ಸಾಂಗತ್ಯ –ರೂಪಕ
ಎರಲು ತುಂಬುನ ದುನ್ನ ಕಂಜಿಗ್ರಾವಯ ಅಣ್ಣ |
ತರೆನೆ ಪೊಲಿವುಯ ಎನ್ನ ಬೇಗಾ |
ಒರ ಬಲಯ ದುಷ್ಟೆರೆನ್ ಕೆರ್ದ ರಾಜ್ಯೊನು ಆಳ್ |
ಪರಯೆ ನನ ದೇವೆರೆನ ಅಜಾ || ೧ ||
ಬರಯೆ ಯಾನಿನಿ ಪೋಲೆ ವರ್ಷ ಒಂಜಾವಡಿಯ |
ಮೆರೆಪಿ ವೃತ ಒಂಜುಂಡು ಬೊಕ್ಕಾ |
ಕುರೆಪಿ ಮನಸ್ದ ಬೇನೆ ತೆಳಿ ಆದ್ ಬರುವೆ ಬುಡು |
ಅರದ್ ಪತ್ತುವೆ ಎನ್ನ ಮೆಗ್ಯಾ || ೨ ||
ಭರತೆ ರಾಮನ ಜೋಡು ತರೆಟ್ದೀದೇ ನಡತೆ |
ಒರ ಕೊರುಯ ಅಣ್ಣ ಈ ಭಾಗ್ಯ |
ಬರ್ಪಿ ಮುಟ್ಟಲ ಯಾನ್ ಪೂಜೆ ಮಲ್ಪುವೆ ಅಣ್ಣ |
ಪಿರಿ ಮಲ್ಪೆ ಮಲ್ತಿ ಪಾಪೊಗಿಯಾ || ೩ ||
ತಮ್ಮನು ಅಣ್ಣನ ಪಾದುಕೆಯನ್ನು ತಲೆಯಲ್ಲಿರಿಸಿ ಹಿಂದೆ ಬರುವ ಈ ಸನ್ನಿವೇಶ ‘ಶ್ರೀ ರಾಮ-ಭರತರ ಭ್ರಾತೃ ಮಿಲಿನ’ದ ಚಿತ್ರಣವನ್ನು ತುಂಬಾ ಪರಿಣಾಮಕಾರಿಯಾಗಿ ನೀಡುತ್ತದೆ.
ನಿತ್ಯಾನಂದ ಕಾರಂತರು ಬರೆದ ಹೆಚ್ಚಿನ ಪ್ರಸಂಗಗಳು ಕಾಲ್ಪನಿಕ ಕಟ್ಟುಕತೆಗಳ ಆಧಾರದಲ್ಲಿ ರಚಿಸಲ್ಪಟ್ಟವುಗಳು. ಆದ್ದರಿಂದ ಇದನ್ನು ಮೇಳದವರು ತಮಗೆ ಬೇಕಾದಂತೆ ಆಡುವ ಸ್ವಾತಂತ್ರ್ಯ ಪಡೆದುಕೊಂಡರು. ಹಾಗಾಗಿ ಪ್ರಸಂಗಕರ್ತರ ತಪ್ಪಿಲ್ಲದೆ ಹೋದರೂ, ಒಟ್ಟು ಪ್ರದರ್ಶನವನ್ನು ಕಂಡಾಗ ತುಳು ಆಟಗಳಲ್ಲಿ ದೋಷವನ್ನೆತ್ತಿ ಆಡುವವರಿಗೆ ಕೆಲವೆಡೆ ಅವಕಾಶ ಸಿಕ್ಕಿರುವುದು ಸುಳ್ಳಲ್ಲ. ಕಾರಂತರ ಕನ್ನಡ ಪದ್ಯಗಳಿಗೆ ಹೋಲಿಸಿದರೆ, ತುಳು ರಚನೆಗಳಲ್ಲಿ ಇನ್ನಷ್ಟು ಪರಿಶ್ರಮ ಪಡುವ ಅಗತ್ಯವಿದೆ ಅನಿಸುತ್ತದೆ.
ಬೊಟ್ಟಿಕೆರೆ ಪುರುಷೋತ್ತಮ ಪೂಂಜ
ಸ್ವತಃ ಭಾಗವತರಾಗಿ, ವೇಷಧಾರಿಯಾಗಿ ಯಕ್ಷಗಾನದ ಸರ್ವಾಂಗಗಳನ್ನು ಬಲ್ಲ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಪ್ರಸಂಗಕರ್ತರಾಗಿಯೂ ಗೆಲುವು ಸಾಧಿಸಿದ್ದಾರೆ. ಕರ್ನಾಟಕ-ಕಟೀಲು ಮೇಳಗಳಲ್ಲಿ ಭಾಗವತರಾಗಿ ದುಡಿದಿರುವ ಅವರು ತುಳುವಿನಲ್ಲಿ ಆರು ಪ್ರಸಂಗಗಳನ್ನು ಬರೆದಿದ್ದಾರೆ. ಅವುಗಳೆಂದರೆ -೧. ದಳವಾಯಿ ಮುದ್ದಣ್ಣ (ಧರ್ಮಚಾವಡಿ) ೨. ಪಟ್ಟದ ಕತ್ತಿ ೩. ಬಂಗಾರ್ದ ಗೆಜ್ಜೆ ೪. ಗರುಡ-ಕೇಂಜವೆ ೫. ನಲ್ಕೆದ ನಾಗಿ ೬. ಕುಡಿಯನ ಕೊಂಬಿರೆಳ್
ನಳಿನಾಕ್ಷ ನಂದಿನಿ, ಉಭಯ ಕುಲ ಬಿಲ್ಲೋಜ, ಮಾನಿಷಾದ, ವೈಶಾಲಿನಿ ಪರಿಣಯ, ಕ್ಷಾತ್ರಮೇಧ, ರಾಜಾದ್ರುಪದ, ಮೃತ್ಯುಮಾಂಗಲ್ಯ, ಸಿಂಧೂರ ಭಾಗ್ಯ –ಇತ್ಯಾದಿ ಅವರ ಕನ್ನಡ ಪ್ರಸಂಗಗಳು.
