ಕಂ|| ಶ್ರೀ ದಯಿತನ ಹರಿಗನ ಸಂ
ಪಾದಿತಭೂಜವೀರ್ಯಮೞ್ಕೞಂ ತನಗೆರ್ದೆಯೊಳ್|
ಚೋದಿಸೆ ಪರಸಿದನಾಶೀ
ರ್ವಾದಪರಂಪರೆಯಿನಾಗಳಂತಕತನಯಂ|| ೧

ಪರಸಿ ಸಕಳಾವನೀತಳ
ಭರಮಿನಸುತನೞಯೆ ಹರಿಗನಿಂದೆನಗೀಗಳ್|
ದೊರೆಕೊಂಡುದೆಂದೊಡೇ ಬಿ
ತ್ತರಿಸಿದನೋ ರಿಪುಕುರಂಗಕಂಠೀರವನಂ|| ೨

ವ|| ಅನ್ನೆಗಮತ್ತ ದುರ್ಯೋಧನನತಿ ಸಂಭ್ರಮಾಕುಳಿತ ಪರೀತ ಪರಿವಾರಜನೋಪನೀತ ಚಂದನಕರ್ಪೂರುಮಿಶ್ರಿತ ಹಿಮಶಿಶಿರಧಾರಾಪರಿಷೇಕದಿಂದೆಂತಾನುಂ ಮೂರ್ಛೆಯಿಂದೆೞ್ಚತ್ತು ಕರ್ಣನಂ ನೆನೆದು ಸ್ಮರಣಮಾತ್ರದೊಳೆ ಶೋಕಸಾಗರಂ ಕರೆಗಣ್ಮೆ ಸೈರಿಸಲಾಱದೆ-

ಉ|| ನೀನುಮಗಲ್ದೆಯಿನ್ನೆನಗೆ ಪೇೞ್ ಪೆಱರಾರೆನಗಾಸೆ ನಿನ್ನನಿ
ನ್ನಾನುಮಗಲ್ವೆನೇ ಕೆಳೆಯ ಬೆನ್ನನೆ ಬಂದಪೆನಾಂತರಂ ಯಮ|
ಸ್ಥಾನಮನೆಯ್ದಿಸುತ್ತಿದುವೆ ದಂದುಗಮೆಂತೆರ್ದೆಮುಟ್ಟಿ ಕೂರ್ತು ಪೇೞು
ಮಾನಸವಾೞನಂಗವಿಷಯಾಪ ನೀಂ ಪೊಱಗಾಗೆ ಬಾೞನೇ|| ೩

ಚಂ|| ಒಡಲೆರಡೊಂದೆ ಜೀವಮಿವರ್ಗೆಂಬುದನೆಂಬುದು ಲೋಕಮೀಗಳಾ
ನುಡಿ ಪುಸಿಯಾಯ್ತು ನಿನ್ನಸು ಕಿರೀಟಯ ಶಾತಶರಂಗಳಿಂದೆ ಪೊ|
ಪೊಡಮೆನಗಿನ್ನು ಮೀಯೊಡಲೊಳಿರ್ದುದು ನಾಣಿಲಿ ಜೀವಮೆಂದೊಡಾ
ವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಮೞ್ಕ ಱುಮಂಗವಲ್ಲಭಾ|| ೪

ಮ|| ಅಱಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನಾ
ನಱವೆಂ ಮುನ್ನಱದಿರ್ದುಮೆನ್ನರಸನಾನೇಕಿತ್ತೆನಿಲ್ಲೇಕೆ ಪೇ
ೞಱಪಲ್ಕೊಲ್ದೆನುಮಿಲ್ಲ ಕಾರ್ಯವಶದಿಂ ಕೂರ್ಪಂತವೋಲ್ ನಿನ್ನನಾಂ
ನೆ ಕೊಂದೆಂ ಮುಳಿಸಿಂದಮಂಗನೃಪತೀ ಕೌಂತೇಯರೇಂ ಕೊಂದರೇ|| ೫

೧. ಜಯಲಕ್ಷ್ಮೀಪತಿಯಾದ ಅರ್ಜುನನು ಸಂಪಾದಿಸಿದ ಭುಜವೀರ್ಯವು ತನ್ನ ಹೃದಯದಲ್ಲಿ ಸಂತೋಷವನ್ನು ಹೆಚ್ಚಿಸುತ್ತಿರಲು ಧರ್ಮರಾಯನು ಆಗ ಅವನನ್ನು ಹರಕೆಯ ಪರಂಪರೆಯಿಂದ ಆಶೀರ್ವದಿಸಿದನು. ೨. ಅರ್ಜುನನಿಂದ ಕರ್ಣನು ಸಾಯಲು ಸಮಸ್ತ ಭೂಮಂಡಲದ ಆಪತ್ಯವು ತನಗೆ ಈಗ ದೊರೆಕೊಂಡಿತೆಂದು ಹೇಳಿ ಧರ್ಮರಾಯನು ಅರ್ಜುನನನ್ನು ವಿಶೇಷವಾಗಿ ಹೊಗಳಿದನು! ವ|| ಅಷ್ಟರಲ್ಲಿ ಆ ಕಡೆ ದುಯೋಧನನು ತನ್ನನ್ನು ಸುತ್ತುವರಿದಿದ್ದು ಅತ್ಯಂತ ಸಂಭ್ರಮದಿಂದ ವ್ಯಾಕುಳಿತರಾದ ಸೇವಕಜನರಿಂದ ತರಲ್ಪಟ್ಟ ಶ್ರೀಗಂಧ ಮತ್ತು ಪಚ್ಚಕರ್ಪೂರ ಮಿಶ್ರಿತವಾದ ಮಂಜಿನಷ್ಟು ತಣ್ಣಗಿರುವ ನೀರಿನಿಂದ ಸಿಂಪಿಸಲ್ಪಟ್ಟು ಹೇಗೋ ಮೂರ್ಛೆಯಿಂದ ಎಚ್ಚೆತ್ತನು. ಕರ್ಣನನ್ನು ಜ್ಞಾಪಿಸಿಕೊಂಡು ನೆನೆಸಿದ ಮಾತ್ರಕ್ಕೆ ದುಖಸಮುದ್ರವು ದಡವನ್ನು ಮೀರಿ ಉಕ್ಕಲು ಸೈರಿಸಲಾರದೆ ೩. ನೀನು ಕೂಡ ನನ್ನನ್ನು ಅಗಲಿ ಹೋದೆ. ನನಗೆ ಆಸೆಯಾಗಿರುವವರು ಬೇರೆ ಯಾರು? ನಿನ್ನನ್ನು ಬಿಟ್ಟು ನಾನು ಇರಬಲ್ಲೆನೆ? ಸ್ನೇಹಿತನೇ ಪ್ರತಿಭಟಿಸಿದವರನ್ನು ಯಮನ ಮನೆಗೆ ಸೇರಿಸುತ್ತ ನಿನ್ನ ಬೆನ್ನಿನ ಹಿಂದೆಯೇ ಬರುತ್ತೇನೆ, ಇದೇ ನನಗಿರುವ ಕರ್ತವ್ಯ. ಹೃದಯದಂತರಾಳದಿಂದ ಪ್ರೀತಿಸಿದ ನೀನು ಅಗಲಿದ ಮೇಲೆ ಕರ್ಣ, ನಾನು ಮನುಷ್ಯ ಜೀವನವನ್ನು ಬಾಳಬಲ್ಲೆನೆ? ೪. ದುಯೋಧನ ಕರ್ಣರಲ್ಲಿ ಎರಡು ಶರೀರ ಒಂದು ಪ್ರಾಣ ಎಂದು ಲೋಕವು ಹೇಳುತ್ತಿದ್ದಿತು. ಈಗ ಆ ಮಾತು ಸುಳ್ಳಾಯಿತು. ನಿನ್ನ ಪ್ರಾಣವು ಅರ್ಜುನನ ಹರಿತವಾದ ಬಾಣಗಳಿಂದ ಹೋದರೂ ನನ್ನ ನಾಚಿಕೆಯಿಲ್ಲದ ಜೀವವು ಇನ್ನೂ ಶರೀರದಲ್ಲಿದೆ ಎಂದರೆ ಕರ್ಣ ನಿನ್ನ ನನ್ನ ಅತಿಶಯವಾದ ಪ್ರೀತಿಯೂ ಸ್ನೇಹವೂ ಆವೆಡೆಯಲ್ಲಿದೆ? ೫. ಧರ್ಮರಾಯನು ನೀನು ಅವನ ಜೊತೆಯಲ್ಲಿ ಹುಟ್ಟಿದವನೆಂಬುದನ್ನು ತಿಳಿಯನು. ಸಹಜವಾಗಿಯೇ ನೀನು ಯಾರೆಂಬುದನ್ನು ನಾನು ಬಲ್ಲೆ; ಮೊದಲು ತಿಳಿದಿದ್ದರೂ ನನ್ನ ದೊರೆತನವನ್ನು ನಾನು ನಿನಗೇಕೆ ಕೊಡಲಿಲ್ಲ? ನಿನಗೆ ತಿಳಿಯಪಡಿಸುವುದಕ್ಕೂ ಇಷ್ಟಪಡಲಿಲ್ಲ? ಸ್ವಕಾರ್ಯಸಾಧನೆಗಾಗಿ ಪ್ರೀತಿಸುವ ಹಾಗೆ (ನಟಿಸಿ) ಪಾಂಡವರ ಮೇಲಿನ ಕೋಪದಿಂದ ನಿನ್ನನ್ನು ನಾನೇ ಕೊಂದೆನು. ಪಾಂಡವರು ನಿನ್ನನ್ನು

