‘ಇನಿ ಅರಿಂದೇನ್ ಈಶರ್ಕುಂ ನಾನ್ಮುಹರ್ಕುಂ ತೆಯ್‌ವಂ
ಇನಿ ಅರಿಂದೇನ್ ಎಂಬೆರುಮಾನ್ ಉನ್ನೈ ಇನಿ ಅರಿಂದೇನ್
ಕಾರಣನ್ ನೀ ಕತ್ತವೈನೀ ಕರ್ಪವೈನೀ ನಲ್‌ಕಿರಿಶೈ
ನಾರಣನ್‌ನೀನನ್ಗರಿಂದೇನ್ ನಾನ್’

ಸರ್ವೇಶನಾದ ನೀ ಅಜರುದ್ರರಿಗೊರ್ವ ದೇವನಿಂದೀಗ ಅರಿತೆ
ನೀರುವಂತೆಯೇ ಈಗ ಅರಿತೆ, ಎಲ್ಲಕೂ ನೀ ಕಾರಣನೆಂದರಿತೆ
ಇದಕೆ ಮೊದಲು ತಿಳಿದದ್ದು, ಈ ಮೇಲೆ ಮುಂದೆ ತಿಳಿಯುಲಾಗುವುದಾದ
ವಸ್ತು ಪದಾರ್ಥವದೆಲ್ಲ ನಿನ್ನ ನಿಯಮಗಳಿನುಸಾರವೆಂದರಿತೆ
ಕಾರಣವಿರದೆಯೆ ರಕ್ಷಿಪ ಗುಣವುಳ್ಳ ಸರ್ವಶೇಷಿನಾರಣಾ! ನೀನೇ ನೀನೇ ಎಂದರಿತೆ.

‘ಆರು ಮಾರು ಮಾರುಮಾಯ್ ಓರೈಂದು ಮೈಂದು ಮೈಂದುಮಾಯ್
ಏರುಶೀರಿರಣ್ಣು ಮೂನ್ರುಮ್ ಏಳ್‌ಮಾರು ಮೆಟ್ಟುಮಾಯ್
ವೇರುವೇರು ಜ್ಞಾನಮಾಹಿ ಮೆಯ್ಯಿನೋಡು ಪೊಯ್ಯಮಾಯ್
ಊರೊಡೋಶೈಯಾಯವೈಂದುಂ ಆಯವಾಯ ಮಾಯನೇ’

ಯಜನಯಾಜನ ಅಧ್ಯಯನ ಅಧ್ಯಾಪನದಾನ ಪ್ರತಿಗ್ರಹಗಳೆಂಬುವ ಆರೂ ಬಸಂತ ಗೀಷ್ಮವರ್ಷ ಶರದ ಹೇಮಂತ ಶಿಶಿರಗಳೇ ಋತುಗಳಾರೂ ಆಗ್ನೇಯ ಜ್ಯೋತಿಷ್ಟೋಮ ವಿಶ್ವಜಿತ್, ಅಶ್ವಮೇಧಿಕ ಮೊದಲಾದ ಆರು ಭೂತಯಜ್ಞ ಮನುಷ್ಯಯಜ್ಞ ಪಿತೃಯಜ್ಞ ದೇವಯಜ್ಞ ಬ್ರಹ್ಮಯಜ್ಞ ಪ್ರಾಣ ಅಪಾನ ವ್ಯಾನುದಾನ ಸಮಾನವೆಂಬುವೈದು ಪ್ರಾಣಾಹುತಿ ಗಾರ್ಹಪತ್ಯ, ಅಹವನೀಯ, ದಕ್ಷಿನ, ಸಭ್ಯ, ಅವಸತ್ಯವೆಂಬಂಪಂಚಾಗ್ನಿ ಪರಮಾತ್ಮಜ್ಞಾನ ತದಿತರ ವಿಷಯಗಳ ತ್ಯಾಗ ಎಂಬತಿಶಯ ವೆರಷ ಈಶ್ಚತ್ವ ಮೋಕ್ಷ ಸಾಕ್ಷಾತ್ಕಾರ – ಮೂರೂ – ಮಾಯಾ, ವಿವೇಕ, ವಿಶೋಕ, ಅಭ್ಯಾಸ, ಕ್ರಿಯಾ, ಕಲ್ಯಾಣ, ಅನವಸಾದ, ಅನುದ್ಧರ್ಷವೆಂಬವಳೂ ಜ್ಞಾನ, ಬಲ, ಐಶ್ವರ್ಯ, ವೀರ್ಯ, ತೇಜ, ಶಕ್ತಿಯೆಂಬ ಆರೂ ಅಪಹತಪಾಷ್ಮತ್ವ ವಿಜರ, ವಿಮತ್ಯು ವಿಶೋಕ, ವಿಜಿಪತ್ಸಾ, ಅಪಿಪಾಸಾ, ಸತ್ಯಾಕಾಮ, ಸತ್ಯಸಂಕಲ್ಪವೆಂಬ ಎಂಟೂ ಆಗಿ ಸುಜ್ಞಾನ ವಿಲಕ್ಷಣಗಳ ಬೇರೆ ಮಾಡಿ, ಸತ್ಯಸ್ಯ ಸತ್ಯನಿವನೇ ಆಗಿ ನೋಡೆ ವಿಶೇಷ ಮೋಹಕರಾಗಿ, ಪರಾ, ವ್ಯೂಹ, ವಿಭವ, ಅಂತರ್ಯಾಮಿ, ಹಾರ್ದ ಎಂಬೈದುಶರೀರನಾಗಿ, ಮಾಯಿಯಲ ಇವ ಮಾಯೆಕಮ ಜಯಸಲೆಮ್ಮ ಹಾರಯಿಸಲಿ”.

