ಕವನ ಸಂಕಲನಗಳು – ಮಹಾಕಾವ್ಯ ಸಂಪುಟಗಳು

ತುಳು

ಅಮೃತ ಸೋಮೇಶ್ವರ, ೧೯೮೪
ತ೦ಬಿಲ
ಡೆಮಿ ೧/೮, ಪುಟಗಗಳು : ೪ + ೩೮, ರೂ. ೫/-
೨೮ ತುಳು ಕವಿತೆಗಳ ಸಂಗ್ರಹ

ಅಮೃತ ಸೋಮೇಶ್ವರ, ೧೯೮೭
ರಂಗಿತ
ಪ್ರಕೃತಿ ಪ್ರಕಾಶನ, ಕೋಟೆಕಾರು
ಕ್ರೌನ್, ೧/೮, ಪುಟಗಳು : ೪ + ೨೭, ರೂ. ೫/-

೨೬ ಗೇಯಾತ್ಮಕ ತುಳುಪದ್ಯಗಳು ಸಂಕಲನ.

ಅಮೃತಾ ಶೆಟ್ಟಿ ಅತ್ರಾಡಿ
ಮದಿಮಾಲೆ ಪಾಡ್ದನ (ತುಳು ಕವನ ಸಂಕಲನ)
ತುಳುಕೂಟ ಉಡುಪಿ, ಮಣಿಪಾಲ – ೫೭೬ ೧೧೯, ಕ್ರೌನ್ ೧/೮, ರೂ. ೨೫/-

೪೦ ಕವನಗಳ ಸಂಕಲನ, ಸಮಾಜದ ಓರೆಕೋರೆಗಳನ್ನು ಮನಸ್ಸಿಗೆ ನಾಟುವ ಹಾಗೆ ಹಾಗೆ ತಿಳಿಸಿದ್ದಾರೆ. ಗಂಡೊಬ್ಬ ಹೆಣ್ಣಿನ ಮೇಲೆ ನಡೆಸುವ ಶೋಷಣೆ ಕೂಡ ಹೆಚ್ಚಿನ ಕವಿತೆಗಳ ಸಾರವಾಗಿದೆ.

ಅಂಡಾಳ ಗಂಗಾಧರ, ೨೦೦೨
ಕಬಿತೆ ಅರಳುನ ಪೊರ್ಲು
ನಮ್ರತಾ ಪ್ರಕಾಶನ, ನಮ್ರದೀಪ, ಮರಕಡ, ಕುಂಜತ್ತಬೈಲ್
ಕ್ರೌನ್. ೧/೮, ಪುಟಗಳು : ೫೪, ಬೆಲೆ : ರೂ. ೩೦/-

ತುಳು ಕವನಗಳ ಸಂಕಲನ.

ಆಚಾರ್ಯ ಪಾ.ವೆಂ., ೧೯೮೧
ಬಯ್ಯಮಲ್ಲಿಗೆ
ಕ್ರೌನ್ ೧/೮, ರೂ. ೫/-

ತುಳು ಭಾವಗೀತೆಗಳ ಸಂಕಲನ. ದ್ವಿತೀಯ ಮುದ್ರಣ.

ಈಶ್ವರ ಭಟ್ಟ ಪುತ್ತಿಗೆ, ೧೯೭೯
ಭಟ್ಟನ ಸೆಟ್ಟಂದಿ ಪಾತೆರೊಲು – ೧ ಈಶ್ವರ ಪುರಾಣ
ರತ್ನತ್ರಯ ಪ್ರಕಾಶನ, ಮಂಗಳೂರು, ಪುಟಗಳು : ೬+೧೪ ರೂ. ಉಚಿತ

ಶಿವಳ್ಳಿ ಬ್ರಾಹ್ಮಣರ ಭಾಷೆಯಲ್ಲಿ ಬರೆದ ಮೂರು ತುಳು ಕವನಗಳಿವೆ.

ಈಶ್ವರ ಭಟ್ಟ ಪುತ್ತಿಗೆ, ೨೦೦೪
ಮಾಣಿಗೆರೆಡ್ ಪಾತೆರ ಭಾಗ – ೨
ಗಾಯತ್ರಿ ಪ್ರಕಾಶನ, ಕಿನ್ನಿಗೋಳಿ – ೫೭೪ ೧೫೦
ಡೆ. ೧/೮, ಪುಟಗಳು : ೨೫೨, ಬೆಲೆ ರೂ. ೧೫೦/-

ಶಿವಳ್ಳಿ ಬ್ರಾಹ್ಮಣರ ತುಳು ಭಾಷೆಯಲ್ಲಿ ಭಾಮಿನಿ ಷಟ್ಪದಿಯಲ್ಲಿ ಬರೆದ ಮಾಣಿಗೆರಡ್ ಪಾತೆರದ ಎರಡನೇ ಸಂಪುಟವಿದು. ಇದರಲ್ಲಿ ೧೧೫೪ ಭಾಮಿನೀ ಷಟ್ಪದಿ ತ್ರಿಪದಿಗಳಿವೆ.

ಉಷಾ ಪಿ. ರೈ, ೨೦೦೪
ಊರುಕೋಲು
ಸಾತ್ವಿಕ ಪ್ರಕಾಶನ, ಶಾಂತಿನಗರ, ಬೆಂಗಳೂರು – ೫೫೦ ೦೨೭
ಡೆ. ೧/೮, ಪುಟಗಳು : ೪೮, ಬೆಲೆ : ೫೦/-

೨೪ ತುಳು ಕವನಗಳ ಸಂಕಲನವಿದು.

