ಒಂದು ಲೆಕ್ಕಾಚಾರದಂತೆ ಬಡಗು ಭದ್ರಗಿರಿ, ತೆಂಕು ಚಂದ್ರಗಿರಿ, ಮೂಡುಘಟ್ಟ, ಪಡುಗಡಲು ಈ ನಾಲ್ಕು ಭೌಗೋಳಿಕ ಗಡಿಗಳ ನಡುಭಾಗ ತುಳುನಾಡೆನಿಸಿಕೊಳ್ಳುತ್ತದೆ. ಬಹು ಪ್ರಾಚೀನ ಕಾಲದಿಂದಲೂ ತುಳುನಾಡಿಗೆ ಅದರದ್ದೇ ಆದ ಭಾಷೆಯೊಂದಿತ್ತು. ಅದು ಕ್ರಿಸ್ತಪೂರ್ವದಲ್ಲೇ ಮಧ್ಯದ್ರಾವಿಡ ಭಾಷೆಯಿಂದ ಪ್ರತ್ಯೇಕವಾಗಿ ಈ ನೆಲದಲ್ಲಿ ಬೆಳೆದು ಬಂತು. ತುಳುನಾಡಿಗೆ ಅದರದ್ದೇ ಆದ ಇತಿಹಾಸವಿದ್ದ ಹಾಗೆ ತುಳು ಭಾಷೆಗೂ ಅದರದ್ದೇ ಆದ ಇತಿಹಾಸವಿದೆ. ಈ ಭಾಷೆ ಅನೇಕ ವೈಶಿಷ್ಟ್ಯದಿಂದಲೇ ಅದರಲ್ಲಿ ವಿಪುಲವಾದ ಸಾಹಿತ್ಯವೂ ಸೃಷ್ಟಿಯಾಗಲು ಕಾರಣವಾಯಿತು. ಲಿಖಿತ ಪರಂಪರೆಯ ಸಾಹಿತ್ಯಕ್ಕಿಂತಲೂ ಶ್ರೀಮಂತವಾದ ಮತ್ತು ದಟ್ಟವಾದ ಮೌಖಿಕ ಸಾಹಿತ್ಯ ತುಳು ಭಾಷೆಯಲ್ಲಿದೆ. ತುಳುವರ ಮಾತೃಭಾಷೆ ತುಳುವಿರುವ ಹಾಗೆ ಈ ಪ್ರದೇಶದ ವ್ಯಾವಹಾರಿಕ ಭಾಷೆಯೂ ತುಳುವಾಗಿದೆ.

ತುಳುನಾಡು ಯಾವುದು? ಅದು ಎಲ್ಲಿಂದ ಎಲ್ಲಿಯವರೆಗೆ ವ್ಯಾಪಿಸಿತ್ತು? ತುಳುವರು ಯಾರು? ಅವರ ಮೂಲ ಎಲ್ಲಿ? ಎನ್ನುವ ಕುರಿತು ಜಿಜ್ಞಾಸೆ ಅಧ್ಯಯನಗಳು ಒಂದಷ್ಟು ಆದದ್ದಿದೆ. ಅದೇ ಕಾಲಕ್ಕೆ ತುಳುಭಾಷೆಯ ಬಗೆಗೆ ತುಳುನಾಡಿನ ಜನಾಂಗಗಳ ಬಗೆಗೆ, ಈ ಜನರ ಸಾಂಸ್ಕೃತಿಕ ಪರಂಪರೆಯ ಬಗೆಗೆ ಇಲ್ಲಿಗೆ ಆಗಮಿಸಿದ ವಿದೇಶೀ ವಿದ್ವಾಂಸರು ಸಾಕಷ್ಟು ಅಧ್ಯಯನ ನಡೆಸಿದವರಿದ್ದಾರೆ. ಒಂದು ಅರ್ಥದಲ್ಲಿ ತುಳು ಭಾಷೆ, ಸಂಸ್ಕೃತಿ, ಸಾಹಿತ್ಯದ ನೆಲೆ ಬೆಲೆಯನ್ನು ಗುರುತಿಸಿ ತುಳುವರಿಗೆ ಜಾಗೃತಿ ಮೂಡಿಸಿದವರೂ ಅವರೇ. ಕಳೆದ ೨೦ನೆಯ ಶತಮಾನದಲ್ಲಿ ಆ ಜಾಗೃತಿ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರಂತಹವರಿಂದ ಹೊಸ ದಿಕ್ಕನ್ನು ಪಡೆದುಕೊಂಡದ್ದುಂಟು. ಹೊಸ ಚಳುವಳಿಯ ಹಾದಿಯನ್ನು ತುಳಿದದ್ದುಂಟು. ಬಾಸೆಲ್ ಮಿಶನ್ ವಿದ್ವಾಂಸರಿಂದ ತುಳು ಭಾಷೆಯ ಅಧ್ಯಯನ, ಮೌಖಿಕ ಸಾಹಿತ್ಯ ಸಂಗ್ರಹ ಮತ್ತು ಪ್ರಕಟಣೆಯ ಕಾರ್ಯ ಒಂದೆಡೆ ನಡೆದರೆ ಅದಕ್ಕಿಂತಲೂ ಪೂರ್ವದಲ್ಲೇ ಸುಮಾರು ಐನೂರು ವರ್ಷಗಳ ಹಿಂದೆಯೇ ತುಳು ಭಾಷೆಯಲ್ಲಿ ತುಳು ಭಾಗವತೊ, ತುಳು ಮಹಾಭಾರತ, ಕಾವೇರಿ, ದೇವಿ ಮಾಹತ್ಮೆ ಮೊದಲಾದ ಗ್ರಂಥಗಳ ರಚನೆಯಾದದ್ದುಂಟು. ಕಳೆದ ಶತಮಾನದಲ್ಲಿ ಸೃಜನಶೀಲ ಸಾಹಿತ್ಯ ರಚನೆಯ ಕೆಲಸವೂ ನಡೆದದ್ದುಂಟು. ‌ಇತ್ತೀಚೆಗಿನ ದಶಕಗಳಲ್ಲಿ ಮಹತ್ತರವಾದ ಮತ್ತು ಗಂಭೀರವಾದ ಅಧ್ಯಯನ ಸಂಶೋಧನೆಗಳು ಅಕಾಡೆಮಿಕ್ ಆಗಿ ನಡೆದಿವೆ. ತುಳುವರಲ್ಲಿ ತುಳು ಭಾಷಾ ಸಾಂಸ್ಕೃತಿಕ ಅನನ್ಯತೆಯ ಹುಡುಕಾಟದ ಪ್ರೇರಣೆ ಮೂಡಿದ ಹಾಗೆಯೇ ಆ ಸಾಧನೆಯ ಕೆಲಸವೂ ಸಾಗಿರುವುದುಂಟು. ತುಳು ಒಂದು ಉಪಭಾಷೆಯಲ್ಲ. ಸ್ವತಂತ್ರ ಭಾಷೆ ಮಾತ್ರವಲ್ಲದೆ ದ್ರಾವಿಡ ಭಾಷಾ ವರ್ಗಗಳಲ್ಲೇ ಅತ್ಯಂತ ಪ್ರಾಚೀನವಾದ ಮತ್ತು ಬೆಳವಣಿಗೆ ಹೊಂದಿದ ಭಾಷೆ ಎನ್ನುವುದನ್ನು ರಾಬರ್ಟ್‌ಕಾಲ್ಡ್‌ವೆಲ್ ಎನ್ನುವ ಪಾಶ್ಚಾತ್ಯ ಭಾಷಾ ವಿಜ್ಞಾನಿ ಅಧ್ಯಯನದ ಮೂಲಕ ಸಾಬೀತಪಡಿಸಿರುವುದುಂಟು.

