ಮೂಲ ತುಳು : ಅಗ್ರಾಳ ಪುರಂದರ ರೈ
ಕನ್ನಡಕ್ಕೆ : ವಾಮನ ನಂದಾವರ

 

ತುಳು ಚಳುವಳಿ, ತುಳು ಭಾಷೆಯನ್ನು ಮರೆತಿರುವ ಆ ಕಾಲದಲ್ಲಿ ಹಳ್ಳಿಯ ಮೂಲೆಯಲ್ಲಿ ಒಬ್ಬೊಬ್ಬ ವ್ಯಕ್ತಿ ಮಾಡಿರುವ ಕೆಲಸವೂ ಆ ಹೊತ್ತಿಗೆ ದೊಡ್ಡದೆ. ಅದಕ್ಕಾಗಿ ಅಂತಹ ಸಾಧನೆಗಳನ್ನು ಪರಿಚಯಿಸುವುದೇ ಈ ಲೇಖನದ ಉದ್ದೇಶ.    

ಇಂದು ತುಳ ಭಾಷೆ ಪ್ರಚಾರ ಪಡೆಯುತ್ತಿದೆ. ಪೌರಾಣಿಕ ಮತ್ತು ಬೇರೆ ಚಾರಿತ್ರಿಕ, ಸಾಮಾಜಿಕ ಯಕ್ಷಗಾನ ಪ್ರಸಂಗಗಳು ಪ್ರಕಟ ಆಗಿ ಆಟ ಆಡಿಸುತ್ತಿದ್ದಾರೆ. ಹಾಗೆಯೇ ನಾಟಕಗಳನ್ನೂ ಪ್ರಕಟಿಸಿ ಆಡುತ್ತಿದ್ದಾರೆ. ಚಲನಚಿತ್ರಗಳೂ ಆಗುತ್ತಿವೆ. ನಾನು ಪರಿಚಯಿಸುವ ಕವಿಗಳು ತುಳುಭಾಷೆ ನಿದ್ರಿಸುತ್ತಿರುವಾಗ ಒಬ್ಬೊಬ್ಬ ಅಲ್ಲಲ್ಲಿ ಎಚ್ಚರಗೊಂಡು ಬರೆದ ಪ್ರಸಂಗಗಳು, ಅವರ ಪರಿಚಯ, ಅವರು ಬರೆದ ಪ್ರಸಂಗದ ಕೊನೆಗೆ ಅವರೆಲ್ಲ ತಿಳಿಸಿದಂತೆ ತಿಳಿಸಿದ್ದೇನೆ. ಅದರಲ್ಲಿ ಅವರ ಊರು, ಹಿರಿಯರು ಮೊದಲಾದುವು ತಿಳಿದು ಬರುತ್ತದೆ. ಅವು ಹೀಗಿದೆ ನೋಡಿ:

ತುಳುವಿನ ಮೊದಲ ಯಕ್ಷಗಾನ ಪ್ರಸಂಗವೆಂದರೆ ‘ತುಳು ಪಂಚವಟಿ’ ೧೮೮೭ರಲ್ಲಿ ಪ್ರಕಟಗೊಂಡು ೧೯೨೭ರಲ್ಲಿ ಮೂರು ಬಾರಿ ಅಚ್ಚಾಗಿರುತ್ತದೆ. ಆ ಕವಿ ಯಾರೆಂಬುದನ್ನು ಹೀಗೆ ಹೇಳುತ್ತಾರೆ.

೧. ತುಳು ಪಂಚವಟಿ (೧೮೮೭)

ಏರ್ ತುಳುಟೀ ವಾಲಿ ಸುಗ್ರೀವ ಕಥೆ ಮಾಳ್ತ್|
ನಾರ್ ಪಂಡ್‌೦ಡ ಇಟ್ಟಲ ಸೀಮೆತುಳಯಿ ಬಾ|
ಯಾರ್ ಪೆರ್ವಡಿ ಕೃಷ್ಣ ಬಟ್ರೆ ಮಗೆ ಸಂಕಯ್ಯ ಭಾಗೋತೆ ಪಣ್ಪಿ ಬಿರಣೆ|
ಊರು ಕಾತೊಣ್ಪಿ ದೇವೆರ್ ಪಂಚಲಿಂಗೆ ಪಣ್|
ಪ್ನಾರ್ ಪಣ್ಪಾಯಿಲೆಕ್ಕೊನೇ ಮಾಳ್ತೆ ಈ ಪದೊನು|
ಊರುಟೇರಾಂಟ್ಲ ತಪ್ಪುತ್ತುಂಟ ತಿದ್ದೊಣೊಡು ನೆರಿಯರಾವಂದೆನ್ನನ್ ||೧||