ಕಿಞ್ಞಣ್ಣ ರೈ ಕಯ್ಯಾರ, ೧೯೯೪
ಎನ್ನಪ್ಪೆ ತುಳುವಪ್ಪೆ
ಡೆಮಿ ೧/೮, ಪುಟಗಳು : ೮+೪೧, ರೂ. ೧೦/-

೨೨ ತುಳು ಕವಿತೆಗಳ ಸಂಕಲನ.

ಕಿಲ್ಲೆ ಎನ್.ಎಸ್., ೧೯೮೦ (೧೯೪೨)
ಕಾನಿಗೆ
ದ್ವಿತೀಯ ಮುದ್ರಣ, ಕ್ರೌನ್ ೧/೮

ದೇಶಭಕ್ತಿ ಸಹಿತ ವಿವಿಧ ವಿಷಯಗಳ ಬಗೆಗೆ ರಚಿಸಿದ ತುಳುಗೀತಗಳ ಸಂಕಲನ, ವಿವಿಧ ಛಂದೋಬಂಧಗಳಲ್ಲಿ ರಚಿತವಾದ ಆ ಕಾಲದ ಹೊಸ ರೀತಿಯ ಒಂದು ಪ್ರಾತಿನಿಧಿಕ ಕವನ ಸಂಕಲನ.

ಕುದ್ರೆಪ್ಪಾಡಿ ಜಗನ್ನಾಥ ಆಳ್ವ, ೨೦೦೫
ಕುಡ್ಲದ ಮಲ್ಲಿಗೆ
ಪ್ರಕಾಶಕರು : ಕೆ. ದೇವದಾಸ ಶೆಟ್ಟಿ, ಉರ್ವಮಾರ್ಕೆಟ್, ಮಂಗಳೂರು – ೫೭೫ ೦೦೬
ಡೆ. ೧/೮, ಪುಟಗಳು : ೪೪, ಬೆಲೆ : ರೂ. ೨೦/-
೩೫ ತುಳು ಕವಿತೆಗಳ ಸಂಕಲನ.

ಕುಸುಮಾ ಜಿ.ಪಿ., ೨೦೦೨
ಸಾದಿ (ತುಳು ಕವನ ಸಂಕಲನ)
ಸುವರ್ಣಗಿರಿ ಪ್ರಕಾಶನ, ೩೦, ಮಾರುತಿ ಲೇನ್, ಮೂರನೇ ಮಾಳಿಗೆ ಕೋಟೆ,
ಮುಂಬಯಿ, ಕ್ರೌನ್ ೧/೮, ಪುಟಗಳು ೯+೪೨, ರೂ. ೩೫/-

೩೪ ಕವನಗಳುಳ್ಳ ಕವನ ಸಂಕಲನ, ಕವಯತ್ರಿಯ ಬದುಕಿನಲ್ಲಿ ಎದುರಾದಂತಹ ಘಟನೆಗಳು, ಸಂತೋಷ, ದುಃಖ ಮುಂತಾದ ಭಾವನೆಗಳೇ ಇಲ್ಲಿ ಕವನಗಳಾಗಿ ರೂಪುಗೊಂಡಿವೆ.

ಕೆಮ್ತೂರು ದೊಡ್ಡಣ್ಣ ಶೆಟ್ಟಿ, ೧೯೯೫
ವ್ಹಾವ್ಹಾರೆ ಕಮ್ಮೆನ
ಸಂ. : ಕೆ.ಎಸ್. ಭಂಡಾರಿ ನಿಟ್ಟೂರು, ತುಳುಕೂಟ ಉಡುಪಿ, ಮಣಿಪಾಲ
ಕ್ರೌ. ೧/೮, ಪುಟಗಳು : ೩೨, ಬೆಲೆ : ೧೦/-

ತುಳುನಾಟಕಗಳಲ್ಲಿ ಬಳಕೆಗೊಂಡ ೩೦ ಹಾಡುಗಳ ಸಂಗ್ರಹ.

ಕೇಶವ ಭಟ್ ಮಂದಾರ, ೧೯೯೧
ಜಾಗಂಟೆ
ಕ್ರೌನ್ ೧/೮, ಪುಟಗಳು ೧೦+೭೪, ರೂ. ೧೫/-

ತುಳು ಕವಿತೆಗಳ ಸಂಗ್ರಹ. ಏಕಿನಿ ಕರ್ಣೆ ಎನ್ನುವ ತುಳು ನೀಳ್ಗವಿತೆ ಕೊನೆಯಲ್ಲಿ ಇದೆ.

ಕೇಶವ ಭಟ್ ಮಂದಾರ, ೧೯೯೭
ಬೀರದ ಬೊಲ್ಪು
ಡೆಮಿ ೧/೮, ರೂ. ೨೮/-

ಕೇಶವ ಭಟ್ಟ ಮಂದಾರ, ೧೯೮೧
ಮಂದಾರ ರಾಮಾಯಣ (ತುಳು ಎಸಳ್ ೧-೨)
ಮಂದಾರ ರಾಮಾಯಣ ಪ್ರಕಾಶನ ಸಮಿತಿ, ಮಂಗಳೂರು, ರೂ. ೫/-

‘ಮಂದಾರ ರಾಮಾಯಣ’ ಮಹಾಕಾವ್ಯದ ‘ಪುಂಚದ ಬಾಲೆ’ ಮತ್ತು ‘ಬಂಗಾರ್ದ ತೊಟ್ಟಿಲ್’ ಭಾಗಗಳನ್ನು ಈ ಕಿರು ಕೃತಿಯ ಒಳಗೊಂಡಿದೆ.

