ಭಾರತೀಯ ಜನಪದ ಜೀವನ, ಕಲೆ ಮತ್ತು ಸಾಹಿತ್ಯಗಳ ಬಗ್ಗೆ ವೈಜ್ಞಾನಿಕವಾದ ಅಧ್ಯಯನ ಆಗಬೇಕಾಗಿದೆ ಅನ್ನಿಸುತ್ತದೆ. ಈ ವರೆಗೆ ಆಗಿರುವ ಅಧ್ಯಯನಗಳು ಆಳವೂ ಕೆಲಸ್ಪರ್ಶಿಯೂ ಆಗಿಲ್ಲವೆಂದು ಹೇಳಲವಕಾಶವಿದೆ. ಇಂಗ್ಲಿಷಿನವರು ಕೆಲವರು ಈ ದೇಶದ ಜನಪದ ಜೀವನದ ಬಗೆಗೆ ಆಸಕ್ತಿ ತಳೆಯದಿದ್ದಲ್ಲಿ ಇವುಗಳು ಬೆಳಕಿಗೆ ಬರುತ್ತಿದ್ದವೋ ಇಲ್ಲವೋ ಹೇಳುವುದು ಕಷ್ಟದ ಕೆಲಸ. ತಮ್ಮ ಬೇರೆ ಬೇರೆ ಕೆಲಸಗಳ ಮಧ್ಯದಲ್ಲಿ ಕುತೂಹಲಕ್ಕಾಗಿ ಆರಂಭಿಸಿದ ಈ ಅಧ್ಯಾಯನ ಈ ಸ್ವಲ್ಪ ಮಟ್ಟಿದರೂ ಯಶಸ್ಸು ಕಾಣುತ್ತಿದೆ. ಆದರೂ ಇಂದಿಗೂ ಈ ಸಂಸ್ಕೃತಿಯನ್ನು ಮುಂದುವರಿದವರು ಮತ್ತು ಅವರಿಂದ ಹುಟ್ಟಿ ಬಂದು ಅಧಿಕಾರ ಸ್ತರಾದವರು ಇದು ನಮ್ಮ ಸಂಸ್ಕೃತಿಯ ಅಡಿಪಾಯ. ತಾಯಿ ಬೇರೆ ಎಂದು ಒಪ್ಪಲು ಸಿದ್ಧರಿಲ್ಲ. ಏನೋ ಜನಸಾಮಾನ್ಯರ ಮಧ್ಯದಿಂದ ಬಂದ ಕೆಲವರಾದರೂ ರಾಜಕಾರಣದಲ್ಲಿ. ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಸ್ಥಾನಗಳಿಗೆ ಬಂದುದರಿಂದ ಈ ಕಲೆ ಮತ್ತು ಸಾಹಿತ್ಯ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಸ್ಥಾನಗಳಿಗೆ ಬಂದುದರಿಂದ ಈ ಕಲೆ ಮತ್ತು ಸಾಹಿತ್ಯ ವಿಶ್ವವಿದ್‌ಆನಿಯಲಗಳ ಮೆಟ್ಟಿಲು ಹತ್ತುವದು, ಒಂದು ವಿಶ್ವವಿದ್ಯಾನಿಲಯ ಇವುಗಳನ್ನು ಕುರಿತಂತೆ ಅಧ್ಯಯನ ಆರಂಭಿಸುವುದೂ ಸಾಧ್ಯವಾಯಿತು. ಆದರೂ ಈ ದೇಶದ ಸಂಸ್ಕೃತಿಯ ಇತಿಹಾಸದಲ್ಲಿ ಈ ಜನಪದ ಕಲೆಗಳಿಗೆ ಏನು ಪ್ರಥಮ ಸ್ಥಾನ ದೊರೆಯಬೇಕೋ ಅದು ಇನ್ನೂ ಸಾಧ್ಯವಾಗಿಲ್ಲವೆಂದೇ ಹೇಳಬೇಕಾಗುತ್ತದೆ.

ಭಾರತೀಯ ಸಂಸ್ಕೃತಿಯನ್ನು ಈವರೆಗೆ ಅಧ್ಯಯನ ಮಾಡಿದ, ಆ ಬಗೆಗೆ ಸಂಶೋಧಿಸಿದ ವಿದ್ವಾಂಸರೆಲ್ಲ ಆರ್ಯಸಂಸ್ಕೃತಿಯ ನಂತರದ ಸಾಂಸ್ಕೃತಿಕ ಇತಿಹಾಸವನ್ನೇ ಕೊಡುತ್ತಾ ಬಂದಿರುವುದು ಕಂಡು ಬರುತ್ತದೆ. ಈ ಕಾರಣದಿಂದಾಗಿ ಆರ್ಯರು ಭಾರತಕ್ಕೆ ಬರುವುದಕ್ಕೂ ಎಷ್ಟೋ ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ. ಆಗಿ ಹೋದ ಭಾರತೀಯ ಮೂಲ ಸಂಸ್ಕೃತಿಯ ಪಳೆಯುಳಿಕೆಯೇ ಇಂದಿನ ನಮ್ಮ ಜನಪದ ಸಂಸ್ಕೃತಿ ಎಂಬುದನ್ನು ಈ ವಿದ್ವಾಂಸರು ಪರಿಗಣಿಸಲಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಜನಪದ ಮೂಲವನ್ನು ಅನೇಕರು ಇತ್ತೀಚಿನ ಹದಿನೈದು ಹದಿನಾರನೆಯ ಶತಮಾನಗಳಲ್ಲಿ ಹುಡುಕುವುದು ಸರಿಯಲ್ಲ. ಆರ್ಯರು ಬರುವುದಕ್ಕಿಂತ ಸಾವಿರಾರು ವರ್ಷಗಳ ಹಿಂದೆಯೇ ಈ ಮೂಲ ಸಂಸ್ಕೃತಿ. ಕಲೆ, ಸಾಹಿತ್ಯಗಳು ರಾಜಾಸ್ಥಾನದಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಆವರಿಸಿಕೊಂಡಿದ್ದವು. ಆದರೆ ಆರ್ಯರು ಬಂದು ರಾಜಾಸ್ತಾನಗಳಲ್ಲಿ ನೆಲೆಯೂರಿ, ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ತುಂಬುತ್ತಾ ಮೂಲ ಸಂಸ್ಕೃತಿಗಳನ್ನು ಆಚೆ ತಳ್ಳ ತೊಡಗಿದರು, ಈಗಿನ ದೂರದರ್ಶನವು ಹಿಂದಿಯನ್ನು ಜನರ ಮೇಲೆ ಹೇರುವುಂತೆ ಆದರೂ ನಮ್ಮ ಜನರ ರಕ್ತದೊಂದಿಗೆ ಬೆರೆತುಕೊಂಡ ಇವು ಅವರಲ್ಲಿಯೇ ಉಳಿದು ಬೆಳೆಯುತ್ತಾ ಬಂದವು. ಕ್ರಿ.ಪೂ ೩೦೦ರಲ್ಲಿ ಭಾರತಕ್ಕೆ ಬಂದ ಮೆಗಸ್ತಸೀಸ್  ಎಂಬ ಪ್ರವಾಸಿ ಆರ್ಯ ಸಂಸ್ಕೃತಿಯನ್ನಾಗಲಿ, ರಾಮಾಯಣ ಮಹಾಭಾರತಗಳನ್ನಾಗಲಿ ಹೆಸರಿಸಿದೆ ನಮ್ಮ ಅನೇಕ ಜನಪದ ರೀತಿಗಳನ್ನು ರೈತರಿಂದ ಕೂಡಿದ ಹಳ್ಳಿಗಳ ಬದುಕನ್ನು ವಿವರಿಸುತ್ತಾನೆ. ಆದುದರಿಂದ ಆರ್ಯ ಸಂಸ್ಕೃತಿಯಲ್ಲಿ ನಮ್ಮ ಜನಪದ ಕಲೆಗಳ ಮೂಲ ಹುಡುಕುವುದು ಸರಿಯಾದ ಕ್ರಮವಲ್ಲ. ಕ್ರಿ.ಪೂರ್ವದಲ್ಲಿಯೇ ಆರ್ಯರು ಬರುವುದಕ್ಕೂ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಒಂದು ಮಹಾನ್‌ಗ್ರಾಮ ಸಂಸ್ಕೃತಿ ಇತ್ತು ಎಂಬುದನ್ನು ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಆದುದರಿಂದ ನಮ್ಮ ಜನಪದ ಸಂಸ್ಕೃತಿಯೇ ನಿಜವಾದ ಭಾರತೀಯ ಸಂಸ್ಕೃತಿ ಎಂಬುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತ ಭೂವಿಜ್ಞಾನಿಗಳ ಹೇಳಿಕೆಯಂತೆ ಅತ್ಯಂತ ಪ್ರಾಚೀನವಾದ ಭೂಭಾಗವೆಂದು ತಿಳಿದು ಬರುತ್ತದೆ. ಹರಪ್ಪಾ ಮೊಹೆಂಜದಾರೋ ಮತ್ತು ಸಿಂಧುನದೀತೀರದ ವ್ಯವಸಾಯ ಪ್ರಧಾನವಾದ ಗ್ರಾಮ ಸಂಸ್ಕೃತಿ ಆರ್ಯ ಸಂಸ್ಕೃತಿಗಿಂತ ಪ್ರಾಚೀನವೂ, ಭಿನ್ನವೂ ಆದ ಮೂಲ ಭಾರತೀಯ ಸಂಸ್ಕೃತಿ ಎಂದು ಈ ಧೃಡಪಟ್ಟಿದೆ. ರಾಜಾಸ್ಥಾನದ ಬಸ್ತಾರ್ ಗುಡ್ಡು ಗಾಡು ಜನರ ಭಾಷೆ ದ್ರಾವಿಡ. ರಾಮಾಯಣದ ವನವಾಸದ ಶಕೆಯೇ ಆರ್ಯರು ದ್ರಾವಿಡರನ್ನು ದಕ್ಷಿಣದತ್ತ ವಿಸ್ತರಿಸಿದ ಕಥೆಯೆಂಬ ಅಭಿಪ್ರಾಯವೂ ಇದೆ. ಒಂದು ಕಾಲಕ್ಕೆ ಉತ್ತರ ಭಾರತದಲ್ಲೂ ಇದ್ದ ದ್ರಾವಿಡರು ಕ್ರಮೇಣ ದಕ್ಷಿಣಕ್ಕೆ ಬಂದುದು ಸತ್ಯವೂ ಹೌದು. ವಿಂದ್ಯ ಪರ್ವತ ಅಡ್ಡಿಯಾಗದಿದ್ದರೆ ದ್ರಾವಿಡ ಸಂಸ್ಕೃತಿ ಇಷ್ಟು ಮಟ್ಟಿಗಾದರೂ ಉಳಿಯುತ್ತಿತ್ತೆ ಎಂಬುದು ಸಂದೇಹದ ಸಂಗತಿ. ಆದುದರಿಂದ ಈಗಿನ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸೇರಿದಂತೆ ದಕ್ಷಿಣ ಭಾರತವಾಗುತ್ತದೆ. ಭಾಷೆಯ ದೃಷ್ಠಿಯಿಂದ ಮಹಾರಾಷ್ಟ್ರ ಉತ್ತರದ ರಾಜ್ಯಗಳೊಂದಿಗೇ ಸೇರುತ್ತದೆ.