ಕಾಲೊತೈನಂಗನೋದುನಗ ಕಲಿಯುಗ ವರ್ಸೊ|
ನಾಲ್ ಸಾರತ್ತೊಂರ್ಬೊನೂತ್ತ ಎಣ್ಪತ್ತೊಂರ್ಬೊ|
ಕಾಲೊತಾ ಸರ್ವಜಿತು ಸಂವತ್ಸರೊಡ ಬೇಸ್ಯ ಪುಣ್ಣಮೆದ ಪೂವೆದಾನಿ|
ವಾಲಿ ಸುಗ್ರೀವ ಕತೆ ತುಳುಟ್ ಮಾಳ್‌ತ್‌ಮುಗಿಂ|
ಡಾಲಸ್ಯೊ ಬುಡ್ತಿಂದೆನೋದು ಕೇಣ್ಣಾಕ್‌ಳೆನ್|
ಪಾಲಿಪೆರ್ ಭಗವಂತ ಸತ್ಯೊನೇ ಸರಿಯೆಂದ್ ನಂಬೊಣೊಡು ಸರ್ವ ಜನಲಾ ||೨||

ತು ಪಂಚವಟಿ : ಅನುವಾದ

ಯಾರು ತುಳುವಲಿ ವಾಲಿ ಸುಗ್ರೀವ ಕತೆ ಮಾಡಿ-
ಹರವರೆಂದೆನಲು ವಿಟ್ಟಲ ಸೀಮೆಯೊಳಗೆ ಬಾ|
ಯಾರು ಪೆರ್ವಡಿ ಕೃಷ್ಣ ಭಟ್ರ ಮಗ ಸಂಕಯ್ಯ ಭಾಗವತನೆನುವ ವಿಪ್ರ|
ಊರು ಕಾಯುತಿಹ ದೇವರು ಪಂಚಲಿಂಗವೆಂ-
ದಾರವರಿಹರವರಾಣತಿಯಂತೆ ನಾ ಬರೆದೆ |
ಊರೊಳಿದನೋದಿದವರಿರೆ ತಿದ್ದುವುದಪಕೀರ್ತಿ ಬರೆದವಗೆ ಬರದಿರಲಿ|
ಕಾಲ ಪಂಚಾಂಗವನ್ನೋದೆ ಕಲಿಯುಗ ವರ್ಷ
ನಾಲ್ಕು ಸಾವಿರದೊಂಬೈನೂರೆಂಬತೊಂಬತರ |
ಕಾಲದಾ ಸರ್ವಜಿತು ಸಂವತ್ಸರದ ಬೇಶ ಹುಣ್ಣಿಮೆಯ ಮೊದಲ ದಿನದಿ|
ವಾಲಿ ಸುಗ್ರೀವ ಕತೆ ತುಳುವಿನಲರುಹಿ ಮುಗಿಯಿ|
ತಾಲಸ್ಯವನು ಬಿಟ್ಟಿದನ್ನೋದಿ ಕೇಳ್ದವರ|
ಪಾಲಿಪರು ಭಗವಂತ ಸತ್ಯವೇ ಸರಿಯೆಂದು ನಂಬಿರಲು ಸರ್ವಜನರೂ|

೨. ಕಿಟ್ಣರಾಜಿ ಪ್ರಸಂಗೊ (೧೯೨೯)

ಯೇರ್ ತುಳುಟೀ ಕಿಟ್ಣರಾಜಿ ಪ್ರಸಂಗ ಬರೆ-
ನಾರ್ ತುಳುನಾಡ್ ಚೌಟೆರೆ ಸೀಮೆ ಪುರಲ ಬರಿ|
ತೇರ ಪುಂಚಮೆದ ಕಿಟ್ಟಪ್ಪಯೆರೆ ಬಡಕಯಿಲ್‌ಡಿತ್ತಿ ಮಗೆ ಸಂಕಪ್ಪಯೇ|
ಆರೆ ಮದಿಮಾಳ್ ಬಂಗೆರೆ ಸೀಮೆಡಿತ್ತಿ ನೆ-
ತ್ತೇರ್ಕೆದು ಪೊಳ್ಳೇರ್ ಮಗಳ್ ಕಾಸಪ್ಪೆ ಮೆಕು|
ಳೀರುವೆರೆ ಪಿರಿತಿದಾ ಬಾಲೆ ಕಬಿ ಪರ್ಮೇಸ್‌ರಯ್ಯೇನ್ಪಿ ಪುದರ್ದಾಯೇ||೧||

ಸುರುಟು ಮದುಕೈಟಬೆರೆ ಕೆರ್ದ ನೆಲ ಬಾನೊಲೆನ್|
ತಿರುಮಳ್ತ್ ಕೊರುದು ಬೆರ್ಮಾ ಗೆರುತ ಕೆಕ್ಕಿಲ್‌ನ್‌|
ನುರುಗಾದ್ ನೆತ್ತೆರ್ ಬಿತ್ತ್‌ನಿಂಗ್‌ದ್‌ಸುಂಬಸುಂಬೆರೆನ್ ಮಾಜಾಡ್‌ದ್|
ಕುರಿ ಚಂಡಮುಂಡೆರೆನ್ ತರೆ ಚೆಂಡ್‌ಗೊಬ್ಬುದೀ|
ಪುರಲ್‌ಡಿತ್ತಿನ ಸಿರಿ ಪರ್ಮೆಸಿರಿ ಮಾದೇವಿ|
ಸಿರಿ ಕಿಟ್ಣ ಮೆಗ್ತಿ ಪಣ್ಪಾಯಿಲೆಕ ಪಂಡೆ ತಪ್ಪಿತ್‌೦ಡ ತಿದ್ದೋಣುಲೇ ||೨||

