ಕರಾಳಕರವಾಳಭಾಮಂಡಳಪರೀತೋದ್ಯತದೋರ್ದಂಡಚಂಡಪ್ರಚೆಂಡಸುಭಟಾರೂಢತುರಂಗಮ ವೇಗಬಲಪತಿತಖರಖುರಟಂಕಪರಿಸ್ಖಲನಕಳಿತ ವಿಷಮಸಮರಭೇರೀ ನಿಸ್ವನಮುಮಾಕರ್ಣಕೃಷ್ಣ ವಿಕ್ರಮಾರ್ಜುನಕಾರ್ಮುಕವಿಮುಕ್ತನಿಶಿತಸಾಯಕಸಂಕುಳಶಲ್ಯನಿಪತಿತಾನೇಕಕಳಕಳಾಕಳಿತಮುಂ ಪ್ರಕುಪಿಸೂತಹೂಂಕಾರ ಕಾತರಿತತರಳತರತುರಂಗದ್ರುತವೇಗಾಕೃಷ್ಣ ಧನಂಜಯರಥಚಟುಳ ಚಕ್ರನೇಮಿಧಾರಾಪರಿವೃತಸಂಘಟ್ಟನಸಮುಚ್ಚಳಿತ ಪಾಂಸು ಪಟಳಾಂಧಕಾರದುರ್ಲಕ್ಷಾಂತರಿಕ್ಷ ಕ್ಷಿತಿ

ದಿಗಂತರಾಳಾಂತರಮುಮನವರತನಿಹತನರಕರಿತುರಗನಿಕುರುಂಬಕೀಲಾಲಕಲ್ಲೋಲಪ್ರವರ್ತನಾನೇಕ ನದನದೀಪ್ರವಾಹ ಬಾಹುಳ್ಯದುಸ್ತರಾವತರಣಮಾರ್ಗಮುಂನಿಶಿತಾಸಿಪತ್ರಪತಿತಪ್ರಚಂಡ ಸುಭಟಮಸ್ತಕೋಚ್ಚಳಿತಚಟಾಚ್ಛಾಟನದುರ್ನಿರೀಕ್ಷ್ಯನರ್ತಿ ತಾನೇಕಕಬಂಧಬಂಧುರಮುಮಪ್ಪ ವಿಷಮ ಪ್ರದೇಶಂಗಳೊಳ್ ತೊಲಗಿ ತೊಲಗಿ ಪೋಗೆ ಸಂಜಯಂ ದುರ್ಯೋಧನನ ಮೊಗಮಂನೋಡಿ-

ಚಂ|| ಎಱಗುವನೇಕ ವಂಶ ನರಪಾಲಕರತ್ನಕಿರೀಟಕೋಟಿಯೊಳ್
ಮಿಱುಗುವ ಪದ್ಮರಾಗದ ಬಿಸಿಲ್ಗಗಿವೀ ನಿಜ ಪಾದಪದ್ಮವಿ|
ಯಿಱದು ಸಿಡಿಲ್ದ ಬಾಳ ಮೊನೆಯಂಬಿನ ತಿಂತಿಣಿಯೊಳ್ ತಗುಳ್ದು ಕಿ
ಕ್ಕಿಱಗಿಱದಿರ್ದ ಕೊಳ್ಗುಳದೊಳಂ ನಡೆವೀ ನಡೆಗೆಂತು ನೋಂತೆಯೋ|| ೫೨

ವ|| ಎನುತುಂ ಕಿಱದಂತರಮಂ ಬಂದು-

ಚಂ|| ಇವು ಪವನಾತ್ಮಜಂ ಗದೆಯಿನೆಲ್ವಡಗಾಗಿರೆ ಮೋದೆ ಮೊೞ ಬಿ
ೞ್ದುವು ಮದವಾರಣಂಗಳಿವು ನೋಡ ಗುಣಾರ್ಣವನಂಬಿನಿಂದುರು|
ಳ್ಳುವು ಮನುಜೇಂದ್ರ ರುಂದ್ರ ಮಕುಟಾಳಿಗಳೋಳಿಗಳಿಂತಿವಲ್ತೆ ಗಾಂ
ಡಿವಿಯ ವರೂಥಘಾತದೊಳೆ ನುರ್ಗಿದ ತುಂಗತುರಂಗಕೋಟಿಗಳ್|| ೫೩

ವ|| ಎಂದು ನೆಣದ ಪಳ್ಳಂಗಳಂ ಪಾಯ್ದುಂ ನೆತ್ತರ ತೊಗಳಂ ಬಂಜಿಸಿಯುಮಡಗಿನಿಡುವುಗಳಂ ದಾಂಟಿಯುಂ ಪೆಣದ ತಿಂತಿಣಿಯಂ ನೂಂಕಿಯುಂ ರಥದ ಘಟ್ಟಣೆಗಳನೇಱ ಪಾಯ್ದುಂ ತೇರ ಪಲಗೆಯಂ ಮೆಟ್ಟಿಯುಂ ಪೋಗಿವೋಗಿ ಭೂತ ಪ್ರೇತ ಪಿಶಾಚ ನಿಶಾಚರನಿಚಯನಿಚಿತಭೂಭಾಗಮನೆಯ್ದೆ ವಂದಾಗಳ್-