ಈ ಹಿನ್ನೆಲೆಯಿಂದ ನೋಡಿದರೆ ತುಳು ಭಾಷಾ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಬೇಕಾದ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದು ಸರಕಾರದ ಆದ್ಯ ಕರ್ತವ್ಯ ಕೂಡ ಹೌದು. ಇದನ್ನು ಹೌದಾಗಿಸುವ ಕೆಲಸವನ್ನು ಮಾಡಿ ತೋರಿಸಿದವರೆಂದರೆ ಮಾನ್ಯ ಎಂ. ವೀರಪ್ಪ ಮೊಯಿಲಿಯವರು. ಕರ್ನಾಟಕ ಸರಕಾರದ ಮುಖ್ಯಮಂತ್ರಿಯಾಗಿದ್ದಾಗ ಅಂತಹ ಅವಕಾಶವೊಂದನ್ನು ಅವರು ಕಲ್ಪಿಸಿಕೊಟ್ಟವರಿದ್ದಾರೆ. ಈ ಅವಕಾಶವನ್ನು ಕೇವಲ ತುಳುಭಾಷೆಗಷ್ಟೆ ಅವರು ಸೀಮಿತಗೊಳಿಸಿಲ್ಲ. ಏಕಕಾಲಕ್ಕೆ ತುಳು, ಕೊಡವ ಹಾಗೂ ಕೊಂಕಣಿ ಅಕಾಡೆಮಿಗಳ ರಚನೆ ಮೊಯಿಲಿಯವರು ತೆಗೆದುಕೊಂಡ ಕ್ರಮವಂತೂ ತುಳುವರ ವಿಶಾಲ ಮನೋಭಾವವನ್ನೇ ಪ್ರಕಟಿಸಿದೆ. ಹಾಗೆ ನೋಡಿದರೆ ೨೦ ಏಪ್ರಿಲ್ ೧೯೯೪ ಒಂದು ಚಾರಿತ್ರಿಕ ದಾಖಲೆಯನ್ನೇ ನಿರ್ಮಿಸಿದೆ. ನಮ್ಮ ಅಕಾಡೆಮಿಗಳೆಲ್ಲ ಬೆಂಗಳೂರಿನಂತಹ ರಾಜಧಾನಿಯಲ್ಲೇ ಬಿಡುಬಿಡಬೇಕೆನ್ನುವ ಪರಂಪರೆಯನ್ನು ಬದಲಿಸಿ ಅವು ಎಲ್ಲಿ ಇದ್ದರೆ ಅನುಕೂಲ ಎನ್ನುವ ತಾತ್ತ್ವಿಕ ಚಿಂತನೆಗಿಂತಲೂ ವಾಸ್ತವಕ್ಕೆ ಒತ್ತು ನೀಡಿ ಅವುಗಳ ಕಛೇರಿಗಳನ್ನು ಆಯಾ ಪ್ರದೇಶಗಳಲ್ಲೇ ತೆರೆಯುವಂತಹ ಮತ್ತು ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸುವಂತಹ ಆದೇಶ ಹೊರಡಿಸಿರುವುದು ಮೊಯಿಲಿ ಸರಕಾರದ ಒಂದು ಕಾಂತ್ರಿಕಾರಕ ಹೆಜ್ಜೆ.

ಅಖಿಲ ಭಾರತ ಒಕ್ಕೂಟ (ರಿ.) ಕುಡ್ಲ ಸಂಘಟಿಸಿದ ಮತ್ತು ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ ವಿಶ್ವ ತುಳು ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದಂತೆಯೇ ಈ ಮೂರು ಅಕಾಡೆಮಿಗಳ ರಚನೆಯ ಪ್ರಸ್ತಾಪವನ್ನೂ ತಲಾ ಹತ್ತು ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡುತ್ತಾ ಇಂತಹ ಒಂದು ಸಿಹಿ ಸುದ್ದಿಯನ್ನು ಮಾನ್ಯ ಮೊಯಿಲಿಯವರು ಸಾರಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಅಧ್ಯಕ್ಷರಾದ, ಖ್ಯಾತ ಜಾನಪದ ಸಂಶೋಧಕ ಮತ್ತು ವಿದ್ವಾಂಸ ಬಿ.ಎ. ವಿವೇಕ ರೈ ಅವರನ್ನು ಅದರ ಮೊದಲ ಅಧ್ಯಕ್ಷರನ್ನಾಗಿ ಅದೇ ಹೊತ್ತು ನೇಮಿಸಿಯೇ ಬಿಟ್ಟರು.