ಐನ್ ಮೈನೋದುನಗ ನಡಪು ಕಲ್ಜಿಗತೊರ್ಸ|
ಐನ್‌ಸಾರದ ಮುಪ್ಪ ಯಿಬವ ಸಂವಸ್ಸರೊಡು|
ಐನನೇ ರುತು ಪುಯಿಂತೇಲ್ ತಿಂಗೊಳುಡು ಪದ್‌ನೈನ ಪೋಪಿನ ದಿನೋಟೂ ||

ಐನಂಬುದಾಯ ಕೊಡೆ ಬಾರೊಡೇ ಬರೆದ್ ಮುಗಿ|
ನೈನ್ ಬಯ ಬಕ್ತಿಡುರುಬುಡುದು ಕೇಂಡಿನ ಜನತ|
ಮೈನ್ ಪತ್ತ್‌ದ್ ಕಾಪೆ ಸಿರಿಕಿಟ್ಣೆ ಬಗವಂತೆ ಐನ್‌ನಂಬೊಡು ಮಾತೆರ್ಲಾ ||೩||

ತ್ತಾರು ಕೆರೆ ಹೊಳ್ಳರಾ ಮಗಳು ಕಾಸಮ್ಮ ಇವ
ರೀರುವರ ಪ್ರಿಯಕುವರ ಪರಮೇಶ್ವರಯ್ಯ ಕವಿ ಎಂದೆನಿಪ ಹೆಸರಿನವರು
ಶುರುವಿನಲಿ ಮದುಕೈಟಭರ ಕೊಂದು ನೆಲ ಬಾನ
ಸ್ಥಿರಮಾಡಿ ಕೊಟ್ಟು ಬೊಮ್ಮನಿಗೆ ಕೋಣನ ಕೊರಳ
ತರಿದು ನೆತ್ತರಿನ ಬೀಜವನು ನುಂಗಿ ಶುಂಭನಿಶುಂಭರನು ಸಂಹರಿಸುತ
ಕುರಿ ಚಂಡಮುಂಡರಾ ರುಂಡಗಳ ಚೆಂಡಾಡಿ
ಸಿರಿ ಪೊಳಲಿಯೊಳಿಹ ಪರಮೇಶ್ವರಿ ಮಹಾದೇವಿ
ಸಿರಿ ಕೃಷ್ಣನನುಜೆಯಾಣತಿಯಂತೆ ಹೇಳಿಹೆನು ತಪ್ಪಿರಲು ತಿದ್ದಿಕೊಳ್ಳಿ
ಐದಂಗಗಳ ನೋಡೆ ನಡೆವ ಕಲಿಯುಗ ವರ್ಷ
ಐದು ಸಾವಿರದ ಮೂವತ್ತು ವಿಭವಾ ವರ್ಷ
ಐದನೆಯ ಋತುವಿನಲಿ ಮಕರ ಮಾಸದಲಿ ಹದಿನೈದು ಸಲುವ ದಿನದಂದು
ಐದಂಬಿನವನ ಕೊಡೆವಾರದಲಿ ಬರೆದು ಮುಗಿ
ದುದನು ಭಯಭಕ್ತಿಯಲಿ ಕೇಳ್ದವರನನವರತ
ಮುದದಿಂದ ಕಾವ ಶ್ರೀಕೃಷ್ಣ ಭಗವಂತನನು ದಿನವು ಜನ ಕೊಂಡಾಡಲಿ ||೩||

೩. ತುಳು ಪಂಚವಟ ವಾಲಿ ಸಂಹಾರ (೧೯೩೮)

