ಇಲ್ಲಿಂದ ಮುಂದಾಗಬೇಕಾದುದನ್ನು ಯೋಚಿಸು. ೨೩. ಯುದ್ಧಮಾಡುವುದಾದರೆ ನಾವಿಷ್ಟು ಜನವೂ ಸಹಾಯಕ್ಕೆ ಇದ್ದೇವೆ. ಯುದ್ಧಮಾಡು. ಯುದ್ಧವು ಹೆಚ್ಚಿನ ಅಪಾಯವುಳ್ಳದ್ದು ಎಂದು ಸಂಯ ಕಡೆ ಒಲಿಯುವ ಪಕ್ಷದಲ್ಲಿ ಆರ್ಜುನನಲ್ಲಿ ಸಂಯಾಗುತ್ತದೆ. ರಾಜನೇ ನಿನಗಿವೆರಡೇ (ಮಾಡಬೇಕಾದ) ಕಾರ್ಯಗಳು. ವ|| ಎನ್ನಲು ಆಮೇಲೆ (ಎರಡನೆಯ ಸಲ) ಹೇಳಿದ ಮಾತಿಗೆ ಸೈರಿಸಲಾರದೆ ದುಯೋಧನನು ಹೀಗೆಂದನು. ೨೪. ಹಳೆಯ ಗ್ರಾಮಗಳೈದನ್ನು ಬೇಡಿದರೂ ಕೊಡದ ನಾನು ಏನೆಂಬುದಾಗಿ ಸಂಯನ್ನುಂಟುಮಾಡಲಿ? ಕರ್ಣನನ್ನು ನನ್ನ ಮುಂದೆ ತಂದು ಇಳಿಸುವುದಕ್ಕೆ ಸಮರ್ಥನಾದರೆ (ಆಗ ಸಂಯನ್ನು) ಗಳಿಯುಸುತ್ತೇನೆ. ಕೃಪನೇ ನೀನು ಈ ಮಾತನ್ನು ಏನೆಂದು ಹೇಳುತ್ತೀಯೆ. ಇನ್ನು ಮಾತನ್ನು ಬಿಡು. ಯುದ್ಧಭೂಮಿಯಲ್ಲಿ ಪಾಂಡವರನ್ನು ಕಾಣುವ ದುರ್ಯೋಧನನೆಂಬ (ಆಶ್ಚರ್ಯವಾದ) ಹೆಸರುಳ್ಳವನಲ್ಲವೇ ನಾನು? ವ|| ಎನ್ನಲು ಗುಡುಗಿನ ಶಬ್ದದಿಂದ ಅಶ್ಚತ್ಥಾಮನು ಹೀಗೆಂದನು- ೨೫. ಕುಲ, ಬಲ, ಶೌರ್ಯ ಧೈರ್ಯದಿಂದ ಕೂಡಿದವರೆಲ್ಲರನ್ನೂ ಬಿಟ್ಟು ಕರ್ಣನನ್ನು ಕುರಿತು ಪ್ರಲಾಪಮಾಡುತ್ತಿದ್ದೀಯೆ. ನಿಜ, ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಭಯವನ್ನುಟುಮಾಡುತ್ತಿರುವ ಹಾಗೆ ಭೀಮನು ಪೂರ್ಣವಾಗಿ ಕುಡಿದ ಸಂದರ್ಭದಲ್ಲಿ ಶೂರನಾದ ಕರ್ಣನೇಕೆ ಹೇಳು ಮಿಟಮಿಟನೆ ನೋಡುತ್ತಿದ್ದ? ನಿನ್ನ ಹಾಗಿರುವ ರಾಜರೂ ಉಂಟೇ? ೨೬. ನಿನಗೆ ಅಂಬಿಗರವನಲ್ಲಿ ವಿಶೇಷ ಋಣಸಂಬಂಧವಾಯಿತು. ಇದನ್ನು ಬಿಡಿಸಲು ಉಳಿದವರಿಗೆ ಸಾಧ್ಯವೇ? ನೀನು ಅಪ್ಪಣೆ ಕೊಡು; ಪ್ರತಿಭಟಿಸಿದವರನ್ನು ಪೂರ್ಣವಾಗಿ ಕೊಲ್ಲುತ್ತೇನೆ. ವ|| ಎಂದು ಅಶ್ವತ್ಥಾಮನು ಕರ್ಣನನ್ನು ನಿಂದಿಸಿ ಮಾತನಾಡಲು ಆ ಮಾತಿಗೆ ಕೋಪಿಸಿಕೊಂಡು ಅವನನ್ನು ಕೊಂದು ಹಾಕುವವರೆಗೂ ಯೋಚಿಸಿ ದುರ್ಯೋಧನನು ಹೀಗೆಂದನು. ೨೭. ನಿನ್ನಿಂದ ಮೂರುಲೋಕದ ರಾಜ್ಯಾಪತ್ಯದ ವೈಭವವು ಬಂದು ನನಗೆ ಸೇರುವುದಾದರೂ ನನಗೆಬೇಡ, ಕರ್ಣನ ವಿಷಯವಾಗಿ (ಕೆಟ್ಟುದನ್ನು) ಆಡಿ ನೀನಾಗುವ ಹೊತ್ತಿಗೆ ಬದುಕಿದ್ದೀಯೆ. ಇತರರು ಎಂದುಕೊಳ್ಳುವುದು. ಇನ್ನು ದುಖಿಸಬೇಡ, ನನ್ನೆದುರಿನಲ್ಲಿ ಕರ್ಣನನ್ನು ನಿಂದಿಸಿ

ಚಂ|| ನುಡಿ ನಿನಗಂ ದಿನೇಶತನಯಂಗಮದೆನ್ನಯ ಪಕ್ಕದಾದೊಡಂ
ಮಿಡುಕದೆ ಕೇಳ್ವೆನಲ್ಲಿ ಸಮನಿರ್ವರುಮಾತನತೀತನಾದ ಪಿಂ|
ಬಡಿನೊಳದೆಂತು ಪೇೞು ಪೞಯೆ ಕೇಳ್ವೆನೊ ಕೇಳ್ದೊಡೆ ಚಿ ಪೆಱಂ ಪೆಱಂ
ನುಡಿದೊಡೆ ಕೇಳ್ದನೆಂದೆನಗೆ ನೋಯನೆ ಸಗ್ಗದೊಳಿರ್ದಿನಾತ್ಮಜಂ|| ೨೮

ವ|| ಎಂಬುದುಮೀ ನುಡಿಯೆ ನುಡಿಯೆ ನಿನ್ನ ಕೂರ್ಮೆಗಂ ತಕ್ಕೂರ್ಮೆಗಂ ದೊರೆಯಪ್ಪುದಾದೊಡಮರಾತಿಸೈನ್ಯಮಂ ತವೆ ಕೊಂದಲ್ಲದೆ ನಿನ್ನ ಮೊಗಮಂ ನೋಡೆನೆಂದಶ್ವತ್ಥಾಮನಾಸ್ಥಾನದಿಂದೆೞ್ದು ಪೋದನಾಗಳ್ ಭೂನಾಥಂ ಮದ್ರರಾಜನನಿಂತೆಂದಂ-

ಚಂ|| ಇನತನಯಂಗೆ ಸಾವುಮೆನಗಿಂತಿನಿತೊಂದೞಲುಂ ದಿನೇಶ ಪು
ತ್ರನೆ ನಿಮಗಿಂಬುಕೆಯ್ಯದುದಱಂ ದೊರೆಕೊಂಡುದು ವೀರ ಲಕ್ಷ್ಮಿನಿ|
ಮ್ಮನುಬಲದಿಂದಮಲ್ಲದೆನಗಾಗದು ದಲ್ ಸಲೆ ಪಟ್ಟಮಂ ಸಮಂ
ತೆನಗೆಯೆ ಮಾೞ್ಪೊಡೇ ತೊದಳೊ ನೀಮೆ ದಲಾಂಪುದು ಬೀರವಟ್ಟಮಂ|| ೨೯

ವ|| ಎಂಬುದುಂ ಶಬ್ಯನಿಂತಿರ್ದಿನಿಬರೊಳಮಾನಾವಾಳ ದೊರೆಲಂ ಬೆಸನಂ ನೀಮೆನಗೆ ದಯೆಗೆಯ್ವಿರೆಂಬುದೆಲ್ಲಮೆನಗೆ ಸೈಪುಯೆ ಸ್ವಾಮಿ ಸಂಪತ್ತುಮಂತೆಗೆಯ್ವೆನೆಂದು ಷೋಡಶ ರಾಜಭರಮಂ ತಾಳ್ದುವಂತೆ ಸೇನಾಪತ್ಯಭಾರಮಂ ಮದ್ರರಾಜಂ ತಾಳ್ದಿ-

ಕಂ|| ಮುಟ್ಟುಗಿಡೆ ತಾನೆ ತನ್ನಂ
ಕಟ್ಟಿಸಿಕೊಳ್ವಂತೆ ಬೀರವಟ್ಟಮನಾಗಳ್|
ಕಟ್ಟಿಸಿಕೊಂಡಂ ಶಲ್ಯಂ
ಕಟ್ಟುದುದಂ ಕಳೆಯಲಾರ್ಗಮೇಂ ತೀರ್ದಪುದೇ|| ೩೦