ಈ ಕಾಲಕ್ಕಾಗಲೀ ಉಡುಪಿಯ ಗೋವಿಂದ ಪೈ ಸಂಶೋಧನೆ ಕೇಂದ್ರ ಮತ್ತು ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ತುಳುಕೂಟಗಳ ಒಕ್ಕೂಟ ಮೊದಲಾದ ಸಂಘಟನೆಗಳ ನೆಲೆಗಳಲ್ಲೂ, ತುಳು ಸಾಹಿತ್ಯ, ಸಂಶೋಧಕರ ವೈಯಕ್ತಿಕ ನೆಲೆಗಳಲ್ಲಿಯೂ ಕರ್ನಾಟಕದ ಈ ಕರಾವಳಿ ಜಿಲ್ಲೆಯ ಜಾನಪದ ಜಗತ್ತನ್ನು ತೆರೆದು ತೋರಿಸುವ ಒಂದಷ್ಟು ಕೆಲಸ ಬೇರೆ ಬೇರೆ ನಿಟ್ಟಿನಲ್ಲಿ ನಡೆದಿತ್ತು. ಸೃಜನಶೀಲ ಸಾಹಿತ್ಯ ರಚನೆ, ಜನಪದ ಸಾಹಿತ್ಯದ ವಿವಿಧ ಪ್ರಕಾರಗಳ ಅದರಲ್ಲೂ ಪಾಡ್ದನದಂತಹ ಮೌಖಿಕ ಕಾವ್ಯ ಸಂಗ್ರಹ, ದಾಖಲಾತಿ ಮತ್ತು ಅಧ್ಯಯನ, ತುಳು ನಿಘಂಟು ಯೋಜನೆ, ಭೌತಿಕ ಜಾನಪದ ಸಂಗ್ರಹದಂತಹ ಕಾರ್ಯಗಳು ನಡೆದಿರುವುದುಂಟು.

ಕರ್ನಾಟಕ ಸರಕಾರದ ಮುಖ್ಯಮಂತ್ರಿಯಾಗಿದ್ದ ಎಂ. ವೀರಪ್ಪ ಮೊಯಿಲಿಯವರು ೧೯೯೩-೯೪ರ ತಮ್ಮ ಆಯವ್ಯಯ ಭಾಷಣದಲ್ಲಿ ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳ ಅಕಾಡೆಮಿಗಳನ್ನು ಸ್ಥಾಪಿಸುವ ಕುರಿತು ಮೊತ್ತಮೊದಲಾಗಿ ಪ್ರಸ್ತಾಪಿಸಿದರು. ಅವರೇ ಮತ್ತೆ ೧೯೯೪-೯೫ರ ಆಯವ್ಯಯ ಭಾಷಣದಲ್ಲಿ ಈ ವಿಷಯವನ್ನು ಪುನರುಚ್ಚರಿಸಿ ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳಿಗೆ ಪ್ರತ್ಯೇಕವಾಗಿ ಮೂರು ಅಕಾಡೆಮಿಗಳನ್ನು ಸ್ಥಾಪಿಸುವ ಕರ್ನಾಟಕ ಸರಕಾರದ ನಿರ್ಧಾರವನ್ನು ಘೋಷಿಸಿದರು. ಇದರ ಮುಂದುವರಿಕೆಗಾಗಿ ಎಪ್ರಿಲ್ ೨೨, ೧೯೯೪ರಂದು ಮಂಗಳೂರಿನಲ್ಲಿ ಜರಗಿದ ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿದರು ಮತ್ತು ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕರ್ನಾಟಕ ಸರಕಾರದ ಆದೇಶ ಸಂಖ್ಯೆ : ಸಂಕ ೧೯ ಕರಅ : ೯೪ (೧) ಬೆಂಗಳೂರು ದಿನಾಂಕ : ೨೦ನೇ ಎಪ್ರಿಲ್ ೧೯೯೪ ಇದರ ಪ್ರಕಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ಬಿ.ಎ. ವಿವೇಕ ರೈ ಅವರೊಂದಿಗೆ ೧೧ ಜನ ಸದಸ್ಯರು ನೇಮಕಗೊಂಡಿರುತ್ತಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟಾರ್ ಆಗಿ ಜೂನ್ ೧೯೯೪ರಲ್ಲಿ ಕೆ. ದೇವರಾಜ್, ಉಪನ್ಯಾಸಕರು, ಎಸ್‌.ಡಿ.ಎಂ. ಬಿಸಿನೆಸ್

ಕರ್ನಾಟಕ ಸರಕಾರ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

ಬಿ.ಎ. ವಿವೇಕ ರೈ
(೧೯೯೪)
ಬಿ.ಎ. ವಿವೇಕ ರೈ
(೧೯೯೫-೯೮)
ಅ.ಬಾಲಕೃಷ್ಣ ಶೆಟ್ಟಿ ಪೊಳಲಿ
(೧೯೯೮-೨೦೦೧)
ವಾಮನ ನಂದಾವರ
(೨೦೦೧-೦೪)
ಯಮ್.ಕೆ.ಸೀತಾರಾಮ ಕುಲಾಲ್
(೨೦೦೫ರಿಂದ)
ಸದಸ್ಯರು ಸದಸ್ಯರು ಸದಸ್ಯರು ಸದಸ್ಯರು ಸದಸ್ಯರು
ಅಮೃತ ಸೋಮೇಶ್ವರ ಅಮೃತ ಸೋಮೇಶ್ವರ ವಾಮನ ನಂದಾವರ ಪಾಲ್ತಾಡಿ ರಾಮಕೃಷ್ಣ ಆಚಾರ್ ಮಚ್ಚೇಂದ್ರನಾಥ ಪಾಂಡೇಶ್ವರ
ಯು.ಪಿ. ಉಪಾಧ್ಯಾಯ ಕುದ್ಕಾಡಿ ವಿಶ್ವನಾಥ ರೈ ಎಂ. ಜಾನಕಿ ಬ್ರಹ್ಮಾವರ ಗಾಯತ್ರಿ ನಾವಡ ಸರೋಜಿನಿ ಶೆಟ್ಟಿ
ಎಸ್.ಕೆ. ಅಮೀನ್ ಯು.ಪಿ. ಉಪಾಧ್ಯಾಯ ಡಿ.ಕೆ.ಚೌಟ ಕೆ.ಚಿನ್ನಪ್ಪ ಗೌಡ ಗಣೇಶ ಅಮೀನ್ ಸಂಕಮಾರ್
ಕೆ.ಎನ್.ಟೈಲರ್ ಪಿ.ಎಸ್.ರಾವ್ ಯಶವಂತ ಬೋಳೂರು ಬೆಳ್ಳಿಪ್ಪಾಡಿ ಸತೀಶ ರೈ ಶಂಕರ ಖಂಡೇರಿ
ಕುದ್ಕಾಡಿ ವಿಶ್ವನಾಥ ರೈ ಸೀತಾರಾಮ ಕೆದಿಲಾಯ ಅಭಯಕುಮಾರ್ ಯಜ್ಞಾವತಿ ಕೇಶವ ಕಂಗೆನ್ ಶ್ರೀನಿವಾಸ ಮಂಕುಡೆ
ಅನಂತರಾಮ ಬಂಗಾಡಿ ಕೆ. ಲೀಲಾವತಿ ಎಂ.ಎಸ್.ಇಬ್ರಾಹಿಂ ಮನೋಹರ ಪ್ರಸಾದ್ ಗಣನಾಥ ಶೆಟ್ಟಿ, ಎಕ್ಕಾರ್
ವೆಂಕಟರಾಜ ವಾಮನ ನಂದಾವರ ಕ್ಯಾಥರಿನ್ ರೋಡ್ರಿಗಸ್ ಮುದ್ದು ಮೂಡುಬೆಳ್ಳೆ ಜಯಂತಿ ಎಸ್.ಬಂಗೇರ
ಪುಣಿಂಚತ್ತಾಯ        
ಮಾಧವ ಕುಲಾಲ್ ಕೆ.ಗುಣಪಾಲ ಕಡಂಬ ಕೆ.ಪಿ.ಪುತ್ತೂರಾಯ ಮಂ. ಆನಂದ ಶೆಟ್ಟಿ ಗಿಡಿಕೆರೆ ರಾಮಕ್ಕ ಮುಗೇರ್ತಿ
ಯಶವಂತಿ ಸುವರ್ಣ ಅ.ಬಾಲಕೃಷ್ಣ ಶೆಟ್ಟಿ ಪೊಳಲಿ ಕೆ.ಟಿ.ಗಟ್ಟಿ ಸುಶೀಲಾ ಪಿ. ಉಪಾಧ್ಯಾಯ ಕೋಳ್ಯೂರು ರಾಮಚಂದ್ರ ರಾವ್
ಎಸ್.ಆರ್. ಹೆಗ್ಡೆ ಮಾಧವ ಕುಲಾಲ್ ದಾಮೋದರ ನಿಸರ್ಗ ಸದಾನಂದ ಸುವರ್ಣ ಚಿದಂಬರ ಬೈಕಂಪಾಡಿ
ಮಿಜಾರು ಅಣ್ಣಪ್ಪ ವೆಂಕಟರಾಜ ಪುಣಿಂಚತ್ತಾಯ ಸುನೀತಾ ಎಂ. ಶೆಟ್ಟಿ ವಿ.ಜಿ. ಪಾಲ್ ಕಬ್ಬಿನಾಲೆ ವಸಂತ ಭಾರದ್ವಾಜ್
    ಮುನಿರಾಜ ರೆಂಜಾಳ ನಾ. ವುಜಿರೆ ರಾಮಚಂದರ್ ಬೈಕಂಪಾಡಿ
    ಅ. ವಿಠಲ ಕಬಕ ಕೊಯಿರಾ ಎನ್. ಬಾಳೆಪುಣಿ ಬಿ.ಎನ್. ಹರೀಶ್ ಬೋಳೂರು