ಈ ರಾಮ ಚರಿತೆ ಜನೊ ಪಿನೊಡುಂದ್ ಬರೆಯಿನಿ ಕೂ|
ಳೂರ ನಿರೆತೆಲಿಯಾಣ ಚಿಕ್ಕಪ್ಪು ಶೆಟ್ರ ಮಗೆ|
ದೇರಂಬಳನ್ಪಿಲ್ಲ್ ದಾಯೆ ತ್ಯಾಂಪಣ್ಣ ಶೆಟ್ಟಿನಿಂಚಿ ಪುದರ್ದ ಬಂಟೇ||
ಈ ರಾಮ ಚರಿತೆನ್ ತುಳುಟ್ಟು ದುಂಬೊರ್ಯೆ ಬಾ |
ಯಾರ ಸಂಕಯ್ಯ ಭಾಗವತೆರ್ ಪಣ್ಪಿಂಚಿತ್ತಿ|
ನಾರ್ ಬರೆತೆರ್ಗೆ ರಡ್ದನೆದ ತೌಳವ ಭಾಷೆದೀ ಕೃತಿಕ್ಕೀಡೆಗಂತ್ಯೋ ||೧||
ಪುರತ್ ತುಳು ಪಂಚವಟಿ ಪಣ್ಪಿ ಸಾದಿನ್ ಪತ್ತ್ |
ಬರೆದಿನೀ ಕವಿತೆನೇನೈಡ್ದಾದ್ ಪರ ಕವಿತೆ |
ಬರೆಯಿಂಚಿ ಸಂಕಯ್ಯ ಭಾಗವತೆರೆಗ್ ಬಗ್ಗೊಣುಬೆಯೇನ್ ಗುರು ಭಾವೊಡು||
ಬರೆದಂತ್ಯೊ ಮಾಳ್ತ್‌ದಿನೆ ಕಲಿವರ್ಷ ದೈನ್ ಸಾ|
ವಿರೋದ ಮೇಲ್ ಮುಪ್ಪತ್ತರಡ್ದನೆ ಪ್ರಮೋದೂತ|
ವರುಷ ಮಾಘದ ಶುದ್ಧ ಪಂಚಮಿದ ಶನಿವಾರದೊನ್ಯುತ್ತರಾಭದ್ರೆಡ್ ||೨||
ಮುನ್ನೂತ ಮಿತ್ತೈನ್ ಪತ್ತೊಂಜಿ ಪದೊಟಿಂದೆ |
ನೆನ್ನ ಬಾಯಿಡ್ ನುಡಿಪಾಯೆರ್ ಮದೂರುದ ದೇವೆ|
ರೆನ್ನ ಬುದ್ಧಿದ ಮಿಶ್ರೊಡುಪ್ಪಂದ್ ತಪ್ಪಂದ್ ಪಂಡ್ರಿಯೆರೆ ಬಲ್ಲಿಯೇನಡ್ದ್ ||
ಕಣ್ಣ್‌ಡಿಂದೆನ್ ತೂಯಿ ಕಬಿಕುಳೆಡ್ ಕೇಂಡಿಂಚಿ|
ಯೆನ್ನಣ್ಣೆರೆನಕುಳೆಡಲೆನ್ನ ವಿಜ್ಞಾಪನೆನೆ|
ಕಿನ್ನಿ ಬಾಲೆಳೆ ಮೋಡಿ ಪಾತೆರೊದ ಭಾವನೆನ್ ನೆನೆತೊಣುದು ಕೇಣ್ಯೆಂದ್‌ದ್‌||೩||

ತುಳು ಪಂಚವಟಿ ವಾಲಿ ಸಂಹಾರ : ಅನುವಾದ

ಈ ರಾಮ ಚರಿತೆಯನು ಜನರರಿಯೆ ಬರೆದೆ ಕೂ
ಳೂರ ನೆರೆಯೆಲಿಯಾಣ ಚಿಕ್ಕಪ್ಪ ಶೆಟ್ರ ಮಗ
ದೇರಂಬಳದೊಳಿದ್ದ ಮನೆಯಾತ ತ್ಯಾಂಪಣ್ಣ ಶೆಟ್ಟಿಯಾಗಿದ್ದ ಬಂಟ
ಈ ರಾಮ ಚರಿತೆಯನು ತುಳುವಿನಲಿ ಹಿಂದೆ ಬಾ
ಯಾರು ಸಂಕಯ್ಯ ಭಾಗವತರೆನ್ನಿಸಿಕೊಂಡ
ವರು ಬರೆದಿರುವರಂತೆ ತುಳುವಿನೆರಡನೆಯ ಕೃತಿಯಲ್ಲಿಗಿದುವೆ ಕೊನೆಯಂತೆ

೪. ಅಂಗದ ರಾಜಿ ಪರ್ಸಂಗ (೧೯೫೪)

ಈ ಪರ್ಸಂಗ ಬರೆಯಿನಾರ್ ಕೆಮ್ತೂರ್ ದೊಡ್ಡಣ್ಣ ಶೆಟ್ರ್ ಈ ಪರ್ಸಂಗೊನು ಅರೆನ ಅಪ್ಪೆಗ್ ಕಾಣಿಕೆ ಅರ್ಪಿಸಾದೆರ್. ಪರ್ಸಂಗದ ಕಡೆಕ್ ಆರೆನ ವಿಚಾರ ದಾಲ ತೆರಿಪಾದ್‌ಜೆರ್.

ಕಾಣಿಕೆಡ್ ಮಾತ್ರ ಇಂಚ ತೆರಿದ್ ಬರ್ಪುಂಡು
ಕೇಂಜದಾ ಬರ್ಪಣಿದ ಕೊರಗ ಸೆಟ್ರೆನ ಮಗಳ್ |
ಕೆಮ್ದೂರ ತಿರ್ತಿಲ್ಲ ಜಗನ್ನಾಥ ಶೆಟ್ರ ಮರ್ಮಾಳ್
ದೆಂದೂರ ಇಲ್ಲದ ಚಂದೈಯ್ಯ ಸೆಟ್ರೆ ಕೈ ಪತಿದಿ ಭಾಗ್ಯದಾಳ ||
ಕುಂದು ಕೊರತೆನ್ ಮಾತ ತಿದ್ದೊಂದು ತಾಂಕೊಂದು |
ಅಂದ್ ಮಳ್ತಿನ ಅಪ್ಟೆ ರಾದಮ್ಮ ಸೆಡ್ತೇರೆ |
ತಿಂದಿ ಎದೆಪೇರ ಋಣ ಸಂದಾಯೊಗು ಕಿಂಚಿತ್‌ವೂಂದೆ ನೊಪ್ಪಿಸಾದೆ ಕಾಣ್ಕೆ