ವ|| ಅನ್ನೆಗಮಿತ್ತ ತದವೃತ್ತಾಂತಮಂ ಸಂಚಳಿತ ಚಾರ ಚಕ್ಷುಗಳಿಂದಂ ಧರ್ಮಪುತ್ರನಱದು ನರಕಾಂತಕಂಗೆ ಬೞಯನಟ್ಟಿ ಬರಿಸಿ ಪೇಡೆ ನಿಶಾಟ ರಾಜ ಕಿರೀಟ ಕೋಟಿ ತಾಟಿತ ಭುಜಂ ಚತುರ್ಭಜನಿಂತೆಂದಂ-

ಮ|| ಅದಟುಂ ಕಾರ್ಮುಕವಿದ್ಯೆಯುಂ ಭುಜಬಳಾವಷ್ಟಂಭಮುಂ ಸಂದು ನಿಂ
ದುದು ಅಲ್ಯಂಗವನೊರ್ವನಲ್ತೆ ನಮಗಂ ಹೃಚ್ಛಲ್ಯನಾತಂಗೆ ಕ|
ಟ್ಟಿದಿರೊಳ್ ನಿಲ್ವೊಡೆ ನೀನೆ ನಿ ಲ್ವೆಯದಱಂ ನಿಶ್ಯಲ್ಯಮಪ್ಪಂತು ನಿ
ನ್ನೊದವಿಂ ಮಾೞುೞ ದಗಾಧಸಾಗರಪರೀತಾಶೇಷ ಭೂಭಾಗಮಂ|| ೩೧

ಬದುಕುತ್ತಿದ್ದರೆ? ೨೮. ನಿನಗೂ ಕರ್ಣನಿಗೂ ನನ್ನ ಸಮಕ್ಷಮದಲ್ಲಿ ವಾಗ್ವಾದವಾದರೆ ಚಲಿಸದೆ ಕೇಳುತ್ತೇನೆ. ಅಲ್ಲಿ ಇಬ್ಬರೂ ಸಮ. ಅವನು ಸತ್ತುಹೋದ ಬಳಿಕ ಅದು ಹೇಗೆ ಅವನ ವಿಷಯವಾದ ನಿಂದೆಯನ್ನು ಕೇಳುವೆನು ಹೇಳು. ಹಾಗೆ ಕೇಳಿದರೆ ಸ್ವರ್ಗದಲ್ಲಿರುವ ಕರ್ಣನು ಚಿ, ಇತರರು ನನ್ನನ್ನು ಬಯ್ದರೆ (ದುರ್ಯೋಧನನು) ಇದನ್ನು ಕೇಳಿದನು ಎಂದು ನನ್ನ ವಿಷಯದಲ್ಲಿ ನೊಂದುಕೊಳ್ಳುವುದಿಲ್ಲವೇ? ವ|| ಎನ್ನಲು ಈ ಮಾತೇ ನಿನ್ನ ಸ್ನೇಹಕ್ಕೂ ಯೋಗ್ಯವಾದ ನಡತೆಗೂ ಸಮಾನವಾಗಿದೆ (ಯೋಗ್ಯವಾಗಿದೆ). ಆದರೂ ಶತ್ರುಸೈನ್ಯವನ್ನು ಪೂರ್ಣವಾಗಿ ಕೊಂದಲ್ಲದೆ ನಿನ್ನ ಮುಖವನ್ನು ನೋಡುವುದಿಲ್ಲ ಎಂದು ಅಶ್ವತ್ಥಾಮನು ಅಲ್ಲಿಂದ ಎದ್ದುಹೋದನು. ಆಗ ರಾಜನಾದ ದುರ್ಯೋಧನನು ಶಲ್ಯನನ್ನು ಕುರಿತು ಹೀಗೆಂದನು -೨೯, ಕರ್ಣನಿಗೆ ಸಾವೂ ನನಗೆ ಇಷ್ಟೊಂದು ದುಖವೂ ಕರ್ಣನು ನೀವು ಹೇಳಿದ ಹಾಗೆ ಕೇಳದುದರಿಂದುಂಟಾಯಿತು. ವಿರಲಕ್ಷ್ಮಿಯೂ ನಿಮ್ಮ ಸಹಾಯವಿಲ್ಲದೆ ನನಗೆ ಆಗುವುದಿಲ್ಲ ಅಲ್ಲವೇ? ನಿಜವಾಗಿಯೂ ನನಗೆ ರಾಜ್ಯಾಭಿಷೇಕಮಾಡಬೇಕಾದರೆ (ನಾನು ಗೆಲ್ಲಬೇಕಾದರೆ) ನೀವೇ ವೀರಪಟ್ಟವನ್ನು ಸ್ವೀಕರಿಸಬೇಕು. ಇದು ಸುಳ್ಳೇ? ವ|| ಎನ್ನಲಾಗಿ “ಇಲ್ಲಿರುವ ಇಷ್ಟು ಜನರಲ್ಲಿ (ಲೆಕ್ಕದವನು) ನಾನು ಯಾವ ವೀರಪುರುಷನಿಗೆ ಸಮಾನಾಗುತ್ತೇನೆ. ನೀವು ನನಗೆ ಕಾರ್ಯವನ್ನು ದಯೆಗೈದಿರುವದೆಲ್ಲ ನನ್ನ ಅದೃಷ್ಟವೂ ಸ್ವಾಮಿಸಂಪತ್ತೂ ಆಗಿರುತ್ತದೆ. ನೀವು ಹೇಳಿದ ಹಾಗೆಯೇ ಮಾಡುತ್ತೇನೆ’ ಎಂದು ಹದಿನಾರು ರಾಜರ ಭಾರವನ್ನೂ ತಾಳುವಂತೆ ಶಲ್ಕನು ಸೇನಾಪತ್ಯ ಭಾರವನ್ನು ಧರಿಸಿದನು. ೩೦. ಇತರ ಸಲಕರಣಗಳೆಲ್ಲ ನಾಶವಾಗಿರಲು ತನಗೆ ತಾನೇ ಕಟ್ಟಿಸಿಕೊಳ್ಳುವ ಹಾಗೆ ಶಲ್ಯನು ವೀರಪಟ್ಟವನ್ನು ಕಟ್ಟಿಸಿಕೊಂಡನು. ವಿಯ ನಿಯಮವನ್ನು ಕಳೆಯಲು ಯಾರಿಗಾದರೂ ಸಾಧ್ಯವಾಗುತ್ತದೆ ವ|| ಅಷ್ಟರಲ್ಲಿ ಆ ಸಮಾಚಾರವನ್ನು ಸಂಚಾರಮಾಡುತ್ತಿರುವ ಗೂಢಚಾರರಿಂದ ಧರ್ಮರಾಯನು ತಿಳಿದು ಕೃಷ್ಣನಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು ಹೇಳಲು ರಾಕ್ಷಸರಾಜರ ಅನೇಕ ಕಿರೀಟಗ್ರಾದಿಂದ ಹೊಡೆಯಲ್ಪಟ್ಟ ತೋಳನ್ನುಳ್ಳ ಚತುರ್ಭುಜನಾದ ಕೃಷ್ಣನು ಹೀಗೆಂದನು. ೩೧. ಪರಾಕ್ರಮವೂ ಚಾಪವಿದ್ಯೆಯೂ ಬಾಹುಬಲದ ಅಹಂಕಾರವೂ ಶಲ್ಯನಲ್ಲಿ ಸೇರಿ ನಿಂತಿವೆ. ನಮಗೂ ಅವನೊಬ್ಬನೇ ಎದೆಗೆ ನಾಟದ ಈಟಿಯಂತಿರುವವಲ್ಲವೇ? ಅವನಿಗೆ ಸರಿಸಮನಾಗಿ ನಿಲ್ಲುವುದಾದರೆ ನೀನೊಬ್ಬನೇ ನಿಲ್ಲುವೆ. ಆದುದರಿಂದ ನೀನು ಆಳವಾದ ಸಾಗರಗಳಿಂದ ಸುತ್ತುವರಿಯಲ್ಪಟ್ಟ

ವ|| ಅದಲ್ಲದೆಯುಂ ಸಿದ್ಧಿತ್ರಯಂಗಳ್ ನಿನಗಾತ್ಮೀಯಾಯತ್ತ ಸಿದ್ಧಿಯಾಗಿ ನಿಂದುದಱಂ ನೀನೆ ಬೀರವಟ್ಟಮಂ ತಾಳ್ದಿ ನಿಲ್ವುವೆನೆ-

ಉ|| ಆಂ ದಿಟಮಾಗಿ ಶಲ್ಯನಳವಂ ನೆ ಮುನ್ನದಿರ್ದುಮೆನ್ನ ತ
ಮ್ಮಂದಿರನೇಕೆ ಕಾಡಿಸುವೆನಾನೆ ಮಹಾಜಿಯೊಳಾಂಪೆನಂತೆಗೆ|
ಯ್ಯೊಂದು ಮುಕುಂದ ಕಟ್ಟೆನಗೆ ಪಟ್ಟಮನೆಂದು ಮುಕುಂದವೃಂದಮೊಂ
ದೊಂದಱಳೊಂದಿ ಮಿಕ್ಕೆಸೆಯೆ ತಾಳ್ನಿದನಾ ವಿಭು ಬೀರಮಟ್ಟಮಂ|| ೩೨

