ಹತ್ತೊಂಬತ್ತು ವರ್ಷದ ಯುವಕ. ಸುಮಾರು ವರ್ಷಗಳಿಂದ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ತೊದಲುತ್ತೇನೆ. ಬೆಳಗಿನ ಜಾವದಲ್ಲಿ ಹಾಗೂ ಆಯಾಸವಾದಾಗ ಈ ರೀತಿಯಾಗುತ್ತದೆ. ಯಾರನ್ನಾದರು ಮಾತನಾಡಿಸಲು ಹೋದಾಗ ಒಂದು ಪದ ಮೂರ್ನಾಲ್ಕು ಬಾರಿ ಉಚ್ಚಾರವಾಗುತ್ತದೆ. ನನಗೆ ಇದೇ ಚಿಂತೆಯಾಗಿಬಿಟ್ಟಿದೆ. ಏನಾದರೂ ಚಿಕಿತ್ಸೆ ಇದೆಯೆ?

ತೊದಲುವಿಕೆ ಸರ್ವೇ ಸಾಮಾನ್ಯವಾಗಿ ಹಲವಾರು ಜನರಲ್ಲಿ ಕಾಣಿಸಿಕೊಳ್ಳುವ ಒಂದು ಆತಂಕದ ಪ್ರಕಟಣೆಯೇ ಹೊರತು, ಅದನ್ನು ಒಂದು ರೋತ ಚಿಹ್ನೆಯೆಂದು ಪರಿಗಣಿಸಲಾಗದು. ಆತಂಕ ಹಲವಾರು ರೀತಿಯಲ್ಲಿ, ದೈಹಿಕ ಚಿನ್ಹೆಯಾಗಿ ಮಾರ್ಪಾಟಾಗುವ ಹಲವಾರು ಉದಾಹರಣೆಗಳನ್ನು ಈ ಹಿಂದಿನ ಅಂಕಣಗಳಲ್ಲಿ ವಿವರಿಸಲಾಗಿದೆ. ನಮಗೆ ಗಾಬರಿಯಾದಾಗ, ಎದೆ ನಡುಗಬಹುದು, ಕೈ ಕಾಲು ಅದರಬಹುದು, ಪದೇ ಪದೇ ಮಲಮೂತ್ರ ವಿಸರ್ಜನೆ ಮಾಡಬೇಕಾಗಬಹುದು. ಇಲ್ಲವೇ ತಲೆಭಾರ, ಕತ್ತಿನಲ್ಲಿ, ಬೆನ್ನಿನಲ್ಲಿ ಎಳೆತ ಹೀಗೆ ಹಲವು ಹತ್ತೆಂಟು ದೈಹಿಕ ಚಿನ್ಹೆಗಳಾಗಿ ಪ್ರಕಟವಾದರೂ, ಇದು ಯಾವುದೂ ದೈಹಿಕ ಕಾಯಿಲೆಯ ಲಕ್ಷಣಗಳಲ್ಲ. ಬದಲಾಗಿ ಆತಂಕ ಪ್ರಕಟವಾಗಿ ನಿರಾತಂಕವಾಗುವ ಹಂತ ಮಾತ್ರ.