ತಲೆಗಳ ಸಾಲುಗಳಿಂದ ಜಾರಿದ ಕಿರೀಟಗಳ ತುದಿಯ ತಗುಲುವಿಕೆಯಿಂದ ಮೇಲೆದ್ದ ರತ್ನಸಲಾಕಿಗಳ ಸಮೂಹವನ್ನುಳ್ಳುದೂ ಯುದ್ಧಭಾರವನ್ನು ವಹಿಸಿರುವ ಭೀಮಸೇನನ ದೊಡ್ಡದಾದ ಗದೆಯ ಪೆಟ್ಟನ್ನು ಸಹಿಸಲಾಗದ ಮದ್ದಾನೆಗಳ ಕಾಲಿನುಗುರಿನಿಂದ ತೋಡಿದ ಭೂಭಾಗವನ್ನುಳ್ಳದೂ ಬಹಳ ಕಾಂತಿಯಿಂದ ಕೂಡಿದ ಸೂರ್ಯನ ತೀವ್ರವಾದ ಕಿರಣಗಳಂತೆಯೂ ತೀವ್ರಾಗ್ನಿಯಂತೆಯೂ ಹೊಳೆಯುವ ಭಯಂಕರವಾದ ಕತ್ತಿಗಳ ಕಾಂತಿಯ ಪರಿವೇಷದಿಂದ ಸುತ್ತುವರಿಯಲ್ಪಟ್ಟು ಎತ್ತರವಾದ ಬಾಹುಗಳಿಂದ ಪ್ರಚಂಡವಾದ ಸುಭಟರು ಹತ್ತಿರುವ ಕುದುರೆಗಳ ಸೈನ್ಯದ ವೇಗದಿಂದ ಬೀಳಿಸಲ್ಪಟ್ಟ ಹೇಸರಗತ್ತೆಗಳ ತೀಕ್ಷ್ಣವಾದ ಗೊರಸಿನ ಲಾಳಗಳ ಜಾರುವಿಕೆಯಿಂದ ಉಂಟಾದ ಶಬ್ದವುಳ್ಳದ್ದೂ ಕಿವಿಯವರೆಗೂ ಸೆಳೆಯಲ್ಪಟ್ಟ ಅರ್ಜುನನ ಬಾಣದಿಂದ ಬಿಡಲ್ಪಟ್ಟ ಹರಿತವಾದ ಬಾಣಗಳ ಶಲ್ಯದಿಂದ (ಚೂರು) ಬೀಳಿಸಲ್ಪಟ್ಟ ಅನೇಕ ಕಳಕಳಶಬಲ್ದಗಳಿಂದ (ಕೂಡಿದುದೂ) ತುಂಬಿದುದೂ ಕೋಪಗೊಂಡ ಸಾರಥಿಗಳ ಗರ್ಜನೆಗಳಿಂದ ಸಂಭ್ರಮಗೊಂಡ ಚಂಚಲವಾದ ಕುದುರೆಯ ಓಟದ ವೇಗದಿಂದ ಸೆಳೆಯಲ್ಪಟ್ಟ ಅರ್ಜುನನ ಬಲಿಷ್ಠವಾದ ಚಕ್ರಗಳ ಸುತ್ತಲಿರುವ ಕಬ್ಬಿಣದ ಪಟ್ಟಿಗಳು ಹೊರಳಿದ ಹೊಡೆತದಿಂದ ಮೇಲಕ್ಕೆದ್ದ ಧೂಳುಗಳ ಪದರದಿಂದ ಕಾಣಲಾಗದ ಭೂಮ್ಯಾಕಾಶ ದಿಗ್ಭಾಗಗಳ ಒಳಭಾಗವನ್ನುಳ್ಳುದೂ ಯಾವಾಗಲೂ ಹೊಡೆಯಲ್ಪಟ್ಟ ಮನುಷ್ಯ, ಆನೆ, ಕುದುರೆಗಳ ಸಮೂಹದ ರಕ್ತಗಳ ಅಲೆಗಳ ಹೊರಳುವಿಕೆಯಿಂದ ಆದ ಅನೇಕ ನದನದೀಪ್ರವಾಹಗಳನ್ನು ದಾಟಲಸಾಧ್ಯವಾದ ದಾರಿಗಳನ್ನುಳ್ಳುದೂ, ಹರಿತವಾದ ಕತ್ತಿಯಿಂದ ಬೀಳಿಸಲ್ಪಟ್ಟ ಭಯಂಕರವಾದ ಸುಭಟರ ತಲೆಯಿಂದ ಮೇಲಕ್ಕೆದ್ದ ಜುಟ್ಟುಗಳ ಚಲನೆಯಿಂದ ಮರೆಯಾಗಿರುವ ಅನೇಕ ಅಟ್ಟೆಗಳ ನೃತ್ಯದಿಂದ ಮನೋಹರವಾಗಿರುವುದೂ ಆಗಿರುವ ಹಳ್ಳಕೊಳ್ಳಗಳ ಪ್ರದೇಶದಲ್ಲಿ ನಡೆದು ಹೋಗುತ್ತಿರುವ ದುರ್ಯೋಧನನ ಮುಖವನ್ನು ಸಂಜಯನು ನೋಡಿ ೫೨. ನಮಸ್ಕಾರಮಾಡುವ ಅನೇಕ ಮನೆತನಗಳ ರಾಜರ ಕಿರೀಟದ ತುದಿಯಲ್ಲಿ ಪ್ರಕಾಶಿಸುತ್ತಿರುವ ಪದ್ಮರಾಗದ ಕಾಂತಿಗೂ ರತ್ನಗಳ ಪ್ರಕಾಶಕ್ಕೂ ಅಂಜುತ್ತಿದ್ದ ಈ ನಿನ್ನ ಪಾದಕಮಲಗಳು ಈಗತಾನೇ ಕತ್ತಲಿಸಲ್ಪಟ್ಟು ಸಿಡಿದು ಬಿದ್ದಿರುವ ಮೊನಚಾದ ಬಾಣಗಳ ಸಮೂಹದಲ್ಲಿ ಸೇರಿಕೊಂಡು ಒತ್ತಾಗಿ ಸೇರಿರುವ ಯುದ್ಧರಂಗದಲ್ಲಿಯೂ ನಡೆಯುವ ಈ ನಡೆಗೆ ಎಷ್ಟು ವ್ರತಮಾಡಿದ್ದೆಯೋ?- ವ|| ಎನ್ನುತ್ತ ಸ್ವಲ್ಪದೂರ ಬಂದು ೫೩. ಇವು ಭೀಮನು ಗದೆಯಿಂದ ಮೂಳೆ ಮಾಂಸಗಳಾಗುವಂತೆ ಹೊಡೆಯಲು ಕುಸಿದು ಬಿದ್ದ ಮದ್ದಾನೆಗಳು. ಇವು ನೋಡಪ್ಪ, ಅರ್ಜುನನ ಬಾಣದಿಂದ ಉರುಳಿಬಿದ್ದ ರಾಜರ ರಾಶಿಯಾದ ಕಿರೀಟಗಳ ಸಮೂಹಗಳು. ಇವು ಅರ್ಜುನನ ತೇರಿನ ಪೆಟ್ಟಿನಿಂದ ಜಜ್ಜಿಹೋದ ಎತ್ತರವಾದ ಕುದುರೆಗಳ ಸಮೂಹಗಳು ವ|| ಎಂಬುದಾಗಿ ಕೊಬ್ಬುಗಳ ಹಳ್ಳವನ್ನು ಹಾಯ್ದೂ ರಕ್ತಪ್ರವಾಹಗಳನ್ನು ತಪ್ಪಿಸಿಯೂ ಮಾಂಸದ ರಾಶಿಗಳನ್ನು ದಾಟಿಯೂ ನರಗಳ ಸಮೂಹವನ್ನು ತಳ್ಳಿಯೂ ತೇರಿನ ಸಂಘಟ್ಟಣೆಗಳಿಂದಾದ ದಿಣ್ಣೆಹಳ್ಳಗಳನ್ನು ಹತ್ತಿ ಇಳಿದೂ ತೇರಿನ ಹಲಗೆಗಳನ್ನು ತುಳಿದೂ ನಡೆದು ಹೋಗಿ ಭೂತಪ್ರೇತಪಿಶಾಚ ರಾಕ್ಷಸಸಮೂಹದಿಂದ ತುಂಬಿದ ಪ್ರದೇಶವನ್ನು ಸೇರಿದರು. ೫೪. ಅರಿಕೇಸರಿಯಲ್ಲಿ ಹೇಗೂ ವಿರೋಧವು ಬೇಡ, ಸಮಾನವಾಗಿ ಕೂಡಿ

ಉ|| ಬೇಡ ವಿರೋಧಮೆಂತುಮರಿಕೇಸರಿಯೊಳ್ ಸಮಸಂದು ಸಂಯಂ
ಮಾಡೆನೆ ಮಾಡಲೊಲ್ಲದೆ ಸುಹೃದ್ಬಲಮೆಲ್ಲಮನಿಕ್ಕಿ ಯುದ್ಧಮಂ|
ಮಾಡಿದ ಜಾತಿಬೆಳ್ ನಿನಗದೇವಿರಿದೀಯೆಡಱಂದು ಮುಂದೆ ಬಂ
ದೇಡಿಸುವಂತಿರಾಡಿದುದದೊಂದು ಮರುಳ್ ಫಣಿರಾಜಕೇತುವಂ|| ೫೪

ಚಂ|| ಮರುಳೆನೆ ಲೋಕದೊಳ್ ನೆಗೞ್ದು ಕೊಳ್ಗುಳದೊಳ್ ಮರುಳಾಟವಾಡುವಾಂ
ಮರುಳೆನೊ ವಿಕ್ರಮಾರ್ಜುನನೊಳೊಲ್ಲದೆ ಸಂಯನುರ್ಕಿ ಕೆಟ್ಟ ನೀಂ|
ಮರುಳಯೊ ಪೇೞ ಪೇೞದೊಡೆ ಪೋಗದಿರೀಶ್ವರನಾಣೆಯೆಂದು ಪು
ಲ್ಮರುಳಿನಿಸಾನುಮಂ ತೆಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ|| ೫೫

ವ|| ಆಗಳಾ ಮರುಳ ಕೆಯ್ತಕ್ಕೆ ದುರ್ಯೋಧನಂ ಮುಗುಳ್ನಗೆ ನಕ್ಕೆನ್ನಂ ವಿಧಾತ್ರಂ ಮರುಳ್ಮಾಡಿದ ಕಾರಣದಿಂದೀ ಮರುಳ ಕಣ್ಗಾಂ ಮರುಳಾಗಿ ತೋಱದೆನೆಂದಲ್ಲಿಂ ತಳರ್ದು ಕಿಱದಂತರಮಂ ನಡೆದೊಂದೆಡೆಯೊಳನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಮುಭಯ ಪಕ್ಷಸ್ಥಿತೋಭಯಕುಲಶುದ್ಧನೃಪತಿಮಣಿಮಕುಟಮರೀಚಿಮೇಚಕಿತಮುಮಪ್ಪ ಸಂಗ್ರಾಮಭೂಮಿಯ ನಡುವೆ ಧೃಷ್ಟದ್ಯುಮ್ನಕಚಗ್ರಹವಿಲುಳಿತ ಮೌಳಿಯುಂ ತದೀಯ ಕೌಕ್ಷೇಯಕಧಾರಾವಿದಾರಿತ ಶರೀರನುಮಾಗಿ ಬಿೞರ್ದ ಶರಾಚಾರ್ಯರಂ ಕಂಡು-

ಚಂ|| ನೆಗೞ್ದುದು ಬಿಲ್ಲ ಬಿನ್ನಣಮಿಳಾವಳಯಕ್ಕೆ ಸಮಸ್ತ ಧಾತ್ರಿ ಕೆ
ಯ್ಮುಗಿವುದು ನಿಮ್ಮದೊಂದೆ ಪೆಸರ್ಗೇಳ್ವೊಡೆ ನಿಮ್ಮ ಸರಲ್ಗೆ ದೇವರುಂ|
ಸುಗಿವರಯೋನಿಸಂಭವರಿರೆನ್ನಯ ದೂಸಱನೆನ್ನ ಕರ್ಮದಿಂ
ಪಗೆವರಿನಕ್ಕಟಾ ನಿಮಗವಿಯಿರವಾದುದೆ ಕುಂಭಸಂಭವಾ|| ೫೬

