ಕನ್ನಡ ಗದ್ಯ ಸಾಹಿತ್ಯಕ್ಕೆ ಜಿಲ್ಲೆಯ ಕಪ್ಪಕಾಣಿಕೆ’ – ಭಾಗದಲ್ಲಿ ಪಂಜೆ, ಎಂ.ಎನ್. ಕಾಮತ್, ಶಿವರಾಮ ಕಾರಂತ, ಗೋವಿಂದ ಪೈ ಮುಂತಾದವರ ಸಾಹಿತ್ಯದ ಬಗ್ಗೆ ಹೇಳಿದ್ದಾರೆ. ಅಂತೆಯೇ ‘ಪತ್ರಿಕೆಗಳ ಪಾತ್ರ’ ಭಾಗದಲ್ಲಿ ಸಾಹಿತ್ಯದ ಕುರಿತಂತೆ ಇರುವ ಮಾಸಪತ್ರಿಕೆಗಳು ಕಾರ್ಯನಿರ್ವಹಿಸಿದ ರೀತಿಯನ್ನು ಹೇಳಲಾಗಿದೆ. ಶಿಶುಸಾಹಿತ್ಯ (೧೨ ವರ್ಷದವರೆಗಿನ ವಯಸ್ಸಿನ ಮಕ್ಕಳಿಗಾಗಿ) (ವಿ. ಗೋಷ್ಠಿ) – ಪಡುಕೋಣೆ ರಮಾನಂದ – ಇದರಲ್ಲಿ ಶಿಶುಸಾಹಿತ್ಯದಲ್ಲಿ ಕೆಲಸ ಮಾಡಿದಂಥ ಪಂಜೆ, ಎಂ.ಎನ್. ಕಾಮತ್, ಕಾರಂತ, ರಾಜರತ್ನಂ ಮುಂತಾದವರ ಕೃತಿಗಳನ್ನು ಚರ್ಚಿಸಲಾಗಿದೆ. ಕನ್ನಡದಲ್ಲಿ ಬಾಲ ಸಾಹಿತ್ಯ (೧೨ ವ. ವಯಸ್ಸಿನ ಮೇಲಿನವರಿಗೆ) (ವಿ. ಗೋ.) ಶ್ರೀ ಎಸ್. ಮುಕುಂದ ರಾವ್ ಶಿಶು ಸಾಹಿತ್ಯ ಹಾಗೂ ಬಾಲ ಸಾಹಿತ್ಯದ ವ್ಯತ್ಯಾಸಗಳನ್ನು ಹೇಳುತ್ತಲೇ ಪಂಜೆಯವರು ಕೋಟಿ ಚೆನ್ನಯರ ಪಾಡ್ದನವನ್ನು ಗದ್ಯ ರೂಪದಲ್ಲಿ ಬರೆದದ್ದನ್ನು ಹಾಗೂ ಅದೇ ಕಥಾವಸ್ತುವನ್ನಾಧಾರವಾಗಿಟ್ಟು ಕೆ.ಕೆ. ಪೂಜಾರಿಯವರು ಧಾರವಾಹಿಯ ರೂಪದಲ್ಲಿ ಬರೆದದ್ದರ ಕುರಿತು ಪ್ರಸ್ತಾಪಿಸಲಾಗಿದೆ.

ತುಳು – ಕನ್ನಡ – ಇಂಗ್ಲಿಷ್ ನಿಘಂಟು ಮಾದರಿ ಸಂಚಿಕೆ ೧೯೮೦

ಯು.ಪಿ. ಉಪಾಧ್ಯಾಯ (ಸ. ಸಂ.) ಕು.ಶೀ. ಹರಿದಾಸ ಭಟ್ಟ (ಪ್ರ. ಸಂ.) ತುಳು ನಿಘಂಟು : ಯೋಜನೆ ಮತ್ತು ನಿರ್ವಹಣೆ ೧೯೯೭ ತುಳು ನಿಘಂಟು ಸಂಪುಟ ೧ ಪೀಠಿಕೆ ೧೯೯೮ ಪ್ರ. ಸಂಪಾದಕ ಯು.ಪಿ. ಉಪಾಧ್ಯಾಯ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ.