‘ಒನ್ರು ಇರಂಡು ಮೂರ್ತಿಯಾಯ್ ಉರಕ್ಕಮೋಡುಣರ್ಚಿಯಾಯ್
ಒನ್ರು ಇರಂಡು ಕಾಲಮಾಹಿ ವೇಲೈ ಇಜಾಲಮಾಯಿನಾಯ್
ಒನ್ರು ಇರಂಡು ತೀಯುಮಾಹಿ ಆಯನಾಯ ಮಾಯನೇ
ಒನ್ರು ಇರಂಡು ಕಣ್ಣಿನಾನುಮ್ ಉನ್ನೈಏತ್ತವಲ್ಲನೇ’

ಮೂರು ಮೂರುತಿ ಬ್ರಹ್ಮ ವಿಷ್ಣು ರುದ್ರರಾಗಿ, ಜ್ಞಾನ ಅಜ್ಞಾನಕೂ ಪ್ರಭುವಾಗಿ
ಮೂರು ಕಾಲಗಳಾಗಿ ಕರ್ಮಕೊಳಗಾದ ಲೋಕಕೊಡೆಯ ನೀನಾಗಿ,
ಗಾರ್ಹ ಪತ್ಯ ಅಹವನೀಯ ದಕ್ಷಿಣ ಗಳೆಂಬ ತ್ರಿಕಾಗ್ನಿಯಾಗಿ
ಗೋಪಾಲಬಾಲನಾದ ನೀ ಅಚ್ಚರಿವೇಷ್ಟಿತ,
ಮೂರು ಕಂಗಳ ರುದ್ರದೇವರು ತಾ ನಿನ್ನ ನುತಿಸಬಲ್ಲನೆ ದೇವ!

‘ಶೊಲ್ಲಿನಾಲ್ ತೊಡರ್ಚಿನೀ ಶೊಲಪ್ಪಡುಂ ಪೊರಳುಂ ನೀ
ಶೊಲ್ಲಿನಾಲ್ ಶೋಲಪ್ಪಾಡಾದು ತೋನ್ರುಹಿನ್ರ ಶೋದಿನೀ
ಶೊಲ್ಲಿನಾಲ್ ಪಡೈಕ್ಕನೀ ಪಡೈಕ್ಕವಂದು ತೋನ್ರಿನಾರ್
ಶೋಲ್ಲಿನಾಲ್ ಶುರುಂಗ ನಿನ್ ಕುಣಂಗಳ ಶೊಲ್ಲವಲ್ಲರೇ’

ಮಾತಿನರ್ಥವು ನೀನು, ಮಾತಿನಿಂದ ಹೇಳಲಾಗುವ ಪದಾರ್ಥವೂ ನೀನೆ
ಮಾತಲ್ಲಿ ಪೇಳವಿಕ್ಕಾಗದ ಪಂಜ್ಯೋತಿಯೂ ನೀನೇ!
ಮಾತಿಂದ ವಾಚ್ಯವಾಗಿ ಪಡೆವುದ ಕಾಣುವವನೂ ಪಜೆವುದಾಗಲು
ತೊರಿದವನೂ ನೀ! ನಿನ್ನೆಲ್ಲ ಗುಣಗಳನು ಮಾತಲ್ಲಿ ಪೂರ್ಣದಿಂ ಪೇಳಬಲ್ಲರಿಹರೇ!

‘ಶೊಲ್ಲಿನಾಲ್ ತೊಡರ್ಚಿನೀ ಶೊಲಪ್ಪಡುಂ ಪೊರಳುಂ ನೀ
ಶೊಲ್ಲಿನಾಲ್ ಶೋಲಪ್ಪಾಡಾದು ತೋನ್ರುಹಿನ್ರ ಶೋದಿನೀ
ಶೊಲ್ಲಿನಾಲ್ ಪಡೈಕ್ಕನೀ ಪಡೈಕ್ಕವಂದು ತೋನ್ರಿನಾರ್
ಶೋಲ್ಲಿನಾಲ್ ಶುರುಂಗ ನಿನ್ ಕುಣಂಗಳ ಶೂಲ್ಲವರೇ’

ಕೇನ ಉಪನಿಷತ್ತು ಹೇಳುತ್ತದೆ : ನಾನು ವೇದಗಳಿಂದ ಮಾತ್ರ ಅರಿಯಲ್ಪಡುವವನಲ್ಲ (ನಮ್ರಭಕ್ತಿಯಿಂದ ನನ್ನನ್ನು ಅರಿಯಲು ಸಾಧ್ಯ ಇದನ್ನೇ ಆಳ್ವಾರರು ಸೊಗಡಾದ ತಮಿಳಲ್ಲಿ ಹಾಡುತ್ತಾರೆ)

ಮಾತಿನ ಅರ್ಥವೂ ನೀನೇ ಮಾತಿಂದ ಹೇಳಲ್ಪಡುವ ಪದಾರ್ಥವೂನೀಯೇ!
ಮಾತಿನಿಂದ ಹೇಳಲಾಗದ ಪರಮಜ್ಯೋತಿಯೂ ನೀ! ಮತ್ತೆಮಾತಿಂದಲೆ
ನುಡಿಯಬಹುದಾದ, ಪಡೆಯುವುದ ಕಾಣುವವ, ಪಡೆಯಲಾಗುವಂತೆ ತೋರಿದವನೆ
ನೀನೇ ಕಣ್ಣಾ ! ನಿನ್ನೆಲ್ಲಗುಣಗಳ ನುಡಿಯೆಂ ಪೂರ್ಣವಾಗಿನುಡಿಯಬಲ್ಲವರಿಹರೇ?

‘ವೇದಾನೂರ್ಪಿಯುಂ ನೂರುಂ ಮನಿಶರ್ ತಾಂ ಪುಹುವರೇಲುಂ
ಪಾದಿಯುಮ್ ಉರಂಗಿಪ್ಪೋಹುಂ ನಿನ್ರದಿರ್ಪದಿನೈಯಾಂಡು
ಪೇದೈಪಾಲಕನದಾಹುಂ ಪಿಣಿಪಶಿಮೂಪ್ಪುತುನ್ಬಮ್
ಆದಲಾಲ್ ಪರವಿ ವೇಂಡೇನ್ ಅರಂಗಮಾನಹರುಳಾನೇ’

ವೇದಗಳಿಗನುಸಾರ ನೂರು ವರುಷದಾಯು ನರರು ಪಡೆದರೂ
ಅದರಲರ್ಧ ಲರ್ಧ ನಿದ್ದೆ ಮಬ್ಬಲ್ಲೇ ಕಳೆವುದು, ಉಳಿದೈವತ್ತು
ವರುಷ ಶಿಶುತನ, ಬಾಲ್ಯ, ಜವ್ವನ, ಹಸಿವು, ಮುಪ್ಪು, ರೋಗ, ದುಃಖದೆ
ಸವೆದಪುದು – ದಯಾಮಯಿರಂಗ! ಈ ಪರಿಯಜನುಮನಾ ಬೇಡೆ ತಂದೆ!