ಕೇಶವ ಭಟ್ ಮಂದಾರ, ೧೯೮೭
ಮಂದಾರ ರಾಮಾಯಣ
ವಜ್ರದೀಪ ಪ್ರಕಾಶನ ಬೆಳಗಾವಿ
ಡೆಮಿ ೧/೮, ಪುಟಗಳು ೧೪+೪೨೨+೧೦, ರೂ. ೧೦೦/-

ತುಳುವಿನ ಆಧುನಿಕ ಕಾಲದ ಮಹಾಕಾವ್ಯ. ಇದರಲ್ಲಿ ವರ್ಣಿತವಾದ ಎಲ್ಲ ಪರಿಸರವೂ ತುಳುನಾಡಿಗೆ ಚಿರಪರಿಚಿತವಾದುದು. ತುಳು ಜನಪದ, ಸಂಸ್ಕೃತಿ, ವಿಶಿಷ್ಟ ಕೂಡುನುಡಿಗಳು, ಗಾದೆಗಳು, ರೂಪಕಗಳು, ತುಳುವಿನ ಸಾಮಾನ್ಯ ಆಡುನುಡಿಗಳು, ಬಳಕೆಯಿಂದ ಕೂಡಿ ಸಂಪೂರ್ಣ ರಾಮಾಯಣವನ್ನು ಲಲಿತ ಛಂದಸ್ಸಿನಲ್ಲಿ ನಿರೂಪಿಸಲಾಗಿದೆ.

ಕೃಷ್ಣಾನಂದ ಹೆಗ್ಗಡೆ (ಸಂ), ೧೯೯೦
ಅರ್ಲು ಕಬಿತೆಲು ಪೊರ್ಲು ಕಬಿತೆಲು
ಕ್ರೌನ್ ೧/೮, ಪುಟಗಳು : ೨೪+೧೨೦, ರೂ. ೨೦/-

೬೬ ಆಧುನಿಕ ತುಳು ಕವಿಗಳ ತುಳು ಕವನಗಳ ಸಂಗ್ರಹಣಾ ಕೃತಿ.

ಖಂಡಿಗೆ ಟಿ.ಎ.ಎಸ್., ೨೦೦೨
ಅಗರ್ (ಕವನ ಸಂಕಲನ)
ಕಾಸರಗೋಡು ಪ್ರಕಾಶನ ವಿದ್ಯಾನಗರ – ೬೭೧ ೧೨೩, ಕಾಸರಗೋಡು
ಪುಟಗಳು ೮+೨೮, ರೂ. ೨೫/-

೩೧ ಕವನಗಳಿವೆ. ಇದರಲ್ಲಿ ನಿಸರ್ಗ, ಮನುಷ್ಯ ಬದುಕಿನ ಸಂಕಷ್ಟಗಳು, ದೇಶದಲ್ಲಿ ನಡೆಯುತ್ತಿರುವಂತಹ ಸಂಘರ್ಷಗಳು ಹಾಗೆಯೇ ಭಾವಗೀತೆಯೂ ಇದೆ.

ಖಂಡಿಗೆ ಟಿ.ಎ.ಎನ್., ೧೯೯೫
ತಿರ್ಗಾಸ್
ನವೀನ ಪ್ರಕಾಶನ, ಆರಿಕ್ಕಾಡಿ, ಕುಂಬಳೆ
ಕ್ರೌನ್ ೧/೮, ಪುಟಗಳು : ೧೦+೨೩, ರೂ. ೧೨/-

ತುಳು ಸ್ವತಂತ್ರ ಕವಿತೆಗಳು. (೧೭ ಇಡಿ ಮತ್ತು ೬ ಬಿಡಿ ಕವಿತೆಗಳು).

ಗಟ್ಟಿ ಕೆ.ಟಿ., ೧೯೯೮
ಎನ್ನ ಮೋಕೆದ ಪೊಣ್ಣು
ಡೆಮಿ ೧/೮, ರೂ. ೨೫/-

ತುಳು ಕವನ ಸಂಕಲನ.

ಗಟ್ಟಿ ಕೆ.ಕೆ., ೨೦೦೪
ಪೊದಿಕೆ (ತುಳು ಜನಪದ ಪದೊಕೊಲು)
ರಶ್ಮಿ ಪ್ರಕಾಶನ, ಶರವು, ಮಂಗಳೂರು
ಡೆ. ೧/೮, ಪುಟಗಳು : ೪೦, ಬೆಲೆ : ರೂ. ೩೦/-

೨೮ ತುಳು ಗೇಯಗೀತೆಗಳ ಸಂಕಲನ.

ಗಣಪತಿ ದಿವಾಣ, ೧೯೯೬
ಕೊಂಬು ವಾದ್ಯೊ
ಕ್ರೌನ್ ೧/೮, ಪುಟಗಳು : ೩೬, ರೂ. ೧೦/-

ತುಳು ಪದ್ಯಾವಳಿ.

ಗಣಪತಿ ದಿವಾಣ, ೧೯೬೪
ಮೀಸೆ ಇತ್ತಿ ಆಣ್‌ಗುಳು
ಕೆ. ನರಸಿಂಹ ಪೈ ಬ್ರದರ್ಸ್, ಅಡ್ಯನಡ್ಕ, ರೂ. ೨೦ ಪೈಸೆ

೧೦ ತುಳು ಕವನಗಳ ಸಂಕಲನ.