ರಿಜಿಸ್ಟ್ರಾರುಗಳು

ಕೆ. ದೇವರಾಜ್, ಬಿ.ಜಿ. ನಾಯ್ಕ, ಪಾಲ್ತಾಡಿ ರಾಮಕೃಷ್ಣ ಆಚಾರ್, ಎಂ.ಎಸ್.ಚಂದ್ರಪ್ಪ ಎಸ್.ಎಚ್. ಶಿವರುದ್ರಪ್ಪ ದುಗ್ಗಪ್ಪ ಕಜೆಕಾರ್ ಮೇನೆಜ್‌ಮೆಂಟ್ ಕಾಲೇಜು, ಮಂಗಳೂರು ಇವರನ್ನು ನೇಮಕ ಮಾಡಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೊದಲ ಸರ್ವ ಸದಸ್ಯರ ಸಭೆ ೧೭ ಜುಲಾಯಿ ೧೯೯೪ರಂದು ನಡೆದು, ಅಕಾಡೆಮಿಯ ಧ್ಯೇಯ, ಉದ್ದೇಶಗಳನ್ನು ನಿರ್ಧರಿಸಿ ೧೯೯೪-೯೫ನೆಯ ಸಾಲಿನ ಆಯವ್ಯಯವನ್ನು ಅಂಗೀಕರಿಸಲಾಯಿತು. ಇದರೊಂದಿಗೆ ಅಕಾಡೆಮಿಯ ಉಪನಿಯಮಾವಳಿಗಳ ರಚನೆ, ಸ್ಥಾಯಿ ಸಮಿತಿಯ ರಚನೆ ಮತ್ತು ಉಪಸಮಿತಿಗಳ ರಚನೆಯನ್ನು ಮಾಡಲಾಯಿತು. ಹೀಗೆ ಒಂದು ಸ್ಪಷ್ಟವಾದ ಮತ್ತು ಸಮಗ್ರವಾದ ಪೂರ್ವ ಯೋಜನೆಯ ಸ್ವರೂಪದ ಸಿದ್ಧತೆಯೊಂದಿಗೆ ರಚನಾತ್ಮಕ ಕಾರ್ಯಕ್ರಮಗಳು ನಡೆಯಲು ಮೊದಲುಗೊಂಡವು.

ಅಕಾಡೆಮಿಯ ಧ್ಯೇಯೋದ್ದೇಶಗಳು

೧. ತುಳು ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು. ಈ ಉದ್ದೇಶಕ್ಕಾಗಿ ಮಾಹಿತಿ ಕೇಂದ್ರ ಮತ್ತು ಗ್ರಂಥಾಲಯವನ್ನು ಸ್ಥಾಪಿಸುವುದು. ತುಳು ಸಾಹಿತ್ಯ ವೃದ್ಧಿಗಾಗಿ ಬೇರೆ ಬೇರೆ ಕಡೆಗಳಲ್ಲಿ ಇತರ ಅಕಾಡೆಮಿಗಳೊಂದಿಗೆ ಅಥವಾ ಸಂಘ ಸಂಸ್ಥೆಗಳೊಂದಿಗೆ ಸಹಕರಿಸುವುದು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ವಿಜೇತರು