‘ಮನತ್ತಿಲೋರ್ ತೂಯ್‌ಮೈ ಇಲ್ಲೈ ವಾಯಿಲೋರ್ ಇನ್‌ಶೊಲ್ಲಿಲ್ಲೈ
ಶಿನತ್ತಿನಾಲ್ ಶೆತ್ತಮ್‌ನೋಕ್ಕಿತ್ತೀವಿಳಿವಿಳಿವನ್‌ವಾಳಾ
ಪುನತ್ತುಚಾಯ್ ಮಾಲೈಯಾನೇ ಪೊನ್ನಿಶೂಳ್ ತಿರುವರಂಗಾ
ಎನಕ್ಕಿನಿ ಗತಿಯೆನ್ ಶೊಲ್ಲಾಯ್ ಎನ್ನೈಯಾಳುಡೈಯಕೋವೇ’

ಎನ್ನ ಮನದಲಿ ಶುದ್ಧಿಯಿಲ್ಲ, ಬಾಯಲೊಂದು ಅಕ್ಕರೆಯಾ ಮಾತಿಲ್ಲ
ಕೋಪದಿಂದ ಚುಚ್ಚಿನೋಯಿಪ ಬಿರುನುಡಿಗಳನಾಡುವೆನಲ್ಲ !
ನರುಗಂಪಿನ ತಿಳಿಹಸಿರ ಎಳೆತುಳಸಿಮಾಲೆ ಧರಿಸಿಹ ಶ್ರೀರಂಗದರಂಗಯ್ಯ !
ಕಾವೇರಿ ಸುತ್ತರಿದಿಹಳು ನಿನ್ನ, ನಾನಿನ್ನದಾಸ, ಈಗ ನನ್ನ ಮುಂದಣ ಗತಿಪಥ ತೋರಿ,
ತಿಳುಹಯ್ಯ!

ಇದೇ ರೀತಿಯಲ್ಲಿ ರಾಜರಾದರೂ ಎಲ್ಲ ತೊರೆದು ಶ್ರೀರಂಗನದಾಸ್ಯ ಪ್ರಪತ್ತಿ ಹಂಬಲಿಸಿದ
ಶ್ರೀ ಕುಲಶೇಖರ ಆಳ್ವಾರರು – ಪರಮಾತ್ಮನ ಶ್ರೀ ನುಡಿ (ಪೆರುಮಾಳ್ ತಿರುಮೊಳಿ)
ಎಂಬುವ ಪ್ರಬಂಧದಲ್ಲಿ ತುಂಬುಭಕ್ತಿಯಿಂದ ಆತನನ್ನು ಹಂಬಲಿಸುತ್ತಾರೆ.
“ಹೆತ್ತವ್ವ ಕುಪಿತಳಾಗಿ ದೂರ ತಳ್ಳಿದರೂ ಮತ್ತೇನನೂ ನೆನೆಯದೆಯೆ
ಆ ಅಮ್ಮನ ದಿವ್ಯ ಕೃಪೆಯ ನೆನೆನೆನೆದು ಅಳುವ ಕಂದಮ್ಮನಂತಿದೇನೆ”.

ನಿನ್ನ ಕಂಡೆ ಈ ನನ್ನ ಕಂಗಳು ಮತ್ತೇನನೂ ಕಾಣದಂತಾಗಲಿ
ಅದೇನು ಚೆಲುಪಿನಾಗರನೊ ನೀನು! ಭಕುತರಿಗೊಲಿವ ರಂಗಶಾಯಿ!
ಏನಾದರಿರಲಿ ಬರಲಿ ಏನಾದರೂ ಹೋಗಲಿ ನೀನನ್ನ ನಾನಿನ್ನ ಈ ಚೆಂದ
ದನುಬಂಧ ಮಾತ್ರ ಬಿಡಿಸಿ ಮತ್ತೆ ಈ ನೊಣದ ಲೋಕಕೊಯ್ಯದಿರಯ್ಯ (ತಿರುಪಾಣಿ ಆಳ್ವಾರರ ಒಂದುಪದ್ಯ)

‘ತಾನಾಹ ನಿನೈಯಾನೇಲ್ ತನ್ನಿನೈನ್ದು ನೈವೇರ್ಕು, ಓರ್
ಮೀನಾಯ ಕೊಡಿನೆಡುವೇಳ ವಲಿಶೆಯ್ಯ, ಮೆಲಿವೇನೋ
ತೇನ್‌ವಾಯವರಿವಂಡೇ, ತಿರುವಾಲಿನಹರಾಳುಂ
ಆನ್ ಆಯರ್ಕು ಎನ್ ಉರುನೋಯ್ ಅರಿಯ ಉರೈಯಾಯೇ’

ನಾಯಕಿ ಆಳ್ವಾರರು ತನ್ನ ನಾಯಕ ದೇವರಿಗೆ ಮಹಾವಸ್ಥೆಯಲಿ ನೊಂದು ಪ್ರಿಯತಮನಿಗೆ ಕಳಿಸುವ ಸಂದೇಶ – ತಿರುಮಂಗೈ ಆಳ್ವಾರರಪೆರಿಯ ತಿರುಮೊಳಿ ಮಾದರಿ ಒಂದು ಪದ್ಯವಿದು

ಅವನು ತಾನಾಗಿ ನನ್ನ ನೆನೆಯ ದಿರ್ದರೂ ಅವನನೆ ನೆನೆವುತ್ತ ಹಂಬಲಿಸುತಿಹ ಎನ್ನನು
ಮಕರ ಧ್ವಜ ಮನುಮಥಹೂ ಅಂಬಿನಲಿ ಗಾಸಿಪಡಿಸುತಿರಲೂ ನೋಯುವೆನು!
ಜೇನಂಥ ಮಾತಾಡಿದ ಷಟ್ಟದ ಭಾವನೆಯ ಭ್ರಮರ, ತಿರುವಾಲಊರಿನ
ಆ ಗೋಪಾಲಕೃಷ್ಣನ ಲಿಗೈದು ಈ ಎನ್ನ ಬಾಧಿಪವಿರಹಾಗ್ನಿ ಅವನರಿಯೇ ಹೇಳೆಯ?