ವ|| ಅಂತು ಯುಷ್ಠಿರಂ ನಿಷ್ಠಿತಾಹವವ್ಯಾಪಾರನಾಗಿ ಮಧುಕೈಟಭಾರಾತಿಯಂ ಬೀಡಿಂಗೆ ಪೋಂಗಲ್ವೆೞ್ದಗ್ನಿ ಹೋತ್ರಶಾಲೆಗೆ ವಂದು ದರ್ಭಶಯನತಳದೊಳೊಱಗಿ ಬೆಳಗಪ್ಪ ಜಾವದೊಳ್-

ಚಂ|| ಕಡಲುರಿಯಂತಕಾಲ ಘನ ಗರ್ಜನೆಯಂತೆ ಸಮಸ್ತ ದಿಕ್ತಟಂ
ಪಿಡುಗುವಿನಂ ರಣಾನಕರವಂಗಳಸುಂಗೊಳೆ ಪರ್ವಿ ಬೇಗದಿಂ|
ಸಡಗರದೇೞ್ಗೆಯುಂ ಕಳಕಳಧ್ವನಿಯುಂಬೆರಸಾಡುವಂತೆರ
ೞೃಡೆಯೊಳಮಾಗಳೊರ್ಮೊದಲೆ ಪಲ್ಲಣಮಿಕ್ಕಿಪುದಲ್ಲಕಲ್ಲೊಳಂ|| ೩೩

ವ|| ಆಗಳಂತಕತನಯನುಂ ಧೃತರಾಷ್ಟ್ರತನಯನುಮಾರೂಢಮದಗಜರುಮುಪಾರೂಢ ವಿಶೇಷಕರುಮಾಗಿ ತಂತಮ್ಮ ಶಿಬಿರಂಗಳಿಂ ಚತುರ್ಬಲಂಗಳ್ ಪೊಱಮಟ್ಟು ಸಂಗ್ರಾಮರಂಗಕ್ಕವತರಿಸೆ ಕುರುಬಲಮಂ ಮದ್ರರಾಜನಭಿನವವ್ಯೂಹಮನೊಡ್ಡುವುದುಂ ವಿಬುಧವನಜವನಕಳಹಂಸನುಂ ಹಂಸವ್ಯೂಹನೊಡ್ಡಿ ಮಾರ್ವಲಕ್ಕೆ ಯಮಪಾಶಮಂ ಬೀಸುವಂತೆ ಕೆಸಿದಾಗಳ್-

ಕಂ|| ಚಯ್ ಚಯ್ಯೆಂಬಾಗಳ್ ಮೆಯ್
ಮೆಯ್ ಚಲದಿಂ ಮುಟ್ಟ ಪೊಣರ್ದು ತಳ್ತಿಱವುರ್ಕಿಂ|
ಕೆಯ್ ಚೆಚ್ಚರಿಕೆಯ ಚಲದಿಂ
ಕೆಯ್ ಚಳಿವಿನಮಿದರೆರಡು ಬಲದೊಳಮದಟರ್|| ೩೪

ಕರಿ ಮಕರಾಹತಹತಿಯಿಂ
ಬಿರಿದಳಱುವ ಭೈತ್ರದಂತೆ ವಿವಿಧಾಯುಧ ದಂ|
ತುರಿತಂಗಳೞೆದುವಾ ಸಂ
ಗರ ಜಳನಿಯೊಳ್ ವರೂಥಕರಿನಿಕರಂಗಳ್|| ೩೫

ಸಮಸ್ತಭೂಮಂಡಲವನ್ನೂ ನಿನ್ನ ಸಹಾಯದಿಂದ ಕಂಟಕವಿಲ್ಲದಂತೆ ಮಾಡುವುದು. ವ|| ಅಷ್ಟೇ ಅಲ್ಲದೆ ಸಿದ್ಧಿತ್ರಯಗಳಾದ ಪ್ರಭುಸಿದ್ಧಿ ಮಂತ್ರಸಿದ್ಧಿ ಮತ್ತು ಉತ್ಸಾಹ ಸಿದ್ಧಿಗಳು ನಿನಗೆ ಅನವಾದ ಸಿದ್ಧಿಯಾಗಿ ನಿಂತಿರುವುದರಿಂದ ನೀನೇ ಪಟ್ಟವನ್ನು ಧರಿಸಿ ನಿಲ್ಲುವುದು ಎನ್ನಲು ೩೨. ನಾನು ನಿಶ್ಚಯವಾಗಿಯೂ ಶಲ್ಯನ ಪರಾಕ್ರಮವನ್ನು ಸಂಪೂರ್ಣವಾಗಿ ಮೊದಲೇ ತಿಳಿದಿದ್ದೂ ನನ್ನ ತಮ್ಮಂದಿರನ್ನೇಕೆ ಕಾದಿಸಲಿ; ಮಹಾಯುದ್ಧದಲ್ಲಿ ನಾನೆ ಎದುರಿಸುತ್ತೇನೆ. ಕೃಷ್ಣನೇ ಹಾಗೆ ಮಾಡೆಂದು ನನಗೆ ಪಟ್ಟವನ್ನು ಕಟ್ಟು ಎಂದು ಮುಕುಂದವೆಂಬ ಮಂಗಳವಾದ್ಯ ಸಮೂಹವು ಒಂದರಲ್ಲೊಂದು ಸಮನ್ವಯವಾಗಿ ಕೂಡಿಕೊಂಡು ವಿಶೇಷವಾಗಿ ಪ್ರಕಾಶಿಸಲು ಆ ದೊರೆಯು ವೀರಪಟ್ಟವನ್ನು ತಾಳಿದನು. ವ|| ಹಾಗೆ ಧರ್ಮರಾಯನು ನಿಶ್ಚಿತವಾದ ಯುದ್ಧ ವ್ಯಾಪಾರೋದ್ಯೋಗವುಳ್ಳವನಾಗಿ ಕೃಷ್ಣನನ್ನು ಬೀಡಿಗೆ ಹೋಗ ಹೇಳಿ ತಾನು ಅಗ್ನಿಹೋತ್ರಶಾಲೆಗೆ (ಯಾಗಶಾಲೆಗೆ) ಬಂದು ದರ್ಭೆಯಿಂದ ಮಾಡಲ್ಪಟ್ಟ ಹಾಸಿಗೆಯಲ್ಲಿ ಮಲಗಿ ಬೆಳಗಾಗುವ ಜಾವದಲ್ಲಿ ೩೩. ಬಡಬಾನಲದಂತೆ ಅಕಾಲದ ಗುಡುಗಿನಂತೆ ಸಮಸ್ತ ದಿಕ್ಕುಗಳ ದಡಗಳೂ ಸಿಡಿಯುವಂತೆ ಯುದ್ಧವಾದ್ಯಗಳು ಭೋರ್ಗರೆಯುತ್ತಿರಲು ವೇಗದ ಸಂಭ್ರಮಾತಿಶಯವೂ ಕಳಕಳಧ್ವನಿಯೂ ಬೆರಸಿ ಆಡುವಂತೆ ಎರಡು ಸೈನ್ಯಗಳಲ್ಲಿಯೂ ಒಟ್ಟಿಗೆ ಅಲ್ಲೋಲಕಲ್ಲೋಲವಾಗಲು ಕುದುರೆಗಳಿಗೆ ಜೀನನ್ನು ಹಾಕಿದರು. ವ|| ಆಗ ಧರ್ಮರಾಯನೂ ದುರ್ಯೋಧನನೂ ಮದ್ದಾನೆಗಳನ್ನು ಹತ್ತಿ ಪಾಳೆಯಗಳಿಂದ ಹೊರಟು ಚತುರಂಗಸೇನಾಸಮೇತರಾಗಿ ಯುದ್ಧರಂಗದಲ್ಲಿ ಬಂದಿಳಿದರು. ಶಲ್ಯನು ಕೌರವಸೈನ್ಯವನ್ನು ಹೊಸದಾದ ರಚನಾವಿಧಾನದಿಂದ ಮುಂದೊಡ್ಡಲು ವಿದ್ವಾಂಸರೆಂಬ ಕಮಲದ ತೋಟಕ್ಕೆ ರಾಜಹಂಸದಂತಿರುವ ಧರ್ಮರಾಯನೂ ಹಂಸವ್ಯೂಹವನ್ನು ಚಾಚಿ ಪ್ರತಿ ಸೈನ್ಯಕ್ಕೆ ಯಮಪಾಶವನ್ನು ಬೀಸುವಂತೆ ಕೈಬೀಸಿದನು.

೩೪. ಶರೀರ ಶರೀರಗಳ ಚಯ್‌ಚಯ್ ಎಂದು ಘರ್ಷಣೆಮಾಡುತ್ತ ಸ್ಪರ್ಧೆಯಿಂದ ಹತ್ತಿರಕ್ಕೆ ಬಂದು ರಣೋತ್ಸಾಹದ ಕೈಚಟುವಟಿಕೆಯ ರಭಸದಿಂದ ಜೊತಜೊತೆಯಾಗಿ ಹೆಣಗಾಡಿ ಕೈಸೋತುಹೋಗುವವರೆಗೂ ಉಭಯ ಸೈನ್ಯದ ಶೂರರೂ ಪರಸ್ಪರ ಕತ್ತರಿಸಿದರು.