ಗಣೇಶ್ ಅಮೀನ್ ಸಂಕಮಾರ್, ೨೦೦೧
ಮಾಯದ ಮದಿಪು (ತುಳು ಕವನ ಸಂಗ್ರಹ)
ಸಿರಿ ಪ್ರಕಾಶನ, ಅಗೊಳಿ ಮಂಜಣ ಜಾನಪದ ಕೇಂದ್ರ, ಹಳೆಯಂಗಡಿ
ಕ್ರೌನ್ ೧/೮, ಪುಟಗಳು : ೩೨+೨, ರೂ. ೨೦/-

೨೨ ಕವನಗಳಿವೆ. ತುಳುನಾಡು, ಸಂಸ್ಕೃತಿಗೆ ಸಂಬಂಧಿಸಿದಂತೆ ಹೆಚ್ಚಿನ ಕವನಗಳಿವೆ.

ಚಂದ್ರಹಾಸ ಸುವರ್ಣ ಶಿಮಂತೂರು, ೨೦೦೨
ಒರಲ್ (ಕವನ ಸಂಕಲನ)
ಪೂಜಾ ಪ್ರಕಾಶನ, ಮುಂಬಯಿ
ಡೆಮಿ ೧/೮, ಪುಟಗಳು : ೧೦+೪೦, ರೂ. ೫೦/-

೨೪ ಕವನಗಳುಳ್ಳ ಒಂದು ಸಂಕಲನ, ಇದರಲ್ಲಿ ತುಳುನಾಡಿನ ಆಚಾರ-ವಿಚಾರ, ಸಂಸ್ಕಾರ – ಸಂಸ್ಕೃತಿಗಳಿವೆ. ಹಾಗೆಯೇ ಕಾಲ ಕಾಲಕ್ಕೆ ಬದಲಾಗುವ ಸೃಷ್ಟಿಯ ಚಿತ್ರಣ, ಇಂದಿನ ಹಾಗೂ ಹಿಂದಿನ ತುಳುನಾಡಿನ ಸ್ಥಿತಿಗತಿಗಳು, ತುಳುನಾಡಿನ ಪಾಡ್ದನ, ಮನುಷ್ಯನ ರೀತಿ – ನೀತಿ, ನ್ಯಾಯ- ಧರ್ಮಗಳ ಕುರಿತು ಕವನಗಳಿವೆ.

ಜಗನ್ನಾಥ ರೈ ಬಾಡೂರು, ೧೯೬೫
ಸತ್ಯದ ಚಿತ್ತ (ಪದ್ಯ ಸಂಗ್ರಹ)
ರೂ. ೧/-

ತುಳು ಭಾಷೆಯಲ್ಲಿ ಹಲವು ರಾಷ್ಟ್ರೀಯ ಮತ್ತು ಸಾಮಾಜಿಕ ರೀತಿ ನೀತಿಗಳಿಗೆ ಸಂಬಂಧಿಸಿದ ಸುಮಧುರವೂ, ಅರ್ಥಗರ್ಭಿತವೂ ಆದ ೧೨ ಪದ್ಯಗಳನ್ನು ಈ ಕಿರುಕೃತಿಯಲ್ಲಿ ಪ್ರಕಟಿಸಲಾಗಿದೆ. ಪ್ರತಿಯೊಂದು ಪದ್ಯದ ಸಾರವನ್ನು ಕನ್ನಡದಲ್ಲಿ ನೀಡಲಾಗಿದೆ.

ಜಯರಾಮ ರೈ ಎಂ., ೧೯೮೯
ಬೇರ್ ಮರ್ಡ್
ಕ್ರೌನ್ ೧/೮, ಪುಟಗಳು : ೬

ಇದರಲ್ಲಿ ೨ ಕವಿತೆಗಳು ಇವೆ.

ಜಯರಾಮ ರೈ ಎಂ., ೧೯೮೬
ತುಳುವೆರೆಂಕುಲು
ತುಳುನಾಡ್ ಮಂಗಳೂರು – ೫೭೫ ೦೦೩
ಕ್ರೌ. ೧/೮, ಪುಟಗಳು : ೧೬, ಬೆಲೆ : ರೂ. ೨/-

ಹತ್ತು ತುಳು ಕವಿತೆಗಳ ಸಂಕಲನ.

ಜಾರಪ್ಪ ಮಂಗಳೂರು, ೧೯೩೦
ಕೋಟಿ ಚೆನ್ನಯ ಪದ್ಯಮಾಲಿಕೆ ಮೊಲದನೇ ಭಾಗ
ತುಲೆ ಪಿದಾಯಿ ಪಾಡ್, ಬೆಂಗಳೂರು
ಕ್ರೌನ್ ೧/೮, ಪುಟಗಳು ೨೦, ರೂ. ೦-೪-೦

ತುಳುಭಾಷೆ, ನಾಡು, ಜನರಿಗೆ ಸಂಬಂಧಿಸಿರುವ ತುಳು ಕವನ ಸಂಕಲನ.

ಜಾರು ಪೇರೂರು, ೧೯೮೯
ಉರಲ್ ತೂಟೆ
ತುಲೆ ಪಿದಾಯಿ ಪಾಡ್, ಬೆಂಗಳೂರು
ಕ್ರೌ. ೧/೮, ಪುಟಗಳು: ೨೦, ರೂ. ೨/-

ತುಳುಭಾಷೆ, ನಾಡು, ಜನರಿಗೆ ಸಂಬಂಧಿಸಿರುವ ತುಳು ಕವನ ಸಂಕಲನ.