ಅಂಗದ ರಾಜಿ ಪರ್ಸಂಗ : ಅನುವಾದ

ಕೇಂಜದಾ ಬರ್ಪಣಿಯ ಕೊರಗ ಶೆಟ್ಟರ ಮಗಳು
ಕೆಮ್ತೂರು ಕೆಳಮನೆಯ ಜಗನ್ನಾಥ ಶೆಟ್ರ ಸೊಸೆ
ದೆಂದೂರ ಮನೆಯ ಚಂದಯ ಶೆಟ್ಟರ ಕೈಹಿಡಿದ ಭಾಗ್ಯದವಳು
ಕುಂದು ಕೊರತೆಯನೆಲ್ಲವನು ತಿದ್ದಿ ಪಾಲಿಸುತ
ಚಂದ ಮಾಡಿದ ತಾಯಿ ರಾಜಮ್ಮ ಶೆಡ್ತಿಯರ
ತಿಂದ ಎದೆ ಹಾಲ ಋಣ ಸಂದಾಯ ಕಿಂಚಿತ್ತು ಒಪ್ಪಿಸಿಹೆನೀಕಾಣಿಕೆಯ

೫. ಖರದೂಷಣೆರೆ ವಧೆ (ಅಚ್ಚಾತ್‌ಜಿ)

ಎಂದಿಂಚ ವಾಲ್ಮೀಕಿ ಮುನಿ ಕುಶಲವೆರೆಗಾ |
ನಂದೋಟು ಪಂಡಿಂಚಿ ಕಥೆನೇನ್|
ಪಿಂದಿಲೆಕ್ಯೊನೆ ಮಾಳ್ತೆ ತುಳು ಬಾಸೆಟಿಂದೇಟ್ ಕುಂದುಗುಳುತ್ತುಂಡ ಸೂತ್ ||
ಬುದ್ಧಿ ನಾಲಿಗೆಳೆನ್ನ ಮೇಲೆಟ್ ದೋಸೋ |
ಹೊದ್ದಾವರಾವಂದ್ ಪದೊನು ತಿದ್‌ತ್‌ಸಮಮಾಳ್ತ್ |
ನಂದಂಟ ಬೆಲ್ಲೋತ ಮುದ್ದೆಯಾವಿಂದೂರ ಜನೊಕ್ಕೂ ||೧||

ಸೊಗಸ್‌ಟೀಕತೆ ಮಾಳ್ತ್‌ನಾರ್ ಎಂಕಪ್ಪೇರೆ |
ಮಗೆ ಕೃಷ್ಣೆ ಪಣ್ಪುಂಚಿ ಬ್ರಾಣೆ |
ಹಗುರೊ ಮಾಳ್ಪಡೆ ಕರುಂಬು ಡೊಂಕಾಟ್ಳ ಚೀಪೆಗ್ ದಾಲ ಕೊರತೆಗುಳು ಉಂಡೋ ||

ಆಲಸ್ಯೊ ಬುಡುದ್ ಇಂದೇನೋದ್ ಕೇಣ್ಣಾಕುಳೆಗ್|
ದಾಲ ಕಷ್ಟೊಗುಳ್ ದೇವೆರ್ ದಯೊ ದೀದ್
ಪಾಲಿಪೆರ್ ಸತ್ಯೊ ನಂಬೊಣೊಲೀ ||೨||

ಖರದೂಷಣೆರೆ ವಧೆ : ಅನುವಾದ

ಸೊಗಸಿನಲಿ ಕತೆ ಮಾಡಿದವರು ಎಂಕಪ್ಪಯ್ಯರ
ಮಗ ಕೃಷ್ಣನೆನುವಂತ ಬ್ರಾಹ್ಮಣ
ಹಗುರ ಮಾಡದಿರಿ ಕಬ್ಬು ಡೊಂಕಾದರು ಸಿಹಿಗೇನು ಕೊರತೆಯೇ?

ತುಳು ಸೊಗಸಾದ ತುರ್ಜುಮೆ

ಜಗತ್ತಿನ ದೊಡ್ಡ ಭಾಷಾ ವಿಜ್ಞಾನಿಗಳು ತುಳು ಭಾಷೆಯನ್ನು ಚೆನ್ನಾಗಿ ಹೊಗಳಿದ್ದಾರೆ. ತುಳು ಭಾಷೆಯಲ್ಲಿ ಇದ್ದ ದನಿ, ಹನಿ, ಬೆಲೆ ಎಲ್ಲ ಅವರು ಮೆಚ್ಚಿದವರು. ಕಳೆದ ಶತಮಾನದಲ್ಲಿ ಕಾಲ್ಡ್‌ವೆಲ್‌ಎನ್ನುವ ಭಾಷಾ ವಿಜ್ಞಾನಿಗೆ ಬಹಳಷ್ಟು ಆಶ್ಚರ್ಯವಾಗಿತ್ತು. ಈ ತುಳುಭಾಷೆ ಬರವಣಿಗೆ ರೂಪದಲ್ಲಿ ಇಲ್ಲದಿದ್ದರೂ ಸುಸಂಸ್ಕೃತ ಜನಾಂಗದ ಆಡುಭಾಷೆ, ಚೆನ್ನಾಗಿ ವಿಕಾಸ ಆದ ಭಾಷೆ. ಇದನ್ನು ಏಕೆ ಬರವಣಿಗೆಯಲ್ಲಿ ಸೊಗಸಾಗಿ, ಅಚ್ಚುಕಟ್ಟಾಗಿ ತರಲಿಲ್ಲವೆಂದು ಹೇಳಿದ್ದಾರೆ.