೩೫. ನೀರಾನೆ ಮತ್ತು ಮೊಸಳೆಗಳ ಹೊಡೆತದಿಂದ ಬಿರಿದು ನಾಶವಾಗುವ ಹಡಗಿನಂತೆ ನಾನಾ ಆಯುಧಗಳು ವಿಶೇಷವಾಗಿ ನಾಟಕೊಂಡಿರುವ

ಒಂದಕ್ಷೋಹಿಣಿಬಲಮೆರ
ಡುಂ ದೆಸೆಯೊಳಮುೞದುವನಿತೆ ಭಾರತಮೆಮ|
ಗಿನ್ನಿಂದುಜ್ಜವಣೆ ದಲೆಂದದ
ಟೋಂದುತ್ತರಮಾಗೆ ಕಾದಿದರ್ ಕಟ್ಟಾಳ್ಗಳ್|| ೩೬

ಸುರಿತಶರನಿಕರಪಾತಿತ
ನರೋತ್ತಮಾಂಗಂ ಕಬಂಧ ನಾಟಕರಂಗಂ|
ಸುರಿತನವರುರರಂಗ
ತ್ತರಂಗಮೊಪ್ಟಿದುದು ವೀರಭಟರಣರಂಗಂ|| ೩೭

ವ|| ಅಂತು ಮುಂಬಗಲ್ವರಂ ತುಮುೞೆ ಕಾದುವ ಸಮರಭರಂ ಮನೋರಾಗಮಂ ಮಾಡೆಯುಂ ಮುಮ್ಮೞೆಸಿ ಪಾಂಡವ ಕೌರವ ಬಲದ ಕಲಿಕೆಯ ಪ್ರಧಾನನಾಯಕರ್ಕಳ್-

ಮ|| ಸ|| ಕಡಿಕೆಯ್ದೊಂದೊರ್ವರೊಳ್ ತಳ್ತಿಱವ ಬಯಕೆಯಿಂ ದಿವ್ಯ ಬಾಣಾದಿಗಳ್ಗಂ
ಪೊಡೆವಟ್ಟುಂ ಸೂತರಂ ಚೋದಿಸಿನುತುಮಗುರ್ವುರ್ವೆ ಕೆಯ್ಮಿಕ್ಕು ಕಾದಲ್|
ನಡೆತರ್ಪಾವೇಗದೊಳ್ ಮುಮ್ಮೞಸಿದ ಪಲವುಂ ರಾಜಚಿಹ್ನಂಗಳಂ ಬೆ
ಳ್ಗೊಡೆಗಳ್ ತಳ್ಪೊಯ್ದದೇಂ ಕಣ್ಗೊಳಿಸಿದುದೊ ವಿನಕ್ಷತ್ರಕಚ್ಛತ್ರಪಿಂಡಂ|| ೩೮

ವ|| ಅಂತು ಮುಟ್ಟೆವಂದೋರೊರ್ವರೆ ರಥದ ಕುದುರೆಯ ಪೞವಿಗೆಯ ಕುಱುಪುಗಳಿನಿವರವರೆಂದಱದು ಸಾತ್ಯಕಿ ಕೃತವರ್ಮನೊಳ್ ನಕುಳಂ ಶತಬಿಂದುವಿನ ಮಕ್ಕಳಯ್ವರೊಳ್ ಸಹದೇವಂ ಶಕುನಿಯೊಳ್ ಯುದ್ಧಾಮನ್ಯೂತ್ತಮೌಜಸರ್ ಕೃಪನೊಳ್ ಭೀಮಸೇನಂ ಪರ್ವತರಾಜರೊಳ್ ವಿಕ್ರಮಾರ್ಜುನನಶ್ವತ್ಥಾಮನೊಳ್ ಪೆಣೆದು ಮಂಡಳ ಭ್ರಾಂತೋದ್ಭಾಂತಸ್ಥಿತಚಕ್ರಮೆಂಬ ರಥಯುದ್ಥದೊಳಮಾಲೀಢ ಪ್ರತ್ಯಾಲೀಢ ಸಮಪಾದಂ ಗಳೆಂಬಾಸನಂಗಳೊಳಂ ಪೆಱವುಂ ಶರಾಸನವಿದ್ಯೆಗಳೊಳತಿ ಪ್ರವೀಣರುಂ ಜಾಣರುಮಾಗಿ

ಅಕ್ಕರ|| ನೆಱದು ನಿರ್ವಾಯಂ ನರುವಾಯಂ ಮುಂ ಮೊನೆ ನೆರಕೆ ನಾರಾಚಂ ತಗರ್ತಲೆಯಂ
ನೆಱನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವೆ ಕಣ್ಣಂ|
ಪೆಱಯ ಮುಗಂ ಕಣಕೆನೆ ವೊಪಂಬು ಕವಲಂಬುರೆಂಬಂಕದಂಬೆತ್ತಲುಂ
ತುಱುಗಿ ನಡುವಿನಂ ಸಾರ್ದು ಸಾರ್ದೆಚ್ಚೆಚ್ಛು ಕಾದಿದರತಿರಥರೊಂದುಜಾವಂ|| ೩೯

ಮ|| ಅಂತು ಕಾದುವಾಗಳೇಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನು ಮಪ್ಪಶ್ವತ್ಥಾಮನೇವದೊಳ್ ಕಣ್ಗಾತುಣದೆ ಮಾರ್ಕೊಂಡು ವಿಕ್ರಮಾರ್ಜುನನಂ ದಿವ್ಯಾಸ್ತ್ರಂಗಳಿಂದ ಮೆಚ್ಚು ಕಾದಿ ಗೆಲಲಾಱದೆ-

ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ ನಾಶವಾದವು. ೩೬. ಉಭಯಪಕ್ಷದಲ್ಲಿಯೂ ಒಂದಕ್ಷೋಹಿಣೀ ಸೈನ್ಯವು ಉಳಿಯಿತು. ಭಾರತಯುದ್ಧವು ಇದಿಷ್ಟೇ ಸಂಖ್ಯೆಯುಳ್ಳದು. ಈ ದಿನ ನಮಗೆ ಉದ್ಯಾಪನೆ (ಮುಗಿಯುವುದೇ) ಯಿಲ್ಲವೇ ಎಂದು ಹೇಳುತ್ತ ಅಪಾರ ಪರಾಕ್ರಮದಿಂದ ವೀರಪುರುಷರು ಕಾದಾಡಿದರು. ೩೭. ಹೊಳೆಯುತ್ತಿರುವ ಬಾಣಗಳ ಸಮೂಹಕ್ಕೆ ಸಿಕ್ಕಿಬೀಳುತ್ತಿರುವ ಮನುಷ್ಯರ ತೆಲಗಳನ್ನುಳ್ಳದೂ, ಮುಂಡಗಳು ಕುಣಿದಾಡುವ ರಂಗಸ್ಥಳವಾದುದೂ ಹೊಸ, ರಕ್ತದ ಚಂಚಲವಾದ ಅಲೆಗಳನ್ನುಳ್ಳುದೂ ಆದ ವೀರಭಟರ ರಣರಂಗವು ಪ್ರಕಾಶಮಾನವಾಯಿತು. ವ|| ಹಾಗೆ ಮುಂಬಗಲವರೆಗೆ (ಮದ್ಯಾಹ್ನದವರೆಗೆ) ತುಮುಲಯುದ್ಧವನ್ನು ಮಾಡುವ ಯುದ್ಧಕಾರ್ಯವು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿರಲು ಪಾಂಡವಕೌರವಬಲಪ್ರವೀಣರಾದ ಮುಖ್ಯ ನಾಯಕರುಗಳು ಕಾದಿದರು. ೩೮. ಬಹುವೇಗದಿಂದ ಕೂಡಿ ಪರಸ್ಪರ ತಗುಲಿ ಯುದ್ಧಮಾಡುವ ಅಪೇಕ್ಷೆಯಿಂದ ದಿವ್ಯಾಸ್ತ್ರಗಳಿಗೆ ನಮಸ್ಕಾರಮಾಡಿ ಸಾರಥಿಗಳಿಗೆ ರಥವನ್ನು ನಡೆಸಿ ಎಂದು ಹೇಳಿ ಭಯವು ಹೆಚ್ಚುತ್ತಿರಲು ಶಕ್ತಿಮೀರಿ ಯುದ್ಧಮಾಡಲು ಬರುತ್ತಿರುವ ವೇಗದಲ್ಲಿ ಮುಂದಕ್ಕೆ ಚಾಚಿದ ಹಲವು ರಾಜಚಿಹ್ನೆಗಳನ್ನು ಶ್ವೇತಚ್ಛತ್ರಗಳು ಸಂಘಟ್ಟಿಸಿ ಚಂಚಲವಾದ ನವಿಲುಗಳನ್ನುಳ್ಳ ಛತ್ರಿಗಳ ಸಮೂಹದಂತೆ ವಿಶೇಷ ಆಕರ್ಷಣೀಯವಾಗಿದ್ದುವು. ವ|| ಹಾಗೆ ಸಮೀಪಕ್ಕೆ ಬಂದು ಒಬ್ಬೊಬ್ಬರ ರಥದ ಕುದುರೆಯ ಬಾವುಟದ ಗುರುತುಗಳಿಂದ ಇವರು ಅವರು ಎಂದು ಗುರುತಿಸಿ ಸಾತ್ಯಕಿ ಕೃತವರ್ಮನಲ್ಲಿಯೂ ನಕುಳನು ಶತಬಿಂದುವಿನ ಅಯ್ದು ಮಕ್ಕಳಲ್ಲಿಯೂ ಸಹದೇವನು ಶಕುನಿಯಲ್ಲಿಯೂ ಯುಧಾಮನ್ಯೂತ್ತಮೌಜಸರು ಕೃಪನಲ್ಲಿಯೂ ಭೀಮಸೇನನು ಪರ್ವತರಾಜರಲ್ಲಿಯೂ ವಿಕ್ರಮಾರ್ಜುನನು ಆಶ್ವತ್ಥಾಮನಲ್ಲಿಯೂ ಹೆಣೆದುಕೊಂಡು ಭ್ರಾಂತ, ಉದ್ರಾಂತ, ಸ್ಥಿತ, ಚಕ್ರ ಎಂಬ ರಥಯುದ್ಧದಲ್ಲಿಯೂ ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬ ಆಸನಗಳಲ್ಲಿಯೂ ಇತರ ಅನೇಕ ಬಿಲ್ವಿದ್ಯೆಗಳಲ್ಲಿಯೂ ಅತಿ ಪ್ರವೀಣರೂ ಜಾಣರೂ ಆಗಿ ೩೯. ಕೂಡಿಕೊಂಡು ನಿರ್ವಾಯ, ನರುವಾಯ, ಮುಮ್ಮೊನೆ, ನೆರಕೆ, ನಾರಾಚ, ತಗರ್ತಲೆ, ಮರ್ಮಸ್ಥಾ ವನ್ನು ಲ