ಪೂಂಜರ ‘ದಳವಾಯಿ ಮುದ್ದಣ್ಣೆ’ ಅಥವಾ ‘ಧರ್ಮ ಚಾವಡಿ’ ಎಂಬ ಪ್ರಸಂಗ ಸೊಹ್ರಾಬ್ ರುಸ್ತುಂ ಕತೆಯನ್ನು ಆಧರಿಸಿ ಬರೆದಂತಿದೆ. ಅರ್ಜುನ – ಬಭ್ರುವಾಹನ, ಶ್ರೀರಾಮ – ಕುಶಲವ – ಹೀಗೆ ನಮ್ಮ ಪುರಾಣಗಳಲ್ಲಿ ತಂದೆ ಮಗನ ಸಂಘರ್ಷದ ಕತೆಯಿದೆ. ಈ ಕತೆಗಳು ಸಾಮಾನ್ಯವಾಗಿ ಸುಖಾಂತ್ಯಗೊಳ್ಳುತ್ತವೆ. ಆದರೆ ಗ್ರೀಕ್ ನಾಟಕಗಳಲ್ಲಿ ದುರಂತಕ್ಕೆ ಹೆಚ್ಚು ಒತ್ತುಕೊಡಲಾಗಿದೆ. ಸೊಹ್ರಾಬ್-ರುಸ್ತುಂ ನಾಟಕದಲ್ಲಿ ಮಗನ ಕೈಯಿಂದ ತಂದೆ ಮರಣವನ್ನಪ್ಪುವ ದುರಂತದ ವಸ್ತುವಿದೆ. ಈ ಕತೆಯನ್ನು ಯಕ್ಷಗಾನಕ್ಕೆ ಒಪ್ಪುವಂತೆ ಪರಿವರ್ತಿಸಿ, ಕಾಲ್ಪನಿಕ ಪಾತ್ರ ಸನ್ನಿವೇಶಗಳನ್ನು ಜೋಡಿಸಿ, ‘ಧರ್ಮ ಚಾವಡಿ’ಯನ್ನು ರಚಿಸಿದ್ದಾರೆ. ಇಲ್ಲಿ ತುಳು ಭಾಷೆಗೆ ಅನಿವಾರ್ಯವಲ್ಲದ’ ‘ಲ’ ಪ್ರಯೋಗವನ್ನು ಪ್ರಸಂಗಕರ್ತರು ಧಾರಾಳ ಮಾಡಿದ್ದಾರೆ.
ಉದಾ : ಒಲ್ಪೊಲ್ಪ ತೂಂಡಲಾ ಅಲ್ಪಲ್ಪ ಪೊರ್ಲುಲಾ |
ಅಲ್ಪ ಮುಗುರು ಮುಲ್ಪ ತೆಗ್ಲೆ, ಚನಿಲ್ ನವಿಲ್ಲಾ ||
ಇದು ಕೇಳಲು ಇಂಪೆನಿಸಿದರೂ, ಮತ್ತೆ ಮತ್ತೆ ಬಳಸುವುದರಿಂದ ಬಿಗು ತಪ್ಪುತ್ತದೆ. ಆದರೆ ಪೂಂಜರು ಮುಂದಿನ ಪ್ರಸಂಗಗಳಲ್ಲಿ ಈ ಗುಂಗಿನಿಂದ ಹೊರಬಂದು ಪ್ರೌಢಧಾಟಿಯಲ್ಲಿ ಪದ್ಯ ರಚಿಸಿರುವುದು ಕಂಡುಬರುತ್ತದೆ.
‘ಧರ್ಮ ಚಾವಡಿ’ಯನ್ನು ಪದ್ಯ ಜೋಡಣೆಯಲ್ಲಿ ತುಳುವಿನ ಕೆಲವು ನುಡಿಕಟ್ಟುಗಳು ಧಾರಾಳ ಬಳಕೆಯಾಗಿವೆ.
ಶಾಹನ – ತ್ರಿವುಡೆ
ಪಗೆಲರಸೆ ಪಡ್ದಯಿಡ್ ಉದಿತ್ದ್
ಜಗೊಟು ಕಕ್ಕೆಲು ಬೊಲ್ದು ಆಂಡಲ |
ತಿಗಲೆ ತಟ್ಟ್ದ್ಕೊರ್ಪೆ ಪಾತೆರ
ಮಗನ ಲೆಕೊನೆ || ೧ ||
ಕಾಂಬೋದಿ – ತ್ರಿವುಡೆ
ಪುಚ್ಚೆ ಪೇರ್ನ ಪರ್ದ್ ಕಣ್ಣ್ನ್
ಮುಚ್ಚಿನಂಚನೆ ಮಲ್ತರತ್ತಯೆ |
ಎಚ್ಚ ಪಾತೆರದಾಯೆ ಕುದುರೆನ್ |
ಗಿಚ್ಚಲೆಂದೆ || ೧ ||
ವಾರ್ಧಿಕ
ಕೆಬಿಕ್ ಕೊದಿಪುನ ಎಣ್ಣೆ ಮೈತಿಲೆಕ್ಕಾಂಡಾಳೆನ |
ಉಬಿಯಾಜಿದುಸುಲು ಉಂತುಂಡೊಂಜಿಗಳಿಗೆಲ ಇಲ್ಲ |
ಕುಬಲ್ ಜಾರ್ದ್ ತರೆಕ್ಬೂರ್ ನಂಚಾಂಡಾಳೆಗ್ |
ನಂಬೆರಾಪುಜಿ ಕೇನ್ನೆನ್ || ೧ ||
‘ಪಟ್ಟದ ಕತ್ತಿ’ ಪ್ರಸಂಗ ಸಿನಿಮಾ ಮಾದರಿಯ ಕಲ್ಪಿತ ಕತೆ. ಓರ್ವ ರಾಜನಿಷ್ಠ ಸೇವಕ ಸುಳ್ಳು ಅಪವಾದದಲ್ಲಿ ಸಿಲುಕಿ, ಶಿಕ್ಷೆಗೊಳಗಾದಾಗ, ಪ್ರತೀಕಾರ ಮನೋಭಾವನೆಯಿಂದ ರಾಜಕುಮಾರನನ್ನು ಅಪಹರಿಸಿ ತನ್ನ ಮಗನಂತೆ ಸಾಕುತ್ತಾನೆ. ತನ್ನ ಸ್ವಂತ ಮಗನನ್ನು ಸರಿಯಾದ ಸಾಕ್ಷಿ ಆಧಾರಗಳೊಂದಿಗೆ ರಾಜ ಕುಮಾರನ ಸ್ಥಾನಕ್ಕೆ ಕಳುಹಿಸುತ್ತಾನೆ. ಹೀಗೆ ಅಪಹರಣಕಾರನ ಮಗ ಅರಮನೆಯಲ್ಲಿ, ನಿಜವಾದ ರಾಜಕುಮಾರ ಕಳ್ಳನೊಡನೆ ಕಾಡಿನಲ್ಲಿ ಬೆಳೆಯುತ್ತಾರೆ. ಕಡೆಗೆ ರಹಸ್ಯ ಬಯಲಾದಾಗ ಪರಿಸ್ಥಿತಿ ಕ್ಕೆಮೀರಿ ಹೋಗುವುದು. ರಾಜನಿಗೆ ನಿಜದ ದರ್ಶನ ಮಾಡುವ ಉದ್ದೇಶದಿಂದ ಆಡಿದ ನಾಟಕ ಸೂತ್ರದಾರನ ಕೈತಪ್ಪಿ, ಪಾತ್ರಗಳು ಸ್ವತಂತ್ರವಾಗಿ ವ್ಯವಹರಿಸತೊಡಗಿದಾಗ ಆ ಸ್ವಾಮಿ ಭಕ್ತನಿಗೆ ತುಂಬಾ ಸಂಕಟವಾಗುವುದು. ತೆರೆಯ ಹಿಂದೆ ಇದ್ದವ ಬಯಲಿಗೆ ಬರಲು ಯತ್ನಿಸುತ್ತಾನೆ. ಅದರಲ್ಲೇ ಅವನ ಬಲಿದಾನವಾಗುತ್ತದೆ. ಕೊನೆಯಲ್ಲಿ ಸತ್ಯವನ್ನರಿತ ಮಹಾರಾಜನಿಗೆ ಸ್ವಾಮಿ ನಿಷ್ಠ ಸೇವಕನ ದುರಂತದಿಂದ ದುಃಖವಾಗುತ್ತದೆ. ದುಷ್ಟರಿಗೆ ಶಿಕ್ಷೆಯೂ ಆಗುತ್ತದೆ- ಈ ಕಥಾ ಹಂದರವಿರುವ ‘ಪಟ್ಟದ ಕತ್ತಿ’ಯಲ್ಲಿ ಹಾಸ್ಯಕ್ಕೆ ಧಾರಾಳ ಅವಕಾಶವಿದೆ. ಹಾಗೆಯೇ ಅನೇಕ ಕುತೂಲಹಕಾರಿ ಸನ್ನಿವೇಶಗಳೂ ಬರುತ್ತವೆ.