ಪರಾಕು ಪರಾಕು ಪ್ರಶಂಸನೀಯ ಇಂದ್ರನೀಲ ಮಣಿಬಣ್ಣದವನೇ! (ಪೆರಿಯಾಳ್ವಾರರ ಪದ್ಯದ ಸಾಲು)

‘ಪಲ್ಲಾಂಡು ಪಲ್ಲಾಂಡು ಪಲ್ಲಾಯಿರತ್ತಾಂಡು
ಪಲಕೋಡಿ ನೂರಾಯಿರಮ್
ಮಲ್ಲಾಣ್ಡ ತಿಣ್ಡೋಳ್ ಮಣಿವೆಣ್ಣಾ ! ಉನ್
ಶೆವ್ವಡಿ ಶೆವ್ವಿ ತಿರುಕ್ಕಾಪ್ಪು’

ಪಲಕಾಲ ಪಲಕಾಲ ಪಲವು ಸಾಸಿರಕಾಲ
ಪಲಕೋಟಿ ನೂರು ಕಾಲ
(ಚಾಣೂರ) ಮಲ್ಲರನು ಗೆಲಿದ ನಿಡುದೋಳ ಮಣಿವರ್ಣಾ
ನಿನ್ನ ಕೆನ್ನಡಿಯ ಕೆಂಪಿಗೆ ರಕ್ಷೆಯಿರಲಿಸತತ !
ಈ ದಾಸನಿಗೆನಿನಗೆ ಹಲಕಾಲ ಸಾಸಿರಕೂ ನಂಟು ಹಿಂಜದಿರಲಿ !
ನಿನ್ನ ಬಲಎದೆಯಬಿಡದ ಸಿರಿದೇವಿ ಸೊಗ ನೆಲಸಿರಲಿ ಹಲವುಕಾಲ !

‘ಶಿತ್ತಂ ಶಿರುಕಾಲೇ ವಂದು ಉನ್ನೈಚ್ಚೇವಿತ್ತು, ಉನ್
ಪೊತ್ತಾಮರೈ ಅಡಿಯೇ ಪೋತ್ತುಂ ಪೊರುಳ್‌ಕೇಳಾಯ್, (ಆಂಡಾಳ್ – ತಿರುಪ್ಪಾವೈ ಒಂದು ಪದ್ಯ)
ಪೆತ್ತಂ ಮೇಯ್‌ತ್ತುಣ್ಣುಂ ಕುಲತ್ತಿಲ್‌ಪಿರಂದು, ನೀ
ಕುತ್ತೇವಲ್ ಎಂಗಲೈ ಕೊಳ್ಳಾಮಲ್ ಪೋಹಾದು
ಎತ್ತೈಪ್ಪರೈ ಕೊಳ್ವಾನ್ ಅನ್ರುಕಾಣ್ ಗೋವಿಂದಾ
ಇತ್ತೈಕ್ಕುಂ ಎಪೇಬು ಪಿರವಿಕ್ಕುಂ ಉನ್‌ತನ್ನೋಡು
ಉತ್ತೋಮೇಯಾವೋಮ್ ಉನಕ್ಕೇನಾಮ್ ಆಳ್‌ಚೆಯ್‌ವೋಂ
ಮತ್ತೈ ನಮ್ ಕಾಮಂಗಳ್ ಮಾತ್ತೇಲೋರೆಮ್ಬಾವಾಯ್’

ಮಾರ್ಗಶಿರ ಮಾಸದ ಹುಣ್ಣಿಮೆಯ ಪರಿಶೆಬಂದಿತು;
ನೀರಾಡಬರುವವರೆದ್ದು ಬನ್ನಿರೆಮ್ಮೊಂದಿಗೆ; ಸಿರಿತುಂಬಿದ
ಗೊಲ್ಲವಾಡಿಯ ಕಿರುಜವ್ವನೆಯರು ಚೆಂದದೊಡವೆಯವರು
ಚೂಪಾದ ಮೇಲಾಯುಧ ಪಿಡಿದು ದಸ್ಯುಗಳ ಶಿಕ್ಷಿಸುವ ನಂದಕುವರನನು
ಚೆಲುವು ತೀವಿದ ಕಣ್ಣಿನಯಶೋದೆ ಶೋದೆಯ ಮರಿಸಿಂಗ,
ನೀಲಮುಗಿಲಮೆಯ್ಯ ರವಿಯಂತಹ ಕಣ್ಣ ತಿಂಗಳಂಥ ಮೊಗದಾತ,
ನಾರಾಣನೆಮ್ಮ ಆಸೆಗಳನ್ನೆಲ್ಲ ಸಲಿಸುವನು
ಆಗದವರನೂ, ನೋಡಿ, ಹೊಗಳಿ ಹಾಡುವ ತೆರನೆ ವ್ರತವಾಚರಿಸಬನ್ನಿ

‘ಆರ‍್ವಿನವಿಲುಂ ವಾಯ್‌ತಿರವಾದ ಅಂದಕಾಲಮಡೈವದನ್ ಮುನ್ನಂ
ಮಾರ್ವಮೆನ್ಬದೋರ್ ಕೋಯಿಲಮೈತ್ತು ಮಾದವನೆನ್ನುಂ ದೈವತ್ತೈನಾಟ್ಟ
ಅರ್ವಮೆನ್ಬದೋರ್ ಪೂವಿಡವಲ್ಲಾರ್‌ಕ್ಕು ಅರವರ್ ದಂಡತ್ತಿಲ್
ಉಯ್ಯಲುಮಾಮೇ’