ತಮಿಳು, ಕನ್ನಡ, ತೆಲಗು, ಮಲೆಯಾಳಂ ಭಾಷೆಗಳು ಒಂದೇ ಮೂಲದವು. ಮೊದಲು ತಮಿಳು, ಕನ್ನಡವಾಗಿ ವಿಭಾಗವಾದ ಈ ಮೂಲದ್ರಾವಿಡ ಮುಂದೆ ಕನ್ನಡ ತೆಲಗಾಗಿ ತಮಿಳು ಮಲೆಯಾಳಂ ಆಗಿ ಮತ್ತೆ ವಿಭಾಗವಾಯಿತು. ಈ ಹಿನ್ನೆಲೆಯಲ್ಲಿ ನಮ್ಮ ಜನಪದ ಕಲೆಗಳು ಮತ್ತು ಸಂಸ್ಕೃತಿಗಳಲ್ಲಿ ಏಕ ಸೂಕ್ತತೆಯನ್ನು ಕಾಣಬಹುದಾಗಿದೆ. ಗಮನಿಸಬೇಕಾದ ಅಂಶವೆಂದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿರುವ ತೊಗಲುಗೊಂಬೆಯಾಟದವರೆಲ್ಲಾ ಮರಾಠಿ ಮೂಲದವರು ಎಂಬುದು. ಈ ಜನರ ಭಾಷೆಯನ್ನು ಅರೆ ಮರಾಠಿ ಎಂದು ಕರೆಯುತ್ತಾರೆ. ಅಲ್ಲದೆ ಈ ಜನಾಂಗಗಳ ಆಕೃತಿ, ದೇವರು ದಿಂಡರು, ಪ್ಧತಿ ವಿಧಿನಿಷೇಧಗಳೆಲ್ಲ ಬಹುತೇಕ ದ್ರಾವಿಡ ಜನಾಂಗವನ್ನು ಹೋಲುವುದರಿಂದ ಈ ಅರೆ ಮರಾಠಿ ಉಪಭಾಷೆ ಸಂಸ್ಕೃತ ಮೂಲವೆ? ದ್ರಾವಿಡ ಮೂಲವೇ? ಅಥವಾ ಇವೆರಡರ ಮಿಶ್ರಣವೇ ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಒಟ್ಟುನಲ್ಲಿ ಈ ಹಿನ್ನೆಲೆಯಲ್ಲಿ ಈ ದೃಷ್ಟಿಯಿಂದ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳಗಳ ತೊಗಲು ಗೊಂಬೆಯಾಟಗಳ ವಿವರಗಳನ್ನು ಮಾತ್ರ ಈ ಪ್ರಬಂಧದಲ್ಲಿ ಕೊಡುತ್ತಿದ್ದೇನೆ.

ತಮಿಳುನಾಡಿನಲ್ಲಿ ತೊಗಲುಗೊಂಬೆಯಾಟ ಮತ್ತು ಇತರ ಬೊಂಬೆಯಾಟಗಳನ್ನೆಲ್ಲಾ ಕುರಿತಂತೆ ಪಾವಿಕೂಕ್ತು ಎಂದು ಕರೆಯುತ್ತಜಾರೆ. ಇಲ್ಲಿ ಮರ, ತೊಗಲು ಮತ್ತು ರಟ್ಟಿನಿಂದ ಮಾಡಿದ ಬೊಂಬೆಗಳನ್ನು ಕುಣಿಸುತ್ತಾರೆ. ಮರದ ಗೊಂಬೆಗಳ ಆಟವನ್ನು ಮಪ್ಪವಿಕೂಕು ಎಂತಲು ತೊಗಲು ಗೊಂಬೆಯಾಟವನ್ನು ತೊವಲ್ ಪಿವಕೂಕ್ತು ಎಂತಲೂ ಹೆಸರಿಸಿದ್ದಾರೆ. ಆಡು ಅಥವಾ ಜಿಂಕೆಯ ಚರ್ಮ ೧/೩ ದಪ್ಪ ಇರುವುದರಿಂದ ಈ ಗೊಂಬೆಗಳನ್ನು ಮಾಡುತ್ತಾರೆ. ಕತ್ತು, ತಲೆ, ಕೈ,ಕಾಲುಗಳನ್ನು ಬೇರೆ ಬೇರೆ ಮಾಡಿ ಜೋಡಿಸುತ್ತಾರೆ. ಇದರಿಂದ ಗೊಂಬೆಗಳ ಅಂಗಾಂಗಗಳು ತಿರುಗಿಸಿದ ಕಡೆ ಆಡಲು ಅನುಕೂಲವಾಗುತ್ತದೆ. ತೂತುಗಳನ್ನು ಮಾಡಿ ಒವೆಗಳನ್ನು ತೊಡಿಸುವುದುಂಟು. ಇವುಗಳಿಗೆ ರಸಾಯನಿಕ ರೀತಿಯಲ್ಲಿ ಬಣ್ಣ ಹಚ್ಚುತ್ತಾರೆ. ಬೊಂಬೆಗಳ ಎತ್ತರ ೧ ೧/೨ ಯಿಂದ ೨ ೨/೨ ಅಡಿ ಇರುತ್ತದೆ.