‘ಬಂಗಾರ್ದ ಗೆಜ್ಜೆ’ ಶೇಕ್ಸ್ ಪಿಯರನ ‘As you like it’ ಎಂಬ ಹಾಸ್ಯ ನಾಟಕದ ಆಧಾರದಲ್ಲಿ ಬರೆದಿರುವ ಪ್ರಸಂಗ. ‘ಗರುಡ ಕೇಂಜವ’ ಪ್ರಸಂಗದಲ್ಲಿ ಪುರುಷೋತ್ತಮ ಪೂಂಜರ ಕವಿತಾ ಶಕ್ತಿ ಅತ್ಯುತ್ತಮವಾಗಿ ಹೊರಹೊಮ್ಮಿದೆ. ಮಾನವನ ಸ್ವಾರ್ಥ, ಮತ್ಸರ, ದ್ವೇಷ –ಇತ್ಯಾದಿ ವಿನಾಶಕಾರೀ ಪ್ರವೃತ್ತಿಗಳ ನಡುವೆ ಅಲ್ಲಲ್ಲಿ ಸಾಂದರ್ಭಿಕವಾಗಿ ಪ್ರೇಮ- ವಾತ್ಸಲ್ಯ -ಕನಿಕರ ಕುಡಿಯೊಡೆದು ಬದುಕಿನ ಮಹತ್ವದ ಬದಲಾವಣೆಗೆ ಕಾರಣವಾಗುವ ಪವಾಡಸದೃಶ ಘಟನೆಗಳು ಇಲ್ಲಿವೆ. ಪೂಂಜರು ಸ್ವತಃ ಭಾಗವತರೂ ಆಗಿರುವುದರಿಂದ ತುಳುವಿನ ಕೆಲವು ಸುಂದರ ಕವಿತೆಗಳು ತಾಳ ಲಯ ಬದ್ಧವಾಗಿ ಮೂಡಿಬಂದಿರುವುದನ್ನು ಈ ಪ್ರಸಂಗದಲ್ಲಿ ಕಾಣಬಹುದು.
ನಾಂದಿಯಲ್ಲೊಂದು ಭಾಮಿನಿ ಹೀಗಿದೆ –
ನರಮನಿನ ಬಾಳುವೆನ್ ಮಚ್ಚರ |
ತರೆ ನಿಲಿಕೆ ಪಗೆ, ಸ್ವಾರ್ಥ, ಕುರೆಯಂ |
ಗರೆಕಿ ದಾಂತಿನ ಮೋಸದಾಟೊದ ಕಳೊನು ಮಲ್ತಲ್ವ ||
ಒರೊಗು ನೆಗತ್ದ್ಚಣೊಟು ಮಾಜುನ |
ಮರಿಯಲದ ಮೆಂಚೆಂಚನಂಚನೆ |
ಪೆರ್ಮೆ ಪಿರ್ತಿದ ಮೂರ್ತಿದೊರುವಾಯ್ನಾರೆಗ್ ಕೈ ಮುಗಿದು ||
‘ಸುಧನ್ವ ಕಾಳಗ’ ಪ್ರಸಂಗವನ್ನು ನೆನಪಿಸುವ ‘ಆವಲ್ಲಿಗೆ ಪಯಣವನ್ನು’ ದಾಟಿಯ ಒಂದು ಪದ್ಯ ಇಲ್ಲಿದೆ –
ಸಾರಂಗ ಅಷ್ಟ
ದೂರ ಪಯಣ ರಾಯೆರೆ | ದುತ್ರೈತೊಡು |
ಬಾರಿ ವಿಸ್ಮಯ ತೂಯೆರೆ ||
ಏರ್ದ್ ಕುದುರೆನ್ ಸುರಿಯೊನು ಸೊಂಟೊಗು |
ಸೇರ್ದ್ ಜರಿತ ತರೆತ್ರೊ ಕಟೊಂದಿನ್ನಿ ||
ದೂರ ಪಯಣ ರಾಯೆರೆ || ೧ ||
ಪಾತ್ರಗಳ ಒಳಮರ್ಮ ಮತ್ತು ಸನ್ನಿವೇಶ ಚಿತ್ರಣ ನೀಡುವ ಕವಿ ವಚನಕ್ಕೊಂದು ಉದಾಹರಣೆ ಕೆಳಗಿನ ಪದ್ಯದಲ್ಲಿದೆ-
ಭಾಮಿನಿ
ಬಾನದೆತ್ತರೊಡಿಪ್ಪಿಪಕ್ಕಿಗ್ |
ರಾನಗೊಲ್ತಾ ಪಗರಿ ನಾಟ್ದ್ |
ಪ್ರಾಣದಾಂತೆನೆಗುಮೆಲುನಗ್ಗಿದ ನಡುಕು ಬೂರ್ನೆಂಗೆ ||
ದಾನೆ ದಾದೊಲ್ಪಂದ್ ಯೆಚ್ಚರ |
ರಾಣಿಗಾನಗ ಕರಿವುಂಡರೆ ಚಣ |
ಪ್ರಾಣದರಸನ ಮರಣೊನೆನ್ನಿದ್ ಬೂರ್ದು ಬುಳಿಪುವಳ್ || ೧ ||
ಬುದ್ಧಿವಂತರ ಜಾಣ್ಮೆಯನ್ನು ತಿಳಿಸುವ ಒಂದು ಪದ್ಯ ಹೀಗಿದೆ-
ಮಧ್ಯಮಾವರ್ತಿ – ಏಕ
ದೈತೊಂಜಿ ಇರೆ ತೂದು ಜಾತಿನ್ ಪಣೊಲಿ |
ಮೈತೊಂಜೊಡ್ಡಾರೊಡೆ ಮನಸ್ಸ್ನ್ ಪಣೊಲಿ |
ಕೈತ ಕತ್ತಿಗ್ ಬೇಲೆ ದಾಂತೆನೆ ಪಗೆನ್ |
ಸೈತ್ ಪೋಪವೆ ಕುಸೆಲ್ ಡುರುಳು ಗೋತಯನ್ || ೧ ||
ಧರ್ಮಸಂಕಟವನ್ನು ತಿಳಿಸುವ ಒಂದು ಪದ್ಯ-
ವಾರ್ಧಿಕ
ನಿಂಗೆರಾಪುಜಿ ದೊಂಡೆ ಸುಡ್ಪುಂಡುಬಿಯೊಲಿ ಪಂಡ |
ಅಂಗ್ ಬುಡ್ಪುಜಿ ಸುದ್ದೊ ಸೆಟ್ಟ್ ಪೋಪುನ ಪೋಡಿ |
ನಿಂಗೆರೆದುರುಡು ಬಲಿಪೆ ಬನ್ನಗನೆ ಬರೆಪಿರವುಡಿತ್ತಿ ಗಾದೆದಲೆಕ್ಕೊನೆ || ೧ ||
ಕಾಡಿನಲ್ಲಿರುವ ಕುರುಬರ, ಕುಡಿಯರು ನಾಗರಿಕ ಜೀವನದ ಕ್ಷೇಮ- ಕ್ಷೋಭೆಗೆ ಪರೋಕ್ಷವಾಗಿ ಹೇಗೆ ಸಂಬಂಧ ಹೊಂದುತ್ತಾರೆ ಎಂಬ ವಿಷಯ ಈ ಪ್ರಸಂಗದಲ್ಲಿದೆ. ಕಾಡು ಕುರುಬರ ಜೀವನ ಕ್ರಮ, ನಂಬಿಕೆ, ರಂಜನೆ, ಬೇನೆ-ಬೇಸರಗಳ ಚಿತ್ರಣ ಇಲ್ಲಿದೆ.