ಚಂ|| ಉದತರಂಗತಾಟತಧರಾತಳಮಂ ನಿನಗಿತ್ತು ನಿನ್ನ ಕೊ
ಟ್ಟುದನೆ ಪಸಾದಮೆಂದು ಪೊಡೆವಟ್ಟು ಮನೋಮುದದಿಂದೆ ಕೊಂಡು ಬಾ|
ೞದುವೆ ಬಯಕ್ಕೆ ಮುಂ ನಿನಗದಂ ಕಿಡಿಪಂದೆಲೆ ಕರ್ಣ ಕೇತುವಾ
ದುದು ನಿನಗಾ ವೃಕೋದರನ ಕಾಯ್ಪನೆ ಪೊತ್ತಿಸಿದೆನ್ನ ಕಾಳೆಗಂ|| ೬

ವ|| ಎಂದು ಕರ್ಣನೊಳಾದ ಶೋಕಾನಲನೊಳ್ ಬಾಯೞದು ಮೆಯ್ಮೞದು ಪಳಯಿಸುವ ನಿಜತನೂಜನ ಶೋಕಮನಾೞಸಲೆಂದು ಧೃತರಾಷ್ಟ್ರನುಂ ಗಾಂಧಾರಿಯುಂ ಬರೆವರೆ ಬರವಂ ಗೆಂಟೞಳ್ ಕಂಡು ದುಶ್ಯಾಸನನ ಸಾವಂ ನೆನೆದು ತಾಯ್ತಂದೆಯ ಮೊಗಮಂ ನೋಡಲ್ ನಾಣ್ಚಿ-

ಕಂ|| ಆನುಂ ದುಶ್ಯಾಸನನುಂ
ಕಾನೀನನುಮೊಡನೆ ಪೋಗಿ ಬೀೞ್ಕೊಂಡು ರಣ|
ಸ್ಥಾನಕ್ಕೆ ಪೋದೆವಿಮ್ಮಗು
ೞ್ದೆನೆಂದಾಂ ನಾಣ್ಚದಿವರ ಮೊಗಮಂ ನೋೞ್ಪೆಂ || ೭

ಚಂ|| ಪವನಜನಂತು ಪೂಣ್ದು ಯುವರಾಜನ ನೆತ್ತರನಾರ್ದು ಪೀರ್ದನಿಂ
ತವಗಡದಿಂ ದಿನೇಶಜನನಂಕದ ಗಾಂಡಿವಿ ಕೊಂದನೆಂತು ಪಾಂ|
ಡವರನಿದಿರ್ಚಿ ಸಾಸುವೆ ಸಂಯನೊಲ್ವುದೆ ಕಜ್ಜಮೀಗಳೆಂ
ಬವರ್ಗಳ ಮಾತುಗೇಳ್ವನಿತನಿನ್ನೆನಗಂ ಬಿದಿ ಮಾಡಿತಾಗದೇ|| ೮

ವ|| ಎಂಬೆನ್ನಗಮೆಯ್ದೆ ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ ನಾದನನಿರ್ವರುಂ ಪರಸಿ ತಡವರಿಸಿಯುಂ ತೆಬ್ಬರಿಸಿಯುಮೞ್ಕಳಪ್ಪಿಕೊಂಡಮೃತವರ್ಷಿ ಕರ ಪರಿಷೇಕದಿಂದೆ ಪುತ್ರಸ್ಪರ್ಶನಮಾಪ್ಯಾಯನಕೋಟಯಾಗೆ ಪುಳಕಿತಗಾತ್ರರುಮಾನಂದ ಬಾಷ್ಟವಾರಿ ಧಾರಾಪರಿಕಲಿತನೇತ್ರರುಮಾಗಿ ಕಿಱದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ ಕೇಳಲೆಂದು ಮಹೀಭುಜನಿಂತೆಂದಂ-

ಮ|| ಎನಗಂ ಪಾಂಡುಗಮಿಲ್ಲ ಭೇದಮೆಳೆಯಂ ಪಚ್ಚಾಳ್ವಮಾ ಪಾಂಡುನಂ
ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ|
ಮುನಿವೈ ಗಂಗೆಯ ಪೆರ್ಮಗಂಗೆ ಘಟಸಂಭೂತಂಗೆ ಕರ್ಣಂಗಸಾ
ಧ್ಯನೊಳಾ ಗಾಂಡಿವಿಯೊಳ್ ಕಱುತ್ತಿಱವರಾರಿಂ ಮಾಡುವಂ ಸಂಯಂ|| ೯