ಗೊಂಬೆಯಾಟಕ್ಕ ಮೂರರಿಂದ ಆರು ಜನ ಇರುತ್ತಾರೆ. ಬೊಂಬೆಗಳನ್ನು ಇಬ್ಬರು ಕುಣಿಸುತ್ತಾರೆ. ಹೆಂಗಸರೂ ಇದರಲ್ಲಿ ಪಾಲುಗೊಳ್ಳುತ್ತಾರೆ. ಓಲಗ, ತಾಲಕಟ್ಟು ಕಳಿ ತಪಲ ಮುಂತಾದವು ಈ ಆಟಗಳಲ್ಲಿ ಉಪಯೋಗಿಸುವ ವಾದ್ಯಗಳು. ಒಂದಾನೊಂದು ಕಾಲದಲ್ಲಿ ಈ ಗೊಂಬೆಯಾಟಗಳಿಗೆ ರಾಜಾಶ್ರಯವಿತ್ತೆಂದು ತಿಳಿದು ಬರುತ್ತದೆ. ಈಗ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಹರುಕು ಮುರುಕು ಅಟ್ಟಗಳಲ್ಲಿ ಇವು ಪ್ರದರ್ಶನಗೊಳ್ಳುತ್ತವೆ. ಹಿಂಭಾಗದಲ್ಲಿ ದೀಪ ಹಚ್ಚಿ ನೇತು ಹಾಕಿರುತ್ತಾರೆ. ಮುಂಬಾಗದಲ್ಲಿ ಬಿಳಿಯ ತೆರೆ ಇರುತ್ತದೆ. ಇವುಗಳ ಮಧ್ಯೆ ಗೊಂಬೆಗಳನ್ನು ಆಡಿಸುತ್ತಾರೆ. ಹಿಂದಿರುವ ದೀಪದ ಬೆಳಕು ಗೊಂಬೆಗಳ ಮೂಲಕ ಹಾಯುವುದರಿಂದ ಅವುಗಳ ಉಜ್ವಲವಾದ ಚಿತ್ರ ಮುಂದಿನ ತೆರೆಯ ಮೇಲೆ ಮೂಡುತ್ತದೆ. ಈ ಕಲಾವಿದರ ಮಾತುಗಾರಿಕೆ ಮತ್ತು ಹಾಡುಗಾರಿಕೆ ಅದ್ಭುತವಾದುದೆಂದು ಅಭಿಪ್ರಾಯವಿರುವುದು ಕಂಡು ಬರುತ್ತದೆ.

ಬಿದಿರು ಅಥವಾ ಮರದ ಕಡ್ಡಿಗಳಿಗೆ ಗೊಂಬೆಗಳನ್ನು ಕಟ್ಟಿರುತ್ತಾರೆ. ಇದರಿಂದ ಅವುಗಳನ್ನು ಅಭಿನಯಕ್ಕನುಗುಣವಾಗಿ ಆಡಿಸುವುದು ಸುಲಭ. ಬೊಂಬೆಗಳನ್ನು ಆಡಿಸುವವರನ್ನು ಸೂತರತಾರ (ಸೂತ್ರಧಾರ) ಎಂದು ಕರೆಯುತ್ತಾರೆ. ಇವರು ಬೊಂಬೆಗಳನ್ನು ಕುಣಿಸುವಾಗ ತಮ್ಮ ಕಾಲುಗಳನ್ನು ಅಟ್ಟದ ಹಲಗೆಗಳ ಮೇಲೆ ಬಡಿಯುವುದರ ಮೂಲ ಲಯ ಬದ್ಧವಾದ ಶಬ್ದ ಉಂಟುಮಾಡುತ್ತಾರೆ. ಹೊಡೆದಾಟ, ಬಾಣ ಬಿಡುವುದು ಕೆಳಗೆ ಬೀಳುವುದು ಈ ಎಲ್ಲವುಗಳನ್ನು ಶಬ್ದದ ಮೂಲಕ ಕೇಳಿಸಲಾಗುವುದು. ಇವರು ಆಯಾ ಪಾತ್ರಗಳ ವೈವಿಧ್ಯ ಮಯ ಏರಿಳಿತಗಳಿಗೆ ತಮ್ಮ ಧ್ವನಿಯನ್ನು ಹೊಂದಿಸಿ ಮಾತನಾಡುವ ಕಲೆಯಲ್ಲಿ ಅಪ್ರತಿಮರು ಎಂಬುದು ವಿದ್ವಾಂಸರ ಅಭಿಪ್ರಾಯ. ಆಟದ ಮಟ್ಟ ಸಂಭಾಷಣೆ ಮತ್ತು ಹಾಡುಗಾರಿಕೆಯ ಗತ್ತಿನ ಮೇಲೆ ನಿರ್ಧಾರವಾಗುತ್ತದೆ.

ಗೊಂಬೆಯಾಟಗಳು ಗ್ರಾಮ ಮುಖಂಡನ ಮನೆಯ ಮುಂದೆ ಅಥವಾ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತದೆ. ಗ್ರಾಮ ಮುಖಂಡ ಈ ಆಟಗಳನ್ನು ಆಡಿಸುವುದುಂದು. ಗ್ರಾಮದವರೆಲ್ಲಾ ಚಂದಾ ಎತ್ತಿಯೂ ಇವುಗಳನ್ನು ನಡೆಸುತ್ತಾರೆ. ಆಟ ನಡೆಯುವಾಗಲೂ ಹಣ ಸಂಗ್ರಹಿಸುವುದುಂಟು. ಆಟವನ್ನು ಒಳಗಿರುವವರು ಕಾಣದಂತೆ ಸುತ್ತಲೂ ಮುಚ್ಚಿಬಿಡುತ್ತಾರೆ. ತೊಗಲು ಗೊಂಬೆಯವರು ಸಾಮಾನ್ಯವಾಗಿ ರಾಮಾಯಣದ ವಿವಿಧ ಪ್ರಸಂಗಗಳನ್ನು ಆಡುತ್ತಾರೆ. ಮಹಾಭಾರತದ ಪ್ರಸಂಗಗಳನ್ನು ಆಡುವುದೂ ಉಂಟು. ಹರಿಶ್ಚಂದ್ರನ ಕಥೆಯೂ ಈ ಗುಂಪಿಗೆ ಸೇರುತ್ತದೆ.

ನಾಟಕಗಳು ಸಾಮಾನ್ಯವಾಗಿ ನೀತಿ ಪ್ರಧಾನವಾಗಿರುತ್ತವೆ. ಕೊಪ್ಪುಲನ್ ಬಚೆಕುಡುಂಬಂ, ಮೂಲಪಟ್ಟ ಕಣ್ಣನ್ ಈ ನಾಟಕಗಳಲ್ಲಿ ಬರುವ ಹಾಸ್ಯ ಪಾತ್ರಗಳು. ಈ ಪಾತ್ರಗಳ ಬಾಯಲ್ಲಿ ಹಾಸ್ಯ ನಿರಂತಕವಾಗಿ ಹರಿದು ಬರುತ್ತದೆ. ತಮಿಳುನಾಡಿನಲ್ಲಿ ಇದು ೧೨ನೆಯ ಶತಮಾನದಿಂದ ಕಂಡುಬರುತ್ತದೆಂದು ವಿದ್ವಾಂಸರು ಗುರುತಿಸಿದ್ದಾರೆ. ತೊಗಲು ಗೊಂಬೆಯಾಟ ರಾಮನಾಥ ಪುರಂ, ನೆಲ್ಲೈಕುಮಾರಿ ಮಧುರೈ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಬಹುದು. ತಮಿಳುನಾಡಿನಲ್ಲಿ ಶಕುನಿ, ರಾವಣ, ಶೂರ್ಪನಖಿ, ಘಟೋತ್ಗಜ ಪಾತ್ರಗಳ ಗೊಂಬೆಗಳನ್ನು ವಿಕಾರ ಹಲ್ಲುಗಳಿಂದ ಕೂಡಿದ ವಕ್ತೆಯ ಮೂರ್ತಿಗಳಾಗಿರುತ್ತವೆ. ತಮಿಳುನಾಡಿನ ತೊಗಲು ಗೊಂಬೆಯಾಟದವರು ಮರಾಠಿಗರು. ಯಾವುದೋ ಭೀಕರ ಕ್ಷಾಮಕಾಲದಲ್ಲಿ ಇವರು ವಲಸೆ ಬಂದರೆಂದು ತಮ್ಮ ಮೂಲದ ಬಗ್ಗೆ ಹೇಳಿಕೊಳ್ಳುತ್ತಾರೆ.