ಕಂ|| ತನ್ನ ದೊಣೆಯಂಬುಗಳ್ ತವು
ವನ್ನೆಗಮೆಚ್ಚಂಬು ತಪ್ಪೊಡಭಿವಾದಯೆನ|
ಲ್ಕಿನ್ನೆನಗೆ ಪದನಿದೆಂದು ಕ
ರಂ ನಗೆ ಸುರರರಿಗನಿದಿರ್ಗೆ ತೊಲಗಿದನಾಗಳ್|| ೪೦

ದಾವಶಿಖಿ ಶಿಖೆಯನಿೞಪುದಿ
ದಾವ ಸರಲ್ ಪೇೞಮೆನಿಪ ಸರಲಿಂ ತಱದಂ|
ದೇವರ ಪಡೆ ರಾಗಿಸೆ ಮನ
ದೇವದಿನವಯದೆವ ಶಕುನಿಯಂ ಸಹದೇವಂ|| ೪೧

ವ|| ಅಂತು ಶಕುನಿಯಂ ತಱವುದುಮಿತ್ರತಿರಭುಕ್ತಿ ವಿಷಯಾಶರಪ್ಪ ಶತಬಿಂದುವಿನ ಮಕ್ಕಳಪ್ರಯ್ವರಂ ಗಾಳಿಗೊಡ್ಡಿದ ಪುಲ್ಲ ಬಿಂದುಗಳಂತೆ ನಕುಲಂ ನೆಲಕ್ಕೆ ಸೋವತಂ ಮಾಡಿದನಿತ್ತ ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ ಭೀಮಸೇನನಂತಕಾನನನೆಯ್ದಿಸಿದಂ ಯುಧಾಮನ್ಯೂತ್ತಮೌಜಸರ್ ಗೆಲೆ ಕಾದಿ ಕೃಪನನುಪಗತಪರಿಶ್ರಮನಂ ಮಾಡಿದರಾಗಳ್ ಮೆಯ್ವಿರ್ಚಿ ಬಂದು ಪೆಣೆದ ಭೀಮ ನಕುಳ ಸಹದೇವರುಮಂ ಶಲ್ಯಂ ವಿರಥರ್ಮಾಡಿ ಪಿಡಿದು ಕೊಂಡುಪುಲ್ಲ ಸೂಡನೀಡಾಡುವಂತೆ ತನ್ನಳಿಯಂದಿರಿರ್ವರುಮನೀಡಾಡಿ ಭೀಮನಂ ಪೊಣರ್ದು ನೆಲಿಕ್ಕಿಕ್ಕಿ ಬೆನ್ನಂ ಮೆಟ್ಟಿ ದಾಂಟುವ ಮದಗಜದಂತೆ ಕೊಲಲೊಲ್ಲದೆ ದಾಂಟದಾಗಳ್ ದುರ್ಯೋಧನನೞಲ್ದು ಕಣ್ಗಾಣದೆಯ್ದೆವಂದಶ್ವತ್ಥಾಮನು ಮದ್ರರಾಜ ಕೃಪಕೃತವರ್ಮರನಿಂತೆಂದಂ-

ತರಳ|| ನಿಜಕುಲೋಚಿತವೃತ್ತಿಯಂ ಬಗೆಯಿಂ ಮಹಾರಥರಿರ್ ಮಹೀ
ಭುಜರ ಮಕ್ಕಳಿರೆಂದು ನಂಬಿದೆನಿಂತು ನಣ್ಪನೆ ವೈರಿ ಭೂ|
ಭುಜರೊಳುಂಟೊಡತಾಗಿ ಮಾೞ್ಪುದನೀಗಳಾನಱದೆಂ ಫಣಿ
ಧ್ವಜನೆನಪ್ಪೆನೆ ನಿಮ್ಮನಿನ್ನೆಗೆಂದೊಡೀ ರಣರಂಗದೊಳ್|| ೪೨

ಉ|| ಕಾದುವ ಮಾೞ್ಕೆಯಲ್ಲೞದು ಕೆಮ್ಮನೆ ನಣ್ಣನೆ ಮೇಳಗಾಳೆಗಂ
ಗಾದುವ ಮಾೞ್ಕೆ ಸಿಂಧು ಘಟ ಸೂತ ಸುತರ್ತಳಿನಾಗದೊಂದು ರಾ|
ಜ್ಯೋದಯವಮ್ಮ ನಿಮ್ಮ ಬಲದಿಂದೆನಗಪುದೆ ಮದ್ವಿರೋಯಂ
ಛೇದಿಸಲಾನೆ ಸಾಲ್ವೆನಿರಿಮನ್ನೆಗವಿ ರಣರಂಗಭೂಮಿಯೊಳ್|| ೪೩