ಆತಂಕದಲ್ಲಿ ಬೆಂಕಿಯಿಂದ ಉತ್ಪತ್ತಿಯಾಗುವ ಹೊಗೆಗೆ ಹೋಲಿಸಿ ನೋಡಿ. ನೀವು ಕುಳಿತ ಕೊಠಡಿಯಲ್ಲಿ ತುಂಬಾ ಹೊಗೆ ಆವರಿಸಿಕೊಂಡಿದ್ದರೆ ಅದು ಹೊರಹೋಗಲು ಎಲ್ಲಾ ಕವಾಟುಗಳನ್ನು ಬಳಸಿಕೊಳ್ಳುತ್ತದೆ. ಅದು ಕಿಟಕಿ ಬಾಗಿಲು ಮೂಲಕ ಹೊರಹೋಗುವುದು. ಬಾಗಿಲ ಮಧ್ಯೆ ಇರುವ ಸಂಧಿಯಿಂದಲೂ ಹೊರಬರಬಹುದು ಅಥವಾ ವೆಂಟಿಲೇಟರ್ (ಗವಾಕ್ಷಿ) ಇದ್ದರೆ ಅದರ ಮೂಲಕವೂ ಹೊರ ಹೊರಟೀತು. ಅದೇ ರೀತಿ ಮನಸ್ಸಿನ ಆತಂಕವೂ ಸಹ ತನ್ನ ಪೂರ್ವ ನಿಗದಿತ ವ್ಯಕ್ತಿತ್ವಕ್ಕೆ ಅನುಗುಣವಾಗಿ, ದೇಹದಲ್ಲಿ ಪ್ರತಿಸ್ಪಂದನವನ್ನು ನೀಡುವ ಯಾವುದೇ ಅಂಗಾಂಗದ ಮೂಲಕವೂ ಪ್ರಕಟವಾಗುತ್ತದೆ. ಅದು ಗಂಟಲಿನ ಸ್ನಾಯುಗಳ ಮೂಲಕ ಪ್ರಕಟವಾದಾಗ ಅದನ್ನು ನಾವು ಗುಕ್ಕು ಅಥವಾ ತೊದಲುವಿಕೆ ಎಂದು ಕರೆಯುತ್ತೇವೆ.

ತೊದಲುವಿಕೆ ಹಲವಾರು ರೀತಿಯಲ್ಲಿ ಪ್ರಕಟವಾಗಬಹುದು. ಮಾತನ್ನು ಪ್ರಾರಂಭಿಸಲು ತೊಡಕಾಗಬಹುದು, ಶಬ್ದ ಶಬ್ದಗಳು ವಿಚ್ಛಿನ್ನವಾಗಿ ಸಂಭಾಷಣೆಯ ಲಯಗತಿಯಲ್ಲಿ ತೊಡಕುಂಟಾಗಬಹುದು. ಕೆಲವು ಶಬ್ದಗಳನ್ನು ಉಚ್ಚರಿಸಲು ಮಾತ್ರ ಕಷ್ಟವಾಗಬಹುದು. ಸಂಭಾಷಣೆಯ ಗತಿಯನ್ನು ಮುಂದುವರೆಸಿಕೊಂಡು ಹೋಗಲು ಇತರೇ ಸ್ನಾಯುಗಳ ಸಹಾಯವನ್ನು ಶಬ್ದ ಉಚ್ಛಾರಣೆಯನ್ನು ಸರಾಗೊಳಿಸಲು ವ್ಯಕ್ತಿ ಪ್ರಯತ್ನಪಡುತ್ತಾನೆ. ಈ ಎರಡು ವಿಭಿನ್ನ ಸ್ಥಿತಿಯಲ್ಲಿ ನಾವು ಸ್ಟಟ್ಟರಿಂಗ್ ಮತ್ತು ಸ್ಟ್ಯಾಮರಿಂಗ್ ಎಂದು ಕರೆಯುತ್ತೇವೆ. ಈ ಸ್ಥಿತಿಯಲ್ಲಿ ಚಿಕಿತ್ಸೆಗೆ ತೊಡಕಾಗುವ ಆತಂಕ ಹೆಚ್ಚು. ತೊದಲಿನ ಮೂಲಕವೇ ಹೊರಹೋಗಬೇಕಾಗುತ್ತದೆ. ಈ ರೀತಿ ನಿರ್ಮಿತವಾದ ವಿಷಚಕ್ರದಿಂದ ಹೊರಬರಲು ವ್ಯಕ್ತಿ ನರಳುತ್ತಾನೆ. ಖಿನ್ನತೆ, ಕೀಳರಿಮೆಯಿಂದ ನರಳುತ್ತಾನೆ ಮತ್ತು ಚಿತ್ತಚಾಂಚಲ್ಯನಾಗಿ ಬಳಲುತ್ತಾನೆ.