ಮಾರಿ ಪೂಜೆಯಲ್ಲಿ ದೇವಿಯನ್ನು ಸ್ತುತಿಸುವ ಒಂದು ಪದ್ಯ ಹೀಗಿದೆ-
ಸಾವೇರಿ-ಏಕ
ಈರೆ ಸುಟ್ಟಿತಿ | ಲೋಕೊಲೋಕೊಲೆ |
ಗೀರೆ ಮಾಯೊನು ಪದ್ರ್ದ್ | ಬೀರ ಬಿರ್ದ್ದ |
ಘೋರ ದೈತ್ಯೆರೆ | ಬಿರ್ಸ್ಗೀ ಭೂಮದ್ಯದ್ರ್ದ್ ||
ಬಾರಿ ಬಂಙೊಡು | ಬಂಗ್ರ ಬನ್ನಗ |
ಬೇತೆ ಬೇತೊರುವಾಯರ್ | ಬಾರಿ ಮಾಯೊದ |
ಪಾಸಿ ಪರಿತ್ದ್ | ಗೇನದಾ ಬೊಲ್ಪಾಯರ್ ||
ದುರುಗಮ್ಮಾ | ಸುವ್ವೀ | ದುರುಗಮ್ಮಾ || ೧ ||
ಹೆಣ್ಣೊಬ್ಬಳ ವರ್ಣನೆಯ ಪದ್ಯ –
ಭಾಮಿನಿ
ಪೊಣ್ಣನೊರುಟೀ ಕಾನದಾಸಿರಿ |
ತನ್ನ ಮಯಕೊಡು ಬತ್ತ್ ಕುಲ್ದಳೊ |
ಬಿನ್ನೆದಿನಲೆಕೊ ತಿರ್ತ್ಬೈದಿನ ಮಿತ್ತ್ದಪ್ಸರೆನೊ ||
ಪೊಣ್ಣ ಪಾಪೆನ್ ಕೆತ್ತಿ ಕಲ್ಕುಡೆ |
ತನ್ನ ಮೈಮೆಡ್ ಜೀವಕಳೆ ಕೊರು |
ದೆನ್ನ ದುಂಬುಂತಾಯ ಶಿಲ್ಪೊನೊ ಮನಸ್ದುಳ ಭ್ರಮೆನೊ || ೧ ||
ಈ ಪ್ರಸಂಗದ ಮಂಗಲ ಪದ್ಯದಲ್ಲೂ ಒಂದು ಉತ್ತಮ ಸಂದೇಶ ಇದೆ. ಇಲ್ಲಿ ದೇವರ ಹೆಸರಿನಲ್ಲಿ ಮಂಗಳಾಚರಣೆ ಮಾಡು ಬದಲು ನಿರ್ಮಲವಾದ ಪ್ರೇಮ ತತ್ವವನ್ನು ಸ್ಮರಿಸಲಾಗಿದೆ.
ಮಧ್ಯಮಾವತಿ ತ್ರಿವುಡೆ
ಮೋಸ ವಂಚನೆ ಕಪಟ ಕಳುಪಗೆ | ದೇಶ ದ್ರೋಹದ ಚಿಂತನೆ ||
ಯೇಸ ಕಟ್ಟ್ದ್ ಸ್ವಂತ ಸುಕೊಟು ವಿ | ನಾಶಕಾರಕ ವರ್ತನೆ |
ದೇಶದೇಶೊಡು ಪದ್ರಿ ಭ್ರಷ್ಟಾ | ಚಾರ ವ್ಯೂಹೊದ ನಡುಟುಲ ||
ಕೋಶಪುಡತೊರ ಉದಿಪ ನಿರ್ಮಲ | ಪ್ರೇಮ ತತ್ವೊಗು ಮಂಗಲ || ೧ ||
‘ನಲ್ಕೆದ ನಾಗಿ’ ಪ್ರಸಂಗದಲ್ಲಿ ಶಿಲ್ಪಿ, ನರ್ತಕ, ಗಾಯಕ-ಹೀಗೆ ಬಹುಮುಖ ಪ್ರತಿಭಾ ಸಂಪನ್ನನಾದ ಓರ್ವ ಕಲಾ ತಪಸ್ವಿ ತನಗರಿವಿಲ್ಲದಂತೆ ರಾಜಕೀಯ ಸುಳಿಯಲ್ಲಿ ಸಿಲುಕಿ ಕೊಳ್ಳುತ್ತಾನೆ. ಬದುಕಿನ ಮೂಲ ಚೈತನ್ಯದ ಸೆಳೆಯೆನಿಸಿದ ಪ್ರೇಮವೇ ಅವನ ಜೀವನವನ್ನು ದುರಂತದ ಕಡೆಗೆ ಒಯ್ಯುವ ವಿಧಿಯ ಆಟ ಈ ಕತೆಯಲ್ಲಿ ಅಭಿವ್ಯಕ್ತಗೊಂಡಿದೆ.