ತಿಮ್ಮಪ್ಪ ಪೂಜಾರಿ ಜೆ., ೧೯೯೪
ಕೂಕುಳು
ಪ್ರತಿಭಾ ಪ್ರಕಾಶನ, ಮಂಗಳೂರು, ಡೆಮಿ ೧/೮, ಪುಟಗಳು : ೩೮, ರೂ. ೧೫/-

೨೬ ಸ್ವತಂತ್ರ ತುಳು ಕವನಗಳ ಗೊಂಚಲು.

ದಯಾ ಸಾ., ೨೦೦೩
ಪೊಸ ಬೊಲ್ಪು (ತುಳು ಕವನ ಸಂಕಲನ)
ಜಗಜ್ಯೋತಿ ಕಲಾವೃಂದ (ರಿ.) ಡೊಂಬಿವಿಲಿ (ಪ.)
ಕ್ರೌನ್ ೧/೮, ಪುಟಗಳು : ೬೩, ರೂ. ೫೦/-

ಒಟ್ಟು ೨೫ ಕವನಗಳಿವೆ. ಉದಾ. ಇಂಬು, ಮಟ್ಟೆಲ್, ಅಲ್ಪುಚ್ಚೆ, ಪೊನ್ನಕ್ಕ, ನಕ್ಕುರು, ಪೂತ ದೈ, ಪೊಸ ಬೊಲ್ಪು, ಕಲೆಂಬಿ, ತಂಚಿ, ಬಾಲೆ ಬಂಗಾರ್ ಇತ್ಯಾದಿ. ಇದರಲ್ಲಿನ ಹೆಚ್ಚಿನ ಎಲ್ಲಾ ಕವನಗಳಲ್ಲಿ ಕಂಡುಬರುವ ಆಶಯವೇನೆಂದರೆ ಪರಸ್ಪರ ವಿರುದ್ಧ ಸಂಗತಿಗಳ ನಡುವೆಯೇ ಹೊಸ ದಾರಿ ಕಂಡುಬರುವಂತೆ, ವಿನಾಶದೊಳಗೂ ಹೊಸ ಸೃಷ್ಟಿಯು ಸಾಧ್ಯವೆಂಬ ಗಹನವಾದ ಅಂಶ ಕಂಡುಬರುತ್ತದೆ.

ದಯಾ ಸಾ., ೨೦೦೩
ಪೊಸ ಬೊಲ್ಪು
ಜಗಜ್ಯೋತಿ ಕಲಾವೃಂದ, ಮಹಾತ್ಮಾ ಫುಲೆ ರಸ್ತೆ, ದೊಂಬಿವಿಲಿ (ಪ) – ೪೨೧ ೨೦೨.
ಕ್ರೌ. ೧/೮, ಪುಟಗಳು : ೬೪, ಬೆಲೆ : ರೂ. ೫೦/-

೨೫ ತುಳು ಕವಿತೆಗಳ ಗೊಂಚಲು

ದಾಮೋದರ ಪುಣಿಂಚತ್ತಾಯ ಪುಂಡೂರು, ೧೯೫೯
ಕುಂಬಳೆ ಸೀಮೆತ ಚರಿತ್ರೆ (ತುಳು ಪದ್ಯ)
ವಿಜಯ ಪ್ರಿಂಟರ್ಸ್ ಎಂಡ್ ಪಬ್ಲಿಷರ್ಸ್ ಲಿಮಿಟೆಡ್, ಮಂಗಳೂರು
ಕ್ರೌನ್ ೧/೮, ಪುಟಗಳು : ೧೬, ರೂ. ೦-೪-೦

ಕಾಸರಗೋಡು ತಾಲೂಕಿಗೆ ಸೇರಿದ ಪ್ರಖ್ಯಾತ ಐತಿಹಾಸಿಕ ಸ್ಥಳವಾದ ಕುಂಬಳೆ ಸೀಮೆಯ ಚರಿತ್ರೆಯನ್ನು ಪದ್ಯದ ರೂಪದಲ್ಲಿ ನೀಡಲಾಗಿದೆ. ಅಲ್ಲದೆ ಪದ್ಯದ ರಾಗ – ತಾಳದ ಹೆಸರುಗಳನ್ನೂ ನೀಡಲಾಗಿದೆ.

ದೂಮಪ್ಪ ಮಾಸ್ತರ್, ೧೯೭೩
ಮಾದಿಗರ ಗಾದೆ
ಕ್ರೌನ್ ೧/೮, ಪುಟಗಳು : ೫+೧೨೧, ರೂ. ೩/-

ತುಳುನಾಡಿನ ಜನಜೀವನದ ಹಿನ್ನೆಲೆಯಾದ ಮೂಡಿಬಂದ ಅನುಭವ ಪೂರ್ಣವಾದ ಹೊಸ ಗಾದೆಗಳ ಸಂಕಲನ. ತುಳು ಗಾದೆಗಳನ್ನು ಬಳಸಿಕೊಂಡು ಬಹು ಸುಂದರವಾಗಿ ದ್ವಿಪದಿ ಛಂದಸ್ಸಿನಲ್ಲಿ ರಚಿಸಲಾದ ನೀತಿ ರಚನೆಗಳ ಹಾಗಿರುವ ಕೃತಿ.