ವ|| ಎಂದು ಗುರುವಿನ ಪಾದಕಮಲಂಗಳಂ ತಲೆಯ ಮೇಲಿಟ್ಟು ಪೊಡೆವಟ್ಟಂತೆ ನಡೆತಂದು ವೃಕೋದರನಿಂ ನಿಶ್ಯೇಷ ಪೀತರುರನಪ್ಪ ದುಶ್ಯಾಸನನಂ ಕಂಡಾತನಂ ಮುತ್ತಿ ಸುತ್ತಿಱದ ಮುದುವರ್ದುಗಳುಮನಗಲೆ ಮೆಟ್ಟಿ ಪೋೞ್ದು ಭೀಮಸೇನಂ ಮುನ್ನಂ ಕುಡಿದುದಱಂ ನೆತ್ತರಂ ಪಡೆಯದಾಕಾಶಕ್ಕೆ, ಬಾಯಂ ತೆದೂಳ್ವ ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು ಪೆಡಸಾರ್ವ ನರಿಗಳುಮಂ ತಾನೆ ಸೋದು ಸೋದರನೞಲೊಳ್ ಕಣ್ಣ ನೀರ್ಗಳಂ ಸುರಿದು-

ಕಂ|| ನಿನ್ನಂ ಕೊಂದನ ಬಸಿಱಂ
ನಿನ್ನಂ ತೆಗೆಯದೆಯುಮವನ ಕರುಳಂ ಪರ್ದಿಂ|
ಮುನ್ನುಂಗಿಸಿ ನೋಡದೆಯುಂ
ಮುನ್ನಮೆ ಯುವರಾಜ ನಿನ್ನನಾಂ ನೋಡಿದೆನೇ|| ೫೭

ಸಂಯನ್ನು ಮಾಡು ಎಂದರೂ ಒಪ್ಪದೆ ಸ್ನೇಹಿತರನ್ನು ನಾಶಮಾಡಿ ಯುದ್ಧವನ್ನು ಮಾಡಿದ ಜಾತಿಮರುಳಾದ ನಿನಗೆ ಈ ಕಷ್ಟಗಳು ಏನು ದೊಡ್ಡದು ಎಂದು ಮುಂದೆ ಬಂದು ದುರ್ಯೋಧನನನ್ನು ಅಪಹಾಸ್ಯಮಾಡುವಂತೆ ಒಂದು ಮರುಳು ಮಾತನಾಡಿತು. ೫೫. ಲೋಕದಲ್ಲಿ ಮರುಳುಗಳು ಎನ್ನಿಸಿಕೊಂಡು ಪ್ರಸಿದ್ಧರಾಗಿ ಯುದ್ಧರಂಗದಲ್ಲಿ ಮರುಳುಗಳ ಆಟವನ್ನಾಡುವ ನಾವುಗಳು ಮರುಳುಗಳೋ (ಬುದ್ಧಿಗೇಡಿಗಳೋ) ವಿಕ್ರಮಾರ್ಜುನನಲ್ಲಿ ಸಂಯನ್ನೊಲ್ಲದೆ ಉಬ್ಬಿ ಕೆಟ್ಟ ನೀನುದಡ್ಡನೋ ಹೇಳು. ಹೇಳಿದಿದ್ದರೆ ಹೋಗಬೇಡ; ಈಶ್ವರನಾಣೆ ಎಂದು ಹುಲ್ಲಿನಂತೆ ಬಹು ಲಘುವಾದ ಒಂದು ಮರುಳು ಒಂದಿಷ್ಟು ತಡೆದು ದುರ್ಯೋಧನನ್ನು ಹಿಂಸೆ ಮಾಡಿತು. ವ|| ಆಗ ಆ ಪಿಶಾಚಿಯ ಕೆಲಸಕ್ಕೆ ದುರ್ಯೋಧನನು ಮುಗುಳ್ನಗೆ ನಕ್ಕು ನನ್ನನ್ನು ಬ್ರಹ್ಮನು ಮರುಳುಮಾಡಿದ ಕಾರಣದಿಂದ ಈ ಪಿಶಾಚದ ಕಣ್ಣಿಗೆ ನಾನು ಹುಚ್ಚನಾಗಿ ತೋರಿದೆನು ಎಂದು ಅಲ್ಲಿಂದ ಹೊರಟು ಸ್ವಲ್ಪ ದೂರ ನಡೆದು ಒಂದು ಕಡೆಯಲ್ಲಿ ಅನೇಕ ಆನೆ, ಕುದುರೆ ಮನುಷ್ಯರ ದೇಹಗಳಿಂದ ತುಂಬಿದುದೂ ಎರಡು ವಂಶದ ಪಕ್ಷಗಳಲ್ಲಿಯೂ (ತಂದೆತಾಯಿಗಳ ಎರಡು ಕುಲದಲ್ಲಿಯೂ) ಶುದ್ಧರಾದವರ ರತ್ನಕಿರೀಟಗಳ ಕಾಂತಿಯಿಂದ ಕೂಡಿಕೊಂಡಿರುವ ಆ ಯುದ್ಧಭೂಮಿಯ ಮಧ್ಯಭಾಗದಲ್ಲಿ ಧೃಷ್ಟದ್ಯುಮ್ನನು ಜುಟ್ಟನ್ನು ಹಿಡಿದುದರಿಂದ ತಿರುಗಿಕೊಂಡಿರುವ ತಲೆಯುಳ್ಳವನೂ ಅವನ ಕತ್ತಿಯ ಅಲಗುಗಳಿಂದ ಸೀಳಲ್ಪಟ್ಟ ಶರೀರವುಳ್ಳವನೂ ಆಗಿ ಬಿದ್ದಿದ್ದ ದ್ರೋಣಾಚಾರ್ಯನನ್ನು ನೋಡಿದನು. ೫೬. ನಿಮ್ಮ ಚಾಪವಿದ್ಯಾಕೌಶಲವು ಭೂಮಂಡಲದಲ್ಲೆಲ್ಲ ಪ್ರಸಿದ್ಧವಾದುದು. ನಿಮ್ಮಒಂದು ಹೆಸರನ್ನು ಕೇಳಿದರೆ ಸಮಸ್ತ ಲೋಕವೂ ಕೈಮುಗಿಯುವುದು. ನಿಮ್ಮ ಬಾಣಗಳಿಗೆ ದೇವತೆಗಳೂ ಭಯಪಡುವರು. ನೀವು ಅಯೋನಿಜರಾಗಿದ್ದೀರಿ; ನನ್ನ ಕಾರಣದಿಂದ ನನ್ನ ದುಷ್ಕರ್ಮದಿಂದ ಅಯ್ಯೋ ದ್ರೋಣಾಚಾರ್ಯರೇ ಶತ್ರುಗಳಿಂದ ನಿಮಗೂ ಈ ದುಸ್ಥಿತಿಯುಂಟಾಯಿತೇ? ವ|| ಎಂದು ಗುರುವಿನ ಪಾದಕಮಲಗಳನ್ನು ತಲೆಯ ಮೇಲಿಟ್ಟು ನಮಸ್ಕಾರಮಾಡಿ ಹಾಗೆಯೇ ಮುಂದೆ ನಡೆದು ಬಂದು ಭೀಮಸೇನನಿಂದ ಸ್ವಲ್ಪವೂ ಉಳಿಯದಂತೆ ಕುಡಿಯಲ್ಪಟ್ಟ ರಕ್ತವನ್ನುಳ್ಳ ದುಶ್ಯಾಸನನನ್ನು ನೋಡಿ ಮುತ್ತಿ ಬಳಸಿಕೊಂಡಿದ್ದ ಮುದಿಹದ್ದುಗಳನ್ನು ಬಿಟ್ಟು ದೂರಹೋಗುವಂತೆ ಕಾಲಿನಿಂದ ಶಬ್ದಮಾಡಿ ಸೀಳಿ ಭೀಮನು ಮೊದಲೇ ಕುಡಿದುಬಿಟ್ಟಿದ್ದುದರಿಂದ ರಕ್ತವನ್ನು ಪಡೆಯದೆ ಆಕಾಶದ ಕಡೆ ಬಾಯಿಬಿಟ್ಟು ಕೂಗುತ್ತಿರುವ ಗುಳ್ಳೆನರಿಗಳನ್ನೂ ನರಗಳನ್ನೂ ಪಕ್ಕೆಗಳನ್ನೂ ಕಿತ್ತೆಳೆದು ಹಿಂದಕ್ಕೆ ಹೋಗುವ ನರಿಗಳನ್ನೂ ತಾನೇ ಅಟ್ಟಿ ತಮ್ಮನ ದುಖದಿಂದ ಕಣ್ಣೀರನ್ನು ಸುರಿಸಿದನು. ೫೭. ನಿನ್ನನ್ನು

ವ|| ಎಂಬುದುಂ ಸಂಜಯನಿಂತಪ್ಪ ವಿಪ್ರಳಾಪಂಗಳ್ ಶೌರ್ಯಶಾಲಿಗಳ್ಗನುಚಿತ ಮತ್ತಮೆೞ್ತರ್ಪುದೆಂದು ತಳರ್ದು ಬಂದಮೋಘಾಸ್ತ್ರ ಧನಂಜಯ ಕರಪರಿಚ್ಯುತವಿಕರ್ಣ ವಿಶೀರ್ಣನಾಗಿರ್ದ ಕರ್ಣಸೂನುವಂ ವೃಷಸೇನನಂ ಕಂಡು ಕರ್ಣನಂ ನೆನೆದೆರ್ದೆದೆದು ದುರ್ಯೋಧನನ ಕೆಳೆಯನಪ್ಪ ನಿಮ್ಮಮ್ಮಂ ಕರ್ಣನೆಲ್ಲಿದನೆಂದು ತೆಕ್ಕನೆ ತೀವಿದ ಕಣ್ಣ ನೀರೊಳ್ ದೆಸೆಗಾಣದೆ ನಿಂದಿರ್ದ ಸುಯೋಧನನಂ ಸಂಜಯನಿಂತೆಂದಂ-