ಪೆರಿಯಾಳ್ವರರ ತಿರುವಳಿ

ನಾವರಿಯದೆ ಹಣವನು ಮರೆಯಾಗಿ ಹುಗಿದು ಇರಿಸಿರುವುದಾದರೆ ಹೇಳು,
ಎಂದು, ಏನ್ನಾಉಸಿರೆಳೆಯುತಿರೆ, ಸುತ್ತಲಿನ ಮಗ, ಹೆಂಡತಿ, ನೆಂಟರೆಲ್ಲರೂ
ನನ್ನ ಬಾಯೇ ತಿರುಗದೆ, ಕೊನೆಯ ಕಾಲಬರುವುದಕ್ಕೆ ಮೊದಲು
ಮನವಿದೆಂದೆನ್ನುವ ಒಂದು ಅದ್ವಿತೀಯ ದೇವಾಲಯವ ನಿರ್ಮಿಸಿ,
“ಶ್ರೀಶ” ನೆಂಬುವ ಸುವಿದಿತ ಸುಪ್ರಸಿದ್ಧ ಅದ್ವಿತೀಯನ ಸ್ಥಾಪಿಸಿ,
ಪ್ರೇಮ – ಅವನಲ್ಲಿಯೇ ಪ್ರೇಮ – ಭಕುತಿಯೆಂಬ ಹೂಗಳನರ್ಪಿಸಬಲ್ಲರಿಗೆ
ಖಚಿತವಿದು, ಯಮದೂತರ ದಂಡನೆಯತಪ್ಪಿಸಿ ಕೊಂಡುಬಾಳಲು ಸಾಧ್ಯವಹುದು.

ಪೆರಿಯಾಳ್ವರರ ಸಾಲು

ಅದೇ ರೀತಿ, ಮಗುವಿಗೆ ನಾರಾಯಣ, ರಾಮ, ಕೃಷ್ಣ, ಕಣ್ಣ ಎಂದೆಲ್ಲ ಕರೆಯುವ ಬದಲು
ನಂಬಿ ಪಿಂಬಿ ಎಂದೇನೇನೊ ನಾಡಿನಲ್ಲಿರುವ ಮನುಷ್ಯರ ಹೆಸರಿಟ್ಟರೆ, ಏನಾದೀತು?

(ಈಗಲೂ – ಈ ಯುಗದಲ್ಲೂ – ವಿಚಿತ್ರವಾದ ಹೆಸರಿಡಿರುವರಲ್ಲವೇ? ಹಾಗೆ ಕರೆಯುವಾಗ, ದೇವರ ಹೆಸರನ್ನು ನೆನಪು ಮಾಡಿಕೊಂಡಂತೆ ಆದೀತೆ?)

ಪೆರಿಯಾಳ್ವಾರರ ತಿರುಮೊಳಿ

‘ಕಾದಂ ಪಲವುಂ ತಿರಿಂದು, ಉಪನ್ರು, ಎರ್ಕು ಆಂಗು ಒರುವಿನಲ್ಲಿ ನೀರುಮಿಲ್ಲೈ
ಉನ್‌ಪಾದನಿಪಲಲ್ಲಾಲ್ ಮತ್ತೊರು ಉಯರ್ಪು ಇಡಂ ನಾನೆಂಗುಂ ಕಾಣ್ಗಿನ್ರಿಲೇನ್
ತೂದು ಶೆನ್ರಾಯ್ ಕುರುಪಾಂಡವರ್ಕಾಯ್, ಅಂಗು ಓರುಪೊಯ್‌ಚ್ಚುತ್ತಂ ಪೇಶಿಚ್ಚೆನ್ರು
ಪೇದಂಶೆಯ್ದೆಂಗುಂ ಪಿಣಂಪಡುತ್ತಾಯ್ ತಿರುಮಾಲಿರುಂಶೋಲೈ ಯೆನ್ದಾಯ್’

ಕುರುವಂಶದಲ್ಲಿ ಜನಿಸಿದ ಪಾಂಡವರಿಗಾಗಿ, ದುರ್ಯೋಧನನ ಬಳಿ ದೂತನಾಗಿ
ಅವರ ಜೊತೆಗೆ ‘ನಿಮ್ಮ ಕೂಡ – ಪಾಂಡವರೊಡಗೂಡೆ ಎನಗೆ ಭೇದವಿಲ್ಲವೆಂಬ ಸುಳ್ಳಾಡಿ
ಆಶ್ರಿತರು ಅನಾಶ್ರಿತರು ಎಂಬ ಭೇದವನ್ನುಂಟು ಮಾಡಿ ಕಂಡೆಡೆಯಲಿ ಹೆಣಗಳು ಬೀಳುವಂತೆ
ಮಾಡಿ,
ಅಯ್ಯಾ ತಿರುಮಾಲಿರುಂಶೋಲೈಯಲಿಹ ಎನ್ನೊಡೆಯಾ! ಕಂಗಳು ಮನಕೆ
ನಿಲುಕುವಡೆಯಲೆಲ್ಲ ಅಳಲನೇ ಹೊಂದಿ ತಿರಿತಿರಿದೆನಗೆ ಆ ಜಾಗದಲಿ
ನೆರವನೀಯಲು ಒಂದು ನೆರಳೂ ಇಲ್ಲ, ತಾಪವ ತಣಿಪತಣ್ಣೀರಿರುವೆಡೆ ಕೂಡ ಕಾಣಲಿಲ್ಲ!
ಚೆಂದದಲಿ ಆಲೋಚಿಸಿದರೆ, ನಿನ್ನ ಪಾದದ ನೆಳಳುಳಿದು ಉಸಿರಡಲೂ ಬೇರೆಡೆನನಗೆಲ್ಲೂ
ಕಾಣದಲ್ಲ!

‘ಅನ್ನಂ ಶೆಲ್ವೀರುಮ್ ವಂಡಾನಂ ಶೆಲ್ವೀರುಂ ತೋಪದಿರಂದೇನ್
ಮುನ್ನಂ ಶೆಲ್ವೀರ್ಹಳ್ ಮರವೇಲ್ಮಿನೋ, ಕಣ್ಣನ್‌ವೈಹುಂದನೋಡು
ಎನ್ ನೆಂಜಿನಾರೈಕ್ಕಂಡಾಲ್ ಎನ್ನೈಚ್ಚಲ್ಲಿ ಅವರಿಡೈ ನೀರ್
ಇನ್ನಂ ಶೆಲ್ಲೀರೊ – ದಿವೋ ತಹವೆನ್ರಿಶೈಮಿನ್ ಹಳೇ’