ಕೊಂದರೇನು? ೬. ಸಮುದ್ರದ ಅಲೆಗಳ ಹೊಡೆತವುಳ್ಳ ಈ ಭೂಮಂಡಲವನ್ನು ನಿನಗೆ ಕೊಟ್ಟು ನೀನು ಕೊಟ್ಟುದನ್ನೇ ಪ್ರಸಾದವೆಂದು ನಮಸ್ಕರಿಸಿ ಮನಸ್ಸಂತೋಷದಿಂದ ಸ್ವೀಕರಿಸಿ ಬಾಳಬೇಕೆಂಬುದೇ ನನ್ನ ಮೊದಲಿನ ಆಸೆ. ನನಗೆ ಅದನ್ನು ಕೆಡಿಸಬೇಕೆಂದೇ ಭೀಮನ ಕೋಪವನ್ನು ಹೆಚ್ಚಿಸಿದ ನನ್ನ ಯುದ್ಧವು ನಿನಗೆ (ನಾಶಮಾಡುವ) ಧೂಮಕೇತುವಾಯಿತು. ವ|| ಹೀಗೆ ದುಖ ಪಡುತ್ತಿದ್ದ ಮಗನ ದುಖವನ್ನು ಸಮಾಧಾನಪಡಿಸಬೇಕೆಂಬದು ಧೃತರಾಷ್ಟ್ರನೂ ಗಾಂಧಾರಿಯೂ ಬರುತ್ತಿರುವುದನ್ನು ದೂರದಿಂದಲೇ ತಿಳಿದು ದುಶ್ಯಾಸನನ ಸಾವನ್ನು ನೆನೆದು ತಾಯಿತಂದೆಗಳ ಬರವನ್ನು ನೋಡಲು ನಾಚಿ ೭. ನಾನೂ ದುಶ್ಯಾಸನನೂ ಕರ್ಣನೂ ಜೊತೆಯಲ್ಲಿ ಹೋಗಿ ಅಪ್ಪಣೆ ಪಡೆದು ಯುದ್ಧರಂಗಕ್ಕೆ ಹೋದೆವು. ಈಗ ನಾನು ಇನ್ನೇನೆಂದು ಹೇಳಿ ನಾಚದೆ ಇವರ ಮುಖವನ್ನು ನೋಡಲಿ? ೮. ಭೀಮನು ಹಾಗೆ ಪ್ರತಿಜ್ಞೆ ಮಾಡಿ ಯುವರಾಜನು ರಕ್ತವನ್ನು ಆರ್ಭಟಮಾಡಿ ಕುಡಿದನು. ಹೀಗೆ ಸಾಹಸದಿಂದ ಕರ್ಣನನ್ನು ಶೂರನಾದ ಅರ್ಜುನನು ಕೊಂದನು. ಪಾಂಡವರನ್ನು ಹೇಗೆ ಎದುರಿಸಿ ಗೆಲ್ಲುತ್ತೀಯೇ? ಈಗ ಸಂಗೆ ಒಪ್ಪುವುದೇ (ಸರಿಯಾದ) ಕಾರ್ಯವೆಂದು ಹೇಳುವವರ ಮಾತನ್ನು ಕೇಳುವಷ್ಟನ್ನು ಇನ್ನು ನನಗೆ ವಿ ಮಾಡಿದೆಯಲ್ಲವೇ? ವ|| ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಾಯಿ ತಂದೆಗಳ ಪಾದಕ್ಕೆ ವಿನಯದಿಂದ ತಲೆಬಗ್ಗಿಸಿ ನಮಸ್ಕಾರಮಾಡಿದವನನ್ನು ಇಬ್ಬರೂ ಹರಿಸಿದರು. ಮೈಯನ್ನು ಮುಟ್ಟಿನೋಡಿಯೂ ಸಮಾಧಾನಮಾಡಿಯೂ ಪ್ರೀತಿಯಿಂದ ಆಲಿಂಗನಮಾಡಿಕೊಂಡರು. ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಶವು ಹೆಚ್ಚಿನ ಸಂತೋಷವನ್ನುಂಟುಮಾಡಿತು. ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ ಕಣ್ಣೀರಿನ ಪ್ರವಾಹದಿಂದ ತುಂಬಿದ ಕಣ್ಣುಳ್ಳವರೂ ಆದರೂ ಸ್ವಲ್ಪ ಕಾಲವಿದ್ದು ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ದೃತರಾಷ್ಟ್ರನು ಹೀಗೆಂದನು.

೯. ನನಗೂ ಪಾಂಡುವಿಗೂ ಭೇದವಿಲ್ಲ; ರಾಜ್ಯವನ್ನು ಭಾಗಮಾಡಿಕೊಂಡು ಆಳೋಣ. ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿ ನಡೆದುಕೊಳ್ಳುವವರೇ ಆಗಿದ್ದಾರೆ. ಈ ಜಗಳವೂ ನಿನ್ನಿಂದ ಆಯಿತು ಎಂದರೆ ಇನ್ನು ನೀನು ಕೋಪಿಸಿಕೊಳ್ಳುತ್ತೀಯೆ. ಭೀಷ್ಮ ದ್ರೋಣ

ಹರಿಣಿ|| ಪಗೆಗೆ ಕಣಿಯೊಂದುಂಟೇ ನಣ್ಪಿಂಗಮಾಗರಮುಂಟೆ ನೀಂ
ಬಗೆಯ ಪಗೆಯುಂ ನಣ್ಪುಂ ಕೆಯ್ಕೊಂಡ ಕಜ್ಜದಿನಲ್ತೆ ಪು|
ಟ್ಟುಗುಮರಸುಗಳ್ಗೆಂದೀ ಸಂದರ್ಥಶಾಸ್ತ್ರದೊಳೇಕೆ ಪೇೞ್
ಮಗನೆ ನೆಗ  ಕಾರ್ಯಂ ಮಿತ್ರಾದಿ ಕಾರಕಮೆಂಬುದಂ|| ೧೦

ಕಂ|| ನೀನುಳ್ಳೊಡೆಲ್ಲರೊಳರೆಮ
ಗೇನುಮೞಲ್ ಮನದೊಳಿಲ್ಲದೆಂತೆನೆ ಮಗನೇ|
ಭಾನುವೆ ಸಾಲದೆ ಪಗಲೆನಿ
ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ|| ೧೧