ಸಣ್ಣ ಮಕ್ಕಳಲ್ಲಿ ಗಮನ ಸೆಳೆಯುವ ನಾಟಕೀಯ ನಡವಳಿಕೆ ಆಗಿರಬಹುದು. ದಯವಿಟ್ಟು, ಗಮನಿಸಿ. ನೀವು ಯಾವುದೇ ಮುಖ್ಯವಾದ ಕೆಲಸದಲ್ಲಿ ತೊಡಗಿರುವಾಗ ನಿಮ್ಮ ಮಗು ನಿಮ್ಮ ಗಮನವನ್ನು ಸೆಳೆಯಲು ನಿಮ್ಮನ್ನು ಎಳೆದಾಡಿದರೆ ಕೂಡಲೆ ಕುಪಿತರಾಗುತ್ತೀರಿ. ಬದಲಾಗಿ ಮಗು ಸ್ವಲ್ಪ ತೊದಲಿದರೂ ಸಹ ಕೂಡಲೇ ನಿಮ್ಮೆಲ್ಲಾ ಕೆಲಸವನ್ನು ಬದಿಗೊತ್ತಿ ಅದನ್ನು ಗಮನಿಸುತ್ತೀರಿ. ಈ ರೀತಿ ಒಮ್ಮೆ ಪುರಸ್ಕೃತಗೊಂಡ ಮಗು ಈ ತೊದಲನ್ನೇ ಅಭ್ಯಾಸವಾಗಿ ಮುಂದುವರಿಸಿಕೊಂಡು ಹೋಗುತ್ತದೆ.

ತೊದಲು ಒಂದು ಅನುಕರಣೀಯ ಹವ್ಯಾಸವೂ ಆಗಿ, ಮುಂದೆ ಅದೇ ಅಭ್ಯಾಸವಾಗಿ ಮುಂದುವರೆಯುವುದುಂಟು.

ತುಂಬಾ ಗಾಬರಿಯಾದಾಗ, ಸಭಾ ಕಂಪನವುಂಟಾದಾಗ, ಕಳ್ಳತನ ಮಾಡಿ ಸಿಕ್ಕಿಕೊಂಡಾಗ, ಅನಪೇಕ್ಷಿತ ಘಟನೆಯನ್ನು ಏಕಾಏಕಿ ಎದುರಿಸಬೇಕಾದ ಸಂದರ್ಭವ್ನು, ಆಕಸ್ಮಿಕ ಘಟನೆಯಿಂದ ವಿಚಲಿತರಾದಾಗ ಸಹ ತೊದಲು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಹಿರಿಯ ವಯಸ್ಕರಲ್ಲಿ ಪಾರ್ಶ್ವವಾಯು ಪೀಡಿತರಾದಾಗ, ಹೆಚ್ಚಾಗಿ ಬಲಗಡೆ ಸ್ವಾಧೀನ ತಪ್ಪಿದಾಗೂ ಗುಕ್ಕುವಿಕೆ ಕಾಣಿಸಿಕೊಳ್ಳುತ್ತದೆ.

ನಿಮ್ಮ ಸಮಸ್ಯೆಗೆ ಖಂಡಿತಾ ಪರಿಹಾರವುಂಟು. ಗುಕ್ಕಿನ ಬಗ್ಗೆಯೆ ವಿಚಾರಿಸಿ ನಿರ್ವಿಣ್ಣರಾಗಬೇಡಿ. ಬದಲಾಗಿ ಸಮೀಪದಲ್ಲಿರುವ ಸ್ಪೀಚ್ ಥೆರಪಿಸ್ಟರನ್ನು (speech therapist) ಅಥವಾ ಮನೋವಿಜ್ಞಾನಿಗಳನ್ನು ಕಾಣಿರಿ. ಮಾತನ್ನು, ಶಬ್ದದ ಉಚ್ಛಾರಣೆಯನ್ನು ಸರಾಗಗೊಳಿಸುವ ಸುಲಭವಾದ ಮಾತಿನ ಅಭ್ಯಾಸಗಳಿವೆ. ಅದನ್ನು ಕ್ರಮಬದ್ಧವಾಗಿ ಮಾಡಿ. ಉಸಿರಾಟದ ಲಯಗತಿಯನ್ನು ನಿಯಂತ್ರಿಸುವ ಅಭ್ಯಾಸಗಳು ಸ್ನಾಯುಗಳನ್ನು ಸಡಿಲಗೊಳಿಸುವ ಅಭ್ಯಾಸಗಳೂ ಸಹಕಾರಿ. ಕೆಲವು ಬಾರಿ ಸಣ್ಣ ಪ್ರಮಾಣದ ಸಮಾಧಾನಕಾರಿ ಔಷಧಿಯ ಬಳಕೆ ಸಹಕಾರಿ. ಓದುವಾಗ ದೊಡ್ಡ ಧ್ವನಿಯಲ್ಲಿ ಓದಿರಿ. ನಿಮ್ಮ ಕಿವಿಗೆ ಬಿದ್ದ ತಪ್ಪನ್ನು ತಿದ್ದಲು ನಿಮ್ಮ ಸಹಾಯಕ್ಕೆ ಬರುತ್ತದೆ. ಬೆಳೆಯುತ್ತರುವ ಮಗು ಆಡುವ ಮಾತನ್ನು ಯಾವ ರೀತಿ ಕಲಿತುಕೊಳ್ಳುತ್ತದೆನ್ನುವ ಬಗ್ಗೆ ನಿಮ್ಮ ಗಮನ ಹರಿಸಿ. ಸ್ಟ್ಯಾಮರ್ ಸಪ್ರೆಸರ್ ಎನ್ನುವ ಯಾಂತ್ರಿಕ ವಿಧಾನದಿಂದಲೂ ಪರಿಹಾರ ಸಾಧ್ಯ.