ದೂಮಪ್ಪ ಮಾಸ್ತರ್ ಬಿ., ೧೯೭೭
ಅಗೋಳಿ ಮಂಜಣ್ಣ ಕತೆ
ಕ್ರೌ. ೧/೮, ಪುಟಗಳು : ೧೬, ರೂ. ೦.೫೦/-

ಅದ್ಭುತವಾದ ದೈಹಿಕ ಬಲದಿಂದಾಗಿ ದಂತಕಥೆಯಾಗಿ ಹೋದ ತುಳುನಾಡಿನ ಸಾಹಸಿ ವ್ಯಕ್ತಿಯ ನಿರೂಪಿಸುವ ದ್ವಿಪದಿಯಲ್ಲಿ ರಚಿತವಾದ ಕಾವ್ಯಕೃತಿ.

ದೊಡ್ಡಣ್ಣ ಶೆಟ್ಟಿ ಕೆಮ್ತೂರು
ತುಳುನಾಡ ಮಲ್ಲಿಗೆ
ಕಸ್ತೂರಿ ಸಾಹಿತ್ಯಮಾಲೆ, ಉಡುಪಿ
ಕ್ರೌನ್ ೧/೮, ಪುಟಗಳು : ೧೪, ರೂ. ಮೂರಾಣೆ.

ಮಲ್ಲಿಗೆ, ಪೊಸ ಮದ್ಮಲ್, ಪೊಸ ಮದ್ಮಯೆ, ದೀಪೊಳಿ ಪರ್ಬ, ದೇವೆರೆ ಗುಡಿ ಇತ್ಯಾದಿ ಭಾವಗೀತೆಗಳ ಸಂಗ್ರಹ.

ದೊಡ್ಡಣ್ಣ ಶೆಟ್ಟಿ ಕೆಮ್ತೂರು, ೧೯೫೬
ರಾಮಾಯಣ್ಣ ಪಾಡ್ದೊನೆ (ಪಾದೊ ೧)
ಕ್ರೌನ್ ೧/೮, ಪುಟಗಳು : ೨೦., ರೂ. ನಾಲ್ಕಾಣೆ

ಬಂಟೆರೆ ಸಂಧಿ ಪಾಡ್ದನ ಧಾಟಿಯಲ್ಲಿ ಬರೆದಿರುವ ತುಳು ರಾಮಾಯಣ.

ದೊಡ್ಡಣ್ಣ ಶೆಟ್ಟಿ ಕೆಮ್ತೂರು
ವಾವ್ಹಾರೆ ಕಮ್ಮೆನ
ಕ್ರೌನ್ ೧/೮, ಪುಟಗಳು : ೧೫, ರೂ. ನಾಲ್ಕಾಣೆ

ತುಳುನಾಟಕದ ಸಾಂದರ್ಭಿಕ ಹಾಡುಗಳ ಸಂಕಲನ.

ಪರಮೇಶ್ವರಯ್ಯ ಬುಡಕಬೈಲ್
ತುಳು ಪದ್ಯಾವಳಿ
ಕ್ರೌನ್ ೧/೮, ಪುಟಗಳು : ೩೨.

ಪರಮೇಶ್ವರಯ್ಯ ಬಡಕಬೈಲ್, ೧೯೭೪
ತುಳು ನೀತಿ ಪದ್ಯೆಲು
ಕ್ರೌನ್ ೧/೪, ಪುಟಗಳು : ೭+೨೭.

ತುಳು ಕವಿತೆಗಳ ಸಂಕಲನ.

ಪ್ರಭಾಕರ ರೈ ಬಿ.ಎ., ೧೯೯೯
ದಾದ ಉಂಡು ಮಾರಾಯರೆ? (ತುಳು ಕವನ ಸಂಕಲನ)
ಸಾತ್ವಿಕ ಪ್ರಕಾಶನ, ಬೆಂಗಳೂರು, ಡೆಮಿ ೧/೮, ಪುಟಗಳು : ೩೮+೬, ರೂ. ೨೫/-

ಒಟ್ಟು ೨೭ ಕವನಗಳಿವೆ. ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ಸಂಗತಿಗಳಿರುವುದರಿಂದ ಕವಿತೆಯ ರೂಪದಲ್ಲಿನ ಕಥೆಗಳೆಂದರೂ ತಪ್ಪಾಗಲಾರದು.

ಪ್ರಮೋದ ಕೆ. ಸುವರ್ಣ, ೨೦೦೩
ಕತೆ ಆಯೆರ್ ಪೊಣ್ಣುಲೈವೆರ್ (ತುಳು ಕಥನ ಕವನಗಳು)
ಹೇಮಾಂಶು ಪ್ರಕಾಶನ, ಮಂಗಳೂರು
ಡೆಮಿ ೧/೮, ಪುಟಗಳು : ೮೦, ರೂ. ೪೫/-

ಈ ಕೃತಿಯಲ್ಲಿ ‘ದಂಡ್ ಸಾದ್ಯಲ್ ದರ್ನಮ’, ‘ಕಾರ್ನಿಕದ ಕನ್ಯಾಲ್’, ‘ಮುತ್ತೇಸಿಕಟ್ಟೆ’, ‘ಸೊಲ್ಮೆ ಕೆರೆ’, ‘ಬಾಲೆ ಬನ್ನಾಲೆ’ ಇಂತಹ ಐದು ಕಥನ ಕವನಗಳಿವೆ. ಈ ಐದು ಕಥನ ಕವನಗಳಲ್ಲೂ ಅರಸು ಮನೆತನದ, ಬೀಡಿನ ಹೆಣ್ಣುಗಳ ಸಾಹಸಗಾಥೆಯ ನಿರೂಪಣೆಯಿದೆ. ತುಳು ಜನರ ಬದುಕಿನಲ್ಲಿರುವ ಸುಖ ಸಂತೋಷ, ನೋವು, ದುಃಖ – ದುಮ್ಮಾನ, ದುಗುಡ, ಮದುವೆ ಮುಂಜಿ, ನೇಮ, ಕೂಟ, ಸೂತಕ ಪಾತಕಗಳ ವಿವರಗಳಿವೆ.