ಭೇದಿಸುವ ಕಣೆಗೆಲೆಯಂಬು, ಕಕ್ಕಂಬು, ಕೆಲ್ಲಂಬು, ಮೊನೆಯಂಬು, ಇವುಗಳು, ಕಣ್ಣನ್ನು ತುಂಬಿಕೊಳ್ಳಲು, ಪೆಯಮುಱಗಂ, ಕಣಕೆನೆ, ಪೋಪಂಬು, ಕವಲಂಬು ಎಂಬ ಪ್ರಸಿದ್ಧವಾದ ಬಾಣಗಳು ಎಲ್ಲಕಡೆಯಲ್ಲಿಯೂ ನುಗ್ಗಿ ಹೋಗಿ ನಾಟಿಕೊಳ್ಳುವ ಹಾಗೆ ನೋಡಿನೋಡಿ ಹೊಡೆದು ಹೊಡೆದು ಅತಿರಥರು ಒಂದು ಜಾವದ ಕಾಲ ಕಾದಿದರು. ವ|| ಹಾಗೆ ಯುದ್ಧ ಮಾಡುವಾಗ ಹನ್ನೊಂದು ಜನ ರುದ್ರರೊಳಗೆ ಕಟ್ಟಕಡೆಯವನೂ ಭಯಂಕರನೂ ಆದ ಅಶ್ವತ್ಥಾಮನು ಕೋಪದಿಂದ ಕುರುಡನಾಗಿ ಪ್ರತಿಭಟಿಸಿ ವಿಕ್ರಮಾರ್ಜುನನನ್ನು ದಿವ್ಯಾಸ್ತ್ರಗಳಿಂದ ಹೊಡೆದು ಕಾದಿ ಗೆಲ್ಲಲಾರದೆ -೪೦. ತನ್ನ ಬತ್ತಳಿಕೆಯ ಬಾಣಗಳು ಮುಗಿಯುವವರೆಗೂ ಹೊಡೆದು ತೀರಿಹೋಗಲು ಇನ್ನು ಅಭಿವಾದಯೆ (ನಮಸ್ಕರಿಸುತ್ತೇನೆ) ಎನ್ನಲು ಇದು ಸಮಯವೆಂದು -ದೇವತೆಗಳೆಲ್ಲ ನಗುತ್ತಿರಲು ಆರ್ಜುನನೆದುರಿಗೆ ಆಗ ಹೊರಟು ಹೋದನು. ೪೧. ದಾವಾಗ್ನಿಯನ್ನೂ ಕೀಳುಮಾಡುತ್ತಿರುವ ಈ ಬಾಣವು ಯಾವುದು ಹೇಳಿ ಎನ್ನುವ ಬಾಣದಿಂದ ದೇವರ ಸಮೂಹವು ಸಂತೋಷಪಡುತ್ತಿರಲು ಮನಸ್ಸಿನ ಕೋಪದಿಂದ ಸಹದೇವನು ಶಕುನಿಯನ್ನು ಕತ್ತರಿಸಿದನು. ವ|| ಈ ಕಡೆ ಅತಿರಭುಕ್ತಿಯೆಂಬ ದೇಶದ ರಾಜರಾದ ಶತಬಿಂದುವಿನ ಅಯ್ದುಮಕ್ಕಳನ್ನೂ ನಕುಲನು ಗಾಳಿಗೆ ಒಡ್ಡಿದ ಹುಲ್ಲಿನ ಮೇಲಿನ ಜಲಬಿಂದುಗಳಂತೆ ಭೂಮಿಗೆ ಬಲಿಕೊಟ್ಟನು. ಈ ಕಡೆ ವಿಂಧ್ಯ, ಮಳಯ, ಹಿಮವತ್ಪರ್ವತನಿವಾಸಿಗಳಾದ ಪರ್ವತರಾಜರುಗಳನ್ನು ಭೀಮನು ಯಮನ ಬಾಯನ್ನು ಸೇರಿಸಿದನು. ಯುಧಾಮನುತ್ತಮೌಜಸರು ಗೆಲ್ಲುವ ಹಾಗೆ ಯುದ್ಧಮಾಡಿ ಕೃಪನನ್ನು ನಷ್ಟಪರಾಕ್ರಮವನ್ನಾಗಿ ಮಾಡಿದರು. ಆಗ ಮೆಯ್ಯುಬ್ಬಿ ಹೆಣೆದುಕೊಂಡು ಒಟ್ಟಾಗಿ ಬಂದ ಭೀಮನಕುಳಸಹದೇವರನ್ನು ಶಲ್ಯನು ರಥವಿಲ್ಲದವರನ್ನಾಗಿ ಮಾಡಿ ಹಿಡಿದುಕೊಂಡು ಹುಲ್ಲಿನ ಕಂತೆಯನ್ನು ಎಸೆಯುವಂತೆ ತನ್ನಳಿಯಂದಿರನ್ನು ಎಸೆದು ಭೀಮನೊಡನೆ ಹೆಣಗಿ ಅವನನ್ನು ನೆಲಕ್ಕಿಕ್ಕಿ ಬೆನ್ನನ್ನು ತುಳಿದು ದಾಟುವ ಮದ್ದಾನೆಯಂತೆ ಕೊಲ್ಲಲು ಇಷ್ಟಪಡದೆ ದಾಟಿದನು. ಆಗ ದುರ್ಯೋಧನನು ದುಖಪಟ್ಟು ಕಣ್ಗಾಣದೆ ಸಮೀಪಕ್ಕೆ ಬಂದ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕುರಿತು ಹೀಗೆಂದನು. ೪೨. ನಿಮ್ಮ ಕುಲಕ್ಕೆ ಯೋಗ್ಯವಾದ ವರ್ತನೆಯನ್ನು ಯೋಚಿಸಿ ಮಹಾರಥರಾಗಿದ್ದೀರಿ ರಾಜರ ಮಕ್ಕಳಾಗಿದ್ದೀರಿ ಎಂದು ನಿಮ್ಮನ್ನು ನಂಬಿದೆನು ಶತ್ರುರಾಜರುಗಳಲ್ಲಿ ಸ್ನೇಹವುಳ್ಳವರಾಗಿ ನಡೆದುಕೊಳ್ಳುವುದನ್ನು ಈಗ ನಾನು ತಿಳಿದೆನು. ಇನ್ನು ಮೇಲೆ ಯುದ್ದರಂಗದಲ್ಲಿ ನಿಮ್ಮನ್ನು ನನ್ನವರೆಂದು ಭಾವಿಸಿದರೆ ಫಣಿ (ಸರ್ಪ)ಧ್ವಜನೇ ಅಲ್ಲ. (ದುಯೋಧನನೆನಿಸಿಕೊಳ್ಳುತ್ತೆನೆಯೇ?) ೪೩. ಇದು ಯುದ್ಧಮಾಡುವ ರೀತಿಯಲ್ಲ ; ಇದು

ಮಲ್ಲಿಕಾಮಾಲೆ|| ಬೀರವಟ್ಟಮನಾಂತ ಬೀರರುಮಿರ್ವರುಂ ಸುರ ರಾಜಿ ಕೈ
ವಾರದಿಂ ಬೞವಿಟ್ಟು ನಮ್ಮನೆ ನೋಡ ನೋಡುವರೀಗಳೀ|
ಭಾರತಂ ಸಮೆದಪ್ಪುದಳ್ಕದೆ ನಿಂದು ಕಾದೆನುತುಂ ಶರಾ
ಸಾರಮಂ ಸುರಿದಂತಕಾತ್ಮಜನಂತಸುಂಗೊಳೆ ಕಾದಿದಂ|| ೪೫

ಕಂ|| ಕಾದೆ ರಥ ತುರಗ ಕೇತನ
ಕೋದಂಡಂಗಳುಮನುಱದೆ ಖಂಡಿಸಿ ವಿಳಯಾಂ|
ಭೋದನಿನಾದದೆ ಮದ್ರ ಮ
ಹೀದಯಿತಂ ತೊಟ್ಟನಾರ್ವುದುಂ ಧರ್ಮಸುತಂ|| ೪೬

ಮುಳಿದು ತಳಮಳಿಸಿ ತಳರದೆ
ತೊಳಗುವ ಕರವಾಳನುರ್ಚಿ ಮೆಯ್ವೆರ್ಚಿ ಪೊದ|
ೞ್ದ ಳವಮರೆ ಪಿಡಿದು ರಥದಿಂ
ದಿಳೆಗಿೞೆದವನವನಿಪತಿಯನಣುಗಿಱವೊಯ್ದಂ|| ೪೭

ವ|| ಪೊಯ್ದೊಡೆ ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ ನೆಲನದಿರೆ ಕೆಡೆದ ತನ್ನಳಿಯನಂ ಮದ್ರರಾಜಂ ಕಂಡು ಕರುಣಿಸಿ-

ಚಂ|| ಮುಳಿಯಿಸದನ್ನವಿ ನೃಪನಿನಾಗದು ಸಾವೆನಗೆಂತುವಿತನಂ
ಮುಳಿಯಿಪಿನೆಂದುರಸ್ಥಳಮನಂತೊದೆದಾಗಡೆ ಕಂತುಗೀಶ್ವರಂ|
ಮುಳಿದವೊಲಾ ನೃಪಂ ಮುಳಿದು ನೋಡೆ ವಿಲೋಚನಪಾವಕಂ ತಗು
ಳ್ದಳುರ್ದೊಡೆ ಬೂದಿಯಾದುದೊಡಲಾಗಳೆ ಮದ್ರ ಮಹಾಮಹೀಶನಾ|| ೪೮

ವ|| ಅಂತಜಾತಶತ್ರು ನೇತ್ರೋದ್ಭಾತಾನಳಂ ತ್ರಿಣೇತ್ರಲಲಾಟನಳನಂತಳವಲ್ಲದಳುರೆ ಮದ್ರನಾಥಂ ಭಸ್ಮೀಭೂತನಾದ ಮಾತನಹಿಕೇತನಂ ಕೇಳ್ದು-