ಕರ್ನಾಟಕದಲ್ಲಿ ಇವರನ್ನು ಗೊಂಬೆರಾಮ, ಕಿಳ್ಳೇಕ್ಯಾತ ಎಂದು ಕರೆಯುತ್ತಾರೆ. ಹಳೇ ಮೈಸೂರು ಭಾಗದಲ್ಲಿ ಇವರನ್ನು ಗೊಂಬೆರಾಮ ಎಂದೇ ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಇವರನ್ನು ಕಿಳ್ಳೇಕ್ಯಾತರೆಂದು ಕರೆಯುತ್ತಾರೆ. ಕಿಳ್ಳೇಕ್ಯಾತ ಇವರಾಡುವ ನಾಟಕಗಳ ಒಂದು ಪಾತ್ರ ಕಿಳ್ಳೆಕ್ಯಾತ ಎಂದರೆ ಕೀಳು ಅಭಿರುಚಿಯವ ಎಂದಿರಬೇಕು. “Killekyata means a mischieous imp. Kille meaning mischieous and Kyata imp or a crooked fellow”

[1] ಎಂಬ ಅರ್ಥವಿದೆ. ಕಿಳ್ಳೆಕ್ಯಾತ ಎಂಬುದು ಕೀಳು ಅಭಿರುಚಿಯವ ಎಂದೇ ಇರಬೇಕು. ಏಕೆಂದರೆ ಈ ಪಾತ್ರವನ್ನು ಸ್ತ್ರೀ ಪಾತ್ರ ಬಂಗಾರಕ್ಕನೊಂದಿಗೆ ಸೇರಿ ಮಾತನಾಡುವುದೆಲ್ಲ ಲೈಂಗಿಕ, ಅಶ್ಲೀಲ ಮಾತುಗಳೆ. ಹಳೆಯ ಮೈಸೂರು ಭಾಗದಲ್ಲಿ ಇವರನ್ನು ಗೊಂಬೆರಾಮರೆಂದೇ ಕರೆಯುತ್ತಾರೆ. ಇವರು ಒಂದು ಅಲೆಮಾರಿ ಜನಾಂಗ. ಇವರು ಮಹಾರಾಷ್ಟ್ರದಿಂದ ಬಹಳ ಹಿಂದೆಯೇ ಭೀಕರ ಕ್ಷಾಮವೊಂದರಿಂದಾಗಿ ದಕ್ಷಿಣದ ಕಡೆಗೆ ವಲಸೆ ಬಂದರೆಂದು ಹೇಳಿಕೊಳ್ಳುತ್ತಾರೆ. ಇವರು ಈಗಲೂ ಅವರದೇ ಆದ ಒಂದು ಭಾಷೆಯನ್ನು ಮಾತನಾಡುತ್ತಾರೆ. ಇದನ್ನು ಅರೆಮರಾಠಿ ಭಾಷೆಯೆಂದು ಕರೆಯುತ್ತಾರೆ. ತೆಲುಗಿನಲ್ಲಿ ಇವರನ್ನು ಆರೆಯವರು ಎಂದು ಕರೆಯುತ್ತಾರೆ. ಈ ಆರೆಯವರ ಮರಾಠಿಯೇ ಈ ಭಾಷೆಯಾಗಿದ್ದಿರಬೇಕು. ವಲಸೆ ಬರುವ ಮುನ್ನ ಇವರು ಯುದ್ಧ ನಿಪುಣರೂ ವ್ಯವಸಾಯ ನಿಪುಣರೂ ಆಗಿದ್ದರೆಮದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದರೆ ದಕ್ಷಿಣ ಕರ್ನಾಟಕಕ್ಕೆ ಸಂಬಂಧಿಸಿದಂತೆ ಇವರು ಅಲೆಮಾರಿಗಳಾಗಿದ್ದ ಕ್ಷತ್ರೀಯತೆಯಾಗಲಿ ವ್ಯವಸಾಯವಾಗಲಿ ಅವರಲ್ಲಿ ಉಳಿದಂತಿಲ್ಲ.

ಈ ಜನಾಂಗದಲ್ಲಿ ಗೊಂಬೆಯಾಟದವರು ಮತ್ತು ಬುಂಡೆ ಬೆಸ್ತರು ಎಂದು ಎರಡು ಗುಂಪು. ಬುಂಡೆ ಬೆಸ್ತರದು ಮೀನು ಹಿಡಿಯುವುದು ಕಸುಬಾದರೆ ಗೊಂಬೆಯವರದು ಆಟ ಆಡಿಸುವುದು ಕಸುಬು. ಇವರು ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿರುತ್ತಾರೆ. ಯಾರು ಯಾರಿಗೆ ಯಾವ ಹಳ್ಳಿಗಳೆಂದು ತೀರ್ಮಾನವಾಗಿರುತ್ತದೆ. ತಂದೆಗೆ ಇಬ್ಬರು ಮಕ್ಕಳಿದ್ದರೆ ಅವರು ತಂದೆಗಿದ್ದ ಹಳ್ಳಿಗಳನ್ನು ತಮ್ಮಲ್ಲಿ ಹಂಚಿಕೊಳ್ಳುತ್ತಾರೆ. ತಮಗೆ ಸೇರಿದ ಹಳ್ಳಿಗಳಿಗೆ ಸರದಿಯ ಮೇಲೆ ಹೋಗುತ್ತಾರೆ. ಕುದುರೆ, ಕತ್ತೆಗಳ ಮೇಲೆ ತಮ್ಮ ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಬರುತ್ತಾರೆ. ಊರಲ್ಲಿ ಯಾರದಾದರೂ ಅಗಲವಾದ ಜಗುಲಿಯ ಮೇಲೆ ನೆರಳು ಕಟ್ಟಿಕೊಂಡು ಇವರು ವಾಸಮಾಡುತ್ತಾರೆ. ಗೊಂಬೆಗಳನ್ನು ಬಿದಿರು ಪೆಟ್ಟಿಗೆ, ಚರ್ಮದ ಪೆಟ್ಟಿಗೆ, ಬೆತ್ತದ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿಟ್ಟು ಬಿಸಿಲು ಮಳೆ ಗಾಳಿಗಳಿಗೆ ಈಡಾಗದಂತೆ ನೋಡಿಕೊಳ್ಳುತ್ತಾರೆ.

ಗೊಂಬೆಯವರು ಹಳ್ಳಿಗೆ ಬಂದ ಕೂಡಲೇ ಹಳ್ಳಿಯ ಯಜಮಾನ ಪಟೇಲರಿಗೆ ತಾವು ಬಂದಿರುವ ವಿಷಯ ತಿಳಿಸುತ್ತಾರೆ. ಬಂದ ಮಾರನೆಯಿಂದಲೇ ಇವರು ಮನೆಮನೆಗೆ ಹೋಗಿ ದವಸ, ಧಾನ್ಯ ಎತ್ತಿ ತರುತ್ತಾರೆ. ಇವರಿಗೆ ಪ್ರತಿಯೊಬ್ಬರೂ ಏನಾದರೂ ಕೊಟ್ಟೇ ಕೊಡಬೇಕು. ಇದನ್ನು ತಮ್ಮ ಹಕ್ಕು ಎಂದು ಗೊಂಬೆಯವರು ತಿಳಿಯುತ್ತಾರೆ. ಆ ಮೇಲೆ ಆಟ ಆದ ಮಾರನೆಯ ದಿನ ಮತ್ತೆ ಮನೆಮನೆಗೆ ಹೋಗಿ ಬೇಡುತ್ತಾರೆ. ಒಂದೊಂದು ಊರಿನಲ್ಲಿ ಎರಡರಿಂದ ಎಷ್ಟು ಬೇಕಾದರೂ ಆಟಗಳು ಆಗಬಹುದು. ಆಗುವ ಎರಡರಲ್ಲಿ ಒಂದು ಊರಿನ ಮುಖ್ಯಸ್ಥನದು. ಮತ್ತೊಂದು ಊರಿನವರೆಲ್ಲರೂ ಚಂದಾ ಹಾಕಿ ನಡೆಸುವಂಥಹುದು. ಮಿಕ್ಕಾಂಶ ಕೆಲವರು ತಮ್ಮ ಖುಷಿಗೆ, ಕೆಲವರು ಹರಕೆಯ ಕಾರಣಕ್ಕೆ ಈ ಆಟ ಆಡಿಸುವುದು ಉಂಟು.