ಸೊಗಸಾಗಿ ಎನ್ನುವಾಗ ನನಗೆ ನೆನಪಾಗುವುದು ಸುಮಾರು ಅರುವತ್ತು ವರ್ಷ ಹಿಂದೆ ನರ್ಕಳ ಮಾರಪ್ಪ ಶೆಟ್ಟರು ‘ಪೊರ್ಲಕಂಟ್’ ಎನ್ನುವ ಪುಸ್ತಕದಲ್ಲಿ ‘ಒಯಿಟ್ ಪೊರ್ಲುಂಡು, ಒಯಿಟ್ ಪೊರ್ಲು ಇದ್ದಿ’ ಎಂಬುದಾಗಿ ಒಂದು ಕವಿತೆ ಬರೆದಿದ್ದಾರೆ. ತುಂಬಾ ಸೊಗಾಸಾದ ಕವಿತೆ.

ಈ ಕವಿತೆಯನ್ನು ಪ್ರಸಿದ್ಧ ಸಾಹಿತಿ ಶಿವರಾಮಕಾರಂತರು ಕನ್ನಡಕ್ಕೆ ತುರ್ಜುಮೆಗೊಳಿಸಿ ಅವರ ‘ಸಿರಿಗನ್ನಡ ಪಾಠಮಾಲೆ’ ಎನ್ನುವ ಶಾಲಾಪಠ್ಯ ಪುಸ್ತಕದಲ್ಲಿ ಪ್ರಕಟಮಾಡಿದ್ದಾರೆ. ಪ್ರಾಯಶಃ ತುಳುವಿನಿಂದ ಇಂದು ಕನ್ನಡಕ್ಕೆ ತುರ್ಜುಮೆ ಆಗಿ ಪಠ್ಯ ಪುಸ್ತಕಕ್ಕೆ ಸೇರಿದ ಶುರುವಿನ ಕವಿತೆ ಎಂಬುದು ನನ್ನ ನೆನಪು.

ಹಾಗೆಯೇ ಕನ್ನಡದಿಂದ ತುಳುವಿಗೆ ತುರ್ಜುಮೆ ಸೊಗಸಾಗಿ ಮಾಡಬಹುದೆಂದು ಬಡಕಬೈಲ್ ಪರಮೇಶ್ವರಯ್ಯರ ‘ಕಿಟ್ಣರಾಜಿ’ ಪ್ರಸಂಗದಲ್ಲಿ ತಿಳಿಸಿದ್ದಾರೆ. ಅದರಲ್ಲಿ ಮುಖ್ಯವಾದ ಎರಡು ವಾರ್ಧಕ ಷಟ್ಪದಿಗಳ ತುರ್ಜುಮೆಯನ್ನು ಉದಾಹರಣೆಗಾಗಿ ತಿಳಿಸಿದ್ದೇನೆ. ಇದನ್ನು ಓದಿ ನೀವು ನಾನು ಹೇಳುವ ಮಾತನ್ನು ನಂಬುವಿರೆಂದು ಭಾವಿಸುತ್ತೇನೆ. ಉದಾಹರಣೆ :

ಕೃಷ್ಣ ಸಂಧಾನ (ವಾರ್ಧಿಕ ಷಟ್ಪದಿ)

ಬಗೆ ಬಗೆಯ ವೃಕ್ಷ ಸಂತತಿಗಳಿಂ |
ಚಿಗುರೆಲೆಯ ಚೂತದಾಳಿಂಬರಂಬದಿಂ |
ಮಘ ಮಘಿಪ ವರ ಸಮಾವಳಿಗಳಿಂ
ಫಲಗಳಿಂ ಸವಿವ ಶುಕಪಿಕಗಳಿಂದಾ ||
ಸೊಗಸಿನಿಂ ಪಾಡುತಿಹ ಸ್ವರಗಳಿಂ ಜಲಗಳಿಂ |
ಮುಗುಳಬ್ಜಕೆರಗುವ ಮಿಳಿಂದಮಂ |
ಚಂದಮಂಕಂಡರತ್ಯಾನಂದದೀ ||
ಆ ವನದ ಸಂಭ್ರಮವನಾ ಮುನಿಗಳೊಡನೆ ರಾ |
ಧಾವರಂ ನೋಡುತ್ತ ಹಸ್ತಿನಾಪುರವ ನಾ |
ನಾ ವಿಚಿತ್ರವ ಕಾಣುತಾಶ್ಚರಿಯಮಂ