ಕಂಪಣ ಎಂಬ ಶಿಲ್ಪಿ ರಸ ವಿದ್ಯೆ ಕಲಿಯಲೆಂದು ಮಲೆಯಾಳ ಪ್ರಾಂತ್ಯಕ್ಕೆ ಹೋದಾಗ ಅವನ ಆಶೆ ಭಂಗಗೊಂಡು ನೃತ್ಯ ಕಲಿಯುತ್ತಾನೆ. ಅಲ್ಲಿಯೇ ರಾಜಕುಮಾರಿಯ ನಾಗರತ್ನ(ನಾಗಿ) ಎಂಬವಳೂ ನೃತ್ಯಾಭ್ಯಾಸ ಮಾಡುತ್ತಿರುತ್ತಾಳೆ. ಇಬ್ಬರೂ ಪ್ರೇಮ ಬಂಧನದಲ್ಲಿ ಸಿಲುಕುತ್ತಾರೆ. ಅವರ ಪ್ರೀತಿ ಮೂರು ಸೀಮೆಯ ಅರಸುಗಳ ನಡುವೆ ಯುದ್ಧ ನಡೆಯಲು ಕಾರಣವಾಗುತ್ತದೆ. ನರ್ತಕಿ ನಾಗಿ ಬಾಚರಸ ಎಂಬ ದುಷ್ಟನ ಸೆರೆಮನೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾಳೆ. ‘ರಾಜಸ ಅಹಂ’ನ ಎದುರು ಕಲಾವಿದನ ಸಾತ್ವಿಕ ಸ್ವಾಭಿಮಾನ ಮಣ್ಣುಪಾಲಾಗಿ ಕಂಪಣನೂ ಸೆರೆಮನೆಯಲ್ಲಿ ಬೀಳುತ್ತಾನೆ. ಅವನ ಮಗ-ಮಗಳು ದಿಕ್ಕುಪಾಲಾಗುತ್ತಾರೆ. ಎಲ್ಲರನ್ನೂ ಕಳೆದುಕೊಂಡ ಕಂಪಣ ಕೊನೆಗೆ ನಿಲ್ಲಲು ನೆಲೆಯಿಲ್ಲದೆ ವೈರಾಗ್ಯ ತಾಳುತ್ತಾನೆ. ಕ್ಷುದ್ರ ರಾಜಕೀಯದ ಮೇಲೆ ಹುತಾತ್ಮ ಪ್ರೇಮ ಏನಾದರೂ ಪ್ರಭಾವ ಬೀರಬಲ್ಲುದೆ….? ಎಂಬ ಆಶಾಭಾವನೆಯ ಪ್ರಶ್ನೆಯನ್ನು ಪ್ರಸಂಗಕರ್ತರು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಪುರುಷೋತ್ತಮ ಪೂಂಜರ ‘ಕುಡಿಯ ಕೊಂಬಿರೆಳ್’ (ಬೇಡನ ಹೆಬ್ಬೆರಳು) ಒಂದು ವಿಶಿಷ್ಟ ಕೃತಿ. ಇದು ಮಹಾಭಾರತದ ಆದಿಪರ್ವದಲ್ಲಿ ಬರುವ ಏಕಲವ್ಯನ ಕತೆ. ರಾಷ್ಟ್ರಕವಿ ಗೋವಿಂದ ಪೈ, ರಾಷ್ಟ್ರಕವಿ ಕುವೆಂಪು, ಕೈಲಾಸಂ – ಇವರೆಲ್ಲ ಏಕಲವ್ಯನ ಹೆಬ್ಬೆರಳಿನ ಕತೆಯನ್ನು ಹೃದಯ ವಿದ್ರಾವಕವಾದ ನಾಟಕರೂಪದಲ್ಲಿ ಬರೆದಿದ್ದಾರೆ. ಕೆದಂಬಾಡಿ ಜತ್ತಪ್ಪ ರೈಯವರು ‘ಸೂದ್ರೆ ಏಕಲವ್ಯೆ’ ಎಂಬ ತುಳು ನಾಟಕವನ್ನು ಬರೆದಿದ್ದಾರೆ. ಪೂಂಜರು ಈ ಮನ ಮಿಡಿಯುವ ಕತೆಯನ್ನು ಸ್ವತಂತ್ರ ರೀತಿಯಲ್ಲಿ ಯಕ್ಷಗಾನ ಪ್ರಸಂಗವನ್ನಾಗಿಸಿದ್ದಾರೆ. ಇದರ ಕಥಾಹಂದರ ವ್ಯಾಸ ಭಾರತಕ್ಕಿಂತ ಭಿನ್ನವಾದುದು. ಕಾಡಿನಲ್ಲಿ ಹಠಾತ್ತನೆ ಕಾಣಿಸಿಕೊಂಡ ಕಾಡ್ಗಿಚ್ಚನ್ನು ಮಂತ್ರಾಸ್ತ್ರ ಪ್ರಯೋಗದಿಂದ ನಂದಿಸಿದ ದ್ರೋಣಾಚಾರ್ಯರ ಬಿಲ್ವಿದ್ಯಾ ಸಾಮರ್ಥ್ಯಕ್ಕೆ ಬೆರಗಾದ ಬೇಡರ ನಾಯಕ ‘ಪೊಂಬಿರುವ’ (ಹಿರಣ್ಯಧನ) ಆ ವಿದ್ಯೆಯನ್ನು ತನಗೂ ಕಲಿಸುವಂತೆ ಕೇಳಿದಾಗ ದ್ರೋಣರಿಂದ ನಿರಾಕರಿಸಲ್ಪಟ್ಟು ನಿರಾಶೆ ಹೊಂದುತ್ತಾನೆ. ಅವನ ಮಗ ಏಕಲ (ಏಕಲವ್ಯ)ನಿಗೂ ಧನುರ್ವಿದ್ಯೆಯನ್ನು ಕಲಿಯುವ ಆಸೆಯುಂಟಾದಾಗ, ಹಾದಿಯಲ್ಲಿ ಸಂಧಿಸಿದ ಕರ್ಣ, ದ್ರೋಣರ ಬಳಿಗೆ ಹೋಗುವಂತೆ ಸೂಚಿಸುತ್ತಾನೆ. ದ್ರೋಣರು ತಿರಸ್ಕರಿಸಿದಾಗ ಅಶ್ವತ್ಥಾಮ ಅವನಿಗೆ ಗುರುವಿನ ಮೂರ್ತಿಯನ್ನು ರಚಿಸಿ ಸಾಧನೆ ಮಾಡಲು ತಿಳಿಸಿತ್ತಾನೆ. ಉಳಿದಂತೆ ರಾಜಕುಮಾರರಾದ ಕೌರವ ಪಾಂಡವರ ಬೇಟಡೆ, ಏಕಲನ ಏಕಾಂತ ಸಾಧನೆ, ಗುರುಭಕ್ತಿ, ಗುರುದಕ್ಷಿಣೆಯಾಗಿ ಹೆಬ್ಬೆರಳನ್ನು (ಕೊಂಬಿರೆಳ್) ಕಾಣಿಕೆಯಾಗಿ ಅರ್ಪಿಸುವುದು – ಇತ್ಯಾದಿಗಳಲ್ಲಿ ವಿಶೇಷ ವ್ಯತ್ಯಾಸವಿಲ್ಲ. ಪ್ರಸಂಗದ ಆರಂಭದಲ್ಲಿ ದ್ರೋಣ – ದ್ರುಪದರ ಸಂಘರ್ಷದ ಭಾಗವನ್ನು ಜೋಡಿಸಿದ್ದಾರೆ.