ಚಂ|| ನರಶರಘಾತದಿಂ ಪಱದು ಪತ್ತಿಸಿದಂತೆವೊಲಿರ್ದ ಮೆಯ್ ಭಯಂ
ಕರತರಮಾಗೆ ಮುಯ್ವುವರೆಗಂ ತೆಗೆದಂಬಿನ ಮುಷ್ಟಿ ಬಿನ್ನಣಂ|
ಬೆರಸಿರೆ ಪೋದ ಪಂದಲೆಯೊಳಾದ ಮುಗುಳ್ನಗೆ ಭೀತರಾದರೆ
ಲ್ಲರುಮನಳುರ್ಕೆಯಿಂ ನಗುವವೋಲ್ ರವಿನಂದನನಿತ್ತಲಿರ್ದಪಂ|| ೫೮

ವ|| ಎಂಬುದುಮಾಗಳ್ ತೆಪ್ಪತ್ತುಮೆಲ್ಲಿದನೆತ್ತಣನೆಂದು ಕರ್ಣನ ಕಳೇವರಮಂ ನೋಡಿ ನೋಡಲಾಱದೆ ಕಣ್ಗಳಂ ಮುಟ್ಟ ಮೂರ್ಛೆವೋಗಲ್ ಬಗೆದನಂ ಸಂಜಯ ತೞ್ಕೈಸಿಕೊಂಡಾಗಳ್ ಚೇತರಿಸಿ ಕೂರ್ಮೆ ಕೆಯ್ಮಿಕ್ಕು ಬರೆ ಸೈರಿಸಲಾಱದೆ-

ಚಂ|| ಬೆಸನೆಡೆಗಳ್ಗೆ ತೊೞ್ತ್ತುಬೆಸನಂಗಳವುಂಕಿದೊಡಾಗದೆಂದು ಬ
ಗ್ಗಿಸುವೆಡೆಗಾಳ್ದನಿಂತು ನೆಗೞೆಂಬೆಡೆಯೊಳ್ ಗುರು ಪೆರ್ಚಿದೊಂದು ಬೇ|
ವಸದೆಡೆಗಾಶ್ರಯಂ ಮನಮನೊಪ್ಪಿಸುವೀಯೆಡೆಯೊಳ್ ಮನಂ ವಿಚಾ
ರಿಸುವೊಡೆ ಕರ್ಣನಲ್ಲದೆನಗಾವೆಡೆಗಂ ಪೆಱನೊರ್ವನಾವನೋ|| ೫೯

ಮ|| ನೆಲನಂ ಕೊಟ್ಟನಿನಾತ್ಮಜಾತನೆನಗಾಂ ತಕ್ಕೂರ್ಮೆಯಿಂದಂ ಜಳಾಂ
ಜಲಿಯಂ ಕೊಟ್ಟೆನುಮಿಲ್ಲ ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷ|
ದ್ಬಲಮಂ ಸುಟ್ಟನುದಾತ್ತಪುಣ್ಯನವನಂ ಚೈತಾಗ್ನಿಯಿಂ ಸುಟ್ಟೆನಿ
ಲ್ಲೊಲವಿಂದಿಂತೆರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ|| ೬೦

ವ|| ಎಂದು ನೊಂದು ನುಡಿದ ದುರ್ಯೋಧನನಂ ಸಂಜಯನಿಂತೆಂದಂ-

ಶಾ|| ಕೊಟ್ಟೈಕಿರ್ಚನುದಗ್ರಶೋಕಶಿಖಿಯಿಂ ಕಣ್ಣೀರ್ಗಳಿಂದೆಯ್ದೆ ನೀ
ರ್ಗೊಟ್ಟೈ ಸೂರ್ಯಸುತಂಗೆ ಲೌಕಿಕಮನೇನಿಂ ದಾಂಟಿದೈ ಪೋೞ್ದು ಸೀ|
ಳ್ದೊಟ್ಟಿಂ ವೈರಿಯನೊಡ್ಡಿ ತತ್ಪಿಶಿತದಿಂದಾತಂಗೆ ನೀಂ ಕೂರ್ಪೋಡೇ
ಗೆಟ್ಟತ್ತಿನ್ನಡೆ ಮಾಡು ತದ್ದಿ ಜಗಣಕ್ಕಾಹಾರಮಂ ಭೂಪತೀ|| ೬೧

೫೮. ಕೊಂದವನ ಹೊಟ್ಟೆಯಿಂದ ನಿನ್ನನ್ನು ತೆಗೆಯದೆಯೂ ಅವನ ಕರುಳನ್ನು ಹದ್ದಿಗೆ ಮೊದಲು ನುಂಗಿಸಿ ನೋಡದೆಯೂ ಅದಕ್ಕೆ ಮುಂಚೆಯೇ ಯುವರಾಜನಾದ ದುಶ್ಯಾಸನನೇ ನಿನ್ನನ್ನು ನಾನು ನೋಡಿದೆನೇ? ವ|| ಸಂಜಯನು ಇಂತಹ ವಿಶೇಷವಾದ ಅಳುವಿಕೆಯು ಶೌರ್ಯಶಾಲಿಗಳಿಗೆ ಯೋಗ್ಯವಲ್ಲ. ಆ ಕಡೆ ಬರಬೇಕು ಎಂದು ಹೇಳಲು ಅಲ್ಲಿಂದ ಹೊರಟುಬಂದು ಅಮೋಘಾಸ್ತ್ರಧನಂಜಯ ನಾದ ಅರ್ಜುನನ ಕಯ್ಯಿಂದ ಬಿಡಲ್ಪಟ್ಟ ಬಾಣದಿಂದ ಸೀಳಲ್ಪಟ್ಟಿದ ಕರ್ಣನ ಮಗನಾದ ವೃಷಸೇನನನ್ನು ನೋಡಿ ಕರ್ಣನನ್ನು ಜ್ಞಾಪಿಸಿಕೊಂಡು ಎದೆಬಿರಿದು ‘ದುರ್ಯೋಧನನ ಸ್ನೇಹಿತನಾದ ನಿಮ್ಮ ತಂದೆ ಕರ್ಣನೆಲ್ಲಿದ್ದಾನೆ ಎಂದು ಥಟ್ಟಕ್ಕನೆ ತುಂಬಿದ ಕಣ್ಣೀರಿನಿಂದ ದಿಕ್ಕು ಕಾಣದೆ ನಿಂತಿದ್ದ ದುರ್ಯೋಧನನನ್ನು ಕುರಿತು ಸಂಜಯನು ಹೀಗೆಂದನು- ಅರ್ಜುನನ ಬಾಣದ ಪೆಟ್ಟಿನಿಂದ ಹರಿದು ಹಂಚಿದ ಹಾಗಿರುವ ಶರೀರ, ಅತ್ಯಂತ ಭಯಂಕರವಾಗರಲು ಹೆಗಲ ತುದಿಯವರೆಗೂ ಸೆಳೆದ ಬಾಣ ಹಿಡಿದ ಮುಷ್ಟಿ, ಕೌಶಲದಿಂದ ಕೂಡಿರಲು ಕತ್ತರಿಸಿಹೋದ ಹಸಿಯ ತಲೆಯಲ್ಲಿ ಕಾಣಿಸುತ್ತಿರುವ ಮುಗುಳ್ನಗೆ, ಇವುಗಳಿಂದ ಕೂಡಿ ಹೆದರಿ ಕೊಂಡಿರುವವರನ್ನೆಲ್ಲ ಅತಿಶಯವಾದ ರೀತಿಯಲ್ಲಿ ನಗುತ್ತಿರುವ ಹಾಗೆ ಸೂರ್ಯಪುತ್ರನಾದ ಕರ್ಣನು ಈ ಕಡೆ ಇದ್ದಾನೆ. ವ|| ಎನ್ನಲು ಆಗಲೆ ಚೇತರಿಸಿಕೊಂಡು ಎಲ್ಲಿದ್ದಾನೆ ಯಾವ ಕಡೆ ಎಂದು ಕರ್ಣನ ಶರೀರವನ್ನು ನೋಡಿ ನೋಡಲಾರದೆ ಕಣ್ಣುಗಳನ್ನು ಮುಚ್ಚಿಕೊಂಡು ಮೂರ್ಛಿತನಾದವನನ್ನು ಸಂಜಯನು ತಬ್ಬಿಕೊಳ್ಳಲು ಚೇತರಿಸಿಕೊಂಡು ಪ್ರೀತಿಯು (ಸ್ನೇಹವು) ಕೈಮೀರಿ ಬರುತ್ತಿರಲು ಅದನ್ನು ಸೈರಿಸಲಾರದವನಾದನು. ೫೯. ಕಾರ್ಯಮಾಡುವ ಸಂದರ್ಭದಲ್ಲಿ ಸೇವಕನಂತೆಯೂ ವ್ಯಸನಗಳು ಮೇಲೆ ಮೇಲೆ ಒತ್ತಿ ಬರುತ್ತಿರಲು ಇದಾಗುವುದಿಲ್ಲ ಎಂದು ಬೆದರಿಸುವ ಸಮಯದಲ್ಲಿ ಯಜಮಾನನಂತೆಯೂ (ಸ್ವಾಮಿ-ಒಡೆಯ) ಹೀಗೆ ಮಾಡು ಎನ್ನುವ ಸಮಯದಲ್ಲಿ ಗುರುವಿನಂತೆಯೂ; ಅಕವಾದ ವ್ಯಥೆಯುಂಟಾದಾಗ ಅವಲಂಬನದಂತೆಯೂ ಮನಸ್ಸನ್ನೊಪ್ಪಿಸುವ ಸಂದರ್ಭದಲ್ಲಿ ಮನಸ್ಸೇ ಆಗಿಯೂ ಇದ್ದಂಥ ಕರ್ಣನನ್ನು ಬಿಟ್ಟು ನನಗೆ ಎಲ್ಲ ಸಮಯಕ್ಕೂ ಸಹಾಯಕನಾಗುವ ಮತ್ತೊಬ್ಬನಾವನಿದ್ದಾನೆ? ೬೦. ಕರ್ಣನು ನನಗೆ (ಭೂಮಿಯನ್ನು) ರಾಜ್ಯವನ್ನೇ ಸಂಪಾದಿಸಿ ಕೊಟ್ಟನು. ನಾನು ಅದಕ್ಕನುಗುಣವಾಗಿ ಪ್ರೀತಿಯಿಂದ ಅವನಿಗೆ ತರ್ಪಣವನ್ನು ಕೊಟ್ಟಿಲ್ಲ. ಸೂರ್ಯನ ಮಗನಾದ ಕರ್ಣನು ತನ್ನ ತೇಜಸ್ಸೆಂಬ ಅಗ್ನಿಯಿಂದ ವೈರಿಸೈನ್ಯವನ್ನು ಸುಟ್ಟನು. ಬಹಳ ಪುಣ್ಯಶಾಲಿಯಾದ ಅವನನ್ನು ಚಿತೆಯ ಬೆಂಕಿಯಿಂದ ಸುಟ್ಟಿಲ್ಲ; ಹೀಗೆ ಕರ್ಣನಲ್ಲಿ ಎದೆಸೋಂಕಿ ಪ್ರೀತಿಯಿಂದ ಇರುವವನು ದುರ್ಯೋಧನನ ಹಾಗೆ ಬೇರೆಯಾದವನು ಉಂಟೆ? ವ|| ಎಂದು ದುಖಿಸಿ ಆಡಿದ ದುರ್ಯೋಧನನಿಗೆ ಸಂಜಯನು ಹೀಗೆ ಹೇಳಿದನು – ೬೧. ತೀವ್ರವಾದ ಶೋಕಾಗ್ನಿಯಿಂದ