ವ|| ಅದಲ್ಲದೆಯುಂ ಪಾಂಡವರಪ್ಪೊಡೆನಗೆ ಪಾಂಡುರಾಜಂಗೆ ಬೆಸಕೆಯ್ಯದುದನೆ ಬೆಸಕೆಯ್ವರೆಂದುದಂಮೀಱುವರಲ್ಲರವರ ನಾನೆಂತುಮೊಡಂಬಡಿಹಸಿ ನೀನೆಂದುದನೆನಿಸುವೆನಿದರ್ಕೆ ಮಾರ್ಕೊಳ್ಳದೊಡಂಬಡು ನಿನ್ನಂ ಕೆಯ್ಯನೊಡ್ಡಿ ಬೇಡಿದಪ್ಪೆನೆಂದ ಧ್ವತರಾಷ್ಟ್ರನ ನುಡಿಗನುಬಲಮಾಗಿ ಗಾಂಧಾರಿಯಿಂತೆಂದಳ್-

ಚಂ|| ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ
ಧುರೆಮೆ ಕಱುತ್ತು ಪಾಯೆ ಪಡಲಿಟ್ಟವೊಲಾದುದು ಪುಣ್ಯದೊಂದು ಪೆ|
ರ್ವರನುೞವಂತೆ ನೀನುೞದೆಯೆನ್ನಿವನ್ನರುಮಿಲ್ಲ ಮುತ್ತರುಂ
ಕುರುಡರುಮೆನ್ನದೆಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್|| ೧೨

ಕಂ|| ಪೋಕಿನಿತಳಸವಸದಿಂ
ದೀ ಕಲಹಂ ಧರ್ಮಸುತನನಾಂ ನಿನಗೆ ನಿರಾ|
ಪೇಕಮೊಡಂಬಡಿಸುವೆನಿಂ
ತೀ ಕಜ್ಜಂ ಕೂರ್ಪೇಡೆನಗೆ ಕೆಯ್ಕೊಳ್ ಮಗನೆ|| ೧೩

ವ|| ಎಂದನುಬಂಸಿದ ಮೋಹಪಾಶದೊಳ್ ತಾಯ್ತಂದೆಯ ನುಡಿದ ನುಡಿಯಂ ಕೇಳ್ದಭಿಮಾನಧನಂ ಸುಯೋಧನನಿಂತೆಂದಂ-

ಉ|| ದೋಷಮೆ ನಿಮ್ಮ ಪೇೞ್ದುದೆನಗೆಂತುಮೊಡಂಬಡಲಪ್ಪುದೊಂದೆ ದು
ಶ್ಯಾಸನ ರಕ್ತಪಾನದೊಳೆ ಸೊರ್ಕಿದ ಪಾತಕನಂ ಪೊರಳ್ಚಿ ಕೊಂ|
ದೀ ಸಮರಾವನೀತಳದೊಳಿಂ ಬಲಿಗೆಯ್ಜಿನಮೊಲ್ಲೆನಲ್ತೆ ನಿ
ರ್ದೋಷಿಗಳೊಳ್ ಪೃಥಾಸುತರೊಳಿಂ ಮಗುೞ್ದ್ದುಂ ಪುದುವಾೞನೆಂಬೆನೇ|| ೧೪

 

ಕರ್ಣರಿಗೆ ಅಸಾಧ್ಯವಾದ ಆ ಅರ್ಜುನನನ್ನು ಕೋಪದಿಂದ ಎದುರಿಸಿ ಯುದ್ಧ ಮಾಡುವವರಾರಿದ್ದಾರೆ? ಇನ್ನು ಸಂಯನ್ನು ಅವರೊಂದಿಗೆ ಮಾಡಿಕೊಳ್ಳೋಣ. ೧೦. ಹಗೆತನಕ್ಕೆ ಒಂದು ಗಣಿಯಿದೆಯೇನು? ಸ್ನೇಹಕ್ಕೆ ಒಂದು ಮನೆಯಿದೆಯೇನು? ನೀನು ಯೋಚಿಸಪ್ಪ; ರಾಗದ್ವೇಷಗಳೆರಡೂ ಅವರು ಅಂಗೀಕರಿಸುವ ಕಾರ್ಯ ದಿಂದಲ್ಲವೇ ಹುಟ್ಟುವುದು? ರಾಜರಿಗೆ ವಿಶೇಷ ಸತ್ಯವಾಗಿರುವ ಅರ್ಥಶಾಸ್ತ್ರದಲ್ಲಿ ಹೇಳಿರುವ ‘ಕಾರ್ಯವೇ ಸ್ನೇಹದ್ವೇಷಗಳಿಗೆ ಕಾರಣವಾದುದು’ ಎಂಬ ಈ ನೀತಿವಾಕ್ಯದಂತೇಕೆ ಮಾಡುವುದಿಲ್ಲ? ೧೧. ಮಗನೆ ನಮಗೆ ನೀನಿದ್ದರೆ ಎಲ್ಲರೂ ಇದ್ದಂತೆಯೇ. ಮಗನೆ ನಮಗೆ ಮನಸ್ಸಿನಲ್ಲಿ ಯಾವ ದುಖವೂ ಇಲ್ಲ; ಹೇಗೆಂದರೆ ಹಗಲಿನಲ್ಲಿ ಒಬ್ಬ ಸೂರ್ಯನಿದ್ದರೆ ಸಾಲದೇ? ಎಷ್ಟೋ ದೀವಿಗೆಗಳು ಉರಿದರೇನು, ಆರಿಹೋದರೇನು? ವ|| ಹಾಗಲ್ಲದೆಯೂ ಪಾಂಡವರಾದರೆ ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಮೀರುವವರಲ್ಲ. ಅವರನ್ನು ನಾನು ಹೇಗೊ ಒಪ್ಪಿಸಿ ನೀನು ಹೇಳುದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುತ್ತೇನೆ. ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ; ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ ಧೃತರಾಷ್ಟ್ರನ ಮಾತಿಗೆ ಸಹಾಯಕವಾಗಿ (ಬೆಂಬಲವಾಗಿ) ಗಾಂಧಾರಿ ಹೀಗೆಂದಳು. ೧೨. ಕುರುಕುಲವೆಂಬ ನಂದನವನವು ಭೀಮನೆಂಬ ಮದ್ದಾನೆಯು ಕೋಪದಿಂದ ನುಗ್ಗಲು ಧ್ವಂಸವಾಯಿತು. ನಮ್ಮಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವ ಹಾಗೆ ನೀನು ಉಳಿದಿದ್ದೀಯೆ. ಇನ್ನು ಯುದ್ಧಮಾಡುವವರಾರೂ ಇಲ್ಲ. ಮುದುಕರು ಕುರುಡರು ಎನ್ನದೆ ನಮ್ಮ ಮಾತನ್ನು ಕೇಳು; ಯೋಚಿಸು; ತಂದೆಯು ಹೇಳುವುದಕ್ಕೆ ಒಪ್ಪು. ೧೩. ಈ ಜಗಳವು ಇಷ್ಟಕ್ಕೇ ಬೇಗ ನಿಲ್ಲಲಿ. ಧರ್ಮರಾಜನನ್ನು ಆಕ್ಷೇಪಣೆಯೇ ಇಲ್ಲದೆ ಒಡಂಬಡುವ ಹಾಗೆ ಮಾಡುತ್ತೇನೆ. ನನ್ನನ್ನು ನೀನು ಪ್ರೀತಿಸುವುದಾದರೆ ಈ ಕಾರ್ಯವನ್ನು ನೀನು ಅಂಗೀಕಾರಮಾಡು ವ|| ಎಂದು ಮೋಹಪಾಶದಿಂದ ಬಂತರಾದ ತಾಯಿತಂದೆಯರು ನುಡಿದ ನುಡಿಯನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಹೀಗೆಂದನು- ೧೪. ನೀವು ಹೇಳಿದುದು ನನಗೆ ದೋಷವೇನಲ್ಲ ಹೇಗೂ ಒಡಂಬಡತಕ್ಕುದೇ ಆದರೆ ಒಂದು ವಿಚಾರ ಮಾತ್ರ. ದುಶ್ಯಾಸನ ರಕ್ತಪಾನದಿಂದ ಸೊಕ್ಕಿರುವ ಶ್ರೀಮ