ಸ್ನೇಹದಿಂದ ಪ್ರೇಮಕಲಹವಾಡುವ ರೀತಿ ಭೀಷ್ಮ ದ್ರೋಣ ಕರ್ಣರಿಂದ ಆಗದ ಒಂದು ರಾಜ್ಯಲಾಭ ನಿಮ್ಮ ಬಲದಿಂದ ನನಗಾಗುತ್ತದೆಯೇ. ನನ್ನ ವಿರೋಯನ್ನು ಮುರಿಯಲು ನಾನೇ ಶಕ್ತನಾಗಿದ್ದೇನೆ. ಅಲ್ಲಿಯವರೆಗೆ ಈ ಯುದ್ಧಭೂಮಿಯಲ್ಲಿ ಇರಿ. ವ|| ಎಂದು ದುಯೋಧನನು ಅವರ ಕಾಳಗವನ್ನು ಮಾತಿನಿಂದಲೇ ಜರೆದು ತೇರಿನಲ್ಲಿ ಬೀಡಿಗೆ ಹೋದನು. ಆಗ ಶಲ್ಯನು ಚಕ್ರವರ್ತಿಯಾದ ದುಯೋಧನನು ತನ್ನನ್ನು ಮೂದಲಿಸಿ ನುಡಿದುದಕ್ಕೆ ಮನಸ್ಸಿನಲ್ಲಿ ದುಖಪಟ್ಟು- ೪೪. ರಾಜನಾದ ದುರ್ಯೋಧನನಿಂದ ಇಷ್ಟರ ಮಟ್ಟಿಗೆ ಅವಮಾನವು ನನಗಾಯಿತು. ಇನ್ನು ಸಿಡಿದುಹೋಗುತ್ತೇನೆ, ಶತ್ರುಸೈನ್ಯವನ್ನು ತುಳಿದು ಅಜ್ಜಿಗುಜ್ಜಿಮಾಡುತ್ತೇನೆ ಎಂದು ಅತ್ಯಂತ ಭಯಂಕರವಾದ ಬಾಣಸಮೂಹದಿಂದಲೇ ಅವರನ್ನು ಹೂಳಲು ಪಾಂಡವಸೈನ್ಯವು ಆತನ ಬಾಣಗಳ ತುದಿಯಲ್ಲಿ ಸುರುಟಿಕೊಂಡು ರಾಶಿಯಾಗಿ ಹೋಯಿತು. ಶಲ್ಯನು ಇನ್ನೆಷ್ಟು ಪ್ರತಾಪಶಾಲಿಯೋ! ವ|| ಹಾಗೆ ಶಲ್ಯನು ಪಾಂಡವಸೈನ್ಯದಲ್ಲಿ ಒಂದಕ್ಷೋಹಿಣೀ ಸೈನ್ಯವನ್ನು ಕೊಂದು ದ್ರುಪದನ ಅಯ್ದುಜನ ಮಕ್ಕಳನ್ನೂ ಅವನ ಇಪ್ಪತ್ತೈದು ತಮ್ಮಂದಿರನ್ನೂ ಶಕಟವಿಕಟರೇ ಮೊದಲಾದ ಹನ್ನೆರಡುಸಾವಿರ ರಾಜರನ್ನೂ ಕೊಂದು ಮುಂದೆ ಪ್ರತಿಭಟಿಸುವವರಾರನ್ನೂ ಕಾಣದೆ ತನಗಿಂತ ಉತ್ತಮರಾದವರಾರೂ ಇಲ್ಲದೆ ನಿಂತನು. ಧರ್ಮರಾಜನು ಮೂರುಲೋಕಗಳೂ ಪೂರ್ಣವಾಗಿ ನಡುಗಿಸುವಂತೆ ಮದ್ದಲೆಯ ಗುರುತಿನ ಬಾವುಟದಿಂದ ಮರೆಯುತ್ತಿರುವ ತನ್ನ ತೇರನ್ನು ಹೆದರದೆ ಎದುರಾಗಿ ಹರಿಯಿಸಿದನು. ೪೫. ನಾವಿಬ್ಬರೂ ಸೇನಾಪತ್ಯವನ್ನು ವಹಿಸಿರುವ ವೀರರೇ ಆಗಿದ್ದೇವೆ. ದೇವತೆಗಳ ಸಮೂಹವು ಹೊಗಳುತ್ತಾ ದಾರಿಮಾಡಿಕೊಂಡು ನಮ್ಮನ್ನೇ ನೋಡುತ್ತಿದ್ದಾರೆ. ನೋಡು ಈಗ ಈ ಭಾರತಯುದ್ಧ ಪರಿಸಮಾಪ್ತಿಯಾಗುತ್ತಿದೆ. ಹೆದರದೆ ನಿಂತು ಯುದ್ಧಮಾಡು ಎನ್ನುತ್ತ ಬಾಣದ ಮಳೆಯನ್ನು ಸುರಿದು ಧರ್ಮರಾಯನು ಪ್ರಾಣವನ್ನು ಸೆಳೆದುಕೊಳ್ಳುವಂತೆ ಕಾದಿದನು. ೪೬. ತೇರು, ಕುದುರೆ, ಬಾವುಟ, ಬಿಲ್ಲುಗಳನ್ನು ವೇಗವಾಗಿ ಖಂಡಿಸಿ ಪ್ರಳಯಕಾಲದ ಗುಡುಗಿನ ಶಬ್ದದಿಂದ ಶಲ್ಯಮಹಾರಾಜನು ಗರ್ಜಿಸಿದನು. ಧರ್ಮರಾಯನು ೪೭. ಕೋಪದಿಂದ ತಲ್ಲಣಗೊಂಡು ಹೊಳೆಯುವ ಕತ್ತಿಯನ್ನು ಒರೆಯಿಂದ ಸೆಳೆದು ರಥದಿಂದ ಇಳಿದು ಉಬ್ಬಿ ಆವರಿಸಿದ ಶಕ್ತಿಯಿಂದ ಹೊಡೆಯಲು ಶಲ್ಯನ ಸಮೀಪಕ್ಕೆ ಬರಲು ಶಲ್ಯನೂ ತೇರಿನಿಂದ ಇಳಿದು ಧರ್ಮರಾಜನನ್ನು ಸಮೀಪಿಸಿ ಹೊಡೆದನು. ವ|| ಮದ್ದಾನೆಯು ಅಪ್ಪಳಿಸಿದ ದೊಡ್ಡ ಮರದಂತೆ ನೆಲವು ಅಳ್ಳಾಡುವ ಹಾಗೆ ಕೆಳಗೆ ಬಿದ್ದ ತನ್ನಳಿಯನಾದ ಧರ್ಮರಾಜನನ್ನು ಶಲ್ಯನು ನೋಡಿ (ಕರುಣದಿಂ ನೋಡಿ) ಕರುಣಿಸಿ,

೪೮. ಕೋಪವನ್ನುಂಟು ಮಾಡುವವರೆಗೂ ಈ ರಾಜನಿಂದ ಸಾವು ಹೇಗೂ ನನಗಾಗುವುದಿಲ್ಲ. ಹೇಗೂ ಈತನನ್ನು ರೇಗಿಸುತ್ತೇನೆ ಎಂದು ಎದೆಯನ್ನು ಒದ್ದನು. ತಕ್ಷಣವೇ ಮನ್ಮಥನಿಗೆ ಈಶ್ವರನುಕೋಪಿಸಿಕೊಂಡ ಹಾಗೆ ಆ ರಾಜನು ಕೋಪಿಸಿ ನೋಡಿದನು. ಕಣ್ಣಿನ ಬೆಂಕಿಯು

ಉ|| ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರ ರಾ
ಜಾದಿ ಮಹೀಭುಜರ್ ಧುರದೊಳೆನ್ನಯ ದೂಸಱನೞ ಮೞದಂ|
ತಾದರಿದೊಂದೆ ಮೆಯ್ಯುೞದುದಿನ್ನೆನಗಾವುದೊ ಮೆಳ್ಪಡೆಯ್ದೆ ಮುಂ
ದಾದ ವಿರೋಸಾಧನಮನೆನ್ನ ಗದಾಶನಿಯಿಂದುರುಳ್ಚುವೆಂ|| ೪೯

ವ|| ಎಂದು ನಿಜಭುಜ ವಿಕ್ರಮೈಕಸಾಹಯನಾಗಿ ಗದೆಯಂ ಕೊಂಡು ಸಂಗ್ರಾಮ ರಂಗಕ್ಕೆ ನಡೆಯಲೆಂದಿರ್ದ ಕುರುಕುಳಚೂಡಾಮಣಿಯ ದಕ್ಷಿಣಕರಾಗ್ರಮಂ ಪಿಡಿದು ಸಂಜಯನಿಂತೆಂದಂ-

ಮ|| ಬೆವಸಾಯಂಗೆಯಲಿನ್ನುಮುಂಟೆಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂ
ಡವರಂ ಗೆಲ್ವುದಸಾಧ್ಯಮಾಯ್ತೆ ನಿಜ ದೋರ್ದಂಡಂಬರಂ ಗಂಡರಾ|
ಹವರಂಗಕ್ಕೊಳರೇ ಸಮಂತು ಪಗೆಯಂ ಕೊಲ್ವಂತು ಗೆಲ್ವಂತು ಕಾ
ದುವುದೇಕಾಕಿಯೆ ಆಗಿ ದೇವರಿಪುಭೂಪಾಳರ್ಕಳೊಳ್ ಕಾದುವೈ|| ೫೦

ವ|| ಎಂಬುದುಮೆನ್ನುಮನೇಕಾಕಿಯೆಂದೇಳಿಸಿ ನುಡಿದೆಯೆಂದು ಸಂಜಯನ ಮೊಗಮಂ ಮುನಿದು ನೋಡಿ-

ಚಂ|| ವನ ಕರಿ ಕುಂಭ ಪಾಟನ ಪಟಿಷ್ಠ ಕಠೋರ ನಖ ಪ್ರಹಾರ ಭೇ|
ದನ ಗಳಿತಾಸ್ತ್ರ ರಕ್ತ ನವ ಮೌಕ್ತಿಕ ಪಙ್ತವಿಳಾಸ ಭಾಸುರಾ|
ನನನೆನೆ ಸಂದುದಗ್ರ ಮೃಗರಾಜನುಮಂ ಮದವದ್ವಿರೋ ಭೇ
ದನಕರನಪ್ಪ ಶೌರ್ಯಮದದೆನ್ನುಮನೊಂದೊಡಲೆಂಬ ಸಂಜಯಾ|| ೫೧