ವ|| ಎಂದು ಪೆರ್ಚಿದ ಶೋಕರಸಮಂ ಕೋಪರಸದ ಮೇಲಿಕ್ಕಿ ಭೀಷ್ಮಂ ಶರಶಯನ ತಳವಿಗತನಾಗಿರ್ದಲ್ಲಿವರಮೆಂತಾನುಮೊಡಗೊಂಡು ಬಂದಾಗಳ್-

ಚಂ|| ಇಡಿದಿರೆ ರೋಮ ಕೂಪದೊಳಗುರ್ಚಿದ ಸಾಲ ಸರಲ್ಗಳುಂ ತೆಱಂ
ಬಿಡಿದರೆ ಬೆಟ್ಟುವೋರ್ಗುಡಿಸಿದಂತೆ ನೆಱಲ್ದಿರೆ ಸುಯ್ಯ ಪುಣ್ಗಳಿಂ|
ಬಡನಡುವಂ ಶರಾಳಿಭಯದಿಂ ನಡುಪಂತಿರೆ ಚಿತ್ತದೊಳ್ ಮೃಡಂ
ತೊಡರ್ದಿರೆ ಬಿೞ್ದದೇನೆಸೆದನೋ ಶರಶಯ್ಯೊಯೊಳಂದು ಸಿಂಧುಜಂ|| ೬೨

ಹರನೊಳೆ ಪತ್ತಿ ತೆತ್ತಿಸಿದ ಚಿತ್ತಮನಿರ್ಬಗಿಯಾಗೆ ಮೋಹಮೊ
ತ್ತರಿಸೆ ಸುಯೋಧನಂಗೆ ರಣಭೂಮಿಯೊಳೆಂತುಟವಸ್ಥೆಯೋ ಕನ|
ಲ್ದುರಿದಪುದೆನ್ನ ಮೆಯ್ಯೆನುತುಮತ್ತಣ ಪಂಬಲ ಬಂಬಲೊಳ್ ತೆಱಂ
ದಿರಿದುದು ಚಿತ್ತಮಾ ದೊರೆಯ ಯೋಗಿಗಮಿಂತುಂಟೆ ಮೋಹಮಾಗದೇ|| ೬೩

ವ|| ಎಂಬನ್ನೆಗಮವರಿರ್ವರ ಕಾಲ ಸೊಪ್ಪುಳನಾಲಿಸಿ ಸುರನದೀನಂದನಂ ಪೇೞವಿ ಬಂದರಾರೆಂದನೇಕ ವ್ರಣವೇದನಾಪರವಶಶರೀರಂ ಬೆಸಗೊಳ್ವುದುಂ ಸಂಜಯಂ ಕುರುಪಿತಾ ಮಹನ ಕರ್ಣೋಪಾಂತಮಂ ಸಾರ್ದು ಕುರುಕುಳಗಗನಮೃಗಧರಂ ಬಂದನೆಂದು ಬಿನ್ನಪಂಗೆಯ್ವುದುಂ ಯೋಗಾಭ್ಯಾಸದೊಳರೆಮುಗುಳ್ದ ರಕ್ತಾಂಭೋಜದಳ ವಿಳಾಸೋಪಹಾಸಿಗಳಪ್ಪ ಕಣ್ಗಳನೊತ್ತಂಬದಿಂ ತೆದು-

ಚಂ|| ಎಱಗಿದ ಕೌರವೇಶ್ವರನೊಳಾದಮಿದಿರ್ಚಿದಲಂಪೆಲರ್ಚಿದ
ೞ್ಕಱನೊಳಕೊಳ್ವಿನಂ ಪರಸಿ ಮೆಯ್ಯೊಳೆ ಬಂದ ತೆಱಕ್ಕೆ ಮೆಯ್ ಕರಂ|
ಮಱುಗಿಪುದಿಂತು ಪೇೞು ಮಗನೆ ಬೆಳ್ಗೊಡೆಯೆಲ್ಲಿದುದೆತ್ತ ಪೋಯ್ತು ಸು
ತ್ತಿಱದ ಚತುರ್ಬಲಂ ನಿನಗವಿಯಿರವಾದುದೆ ವೈರಿಭೂಪರಿಂ|| ೬೪

ವ|| ಎಂದು ಕಣ್ಣ ನೀರಂ ನೆಗಪಿ ನಿನ್ನ ಬಂದ ಬರವೇ ಸಮರವೃತ್ತಾಂತಮನೞಪಿ ದಪ್ಪುದಿಂ ನಿನ್ನ ಗೆಯ್ವ ನಿಯೋಗಮಾವುದೇಗೆಯ್ಯಲ್ ಬಗೆದಪೆಯೆನೆ-

ಚಿತಾಗ್ನಿಯನ್ನು ಕೊಟ್ಟಿದ್ದೀಯೆ. ಕಣ್ಣೀರುಗಳಿಂದ ಸಂಪೂರ್ಣವಾಗ ತರ್ಪಣವನ್ನು ಕೊಟ್ಟಿದ್ದೀಯೆ. ಲೋಕವ್ಯವಹಾರದಲ್ಲಿ ಏನನ್ನು ದಾಟಿದ್ದೀಯೆ? ಶತ್ರುವನ್ನು ಹೋಳುಮಾಡಿ ಸೀಳಿ ರಾಶಿಹಾಕಿ ಆ ಮಾಂಸದಿಂದ- ಕರ್ಣನನ್ನು ನೀನು ಪ್ರೀತಿಸುವುದಾದರೆ ಆ ಪಕ್ಷಿಸಮೂಹಕ್ಕೆ (ಹದ್ದುಗಳಿಗೆ) ಆಹಾರವನ್ನು ಮಾಡು. ನಷ್ಟವಾದುದೇನು? ಇನ್ನು ಮುಂದೆ ನಡೆ. ವ|| ಎಂದು ಹೇಳಿ ಹೆಚ್ಚಾದ ಶೇಕರಸವನ್ನೂ ಮೀರಿ ಕೋಪರಸವು ಹೆಚ್ಚುತ್ತಿರಲು ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿದ್ದ ಸ್ಥಳದವರೆಗೆ ಹೇಗೋ ಜೊತೆಯಲ್ಲಿ ಕರೆದುಕೊಂಡು ಹೋದನು.