ವ|| ಎಂಬುದುಮಂಧಮಹೀಪತಿ ನೀನಿದಾವುದು ಮಾತಾಗಿ ನುಡಿವೈ-

ಕಂ|| ಅನುಜರ್ ನಾಲ್ವರುಮಂ ಧ
ರ್ಮನಂದನಂ ವೇಳೆಗೊಂಡು ಕಾವಂ ಪೊಣರ್ದಾ|
ವನುವರದೊಳಮೆನೆ ಪೇೞ್ ಪವ
ನನಂದನಂಗೞವು ಪೊಣರೆ ತಾಂ ಬೞ್ದಪನೇ|| ೧೫

ಎನೆ ನೃಪನೆಂದಂ ಧರ್ಮಜ
ನನುಜರ್ಕಳೊಳೊರ್ವನೞದೊಡೊಡನೞವ ಸುಯೋ|
ಧನನಲ್ಲಿ ನೂರ್ವರುಂ ತ
ನ್ನನುಜರ್ಕಳ್ ಸಾಯೆ ಬಾೞ್ವುದಂ ನಂಬಿದಿರೇ|| ೧೬

ವ|| ಎಂದು ಮತ್ರಂ ಸಂಯೋಧನನಿಂತೆಂದಂ-

ಮ|| ತಲೆದೋಱಲ್ಕಣಮಳ್ಕಿ ವೈರಿ ನೆಲನಂ ಪೋ ಪೊಕ್ಕನೆಂಬನ್ನೆಗಂ
ಚಲದಿಂದೆಯ್ದುವ ಕರ್ಣನುಗ್ರರಥಮಂ ಮುಂ ನುಂಗಿದೀ ದ್ರೋಹಿಯೊಳ್|
ನೆಲದೊಳ್ ಪಂಬಲೆ ಮತ್ತಮೆನ್ನ ಮುಳಿಸಿಂಗಾಂ ಕಾದುವೆಂ ಪೇಸಿದೆಂ
ನೆಲೆಗಂಡಂತೆ ನೆಲಕ್ಕೆ ಗೆಲ್ದೊಡಮದಂ ಚಿ ಮತ್ತಮಾನಾಳ್ವೆನೇ|| ೧೭

ವ|| ಅಂತುಮಲ್ಲದೆಯುಂ

ಚಂ|| ತೊಡರದೆ ನೀಮುಮಾ ನೆಗೞ್ದ ಪಾಂಡುವುಮೊಂದಿಯೆ ಬೞರೊಂದೊಡಂ
ಬಡು ನಿಮಗಿಲ್ಲ ಜೂದೆ ನೆವಮಾಗಿರೆ ಮೂಲಿಗನಾದೆನಾನೆ ಪೂ|
ಣ್ದಿಡುವಗೆಗೆನ್ನೊಳಾದ ಕಿಸುರೆನ್ನೊಡವೋಪುದಿದೊಳ್ಳಿತೆನ್ನ ಪಿಂ
ಬಡಿನೊಳೆ ನಣ್ಪಿನಯ್ಯ ನಿಮಗಂ ಮಗನಲ್ಲನೆ ಧರ್ಮನಂದನಂ|| ೧೮

ಉ|| ತಪ್ಪದು ಕರ್ಣನಿಂ ಬೞಕೆ ಸಂಯ ಮಾತೆನಗಾತನಿಲ್ಲದೆಂ
ತಪ್ಪುದೊ ರಾಜ್ಯಮೀ ಗದೆಯುಮೀ ಭುಜದಂಡಮುಮುಳ್ಳಿನಂ ಕೊನ|
ರ್ತಪ್ಪುದೆ ಪೇೞಮೆನ್ನ ಪಗೆ ನೋವಱದಂಜುವುದೇಕೆ ನಿಂದರೇಂ
ತಪ್ಪುದೊ ಪೇೞಮಯ್ಯ ನೊಸಲೊಳ್ ಬರೆದಕ್ಕರಮಾ ವಿಧಾತ್ರನಾ|| ೧೯