೧೯೯೫

೧. ಮಂದಾರ ಕೇಶವ ಭಟ್, ಸಾಹಿತ್ಯ

೨. ಕೆದಂಬಾಡಿ ಜತ್ತಪ್ಪ ರೈ, ಸಾಹಿತ್ಯ

೧೯೯೬

೩. ಕೆಲಿಂಜ ಸೀತಾರಾಮ ಆಳ್ವ, ಸಾಹಿತ್ಯ

೪. ಕು.ಶಿ. ಹರಿದಾಸ ಭಟ್ಟ, ಸಂಶೋಧನೆ

೫. ಬಿ. ರಾಮ ಕಿರೋಡಿಯನ್, ನಾಟಕ, ಚಲನಚಿತ್ರ

೬. ಮಿಜಾರ್ ಅಣ್ಣಪ್ಪ, ಯಕ್ಷಗಾನ

೧೯೯೭

೭. ಸುನೀತಾ ಎಂ. ಶೆಟ್ಟಿ

೮. ಸೂರ್ಯನಾಥ ಕಾಮತ್

೯. ಕೆ.ಎನ್. ಟೈಲರ್

೧೦. ಮಲ್ಪೆ ಶಂಕರನಾರಾಯಣ ಸಾಮಗ

೧೯೯೮

೧೧. ಅಮೃತ ಸೋಮೇಶ್ವರ, ಸಾಹಿತ್ಯ

೧೨. ವೆಂಕಟರಾಜ ಪುಣಿಂಚತ್ತಾಯ, ಸಂಶೋಧನೆ

೧೩. ಮಂಕುಡೆ ಸಂಜೀವ ಶೆಟ್ಟಿ, ಯಕ್ಷಗಾನ

೧೪. ಶ್ರೀಮತಿ ಲೀಲಾವತಿ, ನಾಟಕ, ಚಲನಚಿತ್ರ

೧೯೯೯

೧೫. ಕುದ್ಕಾಡಿ ವಿಶ್ವನಾಥ ರೈ

೧೬. ಯು.ಪಿ. ಉಪಾಧ್ಯಾಯ

೧೭. ಕೋಳ್ಯೂರು ರಾಮಚಂದ್ರ ರಾವ್

೧೮. ಸದಾನಂದ ಸುವರ್ಣ

೨೦೦೦

೧೯. ಪಿ. ಶ್ರೀಧರ ರಾವ್, ಸಾಹಿತ್ಯ

೨೦. ಸುಶೀಲಾ ಪಿ. ಉಪಾಧ್ಯಾಯ, ಸಂಶೋಧನೆ

೨೧. ಪುಳಿಂಚ ರಾಮಯ್ಯ ಶೆಟ್ಟಿ, ಯಕ್ಷಗಾನ

೨೨. ಬಿ. ಸಂಜೀವ ರಾವ್, ನಾಟಕ, ಚಲನಚಿತ್ರ

೨೦೦೧

೨೩. ಕೆ.ವಿ. ರಮೇಶ್

೨೪. ಬಿ.ಎ. ವಿವೇಕ ರೈ

೨೫. ಮಲ್ಪೆ ರಾಮದಾಸ ಸಾಮಗ

೨೬. ಮಚ್ಚೇಂದ್ರನಾಥ ಪಾಂಡೇಶ್ವರ

೨೦೦೨

೨೭. ಕೆ.ಜಿ. ವಸಂತ ಮಾಧವ, ಸಂಶೋಧನೆ

೨೮. ಏರ್ಯಲಕ್ಷ್ಮೀನಾರಾಯಣ ಆಳ್ವ, ಸಾಹಿತ್ಯ

೨೯. ಬಿ. ಶೀನಪ್ಪ ಭಂಡಾರಿ, ಯಕ್ಷಗಾನ

೩೦. ಸಾಹಿತ್ಯ ಬಳಗ ಮುಂಬೈ, ಸಂಘಟನೆ / ಜನಪದ

೨೦೦೩

೩೨. ಮುಕುಂದ ಪ್ರಭು

೩೩. ಎ.ವಿ.ನಾವಡ

೩೪. ಕೆ. ಅನಂತರಾಮ ಬಂಗಾಡಿ

೩೫. ಕೆ. ವಾಮನರಾಜ್

೩೬. ಬಾಬು ಪರವ

ಗೌರವ ಫೆಲೋಶಿಪ್

೨೦೦೨

೧. ಪೀಟರ್ ಜೆ. ಕ್ಲಾಸ್

೨೦೦೩

೨. ಡಿ. ವೀರೇಂದ್ರ ಹೆಗ್ಗಡೆ

ತುಳು ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ ಪುಸ್ತಕಗಳು

೧೯೯೨ – ೧೯೯೪
ಕ್ರ.ಸಂ.   ಪ್ರಕಾರ ಗ್ರಂಥ ಲೇಖಕರು
೧. ಕಾವ್ಯ ತುಳು ಹರಿಶ್ಚಂದ್ರ ಕಾವ್ಯೊ ಕೆಲಿಂಜ ಸೀತಾರಾಮ ಆಳ್ವ
೨. ಕಥೆ ಒಸಯೊ ಮುದ್ದು ಮೂಡುಬೆಳ್ಳೆ
೩. ಕಾದಂಬರಿ ನಾಣಜ್ಜೆರ್ ಸುದೆ ತಿರ್ಗಾಯೆರ್ ಕೆ. ಮಹಾಲಿಂಗ
೪. ನಾಟಕ ಕಪ್ಪುನೆತ್ತೆರ್ ಕೋಡು ಭೋಜ ಶೆಟ್ಟಿ
೫. ಅನುವಾದ ಅಸೆನಿ ಯಾಗೊ ಕಾಂತಗೋ ಜೋಗಿ ಕೆದಂಬಾಡಿ ಜತ್ತಪ್ಪ ರೈ