ಆಟ ಊರಿನ ಸಾರ್ವಜನಿಕ ಮೈದಾನದಲ್ಲಿ ನಡೆಯುತ್ತದೆ. ಆಟದ ದಿನ ಬೆಳಿಗ್ಗೆಯೇ ಅಟ್ಟ ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಮೂಡಲು ಇಲ್ಲವೇ ಪಡಗಲಾಗಿ ಈ ಆಟದ ಮುಂಭಾಗವಿರುತ್ತದೆ. ಮುಂಭಾಗದಲ್ಲಿ ಬಿಳಿಯ ತೆರೆ ಕಟ್ಟುವಷ್ಟು ಜಾಗ ಬಿಟ್ಟು ಮಿಕ್ಕೆಲ್ಲಾ ಭಾಗಗಳನ್ನು ಆಯಾ ಊರುಗಳಲ್ಲಿ ಸುಲಭವಾಗಿ ದೊರೆಯುವ ಸಾಧನಗಳಿಂದ ಮುಚ್ಚಲಾಗುವುದು. ಅಟ್ಟ ಕಟ್ಟಲು ಯಾವಾಗ ಸಿದ್ಧವಾಯಿತೊ ರಾತ್ರಿ ಗೊಂಬೆಯಾಟ ಇದೆಯೆಂದು ಊರಿಗೇ ತಿಳಿಯುತ್ತದೆ. ಇದರೊಂದಿಗೆ ಗೊಂಬೆಯವರೂ ಮನೆಮನೆಗೆ ಹೋಗಿ ರಾತ್ರಿ ಆಟವಿರುವ ಬಗ್ಗೆ ತಿಳಿಸಿ ಏನಾದರೂ ಪಡೆಯುತ್ತಾರೆ. ಊರಿನ ಪಟೇಲರು, ಮುಖ್ಯಸ್ಥರುಗಳಿಗೆ ಗೊಂಬೆಯವರು ಸ್ವತಃ ಆಹ್ವಾನ ಕೊಡುತ್ತಾರೆ. ಸಂಜೆ ತಮ್ಮ ದನಕರುಗಳಿಗೆ ಹುಲ್ಲು ನೀರು ತೋರಿಸಿ ತಮ್ಮ ತಮ್ಮ ಆಸನಗಳಾದ ಚಾಪೆ, ಮುಂದಲಿಗೆ, ಗೋಣಿತಾಟಿನೊಂದಿಗೆ ಚಪ್ಪರದ ಮುಂದೆ ಸೇರುತ್ತಾರೆ.

ಜನರು ಸೇರುವ ಮೊದಲೇ ಗೊಂಬೆಯವರು ಅಟ್ಟದ ಒಳಗೆ ಸೇರಿ ಕೊಂಡಿರುತ್ತಾರೆ. ಆಚೆಯಿಂದ ಜನರಿಗೆ ಅವರಿರುವುದು ಕಾಣದಂತೆ ವ್ಯವಸ್ಥೆಯಾಗಿರುತ್ತದೆ. ಅಟ್ಟದ ಹಿಂಭಾಗದ ಮಧ್ಯದಲ್ಲಿ ಒಂದು ದೀಪವನ್ನು ನೇತು ಹಾಕುತ್ತಾರೆ. ಕೆಲವೊಮ್ಮೆ ಇಂತಹ ಎರಡು ದೀಪಗಳಿರುವುದೂ ಉಂಟು. ಈ ದೀಪಗಳು ಎಣ್ಣೆಯದಾಗಿದ್ದೂ ಪೆಟ್ರೋಮ್ಯಾಕ್ಸ ಅಥವಾ ವಿದ್ಯುದ್ದೀಪಗಳಂತೆ ಅತಿ ಪ್ರಕಾಶದಿಂದ ಕೂಡಿರುವುದಿಲ್ಲ. ಅತಿ ಪ್ರಕಾಶವಾದ ದೀಪಗಳು ತೊಗಲುಗೊಂಬೆಯಾಟಕ್ಕೆ ಸರಿಹೊಂದುವುದಿಲ್ಲ. ಮಂದವಾದ ಎಣ್ಣೆಯ ದೀಪದ ಬೆಳಕು ಗೊಂಬೆಗಳ ಮೂಲಕ ಹಾಯ್ದು ಕಣ್ಣಿಗೆ ಹಿತವಾದ ಚಿತ್ರವನ್ನು ತೆರೆಯ ಮೇಲೆ ಮೂಡಿಸುತ್ತದೆ. ಇಬ್ಬರು ಅಥವಾ ಮೂವರು ಗೊಂಬೆ ಕುಣಿಸಲು ಕೂರುತ್ತಾರೆ. ಮಿಕ್ಕವರು ವಾದ್ಯ ನುಡಿಸುವುದು, ಹಾಡುವುದು ಇತ್ಯಾದಿಗಳಲ್ಲೆ ತೊಡಗುತ್ತಾರೆ. ಸಾಮಾನ್ಯವಾಗಿ, ಹೆಂಗಸರು, ಮಕ್ಕಳು ಸೇರಿದಂತೆ ಹೊಂಬೇರಾಮನ ಇಡೀ ಸಂಸಾರ ಆಟದಲ್ಲಿ ಭಾಗಿಯಾಗುತ್ತದೆ. ತಬಲ ಆರ್ಮೋನಿಯಂ, ಬುಳಂಗ ಇತ್ಯಾದಿ ವಾದ್ಯಗಳಿರುತ್ತವೆ. ಒಂದು ಕಂಚಿನ ತಣೆಗೆಯನ್ನು ಡಬ್ಬ ಹಾಕಿ ಅದರ ಮೇಲೆ ಮಧ್ಯ ಭಾಗದಲ್ಲಿ ಮೇಣ ಮೆತ್ತುತ್ತಾರೆ. ಸುಮಾರು ಒಂದು ಅಡಿಯ ಬೆರಳು ಗಾತ್ರದ ಕಟ್ಟೆಯೊಂದನ್ನು ಆ ಮೇಣದ ಮೇಲೆ ನೆಟ್ಟು ಅದರ ಮೇಲೆ ಕೆಳಗೆ ಕೆಡ್ಡಿನಿಂದ ಉಜ್ಜಿದರೆ ಅದು ಏಕನಾದದಂಥ ಮಾಧುರ್ಯದ ತರಂಗ ಹೊರಡಿಸುತ್ತದೆ. ಇದಕ್ಕೆ ಬುಳಂಗ ಎನ್ನುವುದು. ಗೊಂಬೆ ಕುಣಿಸುವವರು ಮತ್ತು ಮಿಕ್ಕವರೆಲ್ಲ ಆಯಾ ಆಟದ ಮಾತು ಮತ್ತು ಪಾತ್ರಗಳನ್ನು ಹಂಚಿಕೊಂಡಿರುತ್ತಾರೆ. ಸಾಮಾನ್ಯವಾಗಿ ಅತಿ ಅನುಭವಸ್ತರು ಮಾತ್ರ ಕಿಳ್ಳೇಕ್ಯಾತ ಮತ್ತು ಬಂಗಾರಕ್ಕನ ಪಾತ್ರದ ಮಾತುಗಳನ್ನು ವಹಿಸಿಕೊಂಡಿರುತ್ತಾರೆ.

ಜನರೆಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಬಂದು ಸೇರುವ ಹೊತ್ತಿಗೆ ರಾತ್ರಿ ಹತ್ತು ಗಂಟೆಯಾಗತ್ತದೆ. ಸಭಾಪೂಜೆ ಮತ್ತು ಗಣಪತಿ ಪೂಜೆಯೊಂದಿಗೆ ಆಟ ಆರಂಭವಾಗುತ್ತದೆ. ದೇವಾನುದೇವತೆಗಳು ಮತ್ತು ಇಷ್ಟ ದೇವತಾ ಪ್ರಾರ್ಥನೆಯ ನಂತರ ಆ ದಿನ ಆಡುವ ಆಟಯಾವುದೆಂಬುದರ ಪ್ರಕಟನೆಯಾಗುತ್ತದೆ. ಸಾಮಾನ್ಯವಾಗಿ ಇವರು ರಾಮಾಯಣ, ಮಹಾಭಾರತ ಪ್ರಸಂಗಗಳನ್ನು ಆಡುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕನ್ನಡ ಮಟ್ಟಿಗೆ ಉಪಲಬ್ಧ ಮೂಡಲಪಾಯ ಯಕ್ಷಗಾನ ಪ್ರತಿಗಳನ್ನೇ ಗೊಂಬೆಯವರೂ ಬಳೂಕೊಳ್ಳುತ್ತಾರೆ, ಕನ್ನಡದಲ್ಲಿ ಗೊಂಬೆಯಾಟದ ಸಾಂಬಯ್ಯ ಎಂಬುವನು ರಚಿಸಿದ ಯಕ್ಷಗಾನ ಪ್ರಸಂಗಗಳಿವೆ. ‌ಪ್ರಾರ್ಥನೆಯ ನಂತರ ಆರಂಭವಾಗುವ ಈ ಆಟ ನಿರಂತರವಾಗಿ ಬೆಳಗಿನವರೆಗೆ ನಡೆಯುತ್ತದೆ.