ತಾಳು ತಾನ ಗರಮಂಪೊಕ್ಕರೂ |
ರಾವನ್ ವಿರೋಧಿ ಬರ್ಪಾನಂದಮಂ ಕೇಳು |
ತಾ ವಿದುರ ಭೀಷ್ಮ ದ್ರೋಣಾದಿಗಳಿದಿರ್ಗೊಳ್ಳು |
ತಾ ವನಜನೇತ್ರನಡಿದಾವರೆಗೆ ನ
ಮಿಸಲು ಕೃಪಾಳು ಪರಸಿದನವರನೂ ||

ಕಿಟ್ಣ ರಾಜಿ ಪ್ರಸಂಗೊ (ವಾರ್ಧಿಕ ಷಟ್ಪದಿ)

ಬಗೆ ಬಗೆತ ಬೂರು ಮರ ದೈಕುಳೆಡ್ ಕೈಕುಳೆಡ್ |
ತೆಗೆಳ್‌ದಿರೆ ಕುಕ್ಕು ಪೆಜತಾರೆಳೆಡ್ ಬಾರೆಳೆಡ್ |
ಮುಗುರು ಪೂಕಮ್ಮೆ ನೊದ ಕಾಯಿ ಪೆಲಕಾಯಿ ಫಲ ತಿನ್ಪಿ ಗಿಳಿ ಕೋಗಿಲೆಗುಳೂ ||

ಲೆಗಿಲೆಗಿತ್ ಪಾಡುಸರ ತೋಕೆಲೆಡ್ ತೋಕೆಲೆಡ್ |
ಬಿಗು ಬಿಗುತ ಜಾಗೆಲೆನ ತಾರುಳೆಡ್ ನೀರುಳೆಡ್ |
ಮುಗುರು ತಾವರೆಗ್ ಬೂರು ತುಂಬಿಲೆನ
ದಂಬುಲೆನ್ ಪೊರ್ಲುನಾಕುಳು ಸೂಯೆರ್ ||

ಆ ದೋಟದೈಸಿರಿನ್ ತೂವೊಣುದು ಮುನಿಕುಳೆ
ರಾದೆ ಮದಿಮಾಯೆ ಬನ್ನಗ ಪೂರಾ ಮುಟ್ಟುಳೆನ್
ತೂದು ಬೆಕ್ಕಸ ಪೋದು ದುಂಬತ್ತ್‌ದಸ್ತಿನಾ ಪಟ್ಟಣದವುಳಯಿ ಪೊಗಿಯೇ
ಆ ದುಟ್ಟೆ ರಾವಣನ ಪಗೆ ಬರ್ಪಿನೆನ್ ಕೇಣ್ದೆ |
ಪೋದು ಸಂತೊಸೊಡಿದುರೆ ಬೀಸ್ಮೆ ಗುರುಕೃಪನಕುಳು
ತಾದಿಡೆದುಕೊಂದಡ್ಡ ಬೂರಿನಕುಳೆನ್ ಪಿರಿತಿ ದೀದ್ ಪರಸಿಯೆ ಪೊರ್ಲುಡೊ

ಮೊದಲ ತುಳು ಯಕ್ಷಗಾನ ಪ್ರಸಂಗದಲ್ಲಿ ರಾಮರಾಜ್ಯದ ಕಲ್ಪನೆ

ಮಹಾತ್ಮಾ ಗಾಂಧಿ ನಮ್ಮ ದೇಶ ರಾಮರಾಜ್ಯ ಆಗಬೇಕು ಎಂದು ಹೇಳುತ್ತಿದ್ದರು. ಈ ತುಳು ಯಕ್ಷಗಾನದ ಕವಿ ಶತಮಾನಕ್ಕೂ ಹಿಂದೆ ತನ್ನ ಕಲ್ಪನೆಯಲ್ಲಿ ರಾಮರಾಜ್ಯ ಈ ನಮೂನೆಯಲ್ಲಿ ಇರುವುದು ಸಾಧ್ಯವೆಂದು ಗ್ರಹಿಸಿ ತನ್ನ ಕಲ್ಪನೆಯಲ್ಲಿ ಕವಿತಾ ರೂಪದಲ್ಲಿ ನಾಲ್ಕು ವಾರ್ಧಕ ಷಟ್ಪದಿಯನ್ನು ಬರೆದಿದ್ದಾರೆ. ಅದನ್ನು ನಾನು ಅವರೇ ಬರೆದ ಹಾಗೆ ಹೇಳುವುದು ಒಳಿತೆಂದು ಅವರು ಬರೆದುದನ್ನೆ ಹೇಳುತ್ತೇನೆ.