೬. ಕನ್ನಡದಲ್ಲಿ ತುಳು ಅಧ್ಯಯನ ಗ್ರಂಥ ತುಳು ಜಾನಪದ ಆಚರಣೆಗಳು ಬನ್ನಂಜೆ ಬಾಬು ಅಮೀನ್
೭. ಇಂಗ್ಲಿಷ್‌ನಲ್ಲಿ ತುಳು ಅಧ್ಯಯನ ಗ್ರಂಥ Tulu Dialectics ಪದ್ಮನಾಭ ಕೇಕುಣ್ಣಾಯ
೧೯೯೪ – ೧೯೯೫
೮. ಕಾವ್ಯ ನಾಗಸಂಪಿಗೆ ಸುನೀತಾ ಶೆಟ್ಟಿ
೯. ಕಥೆ ಕರಿಯವಜ್ಜೆರೆನ ಕತೆಕುಲು ಆನಂದಕೃಷ್ಣ
೧೦. ಕಾದಂಬರಿ ಕುದುರುದ ಕೇದಗೆ ಎಂ. ಜಾನಕಿ ಬ್ರಹ್ಮಾವರ
೧೧. ನಾಟಕ ಬೂದಮ್ಮನ ಬಿರ್ಸಾತಿಕೆ ಶಾರದಾ ಆರ್. ರಾವ್
೧೨. ಗದ್ಯ ತಿರ್ಗಾಟದ ತಿರ್ಲ ಎಂ. ಜಾನಕಿ ಬ್ರಹ್ಮಾವರ
೧೩. ಅನುವಾದ ಭರತನ ಮೋಕೆ ಬೊಕ್ಕ ಮಾಯೆದ ಶೂರ್ಪನಕಿ ಮಂದಾರ ಕೇಶವ ಭಟ್ಟ
೧೪. ಕನ್ನಡದಲ್ಲಿ ತುಳು ಅಧ್ಯಯನ ಗ್ರಂಥ ದ.ಕ. ಜಿಲ್ಲೆಯ ಐತಿಹ್ಯಗಳು ಸುಬ್ಬಣ್ಣ ರೈ
೧೯೯೫ – ೧೯೯೭
೧೫. ಕಾವ್ಯ ಪದರಂಗಿತ ಪ್ರಮೋದ ಕೆ. ಸುವರ್ಣ
೧೬. ಕತೆ ಮನಸ್ಸ್ ಬದಲಾನಗ ಜಯಂತಿ ಎಸ್. ಬಂಗೇರ
೧೭. ಕಾದಂಬರಿ ಚಂದ್ರಳ್ಳಿಡ್ ಬೋಳ್ಪಾಂಡ್ ಸಂಕಲಕರಿಯ ಕೃಷ್ಣ ಸಾಲ್ಯಾನ್
೧೮. ನಾಟಕ ಪಿಲಿಪತ್ತಿ ಗಡಸ್ ಆನಂದಕೃಷ್ಣ
೧೯. ಗದ್ಯ ಪಣೆ ಪಣೆ ತುಡರ್ ಮ. ವಿಠಲ ಪುತ್ತೂರು
೨೦. ಕನ್ನಡದಲ್ಲಿ ತುಳು ಅಧ್ಯಯನ ಗ್ರಂಥ ತೌಳವ ಪುಂಡಿಕಾಯಿ ಗಣಪಯ್ಯ ಭಟ್
೧೯೯೭ – ೧೯೯೮
೨೧. ಕಾವ್ಯ – ಕವಿತೆ ಬಾನೊ ತೋರೊಂದುಡು ಎಸ್.ಪಿ. ಮಂಚಿ
೨೨. ಕತೆ ಡೋಲು ಗಣೇಶ್ ಅಮೀನ್ ಸಂಕಮಾರ್
೨೩. ಕಾದಂಬರಿ ಪರಶುರಾಮ ದೇವೆರರ ಸೃಷ್ಟಿ ಈ ತುಳುನಾಡ್ ಮ. ವಿಠಲ ಪುತ್ತೂರು
೨೪. ನಾಟಕ ಎರುಮೈಂದೆ ಎ. ಶಿವಾನಂದ ಕರ್ಕೇರ
೨೫. ಗದ್ಯ ದೇಸಾಂತ್ರೊಡು ಡಿ. ಸುವಾಸಿನಿ ಹೆಗ್ಡೆ
೨೬. ಕನ್ನಡದಲ್ಲಿ ತುಳು ಅಧ್ಯಯನ ಗ್ರಂಥ ದಕ್ಷಿಣ ಭಾರತದ ಜಾನಪದ ಕೆಲವು ನೋಟಗಳು ಸುಶೀಲಾ ಉಪಾಧ್ಯಾಯ
೨೭. ಅನುವಾದ ಪುರುಷೆ ಎಚ್ಕೆ ಕರ್ಕೇರ
೧೯೯೮ – ೧೯೯೯
೨೮. ಕಾವ್ಯ ಕವಿತೆ ತುಳು ಜೈಮಿನಿ ಭಾರತೊ ಡಿ. ವೇದಾವತಿ
೨೯. ಕಾದಂಬರಿ ಮೂಜಂಜ ಆನಗ ಜಿತು ನಿಡ್ಲೆ
೩೦. ನಾಟಕ ಬದಿ ಕೆ. ವಿಜಯಕುಮಾರ್ ಶೆಟ್ಟಿ
೩೧. ಗದ್ಯ ಪಿರ ತಿರ್ಗ್‌ತೂನಗ ಎಸ್.ಬಿ. ಕುಂದರ್
೩೨. ಅನುವಾದ ಪುರಂದೆರೆದಾಸೆರೆ ಪದಕೊಲು ಕಬ್ಬಿನಾಲೆ ವಸಂತ ಭಾರದ್ವಾಜ್
೩೩. ಕನ್ನಡದಲ್ಲಿ ತುಳು ಅಧ್ಯಯನ ಗ್ರಂಥ ಕಲ್ಕುಡ ಕಲ್ಲುರ್ಟಿ ಪಾಲ್ತಾಡಿ ರಾಮಕೃಷ್ಣ ಆಚಾರ್
೧೯೯ – ೨೦೦೦
೩೪. ಕವಿತೆ ಅಜನೆ ವಸಂತಕುಮಾರ್ ಪೆರ್ಲ