ಪಾಪಿಯಾದ ಭೀಮನನ್ನು ಹೊರಳಿಸಿ ಕೊಂದು ಈ ಯುದ್ಧರಂಗದಲ್ಲಿ ಬಲಿಯಿಕ್ಕುವವರೆಗೆ ಒಪ್ಪುಲಾರೆ. ನಿರ್ದೋಷಿಗಳಾದ ಪೃಥೆಯ ಮಕ್ಕಳಲ್ಲಿ ಪುನ ಕೂಡಿ ಬದುಕುವುದಿಲ್ಲವೆನ್ನುತ್ತೇನೆಯೇ ವ|| ಎನ್ನಲು ಕುರುಡುರಾಜನಾದ ದೃತರಾಷ್ಟ್ರನು (ದುರ್ಯೋಧನನನ್ನು ಕುರಿತು) ಇದು ಯಾವ ಮಾತೆಂದು ನುಡಿಯುತ್ತಿದ್ದೀಯೆ? ೧೫. ಧರ್ಮರಾಜನು ತನ್ನ ನಾಲ್ಕು ಜನ ತಮ್ಮಂದಿರಲ್ಲಿ ಯಾವ ಯುದ್ಧದಲ್ಲಾದರೂ ಯಾರೊಬ್ಬರು ಸತ್ತರೂ ತಾನೂ ಸಾಯುತ್ತೇನೆಂದು ಪ್ರತಿಜ್ಞೆಮಾಡಿ ರಕ್ಷಿಸುತ್ತಿರುವಾಗ ಭೀಮನಿಗೆ ನಾಶವುಂಟಾದರೆ ತಾನು ಬದುಕುತ್ತಾನೆಯೇ? ೧೬. ಎನ್ನಲು ದುರ್ಯೋಧನನೆಂದನು. ತಮ್ಮಂದಿರು ನಾಲ್ವರಲ್ಲಿ ಒಬ್ಬನು ಸತ್ತರೂ ಜೊತೆಯಲ್ಲಿಯೇ ಧರ್ಮರಾಯನು ಸಾಯುತ್ತಾನೆ. ದುಯೋಧನನು ಮಾತ್ರ ತನ್ನ ತಮ್ಮಂದಿರು ನೂರುಜನವೂ ಸತ್ತಿರುವಾಗ ಅವನು ಬದುಕುತ್ತಾನೆಂದು ನಂಬಿದಿರೇನು? ವ|| ಎಂದು ಪುನ ದುರ್ಯೋಧನನು ಹೀಗೆಂದನು -೧೭. ವೈರಿಯು ಕಾಣಿಸಿಕೊಂಡು ಎದುರಾಗುವುದಕ್ಕೆ ಹೆದರಿ ತನ್ನ ನೆಲವನ್ನು, ಛೀ ಹೋಗಿ ಹೊಕ್ಕನು ಎಂದು ಹೇಳುವಷ್ಟರಲ್ಲಿಯೇ ಛಲದಿಂದ ಬರುತ್ತಿದ್ದ ಕರ್ಣನ ಭಯಂಕರವಾದ ತೇರನ್ನು ಮೊದಲೇ ನುಂಗಿದ ಈ ದ್ರೋಹಿಯಾದ ಭೂಮಿಯಲ್ಲಿ ಪುನ ಹಂಬಲೇ? ನನ್ನ ಕೋಪಕ್ಕಾಗಿ ನಾನು ಕಾದುತ್ತಿದ್ದೇನೆ. (ಇದು ಅಶಾಶ್ವತ ಎಂಬ) ವಾಸ್ತವಾಂಶವನ್ನು ತಿಳಿದೇ ಈ ನೆಲಕ್ಕೆ ಹೇಸಿದ್ದೇನೆ. ಗೆದ್ದರೂ ಛಿ ಪುನ ನಾನು ಅದನ್ನು ಆಳುತ್ತೇನೆಯೇ? -ವ|| ಹಾಗಲ್ಲದೆಯೂ ೧೮. ನೀವೂ ಆ ಪಾಂಡವರೂ ಯಾವ ವೈಮನಸ್ಯವೂ ಇಲ್ಲದೆ ಹೊಂದಿಕೊಂಡೆ ಬಾಳಿದಿರಿ. ನಿಮಗೆ ಒಂದು ಅಸಮಾಧಾನವೂ ಇಲ್ಲ. ಜೂಜೇ ಕಾರಣವಾಗಲು ಈ ಪ್ರತಿಜ್ಞೆಮಾಡಿದ ಬದ್ದದ್ವೇಷಕ್ಕೆ ನಾನೇ ಮೊದಲಿಗನಾದೆ. ನನ್ನಲ್ಲಿ ಹುಟ್ಟಿದ ಈ ಜಗಳವು ನನ್ನ ಜೊತೆಯಲ್ಲಿಯೇ ಹೋಗುವುದು ಒಳ್ಳೆಯದು. ನನ್ನ ಹಿಂದುಗಡೆ (ನಾನು ಸತ್ತ ಬಳಿಕ) ಅಪ್ಪಾ ಧರ್ಮರಾಯನೂ ನಿಮಗೆ ಮಗನಲ್ಲವೇ? (ನೀವು ಅವನೊಡನೆ ಸುಖವಾಗಿ ಬಾಳಬಹುದು) ೧೯. ಕರ್ಣನಾಗಿ ಹೋದಮೇಲೆ ಸಂಯ ಮಾತು ತಪ್ಪು (ನನಗೆ ದೋಷಯುಕ್ತವಾದುದು) ಅವನಿಲ್ಲದೆ ನನಗೆ ರಾಜ್ಯವು ಹೇಗಾಗುತ್ತದೆ? ಈ ಗದೆಯೂ ಬಾಹುದಂಡವೂ ಇರುವವರೆಗೆ ನನ್ನ ಶತ್ರುವು ಚಿಗುರಿಕೊಳ್ಳುತ್ತಾನೇಯೇ, ದುಖವನ್ನು ಅನುಭವಿಸಿಯಾವ ಮೇಲೆಯೂ ಹೆದರುವುದೇಕೆ?

ಮ|| ಸ್ರ|| ನರನಂ ಮುಂ ಕೊಲ್ವೆನಾಂ ಕರ್ಣನನೞದುದಱಂ ಕೊಲ್ವೆನಾ ಭೀಮನಂ ಸಂ
ಗರದೊಳ್ ಸೀಳ್ದೊಟ್ಟಿ ದುಶ್ಸಾಸನನೞಲನದಂ ನೀಗುವೆಂ ಪೋಕುಮಂತಿ|
ರ್ವರುಮಂ ಕೊಂದಂದು ಮೇಣಾನವರಿದಿರಿರೊಳ್ ಕಾದಿ ಸತ್ತಂದು ಮೇಣ್ ವಿ
ಸುರಿತಂ ಮತ್ಕೋಪಮುಂ ನಿಮ್ಮಡಿಯುಮನಿದೆ ಬೀೞ್ಕೊಂಡೆನಿಂ ಪೋಗಿ ಮೇೞಂ|| ೨೦

ವ|| ಎಂದು ತಾಯ್ಗಂ ತಂದೆಗಮೆಱಗಿ ಪೊಡೆವಟ್ಟು ಪೋಗಲ್ವೇೞ್ದು ಸಂಸಾರಾಸಾರಸತೆಯ ನಱದನುಂ ಮಹಾಸತ್ತ್ವನುಮಪ್ಪುದಱಂ ತನ್ನಂ ತಾನೆ ಸಂತೈಸಿಯುಂ ಚೇತರಿಸಿಯುಂ ಮಜ್ಜನ ಭೋಜನಾನುಲೇಪನ ತಾಂಬೂಲಾದಿಗಳೊಳ್ ಮಹಾಹವ ಖೇದಮುಮಂ ಮನಖೇದಮುಮ ನಾಱಸಿ ಮಂತ್ರಶಾಲಾಂತಸ್ಥಿತ ಕನಕವಿಷ್ಟರಾರೂಢನಾಗಿ ಶಲ್ಯ ಶಕುನಿ ಕೃಪ ಕೃತವರ್ಮಾಶ್ವತ್ಥಾಮ ಪ್ರಧಾನ ವೀರಪುರುಷರಂ ಬರಿಸಿ ಯಥೋಚಿತಪ್ರತಿಪತ್ತಿಗಳೊಳಿರಿಸಿ ಪೇೞಮಿನ್ನೆಮ್ಮಗೆಯ್ವ ನಿಯೋಗಮೇನೆನೆ ಶಾರದ್ವತನಿಂತೆಂದಂ-