ರಾತ್ರಿಯ ತಂಪಿನಲ್ಲಿ ಗೊಂಬೆಯಾಟ ನೋಡುತ್ತಾ ನಿದ್ರಾವಶರಾಗುವುದು ಸಾಮಾನ್ಯ. ಇನ್ನು ಬೇರೆ ಬೇರೆ, ಕಾರಣಗಳಿಂದ ಜನರು ಆಟಕ್ಕೆ ಸ್ಪಂದಿಸದಿರಬಹುದು. ಆಟದವರಿಗೆ ಯಾವುದಾದರೂ ಅಡಚಣೆಯುಂಟಾಗಬಹುದು. ಅಂತಹ ಸಮಯಗಳಲ್ಲಿ ಕಿಳ್ಳೆಕ್ಯಾತ ಬಂಗಾರಕ್ಕ ಪಾತ್ರಗಳು ಪ್ರವೇಶಿಸಿ ಜನರನ್ನು ಮತ್ತೆ ಕಥೆಯದಾರಿಗೆ ಎಳೆದು ತರುತ್ತವೆ. ಈ ಕಿಳ್ಳೆಕ್ಯಾತ, ಬಂಗಾರಕ್ಕರ ಮಾತುಗಳಲ್ಲಿ ಸಾಮಾಜಿಕ ಕುಂದುಕೊರತೆಗಳು ಅಡಕವಾಗಿರುತ್ತವೆ. ಊರಿನಲ್ಲಿ ದುಂಡಾವತಿ ಮಾಡುವವರು ಕಳ್ಳತನ ಮಾಡುವವರು, ಹಾದರ ಮಾಡುವವರನ್ನು ಮಾರ್ಮಿಕವಾಗಿ ಈ ಪಾತ್ರಗಳು ಬೀದಿಗೆಳೆಯುತ್ತವೆ. ಗೊಂಬೆರಾಮರಿಗೆ ತೊಂದರೆ ಕೊಟ್ಟವರ ಮರ್ಯಾದೆ ಹೋಗಿ ಬಿಡುತ್ತದೆ. ಒಟ್ಟಿನಲ್ಲಿ ಕಿಳ್ಳೇಕ್ಯಾತ, ಬಂಗಾರಕ್ಕ ಸಮಾಜದ ಹುಳುಕುಗಳನ್ನು ಬಯಲಿಗೆಳೆಯುತ್ತವೆ.

ಗೊಂಬೆಗಳನ್ನು ಪಾತ್ರವರಿತು ಕುಣಿಸುತ್ತಾರೆ. ಭೀಮ, ರಾಮರ ಮಾತುಗಳಿಗೂ ಸಾಮಾನ್ಯ ಸೈನಿಕರ ಮಾತುಗಳಿಗೂ ವ್ಯತ್ಯಾಸವಿರುತ್ತದೆ. ರಾಮಾಯಣ, ಭಾರತದ ಈ ಕಥೆಗಳಲ್ಲಿ ಮುಸಲ್ಮಾನ ಇಂಗ್ಲೀಷ್ ಸೈನಿಕರನ್ನು ಅವರ ಬಂದೂಕುಗಳೊಂದಿಗೆ ತೋರಿಸಿ ಬಿಡುವುದೂ ಉಂಟು. ಈ ಜನಾಂಗದ ಸ್ತ್ರೀಯರಿಗೆ ಅನುಪಮವೂ ಮಧುರವೂ ಆದ ಕಂಠವಿರುತ್ತದೆ. ಅನೇಕ ವೇಳೆ ಹೆಂಗಸರೆ ಸ್ತ್ರೀಪಾತ್ರಗಳ ಮಾತು. ಹಾಡುಗಳನ್ನು ಹೇಳುವುದುಂಟು. ಬೆಳಿಗ್ಗೆ ಆಟ ಮುಗಿದಾಗ ಇಷ್ಟ ದೇವತೆಯ ಗೊಂಬೆ ನಿಲ್ಲಿಸಿ ಮಂಗಳ ಹಾಡಿ ಮುಗಿಸುತ್ತಾರೆ.

ಗೊಂಬೆಯಾಟ ಆಡಿಸುವುದರಿಂದ ದನಕರುಗಳಿಗೆ ರೋಗ ಬರುವುದಿಲ್ಲವೆಂದು ನಂಬಲಾಗುತ್ತದೆ. ಮಳೆ ಇಲ್ಲದಾಗಲೂ ಈ ಆಟವನ್ನು ಆಡಿಸಿದರೆ ಮಳೆ ಬರುವುದೆಂಬ ನಂಬಿಕೆಯುಂಟು. ಕರ್ನಾಟಕದಲ್ಲಿ ಗೊಂಬೆಯವರು ಈಗ ಅಲ್ಲಲ್ಲಿ ನೆಲೆಯೂರುತ್ತಿದ್ದಾರೆ. ಕರ್ನಾಟಕದ ಗೊಂಬೆಯಾಟ ಹೊರದೇಶಗಳಿಗೂ ಹೋಗಿ ಬಂದಿದೆ. ಈ ಜನರು ಸಾಮಾನ್ಯವಾಗಿ ಹೊಂಬಯ್ಯ ಹೊಂಬಮ್ಮ ರಾಮಯ್ಯ ರಾಮಮ್ಮ ಹೀಗೆ ಹೆಸರಿಟ್ಟುಕೊಳ್ಳುವುದು ಕಂಡುಬರುತ್ತದೆ. ಇವರ ಸಂಖ್ಯೆ ವಿಜಾಪುರ ಜಿಲ್ಲೆಯಲ್ಲಿ ಹೆಚ್ಚು ಎಂಬ ಅಭಿಪ್ರಾಯ ಕಂಡುಬರುತ್ತದೆ.

ಆಂಧ್ರಪ್ರದೇಶ ಗೊಂಬೆರಾಮರಿಗೆ ಸಂಬಂಧಿಸಿದಂತೆ ವಿಶಿಷ್ಟವಾದ ಪ್ರದೇಶವಾಗಿ ಕಾಣುತ್ತದೆ. ಈಪ್ರದೇಶದಲ್ಲಿ ತೊಗಲು ಗೊಂಬೆಯವರನ್ನು ಅರೆಜನಾಂಗದವರೆಂದು ಕರೆಯುತ್ತಾರೆ. ಅವರು ಆರೆ ಮರಾಠಿಯನ್ನು, ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಈ ಪ್ರದೇಶದಲ್ಲಿ ಇವರು ಒಂದು ಅಭಿವೃದ್ಧೀಶೀಲ ಜನಾಂಗವಾಗಿ ವಿಕಾಸಗೊಂಡಿರುವುದಾಗಿ ತಿಳಿದುಬರುತ್ತದೆ. ಈ ಜನಾಂಗದಲ್ಲಿ ಕವಿಗಳು, ವಿದ್ವಾಮಸರು ಮೂಡಿಬಂದಿದ್ದಾರೆ. ಈ ಜನಾಂಗದ ಕಲೆ, ಸಾಂಸ್ಕೃತಿಕ ಸಾಹಿತ್ಯ ಕುರಿತಂತೆ ಅನೇಕ ಸಂಪುಟಗಳೇ ಪ್ರಕಟವಾಗಿವೆ. ಆರೆ ಭಾಷೆ ಬಗ್ಗೆ “A language which emerged from marathi nearly a thousand years ago is still in logue in Telangana. It is essential to study fare dialect to learn the linguistic subjects of Marathi since are preseder even now some of the words which are no longer current in the present day marathi.[2] ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಆಂಧ್ರದ ತೊಗಲು ಗೊಂಬೆಯವರಾದ ಆರೆಯವರು ಮಿಕ್ಕ ದಕ್ಷಿಣ ಭಾರತದ ಇತರ ರಾಜ್ಯಗಳಾದ ಕರ್ನಾಟಕ ತಮಿಳುನಾಡಿಗಿಂತ ಭಿನ್ನವಾಗಿ ಕಂಡು ಬರುತ್ತದೆ.