‌ಗಳು ನಿರ್ದಿಷ್ಟ ಸಮಯದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಊಟ ಮಾಡುವ ಸಂದರ್ಭದಲ್ಲಿ, ಮಲಗಿದೊಡನೆ, ನಿದ್ರೆಯ ಆಳಕ್ಕೆ ಇಳಿಯುತ್ತಿರುವಾಗ, ಅಥವಾ ಮುಂಜಾನೆ ಏಳುವ ಸಂದರ್ಭಗಳಲ್ಲಿ ಈ ಅಟ್ಯಾಕ್‌ಗಳು ಬರುವುದು ಸಾಮಾನ್ಯ. ನಿಮಗೆ ಕಾಣಿಸಿಕೊಳ್ಳುತ್ತಿರುವ ತಲೆನೋವು ಸಹ ಅಪಸ್ಮಾರದ ಒಂದು ಭಾಗವಾಗಿರಬಹುದು ಇಲ್ಲವೇ ಅಪಸ್ಮಾರದಿಂದ ಆದ ಮೆದುಳಿನ ಆಘಾತದಿಂದಲೂ ಇರಬಹುದು.

 

ಇದಕ್ಕೆ ಖಚಿತವಾದ ಚಿಕಿತ್ಸಾಕ್ರಮಗಳುಂಟು. ಆದರೆ ಇದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಕೆಲವೇ ವರ್ಷಗಳು ಒಮ್ಮೆಯೂ ಬಿಡದೇ ನಿಖರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮಾತ್ರೆಗಳನ್ನು ಮನೆಯಲ್ಲಿ ಜೋಪಾನವಾಗಿಟ್ಟುಕೊಂಡು ನಿಮಗೆ ಕೊಟ್ಟರೆ ಒಳಿತು. ಮೆದುಳಿನ ಆಘಾತದಿಂದ ಆಗಬಹುದಾದ ಮರವಿನಿಂದ ನೀವು ನಿಖರವಾಗಿ ಮಾತ್ರೆಗಳನ್ನಿಟ್ಟುಕೊಂಡು ತೆಗೆದುಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಇದಕ್ಕೆ ಪಥ್ಯ ಪರಿಪಾಠಗಳೇನೂ ಇಲ್ಲ. ಸಾಮಾನ್ಯವಾಗಿ ಇದರ ಚಿಕಿತ್ಸೆಗಾಗಿ ಕಾರ್ಬೋಮಿಜಪೀನ್ ೨೦ ಮಿಲಿಗ್ರಾಂ ಔಷಧಿಯನ್ನು ೫ ರಿಂದ ೮ ವರ್ಷಗಳ ಕಾಲ ಸೇವಿಸಬೇಕಾಗುತ್ತದೆ. ಯಾವುದಕ್ಕೂ ನಿಮ್ಮ ವೈದ್ಯರ ಸಲಹೆಯ ನಂತರ ಚಿಕಿತ್ಸೆಯನ್ನು ಪ್ರಾರಂಭಿಸಿ.