೩೫. ನಾಟಕ ಸತ್ಯ ನೆಗಪುನಗ ಜಯಂತಿ ಎಸ್. ಬಂಗೇರ
೩೬. ತುಳುಡ್ಡು ಅನುವಾದ ಯಾರಿಗೆ ಯಾರುಂಟು? ಚಂದ್ರಕಲಾ
೩೭. ತುಳುಕು ಅನುವಾದ ಜೋಕುಲು ಬಾಲೆಲು ಶಿಮುಂಜೆ ಪರಾರಿ
೩೮. ಗದ್ಯ ಪೂವರಿ ಮುದ್ದು ಮೂಡುಬೆಳ್ಳೆ
೩೯. ಕನ್ನಡೊಡು ತುಳು ಅಧ್ಯಯನ ಗ್ರಂಥ ತುಳುನಾಡಿನ ಜನಪದ ಆಟಗಳು ಗಣನಾಥ ಶೆಟ್ಟಿ ಎಕ್ಕಾರ್
೪೦. ಶಿಶು ಸಾಹಿತ್ಯ ತಾಟಿ ತೆಂಬರೆ ಪ್ರಮೋದ ಕೆ. ಸುವರ್ಣ
೨೦೦೦ – ೨೦೦೧
೪೧. ಕವಿತೆ ಗಗ್ಗರೊ ಭಾಸ್ಕರ ಭಂಡಾರಿ ಮಜಿಬೈಲು
೪೨. ಕಥೆ ತನಿಕೆ ಶಂಕರ ಖಂಡೇರಿ
೪೩. ಕಾದಂಬರಿ ಕಡಲ ಬಂದಿತ ಕಾಂಜರಣ್ಣೆ ಬಿ.ಪಿ. ಕೋಡಿ ಬೆಂಗ್ರೆ
೪೪. ನಾಟಕ ಬೀರೆ ದೇವು ಪೂಂಜೆ ಕದ್ರಿ ನವನೀತ ಶೆಟ್ಟಿ
೪೫. ಗದ್ಯ ಪಳಂತುಳು ಕಾವ್ಯ ಕಬ್ಬಿನಾಲೆ ವಸಂತ ಭಾರದ್ವಾಜ್
೪೬. ಶಿಶು ಸಾಹಿತ್ಯ  ಪುಟ್ಟು ದಿನ ರಮೇಶ್ ಉಳಯ ಅಡ್ಯನಡ್ಕ
೪೭. ಸಂಪಾದಿತ ಕೃತಿ ಭೂತಾರಾಧನೆ ಬಣ್ಣಗಾರಿಕೆ ಬಿ.ಎ. ವಿವೇಕ ರೈ ಯದುಪತಿ, ರಾಜಶ್ರೀ
೪೮. ಇತರ ಭಾಷೆಯಿಂದ ಅನುವಾದ ಋಣ ಕಡ್ಪೆರಾವಾ ಶಾರದಾ ಆರ್. ರಾವ್
೪೯. ಕನ್ನಡದಲ್ಲಿ ತುಳು ಅಧ್ಯಯನ ಅನ್ವೇಷಣೆ ಚಂದ್ರಶೇಖರ ಮಂಡೆಕೋಲು
೫೦. ಇಂಗ್ಲಿಷಿನಲ್ಲಿ ತುಳು ಅಧ್ಯಯನ ಗ್ರಂಥ ಒಲಸರಿ (ಅನುವಾದ) ಎಂ.ಅಶೋಕ ಆಳ್ವ ಎನ್.ತಿರುಮಲೇಶ್ವರ ಭಟ್‌
೨೦೦೧ – ೨೦೦೨
೫೧. ಕಾವ್ಯ ಕವಿತೆ ಮಾಣಿಗೆರಡ್ ಪುತ್ತಿಗೆ ಈಶ್ವರ ಭಟ್
೫೨. ಕಥೆ ಪರಿವರ್ತನೆ ಬಿ.ಎ. ಪ್ರಭಾಕರ ರೈ
೫೩. ಕಾದಂಬರಿ ಯುಗ ಮಗ್‌ರ್ನಗ ಜಾನಕಿ ಎಂ. ಬ್ರಹ್ಮಾವರ
೫೪. ನಾಟಕ ಬೊಜ್ಜ ನಂದಳಿಕೆ ನಾರಾಯಣ ಶೆಟ್ಟಿ
೫೫. ಗದ್ಯ ಕರಜನ ಸುನೀತಾ ಎಂ. ಶೆಟ್ಟಿ
೫೬. ಕನ್ನಡದಲ್ಲಿ ತುಳು ಅಧ್ಯಯನ ಗ್ರಂಥ ತುಳುನಾಡಿನ ಜೈನಧರ್ಮ ಎಸ್‌.ಡಿ. ಶೆಟ್ಟಿ
೫೭. ಸಂಪಾದಿತ ಕೃತಿ ಅಪ್ಪೆಗ್ ಬಾಲೆದ ಓಲೆ ವಿಜಯಕುಮಾರ್ ಭಂಡಾರಿ
೨೦೦೩
೫೮. ತುಳು ಕಾವ್ಯ ಕವಿತೆ ಕತೆ ಅಯೆರ್ ಪೊಮ್ಣುಲೈವೆರ್ ಪ್ರಮೋದಾ ಕೆ. ಸುವರ್ಣ
೫೯. ತುಳು ಕಥೆ ಕಾದಂಬರಿ ಪೂ ಪೊದ್ದೊಲು ಬನ್ನಂಜೆ ಬಾಬು ಅಮೀನ್
೬೦. ತುಳು ನಾಟಕ ಗದ್ಯ ಮದಪ್ಪಂದಿ ನೆಂಪು ಬಿ.ಎ. ಪ್ರಭಾಕರ ರೈ
೬೧. ಅನುವಾದ ಕರಿಯವಜ್ಜನ ಕತೆಗಳು ಆ. ಬಾಲಕೃಷ್ಣ ಶೆಟ್ಟಿ ಪೊಳಲಿ
೬೨. ಅಧ್ಯಯನ ಗ್ರಂಥ ತುಳುನಾಡಂ ಭಾಷಯಂ ನಾಟ್ವರಿಪುಂ ಸಿ. ರಾಘವನ್