ಉ|| ಸಂಗತ ನೀತಿಶಾಸ್ತ್ರವಿದರಪ್ಪರವಂದಿರ ತಮ್ಮ ತಮ್ಮ ಕ
ಜ್ವಂಗಳ ಮೆಯ್ಗಳೊಳ್ ಪುಸಿದದಂ ಕಡುನನ್ನಿಯೆ ಮಾಡಿ ತೋರ್ಪರು|
ತ್ತುಂಗ ಸುಸೂಕ್ಷ್ಮಪಾರ್ಶ್ವಕೃಶ ಕೋಮಳ ನಿಮ್ನ ಘನೋನ್ನತ ಪ್ರದೇ
ಶಂಗಳನಾ ಸಮಾನತಳದಲ್ಲಿಯೆ ಚಿತ್ರಕನೆಯ್ದೆ ತೋರ್ಪವೋಲ್|| ೨೧

ವ|| ಅದಱನೆಂತಪ್ಪ ಬುದ್ಧಿಯೊಡೆಯರ ಪೇೞ್ವಸಾಮಾನ್ಯಮಪ್ಪುಪಾಯಂಗಳುಂ ನಿನಗೆ ದೈವಂ ವಿಮುಖಮಪ್ಪುವಱಂದಪಾಯಂ ಬಹುಳವಾಗಿ ಬಂದುದಾಱುಂ ಗುಣಂಗಳನೆ ತಂದುವು ಮೌಲ ಭೃತ್ಯ ಸುಹೃತ್ ಶ್ರೇಣಿ ಮಿತ್ರಾಟವಿಕತಂತ್ರಂಗಳ್ ಪಣ್ಣಿದ ಜಂತ್ರಂಗಳಂತೆ ಕೞಕುೞ ಮಾದುವಾರ್ಗಮಭೇದ್ಯರುಮಸಾಧ್ಯರುಮಪ್ಪಯೋನಿಸಂಭವರೆ ಹೇಳಸಾಧ್ಯರಾದವರು ಕಾರಣದಿಂ-

ಹರಿಣಿ|| ಅೞದರಕರ್ ಭೀಷ್ಮದ್ರೋಣಾಂಗನಾಯಕರೀಗಳಿ
ನ್ನುೞದರವರಿಂ ಮೇಲೆಂಬನ್ನರ್ ಮಹಾರಥರಲ್ತೆ ಮುಂ|
ಕೞದುದಳೇಂ ನಷ್ಟಂ ನಷ್ಟಂ ಮೃತಂ ಮೃತಮೆಂಬುದಿ
ನ್ನೞದಿಲಿದೇಕಿಲ್ಲಿಂ ಮೇಲಪ್ಪುದಂ ಬಗೆ ಭೂಪತೀ|| ೨೨

ಅಪ್ಪಾ ಯುದ್ಧವನ್ನು ನಿಲ್ಲಿಸಿದರೂ ಬ್ರಹ್ಮನು ಹಣೆಯಲ್ಲಿ ಬರೆದ ಅಕ್ಷರ ತಪ್ಪುತ್ತದೆಯೇ ಏನು? ೨೦. ಕರ್ಣನನ್ನು ಸಾಯಿಸಿದುದರಿಂದ ಆರ್ಜುನನನ್ನು ಮೊದಲು ಕೊಲ್ಲುತ್ತೇನೆ. ಆ ಭೀಮನನ್ನು ಯುದ್ಧದ್ಲಲಿ ಸೀಳಿ ರಾಶಿ ಹಾಕಿ ದುಶ್ಯಾಸನನ ದುಖವನ್ನು ಪರಿಹಾರಮಾಡಿಕೊಳ್ಳುತ್ತೇನೆ. ಹಾಗೆ ಅವರಿಬ್ಬರನ್ನು ಕೊಂದ ದಿನ ಅಥವಾ ನಾನು ಅವರೆದುರಿಗೆ ಕಾದಿ ಸತ್ತ ದಿನ ನನ್ನ ಉರಿಯುತ್ತಿರುವ ಕೋಪವು ಶಮನವಾಗುತ್ತದೆ. ನಿಮ್ಮ ಪಾದಗಳನ್ನು ಬೀಳ್ಕೊಂಡೆನು (ದಯಮಾಡಿ) ಇನ್ನು ನೀವು ಹೋಗಿಏಳಿ. ವ|| ಎಂದು ತಾಯಿಗೂ ತಂದೆಗೂ ನಮಸ್ಕಾರ ಮಾಡಿ ಹೋಗಹೇಳಿ ಸಂಸಾರದ ಅಸಾರತೆಯನ್ನು ತಿಳಿದವನೂ ಮಹಾಸತ್ವನೂ ಆದುದರಿಂದ ತಾನೇ ತನ್ನನ್ನು ಸಮಾಧಾನಮಾಡಿಕೊಂಡೂ ಚೇತರಿಸಿಕೊಂಡು. ಸ್ನಾನ, ಊಟ, ಗಂಧ, ತಾಂಬೂಲ ಮೊದಲಾದವುಗಳಿಂದ ಮಹಾಯುದ್ಧದ ಆಯಾಸವನ್ನೂ ಮನಸ್ಸಿನ ದುಖವನ್ನೂ ಹೋಗಲಾಡಿಸಿಕೊಂಡನು. ಮಂತ್ರಶಾಲೆಯ ಒಳಗಿರುವ ಚಿನ್ನದ ಪೀಠದ ಮೇಲೆ ಕುಳಿತು ಶಬ್ದ, ಶಕುನಿ, ಕೃಪ, ಕೃತವರ್ಮ, ಅಶ್ವತ್ಥಾಮರೇ ಮೊದಲಾದ ಮುಖ್ಯ ವೀರಪುರುಷರನ್ನು ಬರಮಾಡಿ ಯಥೋಚಿತವಾದ ಸತ್ಕಾರಗಳನ್ನು ಮಾಡಿ ‘ನಾವು ಇನ್ನು ಮಾಡಬೇಕಾದ ಕಾರ್ಯವೇನೆಂದು ಹೇಳಿ’ ಎನ್ನಲು ಕೃಪನು ಹೀಗೆಂದು ಹೇಳಿದನು. ೨೧. ಚಿತ್ರವನ್ನು ಬರೆಯುವವನು ಅತಿ ಎತ್ತರವಾದ, ಅತಿಸೂಕ್ಷ್ಮವಾದ, ಪಕ್ಕದಲ್ಲಿರುವ ತೆಳ್ಳಗಿರುವ, ಕೋಮಲವಾಗಿರುವ, ತಗ್ಗಾಗಿರುವ, ದಪ್ಪವಾಗಿರುವ, ಉನ್ನತವಾಗಿರುವ ಪ್ರದೇಶಗಳನ್ನು (ತಾವು ಬರೆಯುವ) ಪಟದ (ಚಿತ್ರದ) ಸಮ ಪ್ರದೇಶದಲ್ಲಿಯೇ ತೋರಿಸುವ ಹಾಗೆ ಚೆನ್ನಾಗಿ ನೀತಿಶಾಸ್ತ್ರವನ್ನು ತಿಳಿದವರು ತಮ್ಮ ತಮ್ಮ ಕಾರ್ಯಗಳ ವಿಷಯದಲ್ಲಿ ಸುಳ್ಳಾದುದನ್ನೂ ಪೂರ್ಣ ಸತ್ಯವನ್ನಾಗಿಯೇ ಮಾಡಿ ತೋರಿಸುವರು. ವ|| ಆದುದರಿಂದ ಎಂತಹ ಬುದ್ಧಿವಂತರಾದವರೂ ಹೇಳುವ ಸಾಮಾನ್ಯವಾದ ಉಪಾಯಗಳೂ ನಿನಗೆ ದೈವ ವ್ಯತ್ಯಾಸವಾಗಿರುವುದರಿಂದ ವಿಶೇಷ ಅಪಾಯಕಾರಿಯಾದ ರಾಜ ಸಂ ವಿಗ್ರಹಯಾನ, ಆಸನ, ಸಂಶಯ, ದ್ವೆ ಭಾವ ಎಂಬ ಆರು ಗುಣಗಳನ್ನೇ ಉಂಟುಮಾಡಿದವು. ಮೌಲ, ಭೃತ್ಯ, ಸಹೃತ್, ಶ್ರೇಣಿ, ಮಿತ್ರ, ಆಟವಿಕ ತಂತ್ರಗಳು ಸಿದ್ಧಪಡಿಸಿದ ಕೃತಕಯಂತ್ರಗಳಂತೆ ಚೆಲ್ಲಾಪಿಲ್ಲಿಯಾದವು. ಯಾರೂ ಭೇದಿಸುವುದಕ್ಕಾಗದವರೂ, ಅಸಾಧ್ಯರೂ ಅಯೋನಿಜರೂ ಆದ ದ್ರೋಣಾಚಾರ್ಯರೇ ಆಟದಲ್ಲಿ ಗೆಲ್ಲುವಂತೆ ಸುಲಭವಾಗಿ ಜಯಿಸಲ್ಪಟ್ಟರು. ಆ ಕಾರಣದಿಂದ ೨೨. ಅಕರಾದ ಭೀಷ್ಮದ್ರೋಣ ಕರ್ಣರು ಸತ್ತರು. ಇನ್ನುಳಿದವರು ಮಹಾರಥರು ಅವರಿಗಿಂತ ಮೇಲೆನ್ನುವರೆಲ್ಲವೇ? ಮೊದಲು ಕಳೆದುಹೋದುದನ್ನು ಚಿಂತಿಸುವುದರಲ್ಲಿ ಏನು ಪ್ರಯೋಜನ? ನಷ್ಟವಾದುದು ನಷ್ಟವಾಯಿತು, ಸತ್ತದ್ದು ಸತ್ತುಹೋಯಿತು ಎಂದುಕೊಳ್ಳುವುದು. ಇನ್ನು ದುಖಿಸಬೇಡ, ಮಹಾರಾಜನೇ