ಮೊದಲ ಎರಡು ಪುಸ್ತಕಗಳಲ್ಲಿ ತುಳು ನಿಘಂಟು ಯೋಜನೆ ನಡೆದು ಬಂದ ದಾರಿ – ಹಿನ್ನೆಲೆ ಇತ್ಯಾದಿಗಳನ್ನು ವಿವರಿಸಲಾಗಿದೆ. ೩ನೇ ಪುಸ್ತಕದಲ್ಲಿ ತುಳು ಭಾಷೆಯ ಸಾಹಿತ್ಯದ ಹಿನ್ನೆಲೆಯನ್ನೂ ಸಂಕ್ಷಿಪ್ತವಾಗಿ ವಿವರಿಸಿ ಕ್ರೈಸ್ತ ಮಿಶನರಿಗಳು ತುಳುಭಾಷೆಯಲ್ಲಿ ಕೈಗೊಂಡ ಕಾರ್ಯಗಳ ವಿವರ ಮತ್ತು ಪ್ರಸ್ತುತ ತಯಾರಿಸಲಾಗುವ ನಿಘಂಟಿನ ವೈಶಿಷ್ಟ್ಯ ಇತ್ಯಾದಿಗಳ ಮಾಹಿತಿ ಹಾಗೂ ನಿಘಂಟಿನ ಉಲ್ಲೇಖಗಳ ರಚನಾಕ್ರಮದ ಬಗ್ಗೆಯೂ ತಿಳಿಸಿಕೊಡಲಾಗಿದೆ.

ಕರಾಜಿನ ತುಳು ನಿಘಂಟು ಮಾದರಿ ಸಂಪುಟ – ೨ ೧೯೮೫
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಸ್ನಾತಕೋತ್ತರ ಸಂಶೋಧನ ವಿಭಾಗ, ಉಡುಪಿ, ಕ್ರೌ. ೧/೪, ಪು. ೨೪+೮೦

ಸಿದ್ಧವಾಗುತ್ತಿರುವ ತುಳು – ಕನ್ನಡ – ಇಂಗ್ಲಿಷ್ ನಿಘಂಟಿನಲ್ಲಿ ಸೇರಲಿರುವ ಶಬ್ದಗಳಿಗೆ ಸಂಬಂಧಿಸಿದ ನಮೂದುಗಳನ್ನು ಆಕಾರಾದಿಯಾಗಿ ಜೋಡಿಸಿ ತಯಾರಿಸಿದ ಈ ಮಾದರಿ ಸಂಚಿಕೆಯನ್ನು ವಿದ್ವಾಂಸರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.

ಗುಜರಾತ್ ಬಿಲ್ಲವರ ಪರಿಚಯಾತ್ಮಕ ಡೈರೆಕ್ಟರಿ ‘ವೈದಶ್ರೀ’ ೧೧.೧೧.೨೦೦೦
ಲೇಖನ : ‘ಕೋಟಿ ಚೆನ್ನಯ ಸಾಂಸ್ಕೃತಿಕ ವೀರರು’ – ವಾಮನ ನಂದಾವರ.

ಆರಂಭದಲ್ಲಿ ‘ಕೋಟಿ ಚೆನ್ನಯ’ ಪಾಡ್ದನದ ಕಥೆಯನ್ನು ಹೇಳಿ ವಿಶ್ಲೇಷಣೆ ಮಾಡಲಾಗಿದೆ. ನಂತರ ಈ ವೀರರ ಆರಾಧನೆಯ ಸ್ವರೂಪ, ಕೋಟಿ ಚೆನ್ನಯ ಪಾಡ್ದನವನ್ನು ಹಾಡಲಾಗುವ ಸಂದರ್ಭಗಳು, ಗರಡಿಗಳು ಇತ್ಯಾದಿಗಳ ಮಾಹಿತಿ – ವಿಶ್ಲೇಷಣೆಯೂ ಇಲ್ಲಿದೆ.

ತುಳು ಸಂಘ ಬರೋಡ ತುಳು ಡೈರೆಕ್ಟರಿ ಲೇಖನಗಳು : ಉಳ್ಳಾಲದ ರಾಣಿ ಅಬ್ಬಕ್ಕ
ಡಾ. ಸೂರ್ಯನಾಥ ಕಾಮತ್ (ಪು. ೮-೧೫). The Dynamics of Bhuta Worship – ಕೆ. ಚಿನ್ನಪ್ಪ ಗೌಡ (ಪು. ೧೬+೨೫), Koti Chennaya : A Tulu folk epic – ಡಾ. ವಾಮನ ನಂದಾವರ (ಪು. ೨೬ – ೩೬)

Finnish – India Oral Epics Project – Siri ಸಿರಿ ಪುರಾಣದ ಪೂರ್ವಾಪರ ೧೯೯೯, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ, ಪು. ೩೨, ಡೆ. ೧/೮