ತುಂಬ ಮಿಡಿಕಾಯಿ ಹಣ್ಣು ಇಲ್ಲದಿಹ ಮರವಿಲ್ಲ |
ತುಂಬ ಹುಲ್ಲು ಇಲ್ಲದಿಹ ಕಾಡುಗುಡ್ಡ ಫಲವಿಲ್ಲ |
ಒಂದು ಕೊಡಪಾನ ಹಾಲು ನೀಡದ ಆಕಳೇ ಇಲ್ಲ ದೇಶ ಎನ್ನುವುದೇ ಇಲ್ಲ ||

ಒಂದು ಬಸುರಾಗಿಲ್ಲವೆನ್ನುವ ಹೆಂಗಸೇ ಇಲ್ಲ |
ತುಂಬ ಮಕ್ಕಳೇ ಇಲ್ಲದಿಹ ಮನೆಯೇ ಇಲ್ಲ |
ಒಂದು ದನಕರುವೆ ಇಲ್ಲದಿಹದವರೆ ಇಲ್ಲ ರಾಮದೇವರ ರಾಜ್ಯದಲ್ಲಿ ||

ಎಲ್ಲವರೂ ದೊಡ್ಡವರೇ ಬಡವರಾರೂ ಇಲ್ಲ |
ಎಲ್ಲವರೂ ಕೊಡುವವರೇ ಬೇಡುವವರೇ ಇಲ್ಲ |
ಎಲ್ಲವರೂ ಸಜ್ಜನರೆ ದುರ್ಜನರ ಹೆಸರಿಲ್ಲ ಕಳವು ಹಾದರ ಕಪಟವಿಲ್ಲ ||

ಎಲ್ಲವರೂ ತಿಳಿದವರೆ ತಿಳಿಯದವರಾರಿಲ್ಲ |
ಎಲ್ಲವರೂ ನ್ಯಾಯಗಾರರು ಅಲ್ಲದವರಾರಿಲ್ಲ |
ಎಲ್ಲವರೂ ಮುನ್ನೂರು ವರ್ಷ ಕಳೆಯದೆ ಎಲ್ಲೂ ಸಾಯುವ ಜನರಿಲ್ಲ
ಎಲ್ಲಿ ನೋಡಿದರಲ್ಲಿ ಮದುವೆ ಮುಂಜಿಯ ಗೌಜಿ
ಎಲ್ಲಿ ನೋಡಿದರಲ್ಲಿ ನೇಮ ಆಯನದ ಗೌಜಿ
ಎಲ್ಲಿ ನೋಡಿದರಲ್ಲಿ ಬಯಕೆ ಮದುವೆಯ ಗೌಜಿ|ಮದುಮಗಳಾದ ಮದುವೆ ಗೌಜಿ
ಎಲ್ಲಿ ನೋಡಿದರಲ್ಲಿ ಹಡೆದ ಸುದ್ದಿಯ ಗೌಜಿ |
ಎಲ್ಲಿ ನೋಡಿದರಲ್ಲಿ ತೊಟ್ಟಿಲು ತೂಗುವ ಗೌಜಿ |
ಎಲ್ಲಿ ನೋಡಿದರಲ್ಲಿ ರಾಮದೇವರು ಸತ್ಯದವರೆನ್ನುವ ಗೌಜಿ ||

ಈ ಮೊದಲ ತುಳು ಯಕ್ಷಗಾನ ಕವಿಯ ರಾಮರಾಜ್ಯದ ಕಲ್ಪನೆಯಲ್ಲಿ ಇಂದಿನ ಕಾಲಕ್ಕೆ ಆಕ್ಷೇಪವೆನಿಸುವ ಎರಡು ಸಂಗತಿಗಳಿವೆ. ಒಂದು, ಏನೆಂದರೆ ಮನೆ ತುಂಬ ಮಕ್ಕಳು ಬೇಡ. ಜನಸಂಖ್ಯಾಸ್ಫೋಟದ ಈ ಕಾಲದಲ್ಲಿ ಒಂದು ಎರಡು ಧಾರಾಳವಾಯ್ತು. ಮತ್ತೊಂದು, ಮುನ್ನೂರು ವರ್ಷ ಬದುಕಿದರೆ ಬದುಕಿದವನಿಗೂ ಕಷ್ಟ. ಆತನನ್ನು ನೋಡಿಕೊಳ್ಳುವವರಿಗೂ ಬಲು ಕಷ್ಟ. ಒಟ್ಟಿನಲ್ಲಿ ನೋಡಿದರೆ ಶತಮಾನಕ್ಕೆ ಹಿಂದಿನ ಕವಿಯ ಕಲ್ಪನೆಯಲ್ಲಿ ಶಾಂತ ಜೀವನದ ಸುಖ ಸಮೃದ್ಧಿಯ ಉತ್ತಮ ನಡತೆಯ ವಿಚಾರ ಎಲ್ಲಾ ಇದೆ. ಹಾಗಿರುವುದರಿಂದ ಕವಿಯ ಒಳ್ಳೆಯ ಕಲ್ಪನೆಗೆ ನಾವು ತಲೆ ತಗ್ಗಿಸಿ ಕೈ ಜೋಡಿಸೋಣ. (ನೋಡಿ : ಬಿ.ಎ. ವಿವೇಕ ರೈ, ೨೦೦೧, ‘ಅಗ್ರಾಳ ಪುರಂದರ ರೈ ಸಮಗ್ರ ಸಾಹಿತ್ಯ’, ಅಕ್ಕೆಸಿರಿ ಸಾಂಸ್ಕೃತಿಕ ಕೇಂದ್ರ ಮಂಗಳೂರು)