ಕಂ|| ನೆಱವೊಡೆ ನೆರವೊಳೆಮಿನಿಬರು
ಮಿಱ ಕಲಹಮಪಾಯ ಬಹುಳಮಿನ್ನುಂ ನಯದ|
ತ್ತೆಱಗುವೊಡೆ ಸಂ ಹರಿಗನೊ
ಳುಱುಗುಂ ನಿನಗಿಂತಿವೆರಡೆ ಕಜ್ಜಂ ನೃಪತೀ|| ೨೩

ವ|| ಎಂಬುದುಂ ಬೞಕ್ಕಿನ ನುಡಿಗೆ ಸೈರಿಸಲಾಱದೆ ಫಣಿಕೇತನನಿಂತೆಂದಂ-

ಮ|| ಪೞವಾಡಯ್ದನೆ ಬೇಡೆಯುಂ ಕುಡದ ನಾನೇನೆಂದು ಸಂಧಾನಮಂ
ಗೞಯಿಪ್ಪೆಂ ಗೞಯಿಪ್ಪನಂಗನೃಪನಂ ನೀನೆತ್ತಿ ತಂದೆನ್ನ ಮುಂ|
ದಿೞಪಲ್ಕಾರ್ಪೊಡಮಾವುದಾಗಿ ಕೃಪ ನೀಂ ಪೇೞದ್ದಪ್ಪೆ ಮಾತನಿ
ನ್ನುೞ ದುರ್ಯೋಧನನಲ್ಲನೇ ಕಳದೊಳಂ ಕಾಣ್ದಂತು ಕೌಂತೇಯರಂ|| ೨೪

ವ|| ಎಂಬುದು ಜಳಧರಧ್ವನಿಯಿನಶ್ವತ್ಥಾಮನಿಂತೆಂದಂಂ-

ಚಂ|| ಕುಳಬಳಶೌರ್ಯಧೈರ್ಯಯುತರೆಲ್ಲರುಮಂ ಪೆಱಗಿಕ್ಕಿ ಕರ್ಣನಂ
ಪಳಯಿಸುತಿರ್ಪೆಯೇನೊ ಗಳ ನಿನ್ನಯ ತಮ್ಮನ ನೆತ್ತರಂ ಭಯಂ|
ಗೊಳೆ ಪವಮಾನಸೂನು ತವೆ ಪೀರ್ದೆಡೆಯೊಳ್ ಕಲಿ ಕರ್ಣನೇಕೆ ಪೇೞು
ಮಿಳ ಮಿಳ ನೋಡುತಿರ್ದನವನುರ್ಕನಿಳಾಪರುಂಟೆ ನಿನ್ನವೋಲ್|| ೨೫

ಕಂ|| ಅಂಬಿಗನೊಳಾದುದಿದು ಋಣ
ಸಂಬಂಧಂ ನಿನಗಮೋಘಮಿದನುೞದವರಾ|
ರ್ಗಂ ಬಿಸುಡಲ್ಕೇಂ ಬರ್ಕುಮೆ
ನೀಂ ಬೆಸಸುವುದೆನ್ನನಾಂತರಂ ತವೆ ಕೊಲ್ವೆಂ|| ೨೬

ವ|| ಎಂದಶ್ವತ್ಥಾಮಂ ಕರ್ಣನಂ ಪೞದು ನುಡಿದೊಡಾ ನುಡಿಗೆ ಮುನಿದು ಕೊಲ್ವನಿತುವರಂ ಬಗೆದು ದುರ್ಯೋಧನನಿಂತೆಂದಂ-

ಕಂ|| ನಿನ್ನಿಂದಂ ತ್ರಿಭುವನ ರಾ
ಜ್ಯೋನ್ನತಿ ಬಂದೆನಗೆ ಸಾರ್ಗುಮಪ್ಪೊಡಮೊಲ್ಲೆಂ|
ನೀನ್ನುಡಿದು ಬರ್ದುಕಿದೈ ಪೆಱ
ರೆನ್ನಿದಿರೊಳ್ ನುಡಿದು ಕರ್ಣನಂ ಬರ್ದುಕುವರೇ|| ೨೭