ಕಾಂಬೋಧಿ – ಝಂಪೆ
ದ್ರುಪದ – ಇಂದ್ರನಾನೆಗ್ ಕಿದೆತಗೋಣೆ ಸಮನಯ ಮಂಗೆ |
ಚಂದ್ರನಡೆ ಲಾಗಿಂಡೆಂಚಾವು ||
ರಂದ್೦ಡಲ ರಂಬೆ ಪರಪುನ ಬಾಲೆಗೊಳಿವಳಯ | ನಂದಿಗಿನೆ
ಕತ್ತೆಪಿಲಿಯಾವ || ೧ ||
ಸೌರಾಷ್ಟ್ರ – ಝಂಪೆ
ದ್ರೋಣ – ದಾನೆ ಬಗ್ಲಿಯ ದ್ರುಪದ ಎಲ್ಯೆಡ್ | ಪ್ರಾಣ ಸಮ
ಪನ್ದೆನನ್ ನೆನೆತ್ದ್ |
ಗೋಣೆ ಪಂಡನ ನಿಕ್ಕ್ ಯಾನೇ | ಗೋಣೆ ಯಮನ || ೨ ||
ಪ್ರಸಂಗದ ಚೌಕಟ್ಟು ಸೀಮಿತವಾಗಿರುವುದರಿಂದ ಕತೆ ಬೇಗ ಬೇಗ ಸಾಗುತ್ತದೆ. ಪೊಂಬಿರುವ, ಏಕಲ, ದ್ರೋಣ, ದ್ರುಪದ, ಅಶ್ವತ್ಥಾಮ, ಕರ್ಣ, ದುಗ್ಗೆ (ಏಕಲನ ತಾಯಿ) – ಇವು ಮುಖ್ಯ ಪಾತ್ರಗಳು. ಈ ಪಾತ್ರಗಳ ಸಂವಾದವನ್ನು ಹೆಣೆದ ಶೈಲಿ ಸೊಗಾಸಾಗಿದೆ.
ಮಧ್ಯಮಾವತಿ – ಏಕ
ದ್ರೋಣ – ದಾನೆ ಬತ್ತಯ ಬಾಲೆ ಪುದರೆಂಚ ನಿನ್ನ | ಮೋನೆದ
ಕಲೆಯೆಡ್ದೆ ಊರೋಲು ನಿನ್ನ |
ತ್ರಾಣದಿಂಜಿನ ಬಾಲೆ ಅಪ್ಪೆಮ್ಮೆರೇರ್ | ಕಾನದ ಕುಡಿಯೆನ ಕಡಪುಡ್ಡಿ ನೇರ್ || ೧ ||
ಕೇದಾರ ಗೌಳ – ಅಷ್ಟ
ಏಕಲ – ಕುಡಿಯೆರಾಣಯ್ಯ ಯಾನೇಕಲೆ ಕಡ್ಡಾಯೆ | ಪಡೆತ್ನಿ ಪೊಂಬಿರುವೆ ||
ಇಡೆ ಬತ್ತೆ ಕಲ್ಪಾವರ || ೧ ||
ಮಧ್ಯಮಾವರ್ತಿ – ಏಕ
ದ್ರೋಣ – ಕಾಡ್ಡ್ನಿಲೆಯಾದ್ ಮಾರ್ಗಪಕ್ಕಿಲೆನ್ | ನಾಡೆರೆ ಬಿರುಬೇದ ಬೊಡ್ಚಿಯ ಕೇನ್ |
ನಾಡ ರಾಯೆರೆ ಜೋಕ್ಲೆ ಪಗರಿದ ಕಲ್ಪ | ಕಾಡಾಣ ಗತ್ತಮ್ಮ ಉಂತಡ ಮುಲ್ಪ || ೧ ||
ಸೌರಾಷ್ಟ್ರ – ತ್ರಿವುಡೆ
ದ್ರೋಣ – ದಾನೆಯಾ ಕಿನ್ಯಾಣ್ ಪಂಡ್ದ್ | ಯಾನ್ ಕೂಲಿನ್ ತೋಜಿಪಾಯ್ನೆಕ್ |
ಆನೆಗೇಡ್ನ್ ಪೊನಕೆ ಪಾಡ್ಪನ | ಕಾನದಾಣೆ || ೧ ||
ಏಕಲನ ಅಳಲನ್ನು ಕೇಳಿ ಕರ್ಣ ಅವನನ್ನು ಸಮಾಧಾಪಡಿಸುವ ಪದ್ಯ
ಸೌರಾಷ್ಟ್ರ – ತ್ರಿವುಡೆ
ಬುಲಿಪಡಯ ನಿನ್ನಂಚ ಎನನ್ | ಕುಲತನೆವನೊಡು ನೂಕ್ಯೆರಾಂಡಲ |
ಕಳವುಡಾಂಡಲ ಕಲ್ಪೊಡುಯನಮ | ಚಲೊಟು ದುಂಬು || ೧ ||
ದಾನೆ ಲೋಕೊಡು ಕಲ್ಪ ಪೂರಲ | ದ್ರೋಣೆರೆಗ್ ಮಾರಾಟ ಮಲ್ದೆರ |
ಬ್ರಾಣರುಸಿ ಗುರು ಕುಡರಿ ರಾಮೆರ್ | ಗೇನ ಕಡಲ್ || ೨ ||
ಪೂಂಜರ ತುಳು ಭಾಷೆ, ಶೈಲಿ, ಅಲಂಕಾರಿಕ ನಿರೂಪಣೆ ಗಮನಾರ್ಹವಾದುದು. ಕೆಲವು ಹೊಸ ಶಬ್ದಗಳಿಗೆ ಅವರು ರೂಪ ನೀಡಿದ್ದಾರೆ. ಉದಾ : ನಂಜಿಕಂಟೆಲ್ದಾಯೆ (ವಿಷಕಂಠ), ಪಡಿಪಾರದ ಮಾನಿ (ದ್ವಾರಪಾಲಕ), ಅರಿಕೆನೀರ್ (ಅರ್ಘ್ಯ), ಮಲೆತಬೀರಿ (ಕಾಡ್ಗಿಚ್ಚು), ಕಾನದುಲ್ಲಾಲ್ದಿ (ವನದೇವತೆ), ಪಗರಿತೊಟ್ಟೆ (ಬತ್ತಳಿಕೆ), ನೂಲು ಪಾಡ್ದ್ನುಲ್ಲಯ (ಬ್ರಾಹ್ಮಣ), ಇತ್ಯಾದಿ. ಕೆಲವು ಪದ್ಯಗಳನ್ನು ಅವರು ಅರ್ಥಪೂರ್ಣ ಗಾದೆ ಹಾಗೂ ಸೊಗಸಾದ ನುಡಿಗಟ್ಟುಗಳಿಂದ ಸಿಂಗರಿಸಿದ್ದಾರೆ. ಉದಾ : ೧. ಪಿಸ್ರ್ದ ಪಲಿಕ್ ಸೊರ್ಗದ ಪೆತ್ತ ಬರುವಯೆ? ೨. ಇಂದ್ರನಾನೆಗ್ ಕಿದೆತ ಗೋಣೆ ಸಮನಯ? ೩. ಬೆರಣನೊರುಟೀಜಗದಜದ್ರನೆ ಬತ್ತ್೦ಡ್ ೪. ಗೇನೊಗುಲ ಕಾನೊಗುಲ ಪಾಪುಪಾಡುನ ಮರ್ಲ್ಬೊಡ್ಚಿ ೫. ಆನೆಗೇಡ್ನ್ಪೊನಕೆ ಪಾಡ್ವನ?… ಇತ್ಯಾದಿ.