ಆಗಸದೆ ಹಾರುತ ಪಯಣಿಸುತಿಹ ಅಂಚೆವಿಂಡನೆ, ನಾರಹಕ್ಕಿಗಳನೆ ಕೈ ಮುಗಿದು ಬೇಡುತಿಹೆನು ಮೊದಮೊದಲು ಯಾರು ನಿಮ್ಮಲಿ ತೆರಳಿ ಸೇರವಿರೊ ಅವರು ಎನ್ನ ಕಾರ್ಯವ ಮರೆಯಲಾಗದು

ತನ್ನ ಸೌಲಭ್ಯದಿಂದ ಎನ್ನಮನವನೆಕದ್ದ ವೈಕುಂಠಕೊಡೆಯನಜತೆ
ಬೆರೆತಿರುವೆನ್ನ ಮನವೆಂಬರನು ನೀವೇನಾದರೂ ಕಂಡಿರಾದರೆ ಎನ್ನೊಡನೆ
ಅವರಿಗಿಹ ನಂಟು – ಏಕಾಂಗ ಭಾವವನು ಅವರಿಗೆ ತಿಳಿಯಹೇಳಿ

“ನೀವು ಬರುವಾಗಲೇ ಆಪತ್ತಿನಲ್ಲಿದ್ದ ಅವರ ಬಳಿ ನೀವು ಹೋಗದಿರುವುದು ಸರಿಯೇ? ಸರಿಯೇ? ಎಂದೆಲ್ಲರೂ ನನ್ನಪರ ಸಾರಿ ಹೇಳಿರಿ !”

(ಆಳ್ವಾರರ ನಾಯಕಿಭಾವಭಗವಂತ ನಾಯಕನೆಂಬುವುದು – “ಶರಣಸತಿ, ಲಿಂಗಪತಿಎಂಬಂತೆ)

            ‘ಉಯರ್ವು ಅರ ಉಯರ್‌ನಲಂ ಉಡೈಯವನ್ ಯವನವನ್
ಮಯರ್ವು ಅರ ಮತಿನಲಂ ಅರುಳಿನನ್ ಯವನವನ್
ಅಯರ್ವು ಆರುಂ ಅಮರರ್‌ಹಳ್ ಅಧಿಪತಿ ಯವನವನ್
ತುಯರರು ಶುಡರಡಿ ತೊಳದು ಎಳು ಎನ್ಮನನೇ’

ಹೇ ಮನಸೇ! ನಿರತಿಶಯವಾಗಿ ಮಿಗಿಲಾದ ಆನಂದವನಾರುಹೊಂದಿಹನೂ,
ಮಂಕುತನವೆನ್ನದು ನೀಗುವಂತೆ ಪ್ರೀತಿರುಪಾಪನ್ನಜ್ಞಾನವನು,
ಎಂದರೆ, ಭಕುತಿಸ್ಫಟಿಕವನಾರು ಅನುಗ್ರಹಿಸುವನೋ
ಸದಾ ಸರ್ವಜ್ಞರಾದ ನಿತ್ಯಸೂರಿಗಳ ಅಧಿಪತಿಯದಾವನೋ
ಅಂಥ ಭಗವಂತನ ಕಾಂತಿಮಯ ದುಃಖನಾಶಕ ಸೊಡರಡಿಯಾಶ್ರಯಿಸೋ!
ಮನದೊಳಗಣ ಮಲಹರಿದು ತೊಡೆದು ನಿರ್ಮಳಾನಂದವನುಭವಿಸೋ,
ಓ ಎನ್ನ ಮನವೇ! ತನು ಮನದ ನೋವ ಅವನೆ ತಾನೆ ತೊಡೆವಾತನು!

ತಿರುವಾಯ್ಮೊಳಿ

‘ಉಣ್ಣಿಲಾವಿಯ ಐವರಾಲ್ ಕುಮೈತೀತ್ತಿಎನ್ನೈ ಉನ್‌ಪಾದ ಪಂಗಯಂ
ನಣ್ಣಿಲಾವಹೈಯೇ ನಲಿವಾನಿನ್ನಂ ಎಣ್ಣುಹಿನ್ರಾಯ್.’

ಎಮ್ಮೊಡಲಲಿರ್ದೇ ವರ್ತಿಸುತಿರುವ ಐವರಿಂದ್ರೀಯಗಳಿಂದ
ನಾವು ಲೋಲುಪರಾಗಿ ಪೀಡೆಯನುಭವಿಪಂತೆ ಮಾಡುತ
ನಿನ್ನಡಿದಾವರೆಗಳ ಸೇರಿ ಸುಖಿಸದಂತೆ ಬಂಧಿಸಲು ಸಂಕಲ್ಪ
ಗೈದಿಹೆಯ ಎನ್ನೊಡೆಯ ನಾರಣಾ!

‘ಅವನಾಮ್? ಇವನಾಮ್? ಉವನಾಮ್?
ಮತ್ತುಂಬರ್‌ಅವನಾಮ್? ಅವನ್ ಎನ್ರಿರಾದೇ,
ಅವನಾಂಅವನೇ ಎನತ್ತೆಳಿನ್ದು ಕಣ್ಣನುಕ್ಕೇ ತೀರ್ನ್ದಾಲ್
ಅವನೇ ಎವನೇಲುಂ ಆಮ್.’

ನಮ್ಮಾಳ್ವಾರರ ದೈವದನುಭವ

ನಾವವನಿವನುವನು,
ಅವಳಿವಳುವಳೆವಳು,
ತಾವವರಿವರುವರು,
ಅದು ಇದುವುದು ಯಾವುದು,
ನಶಿಸಿಹೋಗುವ ಅವು ಇವು ಉವು,
ಒಳ್ಳೆಯವಲ್ಲದ ಅವು ಹೊಲ್ಲದ ಇವು
ಹೋದ ವಸ್ತು ಆಗುವ ವಸ್ತು
ಎಲ್ಲವೆಲ್ಲವೂ ಆಗಿ ನಿಂತವನವನೇ!
ಎಲ್ಲ ವ್ಯಾಪಿಸಿರುವವನವನೇ!

ನಮ್ಮಾಳ್ವಾರರ

            ಇರುವನೆನಲು ಇರುವನವನು; ಕಾಯಕೆಲ್ಲ ಅವನೇಕಾಯವು
ಇಲ್ಲವೆನಲು ಇರುವನುವನು; ಆ ಆತ್ಮವೆಲ್ಲ ಅವನದೇ ಆತ್ಮವು
ಇರುವನೆಂದರು ಇಲ್ಲವೆಂದರು ಗುಣವ ಧರಿಸಿದ ಈ ಶರೀರದಲಿ
ಎರಡು ತೆರ ಮೈಯಿಂದ ಒಂದನ, ಬಿಡದೆಯ ವ್ಯಾಪಿಸಿರುವವನುವನು!