ಪ್ರಮೋದ ಕೆ. ಸುವರ್ಣ, ೧೯೯೯
ತಾಟಿ ತೆಂಬರೆ (ಮಕ್ಕಳ ಕತೆಗಳು)
ಹೇಮಾಂಶು ಪ್ರಕಾಶನ, ಮಂಗಳೂರು
ಕ್ರೌ. ೧/೮, ಪುಟಗಳು : ೭೩, ರೂ. ೩೦/-

ಎಳೆಯ ಮಕ್ಕಳಿಗಾಗಿ ಬರೆದ ತಾಟಿ ಪದಗಳೂ, ಹರೆಯದ ಮಕ್ಕಳಿಗಾಗಿ ಬರೆದ ತೆಂಬರೆ ಪದಗಳೂ ಒಟ್ಟಾಗಿ ತಾಟಿ ತೆಂಬರೆಯಾಗಿದೆ. ಗೇಯ ಗುಣದ ಈ ಪದಗಳನ್ನು ಅಭಿನಯ ಗೀತೆಗಳಾಗಿ ಪದ್ರರ್ಶನ ಯೋಗ್ಯತೆಯನ್ನು ಪಡೆದಿವೆ. ಅಲ್ಲಲ್ಲಿ ಪ್ರಾಣಿ ಪಕ್ಷಿಗಳ ಚಿತ್ರಗಳೂ ಇವೆ.

ಪ್ರಮೋದ ಕೆ. ಸುವರ್ಣ, ೧೯೯೬
ಪದರಂಗಿತ
ಡೆಮಿ ೧/೮, ಪುಟಗಳು : ೧೦೦, ರೂ. ೪೨/-

೭೯ ಸ್ವತಂತ್ರವಾದ ತುಳು ಗೇಯ ಕವಿತೆಗಳ ಸಂಕಲನ.

ಪ್ರಮೋದ ಕೆ. ಸುವರ್ಣ, ೧೯೮೮
ಪೂಮಾಲೆ (ಕವನ ಸಂಕಲನ)
ತುಳುಕೂಟ ಮಂಗಳೂರು, ಕ್ರೌನ್ ೧/೮, ಪುಟಗಳು : ೧೭, ರೂ. ೫/-

ಬಡತನ ನೋವು, ಸಂಕಷ್ಟ, ಬೇಜಾರುಗಳು ನಡುವೆಯೂ ತುಳುವರು ಹೇಗೆ ಬದುಕಿನ ಸುಖ ಸಂತೋಷವನ್ನು ಪಡಕೊಂಡು ಬಂದಿದ್ದಾರೆ ಎನ್ನುವ ತತ್ವವನ್ನು ಹೆಚ್ಚಿನ ಕವನಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ‘ಕನ’ ಎಂಬ ಕವನದಲ್ಲಿ ಮನಸ್ಸಿನಲ್ಲಿನ ಬಯಕೆ ಹೇಗೆ ಕನಸಿನ ರೂಪದಲ್ಲಿ ಸುಖ ಕೊಡುತ್ತದೆಯೆಂಬುದನ್ನು ಹೇಳಿದ್ದಾರೆ. ‘ಮದಿರೆಂಗಿ’, ‘ಓಲೆ’ಯಂಥ ಕವನಗಳಲ್ಲಿ ಖುಷಿಯಾಗಿರುವ ಮನಸ್ಸು ನಲಿಯುವ, ನಗುವ, ಹಕ್ಕಿಯಂತೆ ಹಾರುವ ಚಿತ್ರವಿದೆ. ಇಂಥ ೧೫ ಕವನಗಳೂ ಪ್ರಾರಂಭದಲ್ಲಿ ಗಣಪನ ಸ್ತುತಿ ಪದ್ಯವೂ ಇದೆ.

ಬಡಕಬೈಲ್ ಪರ್ಮೇಸ್ರಯ್ಯೆರ್, ೧೯೭೪
ತುಳು ನೀತಿಪದ್ಯೊಲು
ಪ್ರಕಾಶಕರು : ಬಾಲಕೃಷ್ಣ ಶೆಟ್ಟಿ ಪೊಳಲಿ, ಕ್ರೌ. ೧/೮, ಪು. ೨೬

ತುಳು ನೀತಿ ಪದಗಳ ಸಂಗ್ರಹ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ. (ಪ್ರ.ಸಂ.,) ವಾಮನ ನಂದಾವರ (ಸಂ.)
ಜೋಕ್ಲೆ ದನಿ (ತುಳು ಕತೆ ಮತ್ತು ಕವನಗಳ ಸಂಕಲನ)
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ಡೆಮಿ ೧/೮, ರೂ, ರೂ. ೫/-

ಉಜಿರೆಯಲ್ಲಿನ ಕಮ್ಮಟದಲ್ಲಿ ಹಿರಿಯರು ಮತ್ತು ಮಕ್ಕಳು ರಚನೆ ಮಾಡಿದ ಕತೆ ಕವಿತೆಗಳ ಸಂಗ್ರಹ ಇದಾಗಿದೆ. ೧೩ ಕವಿತೆಗಳು ಹಾಗೂ ೧೫ ಕತೆಗಳಿವೆ.