ಆರೆ ಜನರ ಭಾಷೆ ಮತ್ತು ಕಲೆಯ ಬಗ್ಗೆ ಪಾಲ್ಕುರಿಕೆ ಸೋಮಾನಾಥ ಮೊದಲಿಗೆ ಉಲ್ಲೇಖಿಸಿದ್ದಾನೆಂದು ಅಲ್ಲಿನ ವಿದ್ವಾಂಸರ ಅಭಿಪ್ರಾಯವಾಗಿದೆ. ಪಾಲ್ಕುರಿಕೆ ಸೋಮನಾಥ ೧೩ನೆಯ ಶತಮಾನದ ಕವಿ. ಈತ ಈ ಜನರನ್ನು ಕುರಿತು ಉಲ್ಲೇಖಿಸಬೇಕಾದರೆ ಆ ಕಾಲದ ಹೊತ್ತಿಗಾಗಲೇ ಅವರು ಆಂಧ್ರಪ್ರದೇಶದಲ್ಲಿ ನೆಲಸಿ ಅಲ್ಲಿನವರೆ ಆಗಿದ್ದಿರಬೇಕು. ಪ್ರಾಯಃ ಈ ಜನರು ಮೊದಲು ಆಂಧ್ರಪ್ರದೇಶ ಮತ್ತು ಕರ್ನಾಟಕಗಳಿಗೆ ಬಂದು ಮುಂದೆ ತಮಿಳುನಾಡು ಕಡೆಗೆ ಇಳಿದಿರಬೇಕು. ಇವರು ಆಂಧ್ರದಲ್ಲಿ ವ್ಯವಸಾಯ ಅವಲಂಬಿಸಿ ಒಂದೇ ಕಡೆ ನೆಲಸಿರುವುದಾಗಿಯೂ ತಿಳಿದು ಬರುತ್ತದೆ. ಈ ಜನ ಬಳ್ಳಾರಿ, ಅದವಾನಿಗಳ ಕಡೆ ಕರ್ನಾಟಕದ ತೊಗಲು ಗೊಂಬೆಯವರಂಥ ಅಲೆ ಮಾರಿಗಳು ಇದ್ದಾರೆಂದು ತಿಳಿದು ಬರುತ್ತದೆ. ಇವರನ್ನು ಕಿಳ್ಳೆಕೆತ್ತರಗಾಡು, ಬೊಮ್ಮಲಾಟವಾಳ್ಳು ಎಂದೂ ಕರೆಯುತ್ತಾರೆ.

ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ. ಸುಗ್ಗಿಯ ದಿನಗಳಲ್ಲಿಯೇ ಇಲ್ಲಿಯೂ ಗೊಂಬೆಯಾಟಗಳು ನಡೆಯುತ್ತವೆ. ಇವು ಹಳ್ಳಿಗಾಡುಗಳಲ್ಲಿ ನಡೆಯಬೇಕಾದುದರಿಂದ ಗ್ರಾಮ ಮುಖಂಡ ಮತ್ತು ಜನರ ಆಶ್ರಯ ಬೇಕೇಬೇಕಾಗುತ್ತದೆ. ಇವರನ್ನು ಸೀರೆಯ ಮರೆಯಲ್ಲಿ ರಾಮಾಯಣ ಭಾರತ ಆಡಿಸುವವರು ಎಂದೂ ಛೇಡಿಸುವುದುಂಟು. ಸುಮಾರು ೧೩ನೆಯ ಶತಮಾನದ್ದೆಂದು ಹೇಳುವ ಯಕ್ಷಾಗಾನ ರಂಗನಾಥ ರಾಮಾಯಣದ ಭಾಗಗಳನ್ನು ಇವರು ತಮ್ಮ ಆಟಕ್ಕೆ ಉಪಯೋಗಿಸಿಕೊಂಡಿದ್ದಾರೆ. ಈ ಜನಾಂಗದವರೊಬ್ಬರು ಕಾಕತೀಯ ವಿಶ್ವವಿದ್ಯಾಲಯದ ತೆಲುಗು ಪ್ರಾಧ್ಯಾಪಕರಾಗಿದ್ದು ಆರೆ ಜನಾಂಗದ ಬಗ್ಗೆ ಕೆಲಸ ಮಾಡಿ ಪಿಎಚ್.ಡಿ. ಯನ್ನು ಪಡೆದಿದ್ದಾರೆ.

ಆಂಧ್ರ ಪ್ರದೇಶದ ತೊಗಲುಗೊಂಬೆಗಳು ಭಾರತದ ಇನ್ನಾವ ಭಾಗದಲ್ಲಿಯೂ ಕಂಡು ಬರುವುದಿಲ್ಲ. ಇಲ್ಲಿ ಅತ್ಯಂತ ಎತ್ತರವಾದ ಬೊಂಬೆಗಳನ್ನು ಬಳಸುತ್ತಾರೆ. ಇವುಗಳಲ್ಲಿ ಕೆಲವು ಆಳೆತ್ತರವೂ ಉಂಟು. ಇವುಗಳನ್ನು ನಿಂತುಕೊಂಡೇ ಕುಣಿಸುತ್ತಾರೆ. ಇಲ್ಲಿನ ಆಟಗಳಲ್ಲಿ ನಂದೋಳಿಗಾಡು ಎಂಬ ಪಾತ್ರವೊಂದಿರುತ್ತದೆ. ಇದು ಸಂಸ್ಕೃತ ನಾಟಕಗಳಲ್ಲಿ ಬರುವ ಸೇವಕ ಪಾತ್ರದ ಅನುಕರಣೆ ಎಂಬ ಅಭಿಪ್ರಾಯವಿದೆ. ಇಲ್ಲಿಯೂ ಕೇತಿಗಾಡು ಬಂಗಾರಕ್ಕ ಇದ್ದೇ ಇದ್ದಾರೆ. ಕರ್ನಾಟಕದ ಗಡಿಯುದ್ಧಕ್ಕು ಈ ಕಡೆಯ ಆಟದ ಪ್ರಭಾವವನ್ನು ಆಟ ರಾತ್ರಿಯೆಲ್ಲಾ ನಡೆಯುತ್ತದೆ.

ದಕ್ಷಿಣ ಭಾರತದಲ್ಲಿ ತೊಗಲುಗೊಂಬೆಯಾಟ ಸ್ವಲ್ಪ ಮಟ್ಟಿಗೆ ಅಪರೂಪವೆಂದು ಹೇಳಬಹುದಾದ ಪ್ರದೇಶ ಕೇರಳ. ಈ ಪ್ರದೇಶದಲ್ಲಿ ತಮಿಳುನಾಡಿಗೆ ಅಂಡಿದಂತಿರುವ ಇತರೆ ಜಿಲ್ಲೆ ಮತ್ತು ಸುತ್ತ ಮುತ್ತಲಿನ ಕೆಲವು ಪ್ರದೇಶಗಳನ್ನುಳಿದು ಮಿಕ್ಕ ಕಡೆ ತೊಗಲು ಗೊಂಬೆಯಾಟ ಕಂಡು ಬರುವುದಿಲ್ಲವೆಂದು ಹೇಳುತ್ತಾರೆ. ಇದಕ್ಕೆ ಎರಡು ಕಾರಣಗಳನ್ನು ಹೇಳಬಹುದು. ಒಂದು ಕ್ರೈಸ್ತಧರ್ಮ ಮತ್ತೊಂದು ಇಸ್ಲಾಂ ಧರ್ಮ. ಕರಾವಳಿಯ ರಾಜ್ಯವಾದ ಕೇರಳಕ್ಕೆ ಹೊರಗಿನವರ ವಲಸೆಯೂ ಅತಿಯಾಗಿಯೇ ಆಯಿತು.ಈ ಕಾರಣಗಳಿಂದಾಗಿ ದಕ್ಷಿಣ ಭಾರತದ ಬೇರೆ ಪ್ರದೇಶಗಳಲ್ಲಿ ಕಾಣುವ ಎಲ್ಲಾ ಜನಪದದ ಕಲೆಗಳೂ ಅಲ್ಲಿ ಕಾಣಸಿಗುವುದಿಲ್ಲ. ಕೇರಳದ ಗೊಂಬೆಯಾಟ ಬಹುಮಟ್ಟಿಗೆ ತಮಿಳು ತೊಗಲು ಗೊಂಬೆಯಾಟದ ರೂಪ ಎಂದೇ ಹೇಳಬಹುದು. ಇಲ್ಲಿನ ಗೊಂಬೆಗಳು ಕಪ್ಪು ಬಣ್ಣದವು ಎಂಬ ಅಭಿಪ್ರಾಯವಿದೆ. ಇಲ್ಲಿ ತೊಗಲು ಗೊಂಬೆ ಆಡಿಸುವವರೂ ಮರಾಠರೇ ಆದುದರಿಂದ ತಮಿಳುನಾಡಿನಿಂದ ಅಲ್ಲಿಗೆ ಹೋದವರೂ ಆಗಿರಬೇಕು.

ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಾಂಸ್ಕೃತಿಕ ಮೂಲವಾದ ಹಿಂದಿ ಭಾಷಾ ವರ್ಗಗಳೊಂದಿಗೆ ಸೇರುವುದರಿಂದ ಆ ಪ್ರದೇಶದ ವಿವರಗಳನ್ನು ಇಲ್ಲಿ ಸೇರಿಸಿಲ್ಲ. ಏಕೆಂದರೆ ನನ್ನ ಪ್ರಬಂಧ ದ್ರಾವಿಡ ಭಾಷಾಮೂಲದ ಪ್ರದೇಶಗಳನ್ನು ಪ್ರಧಾನವಾಗಿ ಪರಿಶೀಲಿಸಿದೆ. ಆದರೂ ಮಹಾರಾಷ್ಟ್ರ ಭೌಗೋಳಿಕವಾಗಿ ದಕ್ಷಿಣ ಭಾರತ ವಲಯದಲ್ಲಿ ಬರುವುದರಿಂದ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಬಹುದು. ಪೌರಾಣಿಕ ಮತ್ತು ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸುವ ಯಾರಿಗಾದರೂ ದ್ರಾವಿಡರು ಉತ್ತರದಿಂದ ದಕ್ಷಿಣ ಭಾರತದ ಕಡೆಗೆ ವಲಸೆ ಬಂದುದು ತಿಳಿಯುತ್ತದೆ. ಹೀಗೆ ಬಂದ ಜನರು ಅಲ್ಲಲ್ಲಿ ನೆಲಸಿದಾಗ ವಿಂಧ್ಯ ಪರ್ವತ ದಾಟಿದೊಡನೆಯೇ ಸಿಗುವ ಈಗಿನ ಮಹಾರಾಷ್ಟ್ರ ಭಾಗದಲ್ಲಿ ಮೊದಲು ಹೆಚ್ಚು ಸಂಖ್ಯೆಯಲ್ಲಿ ನೆಲಸಿದ್ದಲ್ಲಿ ಆಶ್ಚರ್ಯವಿಲ್ಲ. ಈ ಹಿನ್ನಲೆಯಲ್ಲಿ ತೊಗಲುಗೊಂಬೆಯವರು ಮಹಾರಾಷ್ಟ್ರ ಪ್ರದೇಶದಿಂದ ಈ ಕಡೆಗಳಿಗೆ ಬಂದರೆಂಬುದು ವಾಸ್ತವವೂ ಆಗುತ್ತದೆ.

ಮಹಾರಾಷ್ಟ್ರದಿಂದ ಈ ಕಲಾವಿದರು ಮತ್ತು ಇನ್ನೂ ಕೆಲವು ಜನಪದ ಕಲಾವಿದರು ದಕ್ಷಿಣ ರಾಜ್ಯಗಳತ್ತ ಬರಲು ಎರಡು ಮೂರು ಕಾರಣಗಳಿದ್ದಿರಬಹುದು. ಹದಿಮೂರನೆಯ ಶತಮಾನದಲ್ಲಿ ದಕ್ಷಿಣ ಭಾರತದ ಮೇಲೆ ಆದ ಮುಸಲ್ಮಾನರ ದಾಳಿ ಇದು ಮಹಾರಾಷ್ಟ್ರದ ಪ್ರದೇಶದ ಮೇಲೆಯೇ ನೇರವಾಗಿ ಆದುದರಿಂದ ಅನೇಕರು ದಕ್ಷಿಣದತ್ತ ಬಂದರು ಎಂಬ ಅಭಿಪ್ರಾಯವಿದೆ. ಇನ್ನೊಂದು ಮಹಾರಾಷ್ಟ್ರದ ಕೊಲ್ಲಾಪುರ, ಸಾತಾರೆಯ ಭಾಗ ಭೀಕರ ಕ್ಷಾಮಕ್ಕೆ ತುತ್ತಾದುದರಿಂದ ಇವರು ಕರ್ನಾಟಕ, ಆಂಧ್ರ, ತಮಿಳುನಾಡುಗಳತ್ತ ಬಂದರು ಎಂಬುದು ಮತ್ತೊಂದು. ಇವರು ಅಲೆಮಾರಿ ಜನಾಂಗವೇ ಆದುದರಿಂದ ಸ್ವಾಭಾವಿಕವಾಗಿಯೇ ವಲಸೆ ಹೊರಟರೆಂಬುದು ಇನ್ನೂ ಒಂದು ಕಾರಣ. ಶಿವಾಜಿಯ ಕಾಲದಲ್ಲಿ ಇವರಗಳನ್ನು ಗೂಢಚಾರರನ್ನಾಗಿ ನಿಯೋಜಿಸಿ ಕಳಿಸಲಾಯಿತು ಎಂಬುದು ಮೇಲೆ ಹೇಳಿದ ಯಾವುದೇ ಕಾರಣದಿಂದ ಈ ಜನ ಬಂದಿರುವುದು ಸಾಧ್ಯ. ಆದರೆ ಹೀಗೆ ವಲಸೆ ಬಂದ ಕಾಲವನ್ನಾಗಲಿ, ಕಾರಣವನ್ನಾಗಲಿ ಖಚಿತವಾಗಿ ಹೇಳುವುದು ಅಸಾಧ್ಯ. ಇನ್ನು ಮಹಾರಾಷ್ಟ್ರವೇ ತೊಗಲು ಗೊಂಬೆಯವರ ಮೂಲವೆಂದರ ಮೇಲೆ ಅಲ್ಲಿನ ಆಟಗಳ ರೀತಿ ನೀತಿ ಮತ್ತು ತಂತ್ರಗಳು ದಕ್ಷಿಣ ಭಾರತದ ಇತರ ರಾಜ್ಯಗಳ ಆಟಗಳಿಗಿಂತ ಭಿನ್ನವಲ್ಲ ಎಂಬುದನ್ನು ಒಪ್ಪಬೇಕಾಗುತ್ತದೆ.

ದಕ್ಷಿಣ ಭಾರತದಲ್ಲಿ ತೊಗಲು ಗೊಂಬೆಯಾಟಗಳ ಒಂದು ವಿವರಣಾತ್ಮಕ ಪಕ್ಷಿನೋಟವನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಆಯಾ ಪ್ರದೇಶದ ಗೊಂಬೆಯವರ ಜೀವನ. ಅವರ ಆಟಗಳ ವೈವಿಧ್ಯತೆ. ತಂತ್ರ, ರಂಗಸಜ್ಜಿಕೆ, ಕಥೆಗಳು ಮತ್ತು ಕಥೆಗಾರಿಕೆ ಇತ್ಯಾದಿ ಇತ್ಯಾದಿಗಳ ಬಗೆಗೆ ವಿವರವೂ ತಲಸ್ಪರ್ಷಿಯೂ ಆದ ಅಧ್ಯಯನ ನಡೆಯದೆ ಈ ಬಗೆಗಿನ ಎಲ್ಲವನ್ನೂ ಅರಿಯುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಈ ಹಿನ್ನೆಲೆಯಲ್ಲಿ ತೊಗಲು ಗೊಂಬೆಯಾಟಗಳ ಅಧ್ಯಯನ ಆಗಬೇಕಾಗಿದೆ ಎಂದು ನನ್ನಗನ್ನಿಸುತ್ತದೆ.

* * *[1]  Hayavadana Rao The Mysore Tribes and castes Page 516 Vol. III

[2]  ಪರ್ಯಾರಂ ಜಗ್ನಾಥ ಓರೆ ಜಾಯ ಪದರಿಯಾಲು