೬೨. ಕೂದಲಿನ ಒಂದೊಂದು ಹಳ್ಳ (ಕುಳಿ)ಗಳಲ್ಲಿಯೂ ಸಾಲವೃಕ್ಷದಿಂದ ಮಾಡಿದ ಬಾಣಗಳು ನಾಟಿಕೊಂಡು ದಟ್ಟವಾಗಿ ತುಂಬಿರಲು ನಾನಾರೀತಿಯಾಗಿ ಪರ್ವತಗಳುರುಳಿದಂತೆ ಬಿದ್ದು ನಿಶ್ಚೇಷ್ಟನಾಗಿ ಸ್ಪಂದನವಾಗುತ್ತಿರುವ (ದುಡಿಯುತ್ತಿರುವ) ಹುಣ್ಣುಗಳಿಂದಲೂ ಬಾಣಗಳ ನೋವಿನಿಂದಲೂ ಬಡವಾಗಿರುವ ಸೊಂಟವನ್ನು ನಡುಗಿಸುತ್ತ ಮನಸ್ಸಿನಲ್ಲಿ ಶಿವನನ್ನು ಧ್ಯಾನಿಸುತ್ತ ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿ ಅತ್ಯಂತ ಶೋಭಾಯಮಾನನಾಗಿದ್ದನು. ೬೩. ಈಶ್ವರನಲ್ಲಿ ಸೇರಿಕೊಂಡಂತಿದ್ದ ಮನಸ್ಸನ್ನು ಮೋಹವು ಎರಡು ಭಾಗವಾಗಿ ಮಾಡಲು ದುರ್ಯೋಧನನಿಗೆ ಯುದ್ಧ ರಂಗದಲ್ಲಿ ಇಂತಹ ಅವಸ್ಥೆಯಾಯಿತೇ! ನನ್ನ ಶರೀರವು ಕೆಂಡದಂತೆ ಹೊಳೆದು ಉರಿಯುತ್ತಿದೆಯಲ್ಲಾ ಎಂದು ಹೇಳುತ್ತ ಆ ಕಡೆಯ ಹಂಬಲದ ಆಕ್ಯದಿಂದ ಮನಸ್ಸು ನಾನಾ ರೀತಿಯಾಗಿ ಅಲೆದಾಡಿತು. ಅಂತಹ ಯೋಗ್ಯತೆಯನ್ನುಳ್ಳ ಯೋಗಿಗೂ ಹೀಗೆಯೇ ಮಮತೆ ಉಂಟಾಗುವುದಿಲ್ಲವೇ? ವ|| ಎನ್ನುವಷ್ಟರಲ್ಲಿ ಇಬ್ಬರ ಹೆಜ್ಜೆಯ ಶಬ್ದವನ್ನು ಕೇಳಿ ಅನೇಕ ಗಾಯಗಳ ನೋವಿನಿಂದ ಪರವಶವಾಗಿದ್ದ ಶರೀರವನ್ನುಳ್ಳ ಭೀಷ್ಮನು ‘ಈಗ ಬಂದವರು ಯಾರು ಹೇಳಿ’ ಎಂದು ಕೇಳಿದನು. ಸಂಜಯನು ಕುರುಪಿತಾಮಹನಾದ ಭೀಷ್ಮನ ಕಿವಿಯ ಹತ್ತಿರಕ್ಕೆ ಹೋಗಿ ‘ಕುರುವಂಶವೆಂಬ ಆಕಾಶದ ಚಂದ್ರನಾದ ದುರ್ಯೋಧನನು ಬಂದಿದ್ದಾನೆ’ ಎಂದು ವಿಜ್ಞಾಪನೆ ಮಾಡಿದನು. ಭೀಷ್ಮನು ಯೋಗಾಭ್ಯಾಸದಲ್ಲಿ ಅರ್ಧಮುಚ್ಚಿಕೊಂಡಿದ್ದ ಕನ್ನೆ ದಿಲೆಯ ದಳದ ಕಾಂತಿಯನ್ನು ಹಾಸ್ಯಮಾಡುವ ಹಾಗಿದ್ದ ತನ್ನ ಕಣ್ಣುಗಳನ್ನು ಬಲಾತ್ಕಾರದಿಂದ ತೆಗೆದು- ೬೪. ತನಗೆ ನಮಸ್ಕಾರ ಮಾಡಿದ ಕೌರಮೇಶ್ವರನನ್ನು ಎದುರಿನಲ್ಲಿ ಕಂಡ ಸಂತೋಷವು ಪ್ರೀತಿಯನ್ನು ಅದಿಕಗೊಳಿಸಲು ಆಶೀರ್ವಾದಮಾಡಿ ನೀನು ಏಕಾಕಿಯಾಗಿ ಬಂದ ಸ್ಥಿತಿಯನ್ನು ನೋಡಿ ನನ್ನ ಮನಸ್ಸು ವಿಶೇಷದುಖಪಡುತ್ತಿದೆ. ಮಗು, ಶ್ವೇತಚ್ಛತ್ರಿ ಎಲ್ಲಿ? ಸುತ್ತಲೂ ಬಳಸಿ ಬರುತ್ತಿದ್ದ ಚತುರಂಗಸೈನ್ಯವೆಲ್ಲಿ? ಯಾವ ಕಡೆಗೆ ಹೋಯಿತು. ಶತ್ರುರಾಜರಿಂದ ನಿನಗೂ ಈ ಸ್ಥಿತಿಯುಂಟಾಯಿತೆ? ವ|| ಎಂದು ಕಣ್ಣೀರನ್ನು ತುಂಬಿಕೊಂಡು ನೀನು ಬಂದಿರುವ ಬರುವಿಕೆಯೇ ಯುದ್ಧ ಸಮಾಚಾರವನ್ನು ತಿಳಿಸುತ್ತದೆ.

ಚಂ|| ಬಗೆ ಪೆಱತುಂಟೆ ವೈರಿನೃಪರಂ ತಱದೊಟ್ಟುವುದಲ್ಲದೆಂತುಮಿ||
ಲ್ಲಿಗೆ ಬರವಂ ಭವತ್ಪದಸರೋಜವನಾಂ ಬಲಗೊಂಡು ಮತ್ತಮಾ||
ಜಿಗೆ ನಡೆಯಲ್ಕೆ ಬಂದೆನೆನೆ ದೇವನದೀಸುತನಾತ್ಮಚಿತ್ತದೊಳ್|
ಬಗೆದನಿದೇನಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ|| ೬೫

ವ|| ಎಂದಾದಿ ಮಧ್ಯಾವಸಾನದೊಳೆಲ್ಲಿಯುಮೆೞಲದ ಕಲಿತನದಳವಿಂಗೆ ಮನಂಗೊಂಡು ಮಗನೆ ನಿನಗಪ್ಪೊಡೆ ದೆಯ್ವಂ ಪ್ರತಿಕೂಲಮೆಂತುಂ ಕಾದಿ ಗೆಲಲಾರ್ಪೆಯಲ್ಲೆ ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ ನಿನ್ನೊಂದೆ ಮೆಯ್ಯೊಳಾದ ಕೂರ್ಪು ಪಗೆವರ ದರ್ಪಮನದಿರ್ಪದಲ್ತೆ ನಿನಗಂ ಮೈತ್ರೇಯರ್ ಕೊಟ್ಟೂರುಭಂಗಶಾಪಮನಿವಾರಿತಮೆನ್ನೀ ಪ್ರಾಣಮುಳ್ಳಂತೆ ಸಂಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮುಮನಱದು ಬೞಯಂ ನಿನ್ನ ನೆಗೞ್ವುದಂ ನೆಗೞ್ವುದೆಂದು-

ಚಂ|| ಪರಿಕಿಪುದೊಂದಱಂದೆರಡನೋತೊಳಕೊಳ್ವುದು ಮೂಱಱಂದೆ ನಾ
ಲ್ಕರಿದಱದಯ್ದಱಂದೆ ನೆಕಲ್ವುದು ನಿರ್ಣಯಮಾಗಿರಾಱಳ್|
ಪರಿಣತನಪ್ಪುದೇೞಳಮೊಂದದೆ ನಿಲ್ವುದು ದುರ್ವಿಮಂತ್ರಮಂ
ಪರೆಪ ಟಮಾಳಮಂ ಪಿರಿದನೋದಿದೊಡಪ್ಪ ಪದಾರ್ಥಮಾವುದೋ|| ೬೬

ಕಂ|| ಪೆರ್ಚುಗೆ ಭರತಕುಲಂ ನೆಲೆ
ವೆರ್ಚುಗೆ ನಿಮ್ಮೆರಡು ತಂಡಮೊದವಿದ ನಣ್ಪಿಂ|
ಕರ್ಚುಗೆ ಕಲುಷಂ ನೀಂ ತಲೆ
ಯುರ್ಚದಿರೆನ್ನೆಂದ ನುಡಿಗೆ ಕುರುಕುಳತಿಳಕಾ|| ೬೭