ನಮ್ಮಾಳ್ವಾರರ್

‘ಉಯರ್ವು ಅರ ಉಯರ್‌ನಲಂ ಉಡೈಯವನ್ ಯವನವನ್
ಮಯರ್ವು ಅರ ಮತಿನಲಂ ಅರುಳಿನನ್ ಯವನವನ್
ಅಯರ್ವು ಆರುಂ ಅಮರರ್‌ಹಳ್ ಅಧಿಪತಿ ಯವನವನ್
ತುಯರರು ಶುಡರಡಿ ತೊಪದು ಎಮಿ ಎನ್ಮನನೇ.’

ನಮ್ಮಾಳ್ವಾರರ್

ಮನೆ, ಮಡದಿ, ನಂಟರು, ಇಷ್ಟರು, ಮಕ್ಕಳು, ಆಸ್ತಿಪಾಸ್ತಿ
ಒಡವೆ, ವಸ್ತ್ರ ಎಲ್ಲ ನನ್ನದೇ ನನ್ನದೇ ಎಂಬುವುದನ್ನು ಬಿಡಿ
ಎನ್ನುತ್ತಾರೆ ಆಳ್ವಾರರು; ವಯಸ್ಸು ಆಗಾತನಿಗೆ ಇದು ಸರಿಯೆನಿಸುತ್ತಾರೆ
ಅವನಲ್ಲಿ ಭಗವಂತನ ಚಿಂತನೆ ಮೈಮೂಡಿ ವ್ಯಾಪಿಸಿದಾಗ

ನಮ್ಮಾಳ್ವಾರರ್

ನೀವು ನಿಮ್ಮದು ಎಂಬುವನ್ನು ಬೇರುಮುಟ್ಟಮಾಯಿಸಿ
ಒಡೆಯನಲ್ಲನವನ ಸೇರಿ, ಉಸಿರಿಗೆ ಅಹಂ ಜೊತೆಹಿತವು ಇಲ್ಲ

ನಮ್ಮಾಳ್ವಾರರ್

ಎಲ್ಲ ಚಪಲ ಬಿಡಿ ಅವನನೆ ಆಸೆರೆವೊಂದಿರಿ
ಅವನ ಸ್ಪರ್ಶಕೆ ಮಿಗಿಲಾದ ಆನಂದವಿಲ್ಲ ಈ ನೆಲದಿ!
ಚಪಲ – ಚಲ – ಮಲ ತೊಲಗಿತೋ ಉಸಿರು ಮುಕುತಿ!
ಅದಕವನೇ ಆಸರೆಮರೆಯದಿರಿ, ಚಪಲವನಿತ, ನೀಗಲಿ!

ನಮ್ಮಾಳ್ವಾರರ ತಿರುಮೊಳಿ

ಆರದ ಅಮುದೇ ಈ ನಿನ್ನಾಳಿನೊಡಲು ನಿನ್ನ ಕುರಿತ(ಅಮುದೇ – ಅಮೃತವೇ ಎಂದರ್ಥ) ಸಲಿಲವಾಗಿ ಅಲೆದಲೆದು ಇಳಿವಂತೇ ಕರಗಿಸುವ ಪ್ರೇಮದಿಂದ ಎನ್ನ ನೀಡುದೈವ! ಕಾಂತಿತೀವುವ ಕೆನ್ನೆಲ್ಲು ಚೌರಿಯಂತೆ ಅತ್ತಿತ್ತು ಬೀಸುವ ಸಮೃದ್ಧ ಜಲದ ತಿರುಕೊಡಲದೆಯಲ್ಲಿ

ಅದೆಂತಹ ಚೆಲುವಿಂದ ತೊಳತೊಳಗುತೆ ಮಲಗಿರುವ ನಿನ್ನನು ನಾನುಕಂಡೆನೇ! ತಿರುಕುರುಹೂರು – ಆಳ್ವಾರ್‌ತಿರುನಗರಿ – ಎಂದು ಪ್ರಸಿದ್ಧವಾಗಿರುವ ದಿವ್ಯಕ್ಷೇತ್ರದಲ್ಲಿರುವ ತಮ್ಮ ಗುರುವನ್ನು ಮಧುರಕವಿಗಳು ಮೈ ಮರೆತು ಹಾಡಿದ್ದಾರೆ:

ನಾಲಿಗೆಯಿಂದ ನುಡಿಮೂಡಿಬಂದ ಇಂಪನ್ನು ಸಾರಿದೆನು
ಅದೋ! ಅವನ ಚೆನ್ನಡಿಯ ಮಹಿಮೆಯನು ಆಶ್ರಯಿಸಿದೆನು
ದೇವರು ಬೇರೆಯನಾನರಿಯೆನು, ಕುರುಹೂರನ ಈ ಭಕ್ತನ
ಹಾಡನ್ನು ಇರಿದಾಗಿ ಹಾಡಿ ರಾಗರಾಗಂಗಳಲಿ ನಾ ಅಲೆಯುತಿಹೆ
ಬಾಡಿದೆನು, ಬಾಡಿಮನದಲಿಮರುಗಿದೆನು
ಹೆಚ್ಚು ಹೆಚ್ಚಿನ ಧೂಳಿದೂ ಸರದ ಈ ಬಾಳಲಿ ಜನಿಸಿ ಕೂಡಿದೆನು
ಹರೆಯದ ಚೆಲುವ ಹೆಂಗಳ ಕೂಡಿ ಅವರೀವನಂಟನೇ ಆಶಿಸಿ ಓಡಿದೆನು;
ಓಡೋಡಿದೆನು ಕಡೆಗೆ ಅರಿತೆ’ ನಾರಾಯಣ ನಾರಾಯಣ ಎಂಬ ಹೆಸರಮುತ್ತನು