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಜಾನಪದ ಪುರಸ್ಕಾರ ವಿಜೇತರು

೧೯೯೮
೧. ಶ್ರೀಮತಿ ಮಾಣಿಕೊ ಪಾಡ್ದನ
೨. ಐತಪ್ಪ ಪಂಬದ ಕುಣಿತ
೩. ಶ್ರೀಮತಿ ಪೊಡಿಮ ಬ್ಯಾರ್ತಿ ನಾಟಿ ವೈದ್ಯ
೪. ರಘುಚಂದ್ರನ ಜೈನ್ ಕಂಬಳ / ತಾಲೀಮು
೨೦೦೨
೫. ಶ್ರೀಮತಿ ಗಿಡಿಕೆರೆ ರಾಮಕ್ಕ ಮುಗೇರ್ತಿ ಪಾಡ್ದನ
೬. ಡಂಗು ಪಾಣಾರ ಕುಣಿತ
೭. ಹರಿಭಟ್ ಹಳೆಯಂಗಡಿ ನಾಟಿ ವೈದ್ಯ
೮. ಮಾಸ್ಟರ್ ಎ. ಸಂಜೀವ ಅತ್ತಾವರ ಜನಪದ ಕ್ರೀಡೆ : ತಾಲೀಮು

ಪುನಾರಚಿತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

೧೯೯೫ ಜನವರಿ ಕೊನೆಯ ವಾರದಲ್ಲಿ ಕರ್ನಾಟಕ ಸರಕಾರದ ಆದೇಶಕ್ಕನುಗುಣವಾಗಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರು ರಾಜಿನಾಮೆ ಕೊಟ್ಟ ಬಳಿಕ ತುಳು ಸಾಹಿತ್ಯ ಅಕಾಡೆಮಿಯ ಅಸ್ತಿತ್ವವು ಅನಿಶ್ಚಿತವಾಗಿ ಮುಂದುವರಿಯಿತು. ಅಕಾಡೆಮಿಯ ರಿಜಿಸ್ಟಾರ್ ಆಗಿದ್ದ ಕೆ. ದೇವರಾಜ್ ಅವರು ಮಾರ್ಚ್‌೩೧, ೯೫ರಿಂದ ಮಾತೃಸಂಸ್ಥೆಗೆ ಹಿಂದಿರುಗಿದ ಕಾರಣ ದ.ಕ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಬಿ.ಜಿ. ನಾಯಕಂ ಅಕಾಡೆಮಿಯ ಪ್ರಭಾರ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿದರು. ತುಳು ಸಾಹಿತ್ಯ ಅಕಾಡೆಮಿಯನ್ನು ಹಿಂದಿನಂತೆಯೇ ಪ್ರತ್ಯೇಕವಾಗಿ ಉಳಿಸಿಕೊಳ್ಳಬೇಕೆಂಬ ಹಕ್ಕೊತ್ತಾಯವನ್ನು ತುಳುಕೂಟದಂತಹ ಅನೇಕ ಸಂಘ ಸಂಸ್ಥೆಗಳು, ತುಳು ಸಾಹಿತಿಗಳು, ಕಲಾವಿದರು, ಸಾರ್ವಜನಿಕ ರಂಗದ ಬೇರೆ ಬೇರೆ ಕ್ಷೇತ್ರಗಳ ತುಳುವರು, ದ.ಕ. ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರು, ಬೇರೆ ಬೇರೆ ರಾಜಕೀಯ ಪಕ್ಷಗಳ ವಕ್ತಾರರು, ದ.ಕ.ದ. ಮತ್ತು ಕರ್ನಾಟಕದ ಪತ್ರಿಕೆಗಳು ಪ್ರಬಲವಾಗಿ ಮಂಡಿಸಿ, ತುಳು ಸಾಹಿತ್ಯ ಅಕಾಡೆಮಿಯ ಅಸ್ತಿತ್ವದ ಅಗತ್ಯವನ್ನು ಪ್ರತಿಪಾದಿಸಲಾಯಿತು. ಕರ್ನಾಟಕ ಸರಕಾರ ೧೯೯೫ರ ಡಿಸೆಂಬರ್ ತಿಂಗಳಲ್ಲಿ ಪುನಾರಚಿತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರ ಹೆಸರುಗಳನ್ನು ಘೋಷಿಸಿತು. ಅಕಾಡೆಮಿಯ ಅಧ್ಯಕ್ಷರು ೧೭ ಜನವರಿ ೧೯೯೬ರಂದು ಅಧಿಕಾರ ಸ್ವೀಕರಿಸಿದೊಡನೆ ಸದಸ್ಯರು ತಮ್ಮ ಒಪ್ಪಿಗೆಯನ್ನು ಸೂಚಿಸುವುದರೊಂದಿಗೆ ಪುನಾರಚಿತ ತುಳು ಸಾಹಿತ್ಯ ಅಕಾಡೆಮಿಯು ಅಸ್ತಿತ್ವಕ್ಕೆ ಬಂತು. ೧೯೯೫ರಲ್ಲಿ ಘೋಷಿಸಿದ ಗೌರವ ಪ್ರಶಸ್ತಿಗಳು ಮತ್ತು ಈಗಾಗಲೇ ಮೌಲ್ಯಮಾಪನವಾಗಿದ್ದ ೧೯೯೨ – ೯೪ ಪುಸ್ತಕ ಬಹುಮಾನಗಳನ್ನು ಅಕಾಡೆಮಿಯ ಅಂಗೀಕರಿಸಿ ಘೋಷಿಸಿತು.

ಕರ್ನಾಟಕ ಸರಕಾರದ ಆದೇಶ ಸಂಖ್ಯೆ : ಸಂಕಇ ೭೨ ಕರ ೯೫ ಬೆಂಗಳೂರು ೧೩-೧೨-೧೯೯೫ ಇದರ ಪ್ರಕಾರ ನಾಮ ನಿರ್ದೇಶನಗೊಂಡ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತೆ ಬಿ.ಎ. ವಿವೇಕ ರೈ ಅಧ್ಯಕ್ಷರಾಗಿ ಹಾಗೂ ೧೧ ಜನ ಸದಸ್ಯರು ನೇಮಕಗೊಂಡಿರುತ್ತಾರೆ.

ಪಾಲ್ತಾಡಿ ರಾಮಕೃಷ್ಣ ಆಚಾರ್, ಇವರು ೨೪ ಫೆಬ್ರವರಿ ೧೯೯೬ರಂದು ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಕರ್ತವ್ಯಕ್ಕೆ ಹಾಜರಾದರು.

ಕರ್ನಾಟಕ ಸರಕಾರದ ಆದೇಶ ಸಂಖ್ಯೆ ಸಂಕಇ : ೧೧೧ : ಕರಅ : ೯೮ ಬೆಂಗಳೂರು ದಿನಾಂಕ ೧೩.೧೨.೧೯೯೮ ಇದರ ಪ್ರಕಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಹಾಗೂ ೧೧ ಜನ ಸದಸ್ಯರು ನೇಮಕಗೊಂಡರು.

ಮುಂದಿನ ವರ್ಷಗಳಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರುಗಳಾಗಿ ವಾಮನ ನಂದಾವರ ಮತ್ತು ಎಂ.ಕೆ. ಸೀತಾರಾಮ ಕುಲಾಲ್ ನೇಮಕಗೊಂಡರು.

ತುಳುದರ್ಶನ

ಅಕಾಡೆಮಿಯ ಕಾರ್ಯಕ್ರಮಗಳ ವಿವರಗಳನ್ನು ತುಳುವೇತರರಿಗೆ ತಿಳಿಸುವ ದೃಷ್ಟಿಯಿಂದ ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವ ಪತ್ರಿಕೆ ಪ್ರಾರಂಭದಲ್ಲಿ ಮದಿಪು ಸಂಚಿಕೆಯ ಕೊನೆಯ ಭಾಗದಲ್ಲಿ ಪ್ರಕಟಿಸುತ್ತಿದ್ದು ಅನಂತರ ೧೯೯೯ರಿಂದ ತುಳು ವರ್ತಮಾನ, ಆಮೇಲೆ ತುಳುದರ್ಶನವಾಗಿ ಪ್ರಕಟವಾಗುತ್ತಿದೆ.

ಮದಿಪು ತ್ರೈಮಾಸಿಕ ಸಂಚಿಕೆಗಳು

ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಸಾಹಿತ್ಯ ಬೆಳವಣಿಗೆಗಾಗಿ ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವ ಮದಿಪು ಸಂಚಿಕೆ. ಇದುವರೆಗೆ ೪೦ ಸಂಚಿಕೆಗಳು ಪ್ರಕಟವಾಗಿದೆ.