ಉ|| ದೋಷಮುಮೇವಮುಂ ಶಕುನಿಯಿಂ ಯುವರಾಜನಿನಾಯ್ತು ಪೋಯ್ತು ನಿ
ರ್ದೋಷಿಗಳಪ್ಪ ನಿಮ್ಮೆರಡು ತಂಡಮುಮಿಂ ಪುದುವಾಳ್ವುದಂತದೇಂ|
ದೋಷಮೊ ಮೇಣ್ ವೃಕೋದರನಿನಾ ರಣರಂಗದೊಳಾದ ದುಷ್ಟ ದು
ಶ್ಯಾಸನರಕ್ತಮೋಕ್ಷದೊಳೆ ದೋಷವಿಮೋಕ್ಷಮದೇಕೆ ಕೊಂಡಪೈ|| ೬೮

ವ|| ಎಂದು ನುಡಿದ ಪಿತಾಮಹನ ನುಡಿಗಳ್ಗೆ ಕುರುರಾಜನಿಂತೆಂದಂ-

ಇನ್ನು ಮುಂದೇನು ಮಾಡುತ್ತೀಯೆ? ಹೇಗೆ ಯೋಚಿಸಿದ್ದೀಯೆ ಎಂದು ಕೇಳಿದರು. ೬೫. ದುರ್ಯೋಧನನು ಮತ್ತೇನಜ್ಜ; ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆಯುಂಟೇ? ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನ ಯುದ್ಧಕ್ಕೆ ಹೋಗೋಣವೆಂದು ಬಂದೆ ಎಂದನು. ಭೀಷ್ಮನು ಚಕ್ರವರ್ತಿಯಾದ ದುಯೋಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು. ವ|| ಮೊದಲಿಂದ ಕೊನೆಯವರೆಗೆ ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ ಸಂತೋಷಪಟ್ಟು (ದುರ್ಯೋಧನನನ್ನು ಕುರಿತು) ‘ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ; ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ ಶತ್ರುಗಳ ದರ್ಪವನ್ನು ನಡುಗಿಸಲಾರದು. ನಿನಗೂ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು. ನನ್ನ ಪ್ರಾಣವು ಇರುವಾಗಲೇ ಸಂಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ ಮುಂದೆ ಕಾಲವನ್ನೂ ಕಾರ್ಯವನ್ನೂ ತಿಳಿದು ಬಳಿಕ ನೀನು ಮಾಡುವುದನ್ನು ಮಾಡು ಎಂದರು. ೬೬. ಒಂದಾದ ಬುದ್ಧಿಯಿಂದ ಎರಡಾದ ಕಾರ್ಯಾಕಾರ್ಯಗಳನ್ನು ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು. ಶತ್ರುಮಿತ್ರಬಾಂಧವ (ಉದಾಸೀನ)ರೆಂಬ ಮೂವರನ್ನು ಒಲಿಸಿ ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು. ರಾಜಯೋಗ್ಯವಾದ ಸಂ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೆ ಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು. ದ್ಯೂತಸ್ತ್ರೀಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು. ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು? ೬೭. ಭರತಕುಲ (ವಂಶ) ಅಭಿವೃದ್ಧಿಯಾಗಲಿ; ನಿಮ್ಮ ಎರಡು ಗುಂಪಿನ ಸ್ನೇಹವು ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ, ನಿಮ್ಮ ದ್ವೇಷವು ತೊಳೆದುಹೋಗಲಿ; ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ತಲೆಯಾಡಿಸಬೇಡ. ೬೮. ನಿಮ್ಮ ತಪ್ಪೂ ಕೋಪವೂ

ಮ|| ಶರಶಯ್ಯಾಗ್ರದೊಳಿಂತು ನೀಮಿರೆ ಘಟಪ್ರೋದ್ಭೂತನಂತಾಗೆ ವಾ
ಸರನಾಥಾತ್ಮಜನಂತು ಸಾಯೆ ರಣದೊಳ್ ದುಶ್ಯಾಸನಂ ತದ್ವ ಕೋ|
ದರನಿಂದಂತೞದೞ್ಗೆ ಸೈರಿಸಿಯುಮಾಂ ಸಂಧಾನಮಂ ವೈರಿ ಭೂಪ
ರೊಳಿಂ ಸಂಸಿ ಪೇೞಮಾರ್ಗೆ ಮೆವೆಂ ಸಂಪತ್ತುಮಂ ಶ್ರೀಯುಮಂ|| ೬೯

ಕಂ|| ಬಿಡಿಮೆನ್ನ ನುಡಿಗೆ ಬೀೞ್ಕೊಳೆ
ನುಡಿಯದಿರಿಂ ಪೆಱತನಜ್ಜ ಮುಂ ನುಡಿದೆರಡಂ|
ನುಡಿವೆನೆ ಚಲಮಂ ಬಲ್ವಿಡಿ
ವಿಡಿದೆಂ ತನ್ನಪ್ಪುದಕ್ಕೆ ಸಂಗರ ಧರೆಯೊಳ್|| ೭೦

ವ|| ಎಂಬುದುಂ ನೀನುಮೆಂತುಂ ಕಾದಿಯಲ್ಲದಿರೆಯಪ್ಪೊಡಿಂದಿನೊಂದಿವಸಮನೆನ್ನ ಪೇೞ್ವ ಜಳಮಂತ್ರೋಪದೇಶಮಂ ಕೆಯ್ಕೊಂಡು ಕುರುಕ್ಷೇತ್ರದುತ್ತರದಿಗ್ಧಾಗದ ವೈಶಂಪಾಯನ ಸರೋವರದೊಳ್ ಮುೞುಗಿ ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತಿರ್ದು ನಿನ್ನವಸರಕ್ಕೆ ಬಂದು ಕೂಡುವ ಬಲದೇವನುಮಂ ನಿನ್ನಿರ್ದೆಡೆಯನಱಯದಱಸುವಶ್ವತ್ಥಾಮ ಕೃಪ ಕೃತವರ್ಮರುಮಂ ಕೂಡಿಕೊಂಡು ಪಗೆವರಂ ನಾಳೆ ಕಾದಿ ಗೆಲ್ವುದೆಂದು ಹಿತೋಪದೇಶಂಬೆರಸು ಜಳಮಂತ್ರೋಪದೇಶಮಂ ಕಿವಿಯೊಳ್ ಪರ್ಚಿ ಪೇೞ್ದು ಕುರುಪಿತಾಮಹಂ ಸಂಜಯನಂ ಧೃತರಾಷ್ಟ್ರನಲ್ಲಿಗೆ ಸಂಧಾನವಾರ್ತೆಯಂ ಸಮಕೊಳಿಸುವಂತಾನಾಗತಬಾಧಾಪ್ರತಿಷೇಧಂ ಮಾಡುವಂತಟ್ಟಿ ಸಕಳ ಕುರುಕುಳಾವಲಂಬನಕಲ್ಪವೃಕ್ಷಮಂ ಪರಸಿ ಪೋಗಲ್ವೇೞೆ ದೇವನದೀಪ್ರಿಯಪುತ್ರನಂ ಧೃತರಾಷ್ಟ್ರಪುತ್ರಂ ಬೀೞ್ಕೊಂಡು ಕನಕಪತ್ರಲತಾಲಾಂಛಿತಗದಾದಂಡಮಂ ಕೊಂಡೊರ್ವನೆ ವೈಶಂಪಾಯನಸರೋವರದ ಬಟ್ಟೆಯಂ ನಡೆಗೊಂಡು-

ಶಾ|| ಕ್ರಂದತ್ಸ್ಯಂದನಜಾತನಿರ್ಗತಶಿಖಿಜ್ವಾಳಾಸಹಸ್ರಂಗಳಾ
ಟಂದೆತ್ತಂ ಕವಿದೞ್ವೆ ಬೇವ ಶವಸಂಘಾತಂಗಳಂ ಚಕ್ಕಮೊ|
ಕ್ಕೆಂದಾಗಳ್ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ
ಬಂದಂ ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ|| ೭೧

ವ|| ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ ಕೋಳ್ದಾಂಟಿನೊಳ್ ಕೊಳುಗುಳವಂ ಕೞದುಪೋಗಿ