ಪೂಂಜರ ‘ಕುಡಿಯನ ಕೊಂಬಿರೆಳ್’ ಪ್ರಸಂಗದಲ್ಲಿ ಕೆಲವು ಪಾತ್ರಗಳ ಸ್ವರೂಪಚಿತ್ರಣ ತುಳು ಭಾಷೆಯಲ್ಲಿ ಸುಂದರವಾಗಿ ಮೂಡಿಬಂದಿದೆ.
ಉದಾ : ದ್ರುಪದನ ಮಾಕಂದಿ ಅರಮನೆಯ ಬಾಗಿಲಲ್ಲಿ ನಿಂತ ಬಡಬ್ರಾಹ್ಮಣ ದ್ರೋಣನ ಸ್ವರೂಪವನ್ನು ದ್ವಾರಪಾಲಕ ಗುರುತಿಸುವುದು ಹೀಗೆ-
ಭಾಮಿನಿ
ತರೆತಗಿದ್ರ್ನ ಜುಟ್ಟು ಬೆಗ್ರ್ಡ್ | ಬೆರದ್ ಮಾಜಿನ ಬೊಟ್ಟು ಮುಂಡೊಡು |
ಪರಿದಿ ಕುಂಟುದ ಕಚ್ಚ, ಪುಗೆಲ್ಡ ಕುರೆತ ಕೈಕುಂಟು ||
ಕರಿಯ ಕಪ್ಪಡೆ ಮೆಯಿತ ನಟ್ಟುನ | ಬೆರಣನೊರುಟೀ ಜಗೊತ ಜದ್ರೊನೆ |
ತಿರ್ಗ್ದೀಡೆಗ್ ಬತ್ತ್೦ಡ್೦ದಾ ಪಾರದಯೆಕೇಂಡೆ || ೧ ||
ಬೇಡರ ನಾಯಕ ಪೊಂಬಿರುವ ಕಾಣಿಸಿಕೊಳ್ಳುವುದು ಹೀಗೆ-
ಭಾಮಿನಿ
ಮಾಸ ತಿಂದ್ದ್ಪೊಂಬಿರುವೆ ನರೆ | ಮೀಸೆ ಪೂಜಿದ್ ತಂಚಿ ಪರಡ್ದ್ |
ದೂಸು ಬಜ್ಜೆಯಿ ಬಚ್ಚಿರೆ ಪುಗರೆ ನವುಂಟನಗ ||
ನೇಸರುದಿಪನ ದಂಚಿನೊಂಜಿ ಪ್ರ | ಕಾಸೊ ಕಣ್ಣ್ಗ್ ಕಂತ್ನಗ ಬೆ |
ಕ್ಸಾಸೊಡುಂತಿಯೆ ಬೀರಿ ಬೂರ್೦ಡ್ ಕಾನೊಗುಂದಾಯೆ || ೧ ||
ಏಕಲನಿಗೆ ಕಾಣಿಸುವ ದ್ರೋಣನ ಚಿತ್ರಣ-
ಭಾಮಿನಿ
ಮಲೆತ ಬೊಲ್ಲೆನ ದರ್ಬಿದಂಚನೆ | ಬುಲೆದಿ ಗಡ್ಡದ ಜಮೆರಿ ದಿಡೆ ಕ |
ಣ್ಣ್ಲೆನ್ ತೂನಗ ಬೊಲ್ಮುಗಲ್ ದಿಡೆತಮರ್ ಬೊಲ್ಲಿಲವು ||
ಬಲತ್ತೆಡತ್ತ್ಡ್ ದುಂಬುಪಿರ ಜೊ | ಕುಲು ನಡುಟು ಪೂಕರೆದ ಪೊರ್ಲುಡ್ |
ಕುಲ್ದಿನೈಗುಲೆಗಡ್ಡಬೂರಿಯೆ ಕುಡಿಯೆರಾಣ್ಮಗೆ || ೧ ||
ದ್ರೋಣ ಕಣ್ಣು ತೆರೆದಾಗ ಕಾಣುವ ಏಕಲನ ರೂಪ-
ಭಾಮಿನಿ
ತರೆಕ್ಕಟ್ದಿ ಕಾಟ್ ಕೋರಿದ | ಪೊರುಲಸುಯಿ ಪಿಲಿತುಗುರು ನಾಲಿಡ್ |
ಕುರಿತ ರೋಮದ ಕಟ್ಟಿದಂಗ್ಡ್ಕೆಬಿಟ್ ಎಲುತನಗ ||
ಉರೆತ ಜೋಲಿನ್ತುತ್ತಿ ಬಲ ಬೆರಿ | ಟೆರುತ ಚರ್ಮದ ಪಗರಿ ತೊಟ್ಟೆನ್ |
ಬಿರು ನೆಡತ್ತ್ಡ್ ಕೋತಿನಾಣನ್ ತೂದು ಸಂತೊಸುಡು || ೨ ||
ಮಾನವ ಸಮಾಜದಲ್ಲಿ ಸಾರ್ವಜನಿಕವಾಗಿ ನಡೆದುಬಂದ ವರ್ಣ ದ್ವೇಷ, ಮೇಲ್ವರ್ಗದಿಂದ ಕೀಳುಜಾತಿಯವರ ಶೋಷಣೆ, ಅಧಿಕಾರಸೂತ್ರ ಕೈಗೆ ಸಿಕ್ಕಿದಾಕ್ಷಣ ಎಸಗುವ ದಬ್ಬಾಳಿಕೆ, ಪಟ್ಟ ಭದ್ರತೆಗೆ ಬೇಕಾಗಿ ನಡೆಯುವ ಷಡ್ಯಂತ್ರ, ಪ್ರತಿಯೊಂದು ವರ್ಗದಲ್ಲೂ ಸುಪ್ತವಾಗಿರುವ ಜ್ಞಾನದಾಹ ಇಂತಹ ಅದೆಷ್ಟೋ ಕಟುಸತ್ಯ ಹಾಗೂ ಮೌಲಿಕ ಎಚ್ಚರಗಳನ್ನು ತುಂಬಿರುವ ಮಹಾಭಾರತ ಎಂಬ ಭಂಡಾಗಾರದ ಕೀಲಿಕ್ಕೆ ‘ಕುಡಿಯನ ಕೊಂಬಿರೆಳ್’.