ಸಿರಿ ಮಹಾಕಾವ್ಯ ಯೋಜನೆಯಲ್ಲಿ ಕೆಲಸ ಮಾಡಿದಂಥ ವಿದೇಶೀ ಹಾಗೂ ದೇಶೀ ಜಾನಪದ ವಿದ್ವಾಂಸರು ತಮ್ಮ ಯೋಜನೆಯ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಪ್ರಾರಂಭದಲ್ಲಿ ಲೌರಿ ಹಾಂಕೊ ಅವರು ಜಾನಪದದ ಉಪಯುಕ್ತತೆಯ ಬಗ್ಗೆ ಹೇಳಿದ್ದಾರೆ. ೨ನೇ ಲೇಖನ ಮಹಾಕಾವ್ಯ ಹಾಡುಗಾರನ ಶೋಧನೆ (ಮೂಲ:ಚಿನ್ನಪ್ಪ ಗೌಡ, ಅನು. : ಎನ್.ಟಿ. ಭಟ್) ೩ನೇ ಲೇಖನ – ಸಿರಿ ಮಹಾಕಾವ್ಯ – ಅನುಭವಗಳ ಸಿರಿ ಸಂಚಯ. ಕೆ. ಚಿನ್ನಪ್ಪ ಗೌಡ. ೪ನೇ ಲೇಖನ – ತುಳುನಾಡಿನ ಹೋಮರ್ ಗೋಪಾಲ ನಾಯ್ಕರು – ಬಿ.ಎ. ವಿವೇಕ ರೈ

South Kanara ದಕ್ಷಿಣ ಕನ್ನಡ Designed & produced by Visual Communication Bangalore.

ದ.ಕ.ದ ಪ್ರಸಿದ್ಧ ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳು, ಕಲೆ, ಸಂಪ್ರದಾಯ, ಆರಾಧನೆ, ಕ್ರೀಡೆ, ಆಹಾರ ಇತ್ಯಾದಿಗಳ ಕುರಿತು ಮಾಹಿತಿ ನೀಡುವ ಕೈಪಿಡಿ.

ಇಂಗ್ಲಿಷ್

Das B. K., 1981
Census of India
Paper 5 of 1984 Series 9 Karnataka Ethnographic study of
Malekudiya & Yerava.

ಕರ್ನಾಟಕದ ಬುಡಕಟ್ಟು ಜನಾಂಗಕ್ಕೆ ಸೇರಿದ ಮಲೆಕುಡಿಯ ಹಾಗೂ ಎರವ ಜನಾಂಗಗಳ ಅಧ್ಯಯನವಿದೆ.

Peter J. Claus, 1987
Future Research in Tulu Culture Academy Silver Jubilee
Lecture – 4
Academy of General Education Manipal, 1/8, P. 24

ಈ ಉಪನ್ಯಾಸದಲ್ಲಿ ಕ್ಲಾಸ್ ಅವರು ತುಳು ಪಾಡ್ದನ ಪರಂಪರೆಯ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡುತ್ತಾರೆ ಮತ್ತು ತುಳುವ ಸಂಸ್ಕೃತಿಯ ಕುರಿತು ಸಂಶೋಧನೆ ಮಾಡುವ ಯುವ ಸಂಶೋಧಕರಿಗೆ ಅಗತ್ಯವಾದಂಥ ಸೂಚನೆಗಳನ್ನು ನೀಡಿದ್ದಾರೆ.

Ramachandra Pai M. Ananth Pai M.G. Tukaram S. Pai
Sowkar M. Baba Pai Dditorial Board Members the Sowcar
Bappai Family (family history)
Published by A committee 1972 1/4

ಮಂಜೇಶ್ವರ ಗೋವಿಂದ ಪೈಗಳ ಕೌಟುಂಬಿಕ ಚರಿತ್ರೆಯನ್ನು ಇದರಲ್ಲಿ ದಾಖಲುಗೊಳಿಸಲಾಗಿದೆ.

Thirumalesh Bhat N. Dr. (Ed.), 1998, Siri – Sampada – 2
Regional Resources Centre for Folk Performing Arts. Pages
4+92Rx.

ಇದು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರವು ಅಸ್ತಿತ್ವಕ್ಕೆ ಬಂದ ೧೫ ವರ್ಷಗಳಲ್ಲಿ ಕೈಗೊಂಡ ಬೇರೆ ಬೇರೆ ಚಟುವಟಿಕೆಗಳು – ಹಬ್ಬಗಳು, ವಿಚಾರಗೋಷ್ಠಿಗಳು, ಸಂಶೋಧನೆಗಳು, ಜಾನಪದ ಅಧ್ಯಯನಗಳು, ಪ್ರಕಟಣೆಗಳು ಇತ್ಯಾದಿಗಳ ಕುರಿತ ಸ್ಥಳ ನೋಟವನ್ನು ನೀಡುತ್ತದೆ. ಅದೇ ರೀತಿ ಇದರಲ್ಲಿ ನೀಡಲಾಗಿರುವ ಅನೇಕ ಛಾಯಾಚಿತ್ರಗಳು ಈ ಕೇಂದ್ರವು ಕೈಗೊಂಡ ವಿವಿಧ ಚಟುವಟಿಕೆಗಳು, ಭೇಟಿಯತ್ತ ವಿವಿಧ ಪ್ರದೇಶಗಳು, ಅವುಗಳಿಗೆ ಸಂಬಂಧಿಸಿದ ಕಲೆ, ಆಚರಣೆ, ಹಬ್ಬ ಇತ್ಯಾದಿಗಳನ್ನು ಬಿಂಬಿಸುತ್ತವೆ.