ಬಾಲಕೃಷ್ಣ ಶೆಟ್ಟಿ ಪೊಳಲಿ ಅ., ೧೯೯೨
ಪೆಂಗ ದೂಮನ ಕಬಿತೊಲು (ತುಳು ಮುತ್ತು ಪದೊಕ್ಲೆನ ಕದಿಕೆ)
ಶ್ರೀದೇವಿ ಪ್ರಕಾಶನ, ಪರ್ಕಳ, ಪುಟಗಳು : ೧೫೨, ರೂ. ೩೦/-

ತುಳು ಸ್ವತಂತ್ರವಾದ ಕವನ ಸಂಕಲನ.

ಭಾಸ್ಕರ ಶೆಟ್ಟಿ ಪೆರ್ಡೂರು, ೧೯೯೩
ಸೂದ್ರನ ಕಾನಿಗೆ
ಕ್ರೌನ್ ೧/೮, ಪುಟಗಳು : ೫೨, ರೂ. ೧೫/-

೨೧ ಸಚಿತ್ರ ತುಳು ಕವಿತೆಗಳ ಸಂಕಲನ.

ಭಾಸ್ಕರ ಭಂಡಾರಿ ಮಜಿಬೈಲು, ೨೦೦೦
ಗಗ್ಗರೊ (ತುಳು ಕವನ ಸಂಕಲನ)
ಶಭೋದಯ ಪ್ರಕಾಶನ, ಕ್ರೌನ್ ೧/೮, ಪುಟಗಳು : ೫+೪೭, ರೂ. ೨೫/-

ಈ ಸಂಕಲನದಲ್ಲಿ ಒಟ್ಟು ೨೫ ಕವಿತೆಗಳಿವೆ. ಇದರಲ್ಲಿ ಕೆಲವು ಅನುವಾದಿತ ಕವನಗಳನ್ನೊಳಗೊಂಡು ಪ್ರಕೃತಿಯ ಕುರಿತ, ಸತ್ಯ – ಅಹಿಂಸೆ ಬೋಧಿಸಿದ ಗಾಂಧಿ, ಕ್ರಿಸ್ತ, ಬುದ್ಧನ ಕುರಿತ ದೇಶಭಕ್ತಿಯ ಕುರಿತ ಹಲವು ಕವನಗಳಿವೆ.

ಭಾಸ್ಕರ ಶೆಟ್ಟಿ ಪೆಡೂರು, ೧೯೯೧
ತುಳು ದೈವಿಕ ಭಜನಾವಳಿ
ಗೀತೋದಯ ಪ್ರಕಾಶನ, ಕ್ರೋಡಾಶ್ರಮ, ಉಡುಪಿ
ಕ್ರೌ. ೧/೮, ಪುಟಗಳು : ೪೪ ಬೆಲೆ : ರೂ. ೮/-

ದಾಸ ಭಾಸ್ಕರ, ಭುವಾಜಿ ಭಾಸ್ಕರ, ಭಜನ ಭಾಸ್ಕರ ಎಂಬ ಬಿರುದುಗಳನ್ನು ಪಡೆದ ಕವಿಯ ತುಳು ಭಜನೆಯ ಹಾಡುಗಳು ಸಂಕಲನ.

ಭೋಜ ಶೆಟ್ಟಿ ಕೋಡು, ೧೯೯೯
ಪರವೂರ ಸುಬಗೆ
ಡೆಮಿ ೧/೮, ಪುಟಗಳು : ೬+೭೦, ರೂ. ೪೫/-

ತುಳು ಕವಿತೆಗಳ ಸಂಕಲನ.

ಮ೦ಚಿ ಎಸ್.ಪಿ., ೧೯೮೭
ಪುರ್ಪ
ಜಾನಪದ ಸಾಹಿತ ಪ್ರಕಾಶನ, ಮಂಚಿ
ಕ್ರೌನ್ ೧/೮, ಪುಟಗಳು : ೩೪, ಬೆಲೆ : ರೂ. ೫/-

ತುಳು ಕವನಗಳ ಸಂಕಲನ.

ಮಂಚಿ ಎಸ್.ಪಿ., ೧೯೯೭
ಮನೊ ತೋರೊಂದುಂಡು
ನೇಹಾ ಧರಿತ್ರಿ ಪ್ರಕಾಶನ, ಮಂಗಳೂರು
ಡೆಮಿ ೧/೮, ಪುಟಗಳು : ೧೦+೧೦೫, ರೂ. ೭೫/-

ತುಳು ಕವಿತೆಗಳ ಸಂಕಲನ.

ಮಹಾಬಲೇಶ್ವರ ಭಟ್ ಪಾಡರು, ೧೯೮೬
ಪಿಂಗಾರ
ಜಾನಪದ ಸಾಹಿತ್ಯ, ಮಂಚಿ, ಕ್ರೌನ್, ೧/೮, ಪುಟಗಳು : ೨೦, ರೂ. ೧/-

ತುಳು ಪದ್ಯಗಳ ಸಂಕಲನ.

ಮಾರಪ್ಪ ಶೆಟ್ಟಿ ನರ್ಕಳ, ೧೯೨೯,
ಅಮಲ್ ದೆಪ್ಪಡೆ

ತುಳುವಿನಲ್ಲಿ ಅಚ್ಚಾಗಿರುವ ಮೊತ್ತ ಮೊದಲ ಸ್ವತಂತ್ರ ಕವನ ಸಂಕಲನ.