ಅಲಮಾರತ್ತಿನಲೈ ಒರು ಬಾಲಕನಯ

            ಅಮಲನಾದಿ ಪಿರಾನ್ – ೯
ಪ್ರಳಯ ಕಾಲದಲಿ ಆಲದ ಮರದ ನಂತರ ಕೊಂಬೆ ರಂಬೆಗಳಲಿ
ಒಂದು ಎಲೆಯ ಮೇಲೆ ವಟಪತ್ರಶಾಯಿಯಾಗಿ ಮಲಗಿದವನ
ತಾಯಿತಂದೆಯಾದರಿಂದ ಅದ್ವಿತೀಯನಾದ ಮಗುವವನ
ಉದರದೊಳೆಲ್ಲ ಲೋಕಗಳನಡಗಿಸಿಕೊಂಡಾತ, ಎಲ್ಲ ಕಾಲದಲೂ
ಶ್ರೀರಂಗದಲಿ ಆದಿಶೇಷಶಾಯಿಯಾಗಿರುವಾತ, ತನಗೆ ಅಭಿರೂಪಾದ
ಮಹಾರ್ಹವಾದ ಮುತ್ತಿನ – ರತ್ನದ ಹಾರಗಳಿಂದ ಚೆಲುವನಾಂತವನು!
ಬಹು ಸುಂದರಾಗನವನು, ಒಡವೆಗಳಿಗೆ ಅವನಿಂದಲೇ ನೀಲತನುಕಾಂತಿ
ಬೇರೆಬೇರೆಯಾಗಿ ದಿವ್ಯ ಅವಯಗಳ ಸೌಂದರ್ಯ ಅನುಭವಿಸಿ
ಎನ್ನ ಮನಗಂಭಿರತೆಯನೈದಿದೆ, ಈ ಸಮುದಾಯದನುಭವ ಬಿಡಿಸಿ
ನನ್ನ ಪೂರ್ಣಾನುಭವಕೆ ವಿಚ್ಛೆದ ಬಂದೊಡೆನುಗತಿ!
ಎಂಬುವ ಶಂಕೆಯಲಿ ನನ್ನ ಮನವ ನಿತ್ಯ ಸಾಪೇಕ್ಷವಾಗಿಸಿದೆ!
ಓ ಎನ್ನ ಪರಿಶುದ್ಧನೆ, ಹಿರಿಯನೇ,
ನನ್ನ ಅಮೃತನೀನು, ನಿನ್ನ ಕಂಡ ಕಂಗಳು ಮತ್ತೇನನೂ ಕಾಣದಿರಲಿ!
ಹೀಗೆ ಹಾಡಿ ತಿರುಪಾಣಿ ಶ್ರೀರಂಗನಲಿಯೆ ಐಕ್ಯರಾದರು!
            ದೈವನೊಲಿದ ದೇವಕುಲಜನಾದರು!

ಅಡಿಟಿಪ್ಪಣಿ

೧. ಪ್ರಬಂಧ – ಹಿಂದೆ, ಹಾಡಿನ ರೂಪದಲ್ಲಿದ್ದ ಸಾಹಿತ್ಯ ಪ್ರಕಾರ – ಗೀತೆ – ಪದ್ಯದ ಮಟ್ಟು

೨. ವೈಷ್ಣವ ಸಂತರಾದ ಆಳ್ವಾರರಂತೆಯೇ, ಶೈವ ಪಾರಮ್ಯ ಪ್ರಸರಿಸಿದ ನಾಯನ್ಮಾರರೂ ಪ್ರಖ್ಯಾತರು! ಇಲ್ಲಿ ಅವರನ್ನು ಕುರಿತ ನಿರೂಪಣೆಯಿಲ್ಲವೆಂದು ವಿನಯದಿಂದ ತಿಳಿಸಬೇಕಾಗಿದೆ.

೩. ಪಾಶುರ – ತಮಿಳಿನಲ್ಲಿ ಪದ್ಯಗಳೆಂದು ಅರ್ಥ.

೪. ಶ್ರವಣಂ ಕೀರ್ತನಂ ವಿಷ್ಣೋಃಸ್ಮರಣಂ ಪಾದಸೇವಾನಂ ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ – ಒಂಭತ್ತು ವಿಧದ ಭಕ್ತಿ ಸ್ವರೂಪ – ಭಾಗವಂತ ನಾರದ ಭಕ್ತಿ ಸೂತ್ರ ಪ್ರಕಾರ

೫. ವಿಷ್ಣುಂ, ಜಿಷ್ಣುಂ, ವಷಟ್ಯಾರೋ……… ಸರ್ವವ್ಯಾಪ್ತ ಮಹಾವಿಷ್ಣುವೆಂಬುವ ಗುಣ

೬. ಕವಿತಾರ್ಕಿಕಸಿಂಹ, ವೇದಾಂತಚಾರ್ಯ ಎಂದೆಲ್ಲ ಹೆಸರಾದ ಶ್ರೀವೇದಾಂತ ದೇಶಿಕರು (ಕ್ರಿ.ಶ. ೧೨೬೭ – ೧೩೬೯) ಅಸಾಧಾರಣ (೬) ಮೇಧಾವಿ, ಕಾವ್ಯ – ತರ್ಕ – ವಾಗ್ಮಿತೆ ಎಲ್ಲದರಲ್ಲಿಯೂ ಅಗ್ರಗಣ್ಯ ಮಹಾಪುರುಷರೆ! ಶ್ರೀವಾಯುಗ್ರೀವಮೂರ್ತಿಯು ಇವರಿಗೊಲಿದಿದ್ದನೆಂಬುದು ಅವರ ಅನುಭವೈಕ ಅಭಿವ್ಯಕ್ತಿಯಿಂದಲೇ ತಿಳಿದುಬರುತ್ತದೆ! ಕನ್ನಡ ಕನಾಡಿನ ಗಾಡಿಯಲ್ಲಿನ ಸತ್ತೇಗಾಲ, ಮೇಲುಕೋಟೆ, ಹೆಮ್ಮಿಗೆ, ಶ್ರೀರಂಗಪಟ್ಟಣ – ಮೊದಲಾದೆಡೆ, ೧೫ ವರ್ಷಕ್ಕೂ ಹೆಚ್ಚು ಸಮಯವಿದ್ದು ಆನಂತರ ಶ್ರೀರಂಗಕ್ಕೆ ಹಿಂತಿರುಗಿದರು.