ವ|| ಎಂಬುದುಂ ದೇವರ ಬಾಹುಬಳಮಜೇಯಮುಮಸಹಾಯಮುಮಪ್ಪುದಾದ ದೊಡಂ ದೇಶ ಕಾಲ ವಿಭಾಗಮುಮನಾಪತ್ಪ್ರತೀಕಾರಮುಮನಱಯದ ವಿವೇಕಿಗಳಂತೆ ದೇವರ್ ನೆಗೞಲಾಗದೇನಂ ನೆಗಡಂ ಕುರುಪಿತಾಮಹನೊಳಾಳೋಚಿಸಿ ನೆಗೞ್ವುದೆಂದು ಮುೞಸಾ ನುಡಿದು ಕಾಲವಂಚನೆಗೆಯ್ಯಲ್ ಬಗೆದು ಸಂಗ್ರಾಮರಂಗದೊಳಗನೆ ಮುಂದಿಟ್ಟೊಡಗೊಂಡನೇಕ ನೃಪಶಿರ ಕಪಾಳಶಕಳಜರ್ಜರಿತಮುಂ ಪರಸ್ಪರ ಸಮರರಭಸ ಸಮುತ್ಸಾರಿತಮುಂ ಸಕಲ ಸಾಮಂತಮಕುಟಬದ್ಧಮೌಳಿಮಾಳಾವಿಗಳಿತಮಕುಟಕೋಟಿ ಸಂಘಟ್ಟನೋಚ್ಚಳಿತ ಮಣಿಶಲಾಕಾ ಸಂಕುಳಮುಂ ಸಮರಭರ ನಿರ್ಭರ ಭೀಮಸೇನ ಘನಗದಾಪ್ರಹರಣನಿಸ್ಸಹಮದವದನೇಕ ಮತ್ತ ಮಾತಂಗ ಪದನಖಖರ್ವಿತೋರ್ವೀತಳಮುಂ ಪ್ರಚಂಡಮಾರ್ತಂಡಮರೀಚಿತೀವ್ರಜ್ವಳನಾಸಾರ

ಅಟ್ಟಿಕೊಂಡು ಬಂದು ಆಗಲೆ ಸುಡಲು ಶಲ್ಯಮಹಾರಾಜನ ಶರೀರವು ಬೂದಿಯಾಯಿತು. ವ|| ಹಾಗೆ ಧರ್ಮರಾಯನ ಕಣ್ಣಿನಲ್ಲಿ ಹುಟ್ಟಿದ ಬೆಂಕಿಯು ಮುಕ್ಕಣ್ಣನ ಹಣೆಗಣ್ಣಿನ ಬೆಂಕಿಯಂತೆ ಅಳತೆಯಿಲ್ಲದಷ್ಟು ಸುಡಲು ಶಲ್ಯನು ಬೂದಿಯಾದ ಮಾತನ್ನು ದುರ್ಯೋಧನನು ಕೇಳಿದನು. ೪೯. ಅಂತಹ ಅದ್ಭುತಶಕ್ತಿಯುಳ್ಳ ಭೀಷ್ಮ, ದ್ರೋಣ, ಕರ್ಣ, ಮದ್ರರಾಜನೇ ಮೊದಲಾದ ರಾಜರುಗಳು ಯುದ್ಧದಲ್ಲಿ ನನ್ನ ಕಾರಣದಿಂದ ಸತ್ತು ನಿರ್ನಾಮವಾದರು. ಈ ನನ್ನದೊಂದೆ ಶರೀರ ಉಳಿದಿದೆ. ಇನ್ನು ನನಗೆ ಮಾಡುವ ಕಾರ್ಯವಾವುದು? ಸಂಪೂರ್ಣವಾಗಿ ನನ್ನನ್ನು ಎದುರಿಸುವ ಶತ್ರುಸೈನ್ಯವನ್ನು ನನ್ನ ಗದೆಯೆಂಬ ಸಿಡಿಲಿನಿಂದ ಉರುಳಿಸುವೆನು ವ|| ಎಂದು ತನ್ನ ಬಾಹುಬಲವೊಂದನ್ನೇ ಸಹಾಯವನ್ನಾಗಿ ಹೊಂದಿ ಗದೆಯನ್ನು ತೆಗೆದುಕೊಂಡು ಯುದ್ಧರಂಗಕ್ಕೆ ಹೋಗಬೇಕೆಂದಿದ್ದ ಕುರುಕುಲಚೂಡಾಮಣಿಯಾದ ದುಯೋಧನನ ಬಲಗೈಯ್ಯ ತುದಿಯನ್ನು ಹಿಡಿದುಕೊಂಡು ಸಂಜಯನು ಹೀಗೆಂದನು. -೫೦. ಕೃಪಾಶ್ವತ್ಥಾಮರಿರಲು ಕಾರ್ಯಭಾರಮಾಡುವುದಕ್ಕೆ ಇನ್ನೂ ಅವಕಾಶವುಂಟು. ಪಾಂಡವರನ್ನು ಗೆಲ್ಲುವುದು ಸಾಧ್ಯವಾಗಿದೆಯೆ? ನಿನ್ನ ಬಾಹುದಂಡದವರೆವಿಗೂ – ಅದಕ್ಕೆ ಸಮಾನರಾದ ಪೌರುಷಶಾಲಿಗಳು ಯುದ್ಧರಂಗದಲ್ಲಿದ್ದಾರೆಯೇ? ಶತ್ರುವನ್ನು ಕೊಲ್ಲುವ ಹಾಗೂ ಗೆಲ್ಲುವ ಹಾಗೆ ಕಾದಬೇಕು. ಸ್ವಾಮಿ; ಶತ್ರುರಾಜರುಗಳಲ್ಲಿ ಒಬ್ಬಂಟಿಗನೇ ಆಗಿ ಕಾದುತ್ತೀಯಾ? ವ|| ಎನ್ನಲು ನನ್ನನ್ನು ಏಕಾಕಿಯೆಂದು ಅಪಹಾಸ್ಯಮಾಡಿ ನುಡಿದೆಯಾ ಎಂದು ಸಂಜಯನ ಮುಖವನ್ನು ನೋಡಿ ಕೋಪಿಸಿಕೊಂಡು ೫೧. ಕಾಡಾನೆಯ ಕುಂಭಸ್ಥಳವನ್ನು ಭೇದಿಸುವುದರಲ್ಲಿ ಸಮರ್ಥವೂ ಕಠಿಣವೂ ಆದ ಉಗುರುಗಳ ಪೆಟ್ಟಿನಿಂದ ಬಿರಿದು ಅಲ್ಲಿಂದ ಸುರಿಯುತ್ತಿರುವ ಕೆಂಪಾದ ಹೊಸಮುತ್ತುಗಳ ಸಾಲುಗಳ ಶೋಭೆಯಿಂದ ಪ್ರಕಾಶಮಾನವಾದ ಮುಖವುಳ್ಳ ಮೃಗರಾಜನಾದ ಸಿಂಹವನ್ನೂ ಮದಿಸಿರುವ ಶತ್ರುಗಳನ್ನು ಸೀಳುವ ಪ್ರತಾಪದ ಸೊಕ್ಕಿನಿಂದ ಕೂಡಿದ ನನ್ನನ್ನು ಸಂಜಯಾ, ಏಕಾಕಿ ಎನ್ನುವೆಯಾ? ವ|| ಸ್ವಾಮಿಯವರ ತೋಳಿನ ಬಲವು ಜಯಿಸುವುದಕ್ಕೆ ಆಗದುದೂ ಸಹಾಯವನ್ನಪೇಕ್ಷಿಸದುದೂ ಆಗಿದೆ. ಆದರೂ ದೇಶಕಾಲವಿಭಾಗವನ್ನು ಆಪತ್ತಿಗೆ ತಿಳಿಯದಿರುವ ವಿವೇಕಶೂನ್ಯರಾದವರ ಹಾಗೆ ಸ್ವಾಮಿಯವರು ಮಾಡಕೂಡದು. ಏನು ಮಾಡಬೇಕಾದರೂ ಕುರುಪಿತಾಮಹನಾದ ಭೀಷ್ಮರಲ್ಲಿ ಆಲೋಚಿಸಿ ಮಾಡತಕ್ಕದ್ದು ಎಂದು (ದುರ್ಯೋಧನನ) ಕೋಪವು ಕಡಿಮೆಯಾಗುವ ಹಾಗೆ ಮಾತನಾಡಿ ಸಮಾಧಾನಪಡಿಸಿದನು. ಕಾಲವಂಚನೆಮಾಡಲು ಯೋಚಿಸಿ ಯುದ್ಧರಂಗದಲ್ಲಿ ಒಳಭಾಗದಲ್ಲಿಯೇ ದುರ್ಯೋಧನನನ್ನು ಮುಂದಿಟ್ಟು ಕೊಂಡು ಅವನೊಡನೆ ಅನೇಕರಾಜರ ತಲೆ ಮತ್ತು ಕಪಾಲಗಳ ತಲೆಯೋಡುಗಳಿಂದ ಕಿಕ್ಕಿರಿದಿದ್ದು ಒಬ್ಬೊಬ್ಬರ ಯುದ್ಧರಭಸದಿಂದ ಹೊರಡಿಸಲ್ಪಟ್ಟುದೂ ಸಕಲ ಸಾಮಂತರಾಜರ