Udupi A pilgrim Centre The Canara Industrial & Banking
Syndicate Ltd.

ಪ್ರವಾಸಿಗರಿಗೆ ಮಾಹಿತಿ ನೀಡುವ ಪುಸ್ತಕ.

140 Pictures of South India
D. 1/8 the Basel Mission Book Depot, Mangalore.

ದ.ಕ. ಜಿಲ್ಲೆಯಿಂದ ಹಿಡಿದು ದಕ್ಷಿಣ ಭಾರತದವರೆಗಿನ ಜನಜೀವನ, ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಸ್ಥಳಗಳು, ಪ್ರವಾಸಿ ತಾಣಗಳನ್ನು ಬಿಂಬಿಸುವ ೧೪೦ ಛಾಯಾಚಿತ್ರಗಳಿವೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಅವುಗಳ ಹೆಸರುಗಳನ್ನು ನೀಡಲಾಗಿದೆ.

A Discussion with Prof. Lauri Honko On Transcription
Methods – A Disccussion
1995
C 1/8 Pages: 31. Archives Resource Community, R.R.C. Udupi.

ಜನವರಿ ೧೯೯೫ರಲ್ಲಿ ಉಡುಪಿಯ ಆರ್.ಆರ್.ಸಿ.ಯು ಪ್ರೊ. ಲೌರಿ ಹಾಂಕೊರವರೊಂದಿಗೆ ಪ್ರತಿ ಮಾಡುವುದರ ಕುರಿತಂತೆ ಸಂವಾದ ವೇರ್ಪಡಿಸಿತ್ತು. ಈ ಪ್ರಕಟಣೆಯ ಆ ಸಂವಾದದ ಪ್ರತೀ ಮಾತುಗಳ ವರದಿಯಾಗಿದೆ.

Rangasthala – 3 Third Annual Report – 1985 – 85
R.R.C. Udupi, C, 1/4,

ಜಾನಪದ ಕಲೆಗಳ ಕುರಿತ ಮಾಹಿತಿಗಳು, ಫೋಟೋಗಳು ಇವೆ.

Rangasthal – 5 : Decennial Number Siri – Sampada
R.R.C. Udupi.

ಯಕ್ಷಗಾನ, ಜಾನಪದ ಕಥೆ, ದೇವಾಲಯದ ಉತ್ಸವಗಳು, ಮೈಲಾರಲಿಂಗ ಪರಂಪರೆ, ಮಹಾಕಾವ್ಯ ಜುಂಜಪ್ಪ, ಯಕ್ಷಗಾನ ಪದಕೋಶ, ಕೈಗಾರಿಕಾ ಜಾನಪದ, ಆರ್.ಆರ್.ಸಿ. ಪ್ರಕಟಿಸಿದ ಪುಸ್ತಕಗಳು, ಅದು ಹಮ್ಮಿಕೊಂಡ ಕಾರ್ಯ – ಯೋಜನೆಗಳ ಪರಿಚಯ ನೀಡುವ ಲೇಖನಗಳೂ ಹಾಗೂ ಜಾನಪದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳೂ ಇವೆ.

The making of a Tulu Paddana : Heidrun Bruckner (Copy for Peter J. Claus)

ದ. ಭಾರತದ ಜನಪದ ಧರ್ಮಾಚರಣೆಗೆ ಸಂಬಂಧಿಸಿದ ಮೌಖಿಕ ಪರಂಪರೆಗೆ ಸಂಬಂಧಿಸಿದ ಲೇಖನ ಇದಾಗಿದೆ. ‘ಪಾಡ್ದನ’ ಶಬ್ದ ನಿಷ್ಪತ್ತಿಯ ಕುರಿತು ಸಂಕ್ಷಿಪ್ತವಾಗಿ ಹೇಳಿ ಜುಮಾದಿ ಪಾಡ್ದನದಲ್ಲಿನ ಕನ್ನಲ್ಲಾಯ ಭೂತದ ಪುರಾಣ – ಐತಿಹ್ಯದ ಕುರಿತ ವಿಶ್ಲೇಷಣೆ ಮಾಡಲಾಗಿದೆ. (ಬೇರೆ ಬೇರೆ ಪಠ್ಯಗಳನ್ನಿಟ್ಟುಕೊಂಡು).