ಉಚ್ಚ ಕುಲದವರು ಮಾತ್ರ ಕಲಿಯಬಹುದಾದ ಧನುರ್ವೇದ ಕನಿಷ್ಠರಿಗಲ್ಲ ಎಂಬರ್ಥದಲ್ಲಿ ದ್ರೋಣನ ಒಂದು ಪದ್ಯ ಹೀಗಿದೆ.
ಸೌರಾಷ್ಟ್ರ ತ್ರಿವುಡೆ
ಕಾಡಮುರ್ಗೊಲೆ ತಿಂದ್ ಬದುಕುನ | ಕಾಡ ಕುಡಿಯಗ್ ಪನ್ಪಿನತ್ತವು ||
ರೂಡಿಗೆದುರಾವೊಡ್ಡಿ ಪೋಲಯ | ಬುಡರಸೇರ್ || ೧ ||
ಮಗನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದ ದ್ರೋಣನಿಗೆ ಪೊಂಬಿರುವ ಹೇಳುವ ಮಾತು-
ಸೌರಾಷ್ಟ್ರ ತ್ರಿವುಡೆ
ಬೆರಣೆರಂಕೆಡ್ ಒರಿಯೊಡ್ಡಿನ್ಪಿನ | ಬೆರಮೆಡಿತ್ತರ್ ಕುಡಿಯಮಗೆ ಪಗೆ |
ನೊರುಟುತೋಜಿಯೆ ಪುಂಡಿದಾ ಕೊಂ | ಬಿರೆಲ್ದಂಚ || ೧ ||
ಅಪರಾಧಿಭಾವವನ್ನು ಅಡಗಿಸಲಾಗದ ದ್ರೋಣ ಕೊನೆಗೆ ಹೇಳುವ ಪಶ್ಚಾತ್ತಾಪದ ಮಾತುಗಳಲ್ಲಿ ಇಡೀ ಪ್ರಸಂಗದ ಒಳದನಿ ವ್ಯಕ್ತವಾಗಿದೆ.
ಭಾಮಿನಿ
ನಿನ್ನ ಬಿರೆಳ್ದ ಬೇನೆಗೊವು ಗಡಿ | ತೆಣ್ಣೆ ಪಂಡ್ರೊಲಿ ಉಡಲ ಗಡಿಕ್ಯಾ |
ನೆಣ್ಣೆ ತೆರಿದ್ಜಿ ಪೋಲ ಮಗ ನಿನ್ನಕುಲೆ ಜತೆಯಾದ್ ||
ಎನ್ನ ನಿನ್ನೀ ಕತೆಟ್ ದೋಸೊಲು | ಎನ್ನನಾ ಕಾಲದನ ಕಟ್ಟ್ದ |
ಕಣ್ಣಿದನ
ಪನ್ಪುನೆನ್ ದುಂಬುದ ಜನೊಕುಲೇ ಪನಡ್ || ೧ ||
ದ್ರೋಣ – ದ್ರುಪದ, ದ್ರೋಣ – ಏಕಲವ್ಯರ ನಡುವೆ ನಡೆದ ಈ ಘಟನೆ ಸಮಾಜದಲ್ಲಿ ಮರುಳಿಸಬಾರದೆಂಬ ಆಶಯ ತುಂಬಿದ ಪ್ರಸಂಗದ ನಾಂದಿಪದ್ಯ ಓದುಗರಿಗೆ ಒಂದು ಉತ್ತಮ ಸಂದೇಶ ನೀಡುತ್ತದೆ.
ಭಾಮಿನಿ
ತಿರ್ತ್ಮಿತ್ತ್೦ದಿನ್ನಿ ಬೇದೊಲು
ಪೊರ್ತುದದಯೊರಿನೊಡು ಕತ್ತಲೆದಲೆಕೊ
ಅರ್ತಿ ಪಿರ್ತಿದ ಮೋಕೆ ಮಾಯೊದ ಸೂತ್ರದರ್ಕಟ್ದ
ಸುತ್ತುಡೆತ್ತಡ್ ಕಡಪರಾಜ್ಯೊಗು
ದೆರ್ತ್ತರೆನನ್ನಾದ್ ಗೇನೊದ
ಬಿತ್ತ್ನುಡಲ್ಡ್ಕೌಂತ್ಬುಲೆಪದ್
ಸತ್ಯದಾ ಪೊಸ ಪಲೊನು ಚಬಿಪುನ ಬಾಗ್ಯೊ ನಮ್ಮಾವಡ್ ||
‘ಕುಡಿಯನ ಕೊಂಬಿರೆಳ್’ ಪ್ರಸಂಗದ ಮುನ್ನುಡಿಯಲ್ಲಿ ಅಮೃತ ಸೋಮೇಶ್ವರ ಅವರು ಹೇಳಿದಂತೆ ‘ಕವಿ ಭಾಗವತರಾದುದರಿಂದ ಪದ್ಯಗಳ ಮಟ್ಟು, ರಾಗ-ತಾಳಗಳ ಅಚ್ಚುಕಟ್ಟುತನವನ್ನು ಪ್ರತ್ಯೇಕ ಹೇಳಬೇಕೆಂದಿಲ್ಲ. ನಡು ನಡುವೆ ಬರುವ ಬೇಟೆ, ಕಾಡು, ಉಣಿಸು – ತಿನಿಸು, ಶರೀರಾಲಂಕಾರ ಇತ್ಯಾದಿ ವರ್ಣನೆಗಳಲ್ಲಿ ಹೊಸತನವಿದೆ. ಕೃತಿಯಲ್ಲಿ ಮಿಂಚುವ ಕವಿಯ ಕಲ್ಪಕ ಶಕ್ತಿ, ಚಿತ್ರದ ಶೈಲಿ ಪ್ರಸಂಗವನ್ನು ಒಂದು ಕಾವ್ಯದ ಮಟ್ಟಕ್ಕೆ ಏರಿಸಿದೆ.
ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಎಲ್ಲಾ ಪ್ರಸಂಗಗಳಲ್ಲೂ ಉತ್ತಮ ಸಾಹಿತ್ಯಾಂಶವಿದೆ. ಅಂತೆಯೇ ಕಾಲ್ಪನಿಕ ಸಂಗತಿಗಳ ವಿಜೃಂಭಣೆಯೂ ಕಾಣಸಿಗುತ್ತದೆ. ಉತ್ತಮ ರಂಗ ಮಾಹಿತಿ ಹಾಗೂ ಅಧ್ಯಯನದ ಹಿನ್ನೆಲೆಯಿರುವ ಪೂಂಜರಂತಹ ಭಾಗವತರು ಇನ್ನಷ್ಟು ಪ್ರಬುದ್ಧ, ಅರ್ಥಪೂರ್ಣ ಪ್ರಸಂಗಗಳನ್ನು ತುಳುವಿನಲ್ಲಿ ನೀಡಲು ಸಮರ್ಥರಿದ್ದಾರೆ ಎಂಬುದು ಅವರ ಕೃತಿಗಳಿಂದ ಸ್ಪಷ್ಟವಾಗುತ್ತದೆ.
Leave A Comment