ಶಕುನಿಯಿಂದಲೂ ದುಶ್ಯಾಸನನಿಂದಲೂ ಪ್ರಾರಂಭವಾಯಿತು, ಹೋಯಿತು; ನಿರ್ದೊಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ; ಹಾಗೆ ಮಾಡುವುದು ದೋಷವೇನಲ್ಲ. ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನ ಏಕೆ ಅಂಗೀಕರಿಸುತ್ತೀಯೆ? ವ|| ಎಂದು ಹೇಳಿದ ಭೀಷ್ಮನ ಮಾತುಗಳಿಗೆ ದುಯೋಧನನು ಹೀಗೆಂದನು- ೬೯. ಬಾಣದ ಹಾಸಿಗೆಯ ತುದಿಯಲ್ಲಿ ನೀವು ಹೀಗಿರುವಾಗ ದ್ರೋಣಾಚಾರ್ಯರು ಹಾಗಿರುವಾಗ, ಕರ್ಣನು ಸತ್ತು ಯುದ್ಧದಲ್ಲಿ ದುಶ್ಯಾಸನನು ಭೀಮನಿಂದ ಹಾಗೆ ಸತ್ತು ನಾಶವಾಗಿರುವಾಗ (ಇವೆಲ್ಲವನ್ನೂ) ನಾನು ಸಹಿಸಿಕೊಂಡು ಶತ್ರುರಾಜರಲ್ಲಿ ಸಂಯನ್ನುಂಟುಮಾಡಿಕೊಂಡು ಯಾರಿಗೆ ನನ್ನ ಐಶ್ವರ್ಯವನ್ನೂ ವೈಭವವನ್ನೂ ಪ್ರದರ್ಶಿಸಬೇಕು. ೭೦. ನನ್ನ ಮಾತಿಗೆ (ಸಿದ್ಧಾಂತಕ್ಕೆ) ನನ್ನನ್ನು ಬಿಡಿ. ಅಜ್ಜ, ತಮ್ಮ ಅಪ್ಪಣೆಯನ್ನು ಪಡೆದು ಹೋಗುವುದಕ್ಕಾಗಿ ಬಂದ ನನಗೆ ಬೇರೆ ಯಾವುದನ್ನೂ ಹೇಳಬೇಡಿ. ಮೋದಲು ಒಂದು ರೀತಿ ಪುನ ಬೇರೆ ರೀತಿಯಲ್ಲಿ ಹೇಳುತ್ತೇನೆಯೇ? ಛಲವನ್ನು ಬಿಗಿಯಾಗಿ ಹಿಡಿದಿದ್ದೇನೆ. ಯುದ್ಧದಲ್ಲಿ ತಾನಾದುದಾಗಲಿ’ ಎಂದನು. ವ|| “ನೀನು ಹೇಗೂ ಯುದ್ಧಮಾಡದೇ ಇರುವುದಿಲ್ಲವಾದರೆ ಈ ಒಂದು ದಿವಸವನ್ನು ನಾನು ಹೇಳುವ ಜಲಮಂತ್ರೋಪದೇಶವನ್ನು ಅಂಗೀಕರಿಸಿ ಕುರುಕ್ಷೇತ್ರದ ಉತ್ತರ ದಿಗ್ಭಾಗದಲ್ಲಿರುವ ವೈಶಂಪಾಯನಸರೋವರದಲ್ಲಿ ಮುಳುಗಿದ್ದು ಕಾಲಾಗ್ನಿರುದ್ರನು ಪಾತಾಳಲೋಕದಲ್ಲಡಗಿರುವ ಹಾಗೆ ಇರು. ನಿನ್ನ ಸಹಾಯಕ್ಕೆ ಬಂದು ಸೇರುವ ಬಲರಾಮನನ್ನೂ ನೀನು ಇರುವ ಸ್ಥಳವನ್ನು ತಿಳಿಯದೇ ಹುಡುಕುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕೂಡಿಕೊಂಡು ಶತ್ರುಗಳನ್ನು ನಾಳೆ ಜಯಿಸು” ಎಂದು ಭೀಷ್ಮನು ಹಿತೋಪದೇಶದಿಂದ ಕೂಡಿದ ಜಳಮಂತ್ರೋದೇಶವನ್ನು ದುಯೋಧನನ ಕಿವಿಯಲ್ಲಿ ರಹಸ್ಯವಾಗಿ ಉಪದೇಶಿಸಿದನು. ಸಂಜಯನನ್ನು ಧೃತರಾಷ್ಟ್ರನ ಬಳಿಗೆ ಸಂಧಾನದ ಮಾತನ್ನು ಸಿದ್ಧಗೊಳಿಸುವುದಕ್ಕಾಗಿ ಕಳುಹಿಸಿದನು. ಮುಂದೆ ಬರುವ ತೊಂದರೆಗೆ ಪ್ರತೀಕಾರವನ್ನು ಮಾಡುವಂತೆ ಹೇಳಿ ಸಕಲ ಕುರುವಂಶದ ಆಶ್ರಯಕ್ಕೆ ಕಲ್ಪವೃಕ್ಷದ ಹಾಗಿರುವ ದುರ್ಯೋರ್ಧನನ್ನು ಆಶೀರ್ವದಿಸಿ ಬೀಳ್ಕೊಟ್ಟನು. ದುರ್ಯೋಧನನು ಭೀಷ್ಮನ ಅಪ್ಪಣೆಯನ್ನು ಪಡೆದು ಹೊರಟು ಕನಕಪತ್ರಲತೆಯಿಂದ ಗುರುತುಮಾಡಲ್ಪಟ್ಟ ಗದಾದಂಡವನ್ನು ತೆಗೆದುಕೊಂಡು ಏಕಾಕಿಯಾಗಿ ವೈಶಂಪಾಯನಸರೋವರದ ಮಾರ್ಗವನ್ನು ನಡೆದುಹೋದನು. ೭೧. ಶಬ್ದಮಾಡುತ್ತಿರುವ ರಥದಿಂದ ಹುಟ್ಟಿ ಹೊರಹೊರಟ ಸಾವಿರಾರು ಅಗ್ನಿಜ್ವಾಲೆಗಳು ಮೇಲೆ ಹಾಯ್ದು ಎಲ್ಲಕಡೆಯೂ ಸುಡುತ್ತಿರಲು ಬೇಯುತ್ತಿರುವ ಹೆಣಗಳ ರಾಶಿಗಳನ್ನು ಆಗ ಭಯಂಕರವಾದ ಪಿಶಾಚಿಗಳ ಸಮೂಹಗಳು ಚಕ್ಕುಮೊಕ್ಕೆಂದು

ವಿಳಯಕಾಳ ವಿಘಟ್ಟಿತಾಷ್ಟದಿಗ್ಭಾಗಸಂಬಂಧನಗಗನತಳಮೆ ಧರಾತಳಕ್ಕೆ ಪಱದು ಬಿೞ್ದಂತಾನುಮಾದಿವರಾಹಂ ಸಮುದ್ರಮುದ್ರಿತಧರಾಮಂಡಳಮಂ ರಸಾತಳದಿಂದೆತ್ತಿ ಬಂದಂದು ನಭೋಮಂಡಳಸ್ಥಾನಮೆ ಸಲಿಲಪರಿಪೂರಿತಮಾದಂತಾನುಮಾಗಿ-

ಮ|| ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರಲಯಕಾಳಾಂಭೋಧರಚ್ಛಾಯೆ ತಾ|
ನೆ ದಲೆಂಬಂತಿರೆ ಕಾಚ ಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ| ೭೨

ಚಂ|| ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದೞ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ|
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದಕಳಹಂಸಕೋಕನಿಕರದ್ವನಿರುಂದ್ರಫಣೀಂದ್ರಕೇತುವಂ|| ೭೩

ವ|| ಅಂತೆಸೆವ ಪುಂಡರೀಕಷಂಡೋಪಾಂತಮನೆಯ್ದೆವಂದನೇಕವ್ರಣಗಳಿತನವರುರ ಮಾಗಿರ್ದ ತನ್ನ ಮೆಯ್ಯನೊರಸಿ ಕರ್ಚಿ ಮುಕ್ಕುಳಿಸಿಯುಗುೞುಚಮಿಸಿ ಜಳದೇವತೆಗಳ್ಗೆ ಪೊಡೆವಟ್ಟು ಜಳಮಂತ್ರಾಕ್ಷರಂಗಳಿಂ ಸರೋವರಮನಭಿಮಂತ್ರಿಸಿ-

ಚಂ|| ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್|
ಮುೞುಗುವ ತೀವ್ರದೀತಿವೊಲಾ ಕೊಳದೊಳ್ ಫಣಿರಾಜಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ||೭೪

ವ|| ಅಂತು ವಜ್ರಿಯ ವಜ್ರಹತಿಗಳ್ಕಿ ಕುಲಗಿರಿಜಳಯಂ ಪುಗುಂವಂತೆ ದುಯೋಧನಂ ಕೊಳನಂ ಪೊಕ್ಕಿರ್ದನನ್ನೆಗಮಿತ್ತ ಧರ್ಮಪುತ್ರಂ ಶಲ್ಯವಧೆಯಿಂ ಬೞಯಂ ರಾಜರಾಜನಂ ಕೊಳುಗುಳದೊಳಱಸಿಯುಂ ಕಾಣದೆ ನಮ್ಮ ಮಾಡುವ ಕರ್ತವ್ಯಮಾವುದೇಗೆಯ್ವಂ ಪೇೞಮೆಂದು ನಾರಾಯಣನಂ ಬೆಸಗೊಳೆ ಮಧುವನಿತಾವದನಕಮಳಹಿಮಕರನಿಂತೆಂದಂ-